ಆನೇಕಲ್ ಸರಣಿ ಅಪಘಾತ: 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ – Kannada News | Anekal Container Truck Serial Accident: Drunk Driver Hits more than 20 Vehicles

ಆನೇಕಲ್, ಡಿಸೆಂಬರ್ 21: ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಪೊಲೀಸರಿಂದ 14 ಕಿಮೀ ತಪ್ಪಿಸಿಕೊಂಡು ಹೋದ ಲಾರಿ ಚಾಲಕ, ಚಂದಾಪುರದಲ್ಲಿ ಸಾರ್ವಜನಿಕ ಕೈಗೆ ಸಿಕ್ಕಿಬಿದಿದ್ದಾನೆ. ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್​​ನ್ಯೂಸ್​​​: ಮುಂದಿನ ವಾರ ಹಣ ಬಿಡುಗಡೆ ಎಂದ ಸಚಿವೆ ಹೆಬ್ಬಾಳ್ಕರ್ – Kannada News | Good News for Gruha Lakshmi Scheme Beneficiaries: Minister Hebbalkar Says Funds to Be Released Next Week

ಬೆಳಗಾವಿ, ಡಿಸೆಂಬರ್​ 21: ಗೃಹಲಕ್ಷ್ಮೀ ಯೋಜನೆಯ (Gruha Lakshmi) ಹಣ ಬಿಡುಗಡೆ ವಿಚಾರವಾಗಿ ಇತ್ತೀಚೆಗೆ ಅಧಿವೇಶನದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿರುವ ಮಹಿಳೆಯರಿಗೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಗುಡ್​ನ್ಯೂಸ್​​ ನೀಡಿದ್ದಾರೆ. ಸೋಮವಾರದಿಂದ ಶನಿವಾರದ ಒಳಗಡೆ 24ನೇ ಕಂತು ಬಿಡುಗಡೆ ಆಗುತ್ತೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​, ಈಗಾಗಲೇ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿದೆ. ಮುಂದಿನ ವಾರ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಸತ್ತವರ ಖಾತೆ​​ಗೂ ಗೃಹಲಕ್ಷ್ಮೀ ಯೋಜನೆ ಹಣಕ್ಕೆ ಬ್ರೇಕ್​​

ಇನ್ನು ಸತ್ತವರ ಖಾತೆ​​ಗೂ ಗೃಹಲಕ್ಷ್ಮೀ ಯೋಜನೆ ಹಣ ಸಂದಾಯ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಸಿಎಸ್​ ನೇತೃತ್ವದಲ್ಲಿ ಎರಡು ಬಾರಿ ಸಭೆ ಮಾಡಲಾಗಿದೆ. ಸತ್ತವರ ಅಕೌಂಟ್​​ಗೆ ಹಣ ಸಂದಾಯವಾದರೆ ತಕ್ಷಣ ಗೊತ್ತಾಗಲ್ಲ. ಈಗ ಸಾಫ್ಟ್​ವೇರ್​​​ ಅಭಿವೃದ್ಧಿ ಅಳವಡಿಕೆ ಮಾಡಿದ್ದೇವೆ. ಮರಣ ಪ್ರಮಾಣ ಪತ್ರಗಳನ್ನು ಅಂಗನವಾಡಿ ಕಾರ್ಯಕರ್ತರು ಪರಿಶೀಲನೆ ಮಾಡುತ್ತಾರೆ. ಹೀಗಾಗಿ ಅದನ್ನ ಸದ್ಯಕ್ಕೆ ತಡೆಹಿಡಿದಿದ್ದೇವೆ. ತಪ್ಪಾಗಿ ಸಂದಾಯವಾಗಿರುವ ಹಣವನ್ನು ವಾಪಸ್ ಪಡೆಯುವ ಹೊಣೆಗಾರಿಕೆಯನ್ನು ಕೆಲ ಬ್ಯಾಂಕ್​​ಗೆ ಸೂಚನೆ ಕೊಟ್ಟಿದ್ದೇವೆ. ಸಿಎಸ್ ಬ್ಯಾಂಕ್​​ಗೆ ನೋಟಿಸ್ ಕೊಟ್ಟಿದ್ದಾರೆ, ಲೇಟರ್ ಬರೆದಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ 19 ತಾಲೂಕುಗಳು ಆಗುವ ಸಾಧ್ಯತೆ ಇದೆ

ಬೆಳಗಾವಿ ಜಿಲ್ಲಾ ವಿಭಜನೆ ಕೂಗು ತಣ್ಣಗಾಯಿತಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಿಎಂ ಮನಸ್ಸಿನಲ್ಲಿ ಜಿಲ್ಲೆ ವಿಭಜನೆ ಮಾಡಬೇಕು ಅನ್ನೋದು ಇದೆ. ಆಡಳಿತಾತ್ಮಕ, ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ವಿಭಜನೆ ಆಗಬೇಕಿದೆ. ಬೆಳಗಾವಿ ತಾಲೂಕಿನಲ್ಲಿ ಹನ್ನೊಂದೂವರೆ ಲಕ್ಷ ಜನಸಂಖ್ಯೆ ಇದೆ. ಇಷ್ಟು ಜನಸಂಖ್ಯೆಗೆ ಒಬ್ಬ ತಹಶೀಲ್ದಾರ್​, ಬಹಳ ತೊಂದರೆ ಆಗುತ್ತೆ ಎಂದರು.

ಇದನ್ನೂ ಓದಿ: ಗೃಹ’ಲಕ್ಷ್ಮೀ’ ವಿವಾದ: ಹಣ ಪಾವತಿ ಆಗದಿರೋದ್ಯಾಕೆ? ಬಾಕಿ ಮೊತ್ತ ಜಮೆ ಯಾವಾಗ?; ಇಲ್ಲಿದೆ ಮಾಹಿತಿ

ಬೆಳಗಾವಿ ಜಿಲ್ಲೆಯಲ್ಲಿ 19 ತಾಲೂಕುಗಳು ಆಗುವ ಸಾಧ್ಯತೆ ಇದೆ. ಜಿಲ್ಲೆ ವಿಭಜನೆ ಘೋಷಣೆ ಮಾಡುವ ಮನಸ್ಸಿನಿಂದಲೇ ಸಿಎಂ ಬಂದಿದ್ದರು. ಬಹಳಷ್ಟು ಜನರು ನಿಯೋಗ ಬಂದಿದ್ದರಿಂದ ಚಿಂತನೆ ಮಾಡಿಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

Vande Bharat Pilot: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪೈಲಟ್‌ ಸಂಬಳ ಎಷ್ಟು? ಆಯ್ಕೆ ಪ್ರಕ್ರಿಯೆ ಮತ್ತು ಜವಾಬ್ದಾರಿ ತಿಳಿಯಿರಿ – Kannada News | Vande Bharat Pilot Salary: How to Become a High Speed Train Driver

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಈಗ ದೇಶಾದ್ಯಂತ ಓಡುತ್ತಿವೆ. ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ಈ ಹೈ-ಸ್ಪೀಡ್ ರೈಲುಗಳನ್ನು ಓಡಿಸುವುದು ಸಾಮಾನ್ಯ ಕೆಲಸವಲ್ಲ. ರೈಲ್ವೆ ಈ ಜವಾಬ್ದಾರಿಗಳನ್ನು ಹೆಚ್ಚು ಕೌಶಲ್ಯಪೂರ್ಣ ಮತ್ತು ಅನುಭವಿ ಪೈಲಟ್‌ಗಳಿಗೆ ಮಾತ್ರ ವಹಿಸುತ್ತದೆ. ಆದ್ದರಿಂದ ವಂದೇ ಭಾರತ್ ಪೈಲಟ್‌ನ ಸಂಬಳ ಎಷ್ಟು? ಅವರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವೃತ್ತಿಜೀವನ ಆರಂಭ:

ಒಬ್ಬ ವ್ಯಕ್ತಿಯು ನೇರವಾಗಿ ವಂದೇ ಭಾರತ್ ರೈಲಿಗೆ ಪೈಲಟ್ ಆಗಲು ಸಾಧ್ಯವಿಲ್ಲ. ಇದಕ್ಕಾಗಿ ಒಂದು ವ್ಯವಸ್ಥಿತ ಪ್ರಕ್ರಿಯೆ ಇದೆ:

  • ಸಹಾಯಕ ಲೋಕೋ ಪೈಲಟ್: ವೃತ್ತಿಜೀವನ ಆರಂಭವಾಗುವುದು ಸಹಾಯಕ ಲೋಕೋ ಪೈಲಟ್ ಆಗಿ. ಅವರು ಹಿರಿಯ ಪೈಲಟ್‌ಗಳಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಾರೆ.
  • ಲೋಕೋ ಪೈಲಟ್ (ಶಂಟಿಂಗ್/ಸರಕು ಸಾಗಣೆ): ಯಾರ್ಡ್‌ಗಳಲ್ಲಿ ರೈಲುಗಳನ್ನು ಸರಿಹೊಂದಿಸಿ ನಂತರ ಸರಕು ರೈಲುಗಳನ್ನು ಓಡಿಸುವ ಮೂಲಕ ಅನುಭವವನ್ನು ಪಡೆಯುತ್ತಾರೆ.
  • ಪ್ರಯಾಣಿಕ – ಎಕ್ಸ್‌ಪ್ರೆಸ್: ದೀರ್ಘಾವಧಿಯ ಅನುಭವದ ನಂತರ, ಪ್ರಯಾಣಿಕ ರೈಲುಗಳನ್ನು ಮತ್ತು ನಂತರ ವಂದೇ ಭಾರತ್‌ನಂತಹ ಪ್ರೀಮಿಯಂ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ಅವಕಾಶ ಸಿಗುತ್ತದೆ.
  • ಮುಖ್ಯ ಲೋಕೋ ಇನ್ಸ್‌ಪೆಕ್ಟರ್: ಇದು ಅತ್ಯುನ್ನತ ಮಟ್ಟ. ಅವರು ರೈಲು ಕಾರ್ಯಾಚರಣೆ ಮತ್ತು ತರಬೇತಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ.

ವಂದೇ ಭಾರತ್ ಪೈಲಟ್‌ಗಳ ಜವಾಬ್ದಾರಿಗಳು:

ಈ ಪೈಲಟ್‌ಗಳ ಜವಾಬ್ದಾರಿಗಳು ಕೇವಲ ರೈಲು ಪ್ರಾರಂಭಿಸುವುದಲ್ಲ, ಅವರು ಪ್ರಮುಖ ಜವಾಬ್ದಾರಿಗಳನ್ನು ಸಹ ನಿರ್ವಹಿಸುತ್ತಾರೆ.

  • ಆಧುನಿಕ ಲೋಕೋಮೋಟಿವ್ ಮತ್ತು ಗಣಕೀಕೃತ ಎಂಜಿನ್ ವ್ಯವಸ್ಥೆಗಳ ಮೇಲ್ವಿಚಾರಣೆ.
  • ರೈಲಿನ ವೇಗವನ್ನು ನಿಯಂತ್ರಿಸುವುದು ಮತ್ತು ಬ್ರೇಕಿಂಗ್ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು.
  • ನಿಲ್ದಾಣದ ಸಿಬ್ಬಂದಿ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕ.
  • ಯಾವುದೇ ತಾಂತ್ರಿಕ ಸಮಸ್ಯೆಗಳಿಗೆ ತಕ್ಷಣ ಪ್ರತಿಕ್ರಿಯಿಸಿ ಮತ್ತು ಸುರಕ್ಷತಾ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಕ್ರೆಡಿಟ್ ಆಫೀಸರ್ ಹುದ್ದೆಗೆ ನೇಮಕಾತಿ

ಸಂಬಳ ಮತ್ತು ಭತ್ಯೆಗಳು:

7ನೇ ವೇತನ ಆಯೋಗದ ಪ್ರಕಾರ, ಲೋಕೋ ಪೈಲಟ್‌ಗಳಿಗೆ ಉತ್ತಮ ಸಂಬಳವಿದೆ.

  • ಹೊಸ ALP: ಆರಂಭಿಕ ಮೂಲ ವೇತನ 19,900 ರೂ.ಗಳಾಗಿದ್ದು, ಒಟ್ಟು ಭತ್ಯೆಗಳು 44,000 ರೂ.ಗಳಿಂದ 51,000 ರೂ.ಗಳವರೆಗೆ ಇರಬಹುದು.
  • ವಂದೇ ಭಾರತ್ ಪೈಲಟ್: ಈ ಪ್ರೀಮಿಯಂ ರೈಲನ್ನು ನಿರ್ವಹಿಸುವ ಹಿರಿಯ ಪೈಲಟ್‌ಗಳ ಮೂಲ ವೇತನವು ರೂ. 65,000 ರಿಂದ ರೂ. 85,000 ವರೆಗೆ ಇರುತ್ತದೆ.
  • ಹಿರಿಯ ಪೈಲಟ್‌ಗಳು: 30 ವರ್ಷಗಳ ಅನುಭವ ಹೊಂದಿರುವವರು ಅಥವಾ ಮುಖ್ಯ ಲೋಕೋ ಇನ್ಸ್‌ಪೆಕ್ಟರ್ (CLI) ಮಟ್ಟದ ಅಧಿಕಾರಿಗಳು ಎಲ್ಲಾ ಭತ್ಯೆಗಳನ್ನು ಒಳಗೊಂಡಂತೆ ತಿಂಗಳಿಗೆ ರೂ. 2,00,000 ದಿಂದ ರೂ. 2,50,000 ವರೆಗೆ ಗಳಿಸುತ್ತಾರೆ.

ಹೆಚ್ಚುವರಿ ಪ್ರಯೋಜನಗಳು:

ರಾತ್ರಿ ಕೆಲಸ ಮಾಡುವವರಿಗೆ ಸಂಬಳದ ಜೊತೆಗೆ ಟಿಎ, ಡಿಎ, ಮನೆ ಬಾಡಿಗೆ ಮತ್ತು ರಾತ್ರಿ ಕರ್ತವ್ಯ ಭತ್ಯೆಗಳನ್ನು ಪಡೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ವಂದೇ ಭಾರತ್‌ನಂತಹ ಪ್ರತಿಷ್ಠಿತ ರೈಲನ್ನು ಓಡಿಸುವುದು ಅವರಿಗೆ ದೊಡ್ಡ ಗೌರವದ ಕೆಲಸವೂ ಕೂಡ ಹೌದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ ಶೆಟ್ಟಿ: ಕಾವ್ಯಾ ಖಡಕ್ ತಿರುಗೇಟು – Kannada News | Gilli Nata friend Kavya Shaiva says Rakshitha Shetty has over confidence in BBK 12

ಈ ಬಾರಿ ಬಿಗ್ ಬಾಸ್ ಗೆಲ್ಲೋದು ಯಾರು ಎಂಬ ಚರ್ಚೆ ಜೋರಾಗಿದೆ. ಗಿಲ್ಲಿ ನಟ (Gilli Nata) ಅವರೇ ಈ ಬಾರಿ ವಿನ್ ಆಗುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ. ಕಾಮಿಡಿ ಮೂಲಕ ಅವರು ಎಲ್ಲರನ್ನೂ ರಂಜಿಸುತ್ತಿದ್ದಾರೆ. ವೀಕ್ಷಕರಿಗೆ ಅವರ ಕಾಮಿಡಿ ಇಷ್ಟ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಹತ್ತಿರ ಆಗುತ್ತಿರುವಾಗ ಪೈಪೋಟಿ ಹೆಚ್ಚಿದೆ. ಗಿಲ್ಲಿ ನಟ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸುವುದಾಗಿ ರಕ್ಷಿತಾ ಶೆಟ್ಟಿ (Rakshitha Shetty) ಹೇಳಿದ್ದಾರೆ. ಅವರಿಗೆ ಕಾವ್ಯ ಶೈವ ಮಾತಿನ ಪಂಚ್ ನೀಡಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ಅವಳು ಇಲ್ಲದೇ ಸ್ಪಾರ್ಕ್ ಇರಲ್ಲ ಎಂಬ ಭ್ರಮೆಯಲ್ಲಿ ಇದ್ದಾಳೆ. ಕಾನ್ಫಿಡೆನ್ಸ್ ಇರಬೇಕು. ಆದರೆ ಅವಳಿಗೆ ಓವರ್ ಕಾನ್ಫಿಡೆನ್ಸ್ ಇದೆ’ ಎಂದು ಕಿಚ್ಚ ಸುದೀಪ್ ಎದುರಲ್ಲೇ ಕಾವ್ಯ (Kavya Shaiva) ಅವರು ಹೇಳಿದ್ದಾರೆ. ಭಾನುವಾರದ (ಡಿ.21) ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್ – Kannada News | Sameer Minhas brings up a superb Century Against India

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಫೈನಲ್​ ಪಾಕಿಸ್ತಾನ್ ತಂಡದ ಆರಂಭಿಕ ದಾಂಡಿಗ ಸಮೀರ್ ಮಿನ್​ಹಾಸ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡಕ್ಕೆ ಸಮೀರ್ ಮಿನ್​ಹಾಸ್ ಉತ್ತಮ ಆರಂಭ ಒದಗಿಸಿದರು.

ಆರಂಭದಿಂದಲೇ ಅತ್ಯುತ್ತಮ ಹೊಡೆತಗಳೊಂದಿಗೆ ಗಮನ ಸೆಳೆದ ಸಮೀರ್ ಮಿನ್​ಹಾಸ್ ಕೇವಲ 71 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದ ಬಳಿಕ ಕೂಡ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸಮೀರ್ 113 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 17 ಫೋರ್​ಗಳೊಂದಿಗೆ 172 ರನ್ ಬಾರಿಸಿದರು.

ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಪಾಕಿಸ್ತಾನ್ ತಂಡವು 45 ಓವರ್​ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 319 ರನ್ ಕಲೆಹಾಕಿದೆ.

ಭಾರತ ಅಂಡರ್-19 ಪ್ಲೇಯಿಂಗ್ 11: ಆಯುಷ್ ಮ್ಹಾತ್ರೆ (ನಾಯಕ),  ವೈಭವ್ ಸೂರ್ಯವಂಶಿ , ಆರೋನ್ ಜಾರ್ಜ್ , ವಿಹಾನ್ ಮಲ್ಹೋತ್ರಾ , ವೇದಾಂತ್ ತ್ರಿವೇದಿ , ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್) , ಕಾನಿಷ್ಕ್ ಚೌಹಾಣ್ , ಹೆನಿಲ್ ಪಟೇಲ್ , ಖಿಲನ್ ಪಟೇಲ್ , ದೀಪೇಶ್ ದೇವೇಂದ್ರನ್ , ಕಿಶನ್ ಕುಮಾರ್ ಸಿಂಗ್.

ಪಾಕಿಸ್ತಾನ್ ಅಂಡರ್-19 ಪ್ಲೇಯಿಂಗ್ 11: ಸಮೀರ್ ಮಿನ್​ಹಾಸ್,  ಹಮ್ಝ ಝಹೂರ್ (ವಿಕೆಟ್ ಕೀಪರ್) , ಉಸ್ಮಾನ್ ಖಾನ್ ,
ಅಹ್ಮದ್ ಹುಸೇನ್ , ಫರ್ಹಾನ್ ಯೂಸುಫ್ (ನಾಯಕ) , ಹುಜೈಫಾ ಅಹ್ಸಾನ್ , ನಿಖಾಬ್ ಶಫೀಕ್ , ಮೊಹಮ್ಮದ್ ಶಯಾನ್ , ಅಬ್ದುಲ್ ಸುಭಾನ್ , ಮೊಹಮ್ಮದ್ ಸಯ್ಯಮ್ , ಅಲಿ ರಾಝ.

Source link

ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ – Kannada News | Indian Railways hikes fares for long distance travel, revised rates from Dec 26th

ನವದೆಹಲಿ, ಡಿಸೆಂಬರ್ 21: ರೈಲು ಪ್ರಯಾಣ ಮುಂದಿನ ದಿನಗಳಲ್ಲಿ ತುಸು ದುಬಾರಿಯಾಗಲಿದೆ. ರೈಲು ಪ್ರಯಾಣ ಟಿಕೆಟ್ ದರಗಳಲ್ಲಿ ಅಲ್ಪ ಏರಿಕೆ ಮಾಡಲು ಭಾರತೀಯ ರೈಲ್ವೇಸ್ (Indian Railways) ನಿರ್ಧರಿಸಿದೆ. ದೂರ ಪ್ರಯಾಣದ ದರಗಳನ್ನು ಏರಿಕೆ ಮಾಡಲಾಗುತ್ತಿದೆ. ಸಬರ್ಬನ್ ರೈಲುಗಳ ದರಗಳಲ್ಲಿ ಬದಲಾವಣೆ ಇರುವುದಿಲ್ಲ. ಡಿಸೆಂಬರ್ 26ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

ವರದಿ ಪ್ರಕಾರ 215 ಕಿಮೀ ದೂರದವರೆಗಿನ ಜನರಲ್ ಕ್ಲಾಸ್ ಕಂಪಾರ್ಟ್ಮೆಂಟ್​ಗಳ ಟಿಕೆಟ್ ಬೆಲೆಗಳಲ್ಲಿ ಬದಲಾವಣೆ ಇರುವುದಿಲ್ಲ. ಅದಕ್ಕೂ ಹೆಚ್ಚಿನ ದೂರದ ಪ್ರಯಾಣವಾದರೆ, 215 ಕಿಮೀ ಮೇಲ್ಪಟ್ಟಿರುವ ಪ್ರತೀ ಒಂದು ಕಿಮೀಗೆ ಒಂದು ಪೈಸೆಯಷ್ಟು ದರ ಏರಿಕೆ ಆಗಲಿದೆ. ಅಂದರೆ ಪ್ರತೀ ನೂರು ಕಿಮೀ ಹೆಚ್ಚುವರಿ ದೂರಕ್ಕೆ ಒಂದು ರೂನಷ್ಟು ಬೆಲೆ ಏರಿಕೆ ಆಗಲಿದೆ. ಇದು ಜನರಲ್ ಕ್ಲಾಸ್ ಟಿಕೆಟ್​ಗಳಿಗೆ ಮಾಡಲಾಗಿರುವ ಏರಿಕೆ.

ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್​ ಬರಲ್ಲ: FSSAI ಸ್ಪಷ್ಟನೆ

ಇನ್ನು, ಎಸಿ ಕೋಚ್​ಗಳಿಗೆ ಟಿಕೆಟ್ ದರ ಪ್ರತೀ ಕಿಮೀಗೆ ಎರಡು ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಮೇಲ್ ಟ್ರೇನ್​ಗಳು ಅಥವಾ ಎಕ್ಸ್​ಪ್ರೆಸ್ ಟ್ರೈನುಗಳಲ್ಲಿನ ನಾನ್ ಎಸಿ ಕೋಚ್​ಗಳಿಗೂ ಟಿಕೆಟ್ ದರ 2 ಪೈಸೆ ಏರಿಕೆ ಮಾಡಲಾಗಿದೆ. ಈ ಕೋಚ್​ಗಳಲ್ಲಿ ಟಿಕೆಟ್ ದರ ಪ್ರತೀ 50 ಕಿಮೀ ದೂರಕ್ಕೆ 1 ಒಂದು ರೂ ಹೆಚ್ಚುವರಿ ದರ ಸೇರ್ಪಡೆಯಾಗುತ್ತದೆ.

ಈ ಪರಿಷ್ಕೃತ ಟಿಕೆಟ್ ದರದ ನಂತರವೂ ಭಾರತದಲ್ಲಿ ರೈಲು ಪ್ರಯಾಣ ಇನ್ನಿತರ ಸಾರಿಗೆ ವ್ಯವಸ್ಥೆಗಿಂತ ಕಡಿಮೆಯೇ ಇರುತ್ತದೆ. ಈ ಅಲ್ಪ ಏರಿಕೆಯಿಂದ ಭಾರತೀಯ ರೈಲ್ವೆಗೆ ವಾರ್ಷಿಕವಾಗಿ 600 ಕೋಟಿ ರೂನಷ್ಟು ಆದಾಯ ಹೆಚ್ಚಳ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ

ರೈಲ್ವೇಸ್​ನ ಹೆಚ್ಚುವರಿ ವೆಚ್ಚ ಸರಿದೂಗಿಸಲು ಟಿಕೆಟ್ ದರ ಏರಿಕೆ

ಭಾರತೀಯ ರೈಲ್ವೇಸ್ ಸಂಸ್ಥೆ ಕಳೆದ ಒಂದು ದಶಕದಲ್ಲಿ ತನ್ನ ಜಾಲವನ್ನು ಸಾಕಷ್ಟು ವಿಸ್ತರಿಸಿದೆ. ಟ್ರೈನುಗಳ ಸಂಖ್ಯೆ ಹೆಚ್ಚಿಸಿದೆ. ಮಾನವ ಸಂಪನ್ಮೂಲಗಳನ್ನೂ ಹೆಚ್ಚಿಸಿದೆ. ಮಾನವ ಸಂಪನ್ಮೂಲ ವೆಚ್ಚ 1,15,000 ಕೋಟಿ ರೂಗೆ ಏರಿದೆ. ಪಿಂಚಣಿ ವೆಚ್ಚ 60,000 ಕೋಟಿ ರೂ ಆಗಿದೆ. 2024-25ರಲ್ಲಿ ಅದರ ಕಾರ್ಯಾಚರಣೆಗಳ ಒಟ್ಟೂ ವೆಚ್ಚ 2.63 ಲಕ್ಷ ಕೋಟಿ ರೂಗೆ ಏರಿದೆ. ಈ ವೆಚ್ಚ ಹೆಚ್ಚಳವನ್ನು ಸರಿದೂಗಿಸಲು ರೈಲ್ವೇಸ್ ಟಿಕೆಟ್ ಪ್ರಯಾಣ ದರವನ್ನು ಏರಿಸುತ್ತಿದೆ. ಜುಲೈ ತಿಂಗಳಲ್ಲೂ ರೈಲ್ವೆ ಟಿಕೆಟ್ ಪ್ರಯಾಣ ದರವನ್ನು ಪರಿಷ್ಕರಿಸಿ ಪೈಸೆ ಲೆಕ್ಕದಲ್ಲಿ ಬೆಲೆ ಏರಿಕೆ ಮಾಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮನರೇಗಾ ಯೋಜನೆ ಹೆಸರು ಬದಲಾವಣೆ: ಕೇಂದ್ರದ ಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ – Kannada News | MNREGA Scheme Name Change: Mallikarjun Kharge Sparks on Central Government

ಕಲಬುರಗಿ, ಡಿಸೆಂಬರ್​ 21: ಮನರೇಗಾ ವಿಧೇಯಕ​ ಬಗ್ಗೆ ಇನ್ನೂ ಸಾಕಷ್ಟು ಚರ್ಚೆ ಮಾಡಬೇಕಿತ್ತು. ಮನರೇಗಾ ಯೋಜನೆ ತೆಗೆದು ಜಿ-ರಾಮ್​ ಜಿ ಬಿಲ್​ನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದಾರೆ. ಇದರಿಂದ ದೇಶದ ಬಡ ಜನರಿಗೆ ತೊಂದರೆಯಾಗುತ್ತಿದೆ ಎಂದು ಕೇಂದ್ರದ ಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಜನೆಯಲ್ಲಿ ಗಾಂಧಿ ಹೆಸರು ಇದ್ದಿದ್ದರೆ ಏನು ತೊಂದರೆ ಆಗ್ತಿತ್ತು. ಜಿ ರಾಮ್ ಜಿ ಹೆಸರು ಇಟ್ಟು ಏನು ಸಾಧನೆ ಮಾಡಿದ್ದೀರಿ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್ – Kannada News | DCM D.K. Shivakumar Launches Pulse Polio Campaign in Karnataka

ಬೆಂಗಳೂರು, ಡಿಸೆಂಬರ್ 21: ಇಂದಿನಿಂದ ಪಲ್ಸ್ ಪೋಲಿಯೋ ಅಭಿಯಾನ ಆರಂಭವಾಗಿದ್ದು, ಪುಟ್ಟ ಮಕ್ಕಳಿಗೆ ಪೋಲಿಯೋ ಲಸಿಕೆ  ಹಾಕುವ ಮೂಲಕ ಈ ಮಹತ್ವದ ಅಭಿಯಾನಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದಕ್ಕೆ ಚಾಲನೆ ನೀಡಿದರು. ಲಸಿಕೆ ಹಾಕುವ ಮುನ್ನ ಡಿ.ಕೆ. ಶಿವಕುಮಾರ್ ಮಕ್ಕಳನ್ನು ಮುದ್ದಾಡಿದ್ದು, ಪೋಲಿಯೋ ಹನಗಳನ್ನು ಹಾಕಿದ ನಂತರ ಮಕ್ಕಳಿಗೆ ಚಾಕೊಲೇಟ್‌ಗಳು ಮತ್ತು ಸಿಹಿ ತಿನಿಸುಗಳನ್ನು ನೀಡಲಾಯಿತು.  ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೊಮ್ಮಗಳಿಗೂ ಪೋಲಿಯೋ ಹನಿಗಳನ್ನು ನೀಡಲಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Yearly Horoscope 2026: 2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ – Kannada News | Leo Horoscope 2026: Dr. Basavaraj Gurujis Yearly Predictions

2026ರ ವರ್ಷವು ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ. ಈ ವರ್ಷದಲ್ಲಿ ಗ್ರಹಗಳ ಸಂಚಾರವು ಜೀವನದ ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದೆ. ಗುರು ಗ್ರಹವು ಜೂನ್ ಎರಡನೇ ತಾರೀಖಿನ ತನಕ ಲಾಭ ಸ್ಥಾನದಲ್ಲಿ ಇದ್ದು, ನಂತರ 12ನೇ ಮನೆಗೆ (ದ್ವಾದಶ ಸ್ಥಾನ) ಪ್ರವೇಶಿಸಲಿದ್ದಾನೆ. ಅಷ್ಟಮ ಶನಿ ವರ್ಷವಿಡೀ ಮುಂದುವರಿದರೆ, ರಾಹು 7ನೇ ಮನೆಯಿಂದ 6ನೇ ಮನೆಗೆ, ಕೇತು 1ನೇ ಮನೆಯಿಂದ 12ನೇ ಮನೆಗೆ ಸಂಚರಿಸಲಿದ್ದಾರೆ.

ಒಟ್ಟಾರೆಯಾಗಿ, ಸಿಂಹ ರಾಶಿಯವರು ಕೆಟ್ಟ ದಾರಿಯಿಂದ ಒಳ್ಳೆಯ ದಾರಿಗೆ ಪ್ರವೇಶಿಸುವ ಶುಭ ಕಾಲವಿದು. ಜವಾಬ್ದಾರಿಗಳು ಹೆಚ್ಚಾಗುತ್ತವೆಯಾದರೂ, ಮಾನಸಿಕ ಶಾಂತಿ ಮತ್ತು ಒತ್ತಡಗಳಲ್ಲಿ ಇಳಿಕೆ ಕಂಡುಬರುತ್ತದೆ. ಆರ್ಥಿಕ ಪ್ರಗತಿ ಮತ್ತು ಬಹು ದಿನಗಳ ಆಸೆಗಳು ಈಡೇರುವ ಸಾಧ್ಯತೆಗಳಿವೆ. ದುಸ್ಥಾನದಲ್ಲಿ ಪಾಪಗ್ರಹಗಳಿದ್ದಾಗ, ದುರಾಸೆಗೆ ಕಡಿವಾಣ ಹಾಕಿ, ಪ್ರಯತ್ನಗಳಿಗೆ ಒತ್ತು ನೀಡಿದರೆ ದ್ವಿಗುಣ ಅದೃಷ್ಟ ಪ್ರಾಪ್ತಿಯಾಗಲಿದೆ. ಇದು ಸಿಂಹ ರಾಶಿಯವರಿಗೆ ಒಂದು ಪುನರ್ಜನ್ಮದ ಕಾಲ ಎಂದೂ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನೋರಾ ಫತೇಹಿ ಕಾರು ಅಪಘಾತ: ಈಗ ಹೇಗಿದೆ ನಟಿಯ ಪರಿಸ್ಥಿತಿ? – Kannada News | Actress Nora Fatehi gives her health update after car accident in Mumbai

ಖ್ಯಾತ ನಟಿ ನೋರಾ ಫತೇಹಿ (Nora Fatehi) ಅವರ ಅಭಿಮಾನಿಗಳಿಗೆ ಇದು ಕಹಿ ಸುದ್ದಿ. ಮುಂಬೈನಲ್ಲಿ ನೋರಾ ಚಲಿಸುತ್ತಿದ್ದ ಕಾರು ಅಪಘಾತಕ್ಕೆ (Car Accident) ಒಳಗಾಗಿದೆ. ಕುಡಿದು ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನು ನೋರಾ ಅವರ ಕಾರಿಗೆ ಬಂದು ಡಿಕ್ಕಿ ಹೊಡೆದಿದ್ದಾನೆ. ಹಾಡುಹಗಲು 3 ಗಂಟೆಗೆ ಈ ಘಟನೆ ನಡೆದಿದೆ. ಇದರಿಂದಾಗಿ ನೋರಾ ಫತೇಹಿ ಅವರಿಗೆ ಚಿಕ್ಕ-ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಅವರು ಸುರಕ್ಷಿತವಾಗಿದ್ದಾರೆ. ಆದರೆ ಅವರು ಈ ಘಟನೆಯಿಂದ ಆತಂತಕ್ಕೆ ಒಳಗಾಗಿದ್ದಾರೆ. ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ನೋರಾ ಫತೇಹಿ ಬುದ್ಧಿಮಾತು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನೋರಾ ಫತೇಹಿ ಅವರು ಪ್ರಯಾಣ ಮಾಡುತ್ತಿದ್ದರು. ಆಗ ಇನ್ನೊಂದು ಕಾರು ಬಂದು ಡಿಕ್ಕಿ ಹೊಡಿದಿದೆ. ಕೂಡಲೇ ನೋರಾ ಫತೇಹಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರು ಕೂಡಲೇ ಸಿ.ಟಿ. ಸ್ಕ್ಯಾನ್ ಮಾಡಿದರು. ಇಂಟರನಲ್​ ಬ್ಲೀಡಿಂಗ್ ಆಗಿರಬಹುದೇ ಎಂಬುದನ್ನು ಪರೀಕ್ಷಿಸಿದರು.

ನೋರಾ ಫತೇಹಿ ಅವರಿಗೆ ಯಾವುದೇ ರೀತಿಯಲ್ಲಿ ಗಂಭೀರ ಗಾಯಗಳು ಆಗಿಲ್ಲ ಎಂಬುದು ವೈದ್ಯರ ತಪಾಸಣೆಯಿಂದ ತಿಳಿದುಬಂತು. ಪ್ರಥಮ ಚಿಕಿತ್ಸೆ ಪಡೆದು ಸುಧಾರಿಸಿಕೊಂಡ ಬಳಿಕ ಅವರು ಈ ಮೊದಲೇ ಒಪ್ಪಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನೋರಾ ಫತೇಹಿ ಅವರಿಗೆ ಅಪಘಾತ ಆಗಿದೆ ಎಂಬ ಸುದ್ದಿ ತಿಳಿದು ಅವರ ಅಭಿಮಾನಿಗಳಿಗೆ ಆತಂಕ ಆಗಿತ್ತು. ಈಗ ಸ್ವತಃ ನೋರಾ ಫತೇಹಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು ಈಗ ಚೆನ್ನಾಗಿದ್ದೇನೆ, ಬದುಕಿದ್ದೇನೆ’ ಎಂದು ಹೇಳುವ ಮೂಲಕ ಅಭಿಮಾನಿಗಳ ಆತಂಕವನ್ನು ನೋರಾ ಫತೇಹಿ ಅವರು ದೂರು ಮಾಡಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವವರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರೂ ಕೂಡ ನೇರಾ ಫತೇಹಿ ಅವರು ಕೆಲಸಕ್ಕೆ ಮರಳಿದ್ದಾರೆ.

ಇದನ್ನೂ ಓದಿ: ನೋರಾ ಫತೇಹಿ ಇಂಗ್ಲೀಷ್ ಹಾಡಿನ ಚಿತ್ರೀಕರಣ: ವಿಡಿಯೋ ನೋಡಿ

ಹಲವು ಪ್ರಾಜೆಕ್ಟ್​​ಗಳಲ್ಲಿ ನೋರಾ ಫತೇಹಿ ಅವರು ಬ್ಯುಸಿ ಆಗಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ಡ್ಯಾನ್ಸರ್ ಆಗಿ ಅವರು ಹೆಚ್ಚು ಫೇಮಸ್ ಆಗಿದ್ದಾರೆ. ವಿದೇಶಿ ಮ್ಯೂಸಿಕ್ ಸೆಲೆಬ್ರಿಟಿಗಳ ಜೊತೆ ಕೂಡ ಅವರು ಕೈಜೋಡಿಸಿದ್ದಾರೆ. ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆನಡಾ ಮೂಲದ ಅವರಿಗೆ ಈಗ 33 ವರ್ಷ ವಯಸ್ಸು. 80 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version