ಮತ್ತೆ ಆನ್​ಲೈನ್ ಕ್ಲಾಸ್ ವ್ಯವಸ್ಥೆ ಬಳಸಲು ಶಾಲಾ ಕಾಲೇಜುಗಳಿಗೆ ಪ್ರಧಾನಿ ಸಲಹೆ – Kannada News | PM Modi’s Fuel Saving Plea: Online Classes, WFH Amidst West Asia Crisis

ವಡೋದರಾ, ಮೇ 12: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟು ಮತ್ತು ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಇಂಧನ ಉಳಿಸಲು ವರ್ಕ್ ಫ್ರಂ ಹೋಮ್, ಸಾರ್ವಜನಿಕ ಸಾರಿಗೆ ಬಳಕೆ ಇತ್ಯಾದಿ ಸಲಹೆ ಕೊಟ್ಟಿದ್ದಾರೆ. ಇದೇ ವೇಳೆ, ಶಾಲಾ ಕಾಲೇಜುಗಳಿಗೂ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸುವ ಕುರಿತು ಮತ್ತು ಇಂಧನ ಉಳಿತಾಯಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳಲು ಅವರು ಸೂಚಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಅನುಸರಿಸಿದಂತೆ, ಶಾಲಾ-ಕಾಲೇಜುಗಳು ತಾತ್ಕಾಲಿಕವಾಗಿ ಆನ್‌ಲೈನ್ ತರಗತಿಗಳನ್ನು ನಡೆಸುವ ಬಗ್ಗೆ ಆಲೋಚಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ಇದು ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಯ ಪ್ರಯಾಣವನ್ನು ಕಡಿಮೆ ಮಾಡಿ ಇಂಧನ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂಬುದು ಅವರ ಆಶಯ.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್‌ಧಾಮ್ ಭವನ-3 ಮತ್ತು ವಿದ್ಯಾರ್ಥಿನಿಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ದೇಶವಾಸಿಗಳಲ್ಲಿ ವಿನಂತಿಸಿದರು. ಮೆಟ್ರೋ ರೈಲು, ಎಲೆಕ್ಟ್ರಿಕ್ ಬಸ್‌ಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸುವಂತೆ ಹಾಗೂ ಕಾರುಗಳನ್ನು ಹಂಚಿಕೊಂಡು ಪ್ರಯಾಣಿಸುವ (Car-pooling) ಮೂಲಕ ಇಂಧನ ಉಳಿಸಲು ಸಹಕರಿಸಬೇಕು ಎಂದು ಹೇಳಿದರು.

ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ವರ್ಚುವಲ್ ಮೀಟಿಂಗ್‌ಗಳನ್ನು ನಡೆಸಲು ಮತ್ತು ಸಾಧ್ಯವಿರುವ ಕಡೆಗಳಲ್ಲಿ ಉದ್ಯೋಗಿಗಳಿಗೆ ‘ಮನೆಯಿಂದಲೇ ಕೆಲಸ’ (Work from home) ಸೌಲಭ್ಯವನ್ನು ನೀಡಲು ಆದ್ಯತೆ ನೀಡಬೇಕು ಎಂದು ತಿಳಿಸಿದರು. ಇಂಧನ ಮಾತ್ರವಲ್ಲದೆ, ಖಾದ್ಯ ತೈಲದ ಬಳಕೆಯನ್ನು ಮಿತಗೊಳಿಸುವುದು, ಚಿನ್ನದ ಖರೀದಿಯನ್ನು ಮುಂದೂಡುವುದು ಮತ್ತು ಅನಗತ್ಯ ವಿದೇಶಿ ಪ್ರವಾಸಗಳನ್ನು ತಪ್ಪಿಸುವ ಮೂಲಕ ದೇಶದ ವಿದೇಶಿ ವಿನಿಮಯ ಮೀಸಲು ಉಳಿಸಲು ಸಹಕರಿಸಬೇಕು ಎಂದು ಅವರು ದೇಶದ ಜನತೆಯನ್ನು ಕೋರಿದ್ದಾರೆ.

ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹಾಗೂ ಪಶ್ಚಿಮ ಏಷ್ಯಾದಲ್ಲಿನ ಯುದ್ಧದಂತಹ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಪೂರೈಕೆ ಸರಪಳಿಗೆ ಧಕ್ಕೆಯಾಗಿದೆ ಮತ್ತು ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿವೆ. ಈ ಆರ್ಥಿಕ ಸವಾಲನ್ನು ಎದುರಿಸಲು, ಮತ್ತು ಆಮದು ವೆಚ್ಚ ತಗ್ಗಿಸಲು ಪ್ರಧಾನಿಯವರು ಈ “ಕಠಿಣ ಕ್ರಮಗಳ” (Austerity measures) ಮೊರೆ ಹೋಗಿದ್ದಾರೆ.

ಒಟ್ಟಾರೆಯಾಗಿ, ರಾಷ್ಟ್ರೀಯ ಹಿತದೃಷ್ಟಿಯಿಂದ ಪ್ರತಿಯೊಬ್ಬ ನಾಗರಿಕನು ಇಂಧನ ಮತ್ತು ಸಂಪನ್ಮೂಲಗಳನ್ನು ಉಳಿಸುವ ಮೂಲಕ ದೇಶದ ಆರ್ಥಿಕತೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಂಜನಾದ್ರಿ ದೇವಸ್ಥಾನಕ್ಕೆ ಬಂಗಾರದ ಕವಚ ದೇಣಿಗೆ: ದಾಖಲೆಗಳ ಪುನರ್ ಪರಿಶೀಲನೆಗೆ ಮುಂದಾದ ಜಿಲ್ಲಾಡಳಿತ! – Kannada News | Anjanadri Temple Gold Donation Controversy: Kolar Administration Re verifies Documents of Mahesh Reddy

ಅಂಜನಾದ್ರಿ ದೇವಸ್ಥಾನಕ್ಕೆ ಬಂಗಾರದ ಕವಚ ದೇಣಿಗೆ: ದಾಖಲೆಗಳ ಪುನರ್ ಪರಿಶೀಲನೆಗೆ ಮುಂದಾದ ಜಿಲ್ಲಾಡಳಿತ!

ಕೊಪ್ಪಳ, ಮೇ 12: ಹನುಮ ಜನ್ಮಸ್ಥಳ ಎಂದೇ ಪ್ರಸಿದ್ಧವಾಗಿರುವ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ನೀಡಿದ ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳ ವಿಚಾರದಲ್ಲಿ ಈಗ ಗೊಂದಲ ಮೂಡಿದ್ದು, ಜಿಲ್ಲಾಡಳಿತವು ದಾಖಲೆಗಳ ಮರುಪರಿಶೀಲನೆಗೆ ಮುಂದಾಗಿದೆ. ಪಂಚನಾಮ ಪ್ರಕ್ರಿಯೆಯ ನಂತರ ಎಲ್ಲಾ ಆಭರಣಗಳನ್ನು ದೇವಸ್ಥಾನದ ಸಮಿತಿಯ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಖ್ಯಾಂಶಗಳು

  • ಉದ್ಯಮಿ ನೀಡಿದ ಬಂಗಾರದ ತೂಕದ ಬಗ್ಗೆ ಮೌಲ್ಯಮಾಪಕರಿಂದ ಭಿನ್ನ ವರದಿ ಸಲ್ಲಿಕೆ.
  •  ದಾನಿಗಳು ನೀಡಿದ ದಾಖಲೆಗಳನ್ನು ಮರುಪರಿಶೀಲಿಸಲು ಕೊಪ್ಪಳ ಜಿಲ್ಲಾಡಳಿತದ ಮಹತ್ವದ ನಿರ್ಧಾರ.
  •  ಬಿಲ್ ಹಾಗೂ ದಾಖಲೆಗಳ ಆಧರಿಸಿ ಆಭರಣಗಳನ್ನು ದೇವಸ್ಥಾನದ ಸುಪರ್ದಿಗೆ ಪಡೆಯುವ ಪ್ರಕ್ರಿಯೆ.

ಪ್ರಕರಣದ ಹಿನ್ನೆಲೆ

ಜನಾರ್ದನ ರೆಡ್ಡಿ ಅವರ ಆಪ್ತರೆನ್ನಲಾದ ಎಎಂಆರ್ ಪ್ರೈವೇಟ್ ಲಿಮಿಟೆಡ್‌ನ ಉದ್ಯಮಿ ಮಹೇಶ್ ರೆಡ್ಡಿ ಅವರು ಕಳೆದ ಮೇ 8ರಂದು ದೇವಸ್ಥಾನಕ್ಕೆ ವಿವಿಧ ಆಭರಣ ಹಾಗೂ ಕವಚಗಳನ್ನು ದೇಣಿಗೆಯಾಗಿ ನೀಡಿದ್ದರು. ಈ ಕವಚಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು, ಇವುಗಳಿಗೆ ಬಂಗಾರದ ಲೇಪನಕ್ಕಾಗಿ 60 ಗೇಜ್ ಉಳ್ಳ ಬಂಗಾರದ ಹಾಳೆಗಳನ್ನು ಬಳಸಲಾಗಿದೆ ಎಂದು ದಾನಿಗಳ ಪರವಾಗಿ ಹಾಜರಿದ್ದ ವಾಸ್ತುಶಿಲ್ಪಿ ಗುಂಡಾಚಾರಿ ಸ್ಥಪತಿ ತಿಳಿಸಿದ್ದರು. ಅವರ ಪ್ರಕಾರ ಈ ಬಂಗಾರದ ಅಂದಾಜು ತೂಕ 1280 ಗ್ರಾಂ ಆಗಿತ್ತು.

ಟ್ವಿಸ್ಟ್ ನೀಡಿದ ಮೌಲ್ಯಮಾಪನ

ಆದರೆ ಸರ್ಕಾರದ ಪರವಾಗಿ ಆಭರಣಗಳನ್ನು ಪರಿಶೀಲಿಸಿದ ಅಕ್ಕಸಾಲಿಗರು ಮತ್ತು ಬ್ಯಾಂಕ್ ಮೌಲ್ಯಮಾಪಕರು ಭಿನ್ನವಾದ ವರದಿ ನೀಡಿದ್ದಾರೆ. ತಾಮ್ರದ ಕವಚಗಳಿಗೆ ಲೇಪನ ಮಾಡಲಾದ ಬಂಗಾರದ ತೂಕವು ಅಂದಾಜು 250 ಗ್ರಾಂನಿಂದ 300 ಗ್ರಾಂ ಮಾತ್ರ ಇರಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಾನಿಗಳು ಹೇಳಿದ ತೂಕಕ್ಕೂ ಮತ್ತು ತಜ್ಞರ ಅಂದಾಜಿಗೂ ಭಾರಿ ವ್ಯತ್ಯಾಸ ಕಂಡುಬಂದಿರುವುದರಿಂದ ಗೊಂದಲ ಉಂಟಾಗಿದೆ.

ಇದನ್ನೂ ಓದಿ ಅಂಜನಾದ್ರಿಗೆ 2 ಕೋಟಿ ರೂ. ಚಿನ್ನಾಭರಣ ಕಾಣಿಕೆ: ಹಲವು ಅನುಮಾನಗಳಿಗೆ ಕಾರಣವಾಯ್ತು ಉದ್ಯಮಿಯ ಬಿಲ್

ಜಿಲ್ಲಾಧಿಕಾರಿಗಳ ಕ್ರಮ

ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಆಭರಣಗಳಿಗೆ ಸಂಬಂಧಿಸಿದ ಬಿಲ್, ಇನ್‌ವಾಯ್ಸ್ ಮತ್ತು ಪ್ರಮಾಣಪತ್ರಗಳನ್ನು ಸಲ್ಲಿಸಲು ಮೇ 12ರ ಗಡುವು ನೀಡಿದ್ದರು. ಅದರಂತೆ ಉದ್ಯಮಿಯ ಪರವಾಗಿ ಗುಂಡಾಚಾರಿ ಸ್ಥಪತಿ ಅವರು ಮೇ 11ರಂದು ಅಗತ್ಯ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಈಗ ದಾನಿಗಳು ನೀಡಿದ ಬಿಲ್‌ಗಳು ಮತ್ತು ಮಜೂರಿ ವಿವರಗಳನ್ನು ಆಧರಿಸಿ, ಜಿಲ್ಲಾಡಳಿತವು ಎಲ್ಲಾ ದಾಖಲೆಗಳನ್ನು ಪುನಃ ಪರಿಶೀಲಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿರಾಟ್ ಕೊಹ್ಲಿ ಟೆಸ್ಟ್​ ನಿವೃತ್ತಿಗೆ ಒಂದು ವರ್ಷ; ಕಂಬ್ಯಾಕ್ ಅಸಾಧ್ಯ – Kannada News | Virat Kohli Test Legacy: One Year Since His Absence; Unlikely Comeback and Records

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಇಂದಿಗೆ (ಮೇ 12) ಸರಿಯಾಗಿ ಒಂದು ವರ್ಷ ಕಳೆದಿದೆ. ಆಧುನಿಕ ಕ್ರಿಕೆಟ್‌ನ ‘ರನ್ ಮಷೀನ್’ ಎಂದೇ ಖ್ಯಾತರಾಗಿದ್ದ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಹೊಸ ಆಕ್ರಮಣಕಾರಿ ಗುಣವನ್ನು ತಂದುಕೊಟ್ಟವರು. ಈ ದಿನವನ್ನು ಎಲ್ಲರೂ ನೆನಪಿಸಿಕೊಳ್ಳಿತ್ತಿದ್ದಾರೆ. ವಿರಾಟ್ ಕೊಹ್ಲಿ ಕೇವಲ ಒಬ್ಬ ಬ್ಯಾಟರ್ ಆಗಿ ಮಾತ್ರವಲ್ಲದೆ, ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ.

ಒಟ್ಟು 123 ಪಂದ್ಯಗಳನ್ನು ಆಡಿರೋ ಅವರು, 9,230 ರನ್​ ಬಾರಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 49.15 ಇದೆ. ಇದರಲ್ಲಿ, 30 ಶತಕ ಹಾಗೂ, 31 ಅರ್ಧಶತಕ ಇದೆ. ದಕ್ಷಿಣ ಆಫ್ರಿಕಾ ವಿರುದ್ಧ 254 ರನ್ ಬಾರಿಸಿದ್ದರು. ಇದು ಟೆಸ್ಟ್ ಅಲ್ಲಿ ಅವರು ಬಾರಿಸಿದ ಗರಿಷ್ಠ ರನ್. ಕೊಹ್ಲಿ ಭಾರತ ತಂಡವನ್ನು 68 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ 40 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಇದು ಭಾರತೀಯ ಟೆಸ್ಟ್ ಇತಿಹಾಸದಲ್ಲೇ ಒಬ್ಬ ನಾಯಕನ ಶ್ರೇಷ್ಠ ಸಾಧನೆ. ಆಸ್ಟ್ರೇಲಿಯಾ ಮಣ್ಣಿನಲ್ಲಿ ಟೆಸ್ಟ್ ಸರಣಿ (2018-19) ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆ ಇವರದ್ದು. ಇವರ ಅವಧಿಯಲ್ಲಿ ಭಾರತ ತಂಡ ವಿದೇಶಗಳಲ್ಲಿ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿತ್ತು.

ಭಾರತದ ಪರ ಅತಿ ಹೆಚ್ಚು ಟೆಸ್ಟ್ ದ್ವಿಶತಕಗಳನ್ನು ಬಾರಿಸಿದ ದಾಖಲೆ ಕೊಹ್ಲಿ ಹೆಸರಲ್ಲಿದೆ. ಸುಮಾರು 42 ತಿಂಗಳುಗಳ ಕಾಲ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ತಂಡವನ್ನು ನಂಬರ್ 1 ಸ್ಥಾನದಲ್ಲಿರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಮತ್ತು ಆಕ್ರಮಣಕಾರಿ ಗುಣಕ್ಕೆ ಹೊಸ ಭಾಷ್ಯ ಬರೆದ ಕೊಹ್ಲಿ, ಐಪಿಎಲ್ ಹಾಗೂ ಏಕದಿನದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಟಿ20 ಫಾರ್ಮ್ಯಾಟ್ ಮಾತ್ರ ನೋಡುತ್ತೇನೆ ಎನ್ನುವವರಿಗೆ ಟೆಸ್ಟ್ ಕ್ರಿಕೆಟ್ ಬಗ್ಗೆಯೂ ಆಸಕ್ತಿ ಮೂಡುವಂತೆ ಮಾಡಿದ ಖ್ಯಾತಿ ಕೊಹ್ಲಿಗೆ ಇದೆ. ಅವರ ಅನುಪಸ್ಥಿತಿ ಟೆಸ್ಟ್ ಕ್ರಿಕೆಟ್ ಪ್ರಿಯರಲ್ಲಿ ಇಂದಿಗೂ ಒಂದು ರೀತಿಯ ಶೂನ್ಯತೆಯನ್ನು ಮೂಡಿಸಿರುವುದು ಸುಳ್ಳಲ್ಲ.

ಕಂಬ್ಯಾಕ್ ಸುದ್ದಿ

ಟೀಂ ಇಂಡಿಯಾ ಟೆಸ್ಟ್​​​ನಲ್ಲಿ ಹೀನಾಯವಾಗಿ ಸೋಲುತ್ತಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್​​ಗೆ ಮರಳುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಅವರು ನಾಯತಕ್ವಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಅವರು ಅತಿಯಾಗಿ ಪ್ರೀತಿಸುವ ಫಾರ್ಮ್ಯಾಟ್ ಎಂದರೆ ಟೆಸ್ಟ್. ಆದರೆ, ಕೊಹ್ಲಿಗೆ ಟೆಸ್ಟ್​ಗೆ ಕಂಬ್ಯಾಕ್ ಮಾಡೋದು ಸದ್ಯ ವಾಸ್ತವಕ್ಕೆ ದೂರವಾದ ಮಾತು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ, ಟಿವಿಕೆಗೆ ಷಣ್ಮುಗಂ ನೇತೃತ್ವದ 30 ಶಾಸಕರ ಬೆಂಬಲ – Kannada News | AIADMK Faces Split as Shanmugam Faction Backs CM Vijays TVK

ಚೆನ್ನೈ, ಮೇ 12: ತಮಿಳುನಾಡು ರಾಜಕಾರಣದಲ್ಲಿ ಅಣ್ಣಾ ಡಿಎಂಕೆ ಪಕ್ಷವು ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಭಾಗವಾಗಿದೆ. ಸಿ.ವಿ. ಷಣ್ಮುಗಂ ನೇತೃತ್ವದ 30 ಶಾಸಕರ ಬಣವು ಮುಖ್ಯಮಂತ್ರಿ ವಿಜಯ್​ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಅಣ್ಣಾ ಡಿಎಂಕೆ ಸ್ಥಾಪನಾ ತತ್ವಗಳಿಗೆ ವಿರುದ್ಧವಾಗಿ, ಎಡಪ್ಪಾಡಿ ಪಳನಿಸ್ವಾಮಿ ಅವರು ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು ಎಂಬ ಆರೋಪವೇ ಈ ಬಂಡಾಯಕ್ಕೆ ಮುಖ್ಯ ಕಾರಣ. ಡಿಎಂಕೆಯನ್ನು ಸೈದ್ಧಾಂತಿಕ ವಿರೋಧಿ ಎಂದು ಪರಿಗಣಿಸುವ ಷಣ್ಮುಗಂ ಬಣ, ಜನಾಭಿಪ್ರಾಯವು ಸಿಎಂ ವಿಜಯ್​ ಅವರ ಪರವಾಗಿದೆ ಎಂದು ಹೇಳಿದೆ. ಈ ಬೆಂಬಲದಿಂದ ವಿಜಯ್​ ಸರ್ಕಾರದ ಬಲವು 150 ಶಾಸಕರಿಗಿಂತ ಹೆಚ್ಚಾಗಲಿದೆ. ಈ ನಡುವೆ ಪಳನಿಸ್ವಾಮಿ ನೇತೃತ್ವದಲ್ಲಿ ಕೇವಲ 17 ಶಾಸಕರು ಮಾತ್ರ ಉಳಿದಿದ್ದಾರೆ. ಅಣ್ಣಾ ಡಿಎಂಕೆ ಮುಂದಿನ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಷಣ್ಮುಗಂ ಬಣ ಸ್ಪಷ್ಟಪಡಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Assam CM Himanth Biswa Sharma Oath Taking Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ – Kannada News | Assam CM Oath Ceremony Live: Himanta Biswa Sarma Sworn In as CM for Second Term in Guwahati

ಅಸ್ಸಾಂ, ಮೇ 12: ಇಂದು ಅಸ್ಸಾಂನ ಖಾನಪಾರ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಹಿಮಂತ ಬಿಸ್ವ ಶರ್ಮಾ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. 126 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅಂತಹ ಗಣ್ಯರು ಉಪಸ್ಥಿತರಿದ್ದು, ಖಾನಾಪಾರ ಮೈದಾನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನದ ನೇರಪ್ರಸಾರ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೃಂಗೇರಿಯಲ್ಲಿ ವೋಟ್ ಟ್ಯಾಂಪರಿಂಗ್ ಆರೋಪ: ಎಫ್​ಎಸ್​ಎಲ್​ನಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದ ಪರಮೇಶ್ವರ್ – Kannada News | Sringeri Vote Tampering Allegations: G Parameshwara Says FSL Report Will Reveal the Truth; Investigation Underway

ಬೆಂಗಳೂರು, ಮೇ 12: ಶೃಂಗೇರಿ ಎಂಎಲ್ಎ ಸ್ಥಾನದ ಗೊಂದಲದ ಬಗ್ಗೆ ಹಾಗೂ ಸುಪ್ರೀಂ ಕೋರ್ಟ್​ ತೀರ್ಪಿನ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ವೋಟ್ ಟ್ಯಾಂಪರಿಂಗ್ ಆರೋಪ ಸಂಬಂಧ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿದ ನಂತರ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ. ಟ್ಯಾಂಪರಿಂಗ್ ಆರೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ದೂರು ದಾಖಲಿಸಿಕೊಂಡು ಎಫ್ಐಆರ್ ನೊಂದಾಯಿಸಲಾಗಿದೆ. ರಾಜ್ಯ ಪೊಲೀಸರು ಈ ಟ್ಯಾಂಪರಿಂಗ್ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಎಫ್ಎಸ್ಎಲ್ (Forensic Science Laboratory) ಸಹಾಯ ಪಡೆಯಲಾಗುತ್ತಿದ್ದು, ಇದು ಕೌಂಟಿಂಗ್ ಪ್ರಕ್ರಿಯೆಯ ಒಂದು ಭಾಗವಾಗಿಯೂ ಪರಿಶೀಲನೆಗೆ ಒಳಪಡಲಿದೆ. ಕಾನೂನು ಪ್ರಕಾರ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮಸ್ಥಳ ಬುರುಡೆ ಕೇಸ್​​: ಉತ್ಖನನ ನಡೆದು 10 ತಿಂಗಳಾದರೂ ಕೆಲಸಗಾರರ ಕೈ ಸೇರದ ಕೂಲಿ ಹಣ, ವಾಹನಗಳ ಬಾಡಿಗೆ – Kannada News | 10 Months After Dharmasthala Excavation, Labourers Still Await Pending Payments

ಧರ್ಮಸ್ಥಳದಲ್ಲಿ ನಡೆದಿದ್ದ ಉತ್ಖನನ

ಮಂಗಳೂರು, ಮೇ 12: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಧರ್ಮಸ್ಥಳ ಬುರುಡೆ ಪ್ರಕರಣ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನೂರಾರು ಹೆಣಗಳನ್ನು ಹೂತಿದ್ದೇನೆ ಎಂಬ ಚಿನ್ನಯ್ಯ ಆರೋಪ ಹಿನ್ನೆಲೆ ಒಟ್ಟು 17 ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆಸಲಾಗಿತ್ತು. ದುರ್ದೈವ ಅಂದರೆ ಇದು ನಡೆದು 10 ತಿಂಗಳಾದರೂ ಉತ್ಖನನ ಕೆಲಸ ಮಾಡಿದ್ದ ಕಾರ್ಮಿಕರಿಗೆ ಕೂಲಿ ಮತ್ತು ಯಂತ್ರೋಪಕರಣಗಳ ಬಾಡಿಗೆ ಹಣ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಎಸ್‌ಐಟಿ (SIT) ಸೂಚನೆಯಂತೆ ಅಹೋರಾತ್ರಿ ದುಡಿದರೂ ಬಿಲ್ ಪಾವತಿಗೆ ಮೀನಾಮೇಷ ಎಣಿಸಲಾಗುತ್ತಿದ್ದು, ಎರಡು ಲಕ್ಷಕ್ಕೂ ಅಧಿಕ ಮೊತ್ತ ಬಾಕಿ ಇದೆ ಎನ್ನಲಾಗಿದೆ.

2025ರ ಜುಲೈ 29ರಿಂದ ಆಗಸ್ಟ್ 13ರವರೆಗೆ 17 ಪಾಯಿಂಟ್‌ಗಳಲ್ಲಿ ಉತ್ಖನನ ನಡೆದಿದ್ದು, ಈ ವೇಳೆ ಕೂಲಿಯಾಳುಗಳು ಮಳೆ-ಬಿಸಿಲಿಗೆ ಮೈಯೊಡ್ಡಿ ದುಡಿದಿದ್ದರು. ಹೀಗಿದ್ದರೂ ಜೆಸಿಬಿ ಬಾಡಿಗೆಯ 71,500 ರೂ. ಮತ್ತು ಕಾರ್ಮಿಕರ ಕೂಲಿ ಮೊತ್ತ 80,000 ಸೇರಿದಂತೆ ಒಟ್ಟು 2 ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಇದೆ. ಶಾಮಿಯಾನ, ಹಾರೆ, ಪಿಕಾಸು, ಕುಡಿಯುವ ನೀರು ಹಾಗೂ ವಾಹನಗಳ ಬಾಡಿಗೆ ಹಣಕ್ಕಾಗಿ ಮಾಲೀಕರು ಅಲೆದಾಡಬೇಕಾದ ಪ್ರಸಂಗ ಎದುರಾಗಿದೆ.

ಇದನ್ನೂ ಓದಿ:  ಧರ್ಮಸ್ಥಳ ಬುರುಡೆ ಕೇಸ್​​ಗೆ ಮೇಜರ್​​ ಟ್ವಿಸ್ಟ್​​; SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!

ಹಣ ಪಾವತಿ ವಿಚಾರವಾಗಿ ಗೊಂದಲ

ಇನ್ನು ಬಿಲ್​​ ಪಾವತಿ ವಿಚಾರವಾಗಿ ಪಂಚಾಯತ್​​ ಮತ್ತು ಎಸ್​​ಐಟಿ ನಡುವೆಯೇ ಗೊಂದಲ ಇದೆ ಎನ್ನಲಾಗಿದೆ. ಬಾಕಿ ಹಣದ ಬಗ್ಗೆ ವಿಚಾರಿಸಿದರೆ ಧರ್ಮಸ್ಥಳ ಗ್ರಾಮ ಪಂಚಾಯತ್ ಎಸ್​​ಐಟಿಯತ್ತ ಬೆರಳು ತೋರಿಸಿ ನುಣುಚಿ ಕೊಳ್ಳುತ್ತಿದೆ. ಇತ್ತ SIT ಅಧಿಕಾರಿಗಳನ್ನು ವಿಚಾರಿಸಿದರೆ, ನವೆಂಬರ್​​ನಲ್ಲಿಯೇ ಬಿಲ್​​ ಪಾವತಿಯಾಗಿದೆ ಎಂಬ ಉಡಾಫೆ ಉತ್ತರ ಬರುತ್ತಿದೆ. ನಮ್ಮ ಬಳಿ ಯಂತ್ರಗಳನ್ನು ಬಾಡಿಗೆಗೆ ಕೇಳಿದ್ದು ಗ್ರಾಮ ಪಂಚಾಯತ್​​. ಹೀಗಾಗಿ ಎಸ್​ಐಟಿ ಬಳಿ ಬಾಡಿಗೆ ಕೇಳುವ ಹಕ್ಕು ನಮಗಿಲ್ಲ ಎಂದು ಮಾಲಕರು ಅಲವತ್ತುಕೊಂಡಿದ್ದಾರೆ.

ಜುಲೈ 29, 2025ರಿಂದ ನಿರಂತರವಾಗಿ ಉತ್ಖನನ ಕಾರ್ಯಾಚರಣೆಯಲ್ಲಿ ಸುನೀಲ್ ಕನ್ಯಾಡಿ ಎಂಬವರ ಹಿಟಾಚಿಯನ್ನು ಉತ್ಖನನ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಕೇವಲ 10 ದಿನ ಮಾತ್ರ ಹಿಟಾಚಿ ಮೂಲಕ ಉತ್ಖನನ ನಡೆಸಿದ್ದು, 15 ದಿನ ಹಾಗೆ ನಿಂತಿದ್ದ ಕಾರಣ ಕೆಲಸಕ್ಕೆ ಬಳಸಿಕೊಂಡಿದ್ದಷ್ಟೇ ದಿನಗಳ ಬಿಲ್​ ನೀಡುವಂತೆ ಮಾಲಕರು ಕೇಳಿದ್ದರು. ಹೀಗಿದ್ದರೂ ಕಳೆದ 9 ತಿಂಗಳಿನಿಂದ ಬಾಕಿ ಬಿಲ್​​ಗಾಗಿ ಅಲೆದಾಟ ನಡೆಸುತ್ತಿದ್ದಾರೆ. ಉತ್ಖನನ ಕಾರ್ಯದ ವೇಳೆ ಇದ್ದ ಧರ್ಮಸ್ಥಳ ಪಂಚಾಯತ್​​ ಪಿಡಿಒ ಕೂಡ ಈಗ ನಿವೃತ್ತರಾಗಿದ್ದು, ಬಾಕಿ ಹಣವನ್ನು ಸಂಬಂಧಪಟ್ಟವರು ಆದಷ್ಟು ಬೇಗ ನೀಡಿ ಎಂಬ ಆಗ್ರಹ ಕೂಲಿ ಕಾರ್ಮಿಕರು, ಯಂತ್ರೋಪಕರಣ ಮತ್ತು ವಾಹನಗಳ ಮಾಲಕರಿಂದ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:40 am, Tue, 12 May 26

Source link

Video: ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕಂದಮ್ಮ ನಡೆಯುತ್ತಿದ್ದಂತೆ ಭಾವುಕಳಾದ ತಾಯಿ – Kannada News | Mother reacts cutely as little girl takes tiny steps

ತಾಯಿಯ (mother love) ಪ್ರೀತಿಯೇ ಹಾಗೇ, ಮಕ್ಕಳ ಆರೈಕೆಯಲ್ಲೇ ಖುಷಿ ಕಾಣುವ ಜೀವವದು. ಮಗುವಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದು, ಆಹಾರ ನೀಡುವುದು ಆಕೆಯ ದಿನನಿತ್ಯ ರೂಟೀನ್ ಆಗಿರುತ್ತದೆ. ಮಗುವಿನ ತೊದಲು ನುಡಿ ಕೇಳುತ್ತ ತನ್ನೆಲ್ಲಾ ನೋವುಗಳನ್ನು ಮರೆಯುತ್ತಾಳೆ. ಇದೀಗ ಪುಟಾಣಿಯೊಂದು  ಮೊದಲ ಬಾರಿಗೆ ಹೆಜ್ಜೆ ಇಟ್ಟು ನಡೆಯುತ್ತಿದ್ದರೆ, ತಾಯಿ ತನ್ನ ಮಗಳ ಮೊದಲ ನಡಿಗೆಯನ್ನು ಕಣ್ತುಂಬಿಸಿಕೊಂಡು ಭಾವುಕಳಾಗಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

fun_factorss ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ಕ್ಲಿಪಿಂಗ್‌ನಲ್ಲಿ ತಾಯಿಯೊಬ್ಬಳು ಕುರ್ಚಿ ಮೇಲೆ ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದಾಳೆ. ಅಲ್ಲೇ ಇದ್ದ ಪುಟಾಣಿಯೊಂದು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯಲು ಶುರು ಮಾಡಿದೆ. ತನ್ನ ಕಂದಮ್ಮನು ಮೊದಲ  ಬಾರಿಗ ನಡೆಯುವುದನ್ನು ನೋಡಿ ತಾಯಿ ಭಾವುಕಳಾಗಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕೈಗಳಿಲ್ಲದಿದ್ದರೂ ಮಗನಿಗೆ ಬಾಯಿಂದಲೇ ತುತ್ತು ನೀಡಿದ ತಾಯಿ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಹದಿನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮುದ್ದಾದ ವಿಡಿಯೋ ಎಂದರೆ, ಇನ್ನೊಬ್ಬರು, ಮೊಬೈಲ್ ನಲ್ಲಿ ಈ ತರಹ ದೃಶ್ಯವನ್ನು ಯಾಕೆ ಸೆರೆ ಹಿಡಿಯಬೇಕು ಎಂದು ಕೇಳಿದ್ದಾರೆ. ಮತ್ತೊಬ್ಬರು, ಹೆತ್ತ ತಾಯಿಗೆ ಇದಕ್ಕಿಂತ ಖುಷಿ ಏನಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:31 am, Tue, 12 May 26

Source link

ಶಾಪದ ನಂಬರ್​ ಆಯ್ತಾ 49? ಆರ್​​ಸಿಬಿ ಟ್ರೋಲ್ ಮಾಡಿದವರಿಗೆ ಕಾಡುತ್ತಿದೆ ಶನಿ – Kannada News | IPL’s ’49 Curse’: Is Karma Hitting Teams Who Trolled RCB’s Lowest Score?

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ವಿರುದ್ಧ 49 ರನ್‌ಗಳಿಗೆ ಆಲೌಟ್ ಆಗಿದ್ದನ್ನು ಯಾರೂ ಮರೆತಿಲ್ಲ. ಈ ಬಾರಿ ಆರ್​​ಸಿಬಿ ಉತ್ತಮ ಪ್ರದರ್ಶನ ನೀಡಿ, ಟಾಪ್​​ನಲ್ಲಿದೆ. ಬೆಂಗಳೂರು ಕಪ್ ಗೆದ್ದ ಹೊರತಾಗಿಯೂ ಟ್ರೋಲ್ ಮಾಡಲು ಸಿಗುವುದು ಇದೊಂದೇ ವಿಷಯ. ಪ್ರತಿ ಸೀಸನ್‌ನಲ್ಲೂ ಆರ್‌ಸಿಬಿಯನ್ನು ಕೆಣಕಲು ವಿರೋಧಿ ತಂಡದವರು ಮತ್ತು ಕೆಲವು ಫ್ರಾಂಚೈಸಿಗಳು ಇದೇ ‘49’ ಸಂಖ್ಯೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ಈ ಸಂಖ್ಯೆಯನ್ನು ಟ್ರೋಲ್ ಮಾಡಿದವರಿಗೆ ಶನಿದೆಸೆ ಹಿಡಿಯುತ್ತಿದೆ.

1. ಶಾಪದ ನಂಬರ್ ಆಯ್ತಾ 49?

2. ಟ್ರೋಲ್ ಮಾಡಿದವರಿಗೆ ಶನಿದೆಸೆ

3. ಸತತ ಸೋಲು ಕಂಡ ಪಂಜಾಬ್ ಕಿಂಗ್ಸ್ 

ಪಂಜಾಬ್ ಕಿಂಗ್ಸ್‌ಗೆ ತಟ್ಟಿದ ಶಾಪ?

ಏಪ್ರಿಲ್ 28ರಂದು ನಡೆದ ಆರ್​​ಆರ್​ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ’49-1′ ಎಂದು ಸ್ಕೋರ್ ಕಾರ್ಡ್ ಹಾಕಿತ್ತು. ಆರ್‌ಸಿಬಿಯನ್ನು ಪರೋಕ್ಷವಾಗಿ ಅಣಕಿಸಲು ಮಾಡಿದ ಈ ಪೋಸ್ಟ್ ಪಂಜಾಬ್ ಪಾಲಿಗೆ ದುಬಾರಿಯಾದಂತಿದೆ. ಅಲ್ಲಿಂದ ಆರಂಭವಾದ ಪಂಜಾಬ್‌ನ ಸೋಲಿನ ಸರಣಿ ಇನ್ನೂ ನಿಂತಿಲ್ಲ. ಧರ್ಮಶಾಲಾದಲ್ಲಿ ಡೆಲ್ಲಿ ವಿರುದ್ಧ ಸೋಲುವ ಮೂಲಕ ಪಂಜಾಬ್ ಈಗ ಸತತ ನಾಲ್ಕನೇ ಸೋಲು ಅನುಭವಿಸಿದೆ. ‘ಆರ್‌ಸಿಬಿಯ 49 ಅನ್ನು ಹೀಯಾಳಿಸಿದ ಮೇಲೆ ಪಂಜಾಬ್‌ಗೆ ಶನಿ ದೆಸೆ ಶುರುವಾಗಿದೆ’ ಎಂದು ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

ಕೆಕೆಆರ್ ಕಥೆಯೂ ಅಷ್ಟೇ!

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಕೂಡ ಇದೇ ತಪ್ಪು ಮಾಡಿತ್ತು. ಸೀಸನ್ ಆರಂಭಕ್ಕೂ ಮುನ್ನವೇ ಅವರು ‘49’ ಸ್ಕೋರ್‌ಗೆ ಸಂಬಂಧಿಸಿದಂತೆ ಪೋಸ್ಟ್‌ ಹಾಕಿದ್ದರು. ಕೆಕೆಆರ್ ಸದ್ಯ ಅಂಕಪಟ್ಟಿಯ ತಳಭಾಗದಲ್ಲಿ ಹೋರಾಡುತ್ತಿದೆ. ಇನ್ನು, ಆರ್​​ಸಿಬಿಯನ್ನು ಸದಾ ಕೆಣಕುತ್ತಿದ್ದ ಮುಂಬೈ ಸೀಸನ್​​ನಿಂದ ಎಲಿಮಿನೇಟ್ ಆಗಿದೆ. ಬದ್ಧವೈರಿಯಾಗಿರೋ ಚೆನ್ನೈ ಸದ್ಯ ಕ್ಯಾಲ್ಯುಕುಲೇಟರ್ ಹಿಡಿದು ಕುಳಿತಿದೆ.

ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಆರ್‌ಸಿಬಿ ಅಭಿಮಾನಿಗಳು ಈಗ ‘ಪಾಪದ ಕೊಡ ತುಂಬಿದೆ’ ಎಂಬಂತೆ ಚರ್ಚೆ ನಡೆಸುತ್ತಿದ್ದಾರೆ. ‘ನಮ್ಮ ತಂಡದ ಕೆಟ್ಟ ದಿನವನ್ನು ನೋಡಿ ನಕ್ಕವರಿಗೆಲ್ಲ ಈಗ ಸರಿಯಾದ ಉತ್ತರ ಸಿಗುತ್ತಿದೆ’. 49 ರನ್ ಎನ್ನುವುದು ಆರ್‌ಸಿಬಿಯ ಶಾಪದ ನಂಬರ್ ಆಗಿ ಬದಲಾಗಿದೆ’ ಎಂಬ ಪೋಸ್ಟ್‌ಗಳು ವೈರಲ್ ಆಗುತ್ತಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:27 am, Tue, 12 May 26

Source link

‘ದ್ರಾವಿಡ’ ರಾಜಕಾರಣದ ‘ಯೂನಿಫಾರ್ಮ್’ ಬದಲಿಸಿದ ವಿಜಯ್ – Kannada News | Why Vijay wore back suit on his oath taking ceremony

ತಮಿಳುನಾಡಿನಲ್ಲಿ ಕಳೆದ 60 ವರ್ಷಗಳಿಂದಲೂ ‘ದ್ರಾವಿಡ’ ರಾಜಕೀಯದ್ದೆ (Politics) ಕಾರುಬಾರು. ಕಳೆದ ಆರು ದಶಕಗಳಲ್ಲಿ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಮತ್ತು ಎಐಎಡಿಎಂಕೆ (ಆಲ್ ಇಂಡಿಯಾ ಅನ್ನಾ ದ್ರಾವಿಡ ಮುನ್ನೇಟ್ರ ಕಳಗಂ) ಬಿಟ್ಟರೆ ಇನ್ಯಾವ ಪಕ್ಷವೂ ಸಹ ತಮಿಳುನಾಡಿನಲ್ಲಿ ಗೆದ್ದಿರಲಿಲ್ಲ. ಈ 60 ವರ್ಷಗಳ ‘ದ್ರಾವಿಡ’ ರಾಜಕೀಯ ಪ್ರಾಬಲ್ಯವನ್ನು ಮುರಿದಿರುವ ದಳಪತಿ ವಿಜಯ್ (Thalapathy Vijay) ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಿಜಯ್, ‘ದ್ರಾವಿಡ’ ರಾಜಕೀಯಕ್ಕೆ ಬ್ರೇಕ್ ಹಾಕಿದ್ದು ಮಾತ್ರವೇ ಅಲ್ಲದೆ, ದಶಕಗಳಿಂದಲೂ ಪಾಲಿಸಿಕೊಂಡು ಬಂದಿದ್ದ ‘ರಾಜಕೀಯ ಸಂಪ್ರದಾಯ’ಗಳನ್ನು ಮುರಿದು, ಬದಲಾವಣೆಗೆ ಮುನ್ನುಡಿ ಹಾಕಿದ್ದಾರೆ.

ಮೊದಲ ಹೆಜ್ಜೆಯಾಗಿ ವಿಜಯ್ ಅವರು ತಮಿಳುನಾಡು ರಾಜಕೀಯದ ‘ಯೂನಿಫಾರ್ಮ್’ ಬದಲಾಯಿಸಿದ್ದಾರೆ. ತಮಿಳುನಾಡಿನ ಬಹುತೇಕ ಎಲ್ಲ ರಾಜಕಾರಣಿಗಳ ಕಾಮನ್ ಉಡುಪು ಬಿಳಿ ಶರ್ಟು, ಬಿಳಿ ಪಂಚೆ. ಈ ಬಿಳಿ ಶರ್ಟು ಮತ್ತು ಪಂಚೆ ತಮಿಳುನಾಡು ರಾಜಕೀಯದ ಯೂನಿಫಾರ್ಮ್ ಆಗಿಬಿಟ್ಟಿತ್ತು. ಆದರೆ ವಿಜಯ್ ಅದನ್ನು ಬದಲಾಯಿಸಿದ್ದಾರೆ. ಅವರು ಸೂಟು-ಬೂಟು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು ಮಾತ್ರವೇ ಅಲ್ಲದೆ, ಆ ನಂತರದ ದಿನಗಳಲ್ಲಿಯೂ ಸಹ ಅವರು ಪಂಚೆ, ಬಿಳಿ ಶರ್ಟಿನಿಂದ ದೂರವೇ ಉಳಿದಿದ್ದಾರೆ. ಆ ಮೂಲಕ ತಾವು ತಥಾಕಥಿತ ರಾಜಕಾರಣಿ ಅಲ್ಲವೆಂದೂ, ಸಿದ್ಧ ಹಾದಿಯಲ್ಲಿ ತಾವು ನಡೆಯುವುದಿಲ್ಲವೆಂದು ಸೂಚ್ಯವಾಗಿ ಹೇಳಿದ್ದಾರೆ.

ಇನ್ನು ವಿಜಯ್ ಅವರು ಕಪ್ಪು ಬಣ್ಣದ ಕೋಟನ್ನೇ ಧರಿಸಿದ್ದು ಏಕೆ ಎಂಬುದಕ್ಕೆ ಸ್ಪಷ್ಟ ಕಾರಣವೂ ಇದೆ. ಕಪ್ಪು ಅಶುಭ ಎಂಬುದು ಭಾರತದಾದ್ಯಂತ ಬಹುತೇಕರ ರೂಢಿಗತ ನಂಬಿಕೆ. ವಿಜಯ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ರೈಸ್ತರಲ್ಲಿ ಸಹ ಕಪ್ಪು ಅಶುಭ ಎಂಬ ನಂಬಿಕೆ ಇದೆ. ಆದರೆ ವಿಜಯ್ ಮಾತ್ರ, ತಮ್ಮ ಜೀವಮಾನದ ಪ್ರಮುಖ ಸಂದರ್ಭದಲ್ಲಿ ಕಪ್ಪು ಬಣ್ಣದ ಕೋಟನ್ನೇ ಧರಿಸಿ ಬಂದಿದ್ದರು. ಅದಕ್ಕೆ ಬಹಳ ಮುಖ್ಯವಾದ ಕಾರಣ ಇದೆ.

ಇದನ್ನೂ ಓದಿ:400 ಜನರಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ್ದರು ದಳಪತಿ ವಿಜಯ್

ವಿಜಯ್ ಅವರು ತಮಿಳುನಾಡಿನ ಸಾಮಾಜಿಕ ಸುಧಾರಕ ಪೆರಿಯಾರ್ ಅವರ ಅನುಯಾಯಿ. ಪೆರಿಯಾರ್ ಆದರ್ಶಗಳನ್ನು ತಮ್ಮ ರಾಜಕೀಯ ಪಕ್ಷದ ಸಿದ್ಧಾಂತಗಳನ್ನಾಗಿ ಮಾಡಿಕೊಂಡಿದ್ದಾರೆ. ವಿಜಯ್ ಅವರ ರಾಜಕೀಯ ಸಭೆಗಳಲ್ಲಿ ಅಂಬೇಡ್ಕರ್ ಮತ್ತು ಪೆರಿಯಾರ್ ಚಿತ್ರಗಳು ಎದ್ದು ಕಾಣುತ್ತಿದ್ದವು. ಪೆರಿಯಾರ್ ಅವರ ಆದರ್ಶಗಳ ಪಾಲಕನಾಗಿ ಅವರು ಪ್ರಮಾಣ ವಚನಕ್ಕೆ ಕಪ್ಪು ಉಡುಗೆ ಧರಿಸಿ ಬಂದಿದ್ದರು. ಅಸಮಾನತೆ, ಮೌಢ್ಯದ ವಿರುದ್ಧ ಪ್ರತಿಭಟನೆಗೆ ಕಪ್ಪು ಬಣ್ಣದ ಧಿರಿಸು ತೊಡುವಂತೆ ಪೆರಿಯಾರ್ ಬಹಳ ಹಿಂದೆ ಕರೆ ನೀಡಿದ್ದರು. ಪೆರಿಯಾರ್ ಅನುಯಾಯಿಗಳು ಕಪ್ಪು ಬಣ್ಣದ ಉಡುಪು ಧರಿಸುವುದು ಒಂದು ಚಳುವಳಿಯೇ ಆಗಿತ್ತು. ಹಾಗಾಗಿ ವಿಜಯ್ ಅವರು ತಾವು ಪೆರಿಯಾರ್ ವಾದದ ಪ್ರತಿಪಾದಕ ಎಂದು ಸೂಚಿಸಲು ಕಪ್ಪು ಬಣ್ಣದ ಸೂಟು ಧರಿಸಿ ಬಂದಿದ್ದರು.

ವಿಜಯ್ ಅವರ ‘ಸೂಟು ರಾಜಕಾರಣ’ ಸಾಕಷ್ಟು ಚರ್ಚೆಯನ್ನು ತಮಿಳುನಾಡಿನಲ್ಲಿ ಹುಟ್ಟುಹಾಕಿದೆ. ಉಳ್ಳವರ ಧಿರಿಸಾದ ಸೂಟು ಧರಿಸುವ ಮೂಲಕ ವಿಜಯ್ ತಮಿಳುನಾಡಿನ ಬಡವರು, ಮಧ್ಯಮವರ್ಗದವರೊಂದಿಗೆ ಭಾವನಾತ್ಮಕ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಸೂಟು, ಕಾರ್ಪೊರೇಟ್ ಸಂಸ್ಕೃತಿಯನ್ನು ಸೂಚಿಸುತ್ತದೆ, ವಿಜಯ್ ರಾಜ್ಯವನ್ನು ಕಾರ್ಪೊರೇಟ್ ಮಾದರಿಯಲ್ಲಿ ನಡೆಸುವ ಗುರಿ ಹೊಂದಿರಬಹುದು ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ. ಒಟ್ಟಾರೆ ವಿಜಯ್ ಅವರ ಸೂಟು ತಮಿಳುನಾಡಿನ ಪರಂಪರಾಗತ ರಾಜಕೀಯ ಸಂಸ್ಕೃತಿಯನ್ನು ಮುರಿದಿರುವ ಜೊತೆಗೆ ಸಾಕಷ್ಟು ನಿರೀಕ್ಷೆಗಳನ್ನು ಸಹ ಹುಟ್ಟುಹಾಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version