IPL 2026: ಅಭಿಷೇಕ್ ಶರ್ಮಾ ಅಲ್ಲ.. SRH ತಂಡಕ್ಕೆ ನೂತನ ನಾಯಕ ನೇಮಕ

Source link

ಮಕ್ಕಳ ಬಾಳಲ್ಲಿ ಶಾಲಾ ಆಡಳಿತ ಮಂಡಳಿ ಚೆಲ್ಲಾಟ: ಪರೀಕ್ಷೆಯಿಂದ ವಂಚಿತರಾದ SSLC ವಿದ್ಯಾರ್ಥಿಗಳು

ಕೊಡಗು, ಮಾರ್ಚ್​​ 18: ಇಬ್ಬರು ಬಾಲಕರು ಒಂದು ವರ್ಷ ಕಷ್ಟಪಟ್ಟು ಎಸ್​ಎಸ್​ಎಲ್​ಸಿ ಪರೀಕ್ಷೆಗೆ (SSLC Exam) ತಯಾರಾಗಿದ್ದರು. ಇನ್ನೇನು ಇಂದು ಬೆಳಗ್ಗೆ ನಾವು ಪರೀಕ್ಷೆ ಬರೆಯುತ್ತೇವೆ ಅಂತ ಖುಷಿಯಾಗಿದ್ದರು. ಆದರೆ ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು ಬಂದ ಅದೊಂದು ಸುದ್ದಿ ಅವರಿಬ್ಬರನ್ನ ಪರೀಕ್ಷೆಗೆ ಕೂರದೇ ಇರುವ ಹಾಗೆ ಮಾಡಿದೆ. ಯಾರದ್ದೋ ಎಡವಟ್ಟಿಗೆ ಇಬ್ಬರು ಬಾಲಕರು ಮತ್ತು ಪೋಷಕರು ಕಣ್ಣೀರಿಟ್ಟ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದ ಉದಯ ಪ್ರೌಢಶಾಲೆ ಆವರಣದಲ್ಲಿ ನಡೆದಿದೆ.

ಹಾಲ್ ಟಿಕೆಟ್​ ಇಲ್ಲದೆ ವಿದ್ಯಾರ್ಥಿಗಳು ಪರದಾಟ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗ್ರಾಮದ ಉದಯ ಪಬ್ಲಿಕ್ ಶಾಲೆಯಲ್ಲಿ 17 ಮಕ್ಕಳು ಇಂದು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಬೇಕಿತ್ತು. ಆದರೆ ನಿನ್ನೆ ಸಂಜೆ ಎಲ್ಲರಿಗೂ ಹಾಲ್ ಟಿಕೆಟ್ ಬಂದಿದ್ದು, ಇಬ್ಬರು ಬಾಲಕರಿಗೆ ಮಾತ್ರ ಬಂದಿಲ್ಲ. ತಮೀಮ್ ಮತ್ತು ಪ್ರಥಮ್ ಪೋಷಕರಿಗೆ ಸಂಜೆ ಕರೆಮಾಡಿದ ಶಾಲಾ ಪ್ರಾಂಶುಲಾರು, ಏನೋ ತಾಂತ್ರಿಕ ಸಮಸ್ಯೆಯಿಂದ ಇಬ್ಬರಿಗೆ ಹಾಲ್ ಟಿಕೆಟ್ ಬಂದಿಲ್ಲ ಅಂತ ಹೇಳಿದ್ದಾರೆ. ಈ ಸುದ್ದಿ ಕೇಳಿ ಪೋಷಕರು ಮತ್ತು ಮಕ್ಕಳಿ ಶಾಕ್ ಆಗಿದೆ. ಆದರೂ ಇಂದು ಬೆಳಗ್ಗೆ ಶಾಲೆಯ ಬಳಿ ಬಂದು ಹಾಲ್ ಟಿಕೆಟ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.

ಇದನ್ನೂ ಓದಿ: ಆಂಬ್ಯುಲೆನ್ಸ್‌ನಲ್ಲೇ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ: ವಿಡಿಯೋ ನೋಡಿ

ತಮ್ಮ ಮಗನಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಪೋಷಕರು ಮತ್ತು ಗ್ರಾಮಸ್ಥರು ಶಾಲೆ ಬಳಿ ಪ್ರತಿಭಟನೆ ನಡೆಸಿದರು. ಶಾಲೆಯ ಪ್ರಾಂಶುಪಾಲ ಹೇಮಂತ್​​ರನ್ನ ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನ ಕೇಳಿದರೆ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಿದ್ದಾರೆ. ಬಿಇಒ ರಿಜೆಕ್ಟ್ ಮಾಡಿರೋದ್ರಿಂದ ಈ ರೀತಿ ಆಗಿದೆ ಎನ್ನುತ್ತಾರೆ. ಆದರೆ ಇದನ್ನ ಬಿಇಒ ಮಹೇಶ್ ತಳ್ಳಿ ಹಾಕಿದ್ದಾರೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುವುದೇನು?

ಶಾಲಾ ಸಿಬ್ಬಂದಿ ಸರಿಯಾಗಿ ಲಾಗಿನ್ ಆಗಿ ವಿದ್ಯಾರ್ಥಿಗಳ ವಿವರವನ್ನು ಭರ್ತಿ ಮಾಡದ್ದರಿಂದಲೇ ಈ ಎಡವಟ್ಟು ಆಗಿದೆ ಎನ್ನೋದು ಶಿಕ್ಷಣ ಇಲಾಖೆ ಅಧಿಕಾರಿಗಳ ವಾದ. ಬಾಲಕ ತಮೀಮ್​ಗೆ ಈಗಾಗಲೇ ಶಾಲೆಯಿಂದ ವರ್ಗಾವಣೆ ಪತ್ರ ಕೊಟ್ಟು ಕಳುಹಿಸಲಾಗಿದೆ ಎಂಬಂತೆ ಶಿಕ್ಷಣ ಇಲಾಖೆಯ ವೆಬ್​ ಪೇಜ್​ನಲ್ಲಿ ಮಾಹಿತಿ ದಾಖಲಾಗಿದೆಯಂತೆ. ಹಾಗಾಗಿ ಆತನಿಗೆ ಹಾಲ್ ಟಿಕೆಟ್ ಬಂದಿಲ್ಲ ಎಂಬುದು ಅಧಿಕಾರಿಗಳ ವಾದ. ಆದರೆ ಇತ್ತ ತಮೀಮ್​ 10ನೇ ತರಗತಿಯ ಸಂಪೂರ್ಣ ಶುಲ್ಕ ಪಾವತಿಸಿ ಇಡೀ ಒಂದು ವರ್ಷ ಓದಿದ್ದಾನೆ.

ಅಷ್ಟೇ ಅಲ್ಲದೆ ಈ ಶಾಲೆಗೆ ಕೇವಲ 8ನೇ ತರಗತಿವರಗೆಗೆ ಮಾತ್ರ ಅನುಮತಿ ಇದ್ದು ಇಲ್ಲಿ 9 ಮತ್ತು 10ನೇ ತರಗತಿಯನ್ನ ಅನಧಿಕೃತವಾಗಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಪೋಷಕರಿಗೆ ತಿಳಿ ಹೇಳಿದ್ದರೂ ಅವರಿಗೆ ಅದು ಅರ್ಥ ಆಗಿಲ್ಲ ಅನ್ನೋದು ಅವರ ವಾದ. ಇಷ್ಟೆಲ್ಲಾ ಆದರೂ ಶಾಲಾ ಆಡಳಿತ ಮಂಡಳಿಯ ಒಬ್ಬನೇ ಒಬ್ಬ ಸದಸ್ಯ ಶಾಲೆಯತ್ತ ಸುಳಿಯಲಿಲ್ಲ. ಪ್ರಾಂಶುಪಾಲರನ್ನ ಮುಂದೆ ಬಿಟ್ಟು ಅವರು ನಾಪತ್ತೆಯಾಗಿದ್ದರು. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ, ವಿಡಿಯೋ ವೈರಲ್

ಯಾರದ್ದೋ ಎಡವಟ್ಟಿಗೆ ಇಬ್ಬರು ಬಾಲಕರ ಒಂದು ವರ್ಷದ ಶಿಕ್ಷಣ ಬಲಿಯಾಗಿದೆ. ಈ ವರ್ಷ ನಡೆಯುವ ಎರಡನೇ ಮತ್ತು ಮೂರನೇ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಅವಕಾಶ ದೊರೆಯುವ ಸಾಧ್ಯತೆಯೂ ಕಡಿಮೆ ಇದೆ. ಹಾಗಾಗಿ ಅಮಾಯಕ ಮಕ್ಕಳ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ವ್ಯಕ್ತಿಗಳನ್ನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಆಮೆಗತಿಯ ಶತಕ ಬಾರಿಸಿ ಫ್ಯಾನ್ಸ್​ಗೆ ನಿದ್ದೆ ಬರಿಸಿದ ಐವರು ಆಟಗಾರರಿವರು

ಐಪಿಎಲ್​ಗಾಗಿ (IPL) ಕಾಯುವಿಕೆಗೆ ಅಂತ್ಯ ಹಾಡುವ ಸಮಯ ಬಂದಿದೆ. ಮುಂದಿನ ವಾರದಿಂದ ಕ್ರಿಕೆಟ್ ಅಂಗಳದಲ್ಲಿ ಅಭಿಮಾನಿಗಳ ಗದ್ದಲ ಜೋರಾಗಲಿದೆ. ದೇಶ- ವಿದೇಶದ ಸ್ಟಾರ್ ಆಟಗಾರರು ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಐಪಿಎಲ್ ಎಂದರೆ ನಮಗೆಲ್ಲ ನೆನಪಾಗುವುದು ಬ್ಯಾಟರ್​​ಗಳ ಅಬ್ಬರ, ಬೌಲರ್​ಗಳ ದಯಾನೀಯ ಸ್ಥಿತಿ. ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಸಾಮಾನ್ಯವಾಗಿದ್ದ ಶತಕಗಳು ಇದೀಗ ಟಿ20 ಮಾದರಿಯಲ್ಲೂ ಸರ್ವೆ ಸಾಮಾನ್ಯವಾಗಿವೆ. ಅದರಲ್ಲೂ ಕೆಲವೇ ಕೆಲವು ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಬ್ಯಾಟ್ಸ್‌ಮನ್​ಗಳು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಆದಾಗ್ಯೂ ಈ ಹೊಡಿಬಡಿ ಆಟದಲ್ಲೂ ನಿಧಾನಗತಿಯ ಬ್ಯಾಟಿಂಗ್‌ ಮಾಡಿ ಶತಕ ಬಾರಿಸಿದ ಆಟಗಾರರಿದ್ದಾರೆ. ಅವರಲ್ಲಿ ಟಾಪ್ 5 ರ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ನೋಡಿ.

ಐಪಿಎಲ್​ನ 5 ನಿಧಾನಗತಿಯ ಶತಕ

ಐಪಿಎಲ್‌ನಲ್ಲಿ ನಿಧಾನಗತಿಯ ಶತಕದ ದಾಖಲೆಯನ್ನು ಮನೀಷ್ ಪಾಂಡೆ ಮತ್ತು ವಿರಾಟ್ ಕೊಹ್ಲಿ ಜಂಟಿಯಾಗಿ ಹೊಂದಿದ್ದಾರೆ. ವಿರಾಟ್ ಕೊಹ್ಲಿ 2024 ರ ಐಪಿಎಲ್​ನಲ್ಲಿ 67 ಎಸೆತಗಳಲ್ಲಿ ಶತಕ ಬಾರಿಸಿದ್ದರು. ವಿರಾಟ್ ಈ ಶತಕವನ್ನು ರಾಜಸ್ಥಾನ ರಾಯಲ್ಸ್ ವಿರುದ್ಧ ಕಲೆಹಾಕಿದ್ದರು. ಹಾಗೆಯೇ 2009 ರ ಐಪಿಎಲ್​ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಕನ್ನಡಿಗ ಮನೀಷ್ ಪಾಂಡೆ ಆರ್​ಸಿಬಿ ಪರ 67 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದಾಗ್ಯೂ ಈ ಶತಕದ ಮೂಲಕ ಐಪಿಎಲ್​ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರನೆಂಬ ದಾಖಲೆಯನ್ನು ಮನೀಷ್ ಬರೆದಿದ್ದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆಯಾದರೂ ಅವರ ಹೆಸರಿನಲ್ಲಿ ಈ ಅನಗತ್ಯ ದಾಖಲೆ ಇದೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಈ ಪಟ್ಟಿಯಲ್ಲಿದ್ದು, 2011 ರ ಐಪಿಎಲ್​ನಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ 66 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಮತ್ತೊಬ್ಬ ಕನ್ನಡಿಗ ಕೆಎಲ್ ರಾಹುಲ್ 2016 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 64 ಎಸೆತಗಳಲ್ಲಿ ಶತಕ ಪೂರೈಸಿದರೆ, ಅಂಬಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 62 ಎಸೆತಗಳಲ್ಲಿ ಶತಕ ಬಾರಿಸಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

  • ವಿರಾಟ್ ಕೊಹ್ಲಿ , ಐಪಿಎಲ್ 2024, 67 ಚೆಂಡುಗಳು
  • ಮನೀಶ್ ಪಾಂಡೆ, ಐಪಿಎಲ್ 2009, 67 ಚೆಂಡುಗಳು
  • ಸಚಿನ್ ತೆಂಡೂಲ್ಕರ್, ಐಪಿಎಲ್ 2011, 66 ಚೆಂಡುಗಳು
  • ಕೆಎಲ್ ರಾಹುಲ್, ಐಪಿಎಲ್ 2019, 64 ಎಸೆತಗಳು
  • ಅಂಬಟಿ ರಾಯುಡು, ಐಪಿಎಲ್ 2018, 62 ಎಸೆತಗಳು

ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಸಿಕ್ಸ್ ಹೊಡೆಯದ ಐವರು ಆಟಗಾರರಿವರು

ಅತಿ ವೇಗದ ಶತಕದ ದಾಖಲೆ ಯಾರ ಹೆಸರಿನಲ್ಲಿದೆ?

ಏತನ್ಮಧ್ಯೆ, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕದ ದಾಖಲೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅಂದಿನಿಂದ, ಈ ದಾಖಲೆ ಹಾಗೆಯೇ ಉಳಿದಿದೆ. ಆದ್ದರಿಂದ, ಈ 19 ನೇ ಆವೃತ್ತಿಯಲ್ಲಿ ಯಾರು ಗೇಲ್ ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugadi 2026 Predictions: ವರ್ಷ ಭವಿಷ್ಯ; ಖ್ಯಾತ ಜ್ಯೋತಿಷಿಯಿಂದ ಯುಗಾದಿ ಮಹತ್ವ ಮತ್ತು ರಾಶಿಗಳ ಫಲಾಫಲಗಳು

ಪ್ರತಿ ವರ್ಷದಂತೆ ಯುಗಾದಿ ಹಬ್ಬವು ಹೊಸ ಸಂವತ್ಸರವನ್ನು ಪ್ರಾರಂಭಿಸುತ್ತದೆ, ಈ ವರ್ಷ ಅಂದರೆ 2026ರ ಯುಗಾದಿಯು ಪರಾಭವ ನಾಮ ಸಂವತ್ಸರದೊಂದಿಗೆ ಪ್ರಾರಂಭವಾಗಲಿದೆ. ಈ ಸಂವತ್ಸರದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಶ್ರೀ ಕೆ. ವೆಂಕಟೇಶ್ ಶರ್ಮಾ ಗುರೂಜಿ ಅವರು ವಿವರವಾದ ಭವಿಷ್ಯವನ್ನು ನೀಡಿದ್ದಾರೆ. ಈ ವರ್ಷ ಅಹಂಕಾರದ ಸೋಲು, ಅಧರ್ಮದ ಪತನ ಮತ್ತು ಧರ್ಮದ ವೃದ್ಧಿಗೆ ಸಾಕ್ಷಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ರಾಜ ಗುರು ಆಗಿದ್ದು, ಸತ್ಕಾರ್ಯಗಳು, ಉತ್ತಮ ನಡತೆ, ಮತ್ತು ನ್ಯಾಯದ ಪರಿಪಾಲನೆಗೆ ಒತ್ತು ನೀಡಲಿದೆ. ಆದಾಗ್ಯೂ, ಮಂತ್ರಿ ಕುಜ ಆಗಿರುವುದರಿಂದ ಅಗ್ನಿಭಯ, ಜಲಭಯ, ಗಾಳಿಯ ಹೊಡೆತ ಮತ್ತು ರೋಗ ಪೀಡೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಚಂದ್ರ ಸೇನಾಧಿಪತಿಯಾಗಿದ್ದು, ಉತ್ತಮ ಮಳೆ ಮತ್ತು ಬೆಳೆ ನಿರೀಕ್ಷಿಸಲಾಗಿದೆ. ರೈತಾಪಿ ವರ್ಗಕ್ಕೆ ಉತ್ತಮ ಫಲವಿದ್ದರೂ, ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಎಚ್ಚರ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮುರಿಯಿತು 34 ವರ್ಷಗಳ ಸ್ನೇಹ: ಎಆರ್ ರೆಹಮಾನ್ ಕೈಬಿಟ್ಟ ಮಣಿರತ್ನಂ

ಮಣಿರತ್ನಂ ಮತ್ತು ಎಆರ್ ರೆಹಮಾನ್ (AR Rahman) ಜೋಡಿ ಭಾರತದ ಅತ್ಯುತ್ತಮ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಜೋಡಿ. ಈ ಜೋಡಿ ನೀಡಿರುವ ಸಿನಿಮಾ ಮತ್ತು ಹಾಡುಗಳು ಮೂರು ದಶಕಗಳ ಬಳಿಕ ಈಗಲೂ ಟ್ರೆಂಡಿಂಗ್​​ನನಲ್ಲಿವೆ. ಆದರೆ ಈಗ ಬರೋಬ್ಬರಿ 34 ವರ್ಷಗಳ ಬಳಿಕ ಈ ಸ್ನೇಹ ಮುರಿದಂತಿದೆ. 1992ರ ‘ರೋಜಾ’ ಸಿನಿಮಾದಿಂದ ಆರಂಭಿಸಿ ಇತ್ತೀಚೆಗಿನ ‘ಥಗ್ ಲೈಫ್’ ಸಿನಿಮಾದ ವರೆಗೆ ಮಣಿರತ್ನಂ ಅವರ ಎಲ್ಲ ಸಿನಿಮಾಗಳಿಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಆದರೆ ಇದೀಗ ಮಣಿರತ್ನಂ ತಮ್ಮ ಹೊಸ ಸಿನಿಮಾಕ್ಕೆ ಹೊಸ ಸಂಗೀತ ನಿರ್ದೇಶಕನ ಆಯ್ಕೆ ಮಾಡಿದ್ದಾರೆ.

ಮಣಿರತ್ನಂ, ಅವರು ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾಕ್ಕೆ ಯುವ ಸಂಗೀತ ನಿರ್ದೇಶಕರೊಬ್ಬರನ್ನು ಮಣಿರತ್ನಂ ಆಯ್ಕೆ ಮಾಡಿದ್ದಾರೆ. ಮಣಿರತ್ನಂ ಅವರ ಸಿನಿಮಾಕ್ಕೆ 21 ವರ್ಷ ವಯಸ್ಸಿನ ಸಾಯಿ ಅಭಯಂಕರ್ ಅವರು ಸಂಗೀತ ನೀಡಲಿದ್ದಾರೆ. ಯುವ ಸಂಗೀತ ನಿರ್ದೇಶಕನನ್ನು ಮಣಿರತ್ನಂ ಆಯ್ಕೆ ಮಾಡಿದ್ದು, ಇದು ಹಲವರ ಹುಬ್ಬೇರುವಂತೆ ಮಾಡಿದೆ.

ಮಣಿರತ್ನಂ ಅವರು ಕಳೆದ 43 ವರ್ಷಗಳಿಂದಲೂ ಸಿನಿಮಾ ನಿರ್ದೇಶನದಲ್ಲಿ ತೊಡಗಿದ್ದಾರೆ. ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಮಣಿರತ್ನಂ ಒಬ್ಬರು. ಇಷ್ಟು ಸುದೀರ್ಘ ಸಿನಿಮಾ ವೃತ್ತಿಯಲ್ಲಿ ಅವರು ಕೆಲಸ ಮಾಡಿರುವುದು ಕೇವಲ ಇಬ್ಬರು ಸಂಗೀತ ನಿರ್ದೇಶಕರ ಜೊತೆಗೆ ಮಾತ್ರವೇ. ಅವರ ಮೊದಲ 10 ಸಿನಿಮಾಗಳಿಗೆ ಇಳಯರಾಜ ಸಂಗೀತ ನೀಡಿದ್ದರು. ಬಳಿಕ 1992 ರ ‘ರೋಜಾ’ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದರು. ಇದೀಗ 34 ವರ್ಷಗಳ ಬಳಿಕ ಸಂಗೀತ ನಿರ್ದೇಶಕರನ್ನು ಮಣಿರತ್ನಂ ಬದಲಿಸುತ್ತಿದ್ದು, ಬಹೊಸ ಸಿನಿಮಾಕ್ಕೆ ಸಾಯಿ ಅಭಯಂಕರ್ ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ:ಇರಾನ್​ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ಮೆರೆದ ಭಾರತ

ಮಣಿರತ್ನಂ ಅವರ ಈ ಹೊಸ ಸಿನಿಮಾನಲ್ಲಿ ವಿಜಯ್ ಸೇತುಪತಿ ನಾಯಕ, ಸಾಯಿ ಪಲ್ಲವಿ ನಾಯಕಿ. ಈ ಮೊದಲು ವಿಜಯ್ ಸೇತುಪತಿ ಅವರು ಮಣಿರತ್ನಂ ಜೊತೆಗೆ ‘ಚಿಕ್ಕ ಚಿವಂತಿ ವಾನಂ’ ಸಿನಿಮಾನಲ್ಲಿ ನಟಿಸಿದ್ದರು. ಮಣಿರತ್ನಂ ಅವರೊಟ್ಟಿಗೆ ಇದು ಅವರ ಎರಡನೇ ಸಿನಿಮಾ. ಇನ್ನು ನಟಿ ಸಾಯಿ ಪಲ್ಲವಿ ಅವರಿಗೆ ಮಣಿರತ್ನಂ ಜೊತೆಗೆ ಇದು ಮೊದಲನೇ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಶಿಕ್ಷಕಿಯ ಸಮಯ ಪ್ರಜ್ಞೆಯಿಂದ ಮಕ್ಕಳು ಬಚಾವ್​​

ಮೈಸೂರು, ಮಾರ್ಚ್​​ 18: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಮಳೆ ಸುರಿದಿದೆ. ಸುಮಾರು 1 ಗಂಟೆಗೂ ಹೆಚ್ಚು ಸಮಯ ವರುಣ ಅಬ್ಬರಿಸಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಮಂದಿಗೆ ತಂಪಿನ ಅನುಭವವಾಗಿದೆ. ಈ ನಡುವೆ ಭಾರೀ ಗಾಳಿ ಮಳೆ ವೇಳೆ ಹುಣಸೂರು ತಾಲೂಕಿನ ದಾಸನಪುರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಮಕ್ಕಳು ತರಗತಿಯಲ್ಲಿದ್ದ ಹೊತ್ತಲ್ಲೇ ಗಾಳಿ ಮಳೆಗೆ ಶಾಲೆಯ ಮೇಲ್ಚಾವಣಿ ಹಾರಿ ಹೋಗಿದ್ದು, ಈ ವೇಳೆ ಸಮಯಪ್ರಜ್ಞೆ ಮೆರೆದ ಶಿಕ್ಷಕಿ ಸುಮಾ ಎಲ್ಲ ವಿದ್ಯಾರ್ಥಿಗಳನ್ನು ಡೆಸ್ಕ್ ಕೆಳಗೆ‌ ಕೂರಿಸಿದ್ದಾರೆ. ಹೀಗಾಗಿ ಸಂಭವನೀಯ ಅನಾಹುತ ತಪ್ಪಿದೆ. ಗಾಳಿಗೆ ಮೇಲ್ಛಾವಣಿ ಹಾರಿ ಹೋಗುವ ಬದಲು ಕುಸಿದಿದ್ದರೆ ದೊಡ್ಡ ಅನಾಹುತವೇ ನಡೆಯುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಕ್ಕಳಲ್ಲಿ ಪ್ರೋಟೀನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ? ಯಾವ ರೀತಿಯ ಲಕ್ಷಣ ಕಂಡುಬರುತ್ತವೆ?

ಪ್ರೋಟೀನ್ (Protein) ದೇಹದ ಬೆಳವಣಿಗೆಗೆ ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದೆ. ಇದು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಸಮಾನವಾಗಿ ಮುಖ್ಯವಾಗಿದ್ದು ಇದರ ಕೊರತೆಯಿಂದ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ದೊಡ್ಡವರಂತೆ ಮಕ್ಕಳಲ್ಲಿಯೂ ಈ ಕೊರತೆ ಕಂಡುಬರುತ್ತದೆ. ಆದರೆ ಹಲವಾರು ಸಂದರ್ಭಗಳಲ್ಲಿ ಮಕ್ಕಳಲ್ಲಿ ಪ್ರೋಟೀನ್ ಕೊರತೆಯ ಲಕ್ಷಣಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಏಮ್ಸ್ ದೆಹಲಿಯ ಪೀಡಿಯಾಟ್ರಿಕ್ ವಿಭಾಗದ ಡಾ. ಹಿಮಾಂಶು ಭದಾನಿ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಬೆಳೆಯುತ್ತಿರುವ ಮಕ್ಕಳಿಗೆ ಪ್ರೋಟೀನ್ ಅತ್ಯಂತ ಮುಖ್ಯ. ಇದು ದೇಹದಲ್ಲಿ ಹೊಸ ಸೆಲ್‌ಗಳ ನಿರ್ಮಾಣಕ್ಕೂ ಮತ್ತು ಸ್ನಾಯುಗಳ ಬೆಳವಣಿಗೆಗೂ ಸಹಾಯಕವಾಗಿರುತ್ತದೆ. ಜೊತೆಗೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಜೊತೆಗೆ ಪ್ರೋಟೀನ್ ಕೊರತೆಯಾದಾಗ ಕಂಡುಬರುವ ಲಕ್ಷಣಗಳು ಹೇಗಿರುತ್ತವೆ, ಅದಕ್ಕೆ ಕಾರಣಗಳೇನು, ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳು ಯಾವವು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರೋಟೀನ್ ಕೊರತೆಯಾದಾಗ ಕಂಡು ಬರುವ ಲಕ್ಷಣಗಳು:

ಮಕ್ಕಳ ದೇಹದಲ್ಲಿ ಪ್ರೋಟೀನ್ ಕೊರತೆಯಾದರೆ, ಅವರ ಸ್ನಾಯುಗಳ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ತೂಕವು ಇತರ ಮಕ್ಕಳಿಗಿಂತ ಕಡಿಮೆ ಇರುತ್ತದೆ ಮತ್ತು ಎತ್ತರವು ಸಹ ಸರಿಯಾಗಿ ಹೆಚ್ಚುವುದಿಲ್ಲ. ರೋಗನಿರೋಧಕ ಶಕ್ತಿ ಕುಗ್ಗುವುದರಿಂದ ಮಕ್ಕಳಿಗೆ ಆಗಾಗ ಕಾಯಿಲೆಗಳು ಬರುವುದು ಸಾಮಾನ್ಯ. ಅಷ್ಟೇಅಲ್ಲ, ಚರ್ಮದ ಗುಣಮಟ್ಟ ಹಾಳಾಗುತ್ತದೆ ಮತ್ತು ಕೂದಲು ಉದುರುವ ಸಮಸ್ಯೆಯೂ ಕಾಣಿಸಬಹುದು. ಮಕ್ಕಳು ಬೇಗನೆ ದಣಿವಾಗುವುದು ಹಾಗೂ ದುರ್ಬಲತೆ ಅನುಭವಿಸುವುದು ಕೂಡ ಪ್ರಮುಖ ಲಕ್ಷಣಗಳಾಗಿವೆ.

ಇದನ್ನೂ ಓದಿ: ನಿಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆ ಇದೆ ಎಂಬುದನ್ನು ದೇಹ ನೀಡುವ ಈ 6 ಲಕ್ಷಣಗಳ ಮೂಲಕ ತಿಳಿಯಬಹುದು!

ಪ್ರೋಟೀನ್ ಕೊರತೆಗೆ ಕಾರಣಗಳು:

ಡಾ. ಹಿಮಾಂಶು ಅವರ ಪ್ರಕಾರ, ಮಕ್ಕಳಲ್ಲಿ ಪ್ರೋಟೀನ್ ಕೊರತೆಯಾಗಲು ಮುಖ್ಯ ಕಾರಣ ಸರಿಯಾದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳದಿರುವುದು. ಮಕ್ಕಳಿಗೆ ಹಸಿರು ತರಕಾರಿ, ಧಾನ್ಯಗಳು ಮತ್ತು ಹಣ್ಣುಗಳನ್ನು ತಿನ್ನಿಸದಿದ್ದರೆ ಈ ಕೊರತೆ ಉಂಟಾಗಬಹುದು. ಇದು ಯಾವುದೇ ಮಕ್ಕಳಲ್ಲಿಯೂ ಕಂಡುಬರಬಹುದಾದ ಸಮಸ್ಯೆಯಾಗಿದೆ. ಹಾಗಾಗಿ ಮಕ್ಕಳಿಗೆ ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳನ್ನು ಮತ್ತು ಆದಷ್ಟು ಹಾಲು, ಮೊಸರು, ಮೊಟ್ಟೆಗಳ ಸೇವನೆ ಮಾಡಲು ನೀಡಿ. ಜೊತೆಗೆ ಮಕ್ಕಳಿಗೆ ಚಿಕನ್ ಮತ್ತು ಮೀನು ಕೂಡ ಉತ್ತಮ ಪ್ರೋಟೀನ್ ಮೂಲಗಳಾಗಿವೆ.

ಯಾರಿಗೆ ಎಷ್ಟು ಪ್ರೋಟೀನ್ ಅವಶ್ಯಕ:

  • 1ರಿಂದ 3 ವರ್ಷದ ಮಕ್ಕಳಿಗೆ ದಿನಕ್ಕೆ ಸುಮಾರು 13 ಗ್ರಾಂ ಪ್ರೋಟೀನ್ ಅಗತ್ಯ.
  • 4ರಿಂದ 8 ವರ್ಷದ ಮಕ್ಕಳಿಗೆ 19- 20 ಗ್ರಾಂ ಪ್ರೋಟೀನ್ ಬೇಕಾಗುತ್ತದೆ.
  • 9ರಿಂದ 13 ವರ್ಷದ ಮಕ್ಕಳಿಗೆ ದಿನಕ್ಕೆ ಸುಮಾರು 34 ಗ್ರಾಂ ಪ್ರೋಟೀನ್ ಅಗತ್ಯವಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ’ ಸಿನಿಮಾ ಅಶ್ಲೀಲ ಹಾಡು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ; ಲೋಕಸಭೆಯಲ್ಲಿ ಘೋಷಣೆ

ಸಂಜಯ್ ದತ್ ಮತ್ತು ನೋರಾ ಫತೇಹಿ ನಟಿಸಿದ ‘ಸರ್ಕೆ ಚುನರ್ ತೇರಿ’ (Sarke Chunar Teri Sarke) ಹಾಡಿನ ವಿರುದ್ಧ ದೇಶಾದ್ಯಂತ ವ್ಯಕ್ತವಾದ ತೀವ್ರ ಆಕ್ರೋಶದ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಹಾಡನ್ನು ಅಧಿಕೃತವಾಗಿ ನಿಷೇಧಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ (KD) ಸಿನಿಮಾದ ಈ ಹಾಡಿನಿಂದ ಇಡೀ ಕನ್ನಡ ಚಿತ್ರರಂಗಕ್ಕೆ ಮುಜುಗರ ಆದಂತಾಗಿದೆ.

ಸಮಾಜವಾದಿ ಪಕ್ಷದ ಸಂಸದ ಆನಂದ್ ಬಡೋರಿಯಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವಿನಿ ವೈಷ್ಣವ್, ‘ಈ ಹಾಡನ್ನು ಈಗಾಗಲೇ ನಿಷೇಧಿಸಲಾಗಿದೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣ ಪ್ರಶ್ನಾತೀತವಲ್ಲ. ಸಂವಿಧಾನದ ರಚನೆಕಾರರು ವಿಧಿಸಿರುವ ಸಮಂಜಸವಾದ ನಿರ್ಬಂಧಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ತಿಳಿಸಿದರು. ಸಂವಿಧಾನದ ವಿಧಿ 19(2) ಉಲ್ಲೇಖಿಸಿದ ಸಚಿವರು, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಗೆ ಧಕ್ಕೆ ಬಂದಾಗ ಇಂತಹ ನಿರ್ಬಂಧಗಳನ್ನು ಹೇರಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೇಳಿದರು.

ಡಿಜಿಟಲ್ ಮಾಧ್ಯಮಗಳ ಮೂಲಕ ವಿಷಯಗಳು ವೇಗವಾಗಿ ಹರಡುತ್ತಿರುವ ಇಂದಿನ ದಿನಗಳಲ್ಲಿ ಸಮಾಜದ ಹಿತದೃಷ್ಟಿಯಿಂದ ಇಂತಹ ಕ್ರಮಗಳು ಅನಿವಾರ್ಯ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ‘ಸಮಾಜದ ರಕ್ಷಣೆಗಾಗಿ, ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವಂಚಿತ ವರ್ಗಗಳ ಗೌರವ ಕಾಪಾಡಲು ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧವಿದೆ’ ಎಂದು ವೈಷ್ಣವ್ ಅವರು ಲೋಕಸಭೆಯಲ್ಲಿ ತಿಳಿಸಿದರು.

ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಬಿಡುಗಡೆಯಾದ ತಕ್ಷಣವೇ ಅದರ ಸಾಹಿತ್ಯ ಮತ್ತು ದೃಶ್ಯಗಳು ಅಶ್ಲೀಲತೆಯಿಂದ ಕೂಡಿವೆ ಎಂಬ ಆರೋಪ ಕೇಳಿಬಂದಿತ್ತು. ಇದು ಮಹಿಳೆಯರನ್ನು ಕೀಳಾಗಿ ಚಿತ್ರಿಸುತ್ತದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕರ್ನಾಟಕ ಮತ್ತು ಹರಿಯಾಣ ಮಹಿಳಾ ಆಯೋಗಗಳು ಈ ಹಾಡಿನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದವು.

ಇದನ್ನೂ ಓದಿ: ಪ್ರೇಮ್​​ಗೆ ಆ ದಿನವೇ ಎಚ್ಚರಿಕೆ ನೀಡಿದ್ದೆ: ಅಶ್ಲೀಲ ಹಾಡಿನ ವಿವಾದಕ್ಕೆ ನೋರಾ ಫತೇಹಿ ತಿರುಗೇಟು

ನಟ ರವಿ ಕಿಶನ್, ನಟಿ ಕಂಗನಾ ರಣಾವತ್, ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂಡ ಹಾಡಿನ ಸಾಹಿತ್ಯ ಆಕ್ಷೇಪಾರ್ಹವಾಗಿದೆ ಎಂದು ಸಾರ್ವಜನಿಕವಾಗಿ ಖಂಡಿಸಿದ್ದರು. ಈ ಹಾಡಿನ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ನೋರಾ ಫತೇಹಿ ಅವರು ಚಿತ್ರತಂಡವೇ ಇದಕ್ಕೆಲ್ಲ ಹೊಣೆ ಎಂದು ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳು ‘ಕೆಡಿ’ ಸಿನಿಮಾಗೆ ಅಪಖ್ಯಾತಿ ತಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಅಭಿಷೇಕ್ ಶರ್ಮಾ ಅಲ್ಲ.. SRH ತಂಡಕ್ಕೆ ನೂತನ ನಾಯಕ ನೇಮಕ

2026 ರ ಐಪಿಎಲ್ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಂಡಕ್ಕೆ ಹೊಸ ನಾಯಕನನ್ನು ನೇಮಿಸಿದೆ. ಕಳೆದ ಆವೃತ್ತಿಯಲ್ಲಿ ಈ ತಂಡದ ನಾಯಕತ್ವ ಹೊತ್ತಿದ್ದ ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಈ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡದ ಚುಕ್ಕಾಣಿಯನ್ನು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್​ಗೆ ವಹಿಸಲಾಗಿದೆ.

ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಬದಲಾಗುವುದು ಈ ಮೊದಲೇ ಖಚಿತವಾಗಿತ್ತು. ಅದರಂತೆ ತಂಡದ ಯುವ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾಗೆ ನಾಯಕತ್ವ ಸಿಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಅದೆಲ್ಲವನ್ನು ಸುಳ್ಳು ಮಾಡಿರುವ ಸನ್‌ರೈಸರ್ಸ್ ಆಡಳಿತ ಮಂಡಳಿ ಇಶಾನ್ ಕಿಶನ್​ಗೆ ನಾಯಕತ್ವದ ಪಟ್ಟ ಕಟ್ಟಿದೆ.

ಇಶಾನ್ ಕಿಶನ್​ಗೆ ತಂಡದ ನಾಯಕತ್ವವಹಿಸುವುದಕ್ಕೂ ಪ್ರಮುಖ ಕಾರಣವಿದೆ. ಅದೆನೆಂದರೆ, ಇತ್ತಿಚಿಗಷ್ಟೆ ಮುಗಿದ ಟಿ20 ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್, ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಅತಿ ಹೆಚ್ಚು ರನ್ ಬಾರಿಸಿದ ಭಾರತದ ಆಟಗಾರರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ಹೀಗಾಗಿ ಅವರಿಗೆ ತಂಡದ ನಾಯಕತ್ವವಹಿಸಲಾಗಿದೆ.

ಐಪಿಎಲ್​ನಲ್ಲಿ ಆಡಿದ ಅಪಾರ ಅನುಭವ ಹೊಂದಿರುವ ಇಶಾನ್ ಕಿಶನ್​ ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಒಂದೆಡೆ ಕಿಶನ್​ಗೆ ತಂಡದ ನಾಯಕತ್ವವಹಿಸಿರುವ ಫ್ರಾಂಚೈಸಿ, ಅಭಿಷೇಕ್ ಶರ್ಮಾಗೆ ಉಪನಾಯಕನ ಜವಾಬ್ದಾರಿ ನೀಡಿದೆ. ಈ ಇಬ್ಬರು ಯುವ ಆಟಗಾರರ ಸಾರಥ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Source link

ಹಬ್ಬಕ್ಕೆ ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ

ಬೆಂಗಳೂರು, ಮಾರ್ಚ್​ 18: ಯುಗಾದಿ ಮತ್ತು ರಂಜಾನ್ ಹಬ್ಬ ಹಿನ್ನೆಲೆ ಇಂದು ಮಧ್ಯಾಹ್ನದಿಂದಲೇ ಜನರು ತಮ್ಮ ಊರಿಗೆ ಹೊರಟ್ಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್​ನಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಬಸ್​ಗಳು ಬರುತ್ತಿದ್ದಂತೆ ಕಿಟಕಿ ಮೂಲಕ ಬ್ಯಾಗ್ ಗಳನ್ನು ಹಾಕಿ ಸೀಟ್​ ಪ್ರಯಾಣಿಕರು ಮುಂದಾಗಿದ್ದಾರೆ. ಇದೇ ವೇಳೆ ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಓರ್ವ ಮಹಿಳೆ ಕೆಳಗೆಬಿದಿದ್ದಾರೆ. ಸರ್ಕಾರಿ ಬಸ್ ಮುಂದೆ ಚಲಿಸುವಾಗ ಮಹಿಳೆ ಆಯತಪ್ಪಿಬಿದಿದ್ದಾರೆ. ಸಹ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version