ಬಿಎಸ್​ವೈ ಕೈ ಹಿಡಿದು ಮಾತನಾಡಿಸಿದ ನರೇಂದ್ರ ಮೋದಿ! – Kannada News | Prime Minister Narendra Modi Receives Grand Welcome in Bengaluru; Greets BSY with a warm Handshake

ಬೆಂಗಳೂರು, ಮೇ 10: ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯ 70ನೇ ಜನ್ಮೋತ್ಸವ ಹಾಗೂ ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದು, ಅಪಾರ ಉತ್ಸಾಹ ಮತ್ತು ಘೋಷಣೆಗಳೊಂದಿಗೆ ಭವ್ಯ ಸ್ವಾಗತ ಪಡೆದಿದ್ದಾರೆ. ಈ ವೇಳೆ ಮೋದಿ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪನವರ ಕೈ ಹಿಡಿದು ಮಾತನಾಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಔಟ್ ಆಗಲು ಕಾರಣವಾಯ್ತು ಆ ಒಂದು ‘ಸಿಗ್ನಲ್’ – Kannada News | Ashish Nehra’s ‘Masterstroke’ Silences Vaibhav Sooryavanshi

IPL 2026: ಕ್ರಿಕೆಟ್ ಎಂಬುದು ಕೇವಲ ದೈಹಿಕ ಬಲದ ಆಟವಲ್ಲ, ಅದು ಬುದ್ಧಿವಂತಿಕೆಯ ಚದುರಂಗದಾಟ ಎಂಬುದನ್ನು ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೊಹಮ್ಮದ್ ಸಿರಾಜ್ ಅವರ ಓವರ್‌ನಲ್ಲಿ ರನ್ ಮಳೆ ಹರಿಸುತ್ತಿದ್ದ ವೈಭವ್ ಸೂರ್ಯವಂಶಿಯನ್ನು ಕಟ್ಟಿಹಾಕಲು ಡಗೌಟ್‌ನಿಂದ ನೆಹ್ರಾ ನೀಡಿದ ಒಂದು ಸಣ್ಣ ‘ಮಾಸ್ಟರ್‌ಸ್ಟ್ರೋಕ್’ ಸಿಗ್ನಲ್, ಇಡೀ ಪಂದ್ಯದ ಚಿತ್ರಣ ಬದಲಿಸಿತು.

ಹೌದು, ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, 230 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊಹಮ್ಮದ್ ಸಿರಾಜ್ ಎಸೆದ ಮೂರನೇ ಓವರ್‌ನಲ್ಲಿ ವೈಭವ್ ಒಂದು ಸಿಕ್ಸರ್ ಮತ್ತು ಮೂರು ಸತತ ಬೌಂಡರಿಗಳನ್ನು ಬಾರಿಸಿ ಸಿರಾಜ್‌ರನ್ನು ಒತ್ತಡಕ್ಕೆ ಸಿಲುಕಿಸಿದ್ದರು.

ಅಲ್ಲದೆ ಕೇವಲ 16 ಎಸೆತಗಳಲ್ಲಿ 36 ರನ್ ಗಳಿಸಿದ್ದ ವೈಭವ್ ಆಟ ನೋಡಿ ಅನುಭವಿ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಕಗಿಸೊ ರಬಾಡ ಕೂಡ ಅಸಹಾಯಕರಾಗಿ ನಿಂತಿದ್ದರು. ಇತ್ತ ಸಿರಾಜ್ ಅವರ ಮುಖದಲ್ಲಿನ ಅಸಹಾಯಕತೆಯನ್ನು ಗಮನಿಸಿದ ಆಶಿಶ್ ನೆಹ್ರಾ ಒಂದು ಸಿಗ್ನಲ್ ನೀಡಿದ್ದಾರೆ.

ನೆಹ್ರಾ ಅವರ ಆ ಒಂದು ಸಿಗ್ನಲ್:

ವೈಭವ್ ಆರ್ಭಟ ಮುಂದುವರೆಯುತ್ತಿದ್ದಂತೆ ಡಗೌಟ್‌ನಲ್ಲಿದ್ದ ಗುಜರಾತ್ ಟೈಟಾನ್ಸ್ ಕೋಚ್ ಆಶಿಶ್ ನೆಹ್ರಾ ಅವರು ಮೈದಾನದಲ್ಲಿದ್ದ ಸಿರಾಜ್‌ಗೆ ಕೈ ಸನ್ನೆ ಮಾಡಿ ವಿಶೇಷ ಸೂಚನೆಯೊಂದನ್ನು ನೀಡಿದರು. ಅದರಂತೆ ಮೊಹಮ್ಮದ್ ಸಿರಾಜ್ ವೈಭವ್‌ಗೆ ಶಾರ್ಟ್ ಬಾಲ್ ಬೌನ್ಸರ್​ ಎಸೆದಿದ್ದಾರೆ.

146.6 ಕಿ.ಮೀ ವೇಗದಲ್ಲಿ ಬಂದ ಮಾರಕ ಬೌನ್ಸರ್ ಅನ್ನು ವೈಭವ್  ಪುಲ್ ಮಾಡಲು ಪ್ರಯತ್ನಿಸಿ ವಿಫಲರಾದರು. ಚೆಂಡು ಬ್ಯಾಟ್‌ನ ಎಡ್ಜ್​ಗೆ ತಾಗಿ ಅರ್ಶದ್ ಖಾನ್ ಕೈಸೇರಿತು. ಅಲ್ಲಿಗೆ ವೈಭವ್ ಸೂರ್ಯವಂಶಿಯ ಇನಿಂಗ್ಸ್ ಕೂಡ ಕೊನೆಗೊಂಡಿತು.

ಇದೀಗ ವೈಭವ್ ಸೂರ್ಯವಂಶಿಗಾಗಿ ಆಶಿಶ್ ನೆಹ್ರಾ ರೂಪಿಸಿದ್ದ ಮಾಸ್ಟರ್ ಪ್ಲ್ಯಾನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂದ್ಯದ ಫಲಿತಾಂಶ:

ಈ ಪಮದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 229 ರನ್​ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 16.3 ಓವರ್​ಗಳಲ್ಲಿ 152 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 77 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಶುಭ್​ಮನ್ ಗಿಲ್ ಪಡೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

Source link

Hindu Tradition: ವಾರಕ್ಕೊಮ್ಮೆಯಾದರೂ ದೇವರಿಗೆ ಕೊಬ್ಬರಿ ಎಣ್ಣೆ ದೀಪ ಹಚ್ಚಿ; ಪ್ರಯೋಜನ ಸಾಕಷ್ಟಿವೆ – Kannada News | Hindu Tradition: The Spiritual Significance and Benefits of Coconut Oil Lamps in Hindu Traditions

ಕೊಬ್ಬರಿ ಎಣ್ಣೆಯಿಂದ ದೀಪImage Credit source: Pinterest

ಹಿಂದೂ ಸಂಸ್ಕೃತಿಯಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ. ಅದರಲ್ಲೂ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಬೆಳಗಿಸುವುದರಿಂದ ಹಲವು ಶುಭ ಫಲಗಳು ದೊರೆಯುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಮಹಾಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹದ ಮುಂದೆ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ, ತೆಂಗಿನಕಾಯಿ ಮತ್ತು ಸಕ್ಕರೆಯ ನೈವೇದ್ಯ ಮಾಡಿ, ಸಕ್ಕರೆಗೆ ತುಪ್ಪ ಬೆರೆಸಿ ಪ್ರಸಾದ ಮಾಡಿದರೆ ಮನೆಯಲ್ಲಿ ಶುಭ ಕಾರ್ಯಗಳು ಬೇಗ ನಡೆಯುತ್ತವೆ. ಕುಲದೇವತೆಯ ಫೋಟೋ ಮುಂದೆ ಮೂರು ದಿನಗಳ ಕಾಲ ಅಖಂಡವಾಗಿ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ಮನೆಯ ಕಲಹಗಳು, ಕೋಪತಾಪಗಳು ನಿವಾರಣೆಯಾಗಿ ಸಮೃದ್ಧಿ ನೆಲೆಸುತ್ತದೆ. ಹೋಮಗಳಲ್ಲಿ ಹಸಿರು ರೇಷ್ಮೆ ವಸ್ತ್ರವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಅರ್ಪಿಸಿದರೆ ಧನ ಯೋಗ ಪ್ರಾಪ್ತವಾಗುತ್ತದೆ.

ಅರಳಿ ಮರದ ಬಳಿ ಕೊಬ್ಬರಿ ಎಣ್ಣೆ ದೀಪ:

ಅರಳಿ ಮರದ ಬಳಿ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ದಾಂಪತ್ಯ ಕಲಹಗಳು ದೂರವಾಗಿ ಅನ್ಯೋನ್ಯತೆ ಹೆಚ್ಚುತ್ತದೆ. ಮನೆಯ ಈಶಾನ್ಯ ಮೂಲೆಯಲ್ಲಿ 48 ಗಂಟೆಗಳ ಕಾಲ ಸತತವಾಗಿ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ಸಾಲಬಾಧೆ ನಿವಾರಣೆಯಾಗುತ್ತದೆ. ಶನಿವಾರದಂದು ವೆಂಕಟೇಶ್ವರ ಸ್ವಾಮಿಯ ಮುಂದೆ ಕೊಬ್ಬರಿ ಎಣ್ಣೆ ದೀಪ ಹಚ್ಚಿ, ಅವಲಕ್ಕಿ ಮತ್ತು ಬೆಲ್ಲವನ್ನು ನೈವೇದ್ಯವಾಗಿ ಅರ್ಪಿಸಿದರೆ ಭೂ ಕಲಹಗಳು, ಕಾನೂನು ವಿಷಯಗಳಲ್ಲಿ ಶುಭವಾಗುತ್ತದೆ ಮತ್ತು ಅಪವಾದಗಳಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಶಿವನ ವಿಗ್ರಹದ ಮುಂದೆ ಕೊಬ್ಬರಿ ಎಣ್ಣೆ ದೀಪ :

ಪ್ರತಿ ಸೋಮವಾರ ಸಂಜೆ ಸಂಧ್ಯಾಕಾಲದಲ್ಲಿ ಶಿವಾಲಯದಲ್ಲಿ ಅಥವಾ ಮನೆಯಲ್ಲಿರುವ ಶಿವನ ವಿಗ್ರಹದ ಮುಂದೆ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ಆಸೆ-ಆಕಾಂಕ್ಷೆಗಳು ಈಡೇರುತ್ತವೆ. ಪ್ರತಿ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಕೊಬ್ಬರಿ ಎಣ್ಣೆ ದೀಪದಿಂದ ಆರತಿ ಮಾಡಿದರೆ ಸಂತಾನ ಫಲ ಲಭಿಸುತ್ತದೆ. ಅಮಾವಾಸ್ಯೆಯಂದು ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಪಿತೃಗಳಿಗೆ ಸಂತೃಪ್ತಿ ದೊರೆತು ಎಲ್ಲ ವಿಧದಿಂದಲೂ ಶುಭವಾಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕೊಬ್ಬರಿ ಎಣ್ಣೆ ದೀಪವನ್ನು ವಾರಕ್ಕೊಮ್ಮೆಯಾದರೂ, ವಿಶೇಷವಾಗಿ ಮಂಗಳವಾರದಂದು ಹಚ್ಚುವುದು ಒಳಿತೆಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಪಂದ್ಯದಲ್ಲೇ ಶತಮಾನದ ವಿಶ್ವ ದಾಖಲೆ ಬರೆದ ಯುವ ವೇಗಿ! – Kannada News | 18 Year Old Norton Smashes 100 Year Cricket Record

ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೇವಲ 18 ವರ್ಷದ ಯುವ ವೇಗಿ ಟಾಮ್ ನಾರ್ಟನ್ ತಮ್ಮ ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ 100 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ವೇಲ್ಸ್​ನ ಸೋಫಿಯಾ ಗಾರ್ಡನ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಸಮರ್‌ಸೆಟ್ ವಿರುದ್ಧದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಗ್ಲಾಮೋರ್ಗನ್ ಪರ ಕಣಕ್ಕಿಳಿದ ನಾರ್ಟನ್, ತಮ್ಮ ಮಾರಕ ದಾಳಿಯಿಂದ ಎದುರಾಳಿ ಪಡೆಯನ್ನು ಕಟ್ಟಿಹಾಕಿದ್ದಾರೆ.

ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಅಬರ್ಗವೆನ್ನಿ ಮೂಲದ ಟಾಮ್ ನಾರ್ಟನ್ ಐದನೇ ಓವರ್‌ನಲ್ಲಿ ಸತತ ಮೂರು ಎಸೆತಗಳಲ್ಲಿ ಮೂವರು ಬ್ಯಾಟರ್‌ಗಳನ್ನು ಔಟ್ ಮಾಡಿದರು.

  1.  ಜೇಮ್ಸ್ ರೇವ್: ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
  2. . ಟಾಮ್ ಲ್ಯಾಮ್ಮನ್ಬಿ: ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
  3.  ಆರ್ಚಿ ವಾನ್: ಎಲ್‌ಬಿಡಬ್ಲ್ಯೂ  ಆಗಿ ಹೊರ ನಡೆದರು.

ಈ ಮೂರು ವಿಕೆಟ್​ಗಳೊಂದಿಗೆ ಟಾಮ್ ನಾರ್ಟನ್ ಶತಮಾನದ ಬಳಿಕ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಶತಮಾನದ ದಾಖಲೆ ಉಡೀಸ್:

  • ಅತಿ ಕಿರಿಯ ಆಟಗಾರ: ಪ್ರಥಮ ದರ್ಜೆ ಪಂದ್ಯದ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ 18 ವರ್ಷದ ಟಾಮ್ ನಾರ್ಟನ್ ಪಾತ್ರರಾಗಿದ್ದಾರೆ.
  •  100 ವರ್ಷಗಳ ಕಾಯುವಿಕೆ ಅಂತ್ಯ: ಇಂಗ್ಲಿಷ್ ಕ್ರಿಕೆಟ್ ಇತಿಹಾಸದಲ್ಲಿ 1925ರ ನಂತರ ಪದಾರ್ಪಣೆಯ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ ಇವರಾಗಿದ್ದಾರೆ.
  • ಕೌಂಟಿ ಇತಿಹಾಸ: ಕೌಂಟಿ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 1906ರ ಬಳಿಕ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಕೀರ್ತಿ ಇವರದ್ದಾಗಿದೆ.

ಪಂದ್ಯದ ಮುಖ್ಯಾಂಶ (2ನೇ ದಿನದಾಟದ ಅಂತ್ಯಕ್ಕೆ):

  • ಸಮರ್‌ಸೆಟ್ ಮೊದಲ ಇನಿಂಗ್ಸ್: 354/10 (ಟಾಮ್ ಅಬೆಲ್ 86, ಜೋಷ್ ಥಾಮಸ್ 71; ರಿಯಾನ್ ಹ್ಯಾಡ್ಲಿ 3/72)
  • ಗ್ಲಾಮೋರ್ಗನ್ ಮೊದಲ ಇನಿಂಗ್ಸ್: 229/10 (ಆಸ ಟ್ರೈಬ್ 131*, ಕಿರಣ್ ಕಾರ್ಲ್‌ಸನ್ 41; ಕ್ರೇಗ್ ಓವರ್‌ಟನ್ 3/43)
  • ಸಮರ್‌ಸೆಟ್ ಎರಡನೇ ಇನಿಂಗ್ಸ್: 32/6 (ಟಾಮ್ ಅಬೆಲ್ 14*; ಟಾಮ್ ನಾರ್ಟನ್ 4/22)
  • ಒಟ್ಟಾರೆ ಮುನ್ನಡೆ: ಸಮರ್‌ಸೆಟ್ ತಂಡವು ಪ್ರಸ್ತುತ 157 ರನ್‌ಗಳ ಮುನ್ನಡೆಯಲ್ಲಿದೆ.

ಇದನ್ನೂ ಓದಿ: IPL 2026: RCB vs MI ಪಂದ್ಯಕ್ಕೆ 5 ಆಟಗಾರರು ಅಲಭ್ಯ

ದ್ವಿತೀಯ ದಿನದಾಟದ ಅಂತ್ಯಕ್ಕೆ ಸಮರ್​ಸೆಟ್ ತಂಡವು 157 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಆದರೆ ಟಾಮ್ ನಾರ್ಟನ್ ಅವರ ಮಾರಕ ದಾಳಿಗೆ ತತ್ತರಿಸಿರುವ ಸಮರ್​ಸೆಟ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 32 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿದೆ. ಹೀಗಾಗಿ ಮೂರನೇ ದಿನದಾಟದಲ್ಲಿ ಗ್ಲಾಮೋರ್ಗನ್ ತಂಡವು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

Source link

ವಿಜಯ್ ಪ್ರಮಾಣವಚನ: ನಗುನಗುತ್ತಾ ಆಗಮಿಸಿದ ನಟಿ ತ್ರಿಶಾ ವಿಡಿಯೋ ವೈರಲ್ – Kannada News | Actor Vijay to take oath as Tamil Nadu CM Trisha Krishnan attends Swearing in Ceremony at Chennai

ನಟ ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಮೇ 10) ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದರಿಂದ ಅವರ ಆಪ್ತರ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ನಟಿ ತ್ರಿಶಾ ಕೃಷ್ಣನ್ (Trisha Krishnan) ಆಗಮಿಸಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರೊಂದಿಗೆ ನಟಿ ತ್ರಿಶಾ ಆತ್ಮೀಯ ಸಂಬಂಧ ಹೊಂದಿದ್ದಾರೆ. ಪ್ರಮಾಣವಚನ ಸ್ವೀಕಾರ (Vijay Oath Ceremony) ಸಮಾರಂಭಕ್ಕೂ ಮುನ್ನವೇ ಅವರು ಕ್ರೀಡಾಂಗಣಕ್ಕೆ ಆಗಮಿಸಿದ್ದು, ಈ ಕ್ಷಣದ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ. ಕಳೆದ ಆರು ದಶಕಗಳಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಹೊರತುಪಡಿಸಿ ಮೂರನೇ ಪಕ್ಷದ ಸರ್ಕಾರವೊಂದು ಅಧಿಕಾರಕ್ಕೆ ಬರುತ್ತಿರುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಬೆಂಬಲಿಗರು ಜಮಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾದಪ್ಪನ ಬೆಟ್ಟದಲ್ಲಿ ನರಭಕ್ಷಕನ ಅಟ್ಟಹಾಸ: ನಾಗಮಲೆ ಹಾದಿಯಲ್ಲಿ ಬಾಲಕನನ್ನೇ ಕೊಂದು ತಿಂದ ಚಿರತೆ! – Kannada News | Man eating Leopard Kills Boy in MM Hills: Terror at Nagamale, Chamarajanagar

ಚಾಮರಾಜನಗರ, ಮೇ 10: ಜಿಲ್ಲೆಯ ಪವಿತ್ರ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ನರಭಕ್ಷಕ ಚಿರತೆಯ (Cheetah) ಅಟ್ಟಹಾಸ ಹೆಚ್ಚಾಗಿದೆ. ಇದೇ ಜನವರಿ ಮತ್ತು ಫೆಬ್ರವರಿಯಲ್ಲಿ ಚಿರತೆ ದಾಳಿಗೆ ಎರಡು ಜೀವಗಳು ಬಲಿಯಾಗಿದ್ದವು. ಈಗ ಮತ್ತೊಮ್ಮೆ ಅಂತದ್ದೇ ಭೀಕರ ಘಟನೆ ಸಂಭವಿಸಿದ್ದು, ಬೆಂಗಳೂರು ಮೂಲದ ಎಂಟು ವರ್ಷದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಈ ಘಟನೆಯು ದೇವರ ದರ್ಶನಕ್ಕೆ ತೆರಳುವವರಲ್ಲಿ ಭಯ ಹುಟ್ಟಿಸಿದೆ.

ಬಾಲಕನನ್ನು ಕೊಂಡೊಯ್ದ ಚಿರತೆ!

ಹರ್ಷಿತ್ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ಕೈಗೊಂಡಿದ್ದ. ಇಂದು ಮುಂಜಾನೆ ಸುಮಾರು 7 ಗಂಟೆಯ ವೇಳೆಗೆ ದಟ್ಟ ಅರಣ್ಯದ ಹಾದಿಯಲ್ಲಿ ಸಾಗುತ್ತಿದ್ದಾಗ, ಪೊದೆಯಲ್ಲಿ ಹೊಂಚು ಹಾಕಿದ್ದ ಚಿರತೆ ಕ್ಷಣಾರ್ಧದಲ್ಲಿ ಬಾಲಕನ ಮೇಲೆ ದಾಳಿ ಮಾಡಿ ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಕುಟುಂಬಸ್ಥರು ಕಿರುಚಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಬಾಲಕನ ಮೃತದೇಹ ಪತ್ತೆಯಾಗಿದ್ದು, ಚಿರತೆಯು ಬಾಲಕನ ರಕ್ತ ಹೀರಿ ದೇಹದ ಕೆಲವು ಭಾಗಗಳನ್ನು ಭಕ್ಷಿಸಿರುವುದು ಕಂಡುಬಂದಿದೆ.

ಇದನ್ನೂ ಓದಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಭಕ್ಷಕ ಚಿರತೆಯ ಅಟ್ಟಹಾಸ

ಚಾಮರಾಜನಗರ ಜಿಲ್ಲೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಭಾಗಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೊಸದೇನಲ್ಲ. ಇದೇ ಜನವರಿ 21ರಂದು ಮಂಡ್ಯ ಜಿಲ್ಲೆಯ ಚೀರನಹಳ್ಳಿಯ ಪ್ರವೀಣ್ ಎಂಬ ಭಕ್ತ ತಾಳುಬೆಟ್ಟದ ಬಳಿ ಚಿರತೆ ದಾಳಿಗೆ ಬಲಿಯಾಗಿದ್ದರು. ಇದಾದ ಬೆನ್ನಲ್ಲೇ ಫೆಬ್ರವರಿಯಲ್ಲಿ ಚನ್ನಪಟ್ಟಣದ ಶ್ರೇಯಸ್ (8) ಎಂಬ ಬಾಲಕನ ಮೇಲೆಯೂ ಇದೇ ಮಾರ್ಗದಲ್ಲಿ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಆತ ಬದುಕುಳಿದಿದ್ದ. ಈ ಹಿಂದೆ ಟಿ. ನರಸೀಪುರ ಮತ್ತು ಹನೂರು ಭಾಗಗಳಲ್ಲಿ ಸರಣಿ ಸಾವುಗಳು ಸಂಭವಿಸಿದ್ದು, ಅರಣ್ಯ ಇಲಾಖೆ ‘ಲೆಪರ್ಡ್ ಟಾಸ್ಕ್ ಫೋರ್ಸ್’ ಮೂಲಕ ಕಾರ್ಯಾಚರಣೆ ನಡೆಸಿ ನರಭಕ್ಷಕ ಚಿರತೆಗಳನ್ನು ಸೆರೆಹಿಡಿದಿತ್ತು. ಇದೆಲ್ಲದರ ಬೆನ್ನಲ್ಲೇ ಮತ್ತೊಮ್ಮೆ ಇದೇ ಮಾರ್ಗದಲ್ಲಿ ಚಿರತೆ ಬಾಲಕನನ್ನು ಭಕ್ಷಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯರ ಆಕ್ರೋಶ

ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಮಲೆ ಮಹದೇಶ್ವರ ವನ್ಯಜೀವಿಧಾಮದ ಅಧಿಕಾರಿಗಳು ಸೂಕ್ತ ರಕ್ಷಣೆ ನೀಡಿಲ್ಲ ಎಂದು ಸ್ಥಳೀಯರು ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಈ ಮಾರ್ಗದಲ್ಲಿ ಪಾದಯಾತ್ರೆಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi in Bengaluru Live: ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ನೇರ ಪ್ರಸಾರ – Kannada News | PM Modi Bengaluru Visit LIVE: PM Addresses Public at HAL Airport; To Attend Art of Living Event Today

ಬೆಂಗಳೂರು, ಮೇ 10: ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ 70ನೇ ಜನ್ಮೋತ್ಸವ ಹಾಗೂ ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಹೆಚ್​ಎಎಲ್ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ನೇರ ಪ್ರಸಾರ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Happy Mother’s Day 2026: ಮಮತೆಯ ಮಡಿಲು, ತ್ಯಾಗದ ಒಡಲು; ಇಲ್ಲಿವೆ ಅಮ್ಮಂದಿರ ದಿನದ ಅರ್ಥಪೂರ್ಣ ಶುಭ ಸಂದೇಶಗಳು – Kannada News | Happy Mother’s Day 2026: Here are some meaningful Mother’s Day messages to wish your mom

ತಾಯಂದಿರ ದಿನದ ಶುಭಾಶಯಗಳುImage Credit source: Getty Images

ಈ ಜಗತ್ತಿನಲ್ಲಿ ತಾಯಿಯ (Mother) ನಿಷ್ಕಲ್ಮಶ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಆಕೆ ತನ್ನ ಕುಟುಂಬ ಮತ್ತು ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಬೇಕಾದರೂ ಸಿದ್ಧಳಿರುತ್ತಾಳೆ, ತಾನು ನೋವುಂಡರೂ ತನ್ನ ಮಕ್ಕಳಿಗೆ ಬರೀ ಖುಷಿಯನ್ನೇ ಹಂಚುತ್ತಾಳೆ.  ಅದಕ್ಕಾಗಿಯೇ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದು ಹೇಳುವುದು. ಇಂತಹ ದೈವಸ್ವರೂಪಿ ತಾಯಿಗೆ ಗೌರವವನ್ನು ಸಲ್ಲಿಸಲು ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 10 ಅಂದರೆ ಇಂದು ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಈ ಶುಭ ಸಂದರ್ಭದಲ್ಲಿ ನಿಮ್ಮ ತಾಯಿಗೆ ಧನ್ಯವಾದ ತಿಳಿಸಲು, ಶುಭಾಶಯವನ್ನು ಕೋರಲು ಬಯಸಿದರೆ, ಇಲ್ಲಿವೆ ನಿಮಗಾಗಿ ಅರ್ಥಪೂರ್ಣ ಶುಭ ಸಂದೇಶಗಳು.

ತಾಯಂದಿರ ದಿನದಂದು ನಿಮ್ಮ ಅಮ್ಮನಿಗೆ ಈ ರೀತಿ ಶುಭಾಶಯ ಕೋರಿ:

  • ಮಮತೆಯ ಮಡಿಲು, ತ್ಯಾಗದ ಒಡಲು ಆಗಿರುವ ದೈವಸ್ವರೂಪಿಯಾದ ಎಲ್ಲಾ ತಾಯಂದಿರಿಗೂ ಮದರ್ಸ್‌ ಡೇ ಶುಭಾಶಯಗಳು.
  • ತಾಯಿ ಪ್ರೀತಿಗಿಂತ ಶ್ರೇಷ್ಠವಾದ ಪ್ರೀತಿಯಿಲ್ಲ, ತಾಯಿಗಿಂತ ದೊಡ್ಡ ದೇವರಿಲ್ಲ. ಎಲ್ಲಾ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.
  • ನನ್ನಿರುವಿಕೆಗೆ ಕಾರಣ ನೀವು, ನನ್ನ ಕನಸುಗಳಿಗೆ ಪ್ರೇರಣೆ ನೀವು, ನಿಮಗೆ ತಾಯಂದಿರ ದಿನದ ಶುಭಾಶಯಗಳು ಅಮ್ಮಾ.
  • ಈ ಜಗತ್ತುನಲ್ಲಿ ಕಣ್ಣಿಗೆ ಕಾಣುವ ದೇವರೆಂದರೆ ಅದು ಅಮ್ಮ… ನನ್ನ ಪಾಲಿನ ಶಕ್ತಿ ದೇವತೆಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಹ್ಯಾಪಿ ಮದರ್ಸ್‌ ಡೇ, ಕಣ್ಣಿಗೆ ಕಾಣದ ದೇವರಲ್ಲಿ ಭಕ್ತಿ, ನಂಬಿಕೆ ಇಟ್ಟಿರುವಾಗ, ಕಣ್ಣಿಗೆ ಕಾಣುವ ದೇವಯೆ ನೀನು, ನಿನ್ನ ಮೇಲೆ ನನ್ನ ಪ್ರಾಣನೇ ಇಟ್ಟಿರುವೆ ಅಮ್ಮ…
  • ಈ ಪ್ರಪಂಚದಲ್ಲಿ ಒಂದಿಷ್ಟೂ ಸಂದೇಹ ಪಡದೆ ನಂಬಬಹುದಾದ ಜೀವ ಎಂದರೆ ಅದು ನೀವು, ನೀವು ಮಾತ್ರ ಅಮ್ಮಾ… ನಿಮ್ಮ ಪಡೆದ ನಾನೇ ಅದೃಷ್ಟವಂತ. ನನ್ನ ಪಾಲಿನ ಈ ಅದೃಷ್ಟ ದೇವತೆಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಅತ್ತಾಗ ಕಣ್ಣೀರು ಒರೆಸಿದ ದೇವತೆ, ಬಿದ್ದಾಗ ಎತ್ತಿ ಮುನ್ನಡೆಸಿದ ಮಾತೆ.. ಅಮ್ಮಾ ನಿಮಗೆ ತಾಯಂದಿರ ದಿನದ ಶುಭಾಶಯಗಳು.
  • ಅಮ್ಮನೇ ಅದ್ಭುತ ಪ್ರಪಂಚ. ಅಮ್ಮನ ಪ್ರೀತಿಯೇ ಅಮೃತ, ಎಲ್ಲಾ ಅಮ್ಮಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.
  • ನಿಸ್ವಾರ್ಥ ಪ್ರೀತಿ, ನಿರ್ಮಲ ಮನಸ್ಸಿನ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಈ ಜಗತ್ತಿನ ಎಲ್ಲಾ ಅಮ್ಮಂದಿರಿಗೂ ತಾಯಂದಿರ ದಿನದ ಶುಭಾಶಯಗಳು.
  • ಪ್ರೀತಿಯಲ್ಲಿ ಆಗಸ, ತಾಳ್ಮೆಯಲ್ಲಿ ಭೂಮಿ, ಮಮಕಾರದಲ್ಲಿ ಕಡಲು ನೀನು. ಹ್ಯಾಪಿ ಮದರ್ಸ್‌ ಡೇ ಅಮ್ಮ.
  • ಅಮ್ಮಾ… ನನೆ ಬದುಕಿನ ಪಾಠ ಕಲಿಸಿದ ಗುರು ನೀವು, ಸರಿ ದಾರಿ ತೋರಿದ ಬೆಳಕು ನೀವು. ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು.
  • ದೇವರು ನನಗೆ ಕೊಟ್ಟ ಅತಿ ದೊಡ್ಡ ಕೊಡುಗೆ ನೀವು ಅಮ್ಮಾ… ಹ್ಯಾಪಿ ಮದರ್ಸ್‌ ಡೇ
  • ನೀವು ನನಗೆ ಬದುಕು ನೀಡಿದ್ದೀರಿ. ನಾನೆಂದೂ ನಿಮಗೆ ಋಣಿ, ನನ್ನ ಬದುಕು ರೂಪಿಸಿದ ನಿಮಗೆ ಧನ್ಯವಾದ, ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಅಮ್ಮಾ.. ನೀವೇ ನನ್ನ ಗುರಿ, ನೀವೇ ನನ್ನ ಸ್ನೇಹಿತೆ, ನೀವೇ ನನ್ನ ಬದುಕಿನ ದಾರಿ, ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು.
  • ಇದು ನಿಮ್ಮ ದಿನ, ನಿಮ್ಮ ತ್ಯಾಗ, ನಿಷ್ಕಲ್ಮಶ ಪ್ರೀತಿ, ಶ್ರಮಕ್ಕೆ ಗೌರವ ಸಲ್ಲಿಸಲು ಇರುವ ದಿನ. ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Thalapathy Vijay Oath Taking Live: ತಮಿಳುನಾಡಿನ ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ ನೇರಪ್ರಸಾರ – Kannada News | Thalapathy Vijay Swearing in Ceremony Live: Actor Vijay Takes Oath as Tamil Nadu CM Today

ಚೆನ್ನೈ, ಮೇ 10: ತಮಿಳು ನಾಡು ರಾಜಕಾರಣದಲ್ಲಿ ಇಂದು ಹೊಸ ಅಧ್ಯಾಯ ಆರಂಭವಾಗಿದೆ. ತಮಿಳಗ ವೆಟ್ರಿ ಕಳಗಂ (TVK) ನಾಯಕ, ಜನಪ್ರಿಯ ನಟ ವಿಜಯ್ (C. ಜೋಸೆಫ್ ವಿಜಯ್) ಅವರು ಇಂದು ಬೆಳಿಗ್ಗೆ 10 ಗಂಟೆಗೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.

ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸುತ್ತಿದ್ದಾರೆ. ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ) ಸೇರಿದಂತೆ ವಿವಿಧ ಪಕ್ಷಗಳ ಬೆಂಬಲದೊಂದಿಗೆ 120 ಶಾಸಕರ ಬಲ ಹೊಂದಿರುವ ವಿಜಯ್, 1967ರ ನಂತರ ಡಿಎಂಕೆ ಮತ್ತು ಎಐಎಡಿಎಂಕೆ ಹೊರತಾಗಿ ಅಧಿಕಾರ ಹಿಡಿದ ಮೊದಲ ನಾಯಕ ಎಂಬ ಇತಿಹಾಸ ಬರೆದಿದ್ದಾರೆ. ಈ ಅದ್ಧೂರಿ ಸಮಾರಂಭದ ನೇರಪ್ರಸಾರ ಇಲ್ಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಐಪಿಎಲ್​​ ಬಗ್ಗೆ ಮಾತನಾಡಲು ಎಲ್ಲರಿಗೂ ಭಯ! ಕುಟುಕಿದ ಕುಕ್ – Kannada News | IPL Bosses Silence Critics: Alastair Cook’s Explosive Claim

ಕ್ರಿಕೆಟ್ ಜಗತ್ತಿನ ಅತಿದೊಡ್ಡ ಶ್ರೀಮಂತ ಲೀಗ್ ಐಪಿಎಲ್ (IPL) ಬಗ್ಗೆ ಸಣ್ಣ ಟೀಕೆ ಮಾಡಲು ಕೂಡ ಎಲ್ಲರೂ ಹೆದರುತ್ತಾರೆ! ಹೀಗೆಂದು ಹೇಳಿರುವುದು ಬೇರಾರೂ ಅಲ್ಲ, ಇಂಗ್ಲೆಂಡ್‌ನ ಮಾಜಿ ನಾಯಕ ಸರ್ ಅಲೆಸ್ಟೇರ್ ಕುಕ್. ಯುವ ಆಟಗಾರ ಜೇಕಬ್ ಬೆಥೆಲ್ ವಿಚಾರದಲ್ಲಿ ಕೆವಿನ್ ಪೀಟರ್ಸನ್ ಮತ್ತು ಕುಕ್ ನಡುವೆ ಶುರುವಾದ ಚರ್ಚೆ, ಈಗ ಐಪಿಎಲ್‌ನ ‘ಹಣದ ಬಲ’ ಮತ್ತು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಕುರಿತಾದ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.

ಜೇಕಬ್ ಬೆಥೆಲ್ ಅವರ ಐಪಿಎಲ್ ಭವಿಷ್ಯದ ಕುರಿತು ಇಂಗ್ಲೆಂಡ್‌ನ ಮಾಜಿ ದಿಗ್ಗಜರಾದ ಅಲೆಸ್ಟೇರ್ ಕುಕ್ ಮತ್ತು ಕೆವಿನ್ ಪೀಟರ್ಸನ್ ನಡುವಿನ ವಾಕ್ಸಮರ ಈಗ ಹೊಸ ರೂಪ ಪಡೆದುಕೊಂಡಿಡ್ದು, ಐಪಿಎಲ್ ಬಗ್ಗೆ ಯಾರೂ ಕೂಡ ಬಹಿರಂಗವಾಗಿ ಕೆಟ್ಟದಾಗಿ ಮಾತನಾಡುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ‘ಬಾಸ್‌’ಗಳನ್ನು ಎದುರು ಹಾಕಿಕೊಳ್ಳುವ ಧೈರ್ಯವಿಲ್ಲ ಎಂದು ಕುಕ್ ನೇರವಾಗಿ ಹೇಳಿದ್ದಾರೆ.

ವಿವಾದದ ಹಿನ್ನೆಲೆ ಏನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿರುವ ಇಂಗ್ಲೆಂಡ್‌ನ ಯುವ ಆಟಗಾರ ಜೇಕಬ್ ಬೆಥೆಲ್, ಐಪಿಎಲ್‌ನಲ್ಲಿ ಬೆಂಚ್ ಕಾಯುವ ಬದಲು ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದರೆ ಅವರ ಕೆಂಪು ಚೆಂಡಿನ ಕ್ರಿಕೆಟ್ ಸುಧಾರಿಸುತ್ತಿತ್ತು ಎಂದು ಅಲೆಸ್ಟೇರ್ ಕುಕ್ ಅಭಿಪ್ರಾಯಪಟ್ಟಿದ್ದರು.

ಇದಕ್ಕೆ ಕೆವಿನ್ ಪೀಟರ್ಸನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, “ಕುಕ್ ಅವರಿಗೆ ಐಪಿಎಲ್ ಅನುಭವವೇ ಇಲ್ಲ, ಬೆಥೆಲ್ ವಿಶ್ವದ ಶ್ರೇಷ್ಠ ಆಟಗಾರರೊಂದಿಗೆ ಇರುವುದು ಅವರ ಬೆಳವಣಿಗೆಗೆ ಸಹಕಾರಿ” ಎಂದು ಟೀಕಿಸಿದ್ದರು.

ಕುಕ್ ತಿರುಗೇಟು:

‘ಸ್ಟಿಕ್ ಟು ಕ್ರಿಕೆಟ್’ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಅಲೆಸ್ಟೇರ್ ಕುಕ್, “ಐಪಿಎಲ್ ಒಂದು ಅದ್ಭುತ ಟೂರ್ನಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಯಾರೂ ಕೂಡ ಅದರ ಬಗ್ಗೆ ಸಣ್ಣ ಟೀಕೆಯನ್ನೂ ಮಾಡುವುದಿಲ್ಲ. ಏಕೆಂದರೆ ಅಲ್ಲಿ ಹಣದ ಪ್ರಭಾವ ದೊಡ್ಡದಿದೆ. ಟೀಕೆ ಮಾಡಿದರೆ ಮುಂದಿನ ಬಾರಿ ಒಪ್ಪಂದ ಸಿಗುವುದಿಲ್ಲ ಅಥವಾ ತಮ್ಮ ಮಾಲೀಕರು ಅಸಮಾಧಾನಗೊಳ್ಳುತ್ತಾರೆ ಎಂಬ ಭಯ ಎಲ್ಲರಿಗೂ ಇರುತ್ತದೆ,” ಎಂದು ಕುಕ್, ಕೆವಿನ್ ಪೀಟರ್ಸನ್​​ಗೆ ತಿರುಗೇಟು ನೀಡಿದ್ದಾರೆ.

“ಬೆಥೆಲ್ ಕಳೆದ ಎರಡು ಸೀಸನ್‌ಗಳಲ್ಲಿ ಕೇವಲ ಐದು ಪಂದ್ಯಗಳನ್ನು ಆಡಿದ್ದಾರೆ. ಬದಲಿ ಆಟಗಾರನಾಗಿ ಕೇವಲ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ನೋಡುವುದಕ್ಕಿಂತ, ಮೈದಾನಕ್ಕಿಳಿದು ಪಂದ್ಯಗಳನ್ನು ಆಡುವುದು ಒಬ್ಬ ಯುವ ಆಟಗಾರನಿಗೆ ಹೆಚ್ಚು ಮುಖ್ಯ” ಎಂಬುದು ಕುಕ್ ವಾದ.

“ಐಪಿಎಲ್ ಎನ್ನುವುದು ಎಲ್ಲರೂ ಅಂದುಕೊಂಡಿರುವಷ್ಟು ಪರಿಪೂರ್ಣವಾಗಿಲ್ಲ. ಅಲ್ಲಿನ ವ್ಯವಸ್ಥೆಯ ಬಗ್ಗೆ ಮಾತನಾಡಲು ಜನ ಹಿಂಜರಿಯುತ್ತಾರೆ” ಎಂದು ಅಲೆಸ್ಟೇರ್ ಕುಕ್ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: RCB ತಂಡದ ತವರು ಮೈದಾನ ಬದಲಾಗಲು ಇದುವೇ ಕಾರಣ!

ಬೆಥೆಲ್ ಪ್ರತಿಕ್ರಿಯೆ:

ಇಂಗ್ಲೆಂಡ್ ದಿಗ್ಗಜರಿಬ್ಬರ ವಾಕ್ಸಮರ ನಡುವೆ ಖುದ್ದು ಜೇಕಬ್ ಬೆಥೆಲ್ ಕೂಡ ಪ್ರತಿಕ್ರಿಯಿಸಿದ್ದಾರೆ. ಆರ್​ಸಿಬಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೆಥೆಲ್,  “ಐಪಿಎಲ್‌ನಲ್ಲಿ ಸ್ಟಾರ್ ಆಟಗಾರರೊಂದಿಗೆ ಇರುವುದು ನನ್ನ ವೃತ್ತಿಜೀವನಕ್ಕೆ ಯಾವುದೇ ಹಾನಿ ಮಾಡುವುದಿಲ್ಲ, ಬದಲಾಗಿ ಕಲಿಕೆಗೆ ಸಹಾಯ ಮಾಡುತ್ತದೆ” ಎಂದು  ಹೇಳಿದ್ದಾರೆ.

ಒಟ್ಟಿನಲ್ಲಿ, ಜೇಕಬ್ ಬೆಥೆಲ್ ವಿಚಾರವಾಗಿ ಶುರುವಾದ ಕುಕ್ ಹಾಗೂ ಪೀಟರ್ಸನ್ ನಡುವಣ ಚರ್ಚೆಯು, ಇದೀಗ ಐಪಿಎಲ್‌ನ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎತ್ತುವಂತೆ ಮಾಡಿದೆ. ಅಲೆಸ್ಟೇರ್ ಕುಕ್ ನೀಡಿರುವ ‘ಒಪ್ಪಂದದ ಭಯ’ದ ಕುರಿತಾದ ತೀಕ್ಷ್ಣ ತಿರುಗೇಟಿಗೆ ಕೆವಿನ್ ಪೀಟರ್ಸನ್ ಯಾವ ರೀತಿಯಲ್ಲಿ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Source link

Exit mobile version