ಕನ್ನಡದ ಕಲಾವಿದರು ನಟಿಸಿದ ‘ಕೃಷ್ಣಾವತಾರಂ’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ – Kannada News | Sushmitha Bhat Karthik Jayaram starrer Krishnavataram movie declared Tax Free in Uttar Pradesh
ಪೌರಾಣಿಕ ಕಥಾಹಂದರ ಹೊಂದಿರುವ ‘ಕೃಷ್ಣಾವತಾರಂ’ (Krishnavataram) ಚಿತ್ರಕ್ಕೆ ಈಗ ದೊಡ್ಡ ಮನ್ನಣೆ ಸಿಕ್ಕಿದೆ. ಚಿತ್ರದ ಸಾಂಸ್ಕೃತಿಕ ಮಹತ್ವ ಮತ್ತು ಜನಪ್ರಿಯತೆಯನ್ನು ಪರಿಗಣಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಚಿತ್ರವನ್ನು ರಾಜ್ಯದಲ್ಲಿ ತೆರಿಗೆ ಮುಕ್ತ (Tax-Free) ಎಂದು ಘೋಷಿಸಿದ್ದಾರೆ. ಇದರಿಂದಾಗಿ ಚಿತ್ರತಂಡಕ್ಕೆ ದೊಡ್ಡ ಬೆಂಬಲ ಸಿಕ್ಕಂತೆ ಆಗಿದೆ. ಹಿಂದಿ, ತೆಲುಗು, ತಮಿಳಿನಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾದಲ್ಲಿ ಕನ್ನಡದ ಕಲಾವಿದರಾದ ಕಾರ್ತಿಕ್ ಜಯರಾಮ್ (ಜೆಕೆ), ಸುಷ್ಮಿತಾ ಭಟ್ (Sushmitha Bhat) ಕೂಡ ನಟಿಸಿದ್ದಾರೆ ಎಂಬುದು…