ವಿರೋಶ್ ರಿಸೆಪ್ಶನ್: ಮಹೇಶ್ ಬಾಬು ಮಗಳ ಕಂಡಾಗ ರಶ್ಮಿಕಾಗೆ ಬಂತು ಹಳೆಯ ನೆನಪು

Source link

ಕರ್ನಾಟಕ ಹವಾಮಾನ ವರದಿ: ಇಂದು ರಾಜ್ಯದೆಲ್ಲೆಡೆ ಶುಷ್ಕ ವಾತಾವರಣ; ಬೆಂಗಳೂರಿನ ತಾಪಮಾನದಲ್ಲಿ ಹೆಚ್ಚಳ – Kannada News | Bengaluru temperature: Dry weather in Karnataka, Clear sky in Bengaluru and raise in temperature

ಇಂದು ರಾಜ್ಯದೆಲ್ಲೆಡೆ ಶುಷ್ಕ ವಾತಾವರಣ; ಬೆಂಗಳೂರಿನ ತಾಪಮಾನದಲ್ಲಿ ಹೆಚ್ಚಳ

ಬೆಂಗಳೂರು, ಮಾರ್ಚ್​ 05: ಇಂದು ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶವಿರಲಿದ್ದು, ತಾಪಮಾನದಲ್ಲಿ (Weather Forecast) ಕೊಂಚ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ದಿನಗಳಿಂದ ಒಣ ಹವೆಯ ವಾತಾವರಣವೇ ಕಂಡುಬಂದಿದೆ. ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಎಲ್ಲೆಲ್ಲಿ ಒಣ ಹವೆ?

ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾರ್ಚ್​ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ

ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Karnataka Budget 2026: ನಾಳೆ ಸಿಎಂ ಸಿದ್ದರಾಮಯ್ಯ ಬಜೆಟ್, 17ನೇ ಬಾರಿ ಆಯವ್ಯಯ ಮಂಡಿಸಿ ದಾಖಲೆ ಬರೆಯಲು ಸಜ್ಜು – Kannada News | Karnataka Budget 2026: CM Siddaramaiah Set to Present Record 17th Budget with Focus on Guarantee Schemes

ಬೆಂಗಳೂರು, ಮಾರ್ಚ್ 5: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡನೆಗೆ ಸಿದ್ಧರಾಗಿದ್ದಾರೆ. ವಿಧಾನಸಭೆಯಲ್ಲಿ ಶುಕ್ರವಾರ 2026-27ನೇ ಸಾಲಿನ ಆಯವ್ಯಯವನ್ನು ಮಂಡಿಸಲು ಅವರು ಸಜ್ಜಾಗಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್ ಆಗಿದ್ದು, ಇದು ಒಂದು ದಾಖಲೆಯಾಗಿದೆ. ಜನಸಾಮಾನ್ಯರು ಈ ಬಜೆಟ್‌ನಿಂದ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಇಲಾಖಾವಾರು ಚರ್ಚೆ ನಡೆಸಿ ಬಜೆಟ್ ಅಂತಿಮಗೊಳಿಸಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ರಾಜ್ಯದ ಆರ್ಥಿಕ ಹೊರೆಯನ್ನು ತಗ್ಗಿಸಲು ಯೋಜನೆಗಳಲ್ಲಿ ಬದಲಾವಣೆಗಳನ್ನು ತರಲಾಗುತ್ತದೆಯೇ ಎಂಬ ಕುತೂಹಲವಿದೆ. ಮೂಲಸೌಕರ್ಯ, ಶಿಕ್ಷಣ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಹೀಗಾಗಿ, ಸಿದ್ದರಾಮಯ್ಯ ಮಂಡಿಸಲಿರುವ ಈ ಬಜೆಟ್‌ನತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ! – Kannada News | Lokayukta Busts Corruption: Major Lokayukta Raids on Karnataka Govt Officials and Properties

ಬೆಂಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ!

ಬೆಂಗಳೂರು, ಮಾರ್ಚ್​ 05: ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗಿನಿಂದಲೇ ಲೋಕಾಯುಕ್ತ (Lokayukta Raid) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ, ಧಾರವಾಡ, ಹಾಸನ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.

ಎಲ್ಲೆಲ್ಲಿ, ಯಾರ ವಾಸ್ತವ್ಯಗಳ ಮೇಲೆ ಲೋಕಾ ದಾಳಿ?

ಬೆಳಗ್ಗೆ ಸುಮಾರು 6 ಗಂಟೆಯಿಂದಲೇ ಲೋಕಾಯುಕ್ತ ಪೊಲೀಸರು ಹಲವು ತಂಡಗಳಾಗಿ ವಿಭಜನೆಗೊಂಡು ದಾಳಿ ಆರಂಭಿಸಿದ್ದಾರೆ. ಬೆಂಗಳೂರು ನಗರದಲ್ಲಿ ವೆಟರ್ನರಿ ಕಾಲೇಜು ಹೆಬ್ಬಾಳದ ಅಸಿಸ್ಟೆಂಟ್ ಪ್ರೊಫೆಸರ್ ಇಂದರೇಶ್ ಹಾಗೂ ಸಿಂಗನಾಯಕನಹಳ್ಳಿ ಕೋ-ಆಪರೇಟಿವ್ ಸೊಸೈಟಿಯ ಸಿಇಒ ಶಶಿಧರ್ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಯಾದಗಿರಿಯಲ್ಲಿ ಎಲೆಕ್ಟ್ರಿಕಲ್ ಇಲಾಖೆ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ವಿರೇಶ್ ಹಿರೇಮಠ್ ಅವರ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಮಂಡ್ಯದಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್. ಸತೀಶ್ ಅವರ ಮನೆ ಮತ್ತು ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಧಾರವಾಡದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಎಂ.ಕೆ. ಸುರಕೋಡ ಅವರ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಹೈಡ್ರಾಮಾ!

ಹಾಸನ ಮಹಾನಗರ ಪಾಲಿಕೆಯ ಎಇಇ ಎಂ.ಸಿ. ಸತ್ಯನಾರಾಯಣ ಅವರ ಮನೆ ಮೇಲೆ ದಾಳಿ ನಡೆಸಿದ ವೇಳೆ ಅಧಿಕಾರಿಗಳು ಬಾಗಿಲು ತೆರೆಯದೆ ಹೈಡ್ರಾಮ ನಡೆದ ಘಟನೆ ಕೂಡ ಕಂಡುಬಂದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಅಧಿಕಾರಿಗಳ ತಂಡ ಮನೆ ಮುಂದೆ ಕಾಯಬೇಕಾದ ಪರಿಸ್ಥಿತಿ ಉಂಟಾಯಿತು. ಲೋಕಾಯುಕ್ತ ಡಿವೈಎಸ್‌ಪಿ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

ಮೈಸೂರಿನಲ್ಲಿ ಜಲಮಂಡಳಿಯ ಎಇಇ ಹಾಗೂ ಇಇ (ಇನ್‌ಚಾರ್ಜ್) ಆಶಿಫ್ ಇಕ್ಬಾಲ್ ಅವರ ನಿವಾಸದಲ್ಲಿ ಪರಿಶೀಲನೆ ನಡೆಯುತ್ತಿದೆ. ವಿಜಯಪುರದಲ್ಲಿ ಕೃಷ್ಣಭಾಗ್ಯ ಜಲ ನಿಗಮದ ಜೂನಿಯರ್ ಇಂಜಿನಿಯರ್ ಪ್ರಕಾಶ್ ಪಿ.ಜಿ. ಅವರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡಸಿದ್ದಾರೆ.

ಇದನ್ನೂ ಓದಿ ಅಪಾರ್ಟ್​ಮೆಂಟೇ ಡ್ರಗ್ಸ್ ಸ್ಟೋರ್, ದೇವರ ಫೋಟೊಗಳ ಫ್ರೇಮ್​ನಲ್ಲಿಟ್ಟು ಮಾರಾಟ: ಬಯಲಾಯ್ತು ಜೋಡಿಯ ಮೋಜು-ಮಸ್ತಿ ರಹಸ್ಯ

ಲೋಕಾ ದಾಳಿ ವೇಳೆ ಕಾಣಿಸಿಕೊಂಡ ಹಾವು!

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ್ ವಾಲಪ್ಪ ನಾಯಕ್ ಅವರ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಅವರ ಮನೆಗಳ ಜೊತೆಗೆ ಬಾಗಲಕೋಟೆಯ ಪೋಸ್ಟಲ್ ಕಾಲೋನಿಯಲ್ಲಿರುವ ಅವರ ಸಹೋದರ ಭೀಮಸಿಂಗ್ ನಾಯಕ್ ಅವರ ಮನೆ ಮೇಲೂ ದಾಳಿ ನಡೆದಿದೆ. ಭೀಮಸಿಂಗ್ ನಾಯಕ್ ಅವರು ಬಾಗಲಕೋಟೆ ಡಿಎಆರ್‌ನಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದು, ಬಾಗಲಕೋಟೆ ತಾಲೂಕಿನ ಬಿಲ್ ಕೆರೂರು ಗ್ರಾಮದಲ್ಲಿರುವ ಅವರ ಮೂಲ ನಿವಾಸದಲ್ಲಿಯೂ ಪರಿಶೀಲನೆ ನಡೆಸಲಾಗಿದೆ.

ಬಾಗಲಕೋಟೆ ಲೋಕಾಯುಕ್ತ ಎಸ್‌ಪಿ ಮಾನಿಂಗ್ ನಂದಗಾವಿ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆ ಕೆಲವು ಸ್ಥಳಗಳಲ್ಲಿ ಅಪರೂಪದ ಘಟನೆಗಳೂ ನಡೆದಿದ್ದು, ಬಾಗಲಕೋಟೆಯ ಪೋಸ್ಟಲ್ ಕಾಲೋನಿಯೊಂದರಲ್ಲಿ ದಾಳಿ ನಡೆಯುವ ಸಂದರ್ಭದಲ್ಲಿ ಮನೆಯ ಕೆಳಭಾಗದಲ್ಲಿ ಹಾವು ಕಾಣಿಸಿಕೊಂಡ ಘಟನೆ ಕೂಡ ನಡೆದಿದೆ. ಒಟ್ಟಾರೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ನಡೆದ ಈ ದಾಳಿಯ ವೇಳೆ ಅಧಿಕಾರಿಗಳು ಮಹತ್ವದ ದಾಖಲೆಗಳು ಹಾಗೂ ಆಸ್ತಿ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಲೆನ್ ಆರ್ಭಟಕ್ಕೆ 11 ವಿಶ್ವ ದಾಖಲೆಗಳು ಉಡೀಸ್ – Kannada News | Finn Allen All World Records 

ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಸಿಡಿಲಬ್ಬರದ ಸೆಂಚುರಿ ಸಿಡಿಸಿ ನ್ಯೂಝಿಲೆಂಡ್ ದಾಂಡಿಗ ಫಿನ್ ಅಲೆನ್ (Finn Allen) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಬಾರಿಸಿದ ಈ ಭರ್ಜರಿ ಶತಕದೊಂದಿಗೆ ಹಲವು ವಿಶ್ವ ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಆ ಎಲ್ಲಾ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…

Source link

ಭಾರತೀಯ ಪ್ರೇಕ್ಷಕರನ್ನು ‘ಸೈಲೆಂಟ್’ ಮಾಡ್ತೀವಿ..!

T20 World Cup 2026: ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂದು (ಮಾ.5) ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಆಲ್​ರೌಂಡರ್ ಸ್ಯಾಮ್ ಕರನ್ ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅದು ಸಹ 2023ರ ಏಕದಿನ ವಿಶ್ವಕಪ್ ಫೈನಲ್​ಗೂ ಮುನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ನೀಡಿದ್ದ ಹೇಳಿಕೆಯಂತೆ ಎಂಬುದು ವಿಶೇಷ.

ಸೆಮಿಫೈನಲ್​ಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಸ್ಯಾಮ್ ಕರನ್,  ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತೀಯ ಅಭಿಮಾನಿಗಳನ್ನು “ಸ್ತಬ್ಧಗೊಳಿಸುವ” ಇಚ್ಛೆ ವ್ಯಕ್ತಪಡಿಸಿದ್ದಾರೆ.

2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ನೀಡಿದ್ದ ಹೇಳಿಕೆಯಂತೆ, ಕರನ್ ಕೂಡ ಭಾರತೀಯ ಅಭಿಮಾನಿಗಳನ್ನು ಸೈಲೆಂಟ್ ಮಾಡುವುದು ತಂಡದ ಯಶಸ್ಸಿನ ಸಂಕೇತ ಎಂದು ಭಾವಿಸಿದ್ದಾರೆ.

ನಾವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿರುವ ಪ್ರೇಕ್ಷಕರನ್ನು ಸೈಲೆಂಟ್ ಮಾಡುತ್ತೇವೆ. ನಮ್ಮ ತಂಡವು ಯಾವುದಕ್ಕೂ ಹೆದರಲ್ಲ. ಪಂದ್ಯ ವೀಕ್ಷಿಸಲು ಬಂದಂತಹ ಅಭಿಮಾನಿಗಳು ಸೈಲೆಂಟ್ ಆಗಿದ್ದರೆ ಇಂಗ್ಲೆಂಡ್ ತಂಡವು ಉತ್ತಮವಾಗಿ ಆಡುತ್ತಿದೆ ಎಂದರ್ಥ. ಹೀಗಾಗಿ ನಾವು ಪ್ರೇಕ್ಷಕರನ್ನು ಸ್ಥಬ್ಧಗೊಳಿಸುತ್ತೇವೆ ಎಂದು ಸ್ಯಾಮ್ ಕರನ್ ಹೇಳಿದ್ದಾರೆ.

ಇದೇ ವೇಳೆ ಭಾರತೀಯ ಪ್ರೇಕ್ಷಕರ ಎದುರು ಆಡುವುದು ಕೂಡ ಸವಾಲು ಎಂದು ಸ್ಯಾಮ್ ಕರನ್ ಅಭಿಪ್ರಾಯಪಟ್ಟಿದ್ದಾರೆ. ಇದಾಗ್ಯೂ ಐಪಿಎಲ್ ಆಡಿದ ಅನುಭವ ಇಂಗ್ಲೆಂಡ್ ಆಟಗಾರರಿಗೆ ಇದ್ದು, ಇದು ಈ ಒತ್ತಡ ನಿಭಾಯಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ 2022ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿದಂತೆ, ಈ ಬಾರಿಯೂ ಅಂತಹದ್ದೇ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಸ್ಯಾಮ್ ಕರನ್ ಹೇಳಿದ್ದಾರೆ.

ಒಟ್ಟಿನಲ್ಲಿ ಸ್ಯಾಮ್ ಕರನ್ ನೀಡಿರುವ ಈ ಸೈಲೆಂಟ್ ಹೇಳಿಕೆಯು 2023ರ  ಪ್ಯಾಟ್ ಕಮಿನ್ಸ್ ಅವರ ಸವಾಲನ್ನು ನೆನಪಿಸಿದೆ. ಈ ಸವಾಲಿನ ಮೂಲಕ 2023ರ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿತ್ತು. ಇದೀಗ ಸ್ಯಾಮ್ ಕರನ್ ಕೂಡ ಅಂತಹದ್ದೇ ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಇದನ್ನೂ ಓದಿ: ಅಲೆನ್ ಆರ್ಭಟಕ್ಕೆ 11 ವಿಶ್ವ ದಾಖಲೆಗಳು ಉಡೀಸ್

ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್.

 

Source link

ಕಾಡಾನೆಗಳ ಉಪಟಳದಿಂದ ಪಾರು ಮಾಡುತ್ತೆ ಟೆಂಟಕಲ್ ಫೆನ್ಸಿಂಗ್: ಹೇಗೆ ಗೊತ್ತೇ? – Kannada News | Tentacle Fencing Emerges as Effective Solution to Curb Wild Elephant Menace in Chikkamagaluru

ಚಿಕ್ಕಮಗಳೂರು ಕಾಡಾನೆ ಹಾವಳಿImage Credit source: tv9

ಚಿಕ್ಕಮಗಳೂರು, ಮಾರ್ಚ್ 5: ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಮಲೆನಾಡು ಭಾಗದಲ್ಲಿ ಕಾಡಾನೆಗಳ (Wild Elephants) ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಕಾಫಿ ತೋಟಗಳು, ಭತ್ತದ ಗದ್ದೆಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಕಾಡಾನೆಗಳು ನಿರಂತರ ಸಂಚಾರ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕಾಡಾನೆ ದಾಳಿಗೆ ಹಲವರು ಮೃತಪಟ್ಟ ಘಟನೆಗಳು ವರದಿಯಾಗಿದ್ದು, ಸ್ಥಳೀಯರು ಭೀತಿಯಲ್ಲಿ ಜೀವನ ನಡೆಸುವಂತಾಗಿದೆ. ಕಾಡಾನೆಗಳ ಶಾಶ್ವತ ನಿಯಂತ್ರಣಕ್ಕಾಗಿ ರೈಲ್ವೆ ಬ್ಯಾರಿಕೇಡ್, ಅಗೆದ ಹೊಂಡಗಳು (ಟ್ರೆಂಚ್), ಸೊಲಾರ್ ಬೇಲಿ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಭರವಸೆ ನೀಡಿದ್ದರು. ಆದರೆ ಇದಕ್ಕೆ ಹೆಚ್ಚಿನ ವೆಚ್ಚ ಹಾಗೂ ಪ್ರಕ್ರಿಯಾತ್ಮಕ ಅಡೆತಡೆಗಳಿರುವುದು ಗಮನಾರ್ಹ.

ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ವಿಧಾನ ಟೆಂಟಕಲ್ ಫೆನ್ಸಿಂಗ್

ಕಾಡಾನೆ ಹಹಾವಳಿ ನಿಯಂತ್ರಣಕ್ಕೆ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಪರಿಹಾರವಾಗಿ ‘ಟೆಂಟಕಲ್ ಫೆನ್ಸಿಂಗ್’ ಅಥವಾ ತೂಗು ಬೇಲಿ ವಿಧಾನವನ್ನು ಅಳವಡಿಸುವಂತೆ ಪರಿಸರವಾದಿಗಳು ಸಲಹೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು–ತತ್ಕೋಳ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಮಾದರಿ ಯಶಸ್ವಿಯಾಗಿದೆ ಎಂದು ಅವರು ಉದಾಹರಣೆ ನೀಡಿದ್ದಾರೆ.

ದಶಕದ ಹಿಂದೆ ಸಾರಗೋಡು, ತತ್ಕೋಳ ಹಾಗೂ ಕುಂದೂರು ಭಾಗಗಳಲ್ಲಿ ಕಾಡಾನೆಗಳ ದಾಳಿಯಿಂದ ರೈತರು ಪ್ರಾಣ ಕಳೆದುಕೊಂಡಿದ್ದರು. ಕಾಫಿ ತೋಟಗಳು ಮತ್ತು ಕೃಷಿಭೂಮಿಗಳು ಹಾನಿಗೊಳಗಾಗಿದ್ದವು. ನಂತರ ಈ ಪ್ರದೇಶವನ್ನು ಮೀಸಲು ಅರಣ್ಯವಾಗಿ ಘೋಷಿಸಿ, ಅರಣ್ಯ ಇಲಾಖೆ ಸ್ಥಳೀಯರ ಸ್ಥಳಾಂತರ ಮತ್ತು ಪುನರ್ವಸತಿ ಕಾರ್ಯ ಕೈಗೊಂಡಿತು. ಆದರೂ ಕಾಡಾನೆಗಳು ಕಾಡು ಬಿಟ್ಟು ಹೊರಬರುವ ಘಟನೆಗಳು ಮುಂದುವರಿದವು. ಈ ಹಿನ್ನೆಲೆಯಲ್ಲಿ ಟೆಂಟಕಲ್ ಫೆನ್ಸಿಂಗ್ ಅಳವಡಿಸಲಾಯಿತು.

ಹೇಗೆ ಕಾರ್ಯನಿರ್ವಹಿಸುತ್ತೆ ಟೆಂಟಕಲ್ ಫೆನ್ಸಿಂಗ್ / ತೂಗು ಬೇಲಿ?

ಟೆಂಟಕಲ್ ಫೆನ್ಸಿಂಗ್ ಅಥವಾ ಈ ತೂಗು ಬೇಲಿಯಲ್ಲಿ ಹಲವು ಹಂತಗಳಲ್ಲಿ ತಂತಿ ಜಾಲ ಇರುತ್ತದೆ. ಕಾಡಾನೆಗಳು ತಂತಿಯನ್ನು ಮೇಲಕ್ಕೆತ್ತಲು ಅಥವಾ ಕಿತ್ತುಹಾಕಲು ಯತ್ನಿಸಿದರೆ, ಮತ್ತೊಂದು ತಂತಿಯಿಂದ ಲಘು ವಿದ್ಯುತ್ ಶಾಕ್ ಅನುಭವಿಸಿ ಹಿಂದಕ್ಕೆ ಸರಿಯುತ್ತವೆ. ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿ ಕಾಡಾನೆಗಳ ಪ್ರವೇಶ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಟೆಂಟಕಲ್ ಫೆನ್ಸಿಂಗ್ ಯಾಕೆ ಉತ್ತಮ?

ಟ್ರೆಂಚ್‌ಗಳನ್ನು ಅಗೆದರೂ ಅವುಗಳನ್ನು ಮಣ್ಣು ತುಂಬಿ ಮುಚ್ಚುವ ಸಾಧ್ಯತೆ ಇದೆ. ಸೊಲಾರ್ ಬೇಲಿಗೆ ಮರದ ತುಂಡು ಹಾಕಿ ಮುರಿಯುವ ಉದಾಹರಣೆಗಳೂ ಕಂಡುಬಂದಿವೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮತ್ತು ರೈಲ್ವೆ ಇಲಾಖೆಯ ಸಹಕಾರ ಅಗತ್ಯವಿದೆ. ಆದರೆ ಟೆಂಟಕಲ್ ಫೆನ್ಸಿಂಗ್ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಾದ ವಿಧಾನವಾಗಿದ್ದು, ಇದರ ನಿರ್ವಹಣೆಗೆ ಸ್ಥಳೀಯರಿಗೆ ಉದ್ಯೋಗಾವಕಾಶವೂ ಸಿಗುತ್ತದೆ ಎಂಬುದು ಪರಿಸರವಾದಿಗಳ ಅಭಿಪ್ರಾಯ.

ಇದನ್ನೂ ಓದಿ: ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್​​: ಸ್ಥಳೀಯರಲ್ಲಿ ಆತಂಕ

ಈಗಾಗಲೇ ಯಶಸ್ಸು ಕಂಡಿರುವ ಈ ಮಾದರಿಯನ್ನು ಮಲೆನಾಡಿನ ಇತರೆ ಕಾಡಾನೆ ಸಮಸ್ಯೆ ಪ್ರದೇಶಗಳಲ್ಲೂ ಜಾರಿಗೊಳಿಸುವಂತೆ ಆಗ್ರಹ ಕೇಳಿಬಂದಿದೆ. ಸರ್ಕಾರವು ತಜ್ಞರ ತಂಡವನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:59 am, Thu, 5 March 26

Source link

ಯಂಗ್ ಲುಕ್ ಅಲ್ಲಿ ಬಂದ ಮಲ್ಲಮ್ಮ; ಎಲ್ಲರೂ ಶಾಕ್ – Kannada News | Bigg Boss Fame Mallamma In Young Look fans Gets Shocked

ಮಲ್ಲಮ್ಮ ಅವರು ಯಾರಿಗೆ ಗೊತ್ತಿಲ್ಲ ನೀವೇ ಹೇಳಿ? ಬಿಗ್ ಬಾಸ್ ನೋಡಿದ ಪ್ರತಿಯೊಬ್ಬರಿಗೂ ಅವರ ಪರಿಚಯ ಇರುತ್ತದೆ ಎಂದರೂ ತಪ್ಪಾಗಲಾರದು. ಅವರಿಗೆ ವಯಸ್ಸಾಗಿದೆ. ಆದರೆ, ಅವರು ಯಂಗ್ ಲುಕ್ ಅಲ್ಲಿ ಬಂದಿದ್ದಾರೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ ಎಂದೇ ಹೇಳಬಹುದು. ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ವೇದಿಕೆ ಮೇಲೆ ಈ ಡ್ರಾಮಾ ನಡೆದಿದೆ ಮತ್ತು ವೀಕೆಂಡ್ ಅಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಬಿಗ್ ಬಾಸ್ ಬಳಿಕ ಸ್ಪರ್ಧಿಳ ಖ್ಯಾತಿ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಪೈಲ್ಸ್​ ಆಪರೇಷನ್ ಆಗಿದ್ದಕ್ಕೆ ಸಾಕ್ಷ್ಯ ಕೇಳಿದ ಹಿರಿಯ ಅಧಿಕಾರಿ, ಪ್ಯಾಂಟ್ ಬಿಚ್ಚಿ ಗಾಯ ತೋರಿಸಿದ ರೈಲ್ವೆ ಸಿಬ್ಬಂದಿ – Kannada News | Heated Scene in Lucknow Rail Unit After Staffer Asked to Prove Surgery

ಲಕ್ನೋ, ಮಾರ್ಚ್​ 05: ರೈಲ್ವೆ ಸಿಬ್ಬಂದಿಯೊಬ್ಬರಿಗೆ ಪೈಲ್ಸ್​ ಆಪರೇಷನ್ ಮಾಡಲಾಗಿತ್ತು. ಗಾಯ ವಾಸಿಯಾಗದ ಕಾರಣ ಕುಳಿತುಕೊಳ್ಳಲು ಆಗುತ್ತಿಲ್ಲ, ರಜೆ ಕೊಡಿ ಎಂದು ಹಿರಿಯ ಅಧಿಕಾರಿ ಬಳಿ ಮನವಿ ಮಾಡಿದ್ದರು. ಆಗ ಅಧಿಕಾರಿಯೊಬ್ಬರು ನಿನಗೆ ಆಪರೇಷನ್ ಆಗಿದೆ ಎಂಬುದಕ್ಕೆ ಏನು ಸಾಕ್ಷಿ ಇದೆ ಸಅಕ್ಷಿ ತೋರಿಸು ಬಳಿಕ ರಜೆ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಅದಕ್ಕೆ ಬೇಸರಲ್ಲಿ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಆಪರೇಷನ್ ಆಗಿರುವ ಜಾಗವನ್ನು ತೋರಿಸಿರುವ ವಿಡಿಯೋ ವೈರಲ್ ಆಗಿದ್ದು, ಹಿರಿಯ ಅಧಿಕಾರಿಯ ವರ್ತನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಲಕ್ನೋದಲ್ಲಿ ನಡೆದಿದೆ. ಲೋಕೋ ಪೈಲಟ್ ರಾಜೇಶ್ ಮೀನಾ ಮೂಲವ್ಯಾಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಲಕ್ನೋದಲ್ಲಿ ನಡೆದ ಶಸ್ತ್ರಚಿಕಿತ್ಸೆಗಾಗಿ ಮೀನಾ ಅವರಿಗೆ ಫೆಬ್ರವರಿ 22 ರಿಂದ 28 ರವರೆಗೆ ರಜೆ ನೀಡಲಾಗಿದೆ. ಆದರೆ, ನಿಗದಿತ ಸಮಯದೊಳಗೆ ಅವರ ಗಾಯ ಮಾಗದ ಕಾರಣ ರಜೆ ವಿಸ್ತರಿಸುವಂತೆ ಮನವಿ ಮಾಡಿದ್ದರು.ಬಳಿಕ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಗಾಯವನ್ನು ತೋರಿಸಿದ್ದಾರೆ. ಇದಾದ ಬಳಿಕ ರೈಲ್ವೆ ಆರೋಗ್ಯ ಘಟಕಕ್ಕೆ ಭೇಟಿ ನೀಡಿದ ನಂತರ, ವೈದ್ಯರು ಅವರನ್ನು ಪರೀಕ್ಷಿಸಿದರು ಮತ್ತು ಅವರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ದೃಢಪಡಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಲ್ಲು ಅರ್ಜುನ್ ಕುಟುಂಬ ಸೇರುತ್ತಿರುವ ಈ ನಯಾನಿಕಾ ಯಾರು? ಇದೆ ದೊಡ್ಡ ಉದ್ಯಮ – Kannada News | Who is Nayanika Reddy? Allu Sirish to Marry Prominent Businesswoman, Allu Family’s New Member

ದಕ್ಷಿಣ ಭಾರತದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ (Allu Sirish) ವಿವಾಹವಾಗುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಭಾವಿ ಅತ್ತಿಗೆ ನಯಾನಿಕಾ ರೆಡ್ಡಿ ಯಾರು ಎಂದು ಎಲ್ಲರೂ ಹುಡುಕುತ್ತಿದ್ದಾರೆ. ಅಲ್ಲು ಅರ್ಜುನ್ ಕುಟುಂಬ ತುಂಬಾನೇ ದೊಡ್ಡದು. ಹೀಗಾಗಿ, ಇವರ ವಿವಾಹ ಆಗುತ್ತಿರುವ ಹುಡುಗಿ ಕೂಡ ದೊಡ್ಡ ಕುಟುಂಬದವರೇ ಆಗಿರುತ್ತಾರೆ ಎಂಬ ಬಗ್ಗೆ ಅನುಮಾನ ಬೇಡ. ಈ ಮದುವೆಗಾಗಿ ಅಲ್ಲು ಅರ್ಜುನ್ ಕುಟುಂಬ ಸಾಕಷ್ಟು ಹಣವನ್ನು ಖರ್ಚು ಮಾಡಿದೆ.

ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ವಿವಾಹವಾಗುತ್ತಿದ್ದು, ಅವರ ವಿವಾಹಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ಆರಂಭವಾಗಿವೆ. ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಮಾರ್ಚ್ 6ರಂದು ವಿವಾಹವಾಗಲಿದ್ದಾರೆ. ಹೈದರಾಬಾದ್​ ಅಲ್ಲಿ ಈ ವಿವಾಹ ಜರುಗಲಿದೆ.

ಅಲ್ಲು ಅರ್ಜುನ್ ಅವರ ಅತ್ತಿಗೆ ನಯಾನಿಕಾ ರೆಡ್ಡಿ ಹೈದರಾಬಾದ್‌ನವರಾಗಿದ್ದು, ಉದ್ಯಮಿಯಾಗಿದ್ದಾರೆ. ನಯಾನಿಕಾ ಅವರ ಕುಟುಂಬವೂ ದೊಡ್ಡ ವ್ಯವಹಾರವನ್ನು ಹೊಂದಿದೆ. ಅವರಿಗೆ ಚಿತ್ರರಂಗದೊಂದಿಗೆ ಯಾವುದೇ ಸಂಬಂಧವಿಲ್ಲ. ಅದೇ ರೀತಿ, ಅವರು ಹೆಚ್ಚು ಸುದ್ದಿಯಲ್ಲಿರಲು ಇಷ್ಟಪಡುವುದಿಲ್ಲ.

ನಯಾನಿಕಾ ತನ್ನ ಕುಟುಂಬ ವ್ಯವಹಾರವನ್ನು ನಡೆಸುತ್ತಾ ಇದ್ದಾರೆ. ಅಲ್ಲು ಸಿರೀಶ್ ಜೊತೆ ವಿವಾಹವಾಗುವ ಮೊದಲು ಅವರು ಹೆಚ್ಚು ಪರಿಚಿತರಾಗಿರಲಿಲ್ಲ. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ಹೆಚ್ಚು ಸಕ್ರಿಯರಾಗಿಲ್ಲ. ತೆಲುಗು ನಟರಾದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ವಿವಾಹ ಪೂರ್ವ ಪಾರ್ಟಿಯಲ್ಲಿ ನಯಾನಿಕಾ ಮತ್ತು ಅಲ್ಲು ಸಿರೀಶ್ ಮೊದಲು ಭೇಟಿಯಾದರು ಎನ್ನಲಾಗಿದೆ.

ಇದನ್ನೂ ಓದಿ: ಕೊರಿಯಾಕ್ಕೆ ಹೋಗಿ ಶಾಕ್ ಆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್

ವಿವಾಹ ಪೂರ್ವ ಪಾರ್ಟಿಯ ನಂತರ, ನಯಾನಿಕಾ ಮತ್ತು ಅಲ್ಲು ಸಿರೀಶ್ ಕ್ರಮೇಣ ಒಳ್ಳೆಯ ಸ್ನೇಹಿತರಾದರು ಮತ್ತು ಈ ಸ್ನೇಹ ಪ್ರೀತಿಗೆ ತಿರುಗಿತು. 2025ರಲ್ಲಿ, ಅಲ್ಲು ಸಿರೀಶ್ ನಯಾನಿಕಾ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದರು. ಅಂದಿನಿಂದ, ಇವರ ನಿಶ್ಚಿತಾರ್ಥದ ವದಂತಿಗಳು ಹಬ್ಬಿದವು. ಇಬ್ಬರೂ ಕಳೆದ ವರ್ಷ ಅಕ್ಟೋಬರ್ 31ರಂದು ನಿಶ್ಚಿತಾರ್ಥ ಮಾಡಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಂಡರು. ನಯಾನಿಕಾ ಮತ್ತು ಅಲ್ಲು ಸಿರೀಶ್ ಹೊಸ ಜೀವನವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version