NEET-UG Topper Aryan Gupta: ನೀಟ್-ಯುಜಿ ಟಾಪರ್ ಆರ್ಯನ್ ಗುಪ್ತ ಯಶೋಗಾಥೆ; ಅಜ್ಜಿಯನ್ನು ಬಲಿ ಪಡೆದ ಕ್ಯಾನ್ಸರ್ ವಿರುದ್ಧ ಹೋರಾಡಲು ವೈದ್ಯನಾಗುವ ಸಂಕಲ್ಪ – Kannada News | NEET UG 2026 AIR 1: Aryan Gupta’s 17 Hour Study and Grandma’s Cancer Motivated Topper
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಪ್ರತಿಷ್ಠಿತ ನೀಟ್-ಯುಜಿ (NEET-UG) 2026 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪಂಜಾಬ್‌ನ ಲುಧಿಯಾನದ ಆರ್ಯನ್ ಗುಪ್ತ 720ಕ್ಕೆ 715 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ (AIR-1) ಸಾಧಿಸಿದ್ದಾರೆ. ವೈದ್ಯಕೀಯ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದಿರುವ ಆರ್ಯನ್ ಅವರ ತಂದೆ ಡಾ. ಸಚಿನ್ ಗುಪ್ತಾ ಅರಿವಳಿಕೆ ತಜ್ಞರಾಗಿದ್ದು, ತಾಯಿ ಡಾ. ರೀನಾ ಗುಪ್ತಾ ಸ್ತ್ರೀರೋಗ ತಜ್ಞರಾಗಿದ್ದಾರೆ. ಅವರ ಹಿರಿಯ ಸಹೋದರ ಕೂಡ ಕಳೆದ ವರ್ಷದ ನೀಟ್ ಪರೀಕ್ಷೆಯಲ್ಲಿ ಅಖಿಲ…