ಕಾಂಗ್ರೆಸ್​​ ಜೊತೆಗಿನ ಮದುವೆ ಹಿಂಸಾತ್ಮಕವಾಗಿದ್ದರಿಂದ ವಿಚ್ಚೇದನ: ಖರ್ಗೆ ಹೇಳಿಕೆಗೆ ದೇವೇಗೌಡರ ಕೌಂಟರ್​

ಕಾಂಗ್ರೆಸ್​​ ಜೊತೆಗಿನ ಮದುವೆ ಹಿಂಸಾತ್ಮಕವಾಗಿದ್ದರಿಂದ ವಿಚ್ಚೇದನ: ಖರ್ಗೆ ಹೇಳಿಕೆಗೆ ದೇವೇಗೌಡರ ಕೌಂಟರ್​

ನವದೆಹಲಿ, ಮಾರ್ಚ್​ 18: ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ರಾಜ್ಯಸಭೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದ ವೇಳೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರನ್ನು ಉದ್ದೇಶಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿದ್ದ ಹಾಸ್ಯಮಯ ಮಾತಿಗೆ ಅದೇ ಶೈಲಿಯಲ್ಲಿ ದೊಡ್ಡಗೌಡರೀಗ ಉತ್ತರ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಜೊತೆಗಿನ ದೇವೇಗೌಡರ ಸಂಬಂಧದ ಬಗ್ಗೆ ತಿಳಿಸಿ ಹಾಸ್ಯ ಮತ್ತು ವ್ಯಂಗ್ಯಭರಿತವಾಗಿ ಮಾತನಾಡಿದ್ದ ಖರ್ಗೆ, ನಾನು ಅವರನ್ನು 54 ವರ್ಷಗಳಿಂದ ಬಲ್ಲೆ ಮತ್ತು ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಆ ನಂತರ ಏನಾಯಿತು ಎಂಬುದು ನನಗೆ ತಿಳಿದಿಲ್ಲ. ಅವರು ನಮ್ಮನ್ನು ಪ್ರೀತಿಸಿದರು, ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿವಾಹವಾದರು ಎಂದಿದ್ದರು. ಇದಕ್ಕೆ ಈಗ ದೇವೇಗೌಡರು ಉತ್ತರಿಸಿದ್ದು, ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ. ಹೀಗಾಗಿ ವಿಚ್ಛೇದನ ಮಾಡಬೇಕಾಯಿತು ಎಂದಿದ್ದಾರೆ.

ದೇವೇಗೌಡರು ಹೇಳಿದ್ದೇನು?

ನಾನು ಕಾಂಗ್ರೆಸ್ ಜೊತೆ ಪ್ರೇಮದಲ್ಲಿದ್ದೆ. ಆದರೆ ಕೊನೆಯಲ್ಲಿ ಮೋದಿ (ಬಿಜೆಪಿ) ಅವರನ್ನು ಮದುವೆಯಾದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನಲ್ಲಿ ಹಾಸ್ಯಮಿಶ್ರಿತವಾಗಿ ಹೇಳಿದ್ದಾರೆ. ನಾನು ಏಕೆ ಹಾಗೆ ಮಾಡಿದೆ ಎಂಬುದು ಅವರಿಗೆ ಗೊತ್ತಿಲ್ಲ ಎಂದೂ ತಿಳಿಸಿದ್ದಾರೆ. ನಾಳೆಯ ಯುಗಾದಿ ಆಚರಣೆಗಾಗಿ ಬೆಂಗಳೂರಿಗೆ ಬರಬೇಕಾಗಿದ್ದರಿಂದ ಅವರು ಮಾತನಾಡಿದಾಗ ನಾನು ಸದನದಲ್ಲಿರಲಿಲ್ಲ. ನನ್ನ ಸ್ನೇಹಿತನ ಮಾತಿಗೆ ಅದೇ ಮದುವೆ ಭಾಷೆಯಲ್ಲಿ ಉತ್ತರಿಸಬೇಕೆಂದರೆ, ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ. ಆದರೆ ಅದು ಹಿಂಸಾತ್ಮಕ ಸಂಬಂಧವಾಗಿದ್ದರಿಂದ ನಾನು ಅವರನ್ನು ವಿಚ್ಛೇದನ ಮಾಡಬೇಕಾಯಿತು ಎಂದು ಹೇಳಲು ಇಷ್ಟಪಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ದೇವೇಗೌಡರು ನಮ್ಮನ್ನು ಪ್ರೇಮಿಸಿದರು, ಮೋದಿ ಜತೆ ಮದುವೆಯಾದರು! ಮಲ್ಲಿಕಾರ್ಜುನ ಖರ್ಗೆ ಹೀಗಂದಾಗ ಮೋದಿ ರಿಯಾಕ್ಷನ್ ಹೇಗಿತ್ತು ನೋಡಿ

2018ರಲ್ಲಿ ಕಾಂಗ್ರೆಸ್ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮುಂದಾಗಿದ್ದಿದ್ದು ಖರ್ಗೆ ಅವರಿಗೆ ನೆನಪಿರಬಹುದು. ನಾನು ಇದಕ್ಕೆ ಒಪ್ಪಿರಲಿಲ್ಲ. ಎಲ್ಲರ ಸಮ್ಮುಖದಲ್ಲೇ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ನಾನು ಹೇಳಿದ್ದೆ. ಸಿದ್ದರಾಮಯ್ಯ ಕೂಡ ಅಲ್ಲಿ ಇದ್ದರು. ಆದರೂ ಆಜಾದ್ ಅವರು ಕುಮಾರಸ್ವಾಮಿ ಅವರ ನೇತೃತ್ವವನ್ನೇ ಒತ್ತಾಯಿಸಿದರು. ಆದರೆ ಈ ಎಲ್ಲಾ ಹಾಡು-ನೃತ್ಯ ಮತ್ತು ಮದುವೆ ಬಳಿಕ 2019ರಲ್ಲಿ ಏನಾಯಿತು? ಅವರು ನಮ್ಮನ್ನು ಬಿಟ್ಟುಬಿಟ್ಟರು. ಕಾಂಗ್ರೆಸ್‌ನ ಎಷ್ಟು ಶಾಸಕರು ಬಿಜೆಪಿ ಕಡೆಗೆ ಹೋದರು? ಅವರನ್ನು ಯಾರು ಕಳುಹಿಸಿದರು ಎಂಬುದು ಈಗ ಎಲ್ಲರಿಗೂ ತಿಳಿದ ವಿಷಯ. ಆ ದಿನ ಪಕ್ಷತ್ಯಾಗಕ್ಕೆ ಪ್ರೇರೇಪಿಸಿದವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ, ಇಂದು ನನ್ನ ಸ್ನೇಹಿತ ಖರ್ಗೆ ಅವರು ಇನ್ನಷ್ಟು ಉತ್ತಮ ಸ್ಥಾನದಲ್ಲಿರುತ್ತಿದ್ದರು. ಹೀಗಾಗಿ ದಾಖಲೆಯನ್ನು ಸರಿಪಡಿಸಲು ಹೇಳುವುದಾದರೆ, ನಾನು ಕಾಂಗ್ರೆಸ್ ಮೈತ್ರಿಯನ್ನು ಬಿಟ್ಟದ್ದಲ್ಲ. ಅವರೇ ದೂರ ನಡೆದರು. ನನಗೆ ವಿಚ್ಛೇದನ ಮಾಡಿ, ಹೆಚ್ಚು ಸ್ಥಿರವಾದ ಮೈತ್ರಿ ಹುಡುಕುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ಇರಲಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bangalore Rain: ಸಂಜೆಯಾಗುತ್ತಿದ್ದಂತೆ ಬೆಂಗಳೂರಿಗೆ ಎಂಟ್ರಿಕೊಟ್ಟ ಮಳೆ: ಆಲಿಕಲ್ಲು ಮಳೆ ಕಂಡು ಸಿಟಿ ಮಂದಿ ಖುಷ್

ಬೆಂಗಳೂರು, ಮಾರ್ಚ್​ 18: ಕರ್ನಾಟಕದಲ್ಲಿ ಬೇಸಿಗೆ ಮಳೆ (Rain) ಆರ್ಭಟ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆ ಆಗುತ್ತಿದ್ದು, ಇಂದು ಕೂಡ ಮಳೆ ಸುರಿದಿದೆ. ಇತ್ತ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಸಂಜೆ ಆಗುತ್ತಿದ್ದಂತೆ ನಗರದ ಹಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದೆ. ಆ ಮೂಲಕ ಸಿಲಿಕಾನ್ ಸಿಟಿ ಕೂಲ್​ ಕೂಲ್​ ಆಗಿದೆ. ಆಲಿಕಲ್ಲಿನ ಮಳೆ ಕಂಡು ಸಿಟಿ ಮಂದಿ ಫುಲ್ ಖುಷ್​​.

ಏಲೆಲ್ಲಿ ಮಳೆ

ರಣ ರಣ ಬಿಸಿಲಿನ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಆಲಿಕಲ್ಲು ಸಹಿತ ಭಾರಿ ಮಳೆ ಆಗಿದೆ. ಮೆಜೆಸ್ಟಿಕ್​, ಶಾಂತಿನಗರ, ಕಾಡುಗೋಡಿ, ಮಾರ್ಕೆಟ್, ಜಯನಗರ, ಬಸವೇಶ್ವರ ನಗರ, ಶಾಂತಿನಗರ, ವಿಲ್ಸನ್​ಗಾರ್ಡನ್, ರಿಚ್ಮಂಡ್​ಟೌನ್ ಸುತ್ತಮುತ್ತ ಮಳೆ ಆಗಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ; ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಸ್ಥಿತಿ ಏನು?

ದಾವಣಗೆರೆ ಜಿಲ್ಲೆಯಲ್ಲಿ ಇಂದು ಮತ್ತೆ ಮಳೆ ಆಗಿದೆ. ದಾವಣಗೆರೆ ತಾಲೂಕಿನ ಗುಮ್ಮನೂರ, ಗುಡಾಳ್, ಹೆಬ್ಬಾಳ್, ಆನಗೋಡ್ ಸೇರಿದಂತೆ ಬಹುತೇಕ ಕಡೆ ಮಳೆ ಆಗಿದೆ. ಗ್ರಾಮದ ರಸ್ತೆ ತುಂಬೆಲ್ಲಾ ರಾಶಿ ರಾಶಿ ಅಲಿಕಲ್ಲು ಬಿದ್ದಿದ್ದು, ರಸ್ತೆ ಜಮ್ಮು ಕಾಶ್ಮೀರದಂತಾಗಿದೆ.

ಚಾಮರಾಜನಗರದಲ್ಲಿ ಭಾರೀ ಬಿರುಗಾಳಿ ಸಮೇತ ವರುಣನ ರುದ್ರನರ್ತನ

ಚಾಮರಾಜನಗರ ಪಟ್ಟಣ ಹಾಗೂ ಚಾಮರಾಜನಗರ ತಾಲೂಕಿನಾದ್ಯಂತ ಭಾರೀ ಬಿರುಗಾಳಿ ಸಮೇತ ವರುಣ ಆರ್ಭಟಿಸಿದ್ದಾನೆ. ಮಳೆಯ ಆರ್ಭಟಕ್ಕೆ ರಸ್ತೆ ಕಾಣದೆ ವಾಹನ ಸವಾರರು ಪರದಾಡಿದ್ದಾರೆ. ಬಿರುಗಾಳಿಯ ರಭಸಕ್ಕೆ ತೆಂಗಿನ ಗರಿಗಳು ದರಶಾಹಿ ಆಗಿದೆ. ನಿನ್ನೆ ಆಲಿಕಲ್ಲು ಸಮೇತ ಮಳೆ ಸುರಿದು ರೈತರಿಗೆ ಸಂಕಷ್ಟ ತಂದೊಡ್ಡಿತ್ತು. ಇಂದು ಮತ್ತೆ ರಣ ಚಂಡಿ ಮಳೆ ಸುರಿದಿದೆ. ಈ ಅಕಾಲಿಕ ಮಳೆಗೆ ಚಾಮರಾಜನಗರ ಜನತೆ ಮತ್ತು ರೈತರು ತಬ್ಬಿಬ್ಬಾಗಿದ್ದಾರೆ.

ಇದನ್ನೂ ಓದಿ: ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!

ಇನ್ನು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನಾದ್ಯಂತ ಮಳೆ ಸುರಿದಿದೆ. ಕೊಂಬಾರು ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಆ ಮೂಲಕ ಬಿಸಿಲ ಧಗೆಗೆ ಮಳೆರಾಯ ತಂಪೆರೆದಿದ್ದಾನೆ. ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸುಮಾರು ಒಂದು ಗಂಟೆ ನಿರಂತರ ಮಳೆ ಆಗಿದೆ. ವರ್ಷದ ಮೊದಲ ಮಳೆಗೆ ಮೈಸೂರಿಗರ ಸಂತಸಗೊಂಡಿದ್ದಾರೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದವರಿಗೆ ವರುಣ ಸಿಂಚನವಾಗಿದೆ.

ವರದಿ: ನಟರಾಜ್ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Dhurandhar 2 First Half Review: ‘ಧುರಂಧರ್ 2’ ಚಿತ್ರದ ಮೊದಲಾರ್ಧ ವಿಮರ್ಶೆ; ಸಿನಿಮಾದಲ್ಲಿ ಏನೆಲ್ಲ ಇದೆ?

‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ತೆರೆಕಾಣುತ್ತಿದೆ. ಅದಕ್ಕೂ ಮೊದಲು ಅಂದರೆ ಇಂದು (ಮಾರ್ಚ್ 18) ಸಿನಿಮಾ ಪ್ರೀಮಿಯರ್ ಆಗಿದೆ. ಪ್ರೀಮಿಯರ್ ಶೋಗಳ ಟಿಕೆಟ್​​​ಗಳು ಭಾರೀ ಸಂಖ್ಯೆಯಲ್ಲಿ ಮಾರಾಟ ಆಗಿದೆ.  ಈ ಚಿತ್ರ ‘ಧುರಂಧರ್’ ಚಿತ್ರದ ಮುಂದುವರಿದ ಭಾಗ. ಈ ಸಿನಿಮಾ ಸೇಡಿನ ಕಥೆಯನ್ನು ಹೊಂದಿದೆ. ಹಾಗಾದರೆ, ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಯಾವ ಭಾಗ ಹೈಲೈಟ್ ಆಗಿದೆ? ಯಾವ ವಿಷಯವನ್ನು ಆದಿತ್ಯ ಧಾರ್ ಹೈಲೈಟ್ ಮಾಡಿದ್ದಾರೆ? ಆ ಬಗ್ಗೆ ಇಲ್ಲಿದೆ ವಿವರ.

ಸಿನಿಮಾದ ಮೊದಲಾರ್ಧದ ವಿಶೇಷತೆಗಳೇನು?

* ‘ಧುರಂಧರ್’ ಸಿನಿಮಾ ರೆಹಮಾನ್ ಡಕಾಯಿತ್ ಸಾವಿನೊಂದಿಗೆ ಕೊನೆ ಆಗಿತ್ತು. ಅಲ್ಲಿಂದಲೇ ‘ಧುರಂಧರ್ 2’ ಸಿನಿಮಾ ಆರಂಭ ಆಗುತ್ತದೆ.

* ‘ಧುರಂಧರ್ 2’ ಸಿನಿಮಾ ಸೇಡಿನ ಕಥೆ ಎಂದು ಮೊದಲೇ ಹೇಳಲಾಗಿದೆ. ಅದೇ ರೀತಿ ಹಮ್ಜಾ ಅಲಿ ಮಜಾರಿ ಸೇಡು ತೀರಿಸಿಕೊಳ್ಳುತ್ತಾನೆ.

* ರೆಹಮಾನ್ ಸಾವಿನ ಬಳಿಕ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಹಮ್ಜಾ ನಿಲ್ಲುತ್ತಾನೆ.

* ‘ಧುರಂಧರ್ 2’ ಸಿನಿಮಾದಲ್ಲಿ ಹಮ್ಜಾ ಅಲಿ ಜಸ್ಕಿರತ್ ಸಿಂಗ್ ರಂಗಿ ಪಾತ್ರದ ಹಿನ್ನೆಲೆಯೂ ಬಂದು ಹೋಗುತ್ತದೆ.

* ಸಿನಿಮಾದಲ್ಲಿ ಬಿಜಿಎಂ ಹೈಲೈಟ್ ಆಗಿದೆ. ಸಿನಿಮಾದ ತೂಕವನ್ನು ಇದು ಹೆಚ್ಚಿಸುತ್ತದೆ.

* ಸಿನಿಮಾ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ಹಾಗೂ ರಕ್ತ-ಸಿಕ್ತ ದೃಶ್ಯಗಳು ತುಂಬಿವೆ. ಇವನ್ನು ನೋಡೋಕೆ ಗಟ್ಟಿ ಗುಂಡಿಗೆ ಬೇಕು.

* ‘ಧುರಂಧರ್’ ಸಿನಿಮಾ ರೆಹಮಾನ್ ಡಕಾಯಿತ್ ಸಾವಿನೊಂದಿಗೆ ಕೊನೆ ಆಗಿತ್ತು. ಅಲ್ಲಿಂದಲೇ ‘ಧುರಂಧರ್ 2’ ಆರಂಭ ಆಗಲ್ಲ.

* ಜಸ್ಕಿರತ್ ಸಿಂಗ್, ಹಮ್ಜಾ ಆದ ಕಥೆಯಿಂದ‌ ಸಿನಿಮಾ ಆರಂಭ ಆಗುತ್ತದೆ. ಆತನ ನೋವಿನ ಕಥೆ ಕರುಳು ಹಿಂಡುತ್ತದೆ.

* ‘ಧುರಂಧರ್ 2’ ಸಿನಿಮಾ ಸೇಡಿನ ಕಥೆ ಎಂದು ಮೊದಲೇ ಹೇಳಲಾಗಿದೆ. ಅದೇ ರೀತಿ ಹಮ್ಜಾ ಅಲಿ ಮಜಾರಿ ಸೇಡು ತೀರಿಸಿಕೊಳ್ಳುತ್ತಾನೆ.

* ರೆಹಮಾನ್ ಸಾವಿನ ಬಳಿಕ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಹಮ್ಜಾ ನಿಲ್ಲುತ್ತಾನೆ.

* ಸಿನಿಮಾದಲ್ಲಿ ಬಿಜಿಎಂ ಹೈಲೈಟ್ ಆಗಿದೆ. ಸಿನಿಮಾದ ತೂಕವನ್ನು ಇದು ಹೆಚ್ಚಿಸುತ್ತದೆ.

* ಸಿನಿಮಾ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ಹಾಗೂ ರಕ್ತ-ಸಿಕ್ತ ದೃಶ್ಯಗಳು ತುಂಬಿವೆ. ಇವನ್ನು ನೋಡೋಕೆ ಗಟ್ಟಿ ಗುಂಡಿಗೆ ಬೇಕು.

* ಬಡಾ ಸಾಬ್ ಕೂಡ ಬರುತ್ತಾನೆ. ಆತ ಯಾರು ಅನ್ನೋದು ಸಸ್ಪೆನ್ಸ್‌. ಸಿನಿಮಾ ಅಲ್ಲೇ ನೋಡಬೇಕು.

* ಸಿನಿಮಾದ ಇಂಟರ್‌ವಲ್ ಅಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೂಡ ಇದೆ.‌ ಅದೇನು ಎಂದು ಸಿನಿಮಾದಲ್ಲೇ ನೋಡಬೇಕು.

* ಕೆಲ ನೈಜ ಘಟನೆಗಳು ಕೂಡ ಇಲ್ಲಿ ಬಂದು ಹೋಗುತ್ತವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಪೋರಿ ರೀತಿ ವರ್ತಿಸುತ್ತಾರೆ; ರಾಹುಲ್ ಗಾಂಧಿ ಮುಂದೆ ಮಹಿಳೆಯರು ಓಡಾಡುವುದೇ ಕಷ್ಟ ಎಂದ ಕಂಗನಾ ರಣಾವತ್

ನವದೆಹಲಿ, ಮಾರ್ಚ್ 18: ಬಿಜೆಪಿ ಸಂಸದೆ ಕಂಗನಾ ರಣಾವತ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ‘ಟಪೋರಿ’ ಎಂದು ಕರೆದಿದ್ದಾರೆ. ರಾಹುಲ್ ಗಾಂಧಿ (Rahul Gandhi) ಯಾವಾಗಲೂ ಮಹಿಳೆಯರಿಗೆ ಮುಜುಗರವಾಗುವಂತೆ ವರ್ತಿಸುತ್ತಾರೆ. ಅವರು ಎದುರು ಬಂದರೆ ಸಾಕು ಮಹಿಳಾ ಸಂಸದರಿಗೆ ಅನ್​ಕಂಫರ್ಟಬಲ್ ಆಗುತ್ತದೆ. ಅವರು ಟಪೋರಿ ರೀತಿ ವರ್ತಿಸುತ್ತಾರೆ. ಯಾರಾದರೂ ಇಂಟರ್​​ವ್ಯೂ ನೀಡುತ್ತಿದ್ದರೆ ಜೋರಾಗಿ ಕಿರುಚುತ್ತಾ ಡಿಸ್ಟರ್ಬ್ ಮಾಡುತ್ತಾರೆ ಎಂದು ಕಂಗನಾ ರಣಾವತ್ ಸಂಸತ್ತಿನ ಸಂಕೀರ್ಣದಲ್ಲಿ ಹೇಳಿದ್ದಾರೆ.

ರಾಹುಲ್ ಗಾಂಧಿಯವರು ತಮ್ಮ ಸಹೋದರಿಯಾದ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಡವಳಿಕೆಯನ್ನು ನೋಡಿ ಕಲಿಯುವುದು ಒಳ್ಳೆಯದು. ರಾಹುಲ್ ಗಾಂಧಿಯ ವರ್ತನೆ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾಗೆ ಬಿಸಿಸಿಐ ಕಡೆಯಿಂದ ಯುಗಾದಿ ಗಿಫ್ಟ್

ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಅಕ್ಷರ್ ಪಟೇಲ್​ಗೆ ( Axar Patel) ಬಿಸಿಸಿಐನಿಂದ (BCCI) ಯುಗಾದಿ ಗಿಫ್ಟ್ ಸಿಗಲಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಈ ಇಬ್ಬರು ಆಟಗಾರರು ಐಸಿಸಿಯ ಪ್ರತಿಯೊಂದು ಈವೆಂಟ್​ಗಳಲ್ಲೂ ಟೀಂ ಇಂಡಿಯಾ ಪರ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿಯೂ ಶ್ರಮಿಸಿದ್ದಾರೆ. ಹೀಗಾಗಿ ಇವರಿಬ್ಬರ ವಾರ್ಷಿಕ ವೇತನವನ್ನು ಹೆಚ್ಚಿಸಲು ಬಿಸಿಸಿಐ ಯೋಚಿಸಿದೆ ಎಂದು ಹೇಳಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಬಿಸಿಸಿಐ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಿತ್ತು. ಆ ಪಟ್ಟಿಯಲ್ಲಿ ಎ+ ಗ್ರೇಡ್ ಅನ್ನು ತೆಗೆದುಹಾಕಿ ಉಳಿದ ಮೂರು ಗ್ರೇಡ್​ಗಳನ್ನು ಮುಂದುವರೆಸಿತ್ತು. ಎ+ ಗ್ರೇಡ್ ತೆಗೆದ ಕಾರಣ ಕೆಲವು ಆಟಗಾರರ ವಾರ್ಷಿಕ ವೇತನವೂ ಕಡಿಮೆ ಆಯಿತು.

ಪ್ರಸ್ತುತ ಬಿಸಿಸಿಐನ ಕೇಂದ್ರ ಒಪ್ಪಂದ ಪ್ರಕಾರ, ಎ ಗ್ರೇಡ್‌ ಆಟಗಾರರಿಗೆ 5 ಕೋಟಿ ರೂ. ಬಿ ಗ್ರೇಡ್‌ ಆಟಗಾರರಿಗೆ 3 ಕೋಟಿ ರೂ. ಹಾಗೂ ಸಿ ಗ್ರೇಡ್ ಆಟಗಾರರಿಗೆ 1 ಕೋಟಿ ರೂ. ವೇತನ ಸಿಗಲಿದೆ. ಅದರಂತೆ ಈ ಹಿಂದೆ ಎ+ ಗ್ರೇಡ್​ನಲ್ಲಿ ಸ್ಥಾನ ಪಡೆದಿದ್ದ ಜಸ್ಪ್ರೀತ್ ಬುಮ್ರಾ ವರ್ಷಕ್ಕೆ 7 ಕೋಟಿ ರೂ. ವೇತನ ಪಡೆಯುತ್ತಿದ್ದರು. ಆದರೆ ಎ+ ಗ್ರೇಡ್ ಅನ್ನು ರದ್ದುಗೊಳಿಸಿದ ಬಳಿಕ ಎ ಗ್ರೇಡ್‌ನಲ್ಲಿ ಸ್ಥಾನ ಪಡೆದಿರುವ ಬುಮ್ರಾಗೆ 5 ಕೋಟಿ ರೂ. ವೇತನ ಸಿಗುತ್ತಿದೆ. ಅಂದರೆ ಬುಮ್ರಾ ವರ್ಷಕ್ಕೆ 2 ಕೋಟಿ ರೂ. ವೇತನ ಕಡಿಮೆ ಪಡೆಯಲಿದ್ದಾರೆ.

ಅಕ್ಷರ್, ಬುಮ್ರಾ ವೇತನ ಹೆಚ್ಚಳ

ಹೀಗಾಗಿ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಬುಮ್ರಾಗೆ ವಾರ್ಷಿಕವಾಗಿ ನೀಡುತ್ತಿರುವ ವೇತನವನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಪರಿಶೀಲಿಸುತ್ತಿದೆ . ಬುಮ್ರಾ ಜೊತೆಗೆ ಟಿ20 ತಂಡದ ಉಪನಾಯಕ ಅಕ್ಷರ್ ಪಟೇಲ್‌ಗೂ ವೇತನ ಹೆಚ್ಚಿಸುವ ಸಾಧ್ಯತೆಗಳಿವೆ. ಪ್ರಸ್ತುತ ಅಕ್ಷರ್ ಪಟೇಲ್ ಗ್ರೇಡ್ ಸಿ ವಿಭಾಗದಲ್ಲಿದ್ದು, ಕೇವಲ 1 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. ಎರಡು ಟಿ20 ವಿಶ್ವಕಪ್‌ಗಳು ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ಗೆಲುವಿನಲ್ಲಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರ ಸಂಬಳ ಕಡಿಮೆಯಾಗಿರುವ ಬಗ್ಗೆ ಅನೇಕ ಕ್ರಿಕೆಟ್ ತಜ್ಞರು ಕಳವಳ ವ್ಯಕ್ತಪಡಿಸಿದ್ದರು, ಆದರೆ ಈಗ ಬಿಸಿಸಿಐ ಅವರ ಸಂಬಳವನ್ನು ಹೆಚ್ಚಿಸಬಹುದು.

IND vs SA: ಭಾರತೀಯ ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ಮೊದಲ ವೇಗಿ ಜಸ್ಪ್ರೀತ್ ಬುಮ್ರಾ

ಬಿಸಿಸಿಐ ನೂತನ ಕೇಂದ್ರ ಒಪ್ಪಂದ

  • ‘ಎ’ ಗ್ರೇಡ್‌ನಲ್ಲಿ ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಇದ್ದಾರೆ.
  • ಬಿ ಗ್ರೇಡ್‌ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್ ಮತ್ತು ವಾಷಿಂಗ್ಟನ್ ಸುಂದರ್ ಇದ್ದಾರೆ.
  • ಗ್ರೇಡ್ ಸಿ ಯಲ್ಲಿ ಅಕ್ಷರ್ ಪಟೇಲ್, ರಿಂಕು ಸಿಂಗ್, ತಿಲಕ್ ವರ್ಮಾ, ಶಿವಂ ದುಬೆ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಧ್ರುವ್ ಜುರೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರವಿ ಬಿಷ್ಣೋಯ್ ಮತ್ತು ರುತುರಾಜ್ ಗಾಯಕ್ವಾಡ್.

Source link

‘ಸರ್ಸೆ ಸೆರಗು’ ಹಾಡು ವಿವಾದ: ಆರೋಪಗಳಿಗೆ ಸ್ಪಷ್ಟನೆ ಕೊಟ್ಟ ಪ್ರೇಮ್

ಧ್ರುವ ಸರ್ಜಾ (Dhrva Sarja) ನಟನೆಯ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ’ ಹಾಡು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಹಾಡಿನ ಹಿಂದಿ ಆವೃತ್ತಿಯ ಬಗ್ಗೆ ತೀವ್ರ ಟೀಕೆ, ವಿರೋಧ ವ್ಯಕ್ತವಾಗಿದ್ದು, ಪ್ರೇಮ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಈ ಹಾಡನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ನೋರಾ ಫತೇಹಿ ಸ್ವತಃ ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲವೂ ಮುಗಿದ ಬಳಿಕ ಇದೀಗ ಹಾಡು ಬರೆದ ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ಅಪ್​​ಲೋಡ್ ಮಾಡಿರುವ ನಿರ್ದೇಶಕ ಪ್ರೇಮ್, ‘ಯಾರೂ ಸಹ ಬೇಕೆಂದು ಅಥವಾ ತಿಳಿದು-ತಿಳಿದು ತಪ್ಪು ಮಾಡುವುದಿಲ್ಲ. ಸಾಕಷ್ಟು ಹಾಡುಗಳನ್ನು ನಾನು ಈ ವರೆಗೆ ಬರೆದಿದ್ದೇನೆ. ತಾಯಿಯ ಬಗ್ಗೆ, ದೇವರ ಬಗ್ಗೆ, ಅಣ್ಣ-ತಮ್ಮ, ಪ್ರೀತಿ ಬಗ್ಗೆ, ಜನಪದ ಹೀಗೆ ಹಲವು ರೀತಿ ಹಾಡು ಬರೆದಿದ್ದೀನಿ. ಜನ ಸಹ ಪ್ರೇಮ್ ಸಿನಿಮಾನಲ್ಲಿ ಒಳ್ಳೆಯ ಹಾಡುಗಳು ಇರುತ್ತವೆ ಎಂದೇ ಸಿನಿಮಾಕ್ಕೆ ಬರುತ್ತಾರೆ. ಅದಕ್ಕೆ ಋಣಿಯಾಗಿ ಇರುತ್ತೇನೆ. ಈ ಹಾಡು (ಸರ್ಸೆ ಸೆರಗು) ಬರೆದಾಗ ನಾನು ಬೇರೊಂದು ದೃಷ್ಟಿಕೋನದಿಂದ ಬರೆದಿದ್ದೆ’ ಎಂದಿದ್ದಾರೆ.

‘ಆ ಹಾಡು ಬರೆಯುವಾಗ ನನ್ನ ದೃಷ್ಟಿಕೋನದಲ್ಲಿ ನಾನು ಬರೆದೆ. ಎಣ್ಣೆ ಬಾಟಲಿ, ಉಪ್ಪಿನಕಾಯಿ ಇದನ್ನು ಕಲ್ಪಿಸಿಕೊಂಡು ಹಾಡು ಬರೆದಿದ್ದೆ. ಬಾಟಲ್​​ನ ಮೇಲೆತ್ತಿ ಎಂದು ಬರೆಯಬೇಕಿತ್ತು ಆದರೆ ಆ ಬಾಟಲಿ ಪದವನ್ನು ನಾನು ಕೊನೆಯಲ್ಲಿ ಬಳಸಿದೆ. ಹಾಡಿನಲ್ಲಿ ಕುತೂಹಲ ಇರಲಿ ಎಂಬ ಕಾರಣಕ್ಕೆ ಹಾಗೆ ಮಾಡಿದೆ. ಆದರೆ ಜನ ಅದನ್ನು ಬೇರೆಯದ್ದೇ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಕೆಲವರು ನನ್ನ ವಿರುದ್ಧ ಕಾಲೆಳೆಯಲು, ಹೀಗಳೆಯಲು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ. ಲೈಕು, ಕಮೆಂಟಿಗಾಗಿ ವಿಡಿಯೋ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ’ ಎಂದಿದ್ದಾರೆ ಪ್ರೇಮ್.

ಇದನ್ನೂ ಓದಿ:ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ

‘ನಾನು ಈ ವರೆಗೆ ಕೆಟ್ಟ ಅರ್ಥದ ಹಾಡುಗಳನ್ನು ಬರೆದಿಲ್ಲ, ಅದು ನನಗೆ ಬೇಕಾಗಿಯೂ ಇಲ್ಲ. ನಾನು ಬರೆದಿದ್ದ ಅರ್ಥವೇ ಬೇರೆ ಆಗಿತ್ತು. ಇದನ್ನು ಈ ಹಿಂದೆಯೂ ನಾನು ಮೀಡಿಯಾ ಮುಂದೆ ಹೇಳಿದ್ದೇನೆ. ಆದರೆ ಹಾಡು ಕೇಳಿದ ಕೆಲವರಿಗೆ ಹರ್ಟ್ ಆಗಿರಬಹುದು, ಪ್ರೇಮ್ ಹೀಗೆ ಮಾಡಿದ್ದಾರಾ? ಪ್ರೇಮ್ ಈ ಥರಾನ? ಅನಿಸಿರಬಹುದು. ಸಾಹಿತಿ ಆದ ಮೇಲೆ ಎಲ್ಲ ರೀತಿಯಲ್ಲಿಯೂ ಬರೆಯಬೇಕಾಗುತ್ತದೆ. ಆದರೆ ನಾನು ಅಶ್ಲೀಲ ಅರ್ಥದಲ್ಲಿ ಬರೆದಿಲ್ಲ. ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಕೇಳುವೆ. ಹಾಡನ್ನು ರೀರೈಟ್ ಮಾಡುವೆ, ಬೇರೆ ರೀತಿ ಬರೆದು ಮತ್ತೆ ಅಪ್​ಲೋಡ್ ಮಾಡುತ್ತೀವಿ, ನಿಮಗೆ ಹರ್ಟ್ ಮಾಡಲು ಇಷ್ಟವಿಲ್ಲ’ ಎಂದಿದ್ದಾರೆ ಪ್ರೇಮ್.

ಹಾಡಿನ ಹಿಂದಿ ಆವೃತ್ತಿಯ ಬಗ್ಗೆ ಗೊಂದಲ ಇತ್ತು. ಹಿಂದಿ ಪದಗಳು ಕೆಲವು ನನಗೆ ಇಷ್ಟವಾಗಲಿಲ್ಲ. ಆದರೆ ಭಾಷೆ ಸಮಸ್ಯೆಯಿಂದ ನಾನು ಪ್ರಶ್ನೆ ಮಾಡಲಿಲ್ಲ. ಆದರೆ ಹಿಂದಿ ಹಾಡು ಬರೆದಿರುವ ರತಿ ಬಾಲಮ್ ಅವರು ಎಲ್ಲ ತಪ್ಪನ್ನು ನನ್ನ ಮೇಲೆ ಹೊರಿಸಿದ್ದಾರೆ. ಅಸಲಿಗೆ ನನ್ನ ಹಿಂದಿನ ಹಿಟ್ ಹಾಡುಗಳನ್ನು ಕನ್ನಡದಿಂದ ಹಿಂದಿಗೆ ಬರೆದಿದ್ದು ಅವರೇ. ಆದರೆ ಅವರು ಸಮಜಾಯಿಷಿಕೊಳ್ಳಲಿಲ್ಲ, ಎಲ್ಲ ತಪ್ಪು ನನ್ನ ಮೇಲೆ ಹಾಕಿದರು, ಬಹುಷಃ ಭಯಪಟ್ಟು ನನ್ನ ಮೇಲೆ ಹಾಕಿದ್ದಾರೆ’ ಎಂದಿದ್ದಾರೆ ಪ್ರೇಮ್.

ಇನ್ನು ನಟಿ ನೋರಾ ಫತೇಹಿ ಸ್ಪಷ್ಟನೆ ಬಗ್ಗೆಯೂ ಮಾತನಾಡಿರುವ ಪ್ರೇಮ್, ‘ನೋರಾ ಫತೇಹಿ ಮಾತನಾಡಿರುವುದು ತಪ್ಪು. ಅವರಿಗೆ ಸಾಹಿತ್ಯ ಗೊತ್ತಿತ್ತು. ಸಾಹಿತ್ಯ ಗೊತ್ತಿಲ್ಲದೆ ಯಾವ ನಟರೂ ನಟಿಸುವುದಿಲ್ಲ, ಸಾಹಿತ್ಯ ಗೊತ್ತಿಲ್ಲದೆ ಎಕ್ಸ್​ಪ್ರೆಷನ್ ಹೇಗೆ ಬರುತ್ತೆ? ಅವರು ಹಾಗೆ ಮಾತನಾಡಬಾರದಿತ್ತು. ಈಗ ಆಗಿರುವ ವಿವಾದದಿಂದ ತಪ್ಪಿಸಿಕೊಳ್ಳಲು ಹಾಗೆ ಮಾಡಿದ್ದಾರೆ. ಅನಿಸುತ್ತದೆ. ಇತ್ತೀಚೆಗೆ ನಡೆದ ಆಡಿಯೋ ಪ್ರೋಗ್ರಾಂನಲ್ಲಿ ಸಹ ಅವರು ಹಾಡಿನ ಬಗ್ಗೆ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದರು. ಆದರೆ ಈಗ ಹೀಗೆ ಮಾತನಾಡುತ್ತಿದ್ದಾರೆ. ಇರಲಿ ನಾನು ಹಾಡನ್ನು ರೀರೈಟ್ ಮಾಡುತ್ತೀನಿ. ಮತ್ತೆ ಅಪ್​​ಲೋಡ್ ಮಾಡುತ್ತೀನಿ’ ಎಂದಿದ್ದಾರೆ ಪ್ರೇಮ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕ್ರೈಸ್ತ ವ್ಯಕ್ತಿಯಿಂದ ದೈವ ನರ್ತನ ಸೇವೆ ಆರೋಪ:ಜಾತಿ ಪ್ರಮಾಣಪತ್ರ ಮೂಲಕ ದೈವ ನರ್ತಕ ಸ್ಪಷ್ಟನೆ

ಮಂಗಳೂರು, (ಮಾರ್ಚ್ 18): ಮಂಗಳೂರಿನ ದೈವಸ್ಥಾನವೊಂದರಲ್ಲಿ ನಡೆದ ದೈವ ನರ್ತನ ಸೇವೆ ಇದೀಗ ದೊಡ್ಡ ವಿವಾದಕ್ಕೆ (Mangaluru Daivaradhane Row) ಕಾರಣವಾಗಿದೆ. ಪಂಬದ ಸಮಾಜದ ಸಂಶೋಧಕಿ ಡಾ. ರತಿ‌ ಕೆಲ ದಿನಗಳ ಹಿಂದೆ ಗಂಭೀರ ಆರೋಪ ಮಾಡಿದ್ದರು. ಬಂಟ ದೈವದ ನರ್ತನ ಸೇವೆ ವೇಳೆ ಕ್ರೈಸ್ತ ಧರ್ಮದ ವ್ಯಕ್ತಿಯಿಂದ ದೈವ ನರ್ತನ ಮಾಡಿಸಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು. ಶ್ರೀ ಜಾರಂದಾಯ ದೈವಕ್ಕೆ ನಿಯಮಾನುಸಾರ ಪಂಬದ ಸಮುದಾಯದವರೇ ನರ್ತನ ಮಾಡಿದ್ದರೂ‌, ಬಂಟ ದೈವಕ್ಕೆ ಮಾತ್ರ ಅನ್ಯಧರ್ಮದ ವ್ಯಕ್ತಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪ ಕೇಳಿ ಬಂದ ಕೂಡಲೇ ತುಳುನಾಡಿನ ದೈವಾರಾಧನೆ ವಲಯದಲ್ಲಿ ತೀವ್ರ ಚರ್ಚೆ,ವಿರೋಧ,ಸಂಶಯಗಳ ವಾತಾವರಣ ನಿರ್ಮಾಣವಾಯಿತು. ಆದ್ರೆ ಈ ಎಲ್ಲಾ ಆರೋಪಗಳನ್ನು ಈಗ ದೈವ ನರ್ತಕರು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ದೈವಸ್ಥಾನದ ಆಡಳಿತ ಮಂಡಳಿ ದೈವ ನರ್ತಕ ಗಣೇಶ್ ಪಂಬದರಿಗೆ ನೇಮ ಕಟ್ಟುವ ಜವಾಬ್ದಾರಿ ವಹಿಸಿಕೊಟ್ಟಿದ್ದರು. ಹೀಗಾಗಿ ಅವರೇ ಸ್ಪಷ್ಟನೆ ನೀಡಿದ್ದು ಬಂಟ ದೈವಕ್ಕೆ ನರ್ತನ ಸೇವೆ ಮಾಡಿದ ಸುಶಾಂತ್ ನಮ್ಮದೇ ಪಂಬದ ಸಮುದಾಯದವನು ಎಂದು ಸ್ಪಷ್ಟಪಡಿಸಿದ್ದಾರೆ.

ಸುಶಾಂತ್ ಕ್ರೈಸ್ತನಲ್ಲ, ಅವನ ತಾಯಿ ನಮ್ಮ ಜಾತಿಗೆ ಸೇರಿದವರು. ಮದುವೆಯಾದ ಬಳಿಕ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಇವನು ಮೊದಲ ಬಾರಿಗೆ ನರ್ತನ ಮಾಡ್ತಿರುವವನಲ್ಲ ಹಲವು ಕ್ಷೇತ್ರಗಳಲ್ಲಿ ಸೇವೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಆರೋಪ ಮಾಡಿದವರ ಮೇಲೆಯೇ ಪ್ರಶ್ನೆ ಎತ್ತಿರುವ ಗಣೇಶ್ ಪಂಬದ ರತಿಯವರ ಕುಟುಂಬವೇ ಇವನ ಸಹೋದರನಿಂದ ಬೇರೆಡೆ ನರ್ತನ ಮಾಡಿಸಿಕೊಂಡಿದೆ ಆಗ ಸಮಸ್ಯೆ ಇರಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕ್ಷೇತ್ರಕ್ಕೆ ಯಾವುದೇ ಅಪಚಾರವಾಗಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಇದನ್ನೂ ಓದಿ: ತುಳುನಾಡಿನಲ್ಲೇ ದೈವಕ್ಕೆ ಅಪಚಾರ? ಕ್ರಿಶ್ಚಿಯನ್ ಹುಡುಗನಿಂದ ದೈವ ನರ್ತನ ಆರೋಪ!

ಇತ್ತ ಆರೋಪದ ಸಂಕಷ್ಟಕ್ಕೆ ಸಿಲುಕಿರುವ ದೈವ ನರ್ತಕ ಸುಶಾಂತ್ ಪಂಬದ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಈಗ ಯಾರಿಗೂ ಮುಖ ತೋರಿಸಲು ಆಗುತ್ತಿಲ್ಲ. ಈ ಆರೋಪ ಬಂದ ನಂತರ ಜೀವನವೇ ಬದಲಾಗಿದೆ. ಏಪ್ರಿಲ್ ತಿಂಗಳಲ್ಲಿ ಹಲವಾರು ಕಡೆ ದೈವ ನರ್ತನ ಸೇವೆಗೆ ಕರೆ ಬಂದಿದ್ದರೂ ಈಗ ಎಲ್ಲರೂ ಕರೆ ಮಾಡಿ ಏನು ಮಾಡೋದು. ತಮ್ಮ ಬಳಿ ಜಾತಿ ಪ್ರಮಾಣಪತ್ರವಿದ್ದು ತಾವು ಪಂಬದ ಸಮುದಾಯದವರೇ ಎಂದು ಸ್ಪಷ್ಟಪಡಿಸಿದ್ದಾರೆ. ನನಗೆ ನ್ಯಾಯ ಸಿಗಬೇಕು ಎಂಬುದು ಅವರ ಬೇಡಿಕೆ.

ಇನ್ನೂ ಸುಶಾಂತ್ ತಾಯಿ ಸವಿತಾ ಕೂಡ ಸ್ಪಷ್ಟನೆ ನೀಡಿ ನಾನು ಮೊದಲು ಕ್ರಿಶ್ಚಿಯನ್ ಆಗಿದ್ದರೂ ಮದುವೆಯ ಬಳಿಕ ಹಿಂದೂ ಧರ್ಮಕ್ಕೆ ಸೇರಿದ್ದೇನೆ. ನಾವು ಚರ್ಚ್‌ಗೆ ಹೋಗೋದಿಲ್ಲ, ಮಕ್ಕಳು ಸಹ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನ ಮಗ ಕ್ರಿಶ್ಚಿಯನ್ ಎಂದು ಸಾಬೀತು ಮಾಡಿದ್ರೆ‌ ದೈವ ನರ್ತನಕ್ಕೆ ಕಳಿಸಲ್ಲ. ಮಂಗಳೂರಿನ ಎಲ್ಲಾ ಚರ್ಚ್‌ಗಳಿಂದ ದಾಖಲೆ ತರಲಿ ಎಂದು ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡುವ ಕೆಲಸವನ್ನು‌ ದೈವ ನರ್ತಕರು ಮಾಡಿದ್ದಾರೆ. ಆದ್ರೆ ಇದನ್ನು ದೈವರಾಧಕರು, ಭಕ್ತರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಾರ್ಗ ಬದಲಿಸಿ ಮಂಗಳೂರಿಗೆ ಬರುತ್ತಿದೆ ರಷ್ಯಾದ ಮತ್ತೊಂದು ತೈಲ ಟ್ಯಾಂಕರ್‌

ನವದೆಹಲಿ, ಮಾರ್ಚ್ 18: ಚೀನಾಕ್ಕೆ ಹೋಗುತ್ತಿದ್ದ ರಷ್ಯಾದ ತೈಲ (Oil Tanker) ತುಂಬಿದ ಟ್ಯಾಂಕರ್ ದಕ್ಷಿಣ ಚೀನಾದ ಸಮುದ್ರದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿದೆ. ಆ ಹಡಗು ಯು-ಟರ್ನ್ ಹೊಡೆದು ಈಗ ಭಾರತಕ್ಕೆ ಆಗಮಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿಗೆ ಈ ಹಡಗು ತೈಲವನ್ನು ಹೊತ್ತು ತರುತ್ತಿದೆ. ಅಮೆರಿಕ, ಇಸ್ರೇಲ್-ಇರಾನ್ ಯುದ್ಧದ ಮಧ್ಯೆ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಡಗಿನ ಟ್ರ್ಯಾಕಿಂಗ್ ಡೇಟಾ ಅಫ್ರಾಮ್ಯಾಕ್ಸ್ ಟ್ಯಾಂಕರ್ ಅಕ್ವಾ ಟೈಟಾನ್ ಮಾರ್ಚ್ 21ರಂದು ರಷ್ಯಾದ ಯುರಲ್ಸ್ ಕಚ್ಚಾ ತೈಲದ ಸರಕುಗಳನ್ನು ಹೊತ್ತು ನವಮಂಗಳೂರು ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ತೋರಿಸಿದೆ.

ಜನವರಿ ಅಂತ್ಯದಲ್ಲಿ ಈ ಹಡಗು ಬಾಲ್ಟಿಕ್ ಸಮುದ್ರದ ಬಂದರಿನಿಂದ ತೈಲವನ್ನು ಲೋಡ್ ಮಾಡಿತ್ತು. ಆರಂಭದಲ್ಲಿ ಆ ಹಡಗು ಚೀನಾದ ರಿಜಾವೊ ಬಂದರಿಗೆ ಹೋಗಬೇಕೆಂದು ಸೂಚಿಸಲಾಗಿತ್ತು. ಆದರೆ, ಇದೀಗ ಆ ಹಡಗು ಯು-ಟರ್ನ್ ತೆಗೆದುಕೊಂಡು ಭಾರತಕ್ಕೆ ಆಗಮಿಸುತ್ತಿದೆ.

ಅಮೆರಿಕ ರಷ್ಯಾದ ಖರೀದಿಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸಲು ಭಾರತಕ್ಕೆ ಹಸಿರು ನಿಶಾನೆ ತೋರಿಸಿತ್ತು. ಇದಾದ ನಂತರ ಭಾರತೀಯ ಸಂಸ್ಕರಣಾಗಾರರು 30 ಮಿಲಿಯನ್ ಬ್ಯಾರೆಲ್‌ಗಳಷ್ಟು ರಷ್ಯಾದ ತೈಲವನ್ನು ಖರೀದಿಸಿದ್ದರು. ಇದು ಇರಾನ್‌ನಲ್ಲಿನ ಯುದ್ಧದಿಂದಾಗಿ ನಷ್ಟವಾದ ಮಧ್ಯಪ್ರಾಚ್ಯ ಪೂರೈಕೆಗಳನ್ನು ನಿಭಾಯಿಸಲು ಭಾರತಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಅಂದಿನಿಂದ, ಹೆಚ್ಚಿನ ದೇಶಗಳು ರಷ್ಯಾದಿಂದ ತೈಲ ಖರೀದಿಯನ್ನು ಪುನರಾರಂಭಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಇಂದು ಭಾರತಕ್ಕೆ ಬಂದು ಸೇರಲಿದೆ ಮತ್ತೆರಡು ತೈಲ ಹಡಗು: ಮಂಗಳೂರಿನಲ್ಲಿ 26 ಸಾವಿರ ಮೆಟ್ರಿಕ್‌ ಟನ್ LPG ಅನ್‌ಲೋಡ್‌

ವೋರ್ಟೆಕ್ಸಾ ಲಿಮಿಟೆಡ್ ಪ್ರಕಾರ, ರಷ್ಯಾದ ತೈಲವನ್ನು ಸಾಗಿಸುವ 7 ಟ್ಯಾಂಕರ್‌ಗಳು ಚೀನಾದ ಬದಲಾಗಿ ಭಾರತಕ್ಕೆ ಆಗಮಿಸುತ್ತಿವೆ. ತೈಲ ಟ್ಯಾಂಕರ್ ಮೊದಲು ರಷ್ಯಾದ ಕಪ್ಪು ಸಮುದ್ರದ ನೊವೊರೊಸಿಸ್ಕ್‌ನಿಂದ ಪಯಣಿಸಿತ್ತು. ಇದು ಆರಂಭದಲ್ಲಿ ಚೀನಾದ ರಿಝಾವೊ ಬಳಿಯ ನೀರಿನ ಕಡೆಗೆ ಸಾಗುತ್ತಿತ್ತು. ಇದೀಗ ಆ ಹಡಗನ್ನು ಭಾರತಕ್ಕೆ ತಿರುಗಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ 

Source link

ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?

ನವದೆಹಲಿ, ಮಾರ್ಚ್ 18: ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಗೆ (Hormuz Strait) ತಡೆ ಬಿದ್ದಿದ್ದು, ಗಲ್ಫ್ ರಾಷ್ಟ್ರಗಳಿಂದ ತೈಲ ಮತ್ತಿತರ ಸರಕುಗಳನ್ನು ಹೊತ್ತ ಹಡಗುಗಳು ಹೊರ ಹೋಗಲಾಗದೆ ಸಮುದ್ರದ ನೀರಿನಲ್ಲೇ ನೆಲೆ ನಿಂತಿವೆ. ಈ ಸಮುದ್ರ ಮಾರ್ಗದಿಂದಲೇ ಭಾರತಕ್ಕೆ ಬೇಕಾದ ಹೆಚ್ಚಿನ ಎಲ್​ಪಿಜಿ ಸರಬರಾಜು (LPG supply) ಆಗುವುದು. ದೇಶದಲ್ಲಿ ಎಲ್​ಪಿಜಿಗೆ ಹಾಹಾಕಾರ ನಡೆಯುತ್ತಿರುವಂತೆಯೇ ಹಾರ್ಮುಜ್ ಜಲಸಂಧಿ ಮೂಲಕ ಮೂರು ಭಾರತೀಯ ಎಲ್​ಪಿಜಿ ಟ್ಯಾಂಕರ್​ಗಳು ಭಾರತವನ್ನು ತಲುಪಿವೆ.

ಈ ಮೂರು ಹೊರತುಪಡಿಸಿ ಇನ್ನೂ 22 ಭಾರತೀಯ ನೌಕೆಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿವೆ. ಈ 22 ಹಡಗುಗಳಲ್ಲಿ ಒಂದು ಎಲ್​ಎನ್​ಜಿ ಟ್ಯಾಂಕರ್ ಇದೆ. ನಾಲ್ಕು ಹಡುಗಗಳು ಕಚ್ಚಾ ತೈಲ (crude oil) ತುಂಬಿಕೊಂಡಿವೆ. ಒಂದರಲ್ಲಿ ಕೆಮಿಕಲ್ ಮತ್ತಿತರ ಉತ್ಪನ್ನಗಳಿವೆ. ಮೂರು ಕಂಟೇನರ್ ಶಿಪ್​ಗಳಿವೆ. ಎರಡು ಬಲ್ಕ್ ಕ್ಯಾರಿಯರ್​ಗಳಿವೆ. ಎಲ್​ಪಿಜಿ ಹೊತ್ತಿರುವ ಆರು ಹಡಗುಗಳು ಇವೆ.

ಇದನ್ನೂ ಓದಿ: ಅಗತ್ಯ ಇದ್ದರೆ ಮಾತ್ರ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿ: ಇಂಡಿಯನ್ ಆಯಿಲ್ ಮನವಿ

ಎಲ್​ಪಿಜಿ ಹೊತ್ತಿರುವ ಆರು ಹಡಗುಗಳಲ್ಲಿ ಒಟ್ಟು 3 ಲಕ್ಷ ಟನ್​ಗಳಷ್ಟು ಗ್ಯಾಸ್ ಇದೆ. ಈಗಾಗಲೇ ಶಿವಾಲಿಕ್, ನಂದಾದೇವಿ ಮತ್ತು ಜಗ್ ಲಾಡ್ಕಿ ಹಡಗುಗಳು ಒಟ್ಟು 1.7 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್​ಗಳಷ್ಟು ಎಲ್​ಪಿಜಿಯನ್ನು ಭಾರತಕ್ಕೆ ಸಾಗಿಸಿವೆ. ಈಗ ಹಾರ್ಮುಲ್​ನಲ್ಲಿರುವ ಆರು ಹಡಗುಗಳಲ್ಲಿ ಇನ್ನೂ 3 ಲಕ್ಷ ಟನ್​ಗಳಷ್ಟು ಎಲ್​ಪಿಜಿ ಇದೆ.

ಭಾರತಕ್ಕೆ ಎಷ್ಟು ಎಲ್​ಪಿಜಿ ಬೇಕು?

ಭಾರತದಲ್ಲಿ ಸದ್ಯ ಒಂದು ದಿನದಲ್ಲಿ ಸರಾಸರಿಯಾಗಿ 80,000ದಿಂದ 85,000 ಟನ್​ಗಳಷ್ಟು ಎಲ್​ಪಿಜಿ ಬಳಕೆ ಆಗುತ್ತಿದೆ. ಇದರಲ್ಲಿ ಗೃಹಬಳಕೆಗೆಯೇ ಹೆಚ್ಚಿನ ಎಲ್​ಪಿಜಿ ಹೋಗುತ್ತಿದೆ. ಒಂದು ದಿನದಲ್ಲಿ 50-60 ಲಕ್ಷ ಎಲ್​ಪಿಜಿ ಸಿಲಿಂಡರ್​ಗಳನ್ನು ಸರಬರಾಜು ಮಾಡಲಾಗುತ್ತಿದೆ.

ಇದನ್ನೂ ಓದಿ: ಎಲ್​ಪಿಜಿ ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರಿಗೆ ಮಾತ್ರ ಅನ್ವಯ, ಗಮನಿಸಿ

ಸರ್ಕಾರ ಮಾಡಿರುವ ಅಂದಾಜು ಪ್ರಕಾರ ಮುಂಬರುವ ಹಣಕಾಸು ವರ್ಷದಲ್ಲಿ (2026-27) ಭಾರತದಲ್ಲಿ ಒಂದು ತಿಂಗಳಲ್ಲಿ 29 ಲಕ್ಷ ಟನ್​ಗಳಷ್ಟು ಎಲ್​ಪಿಜಿ ಬೇಕಾಗುತ್ತದೆ. ಸರ್ಕಾರ ದೇಶದೊಳಗೆ ಅಡಗೆ ಅನಿಲ ಉತ್ಪಾದನೆ ಹೆಚ್ಚಿಸಿದರೂ ಒಂದು ತಿಂಗಳಲ್ಲಿ 29-34 ಎಲ್​ಪಿಜಿ ಟ್ಯಾಂಕರ್​ಗಳು ಬೇಕಾಗಬಹುದು ಎಂದು ಮನಿಕಂಟ್ರೋಲ್​ನ ವರದಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಮನೆಯಲ್ಲಿ ಕಳ್ಳತನಕ್ಕೆ ಬಂದಾಗಲೇ ಪೊಲೀಸರ ಬಲೆಗೆ ಬಿದ್ದ ಖರ್ನಾಕ್​​ ಕಳ್ಳ: ಜೈಲಿನಿಂದಲೇ ಬಂದಿದ್ದವ ಮತ್ತೆ ಸೆರೆಮನೆಗೆ

ಬೆಂಗಳೂರು, ಮಾರ್ಚ್​​ 18: ಮದುವೆ ಮನೆಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಆರೋಪಿಯೋರ್ವನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಬಾಬು ಅಲಿಯಾಸ್ ಪಲ್ಸರ್ ಬಾಬು ಬಂಧಿತ ಆರೋಪಿಯಾಗಿದ್ದು, ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಕಳ್ಳತನಕ್ಕೆ ಬಂದಾಗಲೇ ಪೊಲೀಸರು ಆತನನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್​​ ಮಾಡಿದ್ದಾರೆ. ಮದುವೆ ಮನೆಗಳಲ್ಲಿ ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ, ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಈ ಖತರ್ನಾಕ್ ಕಳ್ಳನ ಬಂಧನದಿಂದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಪಲ್ಸರ್ ಬಾಬು ದೊಡ್ಡ ದೊಡ್ಡ ಮದುವೆ ಛತ್ರಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ. ಮದುವೆಗೆ ಬರುವವರ ಗಮನ ಬೇರೆಡೆ ಇರುವಾಗ, ಅದರಲ್ಲೂ ವಿಶೇಷವಾಗಿ ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಮಕ್ಕಳ ಬಳಿ ಇರುವ ಚಿನ್ನಾಭರಣ, ಮೊಬೈಲ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ. ಇದಲ್ಲದೆ, ಮದುವೆ ಮನೆಯಲ್ಲಿರುವ ಕ್ಯಾಮೆರಾ, ಲ್ಯಾಪ್‌ಟಾಪ್ ಮತ್ತು ಬೈಕ್‌ಗಳನ್ನೂ ಕಳ್ಳತನ ಮಾಡುತ್ತಿದ್ದ. ಇದೇ ರೀತಿ ಆರೋಪಿ ಪಲ್ಸರ್ ಬಾಬು ಬರೋಬ್ಬರಿ 19 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರೋದು ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೋಗುವ ಧಾವಂತ; ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ

ಐಷಾರಾಮಿ ಜೀವನ ಮತ್ತು ಮೋಜು ಮಸ್ತಿಗಾಗಿಯೇ ಕಳ್ಳತನ ಮಾಡುತ್ತಿದ್ದ ಈತ, ಪದೇ ಪದೇ ಜೈಲಿಗೆ ಹೋಗಿ ಬರ್ತಿದ್ದ. ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಣ್ಣಪುಟ್ಟ ಪ್ರಕರಣಗಳಲ್ಲಿದ್ದ ಸುಮಾರು 2,000 ಜನರನ್ನು ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಜೈಲಿನಿಂದ ಹೊರಬಂದಿದ್ದ ಪಲ್ಸರ್ ಬಾಬು, ತನ್ನ ಕಳ್ಳತನದ ಚಾಳಿ ಮುಂದುವರಿಸಿದ್ದ. ಕದ್ದ ಚಿನ್ನಾಭರಣಗಳನ್ನು ಕರಗಿಸಿ ತನಗೆ ಬೇಕಾದಂತೆ ತಿರುಪತಿ ಲಾಕೆಟ್, ಉಂಗುರಗಳನ್ನು ಮಾಡಿಸಿಕೊಂಡು ಶೋಕಿ ಮಾಡುತ್ತಿದ್ದ. ಕಳ್ಳತನದಿಂದ ಬಂದ ಹಣದಲ್ಲಿ ಕಾರುಗಳನ್ನು ಖರೀದಿಸಿ ಸುತ್ತಾಡುತ್ತಾ ಮೋಜು ಮಸ್ತಿ ಮಾಡುತ್ತಿದ್ದ ಎನ್ನಲಾಗಿದೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಸದಾಶಿವನಗರ ಪೊಲೀಸರು ಆತನಿಂದ ಒಟ್ಟು 42.38 ಲಕ್ಷ ರೂಪಾಯಿ ಮೌಲ್ಯದ 2 ಕಾರುಗಳು, 132 ಗ್ರಾಂ ಚಿನ್ನಾಭರಣ, 7 ಮೊಬೈಲ್‌ಗಳು, 1 ಕ್ಯಾಮೆರಾ, 2 ಲೆನ್ಸ್‌ಗಳು, 2 ಲ್ಯಾಪ್‌ಟಾಪ್‌ಗಳು, 1.20 ಲಕ್ಷ ನಗದು ಮತ್ತು 4 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪಲ್ಸರ್ ಬಾಬು ಬಂಧನದಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಮತ್ತು ಬಗಲಗುಂಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಒಟ್ಟು 8 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version