ಭಾರತದಲ್ಲಿ ಸಿಗದ 5 ಕೋಟಿ ರೂಪಾಯಿ ಬೆಲೆಯ ಹೊಸ ಕಾರು ತರಿಸಿಕೊಂಡ ಶಾರುಖ್ ಖಾನ್ – Kannada News | Shah Rukh Khan adds new Rs 5 Cr Cadillac Escalade SUV to his garage
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ (Shah Rukh Khan) ಅವರು ತಮ್ಮ ಐಷಾರಾಮಿ ಜೀವನಶೈಲಿ ಮತ್ತು ದುಬಾರಿ ಕಾರುಗಳ ಕಲೆಕ್ಷನ್ಗೆ ಹೆಸರುವಾಸಿಯಾಗಿದ್ದಾರೆ. ಈಗ ಅವರ ಶ್ರೀಮಂತ ಗ್ಯಾರೇಜ್ಗೆ ಮತ್ತೊಂದು ಅತ್ಯಂತ ದುಬಾರಿ ಐಷಾರಾಮಿ ಎಸ್ಯುವಿ (SUV) ಕಾರು ಸೇರ್ಪಡೆಯಾಗಿದೆ. ಹೌದು, ಕಿಂಗ್ ಖಾನ್ ಇತ್ತೀಚೆಗೆ ಬ್ರ್ಯಾಂಡ್ ನ್ಯೂ ಕ್ಯಾಡಿಲಾಕ್ ಎಸ್ಕಲೇಡ್ (Cadillac Escalade) ಕಾರನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಮುಂಬೈನ ರಸ್ತೆಗಳಲ್ಲಿ ಶಾರುಖ್ ಖಾನ್ ಅವರು ತಮ್ಮ ಹೊಸ ಕಡುಗಪ್ಪಿನ ಎಸ್ಯುವಿ ಕಾರಿನಲ್ಲಿ ಸವಾರಿ ಮಾಡುತ್ತಿರುವ ವೀಡಿಯೊಗಳು ಮತ್ತು…