ವಿಚ್ಛೇದನಕ್ಕೆ ಅರ್ಜಿ: ದಳಪತಿ ವಿಜಯ್ ಪತ್ನಿಗೆ 250 ಕೋಟಿ ರೂ. ಜೀವನಾಂಶ? – Kannada News | Thalapathy Vijay wife Sangeetha divorce case alimony 250 crore rumors

ಕಾಲಿವುಡ್‌ ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ (Vijay wife Sangeetha) ಅವರ ವೈವಾಹಿಕ ಜೀವನದ ಕುರಿತು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ಸುದ್ದಿಗಳು ಇದೀಗ ಹೊಸ ತಿರುವು ಪಡೆದುಕೊಂಡಿವೆ. ಈ ದಂಪತಿ ವಿಚ್ಛೇದನ (Divorce) ಪಡೆಯಲಿದ್ದಾರೆ ಎಂಬ ವದಂತಿಗಳ ನಡುವೆ, ವಿಜಯ್ (Thalapathy Vijay) ಅವರು ಪತ್ನಿಗೆ ಬರೋಬ್ಬರಿ 250 ಕೋಟಿ ರೂಪಾಯಿ ಜೀವನಾಂಶ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ಈ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ದೂರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸುಮಾರು 27 ವರ್ಷಗಳ ಕಾಲ ಜೊತೆಯಾಗಿದ್ದ ದಳಪತಿ ವಿಜಯ್ ಮತ್ತು ಸಂಗೀತಾ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಡಿವೋರ್ಸ್ ಇತ್ಯರ್ಥಕ್ಕಾಗಿ ವಿಜಯ್ ಅವರು ಸಂಗೀತಾ ಮತ್ತು ತಮ್ಮ ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶ ಅವರಿಗೆ ಒಟ್ಟು 250 ಕೋಟಿ ರೂ.ಗಳನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಣದ ಹಂಚಿಕೆಯ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ, ಇಬ್ಬರೂ ಸೌಹಾರ್ದಯುತವಾಗಿ ಪ್ರಕರಣವನ್ನು ಮುಗಿಸಲು ಬಯಸಿದ್ದಾರೆ ಎನ್ನಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಗೀತಾ ಅವರ ಅರ್ಜಿಯ ಪ್ರತಿಗಳ ಪ್ರಕಾರ, ವಿಜಯ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ವಿಜಯ್ ಅವರಿಗೆ ಓರ್ವ ನಟಿಯೊಂದಿಗೆ ಸಂಬಂಧವಿದೆ ಮತ್ತು ಏಪ್ರಿಲ್ 2021ರಲ್ಲಿ ತನಗೆ ಈ ವಿಷಯ ತಿಳಿಯಿತು ಎಂದು ಸಂಗೀತಾ ಆರೋಪಿಸಿದ್ದಾರೆ ಎನ್ನಲಾಗಿದೆ. ನಟಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ಭರವಸೆ ನೀಡಿದ್ದರೂ ವಿಜಯ್ ಅದನ್ನು ಮುಂದುವರಿಸಿದರು. ಇದರಿಂದ ತನಗೆ ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯಾಗಿದೆ ಎಂದು ಅವರು ದೂರಿದ್ದಾರೆ.

ಆ ನಟಿಯು ವಿಜಯ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಮತ್ತು ಫೋಟೋಗಳನ್ನು ಹಂಚಿಕೊಳ್ಳುವುದು ತಮಗೆ ಮತ್ತು ಮಕ್ಕಳಿಗೆ ಮುಜುಗರ ಉಂಟುಮಾಡುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ವಿಜಯ್ ಬಗ್ಗೆ ಇಷ್ಟೆಲ್ಲ ಆರೋಪ ಹೊರಿಸಲಾಗಿದೆಯಾದರೂ ಯಾವುದೂ ಸದ್ಯಕ್ಕೆ ಸಾಬೀತಾಗಿಲ್ಲ.

ಇದನ್ನೂ ಓದಿ: ಮಗನಿಗೂ ಬೇಡವಾದ ದಳಪತಿ ವಿಜಯ್? ಡಿವೋರ್ಸ್ ಸುದ್ದಿ ಬೆನ್ನಲ್ಲೇ ಅನ್​ಫಾಲೋ

ದಳಪತಿ ವಿಜಯ್ ಅವರು 1999ರ ಆಗಸ್ಟ್ 25ರಂದು ಸಂಗೀತಾ ಜೊತೆ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ಪುತ್ರ ಜೇಸನ್ ಸಂಜಯ್ ಅವರು ಸಿನಿಮಾ ನಿರ್ದೇಶನದತ್ತ ಗಮನ ಹರಿಸುತ್ತಿದ್ದಾರೆ. ಪುತ್ರಿ ದಿವ್ಯಾ ಸಾಶ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಟಾಕ್ಸಿಕ್’ ಬಿಡುಗಡೆ ಮುಂದೂಡಿಕೆಗೆ ಕಾರಣವೇನು: ಒತ್ತಡಕ್ಕೇ ಮಣಿದರೇ ಯಶ್? – Kannada News | Distributors pressure is the main reason to postpone Toxic movie release

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಹಠಾತ್ತನೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಉತ್ತರ ಭಾರತದ ಕೆಲವು ಇನ್​​ಸ್ಟಾಗ್ರಾಂ ಸಿನಿಮಾ ವಿಮರ್ಶಕರು, ಕೆಲ ಮಾಧ್ಯಮಗಳು, ‘ಧುರಂಧರ್ 2’ ಸಿನಿಮಾಕ್ಕೆ ಹೆದರಿ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಸಹ ಹೇಳುತ್ತಿದ್ದಾರೆ. ಆದರೆ ಕೆಲ ಮೂಲಗಳ ಪ್ರಕಾರ, ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಬೇಕೆಂಬ ಒತ್ತಡ ಯಶ್ ಹಾಗೂ ಸಿನಿಮಾದ ನಿರ್ಮಾಪಕರ ಮೇಲಿತ್ತು ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡುವಂತೆ ಯಶ್ ಹಾಗೂ ನಿರ್ಮಾಪಕ ವೆಂಕಟ್ ಮೇಲೆ ಒತ್ತಡ ಇತ್ತು ಎನ್ನಲಾಗುತ್ತಿದೆ. ಈ ಒತ್ತಡ ‘ಧುರಂಧರ್ 2’ ಕಡೆಯಿಂದ ಅಲ್ಲ ಬದಲಿಗೆ ‘ಟಾಕ್ಸಿಕ್’ ಸಿನಿಮಾದ ವಿತರಣೆ ಹಕ್ಕು ಪಡೆದಿದ್ದ ವಿತರಕರುಗಳಿಂದ. ಅದರಲ್ಲೂ ವಿಶೇಷವಾಗಿ ‘ಟಾಕ್ಸಿಕ್’ ಸಿನಿಮಾದ ಉತ್ತರ ಭಾರತ ವಿತರಣೆ ಹಕ್ಕು ಪಡೆದವರು ಹಾಗೂ ವಿದೇಶ ವಿತರಣೆ ಹಕ್ಕು ಪಡೆದವರ ಸತತ ಒತ್ತಡದಿಂದಾಗಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯನ್ನು ಒಲ್ಲದ ಮನಸ್ಸಿನಿಂದ ಮುಂದೂಡಲಾಯ್ತು ಎನ್ನಲಾಗುತ್ತಿದೆ.

ಉತ್ತರ ಭಾರತದಲ್ಲಿ ಹಿಂದಿ ಸಿನಿಮಾ ಆದ ‘ಧುರಂಧರ್ 2’ಗೆ ಸಹಜವಾಗಿಯೇ ಹೆಚ್ಚು ಶೋಗಳು ಸಿಗಲಿದ್ದವು. ‘ಧುರಂಧರ್ 2’ ಜೊತೆಗೆ ‘ಟಾಕ್ಸಿಕ್’ ಬಿಡುಗಡೆ ಆಗಿದ್ದರೆ ‘ಟಾಕ್ಸಿಕ್’ಗೆ ಉತ್ತರ ಭಾರತದಲ್ಲಿ 30% ಸ್ಕ್ರೀನ್​​ಗಳು ಮಾತ್ರವೇ ಸಿಗುತ್ತಿದ್ದವಂತೆ. ಇದು ವಿತರಕರಿಗೆ ಭಾರಿ ನಷ್ಟ ಉಂಟು ಮಾಡುತ್ತಿತ್ತು. ಅಲ್ಲದೆ ಸೌದಿ ರಾಷ್ಟ್ರಗಳಲ್ಲಿ ಹಾಗೂ ಇತರೆ ಕೆಲವು ದೇಶಗಳಲ್ಲಿ ಸಿನಿಮಾ ಬಿಡುಗಡೆಯೇ ಅಸಾಧ್ಯವಾಗಿದೆ. ಹಾಗಾಗಿ ವಿದೇಶಿ ಬಿಡುಗಡೆ ಹಕ್ಕು ಪಡೆದವರು ಸಹ ‘ಟಾಕ್ಸಿಕ್’ ಬಿಡುಗಡೆ ಮುಂದೂಡಿಕೆಗೆ ಒತ್ತಡ ಹೇರಿದ್ದರು. ವಿತರಕರ ಒತ್ತಡ ಮತ್ತು ಅವರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ.

ಇದನ್ನೂ ಓದಿ:ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಯಶ್; ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ 

‘ಧುರಂಧರ್ 2’ ಸಿನಿಮಾವನ್ನು ದಕ್ಷಿಣದಲ್ಲಿ ಎದುರಿಸುವುದು ‘ಟಾಕ್ಸಿಕ್’ಗೆ ಕಷ್ಟವೇನೂ ಆಗುತ್ತಿರಲಿಲ್ಲ, ಆದರೆ ಉತ್ತರ ಭಾರತದ ಹಾಗೂ ವಿದೇಶದಲ್ಲಿ ‘ಧುರಂಧರ್ 2’ ಜೊತೆಗೆ ಸ್ಪಷ್ಟ ಸ್ಪರ್ಧೆ ಇತ್ತು. ಈ ಸ್ಪರ್ಧೆಯಿಂದ ಎರಡೂ ಸಿನಿಮಾಗಳಿಗೂ ಸಮಾನ ನಷ್ಟ ಆಗುತ್ತಿತ್ತು. ಆದರೆ ‘ಧುರಂಧರ್’ ಸಿನಿಮಾ ಈಗಾಗಲೇ 1300 ಕೋಟಿಗೂ ಹೆಚ್ಚು ಬಾಚಿಕೊಂಡಿದ್ದು, ‘ಧುರಂಧರ್ 2’ ಫ್ಲಾಪ್ ಆದರೂ ಅವರಿಗೆ ನಷ್ಟವಿಲ್ಲ. ಆದರೆ ‘ಟಾಕ್ಸಿಕ್’ಗೆ ಹಾಗಾಗದು. ಹಾಗಾಗಿ ಅನವಶ್ಯಕ ಸ್ಪರ್ಧೆಗೆ ಹೋಗಿ ಲಾಭ ಕಡಿಮೆ ಮಾಡಿಕೊಳ್ಳುವುದಕ್ಕಿಂತಲೂ ತುಸು ಪಕ್ಕಕ್ಕೆ ಸರಿದು ಆ ಬಳಿಕ ಒಳ್ಳೆಯ ಲಾಭ ಮಾಡಿಕೊಳ್ಳುವುದು ಜಾಣತನ ಎಂದು ‘ಟಾಕ್ಸಿಕ್’ ತಂಡ ನಿರ್ಧರಿಸಿದಂತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:46 pm, Thu, 5 March 26

Source link

ಜನ ಪೋಸ್ಟ್ ಮ್ಯಾನ್​​ಗೆ​​ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್ – Kannada News | Public Angry Against Post Office for Bundle of Aadhaar Cards Found In Netravati River at Mnagaluru

ಮಂಗಳೂರು, ಮಾರ್ಚ್ 05): ಇಲ್ಲಿನ ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಇದರಿಂದ ಸಾರ್ವಜನಿಕರು ಆಘಾತಕ್ಕೊಳಗಾಗಿದ್ದು, ಅಂಚೆ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಆಧಾರ್ ಕಾರ್ಡ್ ಗಳನ್ನು ಸಂಬಂಧಪಟ್ಟವರಿಗೆ ನೀಡುತ್ತಿಲ್ಲ. ಆಧಾರ್ ಕಾರ್ಡ್​​ ಅಂದು ಬರುತ್ತೆ ಇಂದು ಬರುತ್ತೆ ಎಂದು ಕಾಯುತ್ತಿರುತ್ತೇವೆ. ಆದ್ರೆ, ಇದೀಗ ಆಧಾರ್ ಕಾರ್ಡ್​​ಗಳು ನದಿಯಲ್ಲಿ ಹರಿದುಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಇದನ್ನೂ ಓದಿ: ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್​​ಗಳು ಪತ್ತೆ: ಜನರ ಕೈ ಸೇರಬೇಕಿದ್ದ ಇವು ನೀರು ಪಾಲಾಗಿದ್ದೇಗೆ?

Source link

IND vs ENG: 14 ರನ್​ಗೆ ಜೀವದಾನ ನೀಡಿದ ಆಂಗ್ಲ ನಾಯಕ; 89 ರನ್ ಚಚ್ಚಿದ ಸಂಜು ಸ್ಯಾಮ್ಸನ್ – Kannada News | Sanju Samson’s T20 World Cup Semifinal Heroics: 89 Runs & Unique Record

ಸಂಜು ಸ್ಯಾಮ್ಸನ್ (Sanju Samson).. ಭಾರತ ಟಿ20 ವಿಶ್ವಕಪ್ (T20 World Cup) ತಂಡದಲ್ಲಿ ಎರಡನೇ ಆರಂಭಿಕ ಆಟಗಾರನಾಗಿ ಸ್ಥಾನ ಪಡೆದಿದ್ದರು. ಹೀಗಾಗಿ ಸಂಜುಗೆ ಲೀಗ್ ಹಂತದಲ್ಲಿ ಆಡಲು ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅಭಿಷೇಕ್ ಅನಾರೋಗ್ಯದಿಂದ ಲೀಗ್ ಹಂತದಲ್ಲಿ ಏಕೈಕ ಪಂದ್ಯವನ್ನಾಡಿದ್ದ ಸಂಜುಗೆ ಆ ಬಳಿಕ ಆಡಲು ಅವಕಾಶ ಸಿಕ್ಕಿದ್ದು, ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ. ಅದು ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಸಂಜು, ಟೀಂ ಇಂಡಿಯಾದ ಆಪತ್ಬಾಂಧವನಾಗಿಬಿಟ್ಟರು. ಬೃಹತ್ ಗುರಿಯನ್ನು ಬೆನ್ನಟ್ಟುವ ಸಮಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಕೊನೆಯವರೆಗೂ ಅಜೇಯರಾಗಿ ಉಳಿದ ಸಂಜು 97 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದರು. ಇದೀಗ ಸೆಮಿಫೈನಲ್‌ ಪಂದ್ಯದಲ್ಲೂ ಸ್ಯಾಮ್ಸನ್ ಅವರಿಂದ ಮತ್ತೊಂದು ಸ್ಮರಣೀಯ ಇನ್ನಿಂಗ್ಸ್ ಮೂಡಿಬಂದಿದೆ.

89 ರನ್ ಬಾರಿಸಿದ ಸಂಜು ಸ್ಯಾಮ್ಸನ್

ವಾಸ್ತವವಾಗಿ ರಿಂಕು ಸಿಂಗ್ ಅವರ ತಂದೆಯ ಸಾವಿನಿಂದ ತಂಡದಲ್ಲಿ ಆಡುವ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಗೇಮ್ ಚೇಂಜರ್ ಆಗಿ ಬದಲಾಗಿದ್ದಾರೆ. ವಿಂಡೀಸ್ ವಿರುದ್ಧ ತಮ್ಮ ಬ್ಯಾಟಿಂಗ್‌ ಅನ್ನು ಎಲ್ಲಿಗೆ ನಿಲ್ಲಿಸಿದ್ದರೋ, ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಅದನ್ನು ಮುಂದುವರೆಸಿದರು. ಮೊದಲ ಓವರ್​ನಿಂದಲೂ ತಮ್ಮ ಬ್ಯಾಟಿಂಗ್‌ ಕೌಶಲ್ಯ ಪ್ರದರ್ಶಿಸಿದ ಸಂಜು ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ಮಾತ್ರವಲ್ಲದೆ ಕೇವಲ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 89 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇದರಲ್ಲಿ ಕೇವಲ ಬೌಂಡರಿ, ಸಿಕ್ಸರ್​ಗಳಿಂದಲೇ ಸಂಜು 74 ರನ್ ಚಚ್ಚಿದರು.

ಸುಲಭ ಕ್ಯಾಚ್ ಬಿಟ್ಟ ಬ್ರೂಕ್

ಸಂಜು ಅವರ ಈ ಸ್ಫೋಟಕ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರ ಕೊಡುಗೆಯೂ ಅಪಾರವಾಗಿದೆ. ವಾಸ್ತವವಾಗಿ ಸಂಜು 14 ರನ್ ಬಾರಿಸಿದ್ದಾಗ ಹ್ಯಾರಿ ಬ್ರೂಕ್​ಗೆ ಸರಳ ಕ್ಯಾಚ್ ನೀಡಿದ್ದರು. ಆದರೆ ಬ್ರೂಕ್ ಆ ಕ್ಯಾಚ್ ಅನ್ನು ಕೈಚೆಲ್ಲಿದರು, ಈ ಜೀವದಾನ ಸಿಕ್ಕ ಬಳಿಕ ಇಂಗ್ಲೆಂಡ್‌ಗೆ ಯಾವುದೇ ಅವಕಾಶಗಳನ್ನು ನೀಡದ ಸಂಜು ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಈ ವಿಶ್ವಕಪ್‌ನಲ್ಲಿ ಅವರ ಸತತ ಎರಡನೇ ಅರ್ಧಶತಕವಾಗಿದೆ. ಇದಲ್ಲದೆ, ಇದು ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಭಾರತದ ಎರಡನೇ ವೇಗದ ಅರ್ಧಶತಕವಾಗಿದೆ. 2007 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಯುವರಾಜ್ ಸಿಂಗ್ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ICC T20 Rankings: 25 ಸ್ಥಾನ ಮೇಲೇರಿದ ಸಂಜು ಸ್ಯಾಮ್ಸನ್! ಜಾರಿದ ಸೂರ್ಯ

ದಾಖಲೆ ಬರೆದ ಸಂಜು ಸ್ಯಾಮ್ಸನ್

ಆದರೆ ಅರ್ಧಶತಕ ಗಳಿಸುವ ಮೊದಲೇ, ಸ್ಯಾಮ್ಸನ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಬೇರೆ ಯಾವ ಭಾರತೀಯ ಬ್ಯಾಟ್ಸ್‌ಮನ್‌ ಕೂಡ ಮಾಡದ ಸಾಧನೆ ಮಾಡಿದರು. ಪಂದ್ಯದ ಮೊದಲ ಓವರ್‌ನಲ್ಲಿ ಸ್ಯಾಮ್ಸನ್ ಸಿಕ್ಸರ್ ಬಾರಿಸುವ ಮೂಲಕ ವಿಶ್ವಕಪ್‌ನಲ್ಲಿ ಮೂರನೇ ಬಾರಿಗೆ ಈ ಸಾಧನೆ ಮಾಡಿದರು. ಇದಕ್ಕೂ ಮೊದಲು ಅವರು ನಮೀಬಿಯಾ ವಿರುದ್ಧದ ಪಂದ್ಯದ ಮೊದಲ ಓವರ್‌ನಲ್ಲಿ ರುಬೆನ್ ಟ್ರಂಪೆಲ್‌ಮನ್ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿದ್ದರು. ಆ ನಂತರ ಸೂಪರ್ 8 ಸುತ್ತಿನಲ್ಲಿ ಜಿಂಬಾಬ್ವೆ ವಿರುದ್ಧದ ಮೊದಲ ಓವರ್‌ನಲ್ಲಿ ರಿಚರ್ಡ್ ನ್ಗಾರವಾ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿದ್ದರು. ಇದೀಗ ಸೆಮಿಫೈನಲ್‌ನಲ್ಲಿ ಜೋಫ್ರಾ ಆರ್ಚರ್ ವಿರುದ್ಧ ಸಿಕ್ಸರ್ ಬಾರಿಸಿದರು. ಈ ಮೂಲಕ ಮೂರು ಟಿ20 ವಿಶ್ವಕಪ್ ಪಂದ್ಯಗಳ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:40 pm, Thu, 5 March 26

Source link

Karnataka Budget 2026: ಸಿದ್ದರಾಮಯ್ಯ ದಾಖಲೆ ಬಜೆಟ್ ಎಷ್ಟು ಗಂಟೆಗೆ? ಲೈವ್ ನೋಡುವುದ್ಹೇಗೆ? – Kannada News | Karnataka Budget 2026: Siddaramaiah 17th Budget Date, Time, When and Where to Watch Live? here Is details

ಬೆಂಗಳೂರು, (ಮಾರ್ಚ್ 05) : 2026-27ನೇ ಸಾಲಿನ ರಾಜ್ಯ ಬಜೆಟ್ (Karnataka Budget 2026) ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮ್ಯನವರು (Siddaramaiah) ಮಾರ್ಚ್ 6ರಂದು ಬೆಳಗ್ಗೆ 10.15ಕ್ಕೆ  ಬಜೆಟ್ ಮಂಡಿಸಲಿದ್ದು, ಈ ಬಾರಿಯ ಆಯವ್ಯಯದ ಮೇಲೆ ರಾಜ್ಯದ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೇವಲ ಗ್ಯಾರಂಟಿ ಯೋಜನೆಗಳಿಗಷ್ಟೇ ಸೀಮಿತವಾಗದೆ, ಶಿಕ್ಷಣ, ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ಆರೋಗ್ಯ ಸೇರಿದಂತೆ ಪ್ರಮುಖ ವಲಯಗಳಿಗೆ ಬಂಪರ್ ಕೊಡುಗೆಗಳು ಸಿಗುವ ವಿಶ್ವಾಸವಿದೆ.

ಹಣಕಾಸು ಇಲಾಖೆ ಸಿದ್ದಪಡಿಸಿದ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳ ಜತೆಗೆ ಜನಪರ ಯೋಜನೆಗಳಿಗೆ ಹೆಚ್ಚಿನ ಒತ್ತು ಹಾಗೂ ಧೀರ್ಘಕಾಲದ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡುತ್ತಾರಾ ಇಲ್ಲವಾ ಎಂಬ ಕುತೂಹಲ ಮನೆ ಮಾಡಿದೆ. ರಾಜ್ಯದ ಒಟ್ಟಾರೆ ಬಜೆಟ್‌ ಗಾತ್ರ 4.50 ಲಕ್ಷ ಕೋಟಿ ರೂಪಾಯಿ ಆಸುಪಾಸಿಗೆ ತಲುಪಲಿದೆ. ಹಾಗೆಯೇ ಸಾಲದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Budget 2026: ದಾಖಲೆಯ 17ನೇ ಬಜೆಟ್​ಗೆ ಸಿದ್ದರಾಮಯ್ಯ ಸಿದ್ಧ, ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ

ಬಜೆಟ್ ಎಷ್ಟು ಗಂಟೆಗೆ? ಲೈವ್ ಪ್ರಸಾರ ಎಲ್ಲಿ ವೀಕ್ಷಿಸಬಹುದು?

ಗ್ಯಾರಂಟಿ ನಿಭಾಯಿಸಬೇಕು, ಅನುದಾನ ಕೊಡಬೇಕು, ಅಭಿವೃದ್ಧಿಯನ್ನೂ ಮಾಡಬೇಕು, ಸೊರಗಿರುವ ಇಲಾಖೆಗಳಿಗೆ ಬೂಸ್ಟ್ ನೀಡಬೇಕು, ರೈತರ ಸಮಸ್ಯೆಗೆ ಪರಿಹಾರ ಘೋಷಣೆ ಮಾಡಬೇಕು, ಮಹಿಳೆಯರಿಗೆ ಬಂಪರ್ ಕೊಡುಗೆ ಕೊಡಬೇಕು, ಶಿಕ್ಷಣಕ್ಕೆ ಒತ್ತು ನೀಡಬೇಕು, ಆರೋಗ್ಯಕ್ಕೂ ಟ್ರೀಟ್‌ಮೆಂಟ್ ಕೊಡಬೇಕು. ಹೀಗೆ ಸಾಲು ಸಾಲು ಸವಾಲುಗಳನ್ನ ಹೆಗಲ ಮೇಲೆ ಹೊತ್ತಿರೋ ಸಿಎಂ ಸಿದ್ದರಾಮಯ್ಯನವರು ತಮ್ಮ ದಾಖಲೆಯ 17ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ದಾಖಲೆ 17ನೇ ಬಜೆಟ್ ಅನ್ನು ಸಿದ್ದರಾಮಯ್ಯನವರು ಮಾರ್ಚ್ 06ರಂದು ಬೆಳಗ್ಗೆ 10.15ಕ್ಕೆ ಬಜೆಟ್ ಓದಲಾರಂಭಿಸಲಿದ್ದಾರೆ.

ಬಜೆಟ್ 2026 ರ ನೇರ ಪ್ರಸಾರವನ್ನು ನೀವು ಟಿವಿಯಲ್ಲಿ ನಿಮ್ಮ ನೆಚ್ಚಿನ ಟಿವಿ9 ಕನ್ನಡದಲ್ಲಿ ವೀಕ್ಷಿಸಬಹುದು. ಇನ್ನು ನೀವು ಇದ್ದಲ್ಲೇ ಮೊಬೈಲ್​​ ನಲ್ಲಿ ನೋಡುವುದಾದರೆ ಟಿವಿ9 ಯುಟ್ಯೂಬ್​​ನಲ್ಲೂ  ಸಹ ನೋಡಬಹುದು. ಹಾಗೇ ಬಜೆಟ್​​​ನಲ್ಲಿ ಏನೇನು ಘೋಷಣೆಯಾಗುತ್ತೆ ಎನ್ನುವುದನ್ನು ತಿಳಿಯಲು ಟಿವಿ9 ಕನ್ನಡ ವೆಬ್​​ಸೈಟ್​​​​​ನ ಲೈವ್ ಪೇಜ್​​​​ ನೋಡಿ. ಹೀಗೆ ದೃಶ್ಯ ಜೊತೆ ಟೆಕ್ಸ್ಟ್​​​ ಫಾರ್ಮೆಂಟ್​​ನಲ್ಲೂ ಟಿವಿ9 ನಿಮಗೆ ಕ್ಷಣ ಕ್ಷಣದ ಮಾಹಿತಿ ನೀಡುತ್ತೆ, ಹೀಗಾಗಿ ನಿಖರ ಮಾಹಿತಿಗಾಗಿ ಟಿವಿ9 ಕನ್ನಡ  ಫೋಲೋ ಮಾಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ: ದೂರು ನೀಡಿದ್ರೆ ಪೊಲೀಸರಿಗೆ ಮಹಿಳಾ ಪರ ಕಾನೂನಿನ ಭಯ – Kannada News | India’s Legal Bias: Call for Gender Neutral Domestic Violence Laws to Protect Men

ಗೊಂಡಾ, ಮಾ.3: ಪ್ರೀತಿಯ ಹೆಸರಿನಲ್ಲಿ ಆರಂಭವಾದ ಜೀವನವು ಇಂದು ರಕ್ತಪಾತ ಮತ್ತು ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಮಾಡಿದೆ. ಲೊಕೊ ಪೈಲಟ್ ಬ್ರಜೇಶ್ ಮೌರ್ಯ ಮತ್ತು ಅವರ ವೃದ್ಧ ತಾಯಿಯ ಮೇಲೆ ಪತ್ನಿ ಅನಿತಾ ಎಸಗಿರುವ ದೌರ್ಜನ್ಯವು ಭಾರತದ ಪ್ರಸ್ತುತ “ಲಿಂಗ ಆಧಾರಿತ” ಕಾನೂನುಗಳ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಬ್ರಜೇಶ್ ಮತ್ತು ಅನಿತಾ 2022 ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿ, 2025 ರ ವ್ಯಾಲೆಂಟೈನ್ಸ್ ದಿನದಂದು ವಿವಾಹವಾಗಿದ್ದರು. ವಿವಾಹದ ಕೆಲವೇ ದಿನಗಳಲ್ಲಿ ಪತಿ ಮತ್ತು ಅತ್ತೆ-ಮಾವನ ಮೇಲೆ ಅನಿತಾ ಕಿರುಕುಳ ನೀಡಲು ಆರಂಭಿಸಿದ್ದಾರೆ. ವರದಿಗಳ ಪ್ರಕಾರ, ಅತ್ತೆ-ಮಾವನನ್ನು ಮನೆಯಿಂದ ಹೊರಹಾಕಲು ಆಕೆ ಹಠ ಹಿಡಿದಿದ್ದಳು ಎಂದು ಹೇಳಿದೆ. ಇತ್ತೀಚೆಗೆ ನಡೆದ ಘಟನೆಯಲ್ಲಿ ಅನಿತಾ ತನ್ನ ಪತಿ ಬ್ರಜೇಶ್ ಮತ್ತು ಅತ್ತೆ ಸರಿತಾ ದೇವಿ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬ್ರಜೇಶ್ ಪೊಲೀಸರ ಮೊರೆ ಹೋದರೂ, ಪುರುಷ ಎನ್ನುವ ಕಾರಣಕ್ಕೆ ಅಥವಾ ಮಹಿಳಾ ಪರ ಕಾನೂನುಗಳ ಭಯದಿಂದ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಭಾರತದಲ್ಲಿ ಮಹಿಳೆಯರ ರಕ್ಷಣೆಗಾಗಿ IPC 498A ಅಥವಾ ಗೃಹಹಿಂಸೆ ತಡೆ ಕಾಯ್ದೆ (DV Act) ಅಡಿಯಲ್ಲಿ ಪ್ರಬಲ ಕಾನೂನುಗಳಿವೆ. ಆದರೆ, ಪತಿಯ ಮೇಲೆ ಪತ್ನಿ ದೌರ್ಜನ್ಯ ನಡೆಸಿದರೆ ಅವನನ್ನು ರಕ್ಷಿಸಲು ನಿರ್ದಿಷ್ಟವಾದ “ಲಿಂಗ ತಟಸ್ಥ” (Gender Neutral) ಕಾನೂನುಗಳ ಕೊರತೆ ಇದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್ ಆಟಗಾರನ ನೀಚ ಕೃತ್ಯ; ಹೋಟೆಲ್​ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ! ದಂಡ – Kannada News | Pak Cricketer Fined for Misconduct with Hotel Staff in Sri Lanka: T20 WC Shame

2026 ರ ಟಿ20 ವಿಶ್ವಕಪ್​ನಲ್ಲಿ (T20 World Cup) ಹೀನಾಯ ಪ್ರದರ್ಶನ ನೀಡಿ ತನ್ನ ಅಭಿಮಾನಿಗಳು ಹಾಗೂ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟಿಗರ ಬಗ್ಗೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಮೈದಾನದಲ್ಲಿ ತಮ್ಮ ಪೌರುಷ ತೋರಿಸುವಲ್ಲಿ ವಿಫಲನಾಗಿದ್ದ ಪಾಕ್ ಕ್ರಿಕೆಟಿಗ ತಾವು ತಂಗಿದ್ದ ಹೋಟೆಲ್​ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಹೋಟೆಲ್​ನ ಆಡಳಿತ ಮಂಡಳಿಯಿಂದ ದಂಡನೆಗೆ ಒಳಗಾಗಿದ್ದಾನೆ. ಇದರ ಜೊತೆಗೆ ಸಂತ್ರಸ್ತ ಮಹಿಳೆ ಹಾಗೂ ಹೋಟೆಲ್ ಆಡಳಿತ ಮಂಡಳಿಯ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ್ದಾನೆ ಎಂದು ವರದಿಯಾಗಿದೆ.

ನಿಮಗೆಲ್ಲ ತಿಳಿದಿರುವಂತೆ ಭಾರತದೊಂದಿಗೆ ಸಂಬಂಧ ಹಳಸಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನೇಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಕ್ರಿಕೆಟ್ ಆಡಲು ಬಂದಿದ್ದ ಪಾಕ್ ಕ್ರಿಕೆಟಿಗರು ಬಂದಿರುವ ಕೆಲಸವನ್ನು ಮಾಡದೆ, ತಾವು ತಂಗಿದ್ದ ಹೋಟೆಲ್‌ನಲ್ಲಿ ಮಾಡಬಾರದ ಕೆಲಸ ಮಾಡಿದ್ದು, ವಿಶ್ವ ಕ್ರಿಕೆಟ್​ ನಾಚಿಕೆ ಪಡುವಂತಹ ಕೆಲಸ ಮಾಡಿದ್ದಾರೆ. ಇದರ ಪರಿಣಾಮವಾಗಿ ತಪ್ಪು ಮಾಡಿದ ಆ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೀದ್ ಚೀಮಾರನ್ನು ಒತ್ತಾಯಿಸಲಾಗಿದೆ.

ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ

ಶ್ರೀಲಂಕಾದಲ್ಲಿ ಹೋಟೆಲ್​ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪಾಕಿಸ್ತಾನಿ ಆಟಗಾರನಿಗೆ ದಂಡ ವಿಧಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನ ತಂಡ ತಂಗಿದ್ದ ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಗೋಲ್ಡನ್ ಕ್ರೌನ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಗಳ ಪ್ರಕಾರ, ಪಾಕ್ ಆಟಗಾರನೊಬ್ಬ ಮಹಿಳಾ ಹೌಸ್‌ಕೀಪಿಂಗ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.ಈ ಸಲುವಾಗಿ ಹೋಟೆಲ್ ಅಧಿಕಾರಿಗಳು ತಂಡದ ವ್ಯವಸ್ಥಾಪಕ ನವೀದ್ ಚೀಮಾ ಅವರಿಗೆ ದೂರು ನೀಡಿದ್ದು, ದೂರಿನನ್ವಯ ವ್ಯವಸ್ಥಾಪಕರು ಆಟಗಾರನಿಗೆ ದಂಡ ವಿಧಿಸಿ ಹೋಟೆಲ್ ಆಡಳಿತ ಮಂಡಳಿ ಮುಂದೆ ಆ ಕ್ರಿಕೆಟಿಗನಿಂದ ಕ್ಷಮೆಯಾಚಿಸಿದ್ದಾರೆ.

ಆಟಗಾರನ ಹೆಸರು ಬಹಿರಂಗವಾಗಿಲ್ಲ

ಇದರ ಜೊತೆಗೆ ಹೆಚ್ಚಿನ ವಿಚಾರಣೆಗಾಗಿ ಆ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ನಿರೀಕ್ಷೆಯಿದೆ. ಆದಾಗ್ಯೂ, ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆ ಆಟಗಾರನ ಹೆಸರು ಇನ್ನೂ ಬಹಿರಂಗವಾಗಿಲ್ಲ. ವರದಿಯ ಪ್ರಕಾರ, ಈ ಘಟನೆ ಪಾಕಿಸ್ತಾನದ ಅಂತಿಮ ಸೂಪರ್ 8 ಪಂದ್ಯಕ್ಕೂ ಸ್ವಲ್ಪ ಮೊದಲು ಅಥವಾ ಆ ಸಮಯದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಇಂತಹ ವಿವಾದಗಳು ಹುಟ್ಟಿಕೊಂಡಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಈ ಹಿಂದೆ ತಂಡದ ಪ್ರವಾಸಗಳಲ್ಲಿ ಆಟಗಾರರು ಅಥವಾ ಸಹಾಯಕ ಸಿಬ್ಬಂದಿಗಳು ಅಶಿಸ್ತಿನ ಆರೋಪ ಹೊತಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಮೇಲೆ ದಾಳಿ ನಿಲ್ಲಬೇಕಾದರೆ ಅಮೆರಿಕನ್ನರನ್ನು ಹೊರಹಾಕಿ; ಗಲ್ಫ್ ದೇಶಗಳಿಗೆ ಇರಾನ್ ಎಚ್ಚರಿಕೆ – Kannada News | Iran Warns Gulf Leaders To Remove All US Bases if they Want To See An End of war

ಟೆಹ್ರಾನ್, ಮಾರ್ಚ್ 5: ಇರಾನ್ (Iran) ಎಲ್ಲ ಗಲ್ಫ್ ದೇಶಗಳಿಗೆ ಆ ದೇಶದಲ್ಲಿರುವ ಅಮೆರಿಕನ್ನರನ್ನು ಹೊರಹಾಕುವಂತೆ ಮತ್ತು ಎಲ್ಲಾ ಯುಎಸ್ ಮಿಲಿಟರಿ ನೆಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ಎಚ್ಚರಿಕೆ ನೀಡಿದೆ. ಅಮೆರಿಕದ ವಾಯುನೆಲೆಗಳಿವೆ ಎಂಬ ಕಾರಣಕ್ಕೆ ಇರಾನ್ ಗಲ್ಫ್ ದೇಶಗಳ ಮೇಲೂ ದಾಳಿ ನಡೆಸಿದೆ.

ಯುಎಇ, ಸೌದಿ ಅರೇಬಿಯಾ, ಕುವೈತ್, ಓಮನ್, ಕತಾರ್, ಬಹ್ರೇನ್, ಟರ್ಕಿ ಮುಂತಾದ ದೇಶಗಳ ನಾಯಕರು ಇರಾನಿನ ಕ್ಷಿಪಣಿಗಳ ದಾಳಿಯನ್ನು ಕೊನೆಗೊಳಿಸಲು ಬಯಸಿದರೆ, ಅವರು ಅಮೆರಿಕನ್ನರನ್ನು ತಮ್ಮ ಪ್ರದೇಶಗಳಿಂದ ಹೊರಹಾಕಬೇಕು ಮತ್ತು ಎಲ್ಲಾ ಯುಎಸ್ ಮಿಲಿಟರಿ ನೆಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ಇರಾನ್ ಸಂಸತ್ತಿನ ಸಂಸದರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಖೋರ್ರಮ್‌ಶಹರ್-4 ಕ್ಷಿಪಣಿ ಉಡಾಯಿಸಿದ ಇರಾನ್

ಫೆಬ್ರವರಿ 28ರಂದು ಅಮೆರಿಕ-ಇಸ್ರೇಲಿ ಸಂಘಟಿತ ದಾಳಿಗಳಿಗೆ ಪ್ರತೀಕಾರವಾಗಿ ಟೆಹ್ರಾನ್ ಟೆಲ್ ಅವಿವ್ ಮತ್ತು ಹಲವಾರು ಗಲ್ಫ್ ದೇಶಗಳಲ್ಲಿನ ಮಿಲಿಟರಿ ಸೌಲಭ್ಯಗಳ ಮೇಲೆ ಕ್ಷಿಪಣಿಗಳನ್ನು ಹಾರಿಸುತ್ತಲೇ ಇದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಆರನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಈ ಎಚ್ಚರಿಕೆ ಬಂದಿದೆ.

ಅಮೆರಿಕ ಮತ್ತು ಇಸ್ರೇಲ್ ಜೊತೆ ನಡೆಯುತ್ತಿರುವ ಯುದ್ಧದಿಂದ ಇರಾನ್‌ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,230 ತಲುಪಿದೆ. ಇಸ್ರೇಲ್ ಇಂದು ಲೆಬನಾನ್‌ನಲ್ಲಿ ಇರಾನಿನ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿ ಗುಂಪಿನ ವಿರುದ್ಧ ಹೊಸ ದಾಳಿಗಳ ಜೊತೆಗೆ ಬಹು ದಾಳಿಗಳನ್ನು ಘೋಷಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಯುದ್ಧ ಭೂಮಿಯಿಂದ ಬಳ್ಳಾರಿ ಮಂದಿ ವಾಪಸ್: ದೃಷ್ಟಿ ತೆಗೆದು, ಪಟಾಕಿ ಸಿಡಿಸಿ ಸ್ವಾಗತಿಸಿದ ಕುಟುಂಬಸ್ಥರು – Kannada News | Ballari Tourists Rescued from Dubai Amid Israel Iran War: Family members welcomed with fireworks

ಆರತಿ ಮಾಡಿ ಸ್ವಾಗತಿಸುತ್ತಿರುವುದು Image Credit source: tv9 kannada

ಬಳ್ಳಾರಿ, ಮಾರ್ಚ್​ 05: ಅವರೆಲ್ಲಾ ದುಬೈಗೆ ಪ್ರವಾಸಕ್ಕೆ ಹೋದವರು. ಪ್ರವಾಸ ಮುಗಿಸಿ ಇನ್ನೇನು ತಾಯ್ನಾಡಿಗೆ ಮರಳಬೇಕಿತ್ತು. ಅಷ್ಟರಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ (Israel-Iran War) ಆರಂಭವಾಗಿ ಬಿಟ್ಟಿದೆ. ಇತ್ತ ವಿಮಾನ ಇಲ್ಲದೆ ಜೀವ ಕೈಯಲ್ಲಿ ಹಿಡಿದು 35ಕ್ಕೂ ಹೆಚ್ಚು ಬಳ್ಳಾರಿಗರು ದುಬೈನಲ್ಲಿ ಪರದಾಡಿದ್ದಾರೆ. ಆದರೆ ಸರ್ಕಾರದ ನೆರವಿನಿಂದ ಇಂದು ಬಳ್ಳಾರಿಗೆ ವಾಪಾಸ್ ಆಗಿದ್ದಾರೆ. ಆ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ ಇತ್ತ ಕುಟುಂಬಸ್ಥರು ಅವರನ್ನ ಸಿಹಿ ತಿನ್ನಿಸಿ, ಹಾರ ಹಾಕಿ, ಪಟಾಕಿ ಸಿಡಿಸಿ ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ.

ಬಳ್ಳಾರಿಯಿಂದ ಸುಮಾರು 35 ಜನರು ಪ್ರವಾಸಕ್ಕೆ ಅಂತಾ ದುಬೈಗೆ ಹೋಗಿದ್ದರು. ದುಬೈ ಸುತ್ತಾಡಿ ಪ್ರವಾಸ ಮುಗಿಸಿ ಇನ್ನೇನು ತವರಿಗೆ ಮರಳಬೇಕಿತ್ತು. ಅಷ್ಟರಲ್ಲೇ ಯುದ್ಧ ಶುರುವಾಗಿ ಬಿಟ್ಟಿದೆ. ಯುದ್ಧದ ಕಾರ್ಮೋಡ ಕವಿಯುತ್ತಿದ್ದಂತೆ ಇತ್ತ ವಿಮಾನ ಹಾರಾಟ ರದ್ದಾಗಿವೆ. ತವರಿಗೆ ಮರಳಬೇಕಿದ್ದ 35 ಜನ ಬಳ್ಳಾರಿಗರು ವಿಮಾನ ಇಲ್ಲದೆ, ಉಳಿದುಕೊಳ್ಳಲು ವಸತಿ ವ್ಯವಸ್ಥೆಯಿಲ್ಲದೆ ಪರದಾಡಿದ್ದಾರೆ.

ಇದನ್ನೂ ಓದಿ: ದುಬೈನಿಂದ ಬೆಂಗಳೂರಿಗೆ ಬಂದಿಳಿದ 5ನೇ ವಿಮಾನ: 3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್

ವಿಡಿಯೋ ಮುಖಾಂತರ ತಾವು ದುಬೈನಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವಿದ್ದ ಸ್ಥಳದ ಅಕ್ಕಪಕ್ಕದಲ್ಲಿಯೇ ಬಾಂಬ್‌ಗಳು ಬಿಳುತ್ತಿವೆ. ನಮ್ಮ‌ಹತ್ತಿರ ಹಣ ಸಹ ಇಲ್ಲ, ನಮ್ಮನ್ನ ವಾಪಾಸ್ ಕರ್ನಾಟಕಕ್ಕೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದರು. ತಕ್ಷಣವೇ ಸ್ಪಂದಿಸಿದ ಶಾಸಕ ಬಿ. ನಾಗೇಂದ್ರ ವಿಡಿಯೋ ಕರೆ ಮೂಲಕ ಅವರಿಗೆ ಧೈರ್ಯ ತುಂಬಿ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಇದೀಗ ಪ್ರವಾಸಿಗರೆಲ್ಲಾ ಬಳ್ಳಾರಿಗೆ ಮರಳಿದ್ದು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಶಾಸಕ ಬಿ. ನಾಗೇಂದ್ರ, ಡ್ರೋನ್ ಪ್ರತಾಪ ಸಹಾಯ

ರಾಜ್ಯ ಸರ್ಕಾರ ಮತ್ತು ಶಾಸಕ ಬಿ. ನಾಗೇಂದ್ರ, ಡ್ರೋನ್ ಪ್ರತಾಪ ಸಹಾಯದಿಂದ ಅಲ್ಲಿ ಊಟ, ವಸತಿ ವ್ಯವಸ್ಥೆ ಆಯಿತು. ನಾವೆಲ್ಲಾ ಸುರಕ್ಷಿತವಾಗಿ ವಾಪಾಸ್ ಆಗಿದ್ದಾರೆ. ದುಬೈನ ಶಾರ್ಜಾದಿಂದ ಕೊಚ್ಚಿನ್​ಗೆ ವಿಮಾನದಲ್ಲಿ ಬಂದು ಅಲ್ಲಿಂದ ಮತ್ತೊಂದು ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದಾರೆ.

ದೃಷ್ಟಿ ತೆಗೆದು ಬರ ಮಾಡಕೊಂಡ ಕುಟುಂಬಸ್ಥರು 

ಶಾಸಕ ಬಿ. ನಾಗೇಂದ್ರ ಕೊಚ್ಚಿನನಿಂದ ಬೆಂಗಳೂರಿಗೆ ಟಿಕೆಟ್ ವ್ಯವಸ್ಥೆ ಮಾಡಿಸಿದ್ದಾರೆ. ಬಳ್ಳಾರಿಗೆ ಬಂದ ಪ್ರವಾಸಿಗರಿಗೆ ಎಡಿಸಿ ಮೊಮ್ಮದ ಜುಬೇದ್ ಹೂ ಗುಚ್ಚ ಕೊಡುವ ಮೂಲಕ ಸ್ವಾಗತಿಸಿದರು. ಕುಟುಂಬಸ್ಥರು ಹೂ ಹಾರ ಹಾಕಿ, ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ, ದೃಷ್ಟಿ ತೆಗೆದು ಬರ ಮಾಡಕೊಂಡಿದ್ದು, ಸಂತಸ ಮನೆ ಮಾಡಿತ್ತು.

ಇದನ್ನೂ ಓದಿ: ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಮತ್ತೊಂದು ವಿಮಾನ: ಇಲ್ಲಿಯವರೆಗೆ ತಾಯ್ನಡಿಗೆ ಬಂದ 1,053 ಪ್ರಯಾಣಿಕರು

ಒಟ್ಟಿನಲ್ಲಿ ದುಬೈ ಸೌಂದರ್ಯ ಕಣ್ಣತುಂಬಿಕೊಳ್ಳಲು ಹೋದವರು ಯುದ್ಧದ ಕಾಮೋರ್ಡದಲ್ಲಿ ಸಿಲುಕಿ ಪರದಾಡುವಂತಾಗಿತ್ತು. ಇದೀಗ ಎಲ್ಲರೂ ಸುರಕ್ಷಿತವಾಗಿ ಸಂತಸದಿಂದ‌ ವಾಪಾಸ್ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಲೆಸ್ನಾನದ ಸಂದರ್ಭದಲ್ಲಿ ಮಾಡುವ ಈ ತಪ್ಪುಗಳು ಸಹ ಕೂದಲು ಉದುರಲು ಮುಖ್ಯ ಕಾರಣ – Kannada News | These mistakes of when washing hair can cause hair loss

ಇಂದಿನ ದಿನಗಳಲ್ಲಿ ಕೂದಲು ಉದುರುವಿಕೆ (Hair Fall) ಸಮಸ್ಯೆ ತೀರಾ ಹೆಚ್ಚಿದೆ. ಅದೆಷ್ಟೇ ಕೂದಲ ಆರೈಕೆ ಮಾಡಿದರೂ ಸಹ ಹೆಚ್ಚಿನವರಿಗೆ ಕೂದಲು ಉದುರುವ ಸಮಸ್ಯೆ ಮಾತ್ರ ಕಡಿಮೆ ಆಗ್ತಿಲ್ಲ. ಇದಕ್ಕೆಲ್ಲಾ ನಾವು ತಿನ್ನುವ ಆಹಾರ, ನಮ್ಮ ಜೀವನಶೈಲಿ ಮುಖ್ಯ ಕಾರಣ. ಈ ಕಾರಣದಿಂದಾಗಿ ಎಷ್ಟೇ ಆರೈಕೆ ಮಾಡಿದರೂ ಕೂದಲು ಉದುರುವ ಸಮಸ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಇದಲ್ಲದೆ ತಲೆ ಸ್ನಾನ ಮಾಡುವ ಸಂದರ್ಭದಲ್ಲಿ ಮಾಡುವ ಕೆಲವೊಂದು ತಪ್ಪುಗಳ ಸಹ ಕೂದಲು ಉದುರಲು ಮುಖ್ಯ ಕಾರಣವಂತೆ. ಹೌದು ಕೂದಲು ತೊಳೆಯುವಾಗ ಮಾಡುವ ಸಣ್ಣ ತಪ್ಪುಗಳು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತವೆ, ಇದರಿಂದ ಕೂದಲು ಉದುರುತ್ತವೆ.  ಹಾಗಾದರೆ ಕೂದಲು ತೊಳೆಯುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಕೂದಲು ಉದುರಲು ಸ್ನಾನದ ಸಂದರ್ಭದಲ್ಲಿ ಮಾಡುವ ಈ ತಪ್ಪುಗಳೂ ಕಾರಣ:

ವಿವಿಧ ರೀತಿಯ ಶಾಂಪೂ ಬಳಕೆ: ಜನರು ಸಾಮಾನ್ಯವಾಗಿ ವಿವಿಧ ರೀತಿಯ ಶಾಂಪೂಗಳನ್ನು ಪ್ರಯತ್ನಿಸುತ್ತಾರೆ, ತಪ್ಪಾದ ಶಾಂಪೂ ಆಯ್ಕೆ  ಕೂದಲನ್ನು ನಿರ್ಜೀವಗೊಳಿಸುತ್ತದೆ. ಇದು ಕೂದಲಿನ ಶುಷ್ಕತೆ ಮತ್ತು ಒಡೆಯುವಿಕೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ ನೇರವಾಗಿ ಶಾಂಪೂ ಹಚ್ಚುವುದು ಸಹ ತಪ್ಪು. ಇದರಿಂದ ಕೂದಲಿನ ಬೇರುಗಳಲ್ಲಿ ಎಣ್ಣೆ, ಬೆವರು, ಧೂಳು ಹಾಗೆಯೇ ಉಳಿದು ಬಿಡುತ್ತದೆ. ಹಾಗಾಗಿ ಅಂತಹ ಪರಿಸ್ಥಿತಿಯಲ್ಲಿ, ಕೂದಲು ತೊಳೆಯುವ ಮೊದಲು ನಿಮ್ಮ ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿ, ಇದು ಕೂದಲಿನಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.

ಆತುರದಿಂದ ಕೂದಲು ತೊಳೆಯುವುದು: ನಿಮ್ಮ ಕೂದಲನ್ನು ಆತುರದಿಂದ ತೊಳೆಯುವುದರಿಂದ ಶಾಂಪೂ  ಕೂದಲಿನಲ್ಲಿ ಹಾಗೆಯೇ  ಉಳಿಯುವ ಸಾಧ್ಯತೆ ಇರುತ್ತದೆ. ಇದು ಕೂದಲನ್ನು ಭಾರವಾಗಿ, ಜಿಡ್ಡು ಮತ್ತು ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ.  ಹಾಗಾಗಿ ಕೂದಲನ್ನು ಚೆನ್ನಾಗಿ ತೊಳೆಯಬೇಕು. ಇದರಿಂದ ನೆತ್ತಿ ಸ್ವಚ್ಛವಾಗಿರುತ್ತದೆ ಮತ್ತು ಕೂದಲು ಹಗುರ ಮತ್ತು ತಾಜಾವಾಗಿರುತ್ತದೆ.

ಶಾಂಪೂವನ್ನು ನೇರವಾಗಿ ನೆತ್ತಿಯ ಮೇಲೆ ಬಳಸುವುದು: ಶಾಂಪೂವನ್ನು ನೇರವಾಗಿ ನೆತ್ತಿಗೆ ಹಚ್ಚುವುದು ಕೂಡ ತುಂಬಾ ತಪ್ಪು. ಶಾಂಪೂವನ್ನು ಯಾವಾಗಲೂ ನಿಮ್ಮ ಅಂಗೈಯಲ್ಲಿ ಸ್ವಲ್ಪ ನೀರಿನೊಂದಿಗೆ ಬೆರೆಸಿ ಹಚ್ಚಬೇಕು. ಅದೇ ರೀತಿ, ಕೂದಲಿನ ಬೇರುಗಳಿಗೆ ಕಂಡಿಷನರ್ ಅನ್ನು ಎಂದಿಗೂ ಹಚ್ಚಬಾರದು, ಕೂದಲಿನ ಉದ್ದಕ್ಕೆ ಮಾತ್ರ ಹಚ್ಚಬೇಕು. ಕಂಡಿಷನರ್ ಬೇರುಗಳಿಗೆ ಹೋದರೆ, ಅದು ನೆತ್ತಿಯನ್ನು ಜಿಡ್ಡಿನನ್ನಾಗಿ ಮಾಡುತ್ತದೆ ಮತ್ತು ಕೂದಲಿನ ಕಿರುಚೀಲಗಳನ್ನು ಮುಚ್ಚುತ್ತದೆ. ಸ್ನಾನದ ನಂತರ, ನಾವು ನಮ್ಮ ಕೂದಲನ್ನು ಒಣಗಿಸಲು ಟವೆಲ್‌ನಿಂದ ಬಲವಾಗಿ ಉಜ್ಜುತ್ತೇವೆ. ಈ ಘರ್ಷಣೆ ಕೂದಲಿನ ಹೊರಪೊರೆಗಳಿಗೆ ಹಾನಿ ಮಾಡುತ್ತದೆ ಮತ್ತು ಕೂದಲನ್ನು ದುರ್ಬಲಗೊಳಿಸುತ್ತದೆ. ಬದಲಾಗಿ, ಮೃದುವಾದ ಹತ್ತಿ ಬಟ್ಟೆ ಅಥವಾ ಮೈಕ್ರೋಫೈಬರ್ ಟವಲ್ ಬಳಸಿ ಕೂದಲಿನ ನೀರಿನಾಂಶವನ್ನು ತೆಗೆಯಬೇಕು.

ಇದನ್ನೂ ಓದಿ: ಯಾವ ಸಮಯದಲ್ಲಿ ಪಪ್ಪಾಯಿ ಹಣ್ಣು ತಿನ್ನೋದು ಬೆಸ್ಟ್?

ಕೂದಲನ್ನು ಆಗಾಗ್ಗೆ ತೊಳೆಯುವುದು: ನಿಮ್ಮ ಕೂದಲನ್ನು ಆಗಾಗ್ಗೆ ತೊಳೆಯುವುದರಿಂದ ಕೂದಲಿನ  ನೈಸರ್ಗಿಕ ಎಣ್ಣೆಗಳು ಕಳೆದುಹೋಗುತ್ತವೆ. ಇದು ನಿಮ್ಮ ಕೂದಲನ್ನು ಒಣಗಿಸುತ್ತದೆ ಮತ್ತು ನಿಮ್ಮ ನೆತ್ತಿಯಲ್ಲಿ ಹೆಚ್ಚು ಎಣ್ಣೆ ಉತ್ಪತ್ತಿಯಾಗುವಂತೆ ಮಾಡುತ್ತದೆ. ಇದರಿಂದಾಗಿ ನಿಮ್ಮ ಕೂದಲು ಬೇಗನೆ ಜಿಡ್ಡಿನಂತಾಗುತ್ತದೆ. ಹಾಗಾಗಿ ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾತ್ರ ತಲೆ ಸ್ನಾನ ಮಾಡಿ ಮತ್ತು ಕೂದಲು ತೊಳೆಯಲು ಸೌಮ್ಯವಾದ ಶಾಂಪೂ ಬಳಸಿ. ಈ ಮೂಲಕ ಕೂದಲು ಉದುರುವುದನ್ನು ತಡೆಯಬಹುದು.

ಒದ್ದೆ ಕೂದಲನ್ನು ಬಾಚುವುದು: ಅನೇಕ ಜನರು ಸ್ನಾನ ಮಾಡಿ ಬಂದ ತಕ್ಷಣವೇ ಒದ್ದೆ ಕೂದಲನ್ನು ಬಾಚುತ್ತಾರೆ. ತಜ್ಞರ ಪ್ರಕಾರ, ಕೂದಲು ಒದ್ದೆಯಾಗಿರುವಾಗ ಅತ್ಯಂತ ದುರ್ಬಲವಾಗಿರುತ್ತದೆ. ಈ ಸಮಯದಲ್ಲಿ ಕೂದಲು ಬಾಚಿಕೊಳ್ಳುವುದರಿಂದ ಕೂದಲು ಉದುರುತ್ತದೆ. ಹಾಗಾಗಿ ಮೊದಲು ಕೂದಲನ್ನು ನೈಸರ್ಗಿಕವಾಗಿ ಒಣಗಲು ಬಿಡಬೇಕು ಮತ್ತು ಒಣಗಿದ ನಂತರವೇ  ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸಿ ಕೂದಲು ಬಾಚಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version