ನವದೆಹಲಿ, ಮಾರ್ಚ್ 13: ಪರ್ಷಿಯನ್ ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಮುದ್ರದ ಭದ್ರತೆಯ ಬಗೆಗಿನ ಕಳವಳಗಳ ನಡುವೆ, ಭಾರತದಲ್ಲಿನ ಇರಾನ್ (Iran War) ರಾಯಭಾರಿ ಮೊಹಮ್ಮದ್ ಫಥಾಲಿ ಅವರು ಜಾಗತಿಕ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ ಸುರಕ್ಷಿತ ಮಾರ್ಗವನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನ್ ರಾಯಭಾರಿ ಫಥಾಲಿ, ಭಾರತ ನಮ್ಮ ಸ್ನೇಹಿತ. ಜಲಮಾರ್ಗದ ಮೂಲಕ ಭಾರತದ ಪ್ರವೇಶವನ್ನು ಖಚಿತಪಡಿಸುವ ಬೆಳವಣಿಗೆಗಳು ಶೀಘ್ರದಲ್ಲೇ ಹೊರಹೊಮ್ಮಬಹುದು ಎಂದು ಸೂಚಿಸಿದ್ದಾರೆ.
ಪರ್ಷಿಯನ್ ಕೊಲ್ಲಿಯನ್ನು ಜಾಗತಿಕ ಮಾರುಕಟ್ಟೆಗಳಿಗೆ ಸಂಪರ್ಕಿಸುವ ಕಿರಿದಾದ ಕಾರಿಡಾರ್ ಮೂಲಕ ಹಡಗು ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸಮಯದಲ್ಲಿ ಈ ಹೇಳಿಕೆಗಳು ಬಂದಿವೆ. ‘ಭಾರತ ಮತ್ತು ಇರಾನ್ ಸಾಮಾನ್ಯ ಹಿತಾಸಕ್ತಿಗಳನ್ನು ಹಂಚಿಕೊಳ್ಳುತ್ತವೆ’ ಎಂದು ಅವರು ಹೇಳಿದ್ದಾರೆ. ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗಲು ಸಾಧ್ಯವಾಗುತ್ತದೆಯೇ ಎಂದು ನೇರವಾಗಿ ಕೇಳಿದಾಗ, ಈ ಬಗ್ಗೆ ಪಾಸಿಟಿವ್ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ ಎಂದು ರಾಯಭಾರಿ ಸೂಚಿಸಿದ್ದಾರೆ.
ಭಾರತ ಮತ್ತು ಇರಾನ್ ನಡುವಿನ ವಿಶಾಲ ಸಂಬಂಧದ ಬಗ್ಗೆಯೂ ರಾಯಭಾರಿ ಮಾತನಾಡಿದ್ದಾರೆ. ಇದು ಸ್ನೇಹ ಮತ್ತು ಸಹಕಾರದ ಮೇಲೆ ನಿರ್ಮಿಸಲಾದ ಸಂಬಂಧ. ಇರಾನ್ ಮತ್ತು ಭಾರತ ಸ್ನೇಹಿತರು. ನಮಗೆ ಕಾಮನ್ ಹಿತಾಸಕ್ತಿಗಳಿವೆ. ಕಷ್ಟದ ಅವಧಿಯಲ್ಲಿ ಇರಾನ್ ಅನ್ನು ಭಾರತ ಸದಾ ಬೆಂಬಲಿಸುತ್ತದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಗಲಕೋಟೆ, ಮಾರ್ಚ್ 13: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಕನ್ನಡ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ವೇಳೆ ದಲಿತ ಯುವಕ ಸಾವನ್ನಪ್ಪಿರುವ (death) ಘಟನೆ ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ವಿದ್ಯಾರ್ಥಿನಿಯರಿಗೆ ಕಲ್ಲು ಹೊಡೆದಿದ್ದಕ್ಕೆ ಸ್ಥಳೀಯರು ಬಡಿದು ಕೊಂದಿದ್ದಾರೆ ಎಂದು ಆರೋಪವಿದೆ. ಇನ್ನೊಂದೆಡೆ ಯುವಕ ಕಲ್ಲು ಎಸೆದಿಲ್ಲ ಎನ್ನುವುದು ದಲಿತ ನಾಯಕರ ಮಾತು. ಮಲಗಿದ್ದ ದಲಿತ ವ್ಯಕ್ತಿಯನ್ನು ಎಳೆದು ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿದೆ ಎಂದಿದ್ದಾರೆ. ಹೀಗಾಗಿ ಈ ಪ್ರಕರಣ ಗೊಂದಲಮಯವಾಗಿದೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿ ಸುದ್ದಿಗಳು ಪ್ರಸಾರವಾಗುತ್ತಿವೆ. ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸುತ್ತಿದ್ದಾಗ ಕದ್ದು ನೋಡಿದನೆಂದು ಸ್ಥಳೀಯರು ಥಳಿಸಿದ ಪರಿಣಾಮ ಆತ ಹೃದಯಾಘಾತದಿಂದ ಸಾವನ್ನಪ್ಪಿದನೆಂದು, ಕಾಲ್ತುಳಿತಕ್ಕೆ ಸಾವನ್ನಪ್ಪಿದ ಎನ್ನಲಾಗುತ್ತಿದೆ. ಆದರೆ ಮಲಗಿದ್ದ ಯುವಕನನ್ನು ಎಳೆದು ತಂದು ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ಮೂಲಕ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಾವಳಗಿ ಠಾಣೆಯಲ್ಲಿ ಕೊಲೆ ಪ್ರಕರಣ ಕೂಡ ದಾಖಲಾಗಿದೆ.
ನಡೆದಿದ್ದೇನು?
ಮಾರ್ಚ 11ರ ರಾತ್ರಿ 9ಗಂಟೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಕಾರಣ ಗ್ರಾಮದ ಸರ್ಕಾರಿ ಕನ್ನಡ ಪ್ರೌಢಶಾಲೆಯ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತ್ತು. ಮಕ್ಕಳು, ಪೋಷಕರು, ಶಾಲೆಯ ಸಿಬ್ಬಂದಿ ಸಾಂಸ್ಕೃತಿಕ ಕಾರ್ಯಕ್ರಮದ ಸಂಭ್ರಮದಲ್ಲಿ ತೊಡಗಿದ್ದರು. ಗ್ರಾಮಸ್ಥರು ಕೂಡ ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಕೆಲ ಯುವಕರು ಗ್ರಾಮ ಪಂಚಾಯಿತಿ ಕಟ್ಟಡದ ಮೇಲ್ಛಾವಣಿ ಮೇಲೆ ಕುಳಿತು ಕ್ರಾರ್ಯಕ್ರಮ ನೋಡುತ್ತಿದ್ದರು.
ಮೂವರ ವಿರುದ್ಧ ಎಫ್ಐಆರ್ ದಾಖಲು
ಈ ವೇಳೆ ಮೇಲಿಂದ ಕೆಳಗಡೆ ಕುಳಿತವರ ಮೇಲೆ ಯುವಕರ ಒಂದು ಗುಂಪು ಚಿಕ್ಕಚಿಕ್ಕ ಕಲ್ಲುಗಳನ್ನು ಎಸೆದು ಚುಡಾಯಿಸಿದೆ. ಈ ಮಧ್ಯೆ ಕೆಳಗೆ ಕುಳಿತವರು ಹಾಗೂ ಮೇಲೆ ಕುಳಿತ ಯುವಕರ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿದೆ. ನಂತರ ದಲಿತ ಯುವಕ ಸುದೀಪ್ ಪಾಂಗೆ (೧೯) ಪ್ರಾಣಬಿಟ್ಟಿದ್ದಾನೆ. ಈ ಬಗ್ಗೆ ಸಾವಳಗಿ ಠಾಣೆಯಲ್ಲಿ ಕೊಲೆ ಎಂದು ಪ್ರಕರಣ ದಾಖಲಾಗಿದೆ. ಕ್ರೈಂ ನಂ.47/2026 ರಂತೆ ಕೊಲೆ ಪ್ರಕರಣದೊಂದಿಗೆ ಎಸ್.ಸಿ, ಎಸ್.ಟಿ (ಅತ್ಯಾಚಾರ ನಿರೋಧ)ಕಾಯ್ದೆಯ ಕಲಂ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿಜಯ್ , ರಾಜು ಮತ್ತು ಮಲ್ಲಿಕಾರ್ಜುನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇನ್ನು ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದ ವೇಳೆ ಯುವಕರ ಒಂದು ಗುಂಪು ಚಿಕ್ಕ ಚಿಕ್ಕ ಕಲ್ಲು ಎಸೆದು ಚುಡಾಯಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಎಸ್ಡಿಎಂಸಿ ಸದಸ್ಯ ವಿಜಯ್ ಹಾಗೂ ಸ್ಥಳೀಯರಾದ ರಾಜು ಮತ್ತು ಮಲ್ಲಿಕಾರ್ಜುನ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ವಿಜಯ್, ರಾಜು, ಮಲ್ಲಿಕಾರ್ಜುನ ಸುದೀಪ್ ಪಾಂಗೆ(19) ಎನ್ನುವ ಯುವಕನ ಮೇಲೆ ಹಲ್ಲೆ ಮಾಡುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಮೃತನ ಕುಟುಂಬಸ್ಥರು ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರನ್ನ ಬಂಧಿಸಲಾಗಿದ್ದು, ಸದ್ಯ ತನಿಖೆ ಮುಂದುವರೆದಿದೆ.
ದಲಿತ ಮುಖಂಡರು ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಮಾತಾಡಿದ ಸಾವಳಗಿ ಗ್ರಾಮದ ದಲಿತ ಮುಖಂಡ ರಾಜು ಮೇಲಿನಕೇರಿ, ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿ ಸುದ್ದಿಗಳು ಪ್ರಸಾರವಾಗುತ್ತಿವೆ. ಯುವಕ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವುದನ್ನು ನೋಡಿ ಕಲ್ಲು ಎಸೆಯುತ್ತಿದ್ದ, ಇನ್ನು ಕೆಲ ಮಾಧ್ಯಮಗಳಲ್ಲಿ ಕಾಲ್ತುಳಿತಕ್ಕೆ ಸಾವನ್ನಪ್ಪಿದ ಎಂದು ಬರುತ್ತಿದೆ. ಅದೆಲ್ಲವು ಸತ್ಯಕ್ಕೆ ದೂರವಾದದ್ದು. ಆತ ಗ್ರಾಮ ಪಂಚಾಯಿತಿ ಮೇಲೆ ಕುಡಿದು ಮಲಗಿದ್ದ. ಯಾರು ಕಲ್ಲು ಎಸೆದಿದ್ದಾರಾ ಗೊತ್ತಿಲ್ಲ. ಮಲಗಿದ್ದ ದಲಿತ ವ್ಯಕ್ತಿಯನ್ನು ಎಳೆದು ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿದೆ. ಎಫ್ಐಆರ್ ಪ್ರಕಾರ ವರದಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದರು.
ಒಟ್ಟಾರೆ ಗ್ರಾಮದಲ್ಲಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳ ಸಂಭ್ರಮ ಸಡಗರದಿಂದ ಸಮಾರೋಪವಾಗಬೇಕಿತ್ತು. ಆದರೆ ಯುವಕರ ನಡುವಿನ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಗತ್ಯವಾಗಿದ್ದು, ಪೊಲೀಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ.
2026 ರ ಟಿ20 ವಿಶ್ವಕಪ್ ( T20 World Cup) ಗೆದ್ದು ರೈಲಿನ ಪ್ರಯಾಣ ಬೆಳೆಸಿ ತವರಿಗೆ ಮರಳಿದ್ದ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಶಿವಂ ದುಬೆ (Shivam Dube) ತಮ್ಮ ಸರಳತೆಯಿಂದ ಸಖತ್ ಸದ್ದು ಮಾಡಿದ್ದರು. ಇದೀಗ ದುಬೆ ತಮ್ಮ ದುಬಾರಿ ಮನೆಯ ಬೆಲೆಯ ಮೂಲಕ ಸೋಶಿಯಲ್ ಮೀಡಿಯಾವನ್ನು ಹುಬ್ಬೇರುವಂತೆ ಮಾಡಿದ್ದಾರೆ. ಇಡೀ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ನೀಡಿದ ಆಟಗಾರರ ಪೈಕಿ ಶಿವಂ ದುಬೆ ಕೂಡ ಒಬ್ಬರು. ತಂಡಕ್ಕೆ ಅಗತ್ಯವಿದ್ದ ಸಮಯದಲ್ಲಿ ಸಮಯೋಜಿತ ಪ್ರದರ್ಶನ ನೀಡಿದ ದುಬೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಈ ಪಂದ್ಯಾವಳಿಯಲ್ಲಿ ದುಬೆ ನೀಡಿದ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು.
ದುಬೆ ಖರೀದಿಸಿರುವ ಫ್ಲಾಟ್‌ನ ಬೆಲೆ ಎಷ್ಟು?
ಮೇಲೆ ಹೇಳಿದಂತೆ ಭಾರತದ ಸತತ ಎರಡು ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಡಗೈ ಬ್ಯಾಟ್ಸ್‌ಮನ್ ಶಿವಂ ದುಬೆ ಕಳೆದ ವರ್ಷ ಮುಂಬೈನಲ್ಲಿ ಕೋಟ್ಯಂತರ ಮೌಲ್ಯದ ಫ್ಲಾಟ್‌ಗಳನ್ನು ಖರೀದಿ ಮಾಡಿದ್ದಾರೆ. ಜೂನ್ 2025 ರಲ್ಲಿ ಮುಂಬೈನ ಜನಪ್ರಿಯ ಓಶಿವಾಡಾ ಪ್ರದೇಶದಲ್ಲಿ ವಸತಿ ಯೋಜನೆಯಲ್ಲಿ ಎರಡು ಫ್ಲಾಟ್‌ಗಳನ್ನು ದುಬೆ ಖರೀದಿಸಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಇದರ ಒಟ್ಟು ಮೌಲ್ಯ ₹27.50 ಕೋಟಿ ಎಂತಲೂ ವರದಿಯಲ್ಲಿ ತಿಳಿಸಲಾಗಿದೆ. ಎರಡೂ ಫ್ಲಾಟ್‌ಗಳು ಡಿಎಲ್‌ಎಚ್ ಎನ್‌ಕ್ಲೇವ್‌ನಲ್ಲಿದ್ದು, ಈ ಫ್ಲಾಟ್‌ಗಳನ್ನು ದುಬೆ, ದೇವ್ ಲ್ಯಾಂಡ್ ಮತ್ತು ಹೌಸಿಂಗ್ ಲಿಮಿಟೆಡ್‌ನಿಂದ ಖರೀದಿಸಿದ್ದಾರೆ.
ರಿಜಿಸ್ಟ್ರಿ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿರುವಂತೆ, ದುಬೆ ಖರೀದಿಸಿರುವ ಈ ಎರಡೂ ಫ್ಲಾಟ್‌ಗಳು ಒಂದೇ ಕಟ್ಟಡದಲ್ಲಿವೆ. ಒಂದು 17 ನೇ ಮಹಡಿಯಲ್ಲಿದ್ದರೆ, ಇನ್ನೊಂದು 18 ನೇ ಮಹಡಿಯಲ್ಲಿದ್ದು, ಒಟ್ಟು ವಿಸ್ತೀರ್ಣ ಸುಮಾರು 9,600 ಚದರ ಅಡಿ ಎಂದು ವರದಿಯಾಗಿದೆ. ಈ ಫ್ಲಾಟ್‌ಗಳನ್ನು ಖರೀದಿಸಲು ಶಿವಂ ದುಬೆ ₹1.65 ಕೋಟಿ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ . ಹಾಗೆಯೇ ದುಬೆ ಈ ಸೊಸೈಟಿಯಲ್ಲಿ ಮೂರು ಪಾರ್ಕಿಂಗ್ ಸ್ಲಾಟ್‌ಗಳನ್ನು ಸಹ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಶಿವಂ ದುಬೆಯ ಆದಾಯದ ಮೂಲ
ಪ್ರಸ್ತುತ ಭಾರತ ಟಿ20 ತಂಡದಲ್ಲಿ ಮಾತ್ರ ಆಡುತ್ತಿರುವ ದುಬೆ, ಆಡುವ ಪ್ರತಿ ಟಿ20 ಪಂದ್ಯಕ್ಕೆ ಬಿಸಿಸಿಐನಿಂದ 3 ಲಕ್ಷ ರೂ. ವೇತನ ಪಡೆಯುತ್ತಾರೆ. ಹಾಗೆಯೇ ಬಿಸಿಸಿಐ ಕೇಂದ್ರ ಒಪ್ಪಂದದ ಸಿ ದರ್ಜೆಯಲ್ಲಿ ಸ್ಥಾನ ಪಡೆದಿರುವ ದುಬೆ ವಾರ್ಷಿಕವಾಗಿ 1 ಕೋಟಿ ರೂ. ವೇತನ ಪಡೆಯುತ್ತಾರೆ. ಹಾಗೆಯೇ ಪ್ರಸ್ತುತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ದುಬೆಯನ್ನು 2025 ರ ಮೆಗಾ ಹರಾಜಿಗೂ ಮೊದಲು 12 ಕೋಟಿ ರೂ. ಗೆ ತಂಡದಲ್ಲೇ ಉಳಿಸಿಕೊಳ್ಳಲಾಗಿದೆ.
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ 25 ಎಸೆತಗಳಲ್ಲಿ 43 ರನ್ ಮತ್ತು ಫೈನಲ್‌ನಲ್ಲಿ ಕೇವಲ 8 ಎಸೆತಗಳಲ್ಲಿ 26 ರನ್ ಗಳಿಸುವ ಮೂಲಕ, ಶಿವಂ ದುಬೆ ಟೀಂ ಇಂಡಿಯಾದ ಸತತ ಎರಡನೇ ಪ್ರಶಸ್ತಿಗೆ ಮಹತ್ವದ ಕೊಡುಗೆ ನೀಡಿದರು.ಶಿವಂ ದುಬೆ 2019 ರಲ್ಲಿ ಪಾದಾರ್ಪಣೆ ಮಾಡಿದರೂ, ಕಳೆದ ಮೂರು ವರ್ಷಗಳಿಂದ ಟೀಂ ಇಂಡಿಯಾ ಪರ ಟಿ20 ಸ್ವರೂಪದಲ್ಲಿ ಖಾಯಂ ಆಗಿ ಆಡುತ್ತಿದ್ದಾರೆ. ಈ ಸಮಯದಲ್ಲಿ, ಅವರು ಐಪಿಎಲ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶ್ವಾನಗಳ (Dog) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದು ಇಲ್ಲ. ಈ ಮೂಕಪ್ರಾಣಿಗಳು ಮನುಷ್ಯನ ಆಪ್ತ ಸ್ನೇಹಿತನಾಗಿ ಬಿಡುತ್ತವೆ. ಮನೆಯ ಸದಸ್ಯರು ಎಲ್ಲಿಗಾದ್ರೂ ಹೊರಟು ನಿಂತರೆ ಸಾಕು, ಅವರನ್ನೇ ಹಿಂಬಾಲಿಸುತ್ತವೆ. ಇನ್ನು, ಮನೆಯಲ್ಲಿರುವ ಪುಟಾಣಿ ಮಕ್ಕಳಿಗೆ ಕಾವಲಾಗಿ ನಿಲ್ಲುತ್ತವೆ. ಈ ವಿಡಿಯೋದಲ್ಲಿ ಅಂತಹದ್ದೇ ದೃಶ್ಯವಿದೆ. ಪುಟ್ಟ ಹುಡುಗಿ ಶಾಲೆಗೆ ಹೊರಟು ನಿಂತಿದ್ದು, ಆಕೆಯನ್ನು ಸ್ಕೂಲ್ ಬಸ್‌ಗೆ ಹತ್ತಿಸಿ ಜೋಪಾನವಾಗಿ ಕಳುಹಿಸಿಕೊಟ್ಟಿದೆ. ಈ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
StreetdogofBombay ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿ ಹಾಗೂ ಮನೆಯ ಮುದ್ದಿನ ಶ್ವಾನದ ನಡುವಿನ ಬಾಂಧವ್ಯವನ್ನು ನೋಡಬಹುದು. ಪುಟ್ಟ ಹುಡುಗಿಯೂ ಶಾಲೆಗೆ ಹೋಗಲು ಸಿದ್ಧವಾಗಿದ್ದು, ರಸ್ತೆಯತ್ತ ನಡೆದುಕೊಂಡು ಹೋಗುತ್ತಿರುವುದನ್ನು ನೀವು ಕಾಣಬಹುದು. ಶ್ವಾನವು ಆಕೆಯನ್ನೇ ಹಿಂಬಾಲಿಸಿದ್ದು, ಸ್ಕೂಲ್ ಬಸ್‌ಗೆ ಹತ್ತಿಸಿದೆ. ಆ ಬಳಿಕ ಬಸ್ಸಿನ ಮೆಟ್ಟಿಲನ್ನು ಹತ್ತಿ ಪುಟ್ಟ ಹುಡುಗಿಯೂ ಸೀಟಿನಲ್ಲಿ ಕುಳಿತುಕೊಂಡಿದ್ದಾಳೋ ಎಂದು ಪರೀಕ್ಷಿಸಿದೆ.
ಈ ವಿಡಿಯೋ ಹದಿಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆ ದಾರ ಬಾಡಿ ಗಾರ್ಡ್ ಎಂದರೆ, ಮತ್ತೊಬ್ಬರು, ಈ ಪುಟಾಣಿಗೆ ಸೀಟ್ ಸಿಕ್ಕಿತೇ ಎಂದು ಪರೀಕ್ಷಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತುಂಬಾ ಜವಾಬ್ದಾರಿಯುತ ಶ್ವಾನ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಮ್ಯಾ, ಪುನೀತ್ ರಾಜ್ಕುಮಾರ್ ನಟನೆಯ ‘ಆಕಾಶ್’ ಸಿನಿಮಾ (Akasha Movie) ಮರು ಬಿಡುಗಡೆ ಆಗಿದೆ. ರಾಘವೇಂದ್ರ ರಾಜ್ಕುಮಾರ್ ಅವರು ಈ ಸಿನಿಮಾ ನೋಡಲು ಇಂದು (ಮಾರ್ಚ್ 13) ಚಿತ್ರಮಂದಿರಕ್ಕೆ ಬಂದಿದ್ದಾರೆ. ಅಭಿಮಾನಿಗಳ ಜೊತೆ ಕುಳಿತು ಅವರು ಸಿನಿಮಾ ನೋಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತಾಡಿದರು. ‘ಪುನೀತ್ ಇಲ್ಲದೇ ಈ ಸಿನಿಮಾ ನೋಡಲು ಕಷ್ಟ ಆಗುತ್ತಿದೆ. ಮತ್ತೆ ಆ ದಿನಗಳು ವಾಪಸ್ ಬರಬಾರದೇ ಎನಿಸುತ್ತದೆ. ಆಕಾಶ್ ಸಿನಿಮಾ ಈಗ ನೋಡೋಕೂ ಅಷ್ಟೇ ಚೆನ್ನಾಗಿದೆ. ಅಪ್ಪು ಮತ್ತು ರಮ್ಯಾ ಜೋಡಿ ಚೆನ್ನಾಗಿದೆ. ಅಭಿಮಾನಿಗಳು ಅದೇ ಪ್ರೀತಿಯಿಂದ ಬಂದು ಸಿನಿಮಾ ನೋಡುತ್ತಿದ್ದಾರೆ. ಅದನ್ನು ನೋಡಿದಾಗ ಪುನೀತ್ ಇಲ್ಲ ಅಂತ ಅನಿಸಲ್ಲ’ ಎಂದು ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರು ಹೇಳಿದ್ದಾರೆ.
ವಾಷಿಂಗ್ಟನ್, ಮಾರ್ಚ್ 13: ಇರಾನ್‌ನ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಇತ್ತೀಚಿನ ದಿನಗಳಲ್ಲಿ ಎರಡು ಮಾರಣಾಂತಿಕ ದಾಳಿಗಳಿಂದ ಬದುಕುಳಿದಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಇರಾನ್ ಸಂಸತ್ ಸದಸ್ಯರೊಬ್ಬರು ತಿಳಿಸಿದ್ದಾರೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಹಗೆತನದ ಮಧ್ಯೆ ಈ ದಾಳಿಗಳು ನಡೆದಿವೆ ಎಂದು ಸಂಸದ ಮೊಹಮ್ಮದ್ರೆಜಾ ರೆಝಾಯಿ ಕೌಚಿ ಹೇಳಿದ್ದಾರೆ. ಇರಾನ್‌ನ ರಾಜ್ಯ ಸುದ್ದಿ ಸಂಸ್ಥೆ ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿಯೊಂದಿಗೆ ಮಾತನಾಡಿದ ಅವರು, ದೇಶದ ಮಾಜಿ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ನಿವಾಸದ ಮೇಲೆ ನಡೆದ ದಾಳಿಯ ಸಮಯದಲ್ಲಿ ಮೊಜ್ತಬಾ ಖಮೇನಿ ಕೂಡ ಹಾಜರಿದ್ದರು ಎಂದು ಹೇಳಿದ್ದಾರೆ.
ಅಮೆರಿಕ ಹಾಗೂ ಇಸ್ರೇಲ್ನ ಮಾರಕ ದಾಳಿಯ ಸಮಯದಲ್ಲಿ ಮೊಜ್ತಬಾ ಖಮೇನಿ ಕೂಡ ಅಲಿ ಖಮೇನಿ ಜೊತೆಗೆ ಸ್ಥಳದಲ್ಲಿದ್ದರು. ಆದರೆ ಹತ್ಯೆ ಪ್ರಯತ್ನದಿಂದ ಮೊಜ್ತಬಾ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ರೆಝಾಯಿ ಕೌಚಿ ಹೇಳಿದ್ದಾರೆ. ಬಳಿಕ ಮೊಜ್ತಬಾ ಖಮೇನಿ ದಾಖಲಾಗಿದ್ದ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ಮತ್ತೊಂದು ದಾಳಿ ನಡೆದಿತ್ತು. ಆದರೆ, ಅಮೆರಿಕ ಮತ್ತು ಇಸ್ರೇಲ್ ತಮ್ಮ ಗುರಿಯನ್ನು ಸಾಧಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದ್ದಾರೆ. ಆದರೆ, ಅವರು ದಾಳಿ ನಡೆದ ಆಸ್ಪತ್ರೆಯ ಹೆಸರನ್ನು ಅಥವಾ ದಾಳಿಯ ನಿಖರವಾದ ಸ್ಥಳವನ್ನು ಬಹಿರಂಗಪಡಿಸಿಲ್ಲ.
ಇದಕ್ಕೂ ಮೊದಲು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ಆರಂಭಿಕ ಹಂತದಲ್ಲಿ ಇರಾನ್‌ನ ಹೊಸ ನಾಯಕ ಗಾಯಗೊಂಡಿರಬಹುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಮೊಜ್ತಬಾ ಖಮೇನಿ ಈ ದಾಳಿಯಲ್ಲಿ ವಿರೂಪಗೊಂಡಿರುವ ಸಾಧ್ಯತೆಯಿದೆ, ಅವರು ಕೋಮಾದಲ್ಲಿದ್ದಾರೆ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಹತ್ಯೆಗೀಡಾದ ಅಯತೊಲ್ಲಾ ಅಲಿ ಖಮೇನಿ ಅವರ 56 ವರ್ಷದ ಮಗ ತೀವ್ರ ಗಾಯಗೊಂಡಿದ್ದಾರೆ ಮತ್ತು ಪ್ರಸ್ತುತ ಟೆಹ್ರಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬ್ರಿಟಿಷ್ ಟ್ಯಾಬ್ಲಾಯ್ಡ್ ವರದಿ ಮಾಡಿತ್ತು. ಅವರು ಒಂದು ಕಾಲನ್ನು ಕಳೆದುಕೊಂಡಿದ್ದಾರೆ, ಅವರ ಹೊಟ್ಟೆ, ಲಿವರ್ಗೆ ಗಂಭೀರ ಹಾನಿಯಾಗಿದೆ ಎಂದು ಹೇಳಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಮಾರ್ಚ್ 13): ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಜೈಲುಗಳಲ್ಲಿನ ಸಜಾಬಂಧಿಗಳಾಗಿ ಸೆರೆವಾಸ ಅನುಭವಿಸುತ್ತಿದ್ದ 30 ಮಂದಿ ಸಜಾಬಂಧಿಗಳಿಗೆ ಇಂದು (ಮಾರ್ಚ್ 13) ಅವಧಿ ಪೂರ್ವ ಬಿಡುಗಡೆ ಮಾಡಲಾಗಿದೆ. ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ 14 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಆದ್ರೆ, ಸನ್ನಡತೆ ಆಧಾರದ ಮೇಲೆ ಸರ್ಕಾರ ಅವಧಿಪೂರ್ವ ರಿಲೀಸ್ ಮಾಡಿದೆ. ಇನ್ನು ಇದೇ ವೇಳೆ ತುಮಕೂರಿನ ಕೈದಿಯೋರ್ವ ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ. ಕೌಟುಂಬಿಕ ಗಲಾಟೆಯಲ್ಲಿ ಕೊಲೆ ಮಾಡಿ ಜೈಲಿಗೆ ಹೋಗಿದ್ದು, ಇದೀಗ ಬರೋಬ್ಬರಿ 13 ವರ್ಷಗಳ ನಂತರ ಜೈಲಿನಿಂದ ರಿಲೀಸ್ ಆಗಿರುವುದಕ್ಕೆ ಸಂತೋಷಗೊಂಡಿದ್ದಾರೆ. ಇನ್ನು ಏನೆಲ್ಲಾ ಹೇಳಿದ್ದಾರೆ ಕೇಳಿ.
ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟಿ, ದಿವಂಗತ ಮಧುಬಾಲಾ ಅವರ ಬಯೋಪಿಕ್ (Madhubala Biopic) ಬಗ್ಗೆ ಬಿಟೌನ್‌ನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ಚಿತ್ರದಲ್ಲಿ ಮಧುಬಾಲಾ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅನೇಕ ನಟಿಯರ ಹೆಸರು ಕೇಳಿಬರುತ್ತಿದೆ. ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡುವ ಆಲೋಚನೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಇತ್ತು ಎನ್ನಲಾಗಿದೆ.
ವರದಿಗಳ ಪ್ರಕಾರ, ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಮಧುಬಾಲಾ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲು ತೀವ್ರ ಆಸಕ್ತಿ ಹೊಂದಿದ್ದರು. ಬಾಲಿವುಡ್‌ಗೆ ಸಾಯಿ ಪಲ್ಲವಿ ಹೊಸ ಮುಖವಾಗಿರುವುದರಿಂದ, ಮಧುಬಾಲಾ ಅವರಂತಹ ಐತಿಹಾಸಿಕ ಪಾತ್ರಕ್ಕೆ ಅವರು ಹೊಸ ಕಳೆ ನೀಡಬಲ್ಲರು ಎಂದು ಬನ್ಸಾಲಿ ಭಾವಿಸಿದ್ದರು. ಆದರೆ, ಮಾತುಕತೆಗಳು ಅಂದುಕೊಂಡಂತೆ ನಡೆಯಲಿಲ್ಲ. ಮೂಲಗಳ ಪ್ರಕಾರ, ಕಾಲ್‌ಶೀಟ್ ಸಮಸ್ಯೆಯಿಂದಾಗಿ ಸಾಯಿ ಪಲ್ಲವಿ ಈ ಬಹುದೊಡ್ಡ ಅವಕಾಶದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಮಧುಬಾಲಾ ಬಯೋಪಿಕ್ ಕೈತಪ್ಪಿದರೂ, ಸಾಯಿ ಪಲ್ಲವಿ ಬಾಲಿವುಡ್‌ಗೆ ಭರ್ಜರಿಯಾಗಿಯೇ ಎಂಟ್ರಿ ಕೊಡುತ್ತಿದ್ದಾರೆ. ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ‘ಏಕ್ ದಿನ್’ ಚಿತ್ರದ ಮೂಲಕ ಸಾಯಿ ಪಲ್ಲವಿ ಅವರು ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸುನಿಲ್ ಪಾಂಡೆ ನಿರ್ದೇಶನದ ಈ ರೊಮ್ಯಾಂಟಿಕ್ ಸಿನಿಮಾ ಮೇ 1ರಂದು ಬಿಡುಗಡೆ ಆಗಲಿದೆ.
ಇಷ್ಟೇ ಅಲ್ಲದೆ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ ಪಾರ್ಟ್ 1’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವ ಈ ಬೃಹತ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಂತ) ಸೇರಿದಂತೆ ಭಾರತದ ದೊಡ್ಡ ತಾರಾಬಳಗವೇ ಇದೆ.
ಮಧುಬಾಲಾ ಪಾತ್ರದಲ್ಲಿ ಸಾಯಿ ಪಲ್ಲವಿ ಅವರನ್ನು ನೋಡಲಾಗದಿದ್ದರೂ, ಸೀತೆಯ ಪಾತ್ರದಲ್ಲಿ ಅವರ ನಟನೆಯನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಈಗಾಗಲೇ ಮೋಡಿ ಮಾಡಿರುವ ಅವರಿಗೆ ಬಾಲಿವುಡ್ ಪ್ರೇಕ್ಷಕರು ಯಾವ ರೀತಿ ಸ್ವಾಗತ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಹೀಗಾಗಿ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಆರಂಭವನ್ನು ಪಡೆದುಕೊಂಡಿತು. ಆದಾಗ್ಯೂ ಪಾಕ್ ಇನ್ನಿಂಗ್ಸ್‌ನ 39ನೇ ಓವರ್ನಲ್ಲಿ ನಡೆದ ಅದೊಂದು ಘಟನೆ ಪಾಕ್ ಟಿ20 ತಂಡದ ನಾಯಕ ಸಲ್ಮಾನ್ ಆಘಾ ಕೆರಳುವಂತೆ ಮಾಡಿದಲ್ಲದೆ, ವಿಕೆಟ್ ಕೂಡ ಕಳೆದುಕೊಳ್ಳುವಂತೆ ಮಾಡಿತು.
ಢಾಕಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್ ವಿಚಿತ್ರ ರನೌಟ್ಗೆ ಸಾಕ್ಷಿಯಾಯಿತು. ಬಾಂಗ್ಲಾದೇಶದ ಬೌಲರ್ ಮೆಹದಿ ಹಸನ್ ಎಸೆದ ಈ ಓವರ್‌ನ ನಾಲ್ಕನೇ ಚೆಂಡನ್ನು ರಿಜ್ವಾನ್ ನೇರವಾಗಿ ಬೌಲರ್ ಕಡೆಗೆ ಆಡಿದರು. ಇತ್ತ ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಸಲ್ಮಾನ್ ಆಘಾ ರನ್ಗಾಗಿ ತಮ್ಮ ಕ್ರೀಸ್‌ನಿಂದ ಹೊರಬಂದರಾದರೂ ಅಲ್ಲಿ ರನ್ ಇಲ್ಲದಿರುವುದನ್ನು ಗಮನಿಸಿ ಅಲ್ಲಿಯೇ ನಿಂತರು. ಅಷ್ಟರಲ್ಲಿ ರಿಜ್ವಾನ್ ಬಾರಿಸಿದ ಚೆಂಡು ಕೂಡ ಆಘಾ ಕಡೆಗೆ ಬಂತು. ಹೀಗಾಗಿ ಆಘಾ ಚೆಂಡನ್ನು ಹಿಡಿದು ಬೌಲರ್ ಮೆಹದಿ ಹಸನ್ಗೆ ರವಾನಿಸಲು ಪ್ರಯತ್ನಿಸಿದರು.
ಈ ಹಂತದಲ್ಲಿ ಚಾಣಾಕ್ಷತೆ ತೋರಿದ ಮೆಹದಿ ಹಸನ್ ಚೆಂಡನ್ನು ಹಿಡಿದು, ನೇರವಾಗಿ ಸ್ಟಂಪ್ಗೆ ಎಸೆದರು. ಇದೆಲ್ಲ ನಡೆಯುವಾಗ ಕ್ರೀಸ್‌ನಿಂದ ಹೊರಗೆ ನಿಂತಿದ್ದ ಆಘಾ, ಕ್ರೀಸ್ ಒಳಗೆ ಬರುವ ಪ್ರಯತ್ನವನ್ನು ಮಾಡಲಿಲ್ಲ. ಹೀಗಾಗಿ ಚೆಂಡನ್ನು ಸ್ಟಂಪ್ಗೆ ಎಸೆದ ಕೂಡಲೇ ಮೆಹದಿ ಹಸನ್ ಔಟ್ಗಾಗಿ ಅಂಪೈರ್ ಬಳಿ ಮನವಿ ಮಾಡಲಾರಂಬಿಸಿದರು. ಇದನ್ನು ನೋಡಿ ಕಕ್ಕಾಬಿಕ್ಕಿಯಾದ ಆಘಾ, ಹಸನ್ ಜೊತೆಗೆ ವಾದಿಸಲು ಪ್ರಾರಂಭಿಸಿದರು. ಇತ್ತ ಫಿಲ್ಡ್ ಅಂಪೈರ್ ಮೂರನೇ ಅಂಪೈರ್ ಬಳಿ ಮರುಪರಿಶೀಲನೆಗೆ ಮನವಿ ಮಾಡಿದರು. ಎಲ್ಲವನ್ನು ಕುಲಂಕುಶವಾಗಿ ಪರಿಶೀಲಿಸಿದ ಅಂಪೈರ್, ಸಲ್ಮಾನ್ ಆಘಾ ಔಟೆಂದು ತೀರ್ಪು ನೀಡಿದರು. ಇದರಿಂದ ಇನ್ನಷ್ಟು ಕೆರಳಿದ ಆಘಾ, ತಮ್ಮ ಹೆಲ್ಮೆಟ್ ಮತ್ತು ಕೈಗವಸುಗಳನ್ನು ತೆಗೆದು ನೆಲದ ಮೇಲೆ ಎಸೆದು ಆಕ್ರೋಶ ಹೊರಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರು, (ಮಾರ್ಚ್ 13): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಮಾರ್ಚ್ 13) ತವರು ಕ್ಷೇತ್ರ ಮೈಸೂರಿನ ವರುಣಾಕ್ಕೆ ಭೇಟಿ ನೀಡಿದ್ದು, ಶ್ರೀ ಬೀರೇಶ್ವರ ಸ್ವಾಮಿ ದೇವಾಲಯದ ಸಂಪ್ರೋಕ್ಷಣ, ಪುನರ್ ಪ್ರತಿಷ್ಠಾಪನೆ, ಕುಂಭಾಭಿಷೇಕ ಹಾಗೂ ಮಹಾದ್ವಾರದ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯನವರನ್ನು ಅದ್ಧೂರಿಯಾಗಿ ತೆರೆ ವಾಹನದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ಇನ್ನು ಇದೇ ವೇಳೆ ಭದ್ರತಾಲೋಪವಾಗಿದೆ. ಸಿದ್ದರಾಮ್ಯಯ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಯುವಕನೋರ್ವ ಏಕಾಏಕಿ ವೇದಿಕೆ ನುಗ್ಗಿದ್ದು, ನಮ್ಮ ಹುಡುಗರು ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳಬೇಕೆಂದಿದ್ದಾರೆ. ಆದ್ದರಿಂದ ಸ್ವಲ್ಪ ಬಿಡುವು ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾನೆ.