ಅತಿಯಾಗಿ ತಿಂದ್ರೆ ಮಾತ್ರ ಬೊಜ್ಜು ಬರುತ್ತೆ ಅಂತಾ ಅಂದ್ಕೊಂಡ್ ಇದ್ದೀರಾ? ಇಲ್ಲಿದೆ ನೋಡಿ ಅಚ್ಚರಿ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಒಬೆಸಿಟಿ (ಬೊಜ್ಜು) ಅಥವಾ ಸ್ಥೂಲಕಾಯತೆ (Obesity) ಹೆಚ್ಚಾಗುತ್ತಿದ್ದು ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಕೆಲವರು ಅತಿಯಾಗಿ ತಿನ್ನುವುದೇ ಈ ಸಮಸ್ಯೆ ಕಾರಣ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಈ ಸಮಸ್ಯೆ ಪ್ರತಿಯೊಬ್ಬರಿಗೂ ಒಂದೇ ರೀತಿಯಾಗಿ ಪರಿಣಾಮ ಬೀರುವುದಿಲ್ಲ. ವಿಶೇಷವಾಗಿ ಮೆಟಾಬಾಲಿಸಂ ಸರಿಯಾಗಿರದವರಲ್ಲಿ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಇದರ ಹೊರತಾಗಿಯೂ ಇನ್ನೂ ಹಲವು ಕಾರಣಗಳಿವೆ. ಅವುಗಳನ್ನು ತಿಳಿದುಕೊಂಡರೆ ಸ್ಥೂಲಕಾಯವನ್ನು ಅಂದರೆ ಬೊಜ್ಜನ್ನು ಸರಿಯಾಗಿ ನಿಯಂತ್ರಿಸಬಹುದಾಗಿದೆ.

ಡಾ. ದೀಪಕ್ ಕುಮಾರ್ ಸುಮನ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಹೆಚ್ಚು ತಿನ್ನುವುದು ಸ್ಥೂಲಕಾಯಕ್ಕೆ ಕಾರಣವಾದರೂ, ಕೆಲವರು ಕಡಿಮೆ ಆಹಾರ ಸೇವನೆ ಮಾಡಿದರೂ ತೂಕ ಹೆಚ್ಚಾಗುತ್ತದೆ. ಇದಕ್ಕೆ ಹಾರ್ಮೋನ್ ಅಸಮತೋಲನ, ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆ ಪ್ರಮುಖ ಕಾರಣಗಳಾಗಿವೆ. ಕೆಲವರಲ್ಲಿ ಥೈರಾಯ್ಡ್ ಸಮಸ್ಯೆ, ಪಿಸಿಓಎಸ್ (PCOS) ಅಥವಾ ಇನ್ಸುಲಿನ್ ರೆಸಿಸ್ಟೆನ್ಸ್‌ನಿಂದ ತೂಕ ವೇಗವಾಗಿ ಹೆಚ್ಚಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಥೈರಾಯ್ಡ್ ಹಾಗೂ ಇನ್ಸುಲಿನ್ ರೆಸಿಸ್ಟೆನ್ಸ್‌ನಿಂದ ತೂಕ ಹೆಚ್ಚಾಗುವ ರೋಗಿಗಳ ಸಂಖ್ಯೆ ಕೂಡ ಅಧಿಕವಾಗಿದೆ ಎಂದು ತಿಳಿಸಿದ್ದಾರೆ.

ನಿದ್ರಾಹೀನತೆ ಮತ್ತು ಬೊಜ್ಜಿಗಿರುವ ಸಂಬಂಧ:

ಡಾ. ದೀಪಕ್ ಅವರ ಪ್ರಕಾರ, ದಿನಕ್ಕೆ 5 ಗಂಟೆಗಳಿಗಿಂತಲೂ ಕಡಿಮೆ ನಿದ್ರೆ ಮಾಡುವವರಲ್ಲಿ ಘ್ರೆಲಿನ್ (Ghrelin) ಹಾರ್ಮೋನ್ ಮಟ್ಟದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಈ ಹಾರ್ಮೋನ್ ಹಸಿವನ್ನು ಹೆಚ್ಚಿಸುತ್ತದೆ. ಹಸಿವು ಹೆಚ್ಚಾದಾಗ ವ್ಯಕ್ತಿ ಹೆಚ್ಚು ಆಹಾರ ಸೇವಿಸುತ್ತಾನೆ, ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ. ನಿದ್ರೆ ಪೂರ್ತಿಯಾಗದವರಲ್ಲಿ ಕ್ರಮೇಣ ಸ್ಥೂಲಕಾಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪ್ರತಿಯೊಬ್ಬರಲ್ಲೂ ಇದೇ ರೀತಿಯ ಪರಿಣಾಮ ಕಾಣಿಸಿಕೊಳ್ಳುವುದಿಲ್ಲ. ಅಷ್ಟು ಮಾತ್ರವಲ್ಲ, ಬೊಜ್ಜಿಗೆ ಮಾನಸಿಕ ಒತ್ತಡವೂ ಕಾರಣವಾಗುತ್ತದೆ. ಏಕೆಂದರೆ ಒತ್ತಡ ದೇಹದಲ್ಲಿ ಕಾರ್ಟಿಸೋಲ್ (Cortisol) ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಈ ಹಾರ್ಮೋನ್ ಹೆಚ್ಚಾದಾಗ ಹೊಟ್ಟೆ ಸುತ್ತಲಿನ ಕೊಬ್ಬು ಹೆಚ್ಚಾಗುತ್ತದೆ. ಈ ರೀತಿಯ ಕೊಬ್ಬು ಅನೇಕ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಸರಿಯಾದ ಜೀವನಶೈಲಿ ಮತ್ತು ಸಮಯೋಚಿತ ವೈದ್ಯಕೀಯ ಸಲಹೆಯಿಂದ ತೂಕವನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಮುಖ್ಯವಾಗಿದೆ.

ಇದನ್ನೂ ಓದಿ: ಬೊಜ್ಜಿಗೆ ಕಾರಣವೇನು? ಯೋಗಾಸನದ ಮೂಲಕ ಈ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುತ್ತಾರೆ ಡಾ. ವಂದನಾ

ಬೊಜ್ಜನ್ನು ತಡೆಗಟ್ಟಲು ಸಲಹೆ:

  • ಆಹಾರ ಪದ್ಧತಿಯಲ್ಲಿ ನಿಯಂತ್ರಣ ಇಟ್ಟುಕೊಳ್ಳಿ
  • ಮಾನಸಿಕ ಒತ್ತಡದಿಂದ ದೂರವಿರಿ
  • ಪ್ರತಿದಿನ ವ್ಯಾಯಾಮ ಮಾಡಿ
  • ತೂಕ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಲ ಬೇಗೆಗೆ ಬಳ್ಳಾರಿ ಮಂದಿ ಹೈರಾಣ: ಜನರಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ – Kannada News | Ballari Swelters: Early Heatwave Sees 38°C, Rising Hospital Visits

ಬಳ್ಳಾರಿ, ಮಾರ್ಚ್​​ 04: ರಾಜ್ಯಾದ್ಯಂತ ಬೇಸಿಗೆಯ ಬಿಸಿ ಆರಂಭವಾಗಿದ್ದು, ಸೆಕೆಯ ವಾತಾವರಣ ಕಂಡುಬರುತ್ತಿದೆ. ಆದ್ರೆ ಗಣಿನಾಡು ಬಳ್ಳಾರಿಯ ಮಂದಿ ಮಾತ್ರ ಈಗಲೇ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದಾರೆ. ಕಳೆದ 2-3 ದಿನಗಳಿಂದ ಬಳ್ಳಾರಿಯಲ್ಲಿ 36°, 37° ಮತ್ತು 38° ಸೆಲ್ಸಿಯಸ್ ವರಗೆ ತಾಪಮಾನ ದಾಖಲಾಗಿದೆ. ಹೀಗಾಗಿ ಬಿಸಿಲಿನ ಧಗೆಗೆ ಜನ ಹೈರಾಣಾಗಿದ್ದಾರೆ. ಈಗಾಗಲೇ ಹವಾಮಾನ ಇಲಾಖೆ ಕೂಡ ಜಿಲ್ಲೆಯಲ್ಲಿ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ವಾತಾವರಣದಲ್ಲಿ ಅತೀ ಹೆಚ್ಚು ಬಿಸಿ ಗಾಳಿ ಸಾಧ್ಯತೆ ಇದ್ದು, ಜನ ಜಾಗೃತಿಯಿಂದಿರುವಂತೆ ತಿಳಿಸಲಾಗಿದೆ.

ಆಸ್ಪತ್ರೆ ಸೇರುತ್ತಿರುವ ಮಂದಿ

ಇನ್ನು ಸೆಕೆ ತಾಳಲಾರದೆ ಜನ ತಂಪುನೀಯಗಳ ಮೊರೆ ಹೋಗುತ್ತಿದ್ದಾರೆ. ಎಳನೀರು, ಜ್ಯೂಸ್​​ನಂತಹ ಪೇಯಗಳ ಜೊತೆಗೆ ಕಲ್ಲಂಗಡಿ ತಿಂದು ಬಿಸಿಲ ಧಗೆಯಿಂದ ತಮ್ಮನ್ನ ತಾವು ಕಾಪಾಡಿಕೊಳ್ಳುತ್ತಿದ್ದಾರೆ. ಬಿಸಿಲಿನ ಶಾಖಕ್ಕೆ ನಿರ್ಜಲೀಕರಣ, ಕಣ್ಣು ಉರಿ, ಆಯಾಸ, ತೆಲೆ ನೋವು ಮುಂತಾದ ಕಾರಣಗಳಿಗೆ ಆಸ್ಪತ್ರೆಯತ್ತ ಮುಖ ಮಾಡುವವರ ಸಂಖ್ಯೆಯೂ ಹೆಚ್ಚಿದೆ.  ಜನ ಮನೆ ಬಿಟ್ಟು ಹೊರ ಬರಲು ಭಯ ಪಡುವ ಪರಿಸ್ಥಿತಿ ಉದ್ಭವಿಸಿದೆ. ಈಗಲೇ ಇಷ್ಟು ಸೆಕೆಯಾದರೆ ನಡು ಬೇಸಿಗೆಯಲ್ಲಿ ದೇವರೇ ನಮ್ಮನ್ನು ಕಾಪಾಡಬೇಕು. ಈಗಲೇ ಊಟ-ತಿಂಡಿ ಬಿಟ್ಟು ಕೇವಲ ತಂಪುಪಾನೀಯಗಳ ಸೇವಿಸಿ ಜೀವನ ಮಾಡುತ್ತಿದ್ದೇವೆ ಎಂದು ಜನರು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಈ ಹಣ್ಣುಗಳನ್ನು ಸೇವನೆ ಮಾಡಲೇಬೇಕು

ಟ್ರಾಫಿಕ್ ಸಿಗ್ನಲ್​​ಗಳ ಬಳಿ ನೆರಳಿಗೆ ಆಗ್ರಹ

ಬಿಸಿಲ ಬೇಗೆಯಿಂದ ವಾಹನ ಸವರಾರರನ್ನು ರಕ್ಷಿಸಲು ಜಿಲ್ಲಾಡಳಿತ ಟ್ರಾಫಿಕ್ ಸಿಗ್ನಲ್​​ಗಳ ಬಳಿ ನೆರಳಿಗೆ ವ್ಯವಸ್ಥೆ ಮಾಡಿಕೊಡಬೇಕು. ಅಲ್ಲಲ್ಲಿ ನೀರಿನ ಕುಟೀರಗಳನ್ನ ಸ್ಥಾಪಿಸಿ ಜನರ ದಾಹ ತೀರಿಸುವ ಕೆಲಸ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ. ಬಿಸಿಲಿನ ಕಾರಣ ಜನ ಹೆಚ್ಚಾಗಿ ತಂಪು ಪಾನೀಯಗಳ ಮೊರೆ ಹೋಗ್ತಿರೋದ್ರಿಂದ ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಅವುಗಳ ದರವನ್ನೂ ಏರಿಕೆ ಮಾಡಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಸೆಕೆಗೆ ಹೈರಾಣಾಗಿರುವ ಗಣಿ ನಾಡಿನ ಮಂದಿ ಒಮ್ಮೆ ಮಳೆ ಬರಲಪ್ಪಾ ಎಂದು ಪ್ರಾರ್ಥನೆ ಕೂಡ ಮಾಡುತ್ತಿದ್ದಾರೆ. ಈ ಹಿಂದೆ ಯಾವ ವರ್ಷವು ಇಷ್ಟು ಪ್ರಮಾಣದ ಬಿಸಿಲು ಇರಲಿಲ್ಲ. ಈ ವರ್ಷ ಮಾತ್ರ ಅಬ್ಬಾ ಅದೆಂತಾ ಸೆಕೆ ಎಂಬು ಉದ್ಗಾರದ ಮಾತುಗಳೂ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:55 pm, Wed, 4 March 26

Source link

ಹೋಳಿ ಹುಣ್ಣಿಮೆಯಂದೇ ಸ್ಮಶಾನ ಮೌನವಾದ ಗ್ರಾಮ: ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು – Kannada News | Gangavati Holi Drowning: Abhishek and Surya Die in Sanapur Lake Incident

ಕೊಪ್ಪಳ,ಮಾ.4 : ಬಣ್ಣಗಳ ಹಬ್ಬ ಹೋಳಿ ಹುಣ್ಣಿಮೆಯನ್ನು ಸಡಗರದಿಂದ ಆಚರಿಸಿದ ಇಬ್ಬರು ಯುವಕರು, ಹಚ್ಚಿದ್ದ ಬಣ್ಣವನ್ನು ತೊಳೆದುಕೊಳ್ಳಲು ಕೆರೆಗೆ ಇಳಿದಾಗ ನೀರಿನ ಸುಳಿಗೆ ಸಿಲುಕಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಗಂಗಾವತಿ ತಾಲೂಕಿನ ಸಣಾಪುರ ಗ್ರಾಮದಲ್ಲಿ ನಡೆದಿದೆ. ಇನ್ನು ಮೃತ ಯುವಕರನ್ನು ಗಂಗಾವತಿ ನಗರದ ಗಾಂಧಿನಗರ ನಿವಾಸಿಗಳಾದ ಅಭಿಷೇಕ್ ಮತ್ತು ಸೂರ್ಯ ಎಂದು ಗುರುತಿಸಲಾಗಿದೆ. ಹೋಳಿ ಹಬ್ಬದ ಪ್ರಯುಕ್ತ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದ್ದ ಈ ಯುವಕರು, ಮಧ್ಯಾಹ್ನದ ನಂತರ ಸ್ನಾನ ಮಾಡಲು ಸಣಾಪುರ ಗ್ರಾಮದ ಕೆರೆಗೆ ತೆರಳಿದ್ದರು. ಕೆರೆಯಲ್ಲಿ ಈಜಲು ಇಳಿದಾಗ ನೀರಿನ ಆಳ ತಿಳಿಯದೆ ಇಬ್ಬರೂ ಮುಳುಗಿದ್ದಾರೆ. ಯುವಕರು ನೀರುಪಾಲಾಗುತ್ತಿದ್ದಂತೆಯೇ ಆತಂಕಗೊಂಡ ಸ್ಥಳೀಯರು ತಕ್ಷಣವೇ ಶೋಧ ಕಾರ್ಯ ಆರಂಭಿಸಿದ್ದಾರೆ. ಸದ್ಯ ಸಾಣಾಪುರ ಕೆರೆಯಲ್ಲಿ ಮೃತದೇಹಗಳಿಗಾಗಿ ಸ್ಥಳೀಯ ಈಜುಗಾರರ ಸಹಾಯದಿಂದ ಹುಡುಕಾಟ ಮುಂದುವರಿದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಬ್ಬದ ದಿನವೇ ಇಬ್ಬರು ಯುವಕರನ್ನು ಕಳೆದುಕೊಂಡ ಗಾಂಧಿನಗರದಲ್ಲಿ ಈಗ ಸ್ಮಶಾನ ಮೌನ ಆವರಿಸಿದ್ದು, ಪೋಷಕರ ಕ್ರಂದನ ಮುಗಿಲು ಮುಟ್ಟಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಒಂದೇ ಸೆಕೆಂಡ್​​ನಲ್ಲಿ ಜೀವ ಹೋಗುತ್ತಿತ್ತು; ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ – Kannada News | Gujarat Man narrowly Escapes as lift Suddenly Malfunctions CCTV video Goes Viral

ಅಹಮದಾಬಾದ್, ಮಾರ್ಚ್ 4: ಗುಜರಾತ್​​ನ ವಲ್ಸಾದ್ ಅಪಾರ್ಟ್​ಮೆಂಟ್​​ನಲ್ಲಿ ಲಿಫ್ಟ್ (Lift) ಇದ್ದಕ್ಕಿದ್ದಂತೆ ಹಾಳಾಗಿ ಅನಿರೀಕ್ಷಿತವಾಗಿ ಕೆಳಗೆ ಕುಸಿದಿದೆ. ಈ ವೇಳೆ ಆ ಲಿಫ್ಟ್​​ನಲ್ಲಿದ್ದ ವ್ಯಕ್ತಿ ಪವಾಡವೆಂಬಂತೆ ಪಾರಾಗಿದ್ದಾರೆ. ಆ ಲಿಫ್ಟ್​​ನೊಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಈ ಶಾಕಿಂಗ್ ವಿಡಿಯೋ ನೋಡಿದರೆ ಲಿಫ್ಟ್ ಹತ್ತಲು ಗಾಬರಿಯಾಗುವುದು ಗ್ಯಾರಂಟಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಹೊಡೆದುರುಳಿಸಿದ್ದು ನಾವೇ: ಅಮೆರಿಕ ಅಧಿಕೃತ ಹೇಳಿಕೆ – Kannada News | US Pete Hegseth Admits Sinking Iranian Warship IRIS Dena off Sri Lanka Coast, Indian Ocean Tensions Escalate

ಇರಾನ್ ಯುದ್ಧನೌಕೆ ಹೊಡೆದುರುಳಿಸಿದ್ದು ನಾವೇ: ಅಮೆರಿಕ ಅಧಿಕೃತ ಹೇಳಿಕೆImage Credit source: TV9 Network

ಕೊಲಂಬೋ, ಮಾರ್ಚ್ 4: ಶ್ರೀಲಂಕಾ ದಕ್ಷಿಣ ಕರಾವಳಿ ಸಮೀಪ ಇರಾನ್​ನ ಯುದ್ಧನೌಕೆ ಐಆರ್​ಐಎಸ್ ದೇನಾ (IRIS Dena) ಹೊಡೆದ್ದು ತಾನೇ ಎಂದು ಅಮೆರಿಕ ಅಧಿಕೃತವಾಗಿ ಹೇಳಿಕೊಂಡಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಇರಾನ್-ಇಸ್ರೇಲ್ ಸಂಘರ್ಷ ಇದೀಗ ಭಾರತದ ಸಮೀಪಕ್ಕೂ ವಿಸ್ತರಿಸಿರುವುದು ಸ್ಪಷ್ಟವಾಗಿದೆ. ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ (Pete Hegseth) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ‘ಅಂತರರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ್ದ ಇರಾನ್ ಯುದ್ಧಹಡಗನ್ನು ಅಮೆರಿಕದ ಸಬ್‌ಮರೀನ್ ಟಾರ್ಪಿಡೋ ಮೂಲಕ ಗುರಿಯಾಗಿಸಿ ಹೊಡೆದು ಮುಳುಗಿಸಲಾಗಿದೆ’ ಎಂದು ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ಈ ದಾಳಿ ನಡೆದಿದ್ದು, ದ್ವಿತೀಯ ವಿಶ್ವಯುದ್ಧದ ನಂತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶತ್ರು ಹಡಗನ್ನು ನೇರವಾಗಿ ಗುರಿಯಾಗಿಸಿದ ಮೊದಲ ಘಟನೆ ಇದು ಎಂದು ಅವರು ಹೇಳಿದ್ದಾರೆ.

ಶ್ರೀಲಂಕಾ ವಿದೇಶಾಂಗ ಸಚಿವ ವಿಜಿತಾ ಹೆರಾತ್ ನೀಡಿದ ಮಾಹಿತಿ ಪ್ರಕಾರ, ಬುಧವಾರ ಬೆಳಗ್ಗೆ 5.08ಕ್ಕೆ ಇರಾನ್ ಹಡಗಿನಿಂದ ತುರ್ತು ಸಂದೇಶ ಬಂದಿತ್ತು. ಬಳಿಕ 6 ಗಂಟೆಗೆ ಒಂದು ನೌಕಾಪಡೆ ಹಡಗು ಮತ್ತು 7 ಗಂಟೆಗೆ ಮತ್ತೊಂದು ಹಡಗನ್ನು ರಕ್ಷಣೆಗೆ ಕಳುಹಿಸಲಾಯಿತು. ಘಟನೆ ಶ್ರೀಲಂಕಾ ಪ್ರಾದೇಶಿಕ ಜಲಗಡಿಯ ಹೊರಗಿದ್ದರೂ, ಆರ್ಥಿಕ ವಲಯದ ಒಳಗೆಯೇ ನಡೆದಿದೆ. ಗಾಲ್ ನಗರದಿಂದ ಸುಮಾರು 44 ನಾಟಿಕಲ್ ಮೈಲು ದೂರದಲ್ಲಿ ನಡೆದಿದೆ.

ಈ ದಾಳಿಯಲ್ಲಿ ಕನಿಷ್ಠ 101 ಮಂದಿ ನಾಪತ್ತೆಯಾಗಿದ್ದು, 78 ಮಂದಿ ಗಾಯಗೊಂಡಿದ್ದಾರೆ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಈಗಾಗಲೇ 32 ಮಂದಿಯನ್ನು ರಕ್ಷಿಸಲಾಗಿದ್ದು, 28 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 140ಕ್ಕೂ ಹೆಚ್ಚು ಸಿಬ್ಬಂದಿ ಹಡಗಿನಲ್ಲಿ ಇದ್ದರೆಂದು ಅಂದಾಜಿಸಲಾಗಿದೆ.

ಈ ಘಟನೆಗೆ ಮುನ್ನ ಕಳೆದ ವಾರಾಂತ್ಯದಲ್ಲಿ ಅಮೆರಿಕ ಹಾಗೂ ಇಸ್ರೇಲ್, ಇರಾನ್‌ನ ಗುರಿಗಳ ಮೇಲೆ ಜಂಟಿ ದಾಳಿ ನಡೆಸಿದ್ದವು. ದಾಳಿ ಮುಂದುವರಿದಿದೆ. ಅದರ ಬೆನ್ನಲ್ಲೇ ಈಗ ಅಮೆರಿಕ ನೇರವಾಗಿ ಇರಾನ್ ನೌಕಾಪಡೆಯ ಹಡಗನ್ನು ಗುರಿಯಾಗಿಸಿರುವುದು ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಸಬ್​ಮರೀನ್ ದಾಳಿ: ಕನಿಷ್ಠ 101 ಮಂದಿ ಕಣ್ಮರೆ

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಶ್ರೀಲಂಕಾ ಸರ್ಕಾರ ತಿಳಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಜೋರಾಗಿದೆ. ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಈಗ ಹಿಂದೂ ಮಹಾಸಾಗರ ಪ್ರದೇಶಕ್ಕೂ ತಟ್ಟಿದ್ದು, ಜಾಗತಿಕ ರಾಜಕೀಯ ಹಾಗೂ ಸಮುದ್ರ ಭದ್ರತಾ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವೃತ್ತಿಪರ ಕೋರ್ಸ್‌ ಶುಲ್ಕ ಪಾವತಿ ದಿನಾಂಕ ವಿಸ್ತರಣೆ: ವಿವಿಧ ಹುದ್ದೆಗಳಿಗೆ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರ ಪ್ರಕಟ – Kannada News | UGCET fee payment last Date Extended And Some Jobs Exams ki answer Released By KEA

ಬೆಂಗಳೂರು, (ಮಾರ್ಚ್ 04): ಇಂಜಿನಿಯರಿಂಗ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಹಾಗೂ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (karnataka examination authority) ವಿಸ್ತರಿಸಿದೆ. ಮಾರ್ಚ್ 7ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ. ಇದುವರೆಗೆ ಒಟ್ಟು 3.47 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 3.36 ಲಕ್ಷ ಮಂದಿ ನಿಗದಿತ ಶುಲ್ಕ ಪಾವತಿ ಮಾಡಿದ್ದಾರೆ. ಇನ್ನೂ 9 ಸಾವಿರ ಮಂದಿ ಶುಲ್ಕ ಪಾವತಿಸಬೇಕಿದ್ದು, ಅವರಿಗೆ ಅನುಕೂಲ ಆಗಲೆಂದು ದಿನಾಂಕ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.

ನೇಮಕಾತಿ: ಅಂಕಪಟ್ಟಿ ಪ್ರಕಟ

ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳಿಗೆ ಫೆಬ್ರವರಿ 21 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆದಿದ್ದು, ಅವುಗಳ ಅಂತಿಮ ಕೀ ಉತ್ತರ ಹಾಗೂ ಅಭ್ಯರ್ಥಿಗಳು ಗಳಿಸಿದ ಅಂಕಗಳ ತಾತ್ಕಾಲಿಕ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಜೊತೆಗೆ ಅಂಕಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ಮಾರ್ಚ್ 6ರಂದು ಬೆಳಿಗ್ಗೆ 11ಗಂಟೆ ಒಳಗೆ ಆನ್‌ಲೈನ್ ಮೂಲಕ ಸಲ್ಲಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಎಲ್ಲ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ (ಮಾ.1) ಲಿಖಿತ ಪರೀಕ್ಷೆ ನಡೆಸಿದ್ದು, ಮಂಗಳವಾರ ಕೀ ಉತ್ತರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಕೀ ಉತ್ತರಗಳಿಗೆ ಆಕ್ಷೇಪಣೆಗಳು ಇದ್ದಲ್ಲಿ ಮಾರ್ಚ್ 7ರಂದು ಮಧ್ಯಾಹ್ನ 12ಗಂಟೆಯೊಳಗೆ ಸಲ್ಲಿಸಬೇಕು. ಈ https://cetonline.karnataka.gov.in/kea/ ಲಿಂಕ್ ಮೂಲಕವೇ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ್ದ ಒಟ್ಟು 2.31 ಲಕ್ಷ ಮಂದಿ ಪೈಕಿ ಶೇ.98ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್ ಮಾರ್ಗದಲ್ಲಿ ಚೀನಾಗೆ ಮಾತ್ರ ಅವಕಾಶ ಎಂದ ಇರಾನ್; ಭಾರತಕ್ಕೆ ನಾವು ತೈಲ ಕೊಡುತ್ತೇವೆ ಎಂದ ರಷ್ಯಾ – Kannada News | Russia ready for oil supply to India if required, Iran to allow only Chinese vessels in Hormuz Strait

ನವದೆಹಲಿ, ಮಾರ್ಚ್ 4: ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಗಲ್ಫ್ ಮತ್ತು ಅರೇಬಿಯನ್ ಸಮುದ್ರವನ್ನು ಸಂಪರ್ಕಿಸುವ ಹಾರ್ಮುಜ್ ಜಲಸಂಧಿ (Strait of Hormuz) ಬಹಳ ಸೂಕ್ಷ್ಮ ಜಲಮಾರ್ಗವಾಗಿದೆ. ಕೊಲ್ಲಿ ದೇಶಗಳಿಂದ ತೈಲಗಳು ಇಲ್ಲಿಂದ ಬೇರೆ ಕಡೆಗೆ ಹಡಗುಗಳ ಮೂಲಕ ಸಾಗಣೆ ಆಗುತ್ತವೆ. ಇಸ್ರೇಲ್ ಮತ್ತು ಅಮೆರಿಕವು ಇರಾನ್ ಮೇಲೆ ಆಕ್ರಮಣ ಮಾಡಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಈ ಜಲಸಂಧಿಯ ನಿಕಟ ಸ್ಥಳದಲ್ಲಿ ಇರುವ ಇರಾನ್, ಈ ಮಾರ್ಗಕ್ಕೆ ತಡೆ ಹಾಕಿದೆ. ಆದರೆ, ಚೀನಾದ ಹಡುಗಳಿಗೆ ಮಾತ್ರ ಇಲ್ಲಿ ಸಾಗಲು ಅವಕಾಶ ಕೊಡುವುದಾಗಿ ಇರಾನ್ ಹೇಳಿದೆ. ಈ ಮಾಹಿತಿಯನ್ನು ಎನ್​ಡಿಟಿವಿ ತನ್ನ ಕೆಲ ಮೂಲಗಳನ್ನು ಉಲ್ಲೇಖಿಸಿ ನೀಡಿದೆ.

ಇರಾನ್​ನ 17 ಹಡಗುಗಳು, ಸಬ್​ಮರೀನ್​ಗಳನ್ನು ಉಡಾಯಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಳ್ಳುತ್ತಿರುವ ಹೊತ್ತಲ್ಲೇ ಇರಾನ್ ಈ ನಿರ್ಧಾರ ತೆಗೆದುಕೊಂಡಿರುವುದು, ಯಾವುದು ನಿಜ, ಯಾವುದು ಸುಳ್ಳು ಎನ್ನುವ ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪೆಟ್ರೋಲ್ ಕೊರತೆ ಎದುರಾಗದಂತೆ ಎಚ್ಚರವಹಿಸಲು ಮುನ್ನೆಚ್ಚರಿಕೆಯ ಪ್ಲಾನ್ ಹಾಕಿದ ಭಾರತ

ಪಶ್ಚಿಮ ಏಷ್ಯನ್ ಬಿಕ್ಕಟ್ಟಿನಲ್ಲಿ ಇರಾನ್ ದೇಶಕ್ಕೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವ ಶಕ್ತಿಗಳಲ್ಲಿ ರಷ್ಯಾ ಮತ್ತು ಚೀನಾ ಪ್ರಮುಖವಾದುವು. ಇರಾನ್​ನ ಡಿಫೆನ್ಸ್ ಶಕ್ತಿಗೆ ಚೀನಾವೇ ಆಧಾರ. ಅಮೆರಿಕದ ಆರ್ಥಿಕ ಮತ್ತು ರಾಜಕೀಯ ದಿಬ್ಬಂಧನದ ಕಠಿಣ ಪರಿಸ್ಥಿತಿಯನ್ನು ಸಂಭಾಳಿಸಲು ಇರಾನ್​ಗೆ ನೆರವಾಗಿರುವುದು ಚೀನಾ ದೇಶ. ಚೀನಾ ದೇಶಕ್ಕೆ ಗಲ್ಫ್ ಭಾಗದಿಂದ ತೈಲ ಪೂರೈಕೆ ಅಗತ್ಯ ಬಹಳ ಇದೆ. ಹೀಗಾಗಿ, ಹಾರ್ಮುಜ್ ಜಲಸಂಧಿಯಲ್ಲಿ ಸಾಗಲು ಚೀನಾದ ನೌಕೆಗಳಿಗೆ ಮಾತ್ರವೇ ಅವಕಾಶ ಕೊಡಲು ಇರಾನ್ ನಿರ್ಧರಿಸಿದ್ದರೆ ಅದು ಸಹಜ.

ಭಾರತಕ್ಕೆ ಅಗತ್ಯಬಿದ್ದರೆ ತಾನು ತೈಲ ನೀಡುವುದಾಗಿ ರಷ್ಯಾ ಹೇಳಿಕೆ

ಪಿಟಿಐ ವರದಿ ಪ್ರಕಾರ, ತೈಲ ಪೂರೈಕೆ ವಿಚಾರದಲ್ಲಿ ಭಾರತಕ್ಕೆ ನೆರವಿನ ಹಸ್ತ ಚಾಚಲು ರಷ್ಯಾ ಸಿದ್ಧವಿದೆ. ಭಾರತಕ್ಕೆ ಬೇಕಾದ ತೈಲ ಮತ್ತು ಅನಿಲಗಳನ್ನು ತಾನು ಪೂರೈಸುವುದಾಗಿ ರಷ್ಯಾ ಹೇಳಿದೆಯಂತೆ.

ಇದನ್ನೂ ಓದಿ: ಜನವರಿವರೆಗೂ ಭಾರತದ ಒಟ್ಟಾರೆ ರಫ್ತು 720 ಬಿಲಿಯನ್ ಡಾಲರ್; ಹಿಂದಿನ ವರ್ಷದಕ್ಕಿಂತ ಶೇ. 6.15 ಹೆಚ್ಚಳ

‘ಇಂಧನ ಪೂರೈಕೆಯಲ್ಲಿ ಇದೇ ರೀತಿ ವ್ಯತ್ಯಯಗಳು ಮುಂದುವರಿದಲ್ಲಿ ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ’ ಎಂದು ರಷ್ಯಾದ ರಾಯಭಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೆರಿಕದ ಒತ್ತಡದಿಂದಾಗಿ ಭಾರತವು ರಷ್ಯಾದಿಂದ ತೈಲ ಪೂರೈಕೆಯನ್ನು ಕಡಿಮೆ ಮಾಡಿದೆ. ಗಲ್ಫ್ ರಾಷ್ಟ್ರಗಳಿಂದ ಹೆಚ್ಚಿನ ತೈಲ ಖರೀದಿ ಮಾಡುತ್ತಿದೆ. ಆದರೆ, ಈಗ ಆ ಪ್ರದೇಶದಲ್ಲೇ ಬಿಕ್ಕಟ್ಟು ಉದ್ಭವವಾಗಿದೆ. ಭಾರತದ ಪೆಟ್ರೋಲ್, ಡೀಸಲ್, ಎಲ್​ಎನ್​ಜಿ, ಎಲ್​ಪಿಜಿ ದಾಸ್ತಾನು ಹೆಚ್ಚು ದಿನಕ್ಕೆ ಸಾಕಾಗುವುದಿಲ್ಲ. ಹೀಗಾಗಿ, ಭಾರತಕ್ಕೆ ಕಠಿಣವೆನಿಸುವ ಸಂದರ್ಭವಿದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ – Kannada News | Chanakya Niti: Follow these principles of Chanakya to easily face the difficulties in life

ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು (difficulties) ಬರುತ್ತವೆ, ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ಎದುರಿಸಿ ನಿಂತಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಆದ್ರೆ ಹೆಚ್ಚಿನವರಿಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ಮೆಟ್ಟಿ ನಿಲ್ಲುವುದು ಹೇಗೆ ಎಂಬುವುದೇ ಗೊತ್ತಿರುವುದಿಲ್ಲ, ಈ ಕಾರಣದಿಂದಾಗಿ ಅವರು ಯಾವಾಗಲೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುದಿಲ್ಲ. ಆದರೆ ಕೆಲವೊಂದು ವಿಷಯಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಳ್ಳುವ ಮೂಲಕ ಖಂಡಿತವಾಗಿ ಯಾವುದೇ ಕಠಿಣ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು, ಯಶಸ್ಸನ್ನು ಸಾಧಿಸಬಹುದು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಹಾಗಿದ್ರೆ ಆತ್ಮವಿಶ್ವಾಸವನ್ನು ಹೆಚ್ಚಿಸಲು, ಸವಾಲುಗಳನ್ನು ಸುಲಭವಾಗಿ ಎದುರಿಸಲು ಯಾವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಅನ್ನೋದನ್ನು ನೋಡೋಣ ಬನ್ನಿ.

ಸವಾಲುಗಳನ್ನು ಸುಲಭವಾಗಿ ಮೆಟ್ಟಿ ನಿಲ್ಲುವುದೇಗೆ?

 ನಿಮ್ಮನ್ನು ನಿಯಂತ್ರಿಸಲು ಕಲಿಯಿರಿ: ಆಚಾರ್ಯ ಚಾಣಕ್ಯರ ಪ್ರಕಾರ, ಸ್ವಯಂ ನಿಯಂತ್ರಣವು ನಮ್ಮ ದೊಡ್ಡ ಶಕ್ತಿ. ನಾವು ನಮ್ಮ ಭಾವನೆಗಳು, ಕೋಪ ಮತ್ತು ದುರಾಸೆಯನ್ನು ನಿಯಂತ್ರಿಸಲು ಕಲಿತಾಗ, ನಾವು ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ಕಲಿಯುತ್ತೇವೆ. ಅನೇಕ ಬಾರಿ, ಕೋಪ, ಅಸೂಯೆ ಅಥವಾ ದುರಾಸೆಯ ಕಾರಣದಿಂದಾಗಿ ನಾವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ, ಈ ತಪ್ಪು ನಿರ್ಧಾರಗಳೇ ನಮ್ಮ ಪ್ರಗತಿಗೆ ಅಡ್ಡಿಯಾಗುತ್ತೇವೆ. ಆದ್ದರಿಂದ ನಿಮ್ಮನ್ನು ನೀವು ನಿಯಂತ್ರಿಸಲು ಕಲಿಯಿರಿ. ದೈನಂದಿನ ಸಣ್ಣ ವಿಷಯಗಳ ಮೇಲೆಯೂ ನಿಯಂತ್ರಣವನ್ನು ಕಾಯ್ದುಕೊಳ್ಳಲು ಕಲಿಯಿರಿ. ಉದಾಹರಣೆಗೆ, ಯಾರಾದರೂ ನಿಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರೆ, ನೀವು ತಕ್ಷಣ ಪ್ರತಿಕ್ರಿಯಿಸಬಾರದು. ನಿಮ್ಮ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ನೀವು ಎಚ್ಚರಿಕೆಯಿಂದ ಯೋಚಿಸಬೇಕು. ಈ ಸ್ವಯಂ ನಿಯಂತ್ರಣವು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ಸಹ ನಿಮ್ಮನ್ನು ಬಲಶಾಲಿಯನ್ನಾಗಿ ಮಾಡುತ್ತದೆ.

ಜ್ಞಾನ ಮತ್ತು ಕಲಿಯುವ ಬಯಕೆ: ಹೊಸ ವಿಷಯಗಳನ್ನು ನಿರಂತರವಾಗಿ ಕಲಿಯುವವರು ಮಾತ್ರ ಜೀವನದಲ್ಲಿ ಪ್ರಗತಿ ಸಾಧಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಪುಸ್ತಕ ಮಾತ್ರವಲ್ಲ  ನಿಮ್ಮ ಸ್ವಂತ ಅನುಭವಗಳಿಂದ, ತಪ್ಪುಗಳಿಂದ ಮತ್ತು ಇತರರಿಂದ ಹೊಸ ವಿಷಯಗಳನ್ನು ಕಲಿಯುವ ಬಯಕೆ ನಿಮ್ಮಲ್ಲಿರಬೇಕು. ನೀವು ಹಾಗೆ ಮಾಡಿದರೆ ಮಾತ್ರ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ನೀವು ಧೈರ್ಯದಿಂದ ಎದುರಿಸಲು ನಿಮಗೆ ಸಾಧ್ಯವಾಗುತ್ತದೆ. ಜ್ಞಾನವೆಂಬ ಅಸ್ತ್ರ  ಯಾವುದೇ ಪ್ರತಿಕೂಲ ಪರಿಸ್ಥಿತಿಯಿಂದಲೂ ಮನುಷ್ಯನನ್ನು ಸುಲಭವಾಗಿ ಪಾರು ಮಾಡುತ್ತದೆ.

ಇದನ್ನೂ ಓದಿ: ಕೆಲಸದ ಸ್ಥಳದಲ್ಲಿ ಗೌರವ, ಪ್ರಗತಿ ಸಾಧಿಸಬೇಕೆಂದರೆ ಚಾಣಕ್ಯರ ತತ್ವಗಳನ್ನು ಪಾಲಿಸಿ

ಉತ್ತಮ ಮನೋಭಾವ ಮತ್ತು ಸಕಾರಾತ್ಮಕ ಚಿಂತನೆ: ಆಚಾರ್ಯ ಚಾಣಕ್ಯರ ಪ್ರಕಾರ, ಉತ್ತಮ  ಮನೋಭಾವ ಮತ್ತು ಸಕಾರಾತ್ಮಕ ಚಿಂತನೆಯನ್ನು ಹೊಂದಿರುವುದು ಯಶಸ್ಸಿನ ಕೀಲಿ. ನೀವು ಪ್ರತಿಯೊಂದು ಸನ್ನಿವೇಶದಲ್ಲೂ ನಕಾರಾತ್ಮಕವಾಗಿ ಯೋಚಿಸಿದರೆ, ಸಣ್ಣ ಸಮಸ್ಯೆಗಳು ಸಹ  ನಿಮಗೆ ದೊಡ್ಡದಾಗಿಯೇ ಕಾಣುತ್ತದೆ. ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಸಮಸ್ಯೆಗಳನ್ನು ಅವಕಾಶಗಳಾಗಿ ನೋಡಿ ಮತ್ತು ಪರಿಹಾರಗಳನ್ನು ಹುಡುಕಲು ಪ್ರಯತ್ನಿಸುತ್ತಿರಿ. ಈ ನಿಮ್ಮ ಸಕಾರಾತ್ಮಕ ಮನೋಭಾವವು ನಿಮ್ಮನ್ನು ಮಾನಸಿಕವಾಗಿ ಬಲಶಾಲಿಗಳನ್ನಾಗಿ ಮಾಡುವುದಲ್ಲದೆ, ಸವಾಲುಗಳನ್ನು ಧೈರ್ಯದಿಂದ ಎದುರಿಸಲು ನಿಮಗೆ ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಭಾರತ- ಇಂಗ್ಲೆಂಡ್‌ ಮುಖಾಮುಖಿ ದಾಖಲೆ ಹೇಗಿದೆ? ಇಲ್ಲಿದೆ ಪೂರ್ಣ ಜಾತಕ – Kannada News | India vs England 2026 T20 WC Semifinal: Head to Head, Wankhede and Knockout Records

2026 ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ (2026 T20 World Cup Semifinal) ಭಾರತ ತಂಡ ಇಂಗ್ಲೆಂಡ್ (India vs England) ತಂಡವನ್ನು ಎದುರಿಸಲಿದೆ . ಈ ಪಂದ್ಯ ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮೊದಲು ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಎಷ್ಟು ಬಾರಿ ಪರಸ್ಪರ ಮುಖಾಮುಖಿಯಾಗಿವೆ? ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಎರಡೂ ತಂಡಗಳು ಎಷ್ಟು ಬಾರಿ ಪರಸ್ಪರ ಮುಖಾಮುಖಿಯಾಗಿವೆ? ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಯಾರ ದಾಖಲೆ ಅತ್ಯುತ್ತಮವಾಗಿದೆ? ಅಂತಿಮವಾಗಿ, ವಾಂಖೆಡೆ ಕ್ರೀಡಾಂಗಣದಲ್ಲಿ ಎರಡೂ ತಂಡಗಳ ದಾಖಲೆ ಏನು? ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.

ಸೆಮಿಫೈನಲ್‌ನಲ್ಲಿ ದಾಖಲೆ ಹೇಗಿದೆ?

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗಲಿವೆ. ಹಿಂದಿನ ಎರಡು ಸೆಮಿಫೈನಲ್‌ಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದುಕೊಂಡಿವೆ. 2022 ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್, ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದರೆ, 2024 ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು 68 ರನ್‌ಗಳಿಂದ ಸೋಲಿಸಿತು.

ನಾಕೌಟ್‌ನಲ್ಲಿ ದಾಖಲೆ ಹೇಗಿದೆ?

ಐಸಿಸಿ ನಾಕೌಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರನೇ ಬಾರಿಗೆ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಹಿಂದಿನ ಐದು ನಾಕೌಟ್ ಪಂದ್ಯಗಳಲ್ಲಿ ಭಾರತ ಮೂರು ಮತ್ತು ಇಂಗ್ಲೆಂಡ್ ಎರಡರಲ್ಲಿ ಗೆದ್ದಿವೆ. ಇದರರ್ಥ ಸ್ಪರ್ಧೆಯು ಬಹುತೇಕ ಸಮಬಲದಲ್ಲಿದೆ. ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಭಾರತದ ಒಟ್ಟಾರೆ ಪ್ರದರ್ಶನವನ್ನು ನೋಡಿದರೆ, ಭಾರತ 23 ಗೆದ್ದಿದ್ದರೆ, 14 ಪಂದ್ಯಗಳನ್ನು ಸೋತಿದೆ. ಏತನ್ಮಧ್ಯೆ, ಇಂಗ್ಲೆಂಡ್ ಗೆದ್ದಿದ್ದಕ್ಕಿಂತ ಹೆಚ್ಚು ಸೋತಿದ್ದು, 16 ಪಂದ್ಯಗಳನ್ನು ಗೆದ್ದಿದ್ದರೆ, 12 ಪಂದ್ಯಗಳಲ್ಲಿ ಸೋತಿದೆ.

IND vs ENG, T20 Semi Final Live Streaming: ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ಆರಂಭ?

ವಾಂಖೆಡೆ ಕ್ರೀಡಾಂಗಣದಲ್ಲಿ ದಾಖಲೆ ಏನು?

ಭಾರತ ಮತ್ತು ಇಂಗ್ಲೆಂಡ್ ನಡುವಿನ 2026 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಉಭಯ ತಂಡಗಳ ನಡುವಿನ ಮೂರನೇ ಟಿ20 ಪಂದ್ಯ ಇದಾಗಿದೆ. ಈ ಹಿಂದೆ ಅಲ್ಲಿ ಆಡಿದ ಎರಡು ಟಿ20 ಪಂದ್ಯಗಳಲ್ಲಿ ಒಂದನ್ನು ಭಾರತ ಗೆದ್ದಿದ್ದರೆ, ಇನ್ನೊಂದನ್ನು ಇಂಗ್ಲೆಂಡ್ ಗೆದ್ದಿದೆ. ಗಮನಾರ್ಹವಾಗಿ ಭಾರತವು ಇಂಗ್ಲೆಂಡ್ ತಂಡವನ್ನು ಸೋಲಿಸಿದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತಂಡದ ನಾಯಕರಾಗಿದ್ದರು. ಇದೀಗ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್ ಆಡುತ್ತಿದೆ.

ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಆಡುತ್ತಿರುವ ಎರಡನೇ ಪಂದ್ಯ ಇದಾಗಿದೆ. ಇದಕ್ಕೂ ಮೊದಲು ಅಮೆರಿಕ ವಿರುದ್ಧ ಪಂದ್ಯವನ್ನಾಡಿದ್ದ ಭಾರತ ಅಮೋಘ ಗೆಲುವು ಸಾಧಿಸಿತ್ತು. ಇತ್ತ ಈ ವಿಶ್ವಕಪ್‌ನಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ನ ಮೂರನೇ ಪಂದ್ಯ ಇದಾಗಿದ್ದು, ಇದಕ್ಕೂ ಮೊದಲು ನೇಪಾಳ ವಿರುದ್ಧದ ಪಂದ್ಯವನ್ನು ಗೆದ್ದುಕೊಂಡಿದ್ದ ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಕೇರಳ ಸ್ಟೋರಿ 2’ ಸಿನಿಮಾದ ಶೀರ್ಷಿಕೆ ಬಗ್ಗೆ ತಕರಾರು; ರಾಜ್ಯದ ಹೆಸರು ಕೈಬಿಡಲು ಆಗ್ರಹ – Kannada News | Petition filed to remove Kerala word from the Kerala Story 2 Movie Title

‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾದ ವಿವಾದ ಮುಂದುವರಿಯುತ್ತಲೇ ಇದೆ. ಮಾರ್ಚ್ 3ರಂದು ಒಬ್ಬ ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರು ಹಾಗೂ ಒಬ್ಬ ವಕೀಲರು ಜಂಟಿಯಾಗಿ ಕೇರಳ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದ ಶೀರ್ಷಿಕೆಯಿಂದ ‘ಕೇರಳ’ (Kerala) ಎಂಬ ಪದವನ್ನು ತೆಗೆದುಹಾಕಬೇಕು ಮತ್ತು ಚಿತ್ರದ ಬಿಡುಗಡೆಗೆ ತಡೆ ನೀಡಬೇಕು ಎಂಬುದು ಅರ್ಜಿದಾರರ ಪ್ರಮುಖ ವಾದವಾಗಿದೆ. ಅರ್ಜಿಯಲ್ಲಿ ‘ದಿ ಕೇರಳ ಸ್ಟೋರಿ 2’ ಚಿತ್ರದ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ.

‘ದಿ ಕೇರಳ ಸ್ಟೋರಿ 2’ ಚಿತ್ರವು ಕೇರಳದ ಇಮೇಜ್‌ಗೆ ಧಕ್ಕೆ ತರುತ್ತದೆ ಎಂದು ಆರೋಪಿಸಾಗಿದೆ. ಕೇರಳ ರಾಜ್ಯವನ್ನು ಬಲವಂತದ ಧಾರ್ಮಿಕ ಮತಾಂತರದ ಕೇಂದ್ರ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಸಮುದಾಯಗಳ ನಡುವೆ ದ್ವೇಷ ಮೂಡಿಸುತ್ತದೆ ಎಂದು ಕೂಡ ಹೇಳಲಾಗಿದೆ.

ಈ ಚಿತ್ರವು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾವನೆಯನ್ನು ಪ್ರಚೋದಿಸುವಂತಿದೆ. ಇದು ಕೇರಳದ ಕೋಮು ಸೌಹಾರ್ದತೆಯನ್ನು ಹಾಳುಮಾಡಬಹುದು ಎಂಬ ಆತಂಕವನ್ನು ದೂರುದಾರರು ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರು ಈ ಕಥೆಯನ್ನು ವಾಸ್ತವ ಎಂದು ನಂಬುವ ಸಾಧ್ಯತೆ ಇರುವುದರಿಂದ, ಈ ಸಿನಿಮಾ ‘ಸಂಪೂರ್ಣ ಕಾಲ್ಪನಿಕ’ ಎಂಬ ಸ್ಪಷ್ಟವಾದ ಸೂಚನೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಕೋರಲಾಗಿದೆ.

ಕೇವಲ ಈ ಸಿನಿಮಾದ ಬಗ್ಗೆ ಮಾತ್ರವಲ್ಲದೆ, ಅರ್ಜಿದಾರರು ಕೇಂದ್ರ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗೆ ಒಂದು ಮಹತ್ವದ ನಿರ್ದೇಶನ ನೀಡುವಂತೆ ಹೈಕೋರ್ಟ್​​ಗೆ ಮನವಿ ಮಾಡಿಕೊಂಡಿದ್ದಾರೆ. ‘ಯಾವುದೇ ಸಿನಿಮಾ, ತನ್ನ ಶೀರ್ಷಿಕೆ ಅಥವಾ ಪ್ರಚಾರದ ಮೂಲಕ ಯಾವುದೇ ರಾಜ್ಯ, ಪ್ರಾದೇಶಿಕ ಅಸ್ಮಿತೆ, ಜಾತಿ ಅಥವಾ ಧರ್ಮವನ್ನು ಅವಹೇಳನ ಮಾಡಬಾರದು. ಈ ಬಗ್ಗೆ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಬೇಕು’ ಎಂದು ಕೋರಲಾಗಿದೆ.

ಇದನ್ನೂ ಓದಿ: ಹೀನಾಯವಾಗಿ ಕುಸಿದ ‘ದಿ ಕೇರಳ ಸ್ಟೋರಿ 2’ ಬಾಕ್ಸ್ ಆಫೀಸ್ ಕಲೆಕ್ಷನ್

ಕೇರಳ ಹೈಕೋರ್ಟ್ ಸದ್ಯದಲ್ಲೇ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವ ನಿರೀಕ್ಷೆಯಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ನಡುವಿನ ಈ ಕಾನೂನು ಸಂಘರ್ಷ ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಈಗಾಗಲೇ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಕೇರಳದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಈ ಸಿನಿಮಾ ಕಲೆಕ್ಷನ್ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version