‘ದಯವಿಟ್ಟು ದೃಷ್ಟಿ ತೆಗೆಯಿರಿ’; ಸೂರ್ಯವಂಶಿ ಪಾಲಕರಿಗೆ ಆರ್​​. ಅಶ್ವಿನ್ ಕೋರಿಕೆ

ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿದ್ದಾರೆ. ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 97 ರನ್ ಸಿಡಿಸಿದ ವೈಭವ್, ಎಸ್‌ಆರ್‌ಹೆಚ್ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು. ಕೇವಲ 3 ರನ್‌ಗಳಿಂದ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಶತಕದ ದಾಖಲೆಯನ್ನು ಮಿಸ್ ಮಾಡಿಕೊಂಡರೂ, ಈ ಹುಡುಗನ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ಫಿದಾ ಆಗಿದೆ. ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ವೈಭವ್ ಅವರ ಆಟವನ್ನು ಕೊಂಡಾಡಿದ್ದು, ಆತನ ಪೋಷಕರಿಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ವೈಭವ್ ಆಟದ ಬಗ್ಗೆ ಮಾತನಾಡಿರುವ ಆರ್. ಅಶ್ವಿನ್, ‘ನಾನು ಇಲ್ಲಿ 15 ವರ್ಷದ ಹುಡುಗ ಎಂಬ ಕಾರ್ಡ್ ಬಳಸಿ ಮಾತನಾಡಲು ಬಯಸುವುದಿಲ್ಲ. ಆದರೆ ಈ ವಯಸ್ಸಿನಲ್ಲಿ ಇಷ್ಟು ಅದ್ಭುತವಾದ ಮಾನಸಿಕ ಪಕ್ವತೆ ಬರಬೇಕಾದರೆ ಆತ ಎಷ್ಟು ಪಂದ್ಯಗಳನ್ನು ಆಡಿರಬಹುದು ನೀವೇ ಹೇಳಿ’ ಎಂದು ಅವರು ಕೇಳಿದ್ದಾರೆ.

‘ಸೀಸನ್ ಆರಂಭದಲ್ಲಿ ಇದೇ ರೀತಿಯ ಎಸೆತಗಳನ್ನು ನೇರವಾಗಿ ಹೊಡೆಯಲು ಹೋಗಿ ಟಾಪ್ ಎಡ್ಜ್ ಆಗುತ್ತಿತ್ತು. ಆದರೆ ಒಂದೇ ಸೀಸನ್‌ನಲ್ಲಿ ಆತ ತನ್ನ ತಪ್ಪುಗಳನ್ನು ತಿದ್ದಿಕೊಂಡು ಥರ್ಡ್ ಮ್ಯಾನ್ ಮೇಲೆ ಸಿಕ್ಸರ್ ಬಾರಿಸುವ ಮಟ್ಟಿಗೆ ಬದಲಾಗಿದ್ದಾನೆ. ಆತ ಸಾಮಾನ್ಯ ಆಟಗಾರನಲ್ಲ. ಅವನ ತಂದೆ-ತಾಯಿ ಏನು ಬೇಕಾದರೂ ಮಾಡಲಿ, ಆದರೆ ಮೊದಲು ಅವನಿಗೆ ತಗುಲಿರುವ ಕೆಟ್ಟ ದೃಷ್ಟಿಯನ್ನು (Evil Eye) ತೆಗೆಯಲಿ’ ಎಂದು ಹೇಳಿದ್ದಾರೆ.

ಪಂದ್ಯದ ನಂತರ ವೈಭವ್ ಆಡಿದ ಮಾತುಗಳು ಅಶ್ವಿನ್ ಅವರ ಮನಗೆದ್ದಿವೆ. ಈ ಬಗ್ಗೆ ಉಲ್ಲೇಖಿಸಿದ ಅಶ್ವಿನ್, ‘ಪಂದ್ಯ ಮುಗಿದ ಬಳಿಕ ಆ ಹುಡುಗ, ಶತಕಗಳು ಆಮೇಲೆಯೂ ಬರುತ್ತವೆ, ಇವತ್ತಿನ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸುವುದು ನನ್ನ ಗುರಿಯಾಗಿತ್ತು’ ಎಂದು ಹೇಳಿದ್ದಾನೆ. ಅವನ ಬ್ಯಾಟಿಂಗ್ ಶೈಲಿ ನೋಡಿದರೆ ಆತನಿಗೆ 100 ರನ್ ಗಳಿಸುವ ಬಗ್ಗೆ ಚಿಂತೆಯಿಲ್ಲ, ಅದು ಎಂದಾದರೂ ಬಂದೇ ಬರುತ್ತದೆ ಎಂಬ ನಂಬಿಕೆ ಅವನಲ್ಲಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಒತ್ತಡದ ಪರಿಸ್ಥಿತಿಯನ್ನು ಆತ ನಿಭಾಯಿಸಿದ ರೀತಿ ನಿಜಕ್ಕೂ ಅದ್ಭುತ,” ಎಂದು ಶ್ಲಾಘಿಸಿದ್ದಾರೆ.

ಬುಧವಾರ ನಡೆದ ಹೈವೋಲ್ಟೇಜ್ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸಿಕ್ಸರ್‌ಗಳ ಮಳೆ ಹರಿಸಿದರು. ಹೈದರಾಬಾದ್ ನಾಯಕ ಹಾಗೂ ವಿಶ್ವದ ಶ್ರೇಷ್ಠ ಬೌಲರ್ ಪ್ಯಾಟ್ ಕಮ್ಮಿನ್ಸ್ ಓವರ್‌ನಲ್ಲೇ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಬ್ಬರಿಸಿದ ವೈಭವ್, ಕಮ್ಮಿನ್ಸ್ ಅವರ ಬೌಲಿಂಗ್ ಲಯವನ್ನೇ ತಪ್ಪಿಸಿದರು.

ಕ್ರಿಸ್ ಗೇಲ್ ದಾಖಲೆ ಬ್ರೇಕ್: ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ (59 ಸಿಕ್ಸರ್) ಅವರ 14 ವರ್ಷಗಳ ಹಳೆಯ ದಾಖಲೆಯನ್ನು ವೈಭವ್ (65 ಸಿಕ್ಸರ್) ಮುರಿದಿದ್ದಾರೆ.

ವೇಗದ ಅರ್ಧಶತಕ: ಕೇವಲ 16 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕದ ದಾಖಲೆ ಬರೆದರು.

ಇದನ್ನೂ ಓದಿ: ಡೆಲ್ಲಿ ಡೇರ್​​ಡೆವಿಲ್ಸ್​​ಗಿತ್ತು ವೈಭವ್ ಸೂರ್ಯವಂಶಿ ಪಡೆಯೋ ಅವಕಾಶ

ವಾರ್ನರ್ ದಾಖಲೆ ಉಡೀಸ್: ಪವರ್‌ಪ್ಲೇ ಓವರ್‌ಗಳಲ್ಲಿ ಭರ್ಜರಿ 490 ರನ್ ಗಳಿಸುವ ಮೂಲಕ ಒಂದೇ ಸೀಸನ್‌ನ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಡೇವಿಡ್ ವಾರ್ನರ್ ದಾಖಲೆಯನ್ನೂ ಧೂಳೀಪಟ ಮಾಡಿದರು. ವೈಭವ್ ನೀಡಿದ ಈ ಆಘಾತದಿಂದ ಚೇತರಿಸಿಕೊಳ್ಳದ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ 47 ರನ್‌ಗಳ ಸೋಲು ಕಂಡು ಐಪಿಎಲ್ 2026ರ ಟೂರ್ನಿಯಿಂದ ಹೊರಬಿದ್ದಿದೆ. ರಾಜಸ್ಥಾನ್ ರಾಯಲ್ಸ್ ಭರ್ಜರಿಯಾಗಿ ಕ್ವಾಲಿಫೈಯರ್ 2 ಹಂತಕ್ಕೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾರುಖ್ ಖಾನ್, ಅಕ್ಷಯ್ ಕುಮಾರ್ ನನಗೆ ಎಚ್ಚರಿಕೆ ನೀಡಿದ್ದರು: ಹನಿ ಸಿಂಗ್

ಭಾರತದ ಸ್ಟಾರ್ ರ್ಯಾಪ್ ಗಾಯಕ ಹನಿ ಸಿಂಗ್ (Honey Singh) ಇತ್ತೀಚೆಗಷ್ಟೆ ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ತರುಣ್ ಚಾಗ್ ಅವರನ್ನು ಭೇಟಿ ಆಗಿದ್ದರು. ಈ ವೇಳೆ ಅವರು ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಯ್ತು. ಖುದ್ದು ಹನಿಸಿಂಗ್ ತಮ್ಮ ಹಾಡುಗಳಲ್ಲಿ ಡ್ರಗ್ಸ್ ಬಳಕೆಯನ್ನು ಗ್ಲಾಮರಸೈಸ್ ಮಾಡಿ ತೋರಿಸುತ್ತಾರೆ ಈಗ ಅವರೇ ಮಾದಕ ವಸ್ತು ವಿರುದ್ಧ ಜಾಗೃತಿ ರಾಯಭಾರಿ ಆಗಿದ್ದಾರೆ ಎಂದು ಹಲವರು ಟೀಕೆ ಮಾಡಿದ್ದಾರೆ. ಇದೀಗ ಹನಿಸಿಂಗ್, ತಾವು ಖುದ್ದು ಮಾದಕ ವ್ಯಸನಿ ಆಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಆ ಸಮಯದಲ್ಲಿ ಕೆಲ ಸ್ಟಾರ್ ನಟರು ತಮಗೆ ಎಚ್ಚರಿಕೆ ನೀಡಿದ್ದರು ಎಂದು ಸಹ ಹೇಳಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ಹನಿ ಸಿಂಗ್, ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ತಮಗೆ ಡ್ರಗ್ಸ್ ಬಗ್ಗೆ ಎಚ್ಚರಿಕೆ ನೀಡಿದ್ದ ದಿನಗಳನ್ನು ನೆನಪಿಸಿಕೊಂಡರು. 2011 ಮತ್ತು 2014 ರ ನಡುವೆ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ, ಯಶಸ್ಸು, ಹಣ ವಿಪರೀತ ಬಂದಿತ್ತು. ಅದು ನನ್ನ ತಲೆಗೆ ಹತ್ತಿತ್ತು ಆ ಸಮಯದಲ್ಲಿ ನಾನು ಮಾದಕ ದ್ರವ್ಯ ವ್ಯಸನದಲ್ಲಿ ತಾವು ಸಂಪೂರ್ಣವಾಗಿ ಕಳೆದುಹೋಗಿದ್ದೆ ಎಂದು ಹನಿ ಸಿಂಗ್ ಹೇಳಿಕೊಂಡಿದ್ದಾರೆ.

‘ಆ ಸಮಯದಲ್ಲಿ ನಾನು ಸಂತೋಷವಾಗಿರಲಿಲ್ಲ. 2013 ಮತ್ತು 2014 ರಲ್ಲಿ ನಾನು ಯಶಸ್ಸಿನ ಉತ್ತುಂಗದಲ್ಲಿದ್ದೆ. ನನಗೆ ಪ್ರಜ್ಞೆಯೇ ಇರಲಿಲ್ಲ. ಆ ಸಮಯದಲ್ಲಿ ನನ್ನ ಸಿದ್ಧಾಂತವೇ ಬೇರೆಯಾಗಿತ್ತು. ನನಗೆ ಯಶಸ್ಸು ಸಿಕ್ಕಾಗ, ನಾನು ನಡೆಯುವ ರೀತಿ, ಮಾತನಾಡುವ ರೀತಿ ಬದಲಾಯಿತು ಮತ್ತು ನಾನು ಯಾರನ್ನೂ ಗೌರವಿಸುತ್ತಿರಲಿಲ್ಲ. ನಾನು ಮಹಾನ್ ಎಂಬ ಭ್ರಮೆ ಮೂಡಿತ್ತು. ಅಷ್ಟೇ ಅಲ್ಲ, ನನ್ನನ್ನು ನಾನೇ ದೇವರು ಎಂದು ಕರೆದುಕೊಳ್ಳುತ್ತಿದ್ದೆ. ಆ ಸಮಯದಲ್ಲಿ ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ. ರಾಕ್ಷಸೀಯವಾಗಿ ವರ್ತಿಸುತ್ತಿದ್ದೆ’ ಎಂದಿದ್ದಾರೆ ಹನಿ ಸಿಂಗ್.

ಇದನ್ನೂ ಓದಿ:ಮಗನ ಸಿನಿಮಾಕ್ಕಿದ್ದ ಸಮಸ್ಯೆ ಪರಿಹರಿಸಿದ ಮೆಗಾಸ್ಟಾರ್ ಚಿರಂಜೀವಿ

ಆ ಸಮಯದಲ್ಲಿ ಬಾಲಿವುಡ್​​ ಸ್ಟಾರ್ ನಟರುಗಳಾದ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದೆ. ಮನೊರಂಜನಾ ಕ್ಷೇತ್ರದಿಂದ ನಾನು ಹೀಗಾದೆ ಎಂದು ಒಪ್ಪಲಾರೆ, ಆದರೆ ಯಶಸ್ಸು ನನ್ನ ತಲೆಗೇರಿತ್ತು. ಆ ಸಮಯದಲ್ಲಿ ವಿಶೇಷವಾಗಿ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ನನಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದರು. ಶಾರುಖ್ ಖಾನ್ ನನಗೆ ಹಲವು ಬಾರಿ ಹೇಳಿದ್ದರು, ‘ಇದು ನಿನ್ನನ್ನು ಹಾಳು ಮಾಡುತ್ತದೆ, ನಿನ್ನನ್ನು ಕೊನೆಗೊಳಿಸುತ್ತದೆ ಮತ್ತು ನಿನ್ನನ್ನು ನಾಶಪಡಿಸುತ್ತದೆ’ ಎಂದಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

ಪಾಡ್​​ಕಾಸ್ಟ್​ನಲ್ಲಿ ಮಾತನಾಡಿದ ಹನಿಸಿಂಗ್, ‘ನಾನು ಡ್ರಗ್ಸ್ ಮತ್ತು ಮದ್ಯದಲ್ಲಿ ಮುಳುಗಿದ್ದೆ, ದಿನಕ್ಕೆ 12-15 ಜಾಯಿಂಟ್‌ಗಳನ್ನು (ಗಾಂಜಾ) ಸೇದುತ್ತಿದ್ದೆ ಮತ್ತು ಮದ್ಯದ ಬಾಟಲಿಗಳನ್ನು ಖಾಲಿ ಮಾಡುತ್ತಿದ್ದೆ. ನಾನು ನನ್ನ ಕುಟುಂಬವನ್ನು ತ್ಯಜಿಸಿದ್ದೆ, ನನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡೆ. ಒಂದು ಬಾರಿ ನಾನು ಎಷ್ಟು ಅಮಲಿನಲ್ಲಿದ್ದೆ ಎಂದರೆ, ನನ್ನ ಸ್ನೇಹಿತನ ಹೊಟ್ಟೆಗೆ ಎಂಟು ಬಾರಿ ಕಚ್ಚಿದ್ದೆ’ ಎಂದು ಅವರು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಹನಿ ಸಿಂಗ್ ಬೈಪೋಲಾರ್ ಡಿಸಾರ್ಡರ್ ಇರುವುದು ಪತ್ತೆಯಾಯಿತು ಮತ್ತು ಅವರು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿದ್ದರು. 2017 ರಲ್ಲಿ, ಹನಿ ಸಿಂಗ್ ತಮ್ಮ ಪ್ರವಾಸದ ಮಧ್ಯದಲ್ಲೇ ಕುಸಿದು ಬಿದ್ದರು. ಬಳಿಕ ಅವರು ದೆಹಲಿಗೆ ಮರಳಿ, ವೈದ್ಯರು ಮತ್ತು ಥೆರಪಿಸ್ಟ್‌ಗಳ ತಂಡದೊಂದಿಗೆ ಚಿಕಿತ್ಸೆ ಪಡೆಯಲು ಪ್ರಾರಂಭಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಜೀವದಹನ

ಅಜ್ಮೀರ್, ಮೇ 28: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕುಟುಂಬದ ನಾಲ್ವರು ಸಜೀವದಹನವಾಗಿರುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಬೊರಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ, ಗ್ರಾಮದ ಮಾಜಿ ಮುಖ್ಯಸ್ಥ, ಅವರ ಕುಟುಂಬ ಸದಸ್ಯರು ಮತ್ತು ಸ್ಥಳೀಯ ಜಿಲ್ಲಾ ಪರಿಷತ್ ಸದಸ್ಯರೊಬ್ಬರು ಪ್ರಯಾಣಿಸುತ್ತಿದ್ದ ಕಾರಿಗೆ ಹಠಾತ್ತನೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಮಾಜಿ ಸರಪಂಚ್ ರಾಮಸಿಂಗ್ ಚೌಧರಿ ಅವರು ತಮ್ಮ ಅನಾರೋಗ್ಯ ಪೀಡಿತ ತಾಯಿ ಮತ್ತು ಜಿಲ್ಲಾ ಪರಿಷತ್ ಸದಸ್ಯೆ ಪುಸಿ ದೇವಿ ಅವರಿಗೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ಮೆಟ್ರೋಗೆ ‘ಬಂಗಾಳ ಎಲೆಕ್ಷನ್ ಶಾಕ್’: 10 ಸಾವಿರ ಕಾರ್ಮಿಕರು ನಾಪತ್ತೆ, ಪಿಂಕ್-ಬ್ಲೂ ಲೈನ್ ಕಾಮಗಾರಿ ಬಂದ್!

ಬೆಂಗಳೂರು, ಮೇ 28: ನಗರದ ಜನತೆಯ ಬಹುನಿರೀಕ್ಷಿತ ನಮ್ಮ ಮೆಟ್ರೋ (BMRCL) ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳ ಉದ್ಘಾಟನೆಗೆ ಪಶ್ಚಿಮ ಬಂಗಾಳದ ಚುನಾವಣೆ ದೊಡ್ಡ ಮಟ್ಟದ ಬ್ರೇಕ್ ಹಾಕಿದೆ. ಮತದಾನ ಮಾಡಲು ಸ್ವಗ್ರಾಮಗಳಿಗೆ ತೆರಳಿದ ಸುಮಾರು 10 ಸಾವಿರಕ್ಕೂ ಹೆಚ್ಚು ಬಂಗಾಳಿ ಕಾರ್ಮಿಕರು ಇನ್ನು ಬೆಂಗಳೂರಿಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಮೆಟ್ರೋ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ.

ಮುಖ್ಯಾಂಶಗಳು

  • ಬಂಗಾಳ ಎಲೆಕ್ಷನ್‌ಗೆ ಹೋದ ಹತ್ತು ಸಾವಿರ ಮೆಟ್ರೋ ಕಾರ್ಮಿಕರು ಮರಳಿ ಬಂದಿಲ್ಲ.
  • ಕೆಲಸಗಾರರಿಲ್ಲದೆ ಪಿಂಕ್ ಮತ್ತು ಬ್ಲೂ ಲೈನ್ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ.
  • ಜೂನ್ ಮತ್ತು ಡಿಸೆಂಬರ್ ತಿಂಗಳ ಮೆಟ್ರೋ ಉದ್ಘಾಟನೆ ಮತ್ತಷ್ಟು ವಿಳಂಬವಾಗುವ ಆತಂಕವಿದೆ.

ವೋಟ್ ಹಾಕಲು ಹೋದವರು ಬರಲೇ ಇಲ್ಲ!

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ವಿಧಾನಸೌಧ ಚುನಾವಣೆ ನಡೆದು, ಮೇ 4 ರಂದು ಫಲಿತಾಂಶ ಕೂಡ ಪ್ರಕಟವಾಗಿದೆ. ನಮ್ಮ ಮೆಟ್ರೋ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಕಾರ್ಮಿಕರು ಪಶ್ಚಿಮ ಬಂಗಾಳದವರಾಗಿದ್ದಾರೆ. ಚುನಾವಣೆಯಲ್ಲಿ ಮತ ಚಲಾಯಿಸಲು ಬೆಂಗಳೂರಿನಿಂದ ಹೋದ ಸಾವಿರಾರು ಕಾರ್ಮಿಕರು ವಾರಗಳು ಕಳೆದರೂ ಇನ್ನು ಕೆಲಸಕ್ಕೆ ಹಾಜರಾಗಿಲ್ಲ. ಪರಿಣಾಮವಾಗಿ, ಮೆಟ್ರೋ ನಿಲ್ದಾಣಗಳು ಹಾಗೂ ಹಳಿ ಅಳವಡಿಸುವ ಆಯಕಟ್ಟಿನ ಜಾಗಗಳಲ್ಲಿ ಕೆಲಸ ಮಾಡಲು ಆಳುಗಳಿಲ್ಲದೆ ಬಿಎಂಆರ್‌ಸಿಎಲ್ ಪರದಾಡುತ್ತಿದೆ.

ಯಾವ ಮಾರ್ಗಗಳಿಗೆ ಅಡ್ಡಿ?

ಬಿಎಂಆರ್‌ಸಿಎಲ್ ಯೋಜನೆ ಪ್ರಕಾರ ಮುಂಬರುವ ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರಮುಖ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆದಿತ್ತು.ಈ ವರ್ಷದ ಜೂನ್ ತಿಂಗಳೊಳಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್‌ಗಳನ್ನು (ಪಿಂಕ್ ಲೈನ್) ಓಪನ್ ಮಾಡಲು ಪ್ಲಾನ್ ಮಾಡಲಾಗಿತ್ತು. ಈ ವರ್ಷದ ಡಿಸೆಂಬರ್ ವೇಳೆಗೆ ಮೊದಲ ಹಂತದ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ ವರೆಗಿನ 19.75 ಕಿ.ಮೀ ಮಾರ್ಗವನ್ನು ( ಬ್ಲೂ ಲೈನ್) ಸಾರ್ವಜನಿಕರಿಗೆ ಮುಕ್ತಗೊಳಿಸಲು ಗಡುವು ವಿಧಿಸಲಾಗಿತ್ತು.

ಆದರೆ ಕಾರ್ಮಿಕರ ಕೊರತೆಯಿಂದಾಗಿ ಈ ಎರಡೂ ಮಾರ್ಗಗಳ ಗಡುವು ಅಸಾಧ್ಯವೆಂಬಂತಾಗಿದೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪರ್ಯಾಯ ಕಾರ್ಮಿಕರ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ನಿಗದಿತ ಸಮಯಕ್ಕೆ ಮೆಟ್ರೋ ಸಿಗುವುದು ಕಷ್ಟ ಎಂದು ಸ್ಥಳೀಯ ನಿವಾಸಿ ರಘುರಾಮ್ ಹಾಗೂ ಮೆಟ್ರೋ ಪ್ರಯಾಣಿಕ ರಾಘವೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ಬಂಗಾಳ ಚುನಾವಣೆಯ ಬಿಸಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ತಟ್ಟಿದ್ದು, ನಮ್ಮ ಮೆಟ್ರೋದ ಪಿಂಕ್ ಮತ್ತು ಬ್ಲೂ ಲೈನ್ ಕಾಮಗಾರಿಗಳು ಮತ್ತಷ್ಟು ವಿಳಂಬವಾಗುವುದರಲ್ಲಿ ಯಾವುದೇ ಅನುಮಾನವಿಲ್ಲದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Guru Sanchara 2026: ಗುರು ಸಂಚಾರ ಕುಂಭ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಕುಂಭ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಕುಂಭ ರಾಶಿಯವರಿಗೆ 2026ರ ಗುರು ಸಂಚಾರವು ಮಿಶ್ರ ಫಲಗಳನ್ನು ನೀಡಲಿದೆ. ಶನಿಯ ಅಧಿಪತ್ಯದಲ್ಲಿರುವ ಕುಂಭ ರಾಶಿಯವರಿಗೆ ಕಡೆಯ ಸಾಡೆ ಸಾತಿ ಅವಧಿಯಿದೆ. ಗುರುವು ಐದನೇ ಮನೆಯಿಂದ ಆರನೇ ಮನೆಗೆ ಸಂಚಾರ ಮಾಡುವುದರಿಂದ ರೋಗ ಮತ್ತು ಸಾಲದ ವಿಚಾರದಲ್ಲಿ ಜಾಗ್ರತೆ ಅಗತ್ಯ.

ಆರ್ಥಿಕವಾಗಿ ಉದಾಸೀನತೆ ಮತ್ತು ದುಂದುವೆಚ್ಚವನ್ನು ತಪ್ಪಿಸಬೇಕು, ಆದರೆ ಆರ್ಥಿಕವಾಗಿ ಶುಭವಾಗುವ ಸಾಧ್ಯತೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳು, ಕ್ರೀಡೆ, ಕೃಷಿ ಮತ್ತು ಭೂ ವ್ಯವಹಾರಗಳಲ್ಲಿ ಯಶಸ್ಸು ಕಾಣಬಹುದು. ವೈಯಕ್ತಿಕವಾಗಿ, ಬೇಕಾದವರೊಂದಿಗೆ ಕಲಹ, ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಗಲಾಟೆಗಳು ಎದುರಾಗಬಹುದು. ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳು, ಗಾಯಗಳು ಬೇಗ ವಾಸಿಯಾಗದೆ ಇರಬಹುದು, ಆಹಾರದಲ್ಲಿ ಎಚ್ಚರವಿರಲಿ. ಉದ್ಯೋಗದಲ್ಲಿ ಕಿರಿಕಿರಿ, ಮಹಿಳೆಯರಿಗೆ ಅಪವಾದ, ಐಟಿ ಮತ್ತು ಸಾಫ್ಟ್‌ವೇರ್ ವಲಯದವರಿಗೆ ಟೆನ್ಷನ್ ಎದುರಾಗಬಹುದು. ಪ್ರತಿನಿತ್ಯ ಜಪ, ಧ್ಯಾನ, ಯೋಗಾಭ್ಯಾಸ ಮತ್ತು ದತ್ತಾತ್ರೇಯ ಮಂತ್ರ ಜಪದಿಂದ ಶುಭ ಫಲಗಳು ದೊರೆಯಲಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಡಿಕೆ ಶಿವಕುಮಾರ್​ಗೆ ಅಭಿನಂದನೆ ತಿಳಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ 28: ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜತೆ ಬೆಳಗ್ಗೆ ಉಪಾಹಾರ ಸೇವಿಸಿರುವ ಸಿದ್ದರಾಮಯ್ಯ ಡಿಕೆ ಶಿವಕುಮಾರ್​ಗೆ ಅಭಿನಂದನೆ ತಿಳಿಸಿದ್ದಾರೆ. ಇಂದು ರಾಜ್ಯಪಾಲರು ಇರುವುದಿಲ್ಲವಂತೆ, ಹೋಗಿ ನೋಡುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ತಾನು ಪ್ರಬಲವಾಗಿದೆ ಎಂಬ ಸಂದೇಶವನ್ನು ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರ ಹಸ್ತಾಂತರದ ಮೂಲಕ ಸ್ಪಷ್ಟಪಡಿಸಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ನಡೆದ ಗೊಂದಲಗಳಿಗೆ ಅವಕಾಶ ನೀಡದೆ, ಸಿದ್ದರಾಮಯ್ಯ ಯಾವುದೇ ಅಸಮಾಧಾನವಿಲ್ಲದೆ ಅಧಿಕಾರ ಹಸ್ತಾಂತರಿಸಲು ಒಪ್ಪಿಕೊಂಡಿದ್ದಾರೆ. ಇದು ಹೈಕಮಾಂಡ್‌ಗೆ ನಿರಾಳತೆ ತಂದಿದೆ.

ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ, ರಾಜ್ಯಪಾಲರು ಇಲ್ವಂತಲ್ಲ, ಹೋಗ್ತೀನಿ ನೋಡೋಣ” ಎಂದು ಹೇಳುವ ಮೂಲಕ, ತಮ್ಮ ನಿರ್ಧಾರ ಸ್ಪಷ್ಟವಾಗಿದೆ ಎಂದು ಸೂಚಿಸಿದರು. ಪ್ರಸ್ತುತ, ರಾಜ್ಯಪಾಲರು ವೈಯಕ್ತಿಕ ಕಾರಣಗಳಿಂದ ಇಂದೋರ್‌ನಲ್ಲಿದ್ದು, ಇಂದು ಬೆಂಗಳೂರಿಗೆ ವಾಪಸ್ ಆಗುವ ನಿರೀಕ್ಷೆಯಿದೆ. ಈ ಸುಗಮ ಪರಿವರ್ತನೆಯನ್ನು ಕಾಂಗ್ರೆಸ್‌ಗೆ ಒಳ್ಳೆಯ ಬೆಳವಣಿಗೆ ಎಂದು ಪಕ್ಷದ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

Source link

ಮಾಜಿ ಲವರ್ ಮನೆಗೆ ಹೋಗಿ ಆಕೆಯ ಪತಿಯ ಕೈಯಲ್ಲೇ ಕೊಲೆಯಾದ ಯುವಕ!

ಬೆಂಗಳೂರು, ಮೇ 28: ಹಳೇ ಪ್ರೇಮದ ನೆನಪಿನಲ್ಲಿ ಮಾಜಿ ಪ್ರೇಯಸಿಯನ್ನು (Ex Lover) ಭೇಟಿಯಾಗಲು ಆಕೆಯ ಮನೆಗೆ ತೆರಳಿದ್ದ ಯುವಕನೊಬ್ಬ ಭೀಕರವಾಗಿ ಕೊಲೆಯಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೇಯಸಿಯ ಪತಿ ಹಾಗೂ ಆಕೆಯ ಕುಟುಂಬಸ್ಥರೇ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮಾಜಿ ಪ್ರೇಯಸಿ ಮನೆಗೆ ಹೋದ ಮೊಹಮ್ಮದ್ ಖಾಸಿಂ ಕೊಲೆಯಾಗಿದ್ದಾನೆ.
  • ಹಳೇ ಪ್ರೇಮಿಯ ಆಗಮನದಿಂದ ಕೆರಳಿದ ಪತಿ ಮತ್ತು ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ.
  • ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೊಲೀಸರಿಂದ ತನಿಖೆ ತೀವ್ರಗೊಂಡಿದೆ.

ಪರಿಚಯ ಮತ್ತು ಹಳೇ ಪ್ರೇಮ

ಮೊಹಮ್ಮದ್ ಖಾಸಿಂ ಈ ಹಿಂದೆ ಯುವತಿಯೊಬ್ಬಳ ಜೊತೆ ಪ್ರೇಮ ಸಂಬಂಧದಲ್ಲಿದ್ದ. ಆದರೆ ಕೆಲವು ಕಾರಣಗಳಿಂದಾಗಿ ಇಬ್ಬರ ಬ್ರೇಕಪ್ ಆಗಿತ್ತು. ತದನಂತರ ಯುವತಿಗೆ ಬೇರೆ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಮದುವೆಯಾಗಿ ಪತಿಯೊಂದಿಗೆ ಆಕೆ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಇತ್ತೀಚೆಗೆ ಖಾಸಿಂ ಆಕೆಯನ್ನು ಭೇಟಿಯಾಗಲು ಯತ್ನಿಸುತ್ತಿದ್ದ ಎನ್ನಲಾಗಿದೆ.

ಮನೆಗೆ ಹೋದಾಗ ನಡೆದಿದ್ದೇನು?

ಘಟನೆಯ ದಿನದಂದು ಖಾಸಿಂ ಯಾರಿಗೂ ತಿಳಿಸದೆ ನೇರವಾಗಿ ಬೆಂಗಳೂರಿನಲ್ಲಿರುವ ತನ್ನ ಮಾಜಿ ಪ್ರೇಯಸಿಯ ಮನೆಗೆ ಭೇಟಿ ನೀಡಿದ್ದ. ಈ ವೇಳೆ ಮನೆಯಲ್ಲಿದ್ದ ಆಕೆಯ ಪತಿ ಮತ್ತು ಕುಟುಂಬದ ಇತರ ಸದಸ್ಯರು ಆತನನ್ನು ನೋಡಿ ತೀವ್ರ ಆಕ್ರೋಶಗೊಂಡಿದ್ದರು. ಹಳೇ ಪ್ರೇಮಿಯ ಆಗಮನದಿಂದ ದಂಪತಿ ನಡುವೆ ಗಲಾಟೆ ಶುರುವಾಗಿದ್ದು, ಅದು ವಿಕೋಪಕ್ಕೆ ತಿರುಗಿತ್ತು.

ಯುವತಿಯ ಪತಿ ಮತ್ತು ಆಕೆಯ ಸಂಬಂಧಿಕರು ಕೋಪದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಸುಂದರಿಯ ಬಲೆಗೆ ಬಿದ್ದು ಕೋಟ್ಯಾಂತರ ರೂ. ಕಳೆದುಕೊಂಡ ಟೆಕ್ಕಿ!

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯ ಎಸಗಿದವರನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಧ್ಯಾಹ್ನ 3 ಗಂಟೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಘೋಷಿಸಿದ ಸಿದ್ದರಾಮಯ್ಯ!

ಬೆಂಗಳೂರು, ಮೇ 28: ರಾಜ್ಯ ರಾಜಕಾರಣದಲ್ಲಿ ದಶಕದ ದೊಡ್ಡ ಹೈಡ್ರಾಮಾ ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇಂದು ನಡೆದ ಸಚಿವರ ಮಹತ್ವದ ‘ಬ್ರೇಕ್​ಫಾಸ್ಟ್​ ಮೀಟಿಂಗ್’ನಲ್ಲಿ ಸಿದ್ದರಾಮಯ್ಯ ಅವರು ತಾವಾಗಿಯೇ ಪದತ್ಯಾಗ ಮಾಡಲಿರುವ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ರಾಜಭವನಕ್ಕೆ ತೆರಳಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ. ಒಂದು ವೇಳೆ ರಾಜ್ಯಪಾಲರು ಲಭ್ಯವಿಲ್ಲದಿದ್ದರೆ, ಅವರ ಕಾರ್ಯದರ್ಶಿಗೆ ಪತ್ರ ಹಸ್ತಾಂತರಿಸಲು ನಿರ್ಧರಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಅತ್ಯಂತ ಸೌಹಾರ್ದಯುತವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಸಭೆಯಲ್ಲಿ ಸಿಎಂ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪರಸ್ಪರ ಆಲಿಂಗಿಸಿಕೊಂಡಿದ್ದಾರೆ.

ಮುಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ನಾಯಕತ್ವದ ಅಧ್ಯಾಯ ಆರಂಭವಾಗುವುದು ಬಹುತೇಕ ಖಚಿತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಚಿತ್ರ ಕಾರಣ..! ಅನುಭವಿ ಗೂಗಲ್ ಉದ್ಯೋಗಿಯ ಅರ್ಜಿ ತಿರಸ್ಕಾರ; ಕಾಲೇಜು ಗ್ರೇಡ್ ಕಡಿಮೆ ಬಂದಿದ್ದಕ್ಕೆ ರಿಜೆಕ್ಟ್

ಬೆಂಗಳೂರು, ಮೇ 28: ಈಗಷ್ಟೇ ಕಾಲೇಜು ಮುಗಿಸಿ ಮೊದಲ ಕೆಲಸಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಶೈಕ್ಷಣಿಕ ಸಾಧನೆ ಮತ್ತು ಗ್ರೇಡ್​ಗಳನ್ನು ಪರಿಶೀಲಿಸುವುದುಂಟು. ಆದರೆ, ಅನುಭವಿ ವ್ಯಕ್ತಿ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಆತನ ಕಾಲೇಜು ಪರೀಕ್ಷೆಗಳ ಅಂಕಗಳಿಗೆ ಸಾಮಾನ್ಯವಾಗಿ ಯಾವ ಕಂಪನಿಗಳೂ ಆದ್ಯತೆ ಕೊಡುವುದಿಲ್ಲ. ಗೂಗಲ್​ನ 8 ವರ್ಷದ ಅನುಭವಿ ಉದ್ಯೋಗಿಯೊಬ್ಬರು ತಮಗಾದ ಅನುಭವವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವರ್ಷಕ್ಕೆ 80 ಲಕ್ಷ ರೂಗೂ ಅಧಿಕ ಸಂಬಳ ಪಡೆಯುವ ಈ ಗೂಗಲ್ ಟೆಕ್ಕಿಯ (Google Employee) ಅರ್ಜಿಯನ್ನು ಭಾರತೀಯ ಸ್ಟಾರ್ಟಪ್ ತಿರಸ್ಕರಿಸಿತಂತೆ. ಈ ಅಪ್ಲಿಕೇಶನ್ ರಿಜೆಕ್ಟ್ ಮಾಡಲು ಸ್ಟಾರ್ಟಪ್ ನೀಡಿದ ಕಾರಣವನ್ನು ಈ ವ್ಯಕ್ತಿ ಬಹಿರಂಗಪಡಿಸಿದ್ದಾರೆ. ಈ ಕಾರಣ ಕೇಳಿ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಗೂಗಲ್ ಟೆಕ್ಕಿ (ಹೆಸರು ಹೇಳಲು ಇಚ್ಛಿಸಿಲ್ಲ) ಉದ್ಯೋಗ ಬದಲಾವಣೆಯ ಪ್ರಯತ್ನದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಉದಯೋನ್ಮುಖ ಸ್ಟಾರ್ಟ್‌ಅಪ್ ಕಂಪನಿಯೊಂದಕ್ಕೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಕಂಪನಿಯು ಅವರಿಗೆ ವಾಟ್ಸಾಪ್ (WhatsApp) ಮೂಲಕ ಸಂದೇಶ ಕಳುಹಿಸಿ, ಅವರ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ತಿಳಿಸಿದೆ. ಅದಕ್ಕೆ ಅವರು ನೀಡಿದ ಕಾರಣ: “ಅವರ ಕಾಲೇಜು ದಿನಗಳ CGPA ಅಂಕ 7 ಕ್ಕಿಂತ ಕಡಿಮೆ ಇತ್ತು!”. ಸಿಜಿಪಿಎ ಎಂಬುದು ವಿದ್ಯಾರ್ಥಿಯ ಎಲ್ಲಾ ಪರೀಕ್ಷೆಗಳನ್ನು ಸೇರಿಸಿ ನೀಡಲಾಗುವ ಗ್ರೇಡಿಂಗ್. ಸಾಮಾನ್ಯವಾಗಿ 10ಕ್ಕೆ ನಿರ್ದಿಷ್ಟ ಅಂಕಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಐಟಿ ಉದ್ಯಮದಲ್ಲಿ ಬರೋಬ್ಬರಿ 8 ವರ್ಷಗಳ ಸುದೀರ್ಘ ಅನುಭವವಿದೆ. ತಮಾಷೆಯೆಂದರೆ, ಸದರಿ ಎಂಜಿನಿಯರ್ ತಮ್ಮ ಬಯೋಡೇಟಾ (Resume) ದಲ್ಲಿ ಕಾಲೇಜು ಅಂಕಗಳನ್ನೇ ನಮೂದಿಸಿರಲಿಲ್ಲ. ಆದರೂ ಕಂಪನಿಯು ಹಳೆಯ ಅಂಕಗಳನ್ನು ಹುಡುಕಿ ತೆಗೆದು, ಅದರ ಆಧಾರದ ಮೇಲೆ ರಿಜೆಕ್ಟ್ ಮಾಡಿದೆ.

ಕಂಪನಿಯು ಕಳುಹಿಸಿದ ಸಂದೇಶದಲ್ಲಿ CGPA ಕೊರತೆಯನ್ನು ಬಿಟ್ಟರೆ ಅವರ ಕೌಶಲ್ಯ ಅಥವಾ ಅನುಭವದ ಬಗ್ಗೆ ಬೇರೆ ಯಾವುದೇ ಆಕ್ಷೇಪಣೆಗಳನ್ನು ಉಲ್ಲೇಖಿಸಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್

ಈ ವಿಲಕ್ಷಣ ಅನುಭವವನ್ನು ಆ ಉದ್ಯೋಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ತಕ್ಷಣವೇ ಇದು ವೈರಲ್ ಆಗಿದೆ. ಸ್ಟಾರ್ಟ್‌ಅಪ್‌ನ ಈ ಕ್ರಮಕ್ಕೆ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್​ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು

ಎಂಟು ವರ್ಷಗಳ ಕಾಲ ಮಾರುಕಟ್ಟೆಯಲ್ಲಿ ನೈಜ ಕೆಲಸದ ಅನುಭವ ಹೊಂದಿರುವ ಉದ್ಯೋಗಿಯ ಸಾಮರ್ಥ್ಯವನ್ನು ಅಳೆಯಲು ಹಳೆಯ ಪರೀಕ್ಷಾ ಅಂಕಗಳನ್ನು ಮಾನದಂಡವಾಗಿ ಬಳಸುವುದು ತರ್ಕಹೀನ ಎಂದು ಕೆಲವರು ಆಕ್ಷೇಪಿಸಿದ್ದಾರೆ.

“ಇಂತಹ ಸಣ್ಣ ಮನಸ್ಥಿತಿಯ ಕಂಪನಿಗೆ ಸೇರದೆ ಇರುವುದೇ ಒಳ್ಳೆಯದಾಯಿತು, ನೀವು ದೊಡ್ಡ ಅಪಾಯದಿಂದ ಪಾರಾಗಿದ್ದೀರಿ” (Dodged a bullet) ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಚಿನ್ನದ ಬೆಲೆ ಒಂದು ಗ್ರಾಮ್​ಗೆ 205 ರೂ ಇಳಿಕೆ; ಇಲ್ಲಿದೆ ದರಪಟ್ಟಿ

ನವದೆಹಲಿ, ಮೇ 28: ಚಿನ್ನದ ಬೆಲೆ ಸತತವಾಗಿ ಇಳಿಮುಖವಾಗುತ್ತಿದೆ. ಬೆಳ್ಳಿ ಬೆಲೆಯೂ ಕಳೆದ ಏಳೆಂಟು ದಿನದಲ್ಲಿ ಮೊದಲ ಬಾರಿ ಇಳಿದಿದೆ. ಬಂಗಾರದ ದರ (Gold Rate) ಒಂದು ಗ್ರಾಮ್​ಗೆ 200 ರೂಗಿಂತ ಹೆಚ್ಚಿನ ಮೊತ್ತದಷ್ಟು ಇಳಿಕೆಯಾಗಿದೆ. ಹಿಂದಿನ ಎರಡು ದಿನದಲ್ಲಿ 100 ರೂ ಬೆಲೆ ತಗ್ಗಿತ್ತು. ಭಾರತದಲ್ಲಿಯಷ್ಟೇ ಅಲ್ಲ ಬಹುತೇಕ ದೇಶಗಳ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 10 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,060 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 28ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,606 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,305 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,704 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,606 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,305 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,305 ರೂ
  • ಚೆನ್ನೈ: 14,500 ರೂ
  • ಮುಂಬೈ: 14,305 ರೂ
  • ದೆಹಲಿ: 14,320 ರೂ
  • ಕೋಲ್ಕತಾ: 14,305 ರೂ
  • ಕೇರಳ: 14,305 ರೂ
  • ಅಹ್ಮದಾಬಾದ್: 14,310 ರೂ
  • ಜೈಪುರ್: 14,320 ರೂ
  • ಲಕ್ನೋ: 14,320 ರೂ
  • ಭುವನೇಶ್ವರ್: 14,305 ರೂ

ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 579 ರಿಂಗಿಟ್ (14,004 ರುಪಾಯಿ)
  • ದುಬೈ: 537 ಡಿರಾಮ್ (14,075 ರುಪಾಯಿ)
  • ಅಮೆರಿಕ: 146 ಡಾಲರ್ (14,054 ರುಪಾಯಿ)
  • ಸಿಂಗಾಪುರ: 193.50 ಸಿಂಗಾಪುರ್ ಡಾಲರ್ (14,546 ರುಪಾಯಿ)
  • ಕತಾರ್: 535.50 ಕತಾರಿ ರಿಯಾಲ್ (14,143 ರೂ)
  • ಸೌದಿ ಅರೇಬಿಯಾ: 560 ಸೌದಿ ರಿಯಾಲ್ (14,365 ರುಪಾಯಿ)
  • ಓಮನ್: 56.45 ಒಮಾನಿ ರಿಯಾಲ್ (14,113 ರುಪಾಯಿ)
  • ಕುವೇತ್: 44.68 ಕುವೇತಿ ದಿನಾರ್ (14,023 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 275 ರೂ
  • ಚೆನ್ನೈ: 285 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 285 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 285 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version