ದೃಢ ಸಂಕಲ್ಪಕ್ಕೆ ಸಂದ ಜಯ: ವಿಚ್ಛೇದನ, 23 ವರ್ಷಗಳ ಸುದೀರ್ಘ ಹೋರಾಟದ ಬಳಿಕ 85 ಕೋಟಿ ರೂ. ಜೀವನಾಂಶ ಪಡೆದ ವರ್ಷಾ – Kannada News
ಲಂಡನ್, ಜೂನ್ 05: ಬ್ರಿಟನ್ನಲ್ಲಿ ನೆಲೆಸಿರುವ ಭಾರತ ಮೂಲದ ಮಹಿಳೆ ವರ್ಷಾ ಗೋಹಿಲ್ ವಿಚ್ಛೇದನ(Divorce)ದ ಬಳಿಕ ತಮ್ಮ ಹಕ್ಕು ಮತ್ತು ನ್ಯಾಯಕ್ಕಾಗಿ ಕಳೆದ 23 ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಅಂತೂ ಜಯ ಸಿಕ್ಕಿದೆ. ಪತಿಯು ಮುಚ್ಚಿಟ್ಟಿದ್ದ ಸಂಪತ್ತನ್ನು ಕಾನೂನುಬದ್ಧವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ವರ್ಷಾ ಅವರಿಗೆ ಯುಕೆ (UK) ನ್ಯಾಯಾಲಯವು ಸುಮಾರು 6.6 ಮಿಲಿಯನ್ ಪೌಂಡ್‌ಗಳು ಅಂದರೆ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 85 ಕೋಟಿ ರೂ.ವನ್ನು ನೀಡುವಂತೆ ಆದೇಶಿಸಿದೆ. ಈ ತೀರ್ಪು ಜಾಗತಿಕ ಮಟ್ಟದಲ್ಲಿ ಕೌಟುಂಬಿಕ ನ್ಯಾಯ ಮತ್ತು…