‘ಕೆಜಿಎಫ್’ ಸಿನಿಮಾವನ್ನು ಕೊಂಡಾಡಿದ ಕೊರಿಯನ್ ಸ್ಟಾರ್ ನಟ

‘ಕೆಜಿಎಫ್’ ಸಿನಿಮಾವನ್ನು ಕೊಂಡಾಡಿದ ಕೊರಿಯನ್ ಸ್ಟಾರ್ ನಟ

ಕೊರಿಯನ್ ಸಿನಿಮಾಗಳು (Cinema) ವಿಶ್ವದಾದ್ಯಂತ ಮೋಡಿ ಮಾಡಿವೆ. ವಿಶ್ವದಲ್ಲಿಯೇ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಿಸುವ ದೇಶಗಳಲ್ಲಿ ಕೊರಿಯಾ ಸಹ ಒಂದು. ಕೋವಿಡ್ ನಂತರದ ಒಟಿಟಿ ಕ್ರಾಂತಿಯ ಬಳಿಕವಂತೂ ಕೊರಿಯನ್ ಸಿನಿಮಾಗಳು ಸಣ್ಣ ಪುಟ್ಟ ನಗರ-ಪಟ್ಟಣಗಳನ್ನೂ ತಲುಪಿವೆ. ಕೊರಿಯನ್ ಶೋಗಳು, ಕೊರಿಯನ್ ಹಾಡುಗಳು ಭಾರತದಲ್ಲಿಯೂ ಸಹ ಸಖತ್ ಜನಪ್ರಿಯ. ಇತ್ತೀಚೆಗಿನ ‘ಸ್ಕ್ವಿಡ್ ಗೇಮ್ಸ್’ ವೆಬ್ ಸರಣಿ ಸಹ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ಈ ‘ಸ್ಕ್ವಿಡ್ ಗೇಮ್’ ಸೇರಿದಂತೆ ಕೊರಿಯಾದ ಹಲವು ಸಿನಿಮಾ, ಶೋಗಳಲ್ಲಿ ನಟಿಸಿರುವ ಸ್ಟಾರ್ ನಟರೊಬ್ಬರು ಕನ್ನಡದ ‘ಕೆಜಿಎಫ್’ ಸಿನಿಮಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

‘ಸ್ಕ್ವಿಡ್ ಗೇಮ್ಸ್’, ‘ದಿ ಚೇಸ್’, ‘ಮಿಡ್​​ನೈಟ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಕೊರಿಯಾದ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ವಿ ಹಾ ಜುನ್ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಮೊದಲು ‘ಕೆಜಿಎಫ್’ ಸಿನಿಮಾದ ಬಗ್ಗೆ ಮಾತನಾಡಿದರು. ‘ನನಗೆ ಕೆಲವು ಭಾರತೀಯ ಸಿನಿಮಾಗಳ ಪರಿಚಯ ಇದೆ. ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ‘ಕೆಜಿಎಫ್’ ಸಿನಿಮಾ ನನಗೆ ಬಹಳ ಇಷ್ಟ. ಅದೊಂದು ಅದ್ಭುತವಾದ ಬಹಳ ಅದ್ಧೂರಿಯಾದ ಆಕ್ಷನ್ ಸಿನಿಮಾ. ಬಹಳ ಇಂಟೆನ್ಸ್ ಆದ ಆಕ್ಷನ್ ಮತ್ತು ಸನ್ನಿವೇಶಗಳನ್ನು ಆ ಸಿನಿಮಾ ಹೊಂದಿದೆ’ ಎಂದಿದ್ದಾರೆ.

‘ಕೆಜಿಎಫ್’ ಸಿನಿಮಾ ಅದ್ಧೂರಿ ಸ್ಕೇಲ್ ಹೊಂದಿರುವ ಸೀಟಿನ ತುದಿಗೆ ಕೂರಿಸುವ ಸಿನಿಮಾ, ಮತ್ತು ಅಷ್ಟೇ ಮನೊರಂಜನಾತ್ಮಕವೂ ಇದೆ. ನಾನು ಸಹ ಅಂಥಹಾ ಒಂದು ಅದ್ಧೂರಿ ಮತ್ತು ಇಂಟೆನ್ಸ್ ಆಗಿರುವ ಆಕ್ಷನ್ ಸಿನಿಮಾನಲ್ಲಿ ನಟಿಸಲು ಕಾತರದಿಂದ ಕಾಯುತ್ತಿದ್ದೀನಿ. ನನಗೆ ಅಂಥಹಾ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಅದು ಮಾತ್ರವೇ ಅಲ್ಲದೆ ವಿಶ್ವದಾದ್ಯಂತ ಜನಪ್ರಿಯವಾಗಿರುವ ‘3 ಇಡಿಯಟ್ಸ್’ ಸಿನಿಮಾವನ್ನು ಸಹ ನಾನು ಇನ್ನು ಮೆನ್ಷನ್ ಮಾಡಲೇ ಬೇಕು. ಅದು ಬಹಳ ಮನೊರಂಜನಾತ್ಮಕ ಮತ್ತು ಅಷ್ಟೆ ಹಾಸ್ಯಮಯ ಸಿನಿಮಾ ಅದರ ಜೊತೆಗೆ ಸಮಾಜಕ್ಕೆ ಒಂದು ಅದ್ಭುತ ಸಂದೇಶವನ್ನು ಸಹ ಹೊಂದಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ:RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ ಯಶ್ ದಯಾಳ್

ಕನ್ನಡದ ಸಿನಿಮಾಗಳು ಕರ್ನಾಟಕದ ಗಡಿಯನ್ನೇ ದಾಟದ ಸಮಯವೊಂದಿತ್ತು. ಆದರೆ ಈಗ ವಿಶ್ವದ ಗಡಿಯನ್ನು ದಾಟುವುದು ಮಾತ್ರವಲ್ಲದೆ, ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುವಾಗ ವಿದೇಶಿ ನಟನೊಬ್ಬ ‘ಕೆಜಿಎಫ್’ ಅನ್ನು ಉದಾಹರಣೆಯಾಗಿ ನೀಡುವುದು ‘ಕೆಜಿಎಫ್’ ಸಿನಿಮಾ ಸೃಷ್ಟಿಸಿರುವ ಪ್ರಭಾವಕ್ಕೆ ಅದ್ಭುತ ಉದಾಹರಣೆ ಆಗಿದೆ. ‘ಕೆಜಿಎಫ್’ ಮೂಲಕ ಯಶ್ ಮತ್ತು ಪ್ರಶಾಂತ್ ನೀಲ್ ಅದ್ಭುತವನ್ನೇ ಸೃಷ್ಟಿಸಿದ್ದಾರೆ. ಆ ಸಿನಿಮಾದ ಮೂಲಕ ಮನೊರಂಜನಾ ಕ್ಷೇತ್ರದಲ್ಲಿ ಕರ್ನಾಟಕದ ಹೆಸರನ್ನು ದೇಶ-ವಿದೇಶಗಳಿಗೆ ವಿಸ್ತರಿಸಿದ್ದಾರೆ.

ಈಗ ಯಶ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು ಅದುವೇ ‘ಟಾಕ್ಸಿಕ್’ ಈ ಸಿನಿಮಾವನ್ನು ಸಹ ಅವರು ಅಂತರಾಷ್ಟ್ರೀಯ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡೇ ನಿರ್ಮಿಸಿದ್ದಾರೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಯಶ್ ಮತ್ತು ಕೆವಿಎನ್ ಬಂಡವಾಳ ಹೂಡಿದ್ದು, ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಮಗಳೂರು: 11 ತಿಂಗಳಿಂದ ಸಂಬಳವಿಲ್ಲ, ಸಾಲಗಾರರ ಕಾಟ; ಡೆತ್‌ನೋಟ್‌ ಬರೆದಿಟ್ಟು ಗ್ರಾ ಪಂ ನೀರುಗಂಟಿ ಆತ್ಮಹತ್ಯೆ

ಚಿಕ್ಕಮಗಳೂರು, ಮಾರ್ಚ್​​ 15: ಡೆತ್‌ನೋಟ್‌ ಬರೆದಿಟ್ಟು ಗ್ರಾಮ ಪಂಚಾಯಿತಿಯ ನೀರುಗಂಟಿ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಮಕ್ಕಿ ಗ್ರಾಮದಲ್ಲಿ ನಡೆದಿದೆ. ಆಣೂರು ಗ್ರಾಮ ಪಂಚಾಯಿತಿಯ ನೀರುಗಂಟಿ ರಮೇಶ್(47) ನೇಣಿಗೆ ಶರಣಾದ ವ್ಯಕ್ತಿ. 11 ತಿಂಗಳಿಂದ ಸಂಬಳ ನೀಡಿಲ್ಲ, ಸಾಲಗಾರರ ಕಾಟ ಎಂದು ಡೆತ್‌ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್‌ನೋಟ್​ನಲ್ಲಿ ಏನಿದೆ?

ನಾನು ತುಂಬಾ ವರ್ಷದಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನನಗೆ 11 ತಿಂಗಳ ವೇತನ ಕೊಟ್ಟಿಲ್ಲ. ಹಾಗೂ ಸಂಘದವರು ಮನೆಗೆ ಬಂದು ಹಣ ಕಟ್ಟುವಂತೆ ನನಗೆ ಮತ್ತು ನಮ್ಮ ಮನೆಯವರಿಗೆ ತೊಂದರೆ ಕೊಡುತ್ತಿದ್ದಾರೆ. ಹಾಗಾಗಿ ನನಗೆ ತುಂಬಾ ಮನಸ್ಸಿಗೆ ಬೇಜಾರಾಗಿದೆ.

ಇದನ್ನೂ ಓದಿ: ಬಹಿಷ್ಕಾರಕ್ಕೆ ಮನನೊಂದ ಮಹಿಳೆ: ಮಾಂಗಲ್ಯ ಸರ ತೆಗೆದಿಟ್ಟು ನದಿಗೆ ಹಾರಿ ಆತ್ಮಹತ್ಯೆ

ಫೈನಾನ್ಸ್‌ನಲ್ಲಿ ಸಾಲ ಮಾಡಿರುವೆ, ಸಂಬಳ ನೀಡದಿದ್ದಕ್ಕೆ ಸಾಲಕಟ್ಟಲು ಆಗುತ್ತಿಲ್ಲ. RBL, SKS, ಗ್ರಾಮಿಣಕೂಟ, ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಮನೆಯವರಿಗೂ ಕಿರುಕುಳ ನೀಡುತ್ತಿದ್ದಾರೆ. ಇನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲೂ ಕೆಲವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಹಾಸ್ಟೆಲ್ ವಾರ್ಡನ್​ ಮನೆಯಲ್ಲಿ ನೇಣಿಗೆ ಶರಣು

ಹಾಸನ ನಗರದ ದಾಸರಕೊಪ್ಪಲಿನಲ್ಲಿ ಹಾಸ್ಟೆಲ್ ವಾರ್ಡನ್​ ಲೋಕೇಶ್​(45) ಆತ್ಮಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಮುಂಬಡ್ತಿ ಪಡೆದು ಚನ್ನರಾಯಪಟ್ಟಣ ಹಾಸ್ಟೆಲ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಲೋಕೇಶ್​ ನೇಣಿಗೆ ಶರಣಾಗಿದ್ದಾರೆ. ಹಾಸನದ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

KSRTC ಬಸ್​ನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ

ಕೆಎಸ್​​ಆರ್​​ಟಿಸಿ ಬಸ್​ನಲ್ಲಿ ಹೃದಯಾಘಾತವಾಗಿ ಪ್ರಯಾಣಿಕ ಸಾವನ್ನಪ್ಪಿರುವಂತ ಘಟನೆ  ಮೈಸೂರಿನಿಂದ ಕೊಳ್ಳೇಗಾಲಕ್ಕೆ ಬರುತ್ತಿದ್ದ ಬಸ್​ನಲ್ಲಿ ನಡೆದಿದೆ. ಕೊಳ್ಳೇಗಾಲದ ವಡ್ಡರ ದೊಡ್ಡಿಯ ಆರೋಗ್ಯ ಸ್ವಾಮಿ ಮೃತ ದುರ್ದೈವಿ.

ಇದನ್ನೂ ಓದಿ: ಮದುವೆಯಾಗಿ ಒಂದುವರೆ ವರ್ಷಕ್ಕೆ ವಿವಾಹಿತೆ ಸಾವು: ಅಳಿಯನೇ ಕೊಲೆಗೈದದ್ದು ಎಂದ ಮಹಿಳೆ ಪೋಷಕರು

ಬಸ್ ನಿಲ್ಧಾಣಕ್ಕೆ ಬಂದಾಗ ಎಲ್ಲಾ ಪ್ರಯಾಣಿಕರು ಇಳಿದಿದ್ದಾರೆ. ಆದರೆ ಆರೋಗ್ಯ ಸ್ವಾಮಿ ಮಾತ್ರ ಬಸ್​​ನಲ್ಲೇ ಕುಳಿತಿದ್ದರು. ಬಸ್ ನಿಂದ ಕಂಡಕ್ಟರ್ ಇಳಿಸಲು ಮುಂದಾದಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ 112 ಕರೆ ಮಾಡಿ ಬಸ್​​ ನಿರ್ವಾಹಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶಿಲನೆ ಮಾಡಿದ್ದಾರೆ. ಮೃತದೇಹವನ್ನ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಎಲೆಕ್ಷನ್​​ ವೇಳೆ ಹೈಡ್ರಾಮಾ: ಚುನಾವಣಾ ಅಧಿಕಾರಿಯಿಂದಲೇ ಕಳ್ಳ ಮತದಾನ?

ತುಮಕೂರು, ಮಾರ್ಚ್​​ 15: ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಚುನಾವಣೆ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಚುನಾವಣಾ ಅಧಿಕಾರಿಯೇ ಕಾಂಗ್ರೆಸ್​​ ಪರ ಫೋರ್ಜರಿ ಮಾಡಿರುವ ಆರೋಪ ಕೇಳಿಬಂದಿದ್ದು, ಜೇಬಿನಲ್ಲಿ ಮತಪತ್ರಗಳನ್ನು ತುಂಬಿಕೊಂಡು ಬಂದು ಮತ ಪೆಟ್ಟಿಗೆಗೆ ಹಾಕಿರೋದಾಗಿ ಜೆಡಿಎಸ್​​ ದೂರಿದೆ. ಈ ಸಂಬಂಧ ಚುನಾವಣಾಧಿಕಾರಿ ವಿರುದ್ಧ ಕುಣಿಗಲ್​​ನ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ಕೂಡ ನೀಡಲಾಗಿದ್ದು, ಹೈಡ್ರಾಮಾದ ಬಳಿಕ ಚುನಾವಣೆಯನ್ನೇ ರದ್ದು ಮಾಡಿದ ಪ್ರಸಂಗ ನಡೆದಿದೆ.

ಸಂತೆಮಾವತ್ತೂರು ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ 12 ಮಂದಿ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು. ಸಾಲಗಾರರ 11 ಕ್ಷೇತ್ರ ಮತ್ತು 1 ಸಾಮಾನ್ಯ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ನಡೆದ ಎಲೆಕ್ಷನ್​​ಗೆ 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶೇಕಡ 20ರಷ್ಟು ಮತದಾನ ಬಾಕಿ ಇರುವಾಗ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಬ್ಯಾಲೇಟ್ ಪೇಪರನ್ನು ಅಕ್ರಮವಾಗಿ ಮತಪೆಟ್ಟಿಗೆಗೆ ಚುನಾವಣಾಧಿಕಾರಿ ಸುನೀಲ್​​ ಸೇರಿಸಿದ‌ ಆರೋಪವನ್ನು ಜೆಡಿಎಸ್​​ ಮಾಡಿದೆ. ಸಾಲಗಾರರ ಕ್ಷೇತ್ರ ಮತಗಟ್ಟೆ ಸಂಖ್ಯೆ 1ರಲ್ಲಿ ಚುನಾವಣಾಧಿಕಾರಿಯೇ ಜೇಬಿನಲ್ಲಿ ತುಂಬಿಕೊಂಡು ಬಂದು ಮತಪತ್ರವನ್ನು ಮತಪೆಟ್ಟಿಗೆಗೆ ಹಾಕಿದ್ದಾರೆ. ಇದನ್ನು ಜೆಡಿಎಸ್ ಎಂಜೆಂಟ್ ಕಂಡು ತಡೆದಿದ್ದಾರೆ. ಈ ವೇಳೆ ಸುನೀಲ್​​ ಅವರ ಜೇಬಿನಲ್ಲಿ 25 ಮತಪತ್ರಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದ್ದು, ಚುನಾವಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ಇದನ್ನೂ ಓದಿ: ದಾವಣಗೆರೆ ಬೈ ಎಲೆಕ್ಷನ್; ಬಿಜೆಪಿ ಮನೆಯೊಂದು 3 ಬಾಗಿಲು, ಕಾಂಗ್ರೆಸ್​​​​ ಮನೆಯೊಂದು ಎರಡು ಬಾಗಿಲು

ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಣಿಗಲ್ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಚುನಾವಣಾಧಿಕಾರಿಯಿಂದ ಕಳ್ಳ ಮತದಾನ ನಡೆದಿದೆ. ತಮ್ಮದೇ ಸರ್ಕಾರ ಇದೆ ಎಂದು ಶಾಸಕರು ತಾಲೂಕಿನಲ್ಲಿ ಮಾಡಬಾರದ ಅನಾಚಾರ ಮಾಡುತ್ತಿದ್ದಾರೆ. ಈ ಹಿಂದೆ ರಾಮನಗರ ಮತ್ತು ಹಾಸನದಲ್ಲಿ ಚುನಾವಣಾ ಅಕ್ರಮ ಮಾಡಿದ್ದ ಸುನೀಲ್​​ರನ್ನು ಕುಣಿಗಲ್ ತಾಲೂಕಿಗೆ ಹಾಕಿಸಿದ್ದಾರೆ. ಕಿಟಿಕಿಯಿಂದ ಗೌಪ್ಯವಾಗಿ ಮತಪತ್ರಗಳನ್ನು ತಂದು ಏಜೆಂಟರು ಇಲ್ಲದಿದ್ದಾಗ ಮತಪೆಟ್ಟಿಗೆಗೆ ತುಂಬುತ್ತಿದ್ದರು. ಸುಮಾರು ನೂರರಿಂದ ನೂರೈವತ್ತು ಈ ರೀತಿ ಕಳ್ಳಮತದಾನ ನಡೆದಿದೆ. ಚುನಾವಣಾಧಿಕಾರಿ ವಿರುದ್ಧ ನಾವು ದೂರು ನೀಡಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಅವರ ಜೊತೆ ಯಾರ್ಯಾರು ಭಾಗಿಯಾಗಿದ್ದಾರೋ ಅವರಿಗೂ ಶಿಕ್ಷೆ ಆಗಬೇಕು ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ

Source link

ತಾವು ‘ಹೀರೋ’ ಆದ ಕತೆ ಹೇಳಿದ ಟಿಎನ್ ಸೀತಾರಾಮ್: ವಿಡಿಯೋ ನೋಡಿ

ಟಿಎನ್ ಸೀತಾರಾಮ್ (TN Seetharam) ಅವರು ಜನಪ್ರಿಯ ಧಾರಾವಾಹಿ ನಿರ್ದೇಶಕರು ಮಾತ್ರವಲ್ಲದೆ ನಟರೂ ಸಹ ಹೌದು. ಕೆಲ ಸಿನಿಮಾಗಳನ್ನು ಸಹ ಅವರು ನಿರ್ದೇಶನ ಮಾಡಿದ್ದಾರೆ. ಆದರೆ ದಶಕಗಳ ಹಿಂದೆ ಅವರು ನಾಯಕನಾಗಿಯೂ ಸಹ ನಟಿಸಿದ್ದರು. ಸೀತಾರಾಮ್ ಅವರ ಗುರುಗಳಾದ ಪಿ ಲಂಕೇಶ್ ಅವರೇ ನಿರ್ದೇಶಿಸಿದ್ದ ಸಿನಿಮಾ ಅದಾಗಿತ್ತು. ಲಂಕೇಶರು ನಿರ್ದೇಶಿಸಿದ್ದ ‘ಪಲ್ಲವಿ’ ಸಿನಿಮಾನಲ್ಲಿ ತಾವು ನಾಯಕ ಆಗಿದ್ದು ಹೇಗೆ? ಲಂಕೇಶ್ ಅವರು ತಮ್ಮನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದು ಹೇಗೆ? ಎಂದು ಟಿಎನ್ ಸೀತಾರಾಮ್ ಅವರು ವಿವರಿಸಿದ್ದಾರೆ. ಅದರ ಜೊತೆಗೆ ಲಂಕೇಶ್ ಅವರೊಟ್ಟಿಗಿನ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಪ್ರೇಯಸಿಗಾಗಿ 10 ಕೋಟಿ ಬೆಲೆಯ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ

2026 ರ ಟಿ20 ವಿಶ್ವಕಪ್ ಗೆದ್ದು, ಪ್ರಸ್ತುತ ವಿಶ್ರಾಂತಿ ಮೂಡ್​ನಲ್ಲಿರುವ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿಯೊಂದಿಗೆ ಹೊಸ ಕಾರನ್ನು ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹೊಸ ಕಾರಿನ ಬೆಲೆ 10 ಕೋಟಿ ಗೂ. ಅಧಿಕ ಎಂದು ವರದಿಯಾಗಿದೆ.

ಹಾರ್ದಿಕ್ ಪಾಂಡ್ಯ ಫೆರಾರಿ 12 ಸಿಲಿಂಡ್ರಿ ಎಂಬ ಐಷಾರಾಮಿ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಭಾರತದಲ್ಲಿ ಇದರ ಆನ್​- ರೋಡ್ ಬೆಲೆ 10 ಕೋಟಿ ರೂ. ಎಂದು ಹೇಳಲಾಗುತ್ತದೆ. ಈ ಕಾರು ಕಪ್ಪು ಬಣ್ಣದ್ದಾಗಿದ್ದು, V12 ಎಂಜಿನ್, ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಹಾರ್ದಿಕ್ ಈ ಹೊಸ ಕಾರನ್ನು ಚಲಾಯಿಸುತ್ತಿದ್ದು, ಅವರ ಪಕ್ಕದಲ್ಲಿ ಮಹಿಕಾ ಶರ್ಮಾ ಇರುವುದನ್ನು ಕಾಣಬಹುದು.

ಹಾರ್ದಿಕ್ ಪಾಂಡ್ಯಗೆ ಕಾರಿನ ವ್ಯಾಮೋಹ ಹೆಚ್ಚು. ಅವರ ಬಳಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಆಡಿ A6, ರೇಂಜ್ ರೋವರ್ ವೋಗ್, ಲಂಬೋರ್ಘಿನಿ ಉರಸ್ SE, ಮತ್ತು ಮರ್ಸಿಡಿಸ್-ಬೆನ್ಜ್ ಸೇರಿದಂತೆ ಹಲವು ದುಬಾರಿ ಬೆಲೆಯ ಐಷರಾಮಿ ಕಾರುಗಳಿವೆ. ಇತ್ತೀಚೆಗೆ, ಅವರು ತಮ್ಮ ಮಗ ಅಗಸ್ತ್ಯನಿಗೆ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು, ಇದರ ಬೆಲೆ ಸುಮಾರು 4 ಕೋಟಿ ರೂ. ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡ್ವಾನ್ಸ್ ಬುಕಿಂಗ್​​ನಲ್ಲಿಯೇ ನೂರು ಕೋಟಿ ಗಳಿಕೆ ದಾಟಿದ ‘ಧುರಂಧರ್ 2’

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾಕ್ಕಿಂತಲೂ ಭಾರಿ ದೊಡ್ಡ ಯಶಸ್ಸನ್ನು ‘ಧುರಂಧರ್ 2’ ಗಳಿಸಲಿರುವುದು ಬಹುತೇಕ ಖಾತ್ರಿ ಆಗಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲವೇ ದಿನಗಳಾಗಿದ್ದು ಅಷ್ಟರಲ್ಲೇ ಈ ಸಿನಿಮಾ ಕೇವಲ ಮುಂಗಡ ಬುಕಿಂಗ್ ನಿಂದಲೇ 100 ಕೋಟಿ ಗಳಿಕೆ ದಾಟಿದೆ. ಅಲ್ಲಿಗೆ ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾದ ಕಲೆಕ್ಷನ್ ಹಳೆಯ ದಾಖಲೆಗಳನ್ನೆಲ್ಲ ಪುಡಿಗಟ್ಟುವುದು ಖಾತ್ರಿಯೇ ಆಗಿದೆ.

‘ಧುರಂಧರ್ 2’ ಸಿನಿಮಾದ ಟ್ರೈಲರ್ ಮಾರ್ಚ್ 7ರಂದು ಬಿಡುಗಡೆ ಆಗಿತ್ತು. ಅದೇ ದಿನ ಸಿನಿಮಾದ ಪ್ರೀಮಿಯರ್ ಶೋಗೆ ಅಡ್ವಾನ್ಸ್ ಬುಕಿಂಗ್ ಆರಂಭವಾಗಿತ್ತು. ಅದಾದ ಕೆಲವು ದಿನಗಳ ಬಳಿಕ ಸಿನಿಮಾದ ಇತರೆ ಶೋಗಳಿಗೆ ಅಂದರೆ ರಿಲೀಸ್ ಡೇಟ್​ ಮತ್ತು ಅದರ ಬಳಿಕದ ಮೂರ್ನಾಲ್ಕು ದಿನಗಳ ಶೋಗಳಿಗೆ ಅಡ್ವಾನ್ಸ್ ಬುಕಿಂಗ್ ಓಪನ್ ಆಯ್ತು. ಇದೀಗ ಎಲ್ಲ ಅಡ್ವಾನ್ಸ್ ಬುಕಿಂಗ್ ಸೇರಿ ‘ಧುರಂಧರ್ 2’ ಸಿನಿಮಾದ ಗಳಿಕೆ 100 ಕೋಟಿಯನ್ನು ದಾಟಿಬಿಟ್ಟಿದೆ.

ವರದಿಗಳ ಪ್ರಕಾರ, ಪೇಯ್ಡ್ ಪ್ರೀಮಿಯರ್ ಮತ್ತು ಸಿನಿಮಾ ಬಿಡುಗಡೆ ದಿನದ (ಮಾರ್ಚ್ 19) ಶೋಗಳ ಗಳಿಕೆಯಿಂದಲೇ ಸಿನಿಮಾ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಇದರಲ್ಲಿ 44 ಕೋಟಿಗೂ ಹೆಚ್ಚಿನ ಮೊತ್ತ ಭಾರತದ ಮುಂಗಡ ಬುಕಿಂಗ್​​ಗಳಿಂದ ಬಂದರೆ ಉಳಿಕೆ ಮೊತ್ತ ಬಂದಿರುವುದು ಓವರ್​​ಸೀಸ್​ ಅಥವಾ ವಿದೇಶಗಳಿಂದ. ಸಿನಿಮಾಕ್ಕೆ ಭಾರಿ ನಿರೀಕ್ಷೆ ಇದ್ದು, ಟಿಕೆಟ್ ದರ ಹೆಚ್ಚಿದ್ದರೂ ಸಹ ಜನ ಮುಗಿಬಿದ್ದು ಟಿಕೆಟ್​ ಖರೀದಿ ಮಾಡುತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ಬ್ಯಾನ್ ಆಗಿದ್ದರೂ, ಕೆಲ ರಾಷ್ಟ್ರಗಳಲ್ಲಿ ಯುದ್ಧ ಪರಿಸ್ಥಿತಿ ಇದ್ದರೂ ಸಹ ಜನ ಮುಗಿಬಿದ್ದು ಸಿನಿಮಾ ನೋಡಲು ಮುಂದಾಗಿದ್ದಾರೆ.

ಇದನ್ನೂ ಓದಿ:ಕ್ರಿಕೆಟರ್ ಆಗಬೇಕಿದ್ದ ‘ಧುರಂಧರ್’ ನಿರ್ದೇಶಕ ಆದಿತ್ಯ ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ?

‘ಧುರಂಧರ್ 2’ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಮಾರ್ಚ್ 18ರ ಸಂಜೆಯಿಂದಲೇ ಪ್ರದರ್ಶನ ಆರಂಭಿಸಲಿವೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಪೇಯ್ಡ್ ಪ್ರೀಮಿಯರ್​​ ಟಿಕೆಟ್ ಬೆಲೆಗಳನ್ನು ಏರಿಕೆ ಮಾಡಲಾಗಿದ್ದು, ಇದರಿಂದಲೇ ದೊಡ್ಡ ಮೊತ್ತವನ್ನು ಚಿತ್ರತಂಡ ಬಾಚಿಕೊಳ್ಳಲಿದೆ. ಇನ್ನು ಮಾರ್ಚ್ 19ರ ರಿಲೀಸ್​​ಗೂ ಸಹ ಟಿಕೆಟ್ ದರಗಳು ಕಡಿಮೆ ಏನಿಲ್ಲ. ಸಿನಿಮಾದಲ್ಲಿ ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಮ್​​ಪಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭೀಕರ ಅಪಘಾತದಲ್ಲಿ ಮೂವರು SIಗಳು ಸಾವು: ದುರಂತದ ಬಗ್ಗೆ SP ಹೇಳಿದ್ದಿಷ್ಟು

ಚಿತ್ರದುರ್ಗ, ಮಾರ್ಚ್​​ 15: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಬಳಿ ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ರಿಸರ್ವ್ ಸಬ್​ಇನ್ಸ್​ಪೆಕ್ಟರ್​ಗಳು (ಆರ್​ಎಸ್​ಐ) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಿಖರ ಕಾರಣದ ಬಗ್ಗೆ ಐಮಂಗಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ದುರಂತದ ಬಗ್ಗೆ ಚಿತ್ರದುರ್ಗ ಎಸ್​​ಪಿ ರಂಜಿತ್ ಕುಮಾರ್ ಬಂಡಾರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಹೀಗೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹಬ್ಬಕ್ಕೆಂದು ಊರಿಗೆ ತೆರಳುವವರಿಗೆ ಗುಡ್​​ನ್ಯೂಸ್​​: ಕೆಎಸ್​​ಆರ್​​ಟಿಸಿಯಿಂದ 2,000 ಹೆಚ್ಚುವರಿ ಬಸ್​​ ವ್ಯವಸ್ಥೆ

ಬೆಂಗಳೂರು, ಮಾರ್ಚ್​​ 15: ಯುಗಾದಿ ಮತ್ತು ಈದ್-ಉಲ್-ಫಿತ್ರ್ ಹಬ್ಬಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ಊರುಗಳು ಮತ್ತು ಅಂತಾರಾಜ್ಯಗಳ ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಹೀಗಾಗಿ ಹಬ್ಬಗಳ ವೇಳೆ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಆಗಬಾರದೆಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈ ಸಂದರ್ಭ ರಾಜ್ಯದಾದ್ಯಂತ 2,000 ಹೆಚ್ಚುವರಿ ಬಸ್ಸುಗಳ ಸಂಚಾರಕ್ಕೆ ನಿರ್ಧರಿಸಿರೋದಾಗಿ ಪ್ರಕಟಣೆ ಮೂಲಕ KSRTC ತಿಳಿಸಿದೆ.

ಯಾವೆಲ್ಲ ದಿನ ಹೆಚ್ಚುವರಿ ಬಸ್​​ ಸಂಚಾರ?

ಸಾರಿಗೆ ನಿಗಮದ ಮಾಹಿತಿ ಪ್ರಕಾರ, ಮಾರ್ಚ್ 19ರಂದು ಯುಗಾದಿ ಹಾಗೂ ಮಾರ್ಚ್ 21ರಂದು ಈದ್-ಉಲ್-ಫಿತ್ರ್ ಹಬ್ಬಗಳಿರುವ ಹಿನ್ನೆಲೆಯಲ್ಲಿ ಮಾರ್ಚ್ 18, 19 ಮತ್ತು 20ರಂದು ವಿಶೇಷ ಬಸ್ ಸೇವೆಗಳು ಇರಲಿವೆ. ಇದೇ ವೇಳೆ ವಿವಿಧ ರಾಜ್ಯ ಮತ್ತು ಅಂತಾರಾಜ್ಯಗಳಿಂದ ಮಾರ್ಚ್ 22ರಂದು ಬೆಂಗಳೂರಿಗೆ ಹಿಂದಿರುಗಲೂ ಈ ವಿಶೇಷ ಬಸ್ ಸೇವೆಗಳು ಇರಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಮತ್ತು ಬಳ್ಳಾರಿ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ಸುಗಳು ಸಂಚರಿಸಲಿವೆ. ಇದಲ್ಲದೆ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಕುಶಾಲನಗರ ಹಾಗೂ ಮಡಿಕೇರಿ ಕಡೆಗೂ ಹೆಚ್ಚುವರಿ ಬಸ್ ಸೇವೆಗಳು ಲಭ್ಯವಿರಲಿವೆ. ಪ್ರಯಾಣಿಕರು KSRTC ವೆಬ್‌ಸೈಟ್ ಹಾಗೂ ಕರ್ನಾಟಕ ಮತ್ತು ನೆರೆ ರಾಜ್ಯಗಳಲ್ಲಿನ ರಿಸರ್ವೇಶನ್ ಕೌಂಟರ್‌ಗಳ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ

ವಿಶೇಷ ರಿಯಾಯಿತಿ

ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ ಶೇ.5 ರಿಯಾಯಿತಿ ಹಾಗೂ ಹೋಗಿ-ಬರುವ (ರಿಟರ್ನ್) ಪ್ರಯಾಣದ ಟಿಕೆಟ್ ಒಂದೇ ವೇಳೆ ಬುಕ್ ಮಾಡಿದರೆ ಶೇ. 10ರಷ್ಟು ರಿಯಾಯಿತಿಯನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಂದೆಯಾಗುವ ಸಂತಸದಲ್ಲಿ ಸೂರ್ಯಕುಮಾರ್; ಬೇಬಿ ಶವರ್ ವಿಡಿಯೋ ವೈರಲ್

ತನ್ನ ನಾಯಕತ್ವದಲ್ಲಿ ಭಾರತ ತಂಡಕ್ಕೆ ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಟ್ಟ ಸಂತಸದಲ್ಲಿದ್ದ ಸೂರ್ಯಕುಮಾರ್ ಯಾದವ್ ಅವರ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗುತ್ತಿದೆ. ಸೂರ್ಯಕುಮಾರ್ ಯಾದವ್ ಅವರ ಮಡದಿ ದೇವಿಶಾ ಶೆಟ್ಟಿ ಅವರ ಬೇಬಿ ಶವರ್ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸೂರ್ಯಕುಮಾರ್ ಯಾದವ್ ಬಿಳಿ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದೇವಿಶಾ ಸೀರೆಯುಟ್ಟ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿಯ ಕೈ ಹಿಡಿದು ಒಳಗೆ ಪ್ರವೇಶಿಸುತ್ತಿರುವುದು ಕಾಣಬಹುದು.

ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಮೊದಲು ಭೇಟಿಯಾದದ್ದು ಕಾಲೇಜಿನಲ್ಲಿ. ಆ ನಂತರ ಸ್ನೇಹ ಪ್ರೇಮಕ್ಕೆ ತಿರುಗಿ, ಸೂರ್ಯಕುಮಾರ್ ದೇವಿಶಾ ಅವರಿಗೆ ಪ್ರಪೋಸ್ ಮಾಡಿದರು. ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಇಬ್ಬರೂ 2016 ರಲ್ಲಿ ವಿವಾಹವಾದರು. ದೇವಿಶಾ ಶೆಟ್ಟಿ ಕರ್ನಾಟಕದ ಉಡುಪಿ ಮೂಲದವರು. ಕಾಪು ಮಾರಿಕಾಂಬೆಯ ಪರಮಭಕ್ತರಾಗಿರುವ ಈ ಜೋಡಿ ಆಗಾಗ್ಗೆ ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಜೀವನದಲ್ಲಿ ಹಣದ ಕೊರತೆ ಎದುರಾಗಬಾರದೆಂದರೆ ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಿ

ಆಚಾರ್ಯ ಚಾಣಕ್ಯರು (Acharya Chanakya)  ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೌದು ಶ್ರೀಮಂತಿಕೆಯನ್ನು ಗಳಿಸಲು ಏನು ಮಾಡಬೇಕು, ಯಶಸ್ಸು ಗಳಿಸುವುದು ಹೇಗೆ ಎಂಬುದರ ಬಗ್ಗೆ ಹೇಳಿದ್ದಾರೆ. ಹಣ ಗಳಿಕೆ ಮಾತ್ರವಲ್ಲದೆ ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಏನು ಮಾಡಬೇಕು ಎಂಬುದರ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಚಾಣಕ್ಯರು ಹೇಳಿರುವ ಈ ನೀತಿಪಾಠಗಳನ್ನು ನೀವು ಪಾಲಿಸಿದರೆ ಖಂಡಿತವಾಗಿಯೂ ಜೀವನದಲ್ಲಿ ಹಣದ ಕೊರತೆ ಬಾರದಂತೆ, ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳಬಹುದು.

ಹಣದ ಕೊರತೆ ಎದುರಾಗಬಾರದೆಂದರೆ ಏನು ಮಾಡಬೇಕು?

ಹಣ ಗಳಿಕೆಯ ಮಾರ್ಗ ಪ್ರಾಮಾಣಿಕವಾಗಿರಲಿ: ಅನ್ಯಾಯದ ಮಾರ್ಗ, ವಂಚನೆ ಅಥವಾ ಇತರರಿಗೆ ನೋವು ಕೊಟ್ಟು ಗಳಿಸಿದ ಹಣ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಅಂತಹ ಸಂಪತ್ತು ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸಬಹುದು. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಗಳಿಸಿದ ಹಣ ಮಾತ್ರ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಕೆಟ್ಟ ಸಮಯಕ್ಕಾಗಿ ಹಣವನ್ನು ಉಳಿಸಿ: ಸಂಕಷ್ಟಗಳು ಯಾವ ಸಂದರ್ಭದಲ್ಲಿ ಬರುತ್ತದೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಭವಿಷ್ಯಕ್ಕಾಗಿ ಮತ್ತು ತುರ್ತು ಸಂದರ್ಭಗಳಿಗಾಗಿ ಆದಾಯದ ಸ್ವಲ್ಪ ಭಾಗವನ್ನು ಉಳಿಸಬೇಕು. ಗಳಿಸಿದ ಎಲ್ಲಾ ಹಣವನ್ನು  ಖರ್ಚು ಮಾಡುವ ವ್ಯಕ್ತಿಯು ತೀರಾ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.  ಹಾಗಾಗಿ ಯಾವಾಗಲೂ ಸಂಪಾದನೆಯ ಒಂದು ಭಾಗವನ್ನು ಕಷ್ಟದ ಸಂದರ್ಭಗಳಿಗಾಗಿ ಉಳಿಸಿ.

ನಿಮ್ಮ ಯೋಜನೆಗಳನ್ನು ಯಾರಿಗೂ ಹೇಳಬೇಡಿ: ನೀವು ಹೊಸ ಉದ್ಯಮವನ್ನು ಪ್ರಾರಂಭಿಸುವ ಯೋಜನೆಯಲ್ಲಿದ್ದರೆ  ಅಥವಾ ಹಣ ಹೂಡಿಕೆ ಮಾಡಲು ಹೊರಟಿದ್ದರೆ, ಅದರ ಬಗ್ಗೆ ಎಲ್ಲರಿಗೂ ಹೇಳಬೇಡಿ. ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡುವುದರಿಂದ ಎದುರಾಗುವ ಎಲ್ಲಾ ರೀತಿಯ ಅಪಾಯಗಳನ್ನು ತಡೆ ಹಿಡಯಬಹುದು ಮತ್ತು ಇದರಿಂದ ಆರ್ಥಿಕ ತೊಂದರೆಗಳೂ ಎದುರಾಗುವುದಿಲ್ಲ.

ಇದನ್ನೂ ಓದಿ: ಜೀವನದಲ್ಲಿ ಸಂತೋಷವಾಗಿರಬೇಕೆಂದರೆ ಚಾಣಕ್ಯರ ತತ್ವಗಳನ್ನು ಅನುಸರಿಸಿ

ಹಣ ಮತ್ತು ದಾನದ ಸರಿಯಾದ ಬಳಕೆ:  ಗಳಿಸಿದ ಹಣವನ್ನು ಕೂಡಿಟ್ಟರೆ ಅದರ ಮೌಲ್ಯ ಕಡಿಮೆಯಾಗುತ್ತದೆ. ಹಾಗಾಗಿ  ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಲು ಕಲಿಯಬೇಕು. ಇದರಿಂದ ಗಳಿಸಿದ ಹಣವು ದುಪ್ಪಟ್ಟಾಗುತ್ತದೆ. ಮತ್ತು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಾಯ ಮಾಡಿ, ನಿಮ್ಮ ಸಾಮರ್ಥ್ಯಕ್ಕೂ ಮೀರಿ ಯಾರಿಗೂ ದಾನ ಮಾಡಬೇಡಿ ಇದರಿಂದ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂದು ಚಾಣಕ್ಯರು ಹೇಳಿದ್ದಾರೆ.

ಸೋಮಾರಿತನ ಬಿಟ್ಟು ಕಷ್ಟಪಟ್ಟು ಕೆಲಸ ಮಾಡಿ: ಇಂದಿನ ಕೆಲಸಗಳನ್ನು ನಾಳೆಗೆ ಮುಂದೂಡುವ ಸೋಮಾರಿ ವ್ಯಕ್ತಿಯ ಬಳಿ ಎಂದಿಗೂ ಹಣ ಉಳಿಯುವುದಿಲ್ಲ. ಯಶಸ್ಸು ಮತ್ತು ಸಂಪತ್ತಿಗೆ ಶಿಸ್ತು ಮತ್ತು ಕಠಿಣ ಪರಿಶ್ರಮ ಅತ್ಯಗತ್ಯ. ಹಾಗಾಗಿ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ನೀವು ಆರ್ಥಿಕವಾಗಿ ಸ್ಥಿತಿವಂತತರಾಗುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version