ವಯಸ್ಸಾದವರು ಮನೆಯಲ್ಲಿದ್ದಾರಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗಳು ಬರದಂತೆ ಎಚ್ಚರಿಕೆ ವಹಿಸಿ – Kannada News | How To Protect Seniors During Seasonal Changes: Expert Care Tips

ದೇಶದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ನಿರಂತರ ಬದಲಾವಣೆ ಕಾಣಿಸುತ್ತಿದ್ದು, ಇದರ ಪರಿಣಾಮ ಹಿರಿಯರ ಆರೋಗ್ಯದ (Elderly Health) ಮೇಲೆ ಹೆಚ್ಚು ಪರಿಣಾಮ ಬೀಳಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬೇಸಿಗೆಯ ನಡುವೆ ಮಳೆ, ತಣ್ಣನೆಯ ಗಾಳಿ ಹಾಗೂ ತಾಪಮಾನದಲ್ಲಿ ಏರುಪೇರು ಕಾಣಿಸಿಕೊಳ್ಳುವುದರಿಂದ ದೇಹಕ್ಕೆ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ವಯಸ್ಸು ಹೆಚ್ಚಾದಂತೆ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ವೈರಲ್ ಸೋಂಕು, ಜ್ವರ, ಶೀತ, ಉಸಿರಾಟದ ತೊಂದರೆ ಮತ್ತು ನೋವುಗಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅದರಲ್ಲಿಯೂ ಮಧುಮೇಹ, ಹೈ ಬಿಪಿ, ಅಸ್ತಮಾ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿರುವ ಹಿರಿಯರು ಹೆಚ್ಚು ಜಾಗ್ರತೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಯಾವ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಹವಾಮಾನ ಬದಲಾವಣೆಯ ಸಮಯದಲ್ಲಿ ಹಿರಿಯರಲ್ಲಿ ಶೀತ-ಜ್ವರ, ವೈರಲ್ ಇನ್ಫೆಕ್ಷನ್, ಉಸಿರಾಟದ ತೊಂದರೆ, ಸಂಧಿವಾತದ ನೋವು ಹಾಗೂ ದೌರ್ಬಲ್ಯದಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಬಹುದು. ಕೆಲವರಲ್ಲಿ ರಕ್ತದೊತ್ತಡ ಏರುಪೇರು, ದೇಹದಲ್ಲಿ ನೀರಿನ ಕೊರತೆ, ಹಸಿವು ಕಡಿಮೆಯಾಗುವುದು ಹಾಗೂ ಹೆಚ್ಚು ಆಯಾಸ ಕಾಣಿಸಬಹುದು. ಹವಾಮಾನದಲ್ಲಿನ ತೀವ್ರ ಬದಲಾವಣೆಗಳಿಂದ ದೇಹದ ರೋಗನಿರೋಧಕ ಶಕ್ತಿ ಕುಂದಿ ಸೋಂಕುಗಳು ಬೇಗ ತಗುಲುವ ಸಾಧ್ಯತೆ ಹೆಚ್ಚುತ್ತದೆ.

ಇದನ್ನೂ ಓದಿ: ಜೆರಿಯಾಟ್ರಿಕ್ ಕಿಟ್ ಎಂದರೇನು? 60 ವರ್ಷ ಮೇಲ್ಪಟ್ಟವರು ಮನೆಯಲ್ಲಿದ್ದರೆ ಈ ಕಿಟ್ ಯಾಕೆ ಮುಖ್ಯ?

ಹಿರಿಯರ ಆರೋಗ್ಯದ ಕಡೆ ಹೇಗೆ ಗಮನ ಕೊಡಬೇಕು?

ಸಾಮಾನ್ಯವಾಗಿ ಹಿರಿಯರು ಹವಾಮಾನಕ್ಕೆ ತಕ್ಕ ಬಟ್ಟೆ ಧರಿಸುವುದು ಮುಖ್ಯ. ಸಾಕಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಹಣ್ಣು, ತರಕಾರಿ, ಪ್ರೋಟೀನ್ ಹಾಗೂ ಪೌಷ್ಟಿಕಾಂಶ ಇರುವ ಪದಾರ್ಥಗಳನ್ನು ಸೇರಿಸಬೇಕು. ಮನೆಯೊಳಗಿನ ತಾಪಮಾನ ಸಮತೋಲನದಲ್ಲಿರಬೇಕು ಮತ್ತು ಅತಿಯಾದ ಚಳಿ ಅಥವಾ ಬಿಸಿ ಗಾಳಿಯಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳುವುದು, ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯ. ಕೈ ತೊಳೆಯುವ ಅಭ್ಯಾಸ ಮತ್ತು ಸ್ವಚ್ಛ ಆಹಾರ ಸೇವನೆಯಿಂದ ಸೋಂಕಿನ ಅಪಾಯ ಕಡಿಮೆ ಮಾಡಬಹುದು.

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ತೀವ್ರ ಜ್ವರ, ಉಸಿರಾಟದ ತೊಂದರೆ, ಎದೆನೋವು, ಅತಿಯಾದ ದೌರ್ಬಲ್ಯ, ತಲೆಸುತ್ತು ಅಥವಾ ಗೊಂದಲದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನಲ್ಲಿ 2 ಬಣವಾದ ಎನ್​ಡಿಎ; ಎಐಎಡಿಎಂಕೆಯಿಂದ ಬಂಡಾಯ ನಾಯಕರನ್ನು ಉಚ್ಛಾಟಿಸಿದ ಇಪಿಎಸ್ – Kannada News | AIADMK Leader Palaniswami removes Velumani and Shanmugam from party posts

ಚೆನ್ನೈ, ಮೇ 13: ತಮಿಳುನಾಡಿನಲ್ಲಿ ಒಂದೆಡೆ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಯಾಗಿದೆ. ಇನ್ನೊಂದೆಡೆ ಎಐಎಡಿಎಂಕೆ (AIADMK) ವಿಭಜನೆಯಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡು ಬಣವಾದಂತೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಕೂಡ ಇಬ್ಭಾಗವಾಗಿದೆ. ಇಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ 25 ಎಐಎಡಿಎಂಕೆ ಶಾಸಕರು ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಗೆ ಬೆಂಬಲ ನೀಡಿತ್ತು. ಇದಾದ ನಂತರ ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಬಂಡಾಯ ನಾಯಕರನ್ನು ವಜಾಗೊಳಿಸಿದ್ದಾರೆ. ಬಂಡಾಯ ನಾಯಕರು ಎಐಎಡಿಎಂಕೆ ನಾಯಕನ ಸ್ಥಾನದಿಂದ ಪಳನಿಸ್ವಾಮಿ ಅವರನ್ನು ಕೆಳಗಿಳಿಸಬೇಕೆಂದು ಪ್ರಯತ್ನಿಸುತ್ತಿದ್ದರೆ ಇನ್ನೊಂದೆಡೆ ಪಳನಿಸ್ವಾಮಿಯೇ ಬಂಡಾಯ ನಾಯಕರನ್ನು ಪಕ್ಷದಿಂದ ವಜಾಗೊಳಿಸುವ ಮೂಲಕ ಶಾಕ್ ನೀಡಿದ್ದಾರೆ.

ಇದೀಗ ತಮಿಳುನಾಡಿನಲ್ಲಿ ಇನ್ನೊಂದು ಗೊಂದಲ ಉಂಟಾಗಿದೆ. ಟಿವಿಕೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ಒಂದು ಷರತ್ತನ್ನು ವಿಧಿಸಿತ್ತು. ಬಿಜೆಪಿ ಅಥವಾ ಕೋಮು ಶಕ್ತಿಗಳನ್ನು ಸರ್ಕಾರದ ಮೈತ್ರಿಯಲ್ಲಿ ಸೇರಿಸಿಕೊಳ್ಳಬಾರದು ಎಂಬ ಏಕೈಕ ಷರತ್ತು ವಿಧಿಸಲಾಗಿತ್ತು. ಅದಕ್ಕೆ ವಿಜಯ್ ಕೂಡ ಒಪ್ಪಿಗೆ ನೀಡಿದ್ದರು. ಆದರೆ, ಇದೀಗ ಬಹುಮತಕ್ಕೆ ಬೆಂಬಲ ನೀಡಿರುವ 25 ಎಐಎಡಿಎಂಕೆ ಶಾಸಕರು ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಲ್ಲಿ ಇರುವುದರಿಂದ ಇದಕ್ಕೆ ಕಾಂಗ್ರೆಸ್ ಒಪ್ಪಲಿದೆಯೇ? ಅಥವಾ ಎಐಎಡಿಎಂಕೆಯ ಬಂಡಾಯ ಬಣ ಎನ್​ಡಿಎ ಮೈತ್ರಿಕೂಟದಿಂದ ಹೊರಬರಲಿದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: 2 ಬಣಗಳಾಗಿ ಒಡೆದ ಎಐಎಡಿಎಂಕೆ; ಪಳನಿಸ್ವಾಮಿಗೆ 17 ಶಾಸಕರು, ವೇಲುಮಣಿ​ಗೆ 30 ಶಾಸಕರ ಬೆಂಬಲ

ತಮಿಳುನಾಡಿನಲ್ಲಿ 4 ದಿನಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಟಿವಿಕೆ ಸರ್ಕಾರ ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದಿದೆ. ಎಐಎಡಿಎಂಕೆಯ 25 ಬಂಡಾಯ ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿ ವಿಜಯ್ ಸದನದ ವಿಶ್ವಾಸ ಗಳಿಸಿದರು. 234 ಸ್ಥಾನಗಳ ವಿಧಾನಸಭೆಯಲ್ಲಿ 59 ಸದಸ್ಯರನ್ನು ಹೊಂದಿರುವ ವಿರೋಧ ಪಕ್ಷ ಡಿಎಂಕೆ, ಪ್ರತಿಭಟಿಸಿ ಕಲಾಪದ ಸಮಯದಲ್ಲಿ ಸಭಾತ್ಯಾಗ ಮಾಡಿತು.

ಹೀಗಾಗಿ, ಎಐಎಡಿಎಂಕೆ ಪಕ್ಷದ ವಿಪ್‌ ಜಾರಿಯಲ್ಲಿದ್ದರೂ ಟಿವಿಕೆ ನೇತೃತ್ವದ ಸರ್ಕಾರವನ್ನು ಬೆಂಬಲಿಸಲು ಮತ ಚಲಾಯಿಸಿದ 25 ಶಾಸಕರ ಅನರ್ಹತೆಗೆ ಅರ್ಜಿ ಸಲ್ಲಿಸಿರುವುದಾಗಿ ಎಐಎಡಿಎಂಕೆ ತಿಳಿಸಿದೆ. ಇದು ಇಪಿಎಸ್ ನಾಯಕತ್ವದಲ್ಲಿ ಪಕ್ಷದಲ್ಲಿನ ಅತ್ಯಂತ ಗಂಭೀರ ಬಿಕ್ಕಟ್ಟನ್ನು ಸೂಚಿಸುತ್ತದೆ. ಇದೀಗ 13 ಹಾಲಿ ಶಾಸಕರು ಸೇರಿದಂತೆ ಒಟ್ಟು 29 ಎಐಎಡಿಎಂಕೆ ನಾಯಕರನ್ನು ಜಿಲ್ಲಾ ಕಾರ್ಯದರ್ಶಿ ಸ್ಥಾನಗಳು ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳಿಂದ ತೆಗೆದುಹಾಕಲಾಗಿದೆ. ಷಣ್ಮುಗಂ ಮತ್ತು ವೇಲುಮಣಿ ಅವರಲ್ಲದೆ, ಆರ್.ಕಾಮರಾಜ್, ಸಿ.ವಿಜಯಭಾಸ್ಕರ್, ತಂಗಮಣಿ, ಕೆ.ಪಿ.ಅನ್ಬಜಗನ್, ಕೆ.ಸಿ.ವೀರಮಣಿ ಮತ್ತು ಎಂ.ಆರ್.ವಿಜಯಭಾಸ್ಕರ್ ಸೇರಿದಂತೆ ಹಲವಾರು ಹಿರಿಯ ಎಐಎಡಿಎಂಕೆ ನಾಯಕರನ್ನು ಸಹ ಅವರ ಹುದ್ದೆಗಳಿಂದ ವಜಾಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಬರ್ ಆಝಂಗೆ ಮತ್ತೆ ಪಾಕ್ ತಂಡದ ನಾಯಕತ್ವ – Kannada News | Babar Azam to Replace Shan Masood as Pakistan Test Captain? PCB Eyes Return

ಪಾಕಿಸ್ತಾನ ಸೂಪರ್ ಲೀಗ್ (PSL) ಬಳಿಕ ಪಾಕಿಸ್ತಾನ ತಂಡ ಪ್ರಸ್ತತ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಅಲ್ಲಿ ಟೆಸ್ಟ್ ಸರಣಿಯನ್ನಾಡುತ್ತಿರುವ ಪಾಕ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ತಂಡ ಆಡಿದ ಮೊದಲ ಪಂದ್ಯದಲ್ಲೇ ಸೋತಿದೆ. ಢಾಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ತಂಡ 104 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಈ ಅವಮಾನಕರ ಸೋಲಿನಿಂದ ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶಾನ್ ಮಸೂದ್ (Shan Masood) ಅವರನ್ನು ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಅಲ್ಲದೆ ಮಸೂದ್ ಸ್ಥಾನಕ್ಕೆ ತಂಡದ ಮಾಜಿ ನಾಯಕ ಬಾಬರ್ ಆಝಂ (Babar Azam) ಅವರನ್ನು ಮತ್ತೊಮ್ಮೆ ಟೆಸ್ಟ್ ತಂಡದ ನಾಯಕನಾಗಿ ನೇಮಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಬಾಬರ್ ಆಝಂಗೆ ನಾಯಕತ್ವ

ವಾಸ್ತವವಾಗಿ ಗಾಯದಿಂದಾಗಿ ಬಾಬರ್ ಆಝಂ ಮೊದಲ ಟೆಸ್ಟ್ ಪಂದ್ಯವನ್ನು ಆಡಿರಲಿಲ್ಲ. ಇದೀಗ ವರದಿಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಾಲ್ಕನೇ ಆವೃತ್ತಿಯ ಉಳಿದ ಪಂದ್ಯಗಳಿಗೆ ಬಾಬರ್ ಆಝಂ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಬಹುದು. ಪಾಕಿಸ್ತಾನ ತಂಡದೊಳಗಿನ ಮೂಲಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಕೆಲವು ಪ್ರಭಾವಿ ಅಧಿಕಾರಿಗಳು ಸಹ ಬಾಬರ್ ಅವರನ್ನು ಮತ್ತೆ ನಾಯಕರನ್ನಾಗಿ ನೇಮಿಸಲು ಮುಂದಾಗಿದ್ದು, ಅವರಿಗೆ ಮತ್ತೊಂದು ಅವಕಾಶ ನೀಡಲು ಯೋಚಿಸಿದ್ದಾರೆ. ಇದಕ್ಕೆ ಕಾರಣ ಶಾನ್ ಮಸೂದ್ ಅವರ ಕಳಪೆ ನಾಯಕತ್ವ. ಡಿಸೆಂಬರ್ 2023 ರಿಂದ, ಮಸೂದ್ ನಾಯಕತ್ವದಲ್ಲಿ ಪಾಕಿಸ್ತಾನ ತನ್ನ 15 ಪಂದ್ಯಗಳಲ್ಲಿ 11 ಪಂದ್ಯಗಳನ್ನು ಸೋತಿದೆ. ಹೀಗಾಗಿ ಪಿಸಿಬಿ ಅಧಿಕಾರಿಗಳು ಈಗ ಪಾಕಿಸ್ತಾನದ ಉಳಿದ ಏಳು ಟೆಸ್ಟ್ ಪಂದ್ಯಗಳಿಗೆ ಬಾಬರ್ ಅವರನ್ನು ನಾಯಕನನ್ನಾಗಿ ನೇಮಿಸಲು ಮುಂದಾಗಿದ್ದಾರೆ.

ಮೂಲಗಳ ಪ್ರಕಾರ, ‘ಬಾಬರ್ ಎರಡನೇ ಟೆಸ್ಟ್‌ನಲ್ಲಿ ಆಡಿ, ಉತ್ತಮ ಪ್ರದರ್ಶನ ನೀಡಿದರೆ, ಅವರಿಗೆ ತಂಡದ ನಾಯಕತ್ವ ಸಿಗುವುದು ಖಚಿತವಾಗಿದೆ. ಈ ಬಗ್ಗೆ ಮಂಡಳಿಯ ಅಧಿಕಾರಿಗಳು ಚರ್ಚೆ ನಡೆಸಿದ್ದು, ಬಾಬರ್​ಗೆ ಮತ್ತೆ ನಾಯಕತ್ವ ನೀಡುವುದರ ಬಗ್ಗೆ ಯಾರಿಗೂ ಯಾವುದೇ ಆಕ್ಷೇಪಣೆಗಳಿಲ್ಲ ಎಂದು ವರದಿಯಾಗಿದೆ.

ಭಾರತೀಯರಿಲ್ಲದ ವಿಶ್ವ ಏಕದಿನ ಪ್ಲೇಯಿಂಗ್ XI ಪ್ರಕಟಿಸಿದ ಬಾಬರ್ ಆಝಂ

ಬಾಬರ್ ನಾಯಕತ್ವ ಕಳೆದುಕೊಂಡಿದ್ದು ಹೀಗೆ

ಬಾಬರ್ 2019 ಮತ್ತು 2023 ರ ನಡುವೆ ಮೂರು ಸ್ವರೂಪಗಳ ತಂಡಗಳ ನಾಯಕತ್ವ ವಹಿಸಿದ್ದರು, ಆದರೆ 2023 ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ನಂತರ ನಾಯಕತ್ವವನ್ನು ತ್ಯಜಿಸಬೇಕಾಯಿತು. 2024 ರ ವಿಶ್ವಕಪ್‌ಗಾಗಿ ಅವರನ್ನು ಟಿ20 ನಾಯಕರನ್ನಾಗಿ ಮರಳಿ ತರಲಾಯಿತು. ಆದರೆ ಕಳಪೆ ಟೂರ್ನಮೆಂಟ್ ನಂತರ ಮತ್ತೆ ನಾಯಕತ್ವವನ್ನು ತ್ಯಜಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಮಧುಬಂಗಾರಪ್ಪ ಹೇಳಿದ್ದೇನು ಗೊತ್ತಾ? – Kannada News | Madhu Bangarappa talks about Kesari Shawl after Governmnet Allowed Hijab In Schools

ಬೆಂಗಳೂರು, (ಮೇ 13): ಕರ್ನಾಟಕ ಸರ್ಕಾರವು (Karnataka Governmnet)  2022ರ ಹಿಜಾಬ್ (Hijab) ನಿಷೇಧ ಆದೇಶವನ್ನು ಅಧಿಕೃತವಾಗಿ ಹಿಂಪಡೆದಿದೆ. ಹೊಸ ಮಾರ್ಗಸೂಚಿಯ ಅನ್ವಯ, ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ನೀಡಲಾಗಿದ್ದು, ಈ ನಿಯಮವು ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ಅನ್ವಯವಾಗಲಿದೆ. ಇಂದು (ಮೇ 13) ಹೊಸ ವಸ್ತ್ರಸಂಹಿತೆ ಆದೇಶವನ್ನು ಹೊರಡಿಸಿದ್ದು, ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ‘ಹಿಜಾಬ್’ (ತಲೆವಸ್ತ್ರ) ಧರಿಸಲು ಈಗ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜನಿವಾರ ಮತ್ತು ಹಿಜಾಬ್ (Hijab) ಸೇರಿದಂತೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಆದ್ರೆ, ಸರ್ಕಾರದ ಆದೇಶದಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇದೆಯೋ, ಇಲ್ಲವೋ ಎಂದು ಸ್ಪಷ್ಟತೆ ಇಲ್ಲ. ಹೀಗಾಗಿ ಗೊಂದಲವಾಗಿದ್ದು, ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯ 2022ರ ಆದೇಶ ಹಿಂಪಡೆದ ಸರ್ಕಾರ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ

Source link

1ರಿಂದ 12ನೇ ತರಗತಿ ಮಕ್ಕಳಿಗೆ ನಿಖರ ವಸ್ತ್ರ ಸಂಹಿತೆ: ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು – Kannada News | Education Minister Madhu Bangarappa Reacts Over Karnataka Governmnet Allows Hijab And Sacred Threads In Schools

ಬೆಂಗಳೂರು (ಮೇ 13): ರಾಜ್ಯದ ಶೈಕ್ಷಣಿಕ (Karnataka Education) ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ‘ಹಿಜಾಬ್’ ವಿವಾದಕ್ಕೆ ಕರ್ನಾಟಕ ಸರ್ಕಾರವು ಈಗ ಅಧಿಕೃತವಾಗಿ ತೆರೆ ಎಳೆದಿದೆ. 2022ರಲ್ಲಿ ಅಂದಿನ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿಷೇಧಕ್ಕೆ ಪೂರಕವಾಗಿದ್ದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಹಿಂಪಡೆದಿದೆ. ಈ ಕುರಿತು ಇಂದು (ಮೇ 13) ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ‘ಹಿಜಾಬ್’ (ತಲೆವಸ್ತ್ರ) ಧರಿಸಲು ಈಗ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಬಗ್ಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ (Madhu bangarappa) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಜನಿವಾರ ತೆಗೆಸುವ ವಿಚಾರ ಸಾಕಷ್ಟು ಜನರ ಭಾವನೆಗೆ ಧಕ್ಕೆ ಉಂಟಾಗಿತ್ತು. ಮಕ್ಕಳ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ಆದೇಶ ಆಗಿದೆ. ಅವರವರ ಸಂಪ್ರದಾಯಕ್ಕೆ ಅನುಗುಣವಾಗಿ ವಸ್ತ್ರ ತೊಡುತ್ತಾರೆ ಎಂದರು.

ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಶಾಲಾ ಕಾಲೇಜುಗಳಲ್ಲಿ ಒಂದು ಕ್ಲಾರಿಟಿ ಇರಬೇಕು. 1ರಿಂದ 12ನೇ ತರಗತಿ ಮಕ್ಕಳಿಗೆ ನಿಖರ ವಸ್ತ್ರ ಸಂಹಿತೆ ನಿಗದಿ ಮಾಡುತ್ತಿದ್ದೇವೆ. ಶೈಕ್ಷಣಿಕ ವರ್ಷ ಆರಂಭ ಮುನ್ನ ಇದನ್ನು ಜಾರಿ ಮಾಡಬೇಕೆಂಬ ಉದ್ದೇಶವಿದೆ. ಸಾಂಪ್ರದಾಯಿಕ ರೀತಿಯಲ್ಲಿ ಹೇಗೆ ಶೈಕ್ಷಣಿಕ ಸಂಸ್ಥೆಗಳಿಗೆ ಹೋಗಬೇಕು ಅನ್ನೋದು ಈ ಆದೇಶದಲ್ಲಿ ಇದೆ. ಒತ್ತಡದ ಮೇಲೆ ಯಾವ ವಿದ್ಯಾರ್ಥಿ ಕೂಡ ಶಾಲೆಗೆ ಹೋಗಬಾರದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇದಕ್ಕಾಗಿ ಸಂವಿಧಾನ ಮಾಡಿಲ್ಲ. ಶಾಲೆಗೆ ಹೋಗೋದಕ್ಕೆ, ಪರೀಕ್ಷೆಗೆ ಹೋಗೋದಕ್ಕೂ ಈ ಪದ್ಧತಿ ಅನ್ವಯವಾಗಲಿದೆ. ವಸ್ತ್ರ ಸಂಹಿತೆ ಅಂತ ಕರೆಯೋಕೆ ಆಗಲ್ಲ, ಸಾಂಪ್ರದಾಯಿಕ ಪದ್ಧತಿ ಎನ್ನಬಹುದು ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿಯ 2022ರ ಆದೇಶ ಹಿಂಪಡೆದ ಸರ್ಕಾರ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ

Source link

ಜೂ ಎನ್​​ಟಿಆರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಹಬ್ಬದೂಟ – Kannada News | Three movie update on Jr NTR birthday on May 20

ಜೂ ಎನ್​​ಟಿಆರ್ (Jr NTR) ದಕ್ಷಿಣದ ಸ್ಟಾರ್ ನಟ. ಪವನ್ ಕಲ್ಯಾಣ್, ಪ್ರಭಾಸ್ ಅವರಂತೆ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ದಕ್ಷಿಣದಲ್ಲಿ ಹೊಂದಿರುವ ನಟ ಜೂ ಎನ್​​ಟಿಆರ್. ‘ಆರ್​​ಆರ್​ಆರ್’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ. ಅವರ ಈ ಹಿಂದಿನ ಸಿನಿಮಾ ‘ದೇವರ’ ದೊಡ್ಡ ಯಶಸ್ಸು ಕಾಣಲಿಲ್ಲವಾದರೂ ಫ್ಲಾಪ್ ಎನಿಸಿಕೊಳ್ಳಲಿಲ್ಲ. ಇದೀಗ ಅವರ ಪ್ರಶಾಂತ್ ನೀಲ್ ಜೊತೆಗೆ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಜೂ ಎನ್​​ಟಿಆರ್ ಅಭಿಮಾನಿಗಳು ಸಹ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಎತ್ತಿದ್ದರು. ಆದರೆ ಇದೀಗ ಜೂ ಎನ್​​ಟಿಆರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಖತ್ ಟ್ರೀಟ್ ಕೊಡಲು ಜೂ ಎನ್​​ಟಿಆರ್ ಸಜ್ಜಾಗಿದ್ದಾರೆ.

ಮೇ 20 ರಂದು ಜೂ ಎನ್​​ಟಿಆರ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಆ ದಿನ ಅವರ ಮೂರು ಸಿನಿಮಾಗಳ ಅಪ್​​ಡೇಟ್ ಒಟ್ಟಿಗೆ ಸಿಗಲಿದೆ. ಪ್ರಶಾಂತ್ ನೀಲ್ ಜೊತೆಗೆ ನಟಿಸುತ್ತಿರುವ ಸಿನಿಮಾದ ಟೈಟಲ್ ಟೀಸರ್ ಅಂದು ಬಿಡುಗಡೆ ಆಗಲಿದೆ. ಈ ವರೆಗೆ ಆ ಸಿನಿಮಾವನ್ನು ಅಭಿಮಾನಿಗಳು ‘ಡ್ರ್ಯಾಗನ್’ ಎಂದು ಕರೆಯುತ್ತಿದ್ದರು, ಆದರೆ ಅದು ಸಿನಿಮಾದ ಅಧಿಕೃತ ಹೆಸರಾಗಿರಲಿಲ್ಲ. ಮೇ 20 ರಂದು ಸಿನಿಮಾದ ಹೆಸರು ಬಿಡುಗಡೆ ಮಾಡಲಿದೆ ಚಿತ್ರತಂಡ. ಅದೂ ಮೇ 19ರ ಮಧ್ಯರಾತ್ರಿ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಆಗಲಿರುವುದು ವಿಶೇಷ.

ಇದನ್ನೂ ಓದಿ:‘ವಾರ್ 2’ ಸೋತರೂ ಜೂ ಎನ್​ಟಿಆರ್​​ಗೆ ಮತ್ತೊಂದು ಅವಕಾಶ ಕೊಟ್ಟ ವೈಆರ್​ಎಫ್

ಇನ್ನು ಮೇ 20ರಂದು ಜೂ ಎನ್​​ಟಿಆರ್ ನಟಿಸಲಿರುವ ‘ಗಾಡ್ ಆಫ್ ವಾರ್ಸ್’ ಸಿನಿಮಾದ ಘೋಷಣೆ ಆಗಲಿದೆ. ದೇವರು ಮುರುಗನ್ ಅಥವಾ ಕಾರ್ತಿಕೇಯ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಕಾರ್ತಿಕೇಯನನ್ನು ‘ಯುದ್ಧಗಳ ದೇವತೆ’ ಎಂದು ಸಹ ಕರೆಯಲಾಗುತ್ತದೆ. ಇದೀಗ ಜೂ ಎನ್​​ಟಿಆರ್ ಅವರು ಕಾರ್ತಿಕೇಯ ದೇವರ ಆಧರಿಸಿ ರಚಿಸಿದ ಕತೆಯನ್ನು ಆಧರಿಸಿದ ಸಿನಿಮಾನಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಜೂ ಎನ್​​ಟಿಆರ್ ಅವರ ಮೆಚ್ಚಿನ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಲಿದ್ದು, ಸಿನಿಮಾ ಘೋಷಣೆ ಮೇ 20ರಂದು ಅಧಿಕೃತವಾಗಿ ಆಗಲಿದೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗುತ್ತದೆ ಎನ್ನಲಾಗುತ್ತಿದೆ.

ಇನ್ನು ಜೂ ಎನ್​​ಟಿಆರ್ ಅವರ ಈ ಹಿಂದಿನ ಸಿನಿಮಾ ‘ದೇವರ’ದ ಸೀಕ್ವೆಲ್ ‘ದೇವರ 2’ ಬಗ್ಗೆಯೂ ಮೇ 20ರಂದೇ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ. ‘ದೇವರ’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ಎರಡು ವರ್ಷಗಳಾದರೂ ಸಹ ‘ದೇವರ 2’ ಸಿನಿಮಾ ಬಗ್ಗೆ ಯಾವುದೇ ಅಪ್​​ಡೇಟ್ ಹೊರಬಿದ್ದಿರಲಿಲ್ಲ. ‘ದೇವರ 2’ ನಿಂತು ಹೋಗಿದೆ, ಆ ಸಿನಿಮಾ ನಿರ್ಮಾಣ ಆಗುವುದಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿದ್ದವು. ಆದರೆ ಇದೀಗ ಮೇ 20ರಂದು ‘ದೇವರ 2’ ಬಗ್ಗೆ ಅಪ್​​ಡೇಟ್ ಸಿಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರ ಗಡಿಯಲ್ಲಿ ಭಾರಿ ಪ್ರಮಾಣದ ಲೈವ್ ಬುಲೆಟ್ ಪತ್ತೆ: 1969ರ ಬ್ಯಾಚ್‌ನ ಗುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು – Kannada News | Bangarpet Border Bullet Discovery: 135 Live Rounds Found, Sparks Alarm

ಕೋಲಾರ ಗಡಿಯಲ್ಲಿ ಭಾರಿ ಪ್ರಮಾಣದ ಲೈವ್ ಬುಲೆಟ್ ಪತ್ತೆ

ಕೋಲಾರ, ಮೇ.13: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಮಿಳುನಾಡು ಗಡಿ ಭಾಗದಲ್ಲಿ ಭಾರಿ ಪ್ರಮಾಣದ ಬುಲೆಟ್‌ಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಎಸ್‌ಎಲ್‌ಆರ್ (SLR) ಅಥವಾ ಮಿಷನ್ ಗನ್‌ಗಳಿಗೆ ಬಳಸುವ ಒಟ್ಟು 214 ಬುಲೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಗಾರಪೇಟೆ ತಾಲೂಕಿನ ದಾಸರಮಲ್ಲ ಬ್ರಿಡ್ಜ್ ಬಳಿ ಅಪರಿಚಿತರು ಈ ಬುಲೆಟ್‌ಗಳನ್ನು ಬಿಸಾಡಿ ಹೋಗಿದ್ದಾರೆ. ಪತ್ತೆಯಾದ ಬುಲೆಟ್‌ಗಳು 1969ರಲ್ಲಿ ಮಹಾರಾಷ್ಟ್ರದಲ್ಲಿ ತಯಾರಾದವುಗಳಾಗಿದ್ದು, ಇವುಗಳಲ್ಲಿ 7.6 mm ಮಾದರಿಯ ಗುಂಡುಗಳಿವೆ. ಕಾಮಸಮುದ್ರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, 214 ಬುಲೆಟ್‌ಗಳ ಪೈಕಿ 135 ಜೀವಂತ ಬುಲೆಟ್‌ಗಳಿದ್ದರೆ (Live Bullets), 85 ಖಾಲಿಯಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ: ಹಿಜಾಬ್‌ಗೆ ಸರ್ಕಾರ ಗ್ರೀನ್ ಸಿಗ್ನಲ್! ಅಮೆರಿಕ, ಆಸ್ಟ್ರೇಲಿಯಾಕ್ಕೆ ರೊಟ್ಟಿ ರಫ್ತು

ಇವುಗಳನ್ನು ಮಿಸ್ ಫೈರ್ ಅಥವಾ ಡಮ್ಮಿ ಬುಲೆಟ್‌ಗಳಿರಬಹುದು ಎಂದು ಶಂಕಿಸಲಾಗಿದ್ದು, ಹಲವು ತಿಂಗಳ ಹಿಂದೆಯೇ ಇಲ್ಲಿ ಬಿಸಾಡಿರಬಹುದು ಎನ್ನಲಾಗಿದೆ. ಗಡಿ ಭಾಗದಲ್ಲಿ ಇಷ್ಟು ದೊಡ್ಡ ಪ್ರಮಾಣದ ಗುಂಡುಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಾಮಸಮುದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬುಲೆಟ್‌ಗಳನ್ನು ತಂದವರು ಯಾರು ಮತ್ತು ಇದರ ಉದ್ದೇಶವೇನು ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ನೂ ನಿಗೂಢವಾಗಿಯೇ ಇದೆ ಕೇರಳಂ ಸಿಎಂ ಹೆಸರು; ನಾಳೆ ಕಾಂಗ್ರೆಸ್​​ನಿಂದ ಅಧಿಕೃತ ಘೋಷಣೆ – Kannada News | Congress will Announce Kerala Chief Minister Name Tomorrow Jairam Ramesh Keralam CM

ನವದೆಹಲಿ, ಮೇ 13: ಕೇರಳಂನಲ್ಲಿ ಇನ್ನೂ ಮುಖ್ಯಮಂತ್ರಿಯ ಆಯ್ಕೆಯ ಬಿಕ್ಕಟ್ಟು ಬಗೆಹರಿದಿಲ್ಲ. ಇಂದು ಕೇರಳಂನ (Keralam CM) ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡಲಾಗುವುದು ಎನ್ನಲಾಗಿತ್ತು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದ್ದಾರೆ. ಇದಾದ ಬಳಿಕ ಕಾಂಗ್ರೆಸ್ ಕೇರಳಂನ ಮುಖ್ಯಮಂತ್ರಿ (Kerala CM) ಹೆಸರನ್ನು ಘೋಷಿಸುವ ನಿರೀಕ್ಷೆಯಿತ್ತು. ಆದರೆ, ಮತ್ತೊಮ್ಮೆ ಸಿಎಂ ಹೆಸರು ಘೋಷಣೆ ಮುಂದೂಡಲ್ಪಟ್ಟಿದೆ. ಇಂದಿನ ಸಭೆಯಲ್ಲಿ ಸಿಎಂ ಹೆಸರು ಅಂತಿಮವಾಗಿದ್ದು, ನಾಳೆ ಅಧಿಕೃತವಾಗಿ ಹೆಸರು ಘೋಷಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಕೇರಳಂನಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್, ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಸಿಎಂ ರೇಸ್​​ನಲ್ಲಿದ್ದವು. ಕೇರಳದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್​ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಆದರೂ ಇನ್ನೂ ಸರ್ಕಾರ ರಚನೆಗೆ ಮುಹೂರ್ತ ನಿಗದಿಯಾಗಿಲ್ಲ.

ಕೇರಳಂ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ನಡೆಯುತ್ತಿರುವ ತೀವ್ರ ಜಗಳದ ನಡುವೆ, ರಾಹುಲ್ ಗಾಂಧಿ ನಿನ್ನೆ ದೆಹಲಿಯಲ್ಲಿ ಮಾಜಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರನ್ನು ಭೇಟಿ ಮಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಇದಾದ ನಂತರ ಇಂದು ಮಲ್ಲಿಕಾರ್ಜುನ ಖರ್ಗೆಯವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಹೈಕಮಾಂಡ್​​ ಸಭೆ ಬಳಿಕವೂ ಆಗದ ಅಂತಿಮ ನಿರ್ಧಾರ: ಕೇರಳದ ನೂತನ ಸಿಎಂ ಯಾರೆಂಬುದು ಇನ್ನೂ ಸಸ್ಪೆನ್ಸ್​!

ಮಂಗಳವಾರ ನಡೆದ ನಿರ್ಣಾಯಕ ಚರ್ಚೆಗಳ ಸಂದರ್ಭದಲ್ಲಿ ಪಕ್ಷದ ನಾಯಕತ್ವವು ದೆಹಲಿಗೆ ಕರೆಸಿದ್ದ ಕೇರಳಂ ನಾಯಕರು ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ರಾಹುಲ್ ಗಾಂಧಿಯನ್ನು ಭೇಟಿಯಾದ ನಂತರ ಮಾಜಿ ಕೆಪಿಸಿಸಿ ಮುಖ್ಯಸ್ಥ ಕೆ ಮುರಳೀಧರನ್, ಪಕ್ಷವು ಬುಧವಾರದೊಳಗೆ ಮುಖ್ಯಮಂತ್ರಿಯ ಹೆಸರನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದರು. ಆದರೆ, ಅದು ನಾಳೆಗೆ ಮುಂದೂಡಲ್ಪಟ್ಟಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಬಗ್ಗೆ ಮಾಹಿತಿ ನೀಡಿದ್ದು, ನಾಳೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ. ಕೆ.ಸಿ. ವೇಣುಗೋಪಾಲ್ ಸಿಎಂ ಆಗುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ವಿ.ಡಿ. ಸತೀಶನ್ ಕೇರಳಂ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಕೇರಳಂನ ಹಿರಿಯ ನಾಯಕರೊಂದಿಗೆ ವಿವರವಾದ ಚರ್ಚೆಯ ನಂತರ ನಾಳೆ ಈ ಕ್ರಮವನ್ನು ಘೋಷಿಸಲಾಗುವುದು.

ಇದನ್ನೂ ಓದಿ: ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ ಆಗೋದು ಪಕ್ಕಾ?

ವಿ.ಡಿ. ಸತೀಶನ್ ಜೊತೆಗೆ ಕೆ.ಸಿ. ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಮತ್ತು ಇತರರು ಕೇರಳಂನ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿದ್ದರು. ಕೇರಳಂ ಮುಖ್ಯಮಂತ್ರಿಯನ್ನು ಘೋಷಿಸುವಲ್ಲಿನ ವಿಳಂಬಕ್ಕೆ ಕಾಂಗ್ರೆಸ್ ನಾಯಕರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಕೂಡ ಕೂಡಲೇ ಸಿಎಂ ಹೆಸರು ಘೋಷಿಸುವ ಒತ್ತಡಕ್ಕೆ ಸಿಲುಕಿದೆ.

ಕೇರಳಂ ವಿಧಾನಸಭಾ ಚುನಾವಣೆ:

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳಂನಲ್ಲಿ 140 ವಿಧಾನಸಭಾ ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದುಕೊಂಡಿತು. ಇದು ಒಂದು ದಶಕದ ನಂತರ ಐತಿಹಾಸಿಕ ಪುನರಾಗಮನವನ್ನು ಗುರುತಿಸುತ್ತದೆ. ಮತ್ತೊಂದೆಡೆ, ಎಡ ಪ್ರಜಾಸತ್ತಾತ್ಮಕ ರಂಗವು ಕೇವಲ 35 ಸ್ಥಾನಗಳನ್ನು ಗಳಿಸಿತು. ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದಂತಾಗಿದೆ. ಇದು ಎಲ್‌ಡಿಎಫ್‌ನ ದಶಕಗಳಷ್ಟು ಹಳೆಯದಾದ ಆಡಳಿತವನ್ನು ಕೊನೆಗೊಳಿಸಿತು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸಲು ಸಾಧ್ಯವಾಗಿರಲಿಲ್ಲ. ಇದೀಗ ಇಂದು ಸಿಎಂ ಹೆಸರನ್ನು ಘೋಷಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಈ ಸೀಸನ್ ಬಳಿಕ ಈ ಐದು ತಂಡಗಳ ನಾಯಕತ್ವದಲ್ಲಿ ಬದಲಾವಣೆ – Kannada News | IPL 2026: 5 Underperforming Teams Likely to Get New Captains for 2027 Season

ಅಕ್ಷರ್ ಪಟೇಲ್: ಅಕ್ಷರ್ ಪಟೇಲ್ ನಾಯಕತ್ವದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 2025 ರಲ್ಲಿಯೂ ಪ್ಲೇಆಫ್ ತಲುಪಲು ವಿಫಲವಾಗಿತ್ತು. ಇದೀಗ, ತಂಡವು 2026 ರಲ್ಲಿಯೂ ಪ್ಲೇಆಫ್ ತಲುಪುವ ಸಾಧ್ಯತೆಯಿಲ್ಲ. ನಾಯಕನಾದ ನಂತರ ಅಕ್ಷರ ಪಟೇಲ್ ಅವರ ಪ್ರದರ್ಶನವೂ ಕುಸಿದಿದೆ. ಅದಕ್ಕಾಗಿಯೇ ದೆಹಲಿ ತಂಡವು 2027 ರ ಆವೃತ್ತಿಗೆ ಹೊಸ ನಾಯಕನನ್ನು ನೇಮಿಸಬಹುದು.

Source link

Chanakya Niti: ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ – Kannada News | Chanakya Niti: Don’t tell anyone these five personal details of yours

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಗೌಪ್ಯತೆ ಮತ್ತು ವಿವೇಕದ ಮಹತ್ವವನ್ನು ವಿವರಿಸಿದ್ದಾರೆ. ಬುದ್ಧಿವಂತ ವ್ಯಕ್ತಿಗಳು ಈ ಕೆಲವೊಂದು ವೈಯಕ್ತಿಕ ವಿಚಾರಗಳನ್ನು, ಸೀಕ್ರೆಟ್‌ಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನೀವು ಸಹ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ, ನೆಮ್ಮದಿಯ ಜೀವನವನ್ನು ನಡೆಸಲು ಬಯಸಿದರೆ, ತಪ್ಪಿಯೂ ಸಹ ಯಾರೊಂದಿಗೂ ಈ ಕೆಲವೊಂದು ವಿಚಾರಗಳನ್ನು ಶೇರ್‌ ಮಾಡಬೇಡಿ. ಆಪ್ತ ಸ್ನೇಹಿತರು, ಪ್ರೀತಿಪಾತ್ರರು ಸೇರಿದಂತೆ ಯಾರ ಬಳಿಯೂ ವೈಯಕ್ತಿಕ ರಹಸ್ಯಗಳನ್ನು ಹಂಚಿಕೊಳ್ಳಬಾರದು. ಚಾಣಕ್ಯರು ಹೇಳಿರುವಂತೆ ಯಾವೆಲ್ಲಾ ರಹಸ್ಯಗಳನ್ನು ಹಂಚಿಕೊಳ್ಳುವುದು ತಪ್ಪು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಮ್ಮ ಈ ಸೀಕ್ರೆಟ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:

ನಿಮ್ಮ ದೌರ್ಬಲ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: ಪ್ರತಿಯೊಬ್ಬರಲ್ಲೂ ಏನಾದರೊಂದು ದೌರ್ಬಲ್ಯಗಳಿರುತ್ತವೆ, ಆದರೆ ನೀವು ಅವುಗಳನ್ನು ಯಾರಿಗಾದರೂ ಹೇಳಿದರೆ, ಅವರು ಅದರ  ಲಾಭವನ್ನು ಪಡೆಯಬಹುದು. ಮತ್ತು ನಿಮ್ಮ ಇಮೇಜ್‌ಗೆ ಕಳಂಕ ತರಬಹುದು. ಹಾಗಾಗಿ ನಿಮ್ಮ ದೌರ್ಬಲ್ಯಗಳ ಬಗ್ಗೆ ಯಾರಿಗೂ ಹೇಳಬೇಡಿ.

ನಿಮಗಾದ ಹಣದ ನಷ್ಟದ ಬಗ್ಗೆ ಯಾರಿಗೂ ಹೇಳಬೇಡಿ:  ನೀವು ನಿಮಗಾದ ಹಣದ ನಷ್ಟದ ಬಗ್ಗೆ ಯಾರಿಗಾದರೂ ಹೇಳಿದರೆ, ಜನರು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಗೇಲಿ ಮಾಡಬಹುದು ಅಥವಾ ನಿಮ್ಮ ಈ ಅಸಹಾಯಕ ಪರಿಸ್ಥಿತಿಯ ಲಾಭವನ್ನು ಪಡೆಯಬಹುದು.

ಮನಸ್ಸಿನಲ್ಲಿರುವ ದುಃಖ, ನೋವಿನ ಬಗ್ಗೆ ಯಾರಿಗೂ ಹೇಳಬಾರದು:  ಆಚಾರ್ಯ ಚಾಣಕ್ಯರು ಹೇಳುವಂತೆ ನಿಮ್ಮ ಮನಸ್ಸಿನಲ್ಲಿ ಯಾವುದೇ ದುಃಖವಿದ್ದರೆ ಅದನ್ನು ಯಾರಿಗೂ ಹೇಳಬೇಡಿ. ಏಕೆಂದರೆ ಕೆಲವರು ನಿಮ್ಮ ಮುಂದೆ ನಿಮ್ಮ ದುಃಖಕ್ಕೆ ಸಹಾನುಭೂತಿ ತೋರಿಸುತ್ತಾರೆ, ಆದರೆ ನಿಮ್ಮ ಬೆನ್ನ ಹಿಂದೆ ನಗುತ್ತಾರೆ, ಇತರರೊಂದಿಗೆ ನಿಮ್ಮ ಅಸಹಾಯಕ ಪರಿಸ್ಥಿತಿಯ ಬಗ್ಗೆ ತಮಾಷೆಯ ಮಾತುಗಳನ್ನಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಐದು ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗದಂತಿರುತ್ತದೆ ಎಂದಿದ್ದಾರೆ ಚಾಣಕ್ಯ

ಮನೆಯ ವಿಷಯಗಳನ್ನು ಯಾರಿಗೂ ಹೇಳಬೇಡಿ:   ನಿಮ್ಮ ಕುಟುಂಬದ ದೌರ್ಬಲ್ಯಗಳನ್ನು, ಕುಟುಂಬದಲ್ಲಿ ನಡೆಯುವ ಜಗಳ, ಮನಸ್ತಾಪಗಳನ್ನು ಇತರರೊಂದಿಗೆ  ಬಹಿರಂಗಪಡಿಸುವುದರಿಂದ ನಿಮ್ಮ ಕುಟುಂಬದ ಖ್ಯಾತಿಗೆ ಹಾನಿಯಾಗಬಹುದು ಅಥವಾ  ನಿಮ್ಮ ಮನೆಯ ಪರಿಸ್ಥಿತಿಯ ಲಾಭವನ್ನು ಯಾರಾದರೂ ಪಡೆಯಲು ಕಾರಣವಾಗಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಾಗಿ ಎಷ್ಟೇ ಆಪ್ತರಾದರೂ ಸರಿ ಅವರ ಬಳಿ ನಿಮ್ಮ ಮನೆಯ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಬೇಡಿ.

ನಿಮ್ಮ ಭವಿಷ್ಯದ ಯೋಜನೆಗಳನ್ನು ಯಾವಾಗಲೂ ಮರೆಮಾಡಿ: ನಿಮ್ಮ ದೊಡ್ಡ ಕನಸುಗಳು, ಯೋಜನೆಗಳು ಮತ್ತು ಗುರಿಗಳನ್ನು ಅವು ಪೂರ್ಣಗೊಂಡ ನಂತರ ಮಾತ್ರವೇ ಹಂಚಿಕೊಳ್ಳಿ. ಅದಕ್ಕೂ ಮುನ್ನ ನಿಮ್ಮ ಯೋಜನೆಗಳ ಬಗ್ಗೆ ಇತರರಿಗೆ ಹೇಳಿದರೆ ಜನ ನಿಮ್ಮ ಸ್ಥೈರ್ಯ ಕುಗ್ಗಿಸಲು ಅಥವಾ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸಬಹುದು. ಆದ್ದರಿಂದ ನಿಮ್ಮ ಗುರಿಗಳು, ಮುಂದಿನ ನಡೆಯ ಬಗ್ಗೆ ಯಾರಿಗೂ ಹೇಳಬಾರದು ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version