ಸಚಿವರ ಪ್ರಯಾಣ, ಔತಣಕೂಟದ ಮೇಲೆ ನಿರ್ಬಂಧ; ತನ್ನ ಸರ್ಕಾರದಿಂದಲೇ ಬದಲಾವಣೆ ಆರಂಭಿಸಲು ಮೋದಿ ಪ್ಲಾನ್ – Kannada News | Curbs On Minister’s Travel, Online Seminars’ PM Modi government is planning Austerity initiatives

ನವದೆಹಲಿ, ಮೇ 12: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಯುದ್ಧ ಸಾರಿದ ನಂತರ ಅದರ ಪರಿಣಾಮವನ್ನು ಇಡೀ ಜಗತ್ತೇ ಅನುಭವಿಸುವಂತಾಯಿತು. ಹೀಗಾಗಿ, ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಗರಿಕರು ಕಠಿಣ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಬದಲಾವಣೆ ನಮ್ಮ ಮನೆಯಿಂದಲೇ ಆರಂಭವಾಗಲಿ ಎಂದು ಸಲಹೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟದಲ್ಲಿ ಯಾವೆಲ್ಲ ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರಂತೆ. ಅದರ ಪ್ರಕಾರ, ಸಚಿವರು ದೂರದ ರಾಜ್ಯಗಳಿಗೆ ಕಾರು, ಹೆಲಿಕಾಪ್ಟರ್​​ಗಳಲ್ಲಿ ಪ್ರಯಾಣ ಮಾಡುವ ಬದಲು ಸಾಧ್ಯವಾದಷ್ಟೂ ವರ್ಚುವಲ್ ಆಗಿ ಕಾರ್ಯಕ್ರಮಗಳನ್ನು ಉದ್ಘಾಟಿಸುವುದು, ಬೃಹತ್ ಔತಣಕೂಟಗಳಿಗೆ ಕಡಿವಾಣ ಹಾಕುವುದು, ಆನ್​ಲೈನ್​ನಲ್ಲೇ ಸಭೆಗಳನ್ನು ನಡೆಸುವುದು ಇಂತಹ ಕೆಲವು ಬದಲಾವಣೆಗಳನ್ನು ತರಲು ಯೋಚಿಸಲಾಗುತ್ತಿದೆ ಎನ್ನಲಾಗುತ್ತಿದೆ. ಇದರಿಂದ ಸರ್ಕಾರದ ಮಟ್ಟದಲ್ಲಿ ಸ್ವಲ್ಪವಾದರೂ ಇಂಧನ ಉಳಿತಾಯ ಮಾಡಬಹುದು ಎಂಬುದು ಮೋದಿಯ ಅಭಿಪ್ರಾಯ.

ವೆಚ್ಚವನ್ನು ಕಡಿತಗೊಳಿಸುವತ್ತ ಗಮನಹರಿಸದೆ, ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದ ಪ್ರಚೋದಿಸಲ್ಪಟ್ಟ ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುವತ್ತ ಗಮನಹರಿಸುವ ವಿವರವಾದ ಯೋಜನೆಗಳನ್ನು ಸಲ್ಲಿಸಲು ಸಚಿವಾಲಯಗಳಿಗೆ ಸೂಚಿಸಲಾಗಿದೆ ಎಂದು ಸಿಎನ್‌ಎನ್-ನ್ಯೂಸ್ 18 ವರದಿ ಮಾಡಿದೆ. ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರೂ, ರಾಜ್ಯ ನಿಗಮಗಳಿಗೆ ಹೊಸದಾಗಿ ನೇಮಕಗೊಂಡ ಆಡಳಿತ ಪಕ್ಷದ ನಾಯಕರು ದೊಡ್ಡ ಬೆಂಗಾವಲು ಪಡೆಗಳೊಂದಿಗೆ ಆಗಮಿಸಿದ ನಂತರ ಮಧ್ಯಪ್ರದೇಶದ ವಿರೋಧ ಪಕ್ಷ ಕಾಂಗ್ರೆಸ್ ಇಂದು ಮುಂಜಾನೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ, ಸಚಿವರು, ಅಧಿಕಾರಿಗಳು, ನಾಯಕರ ಹಿಂದೆ-ಮುಂದೆ ಹಲವು ಬೆಂಗಾವಲು ವಾಹನಗಳು ಹೊರಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಇಂಧನದ ವೆಚ್ಚ ಹೆಚ್ಚಾಗುತ್ತದೆ. ಹೀಗಾಗಿ, ಸಚಿವರ ದೂರದೂರಿನ ಪ್ರಯಾಣವನ್ನು ಆದಷ್ಟು ಮಿತಗೊಳಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.

ಇದನ್ನೂ ಓದಿ: ಮೋದಿ ಮನವಿಗೆ ಸ್ಪಂದನೆ; ಪೆಟ್ರೋಲ್ ಉಳಿಸಲು ಸೈಕಲ್​ನಲ್ಲೇ ನ್ಯಾಯಾಲಯಕ್ಕೆ ಬಂದ ಹೈಕೋರ್ಟ್ ನ್ಯಾಯಮೂರ್ತಿ

ಪ್ರವಾಸ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡಲು ಮನೆಯಿಂದ ಕೆಲಸ ಮತ್ತು ಹೈಬ್ರಿಡ್ ವ್ಯವಸ್ಥೆಗಳ ವ್ಯಾಪಕ ಬಳಕೆಯ ಬಗ್ಗೆ ಇಲಾಖೆಗಳು ಪರಿಶೀಲಿಸುತ್ತಿವೆ ಎಂದು ವರದಿಯಾಗಿದೆ. ವ್ಯಾಪಕ ಪ್ರಯಾಣ ಮತ್ತು ಭಾರೀ ಎಲ್​ಪಿಜಿ ಬಳಕೆಯನ್ನು ಒಳಗೊಂಡಿರುವ ದೊಡ್ಡ ಸರ್ಕಾರಿ ಔತಣಕೂಟಗಳು ಮತ್ತು ಕಾರ್ಯಕ್ರಮಗಳನ್ನು ಸಹ ಕಡಿಮೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಂ, ಆನ್​ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ

ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಅನಿವಾರ್ಯವಲ್ಲದ ದೇಶೀಯ ಮತ್ತು ವಿದೇಶಿ ಪ್ರಯಾಣವನ್ನು ಶೀಘ್ರದಲ್ಲೇ ನಿಲ್ಲಿಸಬಹುದು ಅಥವಾ ತೀವ್ರವಾಗಿ ಮೊಟಕುಗೊಳಿಸಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಸಾಧ್ಯವಾದಲ್ಲೆಲ್ಲಾ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸೆಮಿನಾರ್‌ಗಳು ಮತ್ತು ಸಮ್ಮೇಳನಗಳನ್ನು ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ. ಪ್ರಧಾನಿ ಇತ್ತೀಚೆಗೆ ಜನರು ತಮ್ಮ ಚಿನ್ನದ ಖರೀದಿ, ವಿದೇಶ ಪ್ರಯಾಣ ಮತ್ತು ಪೆಟ್ರೋಲಿಯಂ ಬಳಕೆಯ ಬಳಕೆಯನ್ನು ಮಿತಿಗೊಳಿಸುವಂತೆ ಮನವಿ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ಸಿಎಂ ವಿಜಯ್ – Kannada News | Tamil Nadu CM Vijay meets rebel AIADMK leaders who are Supporting TVK ahead of floor test

ಚೆನ್ನೈ, ಮೇ 12: ತಮಿಳುನಾಡು ವಿಧಾನಸಭೆಯಲ್ಲಿ ನಾಳೆ ನಡೆಯಲಿರುವ ನಿರ್ಣಾಯಕವಾದ ಬಹುಮತ ಸಾಬೀತಿಗೂ ಮುನ್ನ ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ (CM Vijay) ಇಂದು ಎಐಎಡಿಎಂಕೆ ಬಂಡಾಯ ನಾಯಕರಾದ ಸಿ.ವಿ ಷಣ್ಮುಗಂ ಮತ್ತು ಎಸ್‌.ಪಿ ವೇಲುಮಣಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಣವು 30 ಶಾಸಕರ ಬೆಂಬಲವನ್ನು ಹೊಂದಿದ್ದು, ಇವರು ನಾಳೆಯ ವಿಶ್ವಾಸಮತಯಾಚನೆ ವೇಳೆ ಟಿವಿಕೆಗೆ ತನ್ನ ಬೆಂಬಲವನ್ನು ನೀಡುವುದಾಗಿ ಘೋಷಿಸಿರುವುದರಿಂದ ಈ ಭೇಟಿ ಹೆಚ್ಚಿನ ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ.

ಇಂದು ಮೊದಲ ಬಾರಿಗೆ ವಿಧಾನಸಭಾ ಅಧಿವೇಶನ ನಡೆದ ನಂತರ, ಟಿವಿಕೆ ನೇತೃತ್ವದ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ನೀಡಿದ ಹಲವಾರು ಪಕ್ಷಗಳ ಕಚೇರಿಗಳಿಗೆ ಸಿಎಂ ವಿಜಯ್ ಭೇಟಿ ನೀಡಿದರು. ಕಪ್ಪು ಸೂಟ್ ಮತ್ತು ಬಿಳಿ ಶರ್ಟ್ ಧರಿಸಿ ವಿಜಯ್ ಎಐಎಡಿಎಂಕೆಯ ಸ್ಥಳೀಯ ಪಕ್ಷದ ಕಚೇರಿಗೆ ತೆರಳಿದರು. ಅಲ್ಲಿ ಷಣ್ಮುಗಂ ಮತ್ತು ವೇಲುಮಣಿ ಇಬ್ಬರೂ ಹಲವಾರು ಎಐಎಡಿಎಂಕೆ ನಾಯಕರೊಂದಿಗೆ ಹಾಜರಿದ್ದರು. ವಿಜಯ್ ಕಾರಿನಿಂದ ಇಳಿದ ತಕ್ಷಣ ಎಐಎಡಿಎಂಕೆ ನಾಯಕರು ಅವರನ್ನು ಹೂವಿನ ಹೂಗುಚ್ಛಗಳೊಂದಿಗೆ ಸ್ವಾಗತಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ವಿಜಯ್ ಸಿಎಂ ಆಗಿದ್ದಕ್ಕೆ ಏನ್ ಹೇಳ್ತೀರಿ? ಕೈ ಮುಗಿದು ಮುಂದಕ್ಕೆ ಹೋದ ರಜನಿಕಾಂತ್ – Kannada News | Rajinikanth refuses to comment on Vijay becoming Tamil Nadu CM at Chennai airport

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಅವರು ತಮ್ಮ ರಾಜಕೀಯ ಜೀವನದ ಮೊದಲ ಪ್ರಯತ್ನದಲ್ಲೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಈ ರೀತಿ ಸಾಧನೆ ಮಾಡಿದ ವಿಜಯ್ ಕುರಿತು ಕೇಳಲಾದ ಪ್ರಶ್ನೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಯಾವುದೇ ಉತ್ತರ ನೀಡಿಲ್ಲ. ಬದಲಿಗೆ, ಅವರು ಮೌನಕ್ಕೆ ಶರಣಾಗಿದ್ದಾರೆ.

ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳ ನಂತರ, ರಜನಿಕಾಂತ್ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಮಾಧ್ಯಮದವರು ‘ವಿಜಯ್ ಸಿಎಂ ಆಗಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಪ್ರಶ್ನಿಸಿದಾಗ, ತಲೈವಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೇವಲ ನಗು ಬೀರುತ್ತಾ, ಕೈಮುಗಿದು ಅಲ್ಲಿಂದ ತೆರಳಿದರು.

ಮೇ 4ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಾಗ, ಡಿಎಂಕೆ ಮತ್ತು ಎಐಎಡಿಎಂಕೆ ಅಂತಹ ಬಲಿಷ್ಠ ಪಕ್ಷಗಳನ್ನು ಹಿಂದಿಕ್ಕಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ಐತಿಹಾಸಿಕ ಸಾಧನೆಗಾಗಿ ರಜನಿಕಾಂತ್ ಅವರು ಎಕ್ಸ್ (ಟ್ವಿಟರ್) ಮೂಲಕ ವಿಜಯ್ ಮತ್ತು ಅವರ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದರು. ‘ಚುನಾವಣೆಯಲ್ಲಿ ಅದ್ಭುತ ವಿಜಯ ಸಾಧಿಸಿದ ತಮಿಳಗ ವೆಟ್ರಿ ಕಳಗಂ ಅಧ್ಯಕ್ಷರಾದ ವಿಜಯ್ ಅವರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದರು.

ರಜನಿಕಾಂತ್ ಅವರು 1996ರಿಂದಲೂ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡುತ್ತಾ ಬಂದಿದ್ದರು. 2017ರಲ್ಲಿ ಹೊಸ ಪಕ್ಷ ಸ್ಥಾಪಿಸಿ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಪಕ್ಷದ ಪ್ರಾಬಲ್ಯ ಮತ್ತು ನಂತರದ ದಿನಗಳಲ್ಲಿ ತಮ್ಮ ಆರೋಗ್ಯದ ಕಾರಣ ನೀಡಿ ರಜನಿಕಾಂತ್ ರಾಜಕೀಯ ಪ್ರವೇಶದ ನಿರ್ಧಾರದಿಂದ ಹಿಂದೆ ಸರಿದಿದ್ದರು. 2021ರಲ್ಲಿ ಅವರು ತಮ್ಮ ‘ರಜನಿ ಮಕ್ಕಳ್ ಮಂಡ್ರಂ’ ಸಂಘಟನೆಯನ್ನು ವಿಸರ್ಜಿಸಿದ್ದರು.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ನೋಡಲು ಬರಲಿಲ್ಲ ಪತ್ನಿ, ಮಕ್ಕಳು; ಮಿಂಚಿದ್ದು ಮಾತ್ರ ತ್ರಿಶಾ

ತಮ್ಮ ಮೊದಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ ವಿಜಯ್, ನಂತರ 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದಾರೆ. ಈ ಮೂಲಕ ಎಂ.ಜಿ. ರಾಮಚಂದ್ರನ್, ಎನ್.ಟಿ. ರಾಮರಾವ್ ಮತ್ತು ಜಯಲಲಿತಾ ಅವರಂತೆ ಚಿತ್ರರಂಗದಿಂದ ಬಂದು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ ದಿಗ್ಗಜರ ಸಾಲಿಗೆ ವಿಜಯ್ ಈಗ ಸೇರ್ಪಡೆಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉತ್ತರ ಭಾರತದತ್ತ ಹೊರಟಿತೇಕೆ ತೆಲುಗು ಚಿತ್ರರಂಗ, ‘ಪುಷ್ಪ’ ಬಳಿಕ ಈಗ ‘ಪೆದ್ದಿ’ – Kannada News | Ram Charan starrer Peddi movie to host grand promotional event at Bhopal

ತೆಲುಗು ಚಿತ್ರರಂಗ (Tollywood), ಭಾರತದ ಅತ್ಯಂತ ಲಾಭದಾಯಕ ಚಿತ್ರರಂಗ. ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ಇಲ್ಲಿ ಗೆಲ್ಲುವ ಚಿತ್ರಗಳ ಸರಾಸರಿ ಸಂಖ್ಯೆ ಹೆಚ್ಚು. ತೆಲುಗು ಸಿನಿಮಾಗಳು ಭಾರಿ ದೊಡ್ಡ ಮೊತ್ತದ ಹಣವನ್ನೂ ಸಹ ಗಳಿಕೆ ಮಾಡುತ್ತವೆ. ಮಾತ್ರವಲ್ಲದೆ ತೆಲುಗು ಚಿತ್ರರಂಗ ಹೆಚ್ಚು ವರ್ಸಟೈಲ್ ಚಿತ್ರರಂಗ. ಇಲ್ಲಿ ಎಲ್ಲ ರೀತಿಯ ಸಿನಿಮಾಗಳು ನಿರ್ಮಾಣ ಆಗುತ್ತದೆ. ವಿವಿಧ ಸ್ಥರಗಳ ಟಾಪ್ ನಾಯಕರುಗಳಿದ್ದಾರೆ. ಭಾರಿ ನಿರ್ಮಾಪಕರ ಸಂಖ್ಯೆಯೂ ಸಹ ದೊಡ್ಡದಾಗಿಯೇ ಇದೆ. ಇತ್ತೀಚೆಗೆ ತೆಲುಗು ಚಿತ್ರರಂಗ ನಿಧಾನಕ್ಕೆ ಉತ್ತರ ಭಾರತದತ್ತ ಹೆಜ್ಜೆ ಹಾಕುತ್ತಿದೆ. ಇದಕ್ಕೆ ಕಾರಣವೂ ಇದೆ.

ತೆಲುಗು ಸಿನಿಮಾಗಳಿಗೆ ವಿಶೇಷವಾಗಿ ತೆಲುಗಿನ ಮಾಸ್ ಸಿನಿಮಾಗಳು ಭಾರತದಾದ್ಯಂತ ದೊಡ್ಡ ಬೇಡಿಕೆ ಇದೆ. ಅದರಲ್ಲೂ ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಇನ್ನೂ ಕೆಲವು ರಾಜ್ಯಗಳಲ್ಲಿ ತೆಲುಗು ಸಿನಿಮಾಗಳು ಹಿಂದಿ ಸಿನಿಮಾಗಳಿಗಿಂತಲೂ ಚೆನ್ನಾಗಿ ಪ್ರದರ್ಶನ ಕಾಣುತ್ತವೆ. ಕಾರ್ಪೊರೇಟ್ ಶೈಲಿಯ ಹಿಂದಿ ಸಿನಿಮಾಗಳು ಬಿಹಾರ, ಉತ್ತರ ಪ್ರದೇಶದ ಬಡ ಮಧ್ಯಮ ವರ್ಗದ ಜನರಿಗೆ ರಿಲೇಟ್ ಆಗುವುದಿಲ್ಲ. ಆದರೆ ತೆಲುಗಿನ ಮಾಸ್ ಹಳ್ಳಿ ಕತೆಗಳು ಹೆಚ್ಚು ಮಜಾ ಕೊಡುತ್ತವೆ. ಹಾಗಾಗಿ ತೆಲುಗು ಸಿನಿಮಾಗಳಿಗೆ ಇಲ್ಲಿ ಬೇಡಿಕೆ ಹೆಚ್ಚು.

ಇದೇ ಬೇಡಿಕೆಯನ್ನು ಲಾಭವನ್ನಾಗಿ ಪರಿವರ್ತಿಸಲು ತೆಲುಗು ಚಿತ್ರರಂಗ ಪ್ರಯತ್ನಿಸುತ್ತಿದೆ. ‘ಪುಷ್ಪ 2’ ಸಿನಿಮಾದ ಪ್ರೀ ರಿಲೀಟ್ ಇವೆಂಟ್​ ಅನ್ನು ಪಟ್ನಾನಲ್ಲಿ ಆಯೋಜಿಸಲಾಗಿತ್ತು. ಇತ್ತೀಚೆಗೆ ಬಂದ ‘ಡಕಾಯತ್’ ಸಿನಿಮಾನಲ್ಲಿ ಭೋಜ್​​ಪುರಿ ನಟ ಪವನ್ ಸಿಂಗ್ ಅನ್ನು ಅತಿಥಿ ನಟನಾಗಿ ಹಾಕಿಕೊಂಡಿದ್ದಲ್ಲದೆ, ಉತ್ತರ ಪ್ರದೇಶದಲ್ಲಿ ಸಿನಿಮಾದ ಪ್ರಚಾರವನ್ನು ಪ್ರತ್ಯೇಕವಾಗಿ ಮಾಡಲಾಗಿತ್ತು.

ಇದನ್ನೂ ಓದಿ:ಮದನ ಮನಮೋಹಿನಿಯಂತೆ ಕಾಣಿಸಿದ ರುಕ್ಮಿಣಿ ವಸಂತ್ 

ಈಗ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇದು ಸಹ ‘ಪುಷ್ಪ’ ರೀತಿಯೇ ಗ್ರಾಮ ಭಾಗದ ಯುವಕನ ಕತೆಯನ್ನು ಒಳಗೊಂಡಿದ್ದು, ಈ ಸಿನಿಮಾ ಸಹ ಉತ್ತರ ಭಾರತದ ಕೆಲ ರಾಜ್ಯಗಳ ಜನರಿಗೆ ಹೆಚ್ಚು ಕನೆನ್ಟ್ ಆಗಲಿದ್ದು, ಇದೀಗ ಈ ಸಿನಿಮಾ ಸಹ ಉತ್ತರ ಭಾರತದಲ್ಲಿ ವಿಶೇಷ ಪ್ರಚಾರಕ್ಕೆ ಸಿದ್ಧವಾಗುತ್ತಿದೆ.

‘ಪೆದ್ದಿ’ ಸಿನಿಮಾದ ಟ್ರೈಲರ್ ಇದೇ 18ರಂದು ಬಿಡುಗಡೆ ಆಗಲಿದೆ. ಅದಾದ ಬಳಿಕ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ‘ಪೆದ್ದಿ’ ಸಿನಿಮಾದ ದೊಡ್ಡ ಇವೆಂಟ್ ಒಂದನ್ನು ಚಿತ್ರತಂಡ ಆಯೋಜಿಸಿದೆ. ‘ಪೆದ್ದಿ’ ಸಿನಿಮಾನಲ್ಲಿ ಕ್ರಿಕೆಟ್ ಜೊತೆಗೆ ಕುಸ್ತಿಯ ಕತೆಯೂ ಇದೆ, ಭೋಪಾಲ್, ಕುಸ್ತಿಗೆ ಜನಪ್ರಿಯವಾಗಿರುವ ನಗರವಾಗಿದೆ ಹಾಗಾಗಿ ಇಲ್ಲಿಯೇ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮಾರ್ಗದಲ್ಲಿ ಸ್ಫೋಟಕ ಪತ್ತೆ: ಹಳೆಯ ಜಿಲೆಟಿನ್ ಕಡ್ಡಿಗಳ ಹಿಂದೆ ಇರುವ ಜಾಲ ಯಾವುದು? ಎಫ್‌ಎಸ್‌ಎಲ್ ವರದಿ ನೀಡಿದ ಆತಂಕದ ಮಾಹಿತಿ – Kannada News | PM Modi Route Scare: Bengaluru FSL Reveals Gelatin Sticks Not Explosive

ಬೆಂಗಳೂರು, ಮೇ.12: ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಪ್ರಾಥಮಿಕ ವರದಿ ನೀಡಿದ್ದಾರೆ. ತನಿಖೆಯ ವೇಳೆ ಕೃತ್ಯಕ್ಕೆ ಬಳಸಲಾದ ವಸ್ತುಗಳ ಬಗ್ಗೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

ಪತ್ತೆಯಾದ ಜಿಲೆಟಿನ್ ಕಡ್ಡಿಗಳು ಸುಮಾರು 3 ವರ್ಷಗಳ ಹಿಂದೆ ತಯಾರಾದವುಗಳಾಗಿವೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಸಂಗ್ರಹಿಸದ ಕಾರಣ, ಪತ್ತೆಯಾದ ಸಂದರ್ಭದಲ್ಲಿ ಅವು ಸ್ಫೋಟಗೊಳ್ಳುವ ಸ್ಥಿತಿಯಲ್ಲಿರಲಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಜಿಲೆಟಿನ್ ಜೊತೆಗಿದ್ದ ವೈರ್ ಮತ್ತು ಎಲೆಕ್ಟ್ರಿಕ್ ವಸ್ತುಗಳು ಸುಮಾರು 1 ವರ್ಷದ ಹಿಂದೆ ತಯಾರಾಗಿರುವ ಸಾಧ್ಯತೆಯಿದೆ. ಗಡಿಯಾರಕ್ಕೆ ಬಳಸುವ ವೈರ್ ಮತ್ತು ಶೆಲ್ (ಬ್ಯಾಟರಿ) ಗಳನ್ನು ಒಂದು ಬಾಕ್ಸ್‌ನಲ್ಲಿ ವ್ಯವಸ್ಥಿತವಾಗಿ ಇರಿಸಲಾಗಿತ್ತು.

ಈ ವಸ್ತುಗಳನ್ನು ಸೂಕ್ತ ತಾಂತ್ರಿಕ ಜ್ಞಾನದೊಂದಿಗೆ ಜೋಡಣೆ ಮಾಡಿದ್ದರೆ, ಭಾರಿ ಪ್ರಮಾಣದಲ್ಲಿ ಸ್ಫೋಟಗೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದವು. ಆದರೆ ಮೇಲ್ನೋಟಕ್ಕೆ ಇವು ಅಸಮರ್ಪಕವಾಗಿ ಇರಿಸಲ್ಪಟ್ಟಿದ್ದವು. ಜನರಲ್ಲಿ ಮತ್ತು ಭದ್ರತಾ ಸಂಸ್ಥೆಗಳಲ್ಲಿ ಭಯ ಹಾಗೂ ಆತಂಕ ಸೃಷ್ಟಿಸುವ ಉದ್ದೇಶದಿಂದಲೇ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ಬಲವಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ನೀಡಿದ ‘ಮಿತವ್ಯಯ ಮಂತ್ರ’ದ ಹಿಂದಿನ ಲೆಕ್ಕಾಚಾರವೇನು? 23 ಲಕ್ಷ ಕೋಟಿ ರೂ. ಉಳಿತಾಯಕ್ಕೆ ಸಜ್ಜಾಗುತ್ತಿದೆ ಭಾರತ!

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಕರ್ನಾಟಕ ಗೃಹ ಸಚಿವರು ಮತ್ತು ಪೊಲೀಸರು, ಈಗಾಗಲೇ ಓರ್ವ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು, ಆಗ್ನೇಯ ವಿಭಾಗದ ಪೊಲೀಸರು ಹಾಗೂ ಸಿಸಿಬಿ (CCB) ಸೇರಿದಂತೆ ಆರು ವಿಶೇಷ ತಂಡಗಳು ತನಿಖೆ ನಡೆಸುತ್ತಿವೆ. ಅಲ್ಲದೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೂಡ ಈ ತನಿಖೆಯಲ್ಲಿ ಕೈಜೋಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GT vs SRH Playing XI: ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಿದ ಜಿಟಿ, ಎಸ್​ಆರ್​ಹೆಚ್ – Kannada News | GT vs SRH Playing XI Gujarat Titans vs Sunrisers Hyderabad Today IPL 2026 match Confirmed playing 11 details with name in Kannada

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 56ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟ್ ಮಾಡಲಿದೆ. ಇನ್ನು ಈ ಪಂದ್ಯಕ್ಕಾಗಿ ಉಭಯ ತಂಡಗಳು ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಿದ್ದು, ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಕ್ ಕ್ಲಾಸೆನ್, ಸಲೀಲ್ ಅರೋರಾ, ನಿತೀಶ್ ಕುಮಾರ್ ರೆಡ್ಡಿ, ಸ್ಮರಣ್ ರವಿಚಂದ್ರನ್, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ನಿಶಾಂತ್ ಸಿಂಧು, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್.

ಹೆಡ್ ಟು ಹೆಡ್ ದಾಖಲೆ:

ಸನ್​ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಈವರೆಗೆ ಮುಖಾಮುಖಿಯಾಗಿರುವುದು ಕೇವಲ 7 ಪಂದ್ಯಗಳಲ್ಲಿ ಮಾತ್ರ. ಈ 7 ಮ್ಯಾಚ್​ಗಳಲ್ಲಿ 5 ಪಂದ್ಯಗಳನ್ನು ಗುಜರಾತ್ ಟೈಟಾನ್ಸ್ ಗೆದ್ದುಕೊಂಡಿದೆ. ಇನ್ನು ಒಂದು ಪಂದ್ಯದಲ್ಲಿ ಎಸ್​ಆರ್​ಹೆಚ್ ಜಯ ಸಾಧಿಸಿದೆ. ಮತ್ತೊಂದು ಪಂದ್ಯವು ಕಾರಣಾಂತರದಿಂದ ರದ್ದಾಗಿತ್ತು.

ಈ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಗುಜರಾತ್ ಟೈಟಾನ್ಸ್ ತಂಡವು ಬಲಿಷ್ಠವಾಗಿದೆ. ಇದಾಗ್ಯೂ ಪ್ರಸ್ತುತ ಸನ್​ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಶಕ್ತಿಯನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಗೆದ್ದವರಿಗೆ ಅಗ್ರಸ್ಥಾನ:

ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಅಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡವು 14 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ತಂಡವು 14 ಪಾಯಿಂಟ್ಸ್​ನೊಂದಿಗೆ ತೃತೀಯ ಸ್ಥಾನದಲ್ಲಿದೆ.

ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ 16 ಅಂಕಗಳನ್ನು ಪಡೆಯುವ ಮೂಲಕ ಆರ್​ಸಿಬಿ ತಂಡವನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟವನ್ನು ಎದುರು ನೋಡಬಹುದು.

ಇದನ್ನೂ ಓದಿ: GT vs SRH IPL 2026 Live Score: ಟೈಟಾನ್ಸ್​ vs ಸನ್​ರೈಸರ್ಸ್​​

ಗುಜರಾತ್ ಟೈಟಾನ್ಸ್ ತಂಡ: ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

ಸನ್‌ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಬ್ರೈಡನ್ ಕಾರ್ಸ್​, ಜಯದೇವ್ ಉನದ್ಕತ್, ಎಶಾನ್ ಮಾಲಿಂಗ, ಝೀಶಾನ್ ಅನ್ಸಾರಿ, ಶಿವಾಂಗ್ ಕುಮಾರ್, ಸಲೀಲ್ ಅರೋರ, ಸಾಕಿಬ್ ಹುಸೈನ್, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಪ್ರಫುಲ್ ಹಿಂಗೆ, ಕ್ರೇನ್ಸ್ ಫುಲೆಟ್ರಾ, ಲಿಯಾಮ್ ಲಿವಿಂಗ್​ಸ್ಟೋನ್ಸ್, ಶಿವಂ ಮಾವಿ, ಜ್ಯಾಕ್ ಎಡ್ವರ್ಡ್ಸ್.

Source link

ಟ್ರೆಕ್ಕಿಂಗ್​​ ಪ್ರಿಯರೇ ಗಮನಿಸಿ: ವನ್ಯಜೀವಿ ಓಡಾಟವಿರುವ ಚಾರಣಪಥಗಳಲ್ಲಿ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್​​ – Kannada News | Karnataka Trekking Ban: Wildlife Conflict Zones Closed for Safety After Leopard Attack

ಬೆಂಗಳೂರು, ಮೇ 12: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗದಲ್ಲಿ ಚಿರತೆ ದಾಳಿಗೆ ಬಾಲಕ ಬಲಿ ಬೆನ್ನಲ್ಲೇ ರಾಜ್ಯದಲ್ಲಿ ವನ್ಯಜೀವಿಗಳ ಓಡಾಟವಿರುವ ಎಲ್ಲ ಚಾರಣಪಥಗಳಲ್ಲಿನ ಸಂಚಾರ ಬಂದ್​​ ಮಾಡಿ ಆದೇಶಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸಚಿವ ಈಶ್ವರ ಖಂಡ್ರೆ ಅವರ ಸೂಚನೆ ಮೇರೆಗೆ ಹುಲಿ, ಆನೆ, ಚಿರತೆ ಸಂಘರ್ಷ ಇರುವ ಪ್ರದೇಶಗಳಲ್ಲಿ ಟ್ರೆಕ್ಕಿಂಗ್​​ಗೆ ಬ್ರೇಕ್ ಹಾಕಲಾಗಿದೆ.

ಮುಖ್ಯಾಂಶಗಳು

  • ಎಂ.ಎಂ. ಹಿಲ್ಸ್​​ ವ್ಯಾಪ್ತಿಯಲ್ಲಿ ಚಿರತೆ ದಾಳಿಗೆ ಬಾಲಕ ಬಲಿ
  • ಘಟನೆ ಬೆನ್ನಲ್ಲೇ ಅರಣ್ಯ ಇಲಾಖೆಯಿಂದ ಮಹತ್ವದ ಕ್ರಮ
  • ವನ್ಯಜೀವಿ ಸಂಚಾರವಿರುವ ಎಲ್ಲ ಚಾರಣಪಥಗಳು ಕ್ಲೋಸ್​​

ಆದೇಶದಲ್ಲಿ ಏನಿದೆ?

ಮೇ 10 ರಂದು ನಾಗಮಲೆ ಅರಣ್ಯ ಪ್ರದೇಶ, ಎಂ. ಎಂ. ಹಿಲ್ಸ್ ವನ್ಯಜೀವಿ ವಿಭಾಗದಲ್ಲಿ ಚಿರತೆ ದಾಳಿಯಿಂದ 10 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಡೆದಿರುವ ಹಿನ್ನಲೆಯಲ್ಲಿ ಹಾಗೂ ವನ್ಯಪ್ರಾಣಿಗಳು ಸಂಚರಿಸುವ ಸಂಚಾರ ಪಥಗಳಲ್ಲಿ ಸಾರ್ವಜನಿಕರ ಹಾಗೂ ಟ್ರೆಕ್ಕರ್‌ಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚಿರತೆ, ಹುಲಿ, ಆನೆ, ಕರಡಿ ಹಾಗೂ ಇತರೆ ವನ್ಯಪ್ರಾಣಿಗಳು ಸಂಚರಿಸುವ ಹಾಗೂ ಸದರಿ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಸಂಭವವಿರುವ ಎಲ್ಲಾ ಸಂಚಾರ ಪಥಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಈ ಸೂಚನೆ ಅನ್ವಯವಾಗಲಿದೆ ಎಂದು ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಚಾರಣಿಗರಿಗೆ ಸ್ಟ್ರಿಕ್ಟ್ ರೂಲ್ಸ್! ಹೊಸ ಎಸ್​ಒಪಿ ಬಗ್ಗೆ ಅರಣ್ಯ ಸಚಿವರು ಕೊಟ್ಟ ಮಾಹಿತಿ ಇಲ್ಲಿದೆ

ಚಾರಣ ಚಟುವಟಿಕೆಗಳಿಗೆ ಹೊಸ ಎಸ್​ಒಪಿ

ಇನ್ನುಚಾರಣ ಚಟುವಟಿಕೆಗಳಿಗೆ ಹೊಸ ಎಸ್​ಒಪಿ ಪಾಲಿಸುವುದು ಕಡ್ಡಾಯವಾಗಲಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಪಥಗಳಲ್ಲಿ ಚಟುವಟಿಕೆ ನಿಲ್ಲಿಸಲು ನಿರ್ಧರಿಸಲಾಗಿದೆ. ನಿಯಮ ಪಾಲನೆಗೆ ಸಿದ್ಧತೆ ಮಾಡಿಕೊಂಡ ನಂತರವಷ್ಟೇ ಚಾರಣಕ್ಕೆ ಅವಕಾಶ ಸಿಗಲಿದ್ದು, ಈ ಬಗ್ಗೆ ಮುಖ್ಯ ವನ್ಯಜೀವಿ ಪರಿಪಾಲಕರು ಪ್ರತ್ಯೇಕ ಸುತ್ತೋಲೆ ಹೊರಡಿಸಿದ್ದಾರೆ. ಪರಿಸರ ಪ್ರವಾಸೋದ್ಯಮ ಮಂಡಳಿ ಮೇಲ್ವಿಚಾರಣೆಯ ಪಥಗಳಿಗೂ ಇದು ಅನ್ವಯವಾಗಲಿದ್ದು, ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ – Kannada News | Diljit Dosanjh sold out his live concert show in Chicago US

ಖ್ಯಾತ ಗಾಯಕ, ನಟ ದಿಲ್ಜೀತ್ ದೊಸ್ಸಾಂಜ್ (Diljit Dosanjh) ತಮ್ಮ ಲೈವ್ ಕಾನ್ಸರ್ಟ್​​ಗಳಿಂದ ಭಾರಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಅವರ ಕಾನ್ಸರ್ಟ್​​ಗಳು ಹೋದಲ್ಲೆಲ್ಲ ಸೂಪರ್ ಹಿಟ್ ಆಗುತ್ತಿವೆ. ಜನ ಮುಗಿಬಿದ್ದು ಅವರ ಶೋಗೆ ಟಿಕೆಟ್ಟುಗಳನ್ನು ಖರೀದಿಸುತ್ತಿದ್ದಾರೆ. ಇದೀಗ ದಿಲ್ಜೀತ್ ದೊಸ್ಸಾಂಜ್ ಅಮೆರಿಕದಲ್ಲಿ ಶೋ ಮಾಡುತ್ತಿದ್ದು, ಅಮೆರಿಕದ ಶಿಕಾಗೋನಲ್ಲಿ ಫುಲ್ ಪ್ಯಾಕ್ ಶೋ ಮಾಡಿದ್ದಾರೆ. ಭಾರಿ ಜನ ದಿಲ್ಜೀತ್ ಶೋ ನೋಡಲು ಆಗಮಿಸಿದ್ದರು. ಅದರ ಕೆಲ ವಿಡಿಯೋಗಳನ್ನು ದಿಲ್ಜೀತ್ ದೊಸ್ಸಾಂಜ್ ಹಂಚಿಕೊಂಡಿದ್ದು ಅವುಗಳಲ್ಲಿ ಒಂದು ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಲೆನಾಡಲ್ಲಿ ವರುಣನ ಆರ್ಭಟ: ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ; ಮಂಜಿನ ನಗರಿಯಾದ ಕಾಫಿನಾಡು! – Kannada News | Heavy Rain Lashes Chikkamagaluru Malenadu; Moodigere, Kalasa Hit Hard, Ghat Travel Caution

ಚಿಕ್ಕಮಗಳೂರು, ಮೇ.12: ಕಾಫಿನಾಡಿನ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಕಳೆದ ಕೆಲವು ಗಂಟೆಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಪ್ರಮುಖವಾಗಿ ಮೂಡಿಗೆರೆ ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದೆ. ಮಳೆಯ ಕಾರಣದಿಂದಾಗಿ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ದಟ್ಟವಾದ ಮಂಜು ಕವಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಸವಾರರು ದೀಪಗಳನ್ನು ಉರಿಸಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಕೊಟ್ಟಿಗೆಹಾರ ಮತ್ತು ಬಣಕಲ್ ಭಾಗದಲ್ಲಿಯೂ ಸಹ ಧಾರಾಕಾರ ಮಳೆ ಸುರಿಯುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಲೆನಾಡಿನ ಭಾಗದಲ್ಲಿ ಸುರಿಯುತ್ತಿರುವ ಈ ಮಳೆಯು ಕಾಫಿ ಮತ್ತು ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ. ವಾಹನ ಸವಾರರು ಮತ್ತು ಪ್ರವಾಸಿಗರು ಘಾಟ್ ಪ್ರದೇಶಗಳಲ್ಲಿ ಸಂಚರಿಸುವಾಗ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸೂಚಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದ ಚೀನಾಗೆ ಭಾರತದ ಖಡಕ್ ಸಂದೇಶ – Kannada News | India’s sharp message to China over helping Pakistan during Operation Sindoor

ನವದೆಹಲಿ, ಮೇ 12: ಭಾರತ ಮತ್ತು ಪಾಕ್ ನಡುವಿನ 3 ದಿನಗಳ ಯುದ್ಧದ ಸಮಯದಲ್ಲಿ ಪಾಕಿಸ್ತಾನಕ್ಕೆ (Pakistan) ಚೀನಾ ತಾಂತ್ರಿಕ ಸಹಾಯವನ್ನು ನೀಡಿತ್ತು ಎಂದು ಚೀನಾದ ಅಧಿಕಾರಿಯೊಬ್ಬರು ಹೇಳಿದ್ದರು. ಈ ಮೂಲಕ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಬೆಂಬಲಕ್ಕೆ ಚೀನಾ ನಿಂತಿದ್ದು ಬಹಿರಂಗವಾಗಿತ್ತು. ಇದಕ್ಕೆ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ. ಭಯೋತ್ಪಾದನೆಯನ್ನು ಹರಡುವ ದೇಶಗಳಿಗೆ ಬೆಂಬಲ ನೀಡುವುದು ತಮ್ಮ ಜಾಗತಿಕ ಸ್ಥಾನಮಾನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ತಮ್ಮನ್ನು ತಾವು ಜವಾಬ್ದಾರಿಯುತ ರಾಷ್ಟ್ರಗಳೆಂದು ಕರೆದುಕೊಳ್ಳುವ ದೇಶಗಳು ಯೋಚಿಸಬೇಕು ಎಂದು ಭಾರತ ಚೀನಾದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡಿದೆ ಎಂಬ ವರದಿಗಳಿಗೆ ಭಾರತ ಇಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರವಾಗಿ ಹೆಚ್ಚಾದಾಗ, ಭಾರತದೊಂದಿಗಿನ ಯುದ್ಧದ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ತಾಂತ್ರಿಕ ಬೆಂಬಲವನ್ನು ನೀಡಿದೆ ಎಂದು ಚೀನಾದ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದರು.

ಇದನ್ನೂ ಓದಿ: 9 ವರ್ಷಗಳ ಬಳಿಕ ಚೀನಾಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ: ಟ್ರಂಪ್-ಕ್ಸಿ ಜಿನ್‌ಪಿಂಗ್ ಮಹತ್ವದ ಮಾತುಕತೆ!

“ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ್ ಒಂದು ನಿಖರವಾದ, ಟಾರ್ಗೆಟ್ ಮಾಡಿದ ಪ್ರತಿಕ್ರಿಯೆಯಾಗಿತ್ತು. ಇದು ಪಾಕಿಸ್ತಾನದಿಂದ ಮತ್ತು ಅದರ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಪ್ರಾಯೋಜಿತ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡುವ ಗುರಿಯನ್ನು ಹೊಂದಿತ್ತು. ಆದರೆ, ಭಯೋತ್ಪಾದನಾ ಮೂಲಸೌಕರ್ಯವನ್ನು ರಕ್ಷಿಸುವ ಪ್ರಯತ್ನಗಳನ್ನು ಬೆಂಬಲಿಸುವುದು ತಮ್ಮ ಘನತೆ ಮತ್ತು ಸ್ಥಾನಮಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಯೋಚಿಸುವುದು ತಮ್ಮನ್ನು ಜವಾಬ್ದಾರಿ ಎಂದು ಪರಿಗಣಿಸುವ ರಾಷ್ಟ್ರಗಳ ಜವಾಬ್ದಾರಿಯಾಗಿದೆ” ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಇಂದು ಹೇಳಿದ್ದಾರೆ.

ಇದನ್ನೂ ಓದಿ: ವೋಟರ್​ ಐಡಿ, ಚಾಕೊಲೇಟ್​ಗಳು ಸಿಕ್ಕಿವೆ ಪಹಲ್ಗಾಮ್​ ದಾಳಿಕೋರರು ಪಾಕ್​​ನವರು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?: ಅಮಿತ್ ಶಾ

ಏಪ್ರಿಲ್ 22, 2025ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಲಷ್ಕರ್ ಸಂಬಂಧಿತ ಭಯೋತ್ಪಾದಕರು 26 ಪ್ರವಾಸಿಗರನ್ನು ಗುಂಡಿಕ್ಕಿ ಕೊಂದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಇದಾದ ನಂತರ ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version