Google Internship 2026: ಗೂಗಲ್​ ಕಂಪನಿಯಲ್ಲಿ ಕೆಲಸ ಪಡೆಯುವುದು ನಿಮ್ಮ ಕನಸೇ? ಹಾಗಿದ್ರೆ ಈ ಕೂಡಲೇ ಈ ಇಂಟರ್ನ್‌ಶಿಪ್​ಗೆ ಅರ್ಜಿ ಸಲ್ಲಿಸಿ – Kannada News | Google 2026 Student Research Internship: Apply Now! Eligibility and Process

ಗೂಗಲ್ ಸ್ಟೂಡೆಂಟ್ ರಿಸರ್ಚ್ ಇಂಟರ್ನ್‌ಶಿಪ್

ಗೂಗಲ್ 2026ರ ಸ್ಟೂಡೆಂಟ್ ರಿಸರ್ಚ್ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಇಂಟರ್ನ್‌ಶಿಪ್​​ಗೆ ಫೆಬ್ರವರಿ 26ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳು ಜ್ಯೂರಿಚ್, ಬರ್ಲಿನ್, ಮ್ಯೂನಿಚ್, ಗ್ರೆನೋಬಲ್, ಫ್ರಾನ್ಸ್, ಪ್ಯಾರಿಸ್, ಅಕ್ರಾ, ನೈರೋಬಿ, ಲಂಡನ್‌ನಲ್ಲಿ ಗೂಗಲ್‌ನೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಇದರರ್ಥ ಗೂಗಲ್ ರಿಸರ್ಚ್ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳು ಫ್ರಾನ್ಸ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್ ಮತ್ತು ಯುಕೆಯಲ್ಲಿ ಗೂಗಲ್‌ನೊಂದಿಗೆ ಕೆಲಸ ಮಾಡುತ್ತಾರೆ. ಆದ್ದರಿಂದ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು, ಯಾರು ಅರ್ಜಿ ಸಲ್ಲಿಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸುವುದು ಹೇಗೆ?

ನೀವು Google ವಿದ್ಯಾರ್ಥಿ ಸಂಶೋಧನಾ ಇಂಟರ್ನ್‌ಶಿಪ್​​ಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸುತ್ತಿದ್ದರೆ, ಮೊದಲು ನಿಮ್ಮ CV ಅಥವಾ ರೆಸ್ಯೂಮ್ ಅಪ್ಡೇಟ್​ ಮಾಡಿ. ನಂತರ, ನೀವು ಈ ಕೆಳಗಿನಂತೆ ಅರ್ಜಿ ಸಲ್ಲಿಸಬಹುದು.

ಇಂಟರ್ನ್‌ಶಿಪ್‌ಗಳಿಗೆ ಅರ್ಜಿಗಳನ್ನು ಗೂಗಲ್ ಕೆರಿಯರ್ಸ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸಲ್ಲಿಸಬಹುದು. Google Careers ವೆಬ್‌ಸೈಟ್‌ನ ಮುಖಪುಟದಲ್ಲಿ ‘Apply’ ವಿಭಾಗದ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ತೋರಿಸಿರುವ ರೆಸ್ಯೂಮ್ ವಿಭಾಗದಲ್ಲಿ ನವೀಕರಿಸಿದ ಸಿವಿ ಅಥವಾ ರೆಸ್ಯೂಮ್ ಅನ್ನು ಅಪ್‌ಲೋಡ್ ಮಾಡಿ. ನಂತರ ಸಿದ್ಧಪಡಿಸಿದ ಪ್ರತಿಲಿಪಿಯನ್ನು ಶಿಕ್ಷಣ ವಿಭಾಗದಲ್ಲಿ ಅಪ್‌ಲೋಡ್ ಮಾಡಿ.

ಪದವಿ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರು:

ಪದವೀಧರ ವಿದ್ಯಾರ್ಥಿಗಳು ಗೂಗಲ್ ವಿದ್ಯಾರ್ಥಿ ಸಂಶೋಧನಾ ಇಂಟರ್ನ್‌ಶಿಪ್‌ಗಳಿಗೂ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ಕಂಪ್ಯೂಟರ್ ವಿಜ್ಞಾನ, ಭಾಷಾಶಾಸ್ತ್ರ, ಅಂಕಿಅಂಶಗಳು, ಬಯೋಸ್ಟಾಟಿಸ್ಟಿಕ್ಸ್, ಅನ್ವಯಿಕ ಗಣಿತ, ಕಾರ್ಯಾಚರಣೆ ಸಂಶೋಧನೆ, ಅರ್ಥಶಾಸ್ತ್ರ ಅಥವಾ ನೈಸರ್ಗಿಕ ವಿಜ್ಞಾನಗಳಲ್ಲಿ ಪದವಿ, ಸ್ನಾತಕೋತ್ತರ ಅಥವಾ ಪಿಎಚ್‌ಡಿ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಗೂಗಲ್ ವಿದ್ಯಾರ್ಥಿ ಸಂಶೋಧನಾ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಅರ್ಜಿದಾರರು ಕಂಪ್ಯೂಟರ್ ವಿಜ್ಞಾನದ ಕನಿಷ್ಠ ಒಂದು ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು.

ಗೂಗಲ್ ವಿದ್ಯಾರ್ಥಿ ಸಂಶೋಧನಾ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಗೂಗಲ್ ಡೀಪ್‌ಮೈಂಡ್, ಗೂಗಲ್ ರಿಸರ್ಚ್ ಮತ್ತು ಗೂಗಲ್ ಕ್ಲೌಡ್‌ನಂತಹ ಸಂಶೋಧನಾ ತಂಡಗಳೊಂದಿಗೆ ಕೆಲಸ ಮಾಡಲು ಅವಕಾಶವನ್ನು ಹೊಂದಿರುತ್ತಾರೆ. ವಿದ್ಯಾರ್ಥಿ ಸಂಶೋಧಕರು ಗೂಗಲ್ ಸಂಶೋಧಕರು, ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳೊಂದಿಗೆ ಮುಂದುವರಿದ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಹಾಯ ಮಾಡುವ ಪರಿಶೋಧನಾ ಯೋಜನೆಗಳಲ್ಲಿ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: ಐಪಿಎಸ್ ಅಧಿಕಾರಿಯಾಗಲು 15 ಸರ್ಕಾರಿ ಉದ್ಯೋಗ ತೊರೆದ ತೃಪ್ತಿ ಭಟ್; ಯಶಸ್ಸಿನ ಕಥೆ ಇಲ್ಲಿದೆ

ಇಂಟರ್ನ್‌ಶಿಪ್ ನಂತರ ಗೂಗಲ್‌ನಲ್ಲಿ ಕೆಲಸ:

ಗೂಗಲ್ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳು ಗೂಗಲ್‌ನೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯಬಹುದು. ವಾಸ್ತವವಾಗಿ, ವೈಜ್ಞಾನಿಕ ಪ್ರಗತಿಯಲ್ಲಿ ಕಂಪನಿಯ ಆದ್ಯತೆಗಳಿಗೆ ಅನುಗುಣವಾಗಿ ಸಂಶೋಧನಾ ಯೋಜನೆಗಳಿಗೆ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವ ಮೂಲಕ ಗೂಗಲ್ ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸುತ್ತದೆ. ವಿದ್ಯಾರ್ಥಿ ಸಂಶೋಧಕ ಕಾರ್ಯಕ್ರಮವು ಸಂಶೋಧನೆ, ಎಂಜಿನಿಯರಿಂಗ್ ಮತ್ತು ವಿಜ್ಞಾನ ಪಾತ್ರಗಳಲ್ಲಿ ತಂಡಗಳಲ್ಲಿ ಭರವಸೆಯ ಇಂಟರ್ನ್‌ಶಿಪ್ ಅಭ್ಯರ್ಥಿಗಳಿಗೆ ನಿಯೋಜನೆಗಳನ್ನು ಒದಗಿಸುತ್ತದೆ.

ಗೂಗಲ್ ಸ್ಟೂಡೆಂಟ್ ಇಂಟರ್ನ್‌ಶಿಪ್ ಪ್ರೋಗ್ರಾಂ ಬಗ್ಗೆ ತಿಳಿದುಕೊಳ್ಳಲು ಮತ್ತು ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಕ್ಕಿದ್ದೇ ಚಾನ್ಸ್ ಅಂತ ಕಂಡ ಕಂಡಲ್ಲಿ ಮುಟ್ಟಿದ್ರು; ಮಾಲ್​​ನಲ್ಲಿ ನಟಿಗೆ ಕಿರುಕುಳ – Kannada News | Nidhhi Agerwal Faces Crowd Harassment at Lulu Mall The Raja saab Event in Hyderabad

ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಎಲ್ಲರೂ ಸೆಲ್ಫಿಗೆ ಮುಗಿ ಬೀಳುತ್ತಾರೆ. ಆದರೆ, ಕೆಲವೊಮ್ಮೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾಗ ಅಲ್ಲಿ ಬೇರೆಯದೇ ರೀತಿಯ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಸಿಕ್ಕಿದ್ದೇ ಚಾನ್ಸ್ ಎಂದು ಕಂಡ ಕಂಡಲ್ಲಿ ಮುಟ್ಟುವ ಕಿಡಿಗೇಡಿಗಳೂ ಇದ್ದಾರೆ. ಈಗ ತೆಲುಗು ನಟಿ ನಿಧಿ ಅಗರ್​ವಾಲ್ (Nidhi Agerwal) ಅವರಿಗೂ ಇದೇ ರೀತಿಯ ಅನುಭವ ಆಗಿದೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆ ಹುಟ್ಟುಹಾಕಿದೆ.

ನಿಧಿ ಅವರು ಹುಟ್ಟಿದ್ದು ಆಂಧ್ರದಲ್ಲಿ. ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮಾಡಿದ್ದಾರೆ. ಹೀಗಾಗಿ, ಅವರಿಗೆ ಕರ್ನಾಟಕದ ಲಿಂಕ್ ಇದೆ. 2017ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ಅವರು ಜನಪ್ರಿಯತೆ ಪಡೆದರು. ಈಗ ಪ್ರಭಾಸ್ ನಟನೆಯ ‘ರಾಜಾಸಾಬ್’ ಸಿನಿಮಾಗೆ ನಾಯಕಿ ಆಗಿದ್ದಾರೆ. ಈ ಚಿತ್ರದ ಈವೆಂಟ್​​ನಲ್ಲಿ ಅವರು ತೊಂದರೆ ಅನುಭವಿಸಿದ್ದಾರೆ.

ಇದನ್ನೂ ಓದಿ: ಪವನ್​ ಕಲ್ಯಾಣ್​ ಜತೆಗಿನ ಮೊದಲ ಶಾಟ್​ ನೆನೆದು ಖುಷಿಪಟ್ಟ ನಿಧಿ ಅಗರ್​ವಾಲ್​

‘ರಾಜಾಸಾಬ್’ ಚಿತ್ರದ ಪ್ರಮೋಷನ್ ಈವೆಂಟ್ ಹೈದರಾಬಾದ್​ನ ಲೂಲು ಮಾಲ್​​ನಲ್ಲಿ ನಡೆದಿದೆ. ಈ ವೇಳೆ ಸಿನಿಮಾದ ನಿರ್ದೇಶಕ ಮಾರುತಿ ಹಾಗೂ ನಟಿ ನಿಧಿ ಭಾಗಿ ಆಗಿದ್ದರು. ಊಹಿಸಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅವರು ಈವೆಂಟ್ ಮುಗಿಸಿ ಬರುವಾಗ ಎಲ್ಲರೂ ಅವರನ್ನು ಮುತ್ತಿಕೊಂಡಿದ್ದಾರೆ. ಅವರ ದೇಹವನ್ನು ಟಚ್ ಮಾಡಲು ಕೆಲವರು ಪ್ರಯತ್ನಿಸಿದ್ದಾರೆ. ಇದರಿಂದ ಅವರಿಗೆ ಮುಜುಗರ ಆಗಿದೆ. ನಿಧಿಗೆ ಇದು ಕಿರುಕುಳದಂತೆ ಕಾಣಿಸಿದೆ.

ಬೌನ್ಸರ್​​ಗಳು ಶ್ರಮ ಹಾಕಿದರೂ ಜನರು ಮುತ್ತಿಕೊಳ್ಳೋದನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಕೊನೆಗೂ ಅವರು ಕಾರನ್ನು ಏರಿದ್ದಾರೆ. ಈ ವೇಳೆ ಅವರ ಡ್ರೆಸ್​ ಪರಿಸ್ಥಿತಿ ಕೂಡ ಹದಗೆಟ್ಟಿತ್ತು. ಕಾರಿನಲ್ಲಿ ಬಂದು ಕುಳಿತ ಬಳಿಕ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಂದರ್ಭದ ವಿಡಿಯೋನ ವೈರಲ್ ಮಾಡಲಾಗುತ್ತಿದೆ. ನಟಿಯ ಜೊತೆ ಅಲ್ಲಿ ನೆರೆದಿದ್ದವರು ನಡೆದುಕೊಂಡಿದ್ದು ಸರಿ ಅಲ್ಲ ಎಂದಿದ್ದಾರೆ. ಇನ್ನೂ ಕೆಲವರು ನಿಜವಾದ ಅಭಿಮಾನಿಗಳು ಈ ರೀತಿ ಮಾಡೋದಿಲ್ಲ ಎನ್ನುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:23 pm, Thu, 18 December 25

Source link

IND vs SA: ಟಾಸ್ ಕೂಡ ನಡೆಯದೆ 4ನೇ ಟಿ20 ಪಂದ್ಯ ರದ್ದು; ಟಿಕೆಟ್ ಖರೀದಿಸಿದವರ ಕಥೆ ಏನು? – Kannada News | IND vs SA 4th T20 Match Washed Out: Fans Get Ticket Refunds? BCCI Rules

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa)  ನಡುವಿನ 4ನೇ ಟಿ20 ಪಂದ್ಯ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ( Lucknow Cricket) ಡಿಸೆಂಬರ್ 17 ರಂದು ನಡೆಯಬೇಕಿತ್ತು. ಆದರೆ ಮೈದಾನದ ತುಂಬ ದಟ್ಟ ಮಂಜು ಆವರಿಸಿದ ಕಾರಣ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ತಲಾ ಐದು ಓವರ್ ಪಂದ್ಯವನ್ನು ಆಡಿಸುವ ಸಲುವಾಗಿ ಅಂಪೈರ್​ಗಳು 6 ಬಾರಿ ಟಾಸ್ ಮುಂದೂಡಿದರು. ಆದರೆ ಸಮಯ ಮೀರಿದ ಕಾರಣ ರಾತ್ರಿ 9:30 ಕ್ಕೆ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರವನ್ನು ಅಂಪೈರ್​ಗಳು ಪ್ರಕಟಿಸಿದರು. ಹೀಗಾಗಿ 4ನೇ ಟಿ20 ಪಂದ್ಯ ಒಂದು ಎಸೆತವನ್ನು ಎಸೆಯಲು ಸಾಧ್ಯವಾಗದೆ ರದ್ದಾಯಿತು. ಆದರೆ ದುಬಾರಿ ಹಣ ನೀಡಿ ಟಿಕೆಟ್ ಖರೀದಿಸಿದ ಅಭಿಮಾನಿಗಳಿಗೆ ಟಿಕೆಟ್ ಹಣ ಮರುಪಾವತಿಯಾಯಿತಾ? ಇದಕ್ಕೆ ಬಿಸಿಸಿಐ (BCCI) ನಿಯಮ ಏನು ಹೇಳುತ್ತದೆ ಎಂಬುದನ್ನು ನೋಡಿದಾಗ..

ಟಾಸ ಕೂಡ ನಡೆಯದೆ 4ನೇ ಟಿ20 ರದ್ದು

ವಾಸ್ತವವಾಗಿ ಈ ರೀತಿಯ ದಟ್ಟ ಮಂಜಿನ ಕಾರಣದಿಂದಾಗಿ ಪಂದ್ಯವನ್ನು ರದ್ದುಗೊಳಿಸುತ್ತಿರುವುದು ತೀರ ಅಪರೂಪದ ಘಟನೆಯಾಗಿದೆ. ಮಳೆಯಿಂದಾಗಿ ಹಾಗೂ ಕೆಟ್ಟ ಹವಾಮಾನದಿಂದಾಗಿ ಪಂದ್ಯವನ್ನು ರದ್ದುಗೊಳಿಸಿದ ಘಟನೆಗಳು ಭಾರತದಲ್ಲಿ ಸಾಕಷ್ಟು ಭಾರಿ ನಡೆದಿವೆ. ಅಂತಹ ಸಮಯದಲ್ಲಿ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗದಂತೆ ಬಿಸಿಸಿಐ ಕೂಡ ಟಿಕೆಟ್ ಹಣವನ್ನು ಮರುಪಾವತಿಸಿತ್ತು. ಆದರೆ 4ನೇ ಟಿ20 ಪಂದ್ಯ ಮಂಜಿನ ಕಾರಣದಿಂದ ರದ್ದಾಗಿರುವುದರಿಂದ ಟಿಕೆಟ್ ಹಣ ಮರುಪಾವತಿಯಾಗುತ್ತಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅದಕ್ಕೆ ಉತ್ತರ ಹೌದು..

ಟಿಕೆಟ್ ಹಣ ಮರುಪಾವತಿಯಾಗುತ್ತಾ?

ಈ ರೀತಿಯ ಪ್ರಕೃತಿ ವೈಪರಿತ್ಯಗಳಿಂದ ಪಂದ್ಯ ರದ್ದಾದರೆ ಟಿಕೆಟ್ ಹಣವನ್ನು ಮರುಪಾವತಿ ಮಾಡುವ ಸಲುವಾಗಿ ಬಿಸಿಸಿಐ ಎರಡು ಪ್ರಮುಖ ನಿಯಮಗಳನ್ನು ಜಾರಿ ಮಾಡಿದೆ. ಮೊದಲ ನಿಯಮದ ಪ್ರಕಾರ, ಒಂದೇ ಒಂದು ಚೆಂಡು ಎಸೆಯದೆ ಪಂದ್ಯ ರದ್ದಾದರೆ, ಟಿಕೆಟ್ ಬುಕಿಂಗ್ ಶುಲ್ಕವನ್ನು ಕಡಿತಗೊಳಿಸಿದ ನಂತರ ಸಂಪೂರ್ಣ ಹಣವನ್ನು ಕ್ರಿಕೆಟ್ ಅಭಿಮಾನಿಗಳಿಗೆ ಹಿಂತಿರುಗಿಸಲಾಗುತ್ತದೆ. ಎರಡನೇ ನಿಯಮದ ಪ್ರಕಾರ, ಪಂದ್ಯ ಪ್ರಾರಂಭವಾಗಿ ನಂತರ ಹವಾಮಾನ ವೈಪರೀತ್ಯದಿಂದಾಗಿ ರದ್ದಾದರೆ, ಯಾವುದೇ ಟಿಕೆಟ್ ಹಣವನ್ನು ಮರುಪಾವತಿಸಲಾಗುವುದಿಲ್ಲ. ಅಂದರೆ ಲಕ್ನೋದಲ್ಲಿ ಟಾಸ್ ಕೂಡ ನಡೆಯದ ಕಾರಣ, ಟಿಕೆಟ್ ಖರೀದಿಸಿ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ಟಿಕೆಟ್ ಬುಕಿಂಗ್ ಶುಲ್ಕವನ್ನು ಕಡಿತಗೊಳಿಸಿ ಉಳಿದ ಪೂರ ಹಣವನ್ನು ಮರುಪಾವತಿ ಮಾಡಲಾಗುತ್ತದೆ.​

IND vs SA: ದಟ್ಟ ಮಂಜಿನಿಂದ 4ನೇ ಟಿ20 ಪಂದ್ಯ ರದ್ದು; ಸರಣಿಯಲ್ಲಿ ಭಾರತದ ಮೇಲುಗೈ

ಸರಣಿಯ ಸ್ಥಿತಿ ಏನು?

ಮೊದಲ ನಾಲ್ಕು ಪಂದ್ಯಗಳ ನಂತರ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಕಟಕ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಭಾರತ ಗೆದ್ದರೆ, ಮುಲ್ಲನ್‌ಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿತು. ಧರ್ಮಶಾಲಾದಲ್ಲಿ ನಡೆದ ಮೂರನೇ ಟಿ20ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದೀಗ ನಾಲ್ಕನೇ ಟಿ20 ಪಂದ್ಯ ರದ್ದಾದ ನಂತರ, ಡಿಸೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉಭಯ ತಂಡಗಳ ನಡುವೆ ಐದನೇ ಮತ್ತು ಅಂತಿಮ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಏಕೆಂದರೆ ಈ ಪಂದ್ಯವನ್ನು ಭಾರತ ಗೆದ್ದರೆ ಸರಣಿ ಅದರ ಕೈಸೇರಲಿದೆ, ಒಂದು ವೇಳೆ ಸೋತರೆ ಸರಣಿ 2-2 ರಿಂದ ಸಮಬಲಗೊಳ್ಳಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:05 pm, Thu, 18 December 25

Source link

ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ ಮೆರೆದ ಗ್ಯಾಂಗ್​​

ರಾಮನಗರ, ಡಿಸೆಂಬರ್​​ 18: 19 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಆತ್ಯಾಚಾರ ಆರೋಪ ಹಿನ್ನೆಲೆ ಬೆಂಗಳೂರಿನ ಮಾಗಡಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಕಾಸ್, ಪ್ರಶಾಂತ್ ಹಾಗೂ ಚೇತನ್ ಬಂಧಿತ ಆರೋಪಿಗಳು. ಬೆಂಗಳೂರಿನ ಕಾಲೇಜುವೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಪ್ರೀತಿಯ ನೆಪದಲ್ಲಿ ವಿಕಾಸ್ ಪರಿಚಯ ಮಾಡಿಕೊಂಡಿದ್ದ. ಆನಂತರ ವಿದ್ಯಾರ್ಥಿನಿಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದು, ಅದನ್ನು ವಿಡಿಯೋ ಮಾಡಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ. ಮೂರು ತಿಂಗಳ ಹಿಂದೆ ವಿಡಿಯೋ ಮಾಡಿಕೊಂಡಿದ್ದ ಈತ, ನಾನು ಕರೆದಾಗಲೆಲ್ಲ ಬರಬೇಕು ಎಂದು ಹೇಳಿದ್ದ. ಆ ನಂತರ ಮೂವರು ಸೇರಿಕೊಂಡು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs SA: ಭಾರತ- ಆಫ್ರಿಕಾ ನಡುವಿನ ಸರಣಿ ನಿರ್ಧಾರಕ ಪಂದ್ಯ ಯಾವಾಗ ಎಷ್ಟು ಗಂಟೆಗೆ ಆರಂಭ? – Kannada News | India vs South Africa 5th T20: Date, Venue, Time, Live Stream and Squads

ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ 4ನೇ ಟಿ20 ಪಂದ್ಯ ದಟ್ಟವಾದ ಮಂಜು ಕವಿದ ಕಾರಣ ರದ್ದಾಯಿತು. ಇದರಿಂದಾಗಿ ಉಭಯ ತಂಡಗಳ ನಡುವಿನ ಈ ಸರಣಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಸರಣಿಯಲ್ಲಿ ಈಗಾಗಲೇ ಮುನ್ನಡೆ ಸಾಧಿರಿಸುವ ಟೀಂ ಇಂಡಿಯಾ ಕೊನೆಯ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳಲು ನೋಡುತ್ತಿದ್ದರೆ, ಇತ್ತ ಸರಣಿ ಸೋಲಿನ ಆತಂಕದಲ್ಲಿರುವ ದಕ್ಷಿಣ ಆಫ್ರಿಕಾ ಕೊನೆಯ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲದೊಂದಿಗೆ ಅಂತ್ಯಗೊಳಿಸುವ ಇರಾದೆಯಲ್ಲಿದೆ. ಅದಕ್ಕೂ ಮುನ್ನ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20ಪಂದ್ಯ ಯಾವಾಗ, ಎಲ್ಲಿ ನಡೆಯಲಿದೆ ಎಂಬಿತ್ಯಾದಿ ವಿವರವನ್ನು ತಿಳಿದುಕೊಳ್ಳೋಣ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯ ಡಿಸೆಂಬರ್ 19, 2025 ರಂದು ನಡೆಯಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದನೇ ಟಿ20ಪಂದ್ಯ ಸಂಜೆ 7 ಗಂಟೆಯಿಂದ ಆರಂಭವಾಗಲಿದ್ದು, ಟಾಸ್ ಅರ್ಧ ಗಂಟೆ ಮುಂಚಿತವಾಗಿ ಅಂದರೆ ಸಂಜೆ 6:30 ಕ್ಕೆ ನಡೆಯಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯವನ್ನು ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಮೊಬೈಲ್‌ನಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್.

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ನಾಯಕ), ಡಿ ಕಾಕ್, ಹೆಂಡ್ರಿಕ್ಸ್, ಬ್ರೆವಿಸ್, ಮಿಲ್ಲರ್, ಸ್ಟಬ್ಸ್, ಫೆರೀರಾ, ಜೆನ್ಸನ್, ಲುಥೊ ಸಿಪಾಮ್ಲಾ, ಒಟ್ನೀಲ್ ಬಾರ್ಟ್‌ಮನ್, ಅನ್ರಿಚ್ ನೋಕಿಯಾ, ಲುಂಗಿ ಎನ್‌ಗಿಡಿ, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್, ಜಾರ್ಜ್ ಲಿಂಡೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್​​ನಲ್ಲಿ ‘ಆ ವಿಷಯ’ ಏಕೆ ಚರ್ಚಿಸಲಿಲ್ಲ: ಕಾರಣ ತಿಳಿಸಿದ ಸುದೀಪ್ – Kannada News | Sudeep talks about why he did not addressed Ashwini Gowda’s S statement

ಸಿನಿಮಾಗಳ ರೀತಿಯೇ ಬಿಗ್​​ಬಾಸ್ ಸಹ ಸುದೀಪ್ (Sudeep) ಅವರ ವೃತ್ತಿ ಜೀವನದ ಭಾಗವಾಗಿದೆ. ಸುದೀಪ್ ಅವರು ಸಿನಿಮಾ ಪ್ರಚಾರಕ್ಕೆ ಹೋದರೂ ಸಹ ಬಿಗ್​​ಬಾಸ್ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಸುದೀಪ್ ಅವರು ಬಿಗ್​​ಬಾಸ್ ಮನೆಯಲ್ಲಿ ಆಡಿದ ಮಾತುಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಸುದೀಪ್ ಮಾತನಾಡಿದ್ದು ಸರಿ, ತಪ್ಪು ಹೀಗೆ ವಿಶ್ಲೇಷಣೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಸುದೀಪ್ ಅವರು, ಈ ಸೀಸನ್​​ನ ಬಿಗ್​​ಬಾಸ್​​ನಲ್ಲಿ ಸ್ಪರ್ಧಿಯೊಬ್ಬರು ಆಡಿದ ಮಾತೊಂದರ ಬಗ್ಗೆ ಏಕೆ ವಿಶ್ಲೇಷಣೆ ಮಾಡಲಿಲ್ಲ ಎಂಬುದನ್ನು ಇದೀಗ ವಿವರಿಸಿದ್ದಾರೆ.

ಬಿಗ್​​ಬಾಸ್ ಆರಂಭವಾದ ಕೆಲ ವಾರದ ಬಳಿಕ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿಯ ಜೊತೆ ಜಗಳ ಆಡುತ್ತಾ, ‘ನಿನ್ನ ಬಟ್ಟೆ, ನಿನ್ನ ಅವತಾರ ನೋಡಿದರೆ ನೀನು ಎಲ್ಲಿಂದ ಬಂದವಳು, ನೀನೊಬ್ಬ ‘ಎಸ್’ ಎಂದಿದ್ದರು. ಅಶ್ವಿನಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಯ್ತು. ರಕ್ಷಿತಾ ವಿರುದ್ಧ ಜಾತಿ ನಿಂದಕ ಪದ ಬಳಸಿದ್ದಾರೆ ಎಂದು ಕೆಲವರು ಹೇಳಿದರು. ಇನ್ನು ಕೆಲವರು ರಕ್ಷಿತಾರನ್ನು ‘ಸ್ಲಂ’ ಎಂದು ಕರೆಯಲಾಗಿದೆ ಎಂದರು. ಅಸಲಿಗೆ ಅಶ್ವಿನಿ ಅವರು ರಕ್ಷಿತಾ ಬಗ್ಗೆ ಅವಮಾನಕರ, ಕೀಳು ಪದವನ್ನೇ ಬಳಸಿದ್ದಾರೆಂಬುದು ನೋಡುಗರಿಗೆ ಖಾತ್ರಿ ಆಗಿತ್ತು.

ಅಶ್ವಿನಿ ಅವರು ರಕ್ಷಿತಾರ ಮೇಲೆ ಜಗಳ ಮಾಡಿದ್ದು, ನಿಂದಿಸಿದ್ದನ್ನು ಖಂಡಿಸಿ, ಸುದೀಪ್ ಮಾತನಾಡಿದ್ದರು. ಆದರೆ ‘ಎಸ್’ ಪದದ ಬಗ್ಗೆ ಹೆಚ್ಚಾಗಿ ಚರ್ಚೆ ಆಗಲಿಲ್ಲ. ಈ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಇದೀಗ ‘ಮಾರ್ಕ್’ ಸಿನಿಮಾ ಪ್ರಚಾರದಲ್ಲಿರುವ ಸುದೀಪ್, ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ‘ಒಂದೊಮ್ಮೆ ನಾನು ‘ಎಸ್’ ಎಂದು ಏಕೆ ಹೇಳಿದಿರಿ ಎಂದು ಕೇಳಿದೆ ಎಂದುಕೊಳ್ಳಿ, ಆಗ ಆ ಸ್ಪರ್ಧಿ, ‘ಇಲ್ಲ ಅಣ್ಣ, ಎಸ್ ಎಂದರೆ ಸಿಲ್ಲಿ, ಆ ಹುಡುಗಿ ರಕ್ಷಿತಾ ತುಂಬ ಸಿಲ್ಲಿ, ಹಾಗಾಗಿ ನಾನು ‘ಎಸ್’ ಅಂದೆ’ ಎಂದರು ಅಂದುಕೊಳ್ಳೋಣ. ಆಗ ನಾನೇನು ಮಾಡಬೇಕು, ಇಲ್ಲ, ಇಲ್ಲ, ‘ಎಸ್’ ಎಂದರೆ ನನ್ನ ತಲೆಯಲ್ಲಿ ಬೇರೆ ಏನೋ ಅರ್ಥ ಇದೆ, ನನ್ನ ತಲೆಯಲ್ಲಿ ಇರುವ ಆ ಕೆಟ್ಟ ಅರ್ಥದ ಪದವನ್ನೇ ನೀವು ಬಳಸಿದ್ದೀರಿ ಎಂದು ಹೇಳಲು ಆಗುತ್ತದೆಯೇ? ಏಕೆಂದರೆ ಹೇಳಿದವರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ನೋಡುಗರಿಗೆ ನಮಗೆ ಗೊತ್ತಿದೆ ಅದು ಏನೆಂಬುದು’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ:ಬಿಗ್​ಬಾಸ್ ಗೌತಮಿ, ರಿಷಿ ನಟನೆಯ ಹೊಸ ಸಿನಿಮಾ ಮುಹೂರ್ತ: ವಿಡಿಯೋ

‘ಆ ‘ಟಿ ಗಾಂಚಾಲಿ’ ವಿಷಯದಲ್ಲಿಯೂ ಹಾಗೆಯೇ ಆಯ್ತು. ‘ಟಿ ಗಾಂಚಲಿ’ ಎಂದರೆ ಏನೆಂದು ನಮಗೆಲ್ಲ ಗೊತ್ತು, ಆದರೆ ನಾನು ಪ್ರಶ್ನೆ ಮಾಡಿದಾಗ ಆ ವ್ಯಕ್ತಿ ‘ಟಿ ಗಾಂಚಲಿ’ ಎಂದರೆ ತಲೆ ಗಾಂಚಲಿ ಎಂದರು. ಏನು ಮಾಡೋಣ, ಇಲ್ಲ ನೀವು ಇದೇ ಅರ್ಥದಲ್ಲಿಯೇ ಹೇಳಿದ್ದೀರಿ ಎಂದು ವಾದ ಮಾಡಲು ಆಗುತ್ತದೆ? ಆದರೆ ನಾನು ಅದನ್ನು ಅವರಿಗೆ ಹೇಗೆ ಅರ್ಥ ಮಾಡಿಸಬೇಕೊ ಹಾಗೆ ಮಾಡಿಸಿದ್ದೀನಿ’ ಎಂದಿದ್ದಾರೆ ಸುದೀಪ್. ಮುಂದುವರೆದು, ‘ಜನ ಮಾತನಾಡುತ್ತಾರೆ, ಆದರೆ ಅಲ್ಲಿ ವೇದಿಕೆ ಮೇಲೆ ನಿಂತು ಸ್ಪರ್ಧಿಗಳೊಟ್ಟಿಗೆ ವಾದ ಮಾಡುವುದು ಸುಲಭವಾಗಿರುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ, ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿಯದ್ದಾಗಿರುತ್ತದೆ’ ಎಂದಿದ್ದಾರೆ ಕಿಚ್ಚ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:17 pm, Thu, 18 December 25

Source link

ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್ – Kannada News | Ravichandran entered Bigg Boss house as guest

ಬಿಗ್​​ಬಾಸ್ (Bigg Boss) ಮನೆಗೆ ಅತಿಥಿಗಳು ಆಗಾಗ್ಗೆ ಬರುತ್ತಲೇ ಇರುತ್ತಾರೆ. ಕೆಲ ವಾರಗಳ ಹಿಂದಷ್ಟೆ ಈ ಹಿಂದಿನ ಸೀಸನ್​​ನ ಕೆಲ ಸ್ಪರ್ಧಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದರು. ಈ ಹಿಂದಿನ ಸೀಸನ್​​ಗಳಲ್ಲಿ ಸಹ ಕೆಲ ಬೇರೆ ಅತಿಥಿಗಳು ಸಹ ಬಂದಿದ್ದರು. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಬಿಗ್​​ಬಾಸ್ ಮನೆ ಒಳಗೆ ಇದು ಅವರ ಮೊದಲ ಎಂಟ್ರಿ. ತಮ್ಮ ಹೊಸ ಸಿನಿಮಾದ ಪ್ರಚಾರಕ್ಕೆಂದು ಬಿಗ್​​ಬಾಸ್ ಮನೆಗೆ ಬಂದಿರುವ ರವಿಚಂದ್ರನ್ ಅವರು ತಮ್ಮ ಮೊದಲ ಪ್ರೇಮಕಥೆಯನ್ನು ಬಿಗ್​​ಬಾಸ್ ಮನೆಯಲ್ಲಿ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಇವ್ನೆಂಥಾ ಮಗ, ಹೆತ್ತ ತಂದೆ ತಾಯಿಯನ್ನು ಹೊಡೆದು ಕೊಂದು, ದೇಹಗಳನ್ನು ಕತ್ತರಿಸಿ ನದಿಗೆಸೆದ ಮಗ – Kannada News | Jaunpur: Engineer Son Kills Parents, Chops Bodies Over Muslim Wife and Alimony

ಮಗ ಹಾಗೂ ಕೊಲೆಯಾದ ಪೋಷಕರು Image Credit source: NDTV

ಜೌನ್​ಪುರ, ಡಿಸೆಂಬರ್ 18: ಮಗನೊಬ್ಬ ಹೆತ್ತ ತಂದೆ-ತಾಯಿಯನ್ನೇ ಕೊಲೆ (Murder)ಮಾಡಿ ದೇಹಗಳನ್ನು ಕತ್ತರಿಸಿ ನದಿಗೆ ಎಸೆದಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ. ಕಾಣೆಯಾದ ದಂಪತಿಯ ಹುಡುಕಾಟವು ಪೊಲೀಸರನ್ನು ಅವಳಿ ಕೊಲೆವರೆಗೆ ಕೊಂಡೊಯ್ದಿತ್ತು. ತಂದೆಯ ಹಠಮಾರಿತನ ಹಾಗೂ ಮಗನ ಕೋಪ ಹೇಗೆ ಒಂದು ದುರಂತಕ್ಕೆ ಕಾರಣಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಎಂಜಿನಿಯರ್ ಆಗಿರುವ ಅಂಬೇಶ್ ತನ್ನ ತಂದೆ ಶ್ಯಾಮ್ ಬಹದ್ದೂರ್(62), ತಾಯಿ ಬಬಿತಾ(60) ಅವರನ್ನು ಕೊಲೆ ಮಾಡಿ, ಗರಗಸದಿಂದ ದೇಹಗಳನ್ನು ಕತ್ತರಿಸಿ ನದಿಗೆ ಎಸೆದ ಆರೋಪದ ಮೇಲೆ ಬಂಧಿಸಿದ್ದಾರೆ.

ಅಂಬೇಷ್ ಮತ್ತು ಆತನ ಹೆತ್ತವರ ನಡುವೆ ಮುಸ್ಲಿಂ ಪತ್ನಿಯ ವಿಷಯವಾಗಿ ಜಗಳ ನಡೆಯುತ್ತಿತ್ತು, ಅವರು ಆಕೆಯನ್ನು ಮನೆಯೊಳಗೆ ಸೇರಿಸಲು ನಿರಾಕರಿಸಿದ್ದರು. ಅಂಬೇಷ್ ಮತ್ತು ಆತನ ಪತ್ನಿ ಅಂತಿಮವಾಗಿ ಬೇರೆಯಾಗಲು ನಿರ್ಧರಿಸಿದ್ದರು. ಮತ್ತು ಜೀವನಾಂಶ ಪಾವತಿಸಲು ಅವರಿಗೆ ಹಣದ ಅಗತ್ಯವಿತ್ತು. ಆತ ತನ್ನ ತಂದೆಯನ್ನು ಕೇಳಿದ್ದ, ಆದರೆ ಅವರು ನಿರಾಕರಿಸಿದ್ದಾಗಿ ಹೇಳಲಾಗಿದೆ. ಇದು ಅವರ ಕೊನೆಯ ಜಗಳಕ್ಕೆ ಕಾರಣವಾಯಿತು, ಅದು ಎರಡು ಸಾವುಗಳಲ್ಲಿ ಕೊನೆಗೊಂಡಿತು.

ಡಿಸೆಂಬರ್ 13 ರಂದು, ಅಂಬೇಷ್ ಅವರ ಸಹೋದರಿ ವಂದನಾ, ಜೌನ್‌ಪುರದ ಜಫರಾಬಾದ್ ಪೊಲೀಸ್ ಠಾಣೆಯಲ್ಲಿ ಪೋಷಕರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಅವರ ಪೋಷಕರು ಮತ್ತು ಸಹೋದರ ಕಾಣೆಯಾಗಿದ್ದಾರೆ ಎಂದು ಅವರು ಹೇಳಿದ್ದರು.

ನಿವೃತ್ತ ರೈಲ್ವೆ ಉದ್ಯೋಗಿ ಶ್ಯಾಮ್ ಬಹದ್ದೂರ್ ಮತ್ತು ಅವರ ಪತ್ನಿ ಬಬಿತಾ ಅವರಿಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ . ಮಗ ಅಂಬೇಶ್ ಸುಮಾರು ಐದು ವರ್ಷಗಳ ಹಿಂದೆ ಮುಸ್ಲಿಂ ಮಹಿಳೆಯನ್ನು ವಿವಾಹವಾಗಿದ್ದ. ಅವರ ಪೋಷಕರು ಈ ವಿವಾಹವನ್ನು ಒಪ್ಪಲಿಲ್ಲ ಮತ್ತು ತಮ್ಮ ಮುಸ್ಲಿಂ ಸೊಸೆಯನ್ನು ತಮ್ಮ ಮನೆ ಒಳಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ತಂದೆ ಶ್ಯಾಮ್ ಬಹದ್ದೂರ್ ಹೆಂಡತಿಯಿಂದ ದೂರಾಗುವಂತೆ ಕೇಳುತ್ತಲೇ ಇದ್ದರು ಎಂದು ಅಂಬೇಶ್ ಹೇಳಿದ್ದಾರೆ. ಕೊನೆಗೆ, ಆಕೆ ಒಪ್ಪಿಕೊಂಡು 5 ಲಕ್ಷ ರೂಪಾಯಿ ಜೀವನಾಂಶ ಕೇಳಿದ್ದಳು.

ಮತ್ತಷ್ಟು ಓದಿ: ದೆಹಲಿ: 48 ಸುತ್ತು ಗುಂಡು ಹಾರಿಸಿ ಇಬ್ಬರು ಸಹೋದರರ ಹತ್ಯೆ, ಬೈಕ್​ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

ಹಣಕ್ಕಾಗಿ ಜಗಳ ಮತ್ತು 2 ಕೊಲೆ

ತನ್ನ ಹೆತ್ತವರ ಒತ್ತಾಯದ ಮೇರೆಗೆ ಅಂಬೇಶ್ ತನ್ನ ಮದುವೆಯನ್ನು ಕೊನೆಗೊಳಿಸಲು ಒಪ್ಪಿಕೊಂಡಿದ್ದ. ಜೀವನಾಂಶಕ್ಕಾಗಿ 5 ಲಕ್ಷ ರೂ. ಬೇಕಾಗಿತ್ತು. ಎರಡು ತಿಂಗಳಿನಿಂದ ಜೌನ್‌ಪುರದಲ್ಲಿ ವಾಸಿಸುತ್ತಿದ್ದ ಆತ ಡಿಸೆಂಬರ್ 8 ರಂದು ತನ್ನ ತಂದೆಯ ಬಳಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದ. ಶ್ಯಾಮ್ ಬಹದ್ದೂರ್ ನಿರಾಕರಿಸಿದ್ದರು ಮತ್ತು ಇದು ಅಂಬೇಶ್ ಮತ್ತು ಅವನ ಹೆತ್ತವರ ನಡುವೆ ಜಗಳಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ, ಅಂಬೇಶ್ ತನ್ನ ತಾಯಿ ಬಬಿತಾಳಿಗೆ ರುಬ್ಬುವ ಕಲ್ಲಿನಿಂದ ಹೊಡೆದಿದ್ದ, ಇದನ್ನು ನೋಡಿ ಶ್ಯಾಮ್ ಕೂಗಿಕೊಂಡಾಗ ಅವರ ತಲೆಗೂ ಹೊಡೆದಿದ್ದಾನೆ. ಸ್ವಲ್ಪ ಸಮಯದ ನಂತರ ಇಬ್ಬರೂ ಸಾವನ್ನಪ್ಪಿದ್ದಾರೆ.

ತನ್ನ ಹೆತ್ತವರನ್ನು ಕೊಂದ ನಂತರ, ಅಂಬೇಶ್ ಸಾಕ್ಷ್ಯಗಳನ್ನು ನಾಶಮಾಡಲು ಮುಂದಾಗಿದ್ದ. ಶವಗಳನ್ನು ವಿಲೇವಾರಿ ಮಾಡಲು ಅವನು ದೊಡ್ಡ ಚೀಲವನ್ನು ಹುಡುಕಲು ಪ್ರಾರಂಭಿಸಿದ್ದ, ಆದರೆ ಅದು ಸಿಗಲಿಲ್ಲ. ಗ್ಯಾರೇಜ್‌ನಲ್ಲಿ ಕೆಲವು ಸಣ್ಣ ಚೀಲಗಳು ಇದ್ದವು, ಇದಕ್ಕಾಗಿ ಆತ ಶವಗಳನ್ನು ತುಂಡುಗಳಾಗಿ ಕತ್ತರಿಸಿ ಚೀಲಕ್ಕೆ ತುಂಬಿ  ಮುಂಜಾನೆ ನದಿಗೆ ಎಸೆದಿದ್ದ.

ನಂತರ ಅವನು ತನ್ನ ಸಹೋದರಿ ವಂದನ್ ಗೆ ಕರೆ ಮಾಡಿ, ಅವರ ಹೆತ್ತವರು ಜಗಳವಾಡಿ ಮನೆಯಿಂದ ಹೊರಗೆ ಹೋಗಿದ್ದಾರೆ ಮತ್ತು ಅವರನ್ನು ಹುಡುಕಲು ಹೋಗುತ್ತಿರುವುದಾಗಿ ತಿಳಿಸಿ, ನಂತರ ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ. ವಂದನಾಗೆ ಕರೆ ಮಾಡಿದ ಆರು ದಿನಗಳ ನಂತರ ಅಂಬೇಶ್ ಕಾಣೆಯಾಗಿದ್ದ. ಈ ಸಮಯದಲ್ಲಿ, ಅವನು ಎಲ್ಲೆಡೆ ಸುತ್ತಾಡುತ್ತಾ ತನ್ನ ಫೋನ್ ಅನ್ನು ಆಫ್ ಮಾಡಿಕೊಂಡಿದ್ದ. ಡಿಸೆಂಬರ್ 14 ರಂದು, ಅವನು ಇದ್ದಕ್ಕಿದ್ದಂತೆ ಜಾನ್‌ಪುರಕ್ಕೆ ಹಿಂತಿರುಗಿದ್ದ.ಬಳಿಕ ಪೊಲೀಸರ ತನಿಖೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Source link

Shivamogga: ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು! – Kannada News | Thieves stole ASIs mangalsutra during a protest in Shivamogga

ಶಿವಮೊಗ್ಗ, ಡಿಸೆಂಬರ್​​ 18: ಕರ್ತವ್ಯ ನಿರತ ಎಎಸ್ಐ ಮಾಂಗಲ್ಯಸರವನ್ನೇ ಕಳ್ಳರು ಕದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪ್ರತಿಭಟನೆ ಹಿನ್ನೆಲೆ ಶಿವಮೊಗ್ಗ ಬಿಜೆಪಿ ಕಚೇರಿಗೆ ಬಂದೋಬಸ್ತ್​​​ಗೆಂದು ASI ಅಮೃತಾಬಾಯಿ ಬಂದಿದ್ದರು. ಪ್ರತಿಭಟನೆ ವೇಳೆ ಕಳ್ಳರು ಕೈಚಳಕ ತೋರಿದ್ದು, ಅವರ ಕತ್ತಲ್ಲಿದ್ದ 60 ಗ್ರಾಂ ಮಾಂಗಲ್ಯಸರವನ್ನು ಕಳವು ಮಾಡಲಾಗಿದೆ. ಪೊಲೀಸ್​​ ಅಧಿಕಾರಿ ಎಂಬ ಭಯವೂ ಇಲ್ಲದೆ ಕಳ್ಳರು ಕೃತ್ಯ ನಡೆಸಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯದಲ್ಲಿ 88 ಜನ ಪೊಲೀಸರೇ ಕ್ರಿಮಿನಲ್ಸ್​​: ವಿಧಾನ ಪರಿಷತ್​​ನಲ್ಲಿ ಗೃಹ ಸಚಿವ ಪರಮೇಶ್ವರ್​​ ಮಾಹಿತಿ – Kannada News | Over the last three years, 88 police personnel in Karnataka were linked to criminal acts

ಬೆಳಗಾವಿ, ಡಿಸೆಂಬರ್​​ 18: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲ ದರೋಡೆ, ಅಪಹರಣದಂತಹ ಕೇಸ್​​ಗಳಲ್ಲಿ ಪೊಲೀಸರೇ ಭಾಗಿಯಾಗಿರುವ ಆತಂಕಕಾರಿ ಮಾಹಿತಿ ಬಹಿರಂಗವಾಗಿತ್ತು. ಬೆಂಗಳೂರಲ್ಲಿ ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ ಹಾಡಹಗಲೇ ದರೋಡೆ ಸೇರಿ, ಕೋರಮಂಗಲದ ಕಾಲ್​​ಸೆಂಟರ್​​ನ ಉದ್ಯೋಗಿಗಳ ಕಿಡ್ನ್ಯಾಪ್​​ ಕೇಸ್​​ಗಳಲ್ಲಿಯೂ ಪೊಲೀಸ್​​ ಸಿಬ್ಬಂದಿಯೇ ಆರೋಪಿಗಳಾಗಿದ್ದರು. ಈ ನಡುವೆ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಬರೋಬ್ಬರಿ 88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹೊರಬಂದಿರೋದು ಬೆಚ್ಚಿಬೀಳಿಸಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್​​ನ ಜೆಡಿಎಸ್​​ ಸದಸ್ಯ ಶರವಣ ಅವರ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್​​, ರಾಜ್ಯದಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ ಒಟ್ಟು 88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಂಕಿ-ಅಂಶ ಸಮೇತ ಮಾಹಿತಿ ನೀಡಿದ್ದಾರೆ. ಗೃಹಸಚಿವರ ಉತ್ತರದ ಬೆನ್ನಲ್ಲೇ ಈ ಬಗ್ಗೆ ಶರವಣ ಅವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ. ಪೊಲೀಸರೇ ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ರಕ್ಷಕರೇ ಭಕ್ಷಕರಾಗುತ್ತಿರುವ ಕಾರಣ ಪೊಲೀಸರ ಮೇಲೆ ಜನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಜೊತೆಗೆ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಪೊಲೀಸರನ್ನು ಅಮಾನತು ಮಾಡುವುದಲ್ಲ, ಕೆಲಸದಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನಾಪ್ ಕೇಸ್​; ಪೊಲೀಸಪ್ಪ ಸೇರಿ 8 ಮಂದಿ ಅರೆಸ್ಟ್​​

ಶರವಣ ಅವರ ಮಾತಿಗೆ ಉತ್ತರಿಸಿದ ಗೃಹ ಸಚಿವರು, ಎಲ್ಲಾ ಪೊಲೀಸರು ಕಳ್ಳರು ಎನ್ನಲು ಸಾಧ್ಯವಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ತು, ರಕ್ಷಕರು ಭಕ್ಷಕರೆಂದು ಹೇಳಿದ್ರಿ. ಆದರೆ ಅಪರಾಧ ಕೃತ್ಯಗಳಲ್ಲಿ ಪೊಲೀಸರು ಶಾಮೀಲಾಗಿದ್ರೆ ಸುಮ್ಮನೆ ಬಿಡಲ್ಲ. ಅಂಥವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕೈಗೊಂಡಿದ್ದೇವೆ. ಏನೂ ಮಾಡಿಲ್ಲವೆಂದು ಹೇಳಲು ಹೋಗಬೇಡಿ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿಮಾಡಿದ್ದೇವೆ. ಪೊಲೀಸರು ಕಟ್ಟುನಿಟ್ಟಾಗಿ ಇರುವುದರಿಂದ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಪೊಲೀಸರನ್ನು ವಜಾ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version