ರಾಶಿಕಾ ಬಟ್ಟೆಗೆ ಖರ್ಚಾಗಿದ್ದು ಇಷ್ಟೊಂದಾ? ವಿವರಿಸಿದ ಬಿಗ್ ಬಾಸ್ ಸ್ಪರ್ಧಿ – Kannada News | Bigg Boss Rashika Shetty’s Wardrobe Budget: 1 and half Lakhs Spent on Clothes

ರಾಶಿಕಾ ಶೆಟ್ಟಿ (Rashika Shetty) ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ತಲುಪುವ ಮೊದಲೇ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ರಾಶಿಕಾಗೂ ಈ ವಿಷಯದಲ್ಲಿ ಕೊಂಚ ಬೇಸರ ಇದೆ. ಆ ವಾರ ಉಳಿದುಕೊಂಡಿದ್ದರೆ ಫಿನಾಲೆ ತಲುಪಬಹುದಿತ್ತಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ. ಈಗ ರಾಶಿಕಾ ಶೆಟ್ಟಿ ಅವರು ತಮ್ಮ ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ್ದಾರೆ.ಅವರು ಬಿಗ್ ಬಾಸ್ ಮನೆಯಲ್ಲಿ ಬಟ್ಟೆಗಾಗಿ ಸಾಕಷ್ಟು ಹಣ…

Read More

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಕುಟುಂಬಕ್ಕೆ ಸರ್ಪದ ಭಯದ ನಡುವೆಯೂ ಶುಕ್ರದೆಸೆ – Kannada News | Lakkundi Gold treasure: Prajwal Gets Free Education offer And Family Waiting For Government compensation

ಗದಗ, (ಜನವರಿ 13): ನೂರೊಂದು ಬಾವಿ. ನೂರೊಂದು ದೇವಸ್ಥಾನಗಳ ಸ್ವರ್ಗ. ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ನಿಧಿಯದ್ದೇ (Lakkundi Gold treasure) ಚರ್ಚೆ. ದಿನಬೆಳಗಾದ್ರೆ ನಿಧಿ ನಿಧಿ ಎಂಬ ಮಾತು ಗಲ್ಲಿ ಗಲ್ಲಿಯಲ್ಲೂ ಚರ್ಚೆ ನಡೆಯುತ್ತಿದೆ. ಹೌದು.. ಗದಗದ (Gadag) ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆ ಪಾಯ ತೆಗೆಯುವಾಗ ನಿಧಿ ಸಿಕ್ಕಿದ್ದು, ಕುಟುಂಬ ಪ್ರಮಾಣಿಕತೆ ಮೆರೆದಿದೆ. ಆದ್ರೆ. ನಿಧಿಯಲ್ಲ, ನಿಧಿ ಅಂತಾ ಅಧಿಕಾರಿಗಳು ಧ್ವಂದ್ವ ಹೇಳಿಕೆ ನೀಡಿದ ಬಳಿಕ ಕುಟುಂಬಕ್ಕೆ ಮತ್ತಷ್ಟು ಗೊಂದಲ ಉಂಟಾಗಿದೆ. ನಿಧಿಯಲ್ಲ ಅಂದ್ರೆ ನಮ್ಮ ಚಿನ್ನ…

Read More

ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್ – Kannada News | Toxic Movie Teaser: Yash’s Film Shatters Records with 8.5 Crore Views Breaks Varanasi Teaser Record

‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಟೀಸರ್​​ನಿಂದ ಏನಾದರೂ ವಿಷಯ ತಿಳಿಯಬಹುದು ಎಂದು ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ, ಟೀಸರ್ ತುಂಬಾನೇ ಬೋಲ್ಡ್ ಆಗಿ ಮೂಡಿ ಬಂತು. ಇದರಿಂದ ಸಾಕಷ್ಟು ಚರ್ಚೆಗಳು ನಡೆದವು.ಈ ಕಾರಣದಿಂದಲೋ ಏನೋ ಸಿನಿಮಾದ ಟೀಸರ್ ನಿರೀಕ್ಷೆಗೂ ಮೀರಿದ ವೀವ್ಸ್ ಪಡೆದಿದೆ. ರಿಲೀಸ್ ಆದ ಐದು ದಿನಕ್ಕೆ ಈ ಟೀಸರ್ ಬರೋಬ್ಬರಿ 85 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇದು ‘ವಾರಣಾಸಿ’ ಟೀಸರ್​​ಗಿಂತ ಮೂರು ಪಟ್ಟು ಹೆಚ್ಚು. ‘ವಾರಣಾಸಿ’ ಟೀಸರ್…

Read More

ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿ ಲಾಕ್​​ ಆದ ಗ್ಯಾಂಗ್ – Kannada News | Bengaluru Robbery Gang Caught, Kengeri Police Arrest Repeat Offenders

ಬೆಂಗಳೂರು, ಜನವರಿ 13: ಮೂವತ್ತು ಹೆಚ್ಚು ರಾಬರಿ ಮಾಡಿದ್ದ ಖತರ್ನಾಕ್​​ ಗ್ಯಾಂಗ್​​ನ ಖೆಡ್ಡಾಕೆ ಕೆಡವುವಲ್ಲಿ ಬೆಂಗಳೂರಿನ ಕೆಂಗೇರಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಹೊಸ ವರ್ಷದ ಹಿಂದಿನ ದಿನ ವ್ಯಕ್ತಿಯೋರ್ವನನ್ನು ಅಡ್ಡಗಟ್ಟಿದ್ದ 1 ಲಕ್ಷ ರೂಪಾಯಿ ದರೋಡೆ ಮಾಡಿತ್ತು. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ಈ ಹಿಂದೆ ಇಂತಹುದೇ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದರು ಎಂಬುದು ಕೂಡ ತನಿಖೆ ವೇಳೆ ಬಯಲಾಗಿದೆ.  ಗ್ಯಾಂಗ್​​ಗಿದೆ ಕರಾಳ ಇತಿಹಾಸ! ಬಂಧಿತ ಆರೋಪಿಗಳಾದ ಸುರೇಶ್ ಅಲಿಯಾಸ್​​ ಸೂರಿ, ಶಶಿಕುಮಾರ್…

Read More

Blinkit:ಹತ್ತು ನಿಮಿಷಗಳಲ್ಲಿ ಮನೆ ಮನೆಗೆ ಡೆಲಿವರಿ ವ್ಯವಸ್ಥೆ ಕೈಬಿಟ್ಟ ಬ್ಲಿಂಕಿಟ್ – Kannada News | Speed Meets Scrutiny: Blinkit Drops 10 Minute Promise After Govt Nudge

ನವದೆಹಲಿ, ಜನವರಿ 13: ಕೇವಲ ಹತ್ತು ನಿಮಿಷಗಳಲ್ಲಿ ಮನೆ ಮನೆಗೆ ವಸ್ತುಗಳನ್ನು ಡೆಲಿವರಿ ಮಾಡುವ ವ್ಯವಸ್ಥೆಯನ್ನು ಬ್ಲಿಂಕಿಟ್(Blinkit) ಕೈಬಿಟ್ಟಿದೆ. ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಇತ್ತೀಚಿಗೆ ಡಿ. 31ರಂದು ಸ್ವಿಗ್ಗಿ, ಜೊಮ್ಯಾಟೋ, ಪ್ಲಿಪ್​ಕಾರ್ಟ್, ಬ್ಲಿಂಕಿಟ್ ಸೇರಿ ಆನ್​ಲೈನ್​ ಆ್ಯಪ್​ಗಳ ಗಿಗ್​ ಕಾರ್ಮಿಕರು ಮುಷ್ಕರ ನಡೆಸಿದ್ದರು. ಮುಷ್ಕರ ಅಷ್ಟೇನೂ ಪ್ರಭಾವ ಬೀರದಿದ್ದರು, ಕೆಲವು ಬದಲಾವಣೆ ಮಾಡಲು ಕಂಪನಿಗಳು ಒಪ್ಪಿಕೊಂಡಿತ್ತು. ಇನ್ನು ಕಾರ್ಮಿಕರು 10 ನಿಮಿಷಗಳ ವಿತರಣಾ ಆಯ್ಕೆಯನ್ನು ತೆಗೆಯುವಂತೆ ಬೇಡಿಕೆಯನ್ನು ಇಟ್ಟಿದ್ದರು. ಹತ್ತು ನಿಮಿಷಗಳ ವಿತರಣಾ ಮಾದರಿಯಿಂದಾಗಿ…

Read More

ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ: ನೋಡುತ್ತಾ ನಿಂತ ವಾಹನ ಸವಾರರು! – Kannada News | Massive Lone Elephant Walks Onto Road Near Male Mahadeshwara Hills, Motorists Stop to Watch

ಚಾಮರಾಜನಗರ, ಜನವರಿ 13: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ರಾಮಾಪುರ ರಸ್ತೆಯಲ್ಲಿ ಬೃಹತ್ ಗಾತ್ರದ ಒಂಟಿ ಸಲಗ ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿದೆ. ಏಕಾಏಕಿ ಬಂದ ಒಂಟಿ ಸಲಗವನ್ನು ನೋಡಲು ಕೆಲಕಾಲ ವಾಹನ ಸವಾರರು ಮತ್ತು ಮಾದಪ್ಪನ ಭಕ್ತರು ರಸ್ತೆಯಲ್ಲೇ ನಿಂತಿದ್ದಾರೆ. ಹನೂರಿನಿಂದ ರಾಮಾಪುರಕ್ಕೆ ತೆರಳುವ ಮಾರ್ಗದಲ್ಲಿ ಪ್ರತಿದಿನವೂ ಒಂಟಿ ಸಲಗ ಸೇರಿದಂತೆ ಕೆಲ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವುದು ಸಾಮಾನ್ಯವಾಗಿದೆ. ಕಾಡಾನೆಗಳು ಪ್ರತಿದಿನ ನೀರು ಕುಡಿಯಲು ಈ ಭಾಗಕ್ಕೆ ಆಗಮಿಸುತ್ತಿವೆ…

Read More

‘ಟಾಕ್ಸಿಕ್’ಗೆ ಮತ್ತೊಂದು ಸಂಕಷ್ಟ: ಸಿಬಿಎಫ್​​ಸಿಗೆ ದೂರು ಸಲ್ಲಿಕೆ – Kannada News | Complaint to CBFC about Yash starrer Toxic movie teaser

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಟೀಸರ್ ಬಗ್ಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಟೀಸರ್ ತುಂಬಾ ಹಾಟ್ ಆಯ್ತೆಂದು ಕೆಲವರು, ಅನವಶ್ಯಕ ಹಾಟ್ ದೃಶ್ಯ ಸೇರಿಸಲಾಗಿದೆ ಎಂದು ಮತ್ತೊಬ್ಬರು. ಇನ್ನು ಕೆಲವರು ಟೀಸರ್​ನ ಪರವಾಗಿಯೂ ವಾದ ಮಂಡಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ, ಸಿನಿಮಾದ ವಿರುದ್ಧ ದೂರುಗಳು ದಾಖಲಾಗಲು ಆರಂಭವಾಗಿವೆ. ನಿನ್ನೆ ‘ಟಾಕ್ಸಿಕ್’ ಸಿನಿಮಾ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿತ್ತು. ಮಕ್ಕಳ ಆಯೋಗವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ….

Read More

Video: ನಾಯಿ ಮರಿಗಳ ಹೆಜ್ಜೆ ಗುರುತಿನಿಂದ ಮನೆ ಬಾಗಿಲನ್ನು ಅಲಂಕರಿಸಿದ ಯುವತಿಯರು – Kannada News | Young woman find different ways to decorate their doorsteps

ಮನೆಯನ್ನು ಸುಂದರವಾಗಿ ಅಲಂಕರಿಸುವುದರಲ್ಲಿ ಹೆಂಗಳೆಯರು ಎತ್ತಿದ ಕೈ. ಹೀಗಾಗಿ ಬಿಸಾಡುವ ವಸ್ತುಗಳನ್ನು ಬಳಸಿ ಸುಂದರವಾದ ಅಲಂಕಾರಿಕ ಸಾಮಗ್ರಿಗಳನ್ನು (decorative items) ತಯಾರಿಸುತ್ತಾರೆ. ಆದರೆ ಈ ಯುವತಿಯರು (young woman’s) ಮನೆ ಬಾಗಿಲನ್ನು ಅಲಂಕರಿಸಲು ಮನೆಯ ಮುದ್ದಿನ ನಾಯಿಮರಿಗಳನ್ನು ಬಳಸಿದ್ದಾರೆ. ಅದೇಗೆ ಅಂತೀರಾ?, ಈ ಕುರಿತಾದ ಸ್ಟೋರಿ ಓದಿ. Puran8200singh ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವತಿಯರಿಬ್ಬರೂ ತಮ್ಮ ಮನೆಯ ಬಾಗಿಲನ್ನು ಅಲಂಕರಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ ಈ ಇಬ್ಬರೂ ಯುವತಿಯರು ಅಳವಡಿಸಿಕೊಂಡ ವಿಧಾನದ ಬಗ್ಗೆ ನೀವು ಊಹೆ…

Read More

ಹಾಸನ: ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ, ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು – Kannada News | Woman Killed in Wild Elephant Attack in Sakleshpur, Hassan; Villagers Protest Against Forest Department

ಆನೆ ದಾಳಿಗೆ ಮೃತಪಟ್ಟ ಶೋಭಾ ಹಾಗೂ ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು ಹಾಸನ, ಜನವರಿ 13: ಹಾಸನ (Hassan) ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಶೋಭಾ (40) ಎಂದು ಗುರುತಿಸಲಾಗಿದ್ದು, ಈ ದುರ್ಘಟನೆ ಜಿಲ್ಲೆಯಲ್ಲಿನ ಮಾನವ–ಕಾಡಾನೆ ಸಂಘರ್ಷ ಮತ್ತೊಮ್ಮೆ ತೀವ್ರವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮಂಗಳವಾರ ಮುಂಜಾನೆ ಕಾಫಿ ತೋಟದಲ್ಲಿ ಸುಣ್ಣ ಹಚ್ಚುವ ಕೆಲಸಕ್ಕೆ ಪುತ್ರಿಯರಾದ ಶೋಭ ಮತ್ತು ರಾಗಿಣಿ ಜತೆ ರಾಜಮ್ಮ ತೆರಳಿದ್ದರು. ಕೆಲಸದ ವೇಳೆ…

Read More

ಬೀದಿ ನಾಯಿಗಳು ಕಚ್ಚಿದ್ರೆ ಸರ್ಕಾರವೇ ಪರಿಹಾರ ನೀಡಬೇಕು: ಸುಪ್ರೀಂ – Kannada News | Supreme Court: Govt Liable for Street Dog Bite Compensation in India

ನವದೆಹಲಿ, ಜನವರಿ 13: ಬೀದಿನಾಯಿ(Stray Dog)ಗಳ ಕಡಿತದಿಂದ ಜೀವ ಕಳೆದುಕೊಂಡವರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಸರ್ಕಾರವೇ ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್​ ಹೇಳಿದೆ. ಬೀದಿ ನಾಯಿಗಳಿಂದ ಮಕ್ಕಳು ಮತ್ತು ವೃದ್ಧ ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಯಾರು ಹೊಣೆಗಾರರಾಗಬೇಕು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತು. 9 ವರ್ಷದ ಮಗುವಿನ ಸಾವನ್ನು ಉಲ್ಲೇಖಿಸಿ, ನಾಯಿ ಪ್ರಿಯರ ಸಂಘಟನೆಗಳು ಪೋಷಿಸುವ ಬೀದಿ ನಾಯಿಗಳಿಂದ…

Read More