WPL 2026: ಆರ್ಸಿಬಿ ಸೇರಿದಂತೆ ಈ 3 ಪಂದ್ಯಗಳಿಗೆ ಸ್ಟೇಡಿಯಂಗೆ ವೀಕ್ಷಕರ ಪ್ರವೇಶ ನಿಷೇಧ
ಮಹಿಳಾ ಪ್ರೀಮಿಯರ್ ಲೀಗ್ 2026 ರ ಸೀಸನ್ಗೆ ಅದ್ಭುತ ಆರಂಭ ಸಿಕ್ಕಿದೆ. ನಡೆದಿರುವ ಐದು ಪಂದ್ಯಗಳು ಅಭಿಮಾನಿಗಳನ್ನು ರಂಜಿಸಿವೆ. ಟೂರ್ನಮೆಂಟ್‌ನ ಆರಂಭಿಕ ಪಂದ್ಯಗಳು ನವಿ ಮುಂಬೈನಲ್ಲಿ ನಡೆಯುತ್ತಿದ್ದು, ಎಲ್ಲಾ ಪಂದ್ಯಗಳಿಗೂ ಕ್ರೀಡಾಂಗಣ ಭರ್ತಿಯಾಗುತ್ತಿದೆ. ಒಟ್ಟಾರೆಯಾಗಿ, ಟೂರ್ನಮೆಂಟ್ ಉತ್ತಮ ಆರಂಭವನ್ನು ಕಂಡಿರುವುದು ಬಿಸಿಸಿಐಗೆ ಸಮಾಧಾನಕರ ಸುದ್ದಿಯಾಗಿದೆ. ಆದಾಗ್ಯೂ ಬಿಸಿಸಿಐಗೆ ಕೊಂಚ ಹಿನ್ನಡೆಯುಂಟಾಗಿದ್ದು, ಟೂರ್ನಮೆಂಟ್‌ನ ಎರಡು ಪಂದ್ಯಗಳಿಗೆ ಪ್ರೇಕ್ಷಕರಿಗೆ ಮೈದಾನಕ್ಕೆ ಎಂಟ್ರಿ ಇಲ್ಲ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮುಂಬೈ ಮತ್ತು ನವಿ ಮುಂಬೈನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಂದಾಗಿ ಭದ್ರತಾ…