ಮೈಸೂರು ರಾಜಮಾತೆಗೂ ವಿಕ್ಟೋರಿಯಾಗೂ ಇದೆ ನಂಟು! ಅರಮನೆ ಅಗ್ನಿದುರಂತ ಹುಟ್ಟುಹಾಕಿದ ಆಸ್ಪತ್ರೆಯ ರೋಚಕ ಇತಿಹಾಸ ಇಲ್ಲಿದೆ

ಮೈಸೂರು ರಾಜಮಾತೆಗೂ ವಿಕ್ಟೋರಿಯಾಗೂ ಇದೆ ನಂಟು! ಅರಮನೆ ಅಗ್ನಿದುರಂತ ಹುಟ್ಟುಹಾಕಿದ ಆಸ್ಪತ್ರೆಯ ರೋಚಕ ಇತಿಹಾಸ ಇಲ್ಲಿದೆ

ಮೈಸೂರು, ಬೆಂಗಳೂರು, ಮಾರ್ಚ್ 15: ವಿವಾದಿತ ನಿರ್ಧಾರಗಳನ್ನು ತೆಗೆದುಕೊಂಡು ನಂತರ ಕಣ್ಣೊರೆಸುವ ನಾಟಕವಾಡುವುದು ಸರ್ಕಾರ ಮಟ್ಟದಲ್ಲಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ಈಗ ಮತ್ತೊಂದು ಹೊಸ ಸೇರ್ಪಡೆ ಕರ್ನಾಟಕ ರಾಜಧಾನಿ ಬೆಂಗಳೂರಿನ (Bangalore) ಬಡ ಮಧ್ಯಮ ವರ್ಗದವರ ಪಾಲಿನ ಕಾಮಧೇನುವಾಗಿರುವ ವಿಕ್ಟೋರಿಯಾ ಸರ್ಕಾರಿ (Victoria Hospital) ಆಸ್ಪತ್ರೆ. ಹೌದು, ಶತಮಾನಗಳ ಇತಿಹಾಸದ ಆಸ್ಪತ್ರೆ ಹೆಸರು ಬದಲಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ. 2026ರ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ವಿಕ್ಟೋರಿಯಾ ಆಸ್ಪತ್ರೆಯನ್ನು ಶಾಂತವೇರಿ ಗೋಪಾಲಗೌಡ ಆಸ್ಪತ್ರೆ’ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ.

ಶಾಂತವೇರಿ ಗೋಪಾಲಗೌಡರು ಕರ್ನಾಟಕದ ಮಹಾನ್ ಸಮಾಜವಾದಿ ನಾಯಕರು. ದೀನ ದಲಿತರ ಹಕ್ಕಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ. ಅದರ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಅಂತಹ ಮಹಾನ್ ನಾಯಕರ ಹೆಸರಿಡುವುದರ ಬಗ್ಗೆ ಯಾರ ತಕರಾರು ಸಹ ಇಲ್ಲ. ಆದರೆ ಜನರಲ್ಲಿ ಈಗ ಕೇಳಿಬರುತ್ತಿರುವ ಪ್ರಶ್ನೆ ಒಂದೇ, ಹೊಸ ಹೆಸರಿಗಾಗಿ ಹಳೆಯ ಇತಿಹಾಸವನ್ನೇ ಅಳಿಸಬೇಕೇ ? ಇದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಅಂದಹಾಗೆ ವಿಕ್ಟೋರಿಯಾ ಆಸ್ಪತ್ರೆಗೂ ಮೈಸೂರು ರಾಜಮನೆತನಕ್ಕೂ ನಂಟಿದೆ. ಅಷ್ಟೇ ಅಲ್ಲದೆ, ಒಂದು ಅಗ್ನಿದುರಂತವೇ ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣಕ್ಕೆ ಕಾರಣವಾಯಿತು ಎಂದರೆ ನಂಬಲೇಬೇಕು.

ವಿಕ್ಟೋರಿಯ ಆಸ್ಪತ್ರೆ ರೂವಾರಿ ಕೆಂಪನಂಜಮ್ಮಣ್ಣಿ

ಕೆಂಪನಂಜಮ್ಮಣ್ಣಿ ಮೈಸೂರು ರಾಜಮಾತೆ. ಪತಿಯನ್ನು ಕಳೆದುಕೊಂಡ ಬಳಿಕ ಅಪ್ರಾಪ್ತ ವಯಸ್ಸಿನ ಐವರು ಮಕ್ಕಳ ಪಾಲನೆ, ಪೋಷಣೆ ಜೊತೆಗೆ ರಾಜ್ಯಭಾರವನ್ನು ಹೊತ್ತು ಯಶಸ್ವಿಯಾಗಿ ಮುನ್ನಡೆಸಿದ ದಿಟ್ಟ ಮಹಿಳೆ. ಮಗನಿಗೆ ಪಟ್ಟಾಭಿಷೇಕ ಮಾಡುವವರೆಗೂ ನಿರಂತರವಾಗಿ ಮನೆವಾರ್ತೆ, ಆಡಳಿತಗಳನ್ನು ಒಟ್ಟಿಗೇ ನಿಭಾಯಿಸಿದ ರಾಜತಂತ್ರಜ್ಞೆ. ಮಕ್ಕಳ ಜೊತೆ ಜೊತೆಗೆ ರಾಜ್ಯದ ಜನತೆಯನ್ನೂ ಮಕ್ಕಳೆಂದು ಸಾಕಿ ಸಲುಹಿದ ಮಾತೆ. ಆಧುನಿಕ ಮೈಸೂರು ಚರಿತ್ರೆಯಲ್ಲಿ ವೈವಿಧ್ಯಮಯ ಅಧ್ಯಾಯ. ಪುತ್ರ ವಾತ್ಸಲ್ಯ ಮತ್ತು ಪ್ರಜಾವಾತ್ಸಲ್ಯವೆರಡೂ ಏಕಕಾಲಕ್ಕೆ ಮೇಲೈಸಿ ಸನ್ನಿಧಾನ ಪದಕ್ಕೆ ಗೌರವ ತಂದುಕೊಟ್ಟವರು. ಇದೇ ಕಾರಣಕ್ಕೆ, ಮಹಾರಾಣಿ ಕೆಂಪನಂಜಮ್ಮಣ್ಣಿ ಎಂಬ ಹೆಸರಿಗಿಂತಲೂ ಎಲ್ಲರಿಗೂ ವಾಣಿ ವಿಲಾಸ ಸನ್ನಿಧಾನ ಎಂಬ ಹೆಸರು ಗೌರವಯುತವಾಗಿತ್ತು. 31ರ ಹರೆಯದ ಚಾಮರಾಜ ಒಡೆಯ‌ರ್ ಡಿಪ್ತಿರಿಯಾದಿಂದ ಮೃತಪಟ್ಟಾಗ, ಮಹಾರಾಣಿಗೆ ಕೇವಲ 26 ವರ್ಷ ವಯಸ್ಸು. ಅದು ದಿಢೀರ್ ಆಘಾತ. ಆದರೂ ಕುಗ್ಗದೆ ಜಗ್ಗದೆ ಬಗ್ಗದೆ ಸವಾಲುಗಳನ್ನು ಎದುರಿಸಿ. ಸಮಸ್ಯೆಗಳನ್ನು ಮೆಟ್ಟಿ ಯದುವಂಶವನ್ನು ಅಜರಾಮರವನ್ನಾಗಿಸಿದ ಮಹಾತಾಯಿ.

ವಿಕ್ಟೋರಿಯಾ ಆಸ್ಪತ್ರೆ…

ಬೆಂಗಳೂರಿನ ಹೃದಯಭಾಗದಲ್ಲಿ ನಿಂತಿರುವ ಒಂದು ದೊಡ್ಡ ಕಟ್ಟಡ. ಇದು ಕೇವಲ ಆಸ್ಪತ್ರೆಯಲ್ಲ. ಅದು ನೂರಾರು ವರ್ಷಗಳ ನೆನಪುಗಳನ್ನು ಹೊತ್ತ ಮನೆ. ಅದು ಸಾವಿರಾರು ಜೀವಗಳನ್ನು ಉಳಿಸಿದ ಪವಿತ್ರ ಸ್ಥಳ. ಅದುವೆ ವಿಕ್ಟೋರಿಯಾ ಆಸ್ಪತ್ರೆ. ಈ ಹೆಸರು ಇನ್ನು ನೆನಪು ಮಾತ್ರ. ವಿಕ್ಟೋರಿಯಾ ಹೆಸರು ಕೆಲವೇ ದಿನಗಳಲ್ಲಿ ಬದಲಾಗುತ್ತಿದೆ. ರಾಜ್ಯ ಸರ್ಕಾರ ವಿಕ್ಟೋರಿಯಾ ಹೆಸರು ಬದಲಾಯಿಸಲು ಎಲ್ಲಾ ತಯಾರಿ ನಡೆಸಿದೆ. ಈ ಆಸ್ಪತ್ರೆಯ ಹೆಸರನ್ನು ಬದಲಿಸುವುದು ಅಂದರೆ ಕೇವಲ ಒಂದು ಫಲಕ ಬದಲಿಸುವುದಲ್ಲ ಬದಲಿಗೆ ಒಂದು ಇತಿಹಾಸದ ಪುಟವನ್ನೇ ಮುಚ್ಚುವುದಾಗಿದೆ.

ಅರಮನೆಯ ಅಗ್ನಿದುರಂತ ಹುಟ್ಟಿಸಿದ ಮಹಾ ಸೇವೆ!

ಈ ವಿಕ್ಟೋರಿಯಾ ಆಸ್ಪತ್ರೆಯ ಹುಟ್ಟಿನ ಕಥನವೇ ಅದ್ಬುತ, ರೋಚಕ. ಅದು 1897ರ ಫೆಬ್ರವರಿ 28. ಮೈಸೂರು ಗಂಧದ ಅರಮನೆಯಲ್ಲಿ ಮದುವೆಯ ಸಂಭ್ರಮ. ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹದ ಸಂಭ್ರಮದಲ್ಲಿ ಅರಮನೆ ಕಂಗೊಳಿಸುತ್ತಿತ್ತು. ಸಂಗೀತ, ನಗು, ಸಂತೋಷ ಎಲ್ಲೆಡೆ ಹರಡಿತ್ತು. ಆದರೆ ಕ್ಷಣಮಾತ್ರದಲ್ಲಿ ಎಲ್ಲವೂ ಬದಲಾಗಿಬಿಟ್ಟಿತು. ವಿವಾಹ ಮಂಟಪದ ತೆರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿತು‌. ಕಣ್ಣು ಮುಚ್ಚುವಷ್ಟರಲ್ಲಿ ಬೆಂಕಿ ಅರಮನೆಯ ದೊಡ್ಡ ಭಾಗವನ್ನೇ ಆವರಿಸಿತು. ಎರಡು ದಿನಗಳ ಕಾಲ ಅಗ್ನಿ ತನ್ನ ರೌದ್ರ ತಾಂಡವವಾಡಿತು. ಸುಮಾರು 30 ಸಾವಿರ ಚದರ ಅಡಿ ಅರಮನೆ ಬೆಂಕಿಯಲ್ಲಿ ಬೆಂದು ಭಸ್ಮವಾಯಿತು. ಅಷ್ಟೊಂದು ಅಗ್ನಿ ಅನಾಹುತವಾದರೂ ಅದೃಷ್ಟವಶಾತ್ ಅಪಾರ ಸಾವು ನೋವು ಸಂಭವಿಸಲಿಲ್ಲ. ಆದರೆ ಅರಮನೆಯ ಒಂದು ಹಿರಿಯ ಜೀವ ತನ್ನ ಜೀವವನ್ನೇ ಬಲಿ ನೀಡಿ ಇತಿಹಾಸದ ಸೃಷ್ಟಿಗೆ ಕಾರಣವಾದಳು. ಆಕೆಯೇ ಅರಮನೆಯ ಪರಿಚಾರಿಕೆ ಹೊನ್ನವ್ವೆ. ಆಕೆ ಸಾಮಾನ್ಯ ಮಹಿಳೆ. ಆದರೆ ಆಕೆಯ ಹೃದಯ ಅಸಾಮಾನ್ಯ. ಯದುವಂಶದ ಬಗ್ಗೆ ಇದ್ದ ಗೌರವ ಅಪಾರ. ರಾಜ ಮನೆತನದವರಿಗೂ ಆಕೆಯನ್ನು ಕಂಡರೇ ಅದೇನೂ ವಿಶೇಷ ಪ್ರೀತಿ, ಅಕ್ಕರೆ, ಮಮಕಾರ. ಹೊನ್ನವ್ವೆ ಸಾಹಸಿ. ಅಗ್ನಿ ಜ್ವಾಲೆಗಳು ರುದ್ರ ನರ್ತನವಾಡುತ್ತಿದ್ದ ವೇಳೆ ಆ ಅಗ್ನಿಯ ನಡುವೆ ನಿಂತು ವಧು ವರರನ್ನು ರಕ್ಷಿಸಿದವಳು. ಅರಮನೆಯ ಅಮೂಲ್ಯ ಆಭರಣಗಳನ್ನು ಉಳಿಸಿದವಳು. ಎಲ್ಲಕ್ಕಿಂತ ಹೆಚ್ಚಾಗಿ ಯದುವಂಶ ಕುಲದೇವತೆ ತಾಯಿ ಚಾಮುಂಡೇಶ್ವರಿಯ ಪಚ್ಚೆ ವಿಗ್ರಹವಿದ್ದ ಸಂದೂಕವನ್ನೂ ಕಾಪಾಡಿದವಳು. ಆದರೆ ಎಲ್ಲವನ್ನೂ ರಕ್ಷಿಸಿದ ಹಿರಿಯ ಜೀವ ಮಾತ್ರ ಉಳಿಯಲಿಲ್ಲ. ಇದೆಲ್ಲವನ್ನೂ ರಕ್ಷಿಸುವ ಅಷ್ಟರಲ್ಲಾಗಲೇ ಹೊನ್ನವ್ವೆಯ ದೇಹಕ್ಕೆ ಬೆಂಕಿ ತಗುಲಿತ್ತು. ತೀವ್ರ ಗಾಯಗಳಿಂದ ನರಳುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಜೀವನ್ಮರಣ ಹೋರಾಟ ನಡೆಸಿದ ಮಹಾತಾಯಿ ಕೊನೆಗೆ ಮೌನವಾಗಿ ಈ ಲೋಕವನ್ನೇ ತೊರೆದಳು. ಆ ಸಮಯದಲ್ಲಿ ಪ್ರಖ್ಯಾತ ವೈದ್ಯರಾಗಿದ್ದ ಮೆಗ್ಗಾನ್ ರಾಜಮಾತೆಗೆ ಒಂದು ಮಾತು ಹೇಳಿದರು. ಅದೇನೆಂದರೆ, ‘‘ಇನ್ನಷ್ಟು ಉತ್ತಮ ವೈದ್ಯಕೀಯ ಸೌಲಭ್ಯಗಳಿದ್ದರೆ ಈ ತಾಯಿಯ ಜೀವವನ್ನು ಉಳಿಸಬಹುದಿತ್ತು’’. ಆ ಮಾತು ರಾಜಮಾತೆ ಕೆಂಪನಂಜಮ್ಮಣಿ ಹೃದಯವನ್ನು ಕದಡಿತು.

ಕೆಂಪನಂಜಮ್ಮಣ್ಣಿ ಮಾತೃ ಹೃದಯದಾಕೆ. ಅವರ ಮನಸು ಸದಾ ಪ್ರಜೆಗಳ ಹಿತ ಸಮಾಜಮುಖಿ ಚಿಂತನೆ ಕಡೆಗೆ ತುಡಿಯುತಿತ್ತು. ಅದಕ್ಕೆ ಸಾಕ್ಷಿ ಗುಡ್ಡೆಯಾಗಿ ನಮ್ಮ ಮೈಸೂರಿನಲ್ಲಿ ಅನೇಕಾನೇಕ ಕುರುಹುಗಳು ಶತ ಶತಮಾನ ಕಳೆದರು ಜೀವಂತವಾಗಿವೆ. ಹೊನ್ನವ್ವೆಯ ಸಾವು ರಾಜಮಾತೆಯ ಮನದಲ್ಲಿ ಒಂದು ಸಂಕಲ್ಪ ಹುಟ್ಟಿ ಹಾಕಿತು. ಮುಂದೆಂದೂ ನಮ್ಮ ಪ್ರಜೆಗಳು ಚಿಕಿತ್ಸೆ ಇಲ್ಲದೆ ಸಾಯಬಾರದು. ಯಾವಾಗ ರಾಜಮಾತೆ ಧೃಡ ನಿರ್ಧಾರ ಮಾಡಿದರೋ ಅಲ್ಲಿಗೆ ರಾಜ್ಯದ ಮಹಾನ್ ಆಸ್ಪತ್ರೆಯೊಂದಕ್ಕೆ ನಾಂದಿ ಶುರುವಾಯಿತು.

ವಿಕ್ಟೋರಿಯಾ ಹೆಸರಿಗಿದೆ ರೋಚಕ ಇತಿಹಾಸ

ಹೌದು, ವಿಕ್ಟೋರಿಯಾ ಹೆಸರು ಸುಖಾಸುಮ್ಮನೆ ಬಂದಿದ್ದಲ್ಲ. ಅದರ ಹಿಂದೆ ನಮ್ಮ ಮೈಸೂರು ಸಾಮ್ರಾಜ್ಯದ ಮಹಿಳೆಯರ ಬುದ್ದಿ ಚಾತುರ್ಯದ ಇತಿಹಾಸವಿದೆ. ಸರ್ವಕಾಲಕ್ಕೂ ‘‘ಹೆಣ್ಮಕ್ಳೇ ಸ್ಟ್ರಾಂಗು ಗುರು’’ ಎಂಬುದಕ್ಕೆ ಸಾಕ್ಷಿಭೂತವಾಗಿದೆ‌. ನಮ್ಮ ಮನೆಯ ಹೆಣ್ಣು ಮಕ್ಕಳ ಬುದ್ದಿಶಕ್ತಿ ದೂರದೃಷ್ಟಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ರಾಜಮಾತೆ ಕೆಂಪನಂಜಮ್ಮಣ್ಣಿ ಬ್ರಿಟಿಷರಂತಹ ಬ್ರಿಟಿಷರನ್ನೇ ಮಂಕಾಗಿಸಿ ಚಾಣಾಕ್ಷತನದಿಂದ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ಸ್ವಾಮಿ ಕಾರ್ಯ ಸ್ವಕಾರ್ಯ ಮಾಡಿಕೊಂಡು ಬಿಟ್ಟರು. ಅದರ ರೋಚಕ ಕಥೆ ಎಲ್ಲರಿಗೂ ಸ್ಪೂರ್ತಿ. ಹೊನ್ನವ್ವೆ ದಾರುಣ ಸಾವಿನ ನಂತರ ರಾಜಮಾತೆ ಆಸ್ಪತ್ರೆ ಕಟ್ಟಿಸುವ ಸಂಕಲ್ಪ ಮಾಡಿ ಅದಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಢೀಕರಿಸಲು ಆರಂಭಿಸಿದರು. ಆದರೆ ಅದು ಸಂಕಲ್ಪ ಮಾಡಿದಷ್ಟು ಸುಲಭವಾಗಿರಲಿಲ್ಲ. ಹೇಳಿ ಕೇಳಿ ಮೈಸೂರು ಸಂಸ್ಥಾನ ಬ್ರಿಟಿಷರ ಅಡಿಯಲ್ಲಿತ್ತು. ಕಡ್ಡಿ ಅಲ್ಲಾಡಬೇಕಾದರೂ ಅವರ ಅನುಮತಿ ಬೇಕಿತ್ತು. ಹೀಗಿರುವಾಗಲೇ ಮತ್ತೊಂದು ಸವಾಲು ಮೈಸೂರು ಅರಸರಿಗೆ ಎದುರಾಯ್ತು. ಅದೇ ಬ್ರಿಟಿಷ್ ರಾಣಿ ವಿಕ್ಟೋರಿಯಾ ಅವರ 60ನೇ ವರ್ಷದ ಹುಟ್ಟುಹಬ್ಬ‌.

ಅಧಿನಾಯಕಿ ವಿಕ್ಟೋರಿಯಾ ಅವರ ಹುಟ್ಟುಹಬ್ಬವನ್ನು ಭಾರತ ಎಲ್ಲಾ ಸಾಮ್ರಾಜ್ಯದವರು ಅದ್ದೂರಿಯಾಗಿ ಆಚರಿಸಬೇಕು ಅಂತಾ ಬ್ರಿಟಿಷ್ ಕಂಪನಿ ಕಟ್ಟಪ್ಪಣೆ ಮಾಡಿತು. ಅಷ್ಟೇ ಅಲ್ಲ ಎಲ್ಲರೂ ತಮ್ಮ ಶಕ್ತಿಗೂ ಮೀರಿ ವಿಕ್ಟೋರಿಯಾ ರಾಣಿಗೆ ಅತ್ಯಮೂಲ್ಯ ಉಡುಗೊರೆ ನೀಡಲೇಬೇಕೆಂಬ ಆದೇಶವನ್ನು ಹೊರಡಿಸಲಾಯ್ತು. ಮೊದಲೇ ಆಸ್ಪತ್ರೆ ನಿರ್ಮಾಣಕ್ಕೆ ಹರಸಾಹಸಪಡುತ್ತಿದ್ದ ರಾಜಮಾತೆಗೆ ಇದೊಂದು ರೀತಿ ಸಂದಿಗ್ಧ ಪರಿಸ್ಥಿತಿ. ಆರಂಭದಲ್ಲಿ ರಾಜಮಾತೆಗೆ ದಿಕ್ಕೇ ತೋಚದಂತಾಯ್ತು. ಆದರೂ ಧೃತಿಗೆಡದ ರಾಜಮಾತೆ ಸಮಯೋಚಿತವಾದ ಉಪಾಯ ಮಾಡಿದರು. ಅದುವೇ ಬ್ರಿಟಿಷ್ ರಾಣಿ ಹುಟ್ಟುಹಬ್ಬಕ್ಕೆ ಉಚಿತ ಸರ್ಕಾರಿ ಆಸ್ಪತ್ರೆಯನ್ನೇ ಉಡುಗೊರೆಯಾಗಿ ಕೊಡುವುದಾಗಿ ಘೋಷಣೆ ಮಾಡಿದರು. ರಾಜಮಾತೆಯ ಈ ಕೊಡುಗೆ ವಿಶ್ವದ ಅತ್ಯುತ್ತಮ ಉಡುಗೊರೆಯಾಗಿ ಹೊರಹೊಮ್ಮಿತು. ಬ್ರಿಟಿಷರಂತೂ ರಾಜಮಾತೆಯನ್ನು ಹಾಡಿ ಹೊಗಳಿ ಅವರ ಕೊಡುಗೆಯನ್ನು ಮನದುಂಬಿ ಸ್ಮರಿಸಿದರು. ಈ ಮೂಲಕ ರಾಜಮಾತೆ ತಮ್ಮ ಬುದ್ದಿ ಚಾತುರ್ಯದಿಂದ ಶತಮಾನಗಳೇ ಕಳೆದರು ಸಮಾಜಕ್ಕೆ ಉಪಯೋಗವಾಗುವ ಮಹತ್ವದ ಆಸ್ಪತ್ರೆಯನ್ನೂ ನೀಡಿದರು.

ಅದು 1897ರ ಜೂನ್ 22ರಂದು ಸರಿ ಸುಮಾರು 129 ವರ್ಷದ ಹಿಂದೆ 7 ಲಕ್ಷ ರೂಪಾಯಿ ವೆಚ್ಚದಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುವ ಒಂದು ಬೃಹತ್ ಸಾರ್ವಜನಿಕ ಆಸ್ಪತ್ರೆಯ ಅಡಿಗಲ್ಲು ಇಡಲಾಯಿತು. ಅದು ಕೇವಲ ಕಟ್ಟಡವಾಗಿ ಅಲ್ಲ. ಅದು ಮಾನವೀಯತೆಯ ಸ್ಮಾರಕವಾಗಿ ರೂಪುಗೊಳ್ಳಬೇಕಿತ್ತು. ಮೂರು ವರ್ಷಗಳ ನಂತರ 1900ರ ಡಿಸೆಂಬರ್ 3 ರಂದು ಭಾರತದ ವೈಸ್ ರಾಯ್ ಲಾರ್ಡ್ ಕರ್ಜನ್ ಅದನ್ನು ಉದ್ಘಾಟಿಸಿದರು. ಆ ದಿನದಿಂದ ವಿಕ್ಟೋರಿಯ ಆಸ್ಪತ್ರೆ ಸಾವಿರಾರು ಬಡವರ ಆನಾರೋಗ್ಯಕ್ಕೆ ಸಂಜೀವಿನಿ ಆಗಿದೆ. ಲಕ್ಷಾಂತರ ಬಡ ಜೀವಗಳಿಗೆ ಜೀವನಾಡಿಯಾಗಿದೆ. ಈ ಆಸ್ಪತ್ರೆಯಲ್ಲಿ ಬಡವರು, ರೈತರು, ಕಾರ್ಮಿಕರು, ಅನಾಥರು, ನಿರ್ಗತಿಕರು ಅಷ್ಟೇ ಅಲ್ಲ ಗೊತ್ತು ಗುರಿಯಿಲ್ಲದವರ ನೋವಿಗೂ ಇಲ್ಲಿ ಔಷಧ ಸಿಕ್ಕಿದೆ. ಅವರ ಕಣ್ಣೀರಿಗೆ ಪರಿಹಾರ ಸಿಕ್ಕಿದೆ. ಎಷ್ಟೋ ತಾಯಂದಿರು ಇಲ್ಲಿ ಹೊಸ ಜೀವಕ್ಕೆ ಜನ್ಮ ನೀಡಿದ್ದಾರೆ. ಎಷ್ಟೋ ಮಕ್ಕಳಿಗೆ ಇಲ್ಲಿ ಬದುಕಿನ ಮೊದಲ ಉಸಿರು ದೊರಕಿದೆ. ಇದು ಬೆಂಗಳೂರಿನ ಜನರ ನಾಡಿಮಿಡಿತ, ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿರುವ ನೆನಪುಗಳ ಭಾಗ.

ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ !

ಒಟ್ಟಿನಲ್ಲಿ, ಶತಮಾನಗಳ ಕಾಲ ಜನರ ನೆನಪಿನಲ್ಲಿ ಉಳಿದಿರುವ ವಿಕ್ಟೋರಿಯಾ ಆಸ್ಪತ್ರೆ ಎಂಬ ಹೆಸರು ಕೇವಲ ಫಲಕದಲ್ಲಿರುವ ಅಕ್ಷರಗಳಲ್ಲ. ಅದು ಜನರ ಹೃದಯದಲ್ಲಿ ಬರೆಯಲ್ಪಟ್ಟಿರುವ ಇತಿಹಾಸ. ಹೆಸರು ಬದಲಾಗಬಹುದು, ಫಲಕಗಳು ಹೊಸದಾಗಬಹುದು. ಆದರೆ ಈ ಆಸ್ಪತ್ರೆಯ ಗೋಡೆಗಳಲ್ಲಿ ಉಳಿದಿರುವ ಸಾವಿರಾರು ಜೀವಗಳ ಕಥೆಗಳು ಎಂದಿಗೂ ಬದಲಾಗುವುದಿಲ್ಲ. ಏಕೆಂದರೆ, ಆಸ್ಪತ್ರೆಗಳು ಕೇವಲ ಕಟ್ಟಡಗಳಲ್ಲ!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Spiritual Benefits: ದುಷ್ಟಶಕ್ತಿ ಮತ್ತು ಮಾಟಮಂತ್ರದಿಂದ ನಿಮ್ಮನ್ನು ರಕ್ಷಿಸಲು ಈ ಒಂದು ವಸ್ತು ಮನೆಯಲ್ಲಿಡಿ

ಇಂದಿನ ಧಾವಂತದ ಬದುಕಿನಲ್ಲಿ ಮಾನಸಿಕ ನೆಮ್ಮದಿಯ ಕೊರತೆ ಮತ್ತು ಕಾರಣವಿಲ್ಲದ ಭಯ ಹಲವರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯ ದೇವರ ಕೋಣೆಯಲ್ಲಿ ರುದ್ರಾಕ್ಷಿಯನ್ನು ಸ್ಥಾಪಿಸುವುದು ಕೇವಲ ಒಂದು ಸಂಪ್ರದಾಯವಲ್ಲ, ಅದು ಜೀವನದ ಸಕಲ ಸಂಕಷ್ಟಗಳಿಗೆ ಒಂದು ಆಧ್ಯಾತ್ಮಿಕ ಪರಿಹಾರವೂ ಹೌದು. ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಉದ್ಭವಿಸಿದ ದಿವ್ಯ ಶಕ್ತಿಯಾಗಿದ್ದು, ಮನೆಯ ಸುತ್ತಲೂ ಒಂದು ಅಜೇಯ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ದೃಷ್ಟಿ ದೋಷ, ಮಾಟ-ಮಂತ್ರದಂತಹ ನಕಾರಾತ್ಮಕ ಪ್ರಭಾವಗಳನ್ನು ತಡೆದು, ಮನೆಯ ಮುಖ್ಯ ದ್ವಾರ ಅಥವಾ ದೇವರ ಕೋಣೆಯಲ್ಲಿ ಸಾನ್ನಿಧ್ಯ ಹೊಂದುವ ಮೂಲಕ ಅಶುಭ ಶಕ್ತಿಗಳು ಒಳಬರದಂತೆ ರಕ್ಷಿಸುತ್ತದೆ.

ಕೇವಲ ರಕ್ಷಣೆಯಷ್ಟೇ ಅಲ್ಲದೆ, ಕುಟುಂಬದ ಸದಸ್ಯರ ನಡುವಿನ ಅಸಮಾಧಾನ ಮತ್ತು ದ್ವೇಷವನ್ನು ನಿವಾರಿಸಿ ಪ್ರೀತಿ-ವಿಶ್ವಾಸವನ್ನು ವೃದ್ಧಿಸುವಲ್ಲಿ ರುದ್ರಾಕ್ಷಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ದೈವಿಕ ಕಂಪನಗಳು ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಸ್ಥಿರತೆಯನ್ನು ನೀಡುತ್ತವೆ, ಇದರಿಂದ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ. ವಿಶೇಷವಾಗಿ ಏಕ ಮುಖಿ ಅಥವಾ ಪಂಚ ಮುಖಿ ರುದ್ರಾಕ್ಷಿಯನ್ನು ಪೂಜಿಸುವುದರಿಂದ ಆರ್ಥಿಕ ಅಡೆತಡೆಗಳು ದೂರವಾಗಿ ಐಶ್ವರ್ಯ ವೃದ್ಧಿಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ಬುದ್ಧಿವಂತಿಕೆಯನ್ನು ಹೆಚ್ಚಿಸಿ ಜ್ಞಾನದ ಹಾದಿಯನ್ನು ಸುಗಮಗೊಳಿಸುತ್ತದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ರುದ್ರಾಕ್ಷಿ ಇರುವ ಮನೆಯಲ್ಲಿ ಸೋಮಾರಿತನ ದೂರವಾಗಿ ಸಕಾರಾತ್ಮಕ ಶಕ್ತಿಯು ನಿರಂತರವಾಗಿ ಹರಿಯುತ್ತದೆ. ಧ್ಯಾನದ ಸಮಯದಲ್ಲಿ ಇದನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವುದರಿಂದ ಏಕಾಗ್ರತೆಯು ಹತ್ತು ಪಟ್ಟು ಹೆಚ್ಚಾಗುತ್ತದೆ ಎಂಬುದು ಅನುಭವಸ್ಥರ ಮಾತು. ಆದರೆ, ಇದರ ಪೂರ್ಣ ಫಲವನ್ನು ಪಡೆಯಲು ಸರಿಯಾದ ಶುದ್ಧೀಕರಣ ವಿಧಾನ ಅತ್ಯಗತ್ಯ. ಮನೆಯಲ್ಲಿ ಸ್ಥಾಪಿಸುವ ಮೊದಲು ರುದ್ರಾಕ್ಷಿಯನ್ನು ಗಂಗಾಜಲದಿಂದ ಶುದ್ಧೀಕರಿಸಿ, ಪ್ರತಿದಿನ ಧೂಪ-ದೀಪಗಳಿಂದ ಪೂಜಿಸುವುದರಿಂದ ಇಡೀ ಮನೆಯ ವಾತಾವರಣವು ದೈವಿಕ ಕಂಪನಗಳಿಂದ ತುಂಬಿರುತ್ತದೆ. ಈ ಸರಳ ಆಧ್ಯಾತ್ಮಿಕ ಕ್ರಮವು ನಿಮ್ಮ ಜೀವನದಲ್ಲಿ ನೆಮ್ಮದಿ, ಆರೋಗ್ಯ ಮತ್ತು ಆರ್ಥಿಕ ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯಬಲ್ಲದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು: ಗೂಡ್ಸ್ ರೈಲು ಕಾಲೇಜು ಬಸ್​​ಗೆ ಡಿಕ್ಕಿ, 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಚೆನ್ನೈ, ಮಾರ್ಚ್​ 15: ಗೂಡ್ಸ್​ ರೈಲು(Train) ಎಂಜಿನಿಯರಿಂಗ್ ಕಾಲೇಜು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ವಿದ್ಯಾರ್ಥಿಗಳನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಸೆಂಥಿಲ್ ಬಾಲಾಜಿ ಭೇಟಿ ನೀಡಿದ್ದಾರೆ.

ಮಾತನಾಡಿದ ಅವರು, ಶನಿವಾರ ಸಂಜೆ ಈ ಪ್ರದೇಶದ ವೀರರಕ್ಕಿಯಂ ಮತ್ತು ಪಾಲಯಂ ನಡುವಿನ ಮಾನವರಹಿತ ರೈಲ್ವೆ ಕ್ರಾಸಿಂಗ್ ಮೂಲಕ ಬಸ್ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಿದರು. ನಂತರ ಸರಕು ರೈಲು ಹಿಂದಿನಿಂದ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು.

ಸುಮಾರು 25 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಇಬ್ಬರು ವಿದ್ಯಾರ್ಥಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅವರಲ್ಲಿ 23 ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
23 ಜನರಲ್ಲಿ ಮೂವರು ಚೇತರಿಸಿಕೊಂಡಿದ್ದಾರೆ ಮತ್ತು ಪ್ರಥಮ ಚಿಕಿತ್ಸೆ ಪಡೆದ ನಂತರ ಮನೆಗೆ ತೆರಳಿದ್ದಾರೆ.

ಮತ್ತಷ್ಟು ಓದಿ: ಮಿರ್ಜಾಪುರದಲ್ಲಿ ರೈಲ್ವೆ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ, ನಾಲ್ವರು ಸಾವು

ಉಳಿದವರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ ಎಂದು ಡಿಎಂಕೆ ನಾಯಕರು ತಿಳಿಸಿದ್ದಾರೆ.ಈ ಘಟನೆ ಖಾಸಗಿ ರೈಲ್ವೆ ಮಾರ್ಗದಲ್ಲಿ ನಡೆದಿದೆಯೇ ಹೊರತು ದಕ್ಷಿಣ ರೈಲ್ವೆಯ ವ್ಯಾಪ್ತಿಯಲ್ಲಿ ಅಲ್ಲ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ವೀರರಕ್ಕಿಯಂ ಮತ್ತು ಪಾಲಯಂ ನಡುವಿನ ಈ ಕ್ರಾಸಿಂಗ್ ಚೆಟ್ಟಿನಾಡ್ ಸಿಮೆಂಟ್ಸ್‌ನ ಒಡೆತನದಲ್ಲಿದೆ ಮತ್ತು ಅದರ ಕ್ಲಿಂಕರ್ ಚಲನೆಯನ್ನು ನಿರ್ವಹಿಸುತ್ತದೆ ಎಂದು ಅದು ಹೇಳಿದೆ. ಈ ಮಾರ್ಗವು ಕೆಲವು ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ಹೊಂದಿದೆ ಎಂದು ಅದು ಹೇಳಿದೆ.

Source link

ಮಂಡ್ಯದಲ್ಲಿ ಮುಂದುವರಿದ ಜೆಡಿಎಸ್-ಬಿಜೆಪಿ ಮೈತ್ರಿ ಮುನಿಸು; ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ಬಿಜೆಪಿ ನಾಯಕರ ಫೋಟೋಗೆ ಇಲ್ಲ ಸ್ಥಾನ!

ಮಂಡ್ಯ, ಮಾರ್ಚ್​ 15: ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಮುನಿಸು ಮುಂದುವರಿದಿದೆ. ಇತ್ತೀಚೆಗೆ ನಡೆದ ‘ಖೇಲೋ ಇಂಡಿಯಾ ವೈಬ್ರೆಂಟ್ ಮಂಡ್ಯ’ ಕಾರ್ಯಕ್ರಮವು ಮೈತ್ರಿ ಪಕ್ಷಗಳ ನಡುವಿನ ಬಿರುಕನ್ನು ಮತ್ತಷ್ಟು ಎತ್ತಿ ತೋರಿಸಿದೆ. ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೋಟೋ ಹೊರತುಪಡಿಸಿ ರಾಜ್ಯ ಬಿಜೆಪಿ ನಾಯಕರ ಯಾವುದೇ ಫೋಟೋಗಳನ್ನು ಹಾಕಿರಲಿಲ್ಲ.

ಈ ನಡೆ ಸ್ಥಳೀಯ ಬಿಜೆಪಿ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜೆಡಿಎಸ್ ಮುಖಂಡರು ರಾಜ್ಯ ಬಿಜೆಪಿ ನಾಯಕರನ್ನು ತಮ್ಮ ಫ್ಲೆಕ್ಸ್​ಗಳಿಂದ ಹೊರಗಿಟ್ಟಿರುವುದು, ಮೈತ್ರಿ ಒಳಗೆ ಭಿನ್ನಾಭಿಪ್ರಾಯಗಳನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ ಎನ್ನಲಾಗುತ್ತಿದೆ. ಜೆಡಿಎಸ್ ನಾಯಕರ ಈ ನಡೆಯಿಂದ ಮಂಡ್ಯದ ಬಿಜೆಪಿ ಮುಖಂಡರು ಸಹ ಜೆಡಿಎಸ್ ನಾಯಕರ ವಿರುದ್ಧ ಮುನಿಸುಗೊಂಡಿದ್ದಾರೆ. ಈ ಘಟನೆಯು ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: 6.5 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡೆ; ಟ್ರಾಫಿಕ್ ಸಮಸ್ಯೆ ವಿವರಿಸಿದ ಬೆಂಗಳೂರಿಗ

ಬೆಂಗಳೂರು, ಮಾರ್ಚ್ 15:ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯ. ಅದರಲ್ಲೂ ಈ ಬೆಂಗಳೂರಿನಲ್ಲಿ ಬೆಳಗ್ಗೆ ಸಂಜೆಯಾದರಂತೂ ಟ್ರಾಫಿಕ್‌ನಿಂದ ರಸ್ತೆಗಳು ಬ್ಲಾಕ್ ಆಗುತ್ತದೆ. ಪೀಕ್‌ ಟೈಮ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿರುತ್ತದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಆಫೀಸಿಗೆ ಹೋಗುವ ವೇಳೆ ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ. ಈ ವ್ಯಕ್ತಿ 6.5 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡೆ ಎಂದು ನಗರದ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ನಗರದಲ್ಲಿನ ದೈನಂದಿನ ಸಂಚಾರ ತೊಂದರೆಗಳನ್ನು ಈ ವಿಡಿಯೋ ಎತ್ತಿ ತೋರಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಸಮಸ್ಯೆ ಹೊಸದೇನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂಕಜ್ ಹುರಿಯಾ (pankaj.huria.1209) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡ ವಿಡಿಯೋಗೆ ಇದು ಬೆಂಗಳೂರಿನ ವಾಸ್ತವ ಎಂದು ಶೀರ್ಷಿಕೆ ನೀಡಲಾಗಿದೆ. ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾಗ ತಮ್ಮ ಈ ಪ್ರಯಾಣವನ್ನು ದಾಖಲಿಸುವ ವಿಡಿಯೋ ಮಾಡಿದ್ದಾರೆ. ಬೆಳಿಗ್ಗೆ 9.15 ಕ್ಕೆ ಮನೆಯಿಂದ ಹೊರಟು ಕೇವಲ 6.5 ಕಿಲೋಮೀಟರ್ ದೂರದಲ್ಲಿರುವ ತನ್ನ ಕಚೇರಿಗೆ ಹೋದೆನು ಎಂದು ವಿವರಿಸಿದ್ದಾರೆ. ಆದರೆ, ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಕಳೆದ ನಂತರವೂ, ಭಾರೀ ದಟ್ಟಣೆಯಂತೂ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಅವರು ತಮ್ಮ ಕಾರಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಗೂಗಲ್ ನಕ್ಷೆಗಳಲ್ಲಿ ತೋರಿಸುವುದನ್ನು ಕಾಣಬಹುದು. ಈ ನ್ಯಾವಿಗೇಷನ್ ಪರದೆಯು ಇನ್ನೂ ಸುಮಾರು 4.4 ಕಿಲೋಮೀಟರ್ ಪ್ರಯಾಣಿಸಬೇಕಾಗಿರುವುದನ್ನು ತೋರಿಸಿದೆ.

ಇದನ್ನೂ ಓದಿ: ಭಾರತದಲ್ಲಿ ನೆಲೆಸುವ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕೆನಡಿಯನ್ ವ್ಯಕ್ತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಬೆಂಗಳೂರಿನಲ್ಲಿರುವ ಟ್ರಾಫಿಕ್ ನಲ್ಲಿ ಸಿಲುಕಿ ಒದ್ದಾಡುವುದು ಅನಿವಾರ್ಯ ಎಂದಿದ್ದಾರೆ. ಇನ್ನೊಬ್ಬರು, ಇಲ್ಲಿನ ನೆಲೆಸಿರುವ ಅನೇಕರ ಪರಿಸ್ಥಿತಿ ಹೇಳಲಾಗದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ದೆಹಲಿಯಲ್ಲೂ ಇದೇ ಪರಿಸ್ಥಿತಿ. ಇಷ್ಟೇ ದೂರವನ್ನು ಕ್ರಮಿಸಲು 45 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ತಂದೆ ಜೀವ ಉಳಿಸಲು ಲಿವರ್ ದಾನ ಮಾಡಿದ ಪುತ್ರಿ; ಆಸ್ಪತ್ರೆ ಬಿಲ್ ಭರಿಸಲಾಗದೆ ಸಂಕಷ್ಟದಲ್ಲಿ ತಂದೆ-ಮಗಳು!

ದಾವಣಗೆರೆ, ಮಾರ್ಚ್​ 15: ಜಿಲ್ಲೆಯ ಆಹಾರ ಇಲಾಖೆಯ ಶಿರಸ್ತೆದಾರ ಅಜ್ಜಪ್ಪ ಅವರ ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ತಂದೆಯ ಜೀವ ಉಳಿಸಲು ಪುತ್ರಿಯೊಬ್ಬಳು ಲಿವರ್ ದಾನ (Organ Donation) ಮಾಡಿದರೂ, ಚಿಕಿತ್ಸಾ ವೆಚ್ಚ ಹೆಚ್ಚಾಗಿ ಕುಟುಂಬ ಆತಂಕದಲ್ಲಿದೆ. ಅಜ್ಜಪ್ಪ ಅವರು ಅಂಗಾಂಗ ವೈಫಲ್ಯದಿಂದ ಗಂಭೀರವಾಗಿ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ, ಅವರ ಪುತ್ರಿ ಚಂದನಾ ತಮ್ಮ ಲಿವರ್‌ನ ಒಂದು ಭಾಗವನ್ನು ದಾನ ಮಾಡಿದ್ದರು. ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಚಂದನಾ ತಂದೆಯ ಜೀವ ಉಳಿಸಲು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಕೈಕೊಟ್ಟ ಸಂಜೀವಿನಿ ಯೋಜನೆ

ಕಳೆದ ತಿಂಗಳು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ಅಜ್ಜಪ್ಪರನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಆರಂಭದಲ್ಲಿ ಸುಮಾರು 30 ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಕುಟುಂಬ ನಿರೀಕ್ಷಿಸಿತ್ತು. ಆದರೆ ಚಿಕಿತ್ಸೆ ಹಾಗೂ ಇತರೆ ವೆಚ್ಚಗಳನ್ನು ಸೇರಿಸಿ ಆಸ್ಪತ್ರೆಯ ಬಿಲ್ ಸುಮಾರು 57 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.

ಇದನ್ನೂ ಓದಿ ದಾವಣಗೆರೆ ಬೈ ಎಲೆಕ್ಷನ್: ಬಿಜೆಪಿ ಮನೆಯೊಂದು 3 ಬಾಗಿಲು, ಕಾಂಗ್ರೆಸ್​​​​ ಮನೆಯೊಂದು ಎರಡು ಬಾಗಿಲು

ಆರೋಗ್ಯ ಸಂಜೀವಿನಿ ಯೋಜನೆ ಅನ್ವಯವಾಗುವುದಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಒಂದು ಲಕ್ಷ ರೂಪಾಯಿ ವೈಯಕ್ತಿಕ ಸಹಾಯ ನೀಡಿದ್ದಾರೆ. ಸಾರ್ವಜನಿಕರು ಸಹಾಯ ಮಾಡುವಂತೆ ಕುಟುಂಬ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಫಾರ್ಮುಲಾ-1 ರೇಸ್​ಗೂ ತಟ್ಟಿದ ಯುದ್ಧದ ಬಿಸಿ!

ಬಹ್ರೇನ್ ಮತ್ತು ಸೌದಿ ಅರೇಬಿಯಾ ಗ್ರ್ಯಾಂಡ್ ಪ್ರಿಕ್ಸ್ ರೇಸ್‌ಗಳು ಏಪ್ರಿಲ್‌ ತಿಂಗಳಲ್ಲಿ ನಡೆಯುವುದಿಲ್ಲ ಎಂದು ಫಾರ್ಮುಲಾ ಒನ್ ಮ್ಯಾನೇಜ್ಮೆಂಟ್ (FOM) ಮತ್ತು ಇಂಟರ್ನ್ಯಾಷನಲ್ ಆಟೋಮೊಬೈಲ್ ಫೆಡರೇಶನ್ (FIA) ಅಧಿಕೃತವಾಗಿ ಘೋಷಿಸಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಕ್ಷಿಪಣಿ ದಾಳಿಗಳ ಭೀತಿಯಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಫ್​ಐಎ ತಿಳಿಸಿದೆ.

ಇತ್ತ ಎರಡು ರೇಸ್​ಗಳು ಕ್ಯಾನ್ಸಲ್ ಆದರೂ ಬದಲಿಗೆ ಈ ಸೀಸನ್​ನಲ್ಲಿ ಯಾವುದೇ ಹೊಸ ರೇಸ್‌ಗಳನ್ನು ಸೇರಿಸಲಾಗುತ್ತಿಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಲಾಗಿದೆ. ಇದರಿಂದಾಗಿ 2026ರ ಸೀಸನ್ 24 ರೇಸ್‌ಗಳ ಬದಲಿಗೆ 22 ರೇಸ್‌ಗಳಿಗೆ ಸೀಮಿತವಾಗಲಿದೆ.

ಇನ್ನು ಮಾರ್ಚ್ 29 ರಂದು ನಡೆಯುವ ಜಪಾನ್ ಜಿಪಿ ನಂತರ, ಮೇ 3 ರಂದು ನಡೆಯುವ ಮಿಯಾಮಿ ಜಿಪಿ ವರೆಗೆ ಸುಮಾರು 35 ದಿನಗಳ ಕಾಲ ಯಾವುದೇ ರೇಸ್ ಇರುವುದಿಲ್ಲ. ಅಲ್ಲದೆ ಡಿಸೆಂಬರ್​ನಲ್ಲಿ ನಡೆಯಲಿರುವ ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ರೇಸ್​ನೊಂದಿಗೆ ಈ ವರ್ಷದ ಫಾರ್ಮುಲಾ-1 ಸೀಸನ್ ಕೂಡ ಮುಗಿಯಲಿದೆ.  ಅಂದರೆ ಎರಡು ರೇಸ್​ಗಳ ರದ್ದತಿಯೊಂದಿಗೆ ಈ ಬಾರಿ 22 ರೇಸ್​ಗಳ ಲೆಕ್ಕಾಚಾರ ಇರಲಿದೆ.

ಫಾರ್ಮುಲಾ 1 (F1) ನಲ್ಲಿ ಫೈನಲ್ ಚಾಂಪಿಯನ್ ಅನ್ನು ಪಾಯಿಂಟ್ಸ್ ಸಿಸ್ಟಮ್ ಆಧಾರದ ಮೇಲೆ ಘೋಷಿಸಲಾಗುತ್ತದೆ. ಇಡೀ ಸೀಸನ್‌ನಲ್ಲಿ (ಈ ಬಾರಿ 22 ರೇಸ್‌ಗಳು) ಯಾರು ಅತಿ ಹೆಚ್ಚು ಪಾಯಿಂಟ್ಸ್ ಗಳಿಸುತ್ತಾರೋ ಅವರು ಚಾಂಪಿಯನ್ ಆಗಲಿದ್ದಾರೆ.

ಹೀಗಾಗಿ ಈ ಬಾರಿಯ ರೇಸಿಂಗ್​ನಲ್ಲಿ ಮ್ಯಾಕ್ಸ್ ವರ್ಸ್ಟಪ್ಪನ್ (ರೆಡ್ ಬುಲ್), ಲೂಯಿಸ್ ಹ್ಯಾಮಿಲ್ಟನ್ (ಫೆರಾರಿ), ಚಾರ್ಲ್ಸ್ ಲೆಕ್ಲರ್ಕ್ (ಫೆರಾರಿ), ಲ್ಯಾಂಡೊ ನಾರಿಸ್ (ಮೆಕ್ಲಾರೆನ್) ನಡುವೆ ಮತ್ತಷ್ಟು ಪೈಪೋಟಿಯನ್ನು ನಿರೀಕ್ಷಿಸಬಹುದು.

Source link

‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು

‘ಧುರಂಧರ್’ (Dhurandhar) ಚಿತ್ರದ ದೃಶ್ಯಗಳು ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಸತ್ಯ’ ಚಿತ್ರವನ್ನು ಹೋಲುತ್ತವೆ ಎಂಬ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ‘ಧುರಂಧರ್’ ನಿರ್ದೇಶಕ ಆದಿತ್ಯ ಧಾರ್ (Aditya Dhar) ಅವರು ಆರ್​ಜಿವಿ ಶೈಲಿಯನ್ನು ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ (Ram Gopal Varma) ಮಾತನಾಡಿದ್ದಾರೆ. ಸಿನಿಮಾ ರಂಗದಲ್ಲಿ ಒಬ್ಬರ ಕೆಲಸದಿಂದ ಇನ್ನೊಬ್ಬರು ಪ್ರಭಾವಿತರಾಗುವುದು ಸಾಮಾನ್ಯ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

‘ಆದಿತ್ಯ ಧಾರ್ ಪ್ರಜ್ಞಾಪೂರ್ವಕವಾಗಿ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರತಿಯೊಬ್ಬ ಫಿಲ್ಮ್ ಮೇಕರ್ ಕೂಡ ತಾವು ಈ ಹಿಂದೆ ನೋಡಿದ ಅಥವಾ ಇಷ್ಟಪಟ್ಟ ಸಿನಿಮಾಗಳಿಂದ ಪ್ರಭಾವಿತರಾಗಿಯೇ ಇರುತ್ತಾರೆ. ನನ್ನದೇ ಸಿನಿಮಾಗಳ ಉದಾಹರಣೆ ಇದೆ. ಬ್ರೂಸ್ ಲೀ ಅವರ ‘ರಿಟರ್ನ್ ಆಫ್ ದಿ ಡ್ರ್ಯಾಗನ್’ ಮತ್ತು ಸನ್ನಿ ಡಿಯೋಲ್ ಅವರ ‘ಅರ್ಜುನ್’ ಚಿತ್ರದಿಂದ ‘ಶಿವ’ ಸಿನಿಮಾ ಪ್ರೇರಿತವಾಗಿತ್ತು. ಹಾಗೆಯೇ ‘ಸತ್ಯ’ ಚಿತ್ರದಲ್ಲಿ ‘ದಿ ಗಾಡ್ ಫಾದರ್’ ಮತ್ತು ‘ಗುಡ್ ಫೆಲ್ಲಾಸ್’ ಚಿತ್ರಗಳ ಪ್ರಭಾವವಿತ್ತು’ ಎಂದು ರಾಮ್ ಗೋಪಾಲ್ ವರ್ಮಾ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರು ಆದಿತ್ಯ ಧಾರ್ ಜೊತೆಗೆ ಮಾತನಾಡಿದ ವಿಷಯವನ್ನು ಹಂಚಿಕೊಂಡಿದ್ದಾರೆ. ‘ತಾನು ಮುಖ್ಯವಾಗಿ ‘ಸತ್ಯ’ ಮತ್ತು ‘ಕಂಪನಿ’ ಸಿನಿಮಾಗಳಿಂದ ಪ್ರೇರಿತನಾಗಿದ್ದು, ಅದಕ್ಕೆ ಸ್ವಲ್ಪ ದೇಶಭಕ್ತಿಯನ್ನು ಬೆರೆಸಿ ಧುರಂಧರ್ ಸಿನಿಮಾ ಸಿದ್ಧಪಡಿಸಿದೆ ಎಂದು ಆದಿತ್ಯ ಅವರೇ ನನಗೆ ಹೇಳಿದ್ದರು’ ಎಂದು ಆರ್​ಜಿವಿ ಹೇಳಿದಾರೆ. ಆ ಬಗ್ಗೆ ಆದಿತ್ಯ ಧಾರ್ ಏನು ಹೇಳುತ್ತಾರೆ ಎಂಬ ಕೌತುಕ ಮೂಡಿದೆ.

ಮಾರ್ಚ್ 19ಕ್ಕೆ ‘ಧುರಂಧರ್ 2: ದಿ ರಿವೆಂಜ್’ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲರ ಕಣ್ಣು ಸಿನಿಮಾದ ಮೇಲಿದೆ. ರಾಮ್ ಗೋಪಾಲ್ ವರ್ಮಾ ಅವರು ಮೊದಲಿನಿಂದಲೂ ‘ಧುರಂಧರ್’ ಚಿತ್ರಕ್ಕೆ ಮೆಚ್ಚುಗೆ ಸೂಚಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಅವರು ‘ಧುರಂಧರ್ 2’ ಸಿನಿಮಾದ ಟ್ರೈಲರ್‌ ನೋಡಿ ಹೊಗಳಿದ್ದರು. ಸಿನಿಮಾಗೆ ಅವರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: ಸಾವಿರ ಪರದೆಗಳಲ್ಲಿ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ ‘ಧುರಂಧರ್’ ಸಿನಿಮಾ

ಒಂದು ದಿನ ಮೊದಲೇ ‘ಧುರಂಧರ್ 2’ ಸಿನಿಮಾದ ಪೇಯ್ಡ್ ಪ್ರೀಮಿಮರ್ ಶೋಗಳು ನಡೆಯಲಿವೆ. ಮಾರ್ಚ್ 18ರ ಸಂಜೆ 5 ಗಂಟೆಯಿಂದ ದೇಶಾದ್ಯಂತ ಪ್ರೀಮಿಯರ್ ಶೋ ಆರಂಭ ಆಗಲಿದೆ. ಈ ಶೋಗಳ ಮುಂಗಡ ಟಿಕೆಟ್ ಬುಕಿಂಗ್​ನಿಂದಲೇ ಈ ಚಿತ್ರಕ್ಕೆ ಈಗಾಗಲೇ 34 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಇನ್ನೂ ಹೆಚ್ಚಾಗುವುದು ಗ್ಯಾರಂಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈಸೂರು ಚಾಮುಂಡೇಶ್ವರಿ ದೇವಿ ಲಡ್ಡು ಪ್ರಸಾದಕ್ಕೂ ಗ್ಯಾಸ್ ಕೊರತೆ ಬಿಸಿ: ಲಡ್ಡು ತಯಾರಿಸಲು ನಿರ್ಮಾಣವಾಗ್ತಿದೆ ವಿಶೇಷ ಸೌದೆ ಒಲೆ!

ಮೈಸೂರು, ಮಾರ್ಚ್​ 15: ಕರ್ನಾಟಕದಾದ್ಯಂತ (Karnataka) ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗುತ್ತಿರುವ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ಅದರ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ಪ್ರಸಿದ್ಧ ಚಾಮುಂಡೇಶ್ವರಿ ದೇವಿ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಕೆಗೆ ಗ್ಯಾಸ್ ಕೊರತೆ ತಲೆದೋರಿರುವುದರಿಂದ ಇದೀಗ ಸೌದೆ ಒಲೆ ಬಳಸಿ ಲಡ್ಡು ತಯಾರಿಸಲು ದೇವಸ್ಥಾನ ಪ್ರಾಧಿಕಾರ ಮುಂದಾಗಿದೆ. ಅದಕ್ಕಾಗಿ ವಿಶೇಷ ರೀತಿಯ ಸೌದೆ ಒಲೆಯನ್ನೂ ಸಿದ್ಧಪಡಿಸಲಾಗುತ್ತಿದೆ.

ಸಾಮಾನ್ಯವಾಗಿ ಲಡ್ಡು ಪ್ರಸಾದವನ್ನು ಗ್ಯಾಸ್ ಒಲೆಯಲ್ಲಿ ತಯಾರಿಸಲಾಗುತ್ತದೆ. ಆದರೆ ಸದ್ಯ ಕಮರ್ಷಿಯಲ್ ಸಿಲಿಂಡರ್‌ಗಳು ಸಮರ್ಪಕವಾಗಿ ದೊರೆಯದ ಕಾರಣ ದೇವಸ್ಥಾನದಲ್ಲಿ ವಿಶೇಷವಾಗಿ ಸೌದೆ ಒಲೆ ನಿರ್ಮಿಸುವ ಕೆಲಸದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ.

ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಪ್ರತಿದಿನ ಸರಾಸರಿ 10 ಸಾವಿರ ಲಡ್ಡು ಪ್ರಸಾದ ತಯಾರಿಸಲಾಗುತ್ತದೆ. ಇದಕ್ಕಾಗಿ ಸುಮಾರು 5 ರಿಂದ 6 ವಾಣಿಜ್ಯ ಸಿಲಿಂಡರ್‌ಗಳ ಅಗತ್ಯ ಇರುತ್ತದೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಕಾರಣ ಸುಮಾರು 20 ಸಾವಿರ ಲಡ್ಡುಗಳು ತಯಾರಿಸಲಾಗುತ್ತವೆ. ಆ ಸಂದರ್ಭದಲ್ಲಿ 10 ರಿಂದ 12 ಸಿಲಿಂಡರ್‌ಗಳ ಅಗತ್ಯ ಉಂಟಾಗುತ್ತದೆ.

ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಸರಬರಾಜು ಸಮರ್ಪಕವಾಗಿ ಆಗದ ಕಾರಣ ದೇವಸ್ಥಾನ ಪ್ರಾಧಿಕಾರ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದು, ಸೌದೆ ಒಲೆಯಲ್ಲೇ ಲಡ್ಡು ಪ್ರಸಾದ ತಯಾರಿಸಲು ತೀರ್ಮಾನಿಸಿದೆ. ಈ ಕ್ರಮದಿಂದ ಭಕ್ತರಿಗೆ ಪ್ರಸಾದ ವಿತರಣೆ ಯಾವುದೇ ವ್ಯತ್ಯಯವಾಗದೆ ಈಗಿರುವ ರೀತಿಯಲ್ಲೇ ವ್ಯವಸ್ಥೆ ಮುಂದುವರಿಯಲಿದೆ ಎಂದು ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲೂ ಗ್ಯಾಸ್ ಕೊರತೆ ಸಮಸ್ಯೆ ಉಂಟುಮಾಡಿರುವ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ವರದಿಯಾಗಿತ್ತು. ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಪ್ರಸಾದ ವಿತರಣೆಯಾಗುತ್ತಿದ್ದು, ದಿನವೊಂದಕ್ಕೆ 20 ಗ್ಯಾಸ್ ಸಿಲಿಂಡರ್ ಬೇಕು. ಆದರೆ, ಅಷ್ಟೊಂದು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಏಜೆನ್ಸಿಯವರು ಹೇಳಿದ್ದರಿಂದ ಊಟದ ಮೆನು‌ ಬದಲಾವಣೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ಹೇಳಿತ್ತು.

ಇದನ್ನೂ ಓದಿ: ಕರ್ನಾಟಕದಾದ್ಯಂತ ಸಿಲಿಂಡರ್ ಕೊರತೆ: ಕಾಳಸಂತೆಯಲ್ಲಿ ಗ್ಯಾಸ್ ದಂಧೆ, 1 ಸಿಲಿಂಡರ್ ದರ 7 ಸಾವಿರ ರೂ!

ಅಲ್ಲದೆ, ರಾಜ್ಯದ ಇತರ ಕೆಲವು ದೇಗುಲಗಳಲ್ಲಿಯೂ ಅನ್ನದಾನ ಹಾಗೂ ಇತರ ಸೇವೆಗಳ ಮೇಲೆ ಪರಿಣಾಮ ಬೀರಿರುವ ಬಗ್ಗೆ ವರದಿಯಾಗುತ್ತಿದೆ. ಇದೀಗ ಇತಿಹಾಸ ಪ್ರಸಿದ್ಧ ಮೈಸೂರಿನ ಚಾಮುಂಡೇಶ್ವರಿ ದೇವಿ ಲಡ್ಡು ಪ್ರಸಾದಕ್ಕೂ ಅಡಚಣೆಯಾಗಿರುವುದು ಗಮನ ಸೆಳೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಜ್ತಬಾ ಖಮೇನಿ ಜೀವಂತವಿಲ್ಲ, ಇರಾನ್ ಕದನ ವಿರಾಮಕ್ಕೆ ಸಿದ್ಧವಾಗಿದೆ, ಆದರೆ ನಮಗೆ ಮನಸ್ಸಿಲ್ಲ ಎಂದ ಟ್ರಂಪ್

ವಾಷಿಂಗ್ಟನ್, ಮಾರ್ಚ್​ 15: ಇರಾನ್​ನ ನೂತನ ಸರ್ವೋಚ್ಚ ನಾಯಕನಾಗಿ ನೇಮಕಗೊಂಡಿರುವ ಮೊಜ್ತಬಾ ಖಮೇನಿ(Mojtaba Khamenei) ಬದುಕಿಲ್ಲ, ಇರಾನ್ ಕದನ ವಿರಾಮಕ್ಕೆ ಸಿದ್ಧವಾಗಿದೆ ಆದರೆ ನಮಗೆ ಮನಸ್ಸಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ.  ಎನ್‌ಬಿಸಿ ನ್ಯೂಸ್ ಮತ್ತು ಫಾಕ್ಸ್ ನ್ಯೂಸ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ, ಫೆಬ್ರವರಿ 28 ರಂದು ಯುಎಸ್-ಇಸ್ರೇಲಿ ದಾಳಿಯ ಸಮಯದಲ್ಲಿ ಅವರ ತಂದೆ ಅಲಿ ಖಮೇನಿ ನಿಧನರಾದ ನಂತರ ನೇಮಕಗೊಂಡ ನಂತರ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.ಅವರು ಜೀವಂತವಾಗಿದ್ದಾರೆಯೇ ಎಂದು ನನಗೆ ತಿಳಿದಿಲ್ಲ.

ಇಲ್ಲಿಯವರೆಗೆ, ಯಾರೂ ಅವರನ್ನು ತೋರಿಸಲು ಸಾಧ್ಯವಾಗಿಲ್ಲ. ಅವರು ಜೀವಂತವಾಗಿಲ್ಲ. ಜೀವಂತವಾಗಿದ್ದರೆ, ಅವರು ತಮ್ಮ ದೇಶಕ್ಕಾಗಿ ತುಂಬಾ ಬುದ್ಧಿವಂತಿಕೆಯಿಂದ ಏನಾದರೂ ಮಾಡಬೇಕಿತ್ತು ಆದರೆ ಕದನ ವಿರಾಮದವರೆಗೆ ದೇಶ ಬಂದು ನಿಂತಿದೆ ಎಂದರು.

ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸಿದ್ದಾರೆ, ಇದು ಅವರ ಆರೋಗ್ಯ ಮತ್ತು ಇರುವಿಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೊಜ್ತಬಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು ಅದರಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸುವುದಾಗಿ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ಅಡ್ಡಿಪಡಿಸುವುದಾಗಿ ಮತ್ತು ಪ್ರಾದೇಶಿಕ ಪ್ರತಿಸ್ಪರ್ಧಿಗಳ ವಿರುದ್ಧ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದ್ದರು.

ಮತ್ತಷ್ಟು ಓದಿ: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬದುಕಿದ್ದಾರಷ್ಟೇ, ಟ್ರಂಪ್ ಹೀಗ್ಯಾಕಂದ್ರು?

ಇರಾನ್‌ನ ಪ್ರಮುಖ ತೈಲ ರಫ್ತು ಟರ್ಮಿನಲ್ ಖಾರ್ಗ್ ದ್ವೀಪದ ಮೇಲೆ ಅಮೆರಿಕದ ಪಡೆಗಳು ನಿಖರವಾದ ದಾಳಿಗಳನ್ನು ನಡೆಸಿವೆ ಎಂದು ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ.ಇರಾನ್ ಮಾತುಕತೆಗೆ ಸಿದ್ಧವಾಗಿರುವಂತೆ ಕಾಣುತ್ತಿದೆ.ಆದರೆ ಅವರು ಇನ್ನೂ ಯಾವುದೇ ಕದನ ವಿರಾಮವನ್ನು ಒಪ್ಪಿಕೊಂಡಿಲ್ಲ. ಸಂಘರ್ಷವು ಮೂರನೇ ವಾರಕ್ಕೆ ಪ್ರವೇಶಿಸುತ್ತಿದ್ದಂತೆ ಉದ್ವಿಗ್ನತೆಗಳು ಹೆಚ್ಚಾಗಿವೆ.

ಟ್ರಂಪ್ ಸದ್ಯಕ್ಕೆ ಯುದ್ಧವನ್ನು ಮುಂದುವರಿಸುವತ್ತ ಗಮನಹರಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅಮೆರಿಕ ಮತ್ತು ಇಸ್ರೇಲ್ ತಮ್ಮ ವೈಮಾನಿಕ ದಾಳಿಯನ್ನು ಕೊನೆಗೊಳಿಸುವವರೆಗೆ ಕದನ ವಿರಾಮ ಮಾತುಕತೆ ನಡೆಸಲು ಹಲವಾರು ದೇಶಗಳು ಮಾಡಿದ ಪ್ರಯತ್ನಗಳನ್ನು ಟೆಹ್ರಾನ್ ತಿರಸ್ಕರಿಸಿದೆ. ಕದನ ವಿರಾಮದ ಭಾಗವಾಗಿ ಅಮೆರಿಕ ಮತ್ತು ಇಸ್ರೇಲಿ ದಾಳಿಗಳನ್ನು ಶಾಶ್ವತವಾಗಿ ಕೊನೆಗೊಳಿಸಲು ಇರಾನ್ ಒತ್ತಾಯಿಸಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ಶುಕ್ರವಾರ ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಗಳಲ್ಲಿ ಒಂದನ್ನು ನಡೆಸಿತು ಮತ್ತು ಇರಾನ್‌ನ ಕಿರೀಟ ರತ್ನವಾದ ಖಾರ್ಗ್ ದ್ವೀಪದಲ್ಲಿನ ಪ್ರತಿಯೊಂದು ಮಿಲಿಟರಿ ಗುರಿಯನ್ನು ಸಂಪೂರ್ಣವಾಗಿ ನಾಶಮಾಡಿತ್ತು. ದ್ವೀಪದ ಮೇಲಿನ ಅಮೆರಿಕದ ದಾಳಿಯು ಇರಾನ್ ಜೊತೆ ಯುದ್ಧ ಮುಂದುವರಿಸುವ ಟ್ರಂಪ್ ಅವರ ದೃಢಸಂಕಲ್ಪವನ್ನು ಒತ್ತಿಹೇಳುತ್ತದೆ.

ಫೆಬ್ರವರಿ 28 ರಂದು ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ್ದು, ಇದಕ್ಕೆ ಪ್ರತೀಕಾರವಾಗಿ ಟೆಹ್ರಾನ್ ಎಂಟು ಮಧ್ಯಪ್ರಾಚ್ಯ ದೇಶಗಳ ಮೇಲೆ ದಾಳಿ ಮಾಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version