ರವಿಚಂದ್ರನ್ ಮೇಲೆ ಅತ್ಯಾ*ರ ಆರೋಪ ಹೊರಿಸಿದ್ದ ನಟಿ ಬಿಂದ್ಯಾ; 3 ದಶಕಗಳ ಬಳಿಕ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ನಡುವೆ ದೊಡ್ಡ ಕಂದಕ ಸೃಷ್ಟಿಸಿತ್ತು. ಹಲವು ವರ್ಷಗಳ ನಂತರ ಆ ಕಹಿ ಘಟನೆಯನ್ನು ನೆನೆದು ನಟಿ ಬಿಂದಿಯಾ ಭಾವುಕರಾಗಿದ್ದಾರೆ. ಅಲ್ಲದೆ ರವಿಚಂದ್ರನ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಇತ್ತೀಚೆಗೆ ರಘುರಾಮ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಿಂದಿಯಾ, ತಪ್ಪು ತಿಳುವಳಿಕೆಯಿಂದ ಈ ರೀತಿ ಆಯಿತು ಎಂದು ಅವರು ಹೇಳಿದ್ದಾರೆ. ‘ಜಾನ್ ತೇರೆ ನಾಮ್’ ಹೆಸರಿನ ಹಿಂದಿ ಸಿನಿಮಾ ಯಶಸ್ಸಿನಲ್ಲಿ ಬಿಂದಿಯಾ ತೇಲುತ್ತಿದ್ದರು. ಇದೇ ಸಮಯದಲ್ಲಿ ಚಿತ್ರಕ್ಕೆ ಹೊಸ ನಾಯಕಿಯ ಹುಡುಕಾಟದಲ್ಲಿದ್ದ ರವಿಚಂದ್ರನ್ ಮತ್ತು ಅವರ ತಂಡ ಮುಂಬೈಗೆ ತೆರಳಿತ್ತು. ಆಗ ಬಿಂದಿಯಾ ಅವರನ್ನು ಭೇಟಿ ಮಾಡಿತ್ತು. ಭಾಷೆಯ ಸಮಸ್ಯೆ ಇದ್ದರೂ, ಉದ್ಯಮದ ಬಗ್ಗೆ ಅಷ್ಟಾಗಿ ತಿಳಿಯದಿದ್ದರೂ ಬಿಂದಿಯಾ ಅವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಸಿನಿಮಾ ತೆರೆಕಂಡು ರವಿಚಂದ್ರನ್-ಬಿಂದಿಯಾ ಜೋಡಿಯನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡರು.

ವಿವಾದದ ಕಿಡಿ ಹೊತ್ತಿಸಿದ್ದು ಮ್ಯಾಗಜೀನ್ ವರದಿ:

ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗಲೇ ಮಾಧ್ಯಮಗಳಲ್ಲಿ ರವಿಚಂದ್ರನ್ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳು ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದವು. ಮ್ಯಾಗಜಿನ್ ಒಂದರಲ್ಲಿ ರವಿಚಂದ್ರನ್ ವಿರುದ್ಧ ಅತ್ಯಾಚಾರ ಆರೋಪವನ್ನು ನಟಿ ಮಾಡಿದ್ದರು.

‘ನಾನು ಹೇಳಿದ್ದೇ ಒಂದು, ಆದರೆ ಅಂದು ಮ್ಯಾಗಜೀನ್‌ನಲ್ಲಿ ಪ್ರಕಟವಾಗಿದ್ದೇ ಇನ್ನೊಂದು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಬರೆಯಲಾಗಿತ್ತು’ ಎಂದು ಬಿಂದಿಯಾ ಹೇಳಿದ್ದಾರೆ. ಈ ವಿವಾದ ದೊಡ್ಡದಾಗುತ್ತಿದ್ದಂತೆ ರವಿಚಂದ್ರನ್ ಅವರು ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಕ್ಕಾಗಿ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದರು.

‘ಅದು ನನ್ನ ಜೀವನದ ಅತ್ಯಂತ ಕಠಿಣ ಸಮಯ. ವಿಷಯ ಕೋರ್ಟ್‌ ಮೆಟ್ಟಿಲೇರುವಷ್ಟು ದೊಡ್ಡದಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಆಗ ನನಗೆ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸುವಷ್ಟು ವಯಸ್ಸು ಅಥವಾ ಪ್ರಬುದ್ಧತೆ ಇರಲಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಕೋರ್ಟ್‌ನಲ್ಲೇ ಬಿಂದಿಯಾ ಕ್ಷಮೆ ಕೇಳಿದ ನಂತರ ರವಿಚಂದ್ರನ್ ಪ್ರಕರಣವನ್ನು ಹಿಂಪಡೆದರು.

ಸಂದರ್ಶನದಲ್ಲಿ ಮಾತನಾಡುತ್ತಾ ಭಾವುಕರಾದ ಬಿಂದಿಯಾ, ‘ರವಿ ಸರ್ ಯಾವುದೇ ತಪ್ಪು ಮಾಡಿರಲಿಲ್ಲ. ನನ್ನಿಂದಾಗಿ ಅಷ್ಟು ದೊಡ್ಡ ಸ್ಟಾರ್ ಕೋರ್ಟ್‌ಗೆ ಬಂದು ನಿಲ್ಲುವಂತಾಗಿದ್ದು ನನಗೆ ಇಂದಿಗೂ ಕಾಡುವ ನೋವು’ ಎಂದು ಕಣ್ಣೀರಿಡುತ್ತಾ ಮತ್ತೊಮ್ಮೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ‘ಶಾಂತಿ ಕ್ರಾಂತಿ’ ಸಿನಿಮಾದಿಂದ ಆದ ಸಾಲ ತೀರಿಸಲು ರವಿಚಂದ್ರನ್​​ಗೆ ಹಿಡಿದಿತ್ತು 15 ವರ್ಷ

ಅಲ್ಲದೆ, ರವಿಚಂದ್ರನ್ ಅವರೊಂದಿಗೆ ಮತ್ತೆ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿರುವ ಅವರು, ‘ಮುಂದೆಂದಾದರೂ ರವಿ ಸರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ, ನಾನು ಯಾವುದೇ ಸಂಭಾವನೆ ಪಡೆಯದೆಯೂ ನಟಿಸಲು ಸಿದ್ಧಳಿದ್ದೇನೆ’ ಎಂದು ತಮ್ಮ ಮನದಾಳದ ಆಸೆಯನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Lucky Birth Dates: ಈ 4 ಜನ್ಮ ದಿನಾಂಕವರು ಹುಟ್ಟುತ್ತಲೇ ಕೋಟ್ಯಾಧಿಪತಿಗಳಾಗುವ ಅದೃಷ್ಟ ತಂದಿರುತ್ತಾರೆ!

ಹುಟ್ಟುತ್ತಲೇ ಕೋಟ್ಯಾಧಿಪತಿಗಳಾಗುವ ಅದೃಷ್ಟImage Credit source: Pinterest

ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ಜನ್ಮ ದಿನಾಂಕಗಳನ್ನು ಹೊಂದಿರುವ ಜನರು ಬಾಲ್ಯದಿಂದಲೇ ಹಣ, ಯಶಸ್ಸು ಮತ್ತು ಸುಖ-ಸಂತೋಷಗಳನ್ನು ಪಡೆಯುವ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ನಂಬಲಾಗಿದೆ. ಇಂತಹ ವ್ಯಕ್ತಿಗಳು ತಮ್ಮ ಕಠಿಣ ಪರಿಶ್ರಮ, ಬುದ್ಧಿವಂತಿಕೆ ಮತ್ತು ಸರಿಯಾದ ನಿರ್ಧಾರಗಳ ಆಧಾರದ ಮೇಲೆ ಜೀವನದಲ್ಲಿ ಅಪಾರ ಸಂಪತ್ತನ್ನು ಗಳಿಸುತ್ತಾರೆ. ಇವರಲ್ಲಿ ನಾಯಕತ್ವದ ಗುಣ, ವ್ಯವಹಾರದ ಜಾಣ್ಮೆ ಮತ್ತು ಜೀವನದಲ್ಲಿ ಮುಂದೆ ಬರಬೇಕೆಂಬ ಹಂಬಲ ಹೆಚ್ಚಾಗಿ ಕಂಡುಬರುತ್ತದೆ. ಸರಿಯಾದ ಅವಕಾಶ ಮತ್ತು ಪರಿಶ್ರಮ ಸಿಕ್ಕಾಗ, ಈ ನಿರ್ದಿಷ್ಟ ಜನ್ಮ ಸಂಖ್ಯೆಗಳನ್ನು ಹೊಂದಿರುವವರು ಆರ್ಥಿಕವಾಗಿ ಅತ್ಯಂತ ಶಕ್ತಿಯುತರಾಗಿ ಹೊರಹೊಮ್ಮುತ್ತಾರೆ.

1, 10, 19 ಅಥವಾ 28 ನೇ ತಾರೀಖಿನಂದು ಜನಿಸಿದವರು:

ಮೊದಲನೆಯದಾಗಿ, ಯಾವುದೇ ತಿಂಗಳ 1, 10, 19 ಅಥವಾ 28 ನೇ ತಾರೀಖಿನಂದು ಜನಿಸಿದವರ ಜನ್ಮ ಸಂಖ್ಯೆ ಅಥವಾ ಮೂಲಾಂಕ ‘1’ ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 1 ರ ಅಧಿಪತಿ ಸೂರ್ಯ ದೇವನಾಗಿದ್ದಾನೆ. ಈ ದಿನಾಂಕಗಳಲ್ಲಿ ಜನಿಸಿದ ಜನರು ಅಪಾರ ಆತ್ಮವಿಶ್ವಾಸ, ಧೈರ್ಯ ಮತ್ತು ಯಶಸ್ಸನ್ನು ಸಾಧಿಸಲು ನಿರಂತರವಾಗಿ ಶ್ರಮಿಸುವ ಗುಣವನ್ನು ಹೊಂದಿರುತ್ತಾರೆ. ಇವರಲ್ಲಿ ನಾಯಕತ್ವದ ಗುಣಗಳು ಸ್ವಾಭಾವಿಕವಾಗಿಯೇ ಇರುವುದರಿಂದ, ಇವರು ವ್ಯಾಪಾರ, ನಿರ್ವಹಣೆ ಅಥವಾ ರಾಜಕೀಯದಂತಹ ಕ್ಷೇತ್ರಗಳಲ್ಲಿ ಉತ್ತಮ ಗುರುತಿಸುವಿಕೆ ಹಾಗೂ ಆರ್ಥಿಕ ಯಶಸ್ಸನ್ನು ಸುಲಭವಾಗಿ ಸಾಧಿಸುತ್ತಾರೆ.

6, 15 ಅಥವಾ 24 ನೇ ತಾರೀಖಿನಂದು ಜನಿಸಿದವರು:

ಎರಡನೆಯದಾಗಿ, ಯಾವುದೇ ತಿಂಗಳ 6, 15 ಅಥವಾ 24 ನೇ ತಾರೀಖಿನಂದು ಜನಿಸಿದವರ ಮೂಲಾಂಕ ‘6’ ಆಗಿರುತ್ತದೆ. ಅಂಕಶಾಸ್ತ್ರದಲ್ಲಿ ಮೂಲಾಂಕ 6 ಹೊಂದಿರುವವರನ್ನು ಅತ್ಯಂತ ಅದೃಷ್ಟವಂತರು ಮತ್ತು ಆರ್ಥಿಕವಾಗಿ ಸದೃಢರು ಎಂದು ಪರಿಗಣಿಸಲಾಗುತ್ತದೆ. ಈ ಸಂಖ್ಯೆಯು ಸುಖ, ವೈಭವ ಮತ್ತು ಭೌತಿಕ ಸೌಕರ್ಯಗಳ ಸಂಕೇತವಾಗಿರುವ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಈ ದಿನಾಂಕಗಳಲ್ಲಿ ಜನಿಸಿದ ಜನರು ಐಷಾರಾಮಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ ಮತ್ತು ಜೀವನದಲ್ಲಿ ಅಂದುಕೊಂಡಂತೆ ಧನ-ಸಂಪತ್ತನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಇವರಲ್ಲಿ ಹಣ ಗಳಿಸುವ ಕಲೆ ಅದ್ಭುತವಾಗಿದ್ದು, ಸಾಮಾನ್ಯವಾಗಿ ಇವರು ಆರ್ಥಿಕ ಸಂಕಷ್ಟಗಳಿಂದ ದೂರವಿರುತ್ತಾರೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

5, 14 ಅಥವಾ 23 ನೇ ತಾರೀಖಿನಂದು ಜನಿಸಿದವರು:

ಮೂರನೆಯದಾಗಿ, ಯಾವುದೇ ತಿಂಗಳ 5, 14 ಅಥವಾ 23 ನೇ ತಾರೀಖಿನಂದು ಜನಿಸಿದವರ ಮೂಲಾಂಕ ‘5’ ಆಗಿರುತ್ತದೆ. ಈ ಸಂಖ್ಯೆಯು ಬುದ್ಧಿವಂತಿಕೆ, ವಿವೇಚನೆ ಮತ್ತು ಉತ್ತಮ ಸಂವಹನ ಕಲೆಯ ಸಂಕೇತವಾದ ಬುಧ ಗ್ರಹಕ್ಕೆ ಸಂಬಂಧಿಸಿದೆ. ಈ ಮೂಲಾಂಕದ ಜನರು ತೀಕ್ಷ್ಣವಾದ ಆಲೋಚನಾ ಶಕ್ತಿ, ಪರಿಶ್ರಮ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಹಣದ ವಿಷಯದಲ್ಲಿ ಇವರು ಅತ್ಯಂತ ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಚೆನ್ನಾಗಿ ಬಲ್ಲವರಾಗಿರುತ್ತಾರೆ. ವಿಶೇಷವಾಗಿ ವ್ಯಾಪಾರ, ಬಿಸಿನೆಸ್ ಮತ್ತು ಶೇರ್ ಮಾರ್ಕೆಟ್‌ನಂತಹ ಕ್ಷೇತ್ರಗಳಲ್ಲಿ ಇವರು ತಮ್ಮ ಬುದ್ಧಿವಂತಿಕೆಯಿಂದ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುತ್ತಾರೆ.

8, 17 ಅಥವಾ 26 ನೇ ತಾರೀಖಿನಂದು ಜನಿಸಿದವರು:

ನಾಲ್ಕನೆಯದಾಗಿ, ಯಾವುದೇ ತಿಂಗಳ 8, 17 ಅಥವಾ 26 ನೇ ತಾರೀಖಿನಂದು ಜನಿಸಿದವರ ಮೂಲಾಂಕ ‘8’ ಆಗಿರುತ್ತದೆ. ಈ ಸಂಖ್ಯೆಯು ಕಠಿಣ ಪರಿಶ್ರಮ, ಶಿಸ್ತು ಮತ್ತು ಜವಾಬ್ದಾರಿಯ ಸಂಕೇತವಾಗಿರುವ ಶನಿ ಗ್ರಹಕ್ಕೆ ಸಂಬಂಧಿಸಿದೆ. ಈ ದಿನಾಂಕಗಳಲ್ಲಿ ಜನಿಸಿದ ಜನರು ಜೀವನದ ಆರಂಭಿಕ ದಿನಗಳಲ್ಲಿ ಕೆಲವು ಕಷ್ಟಗಳನ್ನು ಮತ್ತು ಹೆಚ್ಚಿನ ಪರಿಶ್ರಮವನ್ನು ಎದುರಿಸಬೇಕಾಗಬಹುದು. ಆದರೆ, ತಮ್ಮ ನಿರಂತರ ಪ್ರಯತ್ನ ಹಾಗೂ ಧೃತಿಗೆಡದ ಗುಣದಿಂದಾಗಿ ಇವರು ಭವಿಷ್ಯದಲ್ಲಿ ದೊಡ್ಡ ಯಶಸ್ಸು ಮತ್ತು ಕೀರ್ತಿಯನ್ನು ಗಳಿಸುತ್ತಾರೆ. ಇವರು ಕೇವಲ ಹಣ ಗಳಿಸುವುದಷ್ಟೇ ಅಲ್ಲದೆ, ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ನಿರ್ವಹಿಸಬೇಕು ಮತ್ತು ಉಳಿಸಬೇಕು ಎಂಬ ಉತ್ತಮ ಹಣಕಾಸಿನ ಜ್ಞಾನವನ್ನೂ ಹೊಂದಿರುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಪಾಲಿಗೆ ಅಭಿಶಾಪವಾಗಲಿದೆಯಾ ಬಿಸಿಸಿಐನ ಈ ಒಂದು ನಿರ್ಧಾರ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಮೇ 31) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಫೈನಲ್ ಪಂದ್ಯ ನಡೆಯುತ್ತಿರುವುದು ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನದಲ್ಲಿ. ಇದುವೇ ಗುಜರಾತ್ ಟೈಟಾನ್ಸ್ ಪಾಲಿಗೆ ಪ್ಲಸ್ ಪಾಯಿಂಟ್.

ಗುಜರಾತ್ ಟೈಟಾನ್ಸ್ ತಂಡಕ್ಕೆ ಹೀಗೊಂದು ಅನುಕೂಲಕರ ವಾತಾವರಣ ಸೃಷ್ಟಿಯಾಗಲು ಮುಖ್ಯ ಕಾರಣ ಬಿಸಿಸಿಐ ತೆಗೆದುಕೊಂಡ ಒಂದು ನಿರ್ಧಾರ. ಅದುವೇ ಫೈನಲ್ ಪಂದ್ಯ ಶಿಫ್ಟ್​..!

  • ಐಪಿಎಲ್ ನಿಯಮದ ಪ್ರಕಾರ, ಫೈನಲ್ ಪಂದ್ಯಕ್ಕೆ ಹಾಲಿ ಚಾಂಪಿಯನ್​ನ ತವರು ಮೈದಾನ ಆತಿಥ್ಯವಹಿಸಬೇಕಿತ್ತು. ಅದರಂತೆ ಈ ಬಾರಿಯ ಫೈನಲ್ ಮ್ಯಾಚ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು.

ಆದರೆ ನಿರ್ದಿಷ್ಟ ಕಾರಣಗಳನ್ನು ಮುಂದಿಟ್ಟು ಬಿಸಿಸಿಐ,  ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದ್​ಗೆ ಸ್ಥಳಾಂತರಿಸಿದ್ದಾರೆ. ಇದಕ್ಕೆ ಬಿಸಿಸಿಐ ನೀಡಿರುವ ಕಾರಣಗಳೆಂದರೆ, ಸ್ಥಳೀಯ ಶಾಸಕರ ಫ್ರೀ ಟಿಕೆಟ್ ಡಿಮ್ಯಾಂಡ್ ಮತ್ತು ಸಾರ್ವಜನಿಕ ಸುರಕ್ಷತೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಮೇ 30 ಮತ್ತು ಮೇ 31 ರಂದು ಅಹಮದಾಬಾದ್​ನಲ್ಲಿ ಐಸಿಸಿ ಮಂಡಳಿ  ಮತ್ತು ಮುಖ್ಯ ಕಾರ್ಯನಿರ್ವಾಹಕರ ಸಮಿತಿಯ ಈ ಹೈ-ಪ್ರೊಫೈಲ್ ಸಭೆಯನ್ನು ಆಯೋಜಿಸಲಾಗಿರುವುದು.

ಅಂದರೆ ಐಪಿಎಲ್ ಫೈನಲ್ ಪಂದ್ಯದ ವೇಳೆ ವಿಶ್ವ ಕ್ರಿಕೆಟ್ ಮಂಡಳಿಯ ಪ್ರಮುಖರು ಅಹಮದಾಬಾದ್​ನಲ್ಲಿ ಇರಲಿದ್ದಾರೆ ಎಂಬುದು. ಇದಕ್ಕಾಗಿಯೇ ಫೈನಲ್ ಮ್ಯಾಚ್​ ಅನ್ನು ಬೆಂಗಳೂರಿನಿಂದ ಅಹಮದಾಬಾದ್​ಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಅದೇನಾಗಿದ್ದರೂ ಇದೀಗ ಐಪಿಎಲ್ ಫೈನಲ್ ಪಂದ್ಯದ ಶಿಫ್ಟ್ ಆರ್​ಸಿಬಿ ಪಾಲಿಗೆ ಅಭಿಶಾಪವಾಗಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡದ ಪ್ರದರ್ಶನ ಅಷ್ಟಕ್ಕಷ್ಟೇ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

  • ಆರ್​ಸಿಬಿ ತಂಡವು ಅಹಮದಾಬಾದ್​ನಲ್ಲಿ ಈವರೆಗೆ 7 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಅಂದರೆ 4 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ.
  • ಈ ಬಾರಿ ಕಣಕ್ಕಿಳಿದಾಗಲೂ ಗುಜರಾತ್ ಟೈಟಾನ್ಸ್ ವಿರುದ್ಧ 4 ವಿಕೆಟ್​ಗಳಿಂದ ಸೋಲನುಭವಿಸಿತ್ತು.
  • ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡದ ವಿನ್ನಿಂಗ್ ಪರ್ಸಂಟೇಜ್ 42.8 ಮಾತ್ರ.

ಅಂದರೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್​ಸಿಬಿ ಗೆಲುವು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ತವರಿನ ಸಾಮ್ರಾಟರೆಂದೇ ಗುರುತಿಸಿಕೊಂಡಿರುವ ಗುಜರಾತ್ ಪಡೆಯನ್ನು ಸೋಲಿಸುವುದು ದೊಡ್ಡ ಸವಾಲೇ ಸರಿ. ಏಕೆಂದರೆ…

  • ಗುಜರಾತ್ ಟೈಟಾನ್ಸ್ ತಂಡವು ತವರು ಮೈದಾನದಲ್ಲಿ ಈವರೆಗೆ 28 ಪಂದ್ಯಗಳನ್ನಾಡಿದೆ. ಈ ವೇಳೆ 17 ಪಂದ್ಯಗಳಲ್ಲಿ ಜಯ ಸಾಧಿಸಿದೆ.
  • ಈ ಬಾರಿ ತವರಿನಲ್ಲಿ ಆಡಿದ 7 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವು 5 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ.
  • ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಾರಿ ಆರ್​ಸಿಬಿ ತಂಡಕ್ಕೆ ಸೋಲುಣಿಸುವಲ್ಲಿ ಗುಜರಾತ್ ಟೈಟಾನ್ಸ್ ತಂಡ ಯಶಸ್ವಿಯಾಗಿದೆ.
  • ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ 60.7 ವಿನ್ನಿಂಗ್ ಪರ್ಸಂಟೇಜ್ ಹೊಂದಿದೆ.

ಈ ಎಲ್ಲಾ ಕಾರಣಗಳಿಂದಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ. ಈ ಗುರುತಿಸಿಕೊಳ್ಳುವಿಕೆಗೆ ಮುಖ್ಯ ಕಾರಣ ಫೈನಲ್ ಮ್ಯಾಚ್​ನ ಶಿಫ್ಟ್​.

ಇದನ್ನೂ ಓದಿ: Vaibhav Sooryavanshi: 440 ಎಸೆತಗಳಲ್ಲಿ ಸಾರ್ವಕಾಲಿಕ ದಾಖಲೆ ಧೂಳೀಪಟ!

ಅಂದರೆ ಆರ್​ಸಿಬಿ ತಂಡದ ತವರು ಮೈದಾನದಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯಕ್ಕೆ ಇದೀಗ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲು ಅಣಿಯಾಗಿ ನಿಂತಿದೆ. ಇದುವೇ ಆರ್​ಸಿಬಿ ಪಾಲಿಗೆ ಅಭಿಶಾಪವಾಗಲಿದೆಯಾ ಎಂಬುದೇ ಈಗ ದೊಡ್ಡ ಯಕ್ಷ ಪ್ರಶ್ನೆ.

Source link

ಅಂಕೋಲಾ-ಯಲ್ಲಾಪುರ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೀಬರ್ಡ್ ಬಸ್ ಪಲ್ಟಿ: ಓರ್ವ ಸಾವು, 21 ಪ್ರಯಾಣಿಕರಿಗೆ ಗಾಯ

ಕಾರವಾರ/ಅಂಕೋಲಾ, ಮೇ 30: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಶನಿವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಬಳ್ಳಾರಿಯಿಂದ ಗೋವಾ ಕಡೆಗೆ ಸಾಗುತ್ತಿದ್ದ ಸೀಬರ್ಡ್ (Seabird) ಸಂಸ್ಥೆಗೆ ಸೇರಿದ ಖಾಸಗಿ ಲಕ್ಸುರಿ ಬಸ್, ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 52ರ ಕಂಚಿನಬಾಗಿಲು (ಅಡ್ಲೂರು) ಬಳಿ ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿದೆ. ಈ ಭೀಕರ ದುರಂತದಲ್ಲಿ ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಸ್ಸಿನಲ್ಲಿದ್ದ ಒಟ್ಟು 36 ಪ್ರಯಾಣಿಕರ ಪೈಕಿ 21 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 9 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ನಿದ್ರೆ ತೂಕಡಿಸಿದ ಕಾರಣ ಚಾಲಕನಿಗೆ ನಿಯಂತ್ರಣ ತಪ್ಪಿರಬಹುದು ಎಂದು ಶಂಕಿಸಲಾಗಿದೆ. ವೇಗವಾಗಿ ಬಂದ ಬಸ್ ಹೆದ್ದಾರಿಯ ಮಧ್ಯದಲ್ಲೇ ಉರುಳಿಬಿದ್ದ ಪರಿಣಾಮ, ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ತಕ್ಷಣವೇ ಧಾವಿಸಿ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿತು. ಬಸ್ಸಿನ ಕಿಟಕಿಗಳನ್ನು ಒಡೆದು ಒಳಗಿದ್ದ ಪ್ರಯಾಣಿಕರನ್ನು ಹೊರತರಲಾಯಿತು. ಗಾಯಗೊಂಡ 21 ಜನರನ್ನು ತಕ್ಷಣವೇ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಅವರಲ್ಲಿ ತಲೆ ಮತ್ತು ಎದೆಗೆ ಬಲವಾದ ಪೆಟ್ಟು ಬಿದ್ದು ಪರಿಸ್ಥಿತಿ ಗಂಭೀರವಾಗಿದ್ದ 9 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್ (KRIHMS) ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಬಳಿಕ ಸ್ಥಳಕ್ಕೆ ಪೊಲೀಸರು ಬೃಹತ್ ಕ್ರೇನ್ ಅಳವಡಿಸಿ, ಹೆದ್ದಾರಿ ಮೇಲಿಂದ ಸೀಬರ್ಡ್ ಬಸ್ಸನ್ನು ಪಕ್ಕಕ್ಕೆ ಎತ್ತಿ ತೆರವುಗೊಳಿಸಿದರು. ಪ್ರಸ್ತುತ ಹೆದ್ದಾರಿಯ ಎರಡು ಬದಿಗಳಲ್ಲೂ ವಾಹನ ಸಂಚಾರವನ್ನು ಸುಗಮಗೊಳಿಸಲಾಗಿದೆ. ಈ ಭೀಕರ ಅಪಘಾತದ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆಗೆ ಬಿದ್ದು ಪ್ರಜ್ಞೆ ತಪ್ಪಿದ್ದ ತಾಯಿ-ಮಗುವನ್ನು ತಮ್ಮ ಬಸ್ಸಿನಲ್ಲಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ ಚಾಲಕ, ಕಂಡಕ್ಟರ್

ಮಂಗಳೂರು, ಮೇ,30 : ಕರಾವಳಿಯ ಜನರ ರಕ್ತದಲ್ಲೇ ಮಾನವೀಯತೆ ಇದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇದು. ಮಂಗಳೂರು ನಗರದಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಆಕಸ್ಮಿಕವಾಗಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿ ಮತ್ತು ಮಗುವಿನ ರಕ್ಷಣೆಗೆ ಧಾವಿಸಿದ ಸಿಟಿ ಬಸ್ ಚಾಲಕ ಮತ್ತು ನಿರ್ವಾಹಕ, ಸಾರ್ವಜನಿಕ ಪ್ರಯಾಣಿಕರನ್ನು ಕೆಳಗಿಳಿಸಿ ಅದೇ ಬಸ್ಸಿನಲ್ಲಿ ಗಾಯಾಳುಗಳನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯುವ ಮೂಲಕ ರಿಯಲ್ ಹೀರೊಗಳಾಗಿದ್ದಾರೆ. ಇದೀಗ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಶುಕ್ರವಾರ ಮಂಗಳೂರಿನ ಕಾವೂರು ಕಡೆಯಿಂದ ಕುಂಜತ್ತಬೈಲ್ ಕಡೆಗೆ ಸಾಗುತ್ತಿದ್ದ ರೂಟ್ ನಂಬರ್ 13B ಯ ‘ಮಾಸ್ಟರ್’ (Master) ಹೆಸರಿನ ಸಿಟಿ ಬಸ್ ಮರಕಡ ಜಂಕ್ಷನ್ ತಲುಪುತ್ತಿತ್ತು. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್ಸಿನಿಂದ ತಾಯಿ ಮತ್ತು ಆಕೆಯ ಪುಟ್ಟ ಮಗು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರಿಬ್ಬರೂ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ನೋಡಿ ಸ್ಥಳೀಯರು ಹಾಗೂ ದಾರಿಹೋಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಈ ಭೀಕರ ದೃಶ್ಯವನ್ನು ಗಮನಿಸಿದ ಮಾಸ್ಟರ್ ಬಸ್ ಚಾಲಕ ದಯಾನಂದ್ ಮತ್ತು ನಿರ್ವಾಹಕ (ಕಂಡಕ್ಟರ್) ಸಂದೀಪ್ ಅವರು ಸಮಯ ಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ತಮ್ಮ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಗಾಯಾಳುಗಳ ಬಳಿಗೆ ಧಾವಿಸಿದ್ದಾರೆ. ತಾಯಿ-ಮಗುವಿನ ಸ್ಥಿತಿ ಗಂಭೀರವಾಗಿರುವುದನ್ನು ಅರಿತು ಆಂಬ್ಯುಲೆನ್ಸ್‌ಗೆ ಕಾಯುತ್ತಾ ಸಮಯ ವ್ಯರ್ಥ ಮಾಡದ ಸಿಬ್ಬಂದಿ, ತಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ವಿವರಿಸಿ ಕೆಳಗಿಳಿಯಲು ವಿನಂತಿಸಿದ್ದಾರೆ. ತಕ್ಷಣವೇ ಅವರಿಬ್ಬರನ್ನೂ ಅದೇ ಸಿಟಿ ಬಸ್ಸಿಗೆ ಹತ್ತಿಸಿಕೊಂಡು ನೇರವಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನೂ ಓದಿ: ‘ಸಿಎಂ ಸ್ಥಾನ ಬಿಟ್ಟು ಹೋಗುವ ಮುನ್ನ ಆ 5,000 ಕೋಟಿ ರೂ. ಎಲ್ಲಿದೆ ಹೇಳಿ!’: ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸುರೇಶ್ ಕುಮಾರ್

ಸಕಾಲದಲ್ಲಿ ಸ್ಪಂದಿಸಿ ಇಬ್ಬರು ಅಮೂಲ್ಯ ಜೀವಗಳನ್ನು ಉಳಿಸಿದ ಚಾಲಕ ದಯಾನಂದ್ ಮತ್ತು ಕಂಡಕ್ಟರ್ ಸಂದೀಪ್ ಅವರ ಈ ನಿಸ್ವಾರ್ಥ ಮಾನವೀಯ ಕಾರ್ಯಕ್ಕೆ ಮಂಗಳೂರಿನ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಶ್ಲಾಘನೆ ಮತ್ತು ಪ್ರಶಂಸೆ ವ್ಯಕ್ತವಾಗುತ್ತಿದೆ.

ರಾಜ್ಯ ಸುದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತನ್ನ ಜೀವದ ಹಂಗು ತೊರೆದು ಕಿಟಕಿಯಿಂದ ಪಕ್ಕದ ಮನೆಯ ಜಗಳ ರೆಕಾರ್ಡ್​ ಮಾಡಿದ ವ್ಯಕ್ತಿ

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಪಕ್ಕದ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜೋರಾಗಿ ಜಗಳ ನಡೆಯುತ್ತಿತ್ತು. ಆದರೆ ಗೋಡೆಗಳ ಕಾರಣದಿಂದ ಜಗಳದ ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ತನ್ನ ತಡೆಯಲಾಗದ ಕುತೂಹಲದಿಂದಾಗಿ, ಈ ವ್ಯಕ್ತಿ ತನ್ನ ಪ್ರಾಣದ ಹಂಗನ್ನು ತೊರೆದು ಬಹುಮಹಡಿ ಕಟ್ಟಡದ ಕಿಟಕಿಯಿಂದ ಹೊರಗೆ ನೇತಾಡಿದ್ದಾರೆ. ಅಪಾಯಕಾರಿ ರೀತಿಯಲ್ಲಿ ತೂಗಾಡುತ್ತಾ, ಪಕ್ಕದ ಮನೆಯ ಕಿಟಕಿಯ ಕಡೆಗೆ ಮೊಬೈಲ್ ಹಿಡಿದು ಜಗಳದ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಸ್ವಲ್ಪ ಆಯತಪ್ಪಿದರೂ ಪ್ರಾಣಕ್ಕೇ ಕುತ್ತು ಬರುತ್ತಿದ್ದ ಈ ಸಾಹಸವನ್ನು ಕಂಡ ನೆಟ್ಟಿಗರು, ಜಗಳ ನೋಡುವ ಇವರ ಕುತೂಹಲಕ್ಕೆ ಆಸ್ಕರ್ ಪ್ರಶಸ್ತಿಯೇ ಕೊಡಬೇಕು ಎಂದು ತಮಾಷೆ ಮಾಡುತ್ತಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Swapna Shastra: ಕನಸಿನಲ್ಲಿ ಹನುಮಂತ ಕಾಣಿಸಿಕೊಂಡರೆ ಏನರ್ಥ? ಸ್ವಪ್ನಶಾಸ್ತ್ರ ಹೇಳುವುದೇನು?

ಹಿಂದೂ ಧರ್ಮದ ಎಲ್ಲಾ ದೇವರುಗಳಲ್ಲಿ ಹನುಮಂತನಿಗೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಕಲಿಯುಗದಲ್ಲಿ ಭಕ್ತರ ಕರೆಗೆ ತಕ್ಷಣ ಓಗೊಡುವ ‘ಜಾಗೃತ ದೇವರು’ ಎಂದೇ ಬಜರಂಗಬಲಿಯನ್ನು ಆರಾಧಿಸಲಾಗುತ್ತದೆ. ನಿಜವಾದ ಭಕ್ತಿ ಮತ್ತು ನಿರ್ಮಲ ಹೃದಯದಿಂದ ಹನುಮನನ್ನು ಸ್ಮರಿಸುವ ಭಕ್ತರ ಎಲ್ಲಾ ಇಷ್ಟಾರ್ಥಗಳು ಸಾಧ್ಯವಾದಷ್ಟು ಬೇಗ ಈಡೇರುತ್ತವೆ ಎಂಬ ದೃಢವಾದ ನಂಬಿಕೆ ಜನರಲ್ಲಿದೆ. ಹನುಮಂತನನ್ನು ‘ಸಂಕಷ್ಟಮೋಚಕ’ ಎಂದು ಕರೆಯಲಾಗುತ್ತದೆ, ಅವನು ತನ್ನ ಭಕ್ತರ ಹಾದಿಯಲ್ಲಿ ಬರುವ ಎಲ್ಲಾ ರೀತಿಯ ಅಡೆತಡೆಗಳನ್ನು ಮತ್ತು ಕಷ್ಟಗಳನ್ನು ತಕ್ಷಣವೇ ನಿವಾರಿಸಿ ಅಭಯ ನೀಡುತ್ತಾನೆ.

ಕನಸಿನಲ್ಲಿ ಹನುಮಂತ ಕಂಡರೆ ಏನರ್ಥ?

ವಿಶೇಷವೆಂದರೆ, ಹನುಮಂತನು ತನ್ನ ಭಕ್ತರ ಮೇಲಿರುವ ಅನುಗ್ರಹವನ್ನು ಹಲವು ಬಾರಿ ಕನಸುಗಳ ಮೂಲಕ ವಿಶೇಷ ಚಿಹ್ನೆಗಳ ರೂಪದಲ್ಲಿ ದರ್ಶನ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಹನುಮಾನ್ ಜಿಯ ದೇವಸ್ಥಾನವನ್ನು ಅಥವಾ ಅವರ ಭವ್ಯ ವಿಗ್ರಹವನ್ನು ಕಂಡರೆ, ಆಂಜನೇಯನು ಅವರ ಭಕ್ತಿಯಿಂದ ಪ್ರಸನ್ನನಾಗಿದ್ದಾನೆ ಮತ್ತು ಆತನ ಆಶೀರ್ವಾದ ಸದಾ ಅವರ ಮೇಲಿರುತ್ತದೆ ಎಂದರ್ಥ. ಅದೇ ರೀತಿ, ಕನಸಿನಲ್ಲಿ ಪದೇ ಪದೇ ಕೋತಿಗಳು ಕಾಣಿಸಿಕೊಂಡರೆ ಅದನ್ನು ಅತ್ಯಂತ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಬೀಳುವ ವ್ಯಕ್ತಿಯು ತಾನು ಕೈಕೊಳ್ಳುವ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತಾನೆ ಹಾಗೂ ಆತನ ಜೀವನವು ಸಂತೋಷ ಮತ್ತು ಶಾಂತಿಯಿಂದ ಸಾಗುತ್ತದೆ ಎಂಬುದು ಇದರ ಸಂಕೇತವಾಗಿದೆ.

ಹನುಮಂತನ ಕೃಪಾಕಟಾಕ್ಷ ನಿರಂತರ:

ಅನೇಕ ಜನರಿಗೆ ರಾತ್ರಿಯ ಸಮಯದಲ್ಲಿ ಭಯಾನಕ ಕನಸುಗಳು ಬೀಳುವುದು ಸಹಜ. ಒಂದು ವೇಳೆ ಇಂತಹ ಕನಸುಗಳಲ್ಲಿ ದೆವ್ವ-ಭೂತಗಳು ಕಂಡರೂ, ಮನಸ್ಸಿಗೆ ಯಾವುದೇ ಭಯವಾಗದಿದ್ದರೆ, ನಿಮ್ಮ ಜೀವನದಲ್ಲಿ ಹನುಮಂತನ ಕೃಪಾಕಟಾಕ್ಷ ನಿರಂತರವಾಗಿದೆ ಎಂದು ತಿಳಿಯಬೇಕು. ನಿಮ್ಮ ಆರಾಧನೆಯಿಂದ ಹನುಮಂತನು ತೃಪ್ತನಾಗಿದ್ದಾನೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದರೊಂದಿಗೆ, ಎಲ್ಲೇ ಆದರೂ ರಾಮನ ಕಥೆ ಅಥವಾ ಕೀರ್ತನೆ ನಡೆಯುತ್ತಿರುವಾಗ ನೀವು ಅದರಲ್ಲಿ ಭಕ್ತಿಯಿಂದ ಭಾಗವಹಿಸಿದರೆ ಮತ್ತು ಅಲ್ಲಿ ಸಿಗುವ ಪ್ರಸಾದವನ್ನು ಸ್ವೀಕರಿಸಿದರೆ, ಅದು ಹನುಮಂತನ ವಿಶೇಷ ಅನುಗ್ರಹವೇ ಸರಿ. ಅಷ್ಟೇ ಅಲ್ಲದೆ, ಕನಸಿನಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಪ್ರಸಂಗಗಳಾಗಲಿ ಅಥವಾ ಶ್ರೀರಾಮ, ಸೀತಾ ಮಾತೆ ಮತ್ತು ಲಕ್ಷ್ಮಣರಂತಹ ದೈವೀ ಪಾತ್ರಗಳು ಕಂಡರೆ, ನಿಮಗೆ ಹನುಮನ ಪೂರ್ಣ ಆಶೀರ್ವಾದ ಲಭಿಸಿದೆ ಎಂದು ನಂಬಲಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಮಂಗಳವಾರವನ್ನು ಅತ್ಯಂತ ಶ್ರೇಷ್ಠ ದಿನ:

ಶಾಸ್ತ್ರಗಳ ಪ್ರಕಾರ, ಹನುಮಂತನನ್ನು ಪೂಜಿಸಲು ಮತ್ತು ಆತನ ಕೃಪೆಗೆ ಪಾತ್ರರಾಗಲು ಮಂಗಳವಾರವನ್ನು ಅತ್ಯಂತ ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ. ಮಂಗಳವಾರದಂದು ಹನುಮನ ದರ್ಶನ ಮತ್ತು ಆರಾಧನೆ ಮಾಡುವುದರಿಂದ ಜೀವನದ ಸರ್ವ ವಿಘ್ನಗಳೂ ನಿವಾರಣೆಯಾಗಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ. ಆಂಜನೇಯನನ್ನು ಪ್ರಸನ್ನಗೊಳಿಸಲು ಪ್ರತಿ ಮಂಗಳವಾರ ಮತ್ತು ಶನಿವಾರದಂದು ದೇವಸ್ಥಾನಕ್ಕೆ ಭೇಟಿ ನೀಡಿ ಮಲ್ಲಿಗೆ ಎಣ್ಣೆ ಹಾಗೂ ಸಿಂಧೂರವನ್ನು ಭಕ್ತಿಯಿಂದ ಅರ್ಪಿಸಬೇಕು. ಹನುಮಂತನಿಗೆ ಚೋಳವನ್ನು (ಸಿಂಧೂರದ ಲೇಪನ) ಅರ್ಪಿಸುವ ಭಕ್ತನು ತನ್ನ ಜೀವನದಲ್ಲಿ ಎಂದಿಗೂ ದೆವ್ವ-ರಾಕ್ಷಸರ ಬಾಧೆ, ಶನಿದೋಷ, ರೋಗ-ರುಜಿನಗಳು, ಕೋರ್ಟ್ ಕಚೇರಿ ವಿವಾದಗಳು, ಅಪಘಾತಗಳು ಅಥವಾ ಸಾಲದ ಬಾಧೆಗಳ ಬಗ್ಗೆ ಚಿಂತಿಸಬೇಕಾಗಿ ಬರುವುದಿಲ್ಲ.

ಮಾರುತಿಗೆ ನೈವೇದ್ಯವನ್ನು ಅರ್ಪಿಸುವಾಗ ತುಳಸಿ ದಳವನ್ನು ಸಮರ್ಪಿಸುವುದು ಅತ್ಯಂತ ಮುಖ್ಯ, ಏಕೆಂದರೆ ಹನುಮನಿಗೆ ತುಳಸಿ ಎಂದರೆ ಅತ್ಯಂತ ಪ್ರೀತಿ. ಆಂಜನೇಯನ ವಿಗ್ರಹದ ಮುಂದೆ ಶುದ್ಧ ತುಪ್ಪದ ದೀಪವನ್ನು ಹಚ್ಚಿ, ತುಳಸಿ ಮಾಲೆಯನ್ನು ಅರ್ಪಿಸುವುದರಿಂದ ಭಕ್ತರ ಎಲ್ಲಾ ತೊಂದರೆಗಳು ಕ್ಷಣಾರ್ಧದಲ್ಲಿ ದೂರವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಯಾರು ಪ್ರತಿದಿನ ನಿಯಮಿತವಾಗಿ ಭಕ್ತಿಯಿಂದ ‘ಹನುಮಾನ್ ಚಾಲೀಸಾ’ ಪಠಿಸುತ್ತಾರೋ, ಅವರ ಜೀವನದುದ್ದಕ್ಕೂ ಬಜರಂಗಬಲಿಯ ವಿಶೇಷ ರಕ್ಷಣಾ ಕವಚ ಇರುತ್ತದೆ. ಹನುಮನನ್ನು ನಂಬಿದ ಕೈ ಎಂದಿಗೂ ಕೈಬಿಡುವುದಿಲ್ಲ ಎಂಬುದೇ ಸನಾತನ ಧರ್ಮದ ಭಕ್ತರ ಅಚಲ ನಂಬಿಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:35 am, Sat, 30 May 26

Source link

ಸ್ಟಿಕ್ಕರ್ ಹಾಕಿದ್ರೂ ಕಷ್ಟ, ಹಾಕದಿದ್ರೂ ಫೈನ್! ಅಗ್ರಿಗೇಟರ್ ಆಪ್‌ಗಳ ದಬ್ಬಾಳಿಕೆಗೆ ಬೆಂಗಳೂರು ಚಾಲಕರು ಕಂಗಾಲು!

ಅಗ್ರಿಗೇಟರ್ ಆಪ್‌ಗಳ ದಬ್ಬಾಳಿಕೆಗೆ ಬೆಂಗಳೂರು ಚಾಲಕರು ಕಂಗಾಲು!

ಬೆಂಗಳೂರು, ಮೇ 30: ನಗರದಲ್ಲಿ ಪೋರ್ಟರ್, ಅಂಕಲ್ ಸೇರಿದಂತೆ ವಿವಿಧ ಅಗ್ರಿಗೇಟರ್ ಆಪ್‌ಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಖಾಸಗಿ ಗೂಡ್ಸ್ ವಾಹನ (Goods Vehicle) ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಚಾಲಕರಿಗೆ ಸ್ಟಿಕ್ಕರ್ ಹಾಕಿದರೂ ಕಷ್ಟ, ಹಾಕದೇ ಇದ್ದರೂ ಕಷ್ಟ ಎಂಬ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.

ಮುಖ್ಯಾಂಶಗಳು

  • ಅಗ್ರಿಗೇಟರ್ ಆಪ್ ಕಂಪನಿಗಳು ಚಾಲಕರ ಮೇಲೆ ಸ್ಟಿಕ್ಕರ್ ಹಾಕಲು ಒತ್ತಡ ಹೇರುತ್ತಿವೆ.
  • ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿದರೆ ಸಂಚಾರಿ ಪೊಲೀಸರು ಭಾರಿ ದಂಡ ವಿಧಿಸುತ್ತಿದ್ದಾರೆ.
  • ನಿಯಮಾವಳಿ ರೂಪಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಚಾಲಕರ ಸಂಘಟನೆಗಳು ಎಚ್ಚರಿಸಿವೆ.

ವಾಹನಗಳ ಮೇಲೆ ಸ್ಟಿಕ್ಕರ್ ಕಡ್ಡಾಯ: ಚಾಲಕರಿಗೆ ಕಂಪನಿಗಳ ಒತ್ತಡ!

ನಗರದಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುವ ಗೂಡ್ಸ್ ವಾಹನಗಳ ಮಾಲೀಕರು ಬಾಡಿಗೆಗಾಗಿ ಈ ಆಪ್‌ಗಳನ್ನು ಅವಲಂಬಿಸಿದ್ದಾರೆ. ಆದರೆ, ಈಗ ಈ ಕಂಪನಿಗಳು ಚಾಲಕರ ಸ್ವಂತ ವಾಹನಗಳ ಮೇಲೆ ತಮ್ಮ ಬ್ರ್ಯಾಂಡ್‌ನ ದೊಡ್ಡ ಗಾತ್ರದ ಸ್ಟಿಕ್ಕರ್‌ಗಳನ್ನು ಅಂಟಿಸುವಂತೆ ತೀವ್ರ ಒತ್ತಡ ಹೇರುತ್ತಿವೆ. ಒಂದು ವೇಳೆ ಸ್ಟಿಕ್ಕರ್ ಅಂಟಿಸದಿದ್ದರೆ ಆಪ್‌ನಲ್ಲಿ ಬಾಡಿಗೆ ಸಿಗದಂತೆ ಮಾಡಲಾಗುತ್ತಿದೆ ಮತ್ತು ಚಾಲಕರ ಐಡಿಗಳನ್ನು ಏಕಾಏಕಿ ಬ್ಲಾಕ್ ಮಾಡಲಾಗುತ್ತಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಲಿಖಿತ ಆದೇಶ ಅಥವಾ ಸರ್ಕಾರದ ಅನುಮತಿ ಇಲ್ಲದೆ ಕಂಪನಿಗಳು ಇಂತಹ ನಿಯಮಗಳನ್ನು ಜಾರಿಗೊಳಿಸುತ್ತಿರುವುದರಿಂದ, ದಿನನಿತ್ಯದ ಬಾಡಿಗೆಯನ್ನೇ ನಂಬಿಕೊಂಡಿರುವ ನೂರಾರು ಚಾಲಕರ ಕುಟುಂಬ ನಿರ್ವಹಣೆ ಸದ್ಯ ಕಂಗಾಲಾಗಿದೆ.

ಟ್ರಾಫಿಕ್ ಪೊಲೀಸ್ ದಂಡದ ಭೀತಿ

ಕಂಪನಿಗಳ ಒತ್ತಡಕ್ಕೆ ಮಣಿದು ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡರೆ, ಇತ್ತ ಸಂಚಾರಿ ಪೊಲೀಸರು ನಿಯಮ ಉಲ್ಲಂಘನೆ ಎಂದು ವಾಹನಗಳನ್ನು ತಡೆದು ಭಾರಿ ದಂಡ ವಿಧಿಸುತ್ತಿದ್ದಾರೆ. ಇದರಿಂದಾಗಿ ಒಂದು ಕಡೆ ಬಾಡಿಗೆ ಕಳೆದುಕೊಳ್ಳುವ ಭಯ, ಮತ್ತೊಂದು ಕಡೆ ಪೊಲೀಸರ ದಂಡದ ಆತಂಕದ ಮಧ್ಯೆ ಚಾಲಕರು ನಲುಗುತ್ತಿದ್ದಾರೆ.

ಈ ದಬ್ಬಾಳಿಕೆಯ ವಿರುದ್ಧ ತಿರುಗಿಬಿದ್ದಿರುವ ಚಾಲಕರ ಸಂಘಟನೆಗಳು ಈಗಾಗಲೇ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿವೆ. ಖಾಸಗಿ ವಾಹನದ ಮೇಲೆ ಯಾವ ಸ್ಟಿಕ್ಕರ್ ಇರಬೇಕು ಎಂಬುದನ್ನು ನಿರ್ಧರಿಸಲು ಆಪ್ ಕಂಪನಿಗಳಿಗೆ ಯಾವುದೇ ಹಕ್ಕಿಲ್ಲ ಎಂದು ನೊಂದ ಚಾಲಕರ ವೇದಿಕೆಯ ರಾಜ್ಯಾಧ್ಯಕ್ಷ ರಾಜು ಹಾಗೂ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ 4 ಡಿಸಿಎಂ ಹುದ್ದೆಗಳ ಸೃಷ್ಟಿ ಹೊರಟ ಕಾಂಗ್ರೆಸ್ ಹೈಕಮಾಂಡ್​ಗೆ ಈಗ ಭಾರಿ ಇಕ್ಕಟ್ಟು!

ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ

ಯಾವುದೇ ಮಾರ್ಗಸೂಚಿ ಇಲ್ಲದೆ ಆಪ್ ಕಂಪನಿಗಳು ನಡೆಸುತ್ತಿರುವ ಈ ದಂದೆಗೆ ಬ್ರೇಕ್ ಹಾಕಲು ಸರ್ಕಾರ ಹಾಗೂ ಸಾರಿಗೆ ಇಲಾಖೆ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ. ಅಗ್ರಿಗೇಟರ್ ಆಪ್‌ಗಳ ನಿಯಮಗಳು ಹಾಗೂ ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವ ವಿಚಾರದಲ್ಲಿ ಸರ್ಕಾರ ಶೀಘ್ರವೇ ಸ್ಪಷ್ಟ ನಿಯಮಾವಳಿ ಪ್ರಕಟಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಚಾಲಕರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ವರದಿ: ನಟರಾಜ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vaibhav Sooryavanshi: 440 ಎಸೆತಗಳಲ್ಲಿ ಸಾರ್ವಕಾಲಿಕ ದಾಖಲೆ ಧೂಳೀಪಟ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 1000 ರನ್​ ಪೂರೈಸಿದ ಬ್ಯಾಟರ್ ಯಾರು? ಈ ಪ್ರಶ್ನೆಗೆ ಇನ್ಮುಂದೆ ಒಂದೇ ಉತ್ತರ ವೈಭವ್ ಸೂರ್ಯವಂಶಿ. ಮುಲ್ಲನ್​ಪುರ್​ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ 47 ಎಸೆತಗಳನ್ನು ಎದುರಿಸಿದ ವೈಭವ್ 96 ರನ್ ಸಿಡಿಸಿದ್ದರು.

ಈ 97 ರನ್​ಗಳೊಂದಿಗೆ ವೈಭವ್ ಸೂರ್ಯವಂಶಿ ಐಪಿಎಲ್​ನಲ್ಲಿ 1000 ರನ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ  ಸಾವಿರ ರನ್ ಪೂರೈಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅತೀ ಕಡಿಮೆ ಎಸೆತಗಳಲ್ಲಿ ಸಾವಿರ ರನ್​ ಕಲೆಹಾಕಿದ ಸಾರ್ವಕಾಲಿಕ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆ್ಯಂಡ್ರೆ ರಸೆಲ್ ಹೆಸರಿನಲ್ಲಿತ್ತು.

  • ಆ್ಯಂಡ್ರೆ ರಸೆಲ್ 545 ಎಸೆತಗಳಲ್ಲಿ 1000 ರನ್ ಪೂರೈಸಿ ಭರ್ಜರಿ ದಾಖಲೆ ನಿರ್ಮಿಸಿದ್ದರು.
  • ರಸೆಲ್ ಬಳಿಕ ಟಿಮ್ ಡೇವಿಡ್ 560 ಎಸೆತಗಳ ಮೂಲಕ ಸಾವಿರ ರನ್​ಗಳ ಗಡಿದಾಟಿದ್ದರು.

ಇದೀಗ ಇವರಿಬ್ಬರನ್ಣೂ ಹಿಂದಿಕ್ಕಿ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಕೇವಲ 440 ಎಸೆತಗಳಲ್ಲಿ. ಅಂದರೆ ಐಪಿಎಲ್ ಇತಿಹಾಸದಲ್ಲಿ 500 ಕ್ಕಿಂತ ಕಡಿಮೆ ಎಸೆತಗಳಲ್ಲಿ 1000 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ ಅತೀ ಕಡಿಮೆ ಎಸೆತಗಳ ಮೂಲಕ 1000 ರನ್​ ಪೂರೈಸಿದ ಐತಿಹಾಸಿಕ ಸಾಧನೆ ಮಾಡಿದ್ದಾರೆ.

  • ವೈಭವ್ ಸೂರ್ಯವಂಶಿ ಐಪಿಎಲ್ 2025 ರಲ್ಲಿ 7 ಇನಿಂಗ್ಸ್​ಗಳ ಮೂಲಕ 252 ರನ್ ಕಲೆಹಾಕಿದ್ದರು.
  • ಈ ಬಾರಿಯ ಟೂರ್ನಿಯಲ್ಲಿ 16 ಇನಿಂಗ್ಸ್ ಆಡಿರುವ ವೈಭವ್ ಕಲೆಹಾಕಿರುವುದು ಬರೋಬ್ಬರಿ 776 ರನ್​​ಗಳು.

ಈ ಮೂಲಕ ಕೇವಲ 23 ಇನಿಂಗ್ಸ್​ಗಳಲ್ಲಿ 1029 ರನ್ ಕಲೆಹಾಕಿದ್ದಾರೆ. ಇನ್ನು 1029 ರನ್​ ಕಲೆಹಾಕಲು ವೈಭವ್ ಸೂರ್ಯವಂಶಿ ತೆಗೆದುಕೊಂಡಿರುವುದು ಕೇವಲ 449 ಎಸೆತಗಳನ್ನು ಮಾತ್ರ. ಅಂದರೆ 228.95ರ ಸ್ಟ್ರೈಕ್ ರೇಟ್​ನಲ್ಲಿ ಯುವ ಎಡಗೈ ದಾಂಡಿಗ ಈ ಸಾಧನೆ ಮಾಡಿದ್ದಾರೆ.

ಇದರ ಜೊತೆಗೆ ಟಿ20 ಕ್ರಿಕೆಟ್​ ಇತಿಹಾಸದಲ್ಲೇ 200+ ಸ್ಟ್ರೈಕ್ ರೇಟ್​ನಲ್ಲಿ 700+ ರನ್ ಕಲೆಹಾಕಿದ ವಿಶೇಷ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಟಿ20 ಟೂರ್ನಿಯಲ್ಲಿ ಯಾವುದೇ ಬ್ಯಾಟರ್ 200+ ಸ್ಟ್ರೈಕ್ ರೇಟ್​ನಲ್ಲಿ ಈವರೆಗೆ 700 ರನ್​ಗಳ ಗಡಿ ದಾಟಿರಲಿಲ್ಲ.

  • ಈ ಹಿಂದೆ ಟಿ20 ಕ್ರಿಕೆಟ್​ನಲ್ಲಿ​ ಅತ್ಯಧಿಕ ಸ್ಟ್ರೈಕ್ ರೇಟ್​ನಲ್ಲಿ, ಅತೀ ಹೆಚ್ಚು ರನ್ ಕಲೆಹಾಕಿದ ಭರ್ಜರಿ ದಾಖಲೆ ಸೌತ್ ಆಫ್ರಿಕಾದ ರೈಲಿ ರೊಸ್ಸೊವ್ ಹೆಸರಿನಲ್ಲಿತ್ತು.
  • 2022ರ ಟಿ20 ಬ್ಲಾಸ್ಟ್​ ಟೂರ್ನಿಯಲ್ಲಿ ರೈಲಿ ರೊಸ್ಸೊವ್ 192.28 ಸ್ಟ್ರೈಕ್ ರೇಟ್​ನಲ್ಲಿ 623 ರನ್​ಗಳಿಸಿದ್ದು ಟಿ20 ಕ್ರಿಕೆಟ್​ನ ಸರ್ವಶ್ರೇಷ್ಠ ದಾಖಲೆಯಾಗಿತ್ತು.

ಇದನ್ನೂ ಓದಿ: ಫೈನಲ್ ಪಂದ್ಯದಲ್ಲಿ ಕೈಗೆ ಗಮ್ ಹಾಕಿ ಬ್ಯಾಟಿಂಗ್ ಮಾಡ್ತೀರಾ?

ಈ ದಾಖಲೆಯನ್ನು ಮುರಿದು ವೈಭವ್ ಸೂರ್ಯವಂಶಿ ಹೊಸ ಇತಿಹಾಸ ಬರೆದಿದ್ದಾರೆ. ಈ ಬಾರಿ ಐಪಿಎಲ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ವೈಭವ್ 237.31ರ ಸ್ಟ್ರೈಕ್ ರೇಟ್​ನಲ್ಲಿ 776 ರನ್​ ಬಾರಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Source link

ಡಿಕೆ ಶಿವಕುಮಾರ್ ಸಿಎಂ ಆಗಲೆಂದು 3 ವರ್ಷದಿಂದ ಗಡ್ಡ-ಕೂದಲು ಬಿಟ್ಟು ಹರಕೆ ಹೊತ್ತಿದ್ದ ಅಪ್ಪಟ ಅಭಿಮಾನಿ!

ರಾಮನಗರ, ಮೇ 30: ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ‘ಕನಕಪುರ ಬಂಡೆ’ ಖ್ಯಾತಿಯ ಡಿಕೆ ಶಿವಕುಮಾರ್ ಆಯ್ಕೆ ಹಾಗೂ ಪದಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಅವರ ಅಪ್ಪಟ ಅಭಿಮಾನಿಯೊಬ್ಬರ ಅಪರೂಪದ ಹರಕೆಯ ಕಥೆ ಬೆಳಕಿಗೆ ಬಂದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದ ಈಶ್ವರಪ್ಪ ಎಂಬ ಅಭಿಮಾನಿ, ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿ ಗಾದಿ ಏರಲಿ ಎಂದು ಕಳೆದ ಮೂರು ವರ್ಷಗಳಿಂದ ವಿಶಿಷ್ಟ ಹರಕೆಯೊಂದನ್ನು ಹೊತ್ತಿದ್ದರು.

ಆಸ್ತಿ, ಅಂತಸ್ತಿಗಿಂತಲೂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯನ್ನೇ ತನ್ನ ಧ್ಯೇಯವಾಗಿಸಿಕೊಂಡಿದ್ದ ಈಶ್ವರಪ್ಪ, ‘ಡಿಕೆಶಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗೂ ನಾನು ತಲೆಗೂದಲು ಹಾಗೂ ಗಡ್ಡವನ್ನು ಕತ್ತರಿಸುವುದಿಲ್ಲ (ಕ್ಷೌರ ಮಾಡಿಸುವುದಿಲ್ಲ)’ ಎಂದು ಪ್ರತಿಜ್ಞೆ ಮಾಡಿದ್ದರು. ಅಷ್ಟೇ ಅಲ್ಲದೆ, ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ (ಅಲಹಾಬಾದ್) ತೆರಳಿದ್ದ ಈಶ್ವರಪ್ಪ, ಪವಿತ್ರ ಕುಂಭಮೇಳದ ಸಂದರ್ಭದಲ್ಲಿ ಅಲ್ಲಿನ ತ್ರಿವೇಣಿ ಸಂಗಮದಲ್ಲಿ ಡಿಕೆ ಶಿವಕುಮಾರ್ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು, ಅವರು ಶೀಘ್ರದಲ್ಲೇ ಕರುನಾಡಿನ ಸಿಎಂ ಆಗಲಿ ಎಂದು ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿ ಗಮನ ಸೆಳೆದಿದ್ದರು.

ಕಳೆದ ಮೂರು ವರ್ಷಗಳಿಂದ ಗಡ್ಡ ಮತ್ತು ದಟ್ಟವಾದ ತಲೆಗೂದಲು ಬಿಟ್ಟು ತಪಸ್ವಿಯಂತೆ ತಿರುಗುತ್ತಿದ್ದ ಈಶ್ವರಪ್ಪ ಅವರ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಹಾಗೂ ಕಾಲಭೈರವೇಶ್ವರ ಅನುಗ್ರಹ ನೀಡಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಹೆಸರು ಸಿಎಂ ಹುದ್ದೆಗೆ ಫೈನಲ್ ಆಗುತ್ತಿದ್ದಂತೆಯೇ ಈಶ್ವರಪ್ಪ ಅವರ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಬೆಂಗಳೂರಿಗೆ ಬಂದು ಅವರನ್ನು ಖುದ್ದಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಲು ಈಶ್ವರಪ್ಪ ನಿರ್ಧರಿಸಿದ್ದಾರೆ. ಅದಾದ ಬಳಿಕ ನೇರವಾಗಿ ಮಂತ್ರಾಲಯ ಪುಣ್ಯಕ್ಷೇತ್ರಕ್ಕೆ ತೆರಳಿ ಶ್ರೀ ಗುರು ರಾಯರ ಸನ್ನಿಧಿಯಲ್ಲಿ ತಮ್ಮ ತಲೆಗೂದಲು ಹಾಗೂ ಗಡ್ಡವನ್ನು ಒಪ್ಪಿಸಿ (ಮುಡಿ ಕೊಟ್ಟು) ಹರಕೆ ತೀರಿಸುವುದಾಗಿ ಭಾವುಕರಾಗಿ ತಿಳಿಸಿದ್ದಾರೆ. ನಾಯಕನ ಮೇಲಿನ ಈ ಅಪ್ರತಿಮ ಅಭಿಮಾನದ ವಿಡಿಯೋ ಈಗ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version