ಇಡಾಹೊ, ಮೇ 18: ಪಶ್ಚಿಮ ಇಡಾಹೊದ ಮೌಂಟೇನ್ ಹೋಮ್ ವಾಯುಪಡೆ ನೆಲೆಯಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಯುಎಸ್ ನೌಕಾಪಡೆಯ ಎರಡು ಯುದ್ಧ ವಿಮಾನಗಳು ಗಾಳಿಯಲ್ಲೇ ಭೀಕರವಾಗಿ ಡಿಕ್ಕಿ ಹೊಡೆದಿವೆ. ಅಪಘಾತಕ್ಕೀಡಾದ ವಿಮಾನಗಳನ್ನು ನೌಕಾಪಡೆಯ ಅತ್ಯಾಧುನಿಕ ‘ಇಎ 18-ಜಿ ಗ್ರೋಲರ್ಸ್’ ಎಂದು ಗುರುತಿಸಲಾಗಿದೆ.
ಅತಿ ವೇಗದಲ್ಲಿ ಹಾರಾಟ ನಡೆಸುತ್ತಿದ್ದಾಗ ಸಂಭವಿಸಿದ ಈ ಭೀಕರ ಡಿಕ್ಕಿಯ ಹೊರತಾಗಿಯೂ, ಎರಡೂ ಜೆಟ್‌ಗಳಲ್ಲಿದ್ದ ನಾಲ್ವರು ಸಿಬ್ಬಂದಿ ತಕ್ಷಣವೇ ಸುರಕ್ಷಿತವಾಗಿ ಹೊರಜಿಗಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಇವರೆಲ್ಲರೂ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಬೇಸ್ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್, ಮಿಲಿಟರಿ ನೆಲೆಯಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಸದ್ಯ ಈ ಭೀಕರ ಅಪಘಾತದ ಕುರಿತು ತನಿಖೆ ಆರಂಭವಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ