ಧಾರವಾಡ, (ಮಾರ್ಚ್ 17): ಕಾಶ್ಮೀರ, ಶಿಮ್ಲಾದಲ್ಲಿ ಹಿಮಪಾತದಿಂದಾಗಿ ಹೇಗೆ ಮಂಜುಗಡ್ಡೆ ರಸ್ತೆ ತುಂಬೆಲ್ಲಾ ಬಿದ್ದಿರುತ್ತೋ ಹಾಗೇ ಧಾರವಾಡ ಜಿಲ್ಲೆಯ ಕಲ್ಲಘಟಗಿಯಲ್ಲೂ ಸಹ ಆಲಿಕಲ್ಲು ಬಿದ್ದಿದೆ. ಮಳೆಯಿಂದಾಗಿ ರಸ್ತೆಯಲೆಲ್ಲಾ ಆಲಿಕಲ್ಲು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಗಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಶಿ ರಾಶಿ ಆಲಿಕಲ್ಲು ಹೇಗೆ ಬಿದ್ದಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
ಟೆಹ್ರಾನ್, ಮಾರ್ಚ್ 17: ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ನಿಲ್ಲಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಮ್ಮ ಮುಂದೆ ಮಂಡಿಯೂರಬೇಕು, ಆ ಎರಡೂ ದೇಶಗಳು ಸೋಲನ್ನು ಒಪ್ಪಿಕೊಳ್ಳಬೇಕು. ಶಾಂತಿ ಮಾತುಕತೆಯ ಸಮಯ ಮುಗಿದುಹೋಗಿದೆ ಎಂದು ಅವರು ಘೋಷಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ವಿರೂಪಗೊಂಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ರಾಯಿಟರ್ಸ್ ಉಲ್ಲೇಖಿಸಿದ ಇರಾನಿನ ಅಧಿಕಾರಿಯೊಬ್ಬರ ಪ್ರಕಾರ, ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಯುಎಸ್ ಮತ್ತು ಇಸ್ರೇಲ್ ವಿರುದ್ಧ ಟೆಹ್ರಾನ್‌ನ ಸೇಡು ಬಹಳ ಗಂಭೀರವಾದುದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಹಾಗೇ, ಮೊಜ್ತಬಾ ಅವರು “ಶಾಂತಿಗೆ ಇದು ಸರಿಯಾದ ಸಮಯವಲ್ಲ” ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ಅವರ ತಂದೆಯಾದ ಅಯತೊಲ್ಲಾ ಖಮೇನಿಯ ಮರಣದ ನಂತರ ಇರಾನ್‌ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಮಧ್ಯಪ್ರಾಚ್ಯದಾದ್ಯಂತ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ, ಖಮೇನಿ ಅವರ ಮರಣದ ನಂತರ ಮಧ್ಯಪ್ರಾಚ್ಯದಾದ್ಯಂತ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಬಲವಾದ ಸಂದೇಶವನ್ನು ನೀಡಿದ್ದರು. ಈ ಭಾಷಣವು ಅಮೆರಿಕ ಮತ್ತು ಇಸ್ರೇಲ್ ಕಡೆಗೆ ಇರಾನ್‌ನ ಕಠಿಣ ನಿಲುವನ್ನು ಒತ್ತಿಹೇಳಿತ್ತು. ಇರಾನ್ ಅನುಭವಿಸಿದ ಹಾನಿಗಳಿಗೆ ಪ್ರತಿಯಾಗಿ ಇಸ್ರೇಲ್ ಮತ್ತು ಅಮೆರಿಕ ಬೆಲೆ ತೆರಬೇಕಾಗುತ್ತದೆ ಎಂದು ಮೊಜ್ತಬಾ ಹೇಳಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2026 ರ ಐಪಿಎಲ್ಗೆ ಎರಡು ವಾರಕ್ಕೂ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಈ ಲೀಗ್ನಲ್ಲಿ ಆಡುವ ವಿದೇಶಿ ಆಟಗಾರರು ತಮ್ಮ ತಮ್ಮ ತಂಡಗಳನ್ನು ಕೂಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಆರ್‌ಸಿಬಿ ಜೀವಾಳ ವಿರಾಟ್ ಕೊಹ್ಲಿ ಕೂಡ ಇಂದು ಮಡದಿಯೊಂದಿಗೆ ಭಾರತಕ್ಕೆ ಬಂದಿದ್ದಾರೆ. ಲೀಗ್ನ ಮೊದಲ ಪಂದ್ಯ ಆರ್‌ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ.
ಆದರೆ ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಪಾಳಯಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರ ಎನಿಸಿಕೊಂಡಿರುವ ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಜೋಶ್ ಹೇಜಲ್ವುಡ್ ಈ ಆವೃತ್ತಿಯ ಮೊದಲೆರಡು ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ. ಅಂದರೆ ಆರ್‌ಸಿಬಿ ತಮ್ಮ ಮೊದಲ ಎರಡು ಪಂದ್ಯಗಳನ್ನು ಸನ್ರೈಸರ್ಸ್ ಹೈದರಾಬಾದ್ ಹಾಗೂ ಸಿಎಸ್ಕೆ ವಿರುದ್ಧ ಆಡಲಿದೆ. ಈ ಪಂದ್ಯಗಳಲ್ಲಿ ಹೇಜಲ್ವುಡ್ ಆಡುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.
ಗಾಯದಿಂದಾಗಿ ಬಹಳ ದಿನಗಳಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಹೇಜಲ್ವುಡ್ ಟಿ20 ವಿಶ್ವಕಪ್ನಲ್ಲಿಯೂ ಆಡಿರಲಿಲ್ಲ. ಆದಾಗ್ಯೂ ಐಪಿಎಲ್ಗೂ ಮುನ್ನ ಹೇಜಲ್ವುಡ್ ಚೇತರಿಸಿಕೊಂಡಿದ್ದು ಫಿಟ್ನೆಸ್ ಸರ್ಟಿಫಿಕೆಟ್ ಕೂಡ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ ಹೇಜಲ್ವುಡ್ ಮೊದಲ ಎರಡು ಪಂದ್ಯಗಳಲ್ಲಿ ಆಡಲಾಗುವುದಿಲ್ಲ ಎನ್ನಲಾಗುತ್ತಿದೆ.
ಈ ಸುದ್ದಿ ನಿಜವಾದರೆ, ಅದು ಆರ್ಸಿಬಿಗೆ ದೊಡ್ಡ ಹೊಡೆತವಾಗುತ್ತದೆ. ಏಕೆಂದರೆ ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹೇಜಲ್ವುಡ್ 22 ವಿಕೆಟ್ಗಳನ್ನು ಕಬಳಿಸಿದ್ದರು. ಹೀಗಾಗಿ ಅವರ ಅನುಪಸ್ಥಿತಿ ತಂಡವನ್ನು ಕೂಡುವುದು ಸತ್ಯ. ಆದಾಗ್ಯೂ ಅವರ ಬದಲಿಯಾಗಿ ತಂಡದಲ್ಲಿ ಬೌಲರ್ಗಳಿದ್ದು, ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದನ್ನು ನೋಡುವುದಾದರೆ..
ಹೇಜಲ್ವುಡ್ ಸ್ಥಾನವನ್ನು ತುಂಬುವುದು ಕಷ್ಟವಾದರೂ, ನ್ಯೂಜಿಲೆಂಡ್ನ ವೇಗದ ಬೌಲರ್ ಜಾಕೋಬ್ ಡಫಿ ತಂಡಕ್ಕೆ ನೆರವಾಗಬಲ್ಲರು. ನ್ಯೂಜಿಲೆಂಡ್ನ ಈ ಬಲಗೈ ವೇಗದ ಬೌಲರ್ ಟಿ20 ಕ್ರಿಕೆಟ್ನಲ್ಲಿ ನಂ. 1 ಬೌಲರ್ ಆಗಿದ್ದು, ಆಡಿರುವ 48 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 62 ವಿಕೆಟ್ಗಳನ್ನು ಕಬಳಿಸಿದ್ದಾರೆ, ಪ್ರತಿ ಓವರ್ಗೆ ಕೇವಲ 8 ರನ್ಗಳ ಎಕಾನಮಿ ದರವನ್ನು ಹೊಂದಿದ್ದಾರೆ.
ಇದು ಡಫಿಗೆ ಚೊಚ್ಚಲ ಐಪಿಎಲ್ ಆವೃತ್ತಿಯಾಗಿದೆ. ಆದಾಗ್ಯೂ ಜಾಕೋಬ್ ಡಫಿಯವರ ದೊಡ್ಡ ಶಕ್ತಿ ಎಂದರೆ ಪವರ್ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ಮಿತವ್ಯಯದಿಂದ ಬೌಲಿಂಗ್ ಮಾಡುವ ಸಾಮರ್ಥ್ಯ ಹಾಗೂ ವಿಕೆಟ್ ಪಡೆಯುವ ಸಾಮರ್ಥ್ಯ. ಅವರು ತಮ್ಮ ಎತ್ತರವನ್ನು ಬಳಸಿಕೊಂಡು ಬೌನ್ಸರ್ ಎಸೆಯುವುದರಲ್ಲಿ ನಿಸ್ಸೀಮರು ಹಾಗೆಯೇ ಬ್ಯಾಟ್ಸ್ಮನ್ಗಳನ್ನು ಮೋಸಗೊಳಿಸುವ ನಿಧಾನಗತಿಯ ಎಸೆತವನ್ನು ಸಹ ಹೊಂದಿದ್ದಾರೆ. ಆದಾಗ್ಯೂ ಢಪಿ ಆರ್ಸಿಬಿಯ ನಿರೀಕ್ಷೆಗಳನ್ನು ಪೂರೈಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಮಂಗಳೂರು, ಮಾರ್ಚ್ 17: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ (Kukke Shree Subrahmanya Temple) ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಒಂದು. ಕೋಟ್ಯಂತರ ರೂ ಆದಾಯ ತಂದು ಕೊಡುವ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾತ್ರ ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲ ಎಂಬುದು ದಶಕಗಳ ಆರೋಪ. ಸಂಪತ್ತು ಇದ್ದರೂ ಇಚ್ಛಾಶಕ್ತಿ, ಕ್ರಿಯಾಶಕ್ತಿ ಇಲ್ಲದ ಪರಿಣಾಮ ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಭಕ್ತರು ಪರದಾಡುವಂತಾಗಿದೆ.
ಭಕ್ತರ ಆರೋಪವೇನು?
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಪ್ರಸಿದ್ಧ ನಾಗ ಕ್ಷೇತ್ರ ಅಂತಾನೆ ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿರುವ ಈ ದೇವಸ್ಥಾನಕ್ಕೆ ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ಆದರೆ ಇತಿಹಾಸ ಪ್ರಸಿದ್ಧವಾಗಿರುವ ಈ ದೇವಸ್ಥಾನದಲ್ಲಿ ವ್ಯವಸ್ಥೆಗಳು ಮಾತ್ರ ಇನ್ನು ಇತಿಹಾಸ ಕಾಲದ್ದೆ ಇದೆ ಎಂಬುದು ಭಕ್ತರ ಆರೋಪ.
ದೇವಳದ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲ್ಯಾನ್ ಯೋಜನೆ ಜಾರಿಗೊಳಿಸಿ 17 ವರ್ಷವಾದರೂ ಇನ್ನು ಕೂಡ ಪೂರ್ಣವಾಗಿಲ್ಲ ಎಂಬದು ಇಲ್ಲಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟು 604 ಕೋಟಿ ರೂ ಕಾಮಗಾರಿಯಲ್ಲಿ ಈಗಾಗಲೇ ಎರಡು ಹಂತವನ್ನೂ ಪೂರ್ಣಗೊಳಿಸಿದ್ದು, ಈಗ ಮೂರನೇ ಹಂತದ ಕಾಮಗಾರಿಗಳ ಯೋಜನೆ, ಅಂದಾಜುಪಟ್ಟಿ ಸಿದ್ದಗೊಳಿಸಿ ಪಿಡಬ್ಲ್ಯುಡಿ ಇಲಾಖೆಯಿಂದ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿದ್ದರು ಸಹ ಇನ್ನು ಸಹ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ 600 ಕೋಟಿ ರೂ ಎಫ್ಡಿ ಇದ್ದರೂ, ವಾರ್ಷಿಕ 150 ಕೋಟಿಗೂ ಹೆಚ್ಚು ಆದಾಯವಿದ್ದರು ಸಹ ಈ ಹಣವನ್ನು ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕೆಂದರೆ ಸರ್ಕಾರದ, ಹಣಕಾಸು ಇಲಾಖೆಯ ಅನುಮೋದನೆ ಕಡ್ಡಾಯವಾಗಿದೆ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ, ಕ್ರಿಯಾಶಕ್ತಿ ಇಲ್ಲದೆ, ಅವೈಜ್ಞಾನಿಕ ತೀರ್ಮಾನಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂಬ ಆರೋಪವಿದೆ.
ಏನೆಲ್ಲಾ ನಿರ್ಮಾಣವಾಗಬೇಕು?
ದೇವಳದಲ್ಲಿ ಸರ್ಪ ಸಂಸ್ಕಾರ ಸೇವೆ ಬಹಳಷ್ಟು ಪ್ರಸಿದ್ಧಿ ಪಡೆದಿದ್ದು ಪ್ರಸ್ತುತ ದಿನವೊಂದಕ್ಕೆ 175 ಭಕ್ತರಿಗೆ ಮಾತ್ರ ಸೇವೆ ನಡೆಸಲು ಅವಕಾಶವಿದ್ದು, ಎರಡು ತಿಂಗಳ ಕಾಲ ಬುಕ್ಕಿಂಗ್ಗೆ ಕಾಯಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಸರ್ಪ ಸಂಸ್ಕಾರ ಯಾಗಶಾಲೆಯ ನಿರ್ಮಾಣವಾಗಬೇಕಿದೆ. ಒಂದು ಸಾವಿರ ಮಂದಿ ಆಶ್ಲೇಷ ಬಲಿ ಪೂಜೆ ಸಲ್ಲಿಸಲು ಪೂಜಾ ಮಂದಿರವೂ ನಿರ್ಮಾಣವಾಗಬೇಕಿದೆ. ಸದ್ಯ 25 ವರ್ಷ ಹಿಂದಿನ ಭೋಜನಶಾಲೆಯಿದ್ದು ಇನ್ನು ಮುಂದೆ ಏಕಕಾಲದಲ್ಲಿ ಐದು ಸಾವಿರ ಮಂದಿ ಕೂತು ಊಟ ಮಾಡುವ ಭೋಜನ ಶಾಲೆ ನಿರ್ಮಾಣವಾಗಬೇಕಿದೆ.
ಸದ್ಯ ದೇವಳದಲ್ಲಿ ವಸತಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಸೀಸನ್ ಸಮಯದಲ್ಲಿ ಭಕ್ತರು ರಥಬೀದಿಯಲ್ಲೆ ಮಲಗಬೇಕಾದ ಪರಿಸ್ಥಿತಿಯಿದೆ. ಹೀಗಾಗಿ 604 ಕೋಟಿ ರೂ ಗಳ ಮಾಸ್ಟರ್ ಪ್ಲ್ಯಾನ್ನಲ್ಲಿ ಪಾರಂಪರಿಕ ರಥಬೀದಿ, 800 ಕೊಠಡಿಗಳ ವಸತಿಗೃಹ, ಶೌಚಾಲಯ, ಗೆಸ್ಟ್ ಹೌಸ್, ಸುತ್ತು ಪೌಳಿ ದುರಸ್ತಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಸದ್ಯ ಈ ಬಾರಿಯ ಬಜೆಟ್ನಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಾಧಿಕಾರ ರಚಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡಿದ್ದು, ಇನ್ನಾದರೂ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳು ಆಗುತ್ತಾ ಅಂತಾ ಕಾದು ನೋಡಬೇಕಾಗಿದೆ.
ಮಂಗಳೂರು, (ಮಾರ್ಚ್ 17): ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಕಾರಿನಿಂದ ಗುದ್ದಿ ವ್ಯಕ್ತಿಯನ್ನು ಹತ್ಯೆ ಯತ್ನ ನಡೆದಿರುವ ಘಟನೆ ಮಂಗಳೂರಿನ ಆರ್ಯಸಮಾಜ ರಸ್ತೆಯಲ್ಲಿ ನಡೆದಿದೆ. ಭೂವ್ಯವಹಾರಕ್ಕೆ ಸಂಬಂಧಿಸಿ ಹಣದ ವ್ಯಾಜ್ಯದ ಕೋಪದಲ್ಲಿ ಮಂಗಳೂರಿನ ಪಳ್ನೀರ್ ನಿವಾಸಿ ಮಹಮ್ಮದ್ ಶರೀಫ್ ಎನ್ನುವಾತ ಕಾರಿನಿಂದ ಮೋಹನ್ ದಾಸ್ ಶೆಟ್ಟಿಗೆ ಗುದ್ದಿದ್ದು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುರತ್ಕಲ್‌ನ ಕಾನ ಮತ್ತು ವಾಮಂಜೂರಿನಲ್ಲಿ ಆರೋಪಿ ಮಹಮ್ಮದ್ ಶರೀಫ್ ಸುಮಾರು 2 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದ್ದ. ಆದರೆ ಮೋಹನ್ ದಾಸ್ ಶೆಟ್ಟಿ ಮೋಸ ಮಾಡಿರುವ ಸಿಟ್ಟಿನಲ್ಲಿ ಆತ ಸ್ಕೂಟರ್ನಲ್ಲಿ ತೆರಳುವಾಗ ಮಹಮ್ಮದ್ ಶರೀಫ್ ಕಾರಿನಿಂದ ಗುದ್ದಿ ಕೊಲೆ ಯತ್ನ ನಡೆಸಿದ್ದಾನೆ. ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಸದ್ಯ ಮಹಮ್ಮದ್ ಶರೀಫ್ ನನ್ನು ಪೊಲೀಸರು ಬಂಧಿಸಿದ್ದಾರೆ.
2026 ರ ಐಪಿಎಲ್ ಸಮೀಪಿಸುತ್ತಿದ್ದು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಅಭಿಮಾನಿಗಳು ಈ ಚುಟುಕು ಮಾದರಿಯಲ್ಲಿ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದಕ್ಕೆ ಕಾರಣ, ಇವರಿಬ್ಬರು ಈ ಮಾದರಿಯಲ್ಲಿ ಆಡುವುದು ಐಪಿಎಲ್‌ನಲ್ಲಿ ಮಾತ್ರ. ಹೀಗಾಗಿ ಈ ಇಬ್ಬರು ದಿಗ್ಗಜರು ವರ್ಷದ ನಂತರ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.
ಅದರಲ್ಲೂ ಹಿಟ್ಮ್ಯಾನ್ ರೋಹಿತ್ ಶರ್ಮಾ ಈ ಲೀಗ್ಗಾಗಿ ಸಾಕಷ್ಟು ಬೆವರು ಹರಿಸುತ್ತಿದ್ದು, ಅದರ ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಇದೆಲ್ಲದರ ನಡುವೆ ಈ ಬಾರಿಯ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಅವರ ಪಾತ್ರ ಕೇವಲ ಬ್ಯಾಟಿಂಗ್ಗೆ ಮಾತ್ರ ಸೀಮಿತವಾಗಿರುತ್ತಾ? ಅಥವಾ ಇತರ ಆಟಗಾರರಂತೆ ಪೂರ್ಣ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಈ ಪ್ರಶ್ನೆಗೆ ಉತ್ತರಿಸಿರುವ ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲಾ ಜಯವರ್ಧನೆ, ‘ಈ ಬಾರಿ ರೋಹಿತ್ ಶರ್ಮಾ ಅವರ ಆಟ ಇಂಪ್ಯಾಕ್ಟ್ ಪ್ಲೇಯರ್ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಿಗೆ ಅವರು ಐಪಿಎಲ್‌ನ ಬಹುತೇಕ ಪಂದ್ಯಗಳಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಇದು ರೋಹಿತ್ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.
ವಾಸ್ತವವಾಗಿ ಕಳೆದ ಕೆಲವು ಆವೃತ್ತಿಗಳಿಂದ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಆಡುತ್ತಿದ್ದಾರೆ. ಅಂದರೆ ರೋಹಿತ್ ಕೇವಲ ಬ್ಯಾಟಿಂಗ್ಗೆ ಮಾತ್ರ ಸೀಮಿತರಾಗಿರುತ್ತಿದ್ದರು. ಅದಾದ ಬಳಿಕ ರೋಹಿತ್ ಫೀಲ್ಡಿಂಗ್ ಮಾಡುತ್ತಿರಲಿಲ್ಲ ಮತ್ತು ಮೈದಾನದಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ರೋಹಿತ್ ಬ್ಯಾಟಿಂಗ್ ಜೊತೆಗೆ ಮೈದಾನದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ಇದಕ್ಕೆ ಕಾರಣವನ್ನು ನೀಡಿರುವ ಜಯವರ್ಧನೆ, ‘ಕಳೆದ ಐಪಿಎಲ್ ಋತುವಿನಲ್ಲಿ ರೋಹಿತ್ ಫಿಟ್ನೆಸ್ ಸಮಸ್ಯೆಗಳನ್ನು ಹೊಂದಿದ್ದರು. ಹೀಗಾಗಿ ಅವರ ಕೆಲಸದ ಹೊರೆಯನ್ನು ನಿರ್ವಹಿಸುವ ಅಗತ್ಯವಿತ್ತು. ಅದರ ಹೊರತಾಗಿಯೂ, ಅವರು ಮೈದಾನದಲ್ಲಿರಲಿ ಅಥವಾ ಇಲ್ಲದಿರಲಿ, ತಂಡದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದ್ದರು. ಆದಾಗ್ಯೂ, ಈ ಬಾರಿಯ ಐಪಿಎಲ್‌ನಲ್ಲಿ ಅವರು ಮೈದಾನದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ತಂಡದ ಸಂಯೋಜನೆಯಲ್ಲಿ ಪಂದ್ಯದ ಪರಿಸ್ಥಿತಿ ಮತ್ತು ಸಮತೋಲನವನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದಿದ್ದಾರೆ.
ರೋಹಿತ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ, 272 ಪಂದ್ಯಗಳ 267 ಇನ್ನಿಂಗ್ಸ್ಗಳಲ್ಲಿ 7,046 ರನ್ ಗಳಿಸಿದ್ದಾರೆ. ಈ ರನ್ಗಳಲ್ಲಿ ಸುಮಾರು 6,000 ರನ್ಗಳು ಮುಂಬೈ ಇಂಡಿಯನ್ಸ್ ತಂಡದ ಪರವೆ ಬಂದಿವೆ. ರೋಹಿತ್ ಶರ್ಮಾ 2011 ರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ್ದು, ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ.
ನವದೆಹಲಿ, ಮಾರ್ಚ್ 17: ಅಲಿಘರ್ ರೈಲು ನಿಲ್ದಾಣದಲ್ಲಿ ಯಾರೂ ಊಹಿಸದ ಘಟನೆಯೊಂದು ನಡೆದಿದೆ. ರೈಲು ಇನ್ನೇನು ಸ್ಟೇಷನ್ಗೆ ತಲುಪಬೇಕು ಎನ್ನುವಷ್ಟರಲ್ಲಿ ತನ್ನ ಮಗಳ ಜೊತೆ ರೈಲಿಗಾಗಿ ಕಾಯುತ್ತಿದ್ದ ಮಹಿಳೆ ರೈಲು ಹಳಿ ಮೇಲೆ ಹಾರಿದ್ದಳು. ಆತ್ಮಹತ್ಯೆಗೆ ಯತ್ನಿಸಿದ ಆಕೆಯ ಹಿಂದೆಯೇ ಓಡಿದ 7 ವರ್ಷದ ಮಗಳು ಅಮ್ಮಾ ಬೇಡಮ್ಮಾ ಎನ್ನುತ್ತಾ ಕೂಗತೊಡಗಿದ್ದಾಳೆ. ಆಕೆಯ ಕಿರುಚಾಟ ಕೇಳಿದ ನಂತರ ಇತರ ಪ್ರಯಾಣಿಕರು ಮತ್ತು ಜಿಆರ್‌ಪಿ ಸಿಬ್ಬಂದಿ ಓಡಿ ಬಂದು ಆ ಮಹಿಳೆಯನ್ನು ಕಾಪಾಡಿದ್ದಾರೆ.
ಮನೆಯಲ್ಲಿನ ಕೌಟುಂಬಿಕ ಹಿಂಸಾಚಾರದಿಂದ ನೊಂದಿದ್ದ ಮಹಿಳೆ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಳು. ರೈಲು ಸಮೀಪಿಸುತ್ತಿರುವುದನ್ನು ನೋಡಿದ ಆಕೆ ಹಳಿಗಳ ಕಡೆಗೆ ಹೋದಳು. ಅಷ್ಟರಲ್ಲೇ ಅವರ 7 ವರ್ಷದ ಮಗಳು ಟ್ವಿಂಕಲ್ ಓಡಿ ಬಂದು ಆಕೆಯನ್ನು ಹಿಡಿದುಕೊಂಡಳು. ಆ ಬಾಲಕಿ ಜೋರಾಗಿ ಕೂಗುತ್ತಿದ್ದಳು “ಅಮ್ಮ, ಬೇಡಮ್ಮಾ, ಸಾಯೋದು ಬೇಡಮ್ಮ” ಎಂದು ಅಳುತ್ತಿದ್ದಳು. ಅಮ್ಮನನ್ನು ಹಳಿಯಿಂದ ಹಿಂದಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆಕೆಯ ಕೂಗು ಕೇಳಿ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಸ್ಥಳಕ್ಕೆ ಧಾವಿಸಿದರು. ಆ ಮಹಿಳೆಯನ್ನು ರಕ್ಷಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಮಿಳುನಾಡಿನ ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಅವರು ನಟಿ ನಯನತಾರಾ (Nayanthara) ಬಗ್ಗೆ ನೀಡಿದ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆಯು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಸುರಕ್ಷತೆಗಾಗಿ ತಮ್ಮ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲೇ ಅವರು ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಸಿ.ವಿ. ಷಣ್ಮುಗಂ (CV Shanmugam) ಅವರ ಹೇಳಿಕೆಯನ್ನು ದಕ್ಷಿಣ ಭಾರತ ಕಲಾವಿದರ ಸಂಘ ಖಂಡಿಸಿದೆ. ಕೂಡಲೇ ಕ್ಷಮೆ ಕೇಳಬೇಕು ಎಂದು ಸಂಘ ಆಗ್ರಹಿಸಿದೆ.
ಘಟನೆ ಹಿನ್ನೆಲೆ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇತ್ತೀಚೆಗೆ ರಾಜ್ಯದ ಜನತೆಗೆ ‘ನಿಮ್ಮ ಕನಸುಗಳನ್ನು ಹಂಚಿಕೊಳ್ಳಿ, ಸರ್ಕಾರ ಅವುಗಳನ್ನು ಈಡೇರಿಸಲು ಶ್ರಮಿಸುತ್ತದೆ’ ಎಂದು ಭರವಸೆ ನೀಡಿದ್ದರು. ಇದನ್ನು ಟೀಕಿಸುವ ಭರದಲ್ಲಿ ಸಂಸದ ಷಣ್ಮುಗಂ ಅವರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಬಳಸಿಕೊಂಡು ಅಸಭ್ಯ ಉದಾಹರಣೆ ನೀಡಿದ್ದಾರೆ.
‘ಅಬ್ದುಲ್ ಕಲಾಂ ಅವರು ಕನಸು ಕಾಣಲು ಹೇಳಿದರು. ಸ್ಟಾಲಿನ್ ಅವರು ತಮ್ಮ ಕನಸುಗಳನ್ನು ಹಂಚಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ನನಗೆ ನಯನತಾರಾ ಜೊತೆ ಮದುವೆಯಾಗಬೇಕೆಂಬ ಕನಸಿದ್ದರೆ, ಸ್ಟಾಲಿನ್ ಅದನ್ನು ಈಡೇರಿಸುತ್ತಾರಾ? ಯಾರಾದರೂ ಸ್ಟಾಲಿನ್ ಅವರ ಬಳಿ ಹೋಗಿ ನಯನತಾರಾ ಜೊತೆ ಮದುವೆ ಮಾಡಿಸಿ ಎಂದು ಕೇಳಿದರೆ ಅವರು ಮದುವೆ ಮಾಡಿಸುತ್ತಾರಾ?’ ಎಂದು ಷಣ್ಮುಗಂ ವ್ಯಂಗ್ಯವಾಗಿ ಪ್ರಶ್ನಿಸಿದ್ದರು. ಈ ವೇಳೆ ಪಕ್ಕದಲ್ಲಿದ್ದ ಇತರ ನಾಯಕರು ಇದಕ್ಕೆ ನಗುತ್ತಾ ಬೆಂಬಲ ಸೂಚಿಸಿದ್ದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ನಯನತಾರಾ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತಂದ ಸಿ.ವಿ. ಷಣ್ಮುಗಂ ಅವರ ವರ್ತನೆಯನ್ನು ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘ ತೀವ್ರವಾಗಿ ಖಂಡಿಸಿದೆ. ಸಂಸದರಿಗೆ ಪತ್ರ ಬರೆದಿರುವ ಸಂಘವು, ‘ಗೌರವಾನ್ವಿತ ಸಂಸದರೇ, ನಿಮ್ಮ ಮಾತುಗಳು ಅತ್ಯಂತ ಅವಹೇಳನಕಾರಿ ಮತ್ತು ನಾಚಿಕೆಗೇಡಿನ ಸಂಗತಿ. ಸಂಸದೀಯ ಘನತೆಯನ್ನು ಗಾಳಿಗೆ ತೂರಿ ನಮ್ಮ ಸಹೋದ್ಯೋಗಿ ನಯನತಾರಾ ಅವರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದೀರಿ’ ಎಂದು ಕಿಡಿಕಾರಿದೆ.
‘ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಸಾರ್ವಜನಿಕವಾಗಿ ಮಾತನಾಡುವಾಗ ಅತ್ಯಂತ ಎಚ್ಚರಿಕೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ನೀವು ಅದನ್ನು ಮರೆತಿದ್ದೀರಿ. ಈ ಕೂಡಲೇ ನೀವು ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಮುಂದೆಂದೂ ಚಿತ್ರರಂಗದ ಮಹಿಳೆಯರ ಬಗ್ಗೆ ಇಂತಹ ಹಗುರವಾದ ಮಾತುಗಳನ್ನು ಆಡುವುದಿಲ್ಲ ಎಂದು ಭರವಸೆ ನೀಡಬೇಕು’ ಎಂದು ಸಂಘವು ಆಗ್ರಹಿಸಿದೆ.
ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಯೂರಿರುವ ವಿರಾಟ್ ಕೊಹ್ಲಿ ಇದೀಗ 2026 ರ ಐಪಿಎಲ್ಗಾಗಿ ಭಾರತದಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಿಂದ ತನ್ನ ಮಡದಿ ಅನುಷ್ಕಾ ಶರ್ಮಾ ಅವರೊಂದಿಗೆ ಹೊರಬರುತ್ತಿರುವ ಅವರ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಐಪಿಎಲ್‌ನ 19 ನೇ ಸೀಸನ್‌ಗಾಗಿ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ಸಿದ್ಧತೆಗಳನ್ನು ಆರಂಭಿಸಿದ್ದರು. ಅದರ ವಿಡಿಯೋಗಳು ಕೂಡ ವೈರಲ್ ಆಗಿದ್ದವು. ಆದಾಗ್ಯೂ, ಭಾರತಕ್ಕೆ ಬಂದ ನಂತರ, ಅವರು ಶೀಘ್ರದಲ್ಲೇ ಆರ್‌ಸಿಬಿ ಶಿಬಿರವನ್ನು ಸೇರಲಿದ್ದು, ತಮ್ಮ ಅಭ್ಯಾಸವನ್ನು ಮುಂದುವರೆಸಿಲಿದ್ದಾರೆ. ಆರ್‌ಸಿಬಿ ಪ್ರಸ್ತುತ ಐಪಿಎಲ್ ಹಾಲಿ ಚಾಂಪಿಯನ್ ಆಗಿರುವ ಕಾರಣ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಬೇಕೆಂಬ ಒತ್ತಡದಲ್ಲಿದೆ. ಹೀಗಾಗಿ ವಿರಾಟ್ ಕೊಹ್ಲಿಯಿಂದ ಈ ಬಾರಿಯೂ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.
ಬೆಂಗಳೂರು, (ಮಾರ್ಚ್ 17): ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ವಿಧಾನಸಭೆ ಕಲಾಪದಲ್ಲಿಂದು ಹಿರಿಯ ಶಾಸಕ ಬಿ ಆರ್ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ವರ್ಗಾವಣೆ ಆದೇಶ ನನ್ನ ಬಳಿ ಇದೆ. ಅಧಿಕಾರಿಗಳೇ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ದಿನೇಶ್ ಗುಂಡೂರಾವ್ ಬಂದ ಮೇಲೆ ಇಲಾಖೆಯಲ್ಲಿ ಸುಧಾರಣೆ ತರುತ್ತಿದ್ದಾರೆ. ಆದರೆ ರಿವರ್ಸ್ ಗೇರ್ ನಲ್ಲಿ ತರಬೇಕಾ? ಹಿಂದೆ ಹೋಗುವ ಗಾಡಿ ಮುಂದೆ ಹೋಗಬೇಕು. ಆದರೆ ಅದು ಹಿಂದನೆ ಹೋಗುತ್ತಿದೆ. ಡೆಲಿವರಿನೇ ಆಗಿಲ್ಲ ಎಂದು ವೈದ್ಯರ ವರ್ಗಾವಣೆ ಮಾಡಿದ್ದೀರಿ. ಒಬ್ಬ ಡಾಕ್ಟರ್ ಏಳು ಕಡೆ ಹೋಗಬೇಕು. ಸರ್ಕಾರ ಕೂಡಲೇ ಆ ಆದೇಶ ಹಿಂಪಡೆಯಬೇಕು. ಹಿಂದೆ ಇದ್ದಂತೆ ಆ ಡಾಕ್ಟರ್ ಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.