Headlines

ನಿತ್ಯಾಗೆ ಗೊತ್ತಾಯ್ತ ಪ್ರೀತಿಯ ಸತ್ಯ; ಕರ್ಣ-ನಿಧಿ ವಿವಾಹ ಮಾಡಿಸಲು ಮುಂದಾದ ಸಹೋದರಿ – Kannada News | Karna Kannada Serial: Nithya’s Shocking Decision for Karna Nidhi Wedding**

‘ಕರ್ಣ’ ಧಾರಾವಾಹಿಯಲ್ಲಿ ಒಂದು ಪ್ರಮುಖ ಬೆಳವಣಿಗೆ ನಡೆದಿದೆ. ಇಷ್ಟು ದಿನ ಮುಚ್ಚಿಟ್ಟ ಸತ್ಯವು ಹೊರ ಬೀಳುವ ಸಮಯ ಬಂದಿದೆ. ಕರ್ಣ ಹಾಗೂ ನಿಧಿ ಪರಸ್ಪರ ಪ್ರೀತಿಸುತ್ತಾ ಇದ್ದವರು. ಆದರೆ, ಕರ್ಣನ ತಂದೆ ಮಾಡಿದ ಮೋಸದಿಂದ ಒಂದು ದೊಡ್ಡ ಆಘಾತ ಉಂಟಾಗಿತ್ತು. ಕರ್ಣನು ನಿತ್ಯಾಳನ್ನು ಮದುವೆ ಆಗುವ ಅನಿವಾರ್ಯತೆ ಬಂತು. ಈಗ ಆ ತಪ್ಪನ್ನು ಸರಿ ಮಾಡುವ ಸಮಯ ಎಂದೇ ಹೇಳಬಹುದು. ಧಾರಾವಾಹಿಯಲ್ಲಿ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ನಿಧಿ ಹಾಗೂ ಕರ್ಣ ಪ್ರೀತಿ ಮಾಡುತ್ತಿದ್ದರು. ಆದರೆ, ಕರ್ಣ…

Read More

ಮಹಿಳೆಯ ಅನುಮಾನಾಸ್ಪದ ಸಾವು, ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯ ಎಚ್ಚರಿಕೆ – Kannada News | Father Alleges Planned Crime After Woman Found Dead in Bhopal

ಭೋಪಾಲ್, ಮೇ 18: ಗಂಡನ ಮನೆಯಲ್ಲಿ ಮಹಿಳೆ(Woman) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. 31 ವರ್ಷ ತ್ವಿಶಾ ಸಾವು ಪ್ರಕರಣ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೊಂದು ಯೋಜಿತ ಕೊಲೆ ಎಂದು ಆರೋಪಿಸಿರುವ ತ್ವಿಶಾ ಅವರ ತಂದೆ ನ್ಯಾಯಕ್ಕಾಗಿ ಒತ್ತಾಯಿಸಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿವಾಸದ ಹೊರಗೆ ಸುಡುವ ಬಿಸಿಲಿನಲ್ಲೇ ಬೃಹತ್ ಪ್ರತಿಭಟನೆ ನಡೆಸಿದರು. ಒಂದೊಮ್ಮೆ ನ್ಯಾಯ ಸಿಗದಿದ್ದರೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನನ್ನ ಮಗಳ ಸಾವಿಗೆ ನ್ಯಾಯ…

Read More

ವೆಂಕಿಯ ಬೆಂಕಿ ಸೆಲೆಬ್ರೇಷನ್​ ಅರ್ಥವೇನು ಗೊತ್ತಾ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಈ ಅರ್ಧಶತಕ ಪೂರೈಸುತ್ತಿದ್ದಂತೆ ಅಯ್ಯರ್ ತಮ್ಮ ಕೈಗಳನ್ನು ಮೇಲೆಕ್ಕೆತ್ತುವ ಮೂಲಕ ವಿಶೇಷ ಸ್ಟ್ರೈಲ್​ನಲ್ಲಿ ಸಂಭ್ರಮಿಸಿದ್ದರು. ಇದರ ಬೆನ್ನಲ್ಲೇ ಈ ಸಂಭ್ರಮಕ್ಕೆ ಕಾರಣವೇನು? ಇದರ ಅರ್ಥವೇನು? ಎಂಬ ಗೂಗಲ್ ಹುಡುಕಾಟಗಳು ಶುರುವಾಗಿದ್ದವು. ಈ ಪ್ರಶ್ನೆಗಳಿಗೆ ಸಿಗುವ ಉತ್ತರ…

Read More

‘ಆಸೆ’ ಧಾರಾವಾಹಿಗೆ ಎಂಟ್ರಿ ಆಯ್ತು ಸೂರ್ಯ ತಂಗಿ ಪಾತ್ರ – Kannada News | Aase Serial: Tara’s Shocking Re entry Surya’s Sister Returns, Unraveling Old Mysteries

ಆಸೆ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣುತ್ತಿರುವ ಪ್ರಮುಖ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿ ಸಾಕಷ್ಟು ನಿರೀಕ್ಷೆಯನ್ನು ಸೃಷ್ಟಿಸಿದೆ. ಈಗ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರ ಎಂಟ್ರಿ ಆಗಿದೆ. ಅದು ಕೂಡ 860 ಎಪಿಸೋಡ್​​​ಗಳ ಬಳಿಕ ಎಂಬುದು ವಿಶೇಷ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಹಾಗಾದರೆ ಯಾವುದು ಆ ಪಾತ್ರ? ಆ ಬಗ್ಗೆ ಇಲ್ಲಿದೆ ವಿವರ. ಆಸೆ ಧಾರಾವಾಹಿಯಲ್ಲಿ ರಂಗನಾಥ್ ಅವರಿಗೆ ನಾಲ್ಕು ಮಕ್ಕಳಿದ್ದರು. ಈ ಪೈಕಿ ತಾರಾ ಎಂಬ ಹುಡುಗಿ ಸಣ್ಣ ವಯಸ್ಸಿನಲ್ಲೇ ನಿಧನ…

Read More

Bengaluru Air Quality: ಹವಾಮಾನ ವೈಪರೀತ್ಯದ ನಡುವೆ ಸುಧಾರಿಸಿದ ವಾಯು ಗುಣಮಟ್ಟ! – Kannada News | Bengaluru AQI Today: Air Quality Improves in Bengaluru, Moderate AQI Recorded on May 18

ಹವಾಮಾನ ವೈಪರೀತ್ಯದ ನಡುವೆ ಸುಧಾರಿಸಿದ ವಾಯು ಗುಣಮಟ್ಟ! ಬೆಂಗಳೂರು, ಮೇ 18: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆ ಮತ್ತು ಧೂಳಿನ ವಾತಾವರಣದಿಂದ ಕಂಗಾಲಾಗಿದ್ದ ಜನತೆಗೆ ಇಂದು ವಾಯು ಗುಣಮಟ್ಟದಲ್ಲಿ (AQI) ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಇಂದು ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 58 (ಸಾಧಾರಣ) ದಾಖಲಾಗಿದೆ. ಮುಖ್ಯಾಂಶಗಳು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ ಇಂದು 58 ರಷ್ಟು ಸಾಧಾರಣ ದಾಖಲಾಗಿದೆ. ಬದಲಾದ ಹವಾಮಾನ ಮತ್ತು ಮಳೆಯ ಮುನ್ಸೂಚನೆಯಿಂದ ಮಾಲಿನ್ಯ ಪ್ರಮಾಣ…

Read More

ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ಅಪಘಾತ: ಏರ್ ಶೋ ವೇಳೆ ಪರಸ್ಪರ ಡಿಕ್ಕಿಯಾಗಿ ಪತನಗೊಂಡ ಯುದ್ಧ ವಿಮಾನಗಳು – Kannada News | Mid Air Collision Between Jets at US Air Show Captured on Video

ಇಡಾಹೊ, ಮೇ 18: ಪಶ್ಚಿಮ ಇಡಾಹೊದ ಮೌಂಟೇನ್ ಹೋಮ್ ವಾಯುಪಡೆ ನೆಲೆಯಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಯುಎಸ್ ನೌಕಾಪಡೆಯ ಎರಡು ಯುದ್ಧ ವಿಮಾನಗಳು ಗಾಳಿಯಲ್ಲೇ ಭೀಕರವಾಗಿ ಡಿಕ್ಕಿ ಹೊಡೆದಿವೆ. ಅಪಘಾತಕ್ಕೀಡಾದ ವಿಮಾನಗಳನ್ನು ನೌಕಾಪಡೆಯ ಅತ್ಯಾಧುನಿಕ ‘ಇಎ 18-ಜಿ ಗ್ರೋಲರ್ಸ್’ ಎಂದು ಗುರುತಿಸಲಾಗಿದೆ. ಅತಿ ವೇಗದಲ್ಲಿ ಹಾರಾಟ ನಡೆಸುತ್ತಿದ್ದಾಗ ಸಂಭವಿಸಿದ ಈ ಭೀಕರ ಡಿಕ್ಕಿಯ ಹೊರತಾಗಿಯೂ, ಎರಡೂ ಜೆಟ್‌ಗಳಲ್ಲಿದ್ದ ನಾಲ್ವರು ಸಿಬ್ಬಂದಿ ತಕ್ಷಣವೇ ಸುರಕ್ಷಿತವಾಗಿ ಹೊರಜಿಗಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಇವರೆಲ್ಲರೂ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು…

Read More

ಜಗತ್ತಿಗೆ ಎದುರಾಗಿದೆ ಭೀಕರ ಬಡತನದ ಭೀತಿ, ಕೋವಿಡ್, ಯುದ್ಧ ಮತ್ತು ಇಂಧನ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಗಂಭೀರ ಎಚ್ಚರಿಕೆ – Kannada News | PM Modi Flags Risk of Rising Poverty Linked to Global Instability

ನವದೆಹಲಿ, ಮೇ 18: ಕಳೆದ ಕೆಲವು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಸರಣಿ ಬಿಕ್ಕಟ್ಟುಗಳಿಂದ ಜಾಗತಿಕ ಸಮುದಾಯ ಪಾಠ ಕಲಿಯದಿದ್ದರೆ, ಪ್ರಪಂಚದಾದ್ಯಂತ ಮತ್ತೊಮ್ಮೆ ಭೀಕರ ಬಡತನ ತಲೆದೂಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳ ಅವಧಿಯನ್ನು ಡಿಸಾಸ್ಟರ್ ಡಿಕೇಡ್ ಎಂದು ಬಣ್ಣಿಸಿರುವ ಅವರು, ಜಾಗತಿಕ ಸ್ಥಿರತೆಗೆ ಎದುರಾಗಿರುವ ಸವಾಲುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಆರ್ಥಿಕ ತಜ್ಞರ ಜತೆ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋಡಿ,…

Read More

ಮೂರನೇ ಭಾನುವಾರ ‘ಕೆಡಿ’ ಗಳಿಸಿದ್ದೆಷ್ಟು? ಒಟ್ಟೂ ಕಲೆಕ್ಷನ್ ವಿವರ ಇಲ್ಲಿದೆ – Kannada News | KD: The Devil Box Office Roars Past 22 Cr Amidst Controversies and Fan Love

ನಿರ್ದೇಶಕ ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್‌ನ ‘ಕೆಡಿ: ದಿ ಡೆವಿಲ್’ ಸಿನಿಮಾ (KD Movie) ರಿಲೀಸ್ ಆಗಿ ಮೂರು ವಾರಗಳು ಕಳೆಯುತ್ತಾ ಬಂದಿವೆ. ದೊಡ್ಡ ಬಜೆಟ್​​ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಬೆಂಗಳೂರಿನ ಭೂಗತ ಜಗತ್ತಿನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಧ್ರುವ ಹಾಗೂ ರೀಷ್ಮಾ ಜೊತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಕೆಡಿ’ ಸಿನಿಮಾಗೆ ಈವರೆಗೆ 10,795…

Read More

Karnataka Weather Forecast: ರಾಜ್ಯದಲ್ಲಿಂದು ಆಲಿಕಲ್ಲು ಮಳೆಯಬ್ಬರ; 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​! – Kannada News | Karnataka rain Update: Heavy Rains, Hailstorm Alert and Orange Alert Issued

ರಾಜ್ಯದಲ್ಲಿಂದು ಆಲಿಕಲ್ಲು ಮಳೆಯಬ್ಬರ; 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​! ಬೆಂಗಳೂರು, ಮೇ 18: ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ (Weather)ಮತ್ತು ಗಾಳಿ ಸಹಿತ ಗುಡುಗು ಸಿಡಿಲಿನ ಮುನ್ಸೂಚನೆ ನೀಡಿದೆ. ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ವರುಣನ ಅಬ್ಬರ ಜೋರಾಗಿರಲಿದ್ದು, ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರಿ ಮಳೆ ಹಾಗೂ ಆಲಿಕಲ್ಲು ಮಳೆಯ ಮುನ್ನೆಚ್ಚರಿಕೆಯನ್ನು ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು…

Read More