ದೇಶದ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ್ದೇ ಅಗ್ರ ಪಾಲು!
ನವದೆಹಲಿ, ಮಾರ್ಚ್ 13: ಭಾರತದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಪ್ರಸ್ತುತ ಪಳೆಯುಳಿಕೆಗಿಂತ ಪಳೆಯುಳಿಕೆಯೇತರ, ನವೀಕರಿಸಬಹುದಾದ ಇಂಧನ ಪಾಲೇ ಹೆಚ್ಚಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ (Pralhad Joshi) ಜೋಶಿ ತಿಳಿಸಿದ್ದಾರೆ. ಎಷ್ಟಿದೆ ನವೀಕರಿಸಬಹುದಾದ ಇಂಧನ? ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಪಳೆಯುಳಿಕೆಯೇತರ ಇಂಧನ ಶೇ.52.3ರಷ್ಟಿದ್ದರೆ, ನವೀಕರಿಸಬಹುದಾದ ಇಂಧನ ಶೇ.50.6ರಷ್ಟಿದೆ. ಪಳೆಯುಳಿಕೆ ಇಂದಿನ ಮೂಲದಿಂದ ಶೇ.47.7ರಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕಂಡುಬಂದಿದೆ. 2026ರ ಜನವರಿ ಅಂತ್ಯದವರೆಗೆ ಭಾರತ 52,536.49 ಮೆಗಾವ್ಯಾಟ್ ಸ್ಥಾಪಿತ ವಿದ್ಯುತ್…