ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಸಿಎಂ ನಿತೀಶ್ ಕುಮಾರ್ಗೆ ಪಾಕಿಸ್ತಾನದ ಗ್ಯಾಂಗ್ಸ್ಟರ್ನಿಂದ ಬೆದರಿಕೆ – Kannada News | Pakistan based gangster threatens Bihar CM Nitish Kumar for pulling down woman doctor’s hijab
ಪಾಟ್ನಾ, ಡಿಸೆಂಬರ್ 19: ಪ್ರಧಾನಿ ನರೇಂದ್ರ ಮೋದಿಯವರ (PM Modi) ಜೊತೆ ಬಹಳ ಆಪ್ತವಾಗಿ ಗುರುತಿಸಿಕೊಂಡಿರುವ, ಬಿಹಾರದಲ್ಲಿ ದಾಖಲೆಯ ಅವಧಿಗೆ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರಕ್ಕೇರಿರುವ ನಿತೀಶ್ ಕುಮಾರ್ (Nitish Kumar) ವಿವಾದದಲ್ಲಿ ಸಿಲುಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಯುವ ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆಯುವ ಮೂಲಕ ಸಾರ್ವಜನಿಕ ವೇದಿಕೆಯಲ್ಲೇ ಆ ಮಹಿಳೆಗೆ ಮುಜುಗರ ತಂದಿದ್ದರು. ಈ ಘಟನೆಗೆ ವಿಪಕ್ಷವಾದ ಆರ್ಜೆಡಿ ಸೇರಿದಂತೆ ಅನೇಕ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಇದುವರೆಗೂ ನಿತೀಶ್ ಕುಮಾರ್ ಈ ವಿಷಯದಲ್ಲಿ ಕ್ಷಮಾಪಣೆ ಕೇಳಿಲ್ಲ,…