ಹುಬ್ಬಳ್ಳಿ, ಮಾರ್ಚ್ 12: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವದಿಂದಾಗಿ ಹುಬ್ಬಳ್ಳಿಯ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಸಿಲಿಂಡರ್‌ಗಳು ಸಿಗದೆ ಹಲವು ಹೋಟೆಲ್‌ಗಳು ತಮ್ಮ ಕಾರ್ಯಚಟುವಟಿಕೆ ನಿಲ್ಲಿಸುವ ಭೀತಿ ಎದುರಿಸುತ್ತಿವೆ. ಈ ಪರಿಸ್ಥಿತಿಯನ್ನು ಎದುರಿಸಲು, ಹೋಟೆಲ್ ಮಾಲೀಕರು ಪರ್ಯಾಯ ಮಾರ್ಗವಾಗಿ ಕಟ್ಟಿಗೆ ಒಲೆಗಳತ್ತ ಮುಖ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿ ನಗರದ ಎಂಜಿ ಮಾರ್ಕೆಟ್‌ನಲ್ಲಿ ಕಟ್ಟಿಗೆ ಒಲೆಗಳ ಬೇಡಿಕೆ ಅನಿರೀಕ್ಷಿತವಾಗಿ ಏರಿಕೆಯಾಗಿದೆ. ಈ ಹಿಂದೆ ಯಾರೂ ಖರೀದಿಸದ ಕಟ್ಟಿಗೆ ಒಲೆಗಳಿಗೆ ಇದೀಗ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಹೋಟೆಲ್ ಮಾಲೀಕರು ಸಾಲುಗಟ್ಟಿ ನಿಂತು ಖರೀದಿ ಮಾಡುತ್ತಿದ್ದಾರೆ. ಬಹುತೇಕ ಹೋಟೆಲ್‌ಗಳು ಮುಚ್ಚುವ ಸ್ಥಿತಿ ತಲುಪಿದ್ದು, ಕನಿಷ್ಠ ಕಟ್ಟಿಗೆ ಒಲೆಯನ್ನಾದರೂ ಬಳಸಿ ವ್ಯವಹಾರ ಮುಂದುವರಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿವೆ.
ಕೆಲವರಂತೂ ಎಂತೆಂಥಾ ಸಾಹಸಗಳನ್ನು ಮಾಡ್ತಾರಪ್ಪ, ರೈಲಿನ ಮೆಟ್ಟಿಲುಗಳ ಮೇಲೆ ನಿಲ್ಲುವುದು, ರೈಲಿನ ಮೇಲೆ ಹತ್ತಿ ಅಲ್ಲಿ ವಿಡಿಯೋ ಮಾಡುವುದು, ದುಸ್ಸಾಹಸಗಳೇ ಹೆಚ್ಚು. ಆದರೆ ಈ ವಿಡಿಯೋ ಅಂತಾ ಅಪಾಯಕಾರಿಸಾಹಸವೇನಲ್ಲ. ರೈಲಿನ ಕಿಟಕಿಯಿಂದ ಎಳನೀರು ಒಳಗೆಳೆಯಲು ವ್ಯಕ್ತಿಯೊಬ್ಬ ಹರಸಾಹಸಪಟ್ಟಿರುವ ವಿಡಿಯೋ ವೈರಲ್ ಆಗಿದೆ. ಸೀಟಿನಲ್ಲಿ ವ್ಯಕ್ತಿ ಮತ್ತೆ ಅವರ ಪತ್ನಿ ಕುಳಿತಿದ್ದಾರೆ, ರೈಲಿನ ಕಿಟಕಿಯ ಹೊರಭಾಗದಿಂದ ಸ್ಟ್ರಾ ಹಾಕಿರುವ ಎಳನೀರನ್ನು ಕಿಟಕಿಯ ಸರಳುಗಳ ಮಧ್ಯೆ ಒಳಗೆಳೆದುಕೊಳ್ಳುವ ಭಾರಿ ಸಾಹಸ ಮಾಡಿ ಗೆದ್ದಿದ್ದಾರೆ. ಆದರೆ ಸ್ಟ್ರಾ ಇದ್ದ ಕಾರಣ ಅಲ್ಲಿಂದಲೇ ಎಳನೀರು ಕುಡಿಯಲೂ ಬಹುದಿತ್ತು.ಆದರೆ ಈ ಸಾಹಸ ಮಾಡಿದ್ದಾದರೂ ಏಕೆ ಎಂಬುದರ ಕುರಿತು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಯಾದಗಿರಿ/ಬೆಂಗಳೂರು, ಮಾರ್ಚ್ 12: ರಾಜ್ಯದ ಯಾದಗಿರಿ ಮತ್ತು ಬೆಂಗಳೂರಿನಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ವೈದ್ಯ ವಿದ್ಯಾರ್ಥಿನಿ ಸೇರಿ ಮೂವರು ಮೃತಪಟ್ಟಿದ್ದು, ಮತ್ತೋರ್ವಳು ಗಂಭೀರ ಗಾಯಗೊಂಡಿದ್ದಾಳೆ. ಯಾದಗಿರಿಯಲ್ಲಿ ಕ್ರೂಸರ್ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದರೆ, ಇತ್ತ ಬೆಂಗಳೂರಲ್ಲಿ ಟಿಪ್ಪರ್ಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಓರ್ವ ಯುವತಿ ಮೃತಪಟ್ಟಿದ್ದಾಳೆ. ಸಹ ಸವಾರಳ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬೈಕ್ಗೆ ಡಿಕ್ಕಿಯಾಗಿ ಕ್ರೂಸರ್ ಪಲ್ಟಿ
ಪಲ್ಟಿಯಾಗಿರುವ ಕ್ರೂಸರ್ ವಾಹನ
ಕ್ರೂಸರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಬಳಿ ನಡೆದಿದೆ. ಬೈಕ್ಗೆ ಗುದ್ದದ ಬಳಿಕ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿವೆ. ಮೃತ ವ್ಯಕ್ತಿಗಳು ಶಹಾಪುರ ತಾಲೂಕಿನ ಗೋಗಿ ಗ್ರಾಮದವರು ಎಂಬುದು ಗೊತ್ತಾಗಿದ್ದು, ಘಟನಾ ಸ್ಥಳಕ್ಕೆ ಕೆಂಭಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಬಳಿ ಟಿಪ್ಪರ್ಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ವೈದ್ಯ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಕೃತಿಕಾ(21) ಸ್ಥಳದಲ್ಲೇ ಪ್ರಾಣಬಿಟ್ಟಿದ್ದರೆ, ಹಂಸ ಎಂಬಾಕೆಯ ಸ್ಥಿತಿ ಗಂಭೀರವಾಗಿದೆ. ನಿನ್ನೆ ಸಂಜೆ ಕಾಲೇಜು ಮುಗಿಸಿ ಕೃತಿಕಾ ಮತ್ತು ಹಂಸ ತೆರಳುತ್ತಿದ್ದರು. ಈ ವೇಳೆ ಅವಘಾತ ನಡೆದಿದ್ದು, ಸವಾರರು ನೆಲಕ್ಕೆ ಬಿದ್ದಿದ್ದಾರೆ. ಟಿಪ್ಪರ್ ಹರಿದ ಪರಿಣಾಮ ಕೃತಿಕಾ ದುರ್ಮರಣ ಹೊಂದಿದ್ದರೆ, ಗಂಭೀರ ಗಾಯಗೊಂಡ ಹಂಸಗೆ ಆರ್ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ, ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆ ಎಕ್ಸಿಟ್ ಗೇಟ್ನಲ್ಲಿ ಘಟನೆ ನಡೆದಿದೆ. ಇಬ್ಬರು ಮೆಡಿಕಲ್ ವಿದ್ಯಾರ್ಥಿನಿಯರು ದ್ವಿಚಕ್ರ ವಾಹನದಲ್ಲಿ ತೆರಳುವಾಗ ಬೆಂಗಳೂರಿಂದ ಮೈಸೂರು ಕಡೆಗೆ ಹೋಗ್ತಿದ್ದ ಲಾರಿಗೆ ಡಿಕ್ಕಿ ಆಗಿ ಅಪಘಾತ ನಡೆದಿದೆ. ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತಿದ್ದ ಕೃತಿಕಾ ಮೃತಪಟ್ಟಿದ್ದರೆ, ವಾಹನ ಚಲಾಯಿಸುತ್ತಿದ್ದ ಮತ್ತೋರ್ವಳಿಗೆ ಗಾಯವಾಗಿದೆ. ಮೃತಳು ಆರ್.ಆರ್.ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಎಂದು ಅವರು ತಿಳಿಸಿದ್ದಾರೆ.
ಹಿಂದೂ ಧರ್ಮದ ನಂಬಿಕೆಯಂತೆ ಯುಗಾದಿಯು ಸೃಷ್ಟಿಯ ಆರಂಭದ ದಿನ ಹಾಗೂ ಹೊಸ ವರ್ಷದ ಮುನ್ನುಡಿ. ಈ ಬಾರಿ ಅಂದರೆ 2026ರಲ್ಲಿ ಯುಗಾದಿ ಹಬ್ಬವನ್ನು ಮಾರ್ಚ್ 19, ಗುರುವಾರದಂದು ಆಚರಿಸಲಾಗುತ್ತಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಹುತೇಕ ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಅಂದು ಮುಂಜಾನೆಯ ಶುಭ ಮುಹೂರ್ತಗಳಾದ ಬೆಳಿಗ್ಗೆ 5:00 ರಿಂದ 7:30 ಅಥವಾ 9:00 ರಿಂದ 11:30 ರ ಅವಧಿಯಲ್ಲಿ ದೈವಿಕ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದೆ.
ಯುಗಾದಿ ಹಬ್ಬದಂದು ಏನು ಮಾಡಬೇಕು?
ಈ ಶುಭ ದಿನದ ಆಚರಣೆಯು ಶಿಸ್ತು ಮತ್ತು ಭಕ್ತಿಯಿಂದ ಕೂಡಿದೆ. ಹಬ್ಬದ ಮುನ್ನಾದಿನವೇ ಮನೆಯನ್ನು ಗುಡಿಸಿ, ಸಾರಿಸಿ ಸ್ವಚ್ಛಗೊಳಿಸುವುದು ವಾಡಿಕೆ. ಹಬ್ಬದ ದಿನದಂದು ಬ್ರಾಹ್ಮಿ ಮುಹೂರ್ತದಲ್ಲೇ ಎದ್ದು, ಮನೆಯ ಮುಂಭಾಗದಲ್ಲಿ ಮಾವಿನ ಎಲೆ ಮತ್ತು ಹೂವುಗಳ ತೋರಣವನ್ನು ಕಟ್ಟಿ ಶೃಂಗರಿಸಬೇಕು. ಮೈಗೆ ಎಳ್ಳೆಣ್ಣೆಯನ್ನು ಹಚ್ಚಿ, ಅರಿಶಿನ ಬೆರೆಸಿದ ಪವಿತ್ರ ನೀರಿನಲ್ಲಿ ಅಭ್ಯಂಜನ ಸ್ನಾನ ಮಾಡುವುದು ದೈಹಿಕ ಮತ್ತು ಮಾನಸಿಕ ಶುದ್ಧೀಕರಣದ ಸಂಕೇತವಾಗಿದೆ. ಸ್ನಾನದ ನಂತರ ಹೊಸ ಬಟ್ಟೆಗಳನ್ನು ಧರಿಸಿ, ಹಣೆಗೆ ತಿಲಕವನ್ನಿಟ್ಟು ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ. ಆಧುನಿಕ ಯುಗದಲ್ಲಿ ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಿದ್ದರೂ, ಸಾಂಪ್ರದಾಯಿಕ ರಂಗೋಲಿ ಮತ್ತು ತಳಿರು ತೋರಣಗಳ ಮೆರುಗು ಇಂದಿಗೂ ಕಡಿಮೆಯಾಗಿಲ್ಲ.
ಹೊಸ ವರ್ಷದ ಮೊದಲ ದಿನ ನಾವು ಮಾಡುವ ಕೆಲಸಗಳು ಇಡೀ ವರ್ಷದ ಮೇಲೆ ಪ್ರಭಾವ ಬೀರುತ್ತವೆ ಎಂಬ ಗಾಢವಾದ ನಂಬಿಕೆಯಿದೆ. ಆದ್ದರಿಂದ ಈ ದಿನದಂದು ಕೆಲವು ತಪ್ಪುಗಳನ್ನು ಮಾಡದಂತೆ ಜಾಗರೂಕರಾಗಿರಬೇಕು. ವಿಶೇಷವಾಗಿ ಯಾರೊಂದಿಗೂ ವಾದ-ವಿವಾದ ಅಥವಾ ಜಗಳಗಳಲ್ಲಿ ತೊಡಗಬಾರದು. ಇಂದು ಹಣಕಾಸಿನ ಸಾಲ ನೀಡುವ ಅಥವಾ ಪಡೆಯುವ ವ್ಯವಹಾರಗಳಿಂದ ದೂರವಿರುವುದು ವರ್ಷವಿಡೀ ಆರ್ಥಿಕ ಸ್ಥಿರತೆಗೆ ಒಳ್ಳೆಯದು. ಆಹಾರದ ವಿಚಾರದಲ್ಲಿ ಈ ದಿನ ಮಾಂಸಾಹಾರ ಮತ್ತು ಮದ್ಯಪಾನದಂತಹ ತಾಮಸಿಕ ವಸ್ತುಗಳನ್ನು ತ್ಯಜಿಸಿ ಸಾತ್ವಿಕತೆಯನ್ನು ಪಾಲಿಸಬೇಕು. ಉಗುರು ಅಥವಾ ಕೂದಲು ಕತ್ತರಿಸುವುದು ಹಾಗೂ ಹರಿದ ಬಟ್ಟೆಗಳನ್ನು ಧರಿಸುವುದು ಈ ಪವಿತ್ರ ದಿನದಂದು ನಿಷಿದ್ಧವೆಂದು ಪರಿಗಣಿಸಲಾಗಿದೆ. ಜೀವನದ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವ ಸಂಕೇತವಾದ ಬೇವು-ಬೆಲ್ಲವನ್ನು ಸವಿಯುತ್ತಾ, ಈ ಹೊಸ ವರ್ಷವನ್ನು ಸಂತೋಷದಿಂದ ಸ್ವಾಗತಿಸುವುದು ಹಬ್ಬದ ನಿಜವಾದ ಆಶಯವಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟೀಮ್ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಮಾರ್ಚ್ 8 ರಂದು ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ ಗೆಲುವು ದಾಖಲಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಬಳಸಿದ ರೀತಿ ವಿವಾದಕ್ಕೆ ಕಾರಣವಾಗಿದೆ.
ದೂರು ನೀಡಿದ್ದು ಯಾರು?
ಫೈನಲ್ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ್ದಾರೆ. ಈ ಹಿನ್ನಲೆಯಲ್ಲಿ ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ವಕೀಲ ವಾಜಿದ್ ಖಾನ್ ತಿಳಿಸಿದ್ದಾರೆ.
ಪಾಂಡ್ಯ ವಿರುದ್ಧದ ಆರೋಪವೇನು?
ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು ಮೈದಾನದಲ್ಲಿ ಮಲಗಿದ್ದಾರೆ. ಅಲ್ಲದೆ
ಸಂಭ್ರಮಾಚರಣೆಯ ವೇಳೆ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆಗೆ ಪೋಡಿಯಂ ಮೇಲೆ ಮಲಗಿದ್ದಾಗಲೂ ರಾಷ್ಟ್ರಧ್ವಜವನ್ನು ಮೈಮೇಲೆ ಧರಿಸಿದ್ದರು. ಇದು ಧ್ವಜಕ್ಕೆ ಮಾಡಿದ ಅಗೌರವ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಷ್ಟ್ರ ಧ್ವಜ ಸುತ್ತಿ ಮಲಗಿದ್ದ ಹಾರ್ದಿಕ್ ಪಾಂಡ್ಯ
ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ (1971) ರ ಅಡಿಯಲ್ಲಿ, ರಾಷ್ಟ್ರಧ್ವಜವನ್ನು ವಸ್ತ್ರದಂತೆ ಬಳಸಬಾರದು ಮತ್ತು ಅದು ನೆಲಕ್ಕೆ ತಾಗಿಸಬಾರದು ಎಂಬ ನಿಯಮವಿದೆ. ಪಾಂಡ್ಯ ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ದೂರುದಾರರ ವಕೀಲ ವಾಜಿದ್ ಖಾನ್ ತಿಳಿಸಿದ್ದಾರೆ.
ಸದ್ಯ ಪುಣೆ ಪೊಲೀಸರು ದೂರನ್ನು ಸ್ವೀಕರಿಸಿದ್ದು, ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್ (FIR) ದಾಖಲಿಸುವ ಬಗ್ಗೆ ಪೊಲೀಸರು ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದಾರೆ.
ಈ ಆರೋಪ ಸಾಬೀತಾದರೆ, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ.
ಭಾರತದ ರಾಷ್ಟ್ರಧ್ವಜದ ನಿಯಮಗಳು:
ನೆಲಕ್ಕೆ ತಾಗಬಾರದು: ಧ್ವಜವು ಎಂದಿಗೂ ನೆಲಕ್ಕೆ ಅಥವಾ ನೀರಿಗೆ ತಾಗಬಾರದು.
ತಲೆಕೆಳಗಾಗಿ ಹಾರಿಸಬಾರದು: ಕೇಸರಿ ಬಣ್ಣ ಯಾವಾಗಲೂ ಮೇಲಿರಬೇಕು. ಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸುವುದು ಅಪರಾಧ.
ಹರಿದ ಧ್ವಜ: ಹರಿದ ಅಥವಾ ಬಣ್ಣಗೆಟ್ಟ ಧ್ವಜವನ್ನು ಹಾರಿಸಬಾರದು. ಅಂತಹ ಧ್ವಜವನ್ನು ಗೌರವಯುತವಾಗಿ (ಖಾಸಗಿಯಾಗಿ ಸುಡುವ ಮೂಲಕ) ವಿಲೇವಾರಿ ಮಾಡಬೇಕು.
ಉಡುಪಾಗಿ ಬಳಸಬಾರದು: ರಾಷ್ಟ್ರಧ್ವಜವನ್ನು ಯಾವುದೇ ರೀತಿಯ ಸಮವಸ್ತ್ರ, ಉಡುಪು ಅಥವಾ ಮೈಮೇಲೆ ಸುತ್ತಿಕೊಳ್ಳುವ ವಸ್ತ್ರವಾಗಿ ಬಳಸಬಾರದು.
ಕುಷನ್ ಅಥವಾ ಪರ್ದೆ: ಧ್ವಜವನ್ನು ದಿಂಬುಗಳು, ಕರವಸ್ತ್ರಗಳು ಅಥವಾ ಯಾವುದೇ ಪೀಠೋಪಕರಣಗಳ ಮೇಲೆ ಮುದ್ರಿಸಬಾರದು ಅಥವಾ ಅಲಂಕಾರಕ್ಕೆ ಬಳಸಬಾರದು.
ಸೊಂಟದ ಕೆಳಗೆ: ಧ್ವಜದ ಚಿತ್ರವಿರುವ ಯಾವುದೇ ವಸ್ತುವನ್ನು ಸೊಂಟದ ಕೆಳಗೆ ಧರಿಸುವಂತಿಲ್ಲ.
ಬರವಣಿಗೆ: ಧ್ವಜದ ಮೇಲೆ ಯಾವುದೇ ರೀತಿಯ ಅಕ್ಷರಗಳನ್ನು ಬರೆಯಬಾರದು ಅಥವಾ ಚಿತ್ರ ಬಿಡಿಸಬಾರದು.
ಜಾಹೀರಾತು: ಧ್ವಜವನ್ನು ಯಾವುದೇ ವಾಣಿಜ್ಯ ಉದ್ದೇಶದ ಜಾಹೀರಾತಿಗೆ ಬಳಸುವಂತಿಲ್ಲ.
ವಸ್ತುಗಳನ್ನು ಸುತ್ತುವುದು: ಧ್ವಜದ ಒಳಗೆ ಯಾವುದೇ ವಸ್ತುಗಳನ್ನು ಇಟ್ಟು ಕಟ್ಟಿ ಸಾಗಿಸಬಾರದು (ಹೂವಿನ ದಳಗಳನ್ನು ಹೊರತುಪಡಿಸಿ, ಧ್ವಜಾರೋಹಣದ ಸಮಯದಲ್ಲಿ ಮಾತ್ರ ಅನುಮತಿ ಇದೆ).
ಶಿಕ್ಷೆಯ ಪ್ರಮಾಣ:
ರಾಷ್ಟ್ರಧ್ವಜಕ್ಕೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದರೆ ಅಥವಾ ನಿಯಮ ಉಲ್ಲಂಘಿಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಪುಣೆ ಪೊಲೀಸರಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಮುಖ್ಯವಾಗಿ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ ರ ಅಡಿಯಲ್ಲಿ ಕ್ರಮ ಜರುಗಿಸಲು ಕೋರಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ದೋಷಿ ಎಂದು ಸಾಬೀತಾದರೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಬಹುದು.
ಬೆಂಗಳೂರು, ಮಾರ್ಚ್ 12: ರಾಜ್ಯದಲ್ಲಿ ಲೆಪ್ಟೋಸ್ಪೈರೋಸಿಸ್ (Leptospirosis) ಸೋಂಕಿನ ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸುಮಾರು 30 ಮಂದಿ ಮೃತಪಟ್ಟಿದ್ದಾರೆ. ಪ್ರತಿ ವರ್ಷವೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆಯಲ್ಲಿ ಆತಂಕ ಎಬ್ಬಿಸಿದೆ.
ವರ್ಷವಾರು ಅಂಕಿಅಂಶಗಳನ್ನು ಗಮನಿಸಿದರೆ 2020ರಲ್ಲಿ 544 ಪ್ರಕರಣಗಳು ದಾಖಲಾಗಿದ್ದರೆ, 2021ರಲ್ಲಿ 906 ಪ್ರಕರಣಗಳು ಕಂಡುಬಂದಿವೆ. ಬಳಿಕ 2022ರಲ್ಲಿ 3,174 ಪ್ರಕರಣಗಳು, 2023ರಲ್ಲಿ 5,404 ಪ್ರಕರಣಗಳು ದಾಖಲಾಗಿವೆ. 2024ರಲ್ಲಿ 5,088 ಪ್ರಕರಣಗಳು ವರದಿಯಾಗಿದ್ದು, 2025ರಲ್ಲಿ ಈ ಸಂಖ್ಯೆ 6,525ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಮಾತ್ರವೇ 19 ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದಾರೆ.
ಲೆಪ್ಟೋಸ್ಪೈರೋಸಿಸ್ ಎಂದರೆ ಏನು?
ಲೆಪ್ಟೋಸ್ಪೈರೋಸಿಸ್ ಒಂದು ಝೂನೋಟಿಕ್ ಬ್ಯಾಕ್ಟೀರಿಯಾ ಸೋಂಕಾಗಿದ್ದು, ಸೋಂಕಿತ ಪ್ರಾಣಿಗಳ ಮೂತ್ರದ ಸಂಪರ್ಕದಿಂದ ಅಥವಾ ಅದರಿಂದ ಮಾಲಿನ್ಯಗೊಂಡ ನೀರು ಮತ್ತು ಮಣ್ಣಿನ ಸಂಪರ್ಕದಿಂದ ಹರಡುತ್ತದೆ. ಆರಂಭಿಕ ಲಕ್ಷಣಗಳು ಸಾಮಾನ್ಯವಾಗಿರುವುದರಿಂದ ಇದನ್ನು ಡೆಂಗ್ಯೂ ಅಥವಾ ಮಲೇರಿಯಾ ಎಂದು ತಪ್ಪಾಗಿ ಗುರುತಿಸುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಸೋಂಕು ತಗುಲಿದ ನಂತರ ಸಾಮಾನ್ಯವಾಗಿ 2 ರಿಂದ 14 ದಿನಗಳೊಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಆರಂಭಿಕ ಲಕ್ಷಣಗಳು
ಜ್ವರ
ತೀವ್ರ ತಲೆನೋವು
ದೇಹ ನೋವು, ವಿಶೇಷವಾಗಿ ಕಾಲು ಮತ್ತು ಬೆನ್ನು ಭಾಗದಲ್ಲಿ
ಚಳಿ ಅಥವಾ ನಡುಕ
ವಾಂತಿ ಅಥವಾ ಅಸ್ವಸ್ಥತೆ
ಕಣ್ಣು ಕೆಂಪಾಗುವುದು
ದೌರ್ಬಲ್ಯ ಮತ್ತು ದೇಹ ಸೊರಗು
ಹೊಟ್ಟೆ ನೋವು
ಗಂಭೀರ ಲಕ್ಷಣಗಳು
ಮೂತ್ರಪಿಂಡ ಸಮಸ್ಯೆ (ಕಿಡ್ನಿ ಫೇಲ್ಯರ್)
ಯಕೃತ್ ಹಾನಿಯಿಂದ ಕಾಮಳೆ (ಜಾಂಡಿಸ್)
ಉಸಿರಾಟದ ತೊಂದರೆ ಅಥವಾ ಶ್ವಾಸಕೋಶ ಸಮಸ್ಯೆಗಳು
ಮೆದುಳಿನ ಸೋಂಕು (ಮೆನಿಂಜೈಟಿಸ್)
ಒಳರಕ್ತಸ್ರಾವ
ಹೇಗೆ ತಡೆಗಟ್ಟಬಹುದು?
ನೆರೆ ನೀರು ಅಥವಾ ಕಲುಷಿತ ನೀರಿನಲ್ಲಿ ಬರಿಗಾಲಿನಲ್ಲಿ ನಡೆಯುವುದನ್ನು ತಪ್ಪಿಸಬೇಕು.
ಕೃಷಿ ಕೆಲಸ ಅಥವಾ ಕಸ ವಿಲೇವಾರಿ ಮಾಡುವಾಗ ಬೂಟು, ಕೈಗವಸು ಧರಿಸಬೇಕು.
ಕಲುಷಿತ ನೀರಿನ ಸಂಪರ್ಕದ ನಂತರ ಕೈ ಕಾಲುಗಳನ್ನು ಚೆನ್ನಾಗಿ ತೊಳೆಯಬೇಕು.
ಗಾಯ ಅಥವಾ ಕತ್ತರಿದ ಜಾಗಗಳನ್ನು ಮುಚ್ಚಿಕೊಂಡಿರಬೇಕು.
ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಇಲಿಗಳ ನಿಯಂತ್ರಣ ಮಾಡಬೇಕು.
ಶುದ್ಧವಾದ ನೀರನ್ನೇ ಕುಡಿಯಬೇಕು.
ಕಲುಷಿತ ನೀರಿನ ಸಂಪರ್ಕದ ನಂತರ ಜ್ವರ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ರೋಗದ ಈ ಎಲ್ಲಾ ಲಕ್ಷಣಗಳ ಹೊರತಾಗಿಯೂ ಸರಿಯಾದ ನಿರ್ಧಾರಕ್ಕೆ ಲ್ಯಾಬ್ ಪರೀಕ್ಷೆಗಳು ಅಗತ್ಯ. ಐಜಿಎಂ ಎಲಿಸಾ ಪರೀಕ್ಷೆ ಮೂಲಕ ಆರಂಭಿಕ ತಪಾಸಣೆ ನಡೆಸಲಾಗುತ್ತದೆ. ಮೈಕ್ರೋಸ್ಕೋಪಿಕ್ ಅಗ್ಗ್ಲುಟಿನೇಶನ್ ಟೆಸ್ಟ್ (MAT) ಮುಖ್ಯ ಪರೀಕ್ಷೆಯಾಗಿದ್ದು, ವಿಶೇಷ ಪ್ರಯೋಗಾಲಯಗಳಲ್ಲಿ ನಡೆಸಲಾಗುತ್ತದೆ. ಆರಂಭಿಕ ಹಂತದಲ್ಲಿ ಪಿಸಿಆರ್ ಪರೀಕ್ಷೆಯಿಂದ ಬ್ಯಾಕ್ಟೀರಿಯಾ ಡಿಎನ್‌ಎ ಪತ್ತೆ ಮಾಡಬಹುದು. ಚಿಕಿತ್ಸೆ ವಿಳಂಬವಾದರೆ ಈ ಸೋಂಕು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಮನಗರ, ಮಾರ್ಚ್ 12: ಕೌಟಿಂಬಿಕ ಕಲಹ ಹಿನ್ನೆಲೆ ಐದು ತಿಂಗಳ ಗರ್ಭಿಣಿ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮನೆಯ ರೂಮ್ನಲ್ಲಿಯೇ ನಯನಾ (19) ಮೃತಪಟ್ಟಿದ್ದಾರೆ. ಕಳೆದ 9 ತಿಂಗಳ ಹಿಂದೆ ಸುನೀಲ್ ಜೊತೆ ನಯನಾ ಅವರ ವಿವಾಹವಾಗಿತ್ತು ಎನ್ನಲಾಗಿದೆ. ಪತಿ ಸುನೀಲ್, ಅತ್ತೆ ಹಾಗೂ ಮಾವನ ವಿರುದ್ಧ ಯುವತಿಯ ಪೋಷಕರು ದೂರು ನೀಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಯುವಕ ನೇಣಿಗೆ ಶರಣು
ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್ಗೆ ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚೇತನ್ (20) ಮೃತ ವ್ಯಕ್ತಿಯಾಗಿದ್ದು, ಇವರು ಖಾಸಗಿ ಕಾಲೇಜಿನ ವ್ಯಾನ್ ಮ್ಯಾನೇಜ್ಮೆಂಟ್ ಕೆಲಸ ಮಾಡಿಕೊಂಡಿದ್ದರು. ಮನೆ ಬಿಟ್ಟು ಹೋಗುತ್ತೇನೆ ಇಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸ್ನೇಹಿತನಿಗೆ ಮೆಸೇಜ್ ಮಾಡಿ ಬಳಿಕ ಚೇತನ್ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ನೆಲಮಂಗಲ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಖಾತೆ ಮಾಡಿಕೊಡದೆ ಸತಾಯಿಸಿದ ಆರೋಪ ಹಿನ್ನೆಲೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ನಾಡಕಚೇರಿ ಎದುರೇ ವಿಷ ಸೇವಿಸಿ ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಜಮೀನಿನ ಖಾತೆ ಮಾಡಿಸಲು ಎರಡು ವರ್ಷಗಳಿಂದ ನಾಡಕಚೇರಿಗೆ ಅಲೆದಾಟ ನಡೆಸಿದ್ದ ಚಿಕ್ಕನಾಯಕನಹಳ್ಳಿ ಗ್ರಾಮದ ರೈತ ರಂಗೇಗೌಡ (70) ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ವಿಷಯವನ್ನು ತಹಸೀಲ್ದಾರ್ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿರಲಿಲ್ಲ. ಹೀಗಾಗಿ ಬೇಸತ್ತು ಸಾರ್ವಜನಿಕರ ಮುಂದೆಯೇ ರಂಗೇಗೌಡ ಕ್ರಿಮಿನಾಶಕ ಸೇವನೆ ಮಾಡಿದ್ದಾರೆ. ಕೂಡಲೇ ಸ್ಥಳೀಯರ ಸಹಾಯದಿಂದ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅವರನ್ನು ರವಾನೆ ಮಾಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವು–ಬದುಕಿನ ನಡುವೆ ರಂಗೇಗೌಡ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ತಾಲೂಕು ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ದಾಖಲೆ, ಖಾತೆ, ಜನನ–ಮರಣ ಪ್ರಮಾಣ ಪತ್ರಕ್ಕೂ ಅಲೆದಾಡಬೇಕಾದ ಸ್ಥಿತಿ ಇದೆ ಎಂದು ದೂರಿದ್ದಾರೆ.
2010 ರಲ್ಲಿ ಪಾಕಿಸ್ತಾನ್ ಆಟಗಾರರು ಆಡಿದ ಕಳ್ಳಾಟವು ಹೊಸ ಸಂಚಲನ ಸೃಷ್ಟಿಸಿತ್ತು. ಈ ಸಂಚಲನಕ್ಕೆ ಕಾರಣವಾಗಿದ್ದು ಅಂದಿನ ಪಾಕ್ ತಂಡದ ನಾಯಕ ಸಲ್ಮಾನ್ ಬಟ್, ಮೊಹಮ್ಮದ್ ಅಮಿರ್ ಹಾಗೂ ಮೊಹಮ್ಮದ್ ಆಸಿಫ್. ಈ ಮೂವರು ಸೇರಿ ಲಾರ್ಡ್ಸ್ ಮೈದಾನದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರು. ಈ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ಎಂಬ ಸ್ಫೋಟಕ ಮಾಹಿತಿಯನ್ನು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಝಾಕ್ ಬಹಿರಂಗ ಪಡಿಸಿದ್ದಾರೆ.
ಆಗಸ್ಟ್ 26, 2010 ರಂದು ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಲು ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಬಟ್ ನಿರ್ಧರಿಸಿದ್ದರು. ಇದಕ್ಕಾಗಿ ಬುಕ್ಕಿ ಮಜರ್ ಮಜೀದ್ ಭರ್ಜರಿ ಆಫರ್ ನೀಡಿದ್ದರು.
ಇದಕ್ಕೆ ಒಪ್ಪಿದ್ದ ಸಲ್ಮಾನ್ ಬಟ್ ತನ್ನ ಸಹ ಆಟಗಾರರಾದ ಮೊಹಮ್ಮದ್ ಆಸಿಫ್ ಹಾಗೂ ಮೊಹಮ್ಮದ್ ಅಮಿರ್ ಅವರ ಮನವೊಲಿಸಿದ್ದರು. ಅದರಂತೆ ಪಂದ್ಯದ ನಡುವೆ ಸ್ಪಾಟ್ ಫಿಕ್ಸಿಂಗ್ ನಡೆಸಲಾಯಿತು. ಇದಾಗ್ಯೂ ಪಂದ್ಯದಲ್ಲಿ ಫಿಕ್ಸಿಂಗ್ ನಡೆಯುತ್ತಿದೆ ಎಂಬ ವಿಚಾರ ಯಾರಿಗೂ ಗೊತ್ತಾಗಿರಲಿಲ್ಲ.
ಇದರ ನಡುವೆ ಬುಕ್ಕಿ ಮಜರ್ ಮಜೀದ್ ಅವರ ಫೋನ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅವರು ಅದನ್ನು ಲಂಡನ್ನಲ್ಲಿರುವ ಮೊಬೈಲ್ ಶಾಪ್ನಲ್ಲಿ ರಿಪೇರಿಗೆ ನೀಡಿದ್ದಾರೆ. ಇದೇ ಮೊಬೈಲ್ ಶಾಪ್ನಲ್ಲಿ ಪಾಕಿಸ್ತಾನ್ ತಂಡದ ಆಲ್‌ರೌಂಡರ್ ಅಬ್ದುಲ್ ರಝಾಕ್ ಅವರ ಸ್ನೇಹಿತರೊಬ್ಬರು ಕೆಲಸ ಮಾಡುತ್ತಿದ್ದರು.
ಇತ್ತ ಮೊಬೈಲ್ ರಿಪೇರಿ ವೇಳೆ ಮಜರ್ ಮಜೀದ್ ಅವರ ಫೋನ್ಗೆ ಮೆಸೇಜ್ಗಳು ಬಂದಿವೆ. ಈ ಮೆಸೇಜ್ಗಳು ಪಾಕಿಸ್ತಾನ್ ಕ್ರಿಕೆಟ್ಗೆ ಸಂಬಂಧಿಸಿದ್ದಾಗಿತ್ತು. ಅದರಲ್ಲಿ ಫಿಕ್ಸಿಂಗ್ ಹೇಗೆ ಮಾಡಬೇಕೆಂಬುದನ್ನು ತಿಳಿಸಲಾಗಿತ್ತು. ಈ ವಿಚಾರವನ್ನು ಮೊಬೈಲ್ ಶಾಪ್ನಲ್ಲಿದ್ದ ಸ್ನೇಹಿತ ಅಬ್ದುಲ್ ರಝಾಕ್ಗೆ ತಿಳಿಸಿದ್ದಾರೆ.
ತಕ್ಷಣವೇ ಅಬ್ದುಲ್ ರಝಾಕ್ ಈ ವಿಷಯವನ್ನು ತಂಡದಲ್ಲಿದ್ದ ಹಿರಿಯ ಆಟಗಾರ ಶಾಹಿದ್ ಅಫ್ರಿದಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಅಫ್ರಿದಿ, ಮೊಹಮ್ಮದ್ ಅಮಿರ್ನನ್ನು ಕರೆದು ಈ ಕುರಿತು ವಿಚಾರರಿಸಿದ್ದಾರೆ.
ಎಷ್ಟೇ ಕೇಳಿದರೂ ಮೊಹಮ್ಮದ್ ಅಮಿರ್ ಬಾಯಿ ಬಿಡುತ್ತಿರಲಿಲ್ಲ. ಇದರಿಂದ ಕೋಪಗೊಂಡ ಶಾಹಿದ್ ಅಫ್ರಿದಿ ಮೊಹಮ್ಮದ್ ಅಮಿರ್ಗೆ ಕೆನ್ನೆಗೆ ಬಾರಿಸಿದ್ದಾರೆ. ಏಟು ಬೀಳುತ್ತಲೇ ಅಮಿರ್ ಅಳುತ್ತಾ ಸತ್ಯ ಒಪ್ಪಿಕೊಂಡಿದ್ದರು ಎಂಬ ವಿಚಾರವನ್ನು ಅಬ್ದುಲ್ ರಝಾಕ್ ಬಹಿರಂಗಪಡಿಸಿದ್ದಾರೆ.
ಅಂದರೆ ಮ್ಯಾಚ್ ಫಿಕ್ಸಿಂಗ್ ಬುಕ್ಕಿ ಮಜರ್ ಮಜೀದ್ ಅವರ ಮೊಬೈಲ್ ಫೋನ್ ಅಬ್ದುಲ್ ರಝಾಕ್ ಅವರ ಗೆಳೆಯನಿಗೆ ರಿಪೇರಿಗೆ ನೀಡಿದ್ದರಿಂದ ಪಾಕ್ ಆಟಗಾರರ ಈ ಕಳ್ಳಾಟ ಬಹಿರಂಗವಾಗಿತ್ತು.
ಇನ್ನು ಈ ಹಗರಣದ ಹಿಂದಿನ ಮಾಸ್ಟರ್ ಮೈಂಡ್ ನಾಯಕ ಸಲ್ಮಾನ್ ಬಟ್ ಎಂದು ರಜಾಕ್ ಆರೋಪಿಸಿದ್ದಾರೆ. ಸಲ್ಮಾನ್ ಬಟ್ ಸೂಚನೆಯ ಮೇರೆಗೆ ಅಮಿರ್ ಮತ್ತು ಮೊಹಮ್ಮದ್ ಆಸಿಫ್ ನೋ-ಬಾಲ್ ಎಸೆದಿದ್ದರು ಎಂಬುದು ಸಾಬೀತಾಗಿತ್ತು.
ಈ ಘಟನೆಯ ನಂತರ ಮೊಹಮ್ಮದ್ ಅಮಿರ್ಗೆ 5 ವರ್ಷಗಳ ನಿಷೇಧ ಹೇರಲಾಗಿತ್ತು. ಇನ್ನು ಸಲ್ಮಾನ್ ಬಟ್ಗೆ 10 ವರ್ಷ ಹಾಗೂ ಮೊಹಮ್ಮದ್ ಆಸಿಫ್ಗೆ 7 ವರ್ಷಯ ಬ್ಯಾನ್ ಹೇರಲಾಗಿತ್ತು. ಇದಾದ ಬಳಿಕ 2016 ರಲ್ಲಿ ಮೊಹಮ್ಮದ್ ಅಮಿರ್ ಕಂಬ್ಯಾಕ್ ಮಾಡಿದರೂ, ಸಲ್ಮಾನ್ ಬಟ್ ಹಾಗೂ ಮೊಹಮ್ಮದ್ ಆಸಿಫ್ ಅವರ ಕ್ರಿಕೆಟ್ ಕೆರಿಯರ್ ಈ ಬ್ಯಾನ್ನೊಂದಿಗೆ ಅಂತ್ಯವಾಗಿತ್ತು.
ಮುಂಬೈ, ಮಾರ್ಚ್ 12: ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನಭವನಕ್ಕೆ ಬಾಂಬ್ ಬೆದರಿಕೆ(Bomb Threat) ಬಂದಿದೆ. ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದ್ದು, ತಕ್ಷಣದ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ಸೇರಿದಂತೆ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿವೆ. ಇಂದು(ಮಾರ್ಚ್12) ಬೆಳಗ್ಗೆ ಬಿಎಸ್‌ಇ, ವಿಧಾನ ಭವನ ಮತ್ತು ಬಾಂಬೆ ಹೈಕೋರ್ಟ್‌ಗೆ ಬೆದರಿಕೆ ಇ-ಮೇಲ್‌ಗಳು ಬಂದಿವೆ. ಎಲ್ಲಾ ಸ್ಥಳಗಳಲ್ಲಿ ಸಾಕಷ್ಟು ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಮುಂಬೈ ಪೊಲೀಸರ ಪ್ರಕಾರ, ಆಯಾ ಪೊಲೀಸ್ ಠಾಣೆಗಳಲ್ಲಿ ಸಂಬಂಧಿತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ವಿಧಾನ ಭವನದಲ್ಲಿ ಬಾಂಬ್ ಸ್ಫೋಟ ಸಂಭವಿಸುವ ಬಗ್ಗೆ ಅಧಿಕಾರಿಗಳಿಗೆ ಮುಂಜಾನೆ ಬಂದ ಆತಂಕಕಾರಿ ಇ-ಮೇಲ್ ಬಂದಿತ್ತು. ಬಜೆಟ್ ಅಧಿವೇಶನ ಕೂಡ ನಡೆಯುತ್ತಿದೆ. ಮಹಾರಾಷ್ಟ್ರ ವಿಧಾನ ಭವನದ ಬಳಿ ನಡೆದ ಆತ್ಮಹತ್ಯೆ ಪ್ರಯತ್ನವನ್ನು ಪೊಲೀಸರ ಮಧ್ಯಪ್ರವೇಶದಿಂದ ವಿಫಲಗೊಳಿಸಿದ ಕೇವಲ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಬುಧವಾರ, ಸೋಲಾಪುರ ಜಿಲ್ಲೆಯ ಮಾಧಾ ತಾಲೂಕಿನ ತಕ್ಲಿ ಗ್ರಾಮದ ನಿವಾಸಿ 38 ವರ್ಷದ ದಾದಾಸೊ ಬಬನ್ ಕಲ್ಸೈತ್ ಎಂಬ ವ್ಯಕ್ತಿ ಉಷಾ ಮೆಹ್ತಾ ಚೌಕ್ ಬಳಿ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದರು.
ಸಿಬ್ಬಂದಿ ಇಂಧನಕ್ಕೆ ಬೆಂಕಿ ಹಚ್ಚುವ ಮೊದಲೇ ಆತನನ್ನು ತಡೆದಿದ್ದರು. ನಂತರ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಮೆರೈನ್ ಡ್ರೈವ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಪೊಲೀಸರು ಕಲ್ಸೈತ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 226 ರ ಅಡಿಯಲ್ಲಿ ಗುರುತಿಸಲಾಗದ ಅಪರಾಧವನ್ನು ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಬಾಂಬ್ ಬೆದರಿಕೆ ಇ-ಮೇಲ್ ನಂತರ ಅಧಿಕಾರಿಗಳು ವಿಧಾನ ಭವನದಲ್ಲಿ ಭದ್ರತಾ ತಪಾಸಣೆಗಳನ್ನು ಮುಂದುವರೆಸಿದ್ದಾರೆ, ಆದರೂ ಸಂದೇಶದ ಮೂಲದ ಬಗ್ಗೆ ಅಧಿಕಾರಿಗಳು ಇನ್ನೂ ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ.ಇಲ್ಲಿಯವರೆಗೆ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ.
ನವದೆಹಲಿ, ಮಾರ್ಚ್ 12: ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅವರ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಜೊತೆ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಇರಾನ್ ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ನೀಡಿದೆ. ಇದರಿಂದ ಭಾರತಕ್ಕೆ ತೈಲ ಪೂರೈಕೆಯ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಂತಾಗಿದೆ.
ಯುನೈಟೆಡ್ ಸ್ಟೇಟ್ಸ್, ಯುರೋಪ್ ಮತ್ತು ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳನ್ನು ಟಾರ್ಗೆಟ್ ಮಾಡುತ್ತಿರುವ ಇರಾನ್ ಅನೇಕ ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆಸಿದೆ. ಗಲ್ಫ್ ದೇಶಗಳ ಪ್ರಾದೇಶಿಕ ಸಂಘರ್ಷದ ನಡುವೆಯೂ ಭಾರತೀಯ ಧ್ವಜ ಹೊತ್ತ ಟ್ಯಾಂಕರ್‌ಗಳಾದ ಪುಷ್ಪಕ್ ಮತ್ತು ಪರಿಮಳ ಹಡಗುಗಳು ಈ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗಿವೆ.