ಸಹಾಯ ಮಾಡಿದ ಬಳಿಕ ಒಂದು ಕಂಡೀಷನ್ ಹಾಕುತ್ತಿದ್ದ ಪುನೀತ್ ರಾಜ್​​ಕುಮಾರ್ 

Puneeth Rajkumar Birthday: ಪುನೀತ್ ರಾಜ್​​ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಅವರು ಇಂದು ಬದುಕಿದ್ದರೆ ಅಭಿಮಾನಿಗಳು ಅದ್ದೂರಿಯಾಗು ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದರು. ಅವರು ಇಲ್ಲದೆ ಇರುವುದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಇದೆ. ಪುನೀತ್ ರಾಜ್ಕುಮಾರ್ ಅವರು ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾಗಿದ್ದರು. ಈ ವೇಳೆ ಅವರು ಹಲವರ ಸಹಾಯಕ್ಕೆ ನಿಂತಿದ್ದರು. ಈ ಬಗ್ಗೆ ಯಾರೊಬ್ಬರಿಗೂ ಅವರು ಹೇಳಿಕೊಳ್ಳುತ್ತಾ ಇರಲಿಲ್ಲ ಎಂಬುದು ವಿಶೇಷ.

ಪುನೀತ್ ರಾಜ್​​ಕುಮಾರ್ ಅವರು ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾದಾಗ ಹಲವು ಜನರಿಗೆ ಸಹಾಯ ಮಾಡಿದ್ದರು. ಕಷ್ಟದಲ್ಲಿದ್ದು ಬಂದ ಅನೇಕರು ಗೆಲುವು ಕಾಣುತ್ತಿರಲಿಲ್ಲ. ಅಂಥವರಿಗೆ ಪುನಿತ್ ಸಹಾಯ ಮಾಡುತ್ತಿದ್ದರಂತೆ. ಆದರೆ, ಈ ಬಗ್ಗೆ ಯಾರೊಬ್ಬರಿಗೂ ಹೇಳದಂತೆ ಅವರು ಕಂಡೀಷನ್ ಹಾಕುತ್ತಿದ್ದಾರೆ. ಇದು ಅವರ ಹೆಚ್ಚುಗಾರಿಕೆ.

ಇನ್ನು, ಅವರ ಕೊನೆಯ ಪ್ರಾಜೆಕ್ಟ್ ‘ಗಂಧದ ಗುಡಿ’ ಸಾಕಷ್ಟು ಗಮನ ಸೆಳೆಯಿತು. ಈ ಪ್ರಾಜೆಕ್ಟ್​​ ಶೂಟ್​​​ಗಾಗಿ ಅವರು ಉತ್ತರ ಕನ್ನಡ, ಚಾಮರಾಜ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಸುತ್ತಾಟ ನಡೆಸಿದ್ದರು. ಈ ವೇಳೆ ಸೆಟ್​ಗೆ ಸಹಾಯಕ್ಕೆ ಬಂದ ಅನೇಕರಿಗೆ ಅವರು ಸಹಾಯ ಮಾಡುತ್ತಿದ್ದರು.

ಪುನೀತ್ ಅವರು 13 ವರ್ಷಗಳ ಕಾಲ ಉಚಿತವಾಗಿ ಕೆಎಂಎಫ್‌ನ ರಾಯಭಾರಿಯಾಗಿದ್ದರು. ಪ್ರವಾಹ, ಕೊವಿಡ್‌ ಹೀಗೆ ಪ್ರಕೃತಿ ವಿಕೋಪಗಳ ಸಮಯದಲ್ಲಿ ಅಪ್ಪು ಹಣವನ್ನು ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ನೀಡಿದ ಹಲವು ಉದಾಹರಣೆಗಳು ಇವೆ. ಇದು ಅಚರ ಹೆಚ್ಚುಗಾರಿಕೆ. ‘ಶಿಕ್ಷಣದ ಹಕ್ಕು’ ಜಾಹೀರಾತಿನಲ್ಲಿಯೂ ಸಂಭಾವನೆ ಪಡೆಯದೇ ನಟಿಸಿದ್ದರು. ಡಾ. ರಾಜಕುಮಾರ್‌ ಟ್ರಸ್ಟ್‌ ಮೂಲಕ ಹೆಣ್ಣುಮಕ್ಕಳ ಶೇಯೋಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಇನ್ನೂ ಸಾಕಷ್ಟು ಸಹಾಯವನ್ನು ಅವರು ಮಾಡಿದ್ದಾರೆ. ಆದರೆ, ಅನೇಕ ವಿಷಯಗಳು ಹೊರಗೆ ಬಂದಿಲ್ಲ.

ಇದನ್ನೂ ಓದಿ: ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್​​ಕುಮಾರ್

ಇಂದು ಕುಟುಂಬದವರು ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇಡೀ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರೋ ಸಮಾಧಿ ಬಳಿ ತೆರಳಲಿದೆ. ಅಭಿಮಾನಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ತ್ರಿಷಾ ಬರ್ತ್​​​ಡೇ ದಿನ ದಳಪತಿ ವಿಜಯ್ ರಾಜಕೀಯ ಭವಿಷ್ಯ; ಚುನಾವಣೆಗೂ ಮುನ್ನವೇ ಡಿವೋರ್ಸ್?

ಸದ್ಯ ತಮಿಳುನಾಡು ಚುನಾವಣಾ ದಿನಾಂಕ ಘೋಷಣೆ ಆಗಿದೆ. ಏಪ್ರಿಲ್ 23ರಂದು ಒಂದೇ ಹಂತದಲ್ಲಿ ರಾಜ್ಯದ 234 ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ. ದಳಪತಿ ವಿಜಯ್ ಅವರ ಟಿವಿಕೆ (ತಮಿಳಗ ವೆಟ್ರಿ ಕಳಗಮ್) ಪಕ್ಷ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಹೀಗಿರುವಾಗಲೇ ಕೆಲವೊಂದು ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ವಿಜಯ್ ಅವರು ಚುನಾವಣೆಗೂ ಮೊದಲೇ ಡಿವೋರ್ಸ್ ಪಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಕಾಡಿದೆ. ತ್ರಿಷಾ ಬರ್ತ್​​​ಡೇ ದಿನ ವಿಜಯ್ (Vijay) ರಾಜಕೀಯ ಭವಿಷ್ಯ ನಿರ್ಧಾರ ಆಗಲಿದೆ.

ವಿಜಯ್ ಅವರ ಪತ್ನಿ ಸಂಗೀತಾ ಅವರು ಒಂದು ಗಂಭಿರ ಆರೋಪವನ್ನು ಮಾಡಿದ್ದಾರೆ. ವಿಜಯ್​​ಗೆ ನಟಿ ಜೊತೆ ಅಕ್ರಮ ಸಂಬಂಧ ಇದೆ ಎಂದು ಹೇಳಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಆ ನಟಿ ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ತ್ರಿಷಾ ಜೊತೆ ವಿಜಯ್ ಆಪ್ತತೆ ಬೆಳೆಸಿಕೊಂಡಿರುವುದರಿಂದ ಆ ನಟಿಯ ಮೇಲೆ ಆರೋಪ ಹೆಚ್ಚಿದೆ. ಸಂಗೀತಾ ಸಲ್ಲಿಕೆ ಮಾಡಿರುವ ಡಿವೋರ್ಸ್ ಅರ್ಜಿ ವಿಚಾರಣೆ ಕೌಟುಂಬಿಕ ನ್ಯಾಯಾಲಯದಲ್ಲಿ ಏಪ್ರಿಲ್ 20ರಂದು ನಡೆಯಲಿದೆ.

ಒಂದೊಮ್ಮೆ ಕೋರ್ಟ್ ಅರ್ಜಿ ವಿಚಾರಣೆ ನಡೆಸಿ, ಇಬ್ಬರೂ ಸಮ್ಮತಿಸಿದರೆ ಏಪ್ರಿಲ್ 20ರಂದೇ ಡಿವೋರ್ಸ್ ಸಿಗಲಿದೆಯೇ ಎಂಬ ಪ್ರಶ್ನೆ ಅನೇಕರದ್ದು. ಈ ವಿಚಾರಣೆ ಮುಗಿದ ಮೂರೇ ದಿನಕ್ಕೆ ಅಂದರೆ, ಏಪ್ರಿಲ್ 23ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 20ರಂದು ವಿಜಯ್ ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಇರುವುದರಿಂದ ಅವರು ಇಲ್ಲಿಗೆ ಹಾಜರಿ ಹಾಕುತ್ತಾರಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಅವರು ಈ ವಿಚಾರಣೆಯನ್ನು ಮುಂದಕ್ಕೆ ಹಾಕಿಕೊಳ್ಳುವಂತೆ ಮನವಿ ಮಾಡಬಹುದು.

ಇದನ್ನೂ ಓದಿ: ‘ನನಗೆ ವಿಚ್ಛೆದನ ಬಗ್ಗೆ ನಂಬಿಕೆ ಇಲ್ಲ, ಮದುವೆಗೂ ಮೊದಲು ನೂರು ಬಾರಿ ಯೋಚಿಸುವೆ’; ತ್ರಿಷಾ

ಇನ್ನು, ಮೇ 4 ತ್ರಿಷಾ ಜನ್ಮದಿನ. ಇದೇ ದಿನದಂದು ತಮಿಳುನಾಡು ಚುನಾವಣೆ ಫಲಿತಾಂಶ ಹೊರ ಬೀಳಲಿದೆ ಎಂಬುದು ವಿಶೇಷ. ಈ ದಿನ ವಿಜಯ್ ರಾಜಕೀಯ ಭವಿಷ್ಯ ನಿರ್ಧಾರ ಆಗಲಿದೆ. ಎಲ್ಲಾ ಕ್ಷೇತ್ರಗಳಲ್ಲೂ ವಿಜಯ್ ಸ್ಪರ್ಧಿಸುತ್ತಿದ್ದಾರೆ. ಒಂದೊಮ್ಮೆ ಅವರು ಗೆಲುವು ಕಂಡರೆ ಮುಂದಿನ ಸಿಎಂ ಆಗಿ ವಿಜಯ್ ಆಯ್ಕೆ ಆಗುತ್ತಾರೆ. ಸದ್ಯ ಅವರು ಹೋದಲ್ಲಿ ಬಂದಲ್ಲಿ ಸಾಕಷ್ಟು ಜನರು ಸೇರುತ್ತಿದ್ದಾರೆ. ಅದು ಮತವಾಗಿ ಬದಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ? ಶಾಸ್ತ್ರಗಳು ಹೇಳೋದೇನು ನೋಡಿ

ಪೂಜೆ-ಪುನಸ್ಕಾರಗಳನ್ನು ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆಯೇ ಎಂಬ ಪ್ರಶ್ನೆಯ ಬಗ್ಗೆ ‘ಟಿವಿ9’ ಕನ್ನಡ ಡಿಜಿಟಲ್​ನ ‘ನಿತ್ಯ ಭಕ್ತಿ’ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿಶ್ಲೇಷಿಸಿದ್ದಾರೆ. ಮಾನವರಾಗಿ ಜನಿಸಿದ ಮೇಲೆ ಕಷ್ಟ-ಸುಖಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಣೆಬರಹ ಅಥವಾ ಕರ್ಮಫಲವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಪೂಜೆ, ಪುನಸ್ಕಾರ, ಹೋಮ, ಹವನ, ಯಜ್ಞ, ಯಾಗಾದಿ ಮತ್ತು ಜಪಗಳು ಕಷ್ಟಗಳನ್ನು ಸಂಪೂರ್ಣವಾಗಿ ನಿವಾರಿಸದಿದ್ದರೂ, ಅವುಗಳನ್ನು ಎದುರಿಸುವ ವಿಶೇಷ ಶಕ್ತಿಯನ್ನು ನೀಡುತ್ತವೆ. ಪೂಜೆ, ಮಂತ್ರಗಳನ್ನು ಮಾಡುವಾಗ ‘ಮನನಾತ್ ತ್ರಾಯತೇ ಇತಿ ಮಂತ್ರಃ’ ಎಂಬಂತೆ ನಮ್ಮ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳು ಮೂಡಿ, ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಮೂಡುತ್ತದೆ. ಕಷ್ಟ ಬಂದಾಗ ಭಗವಂತನನ್ನು ಕಷ್ಟ ನಿವಾರಣೆ ಮಾಡು ಎಂದು ಕೇಳುವ ಬದಲು, ಕಷ್ಟಗಳನ್ನು ಎದುರಿಸುವ ಶಕ್ತಿ ನೀಡು ಎಂದು ಪ್ರಾರ್ಥಿಸಬೇಕು. ನಿತ್ಯ ಪೂಜೆ, ನಾಮಸ್ಮರಣೆ, ಜಪ, ತಪಗಳಿಗಿಂತ ಮಾನಸಿಕ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ‘ಯದ್ಭಾವಂ ತದ್ಭವತಿ’ ಎಂಬಂತೆ ಸರಳ ಮತ್ತು ಶುದ್ಧ ಹೃದಯದ ಭಕ್ತಿಗೆ ಭಗವಂತ ಒಲಿಯುತ್ತಾನೆ ಎಂದು ಗುರೂಜಿ ವಿಶ್ಲೇಷಿಸಿದ್ದಾರೆ.

Source link

ಸುಬ್ರಹ್ಮಣ್ಯನ ಲಹರಿ ಇರುವ ಇಂದಿನ ದಿನ ಭವಿಷ್ಯ ಹೇಗಿದೆ ನೋಡಿ

2026 ರ ಮಾರ್ಚ್ 17 ರ ಮಂಗಳವಾರದ ದೈನಂದಿನ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಶತಭಿಷಾ ನಕ್ಷತ್ರ, ಸಿದ್ಧಿ ಯೋಗ ಮತ್ತು ವಣಿಕ್ ಕರಣವಿರುವ ಈ ದಿನದ ಮಹತ್ವವನ್ನು ಕೂಡ ವಿವರಿಸಿದ್ದಾರೆ. ಈ ದಿನದ ರಾಹುಕಾಲವು ಮಧ್ಯಾಹ್ನ 3:28 ರಿಂದ 4:59 ರ ತನಕ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲವು ಬೆಳಗ್ಗೆ 10:57 ರಿಂದ 12:28 ರವರೆಗೆ ಇದೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ

ಪಾರ್ವತಿ ದೇವಿಗೆ ಕ್ಷೀರಾಭಿಷೇಕ ಮಾಡಿಸುವುದರಿಂದ ಯಾವುದೇ ಕೆಲಸದಲ್ಲಿ ಇರುವಂಥ ಗೊಂದಲ ದೂರವಾಗಲಿದೆ. ಇನ್ನು ನಿರಾಸಕ್ತಿ ಕಾಡುತ್ತಾ ಇದ್ದಲ್ಲಿ ಆ ಸಮಸ್ಯೆ ಕೂಡ ಬಗೆಹರಿಯಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಒತ್ತಡ ಹೆಚ್ಚಾಗಲಿದೆ. ಮಕ್ಕಳ ಶಿಕ್ಷಣಕ್ಕೆ ಹಣದ ಅಗತ್ಯ ಬಂದು, ಅದಕ್ಕಾಗಿ ಉಳಿತಾಯ ಅಥವಾ ಹೂಡಿಕೆ ಹಣ ಹಿಂದೆ ತೆಗೆಯುವ ಬಗ್ಗೆ ನಿರ್ಧಾರ ಮಾಡುತ್ತೀರಿ. ಬ್ಯೂಟಿ ಪಾರ್ಲರ್ ನಡೆಸುತ್ತಾ ಇರುವವರಿಗೆ ಈಗಿರುವ ಸ್ಥಳದಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು ಎಂಬ ಆಲೋಚನೆ ಮೂಡಲಿದೆ. ಒಬ್ಬ ವ್ಯಕ್ತಿಯನ್ನು ಭೇಟಿ ಆಗುವುದಕ್ಕೆ ಹಲವು ಸಲ ಪ್ರಯತ್ನ ಮಾಡುವಂತಾಗುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ತೀರ್ಥ ಕ್ಷೇತ್ರ, ದೇವಸ್ಥಾನ ಅಥವಾ ಯಾವುದಾದರೂ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಚಿಕ್ಕ ವಯಸ್ಸಿಂದ ಪರಿಚಯ ಇರುವ ವ್ಯಕ್ತಿ ತುಂಬ ಅನುಕೂಲ ಆಗುವ ಕೆಲ ಮಾಹಿತಿ ನೀಡಲಿದ್ದಾರೆ. ಕೃಷಿ ಹಾಗೂ ಕೃಷಿ ಸಂಬಂಧಿತ ವೃತ್ತಿ ಮಾಡುತ್ತಾ ಇರುವವರಿಗೆ ಆದಾಯ ಹೆಚ್ಚು ಮಾಡಿಕೊಳ್ಳಲು ಅವಕಾಶ ತೆರೆದು ಕೊಳ್ಳಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸಣ್ಣ ಸಣ್ಣ ಒಡವೆಗಳನ್ನು ಜೋಪಾನವಾಗಿ ಇರಿಸಿಕೊಳ್ಳುವ ಕಡೆಗೆ ಲಕ್ಷ್ಯ ನೀಡಿ. ಒಂದು ವೇಳೆ ಇತರರು ಈ ರೀತಿಯ ಜವಾಬ್ದಾರಿ ನಿಮಗೆ ವಹಿಸಿದರೆ ಸಾಮಾನ್ಯ ದಿನಗಳಿಗಿಂತ ಹೆಚ್ಚು ಎಚ್ಚರಿಕೆ ವಹಿಸುವುದು ಮುಖ್ಯ. ಸಂಬಂಧಿಕರ ಮನೆ ಕಾರ್ಯಕ್ರಮಗಳಿಗೋ ಅಥವಾ ಬೇರೆ ಯಾವುದಾದರೂ ಕಾರ್ಯಕ್ರಮಕ್ಕಾಗಿ ಹೊಸ ಬಟ್ಟೆಗಳು ಖರೀದಿ ಮಾಡಬೇಕು ಎಂದು ಹಣ ಖರ್ಚು ಮಾಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 17ರ ದಿನಭವಿಷ್ಯ

ಈ ದಿನ ಮೃತ್ಯುಂಜಯ ಮಂತ್ರವಾದ ತ್ರ್ಯಯಂಬಕಂ ಯಜಾಮಹೇ…ಇದನ್ನು ಹನ್ನೊಂದು ಬಾರಿ ಪಠಿಸಿ ಅಥವಾ ಶ್ರವಣ ಮಾಡಿ. ಪ್ರಯಾಣದ ವೇಳೆ ಜಾಗ್ರತೆಯಿಂದ ಇರಬೇಕು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಯಾವುದೇ ಕೆಲಸ- ಕಾರ್ಯ, ಪ್ರಯಾಣವನ್ನು ಬಲವಂತದಿಂದ ಮಾಡಲಿಕ್ಕೆ ಹೋಗಬೇಡಿ. ಇತರರ ಆಸಕ್ತಿ ಹಾಗೂ ಅದರಲ್ಲಿ ತೊಡಗಲು ಇರುವಂಥ ಉದ್ದೇಶ, ಸಮಯ ಇತ್ಯಾದಿ ವಿಚಾರ ಪರಿಗಣಿಸಿ. ಕಾರು ಚಾಲನೆ ವೃತ್ತಿಯಾಗಿ ಮಾಡುತ್ತಿರುವವರಿಗೆ ಆದಾಯ ಹೆಚ್ಚಳ ಮಾಡಿಕೊಳ್ಳಲು ಅವಕಾಶ ತೆರೆದುಕೊಳ್ಳುತ್ತದೆ. ಮಾಂಸಾಹಾರ ಸೇವನೆ ಮಾಡುವವರು ಈ ದಿನ ಅದರಿಂದ ದೂರ ಇರುವುದು ಕ್ಷೇಮ

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮನೆಯಲ್ಲಿ ಬಳಸುವ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ ಉಪಕರಣ ಕೆಲಸ ಮಾಡದಂತೆ ಆಗಿ, ಅದರ ರಿಪೇರಿಗೆ ಹೆಚ್ಚಿನ ಹಣ ಖರ್ಚಾಗುವ ಯೋಗ ಇದೆ. ದ್ವಿಚಕ್ರ ವಾಹನ ಅಥವಾ ಕಾರು ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಹಣ ಕಾಸು ಹೊಂದಾಣಿಕೆ ಆಗುವ ಯೋಗ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಹೋಟೆಲ್- ರೆಸ್ಟೋರೆಂಟ್ ಗಳಿಗೆ ಸ್ನೇಹಿತರು- ಸಂಬಂಧಿಕರ ಜೊತೆಗೆ ಹೋಗುವ ಸನ್ನಿವೇಶ ಉದ್ಭವಿಸಲಿದೆ. ಇಷ್ಟು ಸಮಯ ಯಾವ ವ್ಯಕ್ತಿಯ ಮಾತು, ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿದ್ದರೋ ಆ ಬಗ್ಗೆ ನಿಲವು ಬದಲಿಸಲು ಆಲೋಚನೆ ಬರುತ್ತದೆ. ಫಿಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ಹುಡುಕಿ ಬರಬಹುದು. ಪರಿಚಯಸ್ಥರ ಅಗತ್ಯಗಳಿಗಾಗಿ ಸಾಲ ಕೊಡಿಸುವ ಅನಿವಾರ್ಯ ಸೃಷ್ಟಿ ಆಗಬಹುದು.

ಲೇಖನ- ಸ್ವಾತಿ ಎನ್.ಕೆ. 

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 17ರ ದಿನಭವಿಷ್ಯ

ಸುಬ್ರಹ್ಮಣ್ಯ ಸ್ವಾಮಿಯ ಪೂಜೆ, ಆರಾಧನೆ ಮಾಡಿಕೊಳ್ಳಿ. ಇದನ್ನು ಮಾಡುವುದರಿಂದ ಚರ್ಮ ಕಾಯಿಲೆಯಿಂದ ಬಳಲುತ್ತಾ ಇರುವವರಿಗೆ, ಸಾಲ ಬಾಧೆ ಇರುವವರಿಗೆ ಸಮಸ್ಯೆಯಿಂದ ಹೊರಬರುವಂಥ ಮಾರ್ಗ ಗೋಚರ ಆಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸಂಭ್ರಮದ ಮಧ್ಯೆ ಯಾವುದೋ ಕೆಲಸ ಬಂತು ಅಥವಾ ಕರೆ ಬಂತು ಎಂಬ ಕಾರಣಕ್ಕೆ ಹೊರಡುವಂತೆ ಆಗಲಿದೆ. ಮನಸ್ಸಿಲ್ಲದ ಮನಸ್ಸಿನಿಂದ ತೆರಳಬೇಕಾದ ಸನ್ನಿವೇಶ ಎದುರಾಗಲಿದೆ. ಈ ದಿನ ಖರ್ಚು ಹೆಚ್ಚಿಗೆ ಆದ ನಂತರವೂ ಒಂದು ಬಗೆಯ ಸಮಾಧಾನ- ತೃಪ್ತಿ ನಿಮಗೆ ಇರಲಿದೆ. ಇಲ್ಲದ್ದು ಇದ್ದದ್ದು ಸೇರಿಸಿ, ಮಾತನಾಡುವಂಥ ವ್ಯಕ್ತಿಗೆ ನೇರಾ ನೇರ ಎಚ್ಚರಿಕೆ ನೀಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮಲ್ಲಿ ಯಾರು ಔಷಧ- ಪಥ್ಯದಲ್ಲಿ ಇದ್ದೀರಿ ಅಂಥವರು ಅವುಗಳಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದಿರುವುದು ಕ್ಷೇಮ. ಇದನ್ನು ಮೀರಿ ಏನಾದರೂ ಬದಲಾದಲ್ಲಿ ಅಲರ್ಜಿ ಕಾಡಬಹುದು. ನಿಮಗೆ ಎಷ್ಟೇ ಪರಿಚಿತರು, ಆಪ್ತರೇ ಆದರೂ ಅವರೆದುರು ಕೆಲವು ರಹಸ್ಯ ವಿಚಾರಗಳನ್ನು ಚರ್ಚೆ ಮಾಡಲು ಹೋಗಬೇಡಿ. ಇದರಿಂದ ಸಮಸ್ಯೆ ಆದೀತು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಜತೆ ಇದ್ದು, ಕೆಲಸ ಮಾಡಿದಂಥವರು, ನೆರೆ ಮನೆಯಲ್ಲಿ ಇದ್ದವರು ಅಥವಾ ಸ್ನೇಹಿತರೇ ಇರಬಹುದು, ಭೇಟಿ ಆಗಲಿದ್ದಾರೆ. ನಿಮಗೆ ಇದರಿಂದ ಕೆಲವು ಹೊಸ ಸಂಗತಿಗಳು, ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಇನ್ನು ಸಾಕು, ನಿಲ್ಲಿಸೋಣ ಎಂದುಕೊಂಡಿದ್ದ ಕೆಲವು ಸೇವೆ ಅಥವಾ ಕೆಲಸಗಳನ್ನು ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಯೋಗ ಕಂಡುಬರುತ್ತಿದೆ.

ಲೇಖನ- ಸ್ವಾತಿ ಎನ್.ಕೆ.

Source link

Horoscope Today 17 March: ಇಂದು ಈ ರಾಶಿಯವರಿಗೆ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯ

ಇಂದಿನ ಪಂಚಾಂಗ

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಿದ್ಧ, ಕರಣ : ಭದ್ರ, ಸೂರ್ಯೋದಯ – 06 – 31 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:33 – 17:04, ಯಮಗಂಡ ಕಾಲ 09:32 – 11:03, ಗುಳಿಕ ಕಾಲ 12:33 – 14:03

ಮೇಷ ರಾಶಿ : ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ಹೊರಗಿನ ಆಹಾರವನ್ನು ತ್ಯಜಿಸಲು ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಮಕ್ಕಳ ಮೇಲೆ ಒಂದು ಕಣ್ಣಿರಲಿ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ನಿಮಗೆ ಪ್ರೀತಿ ಹೆಚ್ಚಾಗುವುದು. ಅನಾಗರಿಕರಂತೆ ವರ್ತಿಸುವುದು ಬೇಡ.

ವೃಷಭ ರಾಶಿ : ಒಡಹುಟ್ಟಿದವರೊಂದಿಗಿನ ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ನೀವು ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವಿರಿ. ಸುಪ್ತವಾಗಿದ್ದ ವಿದೇಶದ ಕನಸು ಅಂಕುರಿಸಬಹುದು. ನಿಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೀವು ಕಾಣುವುದು ಸಮಂಜಸವಲ್ಲ. ವ್ಯಾಪಾರವನ್ನು ನಮ್ರರಾಗಿ ಮಾಡಿ, ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಿರಿ. ದೂರ ಎಲ್ಲಿಗಾದರೂ ಹೋಗಬೇಕು ಎನಿಸಬಹುದು.

ಮಿಥುನ ರಾಶಿ : ವಿದ್ಯಾರ್ಥಿಗಳು ನಿರೀಕ್ಷೆಯಂತೆ ಫಲಿತಾಂಶ ಪಡೆದು ಆತ್ಮವಿಶ್ವಾಸವನ್ನು ಹೆಚ್ಚುಮಾಡಿಕೊಳ್ಳುವರು. ಭಾವೋದ್ವೇಗದಲ್ಲಿ ತೆಗೆದುಕೊಂಡ ನಿರ್ಧಾರವು ತಪ್ಪು ಎಂದು ಸಾಬೀತುಪಡಿಸಬಹುದು. ಮನಸ್ಸು ಸ್ವಲ್ಪ ನಿರಾಶೆಗೊಳ್ಳಬಹುದು. ಯಾವುದಾದರೂ ಒಂದು ಆರೋಪದಲ್ಲಿ ಸಿಕ್ಕಿಹಾಕಿಕೊಳ್ಳುವ ಸನ್ನಿವೇಶವು ಬರಬಹುದು. ನಿಮ್ಮ ಮೇಲೂ ನಿಮ್ಮವರ ಮೇಲೆ ನಂಬಿಕೆ ಇಟ್ಟುಕೊಳ್ಳಿ. ದೇಹದ ಅಸಮತೋಲನದಿಂದ ನಿಮಗೆ ತೊಂದರೆಯಾದೀತು.

ಕರ್ಕಾಟಕ ರಾಶಿ : ಆದಾಯಕ್ಕೆ ಯೋಗ್ಯವಾಗಿ ವೆಚ್ಚ ಇರಲಿ. ವ್ಯವಹಾರದ ದೃಷ್ಟಿಯಿಂದ ಸಮಯವು ಲಾಭದಾಯಕವಾಗಿರುತ್ತದೆ. ಕೌಟುಂಬಿಕ ಜೀವನ ಸುಖಕರವಾಗಿರಬಹುದು. ಮಾನಸಿಕ ಒತ್ತಡ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರಬಹುದು. ಹೆಚ್ಚು ಪ್ರಯತ್ನವಿದ್ದರೂ ಸ್ವಲ್ಪ ಫಲವು ಇರಲಿದೆ. ಅವಕಾಶದ ಕೊರತೆಯು ನಿಮ್ಮ ಹತಾಶಗೊಳಿಸಬಹುದು. ಅಂತರಂಗದ ಶುದ್ಧೀಕರಣ ಮಾಡಿಕೊಳ್ಳುವುದು ನಿಮಗೆ ಮುಖ್ಯವಾಗಲಿದೆ.

ಸಿಂಹ ರಾಶಿ : ವ್ಯವಹಾರದಲ್ಲಿ ಕೆಲವು ಸಮಸ್ಯೆಗಳು ಮತ್ತು ತೊಂದರೆಗಳು ಉಂಟಾಗುತ್ತವೆ. ನಿಮ್ಮ ಆಸೆಯನ್ನು ಇನ್ನೊಬ್ಬರ ಎದುರು ಪ್ರಕಟಪಡಿಸಲು ಮುಜುಗರ ಆಗಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ನಿಮಗೆ ಸಿಕ್ಕ ಅನಾದರದಿಂದ ಬೇಸರಗೊಳ್ಳುವಿರಿ. ಪ್ರಭಾವೀ ಮುಖಂಡರ ಜೊತೆ ನೀವು ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚಿಸುವಿರಿ. ಕೆಲವು ಮಾನಸಿಕ ಸ್ಥಿತಿಯನ್ನು ನೀವು ಬದಲಿಸಿಕೊಳ್ಳಬೇಕಾದೀತು.

ಕನ್ಯಾ ರಾಶಿ : ಹಿತಶತ್ರುಗಳ ಸಹಾಯದಿಂದ ನಿಮ್ಮ ಯಾವುದೇ ಆಸೆಗಳನ್ನು ಈಡೇರಿಸಲಾಗುವುದು. ತರಾತುರಿಯಲ್ಲಿ ಮತ್ತು ಭಾವೋದ್ವೇಗದಲ್ಲಿ ತೆಗೆದುಕೊಂಡ ನಿರ್ಧಾರವು ತಪ್ಪು ಎಂದು ಸಾಬೀತುಪಡಿಸಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗುವ ಸಂದರ್ಭವು ಇದೆ. ಹಠವನ್ನು ಬಿಟ್ಟರೆ ಸಂತೋಷದ ಸಂಗತಿಗಳು ನಿಮ್ಮ ಹುಡುಕಿಕೊಂಡು ಬರಬಹುದು.

ತುಲಾ ರಾಶಿ : ನಿಮ್ಮ ವೈಯಕ್ತಿಕ ವಿಚಾರದಲ್ಲಿ ಯಾವುದೇ ಹೊರಗಿನವರನ್ನು ತಲೆ ಹಾಕಲು ಬಿಡಬೇಡಿ.ಯಾವುದೇ ಯೋಜನೆಯನ್ನು ರೂಪಿಸುವ ಮೊದಲು ಮತ್ತೊಮ್ಮೆ ಯೋಚಿಸುವುದು ಅವಶ್ಯಕ. ಆಸ್ತಿಯ ವಿಚಾರವಾಗಿ ನೀವು ಕಾನೂನು ಹೋರಾಟವನ್ನು ಮಾಡುವುದು ಒಳ್ಳೆಯದು. ಬೆನ್ನಿನ ನೋವು ಮತ್ತೆ ಕಾಣಿಕೊಂಡು ಸಂಕಟಪಡಬೇಕಾದೀತು. ಇಂದಿನ ಕಾರ್ಯವು ಪೂರ್ಣವಾಗುವ ತನಕ ನಿಮಗೆ ಮಾನಸಿಕ ವಿಶ್ರಾಂತಿಯು ಇರದು. ನಿಮ್ಮ ಮಾತು ವಿವಾದವನ್ನು ಹುಟ್ಟುಹಾಕಬಹುದು.

ವೃಶ್ಚಿಕ ರಾಶಿ : ನೀವು ಕೆಲವು ಲಾಭದಾಯಕ ಅವಕಾಶಗಳನ್ನು ಕಳೆದುಕೊಳ್ಳಬಹುದು. ಪ್ರಸ್ತುತ ಸಮಯ ಯಶಸ್ವಿಯಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿದ್ದು ಹತಾಶ ಭಾವವಿರುವುದು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಭೂಮಿಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಂಡು ವ್ಯವಹರಿಸಿ. ಭವಿಷ್ಯದ ಕುರಿತು ಬಹಳ ಆಲೋಚನೆ ಇರುವುದು. ಸಾಧು, ಸಜ್ಜನರ ಭೇಟಿಯಿಂದ‌ ಮನಸ್ಸು ಆಹ್ಲಾದಕರವಾಗಲಿದೆ.

ಧನು ರಾಶಿ : ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಉದ್ಯೋಗಸ್ಥ ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ಸಾಧ್ಯವಾಗುತ್ತದೆ. ನಕಾರಾತ್ಮಕ ಚಟುವಟಿಕೆಯ ಕೆಲವು ಜನರು ನಿಮ್ಮನ್ನು ಟೀಕಿಸುತ್ತಾರೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ಆಕಸ್ಮಿಕವಾಗಿ ಉದ್ಯೋಗವು ನಿಮ್ಮ‌ ಪಾಲಿಗೆ ಬರುವುದು.‌ ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯೂ ಬರುವುದು.

ಮಕರ ರಾಶಿ : ಇಂದು ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ನೀವು ಕೆಲವು ಆಸ್ತಿಯಿಂದ ಹಣವನ್ನು ಪಡೆಯಬಹುದು. ನಿಮಗೆ ಸ್ನೇಹಿತರಿಂದಲೂ ಬೆಂಬಲ ಸಿಗುತ್ತದೆ. ಬೌದ್ಧಿಕ ಕೆಲಸದಿಂದ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ ಇರಲಿದೆ. ಕೆಲವು ಸನ್ನಿವೇಶಗಳಿಗೆ ಪ್ರತಿಸ್ಪಂದಿಸುವ ಬಗೆ ಗೊತ್ತಾಗದೇ ಹೋಗಬಹುದು.

ಕುಂಭ ರಾಶಿ : ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದರೂ, ಯಥಾಯೋಗ್ಯವಾದ ಖರ್ಚೂ ಇರಲಿದೆ. ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಪ್ರಗತಿಯ ಸಾಧ್ಯತೆಗಳಿವೆ. ಆದರೆ ಸ್ಥಳ ಬದಲಾವಣೆಯೂ ಆಗಬಹುದು. ವ್ಯವಹಾರದಲ್ಲಿ ಯಶಸ್ಸು ಸಿಗುವ ಸಾಧ್ಯತೆಗಳಿವೆ. ಧಾರ್ಮಿಕ ಕಾರ್ಯದಲ್ಲಿ ಅಲ್ಪ ಆಸಕ್ತಿಯು ಕಂಡುಬರುವುದು. ಇಂದಿನ ಘಟನೆಯು ನಿಮ್ಮ ಎಲ್ಲ ಆಸಕ್ತಿಯನ್ನು ಕುಗ್ಗಿಸುವುದು. ಕೆಲಸವನ್ನು ಹಂಚಿಕೊಂಡು ಮಾಡಿ.

ಮೀನ ರಾಶಿ : ಉದ್ಯೋಗ ಕ್ಷೇತ್ರದಲ್ಲಿ ವಿಸ್ತರಣೆ ಕಂಡುಬರಲಿದೆ. ನೀವು ಆರ್ಥಿಕ ಏರಿಳಿತಗಳನ್ನು ಎದುರಿಸಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಮಧ್ಯಮಕ್ಕಿಂತ ಉತ್ತಮವಾಗಿರುವುದು. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ಆರೋಗ್ಯದ ದೃಷ್ಟಿಯಿಂದ ಇಂದು ಅನುಕೂಲವೇ. ಬೇಸರಿಸದೇ ಬಂದ ಕೆಲಸವನ್ನು ಶ್ರದ್ಧೆಯಿಂದ ಮಾಡಿ.‌ ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದ ಮಾಡಿಕೊಂಡು ಬೇಸರಿಸುವಿರಿ.

-ಲೋಹಿತ ಹೆಬ್ಬಾರ್-8762924271 (what’s app only)

Source link

ಕಾಂಗ್ರೆಸ್ ಮುಖಂಡರ ಗಲಾಟೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಮೊರೆ ಹೋದ ಮಹಿಳಾ ಕಾರ್ಯದರ್ಶಿ

ಚಿಕ್ಕಮಗಳೂರು, (ಮಾರ್ಚ್ 16): ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಮಹಿಳಾ ಕಾರ್ಯದರ್ಶಿ ಮೇಲೆ ಅದೇ ಪಕ್ಷದ ಮುಖಂಡನೋರ್ವ ಹಲ್ಲೆ ನಡೆಸಿರುವ ಪ್ರಕರಣ ಚಿಕ್ಕಮಗಳೂರಿನಲ್ಲಿ (Chikkamagakuru) ನಡೆದಿದೆ. ಮನೆ ಖಾಲಿ ಮಾಡಿಸಿದ್ದಕ್ಕೆ ಕೋಪಗೊಂಡು ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್​​ ಎನ್ನುವಾತ ತಮ್ಮದೇ ಪಕ್ಷದ ಮಹಿಳಾ ಕಾರ್ಯದರ್ಶಿ ಚೇತನಾ ಹಾಗೂ ಅವರ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಫೆಬ್ರವರಿ 28ರಂದು ರಾತ್ರಿ ಚಿಕ್ಕಮಗಳೂರು ಹೌಸಿಂಗ್ ಬೋರ್ಡ್​ನಲ್ಲಿ ಚೇತನಾ ದಂಪತಿ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ ವೇಳೆ ಪೊಲೀಸರು, ಆರೋಪಿ ರಾಹಿಲ್ ಷರೀಫ್​​ ನನ್ನು ಬಂಧಿಸಿದ್ದಾರೆ. ಆದ್ರೆ, ರಾಹಿಲ್ ಷರೀಫ್​​ ಕಾಂಗ್ರೆಸ್ ಮುಖಂಡ ಎಂಬ ಕಾರಣಕ್ಕೆ ಸಮಗ್ರ ತನಿಖೆ ಆಗುತ್ತಿಲ್ಲ ಎಂದು ಹಲ್ಲೆಗೊಳಗಾದ ಚೇತನಾ ಆರೋಪಿಸಿದ್ದು, ಈ ಸಂಬಂಧ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಗೆ ಪತ್ರ ಬರೆದಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಅವರದ್ದೇ ಪಕ್ಷ ಆಡಳಿತದಲ್ಲಿದ್ದರೂ ಸಹ ನ್ಯಾಯ ಅಂದ್ರೆ ಹೇಗೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಮೋದಿಗೆ ಬರೆದ ಪತ್ರದಲ್ಲೇನಿದೆ?

ಮನೆ ಖಾಲಿ ಮಾಡಿಸಿದ್ದಕ್ಕೆ ಫೆಬ್ರವರಿ ಫೆಬ್ರವರಿ 28ರ ರಾತ್ರಿ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಮನೆಗೆ ನುಗ್ಗಿ ರಾಹಿಲ್ ಷರೀಫ್ ಹಲ್ಲೆ ಮಾಡಿದ್ದಾರೆ. ಬಳಿಕ ರಾಹಿಲ್ ಷರೀಫ್ ನೇಪಾಳಕ್ಕೆ ಪರಾರಿಯಾಗುವ ವೇಳೆ ರಾಜಸ್ಥಾನದ ಅಜ್ಮೀರ್ ನಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ, ಬಂಧನದ ಬಳಿಕ ಆರೋಪಿ ರಾಹಿಲ್ ನನ್ನು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್ ಮುಖಂಡ ಎಂಬ ಕಾರಣಕ್ಕಾಗಿ ಸಮಗ್ರ ತನಿಖೆಯಾಗುತ್ತಿಲ್ಲ. ಆಸ್ಪತ್ರೆಗೆ ದಾಖಲು ಮಾಡಿ ರಕ್ಷಣೆ ಮಾಡಲಾಗುತ್ತಿದೆ. ರಾಹಿಲ್ ಷರೀಫ್ ಮೊಬೈಲ್ ನಲ್ಲಿ ಹಲವು ಹಿಂದೂ ಯುವತಿಯರ ಅಶ್ಲೀಲ ವಿಡಿಯೋಗಳು ಇವೆ. ಹಲವು ಹಿಂದೂ ಹೆಣ್ಣು ಮಕ್ಕಳನ್ನ ಬಳಸಿಕೊಂಡು ಲವ್ ಜಿಹಾದ್ ನಡೆಸಲು ಯತ್ನ ಮಾಡಿದ್ದಾನೆ. ಸಮಗ್ರ ತನಿಖೆ ಕೇಂದ್ರ ಸರ್ಕಾರ ನಡೆಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪತಿಯನ್ನು ಬಿಡುವಂತೆ ಠಾಣೆಗೆ ಬಂದಿದ್ದ ಮಹಿಳೆಯನ್ನು ಮಂಚಕ್ಕೆ ಕರೆದ ಇನ್ಸ್​ಪೆಕ್ಟರ್!

ತನಗೂ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿರುವ ಚೇತನಾ, ಈ ಹಿಂದೆಯೂ ಹಲವಾರು ಪ್ರಕರಣದಲ್ಲಿ ರಾಹಿಲ್ ಸಿಕ್ಕಿಬಿದ್ದಿದ್ದ. ಹಿಂದೂ ಯುವತಿಯ ಮನೆಯಲ್ಲಿ ಸಿಕ್ಕಿಬಿದ್ದದ್ದ. ಹೀಗಾಗಿ ಹಿಂದೂ ಹೆಣ್ಣು ಮಕ್ಕಳ ರಕ್ಷಣೆ ಮಾಡಿ ಎಂದಿದ್ದಾರೆ. ಇದರೊಂದಿಗೆ ಒಂದೇ ಪಕ್ಷದ ಮುಖಂಡರು ಗಲಾಟೆ ಮಾಡಿಕೊಂಡು ಇದೀಗ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದು, ಅಲ್ಲದೇ ಚೇತನಾ ಅವರು ನ್ಯಾಯಕ್ಕಾಗಿ ಮೋದಿ ಅವರಿಗೆ ಪತ್ರ ಬರೆದಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ರಕರಣದ ಹಿನ್ನೆಲೆ

ಚಿಕ್ಕಮಗಳೂರು ಕಾಂಗ್ರೆಸ್ ಮುಖಂಡ ರಾಹಿಲ್ ಶರೀಫ್ ಎನ್ನುವಾತ ಚೇತನಾ ಅವರಿಗೆ ಸೇರಿದ ಮನೆಯಲ್ಲಿ ಬಾಡಿಗೆ ಇದ್ದ. ಆದ್ರೆ, ಕೆಲ ಕಾರಣಾಂತರಗಳಿಂದ ಚೇತನಾ ಅವರು ಬಾಡಿಗೆಯನ್ನು ಬಿಡಿಸಿದ್ದರು. ಇದರಿಂದ ಕೆರಳಿದ್ದ ರಾಹಿಲ್ ಶರೀಫ್, ಫೆಬ್ರವರಿ 28ರ ರಾತ್ರಿ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಚೇತನಾ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ. ಈ ಸಂಬಂಧ ಚೇತನಾ ಅವರು ದೂರು ದಾಖಲಿಸಿದ್ದರು. ಇದರಿಂದ ರಾಹಿಲ್ ಶರೀಫ್, ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಇನ್ಸ್‌ಪೆಕ್ಟರ್ ಅಭಯಪ್ರಕಾಶ್ ನೇತೃತ್ವದ ಪೊಲೀಸ್ ತಂಡ ತೀವ್ರ ಶೋಧ ಕಾರ್ಯಾಚರಣೆ ನಡೆಸಿ ಭಾರತ–ನೇಪಾಳ ಗಡಿ ಭಾಗದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ನೇಪಾಳಕ್ಕೆ ಪರಾರಿಯಾಗುವ ಪ್ರಯತ್ನಿಸುತ್ತಿದ್ದ ವೇಳೆ ರಾಜಸ್ಥಾನದ ಅಜ್ಮೀರ್ ನಲ್ಲಿ ಸಿಕ್ಕಿಬಿದ್ದಿದ್ದ. ಆದ್ರೆ, ಇದೀಗ ರಾಹಿಲ್ ಶರೀಫ್ ನನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ರಕ್ಷಣೆ ಮಾಡಲಾಗುತ್ತಿದೆ ಎಂದು ಚೇತನಾ ಆರೋಪವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version