ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಆತ್ಮಹತ್ಯೆಯ ಯೋಚನೆ ಮಾಡಿದ್ದರಾ ಅದ್ವೈತ್ ಉಪಾಧ್ಯಾಯ? – Kannada News | Shivagange Missing Trekker Advaith Upadhyaya: Laptop Reveals Disturbing Online Searches
ನೆಲಮಂಗಲ, ಆಗಸ್ಟ್ 10: ಬೆಂಗಳೂರಿನ ಹಣಕಾಸು ಕಂಪನಿ ಉದ್ಯೋಗಿ ಅದ್ವೈತ್ ಉಪಾಧ್ಯಾಯ ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ. ಅದ್ವೈತ್‌ರ ಕಾಡುಗೋಡಿ ಮನೆಯಲ್ಲಿ ಪತ್ತೆಯಾದ ಲ್ಯಾಪ್‌ಟಾಪ್ ಪರಿಶೀಲನೆಯ ವೇಳೆ ಸ್ಪೋಟಕ ಸಂಗತಿಗಳು ಬಯಲಾಗಿವೆ. ಕೃತಕ ಬುದ್ಧಿಮತ್ತೆ (AI) ಮೂಲಕ ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬಹುದು ಮತ್ತು ಶಿವಗಂಗೆಯ ಶಾಂತಲಾ ಡ್ರಾಪ್‌ನಿಂದ ಬಿದ್ದರೆ ಎಷ್ಟು ಸಮಯಕ್ಕೆ ಸಾವು ಸಂಭವಿಸಬಹುದು ಎಂಬ ಬಗ್ಗೆ ಅದ್ವೈತ್ ಮಾಹಿತಿ ಹುಡುಕಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ನಿಶ್ಚಿತಾರ್ಥವಾಗಿದ್ದ ಹುಡುಗಿಗೆ ಬೆಟ್ಟ ಹತ್ತುವಾಗ ಅದ್ವೈತ್…