‘ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ಹೋದ್ರೆ ಅದು ಜೀವನವೇ ಅಲ್ಲ’: ಸೈಫ್ ಅಲಿ ಖಾನ್ – Kannada News | Saif Ali Khan shares thoughts on work life balance and his new movie Kartavya

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ತಮ್ಮ ಹೊಸ ಸಿನಿಮಾ ‘ಕರ್ತವ್ಯ’ (Kartavya) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ‘ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯ ಮೂಲಕ ನಿರ್ಮಿಸಿದ್ದಾರೆ. 2022ರಿಂದ ವರ್ಷಕ್ಕೆ ಒಂದೇ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸೈಫ್, ಇತ್ತೀಚಿನ ಸಂದರ್ಶನವೊಂದರಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಹುಟ್ಟಿದ ನಂತರ ತಮಗೆ ಕುಟುಂಬದ ಪ್ರಾಮುಖ್ಯತೆ ತಿಳಿಯಿತು ಎಂದು ಸೈಫ್ ಅಲಿ ಖಾನ್ (Saif Ali Khan) ಅವರು ಹೇಳಿದ್ದಾರೆ.

‘ಇಂಡಿಯಾ ಟುಡೇ’ ಜೊತೆ ಮಾತನಾಡಿದ ಸೈಫ್, ನಟರು ತಮ್ಮ ಅಸ್ತವ್ಯಸ್ತವಾಗಿರುವ ಶೂಟಿಂಗ್ ವೇಳಾಪಟ್ಟಿಯಿಂದಾಗಿ ಅನುಭವಿಸುವ ವೈಯಕ್ತಿಕ ನಷ್ಟಗಳ ಬಗ್ಗೆ ಮಾತನಾಡಿದರು. ‘ನನ್ನ ವೃತ್ತಿಜೀವನದ ಬೆಳವಣಿಗೆಗಾಗಿ ನಾನು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ತ್ಯಾಗಗಳನ್ನು ಮಾಡಿದ್ದೇನೆ. ನಟರಾಗಿ ನಮಗೆ ಸಿಗುವ ಬೆಂಬಲವನ್ನು ನಾವು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.

ಇದಕ್ಕೆ ಗಿರಿಶಿಖರವನ್ನು ಹತ್ತುವ ಉದಾಹರಣೆ ನೀಡಿದ ಸೈಫ್ ಅಲಿ ಖಾನ್ ಅವರು, ‘ಮನೆ ಎಂಬುದು ನಮಗೆ ಬೇಸ್ ಕ್ಯಾಂಪ್ ಇದ್ದಂತೆ. ಅಲ್ಲಿಗೆ ಬಂದು ವಿಶ್ರಾಂತಿ ಪಡೆದು, ಮತ್ತೆ ಬೆಟ್ಟ ಹತ್ತಲು ಸಜ್ಜಾಗಬೇಕು. ಆದರೆ ಯಾರಾದರೂ ಬೆಟ್ಟ ಹತ್ತುವುದರಲ್ಲೇ ಹೆಚ್ಚು ಸಮಯ ಕಳೆದರೆ, ಆ ಬೇಸ್ ಕ್ಯಾಂಪ್ ಒಂದು ದಿನ ಇಲ್ಲವಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ನಟರು ತಮ್ಮ ಕುಟುಂಬದ ಹಲವು ಪ್ರಮುಖ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

‘ಈ ವಯಸ್ಸಿನಲ್ಲಿ ನಾನು ಕುಟುಂಬಕ್ಕೆ ಸಮಯ ನೀಡುವ ಬಗ್ಗೆ ಹೆಚ್ಚು ಜಾಗೃತನಾಗಿದ್ದೇನೆ. ತಡವಾಗಿ ಮಕ್ಕಳಾದ ನಂತರ, ಸಂಜೆ ಒಂದು ನಿರ್ದಿಷ್ಟ ಸಮಯಕ್ಕೆ ಮನೆಗೆ ತಲುಪಬೇಕು ಅನಿಸುತ್ತದೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗಿನ ಶಿಫ್ಟ್ ನನಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಏಕೆಂದರೆ ಶೂಟಿಂಗ್ ಎಂದಿಗೂ 9ಕ್ಕೆ ಶುರುವಾಗಿ 9ಕ್ಕೆ ಮುಗಿಯುವುದಿಲ್ಲ. ಕೊನೆಯ ಶಾಟ್ ಮುಗಿಯುವಾಗ 9.30 ಆಗಿರುತ್ತದೆ. ಮನೆ ತಲುಪುವಾಗ ರಾತ್ರಿ 11 ಆಗಿರುತ್ತದೆ. ರಾತ್ರಿ 11 ಗಂಟೆಗೆ ಮನೆಗೆ ಸೇರಿದರೆ ಅದು ಜೀವನವೇ ಅಲ್ಲ. ಆದರೆ ನಾನು ಹಿಂದೆ ಇಂತಹ ತ್ಯಾಗಗಳನ್ನು ಮಾಡಿದ್ದೇನೆ’ ಎಂದು ಸೈಫ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಆದಿಪುರುಷ್’ ಸಿನಿಮಾ ನೋಡಿ ಸೈಫ್ ಅಲಿ ಖಾನ್ ಮಗನಿಗೂ ಬಂತು ಕೋಪ

ಸೈಫ್ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕರ್ತವ್ಯ’ ಸಿನಿಮಾ ಪ್ರಸ್ತುತ ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಆಗುತ್ತಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪರಾಧವೊಂದನ್ನು ಭೇದಿಸುವ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಎದುರಾಗುವ ಕಷ್ಟಗಳು ಮತ್ತು ತಮ್ಮ ಕರ್ತವ್ಯದ ನಡುವೆ ಅವರು ಸಿಲುಕಿಕೊಳ್ಳುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಕೀರನ್ ಪೊಲಾರ್ಡ್​ಗೆ ದಂಡದ ಬರೆ ಎಳೆದ ಬಿಸಿಸಿಐ

Source link

Inspirational Story: 61ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸ್; 650ಕ್ಕೆ 500 ಅಂಕ ಪಡೆದ ಮಹಿಳೆ – Kannada News | 61 Year Old Narender Kaur Passes 10th Grade with 77%: Age is No Barrier to Education

ಜಲಂಧರ್: “ಓದಿಗೆ ವಯಸ್ಸಿನ ಮಿತಿ ಇಲ್ಲ, ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ” ಎಂಬುದನ್ನು ಪಂಜಾಬ್‌ನ 61 ವರ್ಷದ ನರೇಂದ್ರ ಕೌರ್ ಅವರು ಸಾಬೀತುಪಡಿಸಿದ್ದಾರೆ. ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ ಪುಸ್ತಕ ಹಿಡಿದು ಪರೀಕ್ಷೆಗೆ ಕುಳಿತಿದ್ದ ಈ ಅಜ್ಜಿ, ಈಗ ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯ (PSEB) 10ನೇ ತರಗತಿ ಪರೀಕ್ಷೆಯಲ್ಲಿ ಭರ್ಜರಿ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

650ಕ್ಕೆ 500 ಅಂಕಗಳ ಸಾಧನೆ:

ನರೇಂದ್ರ ಕೌರ್ ಅವರು ಕೇವಲ ಪಾಸಾಗುವುದಷ್ಟೇ ಅಲ್ಲದೆ, ಶೇ. 77 ರಷ್ಟು ಅಂಕಗಳನ್ನು ಗಳಿಸಿದ್ದಾರೆ. 650 ಅಂಕಗಳಿಗೆ 500 ಅಂಕಗಳನ್ನು ಪಡೆಯುವ ಮೂಲಕ ಇಂದಿನ ತಲೆಮಾರಿನ ವಿದ್ಯಾರ್ಥಿಗಳಿಗೂ ಸವಾಲು ಹಾಕಿದ್ದಾರೆ. ಸುಮಾರು 45 ವರ್ಷಗಳ ಹಿಂದೆ ಕೌಟುಂಬಿಕ ಕಾರಣಗಳಿಂದಾಗಿ ಶಿಕ್ಷಣ ಅರ್ಧಕ್ಕೆ ನಿಂತುಹೋಗಿತ್ತು. ಆದರೆ, ಮನದ ಮೂಲೆಯಲ್ಲಿದ್ದ ಕಲಿಯುವ ಹಂಬಲ ಮಾತ್ರ ಕಡಿಮೆಯಾಗಿರಲಿಲ್ಲ.

ವಿದೇಶದಲ್ಲಿರುವ ಪುತ್ರರು, ಇಲ್ಲಿ ತಾಯಿಯ ಸಾಧನೆ:

ನರೇಂದ್ರ ಕೌರ್ ಅವರ ಇಬ್ಬರು ಪುತ್ರರು ಪ್ರಸ್ತುತ ಅಮೆರಿಕ (USA) ಮತ್ತು ಕೆನಡಾದಲ್ಲಿ ನೆಲೆಸಿದ್ದಾರೆ. ಮಕ್ಕಳೆಲ್ಲಾ ಜೀವನದಲ್ಲಿ ನೆಲೆ ನಿಂತ ಮೇಲೆ, ತಮಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದ ಅವರು ಮರಳಿ ಶಾಲೆಗೆ ಸೇರಲು ನಿರ್ಧರಿಸಿದರು. ಇದಕ್ಕೆ ಅವರ ಕುಟುಂಬ ವರ್ಗದವರು ಕೂಡ ಪೂರ್ಣ ಬೆಂಬಲ ನೀಡಿದ್ದರು.

“ನಾನು ವಿವಾಹವಾದ ಕಾಲದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ನನ್ನ ಕನಸನ್ನು ನನಸು ಮಾಡಿಕೊಳ್ಳಲು ಇದು ಸರಿಯಾದ ಸಮಯ ಎಂದು ನನಗೆ ಅನಿಸಿತು,” ಎನ್ನುತ್ತಾರೆ ನರೇಂದ್ರ ಕೌರ್.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಮುಂದಿನ ಗುರಿ ಏನು?

10ನೇ ತರಗತಿಯ ಯಶಸ್ಸು ಇವರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಮುಂದೆ 12ನೇ ತರಗತಿ ಪರೀಕ್ಷೆ ಬರೆದು, ಆನಂತರ ಪದವಿ (B.A.) ಪಡೆಯುವ ಗುರಿಯನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಈ ಸಾಧನೆಯ ವೀಡಿಯೋ ಮತ್ತು ಸುದ್ದಿಗಳು ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಸಿಎಂ ಆದ ಬಳಿಕ ಗೆದ್ದ ತ್ರಿಷಾ; ‘ಕರುಪ್ಪು’ ಚಿತ್ರ ಹೊಗಳಿದ ಫ್ಯಾನ್ಸ್ – Kannada News | Karuppu Review: Suriya Roars Back! Fans Hail Action Drama a Blockbuster Hit

ನಟ ಸೂರ್ಯ, ತ್ರಿಷಾ ಕೃಷ್ಣನ್ ಅಭಿನಯದ ಮತ್ತು ಆರ್‌ಜೆ ಬಾಲಾಜಿ ನಿರ್ದೇಶನದ ಬಹುನಿರೀಕ್ಷಿತ ಆ್ಯಕ್ಷನ್-ಡ್ರಾಮಾ ‘ಕರುಪ್ಪು’ ಚಿತ್ರ ಕೊನೆಗೂ ತೆರೆಕಂಡಿದೆ. ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಂದಾಗಿ ಮೇ 14ಕ್ಕೆ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಇಂದು (ಮೇ 15, 2026) ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಸಿನಿಮಾ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಯಾವುದೇ ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆದರೂ ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆಗಳನ್ನು ಹಂಚಿಕೊಳ್ಳಲಾಗುತ್ತದೆ. ‘ಕರುಪ್ಪು’ ಸಿನಿಮಾ ನೋಡಿದವರೂ ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆ ತಿಳಿಸುತ್ತಿದ್ದು, ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಕರುಪ್ಪು ಸಿನಿಮಾ ಮೂಲಕ ಸೂರ್ಯ ಅವರು ತಮ್ಮ ಹಳೆಯ ಖದರ್ ತೋರಿಸಿದ್ದಾರೆ’ ಎಂದು ವೀಕ್ಷಕರು ಹೇಳಿಕೊಂಡಿದ್ದಾರೆ. ‘ಸೂರ್ಯ ಕೇವಲ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿಲ್ಲ, ಬದಲಿಗೆ ತಮ್ಮ ಸಿಂಹಾಸನವನ್ನು ಮರಳಿ ಪಡೆದಿದ್ದಾರೆ’ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

‘ಕರುಪ್ಪು ಒಂದು ಅಪ್ಪಟ ಕಮರ್ಷಿಯಲ್ ಸಿನಿಮಾ. ಇಂಟರ್ವಲ್ ಮತ್ತು ಕ್ಲೈಮ್ಯಾಕ್ಸ್‌ಗೂ ಮುನ್ನ ಬರುವ ಸನ್ನಿವೇಶಗಳು ರೋಮಾಂಚನಕಾರಿಯಾಗಿವೆ. ಇದೊಂದು ಬ್ಲಾಕ್‌ಬಸ್ಟರ್ ಎನ್ನುವುದರಲ್ಲಿ ಅನುಮಾನವಿಲ್ಲ’ ಎಂದು ಸಿನಿಪ್ರೇಮಿಗಳು ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸೂರ್ಯ ಅವರ ಸಿನಿಮಾಗಳಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಕಡಿಮೆ ಇತ್ತು ಎಂಬ ಕೊರಗನ್ನು ಆರ್‌ಜೆ ಬಾಲಾಜಿ ನೀಗಿಸಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಎಮೋಷನ್ ಮತ್ತು ಆ್ಯಕ್ಷನ್ ಸಮತೋಲನವಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಸಾಯಿ ಅಭ್ಯಂಕರ್ ಅವರ ಹಿನ್ನೆಲೆ ಸಂಗೀತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಹೀರೊ ಎಂಟ್ರಿ ಸೀನ್‌ಗಳು ಗೂಸ್‌ಬಂಪ್ಸ್ ನೀಡುತ್ತವೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ವಿಶೇಷ ದಿನದ ಸೀರೆಗೆ ‘ಪ್ರೀತಿ’ಯ ಕ್ಯಾಪ್ಶನ್ ಕೊಟ್ಟ ತ್ರಿಷಾ ಕೃಷ್ಣನ್

ಸಿನಿಮಾ ಬಿಡುಗಡೆಯ ಮೊದಲ ದಿನವೇ ನಟಿ ತ್ರಿಷಾ ಕೃಷ್ಣನ್, ನಿರ್ದೇಶಕ ಆರ್‌ಜೆ ಬಾಲಾಜಿ ಮತ್ತು ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಜೊತೆ ‘ಫಸ್ಟ್ ಡೇ ಫಸ್ಟ್ ಶೋ’ ನೋಡಿದ್ದಾರೆ. ಈ ಸಂದರ್ಭದಲ್ಲಿ ಸೂರ್ಯ ಅವರ ಸಹೋದರ, ನಟ ಕಾರ್ತಿ ಕೂಡ ಜೊತೆಗಿದ್ದು ತಂಡಕ್ಕೆ ಬೆಂಬಲ ನೀಡಿದರು. ಸೂರ್ಯ ಹಾಗೂ ತ್ರಿಷಾ ಅಭಿಮಾನಿಗಳಿಗೆ ‘ಕರುಪ್ಪು’ ಒಂದು ದೊಡ್ಡ ಉಡುಗೊರೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುವ ಲಕ್ಷಣಗಳು ಕಾಣುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸುಪ್ರೀಂಕೋರ್ಟ್ ಆದೇಶದಿಂದ ದರ್ಶನ್​ಗೆ ಅನುಕೂಲ: ಡಿಬಾಸ್ ಫ್ಯಾನ್ಸ್​​​​ಗೆ ಗುಡ್​ ನ್ಯೂಸ್ ಕೊಟ್ಟ ವಕೀಲ – Kannada News | Advocate balan talks about supreme court rejected actor darshan bail plea in renukaswamy murder case

ಬೆಂಗಳೂರು, (ಮೇ 15): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ, ಸ್ಯಾಂಡಲ್ ವುಡ್ ನಟ ದರ್ಶನ್ (Darshan) ಜಾಮೀನು (Bail) ಅರ್ಜಿ ವಜಾಗೊಂಡಿದೆ. ಹಲವು ಕಾರಣಗಳನ್ನು ನೀಡಿ ನಟ ದರ್ಶನ್ ಸಲ್ಲಿಸಿದ್ದ ಸುಪ್ರೀಂಕೋರ್ಟ್​ (Supreme Court) ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ 1 ವರ್ಷದಲ್ಲಿ ಎಲ್ಲಾ ಸಾಕ್ಷಿಗಳ ವಿಚಾರಣೆ ನಡೆಸಬೇಕು. ಬಳಿಕ ಜಾಮೀನು ಅರ್ಜಿ ಬಗ್ಗೆ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ದರ್ಶನ್​​​ಗೆ ಒಂದು ವರ್ಷ ಜೈಲು ಖಾಯಂ ಆದಂತಾಗಿದೆ. ಇನ್ನು ಸುಪ್ರೀಂಕೋರ್ಟ್​ ತೀರ್ಪು ದರ್ಶನ್​​ಗೆ ಅನುಕೂಲ ಎಂದು ವಕೀಲ ಬಾಲನ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಟಿವಿ9 ಜತೆ ಮಾತನಾಡಿದ ವಕೀಲ ಬಾಲನ್, ಜಾಮೀನು ರಿಜೆಕ್ಟ್ ಆಗಿ ಒಂದು ವರ್ಷ ಕಾಲಾವಕಾಶ ಕೊಟ್ಟಿರುವುದು ದರ್ಶನ್ ಗೆ ಅನುಕೂಲವಾಗಿದೆ. ಒಂದು ವರ್ಷದಲ್ಲಿ ಪ್ರಮುಖ ಸಾಕ್ಷಿಗಳನ್ನ ವಿಚಾರಣೆ ಮಾಡಿ ಆಗಲಿಲ್ಲ ಅಂದ್ರೆ ಜಾಮೀನು ಅರ್ಜಿ ಹಾಕಿ ಅನ್ನೋ ಲಿಬೆರ್ಟಿ ಕೊಟ್ಟಿದ್ದಾರೆ.ಟನಲ್ ಇದ್ರು ಬೆಳಕು ಇರ್ಲಿಲ್ಲ . ಇದೀಗ ಒಂದು ವರ್ಷದ ನಂತರ ಬೆಳಕು ಸಿಗುತ್ತೆ ಅಂತ ಹೇಳಿದ್ದಾರೆ ಅದು ಅನುಕೂಲವೇ ಅಲ್ವಾ ಎಂದರು.

ಇನ್ನು ಈ ಪ್ರಕರಣದಲ್ಲಿ ಒಟ್ಟು 232 ಸಾಕ್ಷಿಗಳಿದ್ದಾರೆ. ಒಂದು ವರ್ಷದಲ್ಲಿ 60 ಸಾಕ್ಷಿಗಳನ್ನು ವಿಚಾರಣೆ ಮಾಡಬಹುದು. ಪ್ರತ್ಯೇಕ ಕೋರ್ಟ್ ಕೊಟ್ರೆ ಎಲ್ಲಾ ಸಾಕ್ಷಿಗಳ ಮಾಡಬಹುದು ಅಷ್ಟೇ. ಹೀಗಾಗಿ ಎಲ್ಲಾ ಸಾಕ್ಷಿ ವಿಚಾರಣೆ ಒಂದು ವರ್ಷದಲ್ಲಿ ಮುಗಿಯಲ್ಲ. ಇದರಿಂದ ಒಂದು ವರ್ಷದ ಬಳಿಕ ದರ್ಶನ್​​ಗೆ ಜಾಮೀನು ಸಿಗುತ್ತೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ: ಸುಪ್ರೀಂ ಕೋರ್ಟ್​​ನಲ್ಲಿ ವಾದ-ಪ್ರತಿವಾದ ಹೀಗಿತ್ತು?

Source link

ಮೋದಿ ಮಿತವ್ಯಯದ ಕರೆಗೆ ಕಾಂಗ್ರೆಸ್​​ನಲ್ಲಿ ಭಿನ್ನರಾಗ: ಒಬ್ಬರು ಪ್ರಧಾನಿ ಹೇಳಿದ್ದು ಸರಿ ಎಂದರೆ, ಮತ್ತೊಬ್ಬರಿಂದ ವಿರೋಧ! – Kannada News | Congress Leader T. B. Jayachandra Backs PM’s Fuel, Gold Savings Call; D. K. Shivakumar Slams Price Rise Under Centre

ಮೋದಿ ಮಿತವ್ಯಯದ ಕರೆಗೆ ಕಾಂಗ್ರೆಸ್​​ನಲ್ಲಿ ಭಿನ್ನರಾಗ

ತುಮಕೂರು/ಬೆಂಗಳೂರು, ಮೇ 15: ಜಾಗತಿಕ ತೈಲ ಸಂಕಷ್ಟದ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆಗೊಳಿಸಿ, ಸಾರ್ವಜನಿಕ ಸಾರಿಗೆ ಮತ್ತು ಎಲೆಕ್ಟ್ರಿಕ್ ವಾಹನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದರು. ಜೊತೆಗೆ ಇನ್ನು ಒಂದು ವರ್ಷ ಚಿನ್ನ ಖರೀದಿಸದಂತೆಯೂ ಮನವಿ ಮಾಡಿದ್ದರು. ಅವರ ಈ ಕರೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ವಿಪಕ್ಷಗಳು, ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಸ್ವತಃ ಮೋದಿ ವಿರುದ್ದವೇ ಟೀಕಾ ಪ್ರಹಾರ ನಡೆಸಿದ್ದವು. ಈ ನಡುವೆ ಪ್ರಧಾನಿಗಳ ಮಿತವ್ಯಯ ಸಂದೇಶಕ್ಕೆ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ, ಕಾಂಗ್ರೆಸ್​​ ನಾಯಕ ಟಿ.ಬಿ. ಜಯಚಂದ್ರ ಸಹಮತ ವ್ಯಕ್ತಪಡಿಸಿರೋದು ಕೆಲವರ ಹುಬ್ಬೇರಿಸಿದೆ.

ಟಿ.ಬಿ.ಜಯಚಂದ್ರ ಹೇಳಿದ್ದೇನು?

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟಿನಿಂದ ಆಗುತ್ತಿರುವ ಅನಾಹುತಕ್ಕೆ ನಾವೆಲ್ಲಾ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಯುದ್ಧದ ದುಷ್ಪರಿಣಾಮದಿಂದ ಬೆಲೆ ಏರಿಕೆ ಆಗುತ್ತಿದ್ದು, ಇಂತಹ ಸಂದರ್ಭದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್ ಮಿತವಾಗಿ ಬಳಸಬೇಕು. ಡಾಲರ್ಸ್​ ರೂಪದಲ್ಲಿ ಹಣ ನೀಡಿ ನಾವು ತೈಲ ಖರೀದಿಸಬೇಕಾಗುವ ಕಾರಣ ಕೇಂದ್ರದವರು ಎಲ್ಲರೂ ಸಹಕಾರ ಕೊಡಬೇಕೆಂದು ಕೇಳಿದ್ದಾರೆ. ವಾಸ್ತವತೆಯನ್ನು ಅರಿತು ಎಲ್ಲರೂ ಸಹಕಾರ ನೀಡಬೇಕು ಎಂದು ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಜೊತೆಗೆ ಚಿನ್ನ ಖರೀದಿಯಲ್ಲೂ ಕಡಿವಾಣ ಹಾಕಿ ಅಂತ ಮೋದಿ ಕರೆ ನೀಡಿದ್ದಾರೆ. ವಿಶ್ವದಲ್ಲಿ ನಮ್ಮ ದೇಶದ ಹೆಣ್ಣುಮಕ್ಕಳೇ ಹೆಚ್ಚು ಚಿನ್ನ ಖರೀದಿಸುತ್ತಾರೆ. 18 ಗ್ರಾಂ ಚಿನ್ನದ ತಾಳಿ ಬದಲು 8 ಗ್ರಾಂ ತಾಳಿ ಮಾಡಿಸಿಕೊಳ್ಳಿ. ಪ್ರಧಾನಿ ಮೋದಿ ಸಲಹೆ ಸ್ವೀಕರಿಸಿ ನಾವೂ ಜವಾಬ್ದಾರಿ ವಹಿಸೋಣ ಎಂದವರು ಕರೆ ನೀಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಭರ್ಜರಿ ಏರಿಕೆ; ಜನಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ

‘ಬೆಲೆ ಏರಿಕೆ ಮೋದಿ ಕೊಡುಗೆ’

ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್​​ ವಾಗ್ದಾಳಿ ನಡೆಸಿದ್ದು, ಬೆಲೆ ಏರಿಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೊಡುಗೆ. ಇದು ಬಿ.ಎಸ್​.ಯಡಿಯೂರಪ್ಪನವರಿಗೆ ಹಾಗೂ ನನಗೂ ಗೊತ್ತಿದೆ. ಬೇರೆ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಉಳಿಸಿಕೊಂಡು ಬಂದಿಲ್ಲ. ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ಅದಕ್ಕಾಗಿಯೇ ವಿದ್ಯುತ್ ಉಳಿಸಿ, ಪೆಟ್ರೋಲ್ ಬಳಸಬೇಡಿ ಅಂತಿದ್ದಾರೆ. ಇಂಧನ ಬಳಸದೇ ದಿನನಿತ್ಯ ಜೀವನ ಮಾಡುವುದು ಹೇಗೆ? ಅನೇಕರು ತಮ್ಮ ಬೆಂಗಾವಲು ಪಡೆ ವಾಹನಗಳು ಕಡಿತ ಮಾಡಿದ್ದಾರೆ. ಇದು ಆಗಬಹುದು, ಆದರೆ ಜನಸಾಮಾನ್ಯರು ಹೇಗೆ ಇರಲು ಸಾಧ್ಯ . ಬದುಕಿಗಾಗಿ ಪ್ರಯಾಣ ಮಾಡಬೇಕಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ದೇಶ ದೊಡ್ಡ ದುರಂತದ ಸ್ಥಿತಿಗೆ ಬಂದಿದೆ ಎಂದೂ ಅವರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹು-ಧಾ ಪಾಲಿಕೆಗೆ ಕೋಟಿ ಕೋಟಿ ನಷ್ಟ: ಕಲಾವಿದರ ನಿವೇಶನ ಅಕ್ರಮ ಮಾರಾಟ ಬಯಲು – Kannada News | Hubballi Dharwad Land Scam: HDMC Loses Revenue to Illegal Plot Sales in Artists’ Colony

ನಿವೇಶನಗಳ ಅಕ್ರಮ ಮಾರಾಟImage Credit source: tv9 kannada

ಹುಬ್ಬಳ್ಳಿ, ಮೇ 15: ಒಂದಡೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubballi-Dharwad Corporation) ಆದಾಯ ಕೊರತೆಯಿಂದ ಬಳಲುತ್ತಿದೆ. ಮತ್ತೊಂದಡೆ ಪಾಲಿಕೆಗೆ ಆದಾಯ ಬರುವ ಮೂಲಗಳಲ್ಲಿ ಅಕ್ರಮಗಳು ನಡೆದಿದ್ದರೂ ಪಾಲಿಕೆ ಯಾವುದೇ ಕ್ರಮಕೈಗೊಳ್ಳದೆ ಕಣ್ಣುಮುಚ್ಚಿಕೊಂಡಿದೆ. ಕಲಾವಿದರ ಕಾಲೋನಿಯಲ್ಲಿ ಭೂ ಮಾಫಿಯಾ ದಲ್ಲಾಳಿಗಳು, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸೈಟ್​​ಗಳನ್ನು ಅಕ್ರಮವಾಗಿ ಪರಬಾರೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಕ್ರಮಕೈಗೊಳ್ಳಬೇಕಿದ್ದ ಪಾಲಿಕೆ ಮೌನಕ್ಕೆ ಶರಣಾಗಿದ್ದು, ಅಕ್ರಮದಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಧಿಗಳು ಸಾಥ್ ನೀಡಿರುವ ಆರೋಪಗಳು ಕೇಳಿಬರುತ್ತಿವೆ.

ಮುಖ್ಯಾಂಶಗಳು

  • ಹುಬ್ಬಳ್ಳಿ-ಧಾರವಾಡ ಪಾಲಿಕೆ ನಿವೇಶನಗಳು ಅಕ್ರಮ ಮಾರಾಟ
  • ಸಕ್ರಿಯಗೊಂಡ ಭೂ ಮಾಫಿಯಾ; ನಕಲಿ ದಾಖಲೆ ಸೃಷ್ಟಿಸಿ ಮಾರಾಟ
  • ಪಾಲಿಕೆಯ ಆದಾಯಕ್ಕೂ ಕತ್ತರಿ

ಘಟನೆ ಹಿನ್ನೆಲೆ 

ಹುಬ್ಬಳ್ಳಿಯ ಆನಂದ ನಗರದಲ್ಲಿ ಕಲಾವಿದರು ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಜನರಿಗಾಗಿ 1980 ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿವೇಶನಗಳನ್ನು ನೀಡಿತ್ತು. ಪಾಲಿಕೆಯ ಒಡೆತನದ ಆಸ್ತಿಯನ್ನು ನಿವೇಶನಗಳನ್ನಾಗಿ ಮಾಡಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಸರಿಸುಮಾರು ಮೂರುವರೆ ಸಾವಿರ ಫಲಾನುಭವಿಗಳಿಗೆ ಆ ಸಮಯದಲ್ಲಿ ಹಕ್ಕುಪತ್ರ ನೀಡಿತ್ತು. ಹಕ್ಕುಪತ್ರ ನೀಡುವ ಸಮಯದಲ್ಲಿ, 20 ವರ್ಷಗಳ ಕಾಲ ನಿವೇಶನಗಳನ್ನು ಮಾರಾಟ ಮಾಡಬಾರದು. ಆ ಬಳಿಕ ಮಾರಾಟ ಮಾಡಿದರೆ ನಿವೇಶನದ ಅಂದಿನ ಮಾರ್ಕೆಟ್ ಬೆಲೆಯ ಶೇಕಡ 25ರಿಂದ 50ರಷ್ಟು ಹಣವನ್ನು ಪಾಲಿಕೆಗೆ ಸಂದಾಯ ಮಾಡಬೇಕು. ಪಾಲಿಕೆಯಿಂದ ಮಾರಾಟ ಪರವಾನಗಿ ಪತ್ರವನ್ನು ಪಡೆದ ನಂತರವೇ ಮಾರಾಟ ಮಾಡಬೇಕು ಎಂಬ ನಿಯಮಗಳನ್ನು ವಿಧಿಸಲಾಗಿತ್ತು.

ಇದನ್ನೂ ಓದಿ: ಜಗದ್ಗುರುಗಳ ಸಮ್ಮುಖದಲ್ಲಿ ಸ್ವಾಮೀಜಿ-ಭಕ್ತರ ಸಂಧಾನ: ಏನಿದು ಕುಂದಗೋಳ ಮಠದ ವಿವಾದ?

ನಿವೇಶನಗಳನ್ನು ಪಡೆದವರ ಪೈಕಿ ಕೆಲವರು, 20 ವರ್ಷಗಳ ನಂತರ ತಮ್ಮ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಪಾಲಿಕೆ ವಿಧಿಸಿದ್ದ ಷರತ್ತುಗಳನ್ನು ಮಾತ್ರ ಬಹುತೇಕರು ಪಾಲಿಸುತ್ತಿಲ್ಲ. ಪಾಲಿಕೆಗೆ ಸದ್ಯದ ನಿವೇಶನದ ಮಾರ್ಕೆಟ್​ ಬೆಲೆಯ ಶೇಕಡ 50ರಷ್ಟು ಹಣವನ್ನು ಕಟ್ಟುತ್ತಿಲ್ಲ. ಇನ್ನು ಮಾರಾಟ ಪರವಾನಗಿ ಪತ್ರಗಳನ್ನೇ ನಕಲು ಮಾಡಿ ಮಾರಾಟ ಮಾಡುತ್ತಿದ್ದಾರಂತೆ ಎಂದು ಸ್ವತಃ ಪಾಲಿಕೆಯ ಸದಸ್ಯ ಆರೀಪ್ ಭದ್ರಾಪುರ ಗಂಭೀರ ಆರೋಪ ಮಾಡಿದ್ದಾರೆ.

ದೊಡ್ಡ ದಂಧೆ ಪತ್ತೆ: ಕೈಕಟ್ಟಿ ಕೂತ ಅಧಿಕಾರಿಗಳು

ಪಾಲಿಕೆಯ ಅಧಿಕಾರಿಗಳ ನಕಲಿ ಸಹಿ, ನಕಲಿ ಮಾರಾಟ ಪರವಾನಗಿ ಪತ್ರಗಳನ್ನು ಸೃಷ್ಟಿ ಮಾಡಿ, ಬೇರೆಯವರಿಗೆ ಪಾಲಿಕೆ ನೀಡಿದ್ದ ನಿವೇಶಗಳನ್ನು ಮಾರಾಟ ಮಾಡುವ ದೊಡ್ಡ ದಂಧೆಯೇ ಕಲಾವಿದರ ಕಾಲೋನಿ ಮತ್ತು ಆನಂದ ನಗರದಲ್ಲಿ ನಡೆದಿದೆ. ಆದರೆ ಇದೆಲ್ಲವು ಗೊತ್ತಿದ್ದರು ಕೂಡ ಪಾಲಿಕೆಯ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವಂತೆ. ಪಾಲಿಕೆಯ ಕಮಿಷನರ್ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಇದ್ದರು ಕೈಕಟ್ಟಿ ಕೂತಿದ್ದಾರೆ ಅಂತ ಪಾಲಿಕೆ ಸದಸ್ಯ ಆರೀಪ್ ಭದ್ರಾಪುರ ಆರೋಪಿಸಿದ್ದಾರೆ.

ಇನ್ನು ಈ ಮಾಫಿಯಾದಲ್ಲಿ ಕೆಲ ಜನಪ್ರತಿನಿಧಿಗಳು, ಪಾಲಿಕೆಯ ಅಧಿಕಾರಿಗಳು, ಲ್ಯಾಂಡ್ ಮಾಫಿಯಾದವರ ಕೈವಾಡವಿದೆಯಂತೆ. ಸದ್ಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆದಾಯದ ಕೊರತೆಯಿಂದ ಬಳಲುತ್ತಿದೆ. ಯಾವುದೇ ಕಾಮಗಾರಿ ಮಾಡಿ ಅಂತ ಹೇಳಿದರು ಕೂಡ ಪಾಲಿಕೆಯಲ್ಲಿ ಹಣವಿಲ್ಲ ಅಂತ ಪಾಲಿಕೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಿವೇಶನಗಳ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೆ ಪಾಲಿಕೆಯ ಬೊಕ್ಕಸಕ್ಕೆ ಹೆಚ್ಚಿನ ಹಣವು ಹರಿದು ಬರುತ್ತದೆ. ಆದರೆ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದರು ಕೂಡ ಪಾಲಿಕೆಯ ಅಧಿಕಾರಿಗಳು ಕೈಕಟ್ಟಿ ಕೂತಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆಗೆ ಬಿಜೆಪಿಯಿಂದ ಹೊಸ ತಗಾದೆ: ಇಲ್ಲಿದೆ ಅಸಲಿ ಕಾರಣ

ಕಲಾವಿದರ ಕಾಲೋನಿ, ಆನಂದ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಈ ಹಿಂದೆ ಪಾಲಿಕೆ ನೀಡಿದ್ದ ನಿವೇಶನಗಳ ಅಕ್ರಮ ಮಾರಾಟಕ್ಕೆ ಪಾಲಿಕೆಯ ಅಧಿಕಾರಿಗಳು ಬ್ರೇಕ್ ಹಾಕಬೇಕಿದೆ. ನಿಯಮಾನುಸಾರ ಪಾಲಿಕೆಗೆ ಹಣ ಕಟ್ಟಿದವರಿಗೆ ಮಾತ್ರ ಮಾರಾಟ ಪರವಾನಗಿ ಪತ್ರಗಳನ್ನು ನೀಡಬೇಕಿದೆ. ಅಕ್ರಮಕ್ಕೆ ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದಲ್ಲಿ ಸಿಗದ 5 ಕೋಟಿ ರೂಪಾಯಿ ಬೆಲೆಯ ಹೊಸ ಕಾರು ತರಿಸಿಕೊಂಡ ಶಾರುಖ್ ಖಾನ್ – Kannada News | Shah Rukh Khan adds new Rs 5 Cr Cadillac Escalade SUV to his garage

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ (Shah Rukh Khan) ಅವರು ತಮ್ಮ ಐಷಾರಾಮಿ ಜೀವನಶೈಲಿ ಮತ್ತು ದುಬಾರಿ ಕಾರುಗಳ ಕಲೆಕ್ಷನ್‌ಗೆ ಹೆಸರುವಾಸಿಯಾಗಿದ್ದಾರೆ. ಈಗ ಅವರ ಶ್ರೀಮಂತ ಗ್ಯಾರೇಜ್‌ಗೆ ಮತ್ತೊಂದು ಅತ್ಯಂತ ದುಬಾರಿ ಐಷಾರಾಮಿ ಎಸ್‌ಯುವಿ (SUV) ಕಾರು ಸೇರ್ಪಡೆಯಾಗಿದೆ. ಹೌದು, ಕಿಂಗ್ ಖಾನ್ ಇತ್ತೀಚೆಗೆ ಬ್ರ್ಯಾಂಡ್ ನ್ಯೂ ಕ್ಯಾಡಿಲಾಕ್ ಎಸ್ಕಲೇಡ್ (Cadillac Escalade) ಕಾರನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಮುಂಬೈನ ರಸ್ತೆಗಳಲ್ಲಿ ಶಾರುಖ್ ಖಾನ್ ಅವರು ತಮ್ಮ ಹೊಸ ಕಡುಗಪ್ಪಿನ ಎಸ್‌ಯುವಿ ಕಾರಿನಲ್ಲಿ ಸವಾರಿ ಮಾಡುತ್ತಿರುವ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಅಮೆರಿಕದ ಪ್ರಸಿದ್ಧ ಆಟೋಮೊಬೈಲ್ ಬ್ರ್ಯಾಂಡ್ ಆದ ‘ಕ್ಯಾಡಿಲಾಕ್’ ಭಾರತದಲ್ಲಿ ಅಧಿಕೃತವಾಗಿ ತನ್ನ ಕಾರುಗಳನ್ನು ಮಾರಾಟ ಮಾಡುವುದಿಲ್ಲ. ಹೀಗಾಗಿ ಶಾರುಖ್ ಖಾನ್ ಈ ಕಾರನ್ನು ವಿದೇಶದಿಂದ ಖಾಸಗಿಯಾಗಿ ಆಮದು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಭಾರಿ ಆಮದು ಸುಂಕ ಮತ್ತು ಹೆಚ್ಚುವರಿ ತೆರಿಗೆಗಳ ಕಾರಣದಿಂದಾಗಿ, ಭಾರತದಲ್ಲಿ ಈ ಐಷಾರಾಮಿ ಕ್ಯಾಡಿಲಾಕ್ ಎಸ್ಕಲೇಡ್ ಕಾರಿನ ಆನ್-ರೋಡ್ ಬೆಲೆ ಸುಮಾರು 4 ಕೋಟಿಯಿಂದ 5 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ವಿಶ್ವದ ಅತ್ಯಂತ ಐಷಾರಾಮಿ ಎಸ್‌ಯುವಿಗಳಲ್ಲಿ ಒಂದಾದ ಕ್ಯಾಡಿಲಾಕ್ ಎಸ್ಕಲೇಡ್ ಕೇವಲ ಪವರ್​ಫುಲ್ ಮಾತ್ರವಲ್ಲ, ರಾಯಲ್ ಸೌಕರ್ಯಗಳನ್ನು ಹೊಂದಿದೆ. ಈ ಕಾರು 6.2-ಲೀಟರ್ V8 ಪ್ರಬಲ ಎಂಜಿನ್ ಹೊಂದಿದ್ದು, ಅತ್ಯಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಕಾರಿನ ಒಳಭಾಗದಲ್ಲಿ ಆಕರ್ಷಕವಾದ 38 ಇಂಚಿನ ಕರ್ವ್ಡ್ OLED ಡಿಸ್ಪ್ಲೇ ಸ್ಕ್ರೀನ್ ಇದೆ. ಹೀಟೆಡ್ ಸೀಟುಗಳು, ಸಣ್ಣ ರೆಫ್ರಿಜರೇಟರ್ (ಫ್ರೀಜರ್ ಮೋಡ್ ಸಹಿತ) ಇದರಲ್ಲಿದೆ. ಹೆಡ್‌ರೆಸ್ಟ್ ಸ್ಪೀಕರ್‌ಗಳನ್ನು ಒಳಗೊಂಡ ಅತ್ಯಾಧುನಿಕ AKG ಸ್ಟುಡಿಯೋ ರೆಫರೆನ್ಸ್ 42-ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್ ಅಳವಡಿಸಲಾಗಿದೆ.

ಕಿಂಗ್ ಖಾನ್ ಬಳಿ ಈಗಾಗಲೇ ವಿಶ್ವದ ಅತ್ಯಂತ ದುಬಾರಿಯಾದ ಹಲವು ಕಾರುಗಳಿವೆ. ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್‌ಹೆಡ್ ಕ್ಯೂಪೆ, ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್, ಬಿಎಂಡಬ್ಲ್ಯೂ ಐ8, ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಗಾರ್ಡ್ ಸೇರಿದಂತೆ ಹಲವು ಕಾರುಗಳಿಗೆ ಶಾರುಖ್ ಖಾನ್ ಒಡೆಯನಾಗಿದ್ದಾರೆ.

ಇದನ್ನೂ ಓದಿ: ‘ಕಿಂಗ್’ ಸಿನಿಮಾ ಚಿತ್ರೀಕರಣದ ವಿಡಿಯೋ ಲೀಕ್: ಬೀಚ್‌ನಲ್ಲಿ ಶಾರುಖ್, ದೀಪಿಕಾ ರೊಮ್ಯಾನ್ಸ್

ಶಾರುಖ್ ಖಾನ್ ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ ಆ್ಯಕ್ಷನ್-ಥ್ರಿಲ್ಲರ್ ಚಿತ್ರ ‘ಕಿಂಗ್’ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರ ಪುತ್ರಿ ಸುಹಾನಾ ಖಾನ್, ದೀಪಿಕಾ ಪಡುಕೋಣೆ ಮತ್ತು ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಡಿಸೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇವಲ ಹಾಲು, ತರಕಾರಿಗಾಗಿ ಪ್ರಾಣದ ಹಂಗು ತೊರೆದು ಕಳ್ಳರೊಂದಿಗೆ ಹೋರಾಡಿದ ಮಹಿಳೆ: ಬಡತನದ ಭೀಕರತೆಗೆ ಕನ್ನಡಿ ಹಿಡಿದ ಘಟನೆ! – Kannada News | Economic crisis woman fights robbers for milk viral video shows desperation

ಸಮಾಜದಲ್ಲಿ ಆರ್ಥಿಕ ಸಂಕಷ್ಟ ಎಷ್ಟು ತೀವ್ರವಾಗಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಈ ಘಟನೆ ಸಾಕ್ಷಿಯಾಗಿದೆ. ಕೇವಲ ಒಂದು ಲೀಟರ್ ಹಾಲು, ಕೆಲವು ತರಕಾರಿಗಳು ಮತ್ತು ಜೇಬಿನಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಬೈಕ್‌ನಲ್ಲಿ ಬಂದ ಸರಗಳ್ಳರೊಂದಿಗೆ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಮಹಿಳೆಯು ಮಾರುಕಟ್ಟೆಯಿಂದ ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಆ ಬ್ಯಾಗ್‌ನಲ್ಲಿ ಕೇವಲ ದಿನನಿತ್ಯದ ಆಹಾರ ಪದಾರ್ಥಗಳಿದ್ದರೂ, ಆಕೆಗೆ ಅದು ಅತ್ಯಂತ ಮೌಲ್ಯಯುತವಾಗಿತ್ತು. ಆರ್ಥಿಕ ಸಂಕಷ್ಟದ ಈ ದಿನಗಳಲ್ಲಿ ಒಂದು ಹೊತ್ತಿನ ಹಾಲಿನ ಪ್ಯಾಕೆಟ್ ಕೂಡ ಎಷ್ಟು ಮುಖ್ಯ ಎಂಬುದನ್ನು ತೋರಿಸುವಂತೆ, ಆಕೆ ಕಳ್ಳರಿಗೆ ಬ್ಯಾಗ್ ಬಿಟ್ಟುಕೊಡದೆ ಹಠಾತ್ತನೆ ಎದುರಿಸಿದ್ದಾರೆ. ಈ ಹೋರಾಟದಲ್ಲಿ ಅವರು ರಸ್ತೆಯ ಮೇಲೆ ಬಿದ್ದರೂ ಬ್ಯಾಗ್ ಮಾತ್ರ ಬಿಡಲಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಧೈರ್ಯವನ್ನು ಮೆಚ್ಚುವುದರ ಜೊತೆಗೆ, ದೇಶದಲ್ಲಿನ ಆರ್ಥಿಕ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಒಂದು ಲೀಟರ್ ಹಾಲಿಗಾಗಿ ಪ್ರಾಣದ ಹಂಗು ತೊರೆಯಬೇಕಾದ ಪರಿಸ್ಥಿತಿ ಬಂದಿದೆಯಲ್ಲ” ಎಂಬ ಕಾಮೆಂಟ್‌ಗಳು ಜನರ ನೋವನ್ನು ಪ್ರತಿಬಿಂಬಿಸುತ್ತಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಇಂಧನ ಮಿತವ್ಯಯದ ಕರೆ: ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ – Kannada News | Union Minister V. Somanna Abandons Security Escort Following PM Modis Austerity Call

ತುಮಕೂರು, ಮೇ 15: ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಮಿತವ್ಯಯದ ಕರೆಯನ್ನು ಪಾಲಿಸಿ ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ದಿಶಾ ಸಭೆಗೆ ಆಗಮಿಸಿದ ಸೋಮಣ್ಣ ಅವರು, ಆರ್.ಪಿ.ಎಫ್. ಸೇರಿದಂತೆ ಯಾವುದೇ ಭದ್ರತಾ ವಾಹನಗಳನ್ನು ಬಳಸದೆ ಕೇವಲ ಸ್ಥಳೀಯ ಬೆಂಗಾವಲಿನೊಂದಿಗೆ ಬಂದಿದ್ದಾರೆ. ಈ ಕುರಿತು ಮಾತನಾಡಿದ ಸಚಿವರು, ಪ್ರಧಾನಮಂತ್ರಿಗಳ ಕರೆ ಕೇವಲ ಇಂಧನ ಉಳಿತಾಯಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ದೇಶಕ್ಕೆ ಉತ್ತಮ ಸಂದೇಶ ರವಾನಿಸುವುದು ಹಾಗೂ ದೇಶದ ಅಭಿವೃದ್ಧಿಯ ಸಂಕೇತ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version