ಮಲಗುವ ಮುನ್ನ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಇದು ಒಳ್ಳೆಯದೋ ಅಲ್ಲವೋ ತಜ್ಞರು ನೀಡಿರುವ ಸಲಹೆ ಇಲ್ಲಿದೆ – Kannada News | Drinking Liquids At Night: Doctor Tips For Better Sleep Quality

ಇಂದಿನ ಜೀವನಶೈಲಿಯಲ್ಲಿ ಹಲವರಿಗೆ ಮಲಗುವ ಮುನ್ನ ನೀರು (Water) ಅಥವಾ ಇತರ ಲಿಕ್ವಿಡ್‌ ರೂಪದ ಪಾನೀಯ ಅಥವಾ ಆಹಾರಗಳ ಸೇವನೆ ಮಾಡುವ ಅಭ್ಯಾಸ ಇರುತ್ತದೆ. ಕೆಲವರು ಇದರಿಂದ ದೇಹ ಹೈಡ್ರೇಟ್ ಆಗಿರುತ್ತದೆ ಎಂದು ನಂಬಿದರೆ, ಇನ್ನೂ ಕೆಲವರಿಗೆ ರಾತ್ರಿ ಪದೇಪದೇ ಮೂತ್ರಕ್ಕೆ ಹೋಗಬೇಕಾಗುವುದು ಮತ್ತು ನಿದ್ರೆ ಭಂಗವಾಗುವಂತಹ ಸಮಸ್ಯೆಯಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಲಿಕ್ವಿಡ್ ಸೇವಿಸುತ್ತೇವೆ ಎಂಬುದು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೌದು, ದೇಹವನ್ನು ಹೈಡ್ರೇಟ್ ಇಟ್ಟುಕೊಳ್ಳುವುದು ಅಗತ್ಯವಾದರೂ, ರಾತ್ರಿ ವೇಳೆ ಅತಿಯಾಗಿ ನೀರು ಅಥವಾ ಇತರ ಪಾನೀಯಗಳನ್ನು ಸೇವಿಸುವುದು ಎಲ್ಲರಿಗೂ ಸೂಕ್ತವಲ್ಲ. ವಿಶೇಷವಾಗಿ ಚಹಾ, ಕಾಫಿ ಅಥವಾ ಕ್ಯಾಫಿನ್ ಇರುವ ಪಾನೀಯಗಳನ್ನು ಹೆಚ್ಚು ಸೇವಿಸಿದರೆ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀಳಬಹುದು. ಆದ್ದರಿಂದ ಮಲಗುವ ಮುನ್ನ ಎಷ್ಟು ಪ್ರಮಾಣದಲ್ಲಿ ಲಿಕ್ವಿಡ್ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಮಲಗುವ ಮುನ್ನ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು?

ಆರೋಗ್ಯ ತಜ್ಞರ ಪ್ರಕಾರ, ಮಲಗುವ ಮೊದಲು ಸುಮಾರು 100 ರಿಂದ 200 ಮಿಲಿ ಲೀಟರ್‌ವರೆಗೆ ನೀರು ಅಥವಾ ಇತರ ಲಿಕ್ವಿಡ್ ಸೇವಿಸುವುದು ಸಾಮಾನ್ಯವಾಗಿ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಈ ಪ್ರಮಾಣ ದೇಹದಲ್ಲಿ ನೀರಿನ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ ಮತ್ತು ರಾತ್ರಿ ವೇಳೆ ಪದೇಪದೇ ಮೂತ್ರಕ್ಕೆ ಹೋಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದರೆ ಇದು ಅವರವರ ದೇಹದ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ದಿನವಿಡೀ ಸಾಕಷ್ಟು ನೀರು ಕುಡಿದಿದ್ದರೆ ರಾತ್ರಿ ಹೆಚ್ಚು ನೀರು ಕುಡಿಯುವ ಅಗತ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಹೆಚ್ಚು ನೀರು ಕುಡಿದರೆ ಏನಾಗಬಹುದು?

ರಾತ್ರಿ ವೇಳೆ ಅತಿಯಾಗಿ ನೀರು ಅಥವಾ ಪಾನೀಯಗಳನ್ನು ಕುಡಿಯುವುದರಿಂದ ಪದೇಪದೇ ನಿದ್ರೆ ಭಂಗವಾಗಬಹುದು. ಇದರಿಂದ ಬೆಳಿಗ್ಗೆ ದಣಿವು, ಏಕಾಗ್ರತೆಯ ಕೊರತೆ ಮತ್ತು ತಲೆಭಾರ ಅನುಭವಿಸಬಹುದು. ಕೆಲವರಿಗೆ ಹೊಟ್ಟೆ ಉಬ್ಬರ ಅಥವಾ ಅಸ್ವಸ್ಥತೆ ಕೂಡ ಉಂಟಾಗಬಹುದು. ಅದರಲ್ಲಿಯೂ ಕಿಡ್ನಿ, ಹೃದಯ ಅಥವಾ ಮೂತ್ರಾಶಯ ಸಮಸ್ಯೆ ಇರುವವರು ಮಲಗುವ ಮುನ್ನ ನೀರು ಅಥವಾ ಇನ್ನಿತರ ಪಾನೀಯಗಳನ್ನು ಕುಡಿಯುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ಮಧುಮೇಹ ಅಥವಾ ರಾತ್ರಿ ಪದೇಪದೇ ಮೂತ್ರಕ್ಕೆ ಹೋಗುವ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: ತರಕಾರಿಯಷ್ಟೇ ಅಲ್ಲ ರಾಜ್ಯದ ಜನರು ಕುಡಿಯುವ ನೀರೂ ಕಲುಷಿತ!: ಶಾಕಿಂಗ್​ ವಿಚಾರ ಬಹಿರಂಗ

ಆರೋಗ್ಯ ಕಾಪಾಡಲು ಈ ಸಲಹೆಯನ್ನು ತಪ್ಪದೆ ಪಾಲಿಸಿ:

  • ಮಲಗುವ 1 ಗಂಟೆ ಮೊದಲು ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಿ
  • ಕ್ಯಾಫಿನ್ ಇರುವ ಪಾನೀಯಗಳ ಸೇವನೆಯನ್ನು ರಾತ್ರಿ ಕಡಿಮೆ ಮಾಡಿ
  • ದಿನವಿಡೀ ಸಮರ್ಪಕವಾಗಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ
  • ನಿದ್ರೆ ಸಮಸ್ಯೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ; ನಾಳೆಯಿಂದಲೇ ಅಮುಲ್ ಹಾಲಿನ ಬೆಲೆ ಲೀಟರ್​​ಗೆ 2 ರೂ. ಏರಿಕೆ – Kannada News | Amul raises milk prices Rs 2 more per litre across India Effective from May 14

ನವದೆಹಲಿ, ಮೇ 13: ಪ್ರಮುಖ ಡೈರಿ ಬ್ರಾಂಡ್ ಅಮುಲ್ (Amul) ತನ್ನ ಹಲವಾರು ಹಾಲಿನ ಉತ್ಪನ್ನಗಳಲ್ಲಿ ಪ್ರತಿ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಳವನ್ನು ಘೋಷಿಸಿದೆ. ಪರಿಷ್ಕೃತ ಬೆಲೆಗಳು ಮೇ 14ರಿಂದ (ನಾಳೆಯಿಂದ) ಜಾರಿಗೆ ಬರಲಿದೆ. ಮೇ 14ರಿಂದ ದೇಶಾದ್ಯಂತ ಅಮುಲ್ ಹಾಲು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳವಾಗಲಿದೆ. ದಿನನಿತ್ಯ ಬಳಸುವ ಹಾಲಿನ ಬೆಲೆಯನ್ನು ಏರಿಕೆ ಮಾಡಿರುವುದರಿಂದ ಜನಸಾಮಾನ್ಯರ ಮೇಲೆ ಮತ್ತೆ ಹೊರೆಬೀಳುವುದು ಖಂಡಿತ.

ಮೇ 14ರಿಂದಲೇ ಲೀಟರ್‌ಗೆ 2 ರೂ. ಹೆಚ್ಚಳದ ನಿಯಮ ಜಾರಿಗೆ ಬಂದಿದೆ. ಇದರರ್ಥ ಮೇ 14ರಿಂದ ಗ್ರಾಹಕರು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳಲ್ಲಿ ಅಮುಲ್ ಹಾಲನ್ನು ಖರೀದಿಸಲು ಹೊಸ ದರಗಳ ಪ್ರಕಾರ ಪಾವತಿಸಬೇಕಾಗುತ್ತದೆ. ಹಸುಗಳ ಮೇವು ಮತ್ತು ಪ್ಯಾಕೇಜಿಂಗ್‌ನ ಹೆಚ್ಚುತ್ತಿರುವ ವೆಚ್ಚವು ಈ ಬೆಲೆ ಏರಿಕೆಗೆ ಕಾರಣವಾಗಿದೆ.

ಇದನ್ನೂ ಓದಿ: ಸೆ. 22ರಿಂದ ಬೆಣ್ಣೆ, ಐಸ್ ಕ್ರೀಮ್, ತುಪ್ಪ ಸೇರಿ 700ಕ್ಕೂ ಹೆಚ್ಚು ಅಮುಲ್ ಉತ್ಪನ್ನಗಳ ಬೆಲೆ ಕಡಿತ

ಅಮುಲ್ ಕಂಪನಿಯ ಪ್ರಕಾರ, ಬೆಲೆ ಹೆಚ್ಚಳವು ಅಮುಲ್‌ನ ಅತ್ಯಂತ ಹೆಚ್ಚು ಸೇವಿಸುವ ಕೆಲವು ಹಾಲಿನ ಉತ್ಪನ್ನಗಳನ್ನು ಒಳಗೊಳ್ಳುತ್ತದೆ, ಅವುಗಳೆಂದರೆ, ಅಮುಲ್ ಗೋಲ್ಡ್, ಅಮುಲ್ ತಾಜಾ, ಅಮುಲ್ ಹಸು ಹಾಲು, ಅಮುಲ್ ಎಮ್ಮೆ ಹಾಲು, ಅಮುಲ್ ಸ್ಲಿಮ್ ಆ್ಯಂಡ್ ಟ್ರಿಮ್, ಅಮುಲ್ ಸ್ಟ್ಯಾಂಡರ್ಡ್ ಮಿಲ್ಕ್, ಅಮುಲ್ ಟಿ-ಸ್ಪೆಷಲ್.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿಯ 2022ರ ಆದೇಶ ಹಿಂಪಡೆದ ಸರ್ಕಾರ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ – Kannada News | Karnataka passes a new order allowing students to wear Hijab, Rudraksh, Janivara And other faith based symbols along with prescribed uniforms in schools & PU colleges.

ಬೆಂಗಳೂರು, (ಮೇ 13): ಕರ್ನಾಟಕದಲ್ಲಿ (Karnataka)  ಶಾಲೆ-ಕಾಲೇಜುಗಳಲ್ಲಿ (schools And colleges) ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಜನಿವಾರ ಮತ್ತು ಹಿಜಾಬ್ (Hijab) ಸೇರಿದಂತೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸಮವಸ್ತ್ರ ವಿಚಾರವಾಗಿ 2022ರ ಆದೇಶ ಹಿಂಪಡೆದು ಹೊಸ ಆದೇಶ ಹೊರಡಿಸಲಾಗಿದೆ. ಸಮವಸ್ತ್ರ ಮತ್ತು ಶಿಸ್ತನ್ನು ಕಾಪಾಡುವ ಜೊತೆಗೆ, ತಾರತಮ್ಯವಿಲ್ಲದ ಮತ್ತು ಸಾಂವಿಧಾನಿಕವಾಗಿ ಸಮತೋಲಿತವಾದ ರೀತಿಯಲ್ಲಿ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸಲು ಅನುಮತಿಸುವ ಉದ್ದೇಶದಿಂದ 2022ರ ಆದೇಶವನ್ನು ಹಿಂಪಡೆದು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಹೊಸ ನಿರ್ದೇಶನಗಳನ್ನು ನೀಡುವುದು ಅಗತ್ಯವೆಂದು ಸರ್ಕಾರವು ತೀರ್ಮಾನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • ಸಮವಸ್ತ್ರ ವಿಚಾರವಾಗಿ 2022ರ ಆದೇಶ ಹಿಂಪಡೆದು ಹೊಸ ಆದೇಶ.
  • ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳ ವಸ್ತ್ರಗಳಿಗೆ ಅವಕಾಶ ನೀಡಿ ಆದೇಶದಲ್ಲಿ ಉಲ್ಲೇಖ.
  • ಬಿಜೆಪಿ ಸರಕಾರ ಹೊರಡಿಸಿದ್ದ ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆದುಕೊಂಡ ಸಿದ್ದರಾಮಯ್ಯ ಸರ್ಕಾರ.

ವಿದ್ಯಾರ್ಥಿಗಳು ಜನಿವಾರ, ಶಿವದಾರ, ರುದ್ರಾಕ್ಷಿ, ಪೇಟ, ತಲೆ ವಸ್ತ್ರ ಅಥವಾ ಹಿಜಾಬ್ ಇತರೆ ಯಾವುದೇ ಸ್ವರೂಪದ ಸಾಂಪ್ರದಾಯಿಕ ಸಂಕೇತವನ್ನು ನಿಗದಿಪಡಿಸಲಾದ ಸಮವಸ್ತ್ರ ಜೊತೆಗೆ ಧರಿಸಬಹುದು. ಸಾಂಪ್ರದಾಯಿಕ ಮತ್ತು ಪದ್ಧತಿ ಆಧಾರಿತ ಸಂಕೇತ ಸಮವಸ್ತ್ರಕ್ಕೆ ಪೂರಕವಾಗಿರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೇಸರಿ ಶಾಲು ಬಗ್ಗೆ ಸ್ಪಷ್ಟತೆ ಇಲ್ಲ

2022ರಲ್ಲಿ ಉಡುಪಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಇಡೀ ದೇಶದಲ್ಲೇ ಹಿಜಾಬ್ ವಿಚಾರ ದೊಡ್ಡ ಸುದ್ದಿಯಾಗಿತ್ತು. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದಕ್ಕೆ ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು. ಹೀಗಾಗಿ ಇದು ಧರ್ಮದಂಗಲ್​ಗೆ ಕಾರಣವಾಗಿತ್ತು.  ಇದೀಗ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳ ವಸ್ತ್ರಗಳಿಗೆ ಅವಕಾಶ ಎಂದು ಹೊಸ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಆದ್ರೆ, ಸಿಂಧೂರ, ಕುಂಕುಮ, ವಿಭೂತಿ, ಕೇಸರಿ ಶಾಲು ಮುಂತಾದವುಗಳ ಧರಿಸುವಿಕೆ ಬಗ್ಗೆ ಈ ಹೊಸ ಆದೇಶದಲ್ಲಿ ಉಲ್ಲೇಖವಾಗಿಲ್ಲ. ಕೇಸರಿ ಶಾಲು ಧರಿಸಲು ಅವಕಾಶ ಇದೆಯೋ, ಇಲ್ಲವೋ ಎಂದು ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಮತ್ತೆ ಗೊಂದಲಗಳು ಶುರುವಾಗುವ ಸಾಧ್ಯತೆಗಳಿವೆ.

ಬಿಜೆಪಿ ಅವಧಿಯ ಆದೇಶ ಹಿಂಪಡೆದ ಸಿದ್ದರಾಮಯ್ಯ ಸರ್ಕಾರ

ಉಡುಪಿಯಲ್ಲಿ ಶುರುವಾದ ವಿದ್ಯಾರ್ಥಿಗಳ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ 2022ರಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಹೊರಡಿಸಿದ್ದ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವ ಕುರಿತ ಆದೇಶವನ್ನು ಇಂದು(ಮೇ 13) ಸಿದ್ದರಾಮಯ್ಯ ಸರಕಾರ ಹಿಂಪಡೆದಿದೆ. ಬಿಜೆಪಿ ಸರಕಾರ ಹೊರಡಿಸಿದ್ದ ಆದೇಶದ ಮೂಲಕ ಹಿಜಾಬ್‌ ಧರಿಸಲು ಅವಕಾಶ ನಿರಾಕರಿಸಲಾಗಿತ್ತು. ಇದೀಗ ಈ ಅದೇಶವನ್ನು ವಾಪಸ್‌ ಪಡೆಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:57 pm, Wed, 13 May 26

Source link

Tv9 Kannada News Live: ಕೇಸರಿ ಶಾಲ್‌ಗೆ ನಿರ್ಬಂಧ, ಹಿಜಾಬ್‌ಗೆ ಸರ್ಕಾರ ಗ್ರೀನ್ ಸಿಗ್ನಲ್! ಅಮೆರಿಕ, ಆಸ್ಟ್ರೇಲಿಯಾಕ್ಕೆ ರೊಟ್ಟಿ ರಫ್ತು – Kannada News | Karnataka News: Hijab Allowed, Temples Record Income, Kalaburagi Rotti Global

ಬೆಂಗಳೂರು, ಮೇ.13: 2022ರಲ್ಲಿ ರಾಜ್ಯದಾದ್ಯಂತ ದೊಡ್ಡ ಮಟ್ಟದ ಧರ್ಮದಂಗಲ್‌ಗೆ ಕಾರಣವಾಗಿದ್ದ ಹಿಜಾಬ್ ವಿಚಾರವಾಗಿ ಈಗ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2025-26ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಾಲಯಗಳು ದಾಖಲೆಯ ಆದಾಯ ಗಳಿಸಿವೆ. ಕುಕ್ಕೆ ಸುಬ್ರಹ್ಮಣ್ಯ 167.89 ಕೋಟಿ ರೂ. ಗಳಿಸಿ ಸತತ 15ನೇ ವರ್ಷವೂ ರಾಜ್ಯದ ಶ್ರೀಮಂತ ದೇವಾಲಯವಾಗಿ ಹೊರಹೊಮ್ಮಿದೆ. ಕಲಬುರಗಿ ರೊಟ್ಟಿ ಈಗ ಜಾಗತಿಕ ಮಟ್ಟಕ್ಕೆ ಕಾಲಿಟ್ಟಿದೆ. ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳು ಸಿದ್ಧಪಡಿಸಿದ ಈ ವಿಶಿಷ್ಟ ಆಹಾರ ಅಮೆರಿಕ, ಕೆನಡಾ, ಆಸ್ಟ್ರೇಲಿಯಾದ ಕನ್ನಡಿಗರನ್ನು ತಲುಪಲಿದೆ. ಇ-ಖಾತಾ, ನಂಬಿಕೆ ನಕ್ಷೆ ಸೇರಿ ಬೆಂಗಳೂರಿನ ಜನರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ.

ಕೇಸರಿ ಶಾಲ್‌ಗೆ ನೋ, ಹಿಜಾಬ್‌ಗೆ ಎಸ್ ಎಂದ ಸರ್ಕಾರ

2022ರಲ್ಲಿ ರಾಜ್ಯದಾದ್ಯಂತ ದೊಡ್ಡ ಮಟ್ಟದ ಧರ್ಮದಂಗಲ್‌ಗೆ ಕಾರಣವಾಗಿದ್ದ ಹಿಜಾಬ್ ವಿಚಾರವಾಗಿ ಈಗ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಸರ್ಕಾರ ಮತ್ತೆ ಅವಕಾಶ ನೀಡಿದ್ದು, ಕೇಸರಿ ಶಾಲ್ ಧರಿಸುವುದಕ್ಕೆ ನಿರ್ಬಂಧ ವಿಧಿಸಿದೆ. 2022ರಲ್ಲಿ ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರತಿಯಾಗಿ ಇತರ ವಿದ್ಯಾರ್ಥಿಗಳು ಕೇಸರಿ ಶಾಲ್ ಧರಿಸಿ ಕಾಲೇಜಿಗೆ ಬಂದಿದ್ದರು. ಇದು ಇಡೀ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದಲ್ಲದೆ, ಕಾನೂನು ಸಮರಕ್ಕೂ ಕಾರಣವಾಗಿತ್ತು. ಅಂದು ಈ ವಿಚಾರವು ರಾಜ್ಯದಲ್ಲಿ ದೊಡ್ಡ ಮಟ್ಟದ ಪರ-ವಿರೋಧ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿತ್ತು. ದೀರ್ಘಕಾಲದ ವಿವಾದದ ಬಳಿಕ ಈಗ ರಾಜ್ಯ ಸರ್ಕಾರ ಹಿಜಾಬ್ ವಿಚಾರದಲ್ಲಿ ತನ್ನ ನಿಲುವನ್ನು ಬದಲಿಸಿದ್ದು, ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡಿದೆ. ಆದರೆ, ಇದೇ ವೇಳೆ ಕೇಸರಿ ಶಾಲ್ ಧರಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಸರ್ಕಾರದ ಈ ನಿರ್ಧಾರವು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಹೇಳಿದಂತೆ ಗುಡ್​​ನ್ಯೂಸ್​​ ಕೊಟ್ಟ ಡಿಕೆಶಿ, ಕೇರಳದಲ್ಲಿ ಕಾಂಗ್ರೆಸ್​​ಗೆ ಕಸಿವಿಸಿ; ಈ ಹೊತ್ತಿನ ಟಾಪ್​​ 5 ಸುದ್ದಿಗಳು ಇಲ್ಲಿವೆ

ಕರ್ನಾಟಕದ ದೇವಸ್ಥಾನಗಳ ಆದಾಯದಲ್ಲಿ ನವ ದಾಖಲೆ

ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆದಾಯ ಗಳಿಕೆಯಲ್ಲಿ ಹೊಸ ಇತಿಹಾಸ ನಿರ್ಮಿಸಿವೆ. ಭಕ್ತರ ಸಂಖ್ಯೆಯಲ್ಲಿನ ಗಣನೀಯ ಏರಿಕೆ ಮತ್ತು ಕಾಣಿಕೆಗಳ ಮಹಾಪೂರವೇ ಈ ಸಾಧನೆಕ್ಕೆ ಕಾರಣವಾಗಿದೆ.

ಅಮೆರಿಕ, ಆಸ್ಟ್ರೇಲಿಯಾಕ್ಕೆ ರೊಟ್ಟಿ ರಫ್ತು

ಜಿಲ್ಲೆಯ ಸಾಂಪ್ರದಾಯಿಕ ಆಹಾರ ಮತ್ತು ವಿಶಿಷ್ಟ ಗುರುತಾಗಿರುವ ‘ಕಲಬುರಗಿ ರೊಟ್ಟಿ’ ಈಗ ಜಾಗತಿಕ ಮಾರುಕಟ್ಟೆಗೆ ಭರ್ಜರಿಯಾಗಿ ಲಗ್ಗೆ ಇಟ್ಟಿದೆ. ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳು ಸಿದ್ಧಪಡಿಸಿದ ರೊಟ್ಟಿಗಳ ಮೊದಲ ರಫ್ತು ಘಟಕಕ್ಕೆ ಚಾಲನೆ ನೀಡಲಾಗಿದ್ದು, ಇನ್ನು ಮುಂದೆ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರು ತಮ್ಮೂರಿನ ರೊಟ್ಟಿಯ ಸವಿಯನ್ನು ಸವಿಯಬಹುದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ವೃದ್ಧಿಸಲು ನೀವು ಮಾಡಬೇಕಾದದ್ದು ಇಷ್ಟೇ – Kannada News | Follow these tips to ensure peace and tranquility at home

ಮನೆಯ (home) ವಾತಾವರಣ ಕುಟುಂಬ ಸದಸ್ಯರ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ. ಮನೆಯ ವಾತಾವರಣ ನಕಾರಾತ್ಮಕವಾಗಿದ್ದರೆ, ದಾರಿದ್ರ್ಯ ಅಶಾಂತಿ ನೆಲೆಸಲು ಕಾರಣವಾಗುತ್ತದೆ. ಅದೇ ಮನೆಯ ವಾತಾವರಣ ಸಕಾರಾತ್ಮಕವಾಗಿದ್ದರೆ  ಕುಟುಂಬ ಸದಸ್ಯರ ಜೀವನದಲ್ಲಿ ಯಶಸ್ಸು, ಅದೃಷ್ಟ ಹೆಚ್ಚಾಗುತ್ತದೆ,  ಆರೋಗ್ಯ ಮತ್ತು ಸಂತೋಷ ಸಹ ಹೆಚ್ಚಾಗುತ್ತದೆ. ಆದರೆ ಹೆಚ್ಚಿನವರಿಗೆ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಲು ಏನು ಮಾಡಬೇಕು ಎಂಬುದು ಗೊತ್ತಿಲ್ಲ. ಹೀಗಿರುವಾಗ ಈ ಕೆಲವೊಂದು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಬಹುದು, ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುವಂತೆ ಮಾಡಬಹುದು.

ಮನೆಯಲ್ಲಿನ ಧನಾತ್ಮಕ ಶಕ್ತಿಯನ್ನು ವೃದ್ಧಿಸಲು ಏನು ಮಾಡಬೇಕು?

ಮನೆಯನ್ನು ಆದಷ್ಟು ಸ್ವಚ್ಛವಾಗಿರಿಸಿ: ಮನೆ ಅಚ್ಚುಕಟ್ಟಾಗಿದ್ದರೆ, ವಾತಾವರಣವೂ ಸಕಾರಾತ್ಮಕವಾಗಿರುತ್ತದೆ. ಅದೇ ಮನೆ ಅಸ್ತವ್ಯಸ್ತವಾಗಿದ್ದರೆ ಇದು  ಧನಾತ್ಮಕ ಶಕ್ತಿ ಹರಡುವುದನ್ನು ತಡೆಯುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮನೆ ಸ್ವಚ್ಛವಾಗಿದ್ದರೆ, ಮನೆ ಸದಸ್ಯರು ಖುಷಿ ಖುಷಿಯಾಗಿರುತ್ತಾರೆ.

ಮನೆಯಲ್ಲಿ ನೈಸರ್ಗಿಕ ಬೆಳಕು ಮತ್ತು ಗಾಳಿಯ ಹರಿವನ್ನು ಹೆಚ್ಚಿಸಿ: ಬೆಳಗಿನ ಸೂರ್ಯನ ಬೆಳಕು ಮನೆಯನ್ನು ಪ್ರವೇಶಿಸುವಂತೆ ನೋಡಿಕೊಳ್ಳಿ.  ತಾಜಾ ಗಾಳಿ ಮತ್ತು ನೈಸರ್ಗಿಕ ಬೆಳಕು ಸ್ವಯಂಚಾಲಿತವಾಗಿ ಮನೆಯ ಧನಾತ್ಮಕ  ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಮನೆಯ  ಪರಿಸರವನ್ನು ರಿಫ್ರೆಶ್ ಮಾಡುತ್ತದೆ.

ಸಾಧ್ಯವಾದಷ್ಟು ಸಸ್ಯಗಳನ್ನು ನೆಡಿ:
ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಅತ್ಯುತ್ತಮ ಮೂಲವೆಂದರೆ ಸಸ್ಯಗಳು. ಮನಿ ಪ್ಲಾಂಟ್, ಬಿದಿರು ಸೇರಿದಂತೆ ಒಂದಷ್ಟು ಇನ್‌ಡೋರ್‌ ಪ್ಲಾಂಟ್‌ಗಳನ್ನು ಮನೆಯ ಒಳಗೆ ಇರಿಸಿ. ಈ ಹಸಿರು ಸಸ್ಯಗಳು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಇವು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ.

ಮನೆಯಲ್ಲಿಯಲ್ಲಿ ಸುಗಂಧ ಮತ್ತು ಉತ್ತಮ ಧ್ವನಿ ಹಡುವಂತೆ ನೋಡಿಕೊಳ್ಳಿ:   ಧ್ವನಿ ಮತ್ತು ಸುಗಂಧ ಎರಡೂ ಧನಾತ್ಮಕ ಶಕ್ತಿಯನ್ನು ಸಕ್ರಿಯಗೊಳಿಸುತ್ತವೆ. ಗಾಳಿಯ ಗಂಟೆಗಳು, ಗಂಟೆಗಳು ಮತ್ತು ಸಕಾರಾತ್ಮಕ ಸಂಗೀತವು ಮನೆಯ ವಾತಾವರಣವನ್ನು ಶಾಂತ ಮತ್ತು ಶಕ್ತಿಯುತವಾಗಿಸುತ್ತದೆ. ಮತ್ತು ತಾಜಾ ಪರಿಮಳವು ನೆಮ್ಮದಿಯನ್ನು ನೀಡುತ್ತದೆ. ಇದಕ್ಕಾಗಿ ರೂಮ್‌ ಫ್ರೆಶ್ನರ್‌, ಪರಿಮಳಯುಕ್ತ ಕ್ಯಾಂಡಲ್‌ಗಳನ್ನು ಬಳಸಿ.

ಇದನ್ನೂ ಓದಿ: ಬೇಸಿಗೆಯಲ್ಲಿ ಹಾವುಗಳು ಪದೇ ಪದೇ ಮನೆ ಬಳಿ ಕಾಣಿಸಿಕೊಳ್ಳಲು ಮರ ಗಿಡಗಳೇ ಮುಖ್ಯ ಕಾರಣ

ಉತ್ತಮ ಬಣ್ಣವನ್ನು ಆರಿಸಿ: ನಿಮ್ಮ ಮನೆಯ ಗೋಡೆಗಳಿಗೆ ಬಿಳಿ, ಕ್ರೀಮ್‌, ಮತ್ತು ತಿಳಿ ನೀಲಿ ಬಣ್ಣದ ಪೈಂಟ್‌ ಬಳಿಯಿರಿ. ತಿಳಿ ಬಣ್ಣದ ಕರ್ಟನ್‌ಗಳನ್ನೇ ಆರಿಸಿ. ಈ ಬಣ್ಣಗಳು ಮನಸ್ಸನ್ನು ಶಾಂತಗೊಳಿಸುತ್ತದೆ.

ಹಾಳಾದ ವಸ್ತುಗಳನ್ನು ತೆಗೆದು ಹಾಕಿ: ಕೆಲವರು ಹಾಳಾದ ವಸ್ತುಗಳನ್ನು ಎಸೆಯದೆ ಮನೆಯಲ್ಲೇ ಇಟ್ಟುಬಿಡುತ್ತಾರೆ. ಇದು ನಕಾರಾತ್ಮಕತೆಯನ್ನು ಹರಡುತ್ತದೆ. ಹಾಗಾಗಿ ಹಾಳಾದ ವಸ್ತುಗಳನ್ನು, ಕಸಗಳನ್ನು ಮನೆಯಿಂದ ಹೊರಗೆ ಹಾಕಿ, ಮನೆಯನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಪ್ರಾಣಬಿಟ್ಟ ಯುವಕ: ಜಕ್ಕೂರಿನಲ್ಲಿ ಪೋಷಕರ ವಿರೋಧಕ್ಕೆ ಬಲಿಯಾದ ಪ್ರೇಮ ಕಥೆ – Kannada News | Amrutahalli: Parental Opposition to Love Marriage Leads to Youth Suicide

ಬೆಂಗಳೂರು, ಮೇ.13: ಪ್ರೀತಿಸಿದ ಯುವತಿಯನ್ನು ಮದುವೆ ಮಾಡಿಕೊಡಲು ಪೋಷಕರು ನಿರಾಕರಿಸಿದ ಕಾರಣಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ಮೃತ ಯುವಕನನ್ನು ರಾಮ್ ಕುಮಾರ್ (25) ಎಂದು ಗುರುತಿಸಲಾಗಿದೆ. ಜಕ್ಕೂರಿನ ಶ್ರೀರಾಂಪುರದಲ್ಲಿ ವಾಸವಿದ್ದ ರಾಮ್ ಕುಮಾರ್, ಅನ್ಯಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ, ಜಾತಿ ಬೇರೆ ಎಂಬ ಕಾರಣಕ್ಕೆ ಪೋಷಕರು ಇವರ ವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಖಾಸನೀಸ್ ಸಹೋದರರ ವಂಚನೆ ಪ್ರಕರಣಕ್ಕೆ ಮರುಜೀವ: ಹಣ ಕಳೆದುಕೊಂಡವರಿಂದ ಅರ್ಜಿ ಸ್ವೀಕಾರ

ಇದರಿಂದ ನೊಂದ ರಾಮ್ ಕುಮಾರ್, ಪೋಷಕರು ಕೆಲಸಕ್ಕೆ ಹೋದ ಸಮಯದಲ್ಲಿ ಮನೆಯ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೋಷಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: ಮತ್ತಷ್ಟು ಡಿವೈಎಸ್​ಪಿ-ಇನ್‌ಸ್ಪೆಕ್ಟರ್‌ಗಳ ದಿಢೀರ್‌ ವರ್ಗಾವಣೆ – Kannada News | Major surgery to Karnataka Police department: 12 DySP And 87 inspectors transferred

ಬೆಂಗಳೂರು, (ಮೇ 13): ಕರ್ನಾಟಕ ರಾಜ್ಯ ಪೊಲೀಸ್ (Karnataka Police) ಇಲಾಖೆಯಲ್ಲಿ ಡಿವೈಎಸ್ಪಿ ಹಾಗೂ ಇನ್ಸ್​​ಪೆಕ್ಟರ್​​​ಗಳ ವರ್ಗಾವಣೆ ಮುಂದುವರೆದಿದೆ . ಕಳೆದ ಎರಡು ದಿನಗಳಿಂದ ಅಷ್ಟೇ ರಾಜ್ಯ ಸರ್ಕಾರ ಬರೋಬ್ಬರಿ 293 ಇನ್ಸ್‌ಪೆಕ್ಟರ್‌ಗಳು ಹಾಗೂ 74 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ಇಂದು (ಮೇ 13) ಮತ್ತೆ 12 ಡಿವೈಎಸ್​ಪಿ, 87 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು (ಸಿವಿಲ್) ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರು (ಡಿಜಿ- ಐಜಿಪಿ) ಆದೇಶ ಹೊರಡಿಸಿದ್ದಾರೆ.

  • ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮುಂದುವರೆದ ಡಿವೈಎಸ್ಪಿ ಹಾಗೂ ಇನ್ಸ್​​ಪೆಕ್ಟರ್​​​ಗಳ ವರ್ಗಾವಣೆ.
  • 87 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ 12 ಡಿವೈಎಸ್‌ಪಿ ವರ್ಗಾವಣೆ.
  • ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರಿಂದ ಆದೇಶ.
  • ಎರಡು ದಿನದಿಂದ ಅಷ್ಟೇ 293 ಇನ್ಸ್‌ಪೆಕ್ಟರ್ ಹಾಗೂ 74 ಡಿವೈಎಸ್‌ಪಿಗಳನ್ನ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಮೂವರು ಹಿರಿಯ IPS, ನಾಲ್ವರು IAS ಅಧಿಕಾರಿಗಳ ವರ್ಗಾವಣೆ: ಯಾರು ಎಲ್ಲಿಗೆ? ಇಲ್ಲಿದೆ ವಿವರ

ಮೇ 10, 2026ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ (Police Establishment Board) ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದ್ದು, ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹಳೆಯ ಹುದ್ದೆಗಳಿಂದ ಬಿಡುಗಡೆಗೊಂಡು, ನಿಯೋಜಿತ ಹೊಸ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ವರ್ಗಾವಣೆಗೊಂಡ ಡಿವೈಎಸ್‌ಪಿಗಳ ಪಟ್ಟಿ

  • ಉಮಾಶಂಕರ್ ಬಿ: ಬಿ.ಎಂ.ಟಿ.ಎಫ್, ಬೆಂಗಳೂರು.
  • ಪ್ರಭಾವತಿ ಪಾಂಡುರಂಗ: ಸಿಐಡಿಯಿಂದ ಮಲ್ಲೇಶ್ವರಂ ಉಪ ವಿಭಾಗ, ಬೆಂಗಳೂರು ನಗರ.
  • ದೀಪಕ್ ಸಿ.ವಿ: ಸಿಸಿಬಿಯಿಂದ ಚಿಕ್ಕಪೇಟೆ ಉಪ ವಿಭಾಗಕ್ಕೆ ವರ್ಗ.
  • ರಮೇಶ್ ಜಿ.ಆರ್-ಡಿಸಿಆರ್​​ಇಗೆ ವರ್ಗಾವಣೆ
  • ಗೀತಾ ಸಿ.ಆರ್: ರಾಜ್ಯ ಗುಪ್ತವಾರ್ತೆಯಿಂದ ರಾಮನಗರದ ಸಿ.ಸಿ.ಪಿ.ಎಸ್
  • ಮೇರಿ ಶೈಲಜಾ: ಎ.ಎನ್.ಟಿ.ಎಫ್ ಯಿಂದ ಸಿಐಡಿಗೆ ವರ್ಗ
  • ಶಿವಶಂಕರ ರೆಡ್ಡಿ ಬಿ: ರಾಜ್ಯ ಗುಪ್ತವಾರ್ತೆಯಿಂದ ಸಿ.ಸಿ.ಪಿ.ಎಸ್, ಆಗ್ನೇಯ ವಿಭಾಗ, ಬೆಂಗಳೂರು ನಗರ
  • ಪವನ್ ಎನ್: ಬೆಂಗಳೂರು ಸಿ.ಸಿ.ಪಿ.ಎಸ್, ಆಗ್ನೇಯ ವಿಭಾಗದಿಂದ ಸಿಐಡಿಗೆ ವರ್ಗಾವಣೆ
  • ವಜೀರ್ ಅಲಿ ಖಾನ್: ಹಿಂದಿನ ವರ್ಗಾವಣೆ ರದ್ದುಪಡಿಸಿ ಕೆ.ಎಸ್.ಹೆಚ್.ಆರ್.ಸಿಯಲ್ಲೇ ಮುಂದುವರಿಕೆ
  • ಸುಧೀರ್ ಎಂ ಹೆಗಡೆ: ವರ್ಗಾವಣೆ ರದ್ದುಪಡಿಸಿ, ಪ್ರಸ್ತುತ ಹುದ್ದೆಯಲ್ಲೇ (ಸಿ.ಐ.ಡಿ) ಮುಂದುವರಿಕೆ
  • ಅಂಜುಮಾಲಾ ಶಿವಣ್ಣ ನಾಯಕ್: ಸಿಐಡಿಯಿಂದ ಬೆಂಗಳೂರು ನಗರ ಸಂಚಾರ ಕೇಂದ್ರ ಉಪ ವಿಭಾಗಕ್ಕೆ ವರ್ಗ.
  • ಶಶಿಕಲಾ ಎಸ್.ಪಿ: ಬೆಂಗಳೂರು ನಗರ ಸಂಚಾರ ಕೇಂದ್ರ ಉಪ ವಿಭಾಗದಿಂದ ಸಿಐಡಿಗೆ ವರ್ಗಾವಣೆ.

ಕರ್ನಾಟಕದ ಮತ್ತಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು – Kannada News | Minister Santosh Lad request Dhurandar director to make movie on Vyapam case

ನೀಟ್ (NEET) ಪರೀಕ್ಷೆ ರದ್ದಾದ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಸಚಿವ ಸಂತೋಷ್ ಲಾಡ್, ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಾ, ‘ಧುರಂಧರ್’ ಸಿನಿಮಾದ ನಿರ್ದೇಶಕ ಆದಿತ್ಯ ಧರ್​​ಗೆ ಸವಾಲೊಂದನ್ನು ಹಾಕಿದರು. ‘ನಿರ್ದೇಶಕ ಆದಿತ್ಯ ಧರ್ ಅವರು ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಮಾಡಿದ್ದಾರೆ. ನಾನು ಅವರಿಗೆ ಮನವಿ ಮಾಡುತ್ತಿದ್ದೇನೆ. ಅವರು ‘ವ್ಯಾಪಂ’ ಹಗರಣದ ಬಗ್ಗೆಯೂ ಸಿನಿಮಾ ಮಾಡಬೇಕು. ಅದೊಂದು ಕುತೂಹಲಕಾರಿ ಹಗರಣ’ ಎಂದು ಸಂತೋಷ್ ಲಾಡ್ ವ್ಯಂಗ್ಯ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

85 ಕೋಟಿ ರೂ. ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ – Kannada News | Karnataka Temple Revenue Boom: Kukke Subramanya and Kollur Mookambika Set New Income Records 2025 26

ಉಡುಪಿ, ಮೇ,13: ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು 2025-26ನೇ ಸಾಲಿನಲ್ಲಿ ದಾಖಲೆಯ ಆದಾಯ ಗಳಿಸಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದೇವಸ್ಥಾನದ ಆದಾಯದಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಒಟ್ಟು ವಾರ್ಷಿಕ ಆದಾಯ 85 ಕೋಟಿ ರೂಪಾಯಿ ತಲುಪಿದೆ.

ದೇವಸ್ಥಾನದ ಆದಾಯವು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಏರುಗತಿಯಲ್ಲಿದೆ. 2023-24ರಲ್ಲಿ 68 ಕೋಟಿ ರೂ., 2024-25ರಲ್ಲಿ 71 ಕೋಟಿ ರೂ. ಗಳಿಕೆ. 2025-26ರಲ್ಲಿ 85 ಕೋಟಿ ರೂ ದಾಟಿದೆ. ಇದೀಗ ಈ ಮೂಲಕ ಹೊಸ ದಾಖಲೆಯನ್ನು ಮಾಡಿದೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದರ್ಶನಕ್ಕೆ ತೆರಳುವ ಭಕ್ತರಿಗೆ ಸಿಹಿಸುದ್ದಿ: ದೇವಸ್ಥಾನದ ಹೊಸ ರೂಲ್ಸ್ ತಿಳಿದುಕೊಳ್ಳಿ

ಹೆಚ್ಚಳಕ್ಕೆ ಕಾರಣಗಳೇನು?

ಕರ್ನಾಟಕ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ‘ಕುಕ್ಕೆ ಸುಬ್ರಹ್ಮಣ್ಯ ದೇವಾಲಯ’ವು ಆದಾಯ ಗಳಿಕೆಯಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ದೇವಾಲಯವು ಬರೋಬ್ಬರಿ 167.89 ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಮೂಲಕ ಸತತ 15ನೇ ವರ್ಷವೂ ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯ ಎಂಬ ಖ್ಯಾತಿಗೆ ಭಾಜನವಾಗಿದೆ. ಭಕ್ತರು ಅರ್ಪಿಸುವ ಕಾಣಿಕೆ, ವಿಶೇಷ ಸೇವೆಗಳಾದ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಪೂಜೆ ಹಾಗೂ ದೇವಸ್ಥಾನದ ವಿವಿಧ ವಸತಿ ಗೃಹಗಳ ಬಾಡಿಗೆಯಿಂದ ಈ ಬೃಹತ್ ಮೊತ್ತದ ಆದಾಯ ಸಂಗ್ರಹವಾಗಿದೆ. ವರ್ಷದಿಂದ ವರ್ಷಕ್ಕೆ ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಈ ಆರ್ಥಿಕ ಪ್ರಗತಿಗೆ ಸಾಕ್ಷಿಯಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದಾಖಲೆಯ ಆದಾಯ

ಭಕ್ತರ ಸಂಖ್ಯೆಯಲ್ಲಿನ ಗಣನೀಯ ಏರಿಕೆ ಮತ್ತು ಕಾಣಿಕೆಗಳ ಹೆಚ್ಚಳವೇ ಈ ದಾಖಲೆಯ ಆದಾಯಕ್ಕೆ ಪ್ರಮುಖ ಕಾರಣ. ವಿಶೇಷವಾಗಿ ನವರಾತ್ರಿ ಉತ್ಸವ, ವಾರಾಂತ್ಯದ ರಜೆಗಳು ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ದೇಶದ ವಿವಿಧ ಮೂಲೆಗಳಿಂದ, ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗಳು ಮತ್ತು ಸೇವೆಗಳ ಸಂಖ್ಯೆಯೂ ಹೆಚ್ಚಾಗಿರುವುದು ಈ ಆರ್ಥಿಕ ಪ್ರಗತಿಗೆ ಸಾಕ್ಷಿಯಾಗಿದೆ.

ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಸಾಲಿಗಿಂತ ಈ ಬಾರಿ ಸುಮಾರು 13 ಕೋಟಿ ರೂ. ಅಧಿಕ ಆದಾಯ ಬಂದಿದೆ ಎಂದು ಖಚಿತಪಡಿಸಿದ್ದಾರೆ. ಈ ಆದಾಯವನ್ನು ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳು ಮತ್ತು ಭಕ್ತರ ಮೂಲಭೂತ ಸೌಕರ್ಯಗಳ ವಿಸ್ತರಣೆಗೆ ಬಳಸಿಕೊಳ್ಳುವ ನಿರೀಕ್ಷೆಯಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, ಭಯೋತ್ಪಾದಕರ ವಿರುದ್ಧ ಮಾಕ್‌ ಡ್ರಿಲ್‌ ಹೇಗಿತ್ತು ನೋಡಿ – Kannada News | Nsg commando mock drill In Vidhana Soudha, here Is video

ಬೆಂಗಳೂರು, (ಮೇ 13): ವಿಧಾನಸೌಧದ (Vidhana Soudh) ಆವರಣದಲ್ಲಿ ಎನ್ಎಸ್​ಜಿ ಕಮಾಂಡೋಗಳು ಮಾಕ್ ಡ್ರಿಲ್ ನಡೆಸಿವೆ. ಬಾಂಬ್ ಬ್ಲಾಸ್ಟ್ , ಭಯೋತ್ಪಾದಕರ ದಾಳಿ ಸಮಯದಲ್ಲಿ ಹೇಗೆ ರೆಸ್ಪಾನ್ಸ್ ಮಾಡಬೇಕು? ಉಗ್ರರ ವಿರುದ್ಧ ಹೇಗೆ ಕಾರ್ಯಾಚರಣೆ ಮಾಡಬೇಕೆಂದು ಎನ್ ಸಿ ಜಿ ಕಮಾಂಡೋಗಳು ಅಣುಕು ಪ್ರದರ್ಶನ ಮಾಡಿವೆ. ಎನ್ಎಸ್​ಜಿ ಕಮಾಂಡೋ ಮಾಕ್ ಡ್ರಿಲ್​​ ಮಾಡುವ ಮೈನವಿರೇಳಿಸುವ ವಿಡಿಯೋ ನೋಡಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.​​

Source link

Exit mobile version