Headlines

ಬಸ್ನಲ್ಲಿ 90 ಲಕ್ಷಕ್ಕೂ ಅಧಿಕ ಮೌಲ್ಯದ, ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ, ಊಟಕ್ಕೆ ನಿಲ್ಲಿಸಿದಾಗ ಕೃತ್ಯ

ಕೊಪ್ಪಳ (ಮಾರ್ಚ್ 12): ಮಂತ್ರಾಲಯದಿಂದ (Mantralaya) ಮಂಗಳೂರಿಗೆ (Mangaluru) ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್‌ನಲ್ಲಿ (Sleeper Coach Bus) 90 ಲಕ್ಷ ಮೌಲ್ಯದ ಚಿನ್ನ, ವಜ್ರಾಭರಣವಿದ್ದ (gold And diamond) ಬ್ಯಾಗ್ ದರೋಡೆಯಾಗಿದೆ. ಕೊಪ್ಪಳ (Koppal) ಹೊರಹೊಲಯದಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಿದಾಗ ಮಂಗಳೂರಿನ ಮೊಹಮ್ಮದ್, ಇರ್ಷಾದ್​ ಎಂಬುವರಿಗೆ ಸೇರಿದ ಚಿನ್ನ, ವಜ್ರಾಭರಣವಿದ್ದ ಚೀಲವನ್ನು ಕದ್ದು ಪರಾರಿಯಾಗಿದ್ದಾರೆ. ಬಸ್‌ನಲ್ಲಿ ಮಲಗಿದ್ದ ಪ್ರಯಾಣಿಕನೋರ್ವ ಚಿನ್ನ ಬ್ಯಾಗ್​ ಹಿಡಿದು ಪರಾರಿಯಾಗುತ್ತಿರುವ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಪೊಲೀಸರು ಆರೋಪಿ…

Read More

ಮಹಾರಾಷ್ಟ್ರದ ವರ್ಷದ 3 ದಿನ ಈ ಗ್ರಾಮದಲ್ಲಿ ಆತ್ಮಗಳ ದರ್ಬಾರ್, ಮನುಷ್ಯರಿಗೆ ಪ್ರವೇಶವಿಲ್ಲ!

ಮುಂಬೈ, ಮಾರ್ಚ್ 12: ಭಾರತವು ಅಗಾಧವಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿರುವ ದೇಶ. ಈ ದೇಶದಲ್ಲಿ ಕೆಲವು ಹಳ್ಳಿಗಳಿಗೆ ವಿಶಿಷ್ಟ ಇತಿಹಾಸವಿದೆ. ಕೆಲವು ಹಳ್ಳಿಗಳು ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿವೆ. ಈ ಸಂಪ್ರದಾಯಗಳು ಶತಮಾನಗಳಿಂದ ನಡೆದುಕೊಂಡು ಬರುತ್ತಿವೆ. ಈ ಶತಮಾನದಲ್ಲಿಯೂ ಜನರು ಈ ಸಂಪ್ರದಾಯಗಳನ್ನು ಅದೇ ಭಕ್ತಿಯಿಂದ ಅನುಸರಿಸುತ್ತಾರೆ. ಮಹಾರಾಷ್ಟ್ರದ (Maharashtra) ಹಳ್ಳಿಯೊಂದರಲ್ಲಿ ಮೂರು ದಿನ ಇಡೀ ಗ್ರಾಮಕ್ಕೆ ಗ್ರಾಮವೇ ಊರನ್ನು ಖಾಲಿ ಮಾಡುತ್ತದೆ. ಈ 3 ದಿನಗಳು ಇಲ್ಲಿ ದೆವ್ವಗಳು ವಾಸ ಮಾಡುತ್ತವೆ ಎಂಬ ನಂಬಿಕೆಯಿದೆ. ಮಹಾರಾಷ್ಟ್ರದಲ್ಲಿರುವ ಈ…

Read More

Indian Navy Recruitment: ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುವ ಕನಸು ಕಾಣುತ್ತಿರುವ ದೇಶದ ಯುವಕ-ಯುವತಿಯರಿಗೆ ಇದೊಂದು ಸುವರ್ಣಾವಕಾಶ. ನೌಕಾಪಡೆಯು 2027ನೇ ಸಾಲಿನ ‘ಅಗ್ನಿವೀರ್’ ಯೋಜನೆಯಡಿ ಅಗ್ನಿವೀರ್ SSR, ಅಗ್ನಿವೀರ್ MR ಮತ್ತು SSR (ವೈದ್ಯಕೀಯ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಮಾರ್ಚ್ 14 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 6 ರೊಳಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಏಪ್ರಿಲ್ 10 ಮತ್ತು 11 ರಂದು ಅರ್ಜಿ ತಿದ್ದುಪಡಿ ವಿಂಡೋವನ್ನು ಸಹ ತೆರೆಯಲಾಗುತ್ತದೆ,…

Read More

ವಿಶ್ವಗುರು ಬಸವಣ್ಣ-ಅಕ್ಕಮಹಾದೇವಿ ಬಗ್ಗೆ ಅಶ್ಲೀಲ ಮಾತು: ಸಿಡಿದೆದ್ದ ಅನುಯಾಯಿಗಳು

ವಿಜಯಪುರ, ಮಾರ್ಚ್​ 12: ಜಗತ್ತಿಗೆ ಸಮಾನತೆಯನ್ನು ಸಾರಿದ ವಿಶ್ವಗುರು ಬಸವಣ್ಣ (Basavanna) ಹಾಗೂ ವೈರಾಗ್ಯಮೂರ್ತಿ, ವಚನಗಾರ್ತಿ ಅಕ್ಕಮಹಾದೇವಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕವಾದ ಹಾಗೂ ಅಶ್ಲೀಲ ಪದಗಳ ಸಹಿತ ಬರವಣಿಗೆ ಪೋಸ್ಟ್ ಮಾಡಿ ಹರಿಬಿಡಲಾಗಿದೆ. ಫೇಸ್ಬುಕ್​​ನಲ್ಲಿ ಹರಿ ಬಿಟ್ಟವರ ವಿರುದ್ದ ಬಸವ ಅನುಯಾಯಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ನಿಂದನೆ ಪೋಸ್ಟ್​​ ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಬಸವಾದಿ ಶರಣರ ಅನುಯಾಯಿಗಳ ಆಕ್ರೋಶಗೊಂಡಿದ್ಧಾರೆ. ನ್ಯಾಯಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು…

Read More

ಹಬ್ಬ ಮುಗಿದ ಮೂರೇ ದಿನಕ್ಕೆ ದೇಗುಲಕ್ಕೆ ಕನ್ನ: 4 ಕೆಜಿ ಬೆಳ್ಳಿ, 30 ಗ್ರಾಂ ಚಿನ್ನಾಭರಣ ದೋಚಿ ಪರಾರಿ

ಚಾಮರಾಜನಗರ, ಮಾರ್ಚ್​ 12: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಿರಂತರವಾಗಿ ದುಷ್ಕರ್ಮಿಗಳು ಕಳ್ಳತನ ಎಸಗುತ್ತಿದ್ದಾರೆ. ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಆರು ದೇವಸ್ಥಾನಗಳಲ್ಲಿ ಕಳ್ಳತನವಾಗಿತ್ತು (Temple Theft). ಆ ಘಟನೆ ಮಾಸುವ ಮುನ್ನವೇ ಇದೀಗ ಕಳ್ಳರು ಮತ್ತೆ ಕೈಚಳಕ ತೋರಿಸಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಹಬ್ಬ ಮುಗಿದ ಮೂರೇ ದಿನಕ್ಕೆ ದೇವಸ್ಥಾನದ ಬಾಗಿಲೂ ಮೀಟಿ 4 ಕೆ.ಜಿ ಬೆಳ್ಳಿ ಮತ್ತು 30 ಗ್ರಾಂ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ. ನಡೆದಿದ್ದೇನು? ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳರ ಕೈಚಳಕ…

Read More

ಚೆನ್ನೈನ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ

ಚೆನ್ನೈ, ಮಾರ್ಚ್ 12: ತಮಿಳುನಾಡಿನ ತಿರುಚ್ಚಿಯಿಂದ ಪ್ರಾಜೆಕ್ಟ್‌ಗಾಗಿ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಿದ ಗ್ಯಾಂಗ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೊಳಗಾದ ಯುವತಿ ಅಭಿರಾಮಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಆರಂಭವಾಗಿದೆ. ಆ ವಿದ್ಯಾರ್ಥಿನಿ ಫೆಬ್ರವರಿ 14ರಂದು ತಿರುಚ್ಚಿಯಿಂದ ಪ್ರಾಜೆಕ್ಟ್‌ಗಾಗಿ ಚೆನ್ನೈಗೆ ಬಂದಿದ್ದರು. ಬಂದ ಕೆಲವೇ ದಿನಗಳಲ್ಲಿ, ಕೆಲವು ವ್ಯಕ್ತಿಗಳು ಆಕೆಯ ಫೋಟೋವನ್ನು ಮಾರ್ಫ್ ಮಾಡಿ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಬಳಿಕ, 4 ಜನರ ತಂಡ…

Read More

ಪಕ್ಷಪಾತ ಮಾಡಿಲ್ಲ, ಸದನಕ್ಕಿಂತ ವಿಪಕ್ಷ ನಾಯಕ ಮೇಲಲ್ಲ; ರಾಹುಲ್ ಗಾಂಧಿಗೆ ಸ್ಪೀಕರ್ ಓಂ ಬಿರ್ಲಾ ತಿರುಗೇಟು

ನವದೆಹಲಿ, ಮಾರ್ಚ್ 12: ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಸದನದಲ್ಲಿ ಸೋತ ನಂತರ ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ತಮ್ಮ ಕರ್ತವ್ಯವನ್ನು ಪುನರಾರಂಭಿಸಿದ್ದಾರೆ. ನಾನು ಯಾವುದೇ ಪಕ್ಷಪಾತ ಮಾಡಿಲ್ಲ ಎಂದಿರುವ ಓಂ ಬಿರ್ಲಾ, ಪ್ರತಿ ಸಂಸದರಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಸಿಗುವಂತೆ ನೋಡಿಕೊಳ್ಳಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ. ವಿರೋಧ ಪಕ್ಷದ ನಾಯಕರು ಸದನಕ್ಕಿಂತಲೂ ಎಂದು ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ. ನಿನ್ನೆ ವಿಪಕ್ಷದ ಅವಿಶ್ವಾಸ ನಿರ್ಣಯವು ಲೋಕಸಭೆಯಲ್ಲಿ ಸೋತಿತ್ತು. ಇದಾದ ಒಂದು ದಿನದ ನಂತರ,…

Read More

ಗ್ಯಾಸ್‌ ಉಳಿತಾಯ ಮಾಡಲು ಈ ಸಿಂಪಲ್‌ ಸಲಹೆ ಅನುಸರಿಸಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಜಾಗತಿಕ ಅನಿಲ ಸರಬರಾಜಿನಲ್ಲಿ ಅಡಚಣೆ ಉಂಟಾಗಿದ್ದು,  ಭಾರತದಲ್ಲಿ ಕಮರ್ಷಿಯಲ್‌ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ತೀವ್ರವಾಗಿ ಕುಸಿದಿದೆ. ಇದರ ಪರಿಣಾಮ ದೇಶದ ಹಲವು ನಗರಗಳಲ್ಲಿ ವಾಣಿಜ್ಯ ಸಿಲಿಂಡರ್‌‌ (Gas cylinder) ಅಲಭ್ಯತೆಯಿಂದಾಗಿ  ಹೊಟೇಲ್‌ ಉದ್ಯಮಗಳಿಗೆ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲದೆ ಜನರು ಸಹ ಕಮರ್ಷಿಯಲ್‌ ಗ್ಯಾಸ್‌ ಸಿಗದೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮನೆಯಲ್ಲಿ ಉಪಯೋಗಿಸುತ್ತಿರುವಂತಹ ಗ್ಯಾಸ್‌ ಬೇಗ ಖಾಲಿಯಾಗಬಾರದು, ಹೆಚ್ಚು ಸಮಯದವರೆಗೆ ಬಾಳಿಕೆ ಬರಬೇಕು ಅಂತಾದ್ರೆ, ಅಡುಗೆ ಮಾಡುವ ಸಂದರ್ಭದಲ್ಲಿ ಈ…

Read More

BCCI Awards: ಗಿಲ್​ ವರ್ಷದ ಕ್ರಿಕೆಟಿಗ; ದ್ರಾವಿಡ್, ಮಿಥಾಲಿಗೆ ಜೀವಮಾನ ಸಾಧನೆ ಪ್ರಶಸ್ತಿ

2023 ರಲ್ಲಿ ಟಿ20 ವಿಶ್ವಕಪ್ (T20 World Cup) ಗೆದ್ದಿದ್ದ ಟೀಂ ಇಂಡಿಯಾ ಬಿಸಿಸಿಐನಿಂದ (BCCI) 125 ಕೋಟಿ ರೂ. ಬಹುಮಾನ ಪಡೆಯುವುದರ ಜೊತೆಗೆ ಮುಂಬೈನಲ್ಲಿ ವಿಕ್ಟರಿ ಪೆರೇಡ್‌ ಮಾಡಿತ್ತು. ಈ ಬಾರಿಯೂ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐನಿಂದ 131 ಕೋಟಿ ರೂ. ಬಹುಮಾನ ಸಿಕ್ಕಿದೆ.ಆದರೆ ವಿಕ್ಟರಿ ಪೆರೇಡ್‌ ಮಾಡಲು ಅವಕಾಶ ಸಿಕ್ಕಿಲ್ಲ. ಹಾಗೆಯೇ ಆಟಗಾರರನ್ನು ಬಿಸಿಸಿಐನಿಂದ ಸನ್ಮಾನಿಸಲಾಗಿಲ್ಲ. ಇದೀಗ ಅದಕ್ಕೆ ವೇದಿಕೆ ಸಜ್ಜಾಗಿದ್ದು, ಬಿಸಿಸಿಐ ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಾಂಪಿಯನ್ ತಂಡವನ್ನು…

Read More

ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪುರಾತತ್ವ ತಜ್ಞರು

ಗದಗ, (ಮಾರ್ಚ್ 12): ಐತಿಹಾಸಿಕ ದೇವಾಲಯಗಳ ಸರ್ಗ, ಶಿಲ್ಪಕಲೆಗಳ ಬೀಡು, ಕಲ್ಯಾಣ ಚಾಲುಕ್ಯರ ನಾಡು ಗದಗ (Gadag) ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ (Lakkundi Gold Treasure) ಸಿಕ್ಕ ಬಳಿಕ ಲಕ್ಕುಂಡಿ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿದೆ. ಇಲ್ಲಿ ಸಿಕ್ಕ ನಿಧಿಗೆ ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರ ಕಾಲದ ಇತಿಹಾಸ ಇದೆ. ಈ ಆಭರಣಗಳು ಅದ್ಭುತವಾದ ಕಸೂರಿ ನೋಡಿದ್ರೆ ಮೈ ರೋಮಾಂಚನವಾಗುತ್ತೆ. ಅಪರೂಪದ ನೀಲಮಣಿ ಲಕ್ಕುಂಡಿ ಗತವೈಭವ ಸಾರುತ್ತಿದೆ. ಆ್ಯಂಟಿಕ್ ಆಭರಣಗಳ ಅಂದಾಜು ಮೌಲ್ಯ 8 ಕೋಟಿಯಾಗಿದೆ. ಹೀಗಾಗಿ…

Read More