ಪಾನಿಪುರಿಯಲ್ಲಿ ಮೂಳೆ ಪತ್ತೆ; ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ಯುವತಿಗೆ ಶಾಕ್ – Kannada News | Bone found in Panipuri at Ahmedabad
ಅಹಮದಾಬಾದ್, ಮೇ 17: ಪಾನಿಪುರಿ ಅಂದ್ರೆ ಎಲ್ಲರಿಗೂ ಇಷ್ಟನೇ. ಮಕ್ಕಳಿಂದ ಹಿಡಿದು ದೊಡ್ಡವವರೆಗೂ ಬಾಯಿಚಪ್ಪರಿಸಿಕೊಂಡು ತಿಂತಾರೆ. ಆದರೆ ಈ ಸ್ಟೋರಿ ಓದಿದ್ರೆ ನೀವು ಪಾನಿಪುರಿ ತಿನ್ನೋಕೆ ಹೋಗಲ್ಲ. ಹೌದು, ಅಹಮದಾಬಾದ್‌ನ (Ahmedabad) ರಾಣಿಪ್ ಪ್ರದೇಶದಲ್ಲಿ ಕೃಷ್ಣ ಪಾನಿಪುರಿ ತಿನ್ನುತ್ತಿದ್ದ ಯುವತಿಯೊಬ್ಬಳಿಗೆ ಪಾನಿಪುರಿಯೊಳಗೆ ಮೂಳೆಯ ತುಣುಕು ಪತ್ತೆಯಾಗಿದೆ. ಇದನ್ನು ನೋಡಿ ಯುವತಿ ಶಾಕ್ ಆಗಿದ್ದು, ಅಂಗಡಿ ಮಾಲೀಕನನ್ನು ಪ್ರಶ್ನಿಸಿದ್ದಾಳೆ. ಈ ಘಟನೆಯ ಸಂಬಂಧಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೀದಿ ಆಹಾರದ ಸ್ವಚ್ಛತೆ ಹಾಗೂ ಗುಣಮಟ್ಟದ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ….