ವಿದ್ಯುತ್ ಆಘಾತದಿಂದ ಸಾಯುತ್ತಿದ್ದ ಲೈನ್‌ಮನ್‌ಗೆ ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್​​ ಸಿಬ್ಬಂದಿ

ಹೈದರಾಬಾದ್, ಮೇ.29: ಸಾರ್ವಜನಿಕರ ರಕ್ಷಣೆ ಎಂದರೆ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲ, ಸಂಕಷ್ಟದ ಸಮಯದಲ್ಲಿ ದೇವದೂತರಂತೆ ಬಂದು ಜೀವ ಉಳಿಸುವುದು ಕೂಡ ಹೌದು ಎಂಬುದನ್ನು ಹೈದರಾಬಾದ್ ನಗರ ಪೊಲೀಸ್ ಸಿಬ್ಬಂದಿಯೊಬ್ಬರು ಸಾಬೀತುಪಡಿಸಿದ್ದಾರೆ. ವಿದ್ಯುತ್ ಲೈನ್‌ ದುರಸ್ತಿ ಮಾಡುವಾಗ ಭೀಕರ ವಿದ್ಯುತ್ ಆಘಾತಕ್ಕೆ ಒಳಗಾಗಿ ಉಸಿರಾಟ ನಿಲ್ಲಿಸಿದ್ದ ಗುತ್ತಿಗೆ ಕಾರ್ಮಿಕರೊಬ್ಬರಿಗೆ ಟಪ್ಪಾಚಬುತ್ರ (Tappachabutra) ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಬಿ. ಸುರೇಶ್ ಅವರು ತಕ್ಷಣವೇ ಸಿಪಿಆರ್ (CPR) ಪ್ರಥಮ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಕಾರ್ವಾನ್‌ನ ಕುಮ್ಮರವಾಡಿ ಹನುಮಾನ್ ದೇವಸ್ಥಾನದ ಬಳಿ TGPDCL (ತೆಲಂಗಾಣ ವಿದ್ಯುತ್ ಸಂಸ್ಥೆ) ಗುತ್ತಿಗೆ ಕಾರ್ಮಿಕರೊಬ್ಬರು ವಿದ್ಯುತ್ ಕಂಬದ ಮೇಲೆ ದುರಸ್ತಿ ಕಾರ್ಯ ಮಾಡುತ್ತಿರುವಾಗ ಶಾಕ್ ತಗುಲಿದೆ. ಇದರಿಂದಾಗಿ ಅವರು ತೀವ್ರವಾಗಿ ಗಾಯಗೊಂಡು ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಮ್ಮ ಬಿಎಸ್‌-1 (BC-I) ಗಸ್ತು ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಬಿ. ಸುರೇಶ್ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರ್ಮಿಕನ ನಾಡಿಮಿಡಿತ ಹಾಗೂ ಉಸಿರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದನ್ನು ಗಮನಿಸಿದ್ದಾರೆ. ಒಂದು ಕ್ಷಣವೂ ವ್ಯರ್ಥ ಮಾಡದ ಕಾನ್‌ಸ್ಟೆಬಲ್ ಸುರೇಶ್ ಸ್ಥಳದಲ್ಲೇ ಕಾರ್ಮಿಕನ ಎದೆಯನ್ನು ಒತ್ತಿ ಕೃತಕ ಉಸಿರಾಟ (CPR – Cardiopulmonary Resuscitation) ನೀಡಲು ಆರಂಭಿಸಿದರು. ಸತತ ಪ್ರಯತ್ನದ ಫಲವಾಗಿ ಕಾರ್ಮಿಕನ ನಾಡಿಮಿಡಿತ ಮತ್ತು ಉಸಿರಾಟವು ಮರಳಿ ಬಂದಿದೆ. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. “ಕಾರ್ಮಿಕನನ್ನು ಆಸ್ಪತ್ರೆಗೆ ತರುವ ಮುನ್ನ ಆತನಿಗೆ ಸಿಕ್ಕ ಈ ಪ್ರಥಮ ಚಿಕಿತ್ಸೆ ‘ಗೋಲ್ಡನ್ ಅವರ್’ ನಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದೆ. ಪೊಲೀಸರು ಸರಿಯಾದ ಸಮಯಕ್ಕೆ ಸಿಪಿಆರ್ ನೀಡದಿದ್ದರೆ ಆತನ ಜೀವ ಉಳಿಸುವುದು ಅಸಾಧ್ಯವಾಗುತ್ತಿತ್ತು” ಎಂದು ವೈದ್ಯರು ತಿಳಿಸಿದ್ದಾರೆ. ಹೈದರಾಬಾದ್ ಪೊಲೀಸರ ಈ ಮಾನವೀಯ ನಡೆ ಹಾಗೂ ಸಾರ್ವಜನಿಕ ಸುರಕ್ಷತೆಯ ಬದ್ಧತೆಗೆ ದೇಶಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka CM News Live: ದೆಹಲಿಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

ಬೆಂಗಳೂರು, ಮೇ 29: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಸಿಎಂ ಸ್ಥಾನದ ಬದಲಾವಣೆಯ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿದೆ. ನಿನ್ನೆ (ಮೇ 28) ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಿಸಿದ್ದು, ಇಂದು ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದ್ದಾರೆ. ಈ ಬೆನ್ನಲ್ಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳಿದ್ದು, ಅಲ್ಲಿಂದ ವಾಪಸಾದ ನಂತರ ಸಿಎಲ್​​ಪಿ ಸಭೆ ನಡೆಯಲಿದೆ. ಇನ್ನು ಎರಡು ದಿನಗಳೊಳಗೆ ಮುಂದಿನ ಮುಖ್ಯಮಂತ್ರಿ ಹೆಸರು ಘೋಷಣೆಯಾಗಲಿದೆ. ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿರುವುದು ಬಹುತೇಕ ಖಚಿತವಾಗಿದೆ. ಕರ್ನಾಟಕ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಅಪ್ಡೇಟ್ ಆಗಲಿದ್ದು, ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

GT vs RR: ಗೆದ್ದವರು RCB ತಂಡದ ಎದುರಾಳಿ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ದ್ವಿತೀಯ ಕ್ವಾಲಿಫೈಯರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಮೇ 29) ಮುಲ್ಲನ್​ಪುರದ ಎಂವೈಎಸ್​ಸಿ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ  ಗುಜರಾತ್ ಟೈಟಾನ್ಸ್ (GT) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಫೈನಲ್​ಗೆ ಎಂಟ್ರಿ ಕೊಡಲಿದೆ. ಅಂದರೆ ಇಂದಿನ ಮ್ಯಾಚ್ ವಿಜಯಿ ಮೇ 31 ರಂದು ನಡೆಯಲಿರುವ ಫೈನಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಹೀಗಾಗಿ ಆರ್​ಸಿಬಿ ಎದುರಾಳಿ ಯಾರು ಎಂಬ ಕುತೂಹಲ ಎಲ್ಲರಲ್ಲಿದೆ. ಇಲ್ಲಿ ಯಾರೇ ಬಂದರೂ ಫೈನಲ್ ಪಂದ್ಯದ ರೋಚಕತೆ ಹೆಚ್ಚಲಿದೆ. ಏಕೆಂದರೆ ಆರ್​ಆರ್ ತಂಡ ಜಯ ಸಾಧಿಸಿದರೆ ಎಲ್ಲರೂ ವೈಭವ್ ಸೂರ್ಯವಂಶಿಯ ಆರ್ಭಟ ಹಾಗೂ ಜೋಫ್ರಾ ಆರ್ಚರ್​ನ ಮಿಂಚಿನ ದಾಳಿ ವೀಕ್ಷಿಸಲು ಸಜ್ಜಾಗಲಿದ್ದಾರೆ.

ಅತ್ತ ಗುಜರಾತ್ ಟೈಟಾನ್ಸ್ ಗೆದ್ದರೆ ತವರಿನಲ್ಲಿ ಫೈನಲ್​ ಆಡಲಿದೆ. ಅಂದರೆ ಈ ಬಾರಿಯ ಫೈನಲ್ ಮ್ಯಾಚ್ ನಡೆಯಲಿರುವುದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ. ಈಗಾಗಲೇ ಈ ಪಂದ್ಯಕ್ಕಾಗಿ ಸಕಲ ರೀತಿಯಲ್ಲೂ ಸಿದ್ಧವಾಗಿರುವ ಆರ್​ಸಿಬಿ ತಂಡವು ತನ್ನ ಕೊನೆಯ ಎದುರಾಳಿಯನ್ನು ಎದುರು ನೋಡುತ್ತಿದೆ.

ಈ ಎದುರಾಳಿ ರಾಜಸ್ಥಾನ್ ರಾಯಲ್ಸ್ ಆಗಲಿದೆಯಾ ಅಥವಾ ಗುಜರಾತ್ ಟೈಟಾನ್ಸ್ ಆಗಲಿದ್ದಾರಾ ಎಂಬುದು ಇಂದು ನಿರ್ಧಾರವಾಗಲಿದೆ.

ಹೆಡ್ ಟು ಹೆಡ್:

2022 ರಿಂದ ಐಪಿಎಲ್​ನಲ್ಲಿ ಕಣಕ್ಕಿಳಿಯುತ್ತಿರುವ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ ಕೇವಲ 10 ಬಾರಿ ಮಾತ್ರ ಮುಖಾಮುಖಿಯಾಗಿವೆ. ಈ ವೇಳೆ ಅತ್ಯಧಿಕ ಪಂದ್ಯಗಳನ್ನು ಗೆದ್ದಿರುವುದು ಗುಜರಾತ್ ಟೈಟಾನ್ಸ್.

ಉಭಯ ತಂಡಗಳ ಮುಖಾಮುಖಿಯಲ್ಲಿ ಗುಜರಾತ್ ಟೈಟಾನ್ಸ್ 7 ಬಾರಿ ಜಯ ಸಾಧಿಸಿದರೆ, ರಾಜಸ್ಥಾನ್ ರಾಯಲ್ಸ್ ಕೇವಲ 3 ಬಾರಿ ಗೆಲುವು ದಾಖಲಿಸಿದೆ. ಈ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಗುಜರಾತ್ ಟೈಟಾನ್ಸ್ ಮೇಲುಗೈ ಹೊಂದಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಉಭಯ ತಂಡಗಳು ಪರಸ್ಪರ ಎರಡು ಪಂದ್ಯಗಳನ್ನಾಡಿದೆ.

  • ಈ ಬಾರಿಯ ಮೊದಲ ಮುಖಾಮುಖಿಯ ರಾಜಸ್ಥಾನ್ ರಾಯಲ್ಸ್ ತಂಡ 6 ರನ್​ಗಳ ಜಯ ಸಾಧಿಸಿತ್ತು.
  • ಈ ಬಾರಿಯ ದ್ವಿತೀಯ ಮುಖಾಮುಖಿಯಲ್ಲಿ ಗುಜರಾತ್ ಟೈಟಾನ್ಸ್ ತಂಡ 77 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು.

ಅಂದರೆ ಈ ಬಾರಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೋಲುಣಿಸುವಲ್ಲಿ ರಾಜಸ್ಥಾನ್ ರಾಯಲ್ಸ್ ಯಶಸ್ವಿಯಾಗಿದೆ. ಅತ್ತ ಆ ಸೋಲಿನ ಸೇಡನ್ನು ತೀರಿಸಿಕೊಳ್ಳುವಲ್ಲಿ ಗುಜರಾತ್ ಟೈಟಾನ್ಸ್ ಕೂಡ ಯಶಸ್ವಿಯಾಗಿದೆ. ಹೀಗಾಗಿ ಈ ಬಾರಿ ಉಭಯ ತಂಡಗಳ ಸಮಬಲ ಹೊಂದಿದೆ ಎನ್ನಬಹುದು.

ಇದನ್ನೂ ಓದಿ: ವಿಶ್ವ ದಾಖಲೆ… ಪೊಲಾರ್ಡ್​ಗೆ​ 652 ಇನಿಂಗ್ಸ್, ವೈಭವ್​ಗೆ ಜಸ್ಟ್​ 33 ಇನಿಂಗ್ಸ್​!

ಹೀಗಾಗಿ ಇಂದಿನ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳಿಂದ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು. ಈ ಪೈಪೋಟಿಯೊಂದಿಗೆ ಈ ಬಾರಿ ಫೈನಲ್​ಗೇರಿ ಆರ್​ಸಿಬಿಯನ್ನು ಎದುರಿಸುವರು ಯಾರು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

 

 

Source link

June 2026 Horoscope: ಮಾಸ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಜೂನ್ ತಿಂಗಳ ಭವಿಷ್ಯ ಇಲ್ಲಿ ತಿಳಿಯಿರಿ

ಜೂನ್ 2026 ರಲ್ಲಿ ಕುಜನು ಮಿತ್ರನ‌ ಸ್ಥಾನದಲ್ಲಿ, ಗುರುವು ಉಚ್ಚಸ್ಥಾನದಲ್ಲಿ, ಸೂರ್ಯನೂ ಮಿತ್ರನ ಸ್ಥಾನದಲ್ಲಿ ಇರುವರು. ಗುರುವಿನ ಸಂಚಾರದಿಂದ ಅನೇಕ ದೋಷಗಳು ಪರಿಹಾರವಾಗಲಿವೆ. ಗುರುದಶೆಯವರಿಗೆ ಅತ್ಯುತ್ತಮ ಕಾಲವಾಗಿ, ಎಲ್ಲದರಲ್ಲಿಯೂ ಜಯ ಸಿಗಲಿದೆ.

​ಮೇಷ ರಾಶಿ:

ಈ ತಿಂಗಳು ಮೂರನೇ ಮನೆಯ ಸೂರ್ಯ ಮತ್ತು ಎಂಟನೇ ಮನೆಯ ಗುರುವಿನಿಂದ ಮಿಶ್ರಫಲ. ಧೈರ್ಯದಿಂದ ಕೆಲಸ ಕಾರ್ಯಗಳನ್ನು ಯಶಸ್ವಿಗೊಳಿಸುತ್ತೀರಿ. ಆದರೆ ಹಠಾತ್ ಖರ್ಚುಗಳು ಬರಬಹುದು, ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ.

​ವೃಷಭ ರಾಶಿ:

ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಕೋಪ ಜಾಸ್ತಿ. ಧನಸ್ಥಾನದ ಸೂರ್ಯನಿಂದ ಆರ್ಥಿಕ ಪ್ರಗತಿ ಇದ್ದರೂ, ಏಳನೇ ಮನೆಯ ಗುರು-ಬುಧರ ಪ್ರಭಾವದಿಂದ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡದಂತೆ ತಾಳ್ಮೆಯಿಂದ ಇರಬೇಕಾಗುತ್ತದೆ.

​ಮಿಥುನ ರಾಶಿ:

ರಾಶಿಯಲ್ಲಿ ಸೂರ್ಯ ಹಾಗೂ ಎರಡನೇ ಮನೆಯಲ್ಲಿ ಗುರು-ಶುಕ್ರರಿದ್ದಾರೆ. ಆರ್ಥಿಕವಾಗಿ ಉತ್ತಮ ಲಾಭ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಕಣ್ಣಿನ ಸಮಸ್ಯೆ ಅಥವಾ ಉಷ್ಣದ ಬಾಧೆ ಕಾಡಬಹುದು, ಎಚ್ಚರವಿರಲಿ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲೇ ಗುರು, ಬುಧ, ಶುಕ್ರರ ಯುತಿ ಇರುವುದರಿಂದ ಜ್ಞಾನಾರ್ಜನೆ ಮತ್ತು ಕೀರ್ತಿ ಹೆಚ್ಚಲಿದೆ. ವ್ಯಯಸ್ಥಾನದ ಸೂರ್ಯನಿಂದ ದೂರ ಪ್ರಯಾಣ ಮತ್ತು ಖರ್ಚುಗಳು ಅಧಿಕವಾಗಲಿವೆ. ಶುಭ ಕಾರ್ಯಗಳಿಗೆ ಹಣ ವಿನಿಯೋಗವಾಗಲಿದೆ.

​ಸಿಂಹ ರಾಶಿ:

ರಾಶಿಗೆ ಕೇತು ಹಾಗೂ ಹನ್ನೊಂದನೇ ಮನೆಯಲ್ಲಿ ಸೂರ್ಯನಿದ್ದಾನೆ. ಉದ್ಯೋಗದಲ್ಲಿ ಅತ್ಯುತ್ತಮ ಪ್ರಗತಿ ಮತ್ತು ಹಿರಿಯರಿಂದ ಧನಸಹಾಯ ಸಿಗಲಿದೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿದ್ದು, ಹಠಾತ್ ಧನಲಾಭದ ಯೋಗ ಈ ತಿಂಗಳು ನಿಮಗಿದೆ.

​ಕನ್ಯಾ ರಾಶಿ:

ಹತ್ತನೇ ಮನೆಯ ಸೂರ್ಯ ಮತ್ತು ಹನ್ನೊಂದನೇ ಮನೆಯ ಗುರುವಿನಿಂದಾಗಿ ಉದ್ಯೋಗದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಕೀರ್ತಿ, ಪ್ರತಿಷ್ಠೆ ಹೆಚ್ಚಾಗುವ ಕಾಲವಿದು. ವ್ಯಾಪಾರಸ್ಥರಿಗೆ ನಿರೀಕ್ಷೆಗೂ ಮೀರಿದ ಲಾಭ ಮತ್ತು ಹೊಸ ಅವಕಾಶಗಳು ಲಭಿಸಲಿವೆ.

​ತುಲಾ ರಾಶಿ:

ಒಂಭತ್ತನೇ ಮನೆಯ ಸೂರ್ಯ ಭಾಗ್ಯೋದಯ ನೀಡಲಿದ್ದಾನೆ. ಹತ್ತನೇ ಮನೆಯಲ್ಲಿ ಗುರುವಿರುವುದರಿಂದ ವೃತ್ತಿಜೀವನದಲ್ಲಿ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಸಿಗುತ್ತವೆ. ತಂದೆಯ ಆರೋಗ್ಯದ ಕಡೆ ಗಮನವಿರಲಿ, ಧಾರ್ಮಿಕ ಪ್ರವಾಸ ಮಾಡುವ ಸಾಧ್ಯತೆ ಇದೆ.

​ವೃಶ್ಚಿಕ ರಾಶಿ:

ಎಂನೇ ಮನೆಯ ಸೂರ್ಯನಿಂದಾಗಿ ಕೆಲಸಗಳಲ್ಲಿ ಸ್ವಲ್ಪ ಅಡೆತಡೆಗಳು ಎದುರಾಗಬಹುದು. ಆದರೆ ಒಂಭತ್ತನೇ ಮನೆಯಲ್ಲಿ ಗುರು ಇರುವುದರಿಂದ ದೈವಬಲ ಚೆನ್ನಾಗಿದೆ. ಕಠಿಣ ಪರಿಶ್ರಮದಿಂದ ಅಂತಿಮವಾಗಿ ಯಶಸ್ಸು ಮತ್ತು ಆಧ್ಯಾತ್ಮಿಕ ನೆಮ್ಮದಿ ನಿಮ್ಮದಾಗುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

​ಧನು ರಾಶಿ:

ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಗುರುವಿದ್ದಾನೆ. ಅನಿರೀಕ್ಷಿತ ಧನಲಾಭದ ಸಾಧ್ಯತೆ ಇದೆ. ಆದರೆ ಮಾನಸಿಕ ಚಂಚಲತೆ ಅಧಿಕವಾಗಿರಲಿದ್ದು, ಸಪ್ತಮದ ಸೂರ್ಯನಿಂದಾಗಿ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

​ಮಕರ ರಾಶಿ:

ಆರನೇ ಮನೆಯ ಸೂರ್ಯ ಶತ್ರುನಾಶ ಮತ್ತು ಕೋರ್ಟ್ ವ್ಯವಹಾರಗಳಲ್ಲಿ ಜಯ ನೀಡಲಿದ್ದಾನೆ. ಏಳನೇ ಮನೆಯ ಗುರು ವೈವಾಹಿಕ ಜೀವನದಲ್ಲಿ ಸುಖ ನೀಡುತ್ತಾನೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಮತ್ತು ಧನಲಾಭ ಕಂಡುಬರಲಿದೆ.

​ಕುಂಭ ರಾಶಿ:

ರಾಶಿಯಲ್ಲಿ ರಾಹು ಹಾಗೂ ಐದನೇ ಮನೆಯಲ್ಲಿ ಸೂರ್ಯನಿದ್ದಾನೆ. ಬುದ್ಧಿಶಕ್ತಿ ತೀಕ್ಷ್ಣವಾಗಿದ್ದರೂ ಮಕ್ಕಳ ವಿಷಯದಲ್ಲಿ ಸ್ವಲ್ಪ ಕಳವಳವಿರಬಹುದು. ಆರನೇ ಮನೆಯ ಗುರುವಿನಿಂದಾಗಿ ಸಾಲದ ಬಾಧೆಗಳು ಕಡಿಮೆಯಾಗಲಿವೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ.

​ಮೀನ ರಾಶಿ:

ನಿಮ್ಮ ರಾಶಿಯಲ್ಲೇ ಶನಿ ಇದ್ದರೂ, ನಾಲ್ಕನೇ ಮನೆಯ ಸೂರ್ಯ ಮತ್ತು ಐದನೇ ಮನೆಯ ಗುರು ಉತ್ತಮ ಫಲ ನೀಡಲಿದ್ದಾರೆ. ಶಿಕ್ಷಣ ಮತ್ತು ಕೌಟುಂಬಿಕ ಸುಖ ವೃದ್ಧಿಯಾಗಲಿದೆ. ಹೊಸ ಆಸ್ತಿ ಅಥವಾ ವಾಹನ ಖರೀದಿಯ ಯೋಗವಿದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರ? ಶಿವಣ್ಣ ಹೇಳಿದ್ದಿಷ್ಟು

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಸ್ಟಾರ್ ನಿರ್ದೇಶಕ ಬುಚ್ಚಿ ಬಾಬು ಸನಾ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಜೂನ್ 4ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಗ್ರಾಮೀಣ ಕ್ರೀಡೆಯ ಹಿನ್ನೆಲೆಯುಳ್ಳ ಈ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಸಿನಿಮಾದ ಟ್ರೈಲರ್ ಮತ್ತು ಪ್ರಚಾರದ ಸಂದರ್ಭದಲ್ಲಿ ಶಿವಣ್ಣ ಅವರು ತಮ್ಮ ಪಾತ್ರದ ಬಗ್ಗೆ ಬಿಟ್ಟುಕೊಟ್ಟಿರುವ ಆಸಕ್ತಿದಾಯಕ ಮಾಹಿತಿ ಈಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ಅವರು ‘ಪೆದ್ದಿ’ ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು ‘ಗೌರನಾಯ್ಡು’. ಈ ಕ್ಯಾರೆಕ್ಟರ್ ತುಂಬಾ ವಿಭಿನ್ನವಾಗಿದ್ದು, ತಮಗೆ ಸಾಕಷ್ಟು ಸವಾಲಿನಿಂದ ಕೂಡಿತ್ತು ಎಂದು ಶಿವಣ್ಣ ಹೇಳಿದ್ದಾರೆ. ವಿಶೇಷವೆಂದರೆ, ನಿರ್ದೇಶಕ ಬುಚ್ಚಿ ಬಾಬು ಅವರು ಈ ಪಾತ್ರಕ್ಕಾಗಿ ಬೇರೆ ಯಾರನ್ನೂ ಯೋಚಿಸದೆ, ಶಿವಣ್ಣ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಈ ಪಾತ್ರವನ್ನು ಬರೆದಿದ್ದಾರಂತೆ. ಅದಕ್ಕಾಗಿಯೇ ಅವರನ್ನು ಹುಡುಕಿಕೊಂಡು ಬಂದು ಕಥೆ ಹೇಳಿದ್ದಾರೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.

ಸಿನಿಮಾದ ಟ್ರೈಲರ್‌ನಲ್ಲಿ ಶಿವಣ್ಣ ಅವರ ಲುಕ್ ಅನ್ನು ಬಹಳ ಸೀರಿಯಸ್ ಮತ್ತು ಇಂಟೆನ್ಸ್ ಆಗಿ ತೋರಿಸಲಾಗಿದ್ದು, ಚಿತ್ರದ ಸುತ್ತ ಭಾರಿ ಕುತೂಹಲ ಮೂಡುವಂತೆ ಎಡಿಟ್ ಮಾಡಲಾಗಿದೆ. ಸಂದರ್ಶನದ ವೇಳೆ ನಿರೂಪಕರು, ‘ಟ್ರೈಲರ್‌ನಲ್ಲಿ ನಿಮ್ಮ ಪಾತ್ರ ಪಾಸಿಟಿವ್ ಆಗಿದೆಯೋ ಅಥವಾ ನೆಗೆಟಿವ್ ಆಗಿದೆಯೋ ಎಂಬುವುದನ್ನು ತುಂಬಾ ಚಾಣಾಕ್ಷತನದಿಂದ ಮುಚ್ಚಿಡಲಾಗಿದೆ’ ಎಂದು ಹೇಳಿದಾಗ, ಶಿವಣ್ಣ ಅವರು ನಗುತ್ತಲೇ ಹೌದು ಎಂಬಂತೆ ತಲೆಯಾಡಿಸಿದ್ದಾರೆ.

ಶಿವಣ್ಣ ಅವರ ಈ ನಡೆ, ಚಿತ್ರದಲ್ಲಿ ಅವರ ಪಾತ್ರ ಕೇವಲ ಸೀದಾ-ಸಾದಾ ಆಗಿರದೆ, ಗ್ರೇ ಶೇಡ್ ಅಥವಾ ವಿಭಿನ್ನ ತಿರುವುಗಳನ್ನು ನೀಡುವ ಪಾತ್ರ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ತೆರೆಯ ಮೇಲೆ ನೆಚ್ಚಿನ ನಟನನ್ನು ಸದಾ ವಿಭಿನ್ನವಾಗಿ ನೋಡಲು ಬಯಸುವ ಕನ್ನಡ ವೀಕ್ಷಕರಿಗೆ ಮತ್ತು ಶಿವಣ್ಣ ಅಭಿಮಾನಿಗಳಿಗೆ ಈ ಗೌರನಾಯ್ಡು ಪಾತ್ರದ ರಹಸ್ಯ ದೊಡ್ಡ ಸರ್ಪ್ರೈಸ್ ನೀಡುವ ಮುನ್ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ‘ಪೆದ್ದಿ’ ಸಿನಿಮಾ ಬಗ್ಗೆ ವಿಚಾರಿಸಿದ ನರೇಂದ್ರ ಮೋದಿ , ಹೇಳಿದ್ದೇನು?

ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ದೂರಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಜಗಪತಿ ಬಾಬು, ಜಾನ್ವಿ ಕಪೂರ್, ದಿವ್ಯೇಂದು ಶರ್ಮಾ ಮತ್ತು ಬೊಮನ್ ಇರಾನಿ ಅವರಂತಹ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Lakshmi Pooja: ಶುಕ್ರವಾರ ಮನೆಗೆ ಇವುಗಳನ್ನು ತಂದರೆ ಸಂಪತ್ತು ಮತ್ತು ಶಾಂತಿ ನಿಮ್ಮದಾಗುವುದು ಪಕ್ಕಾ!

ಸನಾತನ ಧರ್ಮದಲ್ಲಿ ಶುಕ್ರವಾರಕ್ಕೆ ಅತ್ಯಂತ ದಿವ್ಯವಾದ ಮಹತ್ವವಿದೆ. ಈ ದಿನವನ್ನು ಸಂಪತ್ತು, ಅದೃಷ್ಟ ಮತ್ತು ಐಶ್ವರ್ಯದ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಶುಕ್ರವಾರದಂದು ಕೆಲವು ಪವಿತ್ರ ವಸ್ತುಗಳನ್ನು ಮನೆಗೆ ತರುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ, ಆರ್ಥಿಕ ಸ್ಥಿರತೆ ಮತ್ತು ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ.

ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಆರ್ಥಿಕ ಅಡಚಣೆಗಳನ್ನು ನಿವಾರಿಸಿಕೊಂಡು, ಅಪಾರ ಐಶ್ವರ್ಯವನ್ನು ಆಕರ್ಷಿಸಲು ಬಯಸುವುದಾದರೆ, ಶುಕ್ರವಾರದ ದಿನ ಈ ಕೆಳಗಿನ 5 ಶುಭ ವಸ್ತುಗಳನ್ನು ಮನೆಗೆ ತರಲು ಪ್ರಯತ್ನಿಸಿ.

ತಾವರೆ ಹೂವು ಅಥವಾ ಸುಗಂಧ ದ್ರವ್ಯಗಳು:

ತಾವರೆ (ಕಮಲ) ಹೂವು ಪವಿತ್ರತೆಯ ಸಂಕೇತ ಹಾಗೂ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದದ್ದು. ಶುಕ್ರವಾರದ ದಿನ ತಾಜಾ ತಾವರೆ ಹೂವನ್ನು ಮನೆಗೆ ತಂದು ದೇವಿಯ ಪೂಜೆಗೆ ಅರ್ಪಿಸುವುದು ಅತ್ಯಂತ ಶುಭ ತರುತ್ತದೆ. ಒಂದೊಮ್ಮೆ ತಾವರೆ ಹೂವು ಸಿಗದಿದ್ದರೆ, ಮಲ್ಲಿಗೆಯಂತಹ ಸುಗಂಧಭರಿತ ಹೂವುಗಳನ್ನು ತರಬಹುದು. ಇದರೊಂದಿಗೆ, ಉತ್ತಮ ಗುಣಮಟ್ಟದ ಅಗರಬತ್ತಿ, ಧೂಪ ಅಥವಾ ಸುಗಂಧ ದ್ರವ್ಯಗಳನ್ನು (Essenial Oils) ಖರೀದಿಸಬಹುದು. ಈ ದಿವ್ಯ ಸುಗಂಧವು ಮನೆಯಲ್ಲಿರುವ ಜಡತ್ವವನ್ನು ದೂರಮಾಡಿ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.

ಬೆಳ್ಳಿಯ ವಸ್ತುಗಳು:

ವಾಸ್ತು ಶಾಸ್ತ್ರದ ಪ್ರಕಾರ, ಬೆಳ್ಳಿಯು ಚಂದ್ರನಿಗೆ ಸಂಬಂಧಿಸಿದ್ದಾಗಿದ್ದು, ಇದು ಮನಸ್ಸಿನ ಶಾಂತಿ ಮತ್ತು ಸ್ಥಿರವಾದ ಸಂಪತ್ತನ್ನು ಸೂಚಿಸುತ್ತದೆ. ಶುಕ್ರವಾರದಂದು ಒಂದು ಸಣ್ಣ ಬೆಳ್ಳಿಯ ನಾಣ್ಯ, ಸಣ್ಣ ಪಾತ್ರೆ ಅಥವಾ ಉಂಗುರವನ್ನು ಖರೀದಿಸಿ ಮನೆಗೆ ತರುವುದು ಲಕ್ಷ್ಮಿ ದೇವಿಯನ್ನು ಶಾಶ್ವತವಾಗಿ ಆಹ್ವಾನಿಸಿದಂತೆ ಎಂಬ ನಂಬಿಕೆಯಿದೆ. ಶುಕ್ರವಾರ ತಂದ ಬೆಳ್ಳಿಯ ನಾಣ್ಯವನ್ನು ಪೂಜಿಸಿ ನಿಮ್ಮ ದಬ್ಬಿ ಅಥವಾ ಕ್ಯಾಶ್ ಬಾಕ್ಸ್‌ನಲ್ಲಿ ಇಡುವುದರಿಂದ ಧನಾಗಮನ ಹೆಚ್ಚುತ್ತದೆ.

ಬಿಳಿ ಬಣ್ಣದ ಉಡುಪು ಅಥವಾ ಬಿಳಿ ಸಿಹಿ ತಿಂಡಿ:

ಶುಕ್ರವಾರದ ಅಧಿಪತಿ ಶುಕ್ರ ಗ್ರಹ (ಲಕ್ಷ್ಮಿ ದೇವಿಯ ಸ್ವರೂಪ). ಶುಕ್ರನು ಐಷಾರಾಮಿ, ಸೌಂದರ್ಯ ಮತ್ತು ಬಿಳಿ ಬಣ್ಣವನ್ನು ಪ್ರತಿನಿಧಿಸುತ್ತಾನೆ. ಆದ್ದರಿಂದ, ಶುಕ್ರವಾರದಂದು ಬಿಳಿ ಬಣ್ಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಮನೆಗೆ ತರುವುದು ಶ್ರೇಷ್ಠ. ನೀವು ಹೊಸ ಬಿಳಿ ಬಣ್ಣದ ಬಟ್ಟೆಗಳನ್ನು ಖರೀದಿಸಬಹುದು ಅಥವಾ ಹಾಲಿನಿಂದ ಮಾಡಿದ ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು (ಪಾಯಸ, ಪೇಡಾ ಅಥವಾ ರಸಗುಲ್ಲಾ) ಮನೆಗೆ ತರಬಹುದು. ಈ ಸಿಹಿಯನ್ನು ಶುಕ್ರವಾರ ಸಾಯಂಕಾಲ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಹಂಚಿ ತಿನ್ನುವುದರಿಂದ ಕುಟುಂಬದಲ್ಲಿ ಪ್ರೀತಿ ಮತ್ತು ಒಗ್ಗಟ್ಟು ಹೆಚ್ಚುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಸ್ವಚ್ಛತೆಗೆ ಒತ್ತು ನೀಡುವುದು;

ಎಲ್ಲಿ ಗಲೀಜು, ಧೂಳು ಮತ್ತು ಗೊಂದಲ ಇರುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ ಎಂದು ವಾಸ್ತು ಶಾಸ್ತ್ರ ಸ್ಪಷ್ಟವಾಗಿ ಹೇಳುತ್ತದೆ. ಆದ್ದರಿಂದ, ಶುಕ್ರವಾರದ ದಿನ ಮನೆ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು. ವಿಶೇಷವಾಗಿ ಮನೆಯ ಮುಖ್ಯ ದ್ವಾರ ಮತ್ತು ಪೂಜಾ ಕೋಣೆಯನ್ನು ಧೂಳಿಲ್ಲದಂತೆ ಸ್ವಚ್ಛವಾಗಿಟ್ಟುಕೊಳ್ಳಿ. ಮುಖ್ಯ ದ್ವಾರಕ್ಕೆ ಅರಿಶಿನ-ಕುಂಕುಮ ಇಟ್ಟು ರಂಗೋಲಿ ಹಾಕಿ. ಸಾಯಂಕಾಲದ ಸಮಯದಲ್ಲಿ ಮುಖ್ಯ ದ್ವಾರದ ಬಳಿ ಹಸುವಿನ ತುಪ್ಪದ ಅಥವಾ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದರಿಂದ ಧನಾತ್ಮಕ ತರಂಗಗಳು ಮನೆಯೊಳಗೆ ಪ್ರವೇಶಿಸುತ್ತವೆ.

ದಾನ ಧರ್ಮಗಳು (ಸತ್ಕರ್ಮ):

ಸಂಪತ್ತು ಎನ್ನುವುದು ಹಂಚಿದಷ್ಟೂ ವೃದ್ಧಿಯಾಗುತ್ತದೆ. ಜಾತಕದಲ್ಲಿ ಶುಕ್ರ ಗ್ರಹ ಬಲವಾಗಲು ಮತ್ತು ಲಕ್ಷ್ಮಿ ದೇವಿಯ ಕೃಪೆ ಸಿಗಲು ಶುಕ್ರವಾರದ ದಿನ ಮಾಡುವ ದಾನ ಅತ್ಯಂತ ಶಕ್ತಿಶಾಲಿಯಾಗಿದೆ. ಈ ದಿನ ಮನೆಗೆ ಅಕ್ಕಿ, ಬೇಳೆಯಂತಹ ಆಹಾರ ಧಾನ್ಯಗಳು ಅಥವಾ ಬಟ್ಟೆಗಳನ್ನು ತಂದು, ಅವುಗಳನ್ನು ಅಗತ್ಯವಿರುವ ಬಡವರಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯ ಮೇಲಿರುವ ಕಷ್ಟಗಳು ನಿವಾರಣೆಯಾಗಿ, ಪುಣ್ಯ ಲಭಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:58 am, Fri, 29 May 26

Source link

Bengaluru Rain Effect: ಮೆಟ್ರೋ ನಿಲ್ದಾಣದ ರಸ್ತೇಲಿ 3 ಅಡಿಯಷ್ಟು ನಿಂತ ಮಳೆ‌ನೀರು! ವಾಹನ ಸವಾರರ ಪರದಾಟ

ಬೆಂಗಳೂರು, ಮೇ 29: ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಯು ಮತ್ತೆ ಅವಾಂತರ ಸೃಷ್ಟಿಸಿದೆ. ತಾವರೆಕೆರೆ ಮೆಟ್ರೋ ನಿಲ್ದಾಣದ ಬಳಿ, ಬನ್ನೇರಘಟ್ಟ ರಸ್ತೆಯಲ್ಲಿ ಎರಡರಿಂದ ಮೂರು ಅಡಿಯಷ್ಟು ನೀರು ಸಂಗ್ರಹವಾಗಿದೆ. ನಿನ್ನೆ ರಾತ್ರಿ 7 ಗಂಟೆಗೆ ಸುರಿದ ಮಳೆಯ ಪರಿಣಾಮವಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಧ್ಯರಾತ್ರಿ ಕಳೆದರೂ ನೀರು ಇಳಿದಿಲ್ಲ.

ಬನ್ನೇರಘಟ್ಟದಿಂದ ಬೆಂಗಳೂರಿಗೆ ಬರುವ ಮತ್ತು ಬೆಂಗಳೂರಿನಿಂದ ಬನ್ನೇರಘಟ್ಟಕ್ಕೆ ಹೋಗುವ ಎರಡೂ ರಸ್ತೆಗಳಲ್ಲೂ ನೀರು ನಿಂತಿದೆ. ಇದರಿಂದಾಗಿ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವು ವಾಹನ ಸವಾರರು ಅಪಾಯದ ನಡುವೆಯೂ ಸಂಚಾರಕ್ಕೆ ಪ್ರಯತ್ನಿಸುತ್ತಿದ್ದು, ಹಲವು ವಾಹನಗಳು ನೀರಲ್ಲಿ ಸಿಲುಕಿ ಕೆಟ್ಟು ನಿಂತಿವೆ. ಈ ಮಾರ್ಗದಲ್ಲಿ ವಾಹನಗಳ ಸಂಚಾರ ಕಷ್ಟಕರವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಉತ್ತರ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ, ಐವರು ಸಾವು

ಹಮೀರ್​ಪುರ, ಮೇ 29: ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಬೀಸಿದ ಬಿರುಗಾಳಿಯಿಂದಾಗಿ ಬೆಟ್ವಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆಯ ಒಂದು ಭಾಗ ಕುಸಿದು ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಮಾಣ ಕಾರ್ಯದ ಸಮಯದಲ್ಲಿ ಬಲವಾದ ಗಾಳಿ ಬೀಸಿದಾಗ ಸೇತುವೆಯ ಸ್ಲ್ಯಾಬ್ ಮತ್ತು ಪಿಯರ್, ಸ್ಕ್ಯಾಫೋಲ್ಡಿಂಗ್ ರಚನೆಯೊಂದಿಗೆ ಕುಸಿದು ಬಿದ್ದಿದೆ. ಕುರಾರ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದಲ್ಲಿರುವ ಕಂದೌರ್-ಮೊರಕಂದರ್ ಸೇತುವೆಯಲ್ಲಿ ಈ ಘಟನೆ ನಡೆದಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Guru Sanchara 2026: ಗುರು ಸಂಚಾರ ಮೀನ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?

ಮೀನ ರಾಶಿಯವರಿಗೆ 2026ರ ಗುರು ಸಂಚಾರವು ಮಹತ್ವದ ಪರಿವರ್ತನೆಗಳನ್ನು ತರಲಿದೆ ಎಂದು ಡಾ. ಬಸವರಾಜ್ ಗುರೂಜಿ ಹೇಳಿದ್ದಾರೆ. ಜೂನ್ 2ರಿಂದ ಆರಂಭವಾಗುವ ಈ ಗುರುಬಲದಿಂದ ಮೀನ ರಾಶಿಯವರಿಗೆ ಹಲವು ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಈ ಸಮಯದಲ್ಲಿ ಐದನೇ ಮನೆಯಲ್ಲಿ ಗುರು ಸಂಚಾರ ಇರುವುದರಿಂದ, ಆರ್ಥಿಕವಾಗಿ ಉತ್ತಮ ಫಲಿತಾಂಶಗಳು ಸಿಗುತ್ತವೆ. ನಿಂತ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ.

ಈ ಅವಧಿಯಲ್ಲಿ ಆರೋಗ್ಯದಲ್ಲಿ ಚೇತರಿಕೆ, ಮಾನಸಿಕ ಸ್ಥೈರ್ಯ ಮತ್ತು ಆತ್ಮಗೌರವ ಹೆಚ್ಚುತ್ತದೆ. ಸಾಡೇಸಾತಿ ನಡೆಯುತ್ತಿದ್ದರೂ, ಗುರು ಬಲದ ಕಾರಣ ಅದರ ಪ್ರಭಾವ ಕಡಿಮೆಯಾಗುತ್ತದೆ. ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಯಶಸ್ಸು, ಮಹಿಳೆಯರಿಗೆ ಅಧಿಕಾರ ಪ್ರಾಪ್ತಿ ಹಾಗೂ ಮಕ್ಕಳಿಂದ ಬೆಂಬಲ ದೊರೆಯುತ್ತದೆ. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶಗಳು ಲಭಿಸುತ್ತವೆ. ತಾಳ್ಮೆಯಿಂದ ಕೆಲಸ ಮಾಡುವ ಮೂಲಕ ಈ ಶುಭ ಸಮಯದ ಸಂಪೂರ್ಣ ಲಾಭ ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ AQI ವಿವರ ಇಲ್ಲಿದೆ

ವರುಣನ ಕೃಪೆಯಿಂದ ಬೆಂಗಳೂರಲ್ಲಿ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ!

ಬೆಂಗಳೂರು, ಮೇ 29: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಹೆಚ್ಚಾಗಿ ‘ಸಾಧಾರಣ’ (Moderate) ಹಾಗೂ ಕೆಲವು ಜಿಲ್ಲೆಗಳಲ್ಲಿ ‘ಉತ್ತಮ’ (Good) ಮಟ್ಟದಲ್ಲಿದೆ. ಇತ್ತೀಚೆಗೆ ಸುರಿದ ಸಾಧಾರಣ ಮಳೆ ಹಾಗೂ ಬೀಸುತ್ತಿರುವ ತಂಪಾದ ಗಾಳಿಯ ಕಾರಣದಿಂದಾಗಿ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದ್ದು, ಜನ ನಿರಾಳವಾಗಿ ಉಸಿರಾಡುವಂತಾಗಿದೆ.

ಮುಖ್ಯಾಂಶಗಳು

  • ಇತ್ತೀಚಿನ ಮಳೆಯಿಂದಾಗಿ ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದೆ.
  • ಧಾರವಾಡದಲ್ಲಿ ವಾಯು ಮಾಲಿನ್ಯದ ಪ್ರಮಾಣ ಸೂಕ್ಷ್ಮ ಆರೋಗ್ಯದವರಿಗೆ ಹಾನಿಕಾರಕವಾಗಿದೆ.
  • ಗದಗ ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲೇ ಅತ್ಯಂತ ಶುದ್ಧವಾದ ಗಾಳಿ ದಾಖಲಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ಬೆಂಗಳೂರು ನಗರದಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕವು ಸರಾಸರಿ 66 ರಿಂದ 79 ರ ಆಸುಪಾಸಿನಲ್ಲಿದ್ದು, ಇದು ‘ಸಾಧಾರಣ’ (Moderate) ವಲಯಕ್ಕೆ ಸೇರುತ್ತದೆ. ನಗರದ ಪ್ರಮುಖ ವಲಯಗಳಾದ ಸಿಲ್ಕ್ ಬೋರ್ಡ್ ಮತ್ತು ಜಯನಗರದಲ್ಲಿ AQI ಕೊಂಚ ಹೆಚ್ಚಿದ್ದು (ಸುಮಾರು 98-100), ಇನ್ನುಳಿದಂತೆ ಹೆಬ್ಬಾಳ, ಪೀಣ್ಯ ಮತ್ತು ಮೈಸೂರು ರಸ್ತೆ ಭಾಗಗಳಲ್ಲಿ ಗಾಳಿಯ ಗುಣಮಟ್ಟ ತೃಪ್ತಿಕರವಾಗಿದೆ. ಪ್ರಮುಖ ಮಾಲಿನ್ಯಕಾರಕ ಅಂಶವಾದ PM2.5 ಸಾಂದ್ರತೆಯು ನಿಯಂತ್ರಣದಲ್ಲಿದೆ. ಆದಾಗ್ಯೂ, ಉಸಿರಾಟದ ತೊಂದರೆ ಇರುವವರು ಹಾಗೂ ಹಿರಿಯ ನಾಗರಿಕರು ಮುಂಜಾನೆ ಮತ್ತು ಸಂಜೆ ಸಂಚಾರದ ವೇಳೆ ಕೊಂಚ ಜಾಗ್ರತೆ ವಹಿಸುವುದು ಉತ್ತಮ.

ರಾಜ್ಯದ ಇತರ ಪ್ರಮುಖ ನಗರಗಳ ಸ್ಥಿತಿ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲಾ ಕೇಂದ್ರಗಳಲ್ಲೂ ವಾಯು ಗುಣಮಟ್ಟ ಉತ್ತಮ ಹಾಗೂ ಸಾಧಾರಣ ಸ್ಥಿತಿಯಲ್ಲಿದೆ. ಕರಾವಳಿ ಭಾಗದಲ್ಲಿ ಇತ್ತೀಚೆಗೆ ಮಳೆಯಾಗಿರುವುದರಿಂದ ಇಲ್ಲಿನ AQI ಅತ್ಯಂತ ಉತ್ತಮವಾಗಿದ್ದು, 40-50 ರ ಒಳಗೆ ದಾಖಲಾಗಿದೆ. ಇದು ‘ಉತ್ತಮ’ (Good) ವಾಯು ಗುಣಮಟ್ಟವನ್ನು ಸೂಚಿಸುತ್ತದೆ. ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 55 ರಿಂದ 65 ರಷ್ಟಿದ್ದು, ಹವಾಮಾನವು ಆಹ್ಲಾದಕರವಾಗಿದೆ.

ಉತ್ತರ ಒಳನಾಡಿನ ಕೈಗಾರಿಕಾ ವಲಯ ಹಾಗೂ ಬಿಸಿಲು ಹೆಚ್ಚಿರುವ ಬಳ್ಳಾರಿ ಮತ್ತು ಕಲ್ಬುರ್ಗಿಯಲ್ಲಿ ಕಣಗಳ ತೀವ್ರತೆ (PM10) ಕೊಂಚ ಹೆಚ್ಚಾಗಿದ್ದು, AQI 85 ರಿಂದ 95 ರ ಆಸುಪಾಸಿನಲ್ಲಿದೆ. ಬಿರುಗಾಳಿ ಬೀಸುತ್ತಿರುವುದರಿಂದ ಧೂಳಿನ ಪ್ರಮಾಣ ತುಸು ಹೆಚ್ಚಾಗಿದೆ. ರಾಜ್ಯದ ಒಟ್ಟಾರೆ ವಾಯು ಗುಣಮಟ್ಟ ಪರಿಸರವು ಸದ್ಯಕ್ಕೆ ಯಾವುದೇ ಗಂಭೀರ ಆರೋಗ್ಯದ ಅಪಾಯವನ್ನು ಹೊಂದಿಲ್ಲ ಎಂದು ವರದಿಗಳು ತಿಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version