Headlines

SRH vs RR: ಸಿಕ್ಸರ್​ಗಳಿಂದಲೇ ಅರ್ಧಶತಕ ಚಚ್ಚಿದ ವೈಭವ್ ಸೂರ್ಯವಂಶಿ

ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ಪರ ಆರಂಭಿಕ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ವೈಭವ್ ತಮ್ಮ ಅರ್ಧಶತಕದ ಇನ್ನಿಂಗ್ಸ್​ನಲ್ಲಿ 8 ಸಿಕ್ಸರ್​ಗಳು ಹಾಗೂ 1 ಬೌಂಡರಿ ಬಾರಿಸಿದರು. ಅಂದರೆ ವೈಭವ್ ಕೇವಲ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ ತಮ್ಮ…

Read More

‘ಜನ್ ನಾಯಗನ್’ ಸಿನಿಮಾ: ಅಂಬೇಡ್ಕರ್ ಕುರಿತ ಸಂಭಾಷಣೆಗೆ ಕತ್ತರಿ ಏಕೆ? – Kannada News | Why Ambedkar related dialogue removed from Jana Nayagan movie

ತಮಿಳುನಾಡು ಸಿಎಂ, ನಟ ವಿಜಯ್ (Thalapathy Vijay) ಅವರ ‘ಜನ್ ನಾಯಕನ್’ ಸಿನಿಮಾ ಕೊನೆಗೂ ಬಿಡುಗಡೆ ಕಾಣುತ್ತಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಈಗ ಏಳು ತಿಂಗಳ ಬಳಿಕ ಜುಲೈ 23ರಂದು ತೆರೆಗೆ ಬರುತ್ತಿದೆ. ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯಿಂದ ಭಾರಿ ಸಮಸ್ಯೆ ಎದುರಾಗಿತ್ತು. ಸೆನ್ಸಾರ್ ಮಂಡಳಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವುದನ್ನೇ ನಿರಾಕರಿಸಿ, ವಿಶೇಷ ಸಮಿತಿಗೆ ಸಿನಿಮಾವನ್ನು ಕಳಿಸಿತ್ತು. ನ್ಯಾಯಾಲಯದಲ್ಲಿ ಹೋರಾಟಗಳನ್ನು ಮಾಡಿ, ಕೊನೆಗೂ ಇದೀಗ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆದರೆ ಸಿನಿಮಾದ ಹಲವು…

Read More

ದಿನ ಭವಿಷ್ಯ: ಈ ರಾಶಿಯವರು ಇಂದು ತಮ್ಮ ದುರ್ವರ್ತನೆಯಿಂದ ಖ್ಯಾತರಾಗುವರು – Kannada News | Horoscope May 01 Friday 2026; Dina Rashi Bhavishya Today, Checkout the details here

ಮೇಷ ರಾಶಿ: ಇಂದು ನಿಮಗೆ ಸ್ವಲ್ಪ ಆಯಾಸವು ಬಾಧಿಸಬಹುದು. ತಕ್ಕ ವಿಶ್ರಾಂತಿಯಿಂದ ಪರಿಹಾರವನ್ನು ಮಾಡಿಕೊಳ್ಳಿ. ನಿಮ್ಮ ಬುದ್ಧಿಯನ್ನು ಬೇಕಾದ ಕಡೆ ಉಪಯೋಗಿಸಿ. ಭೂಮಿಯ ವ್ಯವಹಾರದ ಬಗ್ಗೆ ತಾತ್ಸಾರವು ಯಾರದೋ ಕಾರಣಕ್ಕೆ ಬರಬಹುದು. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ಕೆಲವನ್ನು ನೀವು ಮನಸ್ಸಿನಿಂದ ತೆಗೆದರಷ್ಟೇ ನೆಮ್ಮದಿ ಸಾಧ್ಯ. ವೃಷಭ ರಾಶಿ: ನೀವು ಕೊಟ್ಟಿರುವ ಸಂಪತ್ತು ತಾನಾಗಿಯೇ ಬರಲಿದೆ. ಅಧಿಕವಾದ ಉತ್ಸಾಹದಿಂದ ಏನನ್ನಾದರೂ ಮಾಡಲು ಹೋಗಬೇಡಿ. ಸಾಮರ್ಥ್ಯ ಮತ್ತು…

Read More

‘ಉತ್ತರಕಾಂಡ’ ಸಿನಿಮಾ ನಿಂತಿದ್ದು ಏಕೆ? ಮುಂದೇನು? ಡಾಲಿ ಧನಂಜಯ್ ಉತ್ತರ – Kannada News | Is Uttarakaanda movie stopped Daali Dhanajay gave answer

ಡಾಲಿ ಧನಂಜಯ್ (Daali Dhananjay) ಸಿನಿಮಾ ವೃತ್ತಿ ಜೀವನದಲ್ಲಿ ‘ರತ್ನನ್ ಪ್ರಪಂಚ’ ಒಂದು ಅಪರೂಪದ ಮತ್ತು ಅತ್ಯುತ್ತಮ ಸಿನಿಮಾ ಸಹ ಹೌದು. ಆ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಅದ್ಭುತ ಯಶಸ್ಸಿನ ಬಳಿಕ ರೋಹಿತ್ ಪದಕಿ ಡಾಲಿ ಧನಂಜಯ್ ಕಾಂಬಿನೇಷನ್​​ನಲ್ಲಿ ‘ಉತ್ತರಕಾಂಡ’ ಸಿನಿಮಾ ಘೋಷಣೆಯಾಯ್ತು. ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿ ಸಖತ್ ನಿರೀಕ್ಷೆ ಹುಟ್ಟಿಸಿತ್ತು. ಅದೇ ಸಿನಿಮಾನಲ್ಲಿ ಶಿವರಾಜ್ ಕುಮಾರ್, ರಮ್ಯಾ ಅವರುಗಳು ಸಹ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಹಠಾತ್ತಾಗಿ ಸಿನಿಮಾದ…

Read More

ಕಟಾವಿಗೆ ಬಂದಿದ್ದ ಬೆಳೆ ತಿಂದು ತೇಗಿದ ಒಂಟಿ ಸಲಗ: ಆನೆ ಓಡಿಸಲು ರೈತರ ಹರಸಾಹಸ – Kannada News | Wild Elephant Damages Maize Crop in Chikkarangashetty Doddi of Hanur Taluk, Chamarajanagara

ಚಾಮರಾಜನಗರ, ಫೆಬ್ರವರಿ 18: ಗಡಿ ನಾಡು ಚಾಮರಾಜನಗರದಲ್ಲಿ ಮತ್ತೆ ಕಾಡಾನೆ ಹಾವಳಿ ಮಿತಿ ಮೀರಿದೆ. ಕಟಾವಿಗೆ ಬಂದಿದ್ದ ಮೆಕ್ಕೆಜೋಳವನ್ನು ಒಂಟಿ ಸಲಗ ತಿಂದು ತೇಗಿದ್ದು, ತಡರಾತ್ರಿ 3 ಗಂಟೆಯವರೆಗೂ ಕಾಡಾನೆ ಓಡಿಸಲು ಹನೂರು ತಾಲೂಕಿನ ಕಾಡಂಚಿನ ಪ್ರದೇಶ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದಲ್ಲಿ ರೈತರು ಹರಸಾಹಸ ಪಟ್ಟಿದ್ದಾರೆ. ನಂಜಶೆಟ್ಟಿ ಎಂಬುವವರಿಗೆ ಸೇರಿದ ಜಮೀನಿಗೆ ಲಗ್ಗೆಯಿಟ್ಟ ಕಾಡಾನೆ, 5 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಸಂಪೂರ್ಣ ಹಾಳು ಮಾಡಿದೆ. ಒಂಟಿ ಸಲಗವನ್ನು ಓಡಿಸುವ ವೇಳೆ ಬಿದ್ದು ರೈತನ ಕಾಲಿಗೆ ಗಾಯ ಕೂಡ…

Read More

ಹಾರ್ಮುಜ್ ಜಲಸಂಧಿಯೊಳಗೆ ತೈಲ ಹರಿವನ್ನು ನಿಲ್ಲಿಸಿದರೆ, ಇರಾನ್ ಒಂದು ರಾಷ್ಟ್ರವಾಗಿಯೇ ಉಳಿಯದು: ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್, ಮಾರ್ಚ್​ 10: ಇರಾನ್(Iran) ಹಾರ್ಮುಜ್ ಜಲಸಂಧಿಯೊಳಗೆ ತೈಲ ಹರಿವನ್ನು ನಿಲ್ಲಿಸುವ ಕೆಲಸ ಮಾಡಿದ್ದೇ ಆದಲ್ಲಿ ಇರಾನ್ ಒಂದು ದೇಶವಾಗಿಯೇ ಉಳಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಆ ರೀತಿಯಾದರೆ 20 ಪಟ್ಟು ಹೆಚ್ಚು ದಾಳಿಯನ್ನು ಎದುರಿಸಬೇಕಾಗುತ್ತದೆ. ಇರಾನ್ ಅನ್ನು ಮತ್ತೆ ಒಂದು ರಾಷ್ಟ್ರವಾಗಿ ನಿರ್ಮಿಸುವುದನ್ನು ಅಸಾಧ್ಯವಾಗಿಸುತ್ತದೆ ಎಂದರು. ಸಾವು, ಬೆಂಕಿ ಮತ್ತು ಕೋಪ ಅವರ ಮೇಲೆ ಆಳ್ವಿಕೆ ನಡೆಸುತ್ತದೆ. ಆದರೆ ಅದು ಸಂಭವಿಸಬಾರದು ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ…

Read More

ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್ – Kannada News | Mark Kannada movie thanks giving press meet LIVE

ಸುದೀಪ್ ನಟನೆಯ ‘ಮಾರ್ಕ್’ (Mark) ಸಿನಿಮಾ ಇದೇ ಗುರುವಾರ (ಡಿಸೆಂಬರ್ 25) ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲೆರಡು ದಿನ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಹ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ, ‘ಮಾರ್ಕ್’ ಸಿನಿಮಾ ವಿರುದ್ಧ ಸಂಚು ನಡೆದಿತ್ತು, ಸಿನಿಮಾ ಅನ್ನು ಸೋಲಿಸಿಯೇ ಸಿದ್ಧ ಎಂದು ಕೆಲವರು ಸವಾಲು ಹಾಕಿದ್ದರು. ಇದರ ನಡುವೆಯೂ ಸಿನಿಮಾ ಗೆಲುವಿನತ್ತ ದಾಪುಗಾಲು ಹಾಕಿದೆ. ಇದೇ ಕಾರಣಕ್ಕೆ ಸುದೀಪ್ ಸೇರಿದಂತೆ ‘ಮಾರ್ಕ್’…

Read More

IPL 2027: RCB ರಿಲೀಸ್ ಮಾಡಲಿರುವ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸತತವಾಗಿ ಟ್ರೋಫಿ ಗೆದ್ದು, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಈಗ ಇರುವ ದೊಡ್ಡ ಸವಾಲೆಂದರೆ ಮಿನಿ ಹರಾಜು. ಏಕೆಂದರೆ ಮಿನಿ ಹರಾಜಿಗೂ ಮುನ್ನ ಆರ್​ಸಿಬಿ ಕೆಲ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. (PC: IPL) ಆದರೆ ಪ್ರಸ್ತುತ ತಂಡದಲ್ಲಿರುವ ಬಹುತೇಕ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ತನ್ನ ಗೆಲುವಿನ ಕಾಂಬಿನೇಷನ್ ಹಾಗೂ ಕೋರ್ ತಂಡವನ್ನು ಬದಲಿಸಲು ಆರ್​ಸಿಬಿ ಮುಂದಾಗುವುದಿಲ್ಲ….

Read More

Father’s Day 2026: ಅಪ್ಪಂದಿರ ದಿನದಂದು ನಿಮ್ಮ ಪ್ರೀತಿಯ ತಂದೆಗೆ ಈ ಸ್ಪೆಷಲ್‌ ಉಡುಗೊರೆಗಳನ್ನು ನೀಡಿ – Kannada News | Father’s Day 2026: Here is a list of gifts you can give to your father on Father’s Day

ತಾಯಿಯಂತೆ ಮಕ್ಕಳ ಜೀವನದಲ್ಲಿ ತಂದೆಯೂ (Father) ಸಹ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಮಕ್ಕಳ ಸಂತೋಷಕ್ಕಾಗಿ ತನ್ನ ಸಂತೋಷವನ್ನೇ ತ್ಯಾಗ ಮಾಡಿ ಹಗಲಿರುಳು ದುಡಿಯುವ ಶ್ರಮಜೀವಿ ತಂದೆಯೇ ಮಕ್ಕಳ ಪಾಲಿನ ರಿಯಲ್‌ ಹೀರೋ. ಮಕ್ಕಳ ಪಾಲಿನ ಈ ಸೂಪರ್‌ ಹೀರೋಗಳನ್ನು ಸಂಭ್ರಮಿಸಲು, ಅಪ್ಪಂದಿರ ಪ್ರೀತಿ, ತ್ಯಾಗವನ್ನು ಸ್ಮರಿಸಲು ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಇದು ತಂದೆಯರ ಪಾಲಿಗಂತೂ ತುಂಬಾನೇ ವಿಶೇಷವಾದ ದಿನ. ಅನೇಕ ಜನರು ತಮ್ಮ ತಂದೆಯ ಸಲುವಾಗಿ ಈ ದಿನವನ್ನು…

Read More

ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಿನಲ್ಲಿ ಮಹತ್ವದ ಸಭೆ – Kannada News | Important meeting in Mysuru about providing support price to Tobacco

ಮೈಸೂರು, (ಫೆಬ್ರವರಿ 23): ತಂಬಾಕು ದರ ಪಾತಾಳಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ಆತಂಕಗೊಂಡಿದ್ದು, ಈ ಸಂಬಂಧ ತಂಬಾಕು ಬೆಳೆಗಾರರು, ತಂಬಾಕು ಮಂಡಳಿ ಅಧಿಕಾರಿಗಳು ಇಂದು (ಫೆಬ್ರವರಿ 23) ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹತ್ವದ ಸಭೆ ನಡೆಸಿದರು. ತಂಬಾಕು ಕೊಂಡುಕೊಳ್ಳುವ ಕಂಪನಿಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು. Source link

Read More