ನಿದ್ರೆ ಕಡಿಮೆಯಾದರೆ ಮೂಳೆ-ಕೀಲುಗಳ ಆರೋಗ್ಯಕ್ಕೆ ಅಪಾಯ! ಡಾ. ಯೋಗೀಶ್ ಕಾಮತ್ ಸಲಹೆ – Kannada News | Sleeping Less Can Trigger Back and Joint Pain: Dr. Yogeesh Kamath Warns

ನಿದ್ರೆಯ ಕೊರತೆಯು ಕೇವಲ ಆಯಾಸ ಮತ್ತು ಅಸ್ವಸ್ಥತೆಯ ಭಾವನೆಯನ್ನು ಮಾತ್ರ ಉಂಟುಮಾಡುವುದಿಲ್ಲ. ಇದು ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುವ ಮೂಲಕ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲೂ ಮೂಳೆಗಳು, ಕೀಲುಗಳು ಮತ್ತು ಸ್ನಾಯುಗಳ ಆರೋಗ್ಯದ ಮೇಲೆ ಇದರ ಪರಿಣಾಮವು ಗಮನಾರ್ಹವಾಗಿದ್ದರೂ, ಹೆಚ್ಚಿನವರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಯುವಜನರಲ್ಲಿ ನಿದ್ರೆಯ ಅವಧಿ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಉದ್ಯೋಗ ಅಥವಾ ವೈಯಕ್ತಿಕ ಜೀವನದ ಒತ್ತಡಗಳಿಂದಾಗಿ ಅರ್ಧಕ್ಕಿಂತ ಹೆಚ್ಚು ಯುವ ಉದ್ಯೋಗಿಗಳು ಸಮರ್ಪಕ ನಿದ್ರೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಹಾಗಾದರೆ ನಿದ್ರೆಯ ಕೊರತೆ ಮತ್ತು ಮೂಳೆ-ಕೀಲುಗಳ ಆರೋಗ್ಯದ ನಡುವಿನ ಸಂಬಂಧ ಯಾಕೆ ಈ ರೀತಿ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮಂಗಳೂರು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಕ್ಸ್, ಹಿಪ್ ಮತ್ತು ಮೊಣಕಾಲು ಕೀಲು ಬದಲಾವಣೆ ತಜ್ಞರು ಹಾಗೂ ಕ್ರೀಡಾ ಗಾಯಗಳ ತಜ್ಞರಾಗಿರುವ ಡಾ. ಯೋಗೀಶ್ ಕಾಮತ್ ಅವರು ನಿದ್ರೆಯ ಕೊರತೆ ಮತ್ತು ಮೂಳೆ-ಕೀಲುಗಳ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು ನಿದ್ರಾಹೀನತೆಗೆ ಕಾರಣವಾಗುವ ಅಂಶಗಳು ತಪ್ಪಾದ ಭಂಗಿ, ಅಸಮರ್ಪಕ ದಿನಚರಿ ಮತ್ತು ಜೀವನಶೈಲಿಯಾಗಿದೆ. ಅಷ್ಟೇಅಲ್ಲ, ಮಾನಸಿಕ ಒತ್ತಡ ಮತ್ತು ಆತಂಕದಿಂದ ಸ್ನಾಯುಗಳ ಬಿಗಿತ ಉಂಟಾಗುತ್ತದೆ. ಜೊತೆಗೆ ನಿದ್ರೆಯ ಅವಧಿ ಹಾಗೂ ಕ್ರಮದಲ್ಲಿನ ವ್ಯತ್ಯಾಸಗಳು ಮೂಳೆ, ಸ್ನಾಯು ಮತ್ತು ಕೀಲುಗಳ ಮೇಲೆ ಬೀರುವ ಪರಿಣಾಮ ಬೀರುತ್ತದೆ. ಇನ್ನು, ಮಲಗುವ ವಾತಾವರಣ, ಹಾಸಿಗೆ ಗುಣಮಟ್ಟ ಕೂಡ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕುಳಿತುಕೊಳ್ಳುವವರಿಗೆ ಅಪಾಯ

ವಿದ್ಯಾರ್ಥಿಗಳು ಮತ್ತು ಕಂಪ್ಯೂಟರ್ ಮುಂದೆ ದೀರ್ಘಕಾಲ ಕುಳಿತು ಕೆಲಸ ಮಾಡುವ ವೃತ್ತಿಪರರು ಸಾಮಾನ್ಯವಾಗಿ ಬಾಗಿದ ದೇಹದ ಭಂಗಿಯನ್ನು ರೂಢಿಸಿಕೊಳ್ಳುತ್ತಾರೆ. ಇದರಿಂದ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಉಂಟಾಗುವುದರ ಜೊತೆಗೆ ತೊಡೆಯ ಹಿಂಭಾಗದ (ಹ್ಯಾಮ್‌ಸ್ಟ್ರಿಂಗ್) ಮತ್ತು ಕಾಲಿನ ಹಿಂಭಾಗದ (ಕ್ಯಾಫ್) ಸ್ನಾಯುಗಳು ಬಿಗಿಯಾಗುತ್ತವೆ. ಇದರ ಪರಿಣಾಮವಾಗಿ ಮೊಣಕಾಲಿನ ನೋವು ಕಾಣಿಸಿಕೊಳ್ಳಬಹುದು ಮತ್ತು ಮುಂದಿನ ದಿನಗಳಲ್ಲಿ ಮೊಣಕಾಲು ಹಾಗೂ ಬೆನ್ನಿನ ಕೀಲುಗಳಲ್ಲಿ ಸವೆತ (ಆರ್ಥ್ರೈಟಿಸ್) ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಕುತ್ತಿಗೆ ಮತ್ತು ತೊಡೆಯ ಸ್ನಾಯುಗಳ ಬಿಗಿತದಿಂದ ಆರಾಮವಾಗಿ ನಿದ್ರೆ ಮಾಡಲು ಕಷ್ಟವಾಗುತ್ತದೆ. ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಮಲಗುವುದರಿಂದ ಸ್ನಾಯುಗಳಲ್ಲಿ ಆಯಾಸ ಮತ್ತು ನೋವು ಹೆಚ್ಚಾಗಿ ನಿದ್ರೆಗೆ ಅಡ್ಡಿಯಾಗುತ್ತದೆ.

ಒತ್ತಡ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ಅನೇಕರು ಸಾಮಾಜಿಕ ಮುಜುಗರ ಅಥವಾ ತಿರಸ್ಕಾರದ ಭಯದಿಂದ ಮರೆಮಾಚುತ್ತಾರೆ. ಹೀಗಾಗಿ ಇಂತಹ ಸಮಸ್ಯೆಗಳ ನೈಜ ಪ್ರಮಾಣ ವರದಿಯಾಗಿರುವುದಕ್ಕಿಂತ ಹೆಚ್ಚಿರಬಹುದು. ಆದ್ದರಿಂದ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು ಅಗತ್ಯ ಬೆಂಬಲ ಒದಗಿಸುವುದು ಅಗತ್ಯವಾಗಿದೆ. ದೇಹದ ಯಾವುದೇ ನೋವು ಅಥವಾ ಆರೋಗ್ಯ ಸಮಸ್ಯೆಯೊಂದಿಗೆ ವೈದ್ಯರನ್ನು ಸಂಪರ್ಕಿಸುವಾಗ ಅದರ ಹಿಂದೆ ಮಾನಸಿಕ ಒತ್ತಡವೂ ಕಾರಣವಾಗಿದೆಯೇ ಎಂಬುದನ್ನು ವೈದ್ಯರು ಪರಿಶೀಲಿಸುವುದು ಮುಖ್ಯ.

ನಿದ್ರೆಯ ಕೊರತೆಯಿಂದ ನೋವು ಇನ್ನಷ್ಟು ಹೆಚ್ಚಾಗಬಹುದೇ?

ಸಾಕಷ್ಟು ನಿದ್ರೆ ಇಲ್ಲದಿದ್ದಾಗ ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಮತ್ತು ಚೇತರಿಕೆಯ ಸಮಯ ಕಡಿಮೆಯಾಗುತ್ತದೆ. ಗಾಢ ನಿದ್ರೆಯ ಸಮಯದಲ್ಲಿ ಸ್ನಾಯುಗಳು ವಿಶ್ರಾಂತಿ ಪಡೆದು ಚೇತರಿಸಿಕೊಳ್ಳಲು ಅವಕಾಶ ಸಿಗುತ್ತದೆ. ಆದರೆ ಕಡಿಮೆ ಅವಧಿಯ ನಿದ್ರೆ ಅಥವಾ ಅಸಮರ್ಪಕ ನಿದ್ರೆಯ ಕ್ರಮ ಮುಂದುವರಿದರೆ ಸ್ನಾಯುಗಳಲ್ಲಿ ಆಯಾಸ, ಬಿಗಿತ ಮತ್ತು ನೋವು ಹೆಚ್ಚಾಗಬಹುದು. ಈಗಾಗಲೇ ಕುತ್ತಿಗೆ, ಬೆನ್ನು ಅಥವಾ ಕೀಲು ನೋವಿನಿಂದ ಬಳಲುತ್ತಿರುವವರಲ್ಲಿ ಇದು ಸಮಸ್ಯೆಯನ್ನು ಮತ್ತಷ್ಟು ಕಿರಿಕಿರಿ ಉಂಟುಮಾಡುವಂತೆ ಮಾಡಬಹುದು.

ತಪ್ಪಾದ ಭಂಗಿಯಲ್ಲಿ ಮಲಗುವುದರಿಂದ ಏನಾಗಬಹುದು?

ಅತಿಯಾದ ಮೃದುವಾದ ಸೋಫಾ, ರಿಕ್ಲೈನರ್ ಅಥವಾ ಫೋಮ್ ಮೆತ್ತೆಗಳು ಬೆನ್ನುಮೂಳೆ ಮತ್ತು ಕೀಲುಗಳ ಆರೋಗ್ಯಕ್ಕೆ ಸೂಕ್ತವಲ್ಲ. ಇವು ಬೆನ್ನುಮೂಳೆಗೆ ಅಗತ್ಯವಾದ ಬೆಂಬಲವನ್ನು ನೀಡುವುದಿಲ್ಲ. ದಿನವಿಡೀ ಕುಳಿತು ಕೆಲಸ ಮಾಡುವವರು, ನಿರಂತರ ಪ್ರಯಾಣ ಮಾಡುವವರು ಮತ್ತು ಹೋಟೆಲ್‌ಗಳಲ್ಲಿ ಹೆಚ್ಚಾಗಿ ತಂಗುವ ಉದ್ಯೋಗಿಗಳಲ್ಲಿ ಇಂತಹ ಮೃದುವಾದ ಹಾಸಿಗೆಗಳು ಬೆನ್ನುನೋವು ಹಾಗೂ ಕ್ಷೀಣತೆಯ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

ಕೀಲುಗಳ ಸವೆತ ಮತ್ತು ಆರ್ಥ್ರೈಟಿಸ್‌ನ್ನು ಆರಂಭದಲ್ಲೇ ತಡೆಗಟ್ಟುವುದು ಅತ್ಯುತ್ತಮ ಮಾರ್ಗವಾಗಿದೆ. ಸರಿಯಾದ ದೇಹದ ಭಂಗಿಯನ್ನು ಕಾಪಾಡಿಕೊಳ್ಳುವುದು, ನಿಯಮಿತ ವ್ಯಾಯಾಮ ಮಾಡುವುದು, ನಿಗದಿತ ಸಮಯದಲ್ಲಿ ಮಲಗುವುದು, ಸಮತೋಲಿತ ಆಹಾರ ಸೇವಿಸುವುದು ಹಾಗೂ ಉತ್ತಮ ನಿದ್ರೆಯ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಮೂಳೆ ಮತ್ತು ಕೀಲುಗಳ ಆರೋಗ್ಯವನ್ನು ಕಾಪಾಡಲು ಅತ್ಯಗತ್ಯ. ನಿದ್ರಾಹೀನತೆ ಮತ್ತು ದೇಹ ಅಥವಾ ಕೀಲು ನೋವು ನಿರಂತರವಾಗಿ ಕಂಡುಬಂದರೆ ವಿಳಂಬ ಮಾಡದೆ ಮೂಳೆ ಮತ್ತು ಕೀಲು ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shravana Masa: ಶ್ರಾವಣ ಮಾಸದಲ್ಲಿ ಹೆಂಡತಿಗೆ ಹಸಿರು ಬಳೆ ಕೊಡಿಸಬೇಕು ಯಾಕೆ ಗೊತ್ತಾ? ಮಹತ್ವ ಮತ್ತು ಲಾಭ ಇಲ್ಲಿದೆ – Kannada News | Shravana Masa Special: Why Husbands Should Gift Green Bangles to Wives?

ಶ್ರಾವಣ ಮಾಸವು ಆಧ್ಯಾತ್ಮಿಕ ಹಾಗೂ ಧಾರ್ಮಿಕ ದೃಷ್ಟಿಯಿಂದ ಅತ್ಯಂತ ಪವಿತ್ರವಾದ ಸಮಯವಾಗಿದೆ. ಈ ಮಾಸವನ್ನು ಸೌಭಾಗ್ಯದ ಸಂಕೇತವೆಂದೂ ಕರೆಯಲಾಗುತ್ತದೆ. ಶ್ರಾವಣದಲ್ಲಿ ಮಹಿಳೆಯರು ಮಹಾಲಕ್ಷ್ಮಿ ಹಾಗೂ ಗೌರಿ ಪೂಜೆ, ವರಲಕ್ಷ್ಮಿ ವ್ರತಗಳನ್ನು ಆಚರಿಸಿ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಮತ್ತು ಕುಟುಂಬದ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತಾರೆ. ಈ ತಿಂಗಳಲ್ಲಿ ಮಹಿಳೆಯರು ಹಸಿರು ಬಟ್ಟೆ ಹಾಗೂ ಹಸಿರು ಬಳೆಗಳನ್ನು ಧರಿಸುವುದು ಅತ್ಯಂತ ಶುಭಪ್ರದ ಎಂಬ ಆಚರಣೆ ಅನಾದಿ ಕಾಲದಿಂದಲೂ ಬಂದಿದೆ.

ಆದರೆ, ಶ್ರಾವಣ ಮಾಸದಲ್ಲಿ ಪತಿಯು ತನ್ನ ಪತ್ನಿಗೆ ಹಸಿರು ಬಣ್ಣದ ಬಳೆಗಳನ್ನು ಕೊಡುಗೆಯಾಗಿ ಕೊಡಿಸುವುದು ಅತ್ಯಂತ ಶ್ರೇಷ್ಠ ಹಾಗೂ ವಿಶೇಷ ಫಲ ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ದಂಪತಿಗಳ ನಡುವಿನ ಪ್ರೀತಿ-ವಾತ್ಸಲ್ಯ ಹೆಚ್ಚುವುದಲ್ಲದೆ, ಜಾತಕದಲ್ಲಿ ಶುಕ್ರ ಗ್ರಹವು ಬಲಗೊಂಡು ಸಂಪತ್ತು ದ್ವಿಗುಣಗೊಳ್ಳುತ್ತದೆ. ಇದರ ಪೂರ್ಣ ಮಹತ್ವವನ್ನು ವಿವರವಾಗಿ ತಿಳಿಯೋಣ.

ಶುಕ್ರ ಗ್ರಹದ ಬಲವರ್ಧನೆ ಮತ್ತು ಧನ ಲಾಭ:

ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವನ್ನು ದಾಂಪತ್ಯ ಸುಖ, ಆಕರ್ಷಣೆ ಮತ್ತು ಸಂಪತ್ತಿನ ಕಾರಕ ಎಂದು ಪರಿಗಣಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ರವಾರದಂದು ಪತಿ-ಪತ್ನಿ ಒಟ್ಟಾಗಿ ದೇವಸ್ಥಾನಕ್ಕೆ ತೆರಳಿ ಲಕ್ಷ್ಮಿ/ಗೌರಿ ದೇವಿಯ ದರ್ಶನ ಪಡೆದ ನಂತರ, ಪತಿಯು ತನ್ನ ಕೈಯಾರೆ ಪತ್ನಿಗೆ ಹಸಿರು ಬಳೆಗಳನ್ನು ಕೊಡಿಸಿ ಧರಿಸಿದರೆ ಪತ್ನಿಗೆ ಅದೃಷ್ಟ ಒಲಿಯುತ್ತದೆ. ಇದರಿಂದ ಆಕೆಯ ಜಾತಕದಲ್ಲಿ ಶುಕ್ರ ಗ್ರಹವು ಬಲಗೊಂಡು, ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ ಹಣಕಾಸಿನ ಅಭಿವೃದ್ಧಿ ಹಾಗೂ ಲಕ್ಷ್ಮಿ ಕೃಪೆ ಉಂಟಾಗುತ್ತದೆ.

ದಾಂಪತ್ಯ ಜೀವನದಲ್ಲಿ ನೆಮ್ಮದಿ ಮತ್ತು ಪತಿಯ ಆಯುಷ್ಯ ವೃದ್ಧಿ:

ಶ್ರಾವಣ ಮಾಸದಲ್ಲಿ ಹಸಿರು ಬಳೆಗಳನ್ನು ಧರಿಸುವುದರಿಂದ ಪತಿಯ ಆಯುಷ್ಯ ಮತ್ತು ಆರೋಗ್ಯ ಹೆಚ್ಚಾಗುತ್ತದೆ ಎಂಬ ದೃಢವಾದ ನಂಬಿಕೆಯಿದೆ. ಪತಿ ತನ್ನ ಪ್ರೀತಿಯ ಸಂಕೇತವಾಗಿ ತಂದುಕೊಡುವ ಈ ಬಳೆಗಳನ್ನು ಧರಿಸುವುದರಿಂದ ದಂಪತಿಗಳ ನಡುವೆ ಇರುವ ಮನಸ್ತಾಪಗಳು ದೂರವಾಗಿ, ದಾಂಪತ್ಯ ಜೀವನವು ಯಾವುದೇ ಸಮಸ್ಯೆಗಳಿಲ್ಲದೆ ಸುಖ-ಸಮೃದ್ಧಿಯಿಂದ ಕೂಡಿರುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಸಂತಾನ ಭಾಗ್ಯ ಮತ್ತು ಆರೋಗ್ಯ ವೃದ್ಧಿ:

ಸನಾತನ ಧರ್ಮದಲ್ಲಿ ಹಸಿರು ಬಣ್ಣವನ್ನು ಪ್ರಕೃತಿ, ವೃದ್ಧಿ ಮತ್ತು ಫಲವತ್ತತೆಯ (Fertility) ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಂತಾನ ನಿರೀಕ್ಷೆಯಲ್ಲಿರುವವರು ಅಥವಾ ಗರ್ಭಿಣಿಯರು ಶ್ರಾವಣ ಮಾಸದಲ್ಲಿ ಹಸಿರು ಬಳೆಗಳನ್ನು ಧರಿಸುವುದು ಅತ್ಯಂತ ಒಳಿತೆಂದು ವಿದ್ವಾಂಸರು ಹೇಳುತ್ತಾರೆ. ಗೌರಿ ದೇವಿಯ ವಿಶೇಷ ಅನುಗ್ರಹದಿಂದ ಗರ್ಭಧಾರಣೆಯ ಅವಕಾಶಗಳು ಹೆಚ್ಚಾಗುತ್ತವೆ ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯಕ್ಕೂ ಇದು ಧನಾತ್ಮಕ ಶಕ್ತಿಯನ್ನು ನೀಡುತ್ತದೆ.

ಗೌರಿ ದೇವಿಯ ವಿಶೇಷ ಆಶೀರ್ವಾದ:

ಪತಿ ಪ್ರೀತಿಯಿಂದ ತಂದುಕೊಡುವ ಹಸಿರು ಬಳೆಗಳನ್ನು ಧರಿಸಿ ಧಾರ್ಮಿಕ ಪೂಜೆಗಳನ್ನು ನೆರವೇರಿಸುವುದರಿಂದ ಸಾಕ್ಷಾತ್ ಗೌರಿಯ ಪರಿಪೂರ್ಣ ಆಶೀರ್ವಾದ ಕುಟುಂಬಕ್ಕೆ ಸಿಗುತ್ತದೆ. ಇದು ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಗಂಡ ಮತ್ತು ಹೆಂಡತಿಯ ನಡುವಿನ ಆತ್ಮೀಕ ಸಂಬಂಧವನ್ನು ಗಟ್ಟಿಗೊಳಿಸುವ ಸುಂದರ ಸಂಪ್ರದಾಯವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಾಮರಾಜನಗರ: ಅಪರಿಚಿತ ವಾಹನ ಡಿಕ್ಕಿ; ಹಿಟ್ ಆ್ಯಂಡ್ ರನ್​​ಗೆ ಬೈಕ್ ಸವಾರರಿಬ್ಬರು ಸಾವು – Kannada News | Hit and Run: 2 Bike Riders Die in Konanakere Tragedy; Police Hunt Driver

ಪ್ರಾತಿನಿಧಿಕ ಚಿತ್ರImage Credit source: Getty images

ಚಾಮರಾಜನಗರ, ಆಗಸ್ಟ್​​ 09: ಜಿಲ್ಲೆಯ ಹನೂರು ತಾಲೂಕಿನ ಕೋಣನಕೆರೆ ಗ್ರಾಮದ ಬಳಿ ಭಾನುವಾರ ಭೀಕರ ಹಿಟ್ ಆ್ಯಂಡ್ ರನ್ (Hit and Run) ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವ ಘಟನೆ ನಡೆದಿದೆ. ಯುವರಾಜ್(50) ಮತ್ತು ಶಶಾಂಕ್(25) ಮೃತ ಬೈಕ್ ಸವಾರರು. ರಾಮಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ನಿವಾಸಿ ಯುವರಾಜ್ (50) ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಮೂಲದ ಶಶಾಂಕ್ (25) ಇಬ್ಬರು ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ: ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಭರ್ಜರಿ ಕಾರ್ಯಾಚರಣೆ, 40 ಮಂದಿ ವಶಕ್ಕೆ

ಕೋಣನಕೆರೆ ಗ್ರಾಮದ ಬಳಿ ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತವೆಸಗಿದ ತಕ್ಷಣ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಚಾಲಕನ ಪತ್ತೆಗಾಗಿ ಪೊಲೀಸರು ಶೋಧ

ಇನ್ನು ಘಟನಾ ಸ್ಥಳಕ್ಕೆ ರಾಮಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಪರಾರಿಯಾಗಿರುವ ಅಪರಿಚಿತ ವಾಹನ ಹಾಗೂ ಚಾಲಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಗಸ್ತು ವೇಳೆ ಕಾಡಾನೆ ದಾಳಿಯಿಂದ ಫಾರೆಸ್ಟ್ ವಾಚರ್ ಸಾವು

ಗಸ್ತು ವೇಳೆ ಕಾಡಾನೆ ದಾಳಿಯಿಂದ ಫಾರೆಸ್ಟ್ ವಾಚರ್ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿಧಾಮದ ಪೊನ್ನಾಚಿ ವಲಯದ ಹುಣಸೆ ಬಯಲು ಅರಣ್ಯದಲ್ಲಿ ನಡೆದಿದೆ. ಮಲೆಮಹದೇಶ್ವರ ಬೆಟ್ಟ ನಿವಾಸಿ ಮಹಾದೇವಸ್ವಾಮಿ (48) ಮೃತ ಫಾರೆಸ್ಟ್ ವಾಚರ್. ಇನ್ನು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SL: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ – Kannada News | Shubman Gill’s Timely Return: India vs Sri Lanka Practice Match Boosts Team Confidence

ಗಿಲ್ ಗಾಯದ ಬಗ್ಗೆ ಹೇಳಿಕೆ ನೀಡಿದ್ದ ಬಿಸಿಸಿಐ, ‘ಗುರುವಾರ ಭಾರತದ ಅಭ್ಯಾಸದ ಸಮಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಬಲಗೈ ಉಂಗುರದ ಬೆರಳಿಗೆ ಗಾಯವಾಗಿದೆ. ಮುನ್ನೆಚ್ಚರಿಕೆಯಾಗಿ, ಶ್ರೀಲಂಕಾ XI ವಿರುದ್ಧದ ಅಭ್ಯಾಸ ಪಂದ್ಯದ ಮೊದಲ ದಿನದಂದು ಅವರು ಮೈದಾನಕ್ಕೆ ಇಳಿಯುವುದಿಲ್ಲ. ಗಿಲ್ ಅನುಪಸ್ಥಿತಿಯಲ್ಲಿ, ಉಪನಾಯಕ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ’ ಎಂದಿತ್ತು(PC-PTI).

Source link

ಹೈದರಾಬಾದ್: ನಲ್ಸಾರ್ ಕಾನೂನು ವಿವಿ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸಿಜೆಐ ಮುಖ್ಯ ಅತಿಥಿಯಾಗಲು ವಿದ್ಯಾರ್ಥಿಗಳಿಂದ ವಿರೋಧ? – Kannada News | CJI as chief guest for NALSAR convocation, students oppose

ಹೈದರಾಬಾದ್, ಆಗಸ್ಟ್ 9: ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ (NALSAR University of Law) 2026ರ ಸಾಲಿನ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಗುಂಪೊಂದು, ಮುಂಬರುವ ಘಟಿಕೋತ್ಸವ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

2026ರ ಬ್ಯಾಚ್‌ನ ಹೊರಹೋಗುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉಪಕುಲಪತಿಗಳು (VC), ರಿಜಿಸ್ಟ್ರಾರ್ ಮತ್ತು ಉಪನ್ಯಾಸಕರಿಗೆ ಜಂಟಿ ಪತ್ರ ಬರೆದಿದ್ದು, ಸಿಜೆಐ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ವಿರೋಧಕ್ಕೆ ಕಾರಣ: ಇತ್ತೀಚಿನ ಜಂತರ್ ಮಂತರ್ ಪ್ರತಿಭಟನೆ ಮತ್ತು ಇತರ ನ್ಯಾಯಾಂಗ ವಿಚಾರಣೆಗಳ ಸಂದರ್ಭದಲ್ಲಿ ಸಿಜೆಐ ಸೂರ್ಯ ಕಾಂತ್ ಅವರು ನೀಡಿದರೆನ್ನಲಾದ ಕೆಲವು ಹೇಳಿಕೆಗಳು ಹಾಗೂ ವಿದ್ಯಾರ್ಥಿ ಪ್ರತಿಭಟನೆ ಬಗ್ಗೆ ವ್ಯಕ್ತಪಡಿಸಿದ ನಿಲುವುಗಳು ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಜವಾಬ್ದಾರಿಯ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 90ರ ದಶಕದ ಕರಾಳ ಕಾಶ್ಮೀರಿ ಉಗ್ರ ಇತಿಹಾಸ ಮರುಕಳಿಸುತ್ತಿದೆಯೇ? ಪಂಡಿತರಿಗೆ ಶುರುವಾಗಿವೆ ಉಗ್ರ ಬೆದರಿಕೆಗಳು

‘ಅವರ ಕೈಯಿಂದ ಪದವಿ ಪಡೆಯಲು ಇಷ್ಟವಿಲ್ಲ’

ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮತ್ತು ಭಾವನಾತ್ಮಕವಾಗಿ ಅತ್ಯಂತ ಮಹತ್ವದಾಗಿರುವ ಘಟಿಕೋತ್ಸವದಲ್ಲಿ ಇಂತಹ ಹೇಳಿಕೆಗಳನ್ನು ನೀಡಿದ ವ್ಯಕ್ತಿಯಿಂದ ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸುವುದು ಸೂಕ್ತವಲ್ಲ ಎಂದು ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಶ್ವವಿದ್ಯಾಲಯದ ಪ್ರತಿಕ್ರಿಯೆ: ನಲ್ಸಾರ್ ವಿಶ್ವವಿದ್ಯಾಲಯದ ಸಮಾರಂಭಗಳಲ್ಲಿ ಸಿಜೆಐ ಅವರನ್ನು ಆಹ್ವಾನಿಸುವುದು ಈ ಹಿಂದಿನಿಂದಲೂ ನಡೆದುಬಂದ ಸಂಪ್ರದಾಯವಾಗಿದೆ. ಆದರೆ ವಿದ್ಯಾರ್ಥಿಗಳ ಈ ಆಕ್ಷೇಪಣಾ ಪತ್ರದ ಕುರಿತು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇನ್ನೂ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ: ಓಣಂ ಹಬ್ಬದ ಹಿನ್ನೆಲೆ ಕೇರಳಕ್ಕೆ ತೆರಳುವ ಪ್ರಯಾಣಿಕರಿಗಾಗಿ ಕೆಎಸ್‌ಆರ್‌ಟಿಸಿಯಿಂದ 90 ವಿಶೇಷ ಬಸ್‌ಗಳ ವ್ಯವಸ್ಥೆ

ಮುಂಬೈನಲ್ಲೂ ಮುಂದೂಡಿಕೆಯಾಗಿತ್ತು ಟಿಸ್ ಘಟಿಕೋತ್ಸವ ಕಾರ್ಯಕ್ರಮ

ಎರಡು ವಾರಗಳ ಹಿಂದೆ ಮುಂಬೈನಲ್ಲಿರುವ ಟಾಟಾ ಇನ್ಸ್​ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಸಂಸ್ಥೆಯ 86ನೇ ಘಟಿಕೋತ್ಸವ ಕೂಡ ಮುಂದೂಡಿಕೆ ಆಗಿತ್ತು. ಆಗಸ್ಟ್ 2ರಂದು ನಡೆಯಬೇಕಿದ್ದ ಈ ಕಾರ್ಯಕ್ರಮಕ್ಕೆ ಸಿಜೆಐ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದರು. ಆದರೆ, ಭದ್ರತಾ ಕಳವಳ ವ್ಯಕ್ತಪಡಿಸಿ, ಶಿಕ್ಷಣ ಸಂಸ್ಥೆಯು ಘಟಿಕೋತ್ಸವ ಕಾರ್ಯಕ್ರಮವನ್ನು ಮುಂದೂಡಿತ್ತು. ಕೆಲ ವರದಿಗಳ ಪ್ರಕಾರ, ಸಿಜೆಐ ಮುಖ್ಯ ಅತಿಥಿಗಳಾಗಿರುವುದಕ್ಕೆ ವಿದ್ಯಾರ್ಥಿ ಸಂಘಟನೆಗಳ ವಿರೋಧ ಬಂದಿತ್ತು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಖಾಕಿ’ ಧರಿಸಿದರೆ ಜೋಶ್ ಬರುತ್ತೆ: ಪೊಲೀಸರ ಬಗ್ಗೆ ಡಾಲಿ ಧನಂಜಯ್ ಮಾತು

ಪೊಲೀಸ್ ಇಲಾಖೆಯಲ್ಲಿ ಧಕ್ಷ ಅಧಿಕಾರಿಗಳಿಗೆ, ಅಪ್ರತಿಮ ಸಾಧಕರಿಗೆ, ಕರ್ತವ್ಯಪ್ರಜ್ಞೆ ಜೊತೆ ಮಾನೀಯತೆಯನ್ನು ಮೆರೆದ ಆರಕ್ಷಕರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಟಿವಿ9 ಮಾಡಿತು. ಇತ್ತೀಚೆಗಷ್ಟೆ ನಡೆದ ಟಿವಿ9 ಸೆಲ್ಯೂಟ್ ಕಾರ್ಯಕ್ರಮದಲ್ಲಿ ದಕ್ಷ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಲಾಯ್ತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳ ಜೊತೆಗೆ ಸಚಿವರು, ಸಿನಿಮಾ ನಟರು ಸಹ ಭಾಗಿ ಆಗಿದ್ದರು. ನಟ ಡಾಲಿ ಧನಂಜಯ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು, ಪೊಲೀಸ್ ವ್ಯವಸ್ಥೆ, ಪೊಲೀಸ್ ಕರ್ತವ್ಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ತಾವು ಸಿನಿಮಾಗಳಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದಾಗ ಒಂದು ಜೋಶ್ ಬರುತ್ತದೆ ಎಂದು ಅವರು ನೆನಪು ಮಾಡಿಕೊಂಡರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ – Kannada News | August Weekly Horoscope 2026: Planetary Shifts Impact Your Zodiac Sign Check Your Rashi Bhavishya

ಆಗಷ್ಟ್ ನ ಈ ವಾರದಲ್ಲಿ ಸೂರ್ಯ, ಗುರು ಮತ್ತು ಬುಧ ಕಟಕ ರಾಶಿಯಲ್ಲಿದ್ದು ಶುಭ ಯೋಗಗಳನ್ನು ರೂಪಿಸುತ್ತಿವೆ. ಚಂದ್ರ ಮತ್ತು ಶುಕ್ರ ಕನ್ಯಾ ರಾಶಿಯಲ್ಲಿದ್ದರೆ, ಮಂಗಳ ಮಿಥುನ ರಾಶಿಯಲ್ಲಿದ್ದಾನೆ. ಮೀನ ರಾಶಿಯಲ್ಲಿ ಶನಿ, ಕುಂಭದಲ್ಲಿ ರಾಹು ಹಾಗೂ ಸಿಂಹ ರಾಶಿಯಲ್ಲಿ ಕೇತು ಸಂಚರಿಸುತ್ತಿದ್ದಾರೆ. ಇದು ಅಯಾ ರಾಶಿಗಳಿಗೆ ಮಹತ್ತ್ವದ ತಿರುವಿನ ಸಂದರ್ಭ ಆಗಲಿ.

​ಮೇಷ ರಾಶಿ:

ಸಹೋದರರೊಂದಿಗೆ ಬಾಂಧವ್ಯ ವೃದ್ಧಿಸಲಿದ್ದು, ಅವರ ಸಹಾಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ಆದರೆ, ಆರೋಗ್ಯದ ವಿಚಾರದಲ್ಲಿ, ವಿಶೇಷವಾಗಿ ರಕ್ತದೊತ್ತಡ ಮತ್ತು ಶಿರೋವೇದನೆಯಂತಹ ಸಮಸ್ಯೆಗಳಿದ್ದರೆ ಎಚ್ಚರವಹಿಸಿ. ಸಾಲದ ವಹಿವಾಟಿನಿಂದ ದೂರವಿರುವುದು ಸೂಕ್ತ.

​ವೃಷಭ ರಾಶಿ:

ಪಂಚಮ ಭಾವದಲ್ಲಿ ಶುಕ್ರ ಮತ್ತು ಚಂದ್ರರ ಅನುಕೂಲಕರ ಸ್ಥಿತಿಯಿಂದ ಸೃಜನಶೀಲತೆ ಹೆಚ್ಚಾಗಲಿದೆ. ಕಲಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ಒದಗಿಬರಲಿವೆ. ಆರ್ಥಿಕವಾಗಿ ಲಾಭದಾಯಕ ವಾರವಾಗಿದ್ದು, ವ್ಯಾಪಾರ-ವಹಿವಾಟಿನಲ್ಲಿ ಹೊಸ ಹೂಡಿಕೆಗೆ ವಾತಾವರಣ ಅನುಕೂಲಕರವಾಗಿದೆ. ಕುಟುಂಬದಲ್ಲಿ ಮಾಂಗಲ್ಯ ಕಾರ್ಯಗಳ ಚರ್ಚೆ ನಡೆಯಬಹುದು. ಸಣ್ಣಪುಟ್ಟ ಪ್ರಯಾಣಗಳು ಸಂತಸ ತರಲಿವೆ.

​ಮಿಥುನ ರಾಶಿ :

ನಿಮ್ಮ ಲಗ್ನದಲ್ಲೇ ಮಂಗಳನಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಬಹುದು, ಕೋಪ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ದ್ವಿತೀಯದ ಗುರು ಮತ್ತು ಬುಧರ ಕೃಪೆಯಿಂದ ಮಾತು ಲಲಿತವಾಗಿರಲಿದ್ದು, ಮಾತಿನಿಂದಲೇ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ, ಅನಗತ್ಯ ಖರ್ಚುಗಳನ್ನು ಕಡಿತಗೊಳಿಸುವುದು ಸೂಕ್ತ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲಿಯೇ ಸೂರ್ಯ, ಗುರು ಹಾಗೂ ಬುಧರ ಸಂಯೋಜನೆಯು ಜ್ಞಾನ ಮತ್ತು ನಾಯಕತ್ವ ಗುಣಗಳನ್ನು ಹೆಚ್ಚಿಸುತ್ತದೆ. ಸಮಾಜ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಹೆಸರು ಹಾಗೂ ಗೌರವ ಸಿಗಲಿದೆ. ಆಡಳಿತಾತ್ಮಕ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಆಸ್ತಿ ಅಥವಾ ವಾಹನ ಖರೀದಿಗೆ ಸೂಕ್ತ ಯೋಜನೆ ರೂಪಿಸುವಿರಿ.

​ಸಿಂಹ ರಾಶಿ :

ನಿಮ್ಮ ರಾಶಿಯಲ್ಲಿ ಕೇತು ಸಂಚರಿಸುತ್ತಿರುವುದರಿಂದ ಮನಸ್ಸಿನಲ್ಲಿ ಅಸ್ಥಿರತೆ ಮತ್ತು ಚಿಂತೆಗಳು ಉಂಟಾಗಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬಜೆಟ್ ನಿಯಂತ್ರಣದಲ್ಲಿಡಬೇಕು. ದ್ವಾದಶ ಭಾವದ ಗ್ರಹಗಳ ಪ್ರಭಾವದಿಂದಾಗಿ ವಿದೇಶಿ ವ್ಯಾಪಾರ ಅಥವಾ ವಿದೇಶಿ ಸಂಪರ್ಕಗಳಿಂದ ಲಾಭ ಸಿಗಬಹುದು. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿದ್ದು, ಧ್ಯಾನ ಮತ್ತು ಯೋಗದಿಂದ ಮನಸ್ಸಿಗೆ ಶಾಂತಿ ಸಿಗಲಿದೆ.

ಕನ್ಯಾ ರಾಶಿ :

ನಿಮ್ಮ ರಾಶಿಯಲ್ಲಿ ಶುಕ್ರ ಮತ್ತು ಚಂದ್ರರ ಯುತಿಯು ವ್ಯಕ್ತಿತ್ವದಲ್ಲಿ ಆಕರ್ಷಣೆ ತರಲಿದೆ. ಏಕಾದಶ ಭಾವದಲ್ಲಿರುವ ಸೂರ್ಯ-ಗುರುಗಳ ಬಲದಿಂದ ಆರ್ಥಿಕ ಅಭಿವೃದ್ಧಿ ಸ್ಪಷ್ಟವಾಗಿ ಗೋಚರಿಸಲಿದೆ. ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ಉದ್ಯೋಗಸ್ಥರಿಗೆ ಬಡ್ತಿ ಅಥವಾ ಆರ್ಥಿಕ ಲಾಭದ ಸೂಚನೆಗಳಿವೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ.

​ತುಲಾ ರಾಶಿ :

ದಶಮ ಭಾವದಲ್ಲಿ ಬಲವಾದ ಗ್ರಹಗಳ ಉಪಸ್ಥಿತಿಯಿಂದಾಗಿ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಉದ್ಯೋಗ ಬದಲಾವಣೆಗೆ ಬಯಸುವವರಿಗೆ ಹೊಸ ಅವಕಾಶಗಳು ಒದಗಿಬರಲಿವೆ. ರಾಜಕೀಯ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಬೆಂಬಲ ದೊರೆಯಲಿದೆ. ನೂತನ ಗೃಹ ನಿರ್ಮಾಣ ಅಥವಾ ವಾಹನ ಖರೀದಿ ವಿಚಾರದಲ್ಲಿ ಸಕಾರಾತ್ಮಕ ಮುನ್ನಡೆ ಕಾಣಬಹುದು. ಕುಟುಂಬದಲ್ಲಿ ನೆಮ್ಮದಿ ಇರಲಿದೆ.

​ವೃಶ್ಚಿಕ ರಾಶಿ:

ಭಾಗ್ಯಸ್ಥಾನದಲ್ಲಿ ಗುರು ಮತ್ತು ಬುಧರ ಅನುಕೂಲಕರ ಸಂಚಾರದಿಂದ ಕೈಗೊಂಡ ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಒಲಿಯಲಿದೆ. ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗಲಿದೆ. ದೂರದ ಕ್ಷೇಮಾಭಿವೃದ್ಧಿ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ತಂದೆಯವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವಿರಿ.

​ಧನುಸ್ಸು ರಾಶಿ:

ಅಷ್ಟಮ ಭಾವದಲ್ಲಿ ಗ್ರಹಗಳ ಸಂಚಾರವಿರುವುದರಿಂದ ಅನಗತ್ಯ ಗೊಂದಲ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸಬೇಕು. ಚಾಲನೆ ಮಾಡುವಾಗ ಎಚ್ಚರವಿರಲಿ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆದಾಗ್ಯೂ, ಸಂಶೋಧನೆ ಹಾಗೂ ಗೂಢಶಾಸ್ತ್ರಗಳಲ್ಲಿ ಆಸಕ್ತಿ ಇರುವವರಿಗೆ ಇದು ಉತ್ತಮ ಸಮಯ. ಹಿರಿಯರ ಸಲಹೆಯನ್ನು ನಿರ್ಲಕ್ಷಿಸಬೇಡಿ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

​ಮಕರ ರಾಶಿ:

ಸಪ್ತಮ ಭಾವದಲ್ಲಿರುವ ಗ್ರಹಗಳ ಅನುಗ್ರಹದಿಂದ ದಾಂಪತ್ಯ ಜೀವನದಲ್ಲಿ ಮಧುರತೆ ಹೆಚ್ಚಲಿದೆ. ವ್ಯಾಪಾರ ಮತ್ತು ಪಾಲುದಾರಿಕೆ ವಹಿವಾಟುಗಳಲ್ಲಿ ಉತ್ತಮ ಪ್ರಗತಿ ಕಾಣಬಹುದು. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಹೊಸ ಪರಿಚಯಸ್ಥರಿಂದ ವೃತ್ತಿಬದುಕಿಗೆ ಸಹಾಯ ಸಿಗಲಿದೆ. ಆರೋಗ್ಯ ಸ್ಥಿರವಾಗಿರುತ್ತದೆ.

​ಕುಂಭ ರಾಶಿ:

ನಿಮ್ಮ ರಾಶಿಯಲ್ಲಿ ರಾಹುವಿನ ಸ್ಥಿತಿ ಹಾಗೂ ಆರನೇ ಭಾವದ ಬಲದಿಂದಾಗಿ ಶತ್ರುಗಳ ಮೇಲೆ ಮೇಲುಗೈ ಸಾಧಿಸುವಿರಿ. ಹಳೆಯ ಕೋರ್ಟ್ ವ್ಯಾಜ್ಯಗಳು ಅಥವಾ ತಂಟೆ-ತಕರಾರುಗಳು ನಿಮ್ಮ ಪರವಾಗಿ ಬಗೆಹರಿಯುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಸಾಲದ ಹೊರೆ ಕಡಿಮೆಯಾಗಲಿದೆ, ಆದರೆ ಅತಿಯಾದ ಕೆಲಸದ ಒತ್ತಡದಿಂದ ದೈಹಿಕ ಆಯಾಸ ಉಂಟಾಗದಂತೆ ನೋಡಿಕೊಳ್ಳಿ.

​ಮೀನ ರಾಶಿ:

ನಿಮ್ಮ ರಾಶಿಯಲ್ಲೇ ಶನಿ ಇರುವುದರಿಂದ ಮಾನಸಿಕ ಒತ್ತಡ ಅಥವಾ ಕೆಲಸಗಳಲ್ಲಿ ನಿಧಾನಗತಿ ಅನುಭವಕ್ಕೆ ಬರಬಹುದು. ಆದರೆ ಪಂಚಮ ಭಾವದಲ್ಲಿರುವ ಗುರು ಮತ್ತು ಬುಧರ ಶುಭ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಪರೀಕ್ಷಾ ಫಲಿತಾಂಶ ಸಿಗಲಿದೆ. ಸಂತಾನ ಅಪೇಕ್ಷಿಗಳಿಗೆ ಶುಭ ವಾರ್ತೆ ಸಿಗುವ ಸಾಧ್ಯತೆಯಿದೆ. ಆಲೋಚಿಸಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಫಲ ದೊರೆಯಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:22 pm, Sun, 9 August 26

Source link

ಬಿಡದಿ ಟೌನ್‌ಶಿಪ್‌ ವಿರೋಧಿಸಿ ಪ್ರತಿಭಟನೆ: ವಿಪಕ್ಷಗಳಿಗೆ ಡಿಕೆ ಶಿವಕುಮಾರ್ ಮೆಗಾ ಕೌಂಟರ್ – Kannada News | Bidadi Township Row: DK Shivakumar’s Mega Counter to Opposition

ಬೆಂಗಳೂರು, ಆಗಸ್ಟ್​​​ 09: ‘ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಗೆ (Bidadi Township Project) ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar)​ ಮಾಹಿತಿ ನೀಡಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ: ಸಿಎಂ 

ಈ ಕುರಿತಾಗಿ ಟ್ವೀಟ್ ಮಾಡಿರುವ ಸಿಎಂ ಡಿಕೆ ಶಿವಕುಮಾರ್​​, ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ’ ಎಂದು ಹೇಳಿದ್ದಾರೆ.

ಸಿಎಂ ಡಿಕೆ ಶಿವಕುಮಾರ್​​ ಟ್ವೀಟ್ 

‘ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ 25 ಲಕ್ಷ ರೂ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ 3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ 50% ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿ’ ಎಂದಿದ್ದಾರೆ.

ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆ

ಇನ್ನು ‘ಬಿಡದಿ ಟೌನ್ ಶಿಪ್ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ಬಿಡದಿ ಟೌನ್ ಶಿಪ್ (ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ) ಯೋಜನೆ ವಿಚಾರವಾಗಿ ವ್ಯಕ್ತವಾಗುತ್ತಿರುವ ವಿಭಿನ್ನ ಅಭಿಪ್ರಾಯಗಳನ್ನು ಪರಿಶೀಲಿಸಿ ವರದಿ ನೀಡಲು ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚಿಸಲು ನಮ್ಮ ಸರ್ಕಾರ ಆದೇಶಿಸಿದೆ’ ಎಂದು ಸಿಎಂ ತಿಳಿಸಿದ್ದಾರೆ.

‘ಈ ಸಮಿತಿಯಲ್ಲಿ ನಿವೃತ್ತ ಮುಖ್ಯಕಾರ್ಯದರ್ಶಿಗಳಾದ ಎಸ್.ವಿ. ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನಕುಮಾರ್ ಸದಸ್ಯರಾಗಿದ್ದಾರೆ. ಈ ಸಮಿತಿಯು 30 ದಿನಗಳಲ್ಲಿ ವರದಿ ಸಲ್ಲಿಸಲಿದೆ. ಸಮಿತಿಯು ಸದರಿ ಯೋಜನೆಯನ್ನು ಕಾನೂನಾತ್ಮಕ, ಮಾನವೀಯತೆ ಹಾಗೂ ಸಮಗ್ರ ಅಭಿವೃದ್ಧಿಯ ಚೌಕಟ್ಟಿನಲ್ಲಿ ವಿಶ್ಲೇಷಣೆಗೊಳಪಡಿಸಿ ತನ್ನ ಶಿಫಾರಸ್ಸನ್ನು ನೀಡಲಿದೆ.’

ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್​​ ಪಾದಯಾತ್ರೆಗೆ ಚಾಲನೆ: ಯಾರೆಲ್ಲ ಭಾಗಿ?

‘ಯೋಜನೆಯನ್ನು ಜನಸ್ನೇಹಿಯಾಗಿ ಜಾರಿಗೊಳಿಸಲು ಸಾರ್ವಜನಿಕರ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಾಗಿ ನಮ್ಮ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಜನರ ಆಶೋತ್ತರಗಳನ್ನು ಗೌರವಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಯನ್ನು ಮತ್ತಷ್ಟು ಉತ್ತಮವಾಗಿ ರೂಪಿಸುವುದು ನಮ್ಮ ಸರ್ಕಾರದ ಆಶಯವಾಗಿದ್ದು, ಈ ಹಿನ್ನೆಲೆಯಲ್ಲಿ ನಾವು ಸಮಿತಿಯನ್ನು ರಚಿಸಿದ್ದೇವೆ’ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಜ್ಯಪಾಲರಿಗೆ ಪತ್ರ ಬರೆದು ತಮ್ಮ ರಾಜೀನಾಮೆಯ ಪ್ರಸಂಗ ವಿವರಿಸಿದ ಹೊರಟ್ಟಿ – Kannada News | Basavaraj Horatti letter To Governor thawar chand gehlot about His Resignation

ಬೆಂಗಳೂರು, (ಆಗಸ್ಟ್ 09): ಬಸವರಾಜ ಹೊರಟ್ಟಿ (basavaraj horatti) ಅವರು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಒತ್ತಡ ಹೇರಿ ರಾಜೀನಾಮೆ ಪಡೆಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದರ ಮಧ್ಯೆ ಇದೀಗ ಸ್ವತಃ ಬಸವರಾಜ ಹೊರಟ್ಟಿ ಅವರೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದು, ತಮ್ಮ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆಯಲಾಗಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ. ಇದರ ಜೊತೆಗೆ ಆಗಸ್ಟ್ 7ರಂದು ತಮ್ಮ ಅಧಿಕೃತ ಕೊಠಡಿಯಲ್ಲಿ ನಡೆದ ಬೆಳವಣಿಗೆಗಳನ್ನು ಹೊರಟ್ಟಿ ಅವರು ಪತ್ರದಲ್ಲಿ ವಿವರಿಸಿದ್ದು, ತಮ್ಮ ರಾಜೀನಾಮೆಗೆ ಕಾರಣವಾದ ಸಂದರ್ಭಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಹೊರಟ್ಟಿ ಬರೆದ ಪತ್ರದಲ್ಲೇನಿದೆ?

ಆಗಸ್ಟ್ 14ರಂದು ವಿಧಾನ ಪರಿಷತ್ ಅಧಿವೇಶನವನ್ನು ಕರೆದು, ಸದನದ ಸದಸ್ಯರಿಗೆ ಕೃತಜ್ಞತೆ ಹಾಗೂ ಧನ್ಯವಾದ ಅರ್ಪಿಸಿದ ಬಳಿಕವೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ, ಆಗಸ್ಟ್ 7ರಂದೇ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದರು.  ನೂತನ ಎಂಎಲ್‌ಸಿ ಪ್ರಮಾಣವಚನದ ಬಳಿಕ ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು, ಹಲವು ಎಂಎಲ್‌ಸಿಗಳ ಬಂದು ಇಂದೇ ರಾಜೀನಾಮೆ ನೀಡಿ ಎಂದು ಸೂಚಿಸಿದ್ದರು. ಈ ಬೆಳವಣಿಗೆ ಅನಿರೀಕ್ಷಿತವಾಗಿತ್ತು. ತಮ್ಮ ಅಧಿಕೃತ ಕೊಠಡಿಯಲ್ಲಿ ನಡೆದ ಬೆಳವಣಿಗೆಯಿಂದ ತಮಗೆ ಆಶ್ಚರ್ಯವಾಯಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಸಿಎಂ ಮನವಿಯಂತೆ ರಾಜೀನಾಮೆ ನೀಡಿದ್ದೇನೆ ಎಂದು ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ಕಾಂಗ್ರೆಸಿಗರ ಮನವೊಲಿಕೆಗೆ ಮಣಿದ ಬಸವರಾಜ ಹೊರಟ್ಟಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ

ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು

ಇನ್ನೊಂದೆಡೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಿಯೋಗ (BJP Delegation) ರಾಜ್ಯಪಾಲರನ್ನು ಭೇಟಿ ಮಾಡಿದ್ದು, ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ (Basavaraj Horatti) ಅವರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ. ಸದನ ನಡಾವಳಿ ಪ್ರಕಾರ ರಾಜೀನಾಮೆ ಸಲ್ಲಿಕೆ ಆಗಿಲ್ಲ. ಹೀಗಾಗಿ ಹೊರಟ್ಟಿ ರಾಜೀನಾಮೆಯನ್ನು ಅಂಗೀಕರಸಬಾರದು ಎಂದು ದೂರು ಸಲ್ಲಿಸಿದೆ.ಅಲ್ಲದೇ ಕಾಂಗ್ರೆಸ್ ಲೆಟರ್‌ಹೆಡ್‌ನಲ್ಲಿ ಸಭಾಧ್ಯಕ್ಷ, ಸಭಾಪತಿಗಳ ಹೆಸರುಗಳ ಆಯ್ಕೆ ಬಗ್ಗೆಯೂ ರಾಜ್ಯಪಾಲರಿ ಗಮನಕ್ಕೆ ತಂದಿದೆ.

75 ಸದಸ್ಯ ಬಲದ ವಿಧಾನ ಪರಿಷತ್ತಿನಲ್ಲಿ ಆಡಳಿತಾರೂಢ ಕಾಂಗ್ರೆಸ್ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ, ಸಭಾಪತಿ ಸ್ಥಾನಕ್ಕೆ ಹಕ್ಕು ಮಂಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿರುವ ಸಂದರ್ಭದಲ್ಲೇ ರಾಜ್ಯಪಾಲರಿಗೆ ಹೊರಟ್ಟಿ ಹಾಗೂ ಬಿಜೆಪಿ ಹಾಗೂ ಜೆಡಿಎಸ್ ನಿಯೋಗ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದ್ದು, ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Career Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ – Kannada News | Weekly Career Horoscope: August Job Predictions for All Zodiac Signs

ಆಗಷ್ಟ್ ಎರಡೇ ವಾರದಲ್ಲಿ ಸೂರ್ಯನು ಉಚ್ಚಸ್ಥಾನಕ್ಕೆ ಬರಲಿದ್ದು ಆತ್ಮಸೈರ್ಯವನ್ನು ಹೆಚ್ಚಿಸುವನು. ಕಲೆ, ಕೋಪ, ಜವಾಬ್ದಾರಿಗಳ ನಿರ್ವಹಣೆ, ತಂಡವಾಗಿ ಕಾರ್ಯ, ಆತುರ, ಸ್ಪರ್ಧಾತ್ಮಕತೆ, ಕೌಶಲತೆಯ ಪರಿಚಯ ಇದೆಲ್ಲ ಈ ವಾರದ ವಿಶೇಷ‌‌‌‌.

​ಮೇಷ ರಾಶಿ:

​ತೃತೀಯ ಭಾವದಲ್ಲಿ ಮಂಗಳ ಇರುವುದರಿಂದ ಧೈರ್ಯ ಮತ್ತು ಉತ್ಸಾಹ ಹೆಚ್ಚಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ವೇಗ ಹೆಚ್ಚಾಗಲಿದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಅತ್ಯುತ್ತಮ ಸಮಯ. ಮೇಲಧಿಕಾರಿಗಳ ಬೆಂಬಲ ದೊರೆಯಲಿದೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ತಾಳ್ಮೆ ಇರಲಿ.

​ವೃಷಭ ರಾಶಿ:

ಉದ್ಯೋಗ ಸ್ಥಿತಿ: ಕನ್ಯಾ ರಾಶಿಯಲ್ಲಿರುವ ಶುಕ್ರನ ಪ್ರಭಾವದಿಂದ ಸೃಜನಶೀಲತೆ ಮತ್ತು ಆಡಳಿತಾತ್ಮಕ ಸಾಮರ್ಥ್ಯ ಹೆಚ್ಚುತ್ತದೆ. ಕಲೆ, ಬರವಣಿಗೆ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಈ ವಾರ ಅತ್ಯಂತ ಶುಭದಾಯಕ. ಹಣಕಾಸಿನ ವಿಚಾರಗಳಲ್ಲಿ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ಅನಗತ್ಯ ಚರ್ಚೆಗಳಿಂದ ದೂರವಿರಿ.

ಮಿಥುನ ರಾಶಿ :

ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಕಾರ್ಯನಿರತತೆ ಹೆಚ್ಚಿರುತ್ತದೆ ಮತ್ತು ಸವಾಲುಗಳನ್ನು ಎದುರಿಸುವ ಶಕ್ತಿ ಸಿಗುತ್ತದೆ. ಹೊಸ ಹುದ್ದೆ ಅಥವಾ ಹೆಚ್ಚಿನ ಜವಾಬ್ದಾರಿಗಳು ಹುಡುಕಿಕೊಂಡು ಬರಬಹುದು. ಕೋಪ ಮತ್ತು ಆತುರವನ್ನು ಹತೋಟಿಯಲ್ಲಿಟ್ಟುಕೊಳ್ಳಿ. ಹಿರಿಯ ಅಧಿಕಾರಿಗಳ ಸಲಹೆಯನ್ನು ಅಲಕ್ಷಿಸಬೇಡಿ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲಿ ಉಚ್ಚ ಗುರು, ಸೂರ್ಯ ಮತ್ತು ಬುಧ ಇರುವುದರಿಂದ ವೃತ್ತಿಪರ ಕ್ಷೇತ್ರದಲ್ಲಿ ಅತ್ಯಂತ ಶ್ರೇಷ್ಠ ಫಲಗಳು ದೊರೆಯಲಿವೆ. ಬಡ್ತಿ, ವೇತನ ಏರಿಕೆ ಅಥವಾ ಗೌರವ-ಸನ್ಮಾನಗಳು ಸಿಗುವ ಸಾಧ್ಯತೆ ದಟ್ಟವಾಗಿದೆ. ಅಹಂಕಾರದ ಭಾವನೆ ಬಾರದಂತೆ ನೋಡಿಕೊಳ್ಳಿ ಮತ್ತು ತಂಡದೊಂದಿಗೆ ಸೇರಿ ಕೆಲಸ ಮಾಡಿ.

​ಸಿಂಹ ರಾಶಿ:

ನಿಮ್ಮ ರಾಶಿಯಲ್ಲಿ ಕೇತು ಇರುವುದರಿಂದ ವೃತ್ತಿಯಲ್ಲಿ ಸಣ್ಣಪುಟ್ಟ ಗೊಂದಲಗಳು ಅಥವಾ ಅಸ್ಥಿರತೆ ಕಾಡಬಹುದು. ಆಗಸ್ಟ್ ೧೫ರ ಹೊತ್ತಿಗೆ ಸೂರ್ಯನ ಸಂಚಾರ ಬದಲಾವಣೆಯಿಂದ ವಾರದ ಕೊನೆಯಲ್ಲಿ ಹೊಸ ಭರವಸೆ ಮೂಡಲಿದೆ. ಕೆಲಸ ಬದಲಾಯಿಸುವ ಆಲೋಚನೆ ಇದ್ದರೆ ಈ ವಾರ ಮುಂದೂಡುವುದು ಒಳಿತು. ಪ್ರಸ್ತುತ ಜವಾಬ್ದಾರಿಗಳ ಮೇಲೆ ಗಮನವಿಡಿ.

​ಕನ್ಯಾ ರಾಶಿ:

​ನಿಮ್ಮ ರಾಶಿಯಲ್ಲಿ ಚಂದ್ರ ಮತ್ತು ಶುಕ್ರ ಇರುವುದರಿಂದ ಕಾರ್ಯಕ್ಷೇತ್ರದಲ್ಲಿ ಜನಪ್ರಿಯತೆ ಮತ್ತು ಶುಭ ಫಲಗಳು ದೊರೆಯಲಿವೆ. ಹೊಸ ಒಪ್ಪಂದಗಳು, ವ್ಯಾಪಾರ-ವಹಿವಾಟು ವೃದ್ಧಿ ಮತ್ತು ಉದ್ಯೋಗದಲ್ಲಿ ಸ್ಥಿರತೆ ಕಂಡುಬರುತ್ತದೆ. ಕೆಲಸದಲ್ಲಿ ಪರಿಪೂರ್ಣತೆ ತರಲು ಹೋಗಿ ಸಮಯ ವ್ಯರ್ಥ ಮಾಡಬೇಡಿ.

ತುಲಾ ರಾಶಿ:

​ದಶಮ ಭಾವದಲ್ಲಿ ಉಚ್ಚ ಗುರುವಿನ ಶುಭ ದೃಷ್ಟಿ ಇರುವುದರಿಂದ ವೃತ್ತಿಜೀವನದಲ್ಲಿ ಸುಧಾರಣೆ ಕಂಡುಬರುತ್ತದೆ. ಸಿದ್ಧರಾಗಿರುವ ಯೋಜನೆಗಳಿಗೆ ಅನುಮೋದನೆ ಸಿಗಲಿದೆ. ದೂರದ ಪ್ರಯಾಣ ಅಥವಾ ಆಡಳಿತಾತ್ಮಕ ಕೆಲಸಗಳಲ್ಲಿ ಯಶಸ್ಸು. ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿ.

​ವೃಶ್ಚಿಕ ರಾಶಿ:

ಭಾಗ್ಯ ಸ್ಥಾನದಲ್ಲಿ ಶುಭ ಗ್ರಹಗಳ ಸನ್ನಿಧಾನವಿರುವುದರಿಂದ ಕೆಲಸದಲ್ಲಿ ಅದೃಷ್ಟದ ಬೆಂಬಲ ದೊರೆಯಲಿದೆ. ಹೊಸ ಕೆಲಸದ ಹುಡುಕಾಟದಲ್ಲಿದ್ದವರಿಗೆ ಉತ್ತಮ ಕರೆಗಳು ಬರಬಹುದು. ವಿದೇಶಿ ಅಥವಾ ದೂರದ ಸಂಸ್ಥೆಗಳಿಂದ ಶುಭ ವಾರ್ತೆ. ಸಮಯದ ಸದ್ಬಳಕೆ ಮಾಡಿಕೊಳ್ಳಿ ಮತ್ತು ಸೋಮಾರಿತನವನ್ನು ಬಿಡಿ.

​ಧನು ರಾಶಿ:

​ಅಷ್ಟಮದಲ್ಲಿ ಸೂರ್ಯ, ಬುಧ, ಗುರು ಇರುವುದರಿಂದ ಕೆಲಸದ ಸ್ಥಳದಲ್ಲಿ ಹಠಾತ್ ಬದಲಾವಣೆ ಅಥವಾ ಹೆಚ್ಚುವರಿ ಜವಾಬ್ದಾರಿ ಬರಬಹುದು. ಸಂಶೋಧನೆ, ಗುಪ್ತ ಮಾಹಿತಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಮಯ. ಮೇಲಧಿಕಾರಿಗಳೊಂದಿಗೆ ಕಿರಿಕಿರಿ ಮಾಡಿಕೊಳ್ಳಬೇಡಿ. ಕೆಲಸದ ದಾಖಲೆಗಳನ್ನು ಜಾಗರೂಕತೆಯಿಂದ ನಿರ್ವಹಿಸಿ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

​ಮಕರ ರಾಶಿ:

​ಸಪ್ತಮ ಭಾವದಲ್ಲಿ ಉಚ್ಚ ಗುರು ಇರುವುದರಿಂದ ಪಾಲುದಾರಿಕೆ ಉದ್ಯೋಗ ಮತ್ತು ಸಾರ್ವಜನಿಕ ಸಂಪರ್ಕದಲ್ಲಿ ಯಶಸ್ಸು ಸಿಗಲಿದೆ. ಹೊಸ ಸಹಯೋಗ ಹಾಗೂ ಉದ್ಯೋಗದಲ್ಲಿ ಉತ್ತಮ ಬೆಳವಣಿಗೆಯ ಲಕ್ಷಣಗಳಿವೆ. ನಿಮ್ಮ ನಿಲುವುಗಳಲ್ಲಿ ಸ್ಪಷ್ಟತೆ ಇರಲಿ, ಅನಗತ್ಯ ಗೊಂದಲಗಳಿಗೆ ಕಿವಿಗೊಡಬೇಡಿ.

​ಕುಂಭ ರಾಶಿ:

​ನಿಮ್ಮ ರಾಶಿಯಲ್ಲಿ ರಾಹು ವಕ್ರಿಯಾಗಿದ್ದು, ಷಷ್ಠ ಭಾವದಲ್ಲಿ ಗುರು-ಬುಧ ಇರುವುದರಿಂದ ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ಶ್ರಮಕ್ಕೆ ತಕ್ಕಂತೆ ಶತ್ರುಗಳು ಅಥವಾ ಸ್ಪರ್ಧಿಗಳ ಮೇಲೆ ಜಯ ಸಿಗಲಿದೆ. ಕೆಲಸದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ಸಹೋದ್ಯೋಗಿಗಳ ಜೊತೆ ಅನಗತ್ಯ ವಾದ-ವಿವಾದಗಳಿಂದ ದೂರವಿರಿ.

​ಮೀನ ರಾಶಿ:

ನಿಮ್ಮ ರಾಶಿಯಲ್ಲೇ ಶನಿ ವಕ್ರಿಯಾಗಿದ್ದು, ಪಂಚಮದಲ್ಲಿ ಉಚ್ಚ ಗುರು ಇರುವುದರಿಂದ ಬುದ್ಧಿವಂತಿಕೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಶಿಕ್ಷಣ, ಸಲಹಾ ಕ್ಷೇತ್ರ ಮತ್ತು ಕೌಶಲ್ಯ ಆಧಾರಿತ ಕೆಲಸಗಳಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಬೇಡಿ. ಕೆಲಸದಲ್ಲಿ ಆಲಸ್ಯ ತೋರದೆ ಚಟುವಟಿಕೆಯಿಂದಿರಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version