ನಮ್ಮ ಭಾರತ ಮಾತ್ರವಲ್ಲ ಎಲ್ಲಾ ದೇಶಗಳಲ್ಲೂ ಇದೊಂದು ಸಮಸ್ಯೆ ಇದೆ. ಬೇರೆಯವರ ಮನೆ ಮುಂದೆ ಕಾರು ನಿಲ್ಲಿಸುವುದು, ಬೇರೆಯವರು ಮನೆಗೆ ಹೋಗುವ ದಾರಿಗೆ ಅಡ್ಡವಾಗಿ ವಾಹನ ಪಾರ್ಕ್ ಮಾಡುವುದು, ಪಾರ್ಕಿಂಗ್ಗೆ ಜಾಗವಿದ್ದರೂ ಯದ್ವಾತದ್ವಾ ಗಾಡಿ ನಿಲ್ಲಿಸುವುದು ಹೀಗೆ.ಆದರೆ ಆ ರೀತಿ ವಾಹನ ನಿಲ್ಲಿಸಬಾರದು ಅಂದ್ರೆ ಒಂದೋ ಅಲ್ಲೇ ನೀವು ನಿಂತು ಯಾವುದಾದರೂ ವಾಹನ ಬರುತ್ತಾ ಎಂದು ಕಾದು ನಿಲ್ಲಿಸುವ ಸಮಯದಲ್ಲಿ ಹೇಳಬೇಕು, ಅದಂತೂ ಆಗದ ಕೆಲಸ ಇನ್ನು, ಈ ವ್ಯಕ್ತಿ ಮಾಡಿರುವ ಟ್ರಿಕ್ ತುಂಬಾ ಚೆನ್ನಾಗಿ ವರ್ಕ್ ಆಗಬಹುದು. ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ತಾವು ಮನೆಗೆ ಹೋಗುವ ಆ ಮಾರ್ಗದಲ್ಲಿ ಯಾರಾದರೂ ಗಾಡಿ ನಿಲ್ಲಿಸಿದರೆ ಆಟೋಮೆಟಿಕ್ ಆಗಿ ನೀರು ಕಾಡಿಯ ಮೇಲೆ ಹಾರುವಂತೆ ಮಾಡಿದ್ದಾರೆ. ಆಗ ಅವರಿಗೆ ಅಲ್ಲಿ ಗಾಡಿ ನಿಲ್ಲಿಸಬಾರದೆಂದು ಅರ್ಥವಾಗುವುದು.
ಗೀತಾ ಭಾರತಿ ಭಟ್ ಅವರು ಸಿನಿಮಾದಲ್ಲಿ ತಮಗಾದ ಬಾಡಿಶೇಮಿಂಗ್ ಬಗ್ಗೆ ಮಾತನಾಡಿದ್ದರು. ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ‘ಹೂ ತರ ಇದ್ಲು, ಹೂಕೋಸ್ ತರ ಆಗಿದ್ದಾಳೆ’ ಎಂಬ ಡೈಲಾಗ್ ಇದೆ. ಈ ದೃಶ್ಯವನ್ನು ಗೀತಾ ಮಾಡಿದರು. ಥಿಯೇಟರ್ನಲ್ಲಿ ನೋಡಿದಾಗ ಅವರಿಗೆ ಶಾಕ್ ಆಗಿತ್ತಂತೆ. ಅದಕ್ಕೆ ಅವರು ತಕರಾರು ತೆಗೆದಿದ್ದರು. ಈ ವಿಷಯಕ್ಕೆ ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್ ಹಾಗೂ ನಿರ್ದೇಶಕ ಕೃಷ್ಣ ಅವರು ಪ್ರತಿಕ್ರಿಯಿಸಿದ್ದಾರೆ. ‘ಅಷ್ಟಿದ್ರೆ ಸಿನಿಮಾನೇ ಒಪ್ಪಿಕೊಳ್ಳಬಾರದಿತ್ತು’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಈ ಮೊದಲು ಮಾತನಾಡಿದ್ದ ಗೀತಾ ಅವರು, ನಿರ್ದೇಶಕ ಕೃಷ್ಣ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಸಿನಿಮಾದಲ್ಲಿ ಈ ರೀತಿಯ ಡೈಲಾಗ್ ಇದೆ ಎಂಬುದೇ ಗೊತ್ತಿರಲಿಲ್ಲ ಎಂದು ಆರೋಪಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ‘ಫಸ್ಟ್ ಡೇ ಫಸ್ಟ್ ಶೋ ಕನ್ನಡ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಿಲನಾ ಹಾಗೂ ಕೃಷ್ಣ ಮಾತನಾಡಿದ್ದಾರೆ.
‘ಅದು ಬಾಡಿ ಶೇಮಿಂಗ್ ಮಾಡಿದ್ದಲ್ಲ. ರೈಮಿಂಗ್ ಆಗಿ ಬರೆದಿದ್ದು ಅಷ್ಟೇ’ ಎಂದು ಕೃಷ್ಣ ಅವರು ಹೇಳಿದ್ದಾರೆ. ‘ಅವರಿಗೆ ಸಿನಿಮಾ ಪಾತ್ರ ಗೊತ್ತಿತ್ತು. ಈಗ ಮಾತನಾಡುವ ಅವಶ್ಯಕತೆ ಇಲ್ಲ. ಅವರು ಸಂಪೂರ್ಣ ದೃಶ್ಯವನ್ನೇ ಮಾಡಿ ಹೋಗಿದ್ದಾರೆ. ಕಲಾವಿದರಿಗೆ ಹೇಳದೆ ನಾವು ದೃಶ್ಯ ಮಾಡೋಕಾಗಲ್ಲ. ಅವರಿಗೆ ಆ ಬಳಿಕ ಹಾಗೆ ಅನಿಸಿರಬಹುದು. ಅಷ್ಟಿದ್ರೆ ಅವರು ಆ ರೀತಿಯ ಪಾತ್ರಗಳನ್ನು ಮಾಡಬಾರದು. ಯಾವುದನ್ನು ಮುಚ್ಚಿಟ್ಟು ಮಾಡಲ್ಲ. ಆಡಿಷನ್ ಮಾಡಿ ಕಾಸ್ಟ್ ಮಾಡಿರೋದು. ನಿಮಗೆ ಆಗಲ್ಲ ಅಂದ್ರೆ ಬಿಡಿ’ ಎಂದು ಮಿಲನ ಖಡಕ್ ಆಗಿ ಹೇಳಿದ್ದಾರೆ.
‘ಗೀತಾ ಅವರು ಧಾರಾವಾಹಿ ಮಾಡುತ್ತಾ ಇದ್ದರು. ಅದರಲ್ಲೂ ಅದೇ ಕಥೆ ಇತ್ತು. ಮೂರು ವರ್ಷ ಆ ರೀತಿಯ ಧಾರಾವಾಹಿ ಮಾಡಿ, ನಮ್ಮ ಒಂದು ದೃಶ್ಯಕ್ಕೆ ತಕರಾರು ತೆಗೆದರೆ ಹೇಗೆ? ಮೇಕಿಂಗ್ ವಿಡಿಯೋ ಯೂಟ್ಯೂಬ್ನಲ್ಲೇ ಇದೆ. ಯಾರಿಗೂ ಹರ್ಟ್ ಮಾಡಬೇಕು ಎಂದು ಮಾಡಿದ್ದಲ್ಲ. ಅನೇಕರಿಗೆ ಕನೆಕ್ಟ್ ಆಗಿರೋ ವಿಷಯ ಅದು’ ಎಂದು ಕೃಷ್ಣ ಅವರು ಪ್ರತಿಕ್ರಿಯಿಸಿದರು.
‘ಕಥಾ ನಾಯಕ ಆದಿ ಏನು ಫೀಲ್ ಮಾಡ್ತಾನೆ ಎಂದು ಬರೆದಿದ್ದು. ಕೆಲವರಿಗೆ ಬೇಸರ ಆಗಬಹುದು, ಕೆಲವರಿಗೆ ಖುಷಿ ಆಗಿರಬಹುದು. ಏನು ಮಾಡೋಕೂ ಆಗಲ್ಲ’ ಎಂದರು ಕೃಷ್ಣ. ‘ಕಾಮಿಡಿಯನ್ನು ಕಾಮಿಡಿತರ ತಗೋಬೇಕು’ ಎಂಬುದು ಮಿಲನಾ ಕೋರಿಕೆ.
ಬೆಂಗಳೂರು, ಮಾರ್ಚ್ 10: ಇರಾನ್, ಇಸ್ರೇಲ್, ಅಮೆರಿಕ ಯುದ್ಧದ (Iran Israel war impact) ಹಿನ್ನೆಲೆ ಭಾರತದಲ್ಲಿ ಈಗಾಗಲೇ ಆಟೋ ಎಲ್ಪಿಜಿ ಬೆಲೆ (LPG Price) ಲೀಟರ್ ಗೆ 10 ರಿಂದ 20 ರೂಪಾಯಿ ವರೆಗೆ ಏರಿಕೆ ಆಗಿದೆ. ದರ ಏರಿಕೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಆರ್ಥಿಕ ತಜ್ಞರು, ಯುದ್ಧ ಹೀಗೆಯೇ ಮುಂದುವರೆದರೆ ಭಾರತದ ಮೇಲೆ ದೊಡ್ಡ ಪರಿಣಾಮವಾಗಲಿದೆ ಎಂದಿದ್ದಾರೆ. ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಕಾರಣ ಅದರ ಮೂಲಕ ಭಾರತಕ್ಕೆ ಬರುವ ಸರಕುಗಳ ಸಾಗಾಟಕ್ಕೆ ಅಡ್ಡಿಯಾಗಿದೆ. ಯುದ್ದದ ಕಾರಣದಿಂದಾಗಿ ಸದ್ಯ ಗುಡ್ ಹೋಪ್ ಶಿಖರದ ಕಡೆಯಿಂದ ಹಡಗುಗಳು ಬರಬೇಕಾಗಿರುವುದರಿಂದ ವೆಚ್ಚ ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞ ಪ್ರೊ. ಎಸ್ಆರ್ ಕೇಶವ ತಿಳಿಸಿದ್ದಾರೆ.
ಯುದ್ಧದ ಪರಿಣಾಮದಿಂದ ಬೆಂಗಳೂರಿನ ಆಟೋ, ಕ್ಯಾಬ್ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದೆ. ಆಟೋ, ಕ್ಯಾಬ್ಗೆ ಬಳಸುವ ಎಲ್ಪಿಜಿ ದರ ಏರಿಕೆಯಾಗಿದೆ. ಈ ಹಿಂದೆ ಆಟೋ ಎಲ್ಪಿಜಿ ದರ ಲೀಟರ್ಗೆ 58 ರೂ. ಇತ್ತು. ನಂತರ 59 ರೂ. ಆಯಿತು ಇದೀಗ ಕೆಲ ಬಂಕ್ಗಳಲ್ಲಿ 69.74 ರೂ. ಇದ್ದರೆ, ಕೆಲವೆಡೆ ಮಾಲೀಕರು 15 ರಿಂದ 20 ರೂ. ವರೆಗೆ ದರ ಏರಿಕೆ ಮಾಡಿಕೊಂಡಿದ್ದಾರೆ.
ಮುಂದಿನ ವಾರದಿಂದ ಆಟೋ ಎಲ್ಪಿಜಿ ಇನ್ನಷ್ಟು ದುಬಾರಿ
ಮುಂದಿನ ವಾರದಿಂದ ಆಟೋ, ಕ್ಯಾಬ್ ಎಲ್ಪಿಜಿ ದರ ಮತ್ತಷ್ಟು ದರ ಏರಿಕೆ ಆಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ಆಟೋ, ಕ್ಯಾಬ್ ಬುಕ್ ಮಾಡುತ್ತಿದ್ದಂತೆಯೇ ಚಾಲಕರು ಕಿಮೀಗೆ 10 ರಿಂದ 20 ರೂಪಾಯಿ ಹೆಚ್ಚುವರಿ ಕೇಳುತ್ತಿದ್ದಾರೆ. ಆಟೋ, ಕ್ಯಾಬ್ ಮೀಟರ್ ದರ ಏರಿಕೆ ಮಾಡುವಂತೆ ಚಾಲಕರು ಸಾರಿಗೆ ಇಲಾಖೆಯ ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಈಗೆಷ್ಟಿದೆ ಆಟೋ, ಕ್ಯಾಬ್ ದರ?
ಸದ್ಯ ಬೆಂಗಳೂರು ನಗರದಲ್ಲಿ ಆಟೋ ಮೀಟರ್ ಕನಿಷ್ಠ ದರ 36 ರೂ. ಇದೆ. ನಂತರ ಒಂದು ಕಿಮೀಗೆ 16 ರೂ.ನಂತೆ ದರ ಇರುತ್ತದೆ. ಕ್ಯಾಬ್ಗೆ ಕನಿಷ್ಠ ದರದ ಮೇಲೆ ಒಂದು ಕಿಮೀ 24 ರೂ. ಇದ್ದು, ಅದನ್ನು 10 ರೂಪಾಯಿ ಏರಿಕೆ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ಇರಾನ್ ಮೇಲಿನ ಅಮೆರಿಕ ಇಸ್ರೇಲ್ ಯುದ್ಧದ ಪರಿಣಾಮ ಬೆಂಗಳೂರಿನ ಮೇಲೆ ದೊಡ್ಡಮಟ್ಟದಲ್ಲಿ ತಟ್ಟಲಿದ್ದು, ಒಂದು ವೇಳೆ ಯುದ್ಧ ಈ ವಾರವೂ ಮುಂದುವರಿದರೆ ದರ ಏರಿಕೆ ಬಿಸಿ ಇಲ್ಲಿನ ಜನ ಅನುಭವಿಸಬೇಕಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 10: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡದಿದ್ರೆ ಏನಾಗುತ್ತೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಧಾರ್ಮಿಕ ಕಾರ್ಯಗಳಿಗೆ ಅಥವಾ ಸಾಮಾಜಿಕ ಸೇವೆಗೆ ಸಹಾಯ ಮಾಡುವ ಭರವಸೆಗಳನ್ನು ನೀಡಿದಾಗ, ಅದನ್ನು ಈಡೇರಿಸದಿರುವುದು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದನ್ನು ಸಂಕಲ್ಪ ಭಂಗ ಎಂದು ಕರೆಯಲಾಗುತ್ತದೆ. ದೇವಸ್ಥಾನಗಳಿಗೆ ದೇಣಿಗೆ ನೀಡುವುದಾಗಿ ಅಥವಾ ಶುಭ ಕಾರ್ಯಗಳಿಗೆ ಬೆಂಬಲ ನೀಡುವುದಾಗಿ ಹೇಳಿ, ನಂತರ ಅದನ್ನು ಮರೆತುಬಿಡುವುದು ಅಥವಾ ಪೂರೈಸದಿರುವುದು ಆಧ್ಯಾತ್ಮಿಕವಾಗಿ ಹಾನಿಕರ.
ಈ ರೀತಿಯ ವಚನಭಂಗವು ಮಾನಸಿಕ ಅಶಾಂತಿ, ರೋಗರುಜಿನಗಳು ಮತ್ತು ಅಪರಾಧ ಪ್ರಜ್ಞೆಗೆ (ಗಿಲ್ಟಿನೆಸ್) ಕಾರಣವಾಗುತ್ತದೆ. ವ್ಯಕ್ತಿಯ ಆತ್ಮವೇ ಈಡೇರಿಸದ ಭರವಸೆಗಳ ಬಗ್ಗೆ ನೆನಪಿಸುತ್ತಿರುತ್ತದೆ. ಸಣ್ಣ ದೇವಾಲಯಗಳಿಗೆ ಅಥವಾ ಗ್ರಾಮೀಣ ಗುಡಿಗಳಿಗೆ ನೀಡಿದ ಮಾತು ತಪ್ಪಿದಾಗ ಕುಟುಂಬದಲ್ಲಿ ದೈವಾನುಗ್ರಹ ಕಡಿಮೆಯಾಗಬಹುದು. ಇದು ವ್ಯಕ್ತಿಯ ಧನಾತ್ಮಕ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗಿ, ಪಂಚಭೂತಗಳ ಅನುಗ್ರಹವನ್ನೂ ಕಡಿಮೆ ಮಾಡಬಹುದು. ಪದೇ ಪದೇ ವಿಘ್ನಗಳು ಎದುರಾಗಿ, ಕುಲದೇವರ ಅನುಗ್ರಹವೂ ಕುಂಠಿತವಾಗಬಹುದು ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.
ಮಂಗಳವಾರ ಮಂಗಳ ಗ್ರಹದ ದಿನ. ಮಂಗಳ ಗ್ರಹವು ಧರಿತ್ರಿಯ ಮಗ, ಮತ್ತು ಭೂಮಿಯ ಮೇಲೆ ವಾಸಿಸುವವರು ಮಂಗಳ ಗ್ರಹದಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಮಂಗಳ ಗ್ರಹವು ಅಪಘಾತಗಳು, ಘರ್ಷಣೆಗಳು ಮತ್ತು ನಷ್ಟಗಳಿಗೆ ಕಾರಣವಾಗಿದೆ. ಅದಕ್ಕಾಗಿಯೇ ಸಾಮಾನ್ಯವಾಗಿ ಮಂಗಳವಾರದಂದು, ಮಂಗಳ ಗ್ರಹವು ತನ್ನ ಪ್ರಭಾವದಲ್ಲಿರುವಾಗ, ಶುಭ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ. ಮಂಗಳವಾರದಂದು ಯಾವ ಕೆಲಸಗಳನ್ನೆಲ್ಲ ಮಾಡಬಹುದು? ಯಾವುದನ್ನೆಲ್ಲ ಮಾಡಿದರೆ ತೊಂದರೆ ಎಂಬುದನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತುತಜ್ಞರಾದ ಡಾ. ಬಸವರಾಜ ಗುರೂಜಿ ಇಲ್ಲಿ ತಿಳಿಸಿಕೊಟ್ಟಿದ್ದಾರೆ.
ಮಂಗಳವಾರ ಮಾಡಬಾರದ ಕೆಲಸಗಳು ಯಾವುವು?
ಮಂಗಳವಾರ ಉಗುರುಗಳನ್ನು ಕತ್ತರಿಸಬೇಡಿ ಅಥವಾ ಕ್ಷೌರ ಮಾಡಬೇಡಿ.
ನೀವು ಮಂಗಳವಾರ ಸಾಲವನ್ನು ನೀಡಿದರೆ, ಆ ಹಣವನ್ನು ಮರಳಿ ಪಡೆಯುವುದು ತುಂಬಾ ಕಷ್ಟ.
ನೀವು ಸಾಲವನ್ನು ತೆಗೆದುಕೊಂಡರೆ, ಅದು ಅನೇಕ ದುಃಖಗಳು ಮತ್ತು ಅನಗತ್ಯ ಕೆಲಸಗಳಿಗೆ ಖರ್ಚು ಆಗುತ್ತದೆ ಮತ್ತು ಅದನ್ನು ಮರುಪಾವತಿಸಲು ಸಾಧ್ಯವಾಗದ ಅಪಾಯವಿದೆ.
ಮಂಗಳವಾರ ಹೊಸ ಬಟ್ಟೆಗಳನ್ನು ಧರಿಸಬೇಡಿ.
ತುರ್ತು ಇಲ್ಲದಿದ್ದರೆ ಮಂಗಳವಾರ ಪ್ರಯಾಣಿಸಬೇಡಿ.
ಮಂಗಳವಾರ ಉಪವಾಸ ಮಾಡುವವರು ರಾತ್ರಿಯಲ್ಲಿ ಉಪ್ಪು ಹಾಕಿದ ಆಹಾರವನ್ನು ಸೇವಿಸಬಾರದು.
ಮಂಗಳವಾರ ನದಿಯಲ್ಲಿ ಸ್ನಾನ ಮಾಡಬಾರದು.
ದೈವಿಕ ಕಾರ್ಯಗಳಿಗಾಗಿ ಯಾವುದೇ ಸಮಯದಲ್ಲಿ ಶೈಕ್ಷಣಿಕ ಮತ್ತು ವೈದ್ಯಕೀಯ ಸಾಲಗಳನ್ನು ನೀಡಬಹುದು.
ಮಂಗಳವಾರ ಮಾಡಬೇಕಾದ ಕೆಲಸಗಳು ಯಾವುವು?
ಮಂಗಳವಾರ ಆಂಜನೇಯನನ್ನು ಧ್ಯಾನಿಸುವುದರಿಂದ ಧೈರ್ಯ ಬರುತ್ತದೆ ಮತ್ತು ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.
ಸುಬ್ರಹ್ಮಣ್ಯ ದೇವರನ್ನು ಪೂಜಿಸುವುದರಿಂದ ಮಂಗಳನ ಪ್ರಭಾವದಿಂದ ಉಂಟಾಗುವ ಅಪಾಯಗಳನ್ನು ತಡೆಯಬಹುದು.
ಮಂಗಳವಾರ ಕಾಳಿ ದೇವಿಯನ್ನು ಧ್ಯಾನಿಸುವುದರಿಂದ ಶತ್ರುಗಳ ಮೇಲೆ ಜಯ ಸಿಗುತ್ತದೆ.
ಮಂಗಳವಾರ ಕೆಂಪು ಬಟ್ಟೆಗಳನ್ನು ಧರಿಸಿ ಮತ್ತು ಕೆಂಪು ಹೂವುಗಳಿಂದ ಬಯಸಿದ ದೇವರನ್ನು ಪ್ರಾರ್ಥಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಜಾತಕದಲ್ಲಿ ಮಂಗಳನು ಕೆಟ್ಟ ದೃಷ್ಟಿಯಿಂದ ಕಾಣಿಸಿಕೊಂಡರೆ, ಕೆಂಪು ಬಟ್ಟೆಗಳನ್ನು ಧರಿಸಬಾರದು.
ಮಂಗಳವಾರ ಸಾಲವನ್ನು ತೀರಿಸಿದರೆ. ಆ ಸಾಲವನ್ನು ಬೇಗನೆ ತೀರಿಸಲಾಗುತ್ತದೆ.
ಮಂಗಳವಾರ ನಮ್ಮ ಬ್ಯಾಂಕ್ ಖಾತೆಯಲ್ಲಿ ಬಹಳಷ್ಟು ಹಣವನ್ನು ಠೇವಣಿ ಇಡುವುದರಿಂದ, ಅದು ಬೆಳೆಯುತ್ತದೆ.
ಮಂಗಳವಾರ ರಾಹುಕಾಲದಲ್ಲಿ (ಮಧ್ಯಾಹ್ನ 3 ರಿಂದ ಸಂಜೆ 4.30 ರವರೆಗೆ) ದುರ್ಗಾ ದೇವಿ ದರ್ಶನ, ದುರ್ಗಾ ಸ್ತೋತ್ರಗಳನ್ನು ಪಠಿಸುವುದರಿಂದ ಆಧ್ಯಾತ್ಮಿಕ ಶಕ್ತಿ ಹೆಚ್ಚಾಗುತ್ತದೆ.
ಹನುಮಂತನನ್ನು ಸಿಂಧೂರದಿಂದ ಪೂಜಿಸುವುದು ಮತ್ತು ಸುಬ್ರಹ್ಮಣ್ಯ ದೇವರಿಗೆ ಹನ್ನೊಂದು ಪ್ರದಕ್ಷಿಣೆ ಹಾಕುವುದರಿಂದ ದೋಷದ ಪರಿಣಾಮಗಳು ಕಡಿಮೆಯಾಗುತ್ತವೆ.
ಜ್ಯೋತಿಷ್ಯ ಸಂಬಂಧಿತ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಿರ್ಭಾವುಕ ನಿರ್ಧಾರ ತೆಗೆದುಕೊಳ್ಳಬೇಕು, ಯಾರನ್ನೂ ಹಚ್ಚಿಕೊಳ್ಳಬಾರದು ಎಂದುಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮಿಂದ ನಿರೀಕ್ಷೆ ಮಾಡುತ್ತಿರುವುದು ತಲುಪಲು ಸಾಧ್ಯ ಇಲ್ಲದಷ್ಟು ಎತ್ತರದಲ್ಲಿದೆ ಎಂದೆನಿಸುವುದಕ್ಕೆ ಶುರು ಆಗಲಿದೆ. ನೀವು ಒಪ್ಪಿಸಿದ ಕೆಲಸ- ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುವುದಾಗಿ ಮಾತು ನೀಡಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಾಗುತ್ತಿಲ್ಲ ಎನ್ನುವುದರಿಂದ ನೀವು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತೀರಿ.
ಪ್ರಯಾಣಕ್ಕೆ ಹೆಚ್ಚು ಖರ್ಚು ಮಾಡುವ ಯೋಗ ಇದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂಬ ನಿಮ್ಮ ಬದ್ಧತೆಗೆ ಸ್ನೇಹಿತರು- ಸಂಬಂಧಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಇತರರು ತಮ್ಮಿಂದ ಆಗದು ಎಂದು ಅರ್ಧಕ್ಕೇ ನಿಲ್ಲಿಸಿದಂಥ ಪ್ರಾಜೆಕ್ಟ್ ಅನ್ನು ನೀವು ಕೈಗೆತ್ತಿಕೊಂಡು, ಸಮಾಧಾನ ಆಗುವ ಮಟ್ಟಕ್ಕೆ ಪೂರ್ಣ ಮಾಡಲಿದ್ದೀರಿ. ಹಣಕಾಸಿನ ವಿಚಾರವನ್ನು ಆರಂಭದಲ್ಲಿಯೇ ಮಾತನಾಡಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡಿಕೊಳ್ಳಬೇಡಿ.
ಸಂಗಾತಿ ಜೊತೆಗೆ ಲಾಂಗ್ ಡ್ರೈವ್ ಗೆ ತೆರಳುವಂಥ ಯೋಗ ಇದೆ. ಇಷ್ಟು ಸಮಯ ನಿಮ್ಮ ಮನಸ್ಸಲ್ಲಿ ಇಟ್ಟುಕೊಂಡು, ಹೇಳದೇ ಇದ್ದಂಥ ಕೆಲವು ವಿಷಯಗಳನ್ನು ಹಂಚಿಕೊಳ್ಳಲಿದ್ದೀರಿ. ಹೊಸ ಕೋರ್ಸ್ ಸೇರಿಕೊಳ್ಳುವುದಕ್ಕೆ ವಿಚಾರಣೆ ನಡೆಸಲಿದ್ದೀರಿ. ವೃತ್ತಿಪರರು ನೀವಾಗಿದ್ದರೆ ನಿಮಗೆ ಗೊತ್ತಿರುವ ಮಾಹಿತಿಯೇ ಇದ್ದರೂ ಅದರ ಬಗ್ಗೆ ಇತರರಿಗೆ ಮಾಹಿತಿ ನೀಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಪರಿಶೀಲನೆ ಮಾಡಿಕೊಳ್ಳುವುದು ಒಳ್ಳೆಯದು.
ಸ್ನೇಹಿತರ ಜೊತೆಗೆ ದೂರ ಪ್ರಯಾಣ ಮಾಡುವಂಥ ಯೋಗ ಇದೆ. ಅದು ಕೂಡ ಯಾವುದೇ ಯೋಜನೆ ಇಲ್ಲದೆ ದಿಢೀರ್ ಹೊರಟುಬಿಡುವಂತೆ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರು ಯಾವುದೇ ಸನ್ನಿವೇಶವನ್ನು ಭಾವನಾತ್ಮಕ ಹಿನ್ನೆಲೆಯಲ್ಲಿ ನೋಡುವುದಕ್ಕೆ ಹೋಗಬೇಡಿ. ಲಾಭಕ್ಕೆ ಬರಲಾರದು ಎಂದೆನಿಸಿದ್ದನ್ನು ನಿಲ್ಲಿಸಿಬಿಡುವುದು ಒಳ್ಳೆಯದು. ಆಯುರ್ವೇದ ಔಷಧಗಳ ವಿತರಣೆ ಮಾಡುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ.
ಮನೆಯ ಖರ್ಚು ವೆಚ್ಚಗಳು ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿಗೆ ಆಗಲಿದೆ. ಆದಾಯ ಹಾಗೂ ಅದನ್ನು ಬಳಸುವುದಕ್ಕೂ ತಾಳೆ ಆಗುತ್ತಿಲ್ಲ ಎಂಬುದು ಚಿಂತೆಗೆ ಕಾರಣ ಆಗಲಿದೆ. ಆದಾಯದ ಮೂಲ ಜಾಸ್ತಿ ಮಾಡಿಕೊಳ್ಳಲು ಹಾಕುವಂಥ ಶ್ರಮ ಫಲ ನೀಡುತ್ತದೆ. ಸಂಗಾತಿ ಜತೆಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಅವರ ಬೇಕು- ಬೇಡಗಳನ್ನು ಕೇಳಿಕೊಂಡು, ಅದನ್ನು ಒದಗಿಸಿಕೊಡಲು ಆದ್ಯತೆ ನೀಡಲಿದ್ದೀರಿ.
ನಿಮ್ಮ ನಿಲವು- ಉದ್ದೇಶದ ಬಗ್ಗೆ ಸಂಬಂಧಿಕರು ಆಕ್ಷೇಪದ ಮಾತುಗಳನ್ನು ಹೇಳಲಿದ್ದಾರೆ. ನೀವು ಸಹ ಇಂಥ ಮಾತುಗಳಿಗೆ ಅಲ್ಲಿಂದ ಅಲ್ಲಿಗೆ ಎಂಬಂತೆ ಉತ್ತರವನ್ನು ಸಹ ನೀಡುತ್ತೀರಿ. ದೊಡ್ಡ ಅಳತೆಯ ಸೈಟು ಇರುವವರು ಅದನ್ನು ಮಾರಾಟ ಮಾಡಿ, ಕಟ್ಟಿರುವ ಮನೆ ಖರೀದಿ ಮಾಡುವ ಬಗ್ಗೆ ಆಲೋಚಿಸುತ್ತೀರಿ. ಅದರಲ್ಲೂ ತಿಂಗಳಾ ತಿಂಗಳು ಬಾಡಿಗೆ ರೂಪದಲ್ಲಿ ನಿಗದಿತ ಆದಾಯ ಮಾಡಿಕೊಳ್ಳುವ ಕಡೆಗೆ ಗಮನ ಇರಲಿದೆ.
ನಿಮ್ಮ ಹತ್ತಿರ ಏನಿದೆಯೋ ಅದು ಮಾತ್ರ ನಿಮ್ಮದು. ನೀವು ಬೇರೆಯವರಿಗೆ ಕೊಟ್ಟಂಥ ಸಾಲ, ಈಗಾಗಲೇ ಕೆಲಸ ಮಾಡಿಯಾಗಿದೆ ಅದರ ಹಣ ಬರಬೇಕಿದೆ, ಸ್ನೇಹಿತರು- ಸಂಬಂಧಿಕರು ಸಹಾಯ ಮಾಡುವುದಾಗಿ ಕೊಟ್ಟಂಥ ಮಾತು ಇದ್ಯಾವುದನ್ನೂ ನೆಚ್ಚಿಕೊಂಡು ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದಕ್ಕೆ ಹೋಗಬೇಡಿ. ಹೋಟೆಲ್ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ.
ಪ್ರೀತಿಯಲ್ಲಿ ಇರುವವರು ಜೊತೆಯಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ. ಭವಿಷ್ಯದ ಬಗ್ಗೆ ಗಂಭೀರವಾದ ಚರ್ಚೆ ಸಹ ಮಾಡಲಿದ್ದೀರಿ. ಇಷ್ಟು ಸಮಯ ಮಾತನಾಡದೆ ಉಳಿದು ಹೋಗಿದ್ದ ಕೆಲವು ಸಂಗತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಯಾರ ಜತೆಗೂ ಅತಿಯಾದ ಸಲುಗೆ ಬೇಡ. ಇದನ್ನು ಮೀರಿಯೂ ನಡೆದುಕೊಂಡಲ್ಲಿ ಎಚ್ಚರಿಕೆ ಮಾತುಗಳನ್ನು ಕೇಳಿಸಿಕೊಳ್ಳುವಂತೆ, ಮುಜುಗರದ ಸನ್ನಿವೇಶ ಎದುರಿಸುವಂತೆ ಆಗುತ್ತದೆ.
ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಯೋಗ ಇದೆ. ಬಹಳ ಸಮಯದಿಂದ ನೀವು ಹೇಳಬೇಕು ಅಂದುಕೊಳ್ಳುತ್ತಾ ಇದ್ದ ಕೆಲವು ವಿಚಾರಗಳನ್ನು ಸಂಬಂಧ ಪಟ್ಟವರಿಗೆ ಹೇಳಲಿದ್ದೀರಿ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ. ನೀವು ಕೈಯಿಂದ ಹಣ ಹಾಕಿ, ಮಾಡಿಕೊಟ್ಟ ಕೆಲಸದ ಬಾಕಿ ವಸೂಲಿ ಮಾಡುವುದು ಈ ದಿನ ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕುದುರುವುದು ಕಷ್ಟ ಆಗಲಿದೆ.
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಸಪ್ತಮೀ ತಿಥಿಯ ಮಂಗಳವಾರ ಗೆಲ್ಲುವುದು ಸುಲಭವಲ್ಲ, ವಾಗ್ವಾದದಲ್ಲಿ ಹಿನ್ನಡೆ, ಅಧಿಕ ವಿಶ್ರಾಂತಿ ಮಾಡುವಿರಿ, ರಹಸ್ಯ ಮಾತು, ಉದಾತ್ತ ಚಿಂತನೆ ಇವೆಲ್ಲ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಮಂಗಳವಾರ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಅನುರಾಧಾ, ಯೋಗ : ಹರ್ಷಣ, ಕರಣ : ಬವ, ಸೂರ್ಯೋದಯ – 06 – 36 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:34 – 17:03, ಯಮಗಂಡ ಕಾಲ 09:36 – 11:5, ಗುಳಿಕ ಕಾಲ 14:04 – 15:34
ಮೇಷ ರಾಶಿ :
ಇಂದ ಕುಟುಂಬದ ಜೊತೆ ಹಾಸ್ಯ ಮತ್ತು ಸಂತೋಷ ಕಾಲವನ್ನು ಕಳೆಯುವಿರಿ. ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸುಬಿರಿ. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರವು ಸಿಗಬಹುದು. ದೂರ ಪ್ರಯಾಣಕ್ಕೆ ವೈದ್ಯರು ನಿರ್ಬಂಧ ಹಾಕಬಹುದು. ಹಣಕ್ಕಾಗಿ ಯಾರನ್ನಾದರೂ ಕೇಳುವ ಸ್ಥಿತಿಯು ಬರಬಹುದು. ನಿಮ್ಮ ಸ್ಥಿರಮತಿಯಿಂದ ಕಷ್ಟದ ಸಂದರ್ಭವನ್ನು ಹಿಡಿತಕ್ಕೆ ತರುವಿರಿ. ಸತ್ಯಾಸತ್ಯತೆಯನ್ನು ಅರಿತು ಮಾತನಾಡಬೇಕಾಗುವುದು.
ವೃಷಭ ರಾಶಿ :
ಇಂದು ನಿಮ್ಮ ಸಹೋದರರು ಮತ್ತು ಪತ್ನಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಕುಟುಂಬ ವ್ಯವಸ್ಥೆ ಸರಿಯಾಗಲು ಕೆಲವನ್ನು ಬಿಟ್ಟುಕೊಡಬೇಕಾದೀತು. ಮನೆಯನ್ನು ಬಿಟ್ಟು ಹೋಗಲು ಚೋರ ಭಯವು ಕಾಡಬಹುದು. ಸ್ನೇಹಿತರು ನಿಮ್ಮ ನಿರ್ಲಕ್ಷ್ಯದ ಕಾರಣದಿಂದ ದೂರಾಗಬಹುದು. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಇರಲಿದ್ದು ಇತರರಿಗೆ ಇದು ಅನಿರೀಕ್ಷಿತವೂ ಆಗಬಹುದು. ಸ್ವಾಭಿಮಾನವು ನಿಮ್ಮ ಏಳಿಗೆಗೆ ತಡೆಯನ್ನು ಉಂಟು ಮಾಡಬಹುದು.
ಮಿಥುನ ರಾಶಿ :
ಇಂದು ಅಮೂಲ್ಯವಾದ ವಸ್ತುವು ನಿಮ್ಮ ಪಾಲಾಗಬಹುದು. ಯಶಸ್ಸಿನ ದಿನವಾಗಿರುವುದು. ಉದ್ಯೋಗದಲ್ಲಿರುವವರಿಗೆ ಬಡ್ತಿ ಹಾಗೂ ಕೊಡುಗೆ ಸಿಗಬಹುದು. ವ್ಯಾಪಾರ ಮಾಡುವವರಿಗೂ ಈ ದಿನ ಪ್ರಯೋಜನಕಾರಿ. ಸಾಲವನ್ನು ಹಿಂಪಡೆಯಲು ಇಂದು ತಿರುಗಾಟ ಮಾಡುವಿರಿ. ಕಲಾಕಾರರಿಗೆ ಉತ್ತಮ ಲಾಭವು ಆಗಬಹುದು. ಎಂದೋ ಆಗಬೇಕಿದ್ದ ಕೆಲಸಗಳು ಇಂದು ಪೂರ್ಣವಾಗುವುದು. ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ.
ಕರ್ಕಾಟಕ ರಾಶಿ :
ಇಂದು ರಾಜಕೀಯ ಆಕಾಂಕ್ಷೆಗಳು ಈಡೇರುತ್ತವೆ. ಮನಸ್ಸು ಚಂಚಲವಾಗಿ ಇರುತ್ತದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಸರ್ಕಾರದಿಂದ ಸಾಲದ ಬೆಂಬಲ ದೊರೆಯಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಸಂಗಾತಿಯನ್ನು ನೀವು ಮರೆತು ವ್ಯವಹರಿಸುವಿರಿ. ಇನ್ನೊಬ್ಬರ ಮಾತಿನಿಂದ ಸಿಟ್ಟಾಗಬಹುದು. ಕೆಲವು ವಿಷಯಕ್ಕೆ ಕುಟುಂಬದಿಂದ ವಿರೋಧವಿರುವುದು. ಸ್ನೇಹಿತರ ಜೊತೆ ಸುತ್ತಾಟ ಮತ್ತು ಉತ್ತಮ ಭೋಜನವನ್ನು ಮಾಡುವಿರಿ.
ಸಿಂಹ ರಾಶಿ :
ಇಂದು ಕೆಲಸದ ಸ್ಥಳದಲ್ಲಿ ಕಾರಣವಿಲ್ಲದೆ ಯಾರೊಂದಿಗೂ ಜಗಳವಾಡಬೇಡಿ. ತಂದೆಯಿಂದ ಬೆಂಬಲ ಸಿಗಲಿದೆ. ಆರ್ಥಿಕ ಲಾಭ ಉಂಟಾಗಲಿದೆ. ವ್ಯವಹಾರದ ಬೆಳವಣಿಗೆಗೆ ಮಾಡಿದ ಪ್ರಯತ್ನಗಳು ಇಂದು ಫಲಪ್ರದವಾಗದು. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರುವನ್ನು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ಸಣ್ಣ ವಿಷಯಕ್ಕೆ ಸ್ನೇಹಿತರ ಜೊತೆಗಿನ ಸಂಬಂಧವು ಹಾಳಾಗಬಹುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡು ಕೈ ಬಿಡಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಯೋಗ್ಯ ಚಿಕಿತ್ಸೆಯನ್ನು ಕೊಡುವಿರಿ.
ಕನ್ಯಾ ರಾಶಿ :
ಇಂದಿನ ಸಮಯ ವಿವಾಹಿತರಿಗೆ ಸಂತೋಷದಿಂದ ತುಂಬಿರುತ್ತದೆ. ಅವಿವಾಹಿತರು ಹೊಸ ಸಂಬಂಧವನ್ನು ಕಂಡುಕೊಳ್ಳಬಹುದು. ಅದನ್ನು ಸರಿಯಾಗಿ ಮುಂದುವರಿಸುವುದು ನಿಮ್ಮ ಕೈಯಲ್ಲಿದೆ. ಸಂಗಾತಿಯ ಮಾತಿನಿಂದ ಸಾಲವನ್ನು ಮಾಡಬೇಕಾಗುವುದು. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ. ಮಕ್ಕಳನ್ನು ಸಂತೋಷವಾಗಿ ಇಡುವುದು ಆಗದು. ಬಹಳ ದಿನಗಳಿಂದ ಒತ್ತಡದಲ್ಲಿ ಇದ್ದ ಕಾರಣ ಇಂದು ಎಲ್ಲವನ್ನೂ ಮರೆಯು ದಿನದ ಹೆಚ್ಚಿನ ಸಮಯವನ್ನು ವಿಶ್ರಾಂತಿಯಲ್ಲಿಯೇ ಕಳೆಯುವಿರಿ.
ತುಲಾ ರಾಶಿ :
ಸಮಾಜವು ನಿಮ್ಮನ್ನು ಸ್ವಾರ್ಥಿಯಂತೆ ನೋಡಬಹುದು. ವ್ಯವಹಾರದಲ್ಲಿ ಹಣದ ಲಾಭವಾಗಲಿದೆ. ತಂದೆ ತಾಯಿಯರ ಸೇವೆಯನ್ನು ಮಾಡುವ ಅವಕಾಶ ಸಿಗುವುದು. ಮನೆಯ ಕೆಲಸವು ಆಗಿಲ್ಲವೆಂದು ಕೋಪವು ಇರಲಿದ್ದು ಅದನ್ನು ಪ್ರಕಟಿಸುವಿರಿ. ಉದ್ಯೋಗವನ್ನು ಕೊಡಿಸಲು ನಿಮಗೆ ಹಣವನ್ನು ಕೇಳಬಹುದು. ಸತ್ಯವನ್ನು ಹೇಳುವ ಮನಸ್ಸಿದ್ದರೂ ಬೇರೆಯವರ ಒತ್ತಡದಿಂದಾಗಿ ಹೇಳದೇ ಮುಚ್ಚಿಡುವಿರಿ. ಹಿರಿಯರ ನಂಬಿಕೆಯನ್ನು ಗಳಿಸಲು ಕಷ್ಟವಾದೀತು. ಪಾಪಪ್ರಜ್ಞೆಯಿಂದ ಹೊರಬರಲು ನಿಮಗೆ ಆಗದು.
ವೃಶ್ಚಿಕ ರಾಶಿ :
ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ. ಇದಲ್ಲದೆ ಮನೆಯಲ್ಲಿ ಹೊಸ ವಾಹನ ಖರೀದಿಸುವ ಸಾಧ್ಯತೆಯಿದೆ. ಆತಂಕ ಮತ್ತು ನಿರಾಸಕ್ತಿಯಿಂದ ನಿಮ್ಮ ಮೇಲೆ ನಿಮಗೆ ಹಿಡಿತ ಸಾಲದು. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು. ಭೂಮಿಯಿಂದ ಇಂದು ಸಂಪತ್ತು ಸಿಗಬಹುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗದು. ಬೇಡಬೆಂದು ಬಿಟ್ಟಿದ್ದನ್ನು ಮತ್ತೆ ಎತ್ತಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾದೀತು.
ಧನು ರಾಶಿ :
ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಇಂದು ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲದ ಸಾಧ್ಯತೆಯಿದೆ. ಇದು ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಬಂಧುಗಳ ವಿಯೋಗವೂ ಆಗಬಹುದು. ಸ್ನೇಹಿತರು ಕೇಳಿದರೂ ಸಹಾಯ ಮಾಡದೇ ಇರುವುದು, ನಿಮಗೆ ಅನುಮಾನವು ಬರುವಂತೆ ಮಾಡುವುದು. ಪ್ರೇಮವು ನೀವಂದುಕೊಂಡಂತೆ ಮುಕ್ತಾಯವಾದುದ್ದು, ನಿಮಗೆ ಖುಷಿ ಕೊಡುವುದು.
ಮಕರ ರಾಶಿ :
ನಿಮ್ಮ ವ್ಯವಹಾರವನ್ನು ಮುನ್ನಡೆಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತೀರಿ. ಕಠಿಣ ಪರಿಶ್ರಮವು ನಿಷ್ಫಲವೆಂದು ಬೇಸರಿಸುವುದು ಬೇಡ. ಯಾವುದೂ ನಿಷ್ಪ್ರಯೋನವಾಗದು. ಸಮಯ ಬೇಕಷ್ಟೇ. ಇಂದು ಅನಗತ್ಯ ವಸ್ತುಗಳಿಗಾಗಿ ವ್ಯರ್ಥವಾಗಿ ಖರ್ಚಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಇರುವುದು. ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಇರುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು. ಮಕ್ಕಳ ಶುಭವಾರ್ತೆಯು ಸಂತಸಕೊಡಬಹುದು.
ಕುಂಭ ರಾಶಿ :
ನಿಮ್ಮ ಜೀವನವನ್ನು ಬದಲಾಯಿಸಬಹುದಾದ ಕೆಲವು ಒಳ್ಳೆಯ ಸುದ್ದಿಗಳು ನಿಮಗೆ ಸಿಗಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗಲಿದೆ. ಹಳೆಯ ವಿವಾದಗಳು ಕೊನೆಗೊಳ್ಳಲಿವೆ ಯೋಜನೆಯನ್ನು ಬೇರೆ ಬೇರೆ ದೃಷ್ಟಿಯಿಂದ ನೋಡುವ ಅವಶ್ಯಕತೆ ಇದೆ. ಇಂದು ನಿಮ್ಮ ಕೆಲಸವನ್ನು ಬದಲು ಮಾಡಿಕೊಳ್ಳಲಿದ್ದೀರಿ. ಶುಭ ಸಮಾರಂಭದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಅಧಿಕಾರಕ್ಕೆ ಸಂಬಂಧಿಸಿದಂತೆ ಮಿತ್ರನಿಂದ ನಿಮಗೆ ವಂಚನೆಯಾಗಿರುವುದು ಗೊತ್ತಾಗುವುದು. ಕಳೆದುದ್ದು ಸಣ್ಣ ವಸ್ತುವೇ ಆದರೂ ಬಹಳ ಬೇಸರಗೊಳ್ಳುವಿರಿ.
ಮೀನ ರಾಶಿ :
ವ್ಯಾಪಾರ ಮಾಡುವವರಿಗೆ ಈ ದಿನ ಲಾಭದಾಯಕ. ಇಂದು ನೀವು ಸರ್ಕಾರದಿಂದ ಬರುವ ಹಣವನ್ನು ಪಡೆದುಕೊಳ್ಳಬಹುದು. ನಿಮ್ಮ ಸಂಗಾತಿಯಿಂದ ಕೆಲವು ಕಾರ್ಯಗಳಿಗೆ ಬೆಂಬಲವನ್ನು ಪಡೆಯಬಹುದು. ಅನಪೇಕ್ಷಿತ ಮಾತುಗಳನ್ನು ನೀವು ಯಾರ ಜೊತೆಯೂ ಆಡುವುದು ಬೇಡ. ಸರ್ಕಾರದ ಕಡೆಯಿಂದ ಆಗುವ ನಿಮ್ಮ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವಿರಿ. ಆರೋಗ್ಯವೂ ಕೆಡಬಹುದು. ನಿಮಗೆ ಬರುವ ಆಸ್ತಿಯಲ್ಲಿ ಹೆಚ್ಚಿನ ಲಾಭವನ್ನು ಅಪೇಕ್ಷಿಸುವಿರಿ.
ಬೆಂಗಳೂರು, (ಮಾರ್ಚ್ 09): ಗಲ್ಫ್ ರಾಷ್ಟ್ರಗಳ ಯುದ್ಧದ ಬಿಸಿ ಬೆಂಗಳೂರಿಗೆ ತಟ್ಟಿದೆ. ಬೆಲೆ ಏರಿಕೆ ನಡುವೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಹೋಟೆಲ್ ಬಂದ್ ಆಗುವ ಆತಂಕ ಎದುರಾಗಿದೆ. ಏಕಾಏಕಿ ಗ್ಯಾಸ್ ಸರಬಾರದು ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಎಂದು ಹೊಟೆಲ್ ಮಾಲೀಕರ ಸಂಘ ಎಚ್ಚರಿಸಿದೆ.
ಹೋಟೆಲ್ ಅಸೋಸಿಯೇಷನ್ ನ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಈ ಕುರಿತು ಪ್ರತಿಕ್ರಿಯಿಸಿದ್ದು, ಇದು ನಮ್ಮ ನಿರ್ಧಾರ ಅಲ್ಲ ಸರ್ಕಾರ ನಮ್ಮ ಮೇಲೆ ಹಾಕುತ್ತಿರುವ ಒತ್ತಡ ಎಂದಿದ್ದಾರೆ. ಮೊದಲೇ ನಮಗೆ ಮುನ್ಸೂಚನೆ ನೀಡಿದ್ರೆ ಈ ರೀತಿಯ ಪರಿಸ್ಥಿತಿ ಎದುರಿಸುವ ಪ್ರಮೇಯವೇ ಇರುತ್ತಿರಲಿಲ್ಲ. ನಾವು ಬಂದ್ ಮಾಡೋದಕ್ಕೆ ನಿರ್ಧಾರ ತೆಗೆದುಕೊಂಡಿಲ್ಲ. ನಮಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ನಾಳೆ ಮಧ್ಯಾಹ್ನಕ್ಕೆ ಆಗುವಷ್ಟು ಸಿಲಿಂಡರ್ ಮಾತ್ರ ನಮ್ಮ ಹತ್ರ ಇದೆ. ಅಷ್ಟರೊಳಗೆ ಸರ್ಕಾರ ಪೂರೈಕೆ ಮಾಡದಿದ್ರೆ ಎಲ್ಲಾ ಹೋಟೆಲ್ ಗಳು ಬಂದ್ ಮಾಡಲಾಗುತ್ತೆ ಎಂದು ಕೃಷ್ಣರಾಜ್ ಹೇಳಿದ್ದಾರೆ. 15 ದಿನಗಳ ಮೊದಲೇ ಒಂದು ಸೂಚನೆ ನೀಡಬೇಕಿತ್ತು . ದಿಢೀರ್ ಪೂರೈಕೆ ಸ್ಥಗಿತಗೊಂಡರೆ ನಾವು ಬಂದ್ ಮಾಡದೇ ಬೇರೆ ದಾರಿ ಇಲ್ಲ ಎಂದಿದ್ದಾರೆ. ಹೊಟೆಲ್ ಮಾಲೀಕರ ಸಂಘ ಯಾವುದೇ ಬಂದ್‌ಗೆ ಕರೆ ಕೊಟ್ಟಿಲ್ಲ. ಆದರೆ ಆಹಾರ, ತಿನಿಸುಗಳು ಇಲ್ಲದಿದ್ದರೆ ಬಂದ್ ಮಾಡಲೇಬೇಕು ಎಂದಿದ್ದಾರೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.