ಕನ್ನಡದ ಕೋಟ್ಯಧಿಪತಿಯಿಂದ ಪುನೀತ್​​​ಗೆ ಸಿಕ್ಕಿದ್ದ ಸಂಭಾವನೆ ಎಷ್ಟು? ಅದರಿಂದ ಅವರು ಮಾಡಿದ್ದೇನು?

ಕನ್ನಡದ ಕೋಟ್ಯಧಿಪತಿಯಿಂದ ಪುನೀತ್​​​ಗೆ ಸಿಕ್ಕಿದ್ದ ಸಂಭಾವನೆ ಎಷ್ಟು? ಅದರಿಂದ ಅವರು ಮಾಡಿದ್ದೇನು?

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ನಟನೆ, ಗಾಯನ, ಸಿನಿಮಾ ನಿರ್ಮಾಣ ಮಾತ್ರವಲ್ಲದೇ ಅವರು ನಿರೂಪಕನಾಗಿಯೂ ಜನಪ್ರಿಯತೆ ಪಡೆದುಕೊಂಡಿದ್ದು ಗೊತ್ತೇ ಇದೆ. ‘ಕನ್ನಡದ ಕೋಟ್ಯಧಿಪತಿ’ ಶೋನ ಅವರು ನಡೆಸಿಕೊಟ್ಟಿದ್ದರು. ಈ ಶೋ ನಡೆಸಿಕೊಟ್ಟಿದ್ದಕ್ಕೆ ಅವರಿಗೆ ಒಳ್ಳೆಯ ಸಂಭಾವನೆ ಸಿಕ್ಕಿತ್ತು. ಇದನ್ನು ಅವರು ಧರ್ಮದ ಕೆಲಸಕ್ಕೆ ಬಳಸಿಕೊಂಡಿದ್ದರು.

‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಿಂದ ಪುನೀತ್​​ ಅವರಿಗೆ ಸಿಕ್ಕಿದ್ದು ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಆಗಿತ್ತು. ಈ ಬಗ್ಗೆ ಭಗವಾನ್​ ಹೇಳಿದ್ದರು. ಪುನೀತ್​ ಅವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದವರು. ಮೈಸೂರಿನಲ್ಲಿ ಶಕ್ತಿಧಾಮ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ತಮ್ಮ ಕೈಗೆ ಸಂಭಾವನೆ ರೂಪದಲ್ಲಿ ಬಂದ ಆ 8 ಕೋಟಿ ರೂಪಾಯಿಯನ್ನು ಮಕ್ಕಳ ಶಿಕ್ಷಣಕ್ಕಾಗಿ ಅಪ್ಪು ಮೀಸಲಿಟ್ಟರು.

ಡಾ. ರಾಜ್​ಕುಮಾರ್​ ಕುಟುಂಬದ ಜೊತೆ ನಿರ್ದೇಶಕ ದೊರೆ-ಭಗವಾನ್​ ಅವರಿಗೆ ಮೊದಲಿನಿಂದಲೂ ಒಡನಾಟ ಇದೆ. ಪುನೀತ್​ ರಾಜ್​ಕುಮಾರ್​ ಅವರನ್ನು ಹತ್ತಿರದಿಂದ ಕಂಡಂತಹ ವ್ಯಕ್ತಿಗಳಲ್ಲಿ ಅವರು ಕೂಡ ಪ್ರಮುಖರು. ಟಿವಿ9ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಗವಾನ್​ ಅವರು ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಕ್ತಿಧಾಮದ ಮಕ್ಕಳ ಶಿಕ್ಷಣಕ್ಕಾಗಿ ಪುನೀತ್​ ರಾಜ್​ಕುಮಾರ್​ ಅವರು ತಮ್ಮ 8 ಕೋಟಿ ರೂಪಾಯಿ ಸಂಭಾವನೆಯನ್ನು ಮೀಸಲಿಟ್ಟರು ಎಂಬ ವಿಚಾರವನ್ನು ಭಗವಾನ್​ ತೆರೆದಿಟ್ಟಿದ್ದಾರೆ.

‘ಕನ್ನಡದ ಕೋಟ್ಯಧಿಪತಿ ಪುನೀತ್ ಅವರಿ​ಗೆ 8 ಕೋಟಿ ರೂಪಾಯಿ ಸಂಭಾವನೆ ಬಂತು. ಅದನ್ನು ಶಕ್ತಿಧಾಮಕ್ಕೆ ಅವರು ಕೊಟ್ಟಿದ್ದರು. ಶಕ್ತಿಧಾಮದಲ್ಲಿ ನೂರಾರು ಮಕ್ಕಳು ಇದ್ದಾರೆ. ಎಲ್ಲರೂ ಬೇರೆ ಬೇರೆ ಶಾಲೆಗೆ ಹೋಗುತ್ತಾರೆ. ಮಕ್ಕಳಿಗಾಗಿ ಶಕ್ತಿಧಾಮದಲ್ಲಿಯೇ ಒಂದು ಶಾಲೆಯನ್ನು ಕಟ್ಟಿಸಬಹುದಲ್ಲ ಎಂಬ ಆಲೋಚನೆ ಪುನೀತ್ ಅವರದ್ದಾಗಿತ್ತು. ಹೀಗಾಗಿ, ನಂತರ ಶಾಲೆ ಆರಂಭಿಸಲಾಯಿತು’ ಎಂದು ಭಗವಾನ್ ಹೇಳಿದ್ದರು.

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ ಸಿನಿಮಾ ‘ಮಿಲನ’ ಸುಂದರಿ ಪಾರ್ವತಿ ಮೆನನ್ ಈಗೇನು ಮಾಡುತ್ತಿದ್ದಾರೆ ಗೊತ್ತಾ?

‘ಶಕ್ತಿಧಾಮ’ದ ಶಾಲೆ ಕೇವಲ ಹೆಣ್ಣುಮಕ್ಕಳಿಗೆ ಮಾತ್ರ. ಶಕ್ತಿಧಾಮದ ಮಕ್ಕಳು ಈ ಶಾಲೆಯಲ್ಲೇ ಓದಬೇಕು ಎಂಬುದು ಪುನೀತ್ ಶರತ್ತಾಗಿತ್ತು. ಹೊರಗಡೆಯಿಂದ ಬರುವ ಬಡ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಬೇಕು ಎಂದು ಪುನೀತ್ ತಿಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Video: ಮನೆ ಮುಂದೆ ಬಂದು ನಿಂತ ಹಸುವಿನ ಹಸಿವು ನೀಗಿಸಿದ ಪುಟಾಣಿ

ಈ ಪುಟ್ಟ ಮಕ್ಕಳು (little kids) ತಮ್ಮ ಕೈಯಲ್ಲಿ ಏನಾದ್ರೂ ತಿಂಡಿ ತಿನಿಸು ಇದ್ರೆ ಮನೆಯ ಬೆಕ್ಕು, ನಾಯಿಗೂ ಹಾಕಿ ತಾನು ತಿನ್ನುವುದನ್ನು ನೋಡಿರುತ್ತೇವೆ. ಕೆಲವೊಮ್ಮೆ ಅವುಗಳನ್ನು ತಿನ್ನದಿದ್ದರೆ ತಿನ್ನು ತಿನ್ನು ಎಂದು ಗದರುವ ದೃಶ್ಯಗಳು ಮುದ್ದು ಮುದ್ದಾಗಿ ಕಾಣುತ್ತದೆ. ಇಂತಹ ವಿಡಿಯೋಗಳನ್ನು ನೋಡುವಾಗ ನಗು ತಡೆದುಕೊಳ್ಳಲಾಗುವುದಿಲ್ಲ. ಆದರೆ ಇದೀಗ ಇಲ್ಲೊಂದು ಪುಟಾಣಿಯೂ ಮನೆಬಾಗಿಲಿನ ಮುಂದೆ ಬಂದು ನಿಂತ ಗೋವಿಗೆ ಕೈಯಲ್ಲಿದ್ದ ಚಪಾತಿ ಕೊಟ್ಟು ಹಣೆ ಮುಟ್ಟಿ ಆಶೀರ್ವಾದ ಪಡೆದುಕೊಂಡಿದೆ. ಈ ಮುದ್ದಾದ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಗೋಮಾತೆ ರಾಷ್ಟ್ರಧರ್ಮ (Gomathe Rastradharma) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಮನೆಯ ಬಾಗಿಲಿನ ಮುಂದೆ ನಿಂತ ಗೋಮಾತೆ ಹಸಿವು ನೀಗಿಸಿದೆ. ಪುಟ್ಟ ಮಗುವು ಕೈಯಲ್ಲಿ ಹಿಡಿದುಕೊಂಡು ಮೆಲ್ಲನೆ ನಡೆದುಕೊಂಡು ಬಂದಿದೆ. ಆ ಚಪಾತಿ ಬಳಿಕ ಹಸುವಿಗೆ ತಿನ್ನಲು ಕೊಟ್ಟು ಹಣೆ ಮುಟ್ಟಿ ನಮಸ್ಕಾರ ಪಡೆದುಕೊಂಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಹುಡುಗಿ ಐಸ್ ಕ್ರೀಮ್ ಕೊಟ್ಟಿದ್ದಕ್ಕೆ ಮುತ್ತು ಕೊಟ್ಟು ಥ್ಯಾಂಕ್ಸ್ ಹೇಳಿದ ಗಜರಾಜ

ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುಗ್ಧ ಮಗುವಿನ ಮನಸ್ಸು ಎಂದು ಹೇಳಿದ್ದಾರೆ. ಇನ್ನೊಬ್ಬರು, ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಪುಟಾಣಿಯ ಒಳ್ಳೆಯ ಮನಸ್ಸಿಗೆ ನನ್ನದೊಂದು ಸಲಾಂ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Ugadi 2026: ಯುಗಾದಿ ಬಳಿಕ ಈ ರಾಶಿಯ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪ್ರತಿಷ್ಠೆ ದೊರೆಯುವ ಯೋಗ

ಹಿಂದೂ ಪಂಚಾಂಗದ ಪ್ರಕಾರ, 2026ರ ಯುಗಾದಿ ಹಬ್ಬವನ್ನು ಮಾರ್ಚ್ 19 ಗುರುವಾರದಂದು ಆಚರಿಸಲಾಗುತ್ತಿದೆ. ಈ ವರ್ಷ 12 ರಾಶಿಗಳ ಪೈಕಿ ಕೆಲವು ರಾಶಿಗಳಿಗೆ ಸಾಕಷ್ಟು ಶುಭ ಫಲಗಳು ಒದಗಿಬರಲಿದೆ. ಅದರಲ್ಲೂ ಕುಂಭ ರಾಶಿಯ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪ್ರತಿಷ್ಠೆ ದೊರೆಯುವ ಯೋಗವಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ.

ಕುಂಭ ರಾಶಿಯವರಿಗೆ ಗುರುವು ಐದನೇ ಮನೆಯಿಂದ ಆರನೇ ಮನೆಗೆ ಸಾಗಲಿದ್ದಾನೆ. ಶನಿ ಗ್ರಹವು ವರ್ಷ ಪೂರ್ತಿ ಎರಡನೇ ಮನೆಯಲ್ಲೇ ಇರುತ್ತದೆ. ರಾಹು ಗ್ರಹ ಒಂದನೇ ಮನೆಯಿಂದ ವ್ಯಯ ಸ್ಥಾನವಾದ 12ನೇ ಮನೆಗೆ ಬರುತ್ತಾನೆ, ಮತ್ತು ಕೇತು ಗ್ರಹ ಏಳನೇ ಮನೆಯಿಂದ ಆರನೇ ಮನೆಗೆ ಪ್ರವೇಶಿಸಲಿದ್ದಾನೆ. ಕುಂಭ ರಾಶಿಯವರು ಸಾಡೆ ಸಾತಿಯ ಕಟ್ಟ ಕಡೆಯ ಭಾಗದಲ್ಲಿರುವುದರಿಂದ, ಈ ವರ್ಷದಲ್ಲಿ ಅವರಿಗೆ ದೊಡ್ಡ ಕಷ್ಟಗಳಿಂದ ಕೊಂಚ ಸಡಿಲಿಕೆ ಸಿಗುವ ಸಾಧ್ಯತೆ ಇದೆ ಎಂದು ಗುರೂಜಿ ತಿಳಿಸಿದ್ದಾರೆ.

ಈ ವರ್ಷ ಕುಂಭ ರಾಶಿಯವರಿಗೆ ಆದಾಯ 6 ಮತ್ತು ವ್ಯಯ 4 ರ ಅನುಪಾತದಲ್ಲಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ಉತ್ತಮ ಆರೋಗ್ಯದ ಅಂಶ 8 ಇದ್ದರೆ, ಅನಾರೋಗ್ಯದ ಅಂಶ 3 ಇರುತ್ತದೆ. ಸುಖ ಮತ್ತು ದುಃಖಗಳ ಪ್ರಮಾಣವನ್ನು ನೋಡಿದಾಗ, 7 ಭಾಗ ಸುಖ ಮತ್ತು 3 ಭಾಗ ದುಃಖ ಇರಲಿದೆ. ಒಟ್ಟಾರೆ, 2026ರ ಪರಾಭವನಾಮ ಸಂವತ್ಸರವು ಕುಂಭ ರಾಶಿಯವರಿಗೆ ಉತ್ಸಾಹ, ಚೈತನ್ಯ ಮತ್ತು ಅಭಿವೃದ್ಧಿಯ ವರ್ಷ ಎಂದು ಗುರೂಜಿ ಹೇಳಿದ್ದಾರೆ.

ಕುಟುಂಬ, ಸಂಬಂಧಗಳು ಮತ್ತು ವೃತ್ತಿಜೀವನ:

ಸಾಂಸಾರಿಕ ದುಃಖಗಳು ದೂರಾಗಿ, ಕುಟುಂಬದಲ್ಲಿ ಪ್ರಗತಿ ಕಂಡುಬರುತ್ತದೆ. ಅಣ್ಣತಮ್ಮಂದಿರು ಮತ್ತು ಕುಟುಂಬದ ಸದಸ್ಯರ ಬೆಂಬಲ ಚೆನ್ನಾಗಿರುತ್ತದೆ. ಗುರು ಅನುಗ್ರಹವೂ ಇರುವುದರಿಂದ, ಬಾಂಧವ್ಯಗಳು ಉತ್ತಮವಾಗಿರುತ್ತವೆ. ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ ಮತ್ತು ಆರ್ಥಿಕವಾಗಿ ಉತ್ತಮ ಪ್ರಗತಿ ಕಾಣುವಿರಿ. ಅಧಿಕಾರ ಪ್ರಾಪ್ತಿಯ ಯೋಗವೂ ಇದೆ. ಹೊಸ ಉದ್ಯೋಗದ ಅನುಭವಗಳು ಲಭಿಸುತ್ತವೆ, ವಿಶೇಷವಾಗಿ ರೈಲ್ವೆ, ಎಲೆಕ್ಟ್ರಾನಿಕ್, ಸಾಫ್ಟ್‌ವೇರ್, ವಿದ್ಯುತ್ ಮತ್ತು ನೀರಾವರಿ ಇಲಾಖೆಗಳಂತಹ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸಿಗಬಹುದು. ಕೆಲವರು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ವರ್ಗಾವಣೆಗೊಳ್ಳಬಹುದು. ರಾಜಕೀಯ ವ್ಯಕ್ತಿಗಳಿಗೆ ಕೆಲವೊಂದು ಸಂಕಷ್ಟಗಳು ಎದುರಾಗುವ ಸಾಧ್ಯತೆಗಳಿದ್ದರೂ, ದುರಾಸೆಯನ್ನು ಬಿಟ್ಟುಬಿಡುವಂತೆ ಸೂಚಿಸಲಾಗಿದೆ. ಸಾಲಬಾಧೆ ತೀರಿಸಿಕೊಳ್ಳುವಿರಿ.

ವ್ಯಾಪಾರ, ವಿವಾಹ ಮತ್ತು ಇತರ ಕ್ಷೇತ್ರಗಳು:

ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಕ್ರೀಡಾಪಟುಗಳು ಮತ್ತು ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪ್ರತಿಷ್ಠೆಗಳು ದೊರೆಯುವ ಯೋಗವಿದೆ. ರೈತರು, ಗುತ್ತಿಗೆದಾರರು ಮತ್ತು ವ್ಯಾಪಾರಸ್ಥರಿಗೆ ಈ ವರ್ಷ ಅತ್ಯಂತ ಲಾಭದಾಯಕವಾಗಿರುತ್ತದೆ. ವಿವಾಹ ಯೋಗವು ತುಂಬಾ ಚೆನ್ನಾಗಿದ್ದರೂ, ಪ್ರೇಮ ವ್ಯವಹಾರಗಳಿಗೆ ಈ ವರ್ಷ ಅಷ್ಟು ಉತ್ತಮವಾಗಿಲ್ಲ. ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಸಣ್ಣ ಪ್ರಮಾಣದ ಆರ್ಥಿಕ ಆತಂಕಗಳು ಎದುರಾಗುವ ಸಾಧ್ಯತೆ ಇದೆ. ಸಾಲ ಮಂಜೂರಾತಿ, ಹೊಸ ಸಂಸ್ಥೆಗಳ ಸ್ಥಾಪನೆ ಮತ್ತು ರಾಜಕೀಯವಾಗಿ ಪ್ರಗತಿ ಕಂಡುಬರುತ್ತದೆ. ತಂದೆ-ತಾಯಿಗಳ ಅಗಲಿಕೆ ಅಥವಾ ಅವರ ಅನಾರೋಗ್ಯದ ಚಿಂತೆ ಕಾಡುವ ಸಾಧ್ಯತೆ ಇದೆ. ಕುಂಭ ರಾಶಿಯ ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಅಥವಾ ಪ್ಯಾಕೇಜ್ ಬದಲಾವಣೆ ಕಂಡುಬರಲಿದೆ. ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವ ಯೋಗವಿದೆ. ಸರ್ಕಾರಿ ನೌಕರರಿಗೆ ಉತ್ತಮವಾಗಿದ್ದು, ಹಳೆ ಬಾಕಿಗಳು ವಸೂಲಿಯಾಗುತ್ತವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ದೊಡ್ಡ ಕಷ್ಟಗಳಲ್ಲಿ ಸಿಲುಕಿದವರಿಗೆ, ಜೈಲು ವಾಸ ಅನುಭವಿಸಿದವರಿಗೂ ಸಹ ಜುಲೈ-ಆಗಸ್ಟ್‌ನಿಂದ ಸ್ವಲ್ಪ ಅನುಕೂಲ ಮತ್ತು ಸಡಿಲಿಕೆ ಸಿಗಲಿದೆ. ನಂಬಿಕೆ ದ್ರೋಹವಾಗುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ವಹಿಸಿ. ಮಡದಿಯ ಉದ್ಯೋಗದಲ್ಲಿ ಬಡ್ತಿ, ಹೆಣ್ಣುಮಕ್ಕಳಿಂದ ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಯೋಗವಿದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಶುಭಫಲಗಳು ಮತ್ತು ಪರಿಹಾರಗಳು:

ಈ ವರ್ಷದಲ್ಲಿ ಕುಂಭ ರಾಶಿಯವರಿಗೆ ಶೇ.70 ರಷ್ಟು ಶುಭ ಫಲಗಳು ದೊರೆಯುವ ಸಾಧ್ಯತೆ ಇದೆ. ಬುಧವಾರ ಮತ್ತು ಶುಕ್ರವಾರಗಳು ಅದೃಷ್ಟದ ದಿನಗಳಾಗಿದ್ದು, ವರ್ಷ ಪೂರ್ತಿ ಶುಭ ಫಲಗಳನ್ನು ತರುತ್ತವೆ. ಕೇಸರಿ, ಬೂದು ಮತ್ತು ತಿಳಿ ಬಣ್ಣಗಳನ್ನು ಹೆಚ್ಚು ಬಳಸುವುದರಿಂದ ಒಳ್ಳೆಯದಾಗುತ್ತದೆ.

ಅಶ್ವತ್ಥ ವೃಕ್ಷ ದರ್ಶನ, ಅಶ್ವತ್ಥ ಕಟ್ಟೆಯ ದರ್ಶನ, ನಾಗರ ದರ್ಶನ ಮತ್ತು ನವನಾಗ ಸ್ತೋತ್ರ (ಅನಂತಂ ವಾಸುಕಿಂ ಶೇಷಂ ಪದ್ಮನಾಭಂಚ ಕಂಬಲಂ, ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ) ಪಠಣ ಮಾಡುವುದು ಉತ್ತಮ. ಚೌತಿ (ಕೃಷ್ಣಪಕ್ಷ ಅಥವಾ ಶುಕ್ಲಪಕ್ಷ) ಅಥವಾ ಮಂಗಳವಾರದಂದು ನಾಗರ ಕಲ್ಲಿಗೆ ಹಾಲನ್ನು ಎರೆದು ಅಥವಾ ನಾಗನ ದರ್ಶನ ಮಾಡಿಕೊಳ್ಳುವುದು ಶುಭಕರ. ಪ್ರತಿದಿನ “ಓಂ ಅನಂತಾಯ ನಮಃ” ಮಂತ್ರವನ್ನು ಜಪಿಸುವುದರಿಂದಲೂ ಸಾಕಷ್ಟು ಶುಭ ಫಲಗಳು ಸಿಗುತ್ತವೆ. ಅನ್ನದಾನವನ್ನು ಹೆಚ್ಚಾಗಿ ಮಾಡಬೇಕು. ನಾಗರ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸುವುದು ಒಳ್ಳೆಯದು. ಸಾಡೆ ಸಾತಿಯ ಕೊನೆಯ ಭಾಗವಿರುವುದರಿಂದ, ಕಾಳಹಸ್ತಿ, ಕುಕ್ಕೆ ಅಥವಾ ಘಾಟಿ ದರ್ಶನ ಮಾಡಿಕೊಳ್ಳುವುದು ತುಂಬಾ ಶುಭಕರ ಎಂದು ಡಾ. ಬಸವರಾಜ ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿ ಹಂಡ್ರೆಡ್ ಲೀಗ್​ನ 8 ತಂಡಗಳು ಪ್ರಕಟ

Source link

ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಇದ್ರೂ ನೋ ಟೆನ್ಶನ್: ಗಮನ ಸೆಳೆಯುತ್ತಿದೆ ಪೊಲೀಸ್​ ಕಾನ್​ಸ್ಟೇಬಲ್ ಮನೆಯ ಬಯೋಗ್ಯಾಸ್ ಪದ್ಧತಿ

ರಾಯಚೂರು, ಮಾರ್ಚ್ 17: ಎಲ್​ಪಿಜಿ ಸಿಲಿಂಡರ್ ಕೊರತೆ ರಾಜ್ಯಾದ್ಯಂತ ಜನರನ್ನು ತೀವ್ರವಾಗಿ ಕಾಡುತ್ತಿರುವ ಸಮಯದಲ್ಲಿ, ರಾಯಚೂರಿನ ಕಾನ್​ಸ್ಟೇಬಲ್ ವಿನೋದ್ ಬಯೋಗ್ಯಾಸ್ ಪದ್ಧತಿ ಅಳವಡಿಸಿ ಗಮನ ಸೆಳೆದಿದ್​ದಾರೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಎಲ್​ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಅನೇಕ ಕಡೆಗಳಲ್ಲಿ ಜನ ಕಿಲೋಮೀಟರ್‌ಗಟ್ಟಲೆ ಸರತಿಯಲ್ಲಿ ನಿಂತು ಪರದಾಡುತ್ತಿರುವಂಥ ಸ್ಥಿತಿ ಇದೆ. ವಿನೋದ್ ಅವರು ಕಳೆದ ಎರಡು ವರ್ಷಗಳಿಂದ ಮನೆಯ ದೈನಂದಿನ ಅಡುಗೆಗೆ ಬಯೋಗ್ಯಾಸ್ ಬಳಸುತ್ತಿದ್ದು, ಇದು ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇದು ಈಗ ಗಮನ ಸೆಳೆದಿದೆ.

ಕೇವಲ 10,500 ರೂ. ವೆಚ್ಚದಲ್ಲಿ 1000 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಟ್ಯಾಂಕ್ ಬಳಸಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಇದು ಗೃಹ ತ್ಯಾಜ್ಯ, ಹಣ್ಣು, ತರಕಾರಿ ತ್ಯಾಜ್ಯದಿಂದ ಅನಿಲ ಉತ್ಪಾದಿಸುತ್ತದೆ. ಇದು ಎಲ್​ಪಿಜಿ ಸಿಲಿಂಡರ್‌ನಂತೆಯೇ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತದೆ. ವಿನೋದ್ ಅವರ ಈ ಮಾದರಿ ಪದ್ಧತಿಯನ್ನು ವೀಕ್ಷಿಸಲು ಮತ್ತು ಮಾಹಿತಿ ಪಡೆಯಲು ಈಗ ಸಾಕಷ್ಟು ಮಂದಿ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಬಯೋಗ್ಯಾಸ್ ಪದ್ಧತಿಯು ಕನಿಷ್ಠ 25-30 ವರ್ಷಗಳ ಬಾಳಿಕೆ ಬರಲಿದ್ದು, ಆರ್ಥಿಕವಾಗಿ ಮತ್ತು ಪರಿಸರ ಸ್ನೇಹಿಯಾಗಿ ಉತ್ತಮ ಪರ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Sunil Gavaskar: ಪಾಕ್ ಆಟಗಾರನ ಖರೀದಿ, ಸೈನಿಕರ ಸಾವಿಗೆ ಪರೋಕ್ಷ ಕೊಡುಗೆ..!

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್​ಗೆ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕಾಲಿಟ್ಟಿದೆ. ಈ ಲೀಗ್​ನಲ್ಲಿ ಸನ್​ರೈಸರ್ಸ್ ಲೀಡ್ಸ್ ತಂಡವನ್ನು ಕಣಕ್ಕಿಳಿಸುತ್ತಿರುವ ಸನ್​ ಗ್ರೂಪ್ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಆಕ್ರೋಶಕ್ಕೆ ಕಾರಣ ಸನ್​ರೈಸರ್ಸ್​ ಲೀಡ್ಸ್ ತಂಡವು ಪಾಕಿಸ್ತಾನ್ ತಂಡದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದು. ಇದೀಗ ಈ ಖರೀದಿಯನ್ನು ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಟೀಕಿಸಿದ್ದಾರೆ.

ದಿ ಹಂಡ್ರೆಡ್ ಲೀಗ್​ 2026ರ ಹರಾಜಿನಲ್ಲಿ ಸನ್ ರೈಸರ್ಸ್ ಲೀಡ್ಸ್ ತಂಡವು ಅಬ್ರಾರ್ ಅಹ್ಮದ್ ಅವರನ್ನು ಸುಮಾರು ₹2.34 ಕೋಟಿ (£1,90,000) ನೀಡಿ ಖರೀದಿಸಿದೆ. ಈ ಖರೀದಿ ಬಗ್ಗೆ ‘ಮಿಡ್-ಡೇ’ ಪತ್ರಿಕೆಯಲ್ಲಿ ಬರೆದ ಅಂಕಣದಲ್ಲಿ ಪ್ರಸಾಪಿಸಿರುವ ಸುನಿಲ್ ಗವಾಸ್ಕರ್, ಇದು ಭಾರತೀಯ ಸೈನಿಕರ ಸಾವಿಗೆ ಪರೋಕ್ಷ ಕೊಡುಗೆ! ಎಂದು ಆಕ್ರೋಶ ಹೊರಹಾಕಿದ್ದಾರೆ.

ಪಾಕಿಸ್ತಾನಿ ಆಟಗಾರರು ಗಳಿಸುವ ಹಣದ ಮೇಲೆ ಆ ದೇಶದ ಸರ್ಕಾರ ತೆರಿಗೆ ವಿಧಿಸುತ್ತದೆ. ಆ ಹಣವನ್ನು ಭಾರತೀಯ ಸೈನಿಕರ ವಿರುದ್ಧ ಬಳಸುವ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಗುತ್ತದೆ.

ಅಂದರೆ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನೀಡುವ ಮೊತ್ತದಲ್ಲಿ ಪಾಕ್ ಸರ್ಕಾರಕ್ಕೂ ಪಾಲು ಹೋಗುತ್ತದೆ. ಹೀಗಾಗಿ ಈ ಒಪ್ಪಂದವು “ಭಾರತೀಯ ಸೈನಿಕರು ಮತ್ತು ನಾಗರಿಕರ ಸಾವಿಗೆ ಪರೋಕ್ಷವಾಗಿ ಕೊಡುಗೆ ನೀಡುತ್ತದೆ” ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ನಿಮಗೆ ಗೆಲುವು ಮುಖ್ಯವೋ ಅಥವಾ ಭಾರತೀಯರ ಜೀವ ಮುಖ್ಯವೋ ಎಂದು ಸುನಿಲ್ ಗವಾಸ್ಕರ್ ಎಸ್​ಆರ್​ಹೆಚ್​ ಮಾಲೀಕರನ್ನು ಪ್ರಶ್ನಿಸಿದ್ದಾರೆ. ವಿದೇಶಿ ಕೋಚ್‌ಗಳಿಗೆ ಭಾರತದ ಭಾವನೆಗಳು ತಿಳಿಯದಿರಬಹುದು, ಆದರೆ ಭಾರತೀಯ ಮಾಲೀಕರು ಇದನ್ನು ತಡೆಯಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಸ್​ಆರ್​ಎಲ್​ ತಂಡದ ಸಮರ್ಥನೆ:

ಸನ್ ರೈಸರ್ಸ್ ಲೀಡ್ಸ್ ತಂಡದ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ, ಇದು ಕೇವಲ ಕ್ರೀಡಾ ದೃಷ್ಟಿಕೋನದಿಂದ ತೆಗೆದುಕೊಂಡ ನಿರ್ಧಾರ ಎಂದು ಸಮರ್ಥಿಸಿಕೊಂಡಿದ್ದಾರೆ. ಆದಿಲ್ ರಶೀದ್ ಅವರು ಲಭ್ಯವಿಲ್ಲದ ಕಾರಣ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಸಿಸಿಐ  ಪ್ರತಿಕ್ರಿಯೆ:

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು, ಇದು ವಿದೇಶಿ ಲೀಗ್ ಆಗಿರುವುದರಿಂದ ಭಾರತೀಯ ಕ್ರಿಕೆಟ್ ಮಂಡಳಿಯು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:

ಈ ಬೆಳವಣಿಗೆಯಿಂದಾಗಿ ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಂಡವನ್ನು ಬಹಿಷ್ಕರಿಸುವಂತೆ ಅಭಿಯಾನ ನಡೆಸುತ್ತಿದ್ದಾರೆ. ಅಬ್ರಾರ್ ಅಹ್ಮದ್ ಈ ಹಿಂದೆ ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಆತನನ್ನು ತಂಡದಿಂದ ಕೈ ಬಿಡುವಂತೆ ಸನ್​ರೈಸರ್ಸ್ ಹೈದರಾಬಾದ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: WTC ಫೈನಲ್​ಗೇರಲು ಟೀಮ್ ಇಂಡಿಯಾ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಒಟ್ಟಿನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ದಿ ಹಂಡ್ರೆಡ್ ಲೀಗ್​ನಲ್ಲಿ ತೆಗೆದುಕೊಂಡ ಒಂದು ನಿರ್ಧಾರದಿಂದ ಇಕ್ಕಟ್ಟಿಗೆ ಸಿಲುಕಿದ್ದು, ಈ ಬಗ್ಗೆ ಪುನರ್​ಪರಿಶೀಲಿಸಲು ಫ್ರಾಂಚೈಸಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

 

Source link

Daily Devotional: ಶುಭ ಸಮಾರಂಭಗಳಲ್ಲಿ ಮುಯ್ಯಿ ಕೊಡುವುದರ ಅರ್ಥ ಮತ್ತು ಮಹತ್ವ

ಹಿಂದೂ ಸನಾತನ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳಾದ ನಾಮಕರಣ, ವಿವಾಹ, ಅಥವಾ ಗೃಹಪ್ರವೇಶದಂತಹ ಸಂದರ್ಭಗಳಲ್ಲಿ ಮುಯ್ಯಿ ನೀಡುವ ಪದ್ಧತಿಯು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಇದು ಕೇವಲ ಒಂದು ಆಚರಣೆಯಾಗದೆ, ಆಳವಾದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಮಹತ್ವವನ್ನು ಹೊಂದಿದೆ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಮುಯ್ಯಿ ಎಂದರೆ ಕೇವಲ ಕೊಡುಗೆಯಲ್ಲ, ಬದಲಿಗೆ ಪ್ರೀತಿಪೂರ್ವಕವಾಗಿ, ಮನಸ್ಸಿನ ಉತ್ತಮ ಭಾವನೆಯಿಂದ ನೀಡುವ ಒಂದು ಕಾಣಿಕೆಯಾಗಿದೆ. ಅದು ಹಣದ ರೂಪದಲ್ಲಿರಬಹುದು, ವಸ್ತುವಿನ ರೂಪದಲ್ಲಿರಬಹುದು, ಯಾವುದೇ ರೀತಿಯಲ್ಲಿರಬಹುದು, ಆದರೆ ಅದರ ಹಿಂದಿರುವ ಭಾವನೆಯೇ ಪ್ರಮುಖವಾದುದು. “ಮುಯ್ಯಿ” ಎಂಬ ಪದವು ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಭಾಗವಾಗಿದೆ, ಇದು ಸಂಬಂಧಗಳನ್ನು ಬಲಪಡಿಸುವ ಮತ್ತು ಪರಸ್ಪರ ಸಹಕಾರವನ್ನು ಸೂಚಿಸುವ ಒಂದು ವಿಶಿಷ್ಟ ಪದ್ಧತಿಯಾಗಿದೆ.

ಹಿಂದಿನ ಕಾಲದಿಂದಲೂ, ಮದುವೆ ಅಥವಾ ಮನೆ ಕಟ್ಟುವಂತಹ ದೊಡ್ಡ ಕಾರ್ಯಗಳು ಕುಟುಂಬಗಳಿಗೆ ಅಪಾರ ಆರ್ಥಿಕ ಹೊರೆಯನ್ನು ತರುತ್ತಿದ್ದವು. “ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು” ಎಂಬ ನಾಣ್ಣುಡಿಯು ಈ ಕಷ್ಟಗಳನ್ನು ಎತ್ತಿ ತೋರಿಸುತ್ತದೆ. ಇಂತಹ ಸಂದರ್ಭಗಳಲ್ಲಿ, ನೆಂಟರು, ಸ್ನೇಹಿತರು ಅಥವಾ ಆತ್ಮೀಯರು ಬರಿಗೈಯಲ್ಲಿ ಹೋಗುವುದಿಲ್ಲ. ಒಂದು ಮುಯ್ಯಿ ಕವರ್‌ನಲ್ಲಿ ತಮ್ಮ ಕೈಲಾದ ಹಣವನ್ನು ಇರಿಸಿ, ಆತಿಥೇಯರ ಆರ್ಥಿಕ ಹೊರೆಗೆ ಒಂದು ಸಣ್ಣ ಸಹಾಯ ನೀಡುತ್ತಾರೆ. ಇದು ಕೇವಲ ಹಣಕಾಸಿನ ನೆರವಲ್ಲ, ಆತಿಥೇಯರ ಕಷ್ಟದಲ್ಲಿ ನಾವಿದ್ದೇವೆ ಎಂಬ ಮಾನಸಿಕ ಬೆಂಬಲವನ್ನೂ ಸೂಚಿಸುತ್ತದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಇತ್ತೀಚಿನ ದಿನಗಳಲ್ಲಿ, ಕೆಲವರು ಆಮಂತ್ರಣ ಪತ್ರಿಕೆಗಳಲ್ಲಿ “ಮುಯ್ಯಿ ಸ್ವೀಕರಿಸುವುದಿಲ್ಲ” ಎಂದು ನಮೂದಿಸುತ್ತಾರೆ. ಇದು ಅವರ ಸಂಪತ್ತನ್ನು ಸೂಚಿಸಬಹುದು, ಆದರೆ ಮುಯ್ಯಿಯ ನಿಜವಾದ ಅರ್ಥವನ್ನು ನಿರ್ಲಕ್ಷಿಸಿದಂತಾಗುತ್ತದೆ. ಮುಯ್ಯಿಯು ಕೇವಲ ಆರ್ಥಿಕ ಸಹಾಯವಲ್ಲ, ಬದಲಿಗೆ ಆಶೀರ್ವಾದ, ಶುಭ ಹಾರೈಕೆ ಮತ್ತು ಸಂಬಂಧಗಳ ಬಾಂಧವ್ಯವನ್ನು ಬಲಪಡಿಸುವ ಒಂದು ಸಂಕೇತವಾಗಿದೆ. ಆತಿಥೇಯರು ಎಷ್ಟೇ ಶ್ರೀಮಂತರಾಗಿದ್ದರೂ, ಅತಿಥಿಗಳು ನೀಡುವ ಮುಯ್ಯಿ ಕೇವಲ ಹಣವಲ್ಲ, ಅದು ಸದ್ಭಾವನೆ ಮತ್ತು ಆಶೀರ್ವಾದದ ರೂಪದಲ್ಲಿರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ, ಈ ಭಾಗದಲ್ಲಿ ಮಾತ್ರ ಬಿಸಿಗಾಳಿ

ಬೆಂಗಳೂರು, ಮಾ17: ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಬೇಗೆಯ ನಡುವೆಯೇ ವರುಣನ ಆಗಮನದ ಮುನ್ಸೂಚನೆ ಸಿಕ್ಕಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 17 ಜಿಲ್ಲೆಗಳಲ್ಲಿ ಅನಿರೀಕ್ಷಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಲಘು ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ 21°C ದಾಖಲಾಗಬಹುದು. ಮಳೆಯ ಮುನ್ಸೂಚನೆ ಒಂದೆಡೆಯಾದರೆ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಕಲ್ಬುರ್ಗಿ, ರಾಯಚೂರು ಮತ್ತು ವಿಜಯಪುರದಲ್ಲಿ ತಾಪಮಾನ ಏರಿಕೆಯಾಗಲಿದೆ. ಇಲ್ಲಿ ಗರಿಷ್ಠ ತಾಪಮಾನ 38°C ದಾಟುವ ಸಂಭವವಿದೆ.

ಇದನ್ನೂ ಓದಿ: ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ? ಶಾಸ್ತ್ರಗಳು ಹೇಳೋದೇನು ನೋಡಿ

ಕರ್ನಾಟಕದ ವಿವಿಧ ಜಿಲ್ಲೆಗಳ ತಾಪಮಾನ ಮತ್ತು ಮಳೆಯ ವಿವರ ಇಲ್ಲಿದೆ:

ಜಿಲ್ಲೆ/ನಗರ ಗರಿಷ್ಠ ತಾಪಮಾನ ಕನಿಷ್ಠ ತಾಪಮಾನ ಮಳೆ ಮುನ್ಸೂಚನೆ
ಬೆಂಗಳೂರು 33°C 19°C ಹಗುರ ಮಳೆ (40-50% ಸಂಭವನೀಯತೆ)
ಮೈಸೂರು 33°C 19°C ಹಗುರ ಮಳೆ (40% ಸಂಭವನೀಯತೆ)
ಮಂಗಳೂರು 31°C 24°C ಭಾಗಶಃ ಮೋಡ, ರಾತ್ರಿ ಮಳೆ ಸಾಧ್ಯತೆ (65%)
ಕಲಬುರಗಿ 34°C 22°C ಮೋಡ ಕವಿದ ವಾತಾವರಣ
ಬಾಗಲಕೋಟೆ 35°C 21°C ಗುಡುಗು ಸಹಿತ ಮಳೆ ಸಾಧ್ಯತೆ

ಮಳೆ ಬರುವ ಸಂದರ್ಭದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದ್ದು, ಸಾರ್ವಜನಿಕರು ಮತ್ತು ರೈತರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಲಬುರಗಿಯಲ್ಲಿ ರಾಜ್ಯದ ಅತಿ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಸೆಖೆ ಹೆಚ್ಚಿರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮಹಿಳೆ ಜತೆ ಅಕ್ರಮ ಸಂಬಂಧಕ್ಕಾಗಿ ತಡರಾತ್ರಿ ಕಂಪೌಂಡ್ ಹಾರಿದ್ದ ಪೊಲೀಸ್! ಸಿಸಿಟಿವಿ ವಿಡಿಯೋ ವೈರಲ್

ಮಂಗಳೂರು, ಮಾರ್ಚ್ 17: ದೂರು ನೀಡಲು ಬಂದ ಮಹಿಳೆಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಬಲವಂತ ಮಾಡಿರುವ ಆರೋಪ ಎದುರಿಸುತ್ತಿರುವ ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಇದೀಗ ಅನೇಕ ಆರೋಪಗಳು ಕೇಳಿಬರುತ್ತಿವೆ. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದು, ಯಾರಾದರೂ ಸಂತ್ರಸ್ತೆಯರಿದ್ದರೆ ಧೈರ್ಯವಾಗಿ ಬಂದು ದೂರು ನೀಡಿ, ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಭಯ ನೀಡಿದ್ದಾರೆ. ಆರೋಪಿ ಸಂದೇಶ್ ಹಲವಾರು ಮಹಿಳೆಯರ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ತಡರಾತ್ರಿ ಮಹಿಳೆಯೊಬ್ಬರ ಮನೆ ಕಂಪೌಂಡ್ ಹಾರಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

ಹೆಚ್ಚಿನ ವಿವರಗಳಿಗೆ ಓದಿ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ: ಸಂತ್ರಸ್ತ ಮಹಿಳೆಯ ಅಪ್ರಾಪ್ತ ಮಗಳ ಮೇಲೂ ಕಣ್ಣು! ಆಡಿಯೋ ವೈರಲ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WTC ಫೈನಲ್​ಗೇರಲು ಟೀಮ್ ಇಂಡಿಯಾ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

Source link

Exit mobile version