Headlines

ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ, ಜನಾರ್ದನ ರೆಡ್ಡಿ ನಿರಾಳ – Kannada News | Anjanadri Temple Gold Row: hyderabad businessman Donates real Gold clarified By gangavathi tahsildar

ಕೊಪ್ಪಳ, (ಮೇ 13): ಜಿಲ್ಲೆಯ ಅಂಜನಾದ್ರಿಯ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರದ ಆಭರಣಗಳ ಕುರಿತು ಹರಿದಾಡುತ್ತಿದ್ದ ವದಂತಿಗೆ ಕೊನೆಗೂ ತೆರೆ ಬಿದ್ದಿದೆ. ಗಂಗಾವತಿ ಶಾಸಕ‌ ಜನಾರ್ದನರೆಡ್ಡಿ ಆಪ್ತ ಉದ್ಯಮಿ ಮಹೇಶ ರೆಡ್ಡಿ ಅವರು ನೀಡಿದ್ದ ಬಂಗಾರ ನಕಲಿ ಎಂದು ಸುದ್ದಿ ಹರಿದಾಡಿದ್ದು, ಇದರ ಬೆನ್ನಲ್ಲೇ ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ 1400 ಗ್ರಾಂ ಬಂಗಾರದಲ್ಲಿ 1280 ಗ್ರಾಂ ಬಂಗಾರ ಸಂಪೂರ್ಣ ಅಸಲಿ ಎಂದು ಸಾಬೀತಾಗಿದೆ. ಉದ್ಯಮಿ ಮಹೇಶ ರೆಡ್ಡಿ ಒಟ್ಟು 1400 ಗ್ರಾಂ ಬಂಗಾರ ಆಭರಣಗಳು ನೀಡಿದ್ದು,…

Read More

ಒಟಿಟಿಗೆ ಬರುತ್ತಿದೆ ‘ಅವತಾರ್ 3’ ಎಲ್ಲಿ ನೋಡಬಹುದು? – Kannada News | Avatar 3 movie to be released on OTT soon here is the details

‘ಅವತಾರ್’ (Avatar) ಸಿನಿಮಾದ ಮೊದಲ ಭಾಗ 2009 ರಲ್ಲಿ ಬಿಡುಗಡೆ ಆಗಿತ್ತು. ಅಂದರೆ 17 ವರ್ಷದ ಹಿಂದೆ. ಆಗ ಸಿನಿಮಾ ಟಿಕೆಟ್ ದರಗಳು ಈಗಿರುವುದಕ್ಕಿಂತ ಅರ್ಧದಷ್ಟು ಸಹ ಇರಲಿಲ್ಲ. ಆದರೆ ಆಗ ಆ ಸಿನಿಮಾ ಬರೆದಿದ್ದ ಬಾಕ್ಸ್ ಆಫೀಸ್ ದಾಖಲೆಯನ್ನು ಈಗಲೂ ಇನ್ಯಾವ ಸಿನಿಮಾಕ್ಕೂ ಮುರಿಯಲಾಗಿಲ್ಲ. ಈಗಲೂ ಸಹ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಹಣ ಬಾಚಿದ ದಾಖಲೆ ಇರುವುದು 2009 ರಲ್ಲಿ ಬಿಡುಗಡೆ ಆಗಿದ್ದ ‘ಅವತಾರ್’ ಹೆಸರಿನಲ್ಲಿ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ‘ಅವತಾರ್’…

Read More

ಸಣ್ಣ ಮಳೆಗೂ ಬಯಲಾಯ್ತು ಪಂಚಾಯಿತಿ ಯೋಗ್ಯತೆ: ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ – Kannada News | Karnataka Road Crisis: Chamarajanagar Main Road Turns Filthy, Affecting Mahadeshwara Devotees

ಚಾಮರಾಜನಗರ, ಮೇ.13: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆಯು ಸಂಜೆ ಸುರಿದ ಸಣ್ಣ ಮಳೆಗೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ರಸ್ತೆಯು ಕೊಳಚೆ ನೀರು ಮತ್ತು ಕಸದಿಂದ ತುಂಬಿ, ಕೊಳಚೆ ಗುಂಡಿಯಂತೆ ಕಾಣಿಸುತ್ತಿದೆ. ಕಾದಳ್ಳಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗುವ ರಸ್ತೆಯು ಚರಂಡಿ ನೀರು ಮತ್ತು ತ್ಯಾಜ್ಯದಿಂದ ಆವೃತವಾಗಿರುವುದರಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಮಾದಪ್ಪನ ಭಕ್ತರಿಗೆ ತೀವ್ರ ತೊಂದರೆಯಾಗಿದೆ. ಮಳೆಯ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ರಸ್ತೆಯ ಮೇಲೆ ಕಸ ಮತ್ತು ಕೊಳಚೆ ನೀರು…

Read More

ವಯಸ್ಸಾದವರು ಮನೆಯಲ್ಲಿದ್ದಾರಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗಳು ಬರದಂತೆ ಎಚ್ಚರಿಕೆ ವಹಿಸಿ – Kannada News | How To Protect Seniors During Seasonal Changes: Expert Care Tips

ದೇಶದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ನಿರಂತರ ಬದಲಾವಣೆ ಕಾಣಿಸುತ್ತಿದ್ದು, ಇದರ ಪರಿಣಾಮ ಹಿರಿಯರ ಆರೋಗ್ಯದ (Elderly Health) ಮೇಲೆ ಹೆಚ್ಚು ಪರಿಣಾಮ ಬೀಳಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬೇಸಿಗೆಯ ನಡುವೆ ಮಳೆ, ತಣ್ಣನೆಯ ಗಾಳಿ ಹಾಗೂ ತಾಪಮಾನದಲ್ಲಿ ಏರುಪೇರು ಕಾಣಿಸಿಕೊಳ್ಳುವುದರಿಂದ ದೇಹಕ್ಕೆ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ವಯಸ್ಸು ಹೆಚ್ಚಾದಂತೆ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ವೈರಲ್ ಸೋಂಕು, ಜ್ವರ, ಶೀತ, ಉಸಿರಾಟದ ತೊಂದರೆ ಮತ್ತು ನೋವುಗಳ ಸಮಸ್ಯೆ…

Read More

ತಮಿಳುನಾಡಿನಲ್ಲಿ 2 ಬಣವಾದ ಎನ್​ಡಿಎ; ಎಐಎಡಿಎಂಕೆಯಿಂದ ಬಂಡಾಯ ನಾಯಕರನ್ನು ಉಚ್ಛಾಟಿಸಿದ ಇಪಿಎಸ್ – Kannada News | AIADMK Leader Palaniswami removes Velumani and Shanmugam from party posts

ಚೆನ್ನೈ, ಮೇ 13: ತಮಿಳುನಾಡಿನಲ್ಲಿ ಒಂದೆಡೆ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಯಾಗಿದೆ. ಇನ್ನೊಂದೆಡೆ ಎಐಎಡಿಎಂಕೆ (AIADMK) ವಿಭಜನೆಯಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡು ಬಣವಾದಂತೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಕೂಡ ಇಬ್ಭಾಗವಾಗಿದೆ. ಇಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ 25 ಎಐಎಡಿಎಂಕೆ ಶಾಸಕರು ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಗೆ ಬೆಂಬಲ ನೀಡಿತ್ತು. ಇದಾದ ನಂತರ ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಬಂಡಾಯ ನಾಯಕರನ್ನು ವಜಾಗೊಳಿಸಿದ್ದಾರೆ. ಬಂಡಾಯ ನಾಯಕರು ಎಐಎಡಿಎಂಕೆ ನಾಯಕನ ಸ್ಥಾನದಿಂದ ಪಳನಿಸ್ವಾಮಿ ಅವರನ್ನು ಕೆಳಗಿಳಿಸಬೇಕೆಂದು ಪ್ರಯತ್ನಿಸುತ್ತಿದ್ದರೆ ಇನ್ನೊಂದೆಡೆ ಪಳನಿಸ್ವಾಮಿಯೇ…

Read More

ಬಾಬರ್ ಆಝಂಗೆ ಮತ್ತೆ ಪಾಕ್ ತಂಡದ ನಾಯಕತ್ವ – Kannada News | Babar Azam to Replace Shan Masood as Pakistan Test Captain? PCB Eyes Return

ಪಾಕಿಸ್ತಾನ ಸೂಪರ್ ಲೀಗ್ (PSL) ಬಳಿಕ ಪಾಕಿಸ್ತಾನ ತಂಡ ಪ್ರಸ್ತತ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಅಲ್ಲಿ ಟೆಸ್ಟ್ ಸರಣಿಯನ್ನಾಡುತ್ತಿರುವ ಪಾಕ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ತಂಡ ಆಡಿದ ಮೊದಲ ಪಂದ್ಯದಲ್ಲೇ ಸೋತಿದೆ. ಢಾಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ತಂಡ 104 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಈ ಅವಮಾನಕರ ಸೋಲಿನಿಂದ ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶಾನ್ ಮಸೂದ್ (Shan Masood) ಅವರನ್ನು ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಅಲ್ಲದೆ…

Read More

ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಮಧುಬಂಗಾರಪ್ಪ ಹೇಳಿದ್ದೇನು ಗೊತ್ತಾ? – Kannada News | Madhu Bangarappa talks about Kesari Shawl after Governmnet Allowed Hijab In Schools

ಬೆಂಗಳೂರು, (ಮೇ 13): ಕರ್ನಾಟಕ ಸರ್ಕಾರವು (Karnataka Governmnet)  2022ರ ಹಿಜಾಬ್ (Hijab) ನಿಷೇಧ ಆದೇಶವನ್ನು ಅಧಿಕೃತವಾಗಿ ಹಿಂಪಡೆದಿದೆ. ಹೊಸ ಮಾರ್ಗಸೂಚಿಯ ಅನ್ವಯ, ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ನೀಡಲಾಗಿದ್ದು, ಈ ನಿಯಮವು ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ಅನ್ವಯವಾಗಲಿದೆ. ಇಂದು (ಮೇ 13) ಹೊಸ ವಸ್ತ್ರಸಂಹಿತೆ ಆದೇಶವನ್ನು ಹೊರಡಿಸಿದ್ದು, ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ‘ಹಿಜಾಬ್’ (ತಲೆವಸ್ತ್ರ) ಧರಿಸಲು ಈಗ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜನಿವಾರ ಮತ್ತು ಹಿಜಾಬ್ (Hijab) ಸೇರಿದಂತೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ…

Read More

1ರಿಂದ 12ನೇ ತರಗತಿ ಮಕ್ಕಳಿಗೆ ನಿಖರ ವಸ್ತ್ರ ಸಂಹಿತೆ: ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು – Kannada News | Education Minister Madhu Bangarappa Reacts Over Karnataka Governmnet Allows Hijab And Sacred Threads In Schools

ಬೆಂಗಳೂರು (ಮೇ 13): ರಾಜ್ಯದ ಶೈಕ್ಷಣಿಕ (Karnataka Education) ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ‘ಹಿಜಾಬ್’ ವಿವಾದಕ್ಕೆ ಕರ್ನಾಟಕ ಸರ್ಕಾರವು ಈಗ ಅಧಿಕೃತವಾಗಿ ತೆರೆ ಎಳೆದಿದೆ. 2022ರಲ್ಲಿ ಅಂದಿನ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿಷೇಧಕ್ಕೆ ಪೂರಕವಾಗಿದ್ದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಹಿಂಪಡೆದಿದೆ. ಈ ಕುರಿತು ಇಂದು (ಮೇ 13) ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ‘ಹಿಜಾಬ್’ (ತಲೆವಸ್ತ್ರ) ಧರಿಸಲು ಈಗ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಬಗ್ಗೆ ಶಿಕ್ಷಣ…

Read More

ಜೂ ಎನ್​​ಟಿಆರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಹಬ್ಬದೂಟ – Kannada News | Three movie update on Jr NTR birthday on May 20

ಜೂ ಎನ್​​ಟಿಆರ್ (Jr NTR) ದಕ್ಷಿಣದ ಸ್ಟಾರ್ ನಟ. ಪವನ್ ಕಲ್ಯಾಣ್, ಪ್ರಭಾಸ್ ಅವರಂತೆ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ದಕ್ಷಿಣದಲ್ಲಿ ಹೊಂದಿರುವ ನಟ ಜೂ ಎನ್​​ಟಿಆರ್. ‘ಆರ್​​ಆರ್​ಆರ್’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ. ಅವರ ಈ ಹಿಂದಿನ ಸಿನಿಮಾ ‘ದೇವರ’ ದೊಡ್ಡ ಯಶಸ್ಸು ಕಾಣಲಿಲ್ಲವಾದರೂ ಫ್ಲಾಪ್ ಎನಿಸಿಕೊಳ್ಳಲಿಲ್ಲ. ಇದೀಗ ಅವರ ಪ್ರಶಾಂತ್ ನೀಲ್ ಜೊತೆಗೆ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಜೂ ಎನ್​​ಟಿಆರ್ ಅಭಿಮಾನಿಗಳು ಸಹ ಈ ಬಗ್ಗೆ…

Read More

ಕೋಲಾರ ಗಡಿಯಲ್ಲಿ ಭಾರಿ ಪ್ರಮಾಣದ ಲೈವ್ ಬುಲೆಟ್ ಪತ್ತೆ: 1969ರ ಬ್ಯಾಚ್‌ನ ಗುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು – Kannada News | Bangarpet Border Bullet Discovery: 135 Live Rounds Found, Sparks Alarm

ಕೋಲಾರ ಗಡಿಯಲ್ಲಿ ಭಾರಿ ಪ್ರಮಾಣದ ಲೈವ್ ಬುಲೆಟ್ ಪತ್ತೆ ಕೋಲಾರ, ಮೇ.13: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಮಿಳುನಾಡು ಗಡಿ ಭಾಗದಲ್ಲಿ ಭಾರಿ ಪ್ರಮಾಣದ ಬುಲೆಟ್‌ಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಎಸ್‌ಎಲ್‌ಆರ್ (SLR) ಅಥವಾ ಮಿಷನ್ ಗನ್‌ಗಳಿಗೆ ಬಳಸುವ ಒಟ್ಟು 214 ಬುಲೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಗಾರಪೇಟೆ ತಾಲೂಕಿನ ದಾಸರಮಲ್ಲ ಬ್ರಿಡ್ಜ್ ಬಳಿ ಅಪರಿಚಿತರು ಈ ಬುಲೆಟ್‌ಗಳನ್ನು ಬಿಸಾಡಿ ಹೋಗಿದ್ದಾರೆ. ಪತ್ತೆಯಾದ ಬುಲೆಟ್‌ಗಳು 1969ರಲ್ಲಿ ಮಹಾರಾಷ್ಟ್ರದಲ್ಲಿ ತಯಾರಾದವುಗಳಾಗಿದ್ದು, ಇವುಗಳಲ್ಲಿ 7.6 mm ಮಾದರಿಯ ಗುಂಡುಗಳಿವೆ. ಕಾಮಸಮುದ್ರ ಠಾಣೆ…

Read More