ಲಕ್ಕುಂಡಿ ನಿಧಿ ಪ್ರಕರಣಕ್ಕೆ ಟ್ವಿಸ್ಟ್​​: ರಿತ್ತಿ ಕುಟುಂಬದಿಂದ ಹೊಸ ಡಿಮ್ಯಾಂಡ್​​

ಲಕ್ಕುಂಡಿ ನಿಧಿ ಪ್ರಕರಣಕ್ಕೆ  ಟ್ವಿಸ್ಟ್​​: ರಿತ್ತಿ ಕುಟುಂಬದಿಂದ ಹೊಸ ಡಿಮ್ಯಾಂಡ್​​

ಗದಗ, ಮಾರ್ಚ್​ 12: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆಗಾಗಿ ಅಡಿಪಾಯ ತೆಗೆಯುವಾಗ ಸುಮಾರು 470 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದವು. ಸಿಕ್ಕ ನಿಧಿಯನ್ನು ಪ್ರಜ್ವಲ್ ರಿತ್ತಿ ಕುಟುಂಬ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿತ್ತು. ಆ ಬಳಿಕ ಬಹಳ ಬೆಳವಣಿಗೆಗಳು ನಡೆದಿದ್ದವು. ಈ ನಡುವೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ಅಂದು ಸಿಕ್ಕಿದ್ದ ಬಂಗಾರದ ಬೆಲೆ ಇಂದಿಗೆ ಸುಮಾರು 80 ಲಕ್ಷ ರೂಪಾಯಿಗಳಾಗಿದ್ದು, ಆ್ಯಂಟಿಕ್​​ ಮೌಲ್ಯ ಸುಮಾರು 8 ಕೋಟಿ ಎಂದು ತಜ್ಞರು ಹೇಳಿದ್ದಾರೆ. ಈ ಬೆನ್ನಲ್ಲೇ ಪ್ರಜ್ವಲ್ ರಿತ್ತಿ‌ ಕುಟುಂಬ ಹೊಸ ಬೇಡಿಕೆ ಮುಂದಿಟ್ಟಿದ್ದು, 8 ಕೋಟಿ ಮೊತ್ತಕ್ಕೆ ಐದರಲ್ಲಿ ಒಂದು  ಪಾಲು ತಮಗೆ ಬೇಕು ಎಂದಿದೆ.

ಪ್ರಜ್ವಲ್ ರಿತ್ತಿ‌ ಕುಟುಂಬ ಹೇಳಿದ್ದೇನು?

ಸಿಕ್ಕ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಹೀಗಾಗಿ ತಜ್ಞರು ಹೇಳಿರುವ ಸಿಕ್ಕ ಬಂಗಾರದ ಆ್ಯಂಟಿಕ್​​ ಮೌಲ್ಯದಲ್ಲಿ ತಮಗೆ ಐದರಲ್ಲಿ ಒಂದು ಭಾಗ ಪಾಲು ನೀಡಬೇಕು. ಸರ್ಕಾರ ಕೂಡ ನಮಗೆ ಪ್ರಾಮಾನಿಕವಾಗಿ ಪರಿಹಾರ ನೀಡಬೇಕು. ಈಗಿನ ಬೆಲೆಯನ್ನು ಕೊಡುತ್ತೇವೆ ಎಂದರೆ ನಾವು ಅದನ್ನು ಒಪ್ಪಲ್ಲ. ಸಚಿವ ಎಚ್. ಕೆ. ಪಾಟೀಲ್, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ್ ನಮಗೆ ಭರವಸೆ ನೀಡಿದ್ದರು. ಹೀಗಾಗಿ ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್​​​ ಆಗುವುದು ಗ್ಯಾರಂಟಿ!

ಪುರಾತತ್ವ ತಜ್ಞರು ಏನು ಹೇಳಿದ್ದರು?

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ‌ಯ ಇಂದಿನ ವ್ಯಾಲ್ಯೂ ಸುಮಾರು 80 ಲಕ್ಷ ರೂ., ಆ್ಯಂಟಿಕ್ ಮೌಲ್ಯ ಹತ್ತು ಪಟ್ಟು ಹಾಕಿದ್ರೆ ಬಹಳ ಆಗುತ್ತೆ ಎಂದು ಗದಗದಲ್ಲಿ ಪುರಾತತ್ವ ತಜ‌್ಞೆ ಚೂಡಾಮಣಿ ಹೇಳಿದ್ದರು. ಲಕ್ಕುಂಡಿಯ ದೇವರಿಗೆ ಹಾಕುವ ಆಭರಣದ ಮೌಲ್ಯ ಹೇಳೋಕೆ ಆಗಲ್ಲ. ಇಲ್ಲಿಯ ಆಭರಣ ಬಹಳ ಅತ್ಯಮೂಲ್ಯವಾಗಿದ್ದು, ಸೂಕ್ಷ್ಮ ಕೆತ್ತನೆ ಮತ್ತು ಕುಸುರಿಯಿಂದ ಕೂಡಿವೆ. ಹರಳು ಮಾಣಿಕ್ಯ, ನೀಲಮಣಿ, ಪಚ್ಚೆ ಸೇರಿ ಹಲವಾರು ಅತ್ಯಮೂಲ್ಯವಾಗಿವೆ. ಕಿವಿಗೆ ಧರಿಸುವ ನಾಗಹೆಡೆಯ ಆಭರಣ ಸೂಕ್ಷ್ಮ ಕೆತ್ತನೆ ಹೊಂದಿದೆ. ಈ ರೀತಿ ಆಭರಣಗಳನ್ನು ಮಾಡಲು ಬೇರೆಯವರಿಂದ ಸಾಧ್ಯವಿಲ್ಲ. ಆದರೆ ನೂರಾರು ವರ್ಷ ಭೂಮಿಯಲ್ಲಿ ಸಿಲುಕಿ ಅವುಗಳು ಆಕಾರ ಕಳೆದುಕೊಂಡಿವೆ ಎಂದು ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

ಈ ದಿನ ಸಂಜೆಯ ಹೊತ್ತಿಗೆ ಅಶ್ವತ್ಥ ಮರದ ಕೆಳಗೆ ಕಡಲೆ ಹಿಟ್ಟಿನಿಂದ ಮಾಡಿದ ದೀಪ ಹಚ್ಚುವುದು ವಿಶೇಷ ಫಲ ನೀಡುತ್ತದೆ. ನಿಮ್ಮನ್ನು ಕಾಡುತ್ತಿರುವ ಗೊಂದಲಗಳು ಹಾಗೂ ಅಡೆತಡೆಗಳು ನಿವಾರಣೆ ಆಗಲಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಹಣಕಾಸು ವಿಚಾರದಲ್ಲಿ ಕಾಡುತ್ತಿರುವ ಗೊಂದಲಗಳು ಬಗೆಹರಿಯುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ನಿಮ್ಮೊಬ್ಬರಿಂದ ಏನಾದೀತು ಎಂಬಂತೆ ಇತರರು ಆಡಿದ ಮಾತುಗಳಿಗೆ ಉತ್ತರ ಎಂಬಂತೆ ಕೆಲವು ಅಸಾಧ್ಯವಾದ ಕೆಲಸ- ಕಾರ್ಯಗಳನ್ನು ಮಾಡಿ, ಮುಗಿಸುವುದಕ್ಕೆ ಸಫಲರಾಗುತ್ತೀರಿ. ವಿದೇಶಗಳಿಗೆ ಉದ್ಯೋಗ ನಿಮಿತ್ತವಾಗಿ ತೆರಳಬೇಕು ಎಂದಿರುವವರಿಗೆ ಈ ತನಕ ಏನಾದರೂ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವುಗಳನ್ನು ನಿವಾರಿಸಿಕೊಳ್ಳುವುದಕ್ಕೆ ಅವಕಾಶಗಳಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಅವಕಾಶಗಳು ಹೆಚ್ಚಿವೆ. ತರಕಾರಿ, ಹೂವು- ಹಣ್ಣಿನ ವ್ಯವಹಾರ, ಬ್ಯಾಂಗಲ್ ಸ್ಟೋರ್ಸ್ ನಡೆಸುತ್ತಿರುವವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬರಬಹುದು. ಇನ್ನು ದೀರ್ಘಾವಧಿಯ ಆರ್ಡರ್ ಗಳು ಸಹ ದೊರೆಯುವ ಅವಕಾಶಗಳು ಹೆಚ್ಚಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಕುಟುಂಬದ ವ್ಯವಹಾರದಲ್ಲಿ ಪಾಲ್ಗೊಂಡಿರುವವರಿಗೆ ಸ್ವತಂತ್ರವಾಗಿ ವ್ಯಾಪಾರ- ವ್ಯವಹಾರ ಆರಂಭಿಸುವ ಬಗ್ಗೆ ಆಲೋಚನೆ ಮೂಡಬಹುದು. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ನಿಮಗೆ ಇಷ್ಟ ಇಲ್ಲದ ವಿಭಾಗಕ್ಕೆ ವರ್ಗಾವಣೆ ಮಾಡುವ ಸಾಧ್ಯತೆಗಳಿವೆ. ಅಥವಾ ನಿಮಗೆ ಯಾರ ಜತೆಗೆ ಈಗಾಗಲೇ ವೈಮನಸ್ಯ ಇರುತ್ತದೋ ಅಂಥ ವ್ಯಕ್ತಿಗಳ ಕೈಕೆಳಗೆ ಅಥವಾ ಜತೆಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯಾರಿಂದಲಾದರೂ ಅನಿರೀಕ್ಷಿತ ಸಹಾಯ ಲಭ್ಯ

ಮೇಷ ರಾಶಿ:

ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಸರ್ಕಾರದ ಕೆಲಸಕ್ಕಾಗಿ ಅಧಿಕ ಓಡಾಟವಾಗುವುದು. ಆರ್ಥಿಕ ನೆರವನ್ನು ಯಾರಿಂದಲಾದರೂ ನೀವು ಬಯಸುವಿರಿ. ಸಮಾಧನ ಚಿತ್ತದಿಂದ ಇರಬೇಕು ಎಂದು ಅನಿಸಿದರೂ ಅದನ್ನು ಕಾರ್ಯರೂಪಕ್ಕೆ ತರಲಾಗದು. ಅನಿರೀಕ್ಷಿತ ಘಟನೆಯಿಂದ‌ ಸ್ತಬ್ಧವಾಗುವಿರಿ. ವ್ಯವಹಾರದ ವಿಷಯದಲ್ಲಿ ನಿಮಗೆ ಯಾವುದೇ ಔದಾರ್ಯ ಬೇಡ. ಸಹೋದರನ ಪ್ರೀತಿಯಿಂದ ಸಂತೋಷಪಡುವಿರಿ. ಬೇಕಾದವರ ಪ್ರೀತಿ ಸಿಗದೇ ಬೇಸರ.

ವೃಷಭ ರಾಶಿ:

ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ‌. ಸ್ವಾರ್ಥಕ್ಕಾಗಿ ಯಾರನ್ನೂ ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ವೈದ್ಯಕೀಯ ವೃತ್ತಿಯ ಬಗ್ಗೆ ಆಸಕ್ತಿ ಅಧಿಕವಾಗುವುದು. ವೃತ್ತಿಪರ ವ್ಯವಹಾರಗಳು ಲಾಭದಾಯಕ. ನಿಮ್ಮ ಗೌಪ್ಯ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ಹಳೆಯ ಹೂಡಿಕೆಯಿಂದ‌ ಲಾಭವು ಸಿಗಲಿದೆ. ಯಾವುದೂ ಕರಗತ ಆಗದೇ ಪ್ರದರ್ಶನಕ್ಕೆ ಒಪ್ಪಿಗೆ ಕೊಡುವುದು ಬೇಡ. ಶುದ್ಧತೆಯ ಬಗ್ಗೆ ಕಾಳಜಿ ಅಧಿಕವಾಗಿರುವುದು.

ಮಿಥುನ ರಾಶಿ:

ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಇಂದು ಸಿಗಬಹುದು. ಸ್ನೇಹಿತರಿಂದ ನಿಮಗೆ ಬಹುಮಾನ ಸಿಗಬಹುದು. ದೂರದ ಊರಿಗೆ‌ ಒಬ್ಬರೇ ವಾಹನ ಚಲಾಯಿಸುವಿರಿ. ಆಭರಣಗಳನ್ನು ಖರೀದಿಸಲು ಹಣವನ್ನು ಖರ್ಚು ಮಾಡುವ ಅವಕಾಶ ಎದುರಾಗಬಹುದು.‌ ಅಪ್ರಸ್ತುತ ಆಲೋಚನೆಗೆ ಬ್ರೇಕ್ ಹಾಕಿಕೊಂಡಷ್ಟು ಒಳ್ಳೆಯದು. ಕಲಾವಿದರು ಅವಕಾಶದ ನಿರೀಕ್ಷೆಯಲ್ಲಿ ಇರುವರು. ಹಳೆಯ ಪ್ರೇಮಿಯ ಭೇಟಿಯಾಗಿ ಮುಜುಗರಕ್ಕೆ ಸಿಕ್ಕಿಕೊಳ್ಳಬಹುದು.

ಕರ್ಕಾಟಕ ರಾಶಿ:

ಯಾರ ಬಳಿಯೂ ಸಹಾಯ ಹಸ್ತವನ್ನು ಚಾಚದೇ ಸ್ವಂತ ಬಲದ ಮೇಲೆ ಬರುವ ಆಸೆ ಇರಲಿದೆ. ಪರಿಚಿತರ ಜೊತೆ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವ ಅವಶ್ಯಕತೆ ಇರುವುದಿಲ್ಲ. ಕೆಲವರ ವಿಚಾರದಲ್ಲಿ ನಿಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳುವುದೇ ಯೋಗ್ಯವಾದುದು. ನಿಮಗೆ ಮೇಲಧಿಕಾರಿಗಳ ಬಗ್ಗೆ ಸದ್ಭಾವವು ಇರದು.‌

ಸಿಂಹ ರಾಶಿ:

ಅಲ್ಪ ಕಾಲ ಮನೆಯಿಂದ ದೂರ ಉಳಿಯವಿರಿ. ಸಂಗಾತಿಯ ಸಣ್ಣ ಮಾತೂ ನಿಮಗೆ ದೋಷವಾಗಿ ಕಾಣಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ‌ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುವುದು. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ. ಉತ್ತಮ ವಸ್ತುವಿನ ದಾನದಿಂದ ಯಶಸ್ಸು ಪ್ರಾಪ್ತವಾಗುವುದು. ಇಂದು ಯಾರಿಗೂ ನಿಮ್ಮ ಅವಶ್ಯಕತೆ ಇಲ್ಲದೇ ಹೋಗಬಹುದು.

ಕನ್ಯಾ ರಾಶಿ:

ಮನಸ್ಸಿಗೆ ಬೇಕಾದ ನೆಮ್ಮದಿಯಿಂದ ಹುಡುಕಾಟದಲ್ಲಿ ಇರುವಿರಿ. ಧಾರ್ಮಿಕ ಕ್ಷೇತ್ರದ ಭೇಟಿಕೊಡುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ನಿಮ್ಮ ಮಾತುಗಳು ಪಾಲನೆಯಗದೇ ಇರಬಹುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಿ. ಉದ್ಯಮದಲ್ಲಿ ನಿರಂತರ ಸಂಪರ್ಕವಿರಲಿ. ಹಣಕಾಸಿನ ಉಳಿತಾಯದ ಬಗ್ಗೆ ಅಧಿಕ ಗಮನ ಕೊಡುವಿರಿ.

ತುಲಾ ರಾಶಿ:

ಆರ್ಥಿಕತೆಯ ಬಲಕ್ಕಾಗಿ ಗೊತ್ತಿಲ್ಲದ ಕಾರ್ಯವನ್ನೂ ಮಾಡುವಿರಿ. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಬಹುದು. ಆಗುತ್ತದೆ ಎಂದು ಏನನ್ನಾದರೂ ಮಾಡುವುದು ಉಚಿತವಾಗದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಬೇಕಾದಷ್ಟು ಅವಕಾಶಗಳನ್ನು ಬಿಡುವುದು ನಿಮಗೆ ಅಭ್ಯಾಸಬಾಗಬಹುದು. ಪ್ರೇಮಿಯ ಜೊತೆ ಹರಟೆ ಹೊಡೆಯುತ್ತ ದಿನವನ್ನು ಕಳೆಯುವಿರಿ. ಅತಿಥಿಗಳನ್ನು ಮನೆಗೆ ಆಹ್ವಾನಿಸುವಿರಿ.

ವೃಶ್ಚಿಕ ರಾಶಿ:

ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಭೂಮಿಯಿಂದ ಆದಾಯ ಸಿಗುಂತೆ ಕಾರ್ಯ. ಒಡಹುಟ್ಟಿದವರ ಜೊತೆ ಅನಗತ್ಯ ಮಾತುಗಳು ಬರಬಹುದು. ಉದ್ಯೋಗದಲ್ಲಿ ಚಂಚಲತೆ ಇರುವುದು. ಅನಪೇಕ್ಷಿಯ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ಆಪ್ತರಿಂದ ನಿಮಗಾಗದವರ ಬಗ್ಗೆ ಮಾಹಿತಿಯನ್ನು ಪಡೆಯುವಿರಿ.

ಧನು ರಾಶಿ:

ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಪ್ರೇಮವು ನಿಮಗೆ ಬೇಕಾದಂತೆ ತಿರುವು ಪಡೆಯಬಹುದು. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ.‌ ಸಿಟ್ಟನ್ನು ವೃತ್ತಿಯಲ್ಲಿ ತೋರಿಸುವುದು ಬೇಡ. ನೀವು ಆಯ್ಕೆ ಆಗಿದ್ದು ಯಾವುದಕ್ಕೋ ಕೆಲಸವು ಮತ್ಯಾವುದೋ ಆಗಲಿದೆ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಧನವ್ಯಯವನ್ನು ನಿಮ್ಮ ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ‌. ಸ್ತ್ರೀಯರಿಂದ‌ ಕೆಲವು ಸಮಸ್ಯೆಯು ಬರಲಿದೆ. ಆಗಬೇಕೆಂದುಕೊಂಡ ಕಾರ್ಯವನ್ನು ಪೂರ್ಣ ಮಾಡಲಾಗದು.‌

ಮಕರ ರಾಶಿ:

ಇಂದು ನಿಮಗೆ ಪ್ರಯಾಣದ ಆಯಾಸವು ಇರಲಿದೆ. ಶತ್ರುಗಳನ್ನು ಕ್ಷಮಿಸಿ, ಅವರ ಮೇಲೆ ನಿಮ್ಮ ದೃಷ್ಟಿಯು ಬೇಕಾಗುವುದು. ಉದ್ಯೋಗವನ್ನು ಬಿಟ್ಟು ಬೇರೆಯದನ್ನು ಯೋಚಿಸಲಾಗದು. ಪಾಲುದಾರಿಕೆಯಲ್ಲಿ ನಿಮ್ಮದೇ ಅಧಿಕವಾಗಿರುವುದು. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ಸ್ನೇಹಿತನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಹೊಸ ಸಂಶೋಧನೆಯ ಬಗ್ಗೆ ಆಸಕ್ತಿ ಇರುವುದು. ‌

ಕುಂಭ ರಾಶಿ:

ನಿಮ್ಮ‌ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಅನಿರೀಕ್ಷಿತವಾಗಿ ದೊರೆತವರು ನಿಮ್ಮ ಉದ್ಯಮದ ಭಾಗವಾಗಬಹುದು. ಆಸ್ತಿಯ ವಿಚಾರ ಬಂದಾಗ ಮೌನ ತಾಳುವಿರಿ. ಬಹಳ ದಿನಗಳ ಅನಂತರ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಆಪತ್ತಿಗೆ ಪ್ರತಿಯಾಗಿ ಆಪತ್ತು ಕೊಡುವ ಮನಸ್ಥಿತಿಯನ್ನು ತಂದುಕೊಳ್ಳುವಿರಿ. ಕಳೆದುಕೊಂಡ ಹಣವನ್ನು ಪಡೆಯಲು ಛಲ ಬರಬಹುದು.‌ ನಿಮ್ಮ ಯೋಜನೆಗೆ ಬೆನ್ನೆಲುಬಾಗಿ ನಿಲ್ಲುವವರು ಬೇಕಾಗಿದ್ದರೆ.

ಮೀನ ರಾಶಿ:

ಬೋಧನ ಕಲೆಯು ಸಿದ್ಧಿಯಾಗುವುದು. ಮಕ್ಕಳ‌ ಜೊತೆ ಸಾಮರಸ್ಯದ ಮಾತನಾಡಿ. ಸಾಲದ ಮರುಪಾವತಿಗೆ ಸೂಕ್ತ ಕ್ರಮದ ಅಗತ್ಯವಿರಲಿದೆ. ಯಾವ ಬದಲಾವಣೆಯನ್ನೂ ಸ್ವೀಕರಿಸುವ ಮನೋಭಾವ ಬರಬಹುದು. ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ಸುಮ್ಮನೇ ಆಪ್ತರ ಮೇಲೆ‌ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ. ಹೂಡಿಕೆಯ ವಿಚಾರದಲ್ಲಿ ಇಂದು ಸಕಾರಾತ್ಮಕ ಆಲೋಚನೆಯು ಇರದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಮೂಲಾ ಯೋಗ : ಸಿದ್ಧಿ, ಕರಣ : ಗರಜ, ಸೂರ್ಯೋದಯ – 06 – 35 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:04 – 15:34, ಯಮಗಂಡ ಕಾಲ 09:35 – 08:05, ಗುಳಿಕ ಕಾಲ 09:35 – 11:04

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ

ಪಾರಿಜಾತ ಅಥವಾ ಮಲ್ಲಿಗೆ ಹೂವುಗಳನ್ನು ಬಳಸಿ ದೇವರ ಪೂಜೆಯನ್ನು ಮಾಡುವುದರಿಂದ ನಿಮ್ಮ ಮಾನಸಿಕ ಒತ್ತಡಗಳಿಂದ ಹೊರಬಂದು ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಸಣ್ಣ ತಪ್ಪು ಮಾತು ಕೂಡ ದೊಡ್ಡ ಅವಮಾನಕ್ಕೆ ಕಾರಣ ಆಗುವಂಥ ಕಡೆಗೆ ಸುಮ್ಮನೆ ಇದ್ದರೆ ಒಳಿತು. ಪ್ರೀತಿ- ಪ್ರೇಮ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿದ್ದು, ಹಳೇ ಪ್ರೇಮ ಪ್ರಕರಣಗಳು ಮತ್ತೆ ಜೀವ ಪಡೆದುಕೊಳ್ಳಲಿವೆ. ನೀವಾಗಿಯೇ ಕರೆ ಮಾಡುವುದರ ಮೂಲಕ ಸಮಸ್ಯೆಯೊಂದನ್ನು ಮೈ ಮೇಲೆ ಎಳೆದುಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಗ್ಯಾಜೆಟ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಮೊದಲಾದವುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗಿದೆ. ಇದಕ್ಕಾಗಿ ಹಣಕಾಸಿನ ಕೊರತೆ ಕಂಡುಬಂದಲ್ಲಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳು ನೆರವಿಗೆ ನಿಲ್ಲಲಿದ್ದಾರೆ. ನೀವೇನಾದರೂ ಈಗ ಇರುವಂಥ ಮನೆಯನ್ನು ಖಾಲಿ ಮಾಡಿ, ಹೊಸ ಮನೆಗೆ ಹೋಗಬೇಕು ಎಂದುಕೊಳ್ಳುತ್ತಿದ್ದಲ್ಲಿ ಅಂದುಕೊಂಡಂಥ ಮನೆ ದೊರೆಯುವ ಅವಕಾಶ ಹೆಚ್ಚಿಗೆ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನೀವು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ತಡ ಮಾಡಿದ್ದರಿಂದಾಗಿ ಕೆಲವು ಉದ್ಯೋಗಾವಕಾಶಗಳು ಕೈ ತಪ್ಪಿ ಹೋಗುವಂಥ ಸಾಧ್ಯತೆಗಳಿದ್ದು, ಅತಿ ಮುಖ್ಯವಾದ ವಿಚಾರಗಳು ಇದ್ದಲ್ಲಿ ತಡ ಮಾಡದೆ ತೀರ್ಮಾನಗಳನ್ನು ತೆಗೆದುಕೊಳ್ಳಿ. ಇನ್ನು ಮದುವೆ ನಿಶ್ಚಯ ಆಗಿರುವಂಥವರು ಸಣ್ಣ- ಪುಟ್ಟ ವಿಚಾರಗಳಿಗೂ ಸಿಟ್ಟು ಮಾಡುವುದು, ಮಾತು ಬಿಡುವುದು ಇಂಥದ್ದನ್ನು ಮಾಡಬೇಡಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 12ರ ದಿನಭವಿಷ್ಯ

ಸಾಯಿಬಾಬಾ ಅಥವಾ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡುವುದು ಮತ್ತು ಮನೆಯಲ್ಲಿನ ಹಿರಿಯರ ಕಾಲಿಗೆ ನಮಸ್ಕರಿಸಿ ದಿನದ ಕೆಲಸ ಆರಂಭಿಸುವುದು ಸಕಲ ಕಾರ್ಯಸಿದ್ಧಿಗೆ ಕಾರಣವಾಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಮನೆಗೆ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂಥ ಯೋಗ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವಂಥವರು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು, ಕಂಪನಿಗಳ ಸಿಇಒ, ಸಿಒಒ ಇಂಥ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಬಹಳ ಒಳ್ಳೆ ದಿನ ಇದು. ನಿಮ್ಮಲ್ಲಿ ಯಾರಾದರೂ ಸ್ಟಾರ್ಟ್ ಅಪ್ ಶುರು ಮಾಡುವುದಕ್ಕಾಗಿ ಸಿದ್ಧತೆ ನಡೆಸುತ್ತಿದ್ದೀರಿ ಅಂತಾದಲ್ಲಿ ಅದಕ್ಕೆ ಬೇಕಾದ ಹಣಕಾಸಿನ ಅನುಕೂಲಗಳು ಒದಗಿ ಬರಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕಾನೂನಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಸಣ್ಣ- ಪುಟ್ಟ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವುಗಳನ್ನು ನಿವಾರಿಸಿಕೊಂಡು, ಮುಂದಕ್ಕೆ ಸಾಗಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಅವುಗಳ ವಿಸ್ತರಣೆಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ಇನ್ನು ಸರಿಯಾದ ಸಂಪನ್ಮೂಲ ವ್ಯಕ್ತಿಗಳು, ಕೆಲಸಗಾರರನ್ನು ಹುಡುಕಾಡುತ್ತಿದ್ದೀರಿ ಅಂತಾದಲ್ಲಿ ಅಂಥವರು ಸಹ ದೊರೆಯಲಿದ್ದಾರೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸುಮ್ಮನೆ ಇದ್ದಿದ್ದರೆ ಆಗುತ್ತಿತ್ತು ಎಂದೆನಿಸುವಂಥ ಹಲವು ಘಟನೆಗಳು ಈ ದಿನ ನಡೆಯಲಿವೆ. ಅಂತರಂಗದ ವಿಚಾರವನ್ನು ಯಾರ ಬಳಿಯಾದರೂ ಹೇಳಿಕೊಂಡಿದ್ದಲ್ಲಿ ಅವರು ಅದನ್ನು ಹಲವರ ಬಳಿಗೆ ಹೇಳಿಕೊಂಡು ಬಂದು, ನಿಮಗೆ ಮುಜುಗರದ ಸನ್ನಿವೇಶವನ್ನು ತಂದೊಡ್ಡಲಿದ್ದಾರೆ. ಸಂಗಾತಿಯು ನಿಮ್ಮ ಧೋರಣೆ ಬಗ್ಗೆ ಬೇಸರ ವ್ಯಕ್ತಪಡಿಸಬಹುದು. ನೀವು ಬಳಸುವ ಭಾಷೆ, ಅದನ್ನು ಆಡಿದ ರೀತಿ ಹಾಗೂ ಇತರ ವಿಚಾರಗಳನ್ನು ಮುಂದು ಮಾಡಿಕೊಂಡು, ಹೀಯಾಳಿಸಬಹುದು.

ಲೇಖನ- ಸ್ವಾತಿ ಎನ್.ಕೆ.

Source link

ಡೆಲಿವರಿ ಬಾಯ್​​ ಕೊಟ್ಟ ಪಂಚ್​​​ಗೆ ಗ್ರಾಹಕನ ಮೂಗಿನ ಮೂಳೆ ಮುರಿತ: ಆಗಿದ್ದೇನು?

ಬೆಂಗಳೂರು, ಮಾರ್ಚ್​ 11: ಇವಾಗೇನಿದ್ರೂ ಆನ್ ಲೈನ್ ಜಮಾನಾ. ಎಲ್ಲವೂ ಆನ್​ಲೈನ್​ನಲ್ಲೇ ಸಿಕ್ಕಿಬಿಡುತ್ತೆ. ಊಟ ತಿಂಡಿ, ದವಸ-ಧಾನ್ಯದಿಂದ ಹಿಡಿದು ಗೃಹಪಯೋಗಿ ವಸ್ತುಗಳು ಕೂಡ ದೊರಕಿಬಿಡುತ್ತೆ. ಇದೇ ರೀತಿ ಓರ್ವ ವ್ಯಕ್ತಿ ಬ್ಲಿಂಕ್ ಇಟ್ ಆ್ಯಪ್​ನಲ್ಲಿ ತಿನ್ನುವುದಕ್ಕೆ ಅಂತಾ ಸ್ನ್ಯಾಕ್ಸ್ ಆರ್ಡರ್ ಮಾಡಿದ್ದರು. ಆರ್ಡರ್ ತಗೊಂಡು ಬಂದ ಡೆಲಿವರಿ ಬಾಯ್ (Delivery Boy) ಗ್ರಾಹಕನ ಮೂಗಿನ ಮೂಳೆಯನ್ನೇ ಮುರಿದ ಘಟನೆ ಕೋರಮಂಗಲ 8ನೇ ಬಾಕ್ಲ್​ನಲ್ಲಿ ನಡೆದಿದೆ.

ನಡೆದಿದ್ದೇನು?

ಮಾರ್ಚ್ 7ರ ಬೆಳಗಿನ ಜಾವ 2ಗಂಟೆಯ ಸಮಯ. ಕೋರಮಂಗಲ 8ನೇ ಬ್ಲಾಕ್​ ನಿವಾಸಿ ಪೌಲ್ ಎಂಬಾತ ಬ್ಲಿಂಕ್ ಇಟ್ ಆ್ಯಪ್​ನಲ್ಲಿ ಸ್ನ್ಯಾಕ್ಸ್ ಬುಕ್ ಮಾಡಿದ್ದ. 2 ಗಂಟೆ 8 ನಿಮಿಷಕ್ಕೆ ಬಂದ ಡೆಲಿವರಿ ಬಾಯ್ ನೇರವಾಗಿ ನಾಲ್ಕನೇ ಫ್ಲೋರ್​​ಗೆ ಹೋಗಿದ್ದಾನೆ. ಅಲ್ಲಿಂದ ಕರೆ ಮಾಡ್ತಿದ್ದಂತೆ ಗ್ರಾಹಕ ಎರಡನೇ ಫ್ಲೋರ್​ಗೆ ಬರುವಂತೆ ಸೂಚಿಸಿದ್ದಾರೆ. ಅಲ್ಲಿ ಬಂದ ಡೆಲಿವರಿ ಬಾಯ್ ಗ್ರಾಹಕನ ಜೊತೆಗೆ ಗಲಾಟೆ ಮಾಡಿದ್ದಾನೆ‌.

ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನೇ ಮಾರಿದ ಭೂಪ

ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಡೆಲಿವರಿ ಬಾಯ್ ಮತ್ತು ಗ್ರಾಹಕನ ನಡುವೆ ಹೊಡೆದಾಟವೇ ನಡೆದು ಹೋಗಿದ್ದು, ಡೆಲಿವರಿ ಬಾಯ್ ಕೊಟ್ಟ ಪಂಚ್​ಗೆ ಗ್ರಾಹಕ ಪೌಲ್​​ನ ಮೂಗು ಹಾಗೂ ತುಟಿಗೆ ಗಂಭೀರ ಗಾಯವಾಗಿದೆ. ಎಕ್ಸ್ ರೇ ತೆಗೆಸಿ ನೋಡಿದಾಗ ಮೂಗಿನ ಮೂಳೆಯೇ ಮುರಿದಿರುವುದು ಗೊತ್ತಾಗಿದೆ. ಚಿಕಿತ್ಸೆಗೆ ಅಂತ ಪೌಲ್ ಹುಟ್ಟೂರು ಕೇರಳಗೆ ತೆರಳಿದ್ದಾರೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಏಜೆಂಟ್​ನನ್ನು ಅಪಹರಿಸಿ ಹತ್ಯೆ ಕೇಸ್​: ಅಪ್ರಾಪ್ತ ಸೇರಿ 8 ಆರೋಪಿಗಳ ಬಂಧನ

ಗಲಾಟೆ ಆಗಿದ್ದು ನಿಜ, ಆದರೆ ಗಲಾಟೆಗೆ ಕಾರಣ ಏನು ಅನ್ನೋದು ಇನ್ನೂ ನಿಗೂಢವಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಡೆಲಿವರಿ ಬಾಯ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದಾಳಿ ನಡೆಸಲು ಇನ್ನೇನೂ ಉಳಿದಿಲ್ಲ; ಇರಾನ್ ಮೇಲಿನ ಯುದ್ಧ ಬೇಗ ಕೊನೆಯಾಗಲಿದೆ ಎಂದ ಟ್ರಂಪ್

ವಾಷಿಂಗ್ಟನ್, ಮಾರ್ಚ್ 11: ಇರಾನ್‌ನೊಂದಿಗಿನ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಳಿವು ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಈಗಾಗಲೇ ದೇಶದಲ್ಲಿ ಲಭ್ಯವಿರುವ ಹೆಚ್ಚಿನ ಟಾರ್ಗೆಟ್​​ಗಳನ್ನು ನಾಶಪಡಿಸಿವೆ. “ಇರಾನ್​​ನಲ್ಲಿ ಪ್ರಾಯೋಗಿಕವಾಗಿ ಗುರಿಯಿಡಲು ಇನ್ನೇನೂ ಉಳಿದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಮಿಲಿಟರಿ ಕಾರ್ಯಾಚರಣೆಯು ಇರಾನಿಗೆ ಈಗಾಗಲೇ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್​ನವರ ಕ್ಷಿಪಣಿಗಳು ಚದುರಿಹೋಗಿವೆ. ಅವರ ಡ್ರೋನ್‌ಗಳನ್ನು ಎಲ್ಲೆಡೆ ಸ್ಫೋಟಿಸಲಾಗುತ್ತಿದೆ, ಅವುಗಳ ಡ್ರೋನ್‌ಗಳ ತಯಾರಿಕೆಯೂ ನಿಂತಿದೆ. ಟೆಹ್ರಾನ್ ಈಗ ನೌಕಾಪಡೆ, ವಾಯುಪಡೆ ಮತ್ತು ಮಿಲಿಟರಿ ಮೇಲೆ ಯಾವುದೇ ಹಿಡಿತವಾಗಲಿ, ಸಾಮರ್ಥ್ಯವನ್ನಾಗಲಿ ಹೊಂದಿಲ್ಲ. ಅವರು ಏನಾದರೂ ಕೆಟ್ಟದ್ದನ್ನು ಮಾಡಿದರೆ ಅದು ಇರಾನ್‌ನ ಅಂತ್ಯವಾಗಲಿದೆ. ನೀವು ಆ ಹೆಸರನ್ನು ಮತ್ತೆ ಎಂದಿಗೂ ಕೇಳುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಬಹ್ರೇನ್ ಮೇಲಿನ ಇರಾನ್ ದಾಳಿಯ ವಿಡಿಯೋ ಶೇರ್ ಮಾಡಿದ್ದಕ್ಕೆ 5 ಪಾಕಿಸ್ತಾನಿ ಪ್ರಜೆಗಳ ಬಂಧನ

“ಯುದ್ಧವು ಅದ್ಭುತವಾಗಿ ನಡೆಯುತ್ತಿದೆ. ನಾವು ವೇಳಾಪಟ್ಟಿಗಿಂತ ಬಹಳ ಮುಂದಿದ್ದೇವೆ. ಮೊದಲ 6 ವಾರಗಳ ಅವಧಿಯಲ್ಲಿಯೂ ಸಹ ನಾವು ಭಾವಿಸಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಇರಾನ್​ಗೆ ಮಾಡಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ವಾಹನ ಮಾಲೀಕರ ಗಮನಕ್ಕೆ: ಇನ್ಮುಂದೆ ಗಾಡಿ ಎಫ್ಸಿಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

ಬೆಂಗಳೂರು, (ಮಾರ್ಚ್ 11): ಬೆಂಗಳೂರಿನ ಆರ್‌ಟಿಒ ಕಚೇರಿಗಳಲ್ಲಿ ಹೊರರಾಜ್ಯದ ವಾಹನಗಳಿಗೆ ಯಾವುದೇ ತಪಾಸಣೆ ಮಾಡದೇ ಅಕ್ರಮವಾಗಿ ಅರ್ಹತಾ ಪತ್ರ (fitness certificate) ನೀಡಲಾಗುತ್ತಿದೆ. ಆರ್ಟಿಓ ಅಧಿಕಾರಿಗಳು ವಾಹನಗಳು ತಪಾಸಣೆ ಮಾಡದೆ,ಕೆಲ ವಾಹನಗಳು ರಾಜ್ಯಕ್ಕೆ ‌ಬಾರದಿದ್ದರೂ ಅಂತಹ ವಾಹನಗಳಿಗೆ ಅನಧಿಕೃತವಾಗಿ ಎಫ್ಸಿ ನೀಡಲಾಗುತ್ತಿದ್ದು, ಈ ಬಗ್ಗೆ ನಿಮ್ಮ ಟಿವಿ9, ಆರ್​​ಟಿಓಗಳ ಕರ್ಮಕಾಂಡದ ಬಗ್ಗೆ ಸುದ್ದಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡ ರಾಜ್ಯ ಸಾರಿಗೆ ಇಲಾಖೆ, ಎಫ್ಸಿ ಮಾಡಲು ಕಠಿಣ ರೂಲ್ಸ್ ಜಾರಿಗೆ ತಂದಿದ್ದು, ಇನ್ಮುಂದೆ ಎಫ್ಸಿ ಮಾಡಬೇಕು ಅಂದರೆ ಜಿಯೋ ಫೆನ್ಸಿಂಗ್ ಕಡ್ಡಾಯಗೊಳಿಸಿದೆ.

ಎಫ್ಸಿಗೆ ಹೊಸ ರೂಲ್ಸ್​​​ ಏನು?

ಎಫ್ಸಿ ಮಾಡಬೇಕು ಅಂದರೆ ಜಿಯೋ ಫೆನ್ಸಿಂಗ್ ಕಡ್ಡಾಯಗೊಳಿಸಿದೆ.  ವಾಹನಗಳ 6 ಜಿಪಿಎಸ್ ಫೋಟೋ, ಜಿಪಿಎಸ್ ವಿಥ್ ಲೊಕೇಷನ್ ನಲ್ಲೇ ಎಫ್ಸಿ ಮಾಡಬೇಕು. ಎಲ್ಲಾ ಮಾಹಿತಿಯನ್ನು ಅಪ್ಲಿಕೇಷನ್ ನಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಫೋಟೋ ಅಪ್ಲೋಡ್ ಮಾಡುವಂತಿರಲಿಲ್ಲ. ಇದೀಗ ಅದನ್ನು ಕಡ್ಡಾಯಗೊಳಿಸಿದ್ದು, ಈ ಮೂಲಕ ಆರ್​​ಟಿಓಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲಾಗಿದೆ.

ಇದನ್ನೂ ನೋಡಿ: ಆರ್​​ಟಿಓ ಅಧಿಕಾರಿಗಳ ಮತ್ತೊಂದು ಕಳ್ಳಾಟ ಬಯಲು

ಕೇರಳ, ಮಹಾರಾಷ್ಟ್ರ, ಗುಜರಾತ್ ರಾಜ್ಯದ ವಾಹನಗಳನ್ನು ತಪಾಸಣೆ ಮಾಡದೆ,10,022 ವಾಹನಗಳಿಗೆ ಕೋರಮಂಗಲ ಆರ್ಟಿಓ ಕಚೇರಿಯ ಮೋಟಾರು ವಾಹನ ನಿರೀಕ್ಷಕರು ಎಫ್ಸಿ ನೀಡಿದ್ದ ಬಗ್ಗೆ, ಕಳೆದ ತಿಂಗಳು ಫೆಬ್ರವರಿ 13ರಂದು ಟಿವಿ9 ಕನ್ನಡ ಪ್ರಸಾರ ಮಾಡಿತ್ತು‌‌.ಇತ್ತ ಗುಜರಾತ್ ನ 41 ವಾಹನಗಳಿಗೆ ಅನಧಿಕೃತವಾಗಿ ಎಫ್ಸಿ ನೀಡಿದ ಬಗ್ಗೆಯೂ ಟಿವಿ9 ಕನ್ನಡ ಜನವರಿ- 20 ರಂದು ಸುದ್ದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆ ನಿಸಾರ್ ಅಹಮದ್ ನನ್ನ ಸಾರಿಗೆ ಇಲಾಖೆ ಆಯುಕ್ತರು ಸಸ್ಪೆಂಡ್ ಮಾಡಿದ್ದರು. ಬಳಿಕ ಅಲರ್ಟ್ ಆಗಿರುವ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಖಡಕ್ ರೂಲ್ಸ್ ಜಾರಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು

ವಿವಾದಿತ ಕಥಾಹಂದರ ಹೊಂದಿದೆ ಎಂಬ ಕಾರಣಕ್ಕೆ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈಗ ಈ ಸಿನಿಮಾವನ್ನು ಬಿಜೆಪಿಯ ಕೆಲವು ಶಾಸಕರು ವೀಕ್ಷಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿಮಾಲ್​​ನಲ್ಲಿ ಸಿನಿಮಾ ವೀಕ್ಷಣೆ ಮಾಡಲಾಗಿದೆ. ವಿಪಕ್ಷ ನಾಯಕರಾದ ಆರ್. ಅಶೋಕ್ (R Ashok), ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಶಾಸಕರು ಮತ್ತು ಪರಿಷತ್ ಸದಸ್ಯರು ಸಿನಿಮಾ ನೋಡಿದ್ದಾರೆ. ರಾಜ್ಯ ಬಿಜೆಪಿಯಿಂದ ಸಿನಿಮಾ ವೀಕ್ಷಣೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ಸಿನಿಮಾಗೆ ಕಾಮಾಕ್ಯ ನಾರಾಯಣ್ ಸಿಂಗ್ ಅವರು ನಿರ್ದೇಶನ ಮಾಡಿದ್ದಾರೆ. ವಿಪುಲ್ ಅಮೃತ್​ಲಾಲ್ ಶಾ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾದಿಂದ ಕೇರಳ ರಾಜ್ಯದ ಘನತೆಗೆ ಧಕ್ಕೆ ಆಗಿದೆ ಎಂದು ಹಲವರು ಕೋರ್ಟ್ ಮೆಟ್ಟಿಲು ಏರಿದ್ದರು. ಆದ್ದರಿಂದ ಬಿಡುಗಡೆಗೂ ಮುನ್ನ ಈ ಸಿನಿಮಾ ಸಾಕಷ್ಟು ವಿವಾದ ಸೃಷ್ಟಿಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನೇ ಮಾರಿದ ಭೂಪ

ಬೆಂಗಳೂರು, ಮಾರ್ಚ್​​ 11: ಆತ ಚಾಲಕ (Driver). ಕಳೆದ ಹತ್ತು ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದ. ಆತ ಮನೆ ಮಾಲೀಕರ ನಂಬಿಕೆ ಗಳಿಸಿದ್ದ. ಅವರು ಕೂಡ ಈತನನ್ನ ಬಹಳ ಆತ್ಮೀಯತೆಯಿಂದಲೇ ನೋಡಿಕೊಳ್ಳುತ್ತಿದ್ದರು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಆಸಾಮಿ ಮನೆಯಲ್ಲಿದ್ದ ಚಿನ್ನದ ಮೇಲೆಯೇ ಕಣ್ಣು ಹಾಕಿದ್ದ. ಆ ಮೂಲಕ ಉಂಡ ಮನೆಗೆ ಕನ್ನ ಹಾಕಿದ್ದ. ಚಾಲಕನ ಕಳ್ಳಾಟ ಬಯಲಾಗಿದ್ದೇ ನಿಜಕ್ಕೂ ರೋಚಕ.

ಉಂಡ ಮನೆಗೆ ದ್ರೋಹ

ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕನ ಹೆಸರು ಅಭಿಲಾಷ್. ಪ್ರತೀಕ್​​ ಎಂಬುವವರ ಪತ್ನಿ ಭುವನಾ ಅವರ ತಾಯಿಯ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಕಳೆದ 10 ವರ್ಷದಿಂದ ಇದ್ದ ಈತನನ್ನ ಮನೆಯವರು ಮನೆಮಗನಂತೆಯೇ ನೋಡಿಕೊಳ್ಳುತ್ತಿದ್ದರು. ಆದರೆ ಈತ ಮಾತ್ರ ಉಂಡ ಮನೆಗೆ ದ್ರೋಹ ಬಗೆದಿದ್ದ. 13 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಕದ್ದು ಪರಾರಿಯಾಗಿದ್ದ ಅಭಿಲಾಷ್​​ನನ್ನು ಬಂಧಿಸಿ ಪೊಲೀಸರು ಇದೀಗ ಜೈಲಿಗಟ್ಟಿದ್ದಾರೆ.

ನಡೆದಿದ್ದೇನು?

ಪ್ರತೀಕ್ ಪತ್ನಿ ಭುವನಾ ಕುಟುಂಬಸ್ಥರು ಎಮರ್ಜೆನ್ಸಿ ಇದೆ ಅಂತಾ ಚಿನ್ನವನ್ನು ಚಾಲಕ ಅಭಿಲಾಷ್​​ಗೆ ಕೊಟ್ಟು ಗಿರವಿ ಇಟ್ಟು ಬರುವಂತೆ ಹೇಳಿದ್ದಾರೆ. ಸ್ವಲ್ಪ ದಿನ ಕಳೆಯುತ್ತಿದ್ದಂತೆ ಚಿನ್ನ ಬಿಡಿಸಿಕೊಳ್ಳಲು ಮನೆಯವರು ಹೋಗಿದ್ದಾರೆ. ಆದರೆ ಅಲ್ಲಿ ಶಾಕ್ ಕಾದಿತ್ತು. ಏಕೆಂದರೆ ಗಿರವಿ ಅಂಗಡಿ ಸಿಬ್ಬಂದಿ ಈಗಾಗಲೇ ಚಾಲಕ ಅಭಿಲಾಷ್ ಚಿನ್ನವನ್ನು ಬಿಡಿಸಿಕೊಂಡು ಹೋಗಿರೋದಾಗಿ ಹೇಳಿದ್ದಾರೆ. ಅಲ್ಲಿಗೆ ಚಾಲಕನ ಅಸಲಿ ಕಹಾನಿ ಶುರುವಾಗಿದೆ.

ಇದನ್ನೂ ಓದಿ: ಚೀನಾ ಲಿಂಕ್ ಹೊಂದಿರುವ ಮಂಗಳೂರಿನ ಸೈಬರ್ ವಂಚಕರ ಬಂಧನ

ಮಾಲೀಕರು ನೀಡಿದ್ದ ಚಿನ್ನವನ್ನು ಗಿರವಿ ಇಟ್ಟಿದ್ದ ಆಸಾಮಿ ಬಳಿಕ ಅದನ್ನು ಬಿಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಬಿಟ್ಟಿದ್ದ. ಇದರಿಂದ ಅನುಮಾನಗೊಂಡ ಮನೆಯವರು ಮನೆಯಲ್ಲಿದ್ದ ಚಿನ್ನವನ್ನು ಪರಿಶೀಲನೆ ನಡೆಸಿದಾಗ ಮನೆಯಲ್ಲಿದ್ದ ಒಂದಷ್ಟು ಚಿನ್ನ ಕಡಿಮೆ ಆಗಿರುವುದು ಕೂಡ ಗೊತ್ತಾಗಿದೆ. ಚಾಲಕ ಹಂತ ಹಂತವಾಗಿ ಮನೆಯಲ್ಲಿಟ್ಟಿದ್ದ ಚಿನ್ನ ಕದ್ದು ಮಾರಾಟ ಮಾಡಿದ್ದ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ: 6 ತಿಂಗಳ ಸ್ಕೆಚ್​​, ಪಕ್ಕಾ ಪ್ಲ್ಯಾನ್​​ ಮಾಡಿ ಕಳ್ಳತನ: 1.8 ಕೆಜಿ ಬಂಗಾರ, ಡೈಮಂಡ್​​ ಕದ್ದವ ಅರೆಸ್ಟ್​

ಇಂತಹ ವ್ಯಕ್ತಿಗಳಿರುವುದರಿಂದ ಪ್ರತಿ ಕೆಲಸದವರನ್ನು ಮನೆ ಮಾಲೀಕರು ಅನುಮಾನದಿಂದ ನೋಡುವಂತಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಅಮೃತಹಳ್ಳಿ ಪೊಲೀಸರು ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version