ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಐವರ ಮೇಲೆ ಆ್ಯಸಿಡ್ ದಾಳಿ: ಆರೋಪಿಯೂ ಸೇರಿ ಇಬ್ಬರ ಸ್ಥಿತಿ ಗಂಭೀರ – Kannada News | Hubballi Acid Attack: 6 Month Old Baby and 4 Others Injured in Domestic Dispute
ಹುಬ್ಬಳ್ಳಿ, ಮೇ 09: ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಆಘಾತಕಾರಿ ಘಟನೆ ಹುಬ್ಬಳ್ಳಿಯ ತಾರಿಹಾಳದ ವಾಜಪೇಯಿ ನಗರದಲ್ಲಿ ನಡೆದಿದೆ. ನಾದಿನಿಯರ ಫೋಟೋ ತೆಗೆದ ವಿಚಾರಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋದ ಪರಿಣಾಮ ಸುರೇಶ್ ಎಂಬಾತ ಕುಟುಂಬದ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ 6 ತಿಂಗಳ ಮಗುವಿನ ಮುಖ, ಬಾಯಿಗೂ ಆ್ಯಸಿಡ್ ತಗುಲಿದ್ದು, ರಾಜೇಶ್ವರಿ (24) ಎಂಬವರ ಸ್ಥಿತಿ ಚಿಂತಾಜನಕವಾಗಿದೆ. ಕ್ಷುಲ್ಲಕ…