Headlines

ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಬಿಸಿ! – Kannada News | Bengaluru Ola And Uber Drivers demand Hike fare Over petrol and diesel price Hiked

ಬೆಂಗಳೂರು, (ಮೇ 17): ಪೆಟ್ರೋಲ್, ಡೀಸೆಲ್ (petrol and diesel price Hiked) ಹಾಗೂ ಸಿಎನ್​​ಜಿ ದರ ಏರಿಕೆ ಹಿನ್ನೆಲೆಯಲ್ಲಿ ಕ್ಯಾಬ್, ಟ್ಯಾಕ್ಸಿ (Ola And Uber) ದರವನ್ನು ಏರಿಸಲು ಸಂಘಟನೆಗಳು ಮುಂದಾಗಿವೆ. 1 ಕಿಲೋಮೀಟರ್​​ ಗೆ 5 ರಿಂದ 10 ರೂಪಾಯಿ ಹೆಚ್ಚಿಸುವಂತೆ ಓಲಾ, ಉಬರ್ ಚಾಲಕರು ಅಗ್ರಿಗೇಟರ್ ಕಂಪನಿ ಹಾಗೂ ಸಾರಿಗೆ ಇಲಾಖೆ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಒಂದು ವೇಳೆ ಸಾರಿಗೆ ಇಲಾಖೆ ಇದಕ್ಕೆ ಒಪ್ಪಿದರೆ ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ…

Read More

ಅಪ್ರಾಪ್ತೆ ಕಿಡ್ನಾಪ್ ವೇಳೆ ಅಡ್ಡ ಬಂದ ವ್ಯಕ್ತಿಯ ಕೊಲೆ: ಕೊನೆಗೂ ಸಿಕ್ಕಿಬಿದ್ದ ಲವ್ ಬರ್ಡ್ಸ್ ಹಾಗೂ ಹಂತಕರು! – Kannada News | Raichur: Kidnapping and Murder Case Cracked: Police Arrest lovers and Killers

ರಾಯಚೂರು, ಮೇ 17: ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ಕೊಲೆ (kill) ಹಾಗೂ ಅಪ್ರಾಪ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಅನ್ಯಧರ್ಮದ ಯುವಕನೊಬ್ಬ ಹಿಂದೂ ಧರ್ಮದ ಅಪ್ರಾಪ್ತ ಬಾಲಕಿಯನ್ನು ಓಡಿಸಿಕೊಂಡು ಹೋಗಿದ್ದನ್ನು ಪ್ರಶ್ನಿಸಿದಕ್ಕೆ ಗ್ರಾಮಸ್ಥನನ್ನೇ ಕೊಲೆ ಮಾಡಿದ್ದ ಆರೋಪಿಗಳು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ತಲೆಮರೆಸಿಕೊಂಡಿದ್ದ ಲವ್ ಬರ್ಡ್ಸ್ (Lovebirds) ​​​ ಮತ್ತು ಆತನ ಗ್ಯಾಂಗ್ ಅನ್ನು ಯಾಪಲದಿನ್ನಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಮುಖ್ಯಾಂಶಗಳು ಅಪ್ರಾಪ್ತೆಯನ್ನು ಕರೆದೊಯ್ಯುವಾಗ…

Read More

Karthyayani Amma: 90ನೇ ವಯಸ್ಸಿನಲ್ಲಿ ಅಕ್ಷರ ಕಲಿತು, ಪರೀಕ್ಷೆಯಲ್ಲಿ 100 ಕ್ಕೆ 98 ಅಂಕ ಪಡೆದ ಕೇರಳದ ಮಾದರಿ ಮಹಿಳೆ – Kannada News | Karthyayani Amma: Kerala’s 90 Year Old Literacy Icon Inspires Millions to Learn

ಅಪ್ರತಿಮ ಸಾಧಕಿ ಕಾರ್ತ್ಯಾಯಿನಿ ಅಮ್ಮ ತಿರುವನಂತಪುರಂ: “ಕಲಿಯುವುದಕ್ಕೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ, ಮನಸ್ಸಿದ್ದರೆ ಮಾರ್ಗ” ಎಂಬುದನ್ನು ಇಡೀ ದೇಶಕ್ಕೆ ಸಾಬೀತುಪಡಿಸಿದ ಅಪ್ರತಿಮ ಸಾಧಕಿ ಕಾರ್ತ್ಯಾಯಿನಿ ಅಮ್ಮ. ಬಾಲ್ಯದಿಂದಲೂ ಓದಬೇಕೆಂಬ ತೀವ್ರ ಹಂಬಲವಿದ್ದರೂ, ಬಡತನದ ಕಾರಣದಿಂದಾಗಿ ಬರೋಬ್ಬರಿ 90 ವರ್ಷಗಳ ಕಾಲ ಅಕ್ಷರ ಲೋಕದಿಂದ ವಂಚಿತರಾಗಿದ್ದ ಈ ಅಜ್ಜಿ, ತಮ್ಮ ಇಳಿ ವಯಸ್ಸಿನಲ್ಲಿ ಇತಿಹಾಸ ಸೃಷ್ಟಿಸಿ ಇಂದಿನ ಯುವ ಪೀಳಿಗೆಗೆ ರೋಲ್ ಮಾಡೆಲ್ ಆಗಿದ್ದಾರೆ. ಬಾಲ್ಯದ ಕಣ್ಣೀರು ಮತ್ತು 90 ವರ್ಷಗಳ ಅನಕ್ಷರತೆ: ಕೇರಳದ ಬಡ ಕುಟುಂಬವೊಂದರಲ್ಲಿ…

Read More

Video: ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು; ಸಿಸಿಟಿವಿಯಲ್ಲಿ ಸೆರೆ

ಇಂಡೋನೇಷ್ಯಾ: ‘ಕನ್ಶಾ ಗಾಡಿಂಗ್ ಸರ್ಪಾಂಗ್’ (Kansha Gading Serpong) ರೆಸ್ಟೋರೆಂಟ್ ಒಳಗೆ ನಿಯಂತ್ರಣ ತಪ್ಪಿದ ಕಾರೊಂದು ಏಕಾಏಕಿ ನುಗ್ಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿ ರೆಸ್ಟೋರೆಂಟ್ ಒಳಗಡೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.   ಇದನ್ನೂ ಓದಿ: ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ! ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…

Read More

ಜಿಟಿ ದೇವೇಗೌಡಗೆ ಬಿಗ್ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು ಜೆಡಿಎಸ್​​ ಸಮಾವೇಶ – Kannada News | Mysuru: Big Shock for GT Deve Gowda: JDS Convention keeps away MLAs from own party

ಮೈಸೂರು, ಮೇ 17: ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡರ ತವರು ಅಂಗಳದಲ್ಲೇ ಇದೀಗ ದಳಪತಿಗಳು ಜನತಾದಳ ಸಮಾವೇಶ ಆಯೋಜಿಸಿದ್ದಾರೆ. ವಿಶೇಷವೆಂದರೆ, ಸಮಾವೇಶದಲ್ಲಿ ಶಾಸಕ ಜಿ.ಟಿ. ದೇವೇಗೌಡ ದೂರು ಉಳಿದಿದ್ದರೆ ಅವರ ಪುತ್ರ ಜಿ.ಟಿ. ಹರೀಶ್ ಗೌಡ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಇನ್ನು ಸಮಾವೇಶದ ಬ್ಯಾನರ್‌ಗಳು ಮತ್ತು ಕಟೌಟ್‌ಗಳಲ್ಲಿ ಜಿ.ಟಿ. ದೇವೇಗೌಡ ಫೋಟೋಗೆ ಕೊಕ್​ ನೀಡಲಾಗಿದೆ. ಪಕ್ಷದಿಂದ ದೂರವಿದ್ದರೂ ಇತ್ತೀಚೆಗಷ್ಟೇ ಜಿ.ಟಿ.ದೇವೇಗೌಡ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದರು. ಆದರೆ,…

Read More

ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?

ಕಲಬುರಗಿ, (ಮೇ 17): ನಿವೃತ್ತ ಸೈನಿಕನ (retired BSF soldier) ತಲೆಗೆ ಕಬ್ಬಿಣ್ಣದ ರಾಡ್​ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಲಬುರಗಿಯ (Kalaburagi) ರಾಮಮಂದಿರ ಬಳಿ ನಡೆದಿದೆ. 4 ವರ್ಷದ ಹಿಂದೆ ಬಿಎಸ್ಎಫ್​ನಿಂದ ನಿವೃತ್ತಿಯಾಗಿದ್ದ ರವಿಚಂದ್ರ ಖೇಡ್(45) ಕೊಲೆಯಾದ ಮಾಜಿ ಸೈನಿಕ. ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಡಲಗಿ ಗ್ರಾಮದ ನಿವಾಸಿ ರವಿಚಂದ್ರ ಖೇಡ್ ನನ್ನು ವಿವಾದಿತ ಜಾಗದ ಸಂಬಂಧ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿವಾದಿತ ಜಾಗದಲ್ಲಿ…

Read More

ಕ್ರಿಕೆಟರ್ ಜೊತೆಗೆ ಶ್ರೀಲೀಲಾ ಹೆಸರು ಥಳುಕು: ಯಾರದು ಯುವಕ? – Kannada News | Sreeleela name linked with Cricketer Tilak Varma is the dating story true

ಕನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಮಲಯಾಳಂ ಹೊರತುಪಡಿಸಿ ಭಾರತದ ಇನ್ನುಳಿದ ಪ್ರಮುಖ ಸಿನಿಮಾ ರಂಗಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್​​ಗೆ ಕಾಲಿಟ್ಟಿರುವ ಶ್ರೀಲೀಲಾಗೆ ಅಲ್ಲಿಯೂ ಸಹ ಭರ್ಜರಿ ಬೇಡಿಕೆ ಶುರುವಾಗಿದೆ. ಅದ್ಭುತ ಸೌಂದರ್ಯ, ನೃತ್ಯ ಮತ್ತು ನಟನಾ ಪ್ರತಿಭೆ ಇರುವ ಶ್ರೀಲೀಲಾ ಜೊತೆಗೆ ಕೆಲಸ ಮಾಡಲು ನಿರ್ದೇಶಕರು, ನಟರು ಕಾಯುತ್ತಿದ್ದಾರೆ. ಅಂದಹಾಗೆ ಇದೀಗ ಶ್ರೀಲೀಲಾ ಹೆಸರು ಗಾಸಿಪ್​​ ಕಾಲಂನಲ್ಲಿ ಕೇಳಿ ಬಂದಿದೆ. ಕ್ರಿಕೆಟರ್ ಒಬ್ಬರ ಜೊತೆಗೆ ಶ್ರೀಲೀಲಾ…

Read More

ಕೇರಳ ಯುಡಿಎಫ್ ಸರ್ಕಾರದ ಮೊದಲ ಸಂಪುಟ; ಕಾಂಗ್ರೆಸ್​ಗೆ 12, ಮುಸ್ಲಿಂ ಲೀಗ್​ಗೆ 5 ಸ್ಥಾನಗಳಾ? – Kannada News | UDF Ministry Formation Kerala: Satheesan CM Swearing in, Alliance Partners Seek Cabinet Berths

ವಿ.ಡಿ. ಸತೀಶನ್Image Credit source: PTI ತಿರುವನಂತಪುರಂ, ಮೇ 17: ಕೇರಳ ವಿಧಾನಸಭಾ ಚುನಾವಣೆಯಲ್ಲಿ (Kerala Assembly Elections) ಭರ್ಜರಿ ವಿಜಯ ಸಾಧಿಸಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಮುಖ್ಯಮಂತ್ರಿಯನ್ನು ಮಾತ್ರವನ್ನು ಸಂಪುಟ ಸದಸ್ಯರ ಆಯ್ಕೆಯನ್ನೂ ಅಂತಿಮಗೊಳಿಸುವ ಹಾದಿಯಲ್ಲಿದೆ. ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ (V.D. Satheesan) ಅವರು ನಾಳೆ ಮೇ 18 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಪ್ರಮಾಣವಚನಕ್ಕೆ ಮುನ್ನ, 21 ಸದಸ್ಯರ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ (Cabinet Berths) ಮತ್ತು…

Read More

PBKS vs RCB Playing XI: ಆರ್​​ಸಿಬಿಗೆ ಆಘಾತ; ಪಂಜಾಬ್ ವಿರುದ್ಧ ಆಡಲ್ಲ ರಜತ್ ಪಾಟಿದರ್ – Kannada News | PBKS vs RCB Playing XI Punjab Kings vs Royal Challengers Bengaluru Today IPL 2026 match Confirmed playing 11 details with name in Kannada

ಐಪಿಎಲ್ 2026 ರ ನಿರ್ಣಾಯಕ ಪಂದ್ಯ ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯವು ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆಲುವು ಪಂಜಾಬ್ ಕಿಂಗ್ಸ್‌ನ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸುತ್ತದೆ. ಇತ್ತ ಆರ್​ಸಿಬಿಗೆ ಈ ಪಂದ್ಯದ ಗೆಲುವು ಪ್ಲೇಆಫ್ ಸ್ಥಾನವನ್ನು ಖಚಿತಪಡಿಸುತ್ತದೆ. ಪ್ರಸ್ತುತ ಆರ್​​ಸಿಬಿ ಐಪಿಎಲ್ 2026 ಅಂಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿರುವ 12 ಪಂದ್ಯಗಳಲ್ಲಿ 16 ಅಂಕಗಳನ್ನು ಹೊಂದಿದ್ದು, ಅದರ ನೆಟ್ ರನ್​ರೇಟ್ 1.053 ಆಗಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡವು ಕಳೆದ ಐದು…

Read More

ಕೋಟ್ಯಂತರ ವಂಚನೆ ಕೇಸ್​: ಖಾತೆಯಲ್ಲಿ ನೂರಾರು ಕೋಟಿ ಪತ್ತೆಯಾದ್ರೂ ಬ್ಯಾಂಕ್ ಗಪ್‌ಚುಪ್; ಶಿವಾನಂದನೊಂದಿಗೆ ಅಧಿಕಾರಿಗಳು ಶಾಮೀಲು? – Kannada News | Multi Crore Fraud Case: Bank Silent Despite Hundreds of Crores Found in Account; Are Officials Linked to Shivanand

ಶಿವಾನಂದ ನೀಲಣ್ಣವರ್Image Credit source: tv9 kannada ಬೆಳಗಾವಿ, ಮೇ 17: ಸಾವಿರಾರು ಕೋಟಿ ಒಡೆಯ ಅಂತೆಲ್ಲಾ ಬಿಲ್ಡಪ್ ಕೊಡುತ್ತಿದ್ದ ಶಿವಾನಂದ ನೀಲಣ್ಣವರ್ (Shivanand Neelannavar)​​ ಅರೆಸ್ಟ್ ಆಗಿದ್ದಾನೆ. 4,500 ಕೋಟಿ ರೂ ವಂಚನೆ ಆರೋಪದಡಿ ಬೆಳಗಾವಿ ಪೊಲೀಸರು ಶಿವಾನಂದನನ್ನ ಲಾಕ್ ಮಾಡಿದ್ದಾರೆ. ಸದ್ಯ ಪೊಲೀಸರು 5 ದಿನ ಕಸ್ಟಡಿಗೆ ಪಡೆದು ತನಿಖೆ ನಡೆಸಿದ್ದಾರೆ. ಇನ್ನು ಶಿವಾನಂದ ನೀಲಣ್ಣವರ್ ಬಳಸುತ್ತಿದ್ದ ನಾಲ್ಕು ಬ್ಯಾಂಕ್​​ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಒಂದೊಂದು ಅಕೌಂಟ್​ನಲ್ಲಿ ನೂರಾರು ಕೋಟಿ ರೂ ಪತ್ತೆಯಾಗಿದೆ. ನೂರಾರು…

Read More