ನೂತನ ಸಚಿವರಿಗೆ ಖಾತೆ ಹಂಚಿಕೆ:ಪ್ರಿಯಾಂಕ್​​ ಖರ್ಗೆಗೆ ಗೃಹ, ಇನ್ನುಳಿದ ಯಾರಿಗೆ ಯಾವ ಖಾತೆ? – Kannada News

ಬೆಂಗಳೂರು, (ಜೂನ್ 04): ಡಿಕೆ ಶಿವಕುಮಾರ್ (DK Shivakuamr) ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಡಿಕೆ ಶಿವಕುಮಾರ್ ಜೊತೆ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವ ವಚನ ಸ್ವೀಕರಿಸಿದ್ದ  13 ನೂತನ ಸಚಿವರಿಗೆ ಇಲಾಖೆಗಳ (Portfolios) ಜವಾಬ್ದಾರಿ ನೀಡಲಾಗಿದೆ. ಈ ಪೈಕಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಣಕಾಸು ಇಲಾಖೆ, DPAR ಸೇರಿದಂತೆ ಇತರೆ ಕೆಲ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದು, ಇನ್ನುಳಿದ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಇದರೊಂದಿಗೆ ಆಯಕಟ್ಟಿನ ಹಣಕಾಸು, ಜಲಸಂಪನ್ಮೂಲ, ಗೃಹ, ಲೋಕೋಪಯೋಗಿ, ಬೆಂಗಳೂರು ಅಭಿವೃದ್ದಿ ಮುಂತಾದ ಖಾತೆಗಳು ಯಾರಿಗೆ ಹಂಚಿಕೆಯಾಗಲಿದೆ ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ.

ಕೆಲವರಿಗೆ ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಿಭಾಯಿಸಿದ್ದ ಇಲಾಖೆಗಳ ಜವಾಬ್ದಾರಿಯನ್ನೇ ನೀಡಲಾಗಿದೆ. ಸಚಿವ ಕೃಷ್ಣ ಭೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ (ಜಿಬಿಎ) ನೀಡಲಾಗಿದೆ. ಇನ್ನು ಬೆಂಗಳೂರು ನಗರಭಿವೃದ್ಧಿ ಮೇಲೆ ಕಣ್ಣಿಟ್ಟಿದ್ದ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ನೀಡಲಾಗಿದೆ.

ಯಾರಿಗೆ ಯಾವ ಖಾತೆ?

ಡಿಕೆ ಶಿವಕುಮಾರ್ (ಮುಖ್ಯಮಂತ್ರಿ):- ಹಣಕಾಸು ಇಲಾಖೆ, DPAR  ಮತ್ತು ಇತರೆ ಎಲ್ಲಾ ಖಾತೆಗಳು.

ಡಾ.ಜಿ.ಪರಮೇಶ್ವರ್​ (ಉಪಮುಖ್ಯಮಂತ್ರಿ) :ಕಂದಾಯ  ಹಾಗೂ ಕ್ರೀಡಾ ಹಾಗೂ ಯುವಜನ ಸಬಲೀಕರಣ.

ಪ್ರಿಯಾಂಕ್ ಖರ್ಗೆ- ಗೃಹ ಹಾಗೂ ಐಟಿ-ಬಿಟಿ ಇಲಾಖೆ

ಕೆ.ಜೆ.ಜಾರ್ಜ್- ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ

ಎಂ.ಬಿ.ಪಾಟೀಲ್- ಬೃಹತ್ & ಮಧ್ಯಮ ಕೈಗಾರಿಕೆ ಇಲಾಖೆ

ಸತೀಶ್ ಜಾರಕಿಹೊಳಿ– ಲೋಕೋಪಯೋಗಿ ಇಲಾಖೆ

ಕೃಷ್ಣ ಭೈರೇಗೌಡ– ಬೆಂಗಳೂರು ನಗರಾಭಿವೃದ್ಧಿ(ಜಿಬಿಎ)

ರಾಮಲಿಂಗಾರೆಡ್ಡಿ– ಜಲಸಂಪನ್ಮೂಲ ಇಲಾಖೆ

ಕೆ.ಹೆಚ್.ಮುನಿಯಪ್ಪ– ಆಹಾರ & ನಾಗರಿಕ ಸರಬರಾಜು ಇಲಾಖೆ

ಭೈರತಿ ಸುರೇಶ್– ಸಾರಿಗೆ ಇಲಾಖೆ

ಯು.ಟಿ.ಖಾದರ್– ಆರೋಗ್ಯ ಇಲಾಖೆ

ಡಾ.ಯತೀಂದ್ರ ಸಿದ್ದರಾಮಯ್ಯ– ನಗರಾಭಿವೃದ್ಧಿ ಇಲಾಖೆ

ಶರಣಪ್ರಕಾಶ್ ಪಾಟೀಲ್– ವೈದ್ಯಕೀಯ ಶಿಕ್ಷಣ ಇಲಾಖೆ

ಈಶ್ವರ್ ಖಂಡ್ರೆ- ಗ್ರಾಮೀಣಾಭಿವೃದ್ಧಿ ಇಲಾಖೆ

Source link

ಬಿಜೆಪಿ ತೊರೆದು ಹೊಸ ಪಕ್ಷ ಘೋಷಣೆ? ನಾಳೆ ಅಣ್ಣಾಮಲೈ ಮುಂದಿನ ಹೆಜ್ಜೆ ಪ್ರಕಟ – Kannada News

ಚೆನ್ನೈ, ಜೂನ್ 4: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ರಾಜ್ಯ ಬಿಜೆಪಿ (BJP) ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಅವರು ಪಕ್ಷವನ್ನು ತೊರೆಯುವುದು ಬಹುತೇಕ ಖಚಿತವಾಗಿದೆ. ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ಈಗ ಅಧಿಕೃತ ಮುದ್ರೆ ಬಿದ್ದಿದ್ದು, ನಾಳೆ (ಶುಕ್ರವಾರ) ಅವರು ತಮ್ಮ ಮುಂದಿನ ರಾಜಕೀಯ ಆಥವಾ ವೈಯಕ್ತಿಕ ಹೆಜ್ಜೆಯ ಕುರಿತು ಮಹತ್ವದ ಪ್ರಕಟಣೆ ಹೊರಡಿಸಲಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮರುಸಂಘಟನೆ ನಡೆದಿದೆ. ನಟ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷದೊಂದಿಗೆ ಕಾಂಗ್ರೆಸ್ ಕೈಜೋಡಿಸಿ ಸರ್ಕಾರ ರಚಿಸಲು ಮುಂದಾದ ಬೆನ್ನಲ್ಲೇ, ತಮಿಳುನಾಡಿನಲ್ಲಿ ಬಿಜೆಪಿಯ ಭವಿಷ್ಯ ಮತ್ತು ಕಾರ್ಯತಂತ್ರದ ಕುರಿತು ಭಿನ್ನಾಭಿಪ್ರಾಯಗಳು ತಲೆದೋರಿದ್ದವು ಎನ್ನಲಾಗಿದೆ. ತಮಿಳುನಾಡಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಅಣ್ಣಾಮಲೈ ತೋರಿದ ಆಕ್ರಮಣಕಾರಿ ಶೈಲಿಗೆ ಸ್ಥಳೀಯವಾಗಿ ಮತ್ತು ಕೇಂದ್ರದ ಕೆಲವು ನಾಯಕರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎಂಬ ಅಸಮಾಧಾನವೂ ಈ ನಿರ್ಧಾರದ ಹಿಂದೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಅಮಿತ್ ಶಾ ಜೊತೆ ಅಣ್ಣಾಮಲೈ ಮಾತುಕತೆ; ಮನವೊಲಿಕೆಗೆ ಬಿಜೆಪಿ ಹೈಕಮಾಂಡ್ ಕಸರತ್ತು

ಅಣ್ಣಾಮಲೈ ಅವರು ಬಿಜೆಪಿ ತೊರೆಯುವುದು ಖಚಿತವಾದ ಬೆನ್ನಲ್ಲೇ, ಅವರ ಮುಂದಿನ ನಡೆ ಏನು ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಅವರು ಈ ಬಗ್ಗೆ ಘೋಷಿಸುವ ನಿರೀಕ್ಷೆಯಿದೆ. ತಮಿಳುನಾಡಿನ ಯುವಜನತೆ ಮತ್ತು ಮತದಾರರಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಅಣ್ಣಾಮಲೈ, ಸ್ವಂತ ರಾಜಕೀಯ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ. ಅಥವಾ ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಬೇರೆ ಯಾವುದಾದರೂ ಪ್ರಮುಖ ಪಕ್ಷದೊಂದಿಗೆ ಕೈಜೋಡಿಸುವ ನಿರ್ಧಾರವನ್ನೂ ಪ್ರಕಟಿಸಬಹುದು.

ಇಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಣ್ಣಾಮಲೈ, “ನಾಳೆ (ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ, ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮೆಲ್ಲರೊಂದಿಗೆ ಸಂವಹನ ನಡೆಸಲು, ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಪ್ರಾಮಾಣಿಕವಾಗಿ, ಹೃದಯದಿಂದ ಸಂಭಾಷಣೆ ನಡೆಸಲು ನಾನು ಕಾಯುತ್ತಿದ್ದೇನೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ; ಬಿಜೆಪಿಗೆ ಕೆ. ಅಣ್ಣಾಮಲೈ ದಿಢೀರ್ ರಾಜೀನಾಮೆ

ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಕಳೆ ಬಂದಿತ್ತು. ದ್ರಾವಿಡ ರಾಜಕಾರಣದ ಭದ್ರಕೋಟೆಯಲ್ಲಿ ಬಿಜೆಪಿಯನ್ನು ಪ್ರಮುಖ ಪರ್ಯಾಯ ಶಕ್ತಿಯಾಗಿ ಬೆಳೆಸಲು ಅವರು ತೀವ್ರ ಶ್ರಮವಹಿಸಿದ್ದರು. ಬಳಿಕ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಈಗ ಅವರೇ ಪಕ್ಷದಿಂದ ಹೊರನಡೆಯುತ್ತಿರುವುದು ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುತ್ತಿರುವ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆ ಒಂದು ಪಂದ್ಯಕ್ಕೆ ಏಕೆ ಅಷ್ಟೊಂದು ಮನ್ನಣೆ’?; ವಿಶ್ವಕಪ್​ಗೂ ಮುನ್ನ ಸ್ಮೃತಿ ಮನವಿ – Kannada News

2026 ರ ಮಹಿಳಾ ಟಿ20 ವಿಶ್ವಕಪ್ (2026 Women’s T20 World Cup) ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಚುಟುಕು ಸಮರ ಜೂನ್ 12 ರಿಂದ ಜುಲೈ 5 ರವರೆಗೆ ನಡೆಯಲಿದೆ. ಭಾರತ ವನಿತಾ ಪಡೆ ಜೂನ್ 14 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ( India vs Pakistan) ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯಕ್ಕಾಗಿ ಇಡೀ ವಿಶ್ವ ಕ್ರಿಕೆಟ್ ಕಾದು ಕುಳಿತಿದೆ. ಏಕೆಂದರೆ ಉಭಯ ದೇಶಗಳ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಕ್ಕೆ ವಿಶೇಷ ಅಭಿಮಾನಿಗಳ ಬಳಗವೇ ಇದೆ. ಅದು ಪುರುಷರ ಕ್ರಿಕೆಟ್ ಆಗಿರಲಿ ಅಥವಾ ಮಹಿಳಾ ಕ್ರಿಕೆಟ್ ಆಗಿರಲಿ, ಪಂದ್ಯ ನಡೆದಾಗಲೆಲ್ಲ ಮೈದಾನಗಳು ತುಂಬಿ ತುಳುಕುತ್ತವೆ. ಆದರೆ ಈ ಪಂದ್ಯ ನಡೆಯುವುದಕ್ಕೂ ಮುನ್ನವೇ ಭಾರತ ಮಹಿಳಾ ತಂಡದ ಉಪನಾಯಕಿ ಮತ್ತು ಸ್ಟಾರ್ ಓಪನರ್ ಸ್ಮೃತಿ ಮಂಧಾನ (Smriti Mandhana) ಮಾಧ್ಯಮ ಮತ್ತು ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ.

ಹೈಪ್ ಸೃಷ್ಟಿಸುವ ಅಗತ್ಯವಿಲ್ಲ

ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಸ್ಮೃತಿ ಮಂಧಾನ ಮಾತನಾಡಿ, ‘ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಭಾರತ-ಪಾಕಿಸ್ತಾನ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದವು. ಇದನ್ನು ಉಲ್ಲೇಖಿಸಿರುವ ಮಂಧಾನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಾತ್ರವಲ್ಲ.. ಇತರ ಪಂದ್ಯಗಳಿಗೂ ಅದೇ ಮಟ್ಟದ ಕ್ರೇಜ್ ಇರಬೇಕೆಂದು ನಾನು ಬಯಸುತ್ತೇನೆ. ಈ ಒಂದು ಪಂದ್ಯಕ್ಕೆ ವಿಶೇಷ ಹೈಪ್ ಸೃಷ್ಟಿಸುವ ಅಗತ್ಯವಿಲ್ಲ, ಏಕೆಂದರೆ ಈಗಾಗಲೇ ಅದರ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಟೂರ್ನಿಯಾದ್ಯಂತ ಎಲ್ಲಾ ಅಭಿಮಾನಿಗಳು ನಮ್ಮನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಮಹಿಳಾ ಕ್ರಿಕೆಟ್ ಪ್ರಸ್ತುತ ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸುತ್ತಿದೆ ಮತ್ತು ಪ್ರತಿಯೊಂದು ತಂಡದಲ್ಲೂ ಸಾಕಷ್ಟು ಪ್ರತಿಭಾನ್ವಿತ ಆಟಗಾರ್ತಿಯರು ಇದ್ದಾರೆ. ಹೀಗಾಗಿ ಅಭಿಮಾನಿಗಳು, ಕ್ರೀಡಾ ವಿಶ್ಲೇಷಕರು ಮತ್ತು ಮಾಧ್ಯಮಗಳು ಭಾರತ-ಪಾಕ್ ಪಂದ್ಯಕ್ಕೆ ಮಾತ್ರವಲ್ಲದೆ ಪಂದ್ಯಾವಳಿಯ ಇತರ ಎಲ್ಲಾ ಪಂದ್ಯಗಳಿಗೂ ಸಮಾನ ಗಮನ ನೀಡಬೇಕು, ಆಗ ಮಾತ್ರ ಮಹಿಳಾ ಕ್ರಿಕೆಟ್‌ಗೆ ನಿಜವಾದ ಮನ್ನಣೆ ಸಿಗುತ್ತದೆ ಎಂದಿದ್ದಾರೆ.

ಲೀಗ್ ಹಂತದಲ್ಲಿ ಭಾರತದ ವೇಳಾಪಟ್ಟಿ

ಈ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಾತ್ರವಲ್ಲದೆ ಇತರ ಕೆಲವು ಬಲಿಷ್ಠ ತಂಡಗಳನ್ನೂ ಎದುರಿಸಬೇಕಾಗಿದೆ. ಜೂನ್ 14 ರಂದು ಪಾಕಿಸ್ತಾನ ವಿರುದ್ಧ ಭಾರತ ಗುಂಪು ಹಂತದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅದರ ನಂತರ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಲೀಗ್ ಪಂದ್ಯಗಳನ್ನು ಆಡಲಿದೆ. ಆದ್ದರಿಂದ, ಪಂದ್ಯಾವಳಿಯಲ್ಲಿ ಮುಂದುವರಿಯಲು ಪ್ರತಿಯೊಂದು ಪಂದ್ಯವು ಬಹಳ ಮುಖ್ಯ ಎಂಬುದು ಸ್ಮೃತಿ ಮಂಧಾನ ಅವರ ಅಭಿಪ್ರಾಯವಾಗಿದೆ.

Womens T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

ಭಾರತ- ಪಾಕ್ ಮುಖಾಮುಖಿ ದಾಖಲೆ

ಮಹಿಳಾ ಟಿ20 ಕ್ರಿಕೆಟ್ ಇತಿಹಾಸವನ್ನು ನೋಡಿದರೆ, ಭಾರತ ತಂಡವು ಪಾಕಿಸ್ತಾನದ ವಿರುದ್ಧ ಅಜೇಯ ದಾಖಲೆಯನ್ನು ಹೊಂದಿದೆ. ಇಲ್ಲಿಯವರೆಗೆ, ಎರಡೂ ತಂಡಗಳು 16 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಟೀಂ ಇಂಡಿಯಾ 13 ಬಾರಿ ಗೆದ್ದಿದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎರಡು ವರ್ಷಗಳ ಹಿಂದೆ 2024 ರ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದಾಗ ಭಾರತ ತಂಡ, ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಹೀಗಾಗಿ ಈ ಬಾರಿಯೂ ಟೀಂ ಇಂಡಿಯಾವೇ ಗೆಲ್ಲುತ್ತದೆ ಎಂಬುದು ಅಭಿಮಾನಿಗಳ ಆಶಯವಾಗಿದೆ.

Published On – 9:13 pm, Thu, 4 June 26

Source link

15 ಲಕ್ಷ ಕೋಟಿ ರೂ ವಂಚನೆ: ಷೇರು ಮಾರ್ಕೆಟ್​ನಿಂದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ನಿಷೇಧ – Kannada News

ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ Image Credit source: wikipedia

ಬೆಂಗಳೂರು, ಜೂನ್​ 04: ಬೆಂಗಳೂರು (bangaluru) ಮೂಲದ ಚಿನ್ನ ಸಂಸ್ಕರಣೆ ಮತ್ತು ಆಭರಣ ರಫ್ತು ಕಂಪನಿಯಾದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ವಿರುದ್ಧ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಭಾರಿ ಶಿಸ್ತುಕ್ರಮ ಜರುಗಿಸಿದೆ. ಕಂಪನಿಯು ಆರ್ಥಿಕ ಅಕ್ರಮ ಎಸಗಿರುವ ಗಂಭೀರ ಆರೋಪ ಹಿನ್ನೆಲೆ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮೆಹ್ತಾಗೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸದಂತೆ ತಾತ್ಕಾಲಿಕ ನಿಷೇಧ ಹೇರಿ ಮಧ್ಯಂತರ ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • ಷೇರು ಮಾರ್ಕೆಟ್​ನಿಂದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ನಿಷೇಧ
  • ನಕಲಿ ಆದಾಯ ಆರೋಪ ಮತ್ತು ಹೂಡಿಕೆದಾರರಿಗೆ ವಂಚನೆ
  • ಬೆಂಗಳೂರಿನಲ್ಲಿರುವ 1989ರಲ್ಲಿ ಸ್ಥಾಪನೆಯಾಗಿದ್ದ REL ಕಂಪನಿ

ನಕಲಿ‌ ಆದಾಯ ತೋರಿಸಿ ಹೂಡಿಕೆದಾರರಿಗೆ ವಂಚನೆ

1989ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿದ್ದ ಈ ಕಂಪನಿಯು, ಈ ಹಿಂದೆ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಚಿನ್ನದ ರಫ್ತುದಾರ ಎಂದು ಗುರುತಿಸಿಕೊಂಡಿತ್ತು. ಈ ಕಂಪನಿಯು 2021 ರಿಂದ 2025ರ ನಡುವಿನ ಅವಧಿಯಲ್ಲಿ ತನ್ನ ವಾರ್ಷಿಕ ಆದಾಯವನ್ನು ಬರೋಬ್ಬರಿ 15.15 ಲಕ್ಷ ಕೋಟಿ ರೂಪಾಯಿಗಳಷ್ಟು ಅತಿಯಾಗಿ ತೋರಿಸುವ ಮೂಲಕ ಹೂಡಿಕೆದಾರರಿಗೆ ವಂಚಿಸಿದೆ ಎಂಬ ದೂರು ಕೇಳಿಬಂದಿದೆ. ಕಂಪನಿಯ ಒಟ್ಟು ವರಮಾನದ ಸುಮಾರು ಭಾಗ ನಕಲಿ ಎಂಬ ಆಘಾತಕಾರಿ ಅಂಶ ಸೆಬಿಯ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರು: ಎಸ್​​ಬಿಐ ಬ್ಯಾಂಕ್ ಒಕ್ಕೂಟಕ್ಕೆ ಕೋಟ್ಯಂತರ ರೂ ವಂಚನೆ; ದೀಪಕ್ ಕೇಬಲ್ಸ್ ಲಿಮಿಟೆಡ್ ನಿರ್ದೇಶಕ ಅರೆಸ್ಟ್

ಇನ್ನು ಈ ಪ್ರಕರಣ ಬೆಳಕಿಗೆ ಬಂದಿದ್ದು 2024ರ ಮಾರ್ಚ್ 11ರಂದು ಸಾಮಾನ್ಯ ಹೂಡಿಕೆದಾರನೊಬ್ಬ ಸೆಬಿ ಮೆಟ್ಟಿಲೇರಿದಾಗ. ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿಯು ತನ್ನ ಲೆಕ್ಕಪತ್ರಗಳಲ್ಲಿ ತೋರಿಸಿದ್ದ ಕೋಟ್ಯಂತರ ರೂ ವ್ಯಾಪಾರ ಬಾಕಿ ಮೊತ್ತ ಕಳೆದ ಎರಡು ವರ್ಷಗಳಿಂದಲೂ ವಸೂಲಾಗದೆ ಹಾಗೇ ಉಳಿದಿದ್ದನ್ನು ಆ ದೂರುದಾರ ಪ್ರಶ್ನಿಸಿದ್ದ. ಸಾಮಾನ್ಯವಾಗಿ ಇಷ್ಟು ಸುದೀರ್ಘ ಕಾಲ ಬೃಹತ್ ಮೊತ್ತದ ಹಣ ಬಾಕಿ ಉಳಿದಿರುವುದು ಕಂಪನಿಯ ದಿವಾಳಿತನ ಅಥವಾ ವ್ಯವಸ್ಥಿತ ಲೆಕ್ಕಪತ್ರ ವಂಚನೆ ಎನ್ನಲಾಗಿದೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಸೆಬಿ, 2024ರ ಅಕ್ಟೋಬರ್‌ನಲ್ಲಿ ವಿಶೇಷ ತನಿಖಾ ಅಧಿಕಾರಿಯನ್ನು ನೇಮಿಸಿತ್ತು.

ಆರೋಪ ತಳ್ಳಿಹಾಕಿದ ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಕಂಪನಿ

ಇನ್ನು ತನ್ನ ಮೇಲೆ ಬಂದಿರುವ ಅಕ್ರಮ ಆರೋಪಗಳನ್ನು ತಳ್ಳಿಹಾಕಿರುವ ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಕಂಪನಿಯು, ‘ತಾನು ಘೋಷಿಸಿರುವ ವಾರ್ಷಿಕ ಆದಾಯದ ವಿವರಗಳು ಸಂಪೂರ್ಣವಾಗಿ ನಿಖರ ಹಾಗೂ ಸರಿಯಾಗಿವೆ ಎಂದು ಸ್ಪಷ್ಟನೆ ನೀಡಿದೆ. ಸೆಬಿ ಮತ್ತು ತನ್ನ ಕಂಪನಿ ನಡುವೆ ಮಾಹಿತಿ ವಿನಿಮಯದ ಕೊರತೆ ಹಾಗೂ ಗೊಂದಲ ಉಂಟಾಗಿರುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಿವಾಜಿ ಚಿತ್ರವಿರುವ ಟಿ-ಶರ್ಟ್ ಧರಿಸಿ ರಿತೇಶ್ ದೇಶ್‌ಮುಖ್ ಪಾರ್ಟಿ; ಕ್ಷಮೆ ಕೇಳಿದ ನಟ – Kannada News

ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಖ್ಯಾತ ನಟ-ನಿರ್ದೇಶಕ ರಿತೇಶ್ ದೇಶ್‌ಮುಖ್ (Riteish Deshmukh) ಅವರು ತಮ್ಮ ಇತ್ತೀಚಿನ ಸೂಪರ್ ಹಿಟ್ ಮರಾಠಿ ಸಿನಿಮಾ ‘ರಾಜಾ ಶಿವಾಜಿ’ (Raja Shivaji) ಚಿತ್ರದ ಸಕ್ಸಸ್ ಪಾರ್ಟಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ವಿವಾದಕ್ಕೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಪಾರ್ಟಿಯ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಅವರ ಉಡುಪು ಮತ್ತು ನಡತೆಯ ಬಗ್ಗೆ ಕೇಳಿಬಂದಿದ್ದ ಗಂಭೀರ ಆರೋಪಗಳನ್ನು ಖಡಕ್ ಆಗಿ ನಿರಾಕರಿಸಿದ್ದಾರೆ.

‘ರಾಜಾ ಶಿವಾಜಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಅಭೂತಪೂರ್ವ ಯಶಸ್ಸಿನ ಬಳಿಕ ಚಿತ್ರತಂಡಕ್ಕೆ ಧನ್ಯವಾದ ತಿಳಿಸಲು ಈ ಖಾಸಗಿ ಪಾರ್ಟಿಯನ್ನು ಆಯೋಜಿಸಲಾಗಿತ್ತು ಎಂದು ರಿತೇಶ್ ತಿಳಿಸಿದ್ದಾರೆ. ತಾವು ಛತ್ರಪತಿ ಶಿವಾಜಿ ಮಹಾರಾಜರ ಪರಮ ಭಕ್ತರಾಗಿದ್ದು, ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

ಪಾರ್ಟಿಯ ವೇಳೆ ರಿತೇಶ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವಿರುವ ಟಿ-ಶರ್ಟ್ ಧರಿಸಿ ಸಂಭ್ರಮಿಸುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ವಿನಮ್ರವಾಗಿ ಉತ್ತರಿಸಿರುವ ರಿತೇಶ್, ‘ಶಿವಾಜಿ ಮಹಾರಾಜರ ಚಿತ್ರವಿರುವ ಟಿ-ಶರ್ಟ್ ಧರಿಸಿ ಪಾರ್ಟಿ ಮಾಡುವ ಮೂಲಕ ಅವರಿಗೆ ಅಪಮಾನ ಮಾಡುವ ಯಾವುದೇ ಉದ್ದೇಶ ನನಗಿರಲಿಲ್ಲ. ಸಿನಿಮಾದ ಪ್ರಚಾರದ ವೇಳೆ ನಾನು ಅದೇ ಟಿ-ಶರ್ಟ್ ಧರಿಸಿದ್ದೆ. ಅಂದು ಪ್ರಚಾರದ ಕೆಲಸ ಮುಗಿಸಿ ನೇರವಾಗಿ ಪಾರ್ಟಿಗೆ ಬರಬೇಕಾದ್ದರಿಂದ, ಉಡುಪು ಬದಲಾಯಿಸಲು ಸಾಧ್ಯವಾಗಲಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ’ ಎಂದು ಕ್ಷಮೆಯಾಚಿಸಿದ್ದಾರೆ.

ರಿತೇಶ್ ದೇಶ್‌ಮುಖ್ ವೈರಲ್ ವಿಡಿಯೋ:

ಇದೇ ಪಾರ್ಟಿಯಲ್ಲಿ ರಿತೇಶ್ ದೇಶ್‌ಮುಖ್ ಮದ್ಯ ಸೇವಿಸುತ್ತಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು. ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ‘ನಾನು ನನ್ನ ಜೀವನದಲ್ಲಿ ಇದುವರೆಗೂ ಎಂದೂ ಮದ್ಯ ಸೇವಿಸಿಲ್ಲ, ಮುಂದಿನ ದಿನಗಳಲ್ಲೂ ಅದನ್ನು ಮುಟ್ಟುವುದಿಲ್ಲ. ಆದ್ದರಿಂದ ಇಂತಹ ಆರೋಪಗಳು ಸತ್ಯಕ್ಕೆ ತೀರಾ ದೂರವಾಗಿವೆ. ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಗೆ ನಮ್ಮ ಪಾರ್ಟಿಗೆ ಆಹ್ವಾನವೇ ಇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಆದಾಗ್ಯೂ, ನನ್ನ ಈ ಕ್ರಿಯೆಯಿಂದ ಯಾರದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ, ಶಿವಾಜಿ ಮಹಾರಾಜರ ಒಬ್ಬ ಅನುಯಾಯಿ ಆಗಿ ನಾನು ಮನಸಾರೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ರಿತೇಶ್ ಹೇಳಿದ್ದಾರೆ. ಈ ಮೂಲಕ ಅವರು ಎಲ್ಲ ವಿವಾದಗಳಿಗೆ ಫುಲ್ ಸ್ಟಾರ್ ಇಟ್ಟಿದ್ದಾರೆ. ಶಿವಾಜಿ ಮಹಾರಾಜರ ಬಗ್ಗೆ ತಮಗೆ ಅಪಾರ ಗೌರವ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ರಾಜ ಶಿವಾಜಿ’ ಚಿತ್ರದಿಂದ ರಿತೇಶ್​​ಗೆ ದೊಡ್ಡ ಗೆಲುವು; ಸಿನಿಮಾ ಕಂಡ ಲಾಭ ಎಷ್ಟು?

‘ಛತ್ರಪತಿ ಶಿವಾಜಿ ಮಹಾರಾಜರು ನಮ್ಮೆಲ್ಲರ ನಂಬಿಕೆ, ಸ್ಫೂರ್ತಿ ಮತ್ತು ಸ್ವಾಭಿಮಾನದ ಸಂಕೇತ. ಅವರ ಮೇಲೆ ನನ್ನ ಹೃದಯದಲ್ಲಿ ಅಪಾರ ಗೌರವ, ಪ್ರೀತಿ ಮತ್ತು ನಿಷ್ಠೆ ಇದೆ. ಈ ಭಾವನೆ ಇಂದಿಗೂ ಮತ್ತು ಎಂದೆಂದಿಗೂ ಹೀಗೆಯೇ ಇರುತ್ತದೆ. ಜೈ ಶಿವರಾಯ್’ ಎಂದು ಬರೆಯುವ ಮೂಲಕ ರಿತೇಶ್ ದೇಶ್‌ಮುಖ್ ಅವರು ವಿವಾದವನ್ನು ಅಂತ್ಯಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಪ್ರಕಟ; 11 ನಾಯಕರಿಗೆ ಟಿಕೆಟ್ – Kannada News

ದೆಹಲಿ, ಜೂನ್ 4: ಮುಂಬರುವ ರಾಜ್ಯಸಭೆಯ ಉಪಚುನಾವಣೆ (Rajya Sabha Elections) ಹಾಗೂ ಖಾಲಿ ಇರುವ ಸ್ಥಾನಗಳಿಗಾಗಿ ಬಿಜೆಪಿ ತನ್ನ 11 ಅಧಿಕೃತ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಪಕ್ಷದ ಹಿರಿಯ ನಾಯಕರು ಮತ್ತು ವಿವಿಧ ರಾಜ್ಯಗಳ ಪ್ರಮುಖ ಮುಖಂಡರಿಗೆ ಈ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲಾಗಿದ್ದು, ರಾಜಸ್ಥಾನದಿಂದ ಸತೀಶ್ ಪೂನಿಯಾ ಮತ್ತು ಮಧ್ಯಪ್ರದೇಶದಿಂದ ತರುಣ್ ಚುಗ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಬಿಜೆಪಿಯಿಂದ ರಾಜಸ್ಥಾನದಿಂದ ಸತೀಶ್ ಪೂನಿಯಾ ಮತ್ತು ಮಧ್ಯಪ್ರದೇಶದಿಂದ ತರುಣ್ ಚುಗ್ ಅವರನ್ನು ಕಣಕ್ಕಿಳಿಸಲಾಗಿದೆ. ಅರುಣಾಚಲ ಪ್ರದೇಶದಿಂದ ತಾಯಿ ತಾಗಕ್ ಸ್ಪರ್ಧಿಸಲಿದ್ದರೆ, ಗುಜರಾತ್‌ನಿಂದ ರಾಜುಭಾಯ್ ಶುಕ್ಲಾ, ಮುಖೇಶ್‌ಭಾಯ್ ರಾಥ್ವಾ, ಮಾನಸಿಂಗ್ ಪರ್ಮಾರ್ ಮತ್ತು ಜಿತೇಂದ್ರ ಮೇಘ್ ಜಿಭಾಯ್ ಕಂಜಾರಿಯಾ ಸ್ಪರ್ಧಿಸಲಿದ್ದಾರೆ. ಮಧ್ಯಪ್ರದೇಶದಿಂದ ತರುಣ್ ಚುಗ್ ಮತ್ತು ರಜನೀಶ್ ಅಗರ್ವಾಲ್ ಹಾಗೂ ಮಣಿಪುರದಿಂದ ಎ. ಶಾರದಾ ದೇವಿ ಅವರಿಗೆ ಟಿಕೆಟ್ ನೀಡಲಾಗಿದೆ.

ರಾಜಸ್ಥಾನ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರಾದ ಸತೀಶ್ ಪೂನಿಯಾ ಅವರಿಗೆ ರಾಜಸ್ಥಾನದಿಂದ ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್ ನೀಡಲಾಗಿದೆ. ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಅವರಿಗೆ ಈಗ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗುತ್ತಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ತರುಣ್ ಚುಗ್ ಅವರನ್ನು ಮಧ್ಯಪ್ರದೇಶದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ‘ಕೈ’ನಲ್ಲಿ ಭಾರಿ ಪೈಪೋಟಿ: ಮುಂಚೂಣಿಯಲ್ಲಿವೆ ಕೆಲ ನಾಯಕರ ಹೆಸರು

ಇವರೊಂದಿಗೆ ವಿವಿಧ ರಾಜ್ಯಗಳ ಒಟ್ಟು 11 ಜನ ನಾಯಕರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ರಾಜ್ಯವಾರು ಸಮೀಕರಣ ಮತ್ತು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಆಯ್ಕೆ ಮಾಡಲಾಗಿದೆ. ವಿವಿಧ ರಾಜ್ಯಗಳಲ್ಲಿ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಈ ಬಿಜೆಪಿ ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತವಾಗಿದೆ. ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮತ್ತು ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಅನುಕೂಲ ಮಾಡಿಕೊಳ್ಳಲು ಬಿಜೆಪಿ ಈ ತಂತ್ರ ರೂಪಿಸಿದೆ. ಪ್ರಾದೇಶಿಕ ನಾಯಕರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಪಕ್ಷದ ಸಂಘಟನೆಯನ್ನು ಬಲಪಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.

ಕಳೆದ ತಿಂಗಳು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿಗ್ವಿಜಯ್ ಸಿಂಗ್ ಸೇರಿದಂತೆ ಹಾಲಿ ಸದಸ್ಯರ ನಿವೃತ್ತಿಯಿಂದಾಗಿ ಖಾಲಿ ಇರುವ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿತ್ತು. ಜೂನ್ 21ರಿಂದ ಜುಲೈ 19ರ ನಡುವೆ ವಿವಿಧ ದಿನಾಂಕಗಳಲ್ಲಿ ಸದಸ್ಯರು ನಿವೃತ್ತರಾಗುತ್ತಿರುವ 10 ರಾಜ್ಯಗಳಲ್ಲಿ ಈ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ: ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

ರಾಜ್ಯಸಭಾ ಚುನಾವಣೆಯು ಆಂಧ್ರಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ 4 ಸ್ಥಾನಗಳಿಗೆ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 3 ಸ್ಥಾನಗಳಿಗೆ, ಜಾರ್ಖಂಡ್‌ನಲ್ಲಿ 2 ಸ್ಥಾನಗಳಿಗೆ ಹಾಗೂ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಲ್ಲಿ ತಲಾ ಒಂದು ಸ್ಥಾನಕ್ಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೆಯ ದಿನವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿದ್ರೆಗೆ ಭಂಗ ಉಂಟಾಗಲು ನಿಮ್ಮ ಈ ಅಭ್ಯಾಸಗಳೇ ಕಾರಣ – Kannada News

ಆಹಾರ, ನೀರಿನಂತೆ ಮನುಷ್ಯನಿಗೆ ನಿದ್ರೆಯೂ (sleep) ತುಂಬಾ ಮುಖ್ಯ. 8 ರಿಂದ 9 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಉತ್ತಮವಾಗಿರುತ್ತದೆ. ಆದರೆ ಇಂದು ಹೆಚ್ಚಿನವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೌದು ಅನೇಕರಿಗೆ ಎಷ್ಟೇ ಪ್ರಯತ್ನಪಟ್ಟರೂ ರಾತ್ರಿ ನಿದ್ರೆ ಮಾಡಲು ಸಖತ್‌ ಕಷ್ಟಕರವಾಗುತ್ತದೆ. ನಿದ್ರಾಹೀನತೆಗೆ ಈ ಕೆಲವೊಂದು ಅಭ್ಯಾಸಗಳೇ ಕಾರಣವಂತೆ. ಈ ಅಭ್ಯಾಸಗಳನ್ನು ತ್ಯಜಿಸಿದರೆ ನೀವು ಸಹ ರಾತ್ರಿಯಲ್ಲಿ ಉತ್ತಮವಾಗಿ ನಿದ್ರೆ ಮಾಡಬಹುದು. ನಿದ್ರೆಗೆ ಭಂಗ ತರುವಂತಹ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ನಿದ್ರಾಹೀನತೆಗೆ ಈ ಅಭ್ಯಾಸಗಳೇ ಮುಖ್ಯ ಕಾರಣ:

ಫೋನ್‌ ನೋಡುವುದು: ಮಲಗುವ ಮುನ್ನ ಅತಿಯಾಗಿ ಫೋನ್‌ ಬಳಸುವ ಅಭ್ಯಾಸ ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೌದು ಫೋನ್‌ನಿಂದ ಹೊರಸೂಸುವ ನೀಲಿ ಬೆಳಕು  ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ ಮತ್ತು ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಈ ನೀಲಿ ಬೆಳಕು  ನಿದ್ರೆ-ಎಚ್ಚರ ಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ನಿಗ್ರಹಿಸಬಹುದು. ಮೆಲಟೋನಿನ್ ಕೊರತೆಯು ನಿದ್ರಾಹೀನತೆ, ಕಿರಿಕಿರಿ ಮತ್ತು ಹಗಲಿನ ನಿದ್ರೆಗೆ ಕಾರಣವಾಗಬಹುದು.

ಕಾಫಿ, ಮದ್ಯಪಾನ  ಸೇವನೆ: ಕಾಫಿ ಮತ್ತು ಆಲ್ಕೋಹಾಲ್ ನಲ್ಲಿರುವ ಕೆಫೀನ್ ನಿಮ್ಮ ನಿದ್ರೆಯ ಮಾದರಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಲಗುವ ನಾಲ್ಕು ಗಂಟೆಗಳ ಮುನ್ನ ಕಾಫಿ ಅಥವಾ ಟೀ ಕುಡಿಯುವುದರಿಂದ ನಿದ್ರೆ ಮಾಡಲು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ರಾತ್ರಿ ಹೊತ್ತು ಮಧ್ಯಪಾನ, ಕೆಫೀನ್‌ ಸೇವನೆಯನ್ನು  ತಪ್ಪಿಸಿ.

ಭಾರವಾದ ಆಹಾರ ಸೇವನೆ: ಮಲಗುವ ಸ್ವಲ್ಪ ಅಥವಾ ಒಂದು ಗಂಟೆ ಮೊದಲು ಭಾರವಾದ ಊಟ ಮಾಡುವ ಅಣ್ಯಾಸವು ನಿದ್ರೆಗೆ ಅಡ್ಡಿಯುಂಟುಮಾಡುತ್ತದೆ. ಭಾರವಾದ ಆಹಾರ ಸೇವಿಸಿದರೆ ಅದು ನೀವು ಹಾಸಿಗೆಯಲ್ಲಿ ಮಲಗಿದ ನಂತರವೂ ನಿಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ನಿದ್ರೆ ಅಡ್ಡಿಯುಂಟಾಗುತ್ತದೆ.

ಹಗಲಿನಲ್ಲಿ ಮಲಗುವ ಅಭ್ಯಾಸ: ಕೆಲವು ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸ  ರಾತ್ರಿಯಲ್ಲಿ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸ್ಪಷ್ಟವಾಗಿ ಹಾಳುಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?

ಸಿಗರೇಟ್‌ ಸೇವನೆ: ಮಲಗುವ ಮುನ್ನ ಸಿಗರೇಟ್‌ ಸೇದುವುದರಿಂದ ನಿದ್ರೆಗೆ ಭಂಗ ಬರಬಹುದು. ತಂಬಾಕಿನಲ್ಲಿರುವ ನಿಕೋಟಿನ್‌ ಅಂಶ ಮೆದುಳನ್ನು ಉತ್ತೇಜಿಸುತ್ತದೆ. ಇದು ನಿದ್ರೆಗೆ ಭಂಗ ಉಂಟುಮಾಡುತ್ತದೆ.

ಅತಿಯಾದ ಯೋಚನೆ: ಹೆಚ್ಚು ಯೋಚಿಸುವ ಅಭ್ಯಾಸ ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಅತಿಯಾದ ಯೋಚನೆ ಮತ್ತು ಒತ್ತಡವು ನಿದ್ರಾಹೀನತೆಗೆ ಕಾರಣವಾಗಬಹುದು.

ಒತ್ತಡ: ಹೆಚ್ಚಿನ ಮಟ್ಟದ ಒತ್ತಡವು ನಿದ್ರೆಗೆ ಭಂಗ ತರುತ್ತದೆ. ನಿದ್ರೆಯ ಕೊರತೆಯು ನಮ್ಮ ದೇಹದ ಒತ್ತಡ ಪ್ರತಿಕ್ರಿಯೆ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ, ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ನಿದ್ರೆಯನ್ನು ಮತ್ತಷ್ಟು ಅಡ್ಡಿಪಡಿಸುತ್ತದೆ. ಇದಲ್ಲದೆ, ಜಡ ಜೀವನಶೈಲಿಯು ನಿದ್ರಾಹೀನತೆಗೆ ಪ್ರಮುಖ ಕಾರಣವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು – Kannada News

ಕನ್ನಡದಲ್ಲಿ ‘ಬಾಸ್’ ಹೆಸರಿನ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾದ ಟ್ರೈಲರ್ (Trailer) ಕೆಲ ವಾರಗಳ ಮುಂಚೆ ಬಿಡುಗಡೆ ಆಗಿತ್ತು. ಸಿನಿಮಾದ ಟ್ರೈಲರ್ ನೋಡಿದವರಿಗೆ ಇದು ನಟ ದರ್ಶನ್ ಅವರ ರೇಣುಕಾ ಸ್ವಾಮಿ ಪ್ರಕರಣ ಕುರಿತಾದದ್ದೇ ಕತೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಆದರೆ ಚಿತ್ರತಂಡ ಅದನ್ನು ಉದ್ದೇಶಪೂರ್ವಕವಾಗಿ ಅಲ್ಲಗಳೆಯುತ್ತಲೇ ಬಂದಿತ್ತು. ಕೆಲ ವಾರಗಳ ಹಿಂದೆ ದರ್ಶನ್ ಕಡೆಯಲು ಚಿತ್ರತಂಡಕ್ಕೆ ನೊಟೀಸ್ ಕಳಿಸಿ ಟ್ರೈಲರ್ ತೆಗೆಯುವಂತೆ ಆಗ್ರಹಿಸಿದ್ದರು. ಇದೀಗ ‘ಬಾಸ್’ ಚಿತ್ರತಂಡವು ಈ ಸುದ್ದಿಗೋಷ್ಠಿ ನಡೆಸಿದ್ದು, ದರ್ಶನ್ ಕಡೆಯವರ ನೊಟೀಸ್ ಬಗ್ಗೆ, ತಮ್ಮ ಕಾನೂನು ಹೋರಾಟದ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್ ಸ್ಟೋವ್ ಮನೆಯೊಳಗಿನ ಗಾಳಿಯನ್ನು ಮಾಲಿನ್ಯಗೊಳಿಸಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ? – Kannada News

ಇಂದಿನ ಬಹುತೇಕ ಮನೆಗಳಲ್ಲಿ ಅಡುಗೆ ಮಾಡಲು ಗ್ಯಾಸ್ ಸ್ಟೋವ್ (Gas Stove) ಬಳಸಲಾಗುತ್ತದೆ. ಆದರೆ ಮನೆಯ ಒಳಗಿನ ಗಾಳಿಯ ಗುಣಮಟ್ಟವೂ ಆರೋಗ್ಯಕ್ಕೆ ಬಹಳ ಮುಖ್ಯ ಎನ್ನಲಾಗುತ್ತದೆ. ವಿಶೇಷವಾಗಿ ಅಡುಗೆ ಮನೆಯಲ್ಲಿ ಉಂಟಾಗುವ ಹೊಗೆ ಮತ್ತು ಅನಿಲಗಳು ಮನೆಯ ಗಾಳಿಯನ್ನು ದುಷಿತಗೊಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ (EPA) ಹೇಳಿರುವ ಪ್ರಕಾರ, ಗ್ಯಾಸ್ ಸ್ಟೋವ್ ಬಳಸುವ ವೇಳೆ ಕೆಲವು ಹಾನಿಕಾರಕ ಅನಿಲಗಳು ಮತ್ತು ಸೂಕ್ಷ್ಮ ಕಣಗಳು ಹೊರಬರುತ್ತವೆ. ಇದರಲ್ಲಿ ನೈಟ್ರೋಜನ್ ಡೈಆಕ್ಸೈಡ್ (NO₂), ಕಾರ್ಬನ್ ಮೋನಾಕ್ಸೈಡ್ (CO) ಮತ್ತು PM2.5 ಮಾದರಿಯ ಸೂಕ್ಷ್ಮ ಮಾಲಿನ್ಯ ಕಣಗಳು ಸೇರಿವೆ. ಇವು ಮನೆಯ ಒಳಗಿನ ಗಾಳಿಯ ಗುಣಮಟ್ಟವನ್ನು ಹಾಳು ಮಾಡಬಹುದು. ಹಾಗಾದರೆ ಮನೆಯೊಳಗಿನ ಗಾಳಿ ಹರಿವನ್ನು ಸ್ವಚ್ಛವಾಗಿಡಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ಅಡುಗೆ ಮನೆಯಲ್ಲಿ ಸರಿಯಾದ ಗಾಳಿಯ ಹರಿವು ಇಲ್ಲದಿದ್ದರೆ ಈ ಮಾಲಿನ್ಯಕಾರಿ ಕಣಗಳು ಮನೆಯೊಳಗೆ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಮಕ್ಕಳು, ವಯೋವೃದ್ಧರು ಮತ್ತು ಈಗಾಗಲೇ ಉಸಿರಾಟದ ಸಮಸ್ಯೆ ಹೊಂದಿರುವವರಿಗೆ ಇದು ಹೆಚ್ಚು ತೊಂದರೆ ಉಂಟುಮಾಡಬಹುದು. ಗ್ಯಾಸ್ ಸ್ಟೋವ್‌ನಿಂದ ಹೊರಬರುವ ಮಾಲಿನ್ಯಕಾರಕಗಳು ಉಸಿರಾಟದ ತೊಂದರೆ, ಗಂಟಲಿನ ಕೆರಡು, ಕಣ್ಣಿನ ಉರಿಯೂತ ಮತ್ತು ಅಲರ್ಜಿಗೆ ಕಾರಣವಾಗಬಹುದು. ಕೆಲವರಲ್ಲಿ ಅಸ್ತಮಾ ಸಮಸ್ಯೆಯನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ. ದೀರ್ಘಕಾಲ ಇಂತಹ ವಾತಾವರಣದಲ್ಲಿ ಇರುವುದರಿಂದ ಶ್ವಾಸಕೋಶದ ಆರೋಗ್ಯದ ಮೇಲೂ ಪರಿಣಾಮ ಬೀಳಬಹುದು.

ಇದನ್ನೂ ಓದಿ: GBA 1KmChallenge: ಬೆಂಗಳೂರಲ್ಲಿ ಮಾಲಿನ್ಯ ತಡೆಯಲು ಜಿಬಿಎ ಮಾಸ್ಟರ್ ಪ್ಲಾನ್; ಮೊದಲು ಫುಟ್‌ಪಾತ್ ಸರಿ ಮಾಡಿ ಎಂದ ಜನ!

ಮನೆಯೊಳಗಿನ ಗಾಳಿ ಹರಿವನ್ನು ಸ್ವಚ್ಛವಾಗಿಡಲು ಏನು ಮಾಡಬೇಕು?

ಅಡುಗೆ ಮಾಡುವಾಗ ಮನೆಯ ಕಿಟಕಿಗಳನ್ನು ತೆರೆದಿಡುವುದು ಬಹಳ ಉತ್ತಮ. ಚಿಮ್ನಿ ಅಥವಾ ಎಗ್ಜಾಸ್ಟ್ ಫ್ಯಾನ್ ಬಳಸುವುದರಿಂದ ಹೊಗೆ ಮತ್ತು ಅನಿಲಗಳು ಹೊರಗೆ ಹೋಗಲು ಸಹಾಯವಾಗುತ್ತದೆ. ಗ್ಯಾಸ್ ಸ್ಟೋವ್ ಅನ್ನು ನಿಯಮಿತವಾಗಿ ಪರಿಶೀಲಿಸಿ ಸ್ವಚ್ಛವಾಗಿಡುವುದು ಕೂಡ ಮುಖ್ಯ. ಇದಲ್ಲದೆ, ಮನೆಯ ಒಳಗೆ ಮತ್ತು ಹೊರಗೆ ಗಾಳಿಯ ಹರಿವು ಇರಲು ಆದಷ್ಟು ಗಿಡಗಳನ್ನು ಬೆಳೆಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಆರ್​ಸಿಬಿ ಪರ ಆಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ – Kannada News

ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯ ಇದೇ ಜೂನ್ 6 ರಿಂದ ಆರಂಭವಾಗಲಿದೆ. ಇದಕ್ಕಾಗಿ ಉಭಯ ತಂಡಗಳು ಕೂಡ ತಯಾರಿ ನಡೆಸುತ್ತಿವೆ. ಈ ನಡುವೆ ಟೀಂ ಇಂಡಿಯಾ (Team India) ಪರ ಟೆಸ್ಟ್ ಪಂದ್ಯವನ್ನಾಡಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಶ್ರೀಕರ್ ಭರತ್ (KS Bharat) ಕೇವಲ 32 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆಂಧ್ರಪ್ರದೇಶ ಪರ ದೇಶಿ ಕ್ರಿಕೆಟ್ ಆಡುತ್ತಿದ್ದ ಭರತ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಹೆಚ್ಚು ಕಾಲ ಇರದಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್​ ಕೀಪಿಂಗ್​ನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. 2014 ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಭರತ್​ಗೆ, ಅಂದಿನಿಂದ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ.

ನಿವೃತ್ತಿ ಘೋಷಿಸಿದ ಭರತ್

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿರುವ ಕೆಎಸ್ ಭರತ್, ಭಾರತದ ಇಬ್ಬರು ಶ್ರೇಷ್ಠ ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಇಬ್ಬರು ದಂತಕಥೆಗಳ ನಾಯಕತ್ವದಲ್ಲಿ ಆಡುವುದು ಮತ್ತು ಅವರಿಂದ ಕಲಿಯುವುದು ನನ್ನ ವೃತ್ತಿಜೀವನದ ಅತ್ಯುತ್ತಮ ಅನುಭವವಾಗಿತ್ತು. ಡ್ರೆಸ್ಸಿಂಗ್ ಕೋಣೆಯಲ್ಲಿ ಈ ಹಿರಿಯ ಆಟಗಾರರಿಂದ ಪಡೆದ ಬೆಂಬಲ ಮತ್ತು ಮಾರ್ಗದರ್ಶನ ಯಾವಾಗಲೂ ಸ್ಮರಣೀಯವಾಗಿರುತ್ತದೆ.

ನಾನು ಹೆಮ್ಮೆಯಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತೇನೆ. ನನ್ನ ದೇಶಕ್ಕಾಗಿ ಆಡುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ. ಈ ಪ್ರಯಾಣಕ್ಕೆ ಅಪಾರ ತಾಳ್ಮೆ ಮತ್ತು ಶಕ್ತಿಯ ಅಗತ್ಯವಿತ್ತು, ಆದರೆ ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುವುದು ಮತ್ತಷ್ಟು ವಿಶಿಷ್ಟವಾಗಿದೆ. ಬಿಸಿಸಿಐ, ಮತ್ತು ನನ್ನ ವೃತ್ತಿಜೀವನದುದ್ದಕ್ಕೂ ನನಗೆ ತರಬೇತಿ ನೀಡಿದ ಎಲ್ಲಾ ತರಬೇತುದಾರರು ಮತ್ತು ಆಡಳಿತ ಮಂಡಳಿಗೆ ಧನ್ಯವಾದಗಳು, ಇವರೆಲ್ಲರು ನನ್ನನ್ನು ಬೇಷರತ್ತಾಗಿ ಬೆಂಬಲಿಸಿದರು. ನನ್ನ ಎಲ್ಲಾ ತಂಡದ ಸದಸ್ಯರಿಗೆ, ನಾವು ಒಟ್ಟಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳು ಮತ್ತು ಸಾಧನೆಗಳಿಗಾಗಿ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ನೀವೆಲ್ಲರೂ ಇಲ್ಲದೆ, ನನ್ನ ಕನಸನ್ನು ನನಸಾಗಿಸಲು ಮತ್ತು ಇಷ್ಟು ವರ್ಷಗಳ ಕಾಲ ಈ ಆಟವನ್ನು ಆಡಲು ನನಗೆ ಸಾಧ್ಯವಾಗುತ್ತಿರಲಿಲ್ಲ’ ಎಂದಿದ್ದಾರೆ.

ಭರತ್ ಅಂತರರಾಷ್ಟ್ರೀಯ ವೃತ್ತಿಜೀವನ

ಶ್ರೀಕರ್ ಭರತ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಟೀಂ ಇಂಡಿಯಾ ಪರ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 20.09 ಸರಾಸರಿಯಲ್ಲಿ 221 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಅಥವಾ ಅರ್ಧಶತಕ ಸೇರಿಲ್ಲದಿದ್ದರೂ, ಶ್ರೀಕರ್ ಭರತ್ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಅವರಿಗೆ 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ಅವಕಾಶವೂ ಸಿಕ್ಕಿತ್ತು. ಇನ್ನು ಭರತ್ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (2021), ದೆಹಲಿ ಕ್ಯಾಪಿಟಲ್ಸ್ (2022), ಗುಜರಾತ್ ಟೈಟಾನ್ಸ್ (2023), ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (2024) ಪರವೂ ಆಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:03 pm, Thu, 4 June 26

Source link

Exit mobile version