ಆಮದು ಮಾಡಿಕೊಳ್ಳದೆ ಚಿನ್ನದ ಬೇಡಿಕೆ ಈಡೇರಿಸುವ ಉಪಾಯಗಳನ್ನು ಮುಂದಿಟ್ಟ ಆಭರಣ ಉದ್ಯಮಿಗಳು – Kannada News | Jewelers proposes 5 points to overcome gold crisis

ನವದೆಹಲಿ, ಮೇ 13: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ವಿದೇಶಿ ವಿನಿಮಯವನ್ನು ಉಳಿಸಲು ಚಿನ್ನದ ಆಮದನ್ನು ಕಡಿಮೆ ಮಾಡುವಂತೆ ಕರೆ ನೀಡಿದ್ದ ಬೆನ್ನಲ್ಲೇ, ಆಭರಣ ವರ್ತಕರು ಮತ್ತು ಅಕ್ಕಸಾಲಿಗರ ಒಕ್ಕೂಟವು (Jewelers and Gold Smith Association) ಸರ್ಕಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ. ಭಾರತದ ಸಂಸ್ಕೃತಿಯಲ್ಲಿ ಚಿನ್ನಕ್ಕೆ (Gold) ಇರುವ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಆಮದು ಕಡಿಮೆ ಮಾಡಿಯೂ ಆರ್ಥಿಕತೆಯನ್ನು ಹೇಗೆ ಸುಧಾರಿಸಬಹುದು ಎಂದು ಐದು ಮಾರ್ಗೋಪಾಯಗಳನ್ನು ಸರ್ಕಾರದ ಮುಂದಿಡಲಾಗಿದೆ. ಚಿನ್ನ ನಗದೀಕರಣ ಸ್ಕೀಮ್​ನಿಂದ ಹಿಡಿದು ಬುಲಿಯನ್ ಬ್ಯಾಂಕ್ ಸ್ಥಾಪನೆವರೆಗೆ ಸಲಹೆಗಳಿವೆ.

1. ಪ್ರತ್ಯೇಕ ‘ಬುಲಿಯನ್ ಬ್ಯಾಂಕ್’ ಸ್ಥಾಪನೆ

GIFT-IFSC ಅಥವಾ ಇಂಡಿಯಾ ಇಂಟರ್ನ್ಯಾಷನಲ್ ಬುಲಿಯನ್ ಎಕ್ಸ್ಚೇಂಜ್ ಚೌಕಟ್ಟಿನೊಳಗೆ ಒಂದು ವಿಶೇಷ ‘ಬುಲಿಯನ್ ಬ್ಯಾಂಕ್’ ಸ್ಥಾಪಿಸಬೇಕು. ಇದು ದೇಶದಾದ್ಯಂತ ಇರುವ ಚಿನ್ನವನ್ನು ಕ್ರೋಡೀಕರಿಸಲು, ಸಾಲ ನೀಡಲು ಮತ್ತು ಚಿನ್ನದ ಮಾರುಕಟ್ಟೆಯನ್ನು ಪ್ರಮಾಣೀಕರಿಸಲು ಕೇಂದ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಆವರ್ತನ ಠೇವಣಿ ಯೋಜನೆಯಲ್ಲಿ ತಿಂಗಳಿಗೆ 5,000 ರೂ ಹೂಡಿಕೆಯಿಂದ ಎಷ್ಟು ರಿಟರ್ನ್ಸ್?

2. ಚಿನ್ನದ ನಗದೀಕರಣ ಯೋಜನೆ (GMS) ಸುಧಾರಣೆ

ಭಾರತೀಯ ಕುಟುಂಬಗಳಲ್ಲಿ ಒಡವೆಗಳ ರೂಪದಲ್ಲಿ ಭಾರೀ ಪ್ರಮಾಣದಷ್ಟು ಚಿನ್ನ ಇದೆ. ಇದರಲ್ಲಿ ಬಹಳಷ್ಟು ಚಿನ್ನವು ಹಳೆಯದಾಗಿ ಬಳಕೆಯಾಗದೇ ನಿರುಪಯುಕ್ತವಾಗಿ ಬಿದ್ದಿವೆ. ಇವನ್ನು ಚಿನ್ನದ ಮಾರುಕಟ್ಟೆಯ ಹರಿವಿಗೆ ತರಲು 2015ರಲ್ಲಿ ಆರಂಭ ಮಾಡಲಾದ ಚಿನ್ನದ ನಗದೀಕರಣ ಯೋಜನೆಯು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಈ ಯೋಜನೆಯಲ್ಲಿನ ರಚನಾತ್ಮಕ ದೋಷಗಳನ್ನು ಸರಿಪಡಿಸಿ, ಜನರು ತಮ್ಮಲ್ಲಿರುವ ನಿಷ್ಕ್ರಿಯ ಚಿನ್ನವನ್ನು ಬ್ಯಾಂಕ್‌ಗಳಲ್ಲಿ ಇಡಲು ಪ್ರೋತ್ಸಾಹಿಸಬೇಕು. ಇದರಿಂದ ಹಳೆಯ ಚಿನ್ನವೇ ಮಾರುಕಟ್ಟೆಗೆ ಮರುಬಳಕೆಯಾಗಿ ಬರುತ್ತದೆ ಮತ್ತು ಹೊಸ ಚಿನ್ನದ ಆಮದು ವರ್ಷಕ್ಕೆ 200-300 ಟನ್‌ಗಳಷ್ಟು ಕಡಿಮೆಯಾಗುತ್ತದೆ.

3. ಚಿನ್ನದ ಇಟಿಎಫ್‌ಗಳಿಂದ (Gold ETFs) ಚಿನ್ನದ ಸಾಲ

ಚಿನ್ನದ ಇಟಿಎಫ್‌ಗಳು ತಮ್ಮ ಬಳಿ ಇರುವ ಭೌತಿಕ ಚಿನ್ನದ 20-30 ಪ್ರತಿಶತದಷ್ಟನ್ನು ನಿಯಂತ್ರಿತ ಬುಲಿಯನ್ ಬ್ಯಾಂಕ್ ಚೌಕಟ್ಟಿನ ಮೂಲಕ ಸಾಲವಾಗಿ ನೀಡಲು ಅನುಮತಿಸಬೇಕು. ಇದರಿಂದ ಮಾರುಕಟ್ಟೆಯಲ್ಲಿ ಚಿನ್ನದ ಲಭ್ಯತೆ ಹೆಚ್ಚುತ್ತದೆ.

4. ಡಿಜಿಟಲ್ ಬುಲಿಯನ್ ಡೆಪಾಸಿಟ್ ಸರ್ಟಿಫಿಕೇಟ್

ಚಿನ್ನವನ್ನು ಭೌತಿಕವಾಗಿ ಹೊಂದುವ ಬದಲು ‘ಡಿಮೆಟಿರಿಯಲೈಸ್ಡ್ ಬುಲಿಯನ್ ಡೆಪಾಸಿಟ್ ಸರ್ಟಿಫಿಕೇಟ್’ಗಳನ್ನು ನೀಡಬೇಕು. ಇವುಗಳನ್ನು ಬ್ಯಾಂಕ್ ಸಾಲಗಳಿಗೆ ಅಡಮಾನವಾಗಿ (Collateral) ಬಳಸಲು ಅನುಮತಿ ನೀಡಿದರೆ, ಜನರು ಭೌತಿಕ ಚಿನ್ನ ಖರೀದಿಸುವುದು ಕಡಿಮೆಯಾಗುತ್ತದೆ.

5. ತೆರಿಗೆ ಸರಳೀಕರಣ ಮತ್ತು ರಾಷ್ಟ್ರೀಯ ಡ್ಯಾಶ್‌ಬೋರ್ಡ್

ವ್ಯವಸ್ಥೆಯೊಳಗೆ ನಡೆಯುವ ಚಿನ್ನದ ವರ್ಗಾವಣೆಗಳಿಗೆ ಜಿಎಸ್‌ಟಿ (GST) ಮತ್ತು ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಅಲ್ಲದೆ, ದೇಶದಲ್ಲಿ ಎಷ್ಟು ಚಿನ್ನ ಕ್ರೋಡೀಕರಣವಾಗುತ್ತಿದೆ ಮತ್ತು ಆಮದು ಎಷ್ಟು ಕಡಿಮೆಯಾಗುತ್ತಿದೆ ಎಂಬುದನ್ನು ಪತ್ತೆಹಚ್ಚಲು ‘ರಾಷ್ಟ್ರೀಯ ಡ್ಯಾಶ್‌ಬೋರ್ಡ್’ ನಿರ್ಮಿಸಬೇಕು.

ಇದನ್ನೂ ಓದಿ: ಏಪ್ರಿಲ್​ನಲ್ಲಿ ರೀಟೇಲ್ ಹಣದುಬ್ಬರ ಶೇ. 3.48ಕ್ಕೆ ಏರಿಕೆ; ಮಾರ್ಚ್​ಗಿಂತ ತುಸು ಹೆಚ್ಚಳ

ಯಾಕಾಗಿ ಈ ಕ್ರಮಗಳು?

ಭಾರತವು ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾಗಿದೆ. ಅಂದರೆ ಅತಿಹೆಚ್ಚು ಚಿನ್ನ ಬಳಸುವ ಮತ್ತು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಸಾಲಿನಲ್ಲಿ ಚೀನಾ ಬಿಟ್ಟರೆ ಭಾರತವೇ ಅಗ್ರಪಂಕ್ತಿಯಲ್ಲಿರುವುದು. 2025-26ರಲ್ಲಿ ಭಾರತದ ಚಿನ್ನದ ಆಮದು ವೆಚ್ಚವು ದಾಖಲೆಯ 71.98 ಶತಕೋಟಿ ಡಾಲರ್‌ಗಳಿಗೆ ತಲುಪಿದೆ. ಚಿನ್ನದ ಬೆಲೆ ಗಗನಕ್ಕೇರುತ್ತಿರುವುದರಿಂದ (10 ಗ್ರಾಂಗೆ ಸುಮಾರು 1.5 ಲಕ್ಷ ರೂ.) ವಿದೇಶಿ ವಿನಿಮಯದ ಮೇಲೆ ಭಾರಿ ಒತ್ತಡ ಬೀರುತ್ತಿದೆ. ಆಭರಣ ವರ್ತಕರ ಈ ಸಲಹೆಗಳನ್ನು ಜಾರಿಗೆ ತಂದರೆ, ವಿದೇಶಕ್ಕೆ ಹರಿದು ಹೋಗುವ ಹಣವನ್ನು ದೇಶದೊಳಗೆ ಉಳಿಸಿಕೊಳ್ಳಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಖಾಸನೀಸ್ ಸಹೋದರರ ವಂಚನೆ ಪ್ರಕರಣಕ್ಕೆ ಮರುಜೀವ: ಹಣ ಕಳೆದುಕೊಂಡವರಿಂದ ಅರ್ಜಿ ಸ್ವೀಕಾರ – Kannada News | Dharwad Multi Crore Fraud: Khaskanis Case Gives Hope to 8,000 Victims

ಧಾರವಾಡ, ಮೇ.13: ಹತ್ತು ವರ್ಷಗಳ ಹಿಂದೆ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕಲಘಟಗಿಯ ಖಾಸನೀಸ್ ಸಹೋದರರ ‘ಹರ್ಷ ಎಂಟರ್ಟೈನ್‌ಮೆಂಟ್’ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ವಂಚನೆಗೆ ಒಳಗಾದ ಹೂಡಿಕೆದಾರರಿಂದ ಜಿಲ್ಲಾಡಳಿತವು ಕ್ಲೇಮ್ ಅರ್ಜಿಗಳನ್ನು ಪಡೆಯುತ್ತಿರುವುದು ಸಂತ್ರಸ್ತರಲ್ಲಿ ಅಲ್ಪ ಆಸೆ ಚಿಗುರಿಸಿದೆ.

2016-17ರಲ್ಲಿ ಕಲಘಟಗಿಯ ಸತ್ಯಬೋಧ, ಸಂಜೀವ್ ಮತ್ತು ಶ್ರೀಕಾಂತ್ ಖಾಸನೀಸ್ ಎಂಬ ಸಹೋದರರು ‘ಹರ್ಷ ಎಂಟರ್ಟೈನ್‌ಮೆಂಟ್’ ಕಂಪನಿ ಸ್ಥಾಪಿಸಿ, ಶೇ. 7ರಷ್ಟು ಬಡ್ಡಿ ನೀಡುವ ಆಸೆ ತೋರಿಸಿ ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿದ್ದರು. ಷೇರು ಮಾರುಕಟ್ಟೆ ಮತ್ತು ಸಿನೆಮಾ ನಿರ್ಮಾಣದಲ್ಲಿ ಈ ಹಣ ಹೂಡಿ ನಷ್ಟ ಅನುಭವಿಸಿದಾಗ, ಸುಮಾರು 8,000 ಜನರು ತಮ್ಮ ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

ವಂಚನೆಗೆ ಒಳಗಾದವರಿಂದ ಜಿಲ್ಲಾಡಳಿತವು ಏಪ್ರಿಲ್ 27 ರಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಮೇ 26ರ ವರೆಗೆ ಅವಕಾಶ ನೀಡಲಾಗಿದೆ. ಧಾರವಾಡ, ಕಲಘಟಗಿ, ಹುಬ್ಬಳ್ಳಿ ಮತ್ತು ಬೆಳಗಾವಿ ಜಿಲ್ಲೆಯ ಸಾವಿರಾರು ಜನರು ಸರತಿಯಲ್ಲಿ ನಿಂತು ಅರ್ಜಿ ಸಲ್ಲಿಸುತ್ತಿದ್ದಾರೆ.ಈಗಾಗಲೇ ಸಿಐಡಿ ತನಿಖೆಯ ವೇಳೆ ಜಪ್ತಿಯಾಗಿದ್ದ ಕೆಲವು ವಾಹನಗಳನ್ನು (ಬುಲೆಟ್, ಓಮಿನಿ ಮತ್ತು ಇನ್ನೋವಾ) ಹರಾಜು ಮಾಡಲಾಗಿದ್ದು, ಸುಮಾರು 9.30 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಇದನ್ನೂ ಓದಿ: 85 ಕೋಟಿ ರೂ. ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಜಪ್ತಿಯಾಗಿರುವ ಮನೆ, ಜಮೀನು ಸೇರಿದಂತೆ ಇತರ ಸ್ಥಿರ ಆಸ್ತಿಗಳ ಹರಾಜು ಪ್ರಕ್ರಿಯೆಗೆ ಕೋರ್ಟ್ ಅನುಮತಿಗಾಗಿ ಕಾಯಲಾಗುತ್ತಿದೆ. ದಶಕದ ಹಿಂದೆ ಹಣ ಕಳೆದುಕೊಂಡು ಕಂಗಾಲಾಗಿದ್ದ ವೃದ್ಧರು ಮತ್ತು ಅವರ ಕುಟುಂಬಸ್ಥರು, ಬಿಸಿಲು-ಮಳೆ ಎನ್ನದೇ ಅರ್ಜಿ ಸಲ್ಲಿಸುತ್ತಿದ್ದು, “ಕಳೆದುಕೊಂಡ ಹಣದಲ್ಲಿ ಅಲ್ಪ ಪ್ರಮಾಣವಾದರೂ ಮರಳಿ ಸಿಗಬಹುದು” ಎಂಬ ಆಶಾವಾದ ಹೊಂದಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs KKR IPL 2026 Live Score: ಮಳೆಯಿಂದಾಗಿ ಟಾಸ್ ವಿಳಂಬ – Kannada News | Royal Challengers Bengaluru vs Kolkata Knight Riders IPL 2026 Live Cricket Score RCB vs KKR Match on 13th May latest news in Kannada

ಐಪಿಎಲ್ 2026 ರ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿವೆ. ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಅದರಲ್ಲೂ ಆರ್​ಸಿಬಿಗೆ ಹೋಲಿಸಿದರೆ, ಕೆಕೆಆರ್​ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರಷ್ಟೇ ಕೆಕೆಆರ್​ಗೆ ಪ್ಲೇಆಫ್ ಕನಸು ಜೀವಂತ, ಇಲ್ಲದಿದ್ದರೆ ಅದು ಕೂಡ ಲೀಗ್ ಹಂತದಲ್ಲೇ ಹೊರಬೀಳಲಿದೆ. ಹೀಗಾಗಿ ರಹಾನೆ ಪಡೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

Source link

10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್; ವಿಮಾನ ನಿಲ್ದಾಣದಲ್ಲಿ ಯುಎಸ್ ಅಧ್ಯಕ್ಷರಿಗೆ ಭರ್ಜರಿ ಸ್ವಾಗತ – Kannada News | US President Trump arrives to China FIRST Presidential visit in 10 years

ಬೀಜಿಂಗ್, ಮೇ 13: ಇರಾನ್ ಸಂಘರ್ಷ (Iran War) ಹೆಚ್ಚುತ್ತಿರುವ ಮಧ್ಯೆ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸಂಬಂಧಗಳನ್ನು ಸ್ಥಿರಗೊಳಿಸಲು ಉನ್ನತ ವ್ಯಾಪಾರ ನಾಯಕರ ನಿಯೋಗವನ್ನು ಹೊತ್ತುಕೊಂಡು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಉನ್ನತ ಮಟ್ಟದ ಸಭೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಬೀಜಿಂಗ್‌ಗೆ ಆಗಮಿಸಿದರು. ಈ ವೇಳೆ ಟ್ರಂಪ್​ಗೆ ಚೀನಿಯರಿಂದ ಅದ್ಭುತ ಸ್ವಾಗತ ದೊರಕಿದೆ. 300 ಚೀನೀ ವಿದ್ಯಾರ್ಥಿಗಳು ಅಮೇರಿಕನ್ ಮತ್ತು ಚೀನೀ ಧ್ವಜಗಳನ್ನು ಬೀಸುತ್ತಾ ಸ್ವಾಗತ ನೀಡಿದರು. ಡೊನಾಲ್ಡ್ ಟ್ರಂಪ್ ಕೊನೆಯ ಬಾರಿಗೆ 10 ವರ್ಷದ ಹಿಂದೆ ಚೀನಾಕ್ಕೆ ಭೇಟಿ ನೀಡಿದ್ದರು. ಹೀಗಾಗಿ, ಈ ಭೇಟಿ ಬಹಳ ಮಹತ್ವ ಪಡೆದುಕೊಂಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಬದಲಿ ಆಟಗಾರನಾಗಿ ಸಿಎಸ್​​ಕೆ ತಂಡ ಸೇರಿದ ಕರ್ನಾಟಕದ ಕ್ರಿಕೆಟಿಗ

Source link

ಹಂಟಾವೈರಸ್ ಈಗ ಕಂಡುಬಂದಿದ್ದಲ್ಲ; ಆರೋಗ್ಯ ತಜ್ಞರು ನೀಡಿರುವ ಮಾಹಿತಿಯಲ್ಲಿದೆ ಆತಂಕಕಾರಿ ಅಂಶ – Kannada News | Preventing Hantavirus: Safe Cleanup and Rodent Control Guidelines

ಇತ್ತೀಚಿನ ದಿನಗಳಲ್ಲಿ ಹಂಟಾವೈರಸ್ (Hantavirus) ಮತ್ತೆ ಸುದ್ದಿಯಲ್ಲಿದೆ. ವಿಶೇಷವಾಗಿ ಕ್ರೂಸ್ ಶಿಪ್‌ನಲ್ಲಿ ಈ ವೈರಸ್‌ ಸೋಂಕು ಕಾಣಿಸಿಕೊಂಡ ನಂತರ ಹಲವು ದೇಶಗಳಲ್ಲಿ ಆತಂಕ ಹೆಚ್ಚಾಗಿದೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಹಂಟಾವೈರಸ್ ಹೊಸ ವೈರಸ್ ಅಲ್ಲ. ಇದಕ್ಕೂ ಮೊದಲು ಕೂಡ ಅನೇಕ ದೇಶಗಳಲ್ಲಿ ಇದರ ಪ್ರಕರಣಗಳು ದಾಖಲಾಗಿವೆ. ಹೌದು, ಅಮೆರಿಕದ ಸಿಡಿಸಿ (CDC) ವರದಿ ಪ್ರಕಾರ, 1993ರಿಂದ 2023ರ ಅಂತ್ಯದವರೆಗೆ ಅಮೆರಿಕದಲ್ಲಿ ಸುಮಾರು 890 ಲ್ಯಾಬ್‌ ನಲ್ಲಿ ದೃಢಪಟ್ಟ ಹಂಟಾವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ತಜ್ಞರ ಪ್ರಕಾರ, ಈ ವೈರಸ್ ಅಪಾಯಕಾರಿ ಸ್ವರೂಪ ಹೊಂದಿದ್ದು, ಸೋಂಕಿತರಲ್ಲಿ ಗಂಭೀರ ಶ್ವಾಸಕೋಶ ಸಮಸ್ಯೆ ಉಂಟುಮಾಡುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಈ ವೈರಸ್‌ನಿಂದ ಸೋಂಕಿತರಾದವರಲ್ಲಿ ಸುಮಾರು 35 ಶೇಕಡಾ ಮಂದಿ ಸಾವನ್ನಪ್ಪಿದ್ದರು. ಇದೇ ಕಾರಣಕ್ಕೆ ಆರೋಗ್ಯ ಸಂಸ್ಥೆಗಳು ಈ ವೈರಸ್‌ನ್ನು ಗಂಭೀರವಾಗಿ ಪರಿಗಣಿಸುತ್ತಿವೆ.

ಹಂಟಾವೈರಸ್ ಎಂದರೇನು?

ಹಂಟಾವೈರಸ್ ಮುಖ್ಯವಾಗಿ ಇಲಿಗಳಿಂದ ಕಂಡುಬರುವ ವೈರಸ್ ಆಗಿದೆ. ಇವುಗಳ ಮೂತ್ರ, ಮಲ ಅಥವಾ ಲಾಲಾರಸದ ಸಂಪರ್ಕದಿಂದ ವೈರಸ್ ಹರಡಬಹುದು. ಸೋಂಕಿತ ಸ್ಥಳಗಳಲ್ಲಿ ಉಂಟಾಗುವ ಧೂಳಿನ ಕಣಗಳ ಮೂಲಕವೂ ವೈರಸ್ ಗಾಳಿಯಲ್ಲಿ ಹರಡುವ ಸಾಧ್ಯತೆ ಇದೆ. ತಜ್ಞರ ಪ್ರಕಾರ, ಸಾಮಾನ್ಯ ಹಂಟಾವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವುದಿಲ್ಲ. ಆದರೆ “ಆಂಡೀಸ್ ಸ್ಟ್ರೇನ್” ಎನ್ನುವ ಒಂದು ವಿಶೇಷ ರೂಪದಲ್ಲಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇರುವುದರಿಂದ ಜಾಗತಿಕ ಆರೋಗ್ಯ ಸಂಸ್ಥೆಗಳು ಹೆಚ್ಚಿನ ನಿಗಾವಹಿಸುತ್ತಿವೆ.

ಯಾವ ಲಕ್ಷಣಗಳು ಕಾಣಿಸಬಹುದು?

  • ಜ್ವರ ಮತ್ತು ನಡುಕ
  • ತೀವ್ರ ತಲೆನೋವು
  • ದೇಹ ಮತ್ತು ಸ್ನಾಯು ನೋವು
  • ದೌರ್ಬಲ್ಯ ಮತ್ತು ದಣಿವು
  • ಉಸಿರಾಟದ ತೊಂದರೆ

ಇದನ್ನೂ ಓದಿ: ಹಂಟಾವೈರಸ್ ವೈರಸ್ ಅಪಾಯ: ಭಾರತದಲ್ಲಿ ರೋಗ ಹರಡುವುದನ್ನು ತಡೆಯಲು 165 ಲ್ಯಾಬ್‌ಗಳು ಸಜ್ಜು

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತೆ?

ಆರೋಗ್ಯ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ, ಪುರುಷರಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಕಂಡುಬಂದಿತ್ತು. ಈಗಾಗಲೇ ಮಧುಮೇಹ, ಹೃದಯ ಸಮಸ್ಯೆ ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಇರುವವರಲ್ಲಿ ಸೋಂಕು ಗಂಭೀರವಾಗುವ ಸಾಧ್ಯತೆ ಹೆಚ್ಚಿದೆ.

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

  • ಮನೆಯಲ್ಲಿ ಇಲಿಗಳ ಸಂಖ್ಯೆ ಹೆಚ್ಚದಂತೆ ನೋಡಿಕೊಳ್ಳಿ
  • ಇಲಿ ಮಲ-ಮೂತ್ರವನ್ನು ಸ್ವಚ್ಛಗೊಳಿಸುವಾಗ ಮಾಸ್ಕ್ ಮತ್ತು ಗ್ಲೌಸ್ ಧರಿಸಿ
  • ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ
  • ಹಾರ ಪದಾರ್ಥಗಳನ್ನು ಮುಚ್ಚಿಟ್ಟುಕೊಳ್ಳಿ
  • ಮುಚ್ಚಿದ ಕೊಠಡಿಗಳನ್ನು ಸ್ವಚ್ಛಗೊಳಿಸುವಾಗ ಎಚ್ಚರಿಕೆ ವಹಿಸಿ

ಆರೋಗ್ಯ ತಜ್ಞರ ಪ್ರಕಾರ, ಹಂಟಾವೈರಸ್ ಬಗ್ಗೆ ಆತಂಕಕ್ಕಿಂತ ಜಾಗ್ರತೆ ಮುಖ್ಯ. ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೋಷಕರು ತಮ್ಮ ಮಕ್ಕಳ ಮುಂದೆ ಈ ವಿಷಯಗಳನ್ನು ಎಂದಿಗೂ ಚರ್ಚಿಸಬಾರದು – Kannada News | Parenting Tips: Parents should never discuss these topics in front of their children

ಮಕ್ಕಳ ಪಾಲನೆ ಎಂದರೆ ಮಕ್ಕಳನ್ನು (children) ಬೆಳೆಸುವ ಪ್ರಕ್ರಿಯೆ ಮಾತ್ರವಲ್ಲ, ಅದು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಕಲೆಯೂ ಹೌದು. ಚಿಕ್ಕ ಮಕ್ಕಳ ಮನಸ್ಸು ಬಹಳ ಮೃದು ಹಾಗಾಗಿ  ಮಕ್ಕಳು ತಮ್ಮ ಸುತ್ತಮುತ್ತಲಿನ ಹಾಗುಹೋಗುಗಳ ಮೂಲಕ ಮತ್ತು ವಿಶೇಷವಾಗಿ ಪೋಷಕರ ನಡುವಿನ ಸಂವಹನ, ನಡವಳಿಕೆಯ ಮೂಲಕ ಜಗತ್ತನ್ನು ಅರ್ಥೈಸಿಕೊಳ್ಳುತ್ತಾರೆ. ಇದು ಅವರ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹಾಗಾಗಿ ಪೋಷಕರು ಯಾವಾಗಲೂ ಮಕ್ಕಳ ಮುಂದೆ ಸಕಾರಾತ್ಮ ರೀತಿಯಲ್ಲಿ ವರ್ತಿಸಬೇಕು. ಪೋಷಕರು ತಮ್ಮ ಮಕ್ಕಳೊಂದಿಗೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಅವರಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕತೆಯನ್ನು ತುಂಬಲು ತಮ್ಮ ಮಾತನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅದರಲ್ಲೂ  ಕೆಲವೊಂದು ವಿಚಾರಗಳ ಬಗ್ಗೆ ಮಕ್ಕಳ ಮುಂದೆ ಮಾತನಾಡಲೇಬಾರದಂತೆ. ಆ ಮಾತುಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪೋಷಕರು ಮಕ್ಕಳ ಮುಂದೆ ಈ ವಿಚಾರಗಳ ಬಗ್ಗೆ ಮಾತನಾಡಬಾರದು:

ಸಂಗಾತಿ ಅಥವಾ ಕುಟುಂಬದಲ್ಲಿನ ಹಿರಿಯರ ಬಗ್ಗೆ ನಕಾರಾತ್ಮಕ ಮಾತು:

ನಿಮ್ಮ ಮಕ್ಕಳ ಮುಂದೆ ವೈವಾಹಿಕ ಜೀವನದ ನ್ಯೂನತೆಗಳು, ಸಂಗಾತಿಯ ಬಗ್ಗೆ ಕೆಟ್ಟ ಮಾತುಗಳನ್ನು ಮಕ್ಕಳ ಮುಂದೆ ಚರ್ಚಿಸಬಾರದು. ಹೀಗೆ ಪೋಷಕರು ಕೆಟ್ಟದಾಗಿ ಮಾತನಾಡಿದಾಗ, ಮಗುವಿನ ಮನಸ್ಸಿನಲ್ಲಿ ಭಯ ಮತ್ತು ಗೊಂದಲ ಉಂಟಾಗುತ್ತದೆ. ಇನ್ನೂ ಹಿರಿಯರ ಬಗ್ಗೆ ಮಕ್ಕಳ ಮುಂದೆ ನಕಾರಾತ್ಮಕ ಮಾತುಗಳನ್ನಾಡಿದಾಗ, ಮಕ್ಕಳು ಸಹ ಇದನ್ನೇ ಕಲಿಯುತ್ತಾರೆ. ಈ ಅಭ್ಯಾಸವು ಮಕ್ಕಳನ್ನು ಭಾವನಾತ್ಮಕವಾಗಿ ಪೋಷಕರಿಂದ ದೂರವಿಡಬಹುದು ಮತ್ತು ಭವಿಷ್ಯದಲ್ಲಿ ಅವರ ಸ್ವಂತ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಸಂಬಂಧಿಕರು ಮತ್ತು ಸ್ನೇಹಿತರ ಬಗ್ಗೆ ಚಾಡಿ ಹೇಳುವುದು:  ನಾವು ನಮ್ಮ ಮಕ್ಕಳ ಮುಂದೆ, ಫೋನ್‌ನಲ್ಲಿ ಅಥವಾ ಅವರ ಮುಂದೆ ಕುಳಿತಿರುವಾಗ  ಸಂಬಂಧಿಕರು ಅಥವಾ ಸ್ನೇಹಿತರ ಬಗ್ಗೆ ನಕಾರಾತ್ಮಕ ಮಾತುಗಳನ್ನಾಡಿದಾಗ, ತಮ್ಮ ಪೋಷಕರು ಜನರ ಮುಂದೆ ಚೆನ್ನಾಗಿ ವರ್ತಿಸುವುದನ್ನು ಮತ್ತು ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುವುದನ್ನು ನೋಡಿದಾಗ,  ಮಕ್ಕಳು ಸಹ  ಇದನ್ನೇ ಕಲಿಯುತ್ತಾರೆ. ಅಲ್ಲದೆ ನಂಬಿಕೆಯನ್ನು ನಾಶ ಪಡಿಸುತ್ತದೆ. ಮುಖ್ಯವಾಗಿ ಇದರಿಂದಾಗಿ ಮಕ್ಕಳು ಸಂಬಂಧಗಳ ಮೇಲೆ ನಂಬಿಕೆ ಇಡುವುದನ್ನೇ ಬಿಡು ಬಿಡುತ್ತಾರೆ.

ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸಬೇಡಿ:  ಮಕ್ಕಳ ಮುಂದೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಎಂದಿಗೂ ಚರ್ಚಿಸಬೇಡಿ, ಮಕ್ಕಳ ಮುಂದೆ ಆರ್ಥಿಕ ಸಮಸ್ಯೆಗಳನ್ನು ಚರ್ಚಿಸುವುದರಿಂದ ಇದು ಋಣಾತ್ಮಕ ಪರಿಣಾಮಬೀರುತ್ತದೆ. ಮತ್ತು ಇದು  ಅವರನ್ನು ಆರ್ಥಿಕವಾಗಿ ಅಸುರಕ್ಷಿತರನ್ನಾಗಿ ಮಾಡಬಹುದು. ಅಲ್ಲದೆ ಇದು ಅವರ ಮಾನಸಿಕ ಬೆಳವಣಿಗೆಗೂ ಅಡ್ಡಿಯಾಗುತ್ತದೆ.

ಇದನ್ನೂ ಓದಿ: ಐದು ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗದಂತಿರುತ್ತದೆ ಎಂದಿದ್ದಾರೆ ಚಾಣಕ್ಯ

ಮಕ್ಕಳ ನ್ಯೂನತೆಗಳನ್ನು ಇತರರ ಮುಂದೆ ಟೀಕಿಸುವುದು: ಅನೇಕ ಪೋಷಕರು ತಮ್ಮ ಮಕ್ಕಳು ಕಲಿಯುವುದಿಲ್ಲ, ಶೈಕ್ಷಣಿಕೇತರ ಚಟುವಟಿಕೆಯಲ್ಲೂ ಉತ್ತಮ ಪ್ರದರ್ಶನ ನೀಡುವುದಿಲ್ಲ ಎಂದು ಇತರರ ಮುಂದೆ ತಮ್ಮ ಮಕ್ಕಳ ಬಗ್ಗೆ ಹೇಳಿಕೊಳ್ಳುತ್ತಾರೆ. ಇದು ಮಕ್ಕಳ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡುತ್ತವೆ.  ಮತ್ತು ಇದು ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು.

ಭವಿಷ್ಯದ ಬಗ್ಗೆ ಭಯವನ್ನು ಹುಟ್ಟಿಸುವುದು: ಜಗತ್ತು ತುಂಬಾ ಕೆಟ್ಟದಾಗಿದೆ,  ಯಾರನ್ನೂ ನಂಬಬೇಡಿ ಹೀಗೆ ಸಮಾಜ ಹಾಗೂ ಭವಿಷ್ಯದ ಬಗ್ಗೆ ನಕಾರಾತ್ಮಕ ಮಾತುಗಳನ್ನಾಡುವುದನ್ನು ತಪ್ಪಿಸಿ. ಏಕೆಂದರೆ ಇದರಿಂದ  ಮಕ್ಕಳು ಪ್ರಪಂಚದ ಬಗ್ಗೆ ನಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಾರೆ. ಮತ್ತು ಭವಿಷ್ಯದಲ್ಲಿ ಅವರು ಹೊಸ ಅವಕಾಶಗಳನ್ನು ಪಡೆಯಲು ಹೆದರುತ್ತಾರೆ ಮತ್ತು ಜನರನ್ನು ಅನುಮಾನದಿಂದ ನೋಡಲು ಪ್ರಾರಂಭಿಸುತ್ತಾರೆ. ಅದೇ ಪೋಷಕರಾದ  ನಾವು ಮಕ್ಕಳಲ್ಲಿ ಭಯವನ್ನು ಬಿತ್ತಿದರೆ, ಅವರು ಎಂದಿಗೂ ಸ್ವತಂತ್ರ ಮತ್ತು ಸಂತೋಷದ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾದಪ್ಪನ ಭಕ್ತರೇ ಗಮನಿಸಿ: ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಸಂಬಂಧ ಮಹತ್ವದ ಆದೇಶ – Kannada News | Male Mahadeshwara Hills: Forest Dept Restricts Foot Pilgrimage Due to Wild Animal Attacks

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಸಂಬಂಧ ಮಹತ್ವದ ಆದೇಶ

ಚಾಮರಾಜನಗರ, ಮೇ 13: ಕಾಡುಪ್ರಾಣಿಗಳ ಸತತ ದಾಳಿಯಿಂದ ಭಕ್ತರ ಪ್ರಾಣಕ್ಕೆ ಕುತ್ತುಂಟಾಗುತ್ತಿರುವ ಹಿನ್ನೆಲೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪಾದಯಾತ್ರೆ ಸಂಬಂಧ ಮಹತ್ವದ ಆದೇಶವನ್ನು ಅರಣ್ಯ ಇಲಾಖೆ ಹೊರಡಿಸಿದೆ. ಜಾತ್ರೆ ಸಂದರ್ಭ ಹೊರತುಪಡಿಸಿ ಉಳಿದ ಸಾಮಾನ್ಯ ದಿನಗಳಲ್ಲಿ ಪಾದಯಾತ್ರೆಗೆ ಬ್ರೇಕ್​​ ಹಾಕಲಾಗಿದ್ದು, ಬಸ್​​ಗಳಲ್ಲಿಯೇ ಭಕ್ತರು ತೆರಳಬೇಕೆಂದು ಸೂಚಿಸಲಾಗಿದೆ. ಆ ಮೂಲಕ ಮಾನವ – ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ.

ಮುಖ್ಯಾಂಶಗಳು

  • ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರ ಸುರಕ್ಷತೆಗೆ ಕಠಿಣ ಕ್ರಮ
  • ಪಾದಯಾತ್ರೆ ಸಂಬಂಧ ಅರಣ್ಯ ಇಲಾಖೆಯಿಂದ ಮಹತ್ವದ ಆದೇಶ
  • ಜಾತ್ರೆ ಹೊರತುಪಡಿಸಿ ಉಳಿದ ದಿನಗಳಲ್ಲಿ ಪಾದಯಾತ್ರೆಗೆ ಬ್ರೇಕ್

ಮಹದೇಶ್ವರ ಬೆಟ್ಟಕ್ಕೆ ಇತ್ತೀಚೆಗೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಪ್ರತಿನಿತ್ಯ ಭಕ್ತ ಸಾಗರವೇ ಹರಿದು ಬರುತ್ತಿದೆ. ಬೇಡಿದ ವರವನ್ನ ಮಾದಪ್ಪ ನೀಡುತ್ತಾನೆಂಬ ನಂಬಿಕೆಯಿಂದ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿದೆ‌. ಇನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ತಲೆತಲಾಂತರದಿಂದಲ್ಲೂ ಕಾಲ್ನಡಿಗೆಯಲ್ಲಿ ಭಕ್ತರು ಬಂದು ಸೇವೆ ಮಾಡೋದು ಪದ್ದತಿ. ಈವರೆಗೂ ಅದು ನಡೆದುಕೊಂಡು ಬಂದಿದೆ. ಯುಗಾದಿ, ಶಿವರಾತ್ರಿ ಹಾಗೂ ದೀಪಾವಳಿ ಜಾತ್ರೆಯ ವೇಳೆ ಊರಿಗೆ ಊರೇ ತಮ್ಮ ಗ್ರಾಮಗಳಿಂದ ಪಾದಯಾತ್ರೆ ಮೂಲಕ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜಾತ್ರೆ ವೇಳೆ ನಡೆಯುತ್ತಿದ್ದ ಈ ಪಾದಯಾತ್ರೆ ಇದೀಗ ವರ್ಷವಿಡಿ ಸಾಗುತ್ತಾ ಬಂದಿದೆ.

ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ನರಭಕ್ಷಕನ ಅಟ್ಟಹಾಸ; ನಾಗಮಲೆ ಹಾದಿಯಲ್ಲಿ ಬಾಲಕನನ್ನೇ ಕೊಂದು ತಿಂದ ಚಿರತೆ!

ಈ ನಡುವೆ ಕೌದಳ್ಳಿದಿಂದ ಮಲೆ ಮಹದೇಶ್ವರ ಬೆಟ್ಟದವರೆಗಿನ ಪ್ರದೇಶದಲ್ಲಿ ಕಾಡುಪ್ರಾಣಿಗಳ ಸಂಚಾರವೂ ಹೆಚ್ಚಿದ್ದು, ಪಾದಯಾತ್ರಿಗಳ ಮೇಲೆ ಚಿರತೆ ಮತ್ತು ಆನೆಗಳಂತಹ ಪ್ರಾಣಿಗಳಿಂದ ದಾಳಿ ಮೇಲಿಂದ ಮೇಲೆ ನಡೆಯುತ್ತಿವೆ. ಮೂರು ತಿಂಗಳ ಅವಧಿಯಲ್ಲಿ ಮೂವರ ಮೇಲೆ ನರಭಕ್ಷಕ ಚಿರತೆ ದಾಳಿ ಮಾಡಿದ್ದು, ಆ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇದರ ಜೊತೆ ಆನೆಗಳು ಕೂಡ ಪಾದಯಾತ್ರಿಗಳನ್ನು ಭೀತಿಗೊಳಿಸುವ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಾದಪ್ಪನ ಭಕ್ತರನ್ನ ಕಾಪಾಡಲು ಅರಣ್ಯ ಇಲಾಖೆ ಎಷ್ಟೇ ಹರಸಾಹಸ ಪಟ್ಟರೂ ಮಾನವ ಹಾಗೂ ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಕಷ್ಟ ಸಾಧ್ಯ ಎಂಬಂತಾಗಿ. ಆ ಕಾರಣಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯಾಧಿಕಾರಿಗಳ ಸಭೆ ನಡೆಸಿ, ಕೆಲ ಸೂಚನೆಗಳನ್ನು ನೀಡಿದ್ದಾರೆ. ಇನ್ನು ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೈಗೆ 14 ಕಿ.ಮೀ. ಕಾಡು ದಾರಿಯಲ್ಲಿ ‌ಸಾಗಬೇಕು . ಆ ಪೈಕಿ ಇದೀಗ 3 ಕಿ.ಮೀ.ಗೆ ಮಾತ್ರ ಭಕ್ತರ ಪಾದಯಾತ್ರೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಮಾರ್ಗದಲ್ಲೂ ಸಹ ಭಕ್ತರು ಗೈಡ್​​ ಜೊತೆ ಅಗತ್ಯ ಮುಂಜಾಗೃತೆ ಸಹಿತ ತೆರಳಬೇಕು ಎಂದು ಆದೇಶಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:28 pm, Wed, 13 May 26

Source link

ಪೋಸ್ಟ್ ಆಫೀಸ್ ಆವರ್ತನ ಠೇವಣಿ ಯೋಜನೆಯಲ್ಲಿ ತಿಂಗಳಿಗೆ 5,000 ರೂ ಹೂಡಿಕೆಯಿಂದ ಎಷ್ಟು ರಿಟರ್ನ್ಸ್? – Kannada News | Post Office National Savings Recurring Deposit Account, investment, interest and other scheme details

ಅಂಚೆ ಕಚೇರಿಯಲ್ಲಿ ಲಭ್ಯ ಇರುವ ಕೆಲ ಸಣ್ಣ ಉಳಿತಾಯ ಯೋಜನೆಗಳಲ್ಲಿ ರಿಕರಿಂಗ್ ಡೆಪಾಸಿಟ್ ಸ್ಕೀಮ್ (Post Office National Savings Recurring Deposit Account) ಒಂದು. ಇದು ಬ್ಯಾಂಕುಗಳಲ್ಲಿರುವ ಆರ್​ಡಿ ಪ್ಲಾನ್​ಗಳಂತೆ. ಮಾಸಿಕವಾಗಿ ನಿರ್ದಿಷ್ಟ ಹಣವನ್ನು ಡೆಪಾಸಿಟ್ ಆಗಿ ಇಡಲು ಅವಕಾಶ ಕೊಡುವ ಯೋಜನೆ ಇದು. ಬ್ಯಾಂಕ್​ಗಳ ರೆಕರಿಂಗ್ ಡೆಪಾಸಿಟ್​ಗಳಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪೋಸ್ಟ್ ಆಫೀಸ್ ಆರ್​ಡಿಯಲ್ಲಿ ಗಳಿಸಬಹುದು.

ಪೋಸ್ಟ್ ಆಫೀಸ್ ಆರ್​ಡಿ ಯೋಜನೆಯ ವಿವರ

  • ಅರ್ಹತೆ: ಹತ್ತು ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ವ್ಯಕ್ತಿ ಈ ಸ್ಕೀಮ್ ಪಡೆಯಬಹುದು. ಅಪ್ರಾಪ್ತರಾಗಿದ್ದರೆ ಅವರ ಪರವಾಗಿ ಪಾಲಕರು ಅಕೌಂಟ್ ತೆರೆಯಬಹುದು. 18 ವರ್ಷ ವಯಸ್ಸು ಪೂರ್ಣಗೊಂಡ ಬಳಿಕ ಮತ್ತೊಮ್ಮೆ ಕೆವೈಸಿ ಮಾಡಿಸಬೇಕಾಗುತ್ತದೆ.

ಇದನ್ನೂ ಓದಿ: ಏಪ್ರಿಲ್​ನಲ್ಲಿ ರೀಟೇಲ್ ಹಣದುಬ್ಬರ ಶೇ. 3.48ಕ್ಕೆ ಏರಿಕೆ; ಮಾರ್ಚ್​ಗಿಂತ ತುಸು ಹೆಚ್ಚಳ

  • ಹೂಡಿಕೆ: ಕನಿಷ್ಠ ಮಾಸಿಕ ಹೂಡಿಕೆ 100 ರೂ ಮಾತ್ರ. ಗರಿಷ್ಠ ಎಷ್ಟು ಬೇಕಾದರೂ ಆಗಬಹುದು.
  • ಸ್ಕೀಮ್ ಅವಧಿ: ಐದು ವರ್ಷದವರೆಗೆ ಸ್ಕೀಮ್ ಇರುತ್ತದೆ. ಮೂರು ವರ್ಷ ಹೂಡಿಕೆ ಬಳಿಕ ಅಗತ್ಯಬಿದ್ದರೆ ಪ್ರೀಮೆಚ್ಯೂರ್ ಆಗಿ ಸ್ಕೀಮ್​ನಿಂದ ನಿರ್ಗಮಿಸಬಹುದು. ಐದು ವರ್ಷದ ಬಳಿಕ ಮತ್ತೂ ಐದು ವರ್ಷ ಹೂಡಿಕೆ ಮುಂದುವರಿಸಲೂ ಅವಕಾಶ ಇರುತ್ತದೆ.
  • ಬಡ್ಡಿ ದರ: ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್​ಗೆ ವಾರ್ಷಿಕ ಶೇ. 6.7 ಬಡ್ಡಿ ಸಿಗುತ್ತದೆ.

ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ ಎಷ್ಟು ಲಾಭ?

ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಪ್ಲಾನ್​ನಲ್ಲಿ ನೀವು 100 ರೂ ಮೇಲ್ಪಟ್ಟು ಎಷ್ಟು ಬೇಕಾದರೂ ಮಾಸಿಕವಾಗಿ ಹೂಡಿಕೆ ಮಾಡಬಹುದು. ಒಂದು ವೇಳೆ, ತಿಂಗಳಿಗೆ 5,000 ರೂನಂತೆ ಹೂಡಿಕೆ ಮಾಡಿದರೆ 5 ವರ್ಷದಲ್ಲಿ ಎಷ್ಟು ಸಿಗುತ್ತದೆ.

ಇದನ್ನೂ ಓದಿ: ಈವರೆಗೆ ಇದ್ದದ್ದು ಕಷ್ಟ ಅಲ್ಲ, ಮುಂದೆ ಕಾದೈತಾ ದೊಡ್ಡ ಸಂಕಷ್ಟ? ಉದಯ್ ಕೋಟಕ್ ಕೊಟ್ಟಿದ್ದಾರೆ ದೊಡ್ಡ ಎಚ್ಚರಿಕೆ

ಲೆಕ್ಕಾಚಾರದ ಪ್ರಕಾರ 5 ವರ್ಷದಲ್ಲಿ, ಅಂದರೆ 60 ತಿಂಗಳಲ್ಲಿ ನೀವು ಮಾಡುವ ಹೂಡಿಕೆ 3 ಲಕ್ಷ ರೂ ಆಗಿರುತ್ತದೆ. ಇದಕ್ಕೆ ಐದು ವರ್ಷದಲ್ಲಿ ಸಂಗ್ರಹವಾಗುವ ಬಡ್ಡಿ 57,299 ರೂ ಆಗಿರುತ್ತದೆ. ಅಂತಿಮವಾಗಿ ನಿಮಗೆ ಕೈಸೇರುವ ಮೊತ್ತ 3.57 ಲಕ್ಷ ರೂ ಆಗಿರುತ್ತದೆ.

ಯಾರಿಗೆ ಉಪಯುಕ್ತ ಈ ಪೋಸ್ಟ್ ಆಫೀಸ್ ಆರ್​ಡಿ ಪ್ಲಾನ್?

ಕಿರು ಅವಧಿಗೆ ಹಣ ಕೂಡಿಡಲು ಈ ಸ್ಕೀಮ್ ಬಹಳ ಉಪಯುಕ್ತ. ರಿಸ್ಕ್ ಇಲ್ಲದ ಹೂಡಿಕೆಯಾದ್ದರಿಂದ ಎಮರ್ಜೆನ್ಸಿ ಫಂಡ್, ಮಕ್ಕಳ ಫೀಸು ಇತ್ಯಾದಿಗೆ ಹಣ ಸೇರಿಸಲು ಅನುಕೂಲವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕುಟುಂಬ, ಸ್ನೇಹಿತರ ಆಕ್ರಂದನದ ನಡುವೆ ಮಣ್ಣು ಸೇರಿದ ದಿಲೀಪ್ ರಾಜ್ – Kannada News | Dileep Raj’s Final rituals done at Ramanagar

ಕನ್ನಡ ಚಿತ್ರರಂಗ (Sandalwood) ಮತ್ತು ಟಿವಿ ಲೋಕದ ಪ್ರತಿಭಾವಂತ ನಟ ದಿಲೀಪ್ ರಾಜ್ ಇಂದು (ಮೇ 13) ನಿಧನ ಹೊಂದಿದ್ದು, ಅವರ ಅಂತ್ಯಕ್ರಿಯೆಗಳು ಸಂಜೆ ವೇಳೆಗೆ ರಾಮನಗರದ ಬಳಿ ಇರುವ ಅವರ ಫಾರಂ ಹೌಸ್​​ನಲ್ಲಿ ನೆರವೇರಿದರು. ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳ ಸಮ್ಮುಖದಲ್ಲಿ ಲಿಂಗಾಯತ ಸಂಪ್ರದಾಯದ ಪ್ರಕಾರ ಕ್ರಿಯೆಗಳನ್ನು ನೆರವೇರಿಸಿ, ಅವರನ್ನು ಅವರ ನೆಚ್ಚಿನ ಸ್ಥಳದಲ್ಲಿ ಸಮಾಧಿ ಮಾಡಲಾಯ್ತು. ದಿಲೀಪ್ ಅವರನ್ನು ಮಣ್ಣಿಗೆ ಕಳಿಸುವ ವೇಳೆ ಅವರ ಪತ್ನಿ ಶ್ರೀವಿದ್ಯಾ ಆಕ್ರಂದನ ಮುಗಿಲು ಮುಟ್ಟಿತ್ತು.

ಹಲವು ಸಿನಿಮಾಗಳು, ನಾಟಕ, ಧಾರಾವಾಹಿಗಳಲ್ಲಿ ನಟಿಸಿದ್ದ ದಿಲೀಪ್ ರಾಜ್ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಇನ್ನೂ 47 ವರ್ಷ ವಯಸ್ಸು. ಪತ್ನಿ ಶ್ರೀವಿದ್ಯಾ ಅವರೊಟ್ಟಿಗೆ ಪ್ರೀತಿಸಿ ಮದುವೆಯಾಗಿದ್ದ ದಿಲೀಪ್, ಇಬ್ಬರು ಬಲು ಅನ್ಯೋನ್ಯದಿಂದ ದಾಂಪತ್ಯ ನಡೆಸುತ್ತಿದ್ದರು. ಆದರೆ ಇದೀಗ ವಿಧಿ ಆಟಕ್ಕೆ ಅವರ ಕುಟುಂಬ ಶೋಕದಲ್ಲಿ ಮುಳುಗಿದೆ.

ದಿಲೀಪ್ ಅವರಿಗೆ ಶ್ರದ್ಧಾಂಜಲಿ ಸಲಿಸಲು ಕಿರುತೆರೆ ಮತ್ತು ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಆಗಮಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ಶುಭಾ ಪೂಂಜಾ, ಖ್ಯಾತ ನಿರ್ದೇಶಕ ಎನ್ ನಾರಾಯಣ್, ಚೇತನ್, ಅನುಶ್ರೀ, ಥ್ರಿಲ್ಲರ್ ಮಂಜು, ದೊಡ್ಡಣ್ಣ, ಕಿರುತೆರೆಯ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಕಣ್ಣೀರು ಹಾಕುತ್ತಲೇ ದಿಲೀಪ್​​ಗೆ ಅಂತಿಮ ನಮನಗಳನ್ನು ಸಲ್ಲಿಸಿದರು. ಈ ವೇಳೆ ಬಹುತೇಕರು ಹೇಳಿದ್ದು, ‘ದಿಲೀಪ್ ಒಳ್ಳೆಯ ವ್ಯಕ್ತಿ, ಯಾವುದೇ ದುರಭ್ಯಾಸ ಇರಲಿಲ್ಲ, ಆರೋಗ್ಯದ ಬಗ್ಗೆ ಕಾಳಜಿ ಇದ್ದ ವ್ಯಕ್ತಿ. ಅತ್ಯಂತ ಪ್ರತಿಭಾವಂತ, ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಅವರಿಗೆ ಸಿಗಲಿಲ್ಲ’ ಎಂದೇ.

ಇದನ್ನೂ ಓದಿ: ಮಾದರಿ ದಂಪತಿಯಾಗಿದ್ದ ದಿಲೀಪ್-ಶ್ರೀವಿದ್ಯಾ; ಕಾಂಬಿನೇಷನ್​​ನಲ್ಲಿ ಬಂದಿತ್ತು ಹಿಟ್ ಸೀರಿಯಲ್

ದಿಲೀಪ್ ಅವರು ರಾಮನಗರದ ಬಳಿ ಫಾರಂ ಹೌಸ್​ ಒಂದನ್ನು ಖರೀದಿ ಮಾಡಿದ್ದರು. ಆ ಫಾರಂ ಹೌಸ್ ದಿಲೀಪ್ ಅವರ ನೆಚ್ಚಿನ ಜಾಗವಾಗಿತ್ತು. ಇದೀಗ ಅದೇ ಫಾರಂ ಹೌಸ್ ಬಳಿ ದಿಲೀಪ್ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ದಿಲೀಪ್ ಅವರ ಅಣ್ಣ ಹೇಳಿದಂತೆ ಲಿಂಗಾಯತ ಸಂಪ್ರದಾಯದ ಅನುಸಾರ ಅವರ ಅಂತ್ರಕ್ರಿಯೆ ನಡೆಸಲಾಯ್ತು. ಅಂತ್ಯಕ್ರಿಯೆ ವೇಳೆ ಅರುಣ್ ಸಾಗರ್ ಇನ್ನೂ ಹಲವಾರು ಗೆಳೆಯರು ಇದ್ದು, ಗೆಳೆಯನ ಕಳುಹಿಸಿಕೊಟ್ಟರು. ದಿಲೀಪ್ ಅವರನ್ನು ಮಣ್ಣಿಗೆ ಕಳಿಸುವ ವೇಳೆ ಅವರ ಕುಟುಂಬಸ್ಥರ ಅಳು ಕಲ್ಲು ಹೃದಯದವರನ್ನು ಕರಗಿಸುವಂತಿತ್ತು. ಸಾಕಷ್ಟು ಗೆಳೆಯರನ್ನು, ಆಪ್ತರನ್ನು ಸಂಪಾದಿಸಿದ್ದ ಪ್ರತಿಭಾವಂತ ನಟ ದಿಲೀಪ್ ಅವರು ಮಣ್ಣಲ್ಲಿ ಮಣ್ಣಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version