ರಸ್ತೆಯಲ್ಲಿ ಬಿದ್ದಿದ್ದ ಮಗುವಿನ ಕತ್ತರಿಸಿದ ತಲೆ ತಿಂದ ನಾಯಿಗಳು; ವಾಕಿಂಗ್ ಹೋದವರಿಗೆ ಶಾಕ್ – Kannada News | Dogs eating Newborn Head in Bhadradri Kothagudem district Telangana Viral News

ಹೈದರಾಬಾದ್, ಮೇ 13: ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದವರು ಒಂದು ಕಡೆ ನಾಯಿಗಳ (Dogs) ಹಿಂಡು ನಿಂತಿರುವುದನ್ನು ಕಂಡು ಕುತೂಹಲದಿಂದ ಆ ಕಡೆ ಹೋದರು. ರಸ್ತೆಬದಿಯಲ್ಲಿ ಬಿದ್ದಿದ್ದ ಮಗುವಿನ ತುಂಡಾದ ತಲೆಯನ್ನು ಆ ನಾಯಿಗಳು ಕಚ್ಚಿ ಎಳೆದಾಡುತ್ತಿದ್ದವು. ಅದನ್ನು ನೋಡಿದ ಜನರು ಗಾಬರಿಯಿಂದ ಅಲ್ಲಿಂದ ಓಡಿಹೋದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರಿಗೂ ಆ ದೃಶ್ಯ ನೋಡಿ ಶಾಕ್ ಆಗಿತ್ತು. ಈ ರೀತಿ ಯಾರಾದರೂ ಪೋಷಕರು ಹಸುಗೂಸನ್ನು ಬಿಸಾಡಿ ಹೋಗಲು ಸಾಧ್ಯವೇ? ಎಮಬ ಅಚ್ಚರಿಯೂ ಮೂಡಿತ್ತು.

ಈ ಘಟನೆ ನಡೆದಿರುವುದು ತೆಲಂಗಾಣದ ಕೊಥಗುಡೆಮ್ ಜಿಲ್ಲೆಯ ಪಲೋಂಚ ಮಂಡಲದ ಬೊಲ್ಲೊರಿಗುಡೆಮ್‌ನಲ್ಲಿ. ಇಲ್ಲಿನ ಸ್ಥಳೀಯರು ಮಗುವಿನ ಕತ್ತರಿಸಿದ ತಲೆಯನ್ನು ಬೀದಿ ನಾಯಿಗಳು ಕಚ್ಚಿ ಎಳೆಯುತ್ತಿರುವುದನ್ನು ನೋಡಿದ ನಂತರ ಭಯಭೀತರಾಗಿದ್ದರು.

ಇದನ್ನೂ ಓದಿ: ವಿಷಕಾರಿ ಹಾವಿನಿಂದ 30 ಮಕ್ಕಳನ್ನು ಕಾಪಾಡಿ ಪ್ರಾಣ ಬಿಟ್ಟ ಬೀದಿ ನಾಯಿ ಕಾಳಿ!

ಮಗುವಿನ ಕೊಳೆತ ತಲೆಯನ್ನು ನಾಯಿಗಳು ತಿನ್ನುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಮಗುವಿನ ತಲೆ ಎಲ್ಲಿಂದ ಅಲ್ಲಿಗೆ ಬಂದಿತು ಎಂಬುದು ಸ್ಪಷ್ಟವಾಗಿಲ್ಲ. ಮೃತ ಮಗುವಿನ ದೇಹ ಎಲ್ಲಿರಬಹುದು ಮತ್ತು ಮಗುವನ್ನು ಯಾರು ಎಸೆದು ಹೋಗಿರಬಹುದು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ದುರ್ವಾಸನೆಯಿಂದಾಗಿ ಮನೆ ಮಾಲೀಕರು ಮತ್ತು ಕಾಲೋನಿಯ ನಿವಾಸಿಗಳು ಭಯಭೀತರಾಗಿದ್ದಾರೆ. ಮಗುವಿನ ಶವ ಎಲ್ಲಿಂದ ಬಂತು? ಯಾರಾದರೂ ಅಪರಿಚಿತ ವ್ಯಕ್ತಿ ಅದನ್ನು ಅಲ್ಲಿ ಎಸೆದಿದ್ದಾರೆಯೇ? ಅಥವಾ ಬೇರೆ ಏನಾದರೂ ಘಟನೆ ನಡೆದಿದೆಯೇ? ಈ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಪಿಗೆ ಪೂಜೆ ಮಾಡಿ ಕ್ಷಮೆ ಕೇಳಿದ ಖ್ಯಾತ ಹಾಸ್ಯನಟ ಆಲಿ – Kannada News | Comedian Ali asked apology for using goddess Lakshmi song in Ghar soap advertisement

ಗರ್ ಸೋಪಿನ ಜಾಹೀರಾತುಗಳು ಸಾಮಾಜಿಕ ಜಾಲತಾಣದಲ್ಲಿ (Social Media) ತುಂಬಿ ಹೋಗಿವೆ. ಸ್ಟಾರ್ ನಟರಲ್ಲದ ಆದರೆ ಜನಪ್ರಿಯತೆ ಹೊಂದಿರುವ ನಟ-ನಟಿಯರು ಹಲವಾರು ಮಂದಿ ಈ ಗರ್ ಸೋಪಿನ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಈ ಸೋಪಿನಿಂದ ಕಪ್ಪಗಿರುವ ದೇಹದ ಬಣ್ಣ ಬಿಳಿ ಆಗುತ್ತದೆ ಎಂಬುದು ಈ ಸೋಪು ಕಂಪೆನಿಯ ವಾದ. ಆದರೆ ಇದೇ ಸೋಪಿನ ಜಾಹೀರಾತಿನಲ್ಲಿ ನಟಿಸಿ ತೆಲುಗಿನ ಬಲು ಜನಪ್ರಿಯ ಹಾಸ್ಯನಟರೊಬ್ಬರು ವಿವಾದಕ್ಕೆ ಸಿಲುಕಿದ್ದಾರೆ. ಬಳಿಕ ಕ್ಷಮೆಯನ್ನೂ ಕೋರಿದ್ದಾರೆ.

ಮೊಹಮ್ಮದ್ ಅಲಿ ಅಲಿಯಾಸ್ ಆಲಿ, ತೆಲುಗು ಚಿತ್ರರಂಗದ ಬಲು ಜನಪ್ರಿಯ ಹಾಸ್ಯನಟ. ಬ್ರಹ್ಮಾನಂದಂ ಬಳಿಕ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹಾಸ್ಯನಟರೂ ಹೌದು ಆಲಿ. ಇತ್ತೀಚೆಗೆ ಇವರು ನಟಿಸಿರುವ ಗರ್ ಸೋಪಿನ ಜಾಹೀರಾತೊಂದು ಬಿಡುಗಡೆ ಆಗಿತ್ತು. ಜಾಹೀರಾತಿನಲ್ಲಿ ಆಲಿ, ಗರ್ ಸೋಪಿಗೆ ಪೂಜೆ ಮಾಡುತ್ತಿರುವ ದೃಶ್ಯವಿತ್ತು. ಹೀಗೆ ಪೂಜೆ ಮಾಡುವ ವೇಳೆ ಆಲಿ ಲಕ್ಷ್ಮಿ ದೇವಿಯ ಕುರಿತು ಹಾಡನ್ನು ಹಾಡುತ್ತಿದ್ದರು. ಅದೀಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ವಿಶೇಷ ಅನುಮತಿ ನೀಡಿದ ಸಿಎಂ ವಿಜಯ್

ಆಲಿ ಅವರು ‘ದೇವುಡು ಚೇಸಿನ ಮನುಷುಲು’ ಸಿನಿಮಾನಲ್ಲಿ ಲಕ್ಷ್ಮಿ ದೇವಿನ ಅಪ್ಪಟ ಭಕ್ತನ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ಅವರು ಲಕ್ಷ್ಮಿ ದೇವಿಯ ಪೂಜಿಸುವಾಗ ಹಾಡೊಂದನ್ನು ಹಿನ್ನೆಲೆಯಲ್ಲಿ ಬಳಸಲಾಗಿತ್ತು. ಆ ಹಾಡು, ಆ ದೃಶ್ಯ ಮತ್ತು ಆಲಿ ನಟಿಸಿದ್ದ ಲಕ್ಷ್ಮಿದೇವಿಯ ಭಕ್ತನ ಪಾತ್ರ ಸಖತ್ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಆಲಿ ಅವರು ಸೋಪಿನ ಜಾಹೀರಾತಿನಲ್ಲಿ ಅದನ್ನೇ ರೀ ಕ್ರಿಯೇಟ್ ಮಾಡಿದ್ದರು. ಆದರೆ ಹಿಂದೂಪರ ಸಂಘಟನೆಗಳ ಕೆಲ ಸದಸ್ಯರು, ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಸೋಪಿನ ಪೂಜೆಗೆ ಲಕ್ಷ್ಮಿ ದೇವಿಯ ಹಾಡು ಬಳಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ವಿಡಿಯೋ ಹಂಚಿಕೊಂಡಿರುವ ನಟ ಆಲಿ, ತಮ್ಮ ಕೃತ್ಯಕ್ಕೆ ಕ್ಷಮೆ ಕೇಳಿದ್ದಾರೆ. ‘ಕಂಪೆನಿಯವರು ಹೇಳಿದ್ದಕ್ಕ ನಾನು ನನ್ನದೇ ಹಳೆಯ ಸಿನಿಮಾದ ಬಿಟ್ ಅನ್ನು ತುಸು ಬದಲಾಯಿಸಿ ಮಾಡಿದೆ. ಆದರೆ ಜಾಹೀರಾತು ನೋಡಿದ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕೂಡಲೇ ಆ ಜಾಹೀರಾತನ್ನು ಡಿಲೀಟ್ ಮಾಡಿದ್ದೇವೆ. ಕಂಪೆನಿ ಸಹ ಅದನ್ನು ಡಿಲೀಟ್ ಮಾಡಿದೆ. ಯಾರಿಗಾದರೂ ಆ ಜಾಹೀರಾತಿನಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ’ ಎಂದಿದ್ದಾರೆ ಆಲಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:29 pm, Wed, 13 May 26

Source link

ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ – Kannada News | Dileep Raj’s old video dancing with daughter getting viral

ಸಿನಿಮಾ (Cinema) ಮತ್ತು ಟಿವಿ ಲೋಕದಲ್ಲಿ ಜನಪ್ರಿಯರಾಗಿದ್ದ ನಟ ದಿಲೀಪ್ ರಾಜ್ ಇಂದು (ಮೇ 13) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು. ಬಹುಮುಖ ಪ್ರತಿಭೆ ಹೊಂದಿದ್ದ ದಿಲೀಪ್ ಅವರು ಒಳ್ಳೆಯ ನಟ ಆಗಿರುವ ಜೊತೆಗೆ ಒಳ್ಳೆಯ ನೃತ್ಯಗಾರ ಸಹ ಆಗಿದ್ದರು. ನಿಧನ ಹೊಂದುವ ಕೆಲ ತಿಂಗಳ ಮೊದಲ ಮಗಳೊಟ್ಟಿಗೆ ಸೇರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು ದಿಲೀಪ್. ಇಲ್ಲಿದೆ ನೋಡಿ ಆ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಬೆಂಗಳೂರಿನಲ್ಲಿ 2,384 ಕೋಟಿ ರೂ. ನಕಲಿ ಜಿಎಸ್‌ಟಿ ಜಾಲ ಪತ್ತೆ: ಇಬ್ಬರು ಕಿಂಗ್‌ಪಿನ್‌ಗಳ ಬಂಧನ! – Kannada News | Karnataka Tax Dept Uncovers Massive 2384 Cr Fake ITC Fraud in Bengaluru

ಬೆಂಗಳೂರು, ಮೇ.13: ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯು ರಾಜ್ಯದ ರಾಜಧಾನಿಯಲ್ಲಿ ಭಾರಿ ಪ್ರಮಾಣದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ವಂಚನೆ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಸುಮಾರು 2,384 ಕೋಟಿ ರೂ. ಮೊತ್ತದ ಈ ನಕಲಿ ಜಾಲಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗ (ದಕ್ಷಿಣ ವಲಯ) ಹಾಗೂ ಸೇವಾ ವಿಶ್ಲೇಷಣೆ ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳು ಅತ್ಯಂತ ಚಾಣಾಕ್ಷತನದಿಂದ ಈ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳು ನಕಲಿ ಕಂಪನಿಗಳನ್ನು ಸೃಷ್ಟಿಸಿ, ಯಾವುದೇ ಸರಕು ಅಥವಾ ಸೇವೆಗಳ ಪೂರೈಕೆ ಮಾಡದೆಯೇ ಬಿಲ್‌ಗಳನ್ನು ಸೃಷ್ಟಿಸುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದರು.

ಇದನ್ನೂ ಓದಿ: ಕೋಲಾರ ಗಡಿಯಲ್ಲಿ ಭಾರಿ ಪ್ರಮಾಣದ ಲೈವ್ ಬುಲೆಟ್ ಪತ್ತೆ: 1969ರ ಬ್ಯಾಚ್‌ನ ಗುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು

ನಕಲಿ ಐಟಿಸಿ ಹಗರಣಗಳಿಗೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ಇಲಾಖೆಯು ಈ ವರ್ಷ ತನಿಖೆಯನ್ನು ತೀವ್ರಗೊಳಿಸಿದ್ದು, ಈ ಇಬ್ಬರ ಬಂಧನದೊಂದಿಗೆ ಈ ವರ್ಷ ಒಟ್ಟು ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಕೆಕೆಆರ್ ವಿರುದ್ಧ ಕಣಕ್ಕಿಳಿದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ

Source link

ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ, ಜನಾರ್ದನ ರೆಡ್ಡಿ ನಿರಾಳ – Kannada News | Anjanadri Temple Gold Row: hyderabad businessman Donates real Gold clarified By gangavathi tahsildar

ಕೊಪ್ಪಳ, (ಮೇ 13): ಜಿಲ್ಲೆಯ ಅಂಜನಾದ್ರಿಯ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರದ ಆಭರಣಗಳ ಕುರಿತು ಹರಿದಾಡುತ್ತಿದ್ದ ವದಂತಿಗೆ ಕೊನೆಗೂ ತೆರೆ ಬಿದ್ದಿದೆ. ಗಂಗಾವತಿ ಶಾಸಕ‌ ಜನಾರ್ದನರೆಡ್ಡಿ ಆಪ್ತ ಉದ್ಯಮಿ ಮಹೇಶ ರೆಡ್ಡಿ ಅವರು ನೀಡಿದ್ದ ಬಂಗಾರ ನಕಲಿ ಎಂದು ಸುದ್ದಿ ಹರಿದಾಡಿದ್ದು, ಇದರ ಬೆನ್ನಲ್ಲೇ ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ 1400 ಗ್ರಾಂ ಬಂಗಾರದಲ್ಲಿ 1280 ಗ್ರಾಂ ಬಂಗಾರ ಸಂಪೂರ್ಣ ಅಸಲಿ ಎಂದು ಸಾಬೀತಾಗಿದೆ.

ಉದ್ಯಮಿ ಮಹೇಶ ರೆಡ್ಡಿ ಒಟ್ಟು 1400 ಗ್ರಾಂ ಬಂಗಾರ ಆಭರಣಗಳು ನೀಡಿದ್ದು, ಇದರಲ್ಲಿ 120 ಗ್ರಾಂ ವೇಸ್ಟೇಜ್ ತೆಗೆದು 1280 ಗ್ರಾಂ ಬಂಗಾರ ಸಂಪೂರ್ಣ ಅಸಲಿಯದ್ದು ಎಂದು ವಾಸ್ತುಶಿಲ್ಪಿ ಗುಂಡಾಚಾರಿ ಸ್ಥಪತಿ ತಿಳಿಸಿದ್ದಾರೆ. ಬಳಿಕ ಗಂಗಾವತಿ ತಹಶಿಲ್ದಾರ್, ಎಲ್ಲಾ ಬಂಗಾರವನ್ನು ಸ್ವೀಕಾರ ಮಾಡಿ ಖಜಾನೆಗೆ ಕಳುಹಿಸಿದರು. ಇನ್ನು ಆಪ್ತ ನೀಡಿದ್ದ ಚಿನ್ನ ಅಸಲಿ ಎಂದು ಸಾಬೀತಾಗುತ್ತಿದ್ದಂತಯೇ ಶಾಸಕ‌ ಜನಾರ್ದನರೆಡ್ಡಿ ನಿರಾಳರಾಗಿದ್ದಾರೆ.

ಇದನ್ನೂ ಓದಿ: 2.5 ಕೋಟಿ ರೂ. ಮೌಲ್ಯದ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಬಂಗಾರ! ಅಂಜನಾದ್ರಿ ದೇಣಿಗೆಯಲ್ಲಿ ಮಹಾ ಗೋಲ್‌ಮಾಲ್?

Source link

ಒಟಿಟಿಗೆ ಬರುತ್ತಿದೆ ‘ಅವತಾರ್ 3’ ಎಲ್ಲಿ ನೋಡಬಹುದು? – Kannada News | Avatar 3 movie to be released on OTT soon here is the details

ಅವತಾರ್’ (Avatar) ಸಿನಿಮಾದ ಮೊದಲ ಭಾಗ 2009 ರಲ್ಲಿ ಬಿಡುಗಡೆ ಆಗಿತ್ತು. ಅಂದರೆ 17 ವರ್ಷದ ಹಿಂದೆ. ಆಗ ಸಿನಿಮಾ ಟಿಕೆಟ್ ದರಗಳು ಈಗಿರುವುದಕ್ಕಿಂತ ಅರ್ಧದಷ್ಟು ಸಹ ಇರಲಿಲ್ಲ. ಆದರೆ ಆಗ ಆ ಸಿನಿಮಾ ಬರೆದಿದ್ದ ಬಾಕ್ಸ್ ಆಫೀಸ್ ದಾಖಲೆಯನ್ನು ಈಗಲೂ ಇನ್ಯಾವ ಸಿನಿಮಾಕ್ಕೂ ಮುರಿಯಲಾಗಿಲ್ಲ. ಈಗಲೂ ಸಹ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಹಣ ಬಾಚಿದ ದಾಖಲೆ ಇರುವುದು 2009 ರಲ್ಲಿ ಬಿಡುಗಡೆ ಆಗಿದ್ದ ‘ಅವತಾರ್’ ಹೆಸರಿನಲ್ಲಿ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ‘ಅವತಾರ್’ ಸಿನಿಮಾದ ಮೂರನೇ ಭಾಗವಾದ ‘ಅವತಾರ್: ಫೈರ್ ಆಂಡ್ ಆಶ್’ ಬಿಡುಗಡೆ ಆಯ್ತು. ಸಿನಿಮಾ ನಿರೀಕ್ಷೆಯಂತೆ ಸೂಪರ್ ಹಿಟ್ ಆಯ್ತು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ.

ಜೇಮ್ಸ್ ಕ್ಯಾಮರನ್ ನಿರ್ದೇಶನದ ‘ಅವತಾರ್ 3’ ಸಿನಿಮಾ ಜೂನ್ 24 ರಂದು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರಲಿದೆ. ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ಗನಲ್ಲಿ ವೀಕ್ಷಿಸಬಹುದಾಗಿದೆ. ನಾವಿ ಜನಗಳ ಕತೆಯನ್ನು ಒಳಗೊಂಡ ಈ ಸಿನಿಮಾ ಅದ್ಧೂರಿ ವಿಎಫ್​​ಎಕ್ಸ್ ಜೊತೆಗೆ ಲೈವ್ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದ ಮೂಲಕ ಅತ್ಯದ್ಭುತ ದೃಶ್ಯ ವೈಭವವನ್ನು ಒಳಗೊಂಡಿದ್ದು, ಸಖತ್ ಆಕ್ಷನ್ ಜೊತೆಗೆ ಭಾವುಕ ಅಂಶಗಳನ್ನು ಸಹ ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ:‘ಅವತಾರ್ 3’ ಬಳಿಕ ಬಾಕ್ಸ್ ಆಫೀಸ್​​ನಲ್ಲಿ ಮುಗ್ಗರಿಸಿದ ಮತ್ತೊಂದು ಹಾಲಿವುಡ್ ಸಿನಿಮಾ

‘ಅವತಾರ್ 3’ ಸಿನಿಮಾವು 2009 ರ ‘ಅವತಾರ್’ ಸಿನಿಮಾದ ಕತೆಯ ಮುಂದುವರೆದ ಭಾಗವಾಗಿದೆ. ನಾವಿ ಜನರ ಮೇಲೆ ಮನುಷ್ಯರ ದಬ್ಬಾಳಿಕೆ ಹಾಗೂ ಪ್ರಕೃತಿ ಮಾತೆಯ ಜೊತೆ ಸೇರಿಕೊಂಡು ಹೇಗೆ ನಾವಿ ಜನರು ಮನುಷ್ಯರನ್ನು ಹಿಮ್ಮೆಟ್ಟಿಸುತ್ತಾರೆ, ತಮ್ಮ ನೆಲವನ್ನು, ಪ್ರಕೃತಿಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದೇ ‘ಅವತಾರ್’ ಸಿನಿಮಾದ ಎಲ್ಲ ಕತೆಗಳ ಮೂಲ ಧಾತು ಆಗಿದೆ. ‘ಅವತಾರ್ 3’ ಸಿನಿಮಾ ಸಹ ಇದನ್ನೇ ಒಳಗೊಂಡಿದೆ, ಆದರೆ ಕತೆಯಲ್ಲಿ ತುಸು ಭಿನ್ನತೆಗಳು ಇವೆ. ‘ಅವತಾರ್ 3’ ನಲ್ಲಿ ನಾವಿ ರೀತಿಯದ್ದೇ ಆದರೆ ಆಶ್ ಪೀಪಲ್ ಎಂಬ ಬೆಂಕಿಯನ್ನು ಆರಾಧಿಸುವ ಜನರನ್ನು ಪರಿಚಯಿಸಲಾಗಿದ್ದು, ಈ ಜನರು ಮನುಷ್ಯರ ಜೊತೆಗೆ ಸೇರಿ ನಾವಿ ಜನರ ವಿರುದ್ಧ ನಿಂತಿದ್ದಾರೆ.

ಈಗಾಗಲೇ ಚಿತ್ರಮಂದಿರಗಳಲ್ಲಿ 1.4 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ಹಣ ಗಳಿಸಿರುವ ಈ ಸಿನಿಮಾ, ಇದೀಗ ಜೂನ್ 24, 2026 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಅದ್ಭುತ ದೃಶ್ಯ ವೈಭವ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಚಿತ್ರವು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಿರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಣ್ಣ ಮಳೆಗೂ ಬಯಲಾಯ್ತು ಪಂಚಾಯಿತಿ ಯೋಗ್ಯತೆ: ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ – Kannada News | Karnataka Road Crisis: Chamarajanagar Main Road Turns Filthy, Affecting Mahadeshwara Devotees

ಚಾಮರಾಜನಗರ, ಮೇ.13: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆಯು ಸಂಜೆ ಸುರಿದ ಸಣ್ಣ ಮಳೆಗೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ರಸ್ತೆಯು ಕೊಳಚೆ ನೀರು ಮತ್ತು ಕಸದಿಂದ ತುಂಬಿ, ಕೊಳಚೆ ಗುಂಡಿಯಂತೆ ಕಾಣಿಸುತ್ತಿದೆ. ಕಾದಳ್ಳಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗುವ ರಸ್ತೆಯು ಚರಂಡಿ ನೀರು ಮತ್ತು ತ್ಯಾಜ್ಯದಿಂದ ಆವೃತವಾಗಿರುವುದರಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಮಾದಪ್ಪನ ಭಕ್ತರಿಗೆ ತೀವ್ರ ತೊಂದರೆಯಾಗಿದೆ. ಮಳೆಯ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ರಸ್ತೆಯ ಮೇಲೆ ಕಸ ಮತ್ತು ಕೊಳಚೆ ನೀರು ನಿಂತು ದುರ್ವಾಸನೆ ಹರಡುತ್ತಿದೆ. ಈ ಕೆಟ್ಟ ವಾಸನೆಗೆ ಭಕ್ತರು ಕಸಿವಿಸಿಗೊಂಡಿದ್ದಾರೆ. ಪೊದೆಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ರಸ್ತೆಯ ದುಸ್ಥಿತಿಗೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆ ಅಷ್ಟೇನೂ ಜೋರಾಗಿ ಸುರಿಯದಿದ್ದರೂ, ರಸ್ತೆಯ ಮೇಲೆ ಈ ಪ್ರಮಾಣದ ಅವಾಂತರ ಸೃಷ್ಟಿಯಾಗಿರುವುದು ನಿರ್ವಹಣೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಸಾರ್ವಜನಿಕರು ಈ ವಿಷಯವನ್ನು ಶಾಸಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುವಂತೆ ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಯಸ್ಸಾದವರು ಮನೆಯಲ್ಲಿದ್ದಾರಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗಳು ಬರದಂತೆ ಎಚ್ಚರಿಕೆ ವಹಿಸಿ – Kannada News | How To Protect Seniors During Seasonal Changes: Expert Care Tips

ದೇಶದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ನಿರಂತರ ಬದಲಾವಣೆ ಕಾಣಿಸುತ್ತಿದ್ದು, ಇದರ ಪರಿಣಾಮ ಹಿರಿಯರ ಆರೋಗ್ಯದ (Elderly Health) ಮೇಲೆ ಹೆಚ್ಚು ಪರಿಣಾಮ ಬೀಳಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬೇಸಿಗೆಯ ನಡುವೆ ಮಳೆ, ತಣ್ಣನೆಯ ಗಾಳಿ ಹಾಗೂ ತಾಪಮಾನದಲ್ಲಿ ಏರುಪೇರು ಕಾಣಿಸಿಕೊಳ್ಳುವುದರಿಂದ ದೇಹಕ್ಕೆ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ವಯಸ್ಸು ಹೆಚ್ಚಾದಂತೆ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ವೈರಲ್ ಸೋಂಕು, ಜ್ವರ, ಶೀತ, ಉಸಿರಾಟದ ತೊಂದರೆ ಮತ್ತು ನೋವುಗಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅದರಲ್ಲಿಯೂ ಮಧುಮೇಹ, ಹೈ ಬಿಪಿ, ಅಸ್ತಮಾ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿರುವ ಹಿರಿಯರು ಹೆಚ್ಚು ಜಾಗ್ರತೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಯಾವ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಹವಾಮಾನ ಬದಲಾವಣೆಯ ಸಮಯದಲ್ಲಿ ಹಿರಿಯರಲ್ಲಿ ಶೀತ-ಜ್ವರ, ವೈರಲ್ ಇನ್ಫೆಕ್ಷನ್, ಉಸಿರಾಟದ ತೊಂದರೆ, ಸಂಧಿವಾತದ ನೋವು ಹಾಗೂ ದೌರ್ಬಲ್ಯದಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಬಹುದು. ಕೆಲವರಲ್ಲಿ ರಕ್ತದೊತ್ತಡ ಏರುಪೇರು, ದೇಹದಲ್ಲಿ ನೀರಿನ ಕೊರತೆ, ಹಸಿವು ಕಡಿಮೆಯಾಗುವುದು ಹಾಗೂ ಹೆಚ್ಚು ಆಯಾಸ ಕಾಣಿಸಬಹುದು. ಹವಾಮಾನದಲ್ಲಿನ ತೀವ್ರ ಬದಲಾವಣೆಗಳಿಂದ ದೇಹದ ರೋಗನಿರೋಧಕ ಶಕ್ತಿ ಕುಂದಿ ಸೋಂಕುಗಳು ಬೇಗ ತಗುಲುವ ಸಾಧ್ಯತೆ ಹೆಚ್ಚುತ್ತದೆ.

ಇದನ್ನೂ ಓದಿ: ಜೆರಿಯಾಟ್ರಿಕ್ ಕಿಟ್ ಎಂದರೇನು? 60 ವರ್ಷ ಮೇಲ್ಪಟ್ಟವರು ಮನೆಯಲ್ಲಿದ್ದರೆ ಈ ಕಿಟ್ ಯಾಕೆ ಮುಖ್ಯ?

ಹಿರಿಯರ ಆರೋಗ್ಯದ ಕಡೆ ಹೇಗೆ ಗಮನ ಕೊಡಬೇಕು?

ಸಾಮಾನ್ಯವಾಗಿ ಹಿರಿಯರು ಹವಾಮಾನಕ್ಕೆ ತಕ್ಕ ಬಟ್ಟೆ ಧರಿಸುವುದು ಮುಖ್ಯ. ಸಾಕಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಹಣ್ಣು, ತರಕಾರಿ, ಪ್ರೋಟೀನ್ ಹಾಗೂ ಪೌಷ್ಟಿಕಾಂಶ ಇರುವ ಪದಾರ್ಥಗಳನ್ನು ಸೇರಿಸಬೇಕು. ಮನೆಯೊಳಗಿನ ತಾಪಮಾನ ಸಮತೋಲನದಲ್ಲಿರಬೇಕು ಮತ್ತು ಅತಿಯಾದ ಚಳಿ ಅಥವಾ ಬಿಸಿ ಗಾಳಿಯಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳುವುದು, ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯ. ಕೈ ತೊಳೆಯುವ ಅಭ್ಯಾಸ ಮತ್ತು ಸ್ವಚ್ಛ ಆಹಾರ ಸೇವನೆಯಿಂದ ಸೋಂಕಿನ ಅಪಾಯ ಕಡಿಮೆ ಮಾಡಬಹುದು.

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ತೀವ್ರ ಜ್ವರ, ಉಸಿರಾಟದ ತೊಂದರೆ, ಎದೆನೋವು, ಅತಿಯಾದ ದೌರ್ಬಲ್ಯ, ತಲೆಸುತ್ತು ಅಥವಾ ಗೊಂದಲದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನಲ್ಲಿ 2 ಬಣವಾದ ಎನ್​ಡಿಎ; ಎಐಎಡಿಎಂಕೆಯಿಂದ ಬಂಡಾಯ ನಾಯಕರನ್ನು ಉಚ್ಛಾಟಿಸಿದ ಇಪಿಎಸ್ – Kannada News | AIADMK Leader Palaniswami removes Velumani and Shanmugam from party posts

ಚೆನ್ನೈ, ಮೇ 13: ತಮಿಳುನಾಡಿನಲ್ಲಿ ಒಂದೆಡೆ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಯಾಗಿದೆ. ಇನ್ನೊಂದೆಡೆ ಎಐಎಡಿಎಂಕೆ (AIADMK) ವಿಭಜನೆಯಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡು ಬಣವಾದಂತೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಕೂಡ ಇಬ್ಭಾಗವಾಗಿದೆ. ಇಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ 25 ಎಐಎಡಿಎಂಕೆ ಶಾಸಕರು ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಗೆ ಬೆಂಬಲ ನೀಡಿತ್ತು. ಇದಾದ ನಂತರ ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಬಂಡಾಯ ನಾಯಕರನ್ನು ವಜಾಗೊಳಿಸಿದ್ದಾರೆ. ಬಂಡಾಯ ನಾಯಕರು ಎಐಎಡಿಎಂಕೆ ನಾಯಕನ ಸ್ಥಾನದಿಂದ ಪಳನಿಸ್ವಾಮಿ ಅವರನ್ನು ಕೆಳಗಿಳಿಸಬೇಕೆಂದು ಪ್ರಯತ್ನಿಸುತ್ತಿದ್ದರೆ ಇನ್ನೊಂದೆಡೆ ಪಳನಿಸ್ವಾಮಿಯೇ ಬಂಡಾಯ ನಾಯಕರನ್ನು ಪಕ್ಷದಿಂದ ವಜಾಗೊಳಿಸುವ ಮೂಲಕ ಶಾಕ್ ನೀಡಿದ್ದಾರೆ.

ಇದೀಗ ತಮಿಳುನಾಡಿನಲ್ಲಿ ಇನ್ನೊಂದು ಗೊಂದಲ ಉಂಟಾಗಿದೆ. ಟಿವಿಕೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ಒಂದು ಷರತ್ತನ್ನು ವಿಧಿಸಿತ್ತು. ಬಿಜೆಪಿ ಅಥವಾ ಕೋಮು ಶಕ್ತಿಗಳನ್ನು ಸರ್ಕಾರದ ಮೈತ್ರಿಯಲ್ಲಿ ಸೇರಿಸಿಕೊಳ್ಳಬಾರದು ಎಂಬ ಏಕೈಕ ಷರತ್ತು ವಿಧಿಸಲಾಗಿತ್ತು. ಅದಕ್ಕೆ ವಿಜಯ್ ಕೂಡ ಒಪ್ಪಿಗೆ ನೀಡಿದ್ದರು. ಆದರೆ, ಇದೀಗ ಬಹುಮತಕ್ಕೆ ಬೆಂಬಲ ನೀಡಿರುವ 25 ಎಐಎಡಿಎಂಕೆ ಶಾಸಕರು ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಲ್ಲಿ ಇರುವುದರಿಂದ ಇದಕ್ಕೆ ಕಾಂಗ್ರೆಸ್ ಒಪ್ಪಲಿದೆಯೇ? ಅಥವಾ ಎಐಎಡಿಎಂಕೆಯ ಬಂಡಾಯ ಬಣ ಎನ್​ಡಿಎ ಮೈತ್ರಿಕೂಟದಿಂದ ಹೊರಬರಲಿದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: 2 ಬಣಗಳಾಗಿ ಒಡೆದ ಎಐಎಡಿಎಂಕೆ; ಪಳನಿಸ್ವಾಮಿಗೆ 17 ಶಾಸಕರು, ವೇಲುಮಣಿ​ಗೆ 30 ಶಾಸಕರ ಬೆಂಬಲ

ತಮಿಳುನಾಡಿನಲ್ಲಿ 4 ದಿನಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಟಿವಿಕೆ ಸರ್ಕಾರ ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದಿದೆ. ಎಐಎಡಿಎಂಕೆಯ 25 ಬಂಡಾಯ ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿ ವಿಜಯ್ ಸದನದ ವಿಶ್ವಾಸ ಗಳಿಸಿದರು. 234 ಸ್ಥಾನಗಳ ವಿಧಾನಸಭೆಯಲ್ಲಿ 59 ಸದಸ್ಯರನ್ನು ಹೊಂದಿರುವ ವಿರೋಧ ಪಕ್ಷ ಡಿಎಂಕೆ, ಪ್ರತಿಭಟಿಸಿ ಕಲಾಪದ ಸಮಯದಲ್ಲಿ ಸಭಾತ್ಯಾಗ ಮಾಡಿತು.

ಹೀಗಾಗಿ, ಎಐಎಡಿಎಂಕೆ ಪಕ್ಷದ ವಿಪ್‌ ಜಾರಿಯಲ್ಲಿದ್ದರೂ ಟಿವಿಕೆ ನೇತೃತ್ವದ ಸರ್ಕಾರವನ್ನು ಬೆಂಬಲಿಸಲು ಮತ ಚಲಾಯಿಸಿದ 25 ಶಾಸಕರ ಅನರ್ಹತೆಗೆ ಅರ್ಜಿ ಸಲ್ಲಿಸಿರುವುದಾಗಿ ಎಐಎಡಿಎಂಕೆ ತಿಳಿಸಿದೆ. ಇದು ಇಪಿಎಸ್ ನಾಯಕತ್ವದಲ್ಲಿ ಪಕ್ಷದಲ್ಲಿನ ಅತ್ಯಂತ ಗಂಭೀರ ಬಿಕ್ಕಟ್ಟನ್ನು ಸೂಚಿಸುತ್ತದೆ. ಇದೀಗ 13 ಹಾಲಿ ಶಾಸಕರು ಸೇರಿದಂತೆ ಒಟ್ಟು 29 ಎಐಎಡಿಎಂಕೆ ನಾಯಕರನ್ನು ಜಿಲ್ಲಾ ಕಾರ್ಯದರ್ಶಿ ಸ್ಥಾನಗಳು ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳಿಂದ ತೆಗೆದುಹಾಕಲಾಗಿದೆ. ಷಣ್ಮುಗಂ ಮತ್ತು ವೇಲುಮಣಿ ಅವರಲ್ಲದೆ, ಆರ್.ಕಾಮರಾಜ್, ಸಿ.ವಿಜಯಭಾಸ್ಕರ್, ತಂಗಮಣಿ, ಕೆ.ಪಿ.ಅನ್ಬಜಗನ್, ಕೆ.ಸಿ.ವೀರಮಣಿ ಮತ್ತು ಎಂ.ಆರ್.ವಿಜಯಭಾಸ್ಕರ್ ಸೇರಿದಂತೆ ಹಲವಾರು ಹಿರಿಯ ಎಐಎಡಿಎಂಕೆ ನಾಯಕರನ್ನು ಸಹ ಅವರ ಹುದ್ದೆಗಳಿಂದ ವಜಾಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version