ಮತ್ತೆ ಕರ್ನಾಟಕ ಸಾರಿಗೆ ನೌಕರರ ಮುಷ್ಕರ, ಬಸ್‌‍ ಓಡಾಟ ಇರುತ್ತಾ? ಇಲ್ವಾ? – Kannada News | Karnataka Transport employees union calls strike On May 10 for 25 Percent Salary Hike

ಬೆಂಗಳೂರು, (ಮೇ 13): ಕರ್ನಾಟಕ ಸರ್ಕಾರವು ಕೆಎಸ್‌ಆರ್‌ಟಿಸಿ (KSRTC) ಸೇರಿದಂತೆ 4 ಸಾರಿಗೆ ನಿಗಮಗಳ 1.05 ಲಕ್ಷ ನೌಕರರ ವೇತನವನ್ನು ಶೇ.12.5 ರಷ್ಟು ಹೆಚ್ಚಿಸಿ ಆದೇಶಿಸಿದೆ. ಆದ್ರೆ, ಇದಕ್ಕೆ ಸಾರಿಗೆ ಸಿಬ್ಬಂದಿ (transport employees) ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶೇಕಡಾ 25ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಡಲಾಗಿತ್ತು. ಆದ್ರೆ, ರಾಜ್ಯ ಸರ್ಕಾರ ಅರ್ಧ ಅಂದರೆ ಶೇ.12.5 ರಷ್ಟು ವೇತನ ಹೆಚ್ಚಳ ಮಾಡಿದೆ. ಇದರಿಂದ ಸಾರಿಗೆ ಸಿಬ್ಬಂದಿ ಗರಂ ಆಗಿದ್ದಾರೆ. ಈ ಬಗ್ಗೆ ಬೆಂಗಳೂರಿನ ಶೇಷಾದ್ರಿಪುರಂನ ಎಐಟಿಯುಸಿ ಕಚೇರಿಯಲ್ಲಿಂದು ಸಭೆ ಮಾಡಿದ್ದು, ಕೇವಲ ಶೇ.12.5 ರಷ್ಟು ವೇತನ ಹೆಚ್ಚಳವನ್ನು ತಿರಸ್ಕರಿಸಲಾಗಿದೆ. ಅಲ್ಲದೇ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಇದೇ ಮೇ 20ರಂದು ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.

  • ಕೇವಲ 12.5% ವೇತನ ಹೆಚ್ಚಿಸಿದ್ದಕ್ಕೆ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಗರಂ
  • ಶೇಕಡಾ 25ರಷ್ಟು ವೇತನ ಹೆಚ್ಚಳಕ್ಕೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಒತ್ತಾಯ
  • ಇದೇ ಮೇ 20ರಂದು ಮತ್ತೆ ಮುಷ್ಕರಕ್ಕೆ ಕರೆ ನೀಡಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ನೌಕರರ ಮುಖಂಡ ವಿಜಯ್ ಭಾಸ್ಕರ್, ಕೇವಲ ಶೇ.12.50ರಷ್ಟು ವೇತನ ಹೆಚ್ಚಿಸಿ ಆದೇಶ ಮಾಡಿದ್ದಾರೆ. ಸರ್ಕಾರ ನಮ್ಮ ಜೊತೆ ಚರ್ಚಿಸದೆ ಏಕಾಏಕಿ ಆದೇಶ ಹೊರಡಿಸಿದೆ. ಶೇಕಡಾ 25ರಷ್ಟು ವೇತನ ಹೆಚ್ಚಳಕ್ಕೆ ನಮ್ಮ ಡಿಮ್ಯಾಂಡ್ ಇದೆ. ಕಳೆದ ಬಾರಿ ಶೇಕಡಾ 15ರಷ್ಟು ವೇತನ ಹೆಚ್ಚಳ ಮಾಡಿದ್ದರು. ಇದೀಗ ಕಳೆದ ಬಾರಿಗಿಂತ ಕಡಿಮೆ ವೇತನ ಹೆಚ್ಚಳ ಮಾಡಿದ್ದಾರೆ. ಹಾಗಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮೇ 20ರಂದು ಮುಷ್ಕರಕ್ಕೆ ಕರೆ ನೀಡಿದ್ದು, ಅಂದು ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ. ಸಾರ್ವಜನಿಕರು ನಮಗೆ ಸಹಕಾರ ಕೊಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ: ಕೊನೆಗೂ ವೇತನ ಹೆಚ್ಚಳ

ಈ ಬಾರಿ ಯಾವುದಕ್ಕೂ ಹೆದರಲ್ಲ

ಈಗಾಗಲೇ ಎರಡು ಸಮಾವೇಶ ಮಾಡಿದ್ದೇವೆ. ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಸಾರಿಗೆ ನೌಕರರಲ್ಲಿ ಒಮ್ಮತ ಇದ್ದು, ನಿನ್ನೆ ಆದೇಶದ ಬಳಿಕ ಆಕ್ರೋಶ ಹೆಚ್ಚಾಗಿದೆ. 2024 ರಿಂದ ಸಂಬಳ ವಿಚಾರವಾಗಿ ಯಾವುದೇ ರಾಜೀ‌ ಇಲ್ಲ. ಸರ್ಕಾರ ನಮ್ಮ ಜೊತೆ ಚರ್ಚೆ ಬಿಟ್ಟು ಏಕಾಏಕಿ ಆದೇಶ ಹೊರಡಿಸಿದ್ದಾರೆ. ಮುಷ್ಕರ ನಿಲ್ಲಿಸಲ್ಲ ಮಾಡೇ ಮಾಡುತ್ತೇವೆ. ಎಸ್ಮಾ ಜಾರಿ ಮಾಡಿದರೂ ಈ ಬಾರಿ ಕೇರ್​ ಮಾಡುವುದಿಲ್ಲ. ಅಲ್ಲದೇ ಹೈಕೋರ್ಟ್​ಗೆ PIL ಬಂದರೂ ಆದೇಶ ಪಾಲಿಸಲು ಆಗಲ್ಲ. ನಮ್ಮನ್ನು ಸಸ್ಪೆಂಡ್ ಮಾಡಿದ್ರೂ ಒಪ್ಪಲ್ಲ. ಸರ್ಕಾರಿ ಬಸ್ ಬದಲಿಗೆ ಖಾಸಗಿ ಬಸ್‌ ಓಡಿಸಿದ್ರೆ ಯಶಸ್ವಿ ಆಗಲ್ಲ. ಸರ್ಕಾರಿ ಬಸ್​ ಮೇಲೆ ರಾಜ್ಯದ ಪ್ರಯಾಣಿಕರು ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದರು.

ಶೇ.12.50ರಷ್ಟು ವೇತನ ಹೆಚ್ಚಳ ಒಪ್ಪುವುದಿಲ್ಲ

ಇನ್ನು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ದೇವರಾಜ್ ಅರಸು ಮಾತನಾಡಿ, ಕೇವಲ ಶೇಕಡಾ 12.50ರಷ್ಟು ವೇತನ ಹೆಚ್ಚಳವನ್ನು ಒಪ್ಪುವುದಿಲ್ಲ. 2024ರ ಜ.1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಬೇಕು. 38 ತಿಂಗಳ ವೇತನ ಹಿಂಬಾಕಿ ಸಹ ನೀಡಬೇಕು. ಆದ್ರೆ 26 ತಿಂಗಳ ವೇತನ ಹಿಂಬಾಕಿ ನೀಡಲು ಆದೇಶ ಹೊರಡಿಸಿದ್ದರು. ಏಕಪಕ್ಷೀಯವಾಗಿ ರಾಜ್ಯ ಸರ್ಕಾರ ವೇತನವನ್ನು ಹೆಚ್ಚಳ ಮಾಡಿದೆ. 2025ರ ಏ.1ರಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ ಒಪ್ಪಲ್ಲ. ಮೇ 20ರಂದು ಸಾರಿಗೆ ಮುಷ್ಕರ ನಡೆಯಲಿದೆ. ಈಗಾಗಲೇ ಸಾರಿಗೆ ಮುಷ್ಕರಕ್ಕೆ ನೋಟಿಸ್ ನೀಡಿದ್ದೇವೆ. 4 ಸಾರಿಗೆ ನಿಗಮದ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ – Kannada News | Massive Fire breaks out at factory in Kanjhawala industrial area watch video

ನವದೆಹಲಿ, ಮೇ 13: ದೆಹಲಿಯ ಹೊರವಲಯದ ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಇಂದು ಮಧ್ಯಾಹ್ನ ಭಾರಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ಅಗ್ನಿಶಾಮಕ ಕಾರ್ಯಾಚರಣೆಗಾಗಿ 28 ಅಗ್ನಿಶಾಮಕ ವಾಹನಗಳು ಮತ್ತು ಮಿನಿ ರೋಬೋಟ್ ಅನ್ನು ನಿಯೋಜಿಸಲಾಗಿದೆ. ಅಧಿಕಾರಿಗಳ ಪ್ರಕಾರ ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್ – Kannada News | S Narayan talks about Dileep Raj after his death due to heart attack

ಧಾರಾವಾಹಿ ಮತ್ತು ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟ ದಿಲೀಪ್ ರಾಜ್ (Dileep Raj) ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯ ಸುದ್ದಿ ತಿಳಿದಾಗ ನಿರ್ದೇಶಕ ಎಸ್. ನಾರಾಯಣ್ ಅವರು ನಂಬಲೇ ಇಲ್ಲ. ಆ ಬಗ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದಿಲೀಪ್ ರಾಜ್ ಅವರ ಅಂತಿಮ ದರ್ಶನ ಪಡೆದ ಬಳಿಕ ಎಸ್. ನಾರಾಯಣ್ ಅವರು ಮಾತನಾಡಿದರು. ‘ಇಂದು ನನಗೆ ಶೂಟಿಂಗ್ ಇತ್ತು. ಮ್ಯಾನೇಜರ್ ಕರೆ ಮಾಡಿ ಶೂಟಿಂಗ್ ಕ್ಯಾನ್ಸಲ್ ಎಂದರು. ಯಾಕೆ ಅಂತ ಕೇಳಿದ್ದಕ್ಕೆ ದಿಲೀಪ್ ಹೋದರು ಅಂತ ಹೇಳಿದರು. ನಾನು ಅವರಿಗೆ ಬೈಯ್ದು ಫೋನ್ ಇಟ್ಟೆ. ಅಪ್ಪು ಅವರು ಹೋದಾಗ ನಾನು ನಂಬಿರಲಿಲ್ಲ. ಆಸ್ಪತ್ರೆಗೆ ಹೋಗಿ ಅವರ ಪಾರ್ಥೀವ ಶರೀರ ನೋಡಿದ ಮೇಲೆಯೇ ನಾನು ನಂಬಿದ್ದು. ದಿಲೀಪ್ ಕೂಡ ಹಾಗೆಯೇ ಆರೋಗ್ಯವಾಗಿ ಇದ್ದರು. ಅಂಥ ಮನುಷ್ಯನಿಗೆ ಸಾವು ಹೇಗೆ ಬರುತ್ತದೆ? ಅವರಿಗೆ ಯಾವುದೇ ದುರಭ್ಯಾಸ ಇರಲಿಲ್ಲ’ ಎಂದು ಎಸ್. ನಾರಾಯಣ್ (S Narayan) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vasthu Shastra: ಪದೇ ಪದೇ ಮನೆಯ ಆವರಣದಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ? ವಾಸ್ತು ಸಲಹೆ ಇಲ್ಲಿದೆ – Kannada News | Snake Sightings at Home: Vastu Meaning, Pitra Dosha and Remedies

ಮನೆಯ ಆವರಣದಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥImage Credit source: Pinterest

ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ಹಾವನ್ನು ಕೇವಲ ಒಂದು ಪ್ರಾಣಿಯಾಗಿ ನೋಡದೆ, ಅದಕ್ಕೆ ಆಧ್ಯಾತ್ಮಿಕ ಮಹತ್ವವನ್ನು ನೀಡಲಾಗಿದೆ. ನಾಗರಹಾವನ್ನು ಶಿವನ ಆಭರಣ ಮತ್ತು ವಿಷ್ಣುವಿನ ಶೇಷಶಯನ ಎಂದು ಪೂಜಿಸಲಾಗುತ್ತದೆ. ಆದರೆ, ಅನಿರೀಕ್ಷಿತವಾಗಿ ಮನೆಯ ಆವರಣದಲ್ಲಿ ಅಥವಾ ಮನೆಯೊಳಗೆ ಹಾವು ಕಾಣಿಸಿಕೊಂಡಾಗ, ಅದು ಕೇವಲ ಭಯ ಹುಟ್ಟಿಸುವುದಲ್ಲದೆ ಕೆಲವು ಶುಭ-ಅಶುಭ ಸಂಕೇತಗಳನ್ನು ನೀಡುತ್ತದೆ ಎಂದು ವಾಸ್ತು ತಜ್ಞರು ನಂಬುತ್ತಾರೆ.

ಪಿತೃ ದೋಷ ಮತ್ತು ಹಾವಿನ ಸಂಬಂಧ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುವುದು ‘ಪಿತೃ ದೋಷ’ದ ಸಂಕೇತವಾಗಿರಬಹುದು. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗದಿದ್ದಾಗ ಅಥವಾ ಮನೆಯಲ್ಲಿ ಪಿತೃ ಕಾರ್ಯಗಳು ಸರಿಯಾಗಿ ನಡೆಯದಿದ್ದಾಗ ಹಾವಿನ ರೂಪದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ ಎಂಬ ಬಲವಾದ ನಂಬಿಕೆ ಇದೆ. ವಿಶೇಷವಾಗಿ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವುದು ಅಥವಾ ಮನೆಯ ಮುಖ್ಯ ದ್ವಾರದ ಬಳಿ ಹಾವು ಬರುವುದು ಪಿತೃಗಳ ಅಸಮಾಧಾನವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

ನಕಾರಾತ್ಮಕ ಶಕ್ತಿಯ ಪ್ರಭಾವ:

ಮನೆಯಲ್ಲಿ ಅತಿಯಾದ ನಕಾರಾತ್ಮಕ ಶಕ್ತಿ (Negative Energy) ಇದ್ದಾಗ ಹಾವಿನ ದರ್ಶನವಾಗುವ ಸಾಧ್ಯತೆ ಇರುತ್ತದೆ ಎಂದು ವಾಸ್ತು ತಿಳಿಸುತ್ತವೆ. ಮನೆಯ ಯಾವ ಮೂಲೆಯಲ್ಲಿ ಹಾವು ಕಾಣಿಸಿಕೊಳ್ಳುತ್ತದೆ ಎಂಬುದು ಸಹ ಮುಖ್ಯವಾಗುತ್ತದೆ. ಮನೆಯ ನೈಋತ್ಯ ದಿಕ್ಕಿನಲ್ಲಿ ಹಾವು ಕಂಡರೆ ಅದು ರಾಹು ಮತ್ತು ಕೇತುಗಳ ಪ್ರಭಾವವನ್ನು ತೋರಿಸುತ್ತದೆ. ಇದು ಮನೆಯ ಸದಸ್ಯರ ನಡುವೆ ಕಲಹ, ಆರ್ಥಿಕ ಮುಗ್ಗಟ್ಟು ಅಥವಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಜೀವನದಲ್ಲಿ ಮುಂಬರುವ ಬದಲಾವಣೆಗಳ ಸೂಚನೆ:

ಕೆಲವೊಮ್ಮೆ ಹಾವಿನ ದರ್ಶನವು ಮುಂಬರುವ ಅಪಾಯದ ಮುನ್ಸೂಚನೆ ಅಥವಾ ದೊಡ್ಡ ಬದಲಾವಣೆಯ ಸಂಕೇತವೂ ಆಗಿರಬಹುದು. ಹಾವನ್ನು ಕೊಲ್ಲುವುದು ವಾಸ್ತು ಮತ್ತು ಧರ್ಮ ಎರಡರಲ್ಲೂ ಮಹಾಪಾಪ ಎಂದು ಪರಿಗಣಿಸಲಾಗಿದೆ. ಹಾವನ್ನು ಕೊಂದರೆ ‘ಸರ್ಪ ದೋಷ’ ಅಂಟಿಕೊಳ್ಳುತ್ತದೆ, ಇದು ವಂಶಾಭಿವೃದ್ಧಿಗೆ ಅಡ್ಡಿಯಾಗಬಹುದು ಎಂದು ಎಚ್ಚರಿಸಲಾಗುತ್ತದೆ. ಆದ್ದರಿಂದ ಹಾವು ಕಂಡಾಗ ಭಯಭೀತರಾಗದೆ, ಅದಕ್ಕೆ ಹಾನಿ ಮಾಡದೆ ಸುರಕ್ಷಿತವಾಗಿ ಹೊರಹಾಕಲು ಪ್ರಯತ್ನಿಸಬೇಕು.

ಪರಿಹಾರೋಪಾಯಗಳು ಮತ್ತು ಜಾಗೃತಿ:

ಒಂದು ವೇಳೆ ಹಾವಿನ ದರ್ಶನದಿಂದ ಮನಸ್ಸಿನಲ್ಲಿ ಭೀತಿ ಉಂಟಾಗಿದ್ದರೆ, ಶಿವನ ಆರಾಧನೆ ಮಾಡುವುದು ಅಥವಾ ಹಾವಿಗೆ ಹಾಲು ಅರ್ಪಿಸುವ ಸಂಪ್ರದಾಯವನ್ನು ಪಾಲಿಸಬಹುದು. ವಾಸ್ತು ದೋಷ ನಿವಾರಣೆಗಾಗಿ ಮನೆಯಲ್ಲಿ ‘ನವಗ್ರಹ ಶಾಂತಿ’ ಅಥವಾ ‘ಸರ್ಪ ಶಾಂತಿ’ ಪೂಜೆ ಮಾಡಿಸುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ ಪ್ರತೀಕ್ ಯಾದವ್ ಹೃದಯಾಘಾತದಿಂದ ನಿಧನ – Kannada News | Mulayam Singh Yadav’s Younger Son Prateek Yadav Dies At 38 Due To Cardiac Arrest reveals autopsy report

ನವದೆಹಲಿ, ಮೇ 13: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಮಗ ಪ್ರತೀಕ್ ಯಾದವ್ (Prateek Yadav) ಇಂದು ಮೃತಪಟ್ಟಿದ್ದಾರೆ. ಅವರಿಗೆ ಕೇವಲ 38 ವರ್ಷವಾಗಿತ್ತು. ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರ ದೇಹದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ರಕ್ತ ಹೆಪ್ಪುಗಟ್ಟುವಿಕೆಯು ದೇಹದ ಕೆಳಗಿನ ಭಾಗದಿಂದ ಮೇಲ್ಭಾಗಕ್ಕೆ ಸಾಗಿ, ಶ್ವಾಸಕೋಶಗಳಲ್ಲಿ ತೊಂದರೆಗೆ ಕಾರಣವಾಯಿತು. ಇದರಿಂದಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

38 ವರ್ಷದ ಪ್ರತೀಕ್ ಯಾದವ್ ಲಕ್ನೋದಲ್ಲಿ ನಿಧನರಾದರು. ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ನಂತರ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಪ್ರತೀಕ್ ಯಾದವ್ ಅಖಿಲೇಶ್ ಯಾದವ್ ಅವರ ಮಲಸಹೋದರ ಮತ್ತು ಅಪರ್ಣಾ ಯಾದವ್ ಅವರ ಪತಿ. ಅವರ ಮರಣದ ಸಮಯದಲ್ಲಿ ಅಪರ್ಣಾ ಯಾದವ್ ದೆಹಲಿಯಲ್ಲಿದ್ದರು. ಈ ಸುದ್ದಿ ತಿಳಿದ ನಂತರ ಲಕ್ನೋಗೆ ತೆರಳಿದ್ದರು.

ಇದನ್ನೂ ಓದಿ: Mulayam Singh Yadav Obituary: ಶಿಕ್ಷಕ, ಕುಸ್ತಿಪಟು, ರಾಜಕಾರಣಿ; ಮುಲಾಯಂ ಸಿಂಗ್ ಯಾದವ್ ನಡೆದುಬಂದ ಹಾದಿ ಸುಲಭದ್ದಾಗಿರಲಿಲ್ಲ!

ಪ್ರತೀಕ್ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಅವರ ನಿವಾಸಕ್ಕೆ ತರಲಾಯಿತು. ಅಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕರು ಅಂತಿಮ ನಮನ ಸಲ್ಲಿಸಲು ಸೇರಿದ್ದರು. ಕುಟುಂಬದ ಮೂಲಗಳ ಪ್ರಕಾರ, ಪ್ರತೀಕ್ ಯಾದವ್ ಅವರ ಅಂತ್ಯಕ್ರಿಯೆ ಗುರುವಾರ ಲಕ್ನೋದ ಪಿಪ್ರಾ ಘಾಟ್‌ನಲ್ಲಿ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:44 pm, Wed, 13 May 26

Source link

ನಾಳೆಯ ಹವಾಮಾನ: ಮುಕ್ಕಾಲು ಕರ್ನಾಟಕದಲ್ಲಿ ಮಳೆ; ಉತ್ತರ ಒಳನಾಡಲ್ಲಿ ಉಷ್ಣಾಂಶ ಹೆಚ್ಚಳದ ಎಚ್ಚರಿಕೆ – Kannada News | Karnataka Weather: Rain Alert Across Most of Karnataka Tomorrow; North Interior Region Braces for Heat Surge

ಮಳೆ (ಸಾಂದರ್ಭಿಕ ಚಿತ್ರ)Image Credit source: news.lankasri.com

ಬೆಂಗಳೂರು, ಮೇ 13: ಉತ್ತರ ಒಳನಾಡಿನ ಜಿಲ್ಲೆಗಳಲ್ಲಿನ ತಾಪಮಾನ ಏರಿಕೆ ಎಚ್ಚರಿಕೆಯ ನಡುವೆಯೂ ಮುಕ್ಕಾಲು ಕರ್ನಾಟಕದಲ್ಲಿ ನಾಳೆ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಂಡ್ಯ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಡೆ ವರುಣನ ಆಗಮನದ ನಿರೀಕ್ಷೆ ಇದೆ. ಹಲವೆಡೆ ಗುಡುಗು, ಮಿಂಚಿನ ಜೊತೆ ಭಾರಿ ಗಾಳಿ ಒಳಗೊಂಡ ಮಳೆ ಸುರಿಯಲಿದೆ ಎಂದು ಎಚ್ಚರಿಸಲಾಗಿದೆ.

ಮುಖ್ಯಾಂಶಗಳು

  • ಉತ್ತರ ಒಳನಾಡಿನ ಜಿಲ್ಲೆಗಳಲ್ಲಿನ ತಾಪಮಾನ ಏರಿಕೆ ಎಚ್ಚರಿಕೆ
  • ಈ ನಡುವೆಯೂ ಮುಕ್ಕಾಲು ಕರ್ನಾಟಕದಲ್ಲಿ ಮಳೆ ಸಾಧ್ಯತೆ
  • ಗುಡುಗು, ಮಿಂಚಿನ ಜೊತೆ ವರುಣನ ಆಗಮನದ ನಿರೀಕ್ಷೆ

ಎಲ್ಲೆಲ್ಲಿ ಮಳೆ?

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಭಾಗದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರಿನಲ್ಲೂ ವರುಣನ ಆಗಮನದ ನಿರೀಕ್ಷೆ ಇದೆ. ಹಾಗೆಯೇ ದಕ್ಷಿಣ ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಮಳೆಯ ಸಾಧ್ಯತೆ ಅಂದಾಜಿಸಲಾಗಿದೆ.

ಇದನ್ನೂ ಓದಿ: ಮುಂದಿನ 3 ದಿನ ರಾಜ್ಯದ ಈ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ

ತಾಪಮಾನ ಹೆಚ್ಚಳದ ಎಚ್ಚರಿಕೆ

ಉಳಿದಂತೆ ಬಾಗಲಕೋಟೆ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಮಂಡ್ಯ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಮುಂದಿನ ಐದು ದಿನಗಳಕಾಲ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿನ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್​​ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಬೆಂಗಳೂರಲ್ಲೂ ಮಳೆ ಸಾಧ್ಯತೆ

ಬೆಂಗಳೂರು ನಗರದಲ್ಲಿಯೂ ನಾಳೆ ಮಳೆ ಸಾಧ್ಯತೆ ಇರೋದಾಗಿ ಎಚ್ಚರಿಸಲಾಗಿದೆ. ನಗರದ ತಾಪಮಾನ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಗಾಳಿಯ ವೇಗ ಗಂಟೆಗೆ ಸುಮಾರು 10 ಕಿಲೋ ಮೀಟರ್​​ನಷ್ಟು ಇರಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.
​​

Published On – 5:36 pm, Wed, 13 May 26

Source link

6ನೇ ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್, ಬೆಂಗಳೂರಿಗರಿಗೆ ಬಂಪರ್ ಗಿಫ್ಟ್! – Kannada News | DK Shivakumar Announces 6th guarantee Property Ownership Drive in Bengaluru

ಬೆಂಗಳೂರು, (ಮೇ 13): ಇ-ಖಾತಾ, ನಂಬಿಕೆ ನಕ್ಷೆ ಸೇರಿ ಬೆಂಗಳೂರಿನ (Bengaluru) ಜನರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಅದರ ಜತೆಗೆ ಇದೀಗ ಬೆಂಗಳೂರಿಗೆ ಸೀಮಿತವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಇಂದು(ಮೇ 13) 6ನೇ ಗ್ಯಾರಂಟಿ ಘೋಷಿಸಿದ್ದಾರೆ. ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅಭಿಯಾನ (Property Ownership Drive ಮಾಡುವುದಾಗಿ ಘೋಷಿಸಿದ್ದಾರೆ. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ 16-05-2026 ರಂದು ನಡೆಯುವ ನನ್ನ ಖಾತಾ ನನ್ನ ಹಕ್ಕು ಅಭಿಯಾನ(e-Khatha Open House) ಘೋಷಿಸಿದ್ದು, ಓಸಿ ಇಲ್ಲದೇ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಸಿಗದೇ ಪರದಾಡುತ್ತಾ ಇದ್ದವರಿಗೆ ಅನುಕೂಲವಾಗಲಿದೆ.

  • ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಘೋಷಿಸಿದ ಡಿಸಿಎಂ ಡಿಕೆ ಶಿವಕುಮಾರ್
  • ಭೂ ಗ್ಯಾರಂಟಿ ನಮ್ಮ ಸರ್ಕಾರದ ಆರನೇ ಗ್ಯಾರಂಟಿ ಎಂದ ಡಿಕೆಶಿ
  • ಬಿ ಖಾತಾದಿಂದ ಎ ಖಾತಾ ಪರಿವರ್ತನೆ, ಗೈಡ್‌ಲೈನ್ಸ್‌ ವ್ಯಾಲ್ಯೂ ಇಳಿಕೆ

ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅಭಿಯಾನ

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅವಕಾಶ ಕೊಡುತ್ತೇವೆ.ಒಟ್ಟು 7 ಲಕ್ಷ ಬಿ ಖಾತೆಗಳಿದ್ದು, ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅಭಿಯಾನ ಮಾಡುತ್ತೇವೆ. ನಗರದಲ್ಲಿ ಕೆಲವರು ಪ್ಲ್ಯಾನ್​ ಇಲ್ಲದೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಂತಹವರ ಅನುಕೂಲಕಕ್ಕಾಗಿ ಈ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: 10.45 ಗಂಟೆಯಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಈಜಿದ ಜೋಡಿ: ಐತಿಹಾಸಿಕ ಸಾಧನೆ ಮಾಡಿದ ಬೆಂಗಳೂರಿನ ದಂಪತಿ

ಗೈಡೆನ್ಸ್ ವ್ಯಾಲ್ಯೂ ಶೇಕಡಾ 5ರಿಂದ 2ಕ್ಕೆ ಇಳಿಕೆ

ಶಾಲೆ ಆವರಣದಲ್ಲಿ ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದ 10 ಕಡೆ ಅಭಿಯಾನ ನಡೆಯಲಿದ್ದು, ಮೇ 16ರ ಬಳಿಕ ಪ್ರತಿ ಶನಿವಾರ ಜಾಗ ನಿಗದಿ ಮಾಡಲಾಗುತ್ತದೆ. ಅಧಿಕಾರಿಗಳು ರಜೆ ಇದ್ದರೂ ಕೂಡ ಕೆಲಸ ಮಾಡಬೇಕು. ನಗರದ ನಾಗರಿಕರು ಬಂದು ದಾಖಲೆಗಳನ್ನು ಸರಿ ಮಾಡಿಕೊಳ್ಳಬೇಕು .ಬಿ ಖಾತೆಯಿಂದ ಎ ಖಾತೆ ಮಾಡಿಕೊಂಡರೆ ಗೈಡೆನ್ಸ್ ವ್ಯಾಲ್ಯೂ ಶೇಕಡಾ 5ರಿಂದ 2ಕ್ಕೆ ಇಳಿಕೆ ಮಾಡುತ್ತಿದ್ದೇವೆ. ಸೂಕ್ತ ದಾಖಲೆ ಕೊಟ್ಟರೆ ಆಸ್ತಿ ಪ್ರಮಾಣಪತ್ರ ಮನೆಗೆ ತಲುಪಿಸುತ್ತೇವೆ .ಮುಂದಿನ 100 ದಿನಗಳಲ್ಲಿ ಈ ಅವಕಾಶ ಪಡೆದುಕೊಳ್ಳಬೇಕು ಎಂದರು.

ಕೆಂಪೇಗೌಡ ಜಯಂತಿ ದಿನ ಗ್ರೀನ್ ಬೆಂಗಳೂರು

ಕೆಂಪೇಗೌಡ ಜಯಂತಿ ದಿನ ಗ್ರೀನ್ ಬೆಂಗಳೂರು ಮಾಡಲು ತೀರ್ಮಾನ ಮಾಡಲಾಗಿದ್ದು, 15 ಲಕ್ಷ ಸಸಿಗಳನ್ನು ನೆಡಬೇಕು ಅಂತಾ ನಿರ್ಧಾರ ಮಾಡಿದ್ದೇವೆ. ಬಿಡಿಎ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಜೂನ್ 27ರಂದು ಅದ್ಧೂರಿಯಾಗಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.

33 ಕಿ. ಮೀ ಬಿಸಿನೆಸ್ ಕಾರಿಡಾರ್

ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆ ವರೆಗೆ 33 ಕಿಲೋ ಮೀಟರ್ ಬಿಸಿನೆಸ್ ಕಾರಿಡಾರ್ ಆಗಲಿದೆ. ಈ ಭಾಗದಲ್ಲಿ ಭೂಮಿ ಕೊಡುವ ಮಾಲೀಕರಿಗೆ 5 ವಿವಿಧ ರೂಪದ ಪರಿಹಾರ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಇದನ್ನ ಡಿನೋಟಿಫೈ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:11 pm, Wed, 13 May 26

Source link

UPSSSC Recruitment 2026: UPSSSC ಇಲಾಖೆಯಲ್ಲಿ ಉದ್ಯೋಗಾವಕಾಶ; 1,182 ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | UPSSSC Cane Supervisor Recruitment 2026: 1182 Vacancies – Apply Now! Last Date July 28

ಉತ್ತರ ಪ್ರದೇಶ ಅಧೀನ ಸೇವೆಗಳ ಆಯ್ಕೆ ಆಯೋಗವು (UPSSSC) ಕಬ್ಬು ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1,182 ಕಬ್ಬು ಮೇಲ್ವಿಚಾರಕ (Cane Supervisor) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯಲ್ಲಿ ಸಾಮಾನ್ಯ ಆಯ್ಕೆಯ ಅಡಿಯಲ್ಲಿ 1,000 ಹುದ್ದೆಗಳು ಮತ್ತು ವಿಶೇಷ ಆಯ್ಕೆಯ ಅಡಿಯಲ್ಲಿ 182 ಹುದ್ದೆಗಳನ್ನು ಗುರುತಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಉತ್ತರ ಪ್ರದೇಶದ ಕಬ್ಬು ರೈತರಿಗೆ ಕೃಷಿ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಅಗತ್ಯ ನೆರವು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಪ್ರಮುಖ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜುಲೈ 7 ರಂದು ಪ್ರಾರಂಭವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಸಹ ಇದೇ ದಿನಾಂಕ ಅಂತಿಮವಾಗಿದೆ. ಅರ್ಹ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ www.upsssc.gov.in ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಪರೀಕ್ಷೆಯ ನಿಖರವಾದ ದಿನಾಂಕವನ್ನು ಆಯೋಗವು ಇನ್ನು ನಿರ್ಧರಿಸಿಲ್ಲ.

ಹುದ್ದೆಗಳ ವರ್ಗವಾರು ವರ್ಗೀಕರಣ:

ನೇಮಕಾತಿಯಲ್ಲಿ ವರ್ಗವಾರು ಹುದ್ದೆಗಳ ವಿವರ ಇಂತಿದೆ:

  • ಸಾಮಾನ್ಯ ಆಯ್ಕೆ (1,000 ಹುದ್ದೆಗಳು): ಸಾಮಾನ್ಯ ವರ್ಗಕ್ಕೆ 402, ಇತರೆ ಹಿಂದುಳಿದ ವರ್ಗಗಳಿಗೆ (OBC) 210, ಪರಿಶಿಷ್ಟ ಜಾತಿಗೆ (SC) 16, ಪರಿಶಿಷ್ಟ ಪಂಗಡಕ್ಕೆ (ST) 272 ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS) 100 ಹುದ್ದೆಗಳನ್ನು ಮೀಸಲಿಡಲಾಗಿದೆ.
  • ವಿಶೇಷ ಆಯ್ಕೆ (182 ಹುದ್ದೆಗಳು): ಇತರೆ ಹಿಂದುಳಿದ ವರ್ಗಗಳಿಗೆ 8, ಪರಿಶಿಷ್ಟ ಜಾತಿಗೆ 18 ಮತ್ತು ಪರಿಶಿಷ್ಟ ಪಂಗಡಕ್ಕೆ 156 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಶುಲ್ಕ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು UPSSSC PET 2025 ಪರೀಕ್ಷೆಯನ್ನು ತೆಗೆದುಕೊಂಡಿರಬೇಕು ಮತ್ತು ಮಾನ್ಯವಾದ ಅಂಕಪಟ್ಟಿಯನ್ನು ಹೊಂದಿರಬೇಕು. ಶೈಕ್ಷಣಿಕವಾಗಿ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನದಲ್ಲಿ (B.Sc. Agriculture) ಪದವಿ ಪಡೆದಿರಬೇಕು ಮತ್ತು DOEACC/NIELIT ಇಲಾಖೆ ನೀಡಿದ CCC ಪ್ರಮಾಣಪತ್ರವನ್ನು ಹೊಂದಿರಬೇಕು. ವಯೋಮಿತಿಯು ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷಗಳಾಗಿರಬೇಕು, ಹಾಗೂ ಮೀಸಲಾತಿ ವರ್ಗದವರಿಗೆ ನಿಯಮದಂತೆ ವಯೋಮಿತಿ ಸಡಿಲಿಕೆ ಇರುತ್ತದೆ. ವಿಶೇಷವೆಂದರೆ, ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಕೇವಲ 25 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನದ ಹಂತಗಳು:

ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯ ಮೂಲಕ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯು ಒಟ್ಟು 100 ಅಂಕಗಳನ್ನು ಹೊಂದಿದ್ದು, 100 ವಸ್ತುನಿಷ್ಠ (Objective) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯ ಅವಧಿ 2 ಗಂಟೆಗಳಾಗಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಮಾತ್ರ ಮುಂದಿನ ದಾಖಲೆ ಪರಿಶೀಲನೆ ಹಂತಕ್ಕೆ ಕರೆಯಲಾಗುವುದು ಮತ್ತು ನಂತರ ಅಂತಿಮ ಆಯ್ಕೆಯನ್ನು ಮಾಡಲಾಗುವುದು.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದುಬಾರಿ ಇಂಧನದ ಎಫೆಕ್ಟ್; ಕೆಲ ಅಂತಾರಾಷ್ಟ್ರೀಯ ಫ್ಲೈಟ್​ಗಳನ್ನು ನಿಲ್ಲಿಸಿದ ಏರ್ ಇಂಡಿಯಾ – Kannada News | High Fuel Costs Force Air India to Suspend Key International Flights

ನವದೆಹಲಿ, ಮೇ 13: ವಿಮಾನಗಳಿಗೆ ಬಳಸಲಾಗುವ ಜೆಟ್ ಫುಯೆಲ್ ಅಥವಾ ಎಟಿಎಫ್ ಇಂಧನದ (ATF- Aviation Turbine Fuel) ಬೆಲೆ ತೀವ್ರವಾಗಿ ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆ (Air India) ತನ್ನ ಕೆಲ ಫ್ಲೈಟ್​ಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಜೂನ್​ನಿಂದ ಆಗಸ್ಟ್​ವರೆಗೆ ಕೆಲ ಆಯ್ದ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಫ್ಲೈಟ್ ಸರ್ವಿಸ್ ಅನ್ನು ಕಡಿಮೆಗೊಳಿಸುವುದಾಗಿ ಸಂಸ್ಥೆ ಹೇಳಿದೆ.

ಏರ್ ಇಂಡಿಯಾ ಇಂದು ಬುಧವಾರ ನೀಡಿರುವ ಮಾಹಿತಿ ಪ್ರಕಾರ ಆರೇಳು ಮಾರ್ಗಗಳಲ್ಲಿ ಅದರ ಫ್ಲೈಟ್ ಸಂಚಾರ ಇರುವುದಿಲ್ಲ. ದೆಹಲಿ-ಚಿಕಾಗೊ, ಮುಂಬೈ-ನ್ಯೂಯಾರ್ಕ್, ದೆಹಲಿ-ಶಾಂಘೈ, ಚೆನ್ನೈ-ಸಿಂಗಾಪುರ್ ಹಾಗೂ ಇತರ ಎರಡು ಮಾರ್ಗಗಳಲ್ಲಿ ಏರ್ ಇಂಡಿಯಾ ಫ್ಲೈಟ್​ಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.

ಇದನ್ನೂ ಓದಿ: ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ?

ಏರ್ ಇಂಡಿಯಾದ ಬಹುತೇಕ ಎಲ್ಲಾ ಫ್ಲೈಟ್​ಗಳು ಯಥಾಪ್ರಕಾರ ಸಂಚರಿಸಲಿವೆ. ಮೇಲೆ ತಿಳಿಸಿದ ಆರು ಮಾರ್ಗಗಳನ್ನು ಬಿಟ್ಟರೆ ಉಳಿದ ಕಡೆ ಫ್ಲೈಟ್ ಸ್ಥಗಿತ ಇರುವುದಿಲ್ಲ. ಏರ್ ಇಂಡಿಯಾ ಒಂದು ತಿಂಗಳಲ್ಲಿ 1,200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಫ್ಲೈಟ್​ಗಳನ್ನು ಚಲಾಯಿಸುತ್ತದೆ. ಇದರಲ್ಲಿ ಉತ್ತರ ಅಮೆರಿಕಕ್ಕೆ ವಾರಕ್ಕೊಮ್ಮೆ 33 ಫ್ಲೈಟ್​ಗಳು, ಯೂರೋಪ್​ಗೆ 47 ಫ್ಲೈಟ್​ಗಳು, ಯುಕೆಗೆ 57 ಫ್ಲೈಟ್​ಗಳು, ಪೂರ್ವ ಏಷ್ಯಾಗೆ 158 ಫ್ಲೈಟ್​ಗಳು, ಆಸ್ಟ್ರೇಲಿಯಾಗೆ 8 ಫ್ಲೈಟ್​ಗಳು, ಆಫ್ರಿಕಾಗೆ 7 ಫ್ಲೈಟ್​ಗಳನ್ನು ಏರ್ ಇಂಡಿಯಾ ಆಪರೇಟ್ ಮಾಡುತ್ತಿದೆ. ಬಹುತೇಕ ಇವೆಲ್ಲವೂ ಹಾಗೇ ಮುಂದುವರಿಯುತ್ತವೆ.

ಇಂಧನ ದರ ಹೆಚ್ಚಳದ ಜೊತೆಗೆ ಏರ್​ಸ್ಪೇಸ್ ನಿರ್ಬಂಧವೂ ಒಂದು ಕಾರಣ

ವಿಮಾನ ಸಂಸ್ಥೆಯು ತನ್ನ ಫ್ಲೈಟ್ ಸಂಖ್ಯೆ ಇಳಿಸಲು ಇಂಧನ ದರ ಏರಿಕೆ ಮಾತ್ರವೇ ಅಲ್ಲ, ಕೆಲ ಪ್ರದೇಶಗಳಲ್ಲಿ ವಾಯು ಸಂಚಾರ ನಿರ್ಬಂಧಗಳು ಮುಂದುವರಿದಿರುವುದೂ ಕಾರಣವಾಗಿದೆ.

ಇದನ್ನೂ ಓದಿ: ಇಂಧನ ಕಡಿಮೆ ಬಳಸಿ ಎನ್ನುತ್ತಿರೋದು ಮೋದಿ ಮಾತ್ರವಲ್ಲ, ವಿವಿಧ ದೇಶಗಳು ಜಾರಿಗೊಳಿಸಿರುವ ಸಂಗತಿಗಳೇ

ಕೆಲ ದಿನಗಳ ಹಿಂದಷ್ಟೇ ಭಾರತೀಯ ವಿಮಾನ ಸಂಸ್ಥೆಗಳ ಸಂಘಟನೆಯೊಂದು ಜೆಟ್ ಇಂಧನದ ಬೆಲೆ ವಿಚಾರವಾಗಿ ಸರ್ಕಾರಕ್ಕೆ ಮನವಿಯೊಂದನ್ನು ಮಾಡಿತ್ತು. ಜೆಟ್ ಫುಯಲ್​ಗೆ ಇರುವ ಬೆಲೆ ಸೂತ್ರದಲ್ಲಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಈ ಸಂಘಟನೆಯು ಸರ್ಕಾರಕ್ಕೆ ತುರ್ತು ಸಂದೇಶಳ ಕಳುಹಿಸಿತ್ತು. ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್ ಜೆಟ್ ಸಂಸ್ಥೆಗಳನ್ನು ಒಳಗೊಂಡ ಸಂಘಟನೆಯ ಇದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಂಭ್ರಮಾಚರಣೆ ವೇಳೆ ಹೃದಯಾಘಾತ: ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು – Kannada News | Thouseef Giraganvi, Kolhar Member, Dies from Heart Attack at Cricket Final Celebration

ವಿಜಯಪುರ, ಮೇ.13: ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದ ಸಂಭ್ರಮದ ನಡುವೆಯೇ ಕರಾಳ ಘಟನೆಯೊಂದು ಸಂಭವಿಸಿದೆ. ಗೆಲುವಿನ ಉತ್ತುಂಗದಲ್ಲಿದ್ದಾಗ ಪಟ್ಟಣ ಪಂಚಾಯತ್ ಸದಸ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೊಲ್ಹಾರ ಪಟ್ಟಣ ಪಂಚಾಯತ್‌ನ 16ನೇ ವಾರ್ಡ್ ಸದಸ್ಯರಾದ ತೌಸೀಪ್ ಗಿರಗಾಂವಿ ಅವರು ಮೃತಪಟ್ಟ ದುರ್ದೈವಿ. ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕೆಪಿಎಲ್ (KPL) ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ತೌಸೀಪ್ ವೀಕ್ಷಿಸುತ್ತಿದ್ದರು. ಆಟದ ಅಂತ್ಯದಲ್ಲಿ ತಮ್ಮ ನೆಚ್ಚಿನ ತಂಡ ಜಯಗಳಿಸುತ್ತಿದ್ದಂತೆ ಮೈದಾನಕ್ಕಿಳಿದು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಯುವ ಸದಸ್ಯರ ಅಕಾಲಿಕ ನಿಧನದಿಂದಾಗಿ ಕೊಲ್ಹಾರ ಪಟ್ಟಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕ್ರೀಡೆಯ ಸಂಭ್ರಮವು ಕ್ಷಣಾರ್ಧದಲ್ಲಿ ಮೌನಕ್ಕೆ ತಿರುಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ಲಭ್ಯವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version