Baldness and Luck: ಬೋಳುತಲೆ ಅದೃಷ್ಟವೇ? ಜ್ಯೋತಿಷ್ಯಶಾಸ್ತ್ರ ಹೇಳುವುದೇನು ಗೊತ್ತಾ? – Kannada News | The Astrological and Spiritual Significance of Baldness; Checkout the details here

ಮನುಷ್ಯನ ಜೀವನದಲ್ಲಿ ಬಾಲ್ಯದಿಂದ ವೃದ್ಧಾಪ್ಯದವರೆಗೂ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ. ಈ ಬದಲಾವಣೆಗಳಲ್ಲಿ ಕೂದಲು ಉದುರಿ ಬೋಳುತಲೆ ಆಗುವುದು ಸಾಮಾನ್ಯ. ಸಮಾಜದಲ್ಲಿ ಕೆಲವರು ಬೋಳುತಲೆಯನ್ನು ಸಂಕೋಚದ ವಿಷಯವೆಂದು ಪರಿಗಣಿಸಿ, ವಿಗ್ ಅಥವಾ ಇತರ ಮಾರ್ಪಾಡುಗಳ ಮೂಲಕ ಮರೆಮಾಚಲು ಪ್ರಯತ್ನಿಸುತ್ತಾರೆ. ಆದರೆ, ವೈಜ್ಞಾನಿಕವಾಗಿ, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಈ ಬೋಳುತಲೆಯನ್ನು ವಿಭಿನ್ನ ದೃಷ್ಟಿಕೋನಗಳಿಂದ ವಿಶ್ಲೇಷಿಸಲಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ವೈಜ್ಞಾನಿಕವಾಗಿ, ಕೂದಲು ಉದುರುವಿಕೆಗೆ ಆಹಾರ ಪದ್ಧತಿ, ಪರಿಸರ, ವಾಸಿಸುವ ಜಾಗ ಮತ್ತು ವಂಶಪಾರಂಪರ್ಯ ಕಾರಣಗಳು ಪ್ರಮುಖವಾಗಿವೆ. ಆದರೆ ಜ್ಯೋತಿಷ್ಯದ ಪ್ರಕಾರ, ರವಿ ಗ್ರಹ, ಮಂಗಳ ಗ್ರಹ ಮತ್ತು ಕೇತು ಗ್ರಹಗಳ ಪ್ರಭಾವವು ಬೋಳುತಲೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಜಾತಕದ ಹನ್ನೆರಡು ಮನೆಗಳಲ್ಲಿ ಮೊದಲನೆಯದಾದ ಲಗ್ನವನ್ನು ಶಿರಸ್ಸಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಈ ಲಗ್ನದಲ್ಲಿ ರವಿ, ಮಂಗಳ, ಕೇತು ಗ್ರಹಗಳ ನೀಚ ಅಥವಾ ದುಷ್ಟ ಗ್ರಹಗಳ ದೃಷ್ಟಿ ಇದ್ದಾಗ ಕೂದಲು ಉದುರುವಿಕೆ ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಆಧ್ಯಾತ್ಮಿಕವಾಗಿ, ಬೋಳುತಲೆಯನ್ನು ಸೂರ್ಯ ಗ್ರಹದ (ರವಿ ಗ್ರಹ) ಪ್ರಭಾವದ ಹೆಚ್ಚಳವೆಂದು ಪರಿಗಣಿಸಲಾಗುತ್ತದೆ. ಸೂರ್ಯನ ಪ್ರಭಾವ ಹೆಚ್ಚಾದಾಗ ವ್ಯಕ್ತಿಗಳಲ್ಲಿ ಬುದ್ಧಿಶಕ್ತಿ, ಜ್ಞಾನ, ಐಶ್ವರ್ಯ ಮತ್ತು ಅದೃಷ್ಟ ಹೆಚ್ಚುತ್ತದೆ. ಬೋಳುತಲೆ ಹೊಂದಿದವರಿಗೆ ಸಾಮಾನ್ಯವಾಗಿ ಅಪಾರವಾದ ಜ್ಞಾನ, ಸಂಪತ್ತಿನ ಯೋಗ, ಮನೆ ಕಟ್ಟುವಿಕೆ, ವಾಹನ ಖರೀದಿಸುವಂತಹ ಅದೃಷ್ಟಗಳು ದೊರೆಯುತ್ತವೆ. ರಾಜಕೀಯ ಪ್ರಭಾವವೂ ಇವರಲ್ಲಿ ಅಧಿಕವಾಗಿರುತ್ತದೆ. ಅನೇಕ ದೊಡ್ಡ ರಾಜಕೀಯ ವ್ಯಕ್ತಿಗಳು ಬೋಳುತಲೆಯನ್ನು ಹೊಂದಿದ್ದು, ಉನ್ನತ ಸ್ಥಾನಗಳನ್ನು ಅಲಂಕರಿಸಿರುವುದನ್ನು ನಾವು ಗಮನಿಸಬಹುದು. ಕೃತಕವಾಗಿ ವಿಗ್ ಅಥವಾ ಇತರ ಸಾಧನಗಳನ್ನು ಬಳಸಿ ಬೋಳುತಲೆಯನ್ನು ಮರೆಮಾಚುವುದು ಅದೃಷ್ಟವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.

ಬೋಳುತಲೆ ಇರುವ ವ್ಯಕ್ತಿಗಳಲ್ಲಿ ವಾಕ್ ಶಕ್ತಿ, ಆಲೋಚನಾ ಶಕ್ತಿ, ಗಾಂಭೀರ್ಯ ಮತ್ತು ಪ್ರಬುದ್ಧತೆ ಹೆಚ್ಚಾಗಿ ಕಂಡುಬರುತ್ತದೆ. ಇವರು ತಮ್ಮ ಮಾತಿನಲ್ಲಿ ಹೆಚ್ಚು ಗಾಂಭೀರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಒಂದನೇ ಮನೆ ಮತ್ತು ಹತ್ತನೇ ಮನೆ ಬಲವಾಗಿರುವವರಿಗೆ ಬೋಳುತಲೆಯ ಮಾರ್ಪಾಡು ಆಗುವ ಸಾಧ್ಯತೆ ಇರುತ್ತದೆ. ಇಂತಹ ಸ್ಥಿತಿಯನ್ನು ಕಲ್ವಟ ಯೋಗ ಎಂದು ಕರೆಯಲಾಗುತ್ತದೆ. ಕಲ್ವಟ ಯೋಗವು ವ್ಯಕ್ತಿಯು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದರೂ, ಕೊನೆಯ ಕಾಲದಲ್ಲಿ ಆಶ್ರಯ ದೊರಕಿ, ರಾಜಕೀಯ ಪ್ರಗತಿ, ವಿದೇಶ ಪ್ರಯಾಣ, ಮತ್ತು ಆಕಸ್ಮಿಕವಾಗಿ ಅಧಿಕಾರ ಪ್ರಾಪ್ತಿಯಂತಹ ಶುಭ ಫಲಗಳನ್ನು ನೀಡುತ್ತದೆ. ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದು ಯಶಸ್ಸು ಕಂಡ ಅನೇಕ ವ್ಯಕ್ತಿಗಳಲ್ಲೂ ಇಂತಹ ಮಾರ್ಪಾಡುಗಳನ್ನು ಕಾಣಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:44 am, Tue, 12 May 26

Source link

ಜೈಲುಗಳಲ್ಲಿ ಅಕ್ರಮಕ್ಕೆ ಬ್ರೇಕ್: ಕೈದಿಗಳು ಮತ್ತು ಅಧಿಕಾರಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್! – Kannada News | Prison Tracking System in Karnataka: DGP Alok Kumar Implements Biometrics for Inmates and Staff to Curb Illegal Activities

ಬೆಂಗಳೂರು, ಮೇ 12: ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಸೇರಿದಂತೆ ರಾಜ್ಯದ ಕಾರಾಗೃಹಗಳಲ್ಲಿ ಸರಣಿ ಅಕ್ರಮಗಳು ಬಯಲಾದ ಬೆನ್ನಲ್ಲೇ, ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಜೈಲಿನಲ್ಲಿ ಕೈದಿಗಳು ಮತ್ತು ಸಿಬ್ಬಂದಿಯ ಪ್ರತಿಯೊಂದು ಚಲನವಲನವನ್ನು ಪತ್ತೆಹಚ್ಚಲು ‘ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್‌ಮೆಂಟ್’ ಮತ್ತು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆ ಜಾರಿಗೆ ಬಂದಿದ್ದು, ಇನ್ನು ಮುಂದೆ ಜೈಲಿನೊಳಗೆ ಯಾರು, ಎಲ್ಲಿ ಹೋಗುತ್ತಿದ್ದಾರೆಂಬುದು ಸೆಕೆಂಡ್ ಟು ಸೆಕೆಂಡ್ ದಾಖಲಾಗಲಿದೆ.

ಮುಖ್ಯಾಂಶಗಳು

  • ಬ್ಯಾರಕ್, ಆಸ್ಪತ್ರೆ, ಕ್ಯಾಂಟೀನ್ ಸೇರಿ ಜೈಲಿನ ಪ್ರತಿ ವಿಭಾಗದಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯ.
  • ಕೈದಿಗಳಷ್ಟೇ ಅಲ್ಲ, ಜೈಲು ಅಧಿಕಾರಿ ಮತ್ತು ಸಿಬ್ಬಂದಿಯ ಚಲನವಲನದ ಮೇಲೂ ಡಿಜಿಟಲ್ ನಿಗಾ.
  • ಒಬ್ಬ ಕೈದಿ ಮತ್ತೊಬ್ಬನನ್ನು ಭೇಟಿ ಮಾಡಲು ಅಥವಾ ಸಂದರ್ಶಕರ ಭೇಟಿಗೂ ಬಯೋಮೆಟ್ರಿಕ್ ದಾಖಲೆ ಅನಿವಾರ್ಯ.

ಅಕ್ರಮಗಳಿಗೆ ತಂತ್ರಜ್ಞಾನದ ಮದ್ದು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ಹಿಂದೆ ನಡೆದಿದ್ದ ಆತಂಕಕಾರಿ ಘಟನೆಗಳು ಈ ಕಠಿಣ ನಿರ್ಧಾರಕ್ಕೆ ಪ್ರೇರಣೆಯಾಗಿವೆ. ಇತ್ತೀಚೆಗಷ್ಟೇ ಜೈಲಿನ ಮೇಲೆ ದಾಳಿ ನಡೆದಾಗ ಕೈದಿಗಳು ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿತ್ತು. ಅಲ್ಲದೆ, ದಾಳಿಯ ವೇಳೆ 200ಕ್ಕೂ ಹೆಚ್ಚು ಮೊಬೈಲ್‌ಗಳು ಪತ್ತೆಯಾಗಿ ಜೈಲಿನ ಭದ್ರತೆಯನ್ನು ಅಣಕಿಸಿದ್ದವು. ಮಗದೊಂದು ಪ್ರಕರಣದಲ್ಲಿ ಕೈದಿಗಳು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿ ಡಿಜಿಪಿ ಹೆಸರನ್ನೇ ಪ್ರಸ್ತಾಪಿಸಿ ವೈರಲ್ ಮಾಡಿದ್ದರು. ಇಂತಹ ಘಟನೆಗಳಿಂದ ಜೈಲು ಅಧಿಕಾರಿಗಳ ಶಾಮೀಲಾತಿ ಸಾಬೀತಾದ ಹಿನ್ನೆಲೆಯಲ್ಲಿ, ಈಗ ಸಿಬ್ಬಂದಿಗೂ ಬಯೋಮೆಟ್ರಿಕ್ ಕಡ್ಡಾಯಗೊಳಿಸಲಾಗಿದೆ.

ಹೇಗಿರಲಿದೆ ‘ಪ್ರಿಸನರ್ಸ್ ಟ್ರ್ಯಾಕಿಂಗ್’ ವ್ಯವಸ್ಥೆ?

ಈ ಹೊಸ ವ್ಯವಸ್ಥೆಯಡಿ ಜೈಲಿನ ಪ್ರತಿ ಬ್ಯಾರಕ್, ಅಡುಗೆ ಮನೆ, ಆಸ್ಪತ್ರೆ ಮತ್ತು ಸಂದರ್ಶಕರ ಕೊಠಡಿಗಳಲ್ಲಿ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಲಾಗಿದೆ. ಕೈದಿಯು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಹೋಗಬೇಕಾದರೆ ಹೆಬ್ಬೆಟ್ಟಿನ ಗುರುತು ನೀಡಬೇಕು. ಇದರಿಂದ ಯಾವ ಕೈದಿ ಎಷ್ಟೊತ್ತು ಕ್ಯಾಂಟೀನ್‌ನಲ್ಲಿದ್ದ ಅಥವಾ ಎಷ್ಟು ಸಮಯ ಆಸ್ಪತ್ರೆಯಲ್ಲಿದ್ದ ಎಂಬ ಮಾಹಿತಿ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಹೈಡ್ರಾಮಾ: ಜೈಲಧಿಕಾರಿಗಳ ಮೇಲೆ ಕೈದಿಗಳಿಂದ ಹಲ್ಲೆಗೆ ಯತ್ನ, ಲಘು ಲಾಠಿ ಪ್ರಹಾರ!

ಈ ವ್ವವಸ್ಥೆಯು ಕೈದಿಗಳು ಅಕ್ರಮವಾಗಿ ಗುಂಪು ಸೇರುವುದನ್ನು ಮತ್ತು ಮೊಬೈಲ್ ಬಳಸಲು ಸಿಬ್ಬಂದಿ ನೆರವಾಗುವುದನ್ನು ತಡೆಯಲಿದೆ. ಅಲೋಕ್ ಕುಮಾರ್ ಅವರ ಈ ಹೊಸ ‘ಡಿಜಿಟಲ್ ಲಾಕ್’ ಜೈಲು ಹಕ್ಕಿಗಳ ಅಕ್ರಮ ದರ್ಬಾರ್‌ಗೆ ಅಂತ್ಯ ಹಾಡುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್, 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ – Kannada News | Vijayanagara Police Arrest Two Notorious Burglars; Gold Worth Rs 14 Lakh Recovered in Kudligi Sub Division

ವಿಜಯನಗರ, ಮೇ 12: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಉಪವಿಭಾಗದಲ್ಲಿ ಇತ್ತೀಚೆಗೆ ನಡೆದಿದ್ದ ನಾಲ್ಕು ಪ್ರಮುಖ ಮನೆಗಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕೂಡ್ಲಿಗಿ ಉಪವಿಭಾಗದ ಪೊಲೀಸರು ನಡೆಸಿದ ಸತತ ಕಾರ್ಯಾಚರಣೆಯಲ್ಲಿ ಆರೋಪಿಗಳಿಬ್ಬರನ್ನು ಬಂಧಿಸಲಾಗಿದ್ದು, ಕಳುವಾಗಿದ್ದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡಿರುವ ಆಭರಣಗಳ ಮೌಲ್ಯ 14.06 ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ, ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳು, ತಂಬ್ರಹಳ್ಳಿ ಪೊಲೀಸ್ ಠಾಣೆಯ 23/2026ನೇ ಕೇಸು ಮತ್ತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ 62/2026ನೇ ಕೇಸು ಸೇರಿದಂತೆ ಒಟ್ಟು ನಾಲ್ಕು ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿದಂತಾಗಿದೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕೂಡ್ಲಿಗಿ ಡಿವೈಎಸ್ಪಿ, ಹಗರಿಬೊಮ್ಮನಹಳ್ಳಿ ಸಿಪಿಐ ಮತ್ತು ಅವರ ತಂಡ, ತಂಬ್ರಹಳ್ಳಿ ಪಿಎಸ್ಐ ಮತ್ತು ಅವರ ತಂಡ, ಹಾಗೂ ಮರಿಯಮ್ಮನಹಳ್ಳಿ ಪಿಎಸ್ಐ ಮತ್ತು ಅವರ ತಂಡದ ಶ್ರಮವನ್ನು ಪೊಲೀಸ್ ಇಲಾಖೆ ಶ್ಲಾಘಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಗ್ನಿಸಾಕ್ಷಿ’ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್ – Kannada News | Agnisakshi Kannada Serial new Promo Shamanth Bro Gowda And Varshni Gowda

‘ಅಗ್ನಿಸಾಕ್ಷಿ’ ಧಾರಾವಾಹಿ ಮತ್ತೆ ಬರೋಕೆ ರೆಡಿ ಆಗಿದೆ. ಈ ಧಾರಾವಾಹಿಯಲ್ಲಿ ಶಮಂತ್ ಬ್ರೋ ಗೌಡ ಹಾಗೂ ವರ್ಷಿಣಿ ಗೌಡ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್ ಆಗಿದೆ. ‘ಹಠ ಇಬ್ಬರನ್ನೂ ಹತ್ತಿರ ಆಗೋಕೆ ಬಿಡ್ತಿಲ್ಲ , ಆದರೆಮ ಮನಸ್ಸು ದೂರ ಆಗೋಕೆ ಒಪ್ಪುತ್ತಿಲ್ಲ’ ಎನ್ನುವ ಕ್ಯಾಪ್ಶನ್ ನೀಡಲಾಗಿದೆ. ಸಂಪೂರ್ಣ ಪ್ರೋಮೋ ಕೂಡ ಅದೇ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಂಕಷ್ಟದಲ್ಲಿ ಹೋಟೆಲ್ ಉದ್ಯಮ: ಜಿಎಸ್​ಟಿ ವಿನಾಯಿತಿ ಕೋರಿ ನಿರ್ಮಲಾ ಸೀತಾರಾಮನ್ ಮೊರೆ ಹೋದ ಬೆಂಗಳೂರು ಹೋಟೆಲ್ ಮಾಲೀಕರ ಸಂಘ – Kannada News | Bengaluru Hotel Association Urges Nirmala Sitharaman to Reduce GST on Restaurants and Hotel Rooms

ಬೆಂಗಳೂರು, ಮೇ 12: ಹೆಚ್ಚುತ್ತಿರುವ ಕಚ್ಚಾ ವಸ್ತುಗಳ (ಗ್ಯಾಸ್, ತರಕಾರಿ ಮತ್ತಿತರ ವಸ್ತುಗಳು) ಬೆಲೆ ಮತ್ತು ನಿರ್ವಹಣಾ ವೆಚ್ಚದಿಂದ ಕಂಗಾಲಾಗಿರುವ ಬೆಂಗಳೂರಿನ ಹೋಟೆಲ್ ಉದ್ಯಮವು ಈಗ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಹೋಟೆಲ್ ಕೊಠಡಿಗಳು ಮತ್ತು ರೆಸ್ಟೋರೆಂಟ್ ಸೇವೆಗಳ ಮೇಲಿನ ಜಿಎಸ್‌ಟಿ (GST) ದರವನ್ನು ತರ್ಕಬದ್ಧಗೊಳಿಸುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಿದೆ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಸೌಲಭ್ಯದ ಕೊರತೆಯಿಂದಾಗಿ ಹೋಟೆಲ್ ಉದ್ಯಮವು ಭಾರಿ ಆರ್ಥಿಕ ಒತ್ತಡಕ್ಕೆ ಸಿಲುಕಿದೆ ಎಂದು ಸಂಘ ಕಳವಳ ವ್ಯಕ್ತಪಡಿಸಿದೆ.

ಮುಖ್ಯಾಂಶಗಳು

  • ಹೋಟೆಲ್ ಕೊಠಡಿ ಮತ್ತು ಆಹಾರ ಸೇವೆಗಳ ಮೇಲೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಸಹಿತ 5% ಜಿಎಸ್‌ಟಿ ವಿಧಿಸಲು ಬೇಡಿಕೆ.
  • ವಾಣಿಜ್ಯ ಎಲ್‌ಪಿಜಿ, ಕಟ್ಟಡ ಬಾಡಿಗೆ ಮತ್ತು ಕಿಚನ್ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು 18% ರಿಂದ 5% ಕ್ಕೆ ಇಳಿಸಲು ಮನವಿ.
  • ನಿರ್ವಹಣಾ ವೆಚ್ಚದಲ್ಲಿ ಶೇ. 40 ರಷ್ಟು ಪಾಲು ಹೊಂದಿರುವ ಎಲ್‌ಪಿಜಿ ಮತ್ತು ಬಾಡಿಗೆ ವೆಚ್ಚದಿಂದ ಉದ್ಯಮಕ್ಕೆ ಸಂಕಷ್ಟ.

ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಗೆ ಒತ್ತಾಯ

ಹೋಟೆಲ್ ಮಾಲೀಕರ ಸಂಘವು ಸರ್ಕಾರಕ್ಕೆ ಎರಡು ಪ್ರಮುಖ ಆಯ್ಕೆಗಳನ್ನು ನೀಡಿದೆ. ಮೊದಲನೆಯದಾಗಿ, ಬೇಕರಿ ಮತ್ತು ಸಿಹಿ ತಿಂಡಿಗಳ ಮಾರಾಟಕ್ಕೆ ಇರುವಂತೆ ಹೋಟೆಲ್ ಕೊಠಡಿ ಮತ್ತು ಆಹಾರದ ಮೇಲೆ 5% ಜಿಎಸ್‌ಟಿ ವಿಧಿಸಿ, ಐಟಿಸಿ ಸೌಲಭ್ಯ ನೀಡಬೇಕು. ಒಂದು ವೇಳೆ ಐಟಿಸಿ ಸೌಲಭ್ಯ ನೀಡಲು ಸಾಧ್ಯವಾಗದಿದ್ದರೆ, ಹೋಟೆಲ್‌ನ ಪ್ರಮುಖ ವೆಚ್ಚಗಳಾದ ವಾಣಿಜ್ಯ ಸಿಲಿಂಡರ್, ಬಾಡಿಗೆ ಮತ್ತು ಅಡುಗೆ ಸಲಕರಣೆಗಳ ಮೇಲಿನ ಜಿಎಸ್‌ಟಿಯನ್ನು ಶೇ 18 ರಿಂದ ಶೇ 5 ಕ್ಕೆ ಇಳಿಸಬೇಕು ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ಒತ್ತಾಯಿಸಿದ್ದಾರೆ.

ಸಾಮಾಜಿಕ ಕೊಡುಗೆ ಮತ್ತು ಉದ್ಯೋಗ

‘ನಾವು ಲಕ್ಷಾಂತರ ಮಧ್ಯಮ ವರ್ಗದ ಜನರಿಗೆ ಉದ್ಯೋಗ ನೀಡುತ್ತಿದ್ದೇವೆ. ಅಷ್ಟೇ ಅಲ್ಲದೆ, ರೈತರಿಂದ ನೇರವಾಗಿ ಹಾಲು, ಹಣ್ಣು ಮತ್ತು ತರಕಾರಿಗಳನ್ನು ಖರೀದಿಸುವ ಮೂಲಕ ಕೃಷಿ ವಲಯಕ್ಕೂ ಬೆಂಬಲ ನೀಡುತ್ತಿದ್ದೇವೆ. ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರು ಮತ್ತು ಶೌಚಾಲಯದ ಸೌಲಭ್ಯವನ್ನೂ ಒದಗಿಸುತ್ತಿದ್ದೇವೆ. ಇಷ್ಟೆಲ್ಲಾ ಸಾಮಾಜಿಕ ಕೊಡುಗೆ ನೀಡುತ್ತಿರುವ ಉದ್ಯಮಕ್ಕೆ ತೆರಿಗೆಯಲ್ಲಿ ರಿಯಾಯಿತಿ ನೀಡುವ ಅಗತ್ಯವಿದೆ’ ಎಂದು ಸಂಘವು ಮೇ 4 ರಂದು ಬರೆದ ಪತ್ರದಲ್ಲಿ ವಿವರಿಸಿದೆ.

ಗ್ರಾಹಕರ ಮೇಲೆ ಹೊರೆ ಬೀಳುವ ಭೀತಿ

ಐಟಿಸಿ ಸೌಲಭ್ಯವಿಲ್ಲದ ಕಾರಣ ಹೋಟೆಲ್‌ಗಳ ನಿರ್ವಹಣಾ ವೆಚ್ಚ ಗಗನಕ್ಕೇರುತ್ತಿದೆ. ಬಾಡಿಗೆ ಮತ್ತು ಗ್ಯಾಸ್ ದರವೇ ನಮ್ಮ ಒಟ್ಟು ವೆಚ್ಚದ ಶೇ 40 ರಷ್ಟಿದೆ. ಸರ್ಕಾರ ಜಿಎಸ್‌ಟಿ ದರವನ್ನು ಶೇ 5 ಕ್ಕೆ ಇಳಿಸಿದರೆ, ನಾವು ಆ ಹೊರೆಯನ್ನು ಗ್ರಾಹಕರ ಮೇಲೆ ಹಾಕದೆ ಉದ್ಯಮವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಪಿ.ಸಿ. ರಾವ್ ಹೇಳಿದ್ದಾರೆ. ಹೋಟೆಲ್ ಉದ್ಯಮದ ಉಳಿವಿಗಾಗಿ ಕೇಂದ್ರ ಸರ್ಕಾರವು ಈ ಬಾರಿಯ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿ ಇರುವುದಾಗಿ ಬೆಂಗಳೂರಿನ ಹೋಟೆಲ್ ಮಾಲೀಕರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟಿಟಿಯಲ್ಲೂ ‘ಜನ ನಾಯಗನ್’ ಚಿತ್ರಕ್ಕೆ ಬೇಡಿಕೆ; 150 ಕೋಟಿ ರೂಪಾಯಿ ಡೀಲ್? – Kannada News | Vijay CM: ‘Jana Nayagan’ OTT Rights Soar, Record 150 Cr Deal Expected

ಕಾಲಿವುಡ್ ಸ್ಟಾರ್ ನಟ ದಳಪತಿ  ವಿಜಯ್ ಅವರು ಇತ್ತೀಚೆಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಸಿಎಂ ಆದ ಬಳಿಕ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಈ ಬೆಳವಣಿಗೆ ಚಿತ್ರರಂಗದ ಲೆಕ್ಕಾಚಾರವನ್ನೇ ಬದಲಿಸಿದೆ. ಅವರ ಅಭಿನಯದ ‘ಜನ ನಾಯಗನ್’ ಚಿತ್ರದ ಓಟಿಟಿ ಹಕ್ಕುಗಳಿಗಾಗಿ ಈಗ ದೊಡ್ಡ ಮಟ್ಟದ ಪೈಪೋಟಿ ಆರಂಭವಾಗಿದೆ ಎಂದು ವರದಿ ಆಗಿದೆ.

ಆರಂಭದಲ್ಲಿ ಈ ಚಿತ್ರದ ಓಟಿಟಿ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ವಿಡಿಯೋ ಸಂಸ್ಥೆ ಸುಮಾರು 120 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಸೆನ್ಸಾರ್ ಪ್ರಕ್ರಿಯೆ ಮುಗಿಯದ ಕಾರಣದಿಂದ ಚಿತ್ರದ ಬಿಡುಗಡೆ ವಿಳಂಬವಾಯಿತು. ಹೀಗಾಗಿ, ಅಮೇಜಾನ್ ಸಂಸ್ಥೆಯು ಈ ಹಿಂದಿನ ಡೀಲ್‌ನಿಂದ ಹಿಂದೆ ಸರಿದಿತ್ತು. ಇದು ಚಿತ್ರತಂಡಕ್ಕೆ ಸ್ವಲ್ಪ ಮಟ್ಟದ ಹಿನ್ನಡೆ ಉಂಟುಮಾಡಿತ್ತು.

ಆದರೆ ಈಗ ಕಾಲ ಬದಲಾಗಿದೆ. ವಿಜಯ್ ಅವರು ರಾಜಕೀಯದಲ್ಲಿ ಪಡೆದಿರುವ ಅತಿ ದೊಡ್ಡ ಯಶಸ್ಸು ಮತ್ತು ಸಿಎಂ ಮಟ್ಟದ ವರ್ಚಸ್ಸು ಚಿತ್ರಕ್ಕೆ ಹೊಸ ಕಳೆ ತಂದಿದೆ. ಚುನಾವಣೆಯ ಮೊದಲು ಮೌನವಾಗಿದ್ದ ಓಟಿಟಿ ಸಂಸ್ಥೆಗಳು ಈಗ ‘ಜನ ನಾಯಗನ್’ ಹಕ್ಕುಗಳಿಗಾಗಿ ಮುಗಿಬೀಳುತ್ತಿವೆ. ಮೂಲಗಳ ಪ್ರಕಾರ, ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿರುವ ದೊಡ್ಡ ಓಟಿಟಿ ಸಂಸ್ಥೆಯೊಂದು ಈ ಮೊದಲು ಅಮೇಜಾನ್ ನೀಡಿದ್ದಕ್ಕಿಂತಲೂ ಭಾರಿ ಮೊತ್ತದ ಆಫರ್ ಅನ್ನು ನಿರ್ಮಾಪಕರ ಮುಂದಿಟ್ಟಿದೆ ಎನ್ನಲಾಗಿದೆ. 150 ಕೋಟಿ ರೂಪಾಯಿ ಇರಬಹುದೇ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ಇದನ್ನೂ ಓದಿ: ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?

ಈ ಹೊಸ ಡೀಲ್ ಕುದುರಿದರೆ ಅದು ಚಿತ್ರದ ನಿರ್ಮಾಪಕರಿಗೆ ದೊಡ್ಡ ಆಸರೆಯಾಗಲಿದೆ. ಅದರಲ್ಲೂ ವಿಶೇಷವಾಗಿ ‘ಟಾಕ್ಸಿಕ್’ ನಂತಹ ಬಿಗ್ ಬಜೆಟ್ ಸಿನಿಮಾಗಳ ಹಣಕಾಸಿನ ಒತ್ತಡದ ನಡುವೆ, ‘ಜನ ನಾಯಗನ್’ ತಂದುಕೊಡುವ ಈ ಲಾಭವು ನಿರ್ಮಾಪಕರಿಗೆ ದೊಡ್ಡ ಲಾಭ ತರಲಿದೆ.

‘ಜನ ನಾಯಗನ್’ ಸಿನಿಮಾ ಎರಡು ವಾರಗಳಲ್ಲಿ ರಿಲೀಸ್ ಮಾಡೋದಾಗಿ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಹೇಳಿದ್ದಾರೆ.ಟ್ರೇಡ್ ಸರ್ಕಲ್‌ನಲ್ಲಿ ಈ ಚಿತ್ರದ ಹಕ್ಕುಗಳಿಗಾಗಿ ಹಣ ಸುರಿಯಲು ಅನೇಕ ಕಂಪನಿಗಳು ಸಿದ್ಧವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮನುಷ್ಯರಿಗಷ್ಟೇ ಅಲ್ಲ, ಇನ್ಮುಂದೆ ಬೆಳೆಗಳಿಗೂ ಬರಲಿದೆ ಕ್ಲಿನಿಕ್: ಕೋಲಾರ ಜಿಲ್ಲಾಡಳಿತದಿಂದ ಮಹತ್ವದ ಹೆಜ್ಜೆ! – Kannada News | India’s First Agri Clinic Proposed in Kolar to Cure Crop Diseases and Improve Soil Health

ಮನುಷ್ಯರಿಗಷ್ಟೇ ಅಲ್ಲ, ಇನ್ಮುಂದೆ ಬೆಳೆಗಳಿಗೂ ಬರಲಿದೆ ಕ್ಲಿನಿಕ್Image Credit source: google Gemini

ಕೋಲಾರ, ಮೇ 12: ಮನುಷ್ಯರಿಗೆ ರೋಗ ಬಂದರೆ ಆಸ್ಪತ್ರೆಗೆ ಹೋಗುತ್ತೇವೆ. ಆದರೆ ರೈತರು ಬೆಳೆಯುವ ಬೆಳೆಗಳಿಗೆ ರೋಗ ಬಂದರೆ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರಿಸಲು ಕೋಲಾರ (Kolar) ಜಿಲ್ಲಾಡಳಿತವು ದೇಶದಲ್ಲೇ ಮೊದಲ ಬಾರಿಗೆ ರೈತರಿಗಾಗಿ ‘ಅಗ್ರಿ ಕ್ಲಿನಿಕ್’ (Agri Clinic) ಆರಂಭಿಸುವ ಅದ್ಭುತ ಯೋಜನೆಯನ್ನು ರೂಪಿಸಿದೆ.

ಮುಖ್ಯಾಂಶಗಳು

  • ಬೆಳೆಗಳ ರೋಗ ನಿವಾರಣೆಗೆ ಕೋಲಾರದಲ್ಲಿ ದೇಶದ ಮೊದಲ ಅಗ್ರಿ ಕ್ಲಿನಿಕ್ ಸ್ಥಾಪನೆ
  •  ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ತಜ್ಞರ ನೇಮಕ ಮತ್ತು ಮಾರ್ಗದರ್ಶನ
  •  ಮಣ್ಣಿನ ಸತ್ವ ರಕ್ಷಣೆಗಾಗಿ 1.36 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ಸಿದ್ಧ

ಯೋಜನೆಯ ಹಿನ್ನೆಲೆ

ಕೃಷಿ ಪ್ರಧಾನ ಜಿಲ್ಲೆಯಾದ ಕೋಲಾರದಲ್ಲಿ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಅವೈಜ್ಞಾನಿಕ ಬಳಕೆಯಿಂದ ಮಣ್ಣಿನ ಸತ್ವ ಕಡಿಮೆಯಾಗುತ್ತಿದೆ. ತರಕಾರಿಗಳಲ್ಲಿ ಲೆಡ್ ಹಾಗೂ ಇತರೆ ವಿಷಕಾರಿ ಅಂಶಗಳು ಪತ್ತೆಯಾಗುತ್ತಿರುವುದು ಮತ್ತು ಬೆಳೆಗಳು ನಿರಂತರವಾಗಿ ರೋಗಕ್ಕೆ ತುತ್ತಾಗುತ್ತಿರುವುದು ಕೃಷಿ ವಲಯಕ್ಕೆ ಆತಂಕ ತಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು, ತಜ್ಞರೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಸುಮಾರು 1.36 ಕೋಟಿ ರೂ. ಯೋಜನಾ ವರದಿಯನ್ನು ಸಲ್ಲಿಸಿದ್ದಾರೆ.

ಅಗ್ರಿ ಕ್ಲಿನಿಕ್ ಹೇಗೆ ಕೆಲಸ ಮಾಡಲಿದೆ?

ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಒಬ್ಬ ಕೃಷಿ ತಜ್ಞರನ್ನು ನೇಮಕ ಮಾಡಲಾಗುತ್ತದೆ. ತಜ್ಞರು ರೈತರ ಹೊಲಗಳಿಗೆ ಭೇಟಿ ನೀಡಿ, ಮಣ್ಣಿನ ಪೌಷ್ಠಿಕಾಂಶ ಮತ್ತು ಬೆಳೆಗಳಿಗೆ ಬಂದಿರುವ ರೋಗಗಳನ್ನು ಪರಿಶೀಲಿಸಿ ಸೂಕ್ತ ಚಿಕಿತ್ಸೆ ಸೂಚಿಸಲಿದ್ದಾರೆ. ರೈತರಿಗೆ ಅಗತ್ಯವಿರುವ ತಾಂತ್ರಿಕ ಮಾಹಿತಿ, ಹವಾಮಾನ ಮುನ್ಸೂಚನೆ ಮತ್ತು ಕೀಟನಾಶಕಗಳ ಸರಿಯಾದ ಬಳಕೆಯ ಬಗ್ಗೆ ಒಂದೇ ಸ್ಥಳದಲ್ಲಿ ಮಾಹಿತಿ ಸಿಗಲಿದೆ.

ಇದನ್ನೂ ಓದಿ ಕಬ್ಬನ್ ಪಾರ್ಕ್‌ನಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಮಾವು ಪ್ರಿಯರು

ಕೋಲಾರದ ರೈತರು ಟೊಮ್ಯಾಟೊ, ಮಾವು, ಪಪ್ಪಾಯ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲು ಪ್ರಸಿದ್ಧರಾಗಿದ್ದಾರೆ. ಆದರೆ ಸಾವಯವ ಗೊಬ್ಬರದ ಬಳಕೆ ಕಡಿಮೆಯಾಗಿ ಮಣ್ಣಿನಲ್ಲಿ ಇಂಗಾಲದ ಪ್ರಮಾಣ ಕ್ಷೀಣಿಸುತ್ತಿದೆ. ಈ ಯೋಜನೆಯು ಮಣ್ಣನ್ನು ವಿಷಮುಕ್ತಗೊಳಿಸಿ, ಮುಂದಿನ ಪೀಳಿಗೆಗೆ ಉತ್ತಮ ಬೇಸಾಯ ಪದ್ಧತಿಯನ್ನು ಪರಿಚಯಿಸುವ ಗುರಿ ಹೊಂದಿದೆ. ಒಟ್ಟಾರೆಯಾಗಿ, ಈ ‘ಅಗ್ರಿ ಕ್ಲಿನಿಕ್’ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದರೆ, ಇದು ಕೃಷಿ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದಲ್ಲದೆ ರಾಜ್ಯದ ಇತರ ಜಿಲ್ಲೆಗಳಿಗೂ ಮಾದರಿಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆಲುಗಿನಲ್ಲಿ ಅದ್ದೂರಿಯಾಗಿ ರಿಲೀಸ್ ಆಗೋಕೆ ರೆಡಿ ಆಯ್ತು ‘ರಾಕ್ಷಸಪುರದೊಳ್’

ಕನ್ನಡದ ಚಿರಪರಿಚಿತ ನಟ ರಾಜ್ ಬಿ. ಶೆಟ್ಟಿ ಅವರ ಅಭಿನಯದ ‘ರಾಕ್ಷಸಪುರದೊಳ್’ ಚಿತ್ರವು ಈಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ತೆಲುಗಿನಲ್ಲಿ ಈ ಚಿತ್ರಕ್ಕೆ ‘ರಾಕ್ಷಸಪುರಂ’ ಎಂದು ಹೆಸರಿಡಲಾಗಿದ್ದು, ಖ್ಯಾತ ನಿರ್ಮಾಪಕ ಕೆ.ಎಸ್. ರಾಮರಾವ್ ಅವರು ಇದನ್ನು ಪ್ರಸ್ತುತಪಡಿಸುತ್ತಿದ್ದಾರೆ. ತೆಲುಗು ಸೆನ್ಸಾರ್ ಪೂರ್ಣಗೊಂಡಿದೆ ಎಂದು ಚಿತ್ರದ ವಿತರಕ ಕೆ.ಎಸ್. ರಾಮರಾವ್ ಇತ್ತೀಚೆಗೆ ಘೋಷಿಸಿದರು. ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರವನ್ನು ಪಡೆಯಲಾಗಿದೆ ಎಂದಿದ್ದಾರೆ ಅವರು.

ಮೇ 15 ರಂದು ತೆಲುಗು ಚಿತ್ರಮಂದಿರಗಳಲ್ಲಿ ಈ ಚಿತ್ರವು ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಕೆ.ಎಸ್. ರಾಮರಾವ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ತಮ್ಮ ವೈವಿಧ್ಯಮಯ ನಟನೆಯಿಂದ ವಿಶೇಷ ಛಾಪು ಮೂಡಿಸಿರುವ ಕನ್ನಡ ತಾರೆ ರಾಜ್ ಬಿ. ಶೆಟ್ಟಿ ಈ ಚಿತ್ರದಲ್ಲಿ ಶಕ್ತಿಶಾಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರವನ್ನು ನಿರ್ವಹಿಸುತ್ತಾರೆ. ರವಿ ವರ್ಮ ನಿರ್ಮಿಸಿರುವ ಈ ಚಿತ್ರವು ರೋಮಾಂಚಕ ಕೊಲೆ ನಿಗೂಢ ಥ್ರಿಲ್ಲರ್ ಆಗಿದೆ. ಇನ್ವೆಸ್ಟಿಗೇಷನ್ ಥ್ರಿಲ್ಲರ್ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಕಥೆಯು ಪ್ರತಿ ಹಂತದಲ್ಲೂ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ.

ಸೆನ್ಸಾರ್ ಮಂಡಳಿ ಪೂರ್ಣಗೊಂಡ ನಂತರ ಚಿತ್ರದ ಬಗ್ಗೆ ಮಾತನಾಡಿದ ಕೆ.ಎಸ್. ರಾಮರಾವ್, ‘ಈ ಚಿತ್ರದ ಮೇಕಿಂಗ್ ಮೌಲ್ಯಗಳು ಮತ್ತು ಸಸ್ಪೆನ್ಸ್ ಅಂಶಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಅದಕ್ಕಾಗಿಯೇ ನಾವು ಈ ಚಿತ್ರವನ್ನು ತೆಲುಗು ಪ್ರೇಕ್ಷಕರಿಗೆ ಯಾವುದೇ ರಾಜಿ ಮಾಡಿಕೊಳ್ಳದೆ ಪ್ರಸ್ತುತಪಡಿಸಲು ನಿರ್ಧರಿಸಿದ್ದೇವೆ. ಚಿತ್ರವನ್ನು ಆರಂಭದಲ್ಲಿ ಮೇ 7 ರಂದು ಬಿಡುಗಡೆ ಮಾಡಲು ಯೋಜಿಸಲಾಗಿದ್ದರೂ, ಹೆಚ್ಚು ಪ್ರೇಕ್ಷಕರನ್ನು ತಲುಪುವಂತೆ ನೋಡಿಕೊಳ್ಳಲು ನಾವು ಅದನ್ನು ಮೇ 15ರಂದು ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ: ರಾಜ್ ಬಿ. ಶೆಟ್ಟಿ ನಟನೆಯ ಹಿಂದಿ ಸಿನಿಮಾಗೆ ಸಿಕ್ತು ಸಲ್ಮಾನ್ ಖಾನ್ ಬೆಂಬಲ

‘ಬೇಸಿಗೆ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಈ ದಿನಾಂಕ ಚಿತ್ರಕ್ಕೆ ಸೂಕ್ತವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಪ್ರಸ್ತುತ ಐಪಿಎಲ್ ಬಝ್ ಮತ್ತು ಒಟಿಟಿಗಳಿಂದ ಸ್ಪರ್ಧೆಯ ಹೊರತಾಗಿಯೂ, ಪ್ರೇಕ್ಷಕರು ಯಾವಾಗಲೂ ಬಲವಾದ ವಿಷಯವನ್ನು ಹೊಂದಿರುವ ಚಲನಚಿತ್ರಗಳನ್ನು ಮೆಚ್ಚುತ್ತಾರೆ ಎಂದು ನಾವು ನಂಬುತ್ತೇವೆ. ‘ರಾಕ್ಷಸಪುರಂ’ ಖಂಡಿತವಾಗಿಯೂ ಆ ವರ್ಗಕ್ಕೆ ಸೇರುತ್ತದೆ. ಇದು ಸೆನ್ಸಾರ್ ಮಂಡಳಿಯಿಂದ ಉತ್ತಮ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈ ಚಿತ್ರ ಎಲ್ಲರನ್ನೂ ಮೆಚ್ಚಿಸುತ್ತದೆ’ ಎಂದು ರಾಮರಾವ್ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರಿಗರೇ ಎಚ್ಚರ! ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್‌ನಲ್ಲಿ ಹದಗೆಟ್ಟ ವಾಯು ಗುಣಮಟ್ಟ – Kannada News | Bangalore Air Pollution Crisis: AQI Levels Near Silk Board and BTM Layout Reach Moderate to Poor Category

ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್‌ನಲ್ಲಿ ಹದಗೆಟ್ಟ ವಾಯು ಗುಣಮಟ್ಟ

Image Credit source: google Gemini

ಬೆಂಗಳೂರು, ಮೇ 12: ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕವು (AQI) ಮಿಶ್ರ ಪ್ರತಿಕ್ರಿಯೆಯನ್ನು ದಾಖಲಿಸಿದೆ. ಇಂದಿನ ವರದಿಯಂತೆ ನಗರದ ಸರಾಸರಿ ವಾಯು ಗುಣಮಟ್ಟವು 54 ರಿಂದ 96ರ ಆಸುಪಾಸಿನಲ್ಲಿದ್ದು, ಇದು ‘ಸಾಧಾರಣ’ ವಿಭಾಗಕ್ಕೆ ಸೇರುತ್ತದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನೆಲ್ಲೆಡೆ ವಾಯು ಗುಣಮಟ್ಟ ಹೇಗಿದೆ?

ನಗರದ ಸಿಲ್ಕ್ ಬೋರ್ಡ್ ಮತ್ತು ಬಿಟಿಎಂ ಲೇಔಟ್‌ನಂತಹ ಕೆಲವು ಜನನಿಬಿಡ ಪ್ರದೇಶಗಳಲ್ಲಿ AQI ಮಟ್ಟವು 138 ರವರೆಗೆ ಏರಿಕೆಯಾಗಿದ್ದು, ಇದು ಸೂಕ್ಷ್ಮ ಆರೋಗ್ಯ ಸಮಸ್ಯೆ ಉಳ್ಳವರಿಗೆ (Sensitive Groups) ಹಾನಿಕಾರಕವಾಗಿದೆ. ಗಾಳಿಯಲ್ಲಿನ ಅತಿ ಸೂಕ್ಷ್ಮ ಧೂಳಿನ ಕಣಗಳಾದ PM2.5 ಮಟ್ಟವು ಸುಮಾರು 34µg/m³ ಮತ್ತು PM10 ಮಟ್ಟವು 40µg/m³ ದಾಖಲಾಗಿದೆ. ಇದು ವಾಹನಗಳ ದಟ್ಟಣೆ ಮತ್ತು ರಸ್ತೆ ಬದಿಯ ಧೂಳಿನಿಂದ ಉಂಟಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಬೆಂಗಳೂರಿನ ಆರ್ಕ್ ಸೆರೆನ್ ಕೌಂಟಿ ಮತ್ತು ಆದರ್ಶ್ ಪಾಮ್ ರಿಟ್ರೀಟ್‌ನಂತಹ ಪ್ರದೇಶಗಳಲ್ಲಿ ವಾಯು ಗುಣಮಟ್ಟವು ಕಳಪೆ ಮಟ್ಟಕ್ಕೆ ತಲುಪಿದ್ದು, 100ರ ಗಡಿ ದಾಟಿದೆ. ಆದರೆ, ಹೆಬ್ಬಾಳ ಮತ್ತು ಪೀಣ್ಯದಂತಹ ಕೆಲವು ಕಡೆಗಳಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ನಗರದ ಒಟ್ಟಾರೆ AQI ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 43% ಏರಿಕೆಯಾಗಿದೆ. ಅಂದರೆ ಮಾಲಿನ್ಯ ಹೆಚ್ಚಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 111
  • ಮಂಗಳೂರು-100
  • ಮೈಸೂರು – 86
  • ಬೆಳಗಾವಿ – 110
  • ಕಲಬುರ್ಗಿ-84
  • ಶಿವಮೊಗ್ಗ –96
  • ಬಳ್ಳಾರಿ – 106
  • ಹುಬ್ಬಳ್ಳಿ- 118
  • ಉಡುಪಿ –100
  • ವಿಜಯಪುರ – 82

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ರಸ್ತೆ ಕಾಮಗಾರಿಗಳು ಇದಕ್ಕೆ ಮುಖ್ಯ ಕಾರಣವೆನ್ನಲಾಗಿದೆ. ಉಸಿರಾಟದ ಸಮಸ್ಯೆ ಇರುವವರು ಮತ್ತು ಮಕ್ಕಳು ಹೊರಗಡೆ ಹೆಚ್ಚು ಸಮಯ ಕಳೆಯುವಾಗ ಮಾಸ್ಕ್ ಧರಿಸುವುದು ಸೂಕ್ತ. ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಗಾಳಿಯಲ್ಲಿನ ಧೂಳಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಮುಂದಿನ 4 ದಿನಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆಯ ಮುನ್ಸೂಚನೆ! – Kannada News | Karnataka Rain Update: Rain and Thunderstorm Alerts for Bengaluru and Coastal Regions

ಮುಂದಿನ 4 ದಿನಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆಯ ಮುನ್ಸೂಚನೆ!

ಬೆಂಗಳೂರು, ಮೇ 12: ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ (Weather) ತಿಳಿಸಿದೆ. ಕೊಡಗು, ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಇಂದು ಭಾರೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಎಚ್ಚರಿಕೆ ವಹಿಸುವಂತೆ ರಾಜ್ಯ ವಿಪತತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಮುಖ್ಯಾಂಶಗಳು

  • ಮುಂದಿನ 4 ದಿನಗಳವರೆಗೆ ಬೆಂಗಳೂರಿನಲ್ಲಿ ಮಳೆ
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ
  • ರಾಜ್ಯದಲ್ಲಿ ಯೆಲ್ಲೋ ಅಲರ್ಟ್​

ಎಲ್ಲೆಲ್ಲಿ ಮಳೆ?

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಷ್ಕ ವಾತಾವರಣ ಇರಲಿದೆ.ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಗರಿಷ್ಠ ತಾಪಮಾನ 33°C ದಾಟುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಮುಂದುವರಿಯಲಿದ್ದರೂ, ಕೆಲವು ಕಡೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34.8°C ಮತ್ತು ಕನಿಷ್ಠ ತಾಪಮಾನ 23.8°C ಆಸುಪಾಸಿನಲ್ಲಿರಲಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್​

ಮೇ 15 ಮತ್ತು 16ರಂದು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. 64.5 ಮಿ.ಮೀ ಇಂದ 115.5 ಮಿ.ಮೀ ಮಳೆಯಾಗಲಿದ್ದು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಒಳನಾಡಿಗೆ ಈ ಎರಡು ದಿನ ಯೆಲ್ಲೋ ಅಲರ್ಟ್​ ನೀಡಲಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version