ಹಾರ್ಮುಜ್ನಿಂದ ಎರಡು ಭಾರತೀಯ ಗ್ಯಾಸ್ ಟ್ಯಾಂಕರ್ ಸಾಗಲು ಅನುಮತಿ; ಇದು ಮಾತುಕತೆಯ ಫಲ ಎಂದ ಸಚಿವ ಜೈಶಂಕರ್
ನವದೆಹಲಿ, ಮಾರ್ಚ್ 16: ಹಾರ್ಮುಜ್ ಜಲಸಂಧಿಯನ್ನು ಬ್ಲಾಕ್ ಮಾಡಿದ್ದ ಇರಾನ್ ಮೊನ್ನೆಯಷ್ಟೇ ಎರಡು ಭಾರತೀಯ ಗ್ಯಾಸ್ ಟ್ಯಾಂಕರ್ಗಳು (Indian flagged gas tankers) ಸಾಗಲು ಅನುಮತಿ ಕೊಟ್ಟಿದೆ. ಈ ವಿಚಾರದ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಹಡಗುಗಳಿಗೆ ಇರಾನ್ ಅನುಮತಿಸಿರುವುದರ ಹಿಂದೆ ಯಾವುದೇ ಒಪ್ಪಂದ ಇಲ್ಲ. ಇದು ಎರಡು ದೇಶಗಳ ನಡುವಿನ ಸಂಬಂಧದ ಫಲ, ಮಾತುಕತೆಯ ಫಲ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ಇರಾನ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ….