ಬೆಳಗ್ಗೆ, ರಾತ್ರಿ; ಸ್ನಾನ ಮಾಡಲು ಸೂಕ್ತ ಸಮಯ ಯಾವುದು ಗೊತ್ತಾ? – Kannada News | What is the best time to take a bath?

ದಿನನಿತ್ಯ ಸ್ನಾನ (bath) ಮಾಡುವುದು ತುಂಬಾನೇ ಮುಖ್ಯವಾಗಿದೆ.  ಏಕೆಂದರೆ ಸ್ನಾನವು ದೇಹವನ್ನು ಹೊರಗಿನಿಂದ ಶುದ್ಧೀಕರಿಸುವುದಷ್ಟೇ ಅಲ್ಲ, ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾಗಿ ಬಹುತೇಕ ಹೆಚ್ಚಿನವರು ಪ್ರತಿನಿತ್ಯ ತಪ್ಪದೆ ಸ್ನಾನ ಮಾಡ್ತಾರೆ. ಕೆಲವರು ಬೆಳಗ್ಗೆ ಸ್ನಾನ ಮಾಡಿದ್ರೆ, ಇನ್ನೂ ಒಂದಷ್ಟು ಜನರಿಗೆ ಸಂಜೆ, ರಾತ್ರಿ ಸ್ನಾನ ಮಾಡುವ ಅಭ್ಯಾಸ ಇರುತ್ತದೆ. ರಾತ್ರಿ ಅಥವಾ ಬೆಳಗ್ಗೆ ಇವೆರಡರಲ್ಲಿ ಸ್ನಾನಕ್ಕೆ ಯಾವ ಟೈಮ್‌ ಬೆಸ್ಟ್‌? ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಪ್ರಯೋಜಗಳು ಹೆಚ್ಚು ಎಂಬ ಇಂಟರೆಸ್ಟಿಂಗ್‌ ಸಂಗತಿಯನ್ನು ತಿಳಿಯಿರಿ.

ಸ್ನಾನ ಮಾಡಲು ಯಾವ ಸಮಯ ಉತ್ತಮ?

ಸ್ನಾನ ಮಾಡಲು ಸರಿಯಾದ ಸಮಯವು ನಿಮ್ಮ ವೈಯಕ್ತಿಕ ದಿನಚರಿ, ಕೆಲಸದ ದಿನಚರಿ ಮತ್ತು ಜೀವನಶೈಲಿಯನ್ನು ಅವಲಂಬಿಸಿರುತ್ತದೆ. ನಿಮ್ಮ ದಿನವನ್ನು ಶಕ್ತಿಯಿಂದ ಪ್ರಾರಂಭಿಸಲು ಬಯಸಿದರೆ, ಬೆಳಿಗ್ಗೆ ಸ್ನಾನ ಮಾಡುವುದು ಸೂಕ್ತ.ನೀವು  ಆಯಾಸವನ್ನು ತೊಡೆದುಹಾಕಲು ಒತ್ತಡ ನಿವಾರಿಸಲು ಮತ್ತು ಉತ್ತಮ ನಿದ್ರೆ ಪಡೆಯಲು ಬಯಸಿದರೆ, ರಾತ್ರಿಯ ಸಮಯವು ಸ್ನಾನ ಮಾಡಲು ಉತ್ತಮವಾಗಿದೆ. ಕೆಲವೊಮ್ಮೆ ಎರಡೂ ಸಮಯಗಳಲ್ಲಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಸಮತೋಲನದಲ್ಲಿರುತ್ತವೆ.

ಬೆಳಿಗ್ಗೆ ಸ್ನಾನ ಮಾಡುವುದರಿಂದಾಗುವ ಪ್ರಯೋಜನಗಳೇನು?

ತಾಜಾತನ ಮತ್ತು ಚೈತನ್ಯ :ಬೆಳಿಗ್ಗೆ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡೂ ಉಲ್ಲಾಸಗೊಳ್ಳುತ್ತವೆ. ಇದು ದಿನವನ್ನು ಪ್ರಾರಂಭಿಸಲು ನಿಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ಸೋಮಾರಿತನವನ್ನು ದೂರ ಮಾಡುತ್ತದೆ. ತಣ್ಣೀರಿನ ಸ್ನಾನವು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ,  ದೇಹವನ್ನು ಹೆಚ್ಚು ಕ್ರಿಯಾಶೀಲವಾಗಿಸುತ್ತದೆ.

ಮನಸ್ಸನ್ನು ಶಾಂತಗೊಳಿಸುತ್ತದೆ: ಬೆಳಿಗ್ಗೆ ಸ್ನಾನ ಮಾಡುವುದರಿಂದ ಮೆದುಳು ಸಕ್ರಿಯಗೊಳ್ಳುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ:   ಚರ್ಮವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡುತ್ತವೆ. ಇದು ಚರ್ಮದಲ್ಲಿ ಸಂಗ್ರಹವಾದ ಕೊಳಕು ಮತ್ತು ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪ್ರತಿನಿತ್ಯ ಪುಸ್ತಕ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಸಂಜೆ ಸ್ನಾನ ಮಾಡುವುದರಿಂದಾಗುವ ಪ್ರಯೋಜನಗಳೇನು?

ಒತ್ತಡವನ್ನು ನಿವಾರಣೆ: ಸಂಜೆ ಸ್ನಾನ ಮಾಡುವುದರಿಂದ ದಿನದ ಆಯಾಸ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಬೆಚ್ಚಗಿನ ಸ್ನಾನವು ಸ್ನಾಯುಗಳ ನೋವನ್ನು ಶಮನಗೊಳಿಸುತ್ತದೆ ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ.

ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ: ಸಂಜೆ ಸ್ನಾನ ಮಾಡುವುದರಿಂದ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು. ಬೆಚ್ಚಗಿನ ಸ್ನಾನದ ನಂತರ, ನಿಮ್ಮ ದೇಹದ ಉಷ್ಣತೆಯು ಕ್ರಮೇಣ ಕಡಿಮೆಯಾಗುತ್ತದೆ, ಇದು ನಿದ್ರಿಸಲು ನಿಮಗೆ ಸಹಾಯ ಮಾಡುತ್ತದೆ.

ದೇಹ ಶುದ್ಧೀಕರಣ: ದೇಹದಲ್ಲಿ ಅಂಟಿಕೊಂಡ ಧೂಳು, ಬೆವರು ಮತ್ತು ಇತರ ಕಲ್ಮಶಗಳನ್ನು ಪರಿಣಾಮಕಾರಿಯಾಗಿ ತೆಹೆದು ಹಾಕಲು ಸಂಜೆ ಸ್ನಾನ ಮಾಡುವುದು ಉತ್ತಮ.

ಚರ್ಮಕ್ಕೆ ಪ್ರಯೋಜನಕಾರಿ:  ಸಂಜೆ ಸ್ನಾನ ಮಾಡುವುದರಿಂದ ಚರ್ಮದ ಮೇಲೆ ಸಂಗ್ರಹವಾಗಿರುವ ಮೇಕಪ್, ಧೂಳು ಮತ್ತು ಮಾಲಿನ್ಯದ ಕಣಗಳು ನಿವಾರಣೆಯಾಗುತ್ತವೆ, ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್​ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ – Kannada News | China develops extremely complicated prototype of EUV Lithography machine for AI chip production

ನವದೆಹಲಿ, ಡಿಸೆಂಬರ್ 18: ಹಿಂದೆ ಕೋಲ್ಡ್ ವಾರ್ ಸಂದರ್ಭದಲ್ಲಿ ಪರಮಾಣು ತಂತ್ರಜ್ಞಾನ ಸಿದ್ಧಿಸಿಕೊಳ್ಳಲು ಪೈಪೋಟಿ ನಡೆದಿತ್ತು. ಈಗ ಚಿಪ್ ಟೆಕ್ನಾಲಜಿಗೆ ಜಿದ್ದಾಜಿದ್ದಿ ನಡೆದಿದೆ. ಎಐ ಬಳಕೆಗೆ ಬೇಕಾದ ಬಹಳ ಸೂಕ್ಷ್ಮ ಚಿಪ್​ಗಳನ್ನು ತಯಾರಿಸುವ ಇಯುವಿ ಲಿಥೋಗ್ರಫಿ ತಂತ್ರಜ್ಞಾನ ಹೊಂದಿರುವುದು ಯೂರೋಪ್​ನ ಎಎಸ್​ಎಂಎಲ್ ಕಂಪನಿ ಮಾತ್ರವೇ. ಈ ಟೆಕ್ನಾಲಜಲಿ ಅಪ್ಪಿತಪ್ಪಿಯೂ ಚೀನಾ ಕೈಗೆ ಹೋಗಬಾರದೆಂದು ಅಮೆರಿಕ ಹಲವು ವರ್ಷ ಕಾಲದಿಂದಲೂ ಯತ್ನಿಸುತ್ತಿದೆ. ಇದೇ ಹೊತ್ತಲ್ಲಿ ಅಮೆರಿಕಕ್ಕೆ ಶಾಕ್ ಎನಿಸುವಂತೆ, ಚೀನಾ ಇಯುವಿ ಲಿಥೋಗ್ರಫಿ ಮೆಷೀನ್​ನ ಪ್ರೋಟೋಟೈಪ್ ಅಭಿವೃದ್ಧಿಪಡಿಸಿದೆ. ಈ ಮೂಲಕ ಚಿಪ್ ರೇಸ್​ನಲ್ಲಿ ಅಮೆರಿಕಕ್ಕೆ ಸರಿಸಮನಾಗಿ ಓಡಲು ಸಿದ್ಧ ಇರುವುದಾಗಿ ಚೀನಾ ಮೆಸೇಜ್ ರವಾನಿಸಿದೆ.

ಏನಿದು ಯುಎವಿ ಲಿಥೋಗ್ರಫಿ ಮೆಷೀನ್?

ಇಯುವಿ ಎಂದರೆ ಎಕ್ಸ್​ಟ್ರೀಮ್ ಅಲ್ಟ್ರಾವಯ್ಲೆಟ್ ಲೈಟ್. ಅಂದರೆ, ಅತಿನೇರಳೆ ಬೆಳಕಿನಲ್ಲೇ ಅತಿರೇಕಕ್ಕೆ ಸೇರಿದ್ದು. ಐಸಿ ಚಿಪ್​ಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಇದರ ಹಿಂದಿರುವ ವಿಜ್ಞಾನ ಸರಳವಾದರೂ ಅದನ್ನು ಕಾರ್ಯರೂಪಕ್ಕೆ ಇಳಿಸಲು ಬೇಕಾದ ತಂತ್ರಜ್ಞಾನ ಸಿದ್ಧಿಸುವುದು ತೀರಾ ಕಷ್ಟ. ನೆದರ್​​ಲ್ಯಾಂಡ್ಸ್ ಮೂಲದ ಎಎಸ್​ಎಂಎಲ್ ಕಂಪನಿ ಮಾತ್ರವೇ ಈ ಟೆಕ್ನಾಲಜಿಯನ್ನು ಹೊಂದಿರುವುದು.

ಈ ಟೆಕ್ನಾಲಜಿ ಬಳಸಿ ಎಎಸ್​ಎಂಎಲ್ ಸಂಸ್ಥೆಯು ಇಯುವಿ ಲಿಥೋಗ್ರಫಿ ಮೆಷೀನ್ ತಯಾರಿಸಿದೆ. ಎನ್​ವಿಡಿಯೋ, ಇಂಟೆಲ್ ಇತ್ಯಾದಿ ಅನೇಕ ಚಿಪ್ ತಯಾರಕ ಸಂಸ್ಥೆಗಳು ಇವೇ ಮೆಷೀನ್ ಬಳಸಿ ಉನ್ನತ ಮಟ್ಟದ ಮತ್ತು ಅತೀ ಸೂಕ್ಷ್ಮ ಮತ್ತು ಪ್ರಬಲ ಚಿಪ್​ಗಳನ್ನು ತಯಾರಿಸುತ್ತವೆ.

ಇದನ್ನೂ ಓದಿ:

ಕೈಗೆ ಸಿಗದ ಟೆಕ್ನಾಲಜಿ; ಜಿದ್ದಿಗೆ ಬಿದ್ದ ಚೀನಾ

ಅಮೆರಿಕ, ಯೂರೋಪಿಯನ್ ಕಂಪನಿಗಳನ್ನು ಬಿಟ್ಟರೆ ಸ್ಯಾಮ್ಸುಂಗ್ ಮತ್ತು ಟಿಎಸ್​ಎಂಸಿ (ತೈವಾನ್) ಕಂಪನಿಗಳಿಗೆ ಮಾತ್ರವೇ ಎಎಸ್​ಎಂಎಲ್​ನ ಇಯುವಿ ಲಿಥೋಗ್ರಫಿ ಮೆಷೀನ್​ಗಳನ್ನು ಬಳಸುವ ಅಕ್ಸೆಸ್ ಇರುವುದು. 2010ರಲ್ಲಿ ಎಎಸ್​ಎಂಎಲ್ ಈ ಮೆಷೀನ್ ಅಭಿವೃದ್ದಿಪಡಿಸಿದ್ದು. 2017ರಿಂದ ಇದರ ಕಮರ್ಷಿಯಲ್ ಉತ್ಪಾದನೆ ಶುರುವಾಗಿದ್ದು. 2019ರಲ್ಲಿ ಚೀನಾ ದೇಶವು ಇಯುವಿ ಮೆಷಿನ್​ಗಳನ್ನು ಖರೀದಿಸಲು ಮುಂದಾಗಿತ್ತು. ಆದರೆ, ಅಮೆರಿಕಕ್ಕೆ ಇದನ್ನು ತಡೆಯಿತು.

ಆಗ ಚೀನಾ ಜಿದ್ದಿಗೆ ಬಿದ್ದಿತು. ಇಯುವಿ ಲಿಥೋಗ್ರಫಿ ಮೆಷೀನ್ ಅಭಿವೃದ್ಧಿಪಡಿಸಿಯೇ ತೀರುತ್ತೇವೆಂದು ಚೀನಾದವರು ಅಖಾಡಕ್ಕೆ ಅಡಿ ಇಟ್ಟೇ ಬಿಟ್ಟರು. ಇದು ಚೀನಾ ಪಾಲಿಗೆ ‘ಮ್ಯಾನ್ಹಾಟನ್ ಪ್ರಾಜೆಕ್ಟ್’ ಆಗಿಹೋಗಿತ್ತು. ಮ್ಯಾನ್ಹಾಟನ್ ಪ್ರಾಜೆಕ್ಟ್ ಹೆಸರು ಕೇಳಿರಬಹುದು. ಇದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪರಮಾಣು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸೋವಿಯತ್ ರಷ್ಯಾ ಹಾಗು ಜರ್ಮನಿಯನ್ನು ಹಿಂದಿಕ್ಕಲು ಅಮೆರಿಕವು ಮ್ಯಾನ್​ಹಾಟನ್ ಪ್ರಾಜೆಕ್ಟ್ ಕೈಗೊಂಡಿತು. ಅದರಲ್ಲಿ ಯಶಸ್ವಿಯೂ ಆಯಿತು. ಈಗ ಚೀನಾ ಇಯುವಿ ತಂತ್ರಜ್ಞಾನ ಸಿದ್ಧಿಸಿಕೊಳ್ಳಲು ಕೈಗೊಂಡ ಯೋಜನೆಯನ್ನು ರೆಫರೆನ್ಸ್ ಆಗಿ ಚೀನಾದ ‘ಮ್ಯಾನ್ಹಾಟನ್ ಪ್ರಾಜೆಕ್ಟ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:

ಈ ಟೆಕ್ನಾಲಜಿ ಪಡೆಯುವುದು ಚೀನಾಗೆ ಸುಲಭವಾಗಿರಲಿಲ್ಲ. ಇಯುವಿಗಿಂತ ಮುಂಚೆ ಎಎಸ್​ಎಂಎಲ್ ಸಂಸ್ಥೆಯು ಡಿಯುವಿ ಮೆಷೀನ್​ಗಳನ್ನು ತಯಾರಿಸಿತ್ತು. ಇದೂ ಕೂಡ ಅಲ್ಟ್ರಾವಯಲೆಟ್ ಕಿರಣಗಳನ್ನು ಬಳಸಿ ಚಿಪ್ ತಯಾರಿಸುವ ಟೆಕ್ನಾಲಜಿಯೇ. ಆದರೆ, ಇಯುವಿಯಷ್ಟು ಸೂಕ್ಷ್ಮ ಮತ್ತು ಪ್ರಬಲ ಚಿಪ್ ಅನ್ನು ಡಿಯುವಿ ಮೂಲಕ ತಯಾರಿಸಲು ಆಗುವುದಿಲ್ಲ. ಚೀನಾದವರು ಡಿಯುವಿ ಮೆಷೀನ್​ನಲ್ಲೇ ಏನೇನೋ ಬದಲಾವಣೆ ಮಾಡಿಕೊಂಡು ಇಯುವಿ ತಯಾರಿಸಲು ನೋಡಿದರು. ಅದರಲ್ಲಿ ವಿಫಲವಾದರು.

ಡಿಯುವಿ ಇಟ್ಟುಕೊಂಡು ಇಯುವಿ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವ ಸತ್ಯ ಕಂಡುಕೊಂಡ ಚೀನೀಯರು, ಆರಂಭಿಕ ಹಂತದಿಂದಲೇ ಯುಇವಿಯನ್ನು ಅಭಿವೃದ್ಧಿಪಡಿಸುವುದೆಂದು ನಿರ್ಧರಿಸಿದರು. ಆಗ ಅವರಿಗೆ ಸಹಾಯಕ್ಕೆ ಸಿಕ್ಕವರು ಅದೇ ಎಎಸ್​ಎಂಎಲ್ ಕಂಪನಿಯ ಮಾಜಿ ಉದ್ಯೋಗಿಗಳು. ಚೀನೀ ಮೂಲದ ಈ ಉದ್ಯೋಗಿಗಳನ್ನು ಇಟ್ಟುಕೊಂಡು ಬಹಳ ಕಸರತ್ತು ನಡೆಸಿ ಎಕ್ಸ್​ಟ್ರೀಮ್ ಅಲ್ಟ್ರಾವಯಲೆಟ್ ಲಿಥೋಗ್ರಫಿಯ ಪ್ರೋಟೋಟೈಪ್ ಮೆಷೀನ್ ಅನ್ನು ಚೀನಾ ತಯಾರಿಸಿದೆ.

ಮೆಷೀನ್ ಮಾರಾಟ ತಡೆಯಬೇಡಿ ಎಂದು 2019ರಲ್ಲೇ ಎಚ್ಚರಿಸಿದ್ದರು ಎಎಸ್​ಎಂಎಲ್ ಸಿಇಒ

2019ರಲ್ಲಿ ಚೀನಾ ದೇಶವು ಇಯುವಿ ಮೆಷೀನ್ ಅನ್ನು ಕೇಳಿದ್ದಾಗ ಅಮೆರಿಕ ತಡೆದಿತ್ತು. ಆ ಸಂದರ್ಭದಲ್ಲಿ ಎಎಸ್​ಎಂಎಲ್​ನ ಸಿಇಒ ಆಗಿದ್ದ ಪೀಟರ್ ವೆನ್ನಿಂಕ್ ಅವರು ಚೀನಾವನ್ನು ತಡೆಯಬೇಡಿ ಎಂದಿದ್ದರು. ಚೀನಾಗೆ ಈ ಮೆಷೀನ್ ಸಿಗದಿದ್ದರೆ ಅವರು ಹೇಗಾದರೂ ಮಾಡಿ ತಂತ್ರಜ್ಞಾನ ಅಭಿವೃದ್ಧಿಪಡಿಸಿಕೊಂಡೇ ತೀರುತ್ತಾರೆ ಎಂದು ಎಚ್ಚರಿಸಿದ್ದರು. ಅವರು ಹೇಳಿದಂತೆಯೇ ಈಗ ಆಗುತ್ತಿದೆ.

ಇದನ್ನೂ ಓದಿ:

ಹಿಂದೆ ಮಾಡಲಾದ ಅಂದಾಜು ಪ್ರಕಾರ 2030ಕ್ಕೆ ಚೀನಾದವರು ಇಯುವಿ ಮೆಷೀನ್ ಮೂಲಕ ಚಿಪ್ ಉತ್ಪಾದನೆ ಆರಂಭಿಸಬಹುದು ಎನ್ನಲಾಗಿತ್ತು. ಈಗ ಅದರ ವೇಗ ನೋಡಿದರೆ 2028ಕ್ಕೆ ಮುನ್ನವೇ ಚಿಪ್ ತಯಾರಿಕೆ ಶುರುವಾಗಬಹುದು. ಇದು ಸಾಕಾರಗೊಂಡರೆ ಚೀನಾ ದೇಶ ಚಿಪ್ ತಯಾರಿಕೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಮೆಟ್ರೋ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು – Kannada News | Namma Metro Yellow Line: Seventh driverless train arrives in Bengaluru

ಬೆಂಗಳೂರು, ಡಿಸೆಂಬರ್​​ 18: ನಮ್ಮ ಮೆಟ್ರೋದ ಯೆಲ್ಲೋ ಮಾರ್ಗದ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಡ್ರೈವರ್ಲೆಸ್ 7ನೇ ರೈಲು ಬೆಂಗಳೂರು ತಲುಪಿದ್ದು, ಈ ಮಾರ್ಗದಲ್ಲಿ ರೈಲುಗಳ ನಡುವಿನ ಓಡಾಟದ ಸಮಯ ಹೊಸ ವರ್ಷಕ್ಕೆ ಮತ್ತಷ್ಟು ಕಡಿಮೆ ಆಗಲಿದೆ. ಹೊಸ ರೈಲು ಹಳಿಗಿಳಿದ ಬೆನ್ನಲ್ಲೇ 8-10 ನಿಮಿಷಗಳಿಗೆ ಒಂದರಂತೆ ಮೆಟ್ರೋ ಸಂಚರಿಸಲಿದೆ.

ಹೆಬ್ಬಗೋಡಿ ಡಿಪೋ ತಲುಪಿದ ರೈಲು

ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು

ಡಿಸೆಂಬರ್ 10ರಂದು ಕೊಲ್ಕತ್ತಾದ ಟಿಟಾಗರ್​​ನಿಂದ ಹೊರಟಿದ್ದ ಡ್ರೈವರ್ಲೆಸ್ 7ನೇ ರೈಲು ಇಂದು ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋ ತಲುಪಿದೆ. ಇದು ಜನವರಿಯಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಿದ್ದು, ಆರ್​​.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಯೆಲ್ಲೋ ಲೈನ್​​ನಲ್ಲಿ ಓಡಾಡಲಿದೆ. 19.15 ಕಿಮೀ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಸದ್ಯ 5 ಮೆಟ್ರೋ ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. ಆಗಸ್ಟ್ 10ರಂದು ಯೆಲ್ಲೋ ಲೈನ್​​ ಉದ್ಘಾಟನೆಯಾಗಿದ್ದು, ಆಗಸ್ಟ್​​ 11ರಿಂದ ವಾಣಿಜ್ಯ ಸಂಚಾರವನ್ನು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಆರಂಭಿಸಿತ್ತು.

ಇದನ್ನೂ ಓದಿ: ಹಳದಿ ಮಾರ್ಗದಲ್ಲಿನ ಮೆಟ್ರೋ ಸ್ಟೇಷನ್​​ಗಳ ಸಮೀಪ ಬಿಎಂಟಿಸಿ ಬಸ್​​ ನಿಲ್ದಾಣಗಳ ವ್ಯವಸ್ಥೆ

ಮೇನಿಂದ ಪಿಂಕ್​​ ಲೈನ್​​ ಮೆಟ್ರೋ ಸಂಚಾರ ಸಾಧ್ಯತೆ

ನಮ್ಮ ಮೆಟ್ರೋದ ಬಹು ನಿರೀಕ್ಷಿತ ಯೋಜನೆಗಳಲ್ಲೊಂದಾದ ಪಿಂಕ್​​ ಲೈನ್​​ನಲ್ಲಿ ಸಂಚಾರ ಮಾಡಲಿರುವ ಚಾಲಕ ರಹಿತ ರೈಲಿನ ಮಾದರಿಯನ್ನು ಬಿಇಎಂಎಲ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಒಟ್ಟು 23 ಚಾಲಕರಹಿತ ರೈಲುಗಳಿಗೆ ಆರ್ಡರ್​ ನೀಡಲಾಗಿದ್ದು, 2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL  ಸಿದ್ಧತೆ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಬ್ಲ್ಯೂ ಲೈನ್​​ ಮತ್ತು ಪಿಂಕ್​​ ಲೈನ್​​ ಮೆಟ್ರೋಗಳಿಗಾಗಿ ಒಟ್ಟು 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಬೋಗಿಗಳನ್ನು BEML ಪೂರೈಸಲಿದೆ. ಮೆಟ್ರೋ ಟ್ರೇನ್‌ಸೆಟ್‌ಗಳನ್ನು ಸಂಪೂರ್ಣವಾಗಿ ಬೆಂಗಳೂರಿನ BEMLನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇಂಜಿನಿಯರಿಂಗ್​​ ಮತ್ತು ನಿರ್ಮಾಣ ಎಲ್ಲವೂ ಇಲ್ಲಿಯೇ ಆಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಪವನ್ ಕಲ್ಯಾಣ್ ಪುತ್ರನಿಗಾಗಿ ನೂರಾರು ಕೋಟಿ ಸುರಿಯಲು ರೆಡಿ’ – Kannada News | Producer wants to make pan world movie with Pawan Kalyan’s son Akira Nanda

ಪವನ್ ಕಲ್ಯಾಣ್ (Pawan Kalyan) ತೆಲುಗು ಚಿತ್ರರಂಗದ ಸ್ಟಾರ್ ನಟ. ಈಗಾಗಲೇ ಅವರು ಚಿತ್ರರಂಗಕ್ಕೆ ಅಲ್ಪ ವಿರಾಮ ಇಟ್ಟು, ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶ ಡಿಸಿಎಂ ಆಗಿರುವ ಪವನ್ ಕಲ್ಯಾಣ್, ಕೆಲವು ಪ್ರಮುಖ ಖಾತೆಗಳನ್ನು ಸಹ ನಿಭಾಯಿಸುತ್ತಿದ್ದಾರೆ. ಆದರೆ ಚುನಾವಣೆಗೆ ಮುಂಚೆ ಒಪ್ಪಿಕೊಂಡಿದ್ದ ಕೆಲ ಸಿನಿಮಾಗಳಲ್ಲಿ ನಟಿಸಿದ್ದು, ಇನ್ನೊಂದು ಸಿನಿಮಾ ಮಾತ್ರ ಬಾಕಿ ಉಳಿದಿದೆ. ಆ ಸಿನಿಮಾದ ಬಳಿಕ ಸಂಪೂರ್ಣವಾಗಿ ಸಿನಿಮಾದಿಂದ ದೂರಾಗುವುದಾಗಿ ಪವನ್ ಕಲ್ಯಾಣ್ ಈಗಾಗಲೇ ಹೇಳಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ. ಹಾಗಾಗಿ ಅಭಿಮಾನಿಗಳು ಪವನ್ ಕಲ್ಯಾಣ್ ಅವರ ಪುತ್ರ ಸಿನಿಮಾಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದಾರೆ.

ಪವನ್ ಕಲ್ಯಾಣ್ ಪುತ್ರ ಅಕಿರ 21 ವರ್ಷ ವಯಸ್ಸಿನವರಾಗಿದ್ದು ಶಿಕ್ಷಣದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಅಕಿರ ಅವರ ಚಿತ್ರರಂಗ ಪ್ರವೇಶದ ಬಗ್ಗೆ ಚರ್ಚೆಗಳು ಜೋರಾಗಿ ನಡೆದಿವೆ. ಪವನ್ ನಟಿಸಿದ್ದ ಈ ಹಿಂದಿನ ಸಿನಿಮಾ ‘ಓಜಿ’ಯಲ್ಲಿ ಅಕಿರ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದು ಸುಳ್ಳಾಯ್ತು. ಇದೀಗ ಅಕಿರ, ಸ್ವತಂತ್ರ್ಯ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಪವನ್ ಕಲ್ಯಾಣ್ ಜೊತೆಗೆ ಈ ಹಿಂದೆ ಕೆಲಸ ಮಾಡಿರುವ ನಿರ್ಮಾಪಕ, ವಿತರಕ ಟಿಜಿ ವಿಶ್ವಪ್ರಸಾದ್, ಈ ಬಗ್ಗೆ ಮಾತನಾಡಿದ್ದು, ತಾವು ಪವನ್ ಕಲ್ಯಾಣ್ ಪುತ್ರ ಅಕಿರ ಅನ್ನು ಚಿತ್ರರಂಗಕ್ಕೆ ಲಾಂಚ್ ಮಾಡಲು ಸಜ್ಜಾಗಿರುವುದಾಗಿ ಹೇಳಿದ್ದಾರೆ. ಪವನ್ ಕಲ್ಯಾಣ್ ಪುತ್ರ ಅಕಿರ ಜೊತೆಗೆ ನಾನು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಮಾಡಲು ರೆಡಿ ಇರುವುದಾಗಿ ವಿಶ್ವಪ್ರಸಾದ್ ಹೇಳಿದ್ದಾರೆ. ಅದಕ್ಕಾಗಿ ಎಷ್ಟು ಕೋಟಿ ಖರ್ಚಾದರು ಭರಿಸುವುದಾಗಿ ವಿಶ್ವಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ:ಕಾರು ಉಡುಗೊರೆಯಾಗಿ ಕೊಟ್ಟ ನಟ ಪವನ್ ಕಲ್ಯಾಣ್: ಯಾರಿಗೆ? ಏಕೆ?

ವಿಶ್ವಪ್ರಸಾದ್ ಮಾತ್ರವೇ ಅಲ್ಲದೆ, ತೆಲುಗು ಚಿತ್ರರಂಗದ ನಟ, ನಿರ್ಮಾಪಕ, ರಾಜಕಾರಣಿಯೂ ಆಗಿರುವ ಬಂಡ್ಲ ಗಣೇಶ್ ಸಹ ತಾವು, ಅಕಿರ ಅನ್ನು ಲಾಂಚ್ ಮಾಡಲು ಉತ್ಸುಕರಾಗಿರುವುದಾಗಿ ಈ ಹಿಂದೆಯೇ ಹೇಳಿದ್ದರು. ಇನ್ನು ರಾಜಮೌಳಿ ತಂದೆ ವಿಜಯಪ್ರಸಾದ್ ಸಹ, ಕಾರ್ಯಕ್ರಮವೊಂದರಲ್ಲಿ ಪವನ್ ಪುತ್ರ ಅಕಿರ ಚಿತ್ರರಂಗಕ್ಕೆ ಬರಬೇಕು, ಅವರ ತಾಯಿ ರೇಣು ದೇಸಾಯಿ ಈ ಬಗ್ಗೆ ಯೋಚನೆ ಮಾಡಬೇಕು ಎಂದಿದ್ದರು.

ಇನ್ನು ಅಕಿರ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆಗಿದ್ದಾರೆ. ಅವರು ಹೊರಗೆ ಕಾಣಿಸಿಕೊಂಡರೂ ಸಹ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ. ಅಕಿರ ಸಹ ಇದೀಗ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಅವರು ಶೀಘ್ರವೇ ಚಿತ್ರರಂಗಕ್ಕೆ ಬರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರೀತಿ ಹೆಸರಲ್ಲಿ ಕಾಮದ ತೀಟೆ ತೀರಿಸಿಕೊಂಡ ಪ್ರಿಯಕರ: ಸಾಲದಕ್ಕೆ ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ – Kannada News | Three Friends Gang Arrested By Magadi Police for Physical Assault on 19 Year Old girl

ರಾಮನಗರ, (ಡಿಸೆಂಬರ್ 18): ಬೆಂಗಳೂರಿನ (Bengaluru ) ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿನಿ (College Student)  ‌ಮೇಲೆ ಸಾಮೂಹಿಕ ‌ಆತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಯುವತಿಯನ್ನು ಪ್ರೀತಿಸುವ ನಾಟಕವಾಡಿ, ಆಕೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದ್ದೇ, ತಮ್ಮ ಖಾಸಗಿ ಕ್ಷಣದ ವಿಡಿಯೋ ಮುಂದಿಟ್ಟುಕೊಂಡು ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯ ರಾಮನಗರದಲ್ಲಿ (Ramanagar) ಈ ಅಮಾನುಷ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಸದ್ಯ ಪ್ರಿಯಕರ ಸೇರಿ ಆತನ ಇಬ್ಬರು ಸ್ನೇಹಿತರನ್ನು ಮಾಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಕಾಸ್, ಪ್ರಶಾಂತ್ ಮತ್ತು ಚೇತನ್ ಬಂಧಿತ ಆರೋಪಿಗಳು.

ಪ್ರೀತಿ ಬಲೆಗೆ ಬೀಳಿಸಿಕೊಂಡು ಕಾಮದಾಟ

ಏಳು ತಿಂಗಳ ಹಿಂದೆ ವಿಕಾಸ್, ಮಾಗಡಿಯ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ. ಆನಂತರ ಮೂರು ತಿಂಗಳ ಹಿಂದೆ ಪ್ರೀತಿಯ ಹೆಸರಲ್ಲಿ ಯುವತಿಯನ್ನ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ಲೈಂಗಿಕವಾಗಿ ಬಳಿಸಿಕೊಂಡಿದ್ದ. ಸಾಲದಕ್ಕೆ ಕಾಮುಕ ಅದನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಆನಂತರ ಆ ವಿಡಿಯೋ ಯುವತಿಗೆ ಕಳುಹಿಸಿ ಬೆದರಿಕೆ ಹಾಕಿ ತಾನು ಕರೆದಾಗೆಲ್ಲ ಬರಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ.

ಇದನ್ನೂ ಓದಿ: ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಸಿಂಗರ್ ಮೈಲಾರಿ ಅರೆಸ್ಟ್

ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​​ಮೇಲ್

ಅದರಂತೆ ಕೆಲ ದಿನಗಳ ಹಿಂದೆ ಪ್ರಿಯಕರ ವಿಕಾಸ್, ಯುವತಿಯನ್ನ ಗೆಳೆಯ ಚೇತನ್ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವಿಕಾಸ್ ಹಾಗೂ ಇಬ್ಬರು ಸಹಪಾಠಿಗಳಾದ ಪ್ರಶಾಂತ್ ‌ಹಾಗೂ ಚೇತನ್ ಸೇರಿಕೊಂಡು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದರಿಂದ ನೊಂದ ಯುವತಿ, ಮಾಗಡಿ ಪೊಲೀಸ್ ಠಾಣೆಗೆ ದೂರು‌ ನೀಡಿದ್ದು, ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ‌ಮೂವರನ್ನ ಬಂಧಿಸಿದ್ದಾರೆ.

ವಿಕಾಸ್ ಹಾಗೂ ಪ್ರಶಾಂತ್ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ಚೇತನ್ ಮಾಗಡಿ ಪಟ್ಟಣದಲ್ಲಿ ‌ಎಲೆಕ್ಟ್ರಿಕ್ ಕೆಲಸ ಮಾಡುತ್ತಾನೆ. ಇನ್ನು ಚೇತನ್ ಪತ್ನಿ ಹೆರಿಗೆಗೆ ಹೋಗಿದ್ದ ವೇಳೆ ಮನೆಯಲ್ಲಿಯೇ ಯುವತಿಯ ಮೇಲೆ ಆತ್ಯಾಚಾರ ಎಸಗಿದ್ದಾರೆ. ಇನ್ನು ವಿಕಾಸ್, ಪ್ರೇಯಿಸಿಯೊಂದಿಗೆ ಮಾತ್ರವಲ್ಲ ಬೇರೆ ಬೇರೆ ಯುವತಿಯರ ಜೊತೆ ದೈಹಿಕ ಸಂಪರ್ಕ ನಡೆಸಿರುವ ಬಗ್ಗೆ ಸ್ನೇಹಿತರ ಮುಂದೆ ಹೇಳಿಕೊಂಡಿದ್ದಾನೆ. ಆ ವಿಡಿಯೋ ಹಾಗೂ ವಿಡಿಯೋ ಕೂಡ ವೈರಲ್ ಆಗಿದೆ.

ಇದನ್ನೂ ಓದಿ: ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ ಮೆರೆದ ಗ್ಯಾಂಗ್​​

ಒಟ್ಟಾರೆ ಪ್ರೀತಿಯ ಹೆಸರಲ್ಲಿ ಯುವತಿಯನ್ನ ಬಲೆಗೆ ಬೀಳಿಸಿಕೊಂಡು ನಂತರ ಸ್ನೇಹಿತರ ಜೊತೆಗೂಡಿ ಆತ್ಯಾಚಾರ ಎಸಗಿ ಇದೀಗ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಶಭ್ರಷ್ಟರಿಬ್ಬರ ಸಂಭ್ರಮ; ವಿಜಯ್ ಮಲ್ಯ 70ನೇ ಹುಟ್ಟುಹಬ್ಬಕ್ಕೆ ಪಾರ್ಟಿ ಕೊಟ್ಟ ಲಲಿತ್ ಮೋದಿ – Kannada News | Glorious Evening Lalit Modi hosts birthday bash for Fugitive Vijay Mallya in London

ನವದೆಹಲಿ, ಡಿಸೆಂಬರ್ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ಅವರು ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ (Vijay Mallya) ಅವರ ಹುಟ್ಟುಹಬ್ಬದ ಆಚರಣೆಯನ್ನು ಲಂಡನ್‌ನಲ್ಲಿ ಆಯೋಜಿಸಿದ್ದು, ಅವರ ಬೆಲ್‌ಗ್ರೇವ್ ಸ್ಕ್ವೇರ್ ನಿವಾಸಕ್ಕೆ ಹಲವಾರು ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿದ್ದರು. ಅತಿಥಿಗಳ ಪಟ್ಟಿಯಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಶಾ, ನಟ ಇದ್ರಿಸ್ ಎಲ್ಬಾ ಮತ್ತು ಫ್ಯಾಷನ್ ಡಿಸೈನರ್ ಮನೋವಿರಾಜ್ ಖೋಸ್ಲಾ ಕೂಡ ಇದ್ದರು.

ನಿನ್ನೆ ಸಂಜೆಯ ಫೋಟೋಗಳಲ್ಲಿ ಕಿರಣ್ ಮಜುಮ್ದಾರ್ ಶಾ ಅವರು ಖೋಸ್ಲಾ ಅವರೊಂದಿಗೆ ಪೋಸ್ ನೀಡುತ್ತಿರುವುದನ್ನು ಮತ್ತು ಇನ್ನೊಂದರಲ್ಲಿ ಎಲ್ಬಾ ಅವರೊಂದಿಗೆ ಚಾಟ್ ಮಾಡುತ್ತಿರುವುದನ್ನು ನೋಡಬಹುದು. ಫೋಟೋಗ್ರಾಫರ್ ಜಿಮ್ ರೈಡೆಲ್ ಎಕ್ಸ್‌ನಲ್ಲಿ ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಲಂಡನ್‌ನಲ್ಲಿ ವಿಜಯ್ ಮಲ್ಯ ಅವರ 70ನೇ ಪ್ರಿ-ಬರ್ತಡೇ ಪಾರ್ಟಿ ಏರ್ಪಡಿಸಿದ್ದಕ್ಕಾಗಿ ಲಲಿತ್ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್​ ಸಾಲ ಜಟಾಪಟಿ: ಲೆಕ್ಕಪತ್ರಕ್ಕಾಗಿ ಹೈಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ

ಲಲಿತ್ ಮೋದಿ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನನ್ನ ಮನೆಯಲ್ಲಿ ನನ್ನ ಸ್ನೇಹಿತ ವಿಜಯ್ ಮಲ್ಯ ಅವರ ಹುಟ್ಟುಹಬ್ಬಕ್ಕೂ ಮುನ್ನ ನಡೆದ ಪಾರ್ಟಿಗೆ ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ.

ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೆಟ್ಟಿಗರು ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಹಲವು ವರ್ಷಗಳ ಕಾಲ ಭಾರತೀಯ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದರೂ ಸಹ ಸಂತೋಷದ ಸಮಯವನ್ನು ಎಂಜಾಯ್ ಮಾಡುತ್ತಿರುವುದಕ್ಕಾಗಿ ಟ್ರೋಲ್ ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಲಲಿತ್ ಮೋದಿ ಆಯೋಜಿಸಿದ್ದ ಖಾಸಗಿ ಕರೋಕೆ ಸಂಜೆಯಲ್ಲಿ ಕೂಡ ಲಲಿತ್ ಮೋದಿ ಹಾಗೂ ವಿಜಯ್ ಮಲ್ಯ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇದರಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ ಸೇರಿದಂತೆ 300ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ

ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಕುಸಿತಕ್ಕೆ ಸಂಬಂಧಿಸಿದ ಕಾನೂನು ತೊಂದರೆಗಳ ನಡುವೆ ವಿಜಯ್ ಮಲ್ಯ ಮಾರ್ಚ್ 2016ರಲ್ಲಿ ಭಾರತವನ್ನು ತೊರೆದರು. 9,000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದಂತೆ ವಂಚನೆ ಮತ್ತು ಹಣ ವರ್ಗಾವಣೆ ಆರೋಪದ ಮೇಲೆ ಭಾರತೀಯ ಅಧಿಕಾರಿಗಳು ಅವರನ್ನು ಇಂಗ್ಲೆಂಡ್​​ನಿಂದ ಭಾರತಕ್ಕೆ ಹಸ್ತಾಂತರ ಮಾಡಲು ಹೋರಾಡುತ್ತಲೇ ಇದ್ದಾರೆ.

ಐಪಿಎಲ್ ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಲಿತ್ ಮೋದಿ, ಬಿಡ್ ರಿಗ್ಗಿಂಗ್ ಮತ್ತು ಹಣ ವರ್ಗಾವಣೆ ಸೇರಿದಂತೆ ಹಣಕಾಸಿನ ಅಕ್ರಮಗಳ ಆರೋಪದ ನಂತರ ಅವರನ್ನು ಐಪಿಎಲ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅದಾದ ನಂತರ 2010ರಲ್ಲಿ ಅವರು ಭಾರತವನ್ನು ತೊರೆದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೊಡಗಿನಲ್ಲಿ ವಿಶಿಷ್ಟ ಕೋವಿ ಹಬ್ಬ: ಬಂದೂಕಿಗೆ ಪೂಜೆ, ಗುಂಡು ಹೊಡೆದು ಶೌರ್ಯ ಮೆರೆದ ಕೊಡವರು

Source link

ಈ ಆಯುರ್ವೇದ ಸಲಹೆಯಿಂದ ಮಗು ಹಾಸಿಗೆ ಒದ್ದೆ ಮಾಡುವುದನ್ನು ತಡೆಯಬಹುದು! – Kannada News | Understanding Bedwetting: Ayurvedic Diagnosis and Solutions for Kids

ರಾತ್ರಿ ಸಮಯದಲ್ಲಿ ಮಗು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಸಾಮಾನ್ಯವಾಗಿ ಯಾರೂ ಕೂಡ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲಿಯೂ ಕೆಲವು ತಾಯಂದಿರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಮಗುವಿಗೆ 5 ವರ್ಷ ಆದ ಮೇಲೂ ಬೆಡ್ ವೆಟ್ಟಿಂಗ್ (Bedwetting) ಸಮಸ್ಯೆ ಮುಂದುವರಿದರೆ, ಅದು ಸಹಜವಲ್ಲ ಬದಲಾಗಿ ಆರೋಗ್ಯ ಸಮಸ್ಯೆಯಾಗಿರಬಹುದು. ಹಾಗಾಗಿ ಪೋಷಕರು, ಈ ರೀತಿ ಆಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಈ ಸ್ಟೋರಿ ಮೂಲಕ ಈ ರೀತಿ ಸಮಸ್ಯೆಗೆ ಕಾರಣವೇನು, ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಮಕ್ಕಳು ಬೆಡ್ ವೆಟ್ಟಿಂಗ್ ಮಾಡುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಮಗುವಿನ ಮೂತ್ರಕೋಶ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಅಥವಾ ಮೂತ್ರ ನಿಯಂತ್ರಣದ ಕೊರತೆ ಈ ಸಮಸ್ಯೆಗೆ ಕಾರಣವಾಗಿರಬಹುದು. ಏಕೆಂದರೆ ಮೂತ್ರಕೋಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲದಿದ್ದರೆ, ಅದು ಮೂತ್ರವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಬಹುದು. ಜೊತೆಗೆ ಮಗು ಆಳವಾದ ನಿದ್ರೆಯಲ್ಲಿದ್ದರೆ, ಮೂತ್ರಕೋಶ ತುಂಬಿದೆ ಎಂಬ ಸಂಕೇತ ಅವರ ಮೆದುಳನ್ನು ತಲುಪದಿರಬಹುದು. ಅಷ್ಟೇ ಅಲ್ಲ, ಮೂತ್ರನಾಳಗಳ ಹಿಗ್ಗುವಿಕೆಯಿಂದ ಕೆಲವು ಮಕ್ಕಳು ಮೂತ್ರನಾಳದ ಸೋಂಕಿನಿಂದ (UTI) ಬಳಲುತ್ತಿದ್ದು ಪೋಷಕರು ಅದನ್ನು ಗುರುತಿಸಲು ವಿಫಲರಾಗಿರಬಹುದು. ಕೆಲವೊಮ್ಮೆ ಈ ರೀತಿಯ ಸಮಸ್ಯೆ ಆನುವಂಶಿಕವಾಗಿ ಬಂದಿರುತ್ತದೆ. ಪೋಷಕರಿಗೆ ಈಗಾಗಲೇ ಈ ಸಮಸ್ಯೆ ಇದ್ದರೆ, ಮಗುವಿನಲ್ಲಿಯೂ ಕಂಡುಬರಬಹುದು. ಇವುಗಳ ಹೊರತಾಗಿ ಕೆಲವೊಮ್ಮೆ, ಮಗುವಿನ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡ ಈ ಸಮಸ್ಯೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ದೇಹದಲ್ಲಿ ಮೂತ್ರವರ್ಧಕ ಹಾರ್ಮೋನ್ ಮಟ್ಟ ಕಡಿಮೆಯಾಗುವುದು ಸಹ ರಾತ್ರಿಯಲ್ಲಿ ಮೂತ್ರ ವಿಸರ್ಜನೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಹೊಟ್ಟೆ ಮತ್ತು ಕರುಳನ್ನು ಪರೀಕ್ಷಿಸಲು ಮಾತ್ರೆಯಂತಹ ವಿಭಿನ್ನ ಸಾಧನವನ್ನು ಕಂಡುಹಿಡಿದ ವಿಜ್ಞಾನಿಗಳು

ಮಕ್ಕಳು ಬೆಡ್ ವೆಟ್ಟಿಂಗ್ ಮಾಡುವುದನ್ನು ತಡೆಯಲು ಏನು ಮಾಡಬೇಕು?

ನಿಮ್ಮ ಮಗು ಕೂಡ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಈ ರೀತಿಯ ಆಯುರ್ವೇದದಲ್ಲಿ ತಿಳಿಸಿರುವ ಗಿಡಮೂಲಿಕೆ ಔಷಧಿಗಳನ್ನು ಟ್ರೈ ಮಾಡಬಹುದು. ಈ ಮನೆಮದ್ದು ತಯಾರಿಸಲು, 50 ಗ್ರಾಂ ಕಪ್ಪು ಎಳ್ಳು, 25 ಗ್ರಾಂ ಓಂ ಕಾಳು (ಕ್ಯಾರಮ್ ಬೀಜಗಳು) ಮತ್ತು 100 ಗ್ರಾಂ ಬೆಲ್ಲವನ್ನು ಹಾಕಿ ಮಿಶ್ರಣ ಮಾಡಿ. ಕಪ್ಪು ಎಳ್ಳು ಮತ್ತು ಓಂ ಕಾಳನ್ನು ಪುಡಿಮಾಡಿ. ಬೆಲ್ಲವನ್ನು ಮೆತ್ತಗೆ ಮಾಡಿ ಎರಡೂ ಪದಾರ್ಥಗಳನ್ನು ಬೆರೆಸಿ ಮಾತ್ರೆಗಳನ್ನು ತಯಾರಿಸಿ. ಪ್ರತಿದಿನ ನಿಮ್ಮ ಮಗುವಿಗೆ ಈ ಎರಡು ಮಾತ್ರೆಗಳನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಲು ಕೊಡಿ. ಇದರ ಪರಿಣಾಮ ನಿಮಗೆ ತಿಳಿಯುತ್ತದೆ. ಅಥವಾ ಅರ್ಧ ಚಮಚ ಆಮ್ಲಾ ಪುಡಿಯನ್ನು ಎರಡು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಬೆಳಿಗ್ಗೆ ಮತ್ತು ಸಂಜೆ ನಿಮ್ಮ ಮಗುವಿಗೆ ನೀಡಿ. ಇದರ ಜೊತೆಗೆ ನಿಮ್ಮ ಮಗುವಿಗೆ ಮೂತ್ರ ವಿಸರ್ಜಿಸಲು ಸರಿಯಾದ ತರಬೇತಿ ನೀಡಿ. ನಿಯಮಿತವಾಗಿ ಮೂತ್ರ ವಿಸರ್ಜಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಹೇಳಿ ಕೊಡಿ. ಮಲಗುವ ಮುನ್ನ ಮೂತ್ರ ವಿಸರ್ಜನೇ ಮಾಡಿ ಬಳಿಕ ಮಲಗುವ ರೂಢಿ ಬೆಳೆಸಿಕೊಳ್ಳಲು ಸಹಾಯ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಡಾ ಕೇಸ್​​ ವಿಚಾರಣೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ: ವಾದ-ಪ್ರತಿವಾದ ಹೇಗಿತ್ತು? – Kannada News | MUDA Case: Special Court for Peoples Representative postpones hearing to December 23

ಬೆಂಗಳೂರು, ಡಿಸೆಂಬರ್​​ 18: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಕೇಸ್ ವಿಚಾರಣೆ ಮುಂದೂಡಿಕೆಯಾಗಿದೆ.  ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್‌ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಆಕ್ಷೇಪ ಸಂಬಂಧ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಡಿ. 23ಕ್ಕೆ ಮುಂದೂಡಿದೆ. ತನಿಖೆಯ ಸ್ಥಿತಿಗತಿ ಬಗ್ಗೆ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿದ್ದು, ತನಿಖೆ ಅಂತಿಮ ಹಂತದಲ್ಲಿದೆ ಎಂದು ಲೋಕಾಯುಕ್ತ ಎಸ್‌ಪಿಪಿ ವೆಂಕಟೇಶ ಅರಬಟ್ಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆರೋಪಪಟ್ಟಿ ಸಲ್ಲಿಕೆಗೂ ಮುನ್ನ ಸರ್ಕಾರದ ಪೂರ್ವಾನುಮತಿ ಬೇಕು. ಅದಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಅಂತಿಮ‌ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತೇವೆ ಎಂದು ಕೋರ್ಟ್​​ಗೆ ಲೋಕಾಯುಕ್ತ ಎಸ್‌ಪಿಪಿ ತಿಳಿಸಿದ್ದಾರೆ. ಈಗಾಗಲೇ ನಿಮಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಕೇಸ್ ಡೈರಿ ಸಿದ್ಧವಿದೆಯೇ ಎಂದು ಕೋರ್ಟ್​​ ಪ್ರಶ್ನಿಸಿದ್ದು, ಅದನ್ನು ನಾಳೆ ಸಲ್ಲಿಸುವುದಾಗಿ ಎಸ್​​ಪಿಪಿ ಹೇಳಿದ್ದಾರೆ.

ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಮುಡಾ ರಹಸ್ಯ; 22 ಕೋಟಿ ರೂ. ಲಂಚ ಪಡೆದಿದ್ದ ಮಾಜಿ ಆಯುಕ್ತ, ಇಡಿ ತನಿಖೆಯಲ್ಲಿ ಬಟಾಬಯಲು

ಕೋರ್ಟ್ ಆದೇಶಿಸಿದ ಮೇಲೆ ಸಿಎಂ ಸಿದ್ದರಾಮಯ್ಯ ಸೇರಿ 4 ಆರೋಪಿಗಳ ವಿರುದ್ಧ ತನಿಖೆ ಮಾಡಿಲ್ಲ. ಇವರು ಕಾನೂನಿಗೆ ಬೆಲೆ ಕೊಡುತ್ತಿಲ್ಲವೆಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಹೀಗಾಗಿ ನ್ಯಾಯಾಲಯ ನಮ್ಮ ಅರ್ಜಿಯ ಮೇಲೆ ಆದೇಶ ನೀಡಬೇಕೆಂದು ವಾದಿಸಿದ್ದಾರೆ. ಆದರೆ, ಮೂರು ಜಿಲ್ಲೆಗಳ ಸಿಬ್ಬಂದಿಯೊಂದಿಗೆ ಲೋಕಾಯುಕ್ತ ಪೊಲೀಸರು ಕೆಲಸ ಮಾಡಿದ್ದಾರೆ . ಕೇಸ್ ಡೈರಿ ತಾವು ಪರಿಶೀಲಿಸಿದರೆ ತನಿಖೆ ನಡೆಸಿರುವುದು ತಿಳಿಯುತ್ತದೆ. ತನಿಖಾ ಸ್ಥಿತಿಗತಿ ವರದಿಯನ್ನು ದೂರುದಾರರಿಗೆ ನೀಡುತ್ತೇವೆ. ಅವರು ಅದನ್ನು ಬಹಿರಂಗಪಡಿಸದಂತೆ ನ್ಯಾಯಾಲಯ ನಿರ್ಬಂಧಿಸಬೇಕೆಂದು ಈ ವೇಳೆ ಎಸ್​​ಪಿಪಿ ಆಗ್ರಹಿಸಿದ್ದಾರೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಬಿ ರಿಪೋರ್ಟ್ ಸಂಬಂಧಿಸಿದಂತೆ ಹೆಚ್ಚುವರಿ ವಾದಮಂಡನೆಯಿದ್ದರೆ ಸಲ್ಲಿಸಿ ಎಂದು ಇಡಿ, ದೂರುದಾರ ಸ್ನೇಹಮಯಿ ಕೃಷ್ಣಗೆ  ಸೂಚನೆ ನೀಡಿದೆ. ಬಳಿಕ ವಿಚಾರಣೆ ಡಿ.23ಕ್ಕೆ ಮುಂದೂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿನಿಮಾ ಬಗ್ಗೆ ಇದ್ದ ಈ ತಪ್ಪು ಗ್ರಹಿಕೆ ಈ ವರ್ಷ ಮಾಯವಾಯ್ತು – Kannada News | Movie duration changing year by year

90ರ ದಶಕದಲ್ಲಿ ಅನೇಕ ಸಿನಿಮಾಗಳು ಮೂರು ಗಂಟೆಗಳು ಇದ್ದ ಉದಾಹರಣೆ ಇದೆ. ಆದರೆ, ಕಳೆದ ಒಂದು ದಶಕದ ಸಿನಿಮಾ ನೋಡಿದರೆ ಬಹುತೇಕ ಚಿತ್ರಗಳ ಸಮಯವು ಎರಡು ಗಂಟೆಯಿಂದ ಎರಡೂವರೆ ಗಂಟೆ ಇದೆ. ಇದು ಸ್ಟ್ಯಾಂಡರ್ಡ್ ಎನಿಸಿಬಿಟ್ಟಿದೆ. ಆದರೆ, ಈ ವರ್ಷವು ಇದನ್ನು ಬದಲಿಸೋ ಸೂಚನೆ ಕೊಟ್ಟಿದೆ. ‘ಡೆವಿಲ್’, ‘ಧುರಂಧರ್’ ಸೇರಿದಂತೆ ಹಲವು ಸಿನಿಮಾಗಳು ಈ ನಿಯಮವನ್ನು ಮುರಿದಿವೆ.

ಈಗಿನ ಕಾಲದಲ್ಲಿ ಮನರಂಜನೆಗೆ ನಾನಾ ಆಯ್ಕೆಗಳಿವೆ. ಹೀಗಾಗಿ, ಸಿನಿಮಾ ನೋಡಿಯೇ ಮನರಂಜನೆ ಪಡೆಯಬೇಕು ಎಂಬುದು ಯಾರಿಗೂ ಇಲ್ಲ. ಮೊದಲಿನಷ್ಟು ತಾಳ್ಮೆಯೂ ಜನರಿಗೆ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಕಾರಣದಿಂದಲೇ ಸಿನಿಮಾದ ಅವಧಿಯನ್ನು ಎರಡು ಗಂಟೆಯಿಂದ ಎರಡೂವರೆ ಗಂಟೆಗೆ ಸೀಮಿತ ಮಾಡಲಾಗಿತ್ತು. ಆದರೆ, ಕೆಲವು ನಿರ್ದೇಶಕರು ಧೈರ್ಯ ಮಾಡಿ ಈ ನಿಯಮವನ್ನು ಮುರಿಯುವ ಪ್ರಯತ್ನದಲ್ಲಿ ಇದ್ದಾರೆ ಎನ್ನಬಹುದು.

ಕಳೆದ ವರ್ಷಾಂತ್ಯಕ್ಕೆ ಬಂದ ‘ಪುಷ್ಪ 2’ ಸಿನಿಮಾ 3 ಗಂಟೆ 21 ನಿಮಿಷ ಇತ್ತು. ಈ ವರ್ಷ ಬಂದು ಸೂಪರ್ ಹಿಟ್ ಆದ ‘ಧುರಂಧರ್’ ಚಿತ್ರದ ಅವಧಿ 3 ಗಂಟೆ 36 ನಿಮಿಷ. ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ರನ್ ಟೈಮ್ ಮೂರು ಗಂಟೆಗೆ (2 ಗಂಟೆ 49 ನಿಮಿಷ) ಸನಿಹವಾಗಿದೆ.

ಇದನ್ನೂ ಓದಿ:ಬಾಲಿವುಡ್​​ಗೆ ಎಂಟ್ರಿ ಕೊಡಲಿರುವ ರುಕ್ಮಿಣಿ ವಸಂತ್, ನಟಿ ಹೇಳಿದ್ದೇನು?

‘ಧುರಂಧರ್’ ಸಿನಿಮಾದ ರನ್​ ಟೈಮ್ ಚಿತ್ರಕ್ಕೆ ಮುಳುವಾಗಬಹುದು ಎನ್ನಲಾಗಿತ್ತು. ಆದರೆ, ಈ ಸಿನಿಮಾ 400+ ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನ್ಲಿ ಸಾವಿರ ಕೋಟಿ ರೂಪಾಯಿ ಸಮೀಪಿಸುತ್ತಿದೆ. ಹೀಗಾಗಿ, ರನ್​ ಟೈಮ್ ಮುಖ್ಯವಾಗೋದಿಲ್ಲ.

‘ರಾಜ ಸಾಬ್’ ಹಾಗೂ ‘ಜನ ನಾಯಗನ್’ ಅವಧಿ ಕೂಡ ಮೂರು ಗಂಟೆ ಮೀರಿಸಿದೆ. ‘ರಾಜಾ ಸಾಬ್ ’ 3 ಗಂಟೆ 10 ನಿಮಿಷ ಹಾಗೂ ಜನ ನಾಯಗನ್ 3 ಗಂಟೆ 5 ನಿಮಿಷ ಇದೆ. ಹೀಗಾಗಿ, ರನ್ ಟೈಮ್ ಮುಖ್ಯವಾಗುವುದಿಲ್ಲ ಎಂಬುದನ್ನು ಜನರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಈ ಬದಲಾವಣೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version